lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

Report Archive

< July 2017 >
Mo Tu We Th Fr Sa Su
          1 2
3 4 5 6 7 8 9
10 11 12 13 14 15 16
17 18 19 20 21 22 23
24 25 26 27 28 29 30
31            
July 2017

Thursday, 20 July 2017

Crime Incidents 20-07-17

ಹೆಬ್ಬೂರು  ಪೊಲೀಸ್ ಠಾಣಾ ಯು.ಡಿ.ಆರ್. ನಂ-20/2017 ಕಲಂ 174 ಸಿಆರ್‌ಪಿಸಿ.

ದಿನಾಂಕ:19-07-2017 ರಂದು ಸಂಜೆ 6-30 ಗಂಟೆಗೆ ಪಿರ್ಯದಿಯಾದ ಹನುಮಂತರಾಯಪ್ಪ ಬಿನ್ ಲೇಟ್ ಗಂಗಹನುಮಯ್ಯ, 49 ವರ್ಷ, ವಕ್ಕಲಿಗರು, ಜಿರಾಯ್ತಿ, ಕಾಳಿಂಗಯ್ಯನಪಾಳ್ಯ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ಟೈಪ್ ಮಾಡಿಸಿದ ಕೊಟ್ಟ ದೂರಿನ ಅಂಶವೇನೆಂಧರೆ ನಾನು  ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನಗೆ ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿದ್ದು, ನನ್ನ ಮೊದಲನೆ ಮಗಳಾದ ಸೌಮ್ಯ ರವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಡೇರಹಳ್ಳಿಯ ಗ್ರಾಮದ ವಾಸಿಯಾದ ಮುನಿರಾಜಪ್ಪ ರವರ ಮಗನಾದ ವಿಜಯ್ ರವರಿಗೆ ಸುಮಾರು 3 ವರ್ಷಗಳ ಹಿಂದೆ ಮಧುವೆ ಮಾಡಿಕೊಟ್ಟಿದ್ದು, ನನ್ನ ಮಗಳು ಮತ್ತು ಅಳಿಯ ಇಬ್ಬರು ಅವರ ಎರಡು ವರ್ಷದ ಮಗನಾದ ಅಭಿನವಗೌಡ ರವರಿಗೆ ಉಷಾರಿಲ್ಲದ ಕಾರಣ ನಮ್ಮ ಗ್ರಾಮವಾದ ಕಾಳಿಂಗಯ್ಯನಪಾಳ್ಯದಲ್ಲಿ ನಮ್ಮ ಮನೆಗೆ ಬಂದ್ದಿದ್ದರು, ದಿನಾಂಕ-19/07/2017 ರಂದು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ನಮ್ಮ ಮನೆಯ ಮುಂದೆ ಪಾತ್ರೆಗಳನ್ನು ತೊಳೆಯಲು ನೀರು ತುಂಬಿದ್ದ ಬಕೀಟನ್ನು ಇಟ್ಟಿದ್ದು,  ಈ ಸಮಯದಲ್ಲಿ  ಅಲ್ಲೇ ಆಟವಾಡುತ್ತಿದ್ದ ನನ್ನ ಮೊಮ್ಮಗನಾದ  ಅಭಿನವಗೌಡ ಆಕಸ್ಮಿಕವಾಗಿ ನೀರು ತುಂಬಿದ್ದ ಬಕೀಟಗೆ ಬಿದ್ದಿರುವುದನ್ನು ನಾನು ಮತ್ತು ನನ್ನ ಮಗಳಾದ ಸೌಮ್ಮರವರು ಮಗುವನ್ನು ಮೇಲಕ್ಕೆ ಎತ್ತಿ ನೋಡಲಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಜೀವ ಇರಬಹುದೆಂದು ಯಾವುದೋ ಒಂದು ವಾಹನದಲ್ಲಿ ತುಮಕೂರಿನ ವಿಜಯ ಆಸ್ಪತ್ರೆಗೆ ಬಂದು ವೈಧ್ಯಾಧೀಕಾರಿಗಳಿಗೆ ತೋರಿಸಲಾಗಿ ಸದರಿ ವೈಧ್ಯರು ತುಮಕೂರು ಜಿಲ್ಲಾ ಆಸ್ಪತ್ರೆಗೆ ಹೋಗಲು ನೀಡಿದ ಸಲಹೆ ಮೇರೆಗೆ ನಾವು ತುಮಕೂರು ಜಿಲ್ಲಾ ಆಸ್ಪತ್ರೆಗೆ ಸಂಜೆ ಸುಮಾರು 5-45 ಗಂಟೆಗೆ ಬಂದು ಅಲ್ಲಿನ ವೈಧ್ಯರಿಗೆ ತೋರಿಸಲಾಗಿ ಪರಿಶೀಲಿಸ ವೈಧ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಆದ್ದರಿಂದ ನನ್ನ ಮೊಮ್ಮಗ ಆಕಸ್ಮಿಕವಾಗಿ ಬಕೀಟಿನಲ್ಲಿದ್ದ ನೀರಿಗೆ ಬಿದ್ದು. ಮೃತಪಟ್ಟಿರುತ್ತಾನೆಯೇ ವಿನಃ ಈ ಮಗುವಿನ ಸಾವಿನಲ್ಲಿ ಯಾವುದೇ ಅನುಮಾನವಿರುವುದಿಲ್ಲ. ಆದ್ದರಿಂದ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಮೊಮ್ಮಗನಾದ ಅಭಿನವಗೌಡರವರ  ಮೃತ ದೇಹವು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರುತ್ತದೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಯು.ಡಿ.ಆರ್..ನಂ; 22/2017 ಕಲಂ. 174 ಸಿ.ಆರ್.ಪಿ.ಸಿ

ದಿನಾಂಕ:19-07-2017 ರಂದು ಬೆಳಿಗ್ಗೆ 06-30 ಗಂಟೆಗೆ ಬಳ್ಳಾರಿ ಜಿಲ್ಲೆ ಸೊಂಡೂರು ತಾಲ್ಲೋಕು ಎಂ.ಲಕ್ಕನಹಳ್ಳಿ ಗ್ರಾಮದ ವಾಸಿಯಾದ ದೇವರ ಮನೆ ಹನುಮಂತಪ್ಪ ಬಿನ್ ಗಂಗಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಪಿರ್ಯಾದಿಗೆ 03 ಜನ ಗಂಡು ಮಕ್ಕಳಿದ್ದು, 04 ಜನ ಹೆಣ್ಣು ಮಕ್ಕಳಿರುತ್ತಾರೆ. ಪಿರ್ಯಾದಿಯ ಮೊದಲನೇ ಮಗ ಸುಮಾರು 24 ವರ್ಷ ವಯಸ್ಸಿನ ಯರ್ರಿಸ್ವಾಮಿ ಈಗ್ಗೆ ಸುಮಾರು 01 ವರ್ಷದಿಂದ ಚಿಕ್ಕನಾಯಕನಹಳ್ಳಿ ತಾಲ್ಲೋಕಿನ ಕಾಯಿತಿಮ್ಮನಹಳ್ಳಿ ಗ್ರಾಮದ ಎಲೆಕ್ಟ್ರಿಕಲ್ ಮಾಲೀಕರಾದ ಚೇತನ್ ಎಂಬುವವರ ಬಳಿಯಲ್ಲಿ ವಿದ್ಯುತ್ ಕಂಬದ ಕೂಲಿ ಕೆಲಸ ಮಾಡುತ್ತಿದ್ದನು. ದಿನಾಂಕ: 18-07-2017 ರಂದು ಮಧ್ಯಾಹ್ನ ಸುಮಾರು 02-30 ಗಂಟೆಗೆ ಯರ್ರಿಸ್ವಾಮಿ ಜೊತೆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಪಿರ್ಯಾದಿಯ ಗ್ರಾಮದವರಾದ ಗಂಗಣ್ಣ ಬಿನ್ ತಿಮ್ಮಪ್ಪ, ಎಂಬವವರು ಪಿರ್ಯಾದಿಗೆ ಪೋನ್ ಮಾಡಿ “ನಿಮ್ಮ ಮಗ ಯರ್ರಿಸ್ವಾಮಿ ಕಂಬದಿಂದ ಬಿದ್ದು ಗಾಯಗೊಂಡಿರುತ್ತಾನೆ. ಈತನನ್ನು ನಾನು ಹಾಗೂ ಗುತ್ತಿಗೆದಾರರಾದ ಚೇತನ್ ರವರು ಸೇರಿಕೊಂಡು ಕುಣಿಗಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ನೀವೂ ಬನ್ನಿ” ಎಂತ ತಿಳಿಸಿದರು. ನಂತರ ಪಿರ್ಯಾದಿ ಮತ್ತು ಅವರ ಗ್ರಾಮದವರು ಹಾಗೂ ಸಂಬಂಧಿಕರು ರಾತ್ರಿ ಸುಮಾರು 11-00 ಗಂಟೆಗೆ ಕುಣಿಗಲ್ ಆಸ್ಪತ್ರೆಗೆ ಬಂದು ಗಂಗಣ್ಣನನ್ನು ವಿಚಾರ ಮಾಡಲಾಗಿ ನಿನ್ನ ಮಗ ಯರ್ರಿಸ್ವಾಮಿಯನ್ನು ಚಿಕಿತ್ಸೆಗೆ ಕರೆತರುವ ಮಾರ್ಗ ಮಧ್ಯೆಯಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು. ನಂತರ ಪಿರ್ಯಾದಿಯು ಶವವನ್ನು ನೋಡಿ ವಿಚಾರ ತಿಳಿಯಲಾಗಿ ಎಂದಿನಂತೆ ದಿನಾಂಕ: 18-07-2017 ರಂದು ಮಧ್ಯಾಹ್ನ 01-30 ಗಂಟೆಗೆ ಪಿರ್ಯಾದಿಯ ಮಗ ಮತ್ತು ಇತರರು ಗುತ್ತಿಗೆದಾರರ ಮಾರ್ಗದರ್ಶನದಂತೆ ಟಿ.ಕೆಂಪನಹಳ್ಳಿ ಬಳಿ ವಿದ್ಯುತ್ ಕಂಬದ ಕೆಲಸ ಮಾಡಲು ಹೋಗಿದ್ದು, ಚೇತನ್ ರವರು ಕಂಬದ ಕೆಲಬಾಗದ ಗ್ರೌಂಡಿಂಗ್ ಮತ್ತು ಇತರೆ ಕೆಲಸ ಮಾಡಿಕೊಳ್ಳಿ, ನಾನು ಲೈನ್ ಆಫ್ ಮಾಡಿಸಿ ಬರುತ್ತೇನಂತ ಹೋಗಿದ್ದು, ಯರ್ರಿಸ್ವಾಮಿ ತನಗೆ ಕಂಬದ ಮೇಲೆ ಕೆಲಸ ಮಾಡಿ ಅನುಭವ ಇದೆ ಎಂದು ಹೇಳಿ ಯಾರ ಮಾತನ್ನೂ ಕೇಳದೇ ಕಂಬವನ್ನು ಹತ್ತಿ ಕೆಲಸ ಮಾಡಲು ಹೋದಾಗ ವಿದ್ಯುತ್ ತಂತಿ ತಗುಲಿ ಕೆಳಕ್ಕೆ ಬಿದ್ದು ಗಾಯಗೊಂಡ ಎಂತ ತಿಳಿಸಿದರು. ನಂತರ ಯರ್ರಿಸ್ವಾಮಿಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಕರೆದುಕೊಂಡು ಬರುತ್ತಿದ್ದಾಗ  ಮಾರ್ಗ ಮಧ್ಯೆ ಸುಮಾರು 03-30 ಗಂಟೆಯಲ್ಲಿ ಮೃತಪಟ್ಟಿರುತ್ತಾನೆಂತ ತಿಳಿಯಿತು. ಪಿರ್ಯಾದಯ ಮಗನ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ..ನಂ; 157/2017 ಕಲಂ. 279, 337 ಐ.ಪಿ.ಸಿ

ದಿನಾಂಕ-19-07-2017 ರಂದು ಮದ್ಯಾಹ್ನ 12-05  ಗಂಟೆಗೆ ಪಿರ್ಯಾದಿ ಹೆಚ್.ಬಿ.ಧರಣೇಶ್ ಬಿನ್‌ ಲೇಟ್ ಬೋರೇಗೌಡ. 30 ವರ್ಷ.ವಕ್ಕಲಿಗರು. ಅರಕನಹಳ್ಳಿ. ಗ್ರಾಮ. ಆತಗೂರು.ಹೋಬಳಿ. ಮದ್ದೂರು.ತಾಲ್ಲೋಖು. ಮಂಡ್ಯ.ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ-17-07-2017 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ನಿಡಸಾಲೆ. – ಕೆಬ್ಬಳ್ಳಿ ರಸ್ತೆಯಲ್ಲಿ ಕೆಬ್ಬಳ್ಳಿ ಗ್ರಾಮದ ಬಳಿ ಅಪಘಾತವಾಗಿದೆ ಎಂದು ನನ್ನ ಅಣ್ಣ ಹೆಚ್.ಬಿ.ದ್ವಾರಕಿ ಪೋನ್ ಮುಖಾಂತರ ವಿಚಾರ ತಿಳಿಸಿದ್ದು. ನಾನು ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣ ಈದಿವಸ ಬೆಳಿಗ್ಗೆ 8-50 ಗಂಟೆ ನಿಡಸಾಲೆಯಿಂದ ತನ್ನ ಬಾಬ್ತು ತನ್ನ ದ್ವಿಚಕ್ರವಾಹನ ಹೀರೋ ಹೋಂಡಾ ಸ್ಪೆಂಡರ್ ಪ್ಲಸ್ ಕೆ.ಎ-06 ಇ.ಜಿ-7848 ನೇ ವಾಹವನ್ನು  ಚಾಲನೆ ಮಾಡಿಕೊಂಡು ಬರುತ್ತಿರಬೇಕಾದರೆ ಕೆಬ್ಬಳ್ಳೀಯಿಂದ ಸ್ಪಲ್ಪ  ಹಿಂದೆ ಎದುರು ದಿಕ್ಕಿನಿಂದ ಬಂದ ಟಾ ಟಾ ಎ.ಸಿ ಜಿಪ್ ಲಗೇಜ್ ಆಟೋ ನಂ ಕೆ.ಎ-11 ಬಿ-3087 ದ ವಾಹನದ ಚಾಲಕ ತನ್ನ ವಾಹನವನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಅಣ್ಣ ದ್ವಾರಕೀರವರ  ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡಿಸಿದ್ದರಿಂದ ನನ್ನ ಅಣ್ಣ ಸಮೇತ  ಕೆಳಗೆ ಬಿದ್ದು ಬಲಕಾಲಿನ ಮೂಳೆ ಮುರಿದ್ದು ಹಾಗೂ  ಬಲಕೈ ರಕ್ತ ಗಾಯಗಳಾಗಿರುತ್ತವೆ.  ನಾನು ತಕ್ಷಣ 108 ಅಂಬುಲೆನ್ಸ್ ನಲ್ಲಿ ಕೆಸ್ತೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ನಂತರ ವೈದ್ಯರ ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿದ್ದು ಅಪಘಾತ ಪಡಿಸಿದ ಟಾ ಟಾ ಎ.ಸಿ ಜಿಪ್ ಲಗೇಜ್ ಆಟೋ ನಂ ಕೆ.ಎ-11 ಬಿ-3087 ವಾಹನದ ಚಾಲಕನ ಮೇಲೆ ಕ್ರಮ ಜರುಗಿಸ ಬೇಕೆಂದು  ಬಂದು ಈದಿನ ತಡವಾಗಿ ದೂರು ನೀಡಿರುತ್ತನೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.Wednesday, 19 July 2017

Crime Incidents 19-07-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  79/2017   ಕಲಂ: 32(3)K E Act

ದಿನಾಂಕ:18/07/2017 ರಂದು ಮದ್ಯಾಹ್ನ 12:30 ಗಂಟೆಯಲ್ಲಿ  ಶ್ರೀ ಜಿ.ಟಿ ಶ್ರೀಶೈಲಮೂರ್ತಿ ಸಿ.ಪಿ.ಐ ತಿರುಮಣಿ ವೃತ್ತ ರವರು ನೀಡಿದ ವರದಿ ಅಂಶವೇನೆಂದರೆ  ಠಾಣಾ ವ್ಯಾಪ್ತಿ  ವೈ ಎನ್ ಹೊಸಕೋಟೆ ಗ್ರಾಮದ ಹನುಮಂತರಾಜು ರವರ  ಪೆಟ್ಟಿಗೆ ಅಂಗಡಿ ಬಳಿ ವ್ಯಕ್ತಿಯೋರ್ವ ಸಾರ್ವಜನಿಕರಿಗೆ ಮದ್ಯಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾನೆಂತ ಮಾಹಿತಿ ಇದ್ದು ಸ್ಥಳಕ್ಕೆ ಸಿಬ್ಬಂದಿಯಾದ ಎ. ಹೆಚ್ ಸಿ:135 ಸೈಯ್ಯದ್ ಶಾಹೆ ಆಲಂ ಮತ್ತು ಪಿ.ಸಿ:708 ಶೌಕತ್ ಲಾಲಸಾ ಕುರಿ  ರವರೊಂದಿಗೆ ಹೋಗಿ ನೋಡಲಾಗಿ ಕೆಲವು ಗಿರಾಕಿಗಳು ಪೆಟ್ಟಿಗೆ ಅಂಗಡಿ ಬಳಿ ಮದ್ಯ ಕುಡಿಯಲು ಕುಳಿತಿದ್ದು ನಮ್ಮನ್ನು ಕಂಡು ಓಡಿ ಹೋದರು, ನಂತರ ಸ್ಥಳದಲ್ಲಿ ಮದ್ಯ ಕುಡಿಯಲು ಸ್ಥಳಅವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ  ,ಹನುಮಂತರಾಜು ಬಿನ್ ಹನುಮಂತರಾಯಪ್ಪ 40  ವರ್ಷ ಈಡಿಗ ಜನಾಂಗ, ಅಂಗಡಿವ್ಯಾಪಾರ, ಡಿ.ವಿ ಹಳ್ಳಿ ಮಧುಗಿರಿ ತಾ|| ಎಂತ ತಿಳಿಸಿದ್ದು ಸ್ಥಳದಲ್ಲಿ ಇದ್ದ ಮದ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ ಮದ್ಯ ತುಂಬಿದ್ದ  03  ರಾಜಾ ವಿಸ್ಕಿ  90 ಎಂ.ಎಲ್ ನ ಟೆಟ್ರಾ ಪ್ಯಾಕೆಟ್ ಹಾಗೂ   02 ಪ್ಲಾಸ್ಟಿಕ್ ಲೋಟಗಳು ಇದ್ದು ಇವುಗಳ ಒಟ್ಟು ಬೆಲೆ  86=00 ರೂ ಗಳಾಗಿರುತ್ತದೆ , ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮುಖೇನ ಮುಂದಿನ ನಡುವಳಿಕೆಗಾಗಿ ಅಮಾನತ್ತು ಪಡಿಸಿಕೊಂಡು ಠಾಣೆಗೆ ಆರೋಪಿ , ಮಾಲು ಮತ್ತು ಪಂಚನಾಮೆ ಸಹಿತ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ

ಹುಳಿಯಾರು ಪೊಲೀಸ್ ಠಾಣಾ ಮೊ.ನಂ. 88/2017 ಕಲಂ 457.380 ಐ.ಪಿ.ಸಿ

ದಿನಾಂಕ:-18-07-2017 ರಂದು ಮದ್ಯಾಹ್ನ 12.00 ಗಂಟೆಗೆ ಪಿರ್ಯಾದಿ ಕೊಟ್ಟೂರಮ್ಮ ಕೋಂ ಕೊಟ್ಟೂರಯ್ಯ, 55 ವರ್ಷ, ಲಿಂಗಾಯ್ತರು, ಕೆಂಕೆರೆ, ಹುಳಿಯಾರು ಹೋಬಳಿ, ಚಿಕ್ಕನಾಯ್ಕನಹಳ್ಳಿ ತಾಲ್ಲೋಕು, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನನಗೆ ಯೋಗೀಶ್ ಮತ್ತು ಲೋಕೇಶ್ ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ, ಈಗ್ಗೆ ಸುಮಾರು 12-13 ವರ್ಷದಿಂದ ನಾನು ನನ್ನ ಕಿರಿ ಮಗ ಯೋಗೀಶ್ ಕೂಲಿ ಮಾಡಿ 04 ಲಕ್ಷ ಹಣ ಮತ್ತು ಅವನಿಗೆ ಬಂದ ಮಾವನ ಉಡುಗೊರೆಗಳು ಮತ್ತು ಒಂದೊಂದಾಗಿ ಮಾಡಿಸಿದ ಒಡವೆಗಳು ಆದ ಎರಡು ಎಳೆಯ 40 ಗ್ರಾಂ  ಒಂದು ಮಾಂಗಲ್ಯ ಸರ 13 ಗ್ರಾಂ ಕೊರಳಿನ ಸರ ಮತ್ತು 15 ಗ್ರಾಂ  ಕೊರಳಿನ ಸರ K Y ಮಾರ್ಕಿನ 6.50 ಗ್ರಾಂ ಬೆರಳಿನ ಉಂಗುರ YS ಮಾರ್ಕಿನ 4 ಗ್ರಾಂ ನ ಬೆರಳು ಉಂಗುರ ಅಂದಾಜು 8 ಗ್ರಾಂ ಉಳ್ಳ ಎರಡು ಜೊತೆ ಒಲೆ ಜುಮುಕಿ ಮತ್ತು ಅಂದಾಜು 7 ಗ್ರಾಂ ನ ಒಲೆ ಅನ್ ಗಿಗಸ್ ಎರಡು ಜೊತೆ ರೀವಾಸ್ ಮತ್ತು ಅರಳು ಇಲ್ಲದೆ ಪ್ಲೇನ್ 3 ಗ್ರಾಂ ಉಳ್ಳ ಕಿವಿ ಓಲೆ ಮತ್ತು 3 ಗ್ರಾಂ ಉಳ್ಳ ಗುಂಡು 3 ಜೊತೆ ಕಾಲಿನ ಬೆಳ್ಳಿಯ ಚೈನು ಮಕ್ಕಳ ಎರಡು ಬೆಳ್ಳಿಯ ಕೈ ಖಡಗ ಎರಡು ಲಿಂಗದ ಕಾಯಿ ಬೆಳ್ಳಿಯದ್ದು, ಬಂಗಾರದ ಮೂಗಿನ ನೋತು ಎರಡು ಈ ಸಾಮಗ್ರಿಗಳು ಮನೆಯ ಬೀರುವಿನಲ್ಲೇ ಇದ್ದು, ಮನೆಯಲ್ಲಿ ನನ್ನ ಮಗ  ಮತ್ತು ಸೊಸೆ ವಾಸ  ವಾಸವಾಗಿರುತ್ತೇವೆ, ದಿನಾಂಕ:-16-07-2017 ರಂದು ನನ್ನ ಹಿರಿ ಮಗನನ್ನು ನೋಡಲು ಬೆಂಗಳೂರಿಗೆ ತೆರಳಿರುತ್ತೇನೆ, ನನ್ನ ಕಿರಿಮಗ ಮತ್ತು ಆತನ ಹೆಂಡತಿ ಮುಂಚಿನಿಂದ ನಮ್ಮದೇ ಆದ ಪಕ್ಕದ ಮನೆಯಲ್ಲಿ ಮಲಗುತ್ತಿರುತ್ತಾರೆ, ನಾನು ಓದ ದಿನದಂದು ಮೊದಲಿನಿಂದ ಪಕ್ಕದ ಮನೆಯಲ್ಲಿ ಮಲಗಿರುತ್ತಾರೆ, ನನ್ನ ಸೊಸೆ ಎಂದಿನಂತೆ ಬಾಗಿಲಿಗೆ ನೀರು ಹಾಕಲು ಬಂದಾಗ ಬೀರು ಮುರಿದು  ಕಳ್ಳತನವಾಗಿರುವುದು ತಿಳಿಯುತ್ತದೆ, ಅದೇ ತಕ್ಷಣ ನನ್ನ ಕಿರಿಮಗ ನನಗೆ ಸುಮಾರು 6.30 ಕ್ಕೆ ದೂರವಾಣಿಯ ಮೂಲಕ ವಿಷಯವನ್ನು ತಿಳಿಸುತ್ತಾನೆ, ನಾನು ಊರಿಗೆ ಬಂದು ನೋಡಲಾಗಿ ಬೀರುವಿನಲ್ಲಿದ್ದ 4 ಲಕ್ಷ ಹಣ ಮತ್ತು ಹೆಚ್ಚು ಕಡಿಮೆ 110 ಗ್ರಾಂ ಉಳ್ಳ 2.50 ಲಕ್ಷ ಬೆಲೆ ಬಾಳುವ ಒಡವೆಗಳು ಕಳ್ಳತನವಾಗಿರುತ್ತವೆ, ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.Tuesday, 18 July 2017

Crime Incidents 18-07-17

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-133/2017 ಕಲಂ 143,147,148,323,324,504,506,341 ರೆ/ವಿ 149 ಐಪಿಸಿ

ದಿನಾಂಕ-17/07/2017 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿಯಾದ ವೆಂಕಟಪ್ಪ ಬಿನ್‌ರಂಗಸ್ವಾಮಿ,31 ವರ್ಷ, ರೆಡ್ಡಿ ಜನಾಂಗ, ಕೂಲಿ ಕೆಲಸ, ವಾಸ ರಾಮೇನಹಳ್ಳಿ ರಸ್ತೆಯ ಗುಡಿಸಲು, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕ್‌ಮತ್ತು ಜಿಲ್ಲೆ, ಆದ ರವರು ಹೇಳಿ ಬರೆಸಿಕೊಟ್ಟ ದೂರು ಏನೆಂದರೆ, ನಾನು ದಿನಾಂಕ 14-07-2017 ರಂದು ಸಂಜೆ 06-00 ಗಂಟೆ ಸಮಯದಲ್ಲಿ ನಾನು ನನ್ನ ವಾಸದ ಮನೆಯ ಕಡೆಯಿಂದ ಪಾರ್ವತಿಪುರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ, ಹೆಬ್ಬೂರು ಗ್ರಾಮದ ವಾಸಿಗಳಾದ ಗುದ್ದು, ಲೋಕಿ ಹಾಗೂ ಇವರ ಜೊತೆಯಲ್ಲಿದ್ದ ಇನ್ನೂ 5-6 ಜನ ಸೇರಿಕೊಂಡು ನನ್ನನ್ನು ಅಡ್ಡಗಟ್ಟಿ ಜಗಳ ತೆಗೆದು ಏಕಾಏಕಿ ಗುದ್ದು ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ನನ್ನ ಎಡಭಾಗದ ಕೆನ್ನೆಗೆ ಕೂಯ್ದು ರಕ್ತಗಾಯ ಪಡಿಸಿದನು. ಲೋಕಿ ಎಂಬುವನು ದೊಣ್ಣೆಯಿಂದ ನನ್ನ ಬಲಭಾಗದ ಬೆನ್ನು ಹಾಗೂ ಭುಜಕ್ಕೆ ಹೊಡೆದು ನೋವುಂಟು ಮಾಡಿದನು. ಇವರ ಜೊತೆಯಲ್ಲಿದ್ದ ಇತರರು ನನ್ನನ್ನು ರಸ್ತೆಯಲ್ಲಿ ಬಾರ್‌ಮುಂಭಾಗ ಕೆಡವಿಕೊಂಡು ಕಾಲಿನಿಂದ ಒದ್ದು ಕೈಗಳಿಂದ ಹೊಡೆದು, ನಂತರ ಕಲ್ಲಿನಲ್ಲಿ ಹಲ್ಲೆ ಮಾಡಿ ನಿನ್ನನ್ನು ಈ ದಿನ ಮುಗಿಸದೇ ಬಿಡುವುದಿಲ್ಲಾ, ಕೊಲೆ ಮಾಡುತ್ತೀವೆಂದು ಚಾಕುವಿನಿಂದ ಹೆದರಿಸಿದರು. ಅದೇ ಸಮಯಕ್ಕೆ ರಮೇಶ ಹೆಬ್ಬೂರು, ಹಾಗೂ ಬಾರ್‌ನಲ್ಲಿ ಕೆಲಸ ಮಾಡುವ ರಮೇಶ್‌@ ಮಂಡ ನೆಂಬುವನು ನನ್ನನ್ನು ಹೊಡೆಯುತ್ತಿದ್ದ, ಅವರನ್ನು ಬಿಡಿಸಿದರು, ಆಗ ಅವರೆಲ್ಲರೂ ನಿನ್ನನ್ನು ಇಷ್ಠಕ್ಕೆ ಬಿಡುವುದಿಲ್ಲ ಎಂದು ಕೂಗಿದರೂ ಆದಾದ ನಂತರ ನನ್ನನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನೋವು ಜಾಸ್ತಿ ಇದ್ದಿದ್ದರಿಂದ ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ತಿವಿದು ಕೊಲೆ ಬೆದರಿಕೆ ಕಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಬೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.Monday, 17 July 2017

Crime Incidents 17-07-17

ಸಂಚಾರಿ ಪೂರ್ವ ಪೊಲೀಸ್ ಠಾಣೆ ಮೊ.ನಂ:135/2017, ಕಲಂ:279, 304(A) ಐಪಿಸಿ 134(ಎ&ಬಿ) 187 ಐಎಂವಿ ಆಕ್ಟ್

ದಿನಾಂಕ  16-17/07/2017 ರಂದು ರಾತ್ರಿ 00-30 ಗಂಟೆಗೆ ಈ ಕೇಸಿನ ಪಿರ್ಯಾದಿ ಫಯಾಜ್ ಬಿನ್ ದಾದಾಪೀರ್, 36 ವರ್ಷ, 1 ನೇ ಕ್ರಾಸ್, ಫಕೀರ್ ಪಾಕೀಪಾಳ್ಯ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:16/07/2017 ರಂದು ರಾತ್ರಿ 10-30 ಗಂಟೆಯಲ್ಲಿ ನಾನು ಮನೆಯಲ್ಲಿರುವಾಗ್ಗೆ ಯಾರೋ ಒಬ್ಬ ವ್ಯಕ್ತಿ ನಮ್ಮ ಏರಿಯಾಗೆ ಬಂದು ಮೆಕಾನಿಕ್ ದಾದಾಫೀರ್ ರವರಿಗೆ ಬಟವಾಡಿ ಹತ್ತಿರ ವೆಂಕಟರಮಣಸ್ವಾಮಿ ದೇವಸ್ಥಾನದ ಬಟವಾಡಿ ಹತ್ತಿರದ ಎದುರು ಶಿರಾ ಕಡೆಗೆ ಹೋಗುವ ಎನ್ .ಹೆಚ್ 48 ರಸ್ತೆಯಲ್ಲಿ ಅಪಘಾತವಾಗಿ ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದರಿಂದ ತಕ್ಷಣ ನಾನು ನಮ್ಮ ಸಂಬಂಧಿಕರ ಎಲ್ಲರು ಬಟವಾಡಿ ಹತ್ತಿರ ಹೋಗಿ ನೋಡಲಾಗಿ ಅಪಘಾತದಿಂದ ಮೃತಪಟ್ಟಿದ್ದ ಶವವನ್ನು ಪೊಲೀಸ್ ರವರು ಸಾರ್ವಜನಿಕರ ಸಹಾಯದಿಂದ ಜಿಲ್ಲಾ ಆಸ್ಫತ್ರೆಗೆ ಕಳುಹಿಸಿದ್ದರು, ತಕ್ಷಣ ಆಸ್ಫತ್ರೆ ಹತ್ತಿರ ಬಂದು ಶವವನ್ನು ನೋಡಲಾಗಿ ನನ್ನ ತಂದೆ 65 ವರ್ಷದ ದಾದಾಪೀರ್ ರವರ ಶವವಾಗಿತ್ತು. ನಂತರ ಅಲ್ಲಿದ್ದ ಸಾರ್ವಜನಿಕರಿಂದ ಅಪಘಾತದ ಬಗ್ಗೆ ವಿಚಾರ ತಿಳಿಯಲಾಗಿ ಇದೇ ರಾತ್ರಿ ಸುಮಾರು 10-00 ಗಂಟೆ ಸಮಯದ್ಲಲಿ ನನ್ನ ತಂದೆ ವೆಂಕಟರಮಣಸ್ವಾಮಿ ದೇವಸ್ಥಾನದ ರಸ್ತೆಯ ಎದುರಿನ ಶಿರಾ ಕಡೆಗೆ ಹೋಗುವ ಎನ್ .ಹೆಚ್ 48 ರಸ್ತೆಯಲ್ಲಿ ರಸ್ತೆಯನ್ನು ದಾಟುತ್ತಿರುವಾಗ ಅದೇ ಸಮಯಕ್ಕೆ ಯಾವುದೋ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ತಂದೆಯವರಿಗೆ ಅಪಘಾತ ಪಡಿಸಿದ್ದರಿಂದ ನನ್ನ ತಂದೆ ದಾದಾಪೀರ್ ರವರಿಗೆ ತಲೆಗೆ, ಮೈ ಕೈ ಗಳಿಗೆ ಬಲವಾದ ಪೆಟ್ಟುಬಿದ್ದು ತೀವ್ರವಾಗಿ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ವಿಷಯ ತಿಳಿಯಿತು. ನಂತರ ಶವವನ್ನು ಶವಾಗಾರದಲ್ಲಿ ಇರಿಸಿ ಠಾಣೆಗೆ ಬಂದು ಈ ನನ್ನ ದೂರನ್ನು ನೀಡುತ್ತಿದ್ದೇನೆ, ನನ್ನ ತಂದೆಯವರ ಸಾವಿಗೆ ಕಾರಣವಾಗಿರುವ ಅಪಘಾತ ಪಡಿಸಿ ನಿಲ್ಲಿಸದೇ ಹೊರಟು ಹೋಗಿರುವ ಯಾವುದೋ ವಾಹನವನ್ನು ಪತ್ತೆಮಾಡಿ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ 106/2017 ಕಲಂ 323, 324, 504, 506 ರೆ/ವಿ 34 ಐಪಿಸಿ

ದಿನಾಂಕ: 16-07-2017 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ತುಮಕೂರು ಟೌನ್ ಶೆಟ್ಟಿಹಳ್ಳಿ ವಾಸಿ ಚಿರಂಜೀವಿ ಬಿನ್. ತೇಜ್‌‌ಕುಮಾರ್‌‌ ಎಂಬುವರು ಠಾಣೆಗೆ ಹಾಜರಾಗಿ, ನಾನು ತುಮಕೂರು ಶೆಟ್ಟಿಹಳ್ಳಿ ನಾಯಕರಬೀದಿಯಲ್ಲಿರುವ ನಮ್ಮ ಸೋದರ ಮಾವ ಸೋಮಶೇಖರ್‌‌‌ ರವರ ಮನೆಯಲ್ಲಿದ್ದುಕೊಂಡು, ತುಮಕೂರು ರಿಂಗ್‌‌ರಸ್ತೆ, ಶೆಟ್ಟಿಹಳ್ಳಿ ಸರ್ಕಲ್‌‌ನಲ್ಲಿ ತೆಳ್ಳುವಗಾಡಿಯಲ್ಲಿ ಪಾನಿಪುರಿ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುತ್ತೇನೆ.  ದಿನಾಂಕ: 14-07-2017 ರಂದು ಸಾಯಂಕಾಲ ಸುಮಾರು 5-00 ಗಂಟೆ ಸಮಯದಲ್ಲಿ ನಾನು ರಿಂಗ್‌ರಸ್ತೆಯ ಶೆಟ್ಟಿಹಳ್ಳಿ ಸರ್ಕಲ್‌‌ನಲ್ಲಿ ಪಾನಿಪೂರಿ ವ್ಯಾಪಾರ ಮಾಡುತ್ತಿದ್ದಾಗ, ನಮ್ಮ ಅಂಗಡಿಯ ಬಳಿಗೆ ಆಟೋ ಡ್ರೈವರ್‌‌ ಚೇತನ್‌‌ಕುಮಾರ್‌‌, ಆತನ ಸಂಗಡಿಗರಾದ ಸುರೇಶ ಮತ್ತು ಅಜೇಯ್‌‌ ಎಂಬುವರು ಬಂದವರೇ ನನಗೆ 3 ಪ್ಲೇಟ್‌‌ ಪಾನಿಪೂರಿಯನ್ನು ಕೊಡಲು ಕೇಳಿದರು.  ನಾನು ಅವರಿಗೆ 3 ಪ್ಲೇಟ್‌‌ ಪಾನಿಪೂರಿಯನ್ನು ಕೊಟ್ಟೆ.  ಪಾನಿಪೂರಿ ತಿಂದ ನಂತರ ಮೂರೂ ಜನರು ಹಣ ಕೊಡದೇ ಹಾಗೇಯೇ ಹೋಗುತ್ತಿದ್ದರು. ನಾನು ಅವರಿಗೆ ಪಾನಿಪೂರಿಯ ಹಣ ಕೊಡಲು ಕೇಳಿದ್ದಕ್ಕೆ ಮೂರೂ ಜನರು ನನ್ನನ್ನು ಕುರಿತು ಏನೋ ಬೋಳಿ ಮಗನೇ, ಸೂಳೇ ಮಗನೇ ನಮ್ಮ ಹತ್ತಿರ ದುಡ್ಡು ಕೇಳುತ್ತೀಯೇನೋ ಎಂತಾ ಹೇಳಿದರು.  ಅದಕ್ಕೆ ನಾನು ನೀವು ಯಾರಾದರೇನು ಮೊದಲು ಪಾನಿಪೂರಿಯ ಹಣ ಕೊಟ್ಟು ಹೋಗಿ ಎಂತಾ ಹೇಳಿದ್ದಕ್ಕೆ ಚೇತನ್‌‌ಕುಮಾರನು ಅಲ್ಲೇ ಸರ್ಕಲ್‌‌ನಲ್ಲಿ ಹೊಸದಾಗಿ ನೆಟ್ಟಿರುವ ಗಿಡಗಳಿಗೆ ಸಪೋರ್ಟ್ ಆಗಿ ಕೊಟ್ಟಿದ್ದ ಒಂದು ದೊಣ್ಣೆಯನ್ನು ಕಿತ್ತುಕೊಂಡು  ನನ್ನ ತಲೆಯ ಮೇಲೆ  ಹೊಡೆದು ರಕ್ತಗಾಯಪಡಿಸಿದನು.  ಸುರೇಶನು ಕೈನಿಂದ ನನ್ನ ಮೂಗಿಗೆ ಗುದ್ದಿ ನೋವುಂಟು ಮಾಡಿದನು.  ಅಜೇಯ್‌ ಎಂಬುವನು  ಕೈನಿಂದ ನನ್ನ ಬಲಗಡೆ ಕೆನ್ನೆಗೆ ಗುದ್ದಿ ನೋವುಂಟು ಮಾಡಿದನು.  ಅಷ್ಟರಲ್ಲಿ ಅಲ್ಲಿಯೇ ಪ್ಲೇಟ್‌‌‌ಗಳನ್ನು ತೊಳೆಯುತ್ತಿದ್ದ ನಮ್ಮ ಅಜ್ಜಿ ರಂಗಮ್ಮ ಹಾಗೂ ನಮ್ಮ ಅಂಗಡಿಯ ಬಳಿಯಲ್ಲಿಯೇ ಗೋಬಿ ಅಂಗಡಿಯನ್ನು ಇಟ್ಟುಕೊಂಡಿರುವ ಯೋಗೇಶ ಹಾಗೂ ಅಲ್ಲೇ ಇದ್ದ ಆಟೋ ಡ್ರೈವರ್‌‌‌ ಸಲ್ಮಾನ್‌‌ ಎಂಬುವರು ಬಂದು ಆರೋಪಿ ಚೇತನ್‌‌ಕುಮಾರನ ಕೈಯ್ಯಲ್ಲಿದ್ದ ದೊಣ್ಣೆಯನ್ನು ಕಿತ್ತು ಬಿಸಾಕಿ ಜಗಳ ಬಿಡಿಸಿ ಕಳುಹಿಸಿದ್ದರು.  ಆದರೂ ಮೇಲ್ಕಂಡ ಮೂರೂ ಜನರು ಹೋಗುವಾಗ ನನ್ನನ್ನು ಕುರಿತು ನಿನ್ನನ್ನು ಇಷ್ಟಕ್ಕೇ ಬಿಡುವುದಿಲ್ಲ, ಒಂದು ಗತಿ ಕಾಣಿಸುತ್ತೇವೆಂತಾ ಕೊಲೆ ಬೆದರಿಕೆ ಹಾಕಿ ಹೊರಟು ಹೋದರು.  ನಂತರ ಗಾಯಗೊಂಡಿದ್ದ ನನ್ನನ್ನು ನಮ್ಮ ಅಜ್ಜಿ ರಂಗಮ್ಮ, ಹಾಗೂ ಆಟೋ ಡ್ರೈವರ್‌‌ ಸಲ್ಮಾನ್‌‌‌ ರವರುಗಳು  ಆಟೋದಲ್ಲಿ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದು ದಿನಾಂಕ: 15-07-2017 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ನಂತರ ನಮ್ಮ ಸೊದರ ಮಾವ ಸೋಮಶೇಖರ್‌ ರವರ ಮನೆಯಲ್ಲಿ ವಿಶ್ರಾಂತಿ ಪಡೆದು, ನಮ್ಮ ಸ್ವಂತ ಊರಿನಿಂದ ನಮ್ಮ  ತಂದೆ ತೇಜ್‌‌ಕುಮಾರ್‌, ತಾಯಿ ದೀಪಾ ರವರುಗಳನ್ನು ಕರೆಸಿಕೊಂಡು ನಮ್ಮ ತಂದೆ-ತಾಯಿಗೆ ಗಲಾಟೆಯ ವಿಚಾರವನ್ನು ತಿಳಿಸಿ ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ಈ ದೂರು ನೀಡಿರುತ್ತೇನೆ.  ಆದ್ದರಿಂದ ತಾವು ದಯಮಾಡಿ ನನಗೆ ಕೈಗಳಿಂದ ಹಾಗೂ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿರುವ ಮೇಲ್ಕಂಡ ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂತಾ ಇತ್ಯಾದಿ ಪಿರ್ಯಾದು ಅಂಶವಾಗಿರುತ್ತೆ.

 

ಹೊನ್ನವಳ್ಳಿ ಪೊಲೀಸ್ ಠಾಣೆ      ಮೊ. ನಂ 91/2017 ಕಲಂ 457,511 ಐಪಿಸಿ

ದಿನಾಂಕ:16/7/2017 ರಂದು ಬೆಳಿಗ್ಗೆ  7-30 ಗಂಟೆಗೆ ಕೇಸಿನ ಪಿರ್ಯಾದಿದಾರರಾದ ಸದಾಶಿವಯ್ಯ ಬಿನ್‌ ರಾಮಯ್ಯ ಬಿದರೆಗುಡಿ ಗ್ರಾಮ ತಿಪಟೂರು ತಾಲ್ಲೂಕು ರವರು ಕೃತ್ಯನಡೆದ ಸ್ಥಳದಲ್ಲಿ ಪಡೆದ ಲಿಖಿತ ದೂರಿನ ಅಂಶವೇನೆಂದರೆ ಬಿದರೆಗುಡಿ ಗ್ರಾಮ ದೇವತೆಯಾದ ಬಿದಿರಮ್ಮದೇವಿಯ ನೂತನ ದೇವಾಲಯ ನಿರ್ಮಾಣ ಕೆಲಸ ಮಾಡುತ್ತಿದ್ದು, ರಾತ್ರಿ ವೇಳೆ ಸುತ್ತಾಮುತ್ತಲಿನ ಗ್ರಾಮಸ್ಥರು ದೇವಾಲಯದ ಬಳಿ ಮಲಗುತ್ತಿದ್ದು, ಎಂದಿನಂತೆ ದಿನಾಂಕ 15/07/2017 ರಂದು ರಾತ್ರಿ ಪಿರ್ಯಾದಿ, ಪೂಜಾರು ಕಾಳಪ್ಪ ನಾಗರಾಜು ಬಿನ್‌ ದೇವಯ್ಯ ಪಿರ್ಯಾದಿಯ ಮಗ ಲೋಹಿತ್‌‌ ಕುಮಾರ, ನಂಜೆಶಯ್ಯ ಬಿನ್‌ ದೇವಯ್ಯ, ಮತ್ತಿಹಳ್ಳಿ ಗ್ರಾಮದ ಹರೀಶ ಬಿನ್‌ ನಿಂಗಪ್ಪ ರವರು ಮಲಗಿದ್ದು, ದೇವಸ್ಥಾನದ ಮುಂಭಾಗಿಲನ್ನು ಯಾರೋ ಹೊಡೆಯುವ ಶಬ್ದ ದಿನಾಂಕ 16/07/2017 ರಂದು ಬೆಳಗ್ಗೆ ಜಾವ 2-00 ಗಂಟೆಯಲ್ಲಿ ಕೇಳಿದ್ದು ಎಚ್ಚರವಾಗಿ ನೋಡಲಾಗಿ ಯಾರೋ ಇಬ್ಬರು ಅಸಾಮಿಗಳು ದೇವಾಲಯದ ಬಾಗಿಲನ್ನು ಹೊಡೆಯುತ್ತಿದ್ದು ನಮ್ಮನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದವರನ್ನು ನಾವುಗಳು ಸುತ್ತುವರೆದು ಹಿಡಿದು ಹೆಸರು ವಿಳಾಸ ಕೇಳಲಾಗಿ ಒಬ್ಬನು ನಿಖಿಲ್‌ ಹಿರಿಸಾವೆ ಚನ್ನರಾಯಪಟ್ಟಣ ತಾ, ಮತ್ತೊಬ್ಬ ಲಯನ್ ಹಿರಿಸಾವೆ ಅಂತ ತಿಳಿಸಿದ್ದು ಅವರ ಕೈಯಲ್ಲಿ ಅಕ್ಸಲ್‌ ಬ್ಲೇಡ್ ಕಟಿಂಗ್‌ಪ್ಲೇಯರ್‌ಗಳಿದ್ದು, ವಿಚಾರಮಾಡಲಾಗಿ ನಾವುಗಳು ಬಸ್ಸಿನಲ್ಲಿ ಬಂದು ದೇವಾಲಯದ ಬೀಗ ಹೊಡೆದು ಕಳ್ಳತನ ಮಾಡಲು ಪ್ರಯತ್ನ ಪಟ್ಟಿರುತ್ತೇವೆ ಅಂತ ತಿಳಿಸಿದ್ದು, ನಂತರ ನಾವುಗಳು ಗುಡಿಗೌಡರನ್ನು ಕರೆಯಿಸಿ ವಿಚಾರವನ್ನು ತಿಳಿಸಿ ಈ ದಿನ 16/07/2017 ರಂದು ಬೆಳಗ್ಗೆ ಹೊನ್ನವಳ್ಳಿ ಪೊಲೀಸರಿಗೆ ರಾತ್ರಿ ಕಳ್ಳತನ ಮಾಡಲು ಪ್ರಯತ್ನ ಪಟ್ಟ ನಿಖಿಲ್ ಮತ್ತು ಲಯನ ರವರುಗಳ ಮೇಲೆ  ಕಾನೂನು ಕ್ರಮ ಕೈಗೊಳ್ಳಲು ಕಳ್ಳರನ್ನು ಹಾಜರುಪಡಿಸಿ  ನೀಡಿದ ದೂರನ್ನು ಕೃತ್ಯನಡೆದ ಸ್ಥಳದಲ್ಲಿ ಬೆಳಗ್ಗೆ 7-30ಕ್ಕೆ ಪಡೆದು ನಂತರ ಠಾಣೆಗೆ ಬೆಳಗ್ಗೆ 8-30ಕ್ಕೆ ಪ್ರಕರಣ ದಾಖಲು ಮಾಡಿರುತ್ತದೆSunday, 16 July 2017

Crime Incidents 16-07-17

ಪಾವಗಡ ಪೊಲೀಸ್ ಠಾಣಾ ಮೊ,ನಂ 174/2017 ಕಲಂ 279, 337 IPC & 187 IMV Act.

ದಿನಾಂಕ:15/07/2017 ರಂದು 17-45 ಗಂಟೆಗೆ ಪಿರ್ಯಾದುದಾರರಾದ ಎಸ್,ಆರ್ ಶ್ರೀನಿವಾಸ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ದೊಡ್ಡಪ್ಪನ ಮಗನಾದ S V ಪರಮೇಶ ಬಿನ್ ಹೆಚ್, ವೆಂಕಟೇಶಪ್ಪ ರವರು ಅವರ ಅಕ್ಕನಮಗಳಾದ ಚೂಡಾಮಣಿ  T S ರವರನ್ನು ಮುರಾರ್ಜಿ ದೇಸಾಯಿ ಶಾಲೆಯಿಂದ ಕರೆದುಕೊಂಡು ಜೆ ಅಚ್ಚಮ್ಮನಹಳ್ಳಿ ಗ್ರಾಮಕ್ಕೆ ಹೋಗಲು KA06-EC-778 ಬೈಕ್ ನಲ್ಲಿ ಮಧ್ಯಾಹ್ನ 12-45 ಗಂಟೆಯಲ್ಲಿ ಪಾವಗಡ ಕಲ್ಯಾಣದುರ್ಗ ರಸ್ತೆಯಲ್ಲಿನ ಪಳವಳ್ಳಿ ಕೆರೆಯ ಏರಿಯ ಮೇಲಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ( ಪಾವಗಡದ ಕಡೆಯಿಂದ ) ಬಂದ KA03-MT-6302 ಕೆಂಪು ಬಣ್ಣದ ಮಾರುತಿ ಶಿಫ್ಟ್ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪರಮೇಶ ಓಡಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು, ಇದರ ಪರಿಣಾಮವಾಗಿ ಪರಮೇಶ ಮತ್ತು ಹಿಂದೆ ಕುಳಿತಿದ್ದ S V ಚೂಡಾಮಣಿ ಇಬ್ಬರೂ ಕೆಳಗೆ ಬಿದ್ದು ಚೂಡಾಮಣಿಗೆ ಕುತ್ತಿಗೆ ಮೂಳೆ, ಬಲಗಾಲಿನ ಮೊಣಕಾಲಿಗೆ, ಹಾಗೂ ಮೂಗಿನ ಕೆಳಭಾಗ, ಬಾಯಿಗೆ ಮತ್ತು ಎಡಗೈಗೆ  ಬಲವಾಗಿ ಪೆಟ್ಟು ಬಿದ್ದಿರುತ್ತೆ. ಹಾಗೂ ಪರಮೇಶನಿಗೆ ಬಲಭಾಗದ ಭುಜದ ಮೂಳೆ ಮುರಿದು ಮೈ,ಕೈ ಗೆ ಇತರೆ ಕಡೆಗಳಲ್ಲಿ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತೆ. ಅಪಘಾತಪಡಿಸಿದ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಕಾರನ್ನು ತೆಗೆದುಕೊಂಡು ಹೊರಟು ಹೋಗಿರುತ್ತಾನೆ. ಮೇಲ್ಕಂಡ ಅಪಘಾತಪಡಿಸಿದ KA03-MT-6302 ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ನೀಡಿದ ದೂರು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಯು.ಡಿ.ಆರ್. ನಂ: 19/2017 ಕಲಂ 174 ಸಿ.ಆರ್.ಪಿ.ಸಿ.

ದಿನಾಂಕ:15/07/2017 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿಯಾದ ರಂಗನಾಥ ಕೆ. ಬಿನ್ ಸಿ.ಎಸ್.ಕುಮಾರ್, 31 ವರ್ಷ, ವಕ್ಕಲಿಗರು ಜನಾಂಗ, ಎ.ಕೆ.ಕಾವಲ್ (ವಡ್ಡರಹಳ್ಳಿ), ಗುಳೂರು ಹೋಬಳಿ, ತುಮಕೂರು ತಾಲ್ಲೋಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ಅಜ್ಜಿಯಾದ ಶ್ರೀಮತಿ ಪುಟ್ಟಮಾಯಮ್ಮ ಕೊಂ ಲೇಟ್ ಸಿದ್ದಗಂಗಯ್ಯ ರವರು ತನ್ನ ಮಗನಾದ ಸಿ.ಎಸ್.ಕುಮಾರ್ ಬಿನ್ ಲೇಟ್ ಸಿದ್ದಗಂಗಯ್ಯರವರು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಇವರ ತಾಯಿಗೆ ಸುಮಾರು 90 ವರ್ಷ, ವಯಸ್ಸಾಗಿದ್ದು, ಇವರಿಗೆ ಹೊಟ್ಟೆಯಲ್ಲಿ ಆಗಾಗ್ಗೆ ನೋವು ಕಾಣಿಸಿಕೊಳ್ಳುತ್ತಿದ್ದು, ಇವರಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ತೋರಿಸಿದ್ದರೂ ಸಹ ಗುಣವಾಗಿರುವುದಿಲ್ಲ. ದಿನಾಂಕ-14/07/2017 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ಹೊಟ್ಟೆ ನೋವು ಬಂದು ಆ ನೋವನ್ನು ತಾಳಲಾರದೆ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನಮ್ಮ ಮನೆಯಲ್ಲಿ ಯಾವುದೋ ಒಂದು ಹಗ್ಗದಿಂದ ಮೇಲ್ಛವಾಣೆಯ ಕಬ್ಬಿಣದ ಹುಕ್ಕಿಗೆ ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದು, ಇದನ್ನು ನನ್ನ ಮಾವನಾದ ಡಿ.ಎಲ್.ರವಿ ಎಂಬುವವರು ನೋಡಿರುತ್ತಾರೆ, ಆಗ ಸಮಯ ಸಂಜೆ ಸುಮಾರು 6-30 ಆಗಿದ್ದು, ನಂತರ ರವಿರವರು ನನಗೆ ಫೋನ್ ಮುಖಾಂತರ ತಿಳಿಸಿದ್ದು ನಾನು ಸದರಿ ಸ್ಥಳಕ್ಕೆ ಹೋಗಿ ನನ್ನ ಅಜ್ಜಿಯನ್ನು ನೋಡಲಾಗಿ ನೇಣು ಬಿಗಿದುಕೊಂಡಿದ್ದ ಸ್ಥತಿಯಲ್ಲಿರುವುದನ್ನ ಕಂಡು ಜೀವವಿರಬಹುದೆಂದು ನೇಣಿನಿಂದ ಕೆಳಗೆ ಇಳಿಸಿ  ಯಾವುದೋ ಒಂದು ವಾಹನದಲ್ಲಿ ತುಮಕೂರಿಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿಗಳು ನನ್ನ ಅಜ್ಜಿ ಪುಟ್ಟಮಾಯಮ್ಮರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ನನ್ನ ಅಜ್ಜಿಯು ಅವರ ಹೊಟ್ಟೆನೋವನ್ನು ತಾಳಲಾರದೆ ತಮ್ಮಷ್ಟಕ್ಕೆ ತಾವೇ ನೇಣುಬಿಗಿದುಕೊಂಡು ಮೃತಪಟ್ಟಿರುತ್ತಾರೆ ವಿನಹಾ ಅವರ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ, ಈ ವಿಚಾರವನ್ನು ನಮ್ಮ ಸಂಬಂಧಿಕರಿಗೆಲ್ಲಾ ತಿಳಿಸಿ  ತಡವಾಗಿ ಠಾಣೆಗೆ ಬಂದು ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಎಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.13/2017, ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ:15/07/2017 ರಂದು ಬೆಳಿಗ್ಗೆ 09:10 ಗಂಟೆಗೆ ಪಿರ್ಯಾದಿ  ಉಮಾದೇವಿ ಕೋಂ ರಾಜಾನಾಯ್ಕ  30 ವರ್ಷ ಕೂಲಿ ಕೆಲಸ ಲಂಬಾಣಿ ಜನಾಂಗ ದಾದಗೊಂಡನಹಳ್ಳಿ ಗ್ರಾಮ ಐ.ಡಿ.ಹಳ್ಳಿ  ಹೋಬಳಿ ಮಧುಗಿರಿ ತಾಲ್ಲೋಕ್, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಈಗ್ಗೆ ಸುಮಾರು 18 ವರ್ಷದ ಹಿಂದೆ ನನ್ನನ್ನು ದಾದಗೊಂಡನಹಳ್ಳಿ ಗ್ರಾಮದ ರಾಜಾನಾಯ್ಕ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು ನಮಗೆ ಇಬ್ಬರೂ ಗಂಡು ಮಕ್ಕಳು ಹಾಗೂ ಇಬ್ಬರೂ ಹೆಣ್ಣು ಮಕ್ಕಳಿರುತ್ತಾರೆ. ನಾನು ಮತ್ತು ನನ್ನ ಗಂಡ ರಾಜಾನಾಯ್ಕರವರು ಕೂಲಿ ನಾಲಿ ಮಾಡಿಕೊಂಡು ಮಕ್ಕಳೊಂದಿಗೆ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದೆವು. ಈಗಿರುವಾಗ ಇತ್ತಿಚೇಗೆ ನಮ್ಮ ಊರಿನಲ್ಲಿ ಮಳೆ ಬೆಳೆ ಇಲ್ಲದೇ ಕೂಲಿ ಕೆಲಸ ಹೆಚ್ಚಾಗಿ ಸಿಗುತ್ತಿರಲಿಲ್ಲ ಹಾಗಾಗಿ ಸಂಸಾರ ನಡೆಸಲು ತೊಂದರೆಯಾಗಿದ್ದರಿಂದ ಬೇರೆ ಎಲ್ಲಿಯಾದರೂ ಹೋಗಿ ಜೀವನ ಮಾಡೋಣವೆಂತ ನಾನು ಮತ್ತು ನನ್ನ ಗಂಡ ನಿರ್ದರಿಸಿ ಈಗ್ಗೆ ಎರಡು ತಿಂಗಳ ಹಿಣದೆ ನಾನು, ನನ್ನ ಗಂಡ ರಾಜಾನಾಯ್ಕ ಹಾಗೂ ನಮ್ಮ ನಾಲ್ವರು ಮಕ್ಕಳೊಂದಿಗೆ ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಗೆ ಹೋಗಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು ನಾನು ಮತ್ತು ನನ್ನ ಗಂಡ ಇಬ್ಬರೂ ಸಣ್ಣ ಪುಟ್ಟ ಕೂಲಿ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವು. ಈ ಬಗ್ಗೆ  ನನ್ನ ಗಂಡ ರಾಜನಾಯ್ಕ ಊರನ್ನು ಬಿಟ್ಟು ಬೆಂಗಳೂರಿಗೆ ಬರುವಂತಾಯಿತಲ್ಲ ಎಂತಾ ಆಗಾಗ್ಗೆ ಮನಸ್ಸಿಗೆ ಬೇಜಾರು ಮಾಡಿಕೊಳ್ಳುತ್ತಿದ್ದರು ಆ ಸಮಯದಲ್ಲಿ ನಾನು ನನ್ನ ಗಂಡ ರಾಜನಾಯ್ಕನಿಗೆ ಸಮಧಾನ ಹೇಳಿತ್ತಿದ್ದೆನು.ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕಾಗಿದ್ದರಿಂದ ಊರಿನಲ್ಲಿ ಬಿಟ್ಟಿದ್ದ ನಮ್ಮ ಬಾಬ್ತು ಆಧಾರ್ ಕಾರ್ಡ್ ಮತ್ತು ಐ.ಡಿ.ಕಾರ್ಡ್‌ಗಳನ್ನು ತೆಗೆದುಕೊಂಡು ಬರುತ್ತಿನೆಂತಾ ದಿನಾಂಕ:10/07/17 ರಂದು ಬೆಳಿಗ್ಗೆ ಬೆಂಗಳೂರಿನಿಂದ ದಾದಗೊಂಡನಹಳ್ಳಿಗೆ ಬಂದಿದ್ದರು.ಎರಡು ಮೂರು ದಿನಗಳು ಕಳೇದರು ನನ್ನ ಗಂಡ ವಾಪಸ್ಸು ಬೆಂಗಳೂರಿಗೆ ಬರಲಿಲ್ಲಬ ಆಗ ನಾನು ನಮ್ಮ ಸಂಭಂದಿ ನಾಗನಾಯ್ಕರವರಿಗೆ ಫೋನ್ ಮಾಡಿ ನನ್ನ ಗಂಡ ರಾಜನಾಯ್ಕ ಊರಿಗೆ ಬಂದಿದ್ದಾರೆಯೇ ಎಂತಾ ಕೇಳಿದೆ ಆಗ ಅವರು ನಿನ್ನ ಗಂಡ ಊರಿಗೆ ಬಂದು ಪುನಃ ವಾಪಸ್ಸು ಬೆಂಗಳೂರಿಗೆ ಬಂದನೆಂತಾ ತಿಳಿಸಿದರು. ಆಗ ನಾನು ಇವತ್ತೋ ನಾಳೆಯೋ ಬರಬಹುದೆಂತಾ ಸುಮ್ಮನಾದೇನು ಈಗಿರುವಾಗ ದಿನಾಂಕ:14/07/2017 ರಂದು ಸಂಜೆ ಸುಮಾರು 06-00 ಗಂಟೆ ಸಮಯದಲ್ಲಿ ದಾದಗೊಂಡನಹಳ್ಳಿಯಿಂದ ಯಾರೋ ನಮ್ಮ ಸಂಬಂಧಿಕರು ನನಗೆ ಫೋನ್ ಮಾಡಿ ನಿನ್ನ ಗಂಡ ರಾಜನಾಯ್ಕನು ನಿಮ್ಮ ಮನೆಯಲ್ಲಿ ಮನೆಯ ಮುಂದಿನ ಬಾಗಿಲನ್ನು ಹಾಕಿಕೊಂಡು ಮನೆಯ ಓಳಗಡೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ತುಂಬ ವಾಸನೆ ಬರುತ್ತಿದೆ ನೀವು ಊರಿಗೆ ಬನ್ನಿ ಎಂತಾ ತಿಳಿಸಿದರು. ಆಗ ನಾನು ಕೂಡಲೇ ನನ್ನ ಮಕ್ಕಳೊಂದಿಗೆ ದಾದಗೊಂಡನಹಳ್ಳಿಗೆ ಬಂದು ನಮ್ಮ ಮನೆಯ ಕಿಟಕಿ ಮುಖಾಂತರ ನೋಡಲಾಗಿ ವಿಚಾರ ನಿಜವಾಗಿದ್ದು ನನ್ನ ಗಂಡ ನಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ತುಂಬಾ ವಾಸನೆ ಬರುತ್ತಿರುತ್ತೆ. ನನ್ನ ಗಂಡ ರಾಜನಾಯ್ಕನು ತನ್ನ ಸಂಸಾರ ಸಮೇತ ಊರನ್ನು ಬಿಟ್ಟು ಬೆಂಗಳೂರಿಗೆ ಹೋಗಿ ಜೀವನ ಮಾಡುವಂತಾಯಿತಲ್ಲಾ ಎಂತಾ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ:10/07/2017 ರಂದು ಊರಿಗೆ ಬಂದವರು ಯಾವುದೋ ಸಮಯದಲ್ಲಿ ತನ್ನ ಮೂಲಕ ತಾನೇ ನನ್ನ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಅವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಸ್ಥಳಕ್ಕೆ ಬಂದು ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 132/2017 ಕಲಂ 279,337 ಐಪಿಸಿ ರೆ/ವಿ 134(&ಬಿ), 187 ಐಎಂವಿ ಆಕ್ಟ್

ದಿನಾಂಕ-15-07-2017 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿಯಾದ ಹರೀಶ್ ಹೆಚ್ ಜಿ ಬಿನ್ ಗಂಗವೆಂಕಟಯ್ಯ, 22 ವರ್ಷ, ಆದಿ ಕರ್ನಾಟಕ, ಬಾರ್ ಬೆಂಡಿಂಗ್ ಕೆಲಸ, ಬಂಗಾರಪ್ಪ ಕಾಲೋನಿ, ಹೆಬ್ಬೂರು, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸಿವಾಗಿರುತ್ತೇನೆ, ಕುಣಿಗಲ್ ತಾಲ್ಲೋಕು, ಕಾಮನಹಳ್ಳಿ ವಾಸಿ ರವೀಶ್ ರವರ  ಬಾಬ್ತು ಕೆಎ-06-ಇಕ್ಯೂ-5433 ನೇ ಟಿ ಎಸ್ ಎಕ್ಷ್‌ ಎಲ್  ದ್ವಿಚಕ್ರ ವಾಹನದಲ್ಲಿ ದಿನಾಂಕ-11/07/2017 ರಂದು ಭೆಳಿಗ್ಗೆ ಸುಮಾರು 8-15 ಗಂಟೆ ಸಮಯದಲ್ಲಿ ನನ್ನ ಚಿಕ್ಕಪ್ಪನಾದ ಜನಾರ್ಧನಸ್ವಾಮಿರವರನ್ನು ಸದರಿ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ತುಮಕೂರು –ಕುಣಿಗಲ್ ರಸ್ತೆಯ ಹೆಬ್ಬೂರಿನ ಬೋರೇಗೌಡ ಪೆಂಟ್ರೋಲ್ ಬಂಕ್ ಹತ್ತಿರ ಸದರಿ ವಾಹನಕ್ಕೆ ಪೆಟ್ರೋಲ್ ಅನ್ನು ಹಾಕಿಸಲು ಸದರಿ ನನ್ನ ದ್ವಿಚಕ್ರ ವಾಹನಕ್ಕೆ ಇಂಡಿಕೇಟ್ ಅನ್ನು ಹಾಕಿಕೊಂಡು ಬಲಭಾಗಕ್ಕೆ ತಿರುಗಿಸಿದಾಗ ನಮ್ಮ ಹಿಂದಿನಿಂದ ಅಂದರೆ ಹೆಬ್ಬೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಕಾರಿನ ಚಾಲಕನು ತನ್ನ ವಾಹನಕ್ಕೆ ಯಾವುದೇ ಮುನ್ಸೂಚನೆ ನೀಡದೆ ರಸ್ತೆಯ ಎಡಪಕ್ಕದಿಂದ ಬಲಬಾಗಕ್ಕೆ ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನ ಕಾರನ್ನು ಓಡಿಸಿಕೊಂಡು ಡಿಕ್ಕಿ ಹೊಡೆಸಿ ಅಘಫಾತಪಡಿಸಿದ ಪರಿಣಾಮ ದ್ವಿಚಕ್ರ ವಾಹನದ ಸಮೇತ ಇಬ್ಬರು ಸಹ ರಸ್ತೆಯ ಮೇಲೆ ಬಿದ್ದೆವು, ನನ್ನ ಹಿಂಬದಿಯಲ್ಲಿ ಕುಳಿತಿದ್ದ ಜನಾರ್ಧನಸ್ವಾಮಿಯವರಿಗೆ ಬಲಗಾಲಿಗೆ  ಮತ್ತು ತಲೆಯ ಹಿಂಬಾಗಕ್ಕೆ ತೀವ್ರರಕ್ತಗಾಯವಾಗಿದ್ದು, ನನಗೆ ಯಾವುದೇ ಗಾಯಗಳಾಗಿರುವುದಿಲ್ಲ, ನಮಗೆ ಅಪಘಾತ ಪಡಿಸಿದ ಕಾರು ರಸ್ತೆಯ ಎಡ ಬಾಗದ ಚರಂಡಿ ಕಟ್ಟೆಗೆ ಗುದ್ದಿ ಬಿದ್ದಿರುತ್ತೆ, ಅದನ್ನು ನೋಡಲಾಗಿ ಕೆಎ-06-ಎನ್-2017 ನೇ ಕಾರಾಗಿದ್ದು, ಅದರ ಚಾಲಕನು ತನ್ನ ಕಾರಿನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಅಲ್ಲೇ ಇದ್ದ ಪ್ರದೀಪ ಮತ್ತು ಕೃಷ್ಣಮೂರ್ತಿ ಹಾಗೂ ಸಾರ್ವಜನಿಕರ ಸಹಾಯದಿಂದ 108 ನೇ ಆಂಬುಲೆನ್ಸ್ ನಲ್ಲಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿರುತ್ತಾರೆ, ನಮಗೆ ಅಪಘಾತ ಮಾಡಿದ ಕೆಎ-06-ಎನ್-2017 ನೇ ಕಾರಿನ ಚಾಲಕನ ಹೆಸರು ವಿಳಾಸ ತಿಳಿದಿರುವುದಿಲ್ಲ,  ನಮ್ಮ ಚಿಕ್ಕಪ್ಪನಿಗೆ ಚಿಕಿತ್ಸೆ ಕೊಡಿಸಿ ನೋಡಿಕೊಳ್ಳಲು ಯಾರೂ ಇಲ್ಲದ್ದರಿಂದ ಈ ದಿನ ತಡವಾಗಿ ಬಂದು ಈ ಅಪಘಾತ ಪಡಿಸಿದ ಸದರಿ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮಜರುಗಿಸಬೇಕೆಂದು ದೂರು ನೀಡಿರುತ್ತೇನೆ ಮತ್ತು ಅಫಘಾತಪಡಿಸಿದ ಹಾಗೂ ಅಪಘಾತಕ್ಕೊಳಗಾದ ಎರಡೂ ವಾಹಗಳು  ಬೋರೇಗೌಡ  ಪೆಂಟ್ರೋಲ್ ಬಂಕ್ ಹತ್ತಿರ ರಸ್ತೆಯ ಪಕ್ಕ ನಿಲ್ಲಿಸಿರುತ್ತೆ. ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.Saturday, 15 July 2017

Crime Incidents 15-07-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  78/2017   ಕಲಂ: 32(3)K E Act

ದಿನಾಂಕ:14/07/2017 ರಂದು ಮದ್ಯಾಹ್ನ 3:00  ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಪಿ.ಸಿ;672 ರವರೊಂದಿಗೆ  ಠಾಣಾ ಸರಹದ್ದು ಓಬಳಾಪುರ ಗ್ರಾಮದ ಬಳಿ ಗಸ್ತಿನಲ್ಲಿರುವಾಗ್ಗೆ ಓಬಳಾಪುರ ಗ್ರಾಮದ ಈಡಿಗ ಜನಾಂಗಕ್ಕೆ ಸೇರಿದ ನಾಗರಾಜ ಎಂಬುವವರ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅಕ್ರಮವಾಗಿ ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ  ಮಾಹಿತಿ ಬಂದ ಮೇರೆಗೆ ಪಂಚಾಯ್ತುದಾರರನ್ನು ಬರಮಾಡಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಂಗಡಿಯ ಪಕ್ಕದಲ್ಲಿ 03 ಜನರು ಮದ್ಯತುಂಬಿದ 03  ಓಲ್ಡ್ ಟವರಿನ್ 180 ಎಂ.ಎಲ್ ನ ಟೆಟ್ರಾ ಪ್ಯಾಕೆಟ್ ಗಳು ಹಾಗೂ 03 ಪ್ಲಾಸ್ಟಿಕ್ ಲೋಟಗಳು ಇದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಇಬ್ಬರು ಆಸಾಮಿಗಳು ಸ್ಥಳದಿಂದ ಓಡಿ ಹೋಗಿದ್ದು ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನಾಗರಾಜ ಬಿನ್ ಲೇ| ಓಬಳೇಶಪ್ಪ, 36 ವರ್ಷ, ಈಡಿಗ ಜನಾಂಗ ಎಂತ ತಿಳಿಸಿದ್ದು ಸ್ಥಳದಲ್ಲಿ   ಮದ್ಯ ತುಂಬಿದ್ದ 180 ಎಂ.ಎಲ್ ನ 03  ಓಲ್ಡ್ ಟವರಿನ್ ಟೆಟ್ರಾ ಪ್ಯಾಕೆಟ್ ಗಳು ಇವುಗಳ ಒಟ್ಟು ಬೆಲೆ  205 ರೂ ಆಗಿರುತ್ತೆ , 03 ಖಾಲಿ ಪ್ಲಾಸ್ಟಿಕ್ ಲೋಟಗಳಿದ್ದು ಆರೋಪಿಯನ್ನು ಮತ್ತು ಮಾಲನ್ನು ಪಂಚರ ಸಮಕ್ಷಮ ಮುಂದಿನ ತನಿಖೆ ಬಗ್ಗೆ ವಶಕ್ಕೆ ಪಡೆದುಕೊಂಡು ಮಾಲನ್ನು ಮತ್ತು  ಆಸಾಮಿಯನ್ನು ವಶಕ್ಕೆ ಪಡೆದು ವಾಪಸ್ ಠಾಣೆಗೆ 5:00 ಗಂಟೆಗೆ ಬಂದು ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ  ಮದ್ಯಪಾನ ಮಾಡಲು ಅಕ್ರಮವಾಗಿ ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ  ಆಸಾಮಿ ವಿರುದ್ದ ಪ್ರಕರಣ ದಾಖಲಿಸಿರುತ್ತದೆ

ಹುಳಿಯಾರು ಪೊಲೀಸ್ ಠಾಣೆ ಮೊ.ನಂ. 87/2017 ಕಲಂ  87 ಕೆ.ಪಿ ಆಕ್ಟ್.

ದಿನಾಂಕ:-14.07.2017 ರಂದು ಹುಳಿಯಾರು ಠಾಣಾ ಸರಹದ್ದು ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಸಮೀಪ ಇರುವ ಸ್ಮಶಾನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಕಾನೂನು ಬಾಹಿರ ಅಂದರ್ - ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ  ಮೇರೆಗೆ  ದಾಳಿ  ಮಾಡುವ  ಬಗ್ಗೆ  ನ್ಯಾಯಾಲಯದಿಂದ  ಅನುಮತಿ ಪಡೆದಿದ್ದು ಠಾಣೆಗೆ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸಿಬ್ಬಂದಿಯವರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಕೆಂಕೆರೆ ಗ್ರಾಮಕ್ಕೆ ಹೋಗಿ  ಬರದೆಲೆಪಾಳ್ಯ ಗ್ರಾಮದ ಕಡೆಗೆ ಹೋಗುವ ದಾರಿಯ ಪಕ್ಕದಲ್ಲಿ ಸ್ಮಶಾನದ ಸಮೀಪ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ  ಸ್ಮಶಾನದಲ್ಲಿ ಸಾರ್ವಜನಿಕ ಸ್ಥಳದಲ್ಲಿ 7 ಜನ ಅಸಾಮಿಗಳು ನೆಲದ ಮೇಲೆ ವೃತ್ತಾಕಾರವಾಗಿ ಕುಳಿತುಕೊಂಡು ಮದ್ಯದಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು  ಹಣವನ್ನು ಪಣಕ್ಕೆ ಕಟ್ಟಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ – ಬಾಹರ್ ಎಂತ ಹೇಳುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಸದರಿಯವರನ್ನು ಸುತ್ತುವರೆದು ದಾಳಿ ಮಾಡಿ ಮೇಲೆ ಹೇಳಿದಂತೆ ತಿಳಿಸಿ ಅಸಾಮಿಗಳ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ 1) ನಾಗರಾಜು ಬಿನ್ ಶಿವಶಂಕರಪ್ಪ, ಕಾಮಶೆಟ್ಟಿಪಾಳ್ಯ, ಹುಳಿಯಾರು ಹೋಬಳಿ, 2) ಪುಟ್ಟಯ್ಯ ಬಿನ್ ಲೇಟ್ ರಂಗಪ್ಪ, ದುರ್ಗದ ಸೀಮೆಪಾಳ್ಯ, ಕೆಂಕೆರೆ ಮಜುರೆ,  ಹುಳಿಯಾರು ಹೋಬಳಿ, 3) ಮರುಳಯ್ಯ ಬಿನ್ ಲೇಟ್ ಶಿವಣ್ಣ, ಬರದೆಲೆಪಾಳ್ಯ, ಹುಳಿಯಾರು ಹೋಬಳಿ, 4) ಕುಮಾರ ಬಿನ್ ಲೇಟ್ ಬಿ. ನಾಗರಾಜು, ಕೆಂಕೆರೆ, ಹುಳಿಯಾರು ಹೋಬಳಿ 5) ಗುರುಮೂರ್ತಿ ಬಿನ್ ಕೊಟ್ಟೂರಪ್ಪ, ಕಾಮಶೆಟ್ಟಿಪಾಳ್ಯ, ಹುಳಿಯಾರು ಹೋಬಳಿ 6) ಚನ್ನಬಸವಯ್ಯ ಬಿನ್ ಪುಟ್ಟಯ್ಯ, ಬರದೆಲೆಪಾಳ್ಯ, ಹುಳಿಯಾರು ಹೋಬಳಿ 7) ಮರುಳಯ್ಯ ಬಿನ್ ಚನ್ನಬಸವಯ್ಯ, ಬರದೆಲೆಪಾಳ್ಯ, ಹುಳಿಯಾರು ಹೋಬಳಿ ಎಂತ ತಿಳಿಸಿದ್ದು, ಸದರಿ ಆಸಾಮಿಗಳನ್ನು ಹಾಗೂ ಕಾನೂನು ಬಾಹಿರ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡಿದ್ದ ಒಟ್ಟು 3950/- ರೂ ನಗದು ಹಣವನ್ನು ಇಸ್ಪೀಟ್ ಜೂಜಾಟಕ್ಕೆ ಬಳಿಸಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ನೆಲಕ್ಕೆ ಹಾಸಿಕೊಂಡಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಸಂಜೆ 05:30 ಗಂಟೆಯಿಂದ 06:30 ಗಂಟೆಯವರೆಗೆ ಲ್ಯಾಪ್ ಟಾಪ್ ಮೂಲಕ ಪಂಚನಾಮ ಕ್ರಮ ಜರುಗಿಸಿ ವಶಕ್ಕೆ ಪಡೆದು ಮೇಲ್ಕಂಡ ಆಸಾಮಿಗಳು ಮತ್ತು ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಠಾಣಾಧಿಕಾರಿಯವರಿಗೆ ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್‌ ಠಾಣಾ ಮೊನಂ-149/2017, ಕಲಂ- 279, 304(ಎ) ಐಪಿಸಿ

ದಿನಾಂಕ:-15-07-2017 ರಂದು ಬೆಳಗಿನ ಜಾವ 01-00 ಗಂಟೆಗೆ ಕುಣಿಗಲ್ ತಾಲೋಕ್, ಯಡಿಯೂರು ಹೋಬಳಿ, ಸಿದ್ದಾಪುರ ಗ್ರಾಮದ ಸುಮಾರು 20ವರ್ಷ, ವಯಸ್ಸುಳ್ಳ, ಸೈಪುಲ್ಲಾ ಬಿನ್ ನಸರುಲ್ಲಾರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ:-14-07-2017ರಂದು ಸಂಜೆ 07-30 ಗಂಟೆಯಲ್ಲಿ ನಾನು ಮತ್ತು ನನ್ನ ಅಜ್ಜನಾದ ಮುಸ್ತಫಾ ಖಾನ್ ಮತ್ತು ನನ್ನ ಅಜ್ಜಿಯಾದ ಮಕ್ ಬುಲ್ ಬಿ ರವರು ನಮ್ಮ ಮನೆಯ ಕಡೆಯಿಂದ ದಕ್ಷಿಣದ ಕಡೆ ಇರುವ ಮಸೀದಿ ಕಡೆ ಹೋಗಲು ಯಡಿಯೂರು ಕುಣಿಗಲ್ ಕಡೆಯ ರಸ್ತೆಯ ಎಡೆ ಬದಿಯಲ್ಲಿ ನಿಂತಿರಬೇಕಾದರೆ ಯಡಿಯೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಇನ್ನೋವಾ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಪಕ್ಕದಲ್ಲಿ ಇದ್ದ ನನ್ನ ಅಜ್ಜನಾದ ಮುಸ್ತಫಾ ಖಾನ್ ಸುಮಾರು 50ವರ್ಷ ವಯಸ್ಸುಳ್ಳರವರಿಗೆ ರಸ್ತೆಯ ಎಡಕ್ಕೆ ಬಂದು ಡಿಕ್ಕಿ ಹೊಡೆದಾಗ ನನ್ನ ಅಜ್ಜರವರು ರಸ್ತೆಗೆ ಬಿದ್ದು, ಅವರಿಗೆ ತಲೆಗೆ, ಎರಡು ಕಾಲುಗಳು ಮುರಿದಿವೆ. ಮುಖದಲ್ಲಿ ರಕ್ತ ಬಂದಿರುತ್ತೆ. ಈ ಅಪಘಾತಪಡಿಸಿದ ಕಾರ್ ನೋಡಲಾಗಿ ಇನ್ನೋವಾ ಕಾರಾಗಿದ್ದು ಅದರ ನಂಬರ್. ಕೆಎ-05, ಎಂಜಿ-5705 ಆಗಿದೆ. ತಕ್ಷಣ ನನ್ನ ಅಜ್ಜನನ್ನು ಕಾರಿನಲ್ಲಿ ಹಾಕಿಕೊಂಡು ಆದಿಚುಂಚನಗಿರಿ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿದಾಗ ನನ್ನ ಅಜ್ಜನವರು ತೀರಿಕೊಂಡಿದ್ದರು. ಆಗ ಶ್ರೀಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಶವವನ್ನು ಇಟ್ಟು ಈಗ ಇಲ್ಲಿಗೆ ಬಂದು ಈ ದೂರು ನೀಡುತ್ತಿದ್ದೇನೆ. ಆದ್ದರಿಂದ ಈ ಅಪಘಾತಪಡಿಸಿದ ಇನ್ನೋವಾ ಕಾರ್ ನಂಬರ್ ಕೆಎ-05, ಎಂಜಿ-5705ನೇ ಕಾರ್ ನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯದೊರಕಿಸಿಕೊಡಬೇಕೆಂದು ಪ್ರಾರ್ಥನೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿ ತನಿಕೆ  ಕೈಗೊಂಡಿರುತ್ತೆ

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 106/2017 ಕಲಂ 279, 304(ಎ)  ಐಪಿಸಿ ರೆ/ವಿ 134(ಎ) &(ಬಿ), 187 ಐ.ಎಂ.ವಿ.ಆಕ್ಟ್

ದಿನಾಂಕ:14-07-17 ರಂದು  ಬೆಳಿಗ್ಗೆ 6-15  ಗಂಟೆಗೆ  ಈ ಕೇಸಿನ ಪಿರ್ಯಾದಿ  ಮಂಜುಳ ಕೋಂ ಮಹೇಶ್, 33 ವರ್ಷ, ಉಪ್ಪಾರರು, ಗೃಹಿಣಿ, ಹೊಗವನಘಟ್ಟ ತೋಟದ ಮನೆ, ನೋಣವಿನಕೆರೆ ಹೋಬಳಿ, ತಿಪಟೂರು ತಾ ರವರು ಠಾಣೆಗೆ   ಹಾಜರಾಗಿ ನೀಡಿದ  ದೂರಿನ ಅಂಶವೇನೆಂದರೆ,  ದಿ:13-07-17 ರಂದು   ನನ್ನ  ಗಂಡ  ಮಹೇಶ್ ರವರು ಕೂಲಿ ಕೆಲಸಕ್ಕೆ  ಹೋಗಿದ್ದ ರಾತ್ರಿ 8-30 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿರುವಾಗ್ಗೆ  ನಮ್ಮ  ಗ್ರಾಮದ ಜಗದೀಶ್  ಬಿನ್ ದುರ್ಗಯ್ಯ, ರಾಮನಗರ  ರವರು  ನಮ್ಮ  ಮನೆ ಹತ್ತಿರ ಬಂದು ನಿಮ್ಮ ಗಂಡ ಮಹೇಶ್ ರವರಿಗೆ ಕೆಎ02,ಹೆಚ್.ಜಿ1562  ಟಿ.ವಿ ಎಸ್ ಎಕ್ಸ್ ಎಲ್  ವಾಹನವು ಅಪಘಾತಪಡಿಸಿ ಸ್ಥಳದಲ್ಲಿ  ನಿಲ್ಲಿಸದೆ   ಹೋಗಿರುತ್ತಾರೆ.  ನಾನು ತಕ್ಷಣ ಸದರಿ ಸ್ಥಳಕ್ಕೆ  ಹೋಗಿ ನೋಡಿದಾಗ   ಮಹೇಶ್  ರವರ  ತಲೆಯ ಹಿಂಭಾಗಕ್ಕೆ  ತೀವ್ರ ಪೆಟ್ಟು  ಬಿದ್ದಿದ್ದು ತಕ್ಷಣ ನಾನು  108 ಅಬ್ಯಂಲೆನ್ಸ್ ಗೆ  ಪೋನ್ ಮಾಡಿ  ಅಬ್ಯಂಲೆನ್ಸ್ ವಾಹನದಲ್ಲಿ   ತಿಪಟೂರು ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗಾಗಿ  ಕಳುಹಿಸಿಕೊಟ್ಟಿರುತ್ತೇನೆಂತಾ  ತಿಳಿಸಿದರು  ನಂತರ ನಾನು  ತಿಪಟೂರು ಸರ್ಕಾರಿ ಆಸ್ಪತ್ರೆಗೆ  ಬಂದು ನೋಡಲಾಗಿ  ನನ್ನ ಗಂಡ  ಮೃತ ಪಟ್ಟಿದ್ದು  ವಿಚಾರ ಮಾಡಲಾಗಿ  ತಿಪಟೂರು  ಸರ್ಕಾರಿ ಆಸ್ಪತ್ರೆಗೆ  ಕರೆತರುವಾಗ  ಮಾರ್ಗ ಮಧ್ಯ ಮೃತಪಟ್ಟಿರುತ್ತಾರೆಂತಾ  ತಿಳಿಯಿತು. ನನ್ನ ಗಂಡ ಮಹೇಶ್  ರವರ ಶವವು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ . ನನ್ನ ಗಂಡ ಮಹೇಶ್ ರವರು  ಕೂಲಿ ಕೆಲಸ ಮುಗಿಸಿಕೊಂಡು  ವಾಫಸ್ ಮನೆಗೆ   ದಸರಿಘಟ್ಟ ದೊಡ್ಡ ಸೇತುವೆ ಹತ್ತಿರ    ರಸ್ತೆಯ  ಎಡಭಾಗದಲ್ಲಿ  ನಡೆದುಕೊಂಡು  ಬರುವಾಗ  ಹಿಂಭಾಗದಿಂದ  ಬಂದ ಮೇಲ್ಕಂಡ  ಕೆಎ02, ಹೆಚ್.ಜಿ 1562  ಟಿ.ವಿ ಎಸ್ ಎಕ್ಸ್ ಎಲ್  ವಾಹನದ ಸವಾರ  ಅತಿ ವೇಗ & ಆಜಾಗರೂಕತೆಯಿಂದ  ಓಡಿಸಿಕೊಂಡು  ಬಂದು ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಗಂಡ ಮಹೇಶ್ ರವರಿಗೆ  ತಲೆಗೆ ತೀವ್ರ ಪೆಟ್ಟು ಬಿದ್ದು ಚಿಕಿತ್ಸೆಗೆ ಕರೆತರುವಾಗ ಮಾರ್ಗಮಧ್ಯೆ  ಮೃತಪಟ್ಟಿರುತ್ತಾರೆ. ಕೆಎ02, ಹೆಚ್.ಜಿ 1562  ಟಿ.ವಿ ಎಸ್ ಎಕ್ಸ್ ಎಲ್  ಸದರಿ ದ್ವಿ ಚಕ್ರ ವಾಹನದ ಸವಾರ ಅಪಘಾತಪಡಿಸಿ ತನ್ನ ವಾಹನವನ್ನು ನಿಲ್ಲಿಸದೆ ಹೋಗಿರುತ್ತಾನೆ.  ಮೇಲ್ಕಂಡ ಟಿ.ವಿ ಎಸ್  ವಾಹನದ ಸವಾರನ ಹೆಸರು  ಜಗದೀಶ ಬಿನ್ ಮಲ್ಲಿಕಯ್ಯ, ಮಲ್ಲೇದೇವರಹಳ್ಳಿ ಎಂತಾ ತಿಳಿಯಿತು.  ಇವರ ಮೇಲೆ  ಕಾನೂನು  ರೀತ್ಯಾ  ಕ್ರಮ ಜರುಗಿಸಬೇಕೆಂತಾ ಕೋರುತ್ತೇನೆ  ನನ್ನ  ಗಂಡನ  ಸಾವಿನ ವಿಚಾರವನ್ನು ನಮ್ಮ ಸಂಬಂಧಿಕರಿಗೆ  ತಿಳಿಸಿ  ಈ ದಿನ ತಡವಾಗಿ ದೂರು ನೀಡಿರುತ್ತೇನೆ .  ಎಂತಾ ನೀಡಿದ  ದೂರಿನ ಮೇರೆಗೆ   ಪ್ರಕರಣ ದಾಖಲಿಸಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 77/2017   ಕಲಂ: 379 IPC

ದಿನಾಂಕ:14/07/2017 ರಂದು ಬೆಳಗಿನ ಜಾವ 4:00 ಗಂಟೆ ಸಮಯದಲ್ಲಿ ಪಿರ್ಯಾದಿ ಡಿ.ಹೆಚ್ ರಮೇಶ ಬಿನ್ ಕೆ ಹನುಮಂತರಾಯಡು,42 ವರ್ಷ, ಕಮ್ಮ ವಕ್ಕಲಿಗ ಜನಾಂಗ, ವ್ಯವಸಾಯ ದೊಡ್ಡಹಳ್ಳಿ ಗ್ರಾಮ, ಪಾವಗಡ ತಾ|| ರವರು ನೀಡಿದ ದೂರಿನ ಅಂಶವೇನೆಂದರೆ ನನ್ನ ಹೆಸರಿನಲ್ಲಿ ಕೆ.ಎ-64 -2359 ಮತ್ತು ಕೆ.ಎ-64-0688 ನೇ ಎರಡು ಈಚರ್ ವಾಹನಗಳು ಇದ್ದು ದೊಡ್ಡಹಳ್ಳಿಯಲ್ಲಿ ನಮ್ಮ ಮನೆ ಪಕ್ಕ ಇರುವ ನಮ್ಮ ಮಾವನಾದ ಭೀಮಪ್ಪ ಎಂಬುವವರ ಮನೆ ಪಕ್ಕದಲ್ಲಿ ನಮ್ಮ ವಾಹನಗಳನ್ನು ರಾತ್ರಿ ವೇಳೆಯಲ್ಲಿ ನಿಲ್ಲಿಸುತ್ತಿದ್ದೆವು, ದಿನಾಂಕ;14/07/2017 ರಂದು ಬೆಳಿಗ್ಗೆ ಸುಮಾರು 3:00 ಗಂಟೆ ಸಮಯದಲ್ಲಿ ನಾನು ಎದ್ದು ಬಹಿರ್ದೆಸೆಗೆಂದು ಹೊರಗಡೆ ಬಂದಾಗ್ಗೆ ನಮ್ಮ ವಾಹನದ ಬಳಿ ಯಾವುದೋ ಕಾರು ನಿಂತಿದ್ದು ಡೀಸಲ್ ವಾಸನೆ ಬರುತ್ತಿದ್ದು, ನಾನು ನಿಧಾನಕ್ಕೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ನನ್ನ ಬಾಬ್ತು ಕೆ.ಎ-64-2359 ವಾಹನದ ಟ್ಯಾಂಕರ್ ನಿಂದ ಡೀಸಲ್ ನ್ನು ಪೈಪ್ ಮುಖಾಂತರ ಕ್ಯಾನ್ ಗಳಿಗೆ ಕಳ್ಳತನದಿಂದ ತುಂಬಿಸುತ್ತಿದ್ದು ನಾನು ಕಿರುಚಿಕೊಂಡಾಗ ನಮ್ಮ ಗ್ರಾಮದ ವೀರಾಂಜನೇಯ ಬಿನ್ ನರಸಿಂಹಪ್ಪ, ನಾಯಕ ಜನಾಂಗ , ಸಂಜೀವಪ್ಪ ಬಿನ್ ವೆಂಕಟನ್ನ , ಕಮ್ಮ ವಕ್ಕಲಿಗ ಜನಾಂಗ, ನಾಗೇಂದ್ರ ಬಿನ್ ಪುಲ್ಲಾರೆಡ್ಡಿ  ಮತ್ತು ಇತರರು ಬಂದು ಡೀಸಲ್ ತುಂಬುತ್ತಿದ್ದವನನ್ನು ಹಿಡಿದುಕೊಂಡು ವಿಚಾರ ಮಾಡಲಾಗಿ ಆತನ ಹೆಸರು ಬಾಲರಾಜು ಬಿ.ವಿ ಬಿನ್ ವಿ.ವೆಂಕಟಸ್ವಾಮಿ ,28 ವರ್ಷ ಭೋವಿ ಜನಾಂಗ ಪೇರೂರು ಗ್ರಾಮ , ರಾಮಗಿರಿ ಮಂಡಲ್ ಅನಂತಪುರಂ ಜಿಲ್ಲೆ ಎಂತ ತಿಳಿಸಿದ್ದು ನಾನು ಡೀಸಲ್ನ್ನು ಕಳ್ಳತನ ಮಾಡಿ ಮಾರಾಟ ಮಾಡಿಕೊಂಡು ಜೀವನ ಮಾಡುತ್ತೇನೆ ಎಂದು ತಿಳಿಸಿದ್ದು ನನ್ನ ವಾಹನದಿಂದ ಸುಮಾರು ಮೂರು  ಕ್ಯಾನ್ ಗಳಲ್ಲಿ ಸುಮಾರು ತೊಂಬತ್ತು ಲೀಟರ್ ಅಂದಾಜು 4950 =00 ರೂ ಬೆಲೆ ಬಾಳುವ ಡೀಸಲ್ ಕಳ್ಳತನ ಮಾಡಿದ್ದು, ನಮ್ಮ ವಾಹನದ ಪಕ್ಕದಲ್ಲಿ ನಿಂತಿದ್ದ ಕಾರ್ ನಂಬರ್  ನೋಡಲಾಗಿ ಕೆ.ಎ-05 ಎ.ಬಿ 4054 ನೇ ಟಾಟಾ ಇಂಡಿಕಾ ಕಾರ್ ಆಗಿದ್ದು,  ಇದೇ ಕಾರ್ ನಲ್ಲಿ ಡೀಸಲ್ ತುಂಬಿಕೊಂಡು ಹೋಗುತ್ತೇನೆ, ಎಂದು ಬಾಲರಾಜು ತಿಳಿಸಿದ್ದು ನಾವು 03 ಕ್ಯಾನ್ ಗಳಲ್ಲಿ ಇದ್ದ ಡೀಸಲ್ ಮತ್ತು ಕಾರನ್ನು ಮತ್ತು ಈಚರ್ ವಾಹನದಿಂದ ಕ್ಯಾನ್ ಗೆ ಡೀಸಲ್ ತುಂಬಲು ಬಳಿಸಿದ್ದ ಒಂದು ಪ್ಲಾಸ್ಟಿಕ್ ಪೈಪ್ ನ್ನು ಹಾಗೂ ಬಾಲರಾಜು ನನ್ನು ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಬಂದು ದೂರು ನೀಡಿದ್ದು ಆರೋಪಿ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳ ಬೇಕೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ

ಪಾವಗಡ ಪೊಲೀಸ್ ಠಾಣಾ ಮೊ,ನಂ-173/2017 ಕಲಂ 353, 323, 506 IPC

ದಿ:14/07/2017 ರಂದು 18-30 ಗಂಟೆಯಲ್ಲಿ ಪಾವಗಡ ತಾಲ್ಲೂಕ್ ಚಿಕ್ಕಹಳ್ಳಿ ಪಂಚಾಯ್ತಿ ಕಾರ್ಯದರ್ಶಿಯಾದ ಶ್ರೀ ಎಸ್,ಹನುಮಂತರಾಯಪ್ಪರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು 6 ತಿಂಗಳಿಂದ ಚಿಕ್ಕಹಳ್ಳಿ ಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯನಿರ್ವಹಿಸುತ್ತಿರುತ್ತೇನೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಿಲ್ಲದ್ದರಿಂದ ಯಾವುದೇ ಟ್ಯಾಂಕರ್ ನೀರು ಬಳಸಿರುವುದಿಲ್ಲ. ಈ ವಿಚಾರಕ್ಕೆ ಸಂಬಂದಿಸಿದಂತೆ ಪಂಚಾಯ್ತಿ ವ್ಯಾಪ್ತಿಯ ನಾಗಲಾಪುರ ಗ್ರಾಮದಲ್ಲಿ ಅದೇ ಗ್ರಾಮದ ಮಾಜಿ ತಾಲ್ಲೂಕ್ ಪಂಚಾಯ್ತಿ ಸದಸ್ಯರಾದ ಗೋವಿಂದಪ್ಪ ಬಿನ್ ವೆಂಕಟೇಶಪ್ಪ, 45 ವರ್ಷ, ಇವರು ಪಂಚಾಯ್ತಿ ಅನುಮತಿ ಪಡೆಯದೇ ನಾಗಲಾಪುರ ಗ್ರಾಮಕ್ಕೆ ಟ್ಯಾಂಕರ್ ನಲ್ಲಿ ನೀರು ಸರಬರಾಜು ಮಾಡಿರುತ್ತಾರೆ. ಪೂರೈಕೆ ಮಾಡಿದ ಹತ್ತು (10) ಟ್ಯಾಂಕರ್ ನೀರಿನ ಬದಲು ಇನ್ನೂರು (200) ಟ್ಯಾಂಕರ್ ಹಣ ಪಾವತಿ ಮಾಡುವಂತೆ ಒತ್ತಾಯಿಸಿರುತ್ತಾರೆ. ಇದೇ ವಿಚಾರವಾಗಿ ನಾನು ಪಂಚಾಯ್ತಿ ಸಭೆಗೆ ತಿಳಿಸಿ ಹಣ ಪಾವತಿ ಮಾಡುತ್ತೇವೆ ಎಂತ ತಿಳಿಸಿರುತ್ತೇನೆ. ಇದರಿಂದ ಕೋಪಿತನಾದ ಗೋವಿಂದಪ್ಪ ರವರು ಮಧ್ಯಾಹ್ನ 2-00 ಗಂಟೆಯಲ್ಲಿ ಪಾವಗಡ ಪಟ್ಟಣದ ಪೋಸ್ಟ್ ಆಫೀಸ್ ಬಳಿ ಇರುವ ಕಂಪ್ಯೂಟರ್ ಕಚೇರಿಗೆ ಬಂದು ನನ್ನ ಮೇಲೆ ಏಕಾಏಕಿ ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈ ಯಿಂದ ಕಪಾಳಕ್ಕೆ ಹೊಡೆದು ಸಾರ್ವಜನಿಕರ ಎದುರು ಚಪ್ಪಲಿಯಿಂದ ಹೊಡೆಯಲು ಮುಂದಾಗಿರುತ್ತಾನೆ. ನಂತರ ಬಾಕಿ ಹಣ ಪಾವತಿ ಮಾಡದಿದ್ದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲವೆಂತ ನಿನ್ನ ಕುಟುಂಬವನ್ನು ನಾಶ ಮಾಡುತ್ತೇನೆಂತ ಬೆದರಿಕೆ ಹಾಕಿರುತ್ತಾನೆ. ಆಗ ಅಲ್ಲೇ ಸ್ಥಳದಲ್ಲಿದ್ದ ನಾಗಲಾಪುರ ಗ್ರಾಮ ಪಂಚಾಯ್ತಿ ಸದಸ್ಯನಾದ ವೆಂಕಟರಮಣಪ್ಪ, ಗ್ರಾಮ ಸಹಾಕರಾದ ವೆಂಕಟೇಶ, ಕೆ, ರಾಂಪುರ ಗ್ರಾಮದ ಪಿ, ರಮೇಶ ದೊಡ್ಡಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾದ ಭೀಮಪ್ಪರವರು ಗಲಾಟೆಯನ್ನು ಬಿಡಿಸಿ ಮೇಲ್ಕಂಡವರಿಂದ ನನ್ನನ್ನು ರಕ್ಷಣೆ ಮಾಡಿರುತ್ತಾರೆ. ಆದ್ದರಿಂಧ ನನ್ನ ಮೇಲೆ ಹಲ್ಲೆ ಮಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ  ಕೈಗೊಳ್ಳಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

 

 

 

 

 

 

 

 

 Friday, 14 July 2017

Crime Incidents 14-07-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  76/2017   ಕಲಂ: 32(3)K E Act

ದಿನಾಂಕ:13/07/2017 ರಂದು ರಾತ್ರಿ   7:30 ಗಂಟೆಯಲ್ಲಿ  ಶ್ರೀ ಜಿ.ಟಿ ಶ್ರೀಶೈಲಮೂರ್ತಿ ಸಿ.ಪಿ.ಐ ತಿರುಮಣಿ ವೃತ್ತ ರವರು ನೀಡಿದ ವರದಿ ಅಂಶವೇನೆಂದರೆ  ಠಾಣಾ ವ್ಯಾಪ್ತಿ  ಕೋಟಗುಡ್ಡ  ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗ  ಪೆಟ್ಟಿಗೆ ಅಂಗಡಿ ಬಳಿ ವ್ಯಕ್ತಿಯೋರ್ವ ಸಾರ್ವಜನಿಕರಿಗೆ ಮದ್ಯಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾನೆಂತ ಮಾಹಿತಿ ಇದ್ದು ಸ್ಥಳಕ್ಕೆ ಸಿಬ್ಬಂದಿಯಾದ ಎ. ಹೆಚ್ ಸಿ:135 ಸೈಯ್ಯದ್ ಶಾಹೆ ಆಲಂ  ಮತ್ತು ಪಿ.ಸಿ:672 ಶ್ರೀನಿವಾಸ್ ರವರೊಂದಿಗೆ ಹೋಗಿ ನೋಡಲಾಗಿ ಕೆಲವು ಗಿರಾಕಿಗಳು ಪೆಟ್ಟಿಗೆ ಅಂಗಡಿ ಬಳಿ ಮದ್ಯ ಕುಡಿಯಲು ಕುಳಿತಿದ್ದು ನಮ್ಮನ್ನು ಕಂಡು ಓಡಿ ಹೋದರು, ನಂತರ ಸ್ಥಳದಲ್ಲಿ ಮದ್ಯ ಕುಡಿಯಲು ಸ್ಥಳ ಅವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ  ,ಹನುಮಂತರಾಯಪ್ಪ ಬಿನ್ ವೆಂಕಟರವಣಪ್ಪ, 45  ವರ್ಷ ಭೋವಿ ಜನಾಂಗ, ಅಂಗಡಿ ವ್ಯಾಪಾರ, ಕೋಟಗುಡ್ಡ  ಪಾವಗಡತಾ|| ಎಂತ ತಿಳಿಸಿದ್ದು ಸ್ಥಳದಲ್ಲಿ ಇದ್ದ ಮದ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ ಮದ್ಯ ತುಂಬಿದ್ದ  07  ರಾಜಾ ವಿಸ್ಕಿ  90 ಎಂ.ಎಲ್ ನ ಟೆಟ್ರಾ ಪ್ಯಾಕೆಟ್ ಹಾಗೂ   180 ಎಂ.ಎಲ್  ನ  01 ಓಲ್ಡ್ ಟವರಿನ್  ಪ್ಯಾಕೆಟ್ ಇದ್ದು ಇವುಗಳ ಒಟ್ಟು ಬೆಲೆ  264=00 ರೂ ಗಳಾಗಿರುತ್ತದೆ , ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮುಖೇನ ಮುಂದಿನ ನಡುವಳಿಕೆಗಾಗಿ ಅಮಾನತ್ತು ಪಡಿಸಿಕೊಂಡು ಠಾಣೆಗೆ ಆರೋಪಿ , ಮಾಲು ಮತ್ತು ಪಂಚನಾಮೆ ಸಹಿತ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದನ್ನು ಪಡೆದು ಕೊಂಡು  ಪ್ರಕರಣ ದಾಖಲಿಸಿರುತ್ತದೆ .

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 135/2017 ಕಲಂ: 78 (3) ಕೆ.ಪಿ ಆಕ್ಟ್‌

ದಿನಾಂಕ : 13/07/2017 ರಂದು ರಾತ್ರಿ 07-30 ಗಂಟೆಗೆ ಮಾನ್ಯ ಪಿ.ಐ ಸಾಹೇಬರವರು ಠಾಣಾ ಪಿ.ಸಿ-968 ರವರ ಮೂಲಕ ಕಳುಹಿಸಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ: 13/07/2017 ರಂದು ಸಂಜೆ 05-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನಮ್ಮ ಗಾಂಧಿನಗರದ ಉಪಠಾಣೆಯ ಹೆಚ್.ಸಿ-32 ಉಸ್ಮಾನ್ ಸಾಬ್ ಹಾಗೂ ಬೀಟ್ ಸಿಬ್ಬಂದಿಯಾದ ಪಿ.ಸಿ-968 ಮಂಜುನಾಥ್ ರವರಿಂದ ತಿಪಟೂರು ಟೌನ್ ಗಾಂದಿನಗರದ 9ನೇ ಕ್ರಾಸ್ ಗುರಪ್ಪನಕಟ್ಟೆ ಮಸೀದಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಷಫಿಯುಲ್ಲಾಖಾನ್ ಬಿನ್ ಇನಾಯತುಲ್ಲಾ ಖಾನ್ ರವರು ಸಾರ್ವಜನಿಕರನ್ನು ಸೇರಿಸಿಕೊಂಡು ಅವರಿಂದ ಹಣ ಪಡೆದು, ಮಟ್ಕಾ ಜೂಜಾಟ ಆಡುತ್ತಿದ್ದಾರೆಂತ ಖಚಿತ ವರ್ತಮಾನ ಬಂದಿದ್ದು, ಈತನನ್ನು ದಾಳಿ ಮಾಡಿ ಬಂಧಿಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು, ಹೆಚ್.ಸಿ-32 ಉಸ್ಮಾನ್ ಸಾಬ್, ಪಿ.ಸಿ-968 ಮಂಜುನಾಥ್ ಮತ್ತು ಪಂಚರುಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಷಫಿಯುಲ್ಲಾಖಾನ್ ರವರು ಮೇಲ್ಕಂಡ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಅವರು ಹೇಳುತ್ತಿದ್ದ ನಂಬರ್ ಗಳನ್ನು ಒಂದು ಚೀಟಿಗೆ ಪೆನ್ನಿನಿಂದ ಬರೆದುಕೊಳ್ಳುತ್ತಿದ್ದು, ಈತನನ್ನು ಸಿಬ್ಬಂದಿಯರೊಂದಿಗೆ ಹಿಡಿದು, ಹೆಸರು ವಿಳಾಸ ಕೇಳಲಾಗಿ ಷಫಿಯುಲ್ಲಾಖಾನ್ ಬಿನ್ ಇನಾಯತುಲ್ಲಾ ಖಾನ್, 42 ವರ್ಷ, ಮುಸ್ಲೀಂ ಜನಾಂಗ, ಬಟ್ಟೆವ್ಯಾಪಾರ, 10ನೇ ಕ್ರಾಸ್  ಗುರಪ್ಪನಕಟ್ಟೆ, ಗಾಂಧಿನಗರ, ತಿಪಟೂರು ಟೌನ್ ಎಂತ ತಿಳಿಸಿದ್ದು, ಈತನನ್ನು ಸಂಜೆ 06-15 ಗಂಟೆಗೆ ವಶಕ್ಕೆ ಪಡೆದಿದ್ದು, ಈತನ ಬಳಿ ಇದ್ದ 1] 590/- ರೂ  ನಗದು ಹಣ 2]  ಮಟ್ಕಾ ನಂಬರ್ ಬರೆದಿರುವ ಎರಡು ಚೀಟಿಗಳು ಮತ್ತು 3] ಒಂದು ಲೆಡ್ ಪೆನ್ನನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡಿರುತ್ತೆ. ಈತನ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾಧಿಯಾಗಿ ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 153/2017 ಕಲಂ.279, 337 ಐಪಿಸಿ

ದಿನಾಂಕ-13-07-2017 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಪಿರ್ಯಾದಿ ಎಸ್‌.ಎನ್‌ ನಾರಾಯಣಪ್ಪ ಬಿನ್‌ ಲೇಟ್‌ ನರಸಯ್ಯ, 74 ವರ್ಷ, ವಕ್ಕಲಿಗರು, ಜಿರಾಯ್ತಿ, ಸಂತೆಮಾವತ್ತೂರು ಗ್ರಾಮ, ಕಸಬಾ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-13-07-2017 ರಂದು ನಮ್ಮ ಗ್ರಾಮದ ನಮ್ಮ ಸಂಭಂದಿಕರಾದ ಬಸವರಾಜು ಬಿನ್‌ ಚನ್ನಿಗಪ್ಪ ರವರು ಅವರ ಮಗಳಾದ ಪರಿಣತಳನ್ನು ಕರೆದುಕೊಂಡು ನನ್ನನ್ನು ಬೇಟಿಮಾಡಲು ನಮ್ಮ ಮನೆಗೆ ಮಧ್ಯಾಹ್ನ ಸುಮಾರು 2-30 ರಿಂದ 3-00 ಗಂಟೆ ಸಮಯದಲ್ಲಿ ಕುಣಿಗಲ್‌ - ಮದ್ದೂರು ರಸ್ತೆಯಲ್ಲಿ ರಸ್ತೆಯ ಎಡಭಾಗದಲ್ಲಿ ಅವರ ಮನೆಯ ಮುಂಭಾಗದಲ್ಲಿ ಬರುತ್ತಿರುವಾಗ್ಗೆ ಅದೇ ಸಮಯಕ್ಕೆ ಕುಣಿಗಲ್‌ ಕಡೆಯಿಂದ ಮದ್ದೂರು ಕಡೆಗೆ ಹೋಗಲುಬಂದ ಗೂಡ್ಸ್‌ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ರಸ್ತೆ ಎಡಭಾದದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪರಿಣಿತಳಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮವಾಗಿ ಪರಿಣಿತಳು ಅಲ್ಲೇ ಬಿದ್ದುಹೋಗಿ ಎಡಗಾಲಿಗೆ ಏಟು ಬಿದ್ದು, ತೊಡೆಯ ಚರ್ಮ ಸಂಪೂರ್ಣವಾಗಿ ಕಿತ್ತುಹೋಗಿರುತ್ತೆ. ಬಲಗಾಲಿಗೂ ಸಹ ಏಟು ಬಿದ್ದಿರುತ್ತದೆ. ನಂತರ ಗೂಡ್ಸ್‌ ವಾಹನ ನಂಬರ್‌ ನೋಡಲಾಗಿ ಕೆಎ-11-ಎ-8399 ಆಗಿರುತ್ತೆ. ತಕ್ಷಣ ನಾನು ಮತ್ತು ಬಸವರಾಜು ರವರು ಸಾರ್ವಜನಿಕರ ಸಹಾಯದಿಂದ ಯಾವುದೋ ಒಂದು ವಾಹನದಲ್ಲಿ ಪರಿಣಿತಳನ್ನು ಕರೆದುಕೊಂಡು ಕುಣಿಗಲ್‌ನ ಎಂ.ಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತೇವೆ. ಆದ್ದರಿಂದ ತಾವುಗಳು ಪರಿಣಿತಳಿಗೆ ಅಪಘಾತಪಡಿಸಿದ ಕೆಎ-11-ಎ-8399 ನೇ ಗೂಡ್ಸ್‌ ವಾಹನ ಚಾಲಕನ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

 

ಹೊನ್ನವಳ್ಳಿ ಪೊಲೀಸ್ ಠಾಣೆ     ಮೊನಂ-89/2017 ಕಲಂ, 324,504,506, ಐಪಿಸಿ

 

ದಿನಾಂಕ:13/07/2017  ರಂದು ಕೇಸಿನ ಪಿರ್ಯಾದುದಾರರಾದ ಸಂತೋಷಕುಮಾರ ಬಿನ್‌ ಪಂಚಲಿಂಗಯ್ಯ ಕಂಚುಗಾರನಹಳ್ಳಿ ರವರು ಠಾಣೆಗೆ ಸಂಜೆ 5-00 ಗಂಟೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೆಂನೆಂದರೆ ದಿನಾಂಕ 12/07/2017 ರಂದು ರಾತ್ರಿ ಸುಮಾರು 9-30 ಗಂಟೆಯಲ್ಲಿ ಪಿರ್ಯಾದಿದಾರರು ಕಂಚುಗಾರನಹಳ್ಳಿ ಗ್ರಾಮದ ತಮ್ಮ ವಾಸದ ಮನೆಯ ಮುಂದೆ ನಿಂತ್ತಿರುವಾಗ ಆರೋಪಿತನಾ ನವೀನ ಬಿನ್‌ ರಾಮಚಂದ್ರಯ್ಯನವರು ಪಿರ್ಯಾದಿಯ ಬಳಿ ಬಂದು ಪಿರ್ಯಾದಿಗೆ ಏಕಾಏಕಿ ಜಗಳ ತೆಗೆದು ಬೋಳಿ ಮಗನೆ ಅಲ್ಕ ಮಗನೆ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ತನ್ನ ಕೈಯಲ್ಲಿದ್ದ ಸ್ಕೂಡ್ರೈವರ್‌ನಿಂದ ಪಿರ್ಯಾದಿಯ ತಲೆಗೆ ಹೊಡೆದು ರಕ್ತ ಗಾಯ ಪಡಿಸಿದ್ದು ಅಷ್ಟರಲ್ಲಿ ಸ್ಥಳಕ್ಕೆ ಬಂದ ರಾಕೇಶ ಮತ್ತು ವಸಂತ ಬಿಡಿಸುವಾಗ ಆರೋಪಿತನು ಪಿರ್ಯಾದಿಗೆ ಜೀವಂತವಾಗಿ ಬಿಡುವುದಿಲ್ಲಾ ಕೊಲೆ ಮಾಡುತ್ತೇನೆ, ಎಂದು ಕೊಲೆ ಬೆದರಿಕೆ ಹಾಕಿ ಸ್ಕೂಡ್ರೈವರ್‌ ಅನ್ನು ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ. ನಂತರ  ಪಿರ್ಯಾದಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಡವಾಗಿ ಈ ದಿನ ಠಾಣೆಗೆ ಬಂದು ನವೀನನ  ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನೀಡಿದ ದೂರನ್ನು  ಪಡೆದು ಪ್ರಕರಣ ದಾಖಲು ಮಾಡಿರುತ್ತದೆ.Thursday, 13 July 2017

FINAL SELECTION LIST FOR THE POST OF CIVIL POLICE CONSTABLE PART-1


Crime Incidents 13-07-17

ಸಂಚಾರಿ ಪೂರ್ವ ಪೊಲೀಸ್ ಠಾಣೆ ಮೊ.ನಂ:133/2017, ಕಲಂ:279, 304(A) ಐಪಿಸಿ

ದಿನಾಂಕ 12/07/2017 ರಂದು ಈ ಕೇಸಿನ ಪಿರ್ಯಾದಿ ಶಂಕರಪ್ಪ ಸಿಪಿಸಿ-174 ಕ್ಯಾತ್ಸಂದ್ರ ಠಾಣೆಯವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:12/07/2017 ರಂದು  ನಾನು ಠಾಣೆಯಲ್ಲಿರುವಾಗ್ಗೆ ನಮ್ಮ ಠಾಣಾ ಎ.ಎಸ್.ಐ ಸಾಹೇಬರವರಾದ ಟಿ.ಪಿ.ಲಕ್ಷ್ಮೀನಾರಾಯಣ ರವರು ಮದ್ಯಾಹ್ನ 3-15 ಗಂಟೆಯಲ್ಲಿ ಕಂಟ್ರೋಲ್ ರೂಮ್ ನಿಂದ ಕ್ಯಾತ್ಸಂದ್ರ ಸರ್ಕಲ್ ನಲ್ಲಿ ಅಪಘಾತವಾಗಿ ರಸ್ತೆ ಮಧ್ಯೆದಲ್ಲಿ ಮೃತಪಟ್ಟಿರುತ್ತಾನೆ ತಕ್ಷಣ ಬಾ ಎಂದು ನನ್ನನ್ನು ಜೊತೆಯಲ್ಲಿ ಕರೆದುಕೊಂಡು ನಾನು ಮತ್ತು ಎ.ಎಸ್.ಐ ಟಿ.ಪಿ.ಲಕ್ಷ್ಮೀನಾರಾಯಣ ರವರು ಕ್ಯಾತ್ಸಂದ್ರ ಸರ್ಕಲ್ ಗೆ ಬಂದು ಸ್ಥಳದಲ್ಲಿ ನೋಡಲಾಗಿ ಸುಮಾರು 30 ವರ್ಷದ ಒಬ್ಬ ವ್ಯಕ್ತಿ ರಸ್ತೆ ಮಧ್ಯೆದಲ್ಲಿ ಅಪಘಾತವಾಗಿ ತೀವ್ರವಾಗಿ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದು ಕಂಡು ಬಂತು ಹಾಗೂ ಈತನ ತಲೆಗೆ, ಮುಖಕ್ಕೆ ಹಾಗೂ ಮೈ ಕೈ ಗೆ ತೀವ್ರವಾಗಿ ಪೆಟ್ಟುಬಿದ್ದು ರಕ್ತಗಾಯಗಳಾಗಿರುವುದು ಕಂಡು ಬಂತು & ಈತನ ಎಡ ಗೈನಲ್ಲಿ ಪೊಲೀಸ್ ಇಲಾಖೆಯ ಹ್ಯಾಂಡ್ ಕಫ್ ಇರುವುದು ಕಂಡು ಬಂದಿರುತ್ತೆ. ನಂತರ ಅಲ್ಲಿಯೇ ಇದ್ದ ಸಾರ್ವಜನಿಕರಿಂದ  ವಿಚಾರ ತಿಳಿಯಲಾಗಿ ಮೃತ ಪಟ್ಟಿರುವ ವ್ಯಕ್ತಿ ಈಗ ಸುಮಾರು 3-00 ಗಂಟೆ ಸಮಯದಲ್ಲಿ ಸಿದ್ದಗಂಗಾ ಮಠದ  ರಸ್ತೆ ಕಡೆಯಿಂದ ಎನ್.ಹೆಚ್ 48 ರಸ್ತೆ  ಕ್ಯಾತ್ಸಂದ್ರ ಸರ್ಕಲ್ ಕಡೆಗೆ ಓಡಿ ಬಂದಾಗ ಅದೇ ಸಮಯಕ್ಕೆ ತುಮಕೂರು ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಅಲ್ಲೇ ಮುಂದೆ ರಸ್ತೆ ಎಡಭಾಗದಲ್ಲಿ ನಿಲ್ಲಿಸಿದ್ದ  ಕೆ.ಎಸ್.ಆರ್.ಟಿ.ಸಿ ಬಸ್ ನ್ನು ತೋರಿಸಿ ಇದೇ ಬಸ್ಸಿನಿಂದ ಅಪಘಾತವಾಗಿ ವ್ಯಕ್ತಿ ಮೃತಪಟ್ಟಿರುತ್ತಾನೆಂದು ತಿಳಿಸಿದ್ದು ಸದರಿ ಬಸ್ ನಂಬರ್ ನೋಡಲಾಗಿ ಕೆಎ-06-ಎಫ್-975 ನೇ ಬಸ್ ಆಗಿತ್ತು. ಸದರಿ ಬಸ್ ವೇಗವಾಗಿ ಬರುತ್ತಿದ್ದು ಮೃತಪಟ್ಟಿರುವ ವ್ಯಕ್ತಿ ಬಸ್ಸಿನ  ಹಿಂಭಾಗಕ್ಕೆ ಡಿಕ್ಕಿ ಹೊಡೆಸಿಕೊಂಡು ಕೆಳಕ್ಕೆ ಬಿದ್ದು ತೀವ್ರವಾಗಿ ರಕ್ತ ಸ್ರಾವವಾಗಿ ಮೃತಪಟ್ಟಿರುತ್ತಾನೆಂತ ವಿಷಯ ತಿಳಿಯಿತು. ಅಪಘಾತದಿಂದ ಮೃತಪಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ. ಸದರಿ ಘಟನೆಯ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ  ವಿಷಯ ತಿಳಿಸಿದ ತಕ್ಷಣ ಸ್ಥಳಕ್ಕೆ ಎಲ್ಲರೂ  ಬಂದರು ನಂತರ ಮೃತ ದೇಹವನ್ನು ಯಾವುದೋ ವಾಹನದಲ್ಲಿ  ಜಿಲ್ಲಾ ಸರ್ಕಾರಿ ಆಸ್ಫತ್ರೆಗೆ ಕಳುಹಿಸಿಕೊಟ್ಟೆವು ನಾನು ಸಹ ಜಿಲ್ಲಾ ಆಸ್ಫತ್ರೆಗೆ ಬಂದು ಮೃತ ದೇಹವನ್ನು ಆಸ್ಫತ್ರೆಯ ಶವಾಗಾರಕ್ಕೆ ಹಾಕಿಸಿ ನಂತರ ಠಾಣೆಗೆ ಬಂದು ಈ ದೂರನ್ನು ನೀಡಿರುತ್ತೇನೆ. ಈ ಅಪಘಾತದ  ಬಗ್ಗೆ  ತನಿಖೆ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 136/2017 u/s : 279,337 IPC.

ಪಿರ್ಯಾದಿ ಜೂಫಿಷ ಕೋಂ ಮಹಮದ್ ಯಾಕೂಬ್, 34 ವರ್ಷ, ಮನೆ ಕೆಲಸ, ಎಲ್.ಐ.ಸಿ ಆಪೀಸ್ ಹತ್ತಿರ, ಮಧುಗಿರಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಗಂಡ ಮಹಮದ್‌ ಯಾಕೂಬ್ ಬಿನ್ ಜಿ.ಎಂ ಇಲಿಯಾಸ್ ರವರು ದಿನಾಂಕ: 25-06-2017 ರಂದು KA-L-2982 ನೇ ದ್ವಿಚಕ್ರವಾಹನದಲ್ಲಿ ಕಾರ್ಯನಿಮಿತ್ತ ಮಧುಗಿರಿಯಿಂದ ಗೌರಿಬಿದನೂರಿಗೆ ಹೋಗಿದ್ದು,  ಗೌರಿಬಿದನೂರಿನಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಮಧುಗಿರಿಗೆ ಬರುತ್ತಿರುವಾಗ್ಗೆ, ಮಾರ್ಗಮದ್ಯೆ ಮಧುಗಿರಿ ತಾಲ್ಲೂಕು, ಶೆಟ್ಟಿಹಳ್ಳಿ ಗ್ರಾಮದ ಸಮೀಪ ಮಧುಗಿರಿ-ಗೌರಿಬಿದನೂರು ಮುಖ್ಯರಸ್ತೆಯಲ್ಲಿ ಸದರಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ ಪಿರ್ಯಾದಿಯ ಮೈದುನ ಮಹಮದ್ ರಿಹಾನ್ ರವರು ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ದ್ವಿಚಕ್ರವಾಹನದ ನಿಯಂತ್ರಣ ತಪ್ಪಿ ದ್ವಿಚಕ್ರವಾಹನವನ್ನು ರಸ್ತೆಯ ಮೇಲೆ ಬಿಳಿಸಿದ್ದರಿಂದ ಸದರಿ ದ್ವಿಚಕ್ರವಾಹನದಲ್ಲಿ ಹಿಂಬದಿ ಕುಳಿತಿದ್ದ ಪಿರ್ಯಾದಿಯ ಗಂಡನ ಮುಖಕ್ಕೆ, ಎಡ ಕಾಲಿಗೆ ಗಾಯಗಳಾಗಿದ್ದು, ಅದೇ ರಸ್ತೆಯಲ್ಲಿ ಬರುತ್ತಿದ್ದ ಆಟೋ ಚಾಲಕ ಅಬೀಬ್ ಸಾಬ್ ಹಾಗೂ ಪಿರ್ಯಾದಿಯ ಮೈದುನರವರು ಗಾಯಾಳುವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲು ಹೋದಾಗ ಮಧುಗಿರಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಬಳಿ ಗಾಬರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸ್ವತಃ ಬಿದ್ದಿದ್ದು ಎಂತಾ ಹೇಳಿದ್ದು, ನಂತರ ಪ್ರಥಮ ಚಿಕಿತ್ಸೆ ನಂತರ ತುಮಕೂರು ಆದಿತ್ಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆದಿರುತ್ತೆ. ಅಪಘಾತ ಮಾಡಿದ KA-L-2982 ನೇ ದ್ವಿಚಕ್ರ ವಾಹನದ ಚಾಲಕನಾದ ಮಹಮದ್ ರಿಹಾನ್ ರವರ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತಾ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 152/2017 ಕಲಂ; IPC 1860 (U/s-324,353); SC AND THE ST (PREVENTION OF ATTROCITIES) ACT, 1989 (U/s-3(1) (c),3(1)(r),3(1)(s),3(2)(v-a)).

ದಿನಾಂಕ-12-07-2017 ರಂದು ಮಧ್ಯಾಹ್ನ 2-10 ಗಂಟೆ ಸಮಯದಲ್ಲಿ ಪಿರ್ಯಾದಿ ಕುಮಾರ ಎಸ್‌.ಎಸ್‌ ಬಿನ್‌ ಶಿವಣ್ಣ, 25 ವರ್ಷ, ಆದಿ ಕರ್ನಾಟಕ ಜನಾಂಗ, ಸಂತೆಮಾವತ್ತೂರು ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆಯವರು ಸಂತೆಮಾವತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೀರು ಗಂಟೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ-09-07-2017 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ಸಂತೆಮಾವತ್ತೂರು ಗ್ರಾಮದ ಮಸೀದಿಯ ಹತ್ತಿರವಿರುವ ಪಂಪ್‌ ಹೌಸ್‌ ಬಳಿಯಲ್ಲಿ ಕರ್ತವ್ಯ ನಿರ್ವಹಿಸುವಾಗ್ಗೆ ಧನಂಜೇಯ ಬಿನ್‌ ಎಸ್‌.ಎನ್‌ ಕೃಷ್ಣ ಎಂಬುವವನು ಏಕಾಏಕಿ ನಮ್ಮ ತಂದೆಯವರ ಬಳಿಗೆ ಹೋಗಿ ನೀರು ಬಿಡೋ ವಲಯ, ಮಾದಿಗ ನನ್ನ ಮಗನೆ ಎಂದು ಜಾತಿನಿಂದನೆಯನ್ನು ಮಾಡಿ ಅಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನಮ್ಮ ತಂದೆಯವರ ಬಲಕಣ್ಣಿಗೆ ಮತ್ತು ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ನಂತರ ಅದೇ ಸಮಯಕ್ಕೆ ನಮ್ಮ ಗ್ರಾಮದ ತೇಜ ಬಿನ್‌ ಚಿಕ್ಕರಂಗಯ್ಯ, ನಾಗರಾಜ ಬಿನ್‌ ಹೊಸಮಾಗಡಯ್ಯ ರವರು ಜಗಳವನ್ನು ಬಿಡಿಸಿ ಸಮಾದಾನಪಡಿಸಿರುತ್ತಾರೆ. ನಮ್ಮ ತಂದೆಯವರಿಗೆ ತಲೆಗೆ ಮತ್ತು ಕಣ್ಣಿಗೆ ಭಲವಾದ ಪೆಟ್ಟುಬಿದ್ದಿದ್ದರಿಂದ ಅವರು ಸಂತೆಮಾವತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ನಂತರ ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದು, ಸದರಿ ವಿಚಾರ ದೂರವಾಣಿಯ ಮೂಲಕವಾಗಿ ನನಗೆ ತಿಳಿದು, ನಾನು ಕೂಡಲೇ ಬೆಂಗಳೂರಿನಿಂದ ಬಂದು ನಮ್ಮ ತಂದೆಯವರಿಗೆ ಚಿಕಿತ್ಸೆಯನ್ನು ಕೊಡಿಸಿ ಈ ದಿನ ತಡವಾಗಿ ಬಂದು ದೂರುನೀಡುತ್ತಿದ್ದು, ಈ ಮೇಲ್ಕಂಡವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.Wednesday, 12 July 2017

Beat Metting Photo's

 

 

 

 

 

 


Page 1 of 3
Start
Prev
1

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 72 guests online
Content View Hits : 137803