lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2017 >
Mo Tu We Th Fr Sa Su
1 2 3 4 5 6 7
8 9 10 11 12 13 14
15 16 17 18 19 20 21
22 23 24 25 26 27 28
29 30 31        
May 2017

Wednesday, 31 May 2017

Crime Incidents 31-05-17

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  88/2017 ಕಲಂ 324, 441, 504, 506  ಐಪಿಸಿ

ದಿನಾಂಕ:30-05-2017 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿ ನವೀನ. ಹೆಚ್.ಜಿ. ಬಿನ್ ಗಂಗಾಧರಯ್ಯ,ಹೆಚ್.ಎಸ್, 34ವರ್ಷ, ಲಿಂಗಾಯ್ತರು, ಮೆಕಾನಿಕ್ ಕೆಲಸ, ಹುಲ್ಲುಕಟ್ಟೆ ತೋಟದ ಮನೆ, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ನಮ್ಮ ತಂದೆಗೆ 3 ಜನ ಗಂಡು ಮಕ್ಕಳಿದ್ದು ಎಲ್ಲರು ಭಾಗವಾಗಿರುತ್ತೇವೆ, ನಮ್ಮ ತಂದೆಯವರು ನಮ್ಮ ಜೊತೆ ವಾಸವಾಗಿರುತ್ತಾರೆ. ದಿನಾಂಕ:30/05/2017 ರಂದು ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ನಾನು ನಮ್ಮ ತಂದೆಯಾದ ಗಂಗಾಧರಯ್ಯ, ನನ್ನ ಹೆಂಡತಿಯಾದ ಭಾಗ್ಯರವರು ಊಟಕ್ಕೆ ಕುಳಿತಿರುವಾಗ ನನ್ನ 2ನೇ ತಮ್ಮನಾದ ಪ್ರಶಾಂತರವರು ಮನೆಯೊಳಗೆ ನುಗ್ಗಿ ಜೇನುಕಲ್ ಸಹಕಾರ ಬ್ಯಾಂಕಿನ ಪಿಗ್ನಿ ಹಣದ ವಿಚಾರವಾಗಿ ನನ್ನ ಜೊತೆ ಜಗಳ ತೆಗೆದು ಬೋಳಿ ಮಕ್ಕಳ ಸೂಳೆ ಮಕ್ಕಳ ಎಂತ ಬೈಯ್ಯುತ್ತಿರುವಾಗ ನಮ್ಮ ತಂದೆ ಗಂಗಾಧರಯ್ಯರವರು ಏಕೆ ಬೈಯ್ಯುತ್ತಿರುವೆ ಅಂತ ಪ್ರಶಾಂತನನ್ನು ಕೇಳಿದಕ್ಕೆ ಏಕಾಏಕಿ ಪ್ರಶಾಂತನು ತಂದಿದ್ದು ಮಚ್ಚಿನಿಂದ ನಮ್ಮ ತಂದೆಯವರಿಗೆ ತಲೆಗೆ ಮತ್ತು ಎಡಗೈ ಹೆಬ್ಬೆಟ್ಟಿಗೆ ಹೊಡೆದಿರುತ್ತಾನೆ. ನಾನು ನನ್ನ ಹೆಂಡತಿ ಮತ್ತು ಅಲ್ಲೆ ತೋಟದಲ್ಲಿ ಇದ್ದ ರುದ್ರೇಶ್ ರವರು ಜಗಳ ಬಿಡಿಸಿರುತ್ತಾರೆ, ಗಲಾಟೆ ಸಮಯದಲ್ಲಿ ಪ್ರಶಾಂತರವರಿಗೆ ಹಣೆ ಹತ್ತಿರ ತರಚಿದ ಗಾಯವಾಗಿರುತ್ತದೆ. ಪ್ರಶಾಂತನು ಇವರು ಬಂದಿದ್ದಕ್ಕೆ ನೀವು ಬದುಕಿಕೊಂಡ್ರಿ ಇಲ್ಲ ಅಂದರೆ ನಿಮಗೆ ಒಂದು ಗತಿ ಕಾಣಿಸುತ್ತಿದ್ದೆ ಎಂದು ಪ್ರಾಣ ಬೆದರಿಕೆ ಹಾಕಿ ಮಚ್ಚನ್ನು ಅಲ್ಲೆ  ಎಸೆದು ಹೋಗಿರುತ್ತಾನೆ. ನಂತರ  ನಮ್ಮ ತಂದೆಯನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿರುತ್ತೇನೆ, ನಮ್ಮ ತಂದೆಗೆ ಹೊಡೆದ  ಪ್ರಶಾಂತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು  ಕೋರಿಕೊಳ್ಳುತ್ತೇನೆಂತಾ ಇತ್ಯಾದಿ.  

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  88/2017 ಕಲಂ 324, 441, 504, 506  ಐಪಿಸಿ

ದಿನಾಂಕ:30-05-2017 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿ ನವೀನ. ಹೆಚ್.ಜಿ. ಬಿನ್ ಗಂಗಾಧರಯ್ಯ,ಹೆಚ್.ಎಸ್, 34ವರ್ಷ, ಲಿಂಗಾಯ್ತರು, ಮೆಕಾನಿಕ್ ಕೆಲಸ, ಹುಲ್ಲುಕಟ್ಟೆ ತೋಟದ ಮನೆ, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ನಮ್ಮ ತಂದೆಗೆ 3 ಜನ ಗಂಡು ಮಕ್ಕಳಿದ್ದು ಎಲ್ಲರು ಭಾಗವಾಗಿರುತ್ತೇವೆ, ನಮ್ಮ ತಂದೆಯವರು ನಮ್ಮ ಜೊತೆ ವಾಸವಾಗಿರುತ್ತಾರೆ. ದಿನಾಂಕ:30/05/2017 ರಂದು ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ನಾನು ನಮ್ಮ ತಂದೆಯಾದ ಗಂಗಾಧರಯ್ಯ, ನನ್ನ ಹೆಂಡತಿಯಾದ ಭಾಗ್ಯರವರು ಊಟಕ್ಕೆ ಕುಳಿತಿರುವಾಗ ನನ್ನ 2ನೇ ತಮ್ಮನಾದ ಪ್ರಶಾಂತರವರು ಮನೆಯೊಳಗೆ ನುಗ್ಗಿ ಜೇನುಕಲ್ ಸಹಕಾರ ಬ್ಯಾಂಕಿನ ಪಿಗ್ನಿ ಹಣದ ವಿಚಾರವಾಗಿ ನನ್ನ ಜೊತೆ ಜಗಳ ತೆಗೆದು ಬೋಳಿ ಮಕ್ಕಳ ಸೂಳೆ ಮಕ್ಕಳ ಎಂತ ಬೈಯ್ಯುತ್ತಿರುವಾಗ ನಮ್ಮ ತಂದೆ ಗಂಗಾಧರಯ್ಯರವರು ಏಕೆ ಬೈಯ್ಯುತ್ತಿರುವೆ ಅಂತ ಪ್ರಶಾಂತನನ್ನು ಕೇಳಿದಕ್ಕೆ ಏಕಾಏಕಿ ಪ್ರಶಾಂತನು ತಂದಿದ್ದು ಮಚ್ಚಿನಿಂದ ನಮ್ಮ ತಂದೆಯವರಿಗೆ ತಲೆಗೆ ಮತ್ತು ಎಡಗೈ ಹೆಬ್ಬೆಟ್ಟಿಗೆ ಹೊಡೆದಿರುತ್ತಾನೆ. ನಾನು ನನ್ನ ಹೆಂಡತಿ ಮತ್ತು ಅಲ್ಲೆ ತೋಟದಲ್ಲಿ ಇದ್ದ ರುದ್ರೇಶ್ ರವರು ಜಗಳ ಬಿಡಿಸಿರುತ್ತಾರೆ, ಗಲಾಟೆ ಸಮಯದಲ್ಲಿ ಪ್ರಶಾಂತರವರಿಗೆ ಹಣೆ ಹತ್ತಿರ ತರಚಿದ ಗಾಯವಾಗಿರುತ್ತದೆ. ಪ್ರಶಾಂತನು ಇವರು ಬಂದಿದ್ದಕ್ಕೆ ನೀವು ಬದುಕಿಕೊಂಡ್ರಿ ಇಲ್ಲ ಅಂದರೆ ನಿಮಗೆ ಒಂದು ಗತಿ ಕಾಣಿಸುತ್ತಿದ್ದೆ ಎಂದು ಪ್ರಾಣ ಬೆದರಿಕೆ ಹಾಕಿ ಮಚ್ಚನ್ನು ಅಲ್ಲೆ  ಎಸೆದು ಹೋಗಿರುತ್ತಾನೆ. ನಂತರ  ನಮ್ಮ ತಂದೆಯನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿರುತ್ತೇನೆ, ನಮ್ಮ ತಂದೆಗೆ ಹೊಡೆದ  ಪ್ರಶಾಂತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು  ಕೋರಿಕೊಳ್ಳುತ್ತೇನೆಂತಾ ಇತ್ಯಾದಿ.  

ಹೆಬ್ಬೂರು  ಪೊಲೀಸ್ ಠಾಣಾ ಯು ಡಿ ಆರ್ ನಂ 15/2017 ಕಲಂ 174 ಸಿಆರ್‌ಪಿಸಿ.

ದಿನಾಂಕ-30/05/2017 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿಯಾದ ರವಿಕುಮಾರ್‌ ಬಿನ್ ಲೇ|| ಹನುಮಂತರಾಯಪ್ಪ, 28ವರ್ಷ, ತಿಗಳರು, ಜಿರಾಯ್ತಿ, ಹೊನ್ನುಡಿಕೆ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ-28/05/2017 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಅಣ್ಣನಾದ ನಾಗರಾಜು ಬಿನ್ ಲೇ|| ಹನುಮಂತರಾಯಪ್ಪ, 38 ವರ್ಷ ರವರು ನಮ್ಮ  ಬಾಬ್ತು  ಅಡಿಕೆ ತೋಟದಲ್ಲಿ ಅಡಿಕೆ ಗಿಡದ ಬುಡದಲ್ಲಿ ಬೆಳೆದಿರುವ ಕಳೆಯನ್ನು ಕೀಳಲು ಹೋಗಿದ್ದು, ನಾನು ಮತ್ತು ನನ್ನ ಅಣ್ಣ ಇಬ್ಬರು ಅಡಿಕೆ ತೋಟದಲ್ಲಿ  ಇದೇ ದಿನ ಮದ್ಯಾಹ್ನ 12-00 ಗಂಟೆ ಸಮಯದಲ್ಲಿ  ಕಳೆಯನ್ನು ಕೀಳುತ್ತಿರುವಾಗ್ಗೆ ನಮ್ಮ ಅಣ್ಣನಿಗೆ ಯಾವುದೇ ವಿಷಪೂರಿತ ಹಾವು ಬಲಗಾಲಿನ ಹೆಜ್ಜೆ ಹತ್ತಿರ ಕಚ್ಚಿ ಹೊರಟು ಹೋಗಿತ್ತೆಂದು ಕೂಗಾಡಿದ್ದರಿಂದ, ಕೂಡಲೇ ಪಕ್ಕದಲ್ಲಿದ್ದ ನಾನು ನಮ್ಮ ಅಣ್ಣನನ್ನು ಮನೆಯ ಹತ್ತಿರ ಕರೆದುಕೊಂಡು ಬಂದು ನಂತರ ಕುರುಗುಂದ ಗ್ರಾಮದಲ್ಲಿ ನಾಟಿ ಔಷಧವನ್ನು ಕೊಡಿಸಿ, ಮನೆಗೆ ಕರೆದುಕೊಂಡು ಬಂದಿದ್ದು, ದಿನಾಂಕ-29-05-2017 ರ  ರಾತ್ರಿ ನಮ್ಮ ಅಣ್ಣ ಸುಮಾರು 11-00 ಗಂಟೆ ಸಮಯದಲ್ಲಿ ಊರಿ ಜಾಸ್ತಿ ಆಗುತ್ತಿದೆ, ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಕ್ಕೆ, ತಕ್ಷಣ ಆಸ್ಪತ್ರೆಗೆ  ಕರೆದುಕೊಂಡು ಹೋಗಲು, ನಾನು ನನ್ನ ಅಣ್ಣನ ಹೆಂಡತಿ  ರಮಾಮಣಿ  ಹಾಗೂ ಇತರರು ನಮ್ಮ ಅಣ್ಣನನ್ನು ಯಾವುದೋ ಕಾರಿನಲ್ಲಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೋಗುತ್ತಿರುವಾಗ್ಗೆ ಮಾರ್ಗಮದ್ಯೆ ನಮ್ಮ  ಅಣ್ಣ  ಈ ದಿನಾಂಕ:29-05-2017 ರಂದು ರಾತ್ರಿ ಸುಮಾರು 11-30 ಗಂಟೆ ಸಮಯದಲ್ಲಿ ಮೃತಪಟ್ಟಿದ್ದು, ನಮಗೆ ಕಾನೂನಿನ ತಿಳುವಳಿಕೆ ಇಲ್ಲದರಿಂದ ವಾಪಸ್‌‌ ಮನೆಯ ಹತ್ತಿರ ನಮ್ಮ ಅಣ್ಣನ ಮೃತ ದೇಹವನ್ನು ತಂದಿದ್ದು, ನಂತರ ಗ್ರಾಮದ ಮುಖ್ಯಸ್ಥರು ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ನಮ್ಮ ಅಣ್ಣ ನಾಗರಾಜನಿಗೆ ಯಾವುದೇ ವಿಷಪೂರಿತ ಹಾವು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಯೇ ವಿನಃ ಅವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಯು ಡಿ ಆರ್ ನಂ 15/2017 ಕಲಂ 174 ಸಿಆರ್‌ಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 62/17 ಕಲಂ 279,337 ಐಪಿಸಿ

ದಿನಾಂಕ:30-05-2017 ರಂದು ಮದ್ಯಾಹ್ನ 02:15 ಗಂಟೆಗೆ ಪಿರ್ಯಾದಿ ಶ್ರೀಮತಿ ಕುಮಾರಮ್ಮ ಕೊಂ ನಾರಾಯಣಪ್ಪ, ಬರಗೂರು ಗ್ರಾಮ, ಶಿರಾ ತಾಲ್ಲೋಕ್ ರವರು ಠಾಣೆಗೆ  ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:28-05-17 ರಂದು  ಪಿರ್ಯಾದಿ ರವರ ಊರಿನಲ್ಲಿ  ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ  ಸಮಾರಂಭ  ಇದ್ದು,  ಪಕ್ಕದ ಮನೆಗೆ ಪಿರ್ಯಾದಿಯ ಸಂಬಂಧಿಕರಾದ ಸಿದ್ದಯ್ಯ ರವರು ಬಂದಿದ್ದರು, ಅದೇ ದಿನ ಮದ್ಯಾಹ್ನ ಸುಮಾರು 02:30 ಗಂಟೆ ಸಮಯದಲ್ಲಿ  ಪಿರ್ಯಾದಿಯ ದೊಡ್ಡಪ್ಪ ನವರಾದ ಕೆಂಚಣ್ಣ ಬಿನ್ ಲೇಟ್ ಮೈಲಾರಪ್ಪ ಪಿರ್ಯಾದಿ ರವರ ಮನೆಯ ಮುಂಭಾಗದ ರಸ್ತೆಯಲ್ಲಿ ನಿಂತಿದ್ದು ಆ ಸಮಯಕ್ಕೆ ಕೆಎ-44ಎಂ0551 ನೇ ಕಾರಿನ ಚಾಲಕನಾದ ಗಿರೀಶ್ ಬಾಬು ಬಿನ್ ರಾಮಣ್ಣ ರವರ ಕಾರನ್ನು ಬಸ್ಟ್ಯಾಂಡ್ ಕಡೆಯಿಂದ ಕಾಲೋನಿ ಕಡೆಗೆ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ  ಮಾಡಿಕೊಂಡು ಬಂದು  ರಸ್ತೆಯ ಪಕ್ಕದಲ್ಲಿ ನಿಂತಿದ್ದ ಪಿರ್ಯಾದಿ ದೊಡ್ಡಪ್ಪನವರಾದ ಕೆಂಚಣ್ಣ ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದರ ಪರಿಣಾಮ ಅವರಿಗೆ ಎಡಕಾಲಿಗೆ ಮತ್ತು ಮೈಮೇಲೆಲ್ಲಾ  ಏಟುಗಳು ಬಿದ್ದು ರಕ್ತಗಾಯಗಳಾಗಿದ್ದು ಕೂಡಲೇ ಪಿರ್ಯಾದಿ ರವರು ಯಾವುದೊ ವಾಹನದಲ್ಲಿ ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು  ಅಲ್ಲಿನ ವೈದ್ಯರ ಸಲಹೇ ಮೇರೆಗೆ  ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ  ಕರೆದುಕೊಂಡು ಚಿಕಿತ್ಸೆಗಾಗಿ ದಾಖಲಿಸಿ ವೈದ್ಯರ ಸಲಹೇ ಮೇರೆಗೆ ಕೆಂಚಣ್ಣ ರವರ ಎಡಕಾಲಿಗೆ ಆಪರೇಷನ್ ಮಾಡಿಸಿ ಈ ದಿನ ತಡವಾಗಿ ಠಾಣೆಗೆ ಬಂದು  ದೂರು ನೀಡುತ್ತಿದ್ದು ಅಪಘಾತಪಡಿಸಿ ಕೆಎ-44-ಎಂ-0551 ನೇ ನಂಬರಿನ ಕಾರಿನ ಚಾಲಕನಾದ ಗಿರೀಶ್ ರವರ ಮೇಲೆ ಕಾನೂನು  ರೀತ್ಯಾ ಕ್ರಮ ಜರುಗಿಸಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ  .

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 07/17 ಕಲಂ 174 ಸಿ ಆರ್ ಪಿ ಸಿ

ದಿನಾಂಕ:30-05-17 ರಂದು  ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿ ಅಮೀರ್ ಖಾನ್   ಬಿನ್ ಇಮಾಮ್ ಸಾಬ್, ಪಟ್ಟನಾಯಕನಹಳ್ಳಿ  ಗ್ರಾಮ, ಶಿರಾ ತಾಲ್ಲೋಕ್ ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಮಗಳಾದ  ಚಾಂದಬಿ ರವರನ್ನು ಈಗ್ಗೆ ಸುಮಾರು 5 ರ್ವಷಗಳ ಹಿಂದೆ  ಹಂದಿಕುಂಟೆ ಗ್ರಾಮದ ಅಲ್ತಾಫ್ ರವರಿಗೆ ಕೊಟ್ಟು ಮದುವೆ ಮಾಡಿದ್ದು, ಇವರಿಗೆ 3 ವರ್ಷದ ಸಾನಿಯಾ ಎಂಬ ಮಗಳಿದ್ದು ಪಿರ್ಯಾದಿ ಮಗಳನ್ನು ಆಕೆಯ ಗಂಡ  ಬಿಟ್ಟು ಹೋಗಿದ್ದು ಪಿರ್ಯಾದಿರವರೆ ಮಗಳನ್ನು ನೋಡಿಕೊಳ್ಳುತ್ತಿದ್ದು,  ದಿ:28-05-17 ರಂದು ಬೆಳಿಗ್ಗೆ 08:00 ಗಂಟೆಗೆ ಪಿರ್ಯಾದಿ ಹೆಂಡತಿ ನೂರ್ ಜಾನ್  ಹಾಗೂ ಪಿರ್ಯಾದಿ ಮಗಳು ಚಾಂದ್ಬಿ  ರವರು ಕಾಮಗೊಂಡನಹಳ್ಳೀ ಗ್ರಾಮದ ವಾಸಿ ಲತೀಫ್ ಖಾನ್ ರವರ  ಜಮೀನಿನಲ್ಲಿ ಕೂಲಿಕೆಲಸಕ್ಕೆ ಹೋಗಿದ್ದು ,ಇತ್ತೀಚಿಗೆ ಮಳೆಯಾಗಿದ್ದರಿಂದ  ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ  ಬೆಳಿಗ್ಗೆ ಸುಮಾರು 09:00 ಗಂಟೆಯಲ್ಲಿ  ಯಾವುದೊ ವಿಷಪೂರಿತ  ಹಾವು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ  ಚಾಂದ್ ಬಿ ರವರ ಎಡಕಾಲಿಗೆ ಕಚ್ಚಿದ್ದು ಕಿರುಚಿಕೊಂಡಾಗ ಹತ್ತಿರಕ್ಕೆ ಹೋಗಿ ನೋಡಲಾಗಿ ಎಡಗಾಲಿನ ಪಾದದಲ್ಲಿ  ರಕ್ತ ಬರುತ್ತಿತ್ತು  ಪಿರ್ಯಾದಿ ರವರು ತನ್ನ ಮಗಳನ್ನು   ಉಪಚರಿಸಿ  ಚಿಕಿತ್ಸೆಗಾಗಿ  ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ  ಹೆಚ್ಚಿನ ಚಿಕಿತ್ಸೆಯಂತೆ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಚಿಕಿತ್ಸೆ ಕೊಡಿಸುತ್ತಿರುವಾಗ  ಚಿಕಿತ್ಸೆ ಫಲಕಾರಿಯಾಗದೇ ದಿ:29-05-17 ರಂದು  ರಾತ್ರಿ ಸುಮಾರು 08:40 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ  ಮೃತಳ ಸಾವಿನಲ್ಲಿ  ಬೇರೆ ಏನು ಅನುಮಾನ ಇರುವುದಿಲ್ಲ ಮುಂದಿನ ಕ್ರಮ ಜರುಗಿಸಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 Tuesday, 30 May 2017

Crime incidents 30-05-17

ತಾವರೆಕೆರೆ ಪೊಲೀಸ್ ಠಾಣಾ ಮೊ.ನಂ-90/2017 ಕಲಂ-279,337,304[ಎ]  ಐಪಿಸಿ

ದಿನಾಂಕ-29-05-2017ರಂದು ಮದ್ಯಾಹ್ನ-03-15 ಗಂಟೆಗೆ ತಾವರೆಕೆರೆ ಪೊಲೀಸ್ ಠಾಣೆಯ HC-72 ರವರು ಗಾಯಾಳು ಶ್ರೀಮತಿ ಮಂಜುಳಾ ಕೋಂ ಮಂಜುನಾಥ 29ವರ್ಷ ಗೌಂಡರ್ ಜನಾಂಗ ಗೃಹಿಣಿ #2223 5ನೇ ಕ್ರಾಸ್ ಕನಕ ಸ್ಕೂಲ್ ರಸ್ತೆ ಶಿವಾನಂದ ನಗರ ಮೂಡಲಪಾಳ್ಯ ಬೆಂಗಳೂರು ರವರು ಸಿರಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ-29-05-2017ರಂದು ಮದ್ಯಾಹ್ನ 1-45 ರಿಂದ 2-30 ಗಂಟೆವರೆಗೆ ನೀಡಿದ ಹೇಳಿಕೆಯನ್ನು ಪಡೆದು ಠಾಣೆಗೆ ಹಾಜರು ಪಡಿಸಿದ ಗಾಯಾಳುವಿನ ಹೇಳಿಕೆಯ  ಸಾರಾಂಶವೆನೇಂದರೆ ನಾನು ಮೆಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು.ನನ್ನ ಗಂಡ ಮಂಜುನಾಥ ರವರು ನನ್ನನ್ನು ಹಾಗೂ ನಮ್ಮ ಕುಟುಂಬದವರೇ ಆದ ನನ್ನ ತಂದೆ ಮಾಣಿಕ್ಯಂ ತಾಯಿ ಮೇಘಲ ಹಾಗೂ ಆಶಾ,ಸುಂದರಿ ,ಮೀನಾ,ಅರುಣ್ ಕುಮಾರ,ಅನೀಶ್ ಕುಮಾರ, ಹಾಗೂ ನನ್ನ ಮಗಳು 4ವರ್ಷದ ಪೂರ್ವಿಕ ಮತ್ತು ಮೀನಾಳ ಒಂದೂವರೆ ವರ್ಷದ ಮಗಳಾದ ಜಗರಕ್ಷಿಣಿರವರನ್ನು ಜೊತೆಯಲ್ಲಿ ಕರೆದುಕೊಂಡು ಬೆಂಗಳೂರಿನಿಂದ ಮುರುಡೇಶ್ವರಕ್ಕೆ & ಇತರೆ ಸ್ಥಳಗಳಿಗೆ ಪ್ರವಾಸ ಹೋಗಿದ್ದೆವು.ಸದರಿ ಪ್ರವಾಸವನ್ನು ನಮ್ಮ KA-02 C-2764ನೇ ಕ್ವಾಲೀಸ್ ಕಾರಿನಲ್ಲಿ ಹೋಗಿದ್ದೇವು.ಪ್ರವಾಸ ಮುಗಿಸಿಕೊಂಡು ಈ ದಿವಸ ಮುರುಡೇಶ್ವರದಿಂದ ವಾಪಾಸ್ ಬೆಂಗಳೂರಿಗೆ ಹೋಗುತ್ತಿರುವಾಗ ಕಾರನ್ನು ನನ್ನ ಗಂಡ ಮಂಜುನಾಥ ಚಾಲನೆ ಮಾಡುತ್ತಿದ್ದನು.ಬೆಳಗ್ಗೆ ಸುಮಾರು 10-00ಗಂಟೆಯಲ್ಲಿ ಚಿತ್ರದುರ್ಗದ ಬಳಿ ನಾವೇಲ್ಲಾ ತಿಂಡಿ ತಿಂದು ಬೆಂಗಳೂರಿಗೆ ಹೋಗುತ್ತಿರುವಾಗ ಮದ್ಯಾಹ್ನ ಸುಮಾರು 12-45 ಗಂಟೆಯಲ್ಲಿ ಹಿರಿಯೂರು ಸಿರಾ ಎನ್.ಎಚ್.48ರಸ್ತೆಯಲ್ಲಿ ನನ್ನ ಗಂಡ ಮಂಜುನಾಥ ಸದರಿ ಕಾರನ್ನು ಹಿರಿಯೂರು ಕಡೆಯಿಂದ ಶಿರಾ ಕಡೆಗೆ ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಾರನಗೆರೆ ಸಮೀಪ ರಸ್ತೆಯ ಪಕ್ಕದ ಹಳ್ಳಕ್ಕೆ ಕಾರನ್ನು ಬೀಳಿಸಿ ಅಪಘಾತ ಪಡಿಸಿದ ಪರಿಣಾಮ ಕಾರು ಪೂರಾ ಜಖಂಗೊಂಡು ಕಾರಿನಲ್ಲಿದ್ದ ನನಗೆ 2 ಮುಂಗೈಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾದವು.ನನ್ನ ತಂದೆ ಮಾಣಿಕ್ಯಂರವರಿಗೆ ತಲೇಗೆ ಪೆಟ್ಟು ಬಿದ್ದು  ಸ್ಥಳದಲ್ಲಿಯೆ  ಮೃತ ಪಟ್ಟಿರುತ್ತಾರೆ.ಗಾಯಾಳುಗಳಾದ ನಮ್ಮನ್ನು ಅಂಬುಲೆನ್ಸ್ ವಾಹನದಲ್ಲಿ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.ಆಸ್ಪತ್ರೆಯಲ್ಲಿ ಚಿಕೆತ್ಸೆ ಕೊಡುತ್ತಿರುವಾಗ ನನ್ನ ತಂಗಿ ಮೀನಾ ಚಿಕೆತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ.ನನ್ನ ಜೋತೆ ಇದ್ದ ನನ್ನ ಮಗಳು ಪೂರ್ವಿಕ ಹಾಗೂ ನನ್ನ ತಂಗಿ ಆಶಾ,ಮೀನಾಳ ಮಗಳಾದ ಜಗರಕ್ಷಿಣಿ ,ನನ್ನ ತಾಯಿ ಮೇಘಲ & ಸಂಬಂದಿಕರಾದ ಸುಂದರಿ,ಅರುಣ್ ಕುಮಾರ,ಅನೀಶ್ ಕುಮಾರ & ನನ್ನ ಗಂಡ ಮಂಜುನಾಥರವರಿಗೆ ಮೈಕೈಗೆ ಪೆಟ್ಟು ಬಿದ್ದು  ರಕ್ತಗಾಯಗಳಾಗಿರುತ್ತವೆ. ಈ ಅಪಘಾತವು ನನ್ನ ಗಂಡ KA-02 C-2764 ಕ್ವಾಲೀಸ್ ವಾಹನವನ್ನು ಅತಿವೇಗ ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಪಕ್ಕಕ್ಕೆ ಬೀಳಿಸಿದ ಪರಿಣಾಮ ಉಂಟಾಗಿರುತ್ತೆ.ಚಾಲಕ ಮಂಜುನಾಥರವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂತ ಕೊಟ್ಟ ಹೇಳಿಕೆಯ ಯನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 87/2017 ಕಲಂ 87 ಕೆಪಿ ಆಕ್ಟ್

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ಎಸ್  ಆದ ನಾನು  ದಿನಾಂಕ 29-05-2017 ರಂದು  ರಾತ್ರಿ 09-45 ಗಂಟೆ ಸಮಯದಲ್ಲಿ  ಪಂಚರನ್ನು ಠಾಣೆಯ ಬಳಿ ಬರಮಾಡಿಕೊಂಡು ಠಾಣಾ ಸರಹದ್ದು ದಸರಿಘಟ್ಟ ಗ್ರಾಮದ ದೇವಾಸ್ಥಾನ ಹತ್ತಿರ ಇರುವ ಮಂಜುನಾಥ ರವರ ಅಂಗಡಿ ಮುಂಭಾಗ ಯಾರೋ ಕೆಲವು ಆಸಾಮಿಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುತ್ತಾರೆ ಎಂತಾ ನನಗೆ ಖಚಿತ ಮಾಹಿತಿ ಬಂದ ಮೇರೆಗೆ, ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದಿದ್ದು, ದಾಳಿ ಮಾಡುವ ಸಮಯದಲ್ಲಿ ನಮ್ಮೊಂದಿಗೆ ಪಂಚರಾಗಿ ಹಾಜರಿದ್ದು ಸಹಕರಿಸಬೇಕೆಂದು ಕೇಳಿಕೊಂಡ ಮೇರೆಗೆ ಪಂಚರು ಒಪ್ಪಿದ ನಂತರ ಪೊಲೀಸ್ ಅಧಿಕಾರಿಯವರು ಪಂಚರು,  ಸಿಬ್ಬಂದಿಯವರೊಂದಿಗೆ KA 06 G 347 ನೇ ಪೊಲೀಸ್ ಜೀಪಿನಲ್ಲಿ ಕೂರಿಸಿಕೊಂಡು ದಸರಿಘಟ್ಟ ಗ್ರಾಮದ ದೇವಾಸ್ಥಾನ ಹತ್ತಿರ ಇರುವ ಮಂಜುನಾಥ ರವರ ಅಂಗಡಿ  ಸಮೀಪಕ್ಕೆ ಬಂದು ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗಿಳಿದು ಮರೆಮಾಚಿ ನೋಡಲಾಗಿ ಅಂಗಡಿ ಮುಂಭಾಗ ಕೆಲವು ಜನರು ವೃತ್ತಾಕಾರವಾಗಿ ಕುಳಿತುಕೊಂಡು ಬೀದಿ ದೀಪದ ಬೆಳಕಿನಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂದು ಮಾತನಾಡುತ್ತಾ ಹಣವನ್ನು ಮತ್ತು ಬೈಕ್ ಮತ್ತು ಆಟೋವನ್ನು  ಪಣವಾಗಿಟ್ಟುಕೊಂಡು ಇಸ್ಪೀಟ್ ಜೂಜಾಟ ಆಡುತ್ತಿದ್ದು, ಪೊಲೀಸರು ಅವರನ್ನು ಸುತ್ತುವರಿದು ದಾಳಿ ಮಾಡಿದಾಗ ಆಸಾಮಿಗಳು ಓಡಿಹೋಗುಲು ಪ್ರಯತ್ನಸಿದರು ಆಗ ಪೊಲೀಸ್ ರವರು ಕೆಲವರನ್ನು ಬೆನ್ನಟ್ಟಿ  ಹಿಡಿದು ನಮ್ಮ ಸಮಕ್ಷಮ ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ರಾಮಚಂದ್ರಯ್ಯ ಬಿನ್ ಗೋವಿಂದಯ್ಯ, 45 ವರ್ಷ,ವಕ್ಕಲಿಗರು,ಅಂಗಡಿ ವ್ಯಾಪಾರ, ದಸರೀಘಟ್ಟ, ಕಸಬಾ  ಹೋಬಳಿ, ತಿಪಟೂರು  ತಾ. 2) ಚಂದ್ರಶೇಖರ್  ಬಿನ್  ಲಕ್ಕೇಗೌಡ , 56 ವರ್ಷ,ವಕ್ಕಲಿಗರು, ಜಿರಾಯ್ತಿ, ದಸರೀಘಟ್ಟ, ಕಸಬಾ  ಹೋಬಳಿ, ತಿಪಟೂರು ತಾ.  3) ಮರಿಯಪ್ಪ ಬಿನ್ ದಾಸೇಗೌಡ, 41 ವರ್ಷ, ವಕ್ಕಲಿಗರು, ಜಿರಾಯ್ತಿ, ದಸರೀಘಟ್ಟ, ಕಸಬಾ ಹೋಬಳಿ, ತಿಪಟೂರು ತಾ || 4)  ಪ್ರಕಾಶ್ ಬಿನ್ ಬ್ಯಾಡಗಿ ಶಟ್ಟಿ, 30 ವರ್ಷ, ಗಾಣಿಗ ಶೆಟ್ಟರು, ಜಿರಾಯ್ತಿ, ದಸರೀಘಟ್ಟ   ಕಸಬಾ  ಹೋಬಳಿ, ತಿಪಟೂರು ತಾ 5) ಲೋಕೇಶ  ಬಿನ್ ಕೆಂಪೆಗೌಡ 40  ವರ್ಷ,  ವಕ್ಕಲಿಗರು,ಆಟೋ ಚಾಲಕ, ದಸರೀಘಟ್ಟ, ಕಸಬಾ  ಹೋಬಳಿ, ತಿಪಟೂರು ತಾ|| ಎಂದು ತಿಳಿಸಿದ್ದು, ಇವರಿಂದ ಸ್ಥಳದಲ್ಲಿ ಜೂಜಾಟ ಆಡಿ ಓಡಿಹೋದವರ ಹೆಸರು ವಿಳಾಸವನ್ನು ಕೇಳಲಾಗಿ 6) ಕುಮಾರ ಸ್ವಾಮಿ  @ ಎಂ ಸಿ ಕುಮಾರ್ ಬಿನ್ ಗವಿರಂಗಪ್ಪ, 7) ಗಿರೀಶ @ ಹಂಚಿನ ಮನೆ ಗಿರಿ  8) ನವೀನ್ ಬಿನ್ ರಂಗಪ್ಪ  9) ಡಿ ಎಲ್ ಶ್ರೀನಿವಾಸ ಬಿನ್ ಲಕ್ಕೆಗೌಡ 10) ರಂಗಸ್ವಾಮಿ ಬಿನ್ ದೊಡ್ಡೆಗೌಡ, 11) ಡಿ ಜಿ ಶ್ರೀನಿವಾಸ ಬಿನ್ ಗೋವಿಂದೇಗೌಡ ಎಂತ ತಿಳಿಸಿದರು. ನಂತರ ಸ್ಥಳವನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲದ ಮೇಲೆ ಆಸಾಮಿಗಳು ಪಣಕ್ಕೆ ಇಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಹಣವನ್ನು ಎಣಿಸಲಾಗಿ ಒಟ್ಟು  7490/- ರೂಗಳಿದ್ದು, ಇಸ್ಪೀಟ್ ಎಲೆಗಳು ಒಟ್ಟು 52 ಇರುತ್ತವೆ. ಸ್ಥಳದಲ್ಲಿಯೇ ಅಖಾಡದಲ್ಲಿ ಪಣಕ್ಕಿಟ್ಟಿದ್ದ ಬೈಕ್ ಗಳನ್ನು ಪರಿಶೀಲಿಸಲಾಗಿ 1) KA-02 HY-5979 ನೇ ಬಜಾಜ್ ಡಿಸ್ಕವರಿ ಬೈಕ್, 2) KA-44 L-3129 ಹೊಂಡಾ ಷೈನ್  ಬೈಕ್  3) KA-44 3101 ಬಜಾಜ್ ಆಟೋವನ್ನು  ಮತ್ತು ಮೇಲ್ಕಂಡ 1) 7490 /- ರೂ ನಗದು ಹಣ. 2) 52 ಇಸ್ಪೀಟ್ ಎಲೆಗಳು 3)  ಒಂದು ಪ್ಲಾಸ್ಟಿಕ್ ಚೀಲವನ್ನುಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ 05 ಜನ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿರುತ್ತದೆ.ಈ ಪಂಚನಾಮೆಯನ್ನು ಈ ದಿವಸ ರಾತ್ರಿ 10-15 ಗಂಟೆಯಿಂದ 11-00. ವರೆಗೆ ವಿದ್ಯುತ್ ದೀಪದ ಬೆಳಕಿನಲ್ಲಿ ಲ್ಯಾಪ್‌ಟಾಪ್ ಮೂಲಕ ಟೈಪ್ ಮಾಡಿ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ ರಾತ್ರಿ  11-30 ಗಂಟೆಗೆ ಬಂದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 86/2017 ಕಲಂ 32,34 ಕೆ ಇ ಆಕ್ಟ

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ಎಸ್  ಆದ ನಾನು  ದಿನಾಂಕ:29/05/2017 ರಂದು ಸಂಜೆ 05-30  ಗಂಟೆ ಸಮಯದಲ್ಲಿ ನಾನು ರಂಗಾಪುರದಲ್ಲಿ  ಗಸ್ತುನಲ್ಲಿ ಇರುವಾಗ, ತಿಪಟೂರು ಟೌನ್ ಕಡೆಯಿಂದ ಇಬ್ಬರು ಆಸಾಮಿಗಳು ಅಕ್ರಮವಾಗಿ ಮಧ್ಯವನ್ನು  ಚೀಲದಲ್ಲಿ ಮಾರಾಟ ಮಾಡುವ ಉದ್ದೇಶದಿಂದ  ಬೈಕ್ ನಲ್ಲಿ   ಇಟ್ಟುಕೊಂಡು  ಬರುತ್ತಿರುವುದಾಗಿ  ಖಚಿತ ಮಾಹಿತಿ ಬಂದ ಮೇರೆಗೆ, ನಾನು ಮತ್ತು ಪಂಚರೊಂದಿಗೆ ಹಾಗೂ ಸಿಬ್ಬಂದಿರವರೂಂದಿಗೆ KA-06 G-347 ಜೀಪಿನಲ್ಲಿ  ಹೊಸಹಳ್ಳಿ  ಗ್ರಾಮದ ಬಸವಣ್ಣ ದೇವಾಸ್ಥಾನ ಹತ್ತಿರ ಕಾಯಿತ್ತಿರುವಾಗ   ಸಂಜೆ 05-45 ಗಂಟೆ ಸಮಯದಲ್ಲಿ ತಿಪಟೂರು ಟೌನ್ ಕಡೆ ಯಿಂದ  ಒಂದು ಬೈಕ್  ನಲ್ಲಿ ಇಬ್ಬರು ಆಸಾಮಿಗಳು  ಬೈಕ್ ನ ಮದ್ಯದಲ್ಲಿ ಒಂದು ಚೀಲ ಇಟ್ಟುಕೊಂಡು ಬರುತ್ತಿದ್ದು ಅವರನ್ನು ನಿಲ್ಲಿಸಲು ಸೂಚನೆ ನೀಡಿದಾಗ ದೂರದಲ್ಲಯೇ ಬೈಕ್ ಮತ್ತು ಚೀಲವನ್ನು ಬಿಟ್ಟು  ಓಡಿ ಹೋಗುತ್ತಿದ್ದವರನ್ನು ಹಿಡಿಯಲು ಪ್ರಯತ್ನಿಸಿದಾಗ ಓಡಿ ಹೋಗಿರುತ್ತಾರೆ, ನಂತರ ಪಂಚರ ಸಮಕ್ಷಮ ಚೀಲವನ್ನು ಪರಿಶೀಲಿಸಲಾಗಿ 1) HAYWADES Whisky ಯ 90ML ಇರುವ 112  ಟೆಟ್ರಾ ಪ್ಯಾಕ್ ಗಳು 2) 8 PM  Whisky ಯ 180ML 06 ಟೆಟ್ರಾ ಪ್ಯಾಕ್ ಗಳು ಪತ್ತೆಯಾಗಿದ್ದು, ಒಟ್ಟು 120 ಮಧ್ಯ ತುಂಬಿದ ಟೆಟ್ರಾ ಪ್ಯಾಕ್ ಗಳು   ಸಿಕ್ಕಿದ್ದು, ಇವುಗಳ ಬೆಲೆ  ಸುಮಾರು 3562/- ರೂ ಆಗುತ್ತದೆ. ನಂತರ ಸ್ಥಳದಲ್ಲಿ ಇದ್ದ ಬೈಕ್ ನ್ನು ಪರಿಶೀಲಿಸಲಾಗಿ KA-01 W-2482  ಎಂತಾ ನೊಂದಣಿ ಸಂಖ್ಯೆ ಬರೆದಿರುವ ಕೆಂಪು ಬಣ್ಣದ ಟಿ ವಿ ಎಸ್ ಕಂಪನಿಯ ವಿಕ್ಟರ್ ದ್ವಿಚಕ್ರ ವಾಹನವಾಗಿರುತ್ತೆ, ಓಡಿ ಹೋದ ಆಸಾಮಿಗಳನ್ನು ನೋಡಿದರೆ ಇವರುಗಳು  ಸದರಿ ಬೈಕ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡುವ ಉದ್ದೇಶದಿಂದ  ತೆಗೆದುಕೊಂಡು ಹೋಗುತ್ತಿರುವುದಾಗಿ ಕಂಡು ಬಂದಿರುತ್ತದೆ. ಪಂಚರ ಸಮಕ್ಷಮ ಮೇಲ್ಕಂಡ ಮಾಲುಗಳನ್ನು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು, ಇವುಗಳನ್ನ ವಿದಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಯಿಸಿಕೊಡಲು ಒಂದೊಂದು ಮದ್ಯದ ಮಾದರಿಯನ್ನು ಪ್ರತೇಕವಾಗಿ ತೆಗೆದು ಬಿಳಿ ಬಟ್ಟೆಯಿಂದ ಕಟ್ಟಿ “ H” ಎಂಬ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಪಡೆದು ಅವುಗಳ ಮೇಲೆ ಚೀಟಿ ಅಂಟಿಸಿರುತ್ತೆ. ಯಾವುದೇ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುಲು ತೆಗೆದುಕೊಂಡು ಹೋಗುತ್ತಿದ್ದ ಮೇಲ್ಕಂಡ 1] KA-01 W-2482  ಬೈಕ್ 2] HAYWADES Whisky ಯ 90ML ಇರುವ 112  ಟೆಟ್ರಾ ಪ್ಯಾಕ್ ಗಳು 3) 8 PM  Whisky ಯ 180ML 06 ಟೆಟ್ರಾ ಪ್ಯಾಕ್ ಗಳು 4] ಮದ್ಯದ ಪಾಕ್ಯೆಟ್ ಗಳನ್ನು ತುಂಬಿದ್ದ ಒಂದು ಗೋಣಿ ಚೀಲವನ್ನು  ವಶಕ್ಕೆ  ಪಡೆದುಕೊಂಡು ಸ್ಥಳದಲ್ಲಿ ಪಂಚನಾಮೆಯನ್ನು  ಸಂಜೆ 05-45 ಗಂಟೆ ಯಿಂದ 06-30 ಗಂಟೆಯವರೆಗೆ ಲ್ಯಾಪ್ ಟಾಪ್ ನಲ್ಲಿ ಟೈಪ್ ಮಾಡಿ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ ರಾತ್ರಿ  07-00 ಗಂಟೆಗೆ ಬಂದು ಠಾಣಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತಾವರೆಕೆರೆ ಪೊಲೀಸ್ ಠಾಣಾ ಮೊ.ನಂ-89/2017 ಕಲಂ-457, 380 ಐಪಿಸಿ

ದಿನಾಂಕ-29-05-2017ರಂದು ಮದ್ಯಾಹ್ನ 12-45 ಗಂಟೆಗೆ ಪಿರ್ಯಾದಿ ಸುನೀಲಕುಮಾರ.ಎಂ.ಎಸ್ ರವರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಸಾರಾಂಶವೆನೇಂದರೆ ದಿನಾಂಕ-28/29-05-2017ರಂದು ರಾತ್ರಿ ಸುಮಾರು 12-30 ಗಂಟೆಗೆ ತಾವರೆಕೆರೆ ಗ್ರಾಮದ ಬಂಡಿರಂಗನಾಥಸ್ವಾಮಿ ದೇವಸ್ಥಾನದ ಎರಡು ಹುಂಡಿ ಹೊಡೆದು ಅಂದಾಜು 2 ಲಕ್ಷ ಹಣವು ಯಾರೋ ದುಷ್ಕರ್ಮಿಗಳು ಕಳ್ಳತನ ಮಾಡಿರುತ್ತಾರೆ.ಸದರಿ ದೇವಸ್ಥಾನವು ಮುಜರಾಯಿ ಇಲಾಖಾ ವ್ಯಾಪ್ತಿಗೆ ಒಳಪಟ್ಟಿರುವದರಿಂದ ಸದರಿ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಕಳ್ಳರು ದೇವಸ್ಥಾನದ ಪೌಳಿ ಗೋಡೆ ಹತ್ತಿ ದೇವಸ್ಥಾನದ ಒಳ ನುಗ್ಗಿ ಕಳ್ಳತನ ಮಾಡಿರುತ್ತಾರೆಂತ ಕೊಟ್ಟ ಲೀಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  85/2017 ಕಲಂ 279, 337 ಐಪಿಸಿ

ದಿನಾಂಕ: 29-05-2017 ರಂದು  ಬೆಳಿಗ್ಗೆ08-15 ಗಂಟೆಗೆ ಈ ಕೇಸಿನ ಪಿರ್ಯಾದಿ ವೆಂಕಟರಮಣಪ್ಪ ವಿ ಬಿನ್ ವೆಂಕಟಪ್ಪ, 39 ವರ್ಷ, ನಾಯಕ ಜನಾಂಗ,   ಚಾಲಕ ವೃತ್ತಿ, ಗುಟ್ಟಪಾಲ್ಯ, ಬಾಗೆಪಲ್ಲಿ ತಾಲ್ಲೂಕ್, ತಿಮ್ಮಾಮಪಲ್ಲಿ ಹೋಬಳಿ, ಚಿಕ್ಕಬಳ್ಳಾಪುರ ಜಿಲ್ಲೆ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ವಿ ಆರ್.ಎಲ್.ಲಾಜಿಸ್ಟಿಕ್ ಲಿಮಿಟೆಡ್ ಕಂಪನಿಯಲ್ಲಿ ಕೆ.ಎ.25 ಪಿ.7053 ನೇ ಸ್ಕಾರ್ಪಿಯೋ ವಾಹನದ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,ದಿನಾಂಕ 28/05/2017 ರಂದು ವಿ ಆರ್.ಎಲ್.ಲಾಜಿಸ್ಟಿಕ್ ಲಿಮಿಟೆಡ್ ಜಿ.ಎಮ್.ರಾಧ, ವಿಜಯಾನಂದಯ್ಯ .ಎಸ್.ಎಸ್ ರವರೊಂದಿಗೆ ಖಾಸಗಿ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ತಿಪಟೂರಿಗೆ ಕೆ.ಎ 25 ಪಿ 7053  ನೇ ಕಂಪನಿಯ ವಾಹನದಲ್ಲಿ ನಾನು ಚಾಲನೆ ಮಾಡಿಕೊಂಡು ಎನ್. ಹೆಚ್ 206 ರಸ್ತೆಯ ಕರಡಿ ಗ್ರಾಮದ ಹತ್ತಿರ ರಾತ್ರಿ ಸುಮಾರು 7-50 ಗಂಟೆ ಸಮಯದಲ್ಲಿ ನಾನು ವಾಹನವನ್ನು ರಸ್ತೆಯ ಎಡಬದಿಯ ಭಾಗದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ,ತಿಪಟೂರು ಕಡೆಯಿಂದ ಒಂದು ಆಟೋ ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾವು ರಸ್ತೆಯ ಪುಟ್‌ಪಾತ್ ರಸ್ತೆಗೆ ಇಳಿಸಿದರೂ  ಸಹ ನಮ್ಮ ಕೆ.ಎ 25 ಪಿ 7053  ನೇ ವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಇದರಿಂದ ನಮ್ಮ ವಾಹನದ ಬಲಭಾಗ ಮತ್ತು ಮುಂದಿನ ಡೋರ್‌ ಜಖಂಗೊಂಡಿರುತ್ತೆ, ಆಟೋ ಸಹ ಜಖಂಗೊಂಡಿದ್ದು, ಈ ಆಟೋ ನಂಬರ್ ನೋಡಲಾಗಿ ಕೆ.ಎ 02 ಎಇ 3846 ಆಗಿರುತ್ತದೆ, ಆಟೋದಲ್ಲಿದ್ದ ಪ್ರಾಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಆಟೋ ಚಾಲಕ ಮತ್ತು ಆಟೋದಲ್ಲಿದ್ದ ಗಾಯಗೊಂಡ ಪ್ರಯಾಣಿಕರ ಹೆಸರು ವಿಳಾಸ ಗೊತ್ತಿರುವುದದಿಲ್ಲ, ನಮ್ಮ ವಾಹನದಲ್ಲಿದ್ದವರಿಗೆ ಯಾರಿಗೂ ಗಾಯಗಳಾಗಿರವುದಿಲ್ಲ, ಮೇಲ್ಕಂಡ ಎರಡು ವಾಹನಗಳು ಸ್ಥಳದಲ್ಲಿ ಇರುತ್ತವೆ, ಈ ಅಪಘಾತಕ್ಕೆ ಕಾರಣವಾದ ಕೆ.ಎ 02 ಎಇ 3846 ನೇ ಆಟೋಚಾಲಕನ ಮೇಲೆ ಕಾನೂನು ರೀತ್ಯಾಕ್ರಮ ಜರುಗಿಸಿ ಎಂತಾ ನೀಡಿದ  ದೂರಿನ ಅಂಶವಾಗಿರುತ್ತೆ

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  57/2017    ಕಲಂ: 498 IPC   & 3.4 DP Act

ದಿನಾಂಕ:29/05/2017 ರಂದು ಬೆಳಿಗ್ಗೆ 8:15  ಗಂಟೆಗೆ ಪಾವಗಡತಾ|| ಗೌಡತಿಮ್ಮನಹಳ್ಳಿ ಗ್ರಾಮದ ವಾಸಿ ಪಿರ್ಯಾದಿ ದೀಪಿಕಾ ಡಿ/ಓ ಕೃಷ್ಣಪ್ಪ , 21 ವರ್ಷ, ಕುರುಬ ಜನಾಂಗ  ರವರು ನೀಡಿದ ದೂರಿನ ಅಂಶವೇನೆಂದರೆ ನನ್ನ ತಂದೆ- ತಾಯಿ ಗೌಡತಿಮ್ಮನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು ನನ್ನನ್ನು ಚಿಕ್ಕ ಜಾಲೋಡು ಗ್ರಾಮದ ಮರಿಸ್ವಾಮಿ ಕುರುಬ ಜನಾಂಗ ರವರ ಮಗನಾದ ಸತೀಶ್ ಎಂಬುವವರಿಗೆ ದಿನಾಂಕ:25/10/2015 ರಂದು ಮದುವೆ ಮಾಡಿಕೊಟ್ಟಿರುತ್ತಾರೆ, ನಾನು ನನ್ನ ಗಂಡನ ಮನೆಯಲ್ಲಿ ಸುಮಾರು 5 ರಿಂದ 8 ತಿಂಗಳು ಮಾತ್ರ ಶಾಂತಿಯುತವಾಗಿ ಜೀವನ ನಡೆಸಿದ್ದು ತದ ನಂತರ ನನ್ನ ಗಂಡ ಸತೀಶ್ ರವರು ಪ್ರತಿ ದಿನ ಕಂಠಪೂರ್ತಿ ಕುಡಿದು ನನ್ನನ್ನು ಹೊಡೆದು ಬಡಿದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು ನಾನು ನನ್ನ ಸಂಸಾರವನ್ನು ಶಾಂತಿಯತವಾಗಿ ನಡೆಸುವ ಸಲುವಾಗಿ ನಾನು ಮರ್ಯಾದೆಗೆ ಅಂಜಿ ನನ್ನ ತಂದೆ ತಾಯಿಯವರಿಗೆ ನನ್ನ ಗಂಡ ನೀಡುತ್ತಿದ್ದ ಕಿರುಕುಳದ ಬಗ್ಗೆ ತಿಳಿಸಿರುವುದಿಲ್ಲ, ಹೀಗಿದ್ದರೂ ಪ್ರತಿದಿನ ನನ್ನ ಗಂಡನು ಕುಡಿದು ಬಂದು ನನ್ನ ಹತ್ತಿರ ಜಗಳ ತೆಗೆದು ನಾನು ನನ್ನ ತಂದೆ ಮನೆಯಿಂದ 1.00.000=00 ( ಒಂದು ಲಕ್ಷ ರೂ) ವರದಕ್ಷಿಣೆ ತರಬೇಕೆಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಪೀಡಿಸುತ್ತಿದ್ದನು ,ಇದರ ಜೊತೆಗೆ ನನ್ನ ಮಾವನಾದಂತಹ ಮರ್ರಿಸ್ವಾಮಿ ಸಹ ನನ್ನನ್ನು ವರದಕ್ಷಿಣೆ ತರಲು ಬಯ್ಯುತ್ತಿದ್ದರು, ಮತ್ತು ವರದಕ್ಷಿಣೆ ಬೇಡಿಕೆ ಮಾಡುತ್ತಿದ್ದರು , ನನ್ನ ತಂದೆ ತಾಯಿಯವರು ಬಡವರಾಗಿದ್ದು ಈ ವಿಚಾರ ತಿಳಿಸಿರಲಿಲ್ಲ, ನಾನು ಗರ್ಭಿಣಿ ಯಾಗಿದ್ದು ಅಂತಹ ಸಂಧರ್ಭದಲ್ಲಿಯೂ ಸಹ  ದಿನಾಂಕ:20/12/2016 ರಂದು ರಾತ್ರಿ ಸುಮಾರು 6 ಗಂಟೆಯಲ್ಲಿ ನನ್ನ ಗಂಡ ಮತ್ತು ಮಾವನವರು ಅಸಭ್ಯದಿಂದ ವರ್ತಿಸಿ ನನ್ನನ್ನು ಮನೆಯಿಂದ ಹೊರಹಾಕಿ ವರದಕ್ಷಿಣಿಎ ತರುವಂತೆ ಬೇಡಿಕೆ ಇಟ್ಟಿರುತ್ತಾರೆ, ಒಂದು ಲಕ್ಷ ರೂ ವರದಕ್ಷಿಣೆ ತರಲಿಲ್ಲವೆಂದರೆ ಮನೆಗೆ ಸೇರಿಸುವುದಿಲ್ಲವೆಂದು ಖಡಾಖಂಡಿತವಾಗಿ ತಿಳಿಸಿರುತ್ತಾರೆ, ದಿ: 20/12/2016 ರಂದು ನನಗೆ ನನ್ನ ಗಂಡ ಮತ್ತು ನನ್ನ ಮಾವನು ನೀಡಿದ ಹಿಂಸೆಯನ್ನು ನೋಡಿದ ಅಕ್ಕ ಪಕ್ಕದ ಮನೆಯವರು ನನ್ನ ತಂದೆಗೆ ದೂರವಾಣಿ ಮುಖಾಂತರ ಮಾಹಿತಿಯನ್ನು ನನ್ನ ತಂದೆಗೆ ತಿಳಿಸಿದರು ಆ ಸಂಧರ್ಭದಲ್ಲಿ ಮಾಹಿತಿ ತಿಳಿದ ನನ್ನ ತಂದೆ ಯವರು ಚಿಕ್ಕ ಜಾಲೋಡು ಗ್ರಾಮಕ್ಕೆ ಬಂದು ನನ್ನ ಗಂಡನ ಮತ್ತು ಮಾವನ ಬಳಿ ಪರಿ ಪರಿಯಾಗಿ ಬೇಡಿಕೊಂಡರು ವರದಕ್ಷಿಣೆ ತರುವವರೆವಿಗೂ ಮನೆಗೆ ಸೇರಿಸುವುದಿಲ್ಲವೆಂದು ಹೇಳಿದರು, ನನ್ನ ತಂದೆಯವರು ನನ್ನನ್ನು ತವರು ಮನೆಗೆ ಕರೆದುಕೊಂಡು ಹೋದರು , ನಂತರ ನನ್ನ ತವರು ಮನೆಯಲ್ಲಿ 03 ತಿಂಗಳ  ಕಾಲ ಶಾಂತಿಯುತವಾಗಿದ್ದು, ತದ ನಂತರ ದಿ:25/02/2017 ರಂದು ರಾತ್ರಿ 11:00 ಗಂಟೆ ಸಮಯದಲ್ಲಿ ನನ್ನ ಗಂಡ ಸತೀಶ್ ಮತ್ತು ಮಾವ ಮರಿಸ್ವಾಮಿ ಇವರು ಕುಡಿದು  ಬಂದು ನನ್ನ ತವರು ಮನೆಗೆ ಬಂದು ಮನೆಗೆ ನುಗ್ಗಿ ನನ್ನ ಮೇಲೆ ಮತ್ತು ನನ್ನ ತಂದೆ –ತಾಯಿ ಮೇಲೆ ಜಗಳ ಮಾಡಿ ನನ್ನನ್ನು ಮತ್ತು ನನ್ನ ತಂದೆ ತಾಯಿಯನ್ನು ಮನೆಯಿಂದ ಎಳೆದಾಡಿ ನಡುರಸ್ತೆ ಯಲ್ಲಿ ಹಲ್ಲೆ ನಡೆಸಿರುತ್ತಾರೆ, ಮತ್ತು ದಿ: 01/05/2017 ರಂದು ಸಂಜೆ ನನ್ನ ಗಂಡ ಮತ್ತು ಮಾವ ಕ್ಷುಲ್ಲಕ ಕಾರಣಕ್ಕಾಗಿ ನನ್ನ ತಂದೆ ತಾಯಿಗಳೊಂದಿಗೆ ಜಗಳ ಮಾಡಿ ನನ್ನ ತವರು ಮನೆಯಲ್ಲಿ ಅಶಾಂತಿ ಉಂಟು ಮಾಡಿರುತ್ತಾರೆ ಮರ್ಯಾದೆ ತೆಗೆದಿರುತ್ತಾರೆ. ನನ್ನ ಮೇಲೆ ಕೈಗಳಿಂದ ಹಲ್ಲೆ ಮಾಡಿ ಕೊರಳಿನಲ್ಲಿರುವ ತಾಳಿ ,ಚಿನ್ನದ ಗುಂಡು  ಮಣಿ ಮತ್ತು ಓಲೆಗಳನ್ನು ನನ್ನಿಂದ ಕಿತ್ತುಕೊಂಡು ನನ್ನ ತಂದೆ ಕೃಷ್ಣಪ್ಪ ಮತ್ತು ನನ್ನ ತಾಯಿ ಸುಶೀಲಮ್ಮ ಮೇಲೆ ಹಲ್ಲೆ ನಡೆಸಿರುತ್ತಾರೆ, ಊರಿನ ಗ್ರಾಮಸ್ಥರು ಜಗಳವನ್ನು ಬಿಡಿಸಿರುತ್ತಾರೆ, ನನ್ನನ್ನು ಕೊಲ್ಲುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ, ಅಂತಹ ಸಂಧರ್ಭದಲ್ಲಿ ಜಗಳ ಮಾಡುವ ಉದ್ದೇಶಕ್ಕಾಗಿ ನನ್ನ ನಾದಿನಿಯಾದ ಲಕ್ಷ್ಮೀ ಕೋಂ ನಾಗಭೂಷಣ ರವರ ಮನೆಗೆ ನುಗ್ಗಿ ನಾದಿನಿ ಮೇಲೆ ಹಲ್ಲೆ ನಡೆಸಿರುತ್ತಾರೆ,  ಮಹೇಶ ಮತ್ತು ಬೇಬಿ, ಜಗಳವನ್ನು ಬಿಡಿಸಿರುತ್ತಾರೆ,ನಾನು ಶಾಂತಿಯುತವಾಗಿ ಜೀವನ ನಡೆಸುವ ಸಲುವಾಗಿ ನನ್ನ ಗಂಡ ಮತ್ತು ಮಾವ ನನ್ನ ಮತ್ತು ನನ್ನ ತಂದೆ ತಾಯಿಯ ಮೇಲೆ ಮಾಡಿರುವ ಹಲ್ಲೆ ಮತ್ತು ದೈಹಿಕ ಮಾನಸಿಕ ಹಿಂಸೆ  ,ವರದಕ್ಷಿಣೆ ಕಿರುಕುಳ ನೀಡಿರುವುದರಿಂದ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಂಡು  ರಕ್ಷಣೆ ನೀಡ ಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ  ದಾಖಲಿಸಿರುತ್ತದೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  85/2017 ಕಲಂ 279, 337 ಐಪಿಸಿ

ದಿನಾಂಕ: 29-05-2017 ರಂದು  ಬೆಳಿಗ್ಗೆ08-15 ಗಂಟೆಗೆ ಈ ಕೇಸಿನ ಪಿರ್ಯಾದಿ ವೆಂಕಟರಮಣಪ್ಪ ವಿ ಬಿನ್ ವೆಂಕಟಪ್ಪ, 39 ವರ್ಷ, ನಾಯಕ ಜನಾಂಗ,   ಚಾಲಕ ವೃತ್ತಿ, ಗುಟ್ಟಪಾಲ್ಯ, ಬಾಗೆಪಲ್ಲಿ ತಾಲ್ಲೂಕ್, ತಿಮ್ಮಾಮಪಲ್ಲಿ ಹೋಬಳಿ, ಚಿಕ್ಕಬಳ್ಳಾಪುರ ಜಿಲ್ಲೆ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ವಿ ಆರ್.ಎಲ್.ಲಾಜಿಸ್ಟಿಕ್ ಲಿಮಿಟೆಡ್ ಕಂಪನಿಯಲ್ಲಿ ಕೆ.ಎ.25 ಪಿ.7053 ನೇ ಸ್ಕಾರ್ಪಿಯೋ ವಾಹನದ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,ದಿನಾಂಕ 28/05/2017 ರಂದು ವಿ ಆರ್.ಎಲ್.ಲಾಜಿಸ್ಟಿಕ್ ಲಿಮಿಟೆಡ್ ಜಿ.ಎಮ್.ರಾಧ, ವಿಜಯಾನಂದಯ್ಯ .ಎಸ್.ಎಸ್ ರವರೊಂದಿಗೆ ಖಾಸಗಿ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ತಿಪಟೂರಿಗೆ ಕೆ.ಎ 25 ಪಿ 7053  ನೇ ಕಂಪನಿಯ ವಾಹನದಲ್ಲಿ ನಾನು ಚಾಲನೆ ಮಾಡಿಕೊಂಡು ಎನ್. ಹೆಚ್ 206 ರಸ್ತೆಯ ಕರಡಿ ಗ್ರಾಮದ ಹತ್ತಿರ ರಾತ್ರಿ ಸುಮಾರು 7-50 ಗಂಟೆ ಸಮಯದಲ್ಲಿ ನಾನು ವಾಹನವನ್ನು ರಸ್ತೆಯ ಎಡಬದಿಯ ಭಾಗದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ,ತಿಪಟೂರು ಕಡೆಯಿಂದ ಒಂದು ಆಟೋ ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾವು ರಸ್ತೆಯ ಪುಟ್‌ಪಾತ್ ರಸ್ತೆಗೆ ಇಳಿಸಿದರೂ  ಸಹ ನಮ್ಮ ಕೆ.ಎ 25 ಪಿ 7053  ನೇ ವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಇದರಿಂದ ನಮ್ಮ ವಾಹನದ ಬಲಭಾಗ ಮತ್ತು ಮುಂದಿನ ಡೋರ್‌ ಜಖಂಗೊಂಡಿರುತ್ತೆ, ಆಟೋ ಸಹ ಜಖಂಗೊಂಡಿದ್ದು, ಈ ಆಟೋ ನಂಬರ್ ನೋಡಲಾಗಿ ಕೆ.ಎ 02 ಎಇ 3846 ಆಗಿರುತ್ತದೆ, ಆಟೋದಲ್ಲಿದ್ದ ಪ್ರಾಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಆಟೋ ಚಾಲಕ ಮತ್ತು ಆಟೋದಲ್ಲಿದ್ದ ಗಾಯಗೊಂಡ ಪ್ರಯಾಣಿಕರ ಹೆಸರು ವಿಳಾಸ ಗೊತ್ತಿರುವುದದಿಲ್ಲ, ನಮ್ಮ ವಾಹನದಲ್ಲಿದ್ದವರಿಗೆ ಯಾರಿಗೂ ಗಾಯಗಳಾಗಿರವುದಿಲ್ಲ, ಮೇಲ್ಕಂಡ ಎರಡು ವಾಹನಗಳು ಸ್ಥಳದಲ್ಲಿ ಇರುತ್ತವೆ, ಈ ಅಪಘಾತಕ್ಕೆ ಕಾರಣವಾದ ಕೆ.ಎ 02 ಎಇ 3846 ನೇ ಆಟೋಚಾಲಕನ ಮೇಲೆ ಕಾನೂನು ರೀತ್ಯಾಕ್ರಮ ಜರುಗಿಸಿ ಎಂತಾ ನೀಡಿದ  ದೂರಿನ ಅಂಶವಾಗಿರುತ್ತೆMonday, 29 May 2017

Crime incidents 29-05-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  56/2017    ಕಲಂ: 4(1)4(1A) 21 MMDR ACT rW 379IPC

ದಿನಾಂಕ:28/05/2017 ರಂದು ಬೆಳಿಗ್ಗೆ 11:45 ಗಂಟೆಗೆ  ವೈ ಎನ್ ಹೊಸಕೋಟೆ ಪೋಲಿಸ್ ಠಾಣೆಯ  ಪಿ.ಎಸ್ ಐ ರವರಾದ ಅಬ್ದುಲ್ ನಬಿಸಾಬ್ ರವರು ನೀಡಿದ ವರದಿ ಅಂಶವೇನೆಂದರೆ ನಾನು ಈ ದಿನ ಬೆಳಿಗ್ಗೆ 10:30 ಗಂಟೆಯಲ್ಲಿ ವೈ ಎನ್ ಹೊಸಕೋಟೆಯ ನಮ್ಮ ಪೋಲೀಸ್ ಕ್ವಾಟ್ರಸ್ ಕಡೆ ಯಿಂದ ಇಲಾಖಾ ಜೀಪ್ ನಂ ಕೆ.ಎ-06 ಜಿ.383 ರಲ್ಲಿ ನಾನು ಮತ್ತು ಜೀಪ್ ಚಾಲಕ ಹೆಚ್.ಜಿ:664 ವೆಂಕಟೇಶ, ಹಾಗೂ ಸಿಬ್ಬಂದಿಗಳಾದ ಪಿ.ಸಿ:307 ಬಸವರಾಜು ಸಜ್ಜನ್, ಪಿ.ಸಿ: 663 ಸುನೀಲ್ ಮಳ್ಳಿ ರವರು ಪೋಲಿಸ್ ಠಾಣೆ ಕಡೆಗೆ ಬರುತ್ತಿರುವಾಗ್ಗೆ ವೈ ಎನ್ ಹೊಸಕೋಟೆ ಸಂತೆ ಮೈದಾನದ ರಸ್ತೆಯಲ್ಲಿ ಟ್ರಾಕ್ಟರ್ ನಲ್ಲಿ ಚಾಲಕ ಮರಳು ತುಂಬಿಕೊಂಡು ಬರುತ್ತಿದ್ದುದ್ದನ್ನು ಕಂಡ ನಾವು ಟ್ರಾಕ್ಟರ್  ನಿಲ್ಲಿಸಿ ನೋಡಲಾಗಿ ಮಹೀಂದ್ರಾ ಟ್ರಾಕ್ಟರ್ ಟ್ರೇಲರ್ ಆಗಿದ್ದು ಟ್ರೇಲರ್ ತುಂಬ ಮರಳು ತುಂಬಿತ್ತು, ಟ್ರಾಕ್ಟರ್ ನಂ: ಎ.ಪಿ.-04 ವೈ-4550 ಆಗಿದ್ದು, ಟ್ರೇಲರ್ ಗೆ  ನಂಬರ್ ಇರುವುದಿಲ್ಲ, ಚಾಲಕನನ್ನು ವಿಚಾರ ಮಾಡಲಾಗಿ ಕರಿಯಣ್ಣ ಬಿನ್ ಈರಣ್ಣ, 20 ವರ್ಷ, ಕುರುಬ ಜನಾಂಗ, ಟ್ರಾಕ್ಟರ್ ಡ್ರೈವರ್ ಕೆಲಸ, ಚಿಕ್ಕಜಾಲೋಡು ಎಂತ ತಿಳಿಸಿದ ಆತನನ್ನು ಮರಳು ಸಾಗಿಸಲು ಯಾವುದಾದರೂ ಅಧೀಕೃತ ಪರವಾನಿಗೆ ಇದೆಯೇ? ಎಂದು ಕೇಳಲಾಗಿ ಯಾವುದೇ ಅಧೀಕೃತ ಪರವಾನಿಗೆ ಇಲ್ಲವೆಂದು ತಿಳಿಸಿದ ಮರಳನ್ನು ಸಾಗಿಸಲು ತಿಳಿಸಿದವರಾರು ಎಂದು  ಕೇಳಲಾಗಿ ನಮ್ಮೂರಿನ ನಾಗರಾಜು ರವರು ಮರಳು ತುಂಬಿಕೊಂಡು ಬರಲು ತಿಳಿಸಿದ್ದು ಅದರಂತೆ ನಾನು ನಮ್ಮೂರ ಹತ್ತಿರದ ಸರ್ಕಾರಿ ಹಳ್ಳದಲ್ಲಿ ಮರಳು ತುಂಬಿ ಸಾಗಿಸುತ್ತಿದ್ದೆನೆಂದು ತಿಳಿಸಿದ , ನಂತರ ನಾವು ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಸ್ಥಳದಲ್ಲಿ ಬೆಳಿಗ್ಗೆ 10;30 ಗಂಟೆೆಯಿಂದ 11;30 ಗಂಟೆ ವರೆವಿಗೆ ಪಂಚನಾಮೆ ಕ್ರಮ ಜರುಗಿಸಲಾಗಿ ಸ್ಥಳದಲ್ಲಿದ್ದ ಟ್ರಾಕ್ಟರ್ ಚಾಲಕ ಸ್ಥಳದಿಂದ ಓಡಿ ಹೋದನು , ನಂತರ ಮರಳು ತುಂಬಿದ ಟ್ರಾಕ್ಟರ್ ನ್ನು  ವಶಕ್ಕೆ ಪಡೆದು ಠಾಣೆಗೆ ತಂದು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಚಾಲಕ ಮತ್ತು ಮರಳು ತುಂಬಿಕೊಂಡು ಬರಲು ತಿಳಿಸಿದವರ ಮೆಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ವರದಿ ಯನ್ನು ಪಡೆದು ಕೇಸು ದಾಖಲಿಸಿರುತ್ತದೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.54/2017, ಕಲಂ: 87 ಕೆ.ಪಿ.ಆಕ್ಟ್‌.

ದಿನಾಂಕ:24/05/2017 ರಂದು ಮದ್ಯಾಹ್ನ ಠಾಣಾ ಎ.ಎಸ್.ಐ-ಶಿವಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ನಾನು ದಿನಾಂಕ:24/05/2017 ರಂದು ಮದ್ಯಾಹ್ನ 01:30 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದು ಕ್ಯಾತಗೊಂಡನಹಳ್ಳಿ ಗ್ರಾಮದ ಚನ್ನಸೋಮಯ್ಯ ನವರ ಜಮೀನಿನ ಹತ್ತಿರವಿರುವ ಸಾರ್ವಜನಿಕ ಹಳ್ಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಸಿಬ್ಬಂದಿಯೊಂದಿಗೆ ಕ್ಯಾತಗೊಂಡನಹಳ್ಳಿ ಗ್ರಾಮಕ್ಕೆ ಹೋಗಿ ಕ್ಯಾತಗೊಂಡನಹಳ್ಳಿ ಬಸ್ಸ್ ಸ್ಟಾಪ್ ಹತ್ತಿರ ನಿಂತಿದ್ದ ಪಂಚಾಯ್ತುದಾರರನ್ನು ಜೊತೆಯಲ್ಲಿ ಕರೆದುಕೊಂಡು ಮೇಲ್ಕಂಡ ಚನ್ನಸೋಮಯ್ಯನವರ ಜಮೀನಿನ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಚನ್ನಸೋಮಯ್ಯನವರ ಜಮೀನಿನ ಹತ್ತಿರದ ಸಾರ್ವಜನಿಕ ಹಳ್ಳದಲ್ಲಿ ಜನರು ಗುಂಡಾಕಾರವಾಗಿ ಕುಳಿತು ಒಳಗೆ-ಹೊರಗೆ ಎಂತ ಜೋರಾಗಿ ಹೇಳುತ್ತಾ ಅಂದರ್-ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿದ್ದುದ್ದನ್ನು ಖಚಿತಪಡಿಸಿಕೊಂಡು ಜೂಜಾಟವಾಡುತ್ತಿದ್ದ ಆಸಾಮಿಗಳ ಮೇಲೆ ಸಿಬ್ಬಂದಿಯೊಂದಿಗೆ ದಾಳಿಮಾಡಿ ಜೂಜಾಟದಲ್ಲಿ ತೊಡಗಿದ್ದ ಆಸಾಮಿಗಳನ್ನು ಹಿಡಿದುಕೊಂಡು ವಿಚಾರ  ಮಾಡಿ  ಹೆಸರು  ವಿಳಾಸ  ತಿಳಿಯಲಾಗಿ 1)ನಾಗರಾಜು  ಬಿನ್ ಲೇ||ಸುಬ್ಬರಾಯಪ್ಪ, 45 ವರ್ಷ, ಭೋವಿ ಜನಾಂಗ, ಜಿರಾಯ್ತಿ ಕೆಲಸ, ಕ್ಯಾತಗೊಂಡನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು, 2)ನಟರಾಜು  ಬಿನ್ ಲೇ|| ರಾಜೇಂದ್ರಪ್ಪ, 55 ವರ್ಷ, ಲಿಂಗಾಯ್ತರು, ಜಿರಾಯ್ತಿ ಕೆಲಸ, ಕ್ಯಾತಗೊಂಡನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು, 3)ರವಿಕುಮಾರ್ ಬಿನ್ ಲೇ|| ನರಸಿಂಹಯ್ಯ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ಕ್ಯಾತಗೊಂಡನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು, 4)ನರಸಿಂಹರೆಡ್ಡಿ ಬಿನ್  ಲೇ||ನರಸರೆಡ್ಡಿ, 50ವರ್ಷ, ರೆಡ್ಡಿ ಜನಾಂಗ, ಜಿರಾಯ್ತಿ ಕೆಲಸ, ನಾರಪ್ಪನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು, 5)ವೆಂಕಟೇಶಪ್ಪ ಬಿನ್ ಲೇ|| ದಾಸಪ್ಪ,70 ವರ್ಷ,ಬೋವಿ ಜನಾಂಗ, ಕೂಲಿ ಕೆಲಸ, ಚಂದ್ರಬಾವಿ  ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು, 6)ವೆಂಕಟೇಶ್ ಬಿನ್ ತಿಮ್ಮರಾಜು, 39 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಕ್ಯಾತಗೊಂಡನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು, 7)ಬಸವರಾಜು ಬಿನ್ ಲೇ|| ತಿಪ್ಪೇಸ್ವಾಮಿ, 60 ವರ್ಷ, ಲಿಂಗಾಯ್ತರು, ಜಿರಾಯ್ತಿಕೆಲಸ, ಕ್ಯಾತಗೊಂಡನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು ಎಂತ ತಿಳಿಸಿದರು.

ನಂತರ ಅಖಾಡದಲ್ಲಿ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 1)2140/-ರೂ ನಗದು ಹಣ,  2)52 ಇಸ್ಪೀಟ್ ಎಲೆಗಳು, 3)ಎರಡು ಹಳೆಯ ನ್ಯೂಸ್ ಪೇಪರ್ ಇವುಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 03-00 ಗಂಟೆಯಿಂದ 03:45 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಳ್ಳಲಾಯಿತು. ನಂತರ ಜೂಜಾಟದಲ್ಲಿ ತೊಡಗಿ ಸ್ಥಳದಲ್ಲಿ ಸಿಕ್ಕಿಬಿದ್ದ ಆಸಾಮಿಗಳಿಗೆ ಕರೆ ಮಾಡಿದಾಗ ಠಾಣೆಗಾಗಲಿ ಅಥವಾ ನ್ಯಾಯಾಲಯಕ್ಕಾಗಲಿ ಹಾಜರಾಗುವಂತೆ ಸೂಕ್ತ ತಿಳುವಳಿಕೆ ನೀಡಿ ಸ್ಥಳದಿಂದ ಕಳುಹಿಸಿಕೊಟ್ಟಿರುತ್ತೆ.

ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಇಸ್ಟೀಟ್ ಜೂಜಾಟದಲ್ಲಿ ತೊಡಗಿದ್ದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ   ಕ್ರಮ ಜರುಗಿಸಲು ಈ ಮೂಲಕ ನಿಮಗೆ ಸೂಚಿಸಿ, ಇದರೊಂದಿಗೆ ಸ್ಥಳ ಪಂಚನಾಮೆ ಮತ್ತು ಕೃತ್ಯ ನಡೆದ ಸ್ಥಳದಲ್ಲಿ ವಶಪಡಿಸಿಕೊಂಡ ಮೇಲ್ಕಂಡ ಮಾಲುಗಳನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆಂತ ನೀಡಿದ ಜ್ಞಾಪನದ ಮೇರೆಗೆ ಠಾಣಾ ಎನ್‌.ಸಿ.ಆರ್‌.GSC.No. PO1657170600064/2017 ರಲ್ಲಿ ನೊಂದಾಯಿಸಿಕೊಂಡಿರುತ್ತೆ.

ಸದರಿ ಎನ್.ಸಿ.ಆರ್. ವಿಷಯವು ಅಸಂಜ್ಞೇಯ ಅಪರಾಧವಾಗಿರುವುದರಿಂದ ಮುಂದಿನ ಕ್ರಮ ಜರುಗಿಸಲು  ಘನ ನ್ಯಾಯಾಲಯವು ಸದರಿ ಅಪರಾಧವನ್ನು ಸಂಜ್ಞೇಯ ಅಪರಾಧವಾಗಿ ಪರಿಗಣಿಸಿ ಕಲಂ:87 ಕೆ.ಪಿ.ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಬೇಕೆಂದು ಘನ ನ್ಯಾಯಾಲಯದಲ್ಲಿ ಕೋರಿ ಮನವಿಯನ್ನು ಸಲ್ಲಿಸಿಕೊಂಡಿದ್ದು, ಮಧುಗಿರಿ ಘನ ಎ.ಸಿ.ಜೆ.(ಜೆ.ಡಿ) & ಜೆ.ಎಂ.ಎಫ್‌.ಸಿ. ನ್ಯಾಯಾಲಯವು ಮೇಲ್ಕಂಡ ಎನ್‌.ಸಿ.ಆರ್. ವಿಷಯನ್ನು ಸಂಜ್ಞೆಯ ಅಪರಾಧವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಿದ್ದನ್ನು ಠಾಣಾ    ಹೆಚ್.ಸಿ-79 ರವರು ಪಡೆದುಕೊಂಡು ದಿನಾಂಕ:26/05/2017 ರಂದು ಸಂಜೆ 05:30 ಗಂಟೆಗೆ ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

 


Crime incidents 28-05-17

ಮಿಡಿಗೇಶಿ ಪೊಲೀಸ್‌ ಠಾಣೆ  ಯು.ಡಿ ಆರ್ ನಂ 07/2017 ಕಲಂ 174 ಸಿ.ಆರ್. ಪಿ.  ಸಿ.

ದಿನಾಂಕ:27/05/2017 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿ   ತಿಪ್ಪೇಸ್ವಾಮಿ ಬಿನ್ ನಾರಾಯಣಪ್ಪ,   30 ವರ್ಷ, ಹಳೇ ಇಟಕಲೋಟಿ   ಗ್ರಾಮ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ತಂದೆ ನಾರಾಯಣಪ್ಪನವರಿಗೆ ಸುಮಾರು  75 ವರ್ಷ ವಯಸ್ಸಾಗಿದ್ದು ಈಗ್ಗೆ 2 ವರ್ಷದಿಂದ ಹೊಟ್ಟೆನೋವು ಬರುತ್ತಿದ್ದು ನಾನು ಅವರನ್ನು ಕೆಲವು ಆಸ್ಪತ್ರೆಗಳಲ್ಲಿ  ಮತ್ತು ನಾಟಿ ವೈಧ್ಯರಲ್ಲಿ ತೋರಿಸಿ ಚಿಕಿತ್ಸೆ  ಕೊಡಿಸಿದ್ದೇನು. ಆದರೂ ನಮ್ಮ ತಂದೆಗೆ ಬರುತ್ತಿದ್ದ ಹೊಟ್ಟೆನೋವು ವಾಸಿಯಾಗಿರಲಿಲ್ಲ. ಈಗಿರುವಾಗ ನಿನ್ನೆ ದಿನ ಅಂದರೆ ದಿನಾಂಕ:26/05/2017 ರಂದು ಮದ್ಯಾಹ್ನ   ನಮ್ಮ ತಂದೆಗೆ  ಹೊಟ್ಟೆ ನೋವು ಬಂದಿದ್ದು ಹೊಟ್ಟೆನೋವಿನ ಬಾದೆ ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ಅದೇ  ದಿನ ಮದ್ಯಾಹ್ನ 02:00 ಗಂಟೆಯಿಂದ ಸಂಜೆ 06:00 ಗಂಟೆಯ ಮದ್ಯೆ ಯಾವುದೋ ಸಮಯದಲ್ಲಿ ನಮ್ಮ ಬಾಬ್ತು ಜಮೀನಿನಲ್ಲ್ಲಿರುವ  ಹೊಂಗೆ ಮರದ ಕೊಂಬೆಗೆ ಪಂಚೆಯಿಂದ  ತನ್ಮೂಲಕ ತಾನೇ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆ  ಇವರ ಸಾವಿನಲ್ಲಿ ಬೇರಾವ ಅನುಮಾನ ಇರುವುದಿಲ್ಲ ಎಂತ ಇತ್ಯಾಯಾಗಿ ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ,Saturday, 27 May 2017

Crime Incidents 27-05-17

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ;119/2017 ಕಲಂ; ಕಲಂ: 454,380 ಐ.ಪಿ.ಸಿ

ದಿನಾಂಕ: 26/05/2017 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ಟಿ.ಎಸ್ ಕಲ್ಲೇಶಮೂರ್ತಿ ಬಿನ್ ಶಿವನಂಜಪ್ಪ 36 ವರ್ಷ, ಲಿಂಗಾಯಿತರು, ವ್ಯಾಪಾರ, ದೊಡ್ಡಯ್ಯನಪಾಳ್ಯ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ತಿಪಟೂರು ಟೌನ್ ಬೆಲ್ಲದ ಪೇಟೆಯಲ್ಲಿ ಚಿಲ್ಲರೆ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಮೇಲ್ಕಂಡ ವಿಳಾಸದಲ್ಲಿ ಸಂಸಾರ ಸಮೇತ ವಾಸವಾಗಿರುತ್ತೇನೆ. ನಾನು ದಿನಾಂಕ: 25/05/2017 ರಂದು ಬೆಳಿಗ್ಗೆ 06-30 ಗಂಟೆಗೆ ವ್ಯಾಪಾರಕ್ಕೆ ಅಂಗಡಿಗೆ ಹೋಗಿದ್ದು, ನನ್ನ ಪತ್ನಿಯಾದ ಉಷಾ ರವರು ಮಧ್ಯಾಹ್ನ 01-30 ಗಂಟೆಯಲ್ಲಿ ನನಗೆ ಫೋನ್ ಮಾಡಿ ಮನೆಗೆ ಬೀಗ ಹಾಕಿಕೊಂಡು ರಂಗಾಪುರ ಮಠಕ್ಕೆ ಹೋಗಿದ್ದು, ನಂತರ ನನ್ನ ಪತ್ನಿ ಮಠದಿಂದ ವಾಪಸ್ ಬಂದು ಅಂಗಡಿಯ ಬಳಿ ಇರುವಾಗ ಸಂಜೆ 06-00 ಗಂಟೆಯ ಸಮಯದಲ್ಲಿ ನಮ್ಮ ಮನೆಯ ಬಳಿ ಇರುವ ಶಿವಕುಮಾರ್ ರವರು ನನಗೆ ಫೋನ್ ಮಾಡಿ ನಿಮ್ಮ ಮನೆಯ ಬಾಗಿಲು ತೆರೆದಿದೆ ಎಂದು ತಿಳಿಸಿದರು. ಆಗ ನಾನು ಮತ್ತು ನನ್ನ ಪತ್ನಿ ಇಬ್ಬರು ಮನೆಯ ಬಳಿ ಬಂದು ನೋಡಲಾಗಿ ಮಧ್ಯಾಹ್ನ 01-30 ಗಂಟೆಯಿಂದ ಸಂಜೆ 06-00 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಯಾವುದೋ ಆಯುಧದಿಂದ ನಮ್ಮ ಮನೆಯ ಬಾಗಿಲನ್ನು ಮೀಟಿ ಒಳ ಪ್ರವೇಶ ಮಾಡಿ ರೂಮಿನ ವಾಲ್ಡರ್ ನಲ್ಲಿ ಇಟ್ಟಿದ್ದ 18 ಗ್ರಾಂ ತೂಕದ 4 ಜೊತೆ ಓಲೆಗಳು ಮತ್ತು ಬೆಳ್ಳಿ ಕೈಕಡಗ, ಹಾಗೂ 1 ಮೊಬೈಲ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ವಸ್ತುಗಳ ಅಂದಾಜು ಬೆಲೆ ಸುಮಾರು 23000/- ರೂಗಾಳಗಿದ್ದು, ಸದರಿ ವಸ್ತು ಗಳನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆಮಾಡಿ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿರುವ ದೂರಿನ ಅಂಶವಾಗಿರುತ್ತೆ.

 

 Friday, 26 May 2017

Crime Incidents 26-05-17

ಹೊಸಬಡಾವಣೆ ಪೊಲೀಸ್ ಠಾಣಾ  ಮೊ.ಸಂ 64/2017 u/s 406, 420 R/W 34 IPC And 67, 68 IT Act

ದಿನಾಂಕ : 25-05-2017 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿ ಶ್ರೀಮತಿ ರಾಧಲಕ್ಷ್ಮಿ ಕೋಂ ಕುಮಾರ ಸ್ವಾಮಿ, ಅದಿತಿ ವೈಭವ ನಿಲಯ, 1ನೇ ಮುಖ್ಯ ರಸ್ತೆ, 3ನೇ ಕ್ರಾಸ್, ಮಹಾಲಕ್ಷ್ಮಿ ನಗರ, ಬಟವಾಡಿ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಮನೆಯ ಮೊದಲನೇ ಮಹಡಿಯಲ್ಲಿ ಪ್ರವೀಣ್ ಹಾಗೂ ಶ್ವೇತಾ ಎಂಬ ದಂಪತಿಗಳು ಬಾಡಿಗೆಗೆ ವಾಸವಾಗಿದ್ದು ಇವರು ಪಿರ್ಯಾದುದಾರರ ಮನೆಯವರೊಂದಿಗೆ ಅನ್ಯೋನ್ಯವಾಗಿ  ನಡೆದುಕೊಂಡು ನಂಬಿಸಿ ಪಿರ್ಯಾದುದಾರರಿಗೆ ಗೊತ್ತಾಗದ ರೀತಿ ಅವರ ಬಾಬ್ತು ಎಸ್.ಬಿ.ಎಂ ಬ್ಯಾಂಕಿನ ಎಟಿಎಂ ಕಾರ್ಡ್‌ ಹಾಗೂ ಮೈಸೂರು ವಿಜಯ ಬ್ಯಾಂಕಿನ ಎಟಿಎಂ ಕಾರ್ಡ್‌ಗಳನ್ನು ತೆಗೆದುಕೊಂಡು ಪಿರ್ಯಾದಿಗೆ ಅರಿವಿಗೆ ಬಾರದೆ ದಿನಾಂಕ : 27-02-2017 ರಿಂದ ಇಲ್ಲಿಯವರೆಗೆ ತುಮಕೂರು ಹಾಗೂ  ಬೆಂಗಳೂರಿನ ವಿವಿಧ  ಎಟಿಎಂಗಳಲ್ಲಿ ಹಣವನ್ನು ಡ್ರಾ ಮಾಡಿಕೊಂಡಿರುತ್ತಾರೆ  ಹಾಗೂ ಶಾಪಿಂಗ್ ಮಾಲ್‌ಗಳಲ್ಲಿ ಪಿರ್ಯಾದಿ ಎಟಿಎಂ ಕಾರ್ಡ್‌ ಗಳನ್ನು ಬಳಸಿ ವಸ್ತುಗಳನ್ನು ಖರೀದಿಸಿ ಸುಮಾರು 3,34,213/-ರೂಗಳನ್ನು ಸ್ವಂತಕ್ಕೆ ಬಳಸಿಕೊಂಡು ಪಿರ್ಯಾದಿರವರಿಗೆ ಮೋಸ ಮಾಡಿರುತ್ತಾರೆ ಈ ಬಗ್ಗೆ ಮೇಲ್ಕಂಡ ಪ್ರವೀಣ್ ಹಾಗೂ ಶ್ವೇತಾ ರವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತದೆ.

 

ತಿಪಟೂರು  ಗ್ರಾಮಾಂತರ ಪೊಲೀಸ್ ಠಾಣಾ  ಮೊ.ನಂ 83/17, ಕಲಂ 379 ಐಪಿಸಿ

ದಿನಾಂಕ 25-05-17 ರಂದು  ಮಧ್ಯಾಹ್ನ 12-45 ಗಂಟೆಗೆ  ಈ ಕೇಸಿನ  ಪಿರ್ಯಾದಿ ನಂಜುಂಡಯ್ಯ  ಬಿನ್  ಮುನಿಯಪ್ಪ, 55 ವರ್ಷ, ತೆಲುಗು ಜಂಗಮರು, ಕರಡಿ- ರಂಗನಾಥ ಪುರ, ಕಸಬಾ ಹೋಬಳಿ, ರವರು ಠಾಣೆಗೆ ಹಾಜರಾಗಿ ನೀಡಿದ  ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ ನಾನು ಹಾಲಿ ರಂಗನಾಥಪುರ ಗ್ರಾಮದಲ್ಲಿ ವಾಸವಿದ್ದು  ನನಗೆ   ಬೊಮ್ಮೇನಹಳ್ಳಿ  ಗ್ರಾಮದ  ಹತ್ತಿರ  ಜಮೀನಿದ್ದು,  ಸದರಿ ಜಮೀನಿನಲ್ಲಿ ಒಂದು ತೋಟದ ಮನೆಯಿದ್ದು  ಆ ತೋಟದ ಮನೆಯಿಂದ  ನಮ್ಮ ಗ್ರಾಮಕ್ಕೆ  ಓಡಾಡಲು KA-44, L-2532 ನೇ ಹೊಂಡಾ ಡ್ರೀಮ್ ಯುಗ  ಎಂಬ  ಬೈಕ್ ಇದ್ದು,  ಈ ಬೈಕ್ ನ್ನು  ನಮ್ಮ  ತೋಟದ  ಮನೆಯ  ಹೊರಗಡೆ  ನಿಲ್ಲಿಸುತ್ತಿದ್ದೆ  ಅದರಂತೆ  ದಿನಾಂಕ:29-04-17  ರಂದು ರಾತ್ರಿ-07-00 ಗಂಟೆ ಸಮಯದಲ್ಲಿ  ನನ್ನ ಬಾಬ್ತು  KA-44, L-2532 ನೇ  ಹೊಂಡಾ  ಕಂಪನಿಯ ಡ್ರಿಮ್  ಯುಗ  ಬೈಕ್ ನ್ನು ನಿಲ್ಲಿಸಿ   ರಂಗನಾಥಪುರಕ್ಕೆ  ಹೋಗಿದ್ದು  ಮರುದಿನ ಅಂದರೆ   ದಿ:30-04-17 ರಂದು  ಬೆಳಿಗ್ಗೆ 08-00 ಗಂಟೆ ಸಮಯದಲ್ಲಿ   ತೋಟದ ಮನೆಯ  ಹತ್ತಿರ  ಹೋಗಿ ನೋಡಲಾಗಿ  ನನ್ನ  ಬೈಕ್  ಕಾಣಿಸಲಿಲ್ಲ, ಯಾರೋ ಪರಿಚಯಸ್ಥರು ನನ್ನ  ಬಾಬ್ತು KA-44, L-2532 ನೇ ಹೊಂಡಾ ಡ್ರೀಮ್ ಯುಗ  ಬೈಕ್  ಅನ್ನು ತೆಗೆದುಕೊಂಡು  ಹೋಗಿರಬಹುದೆಂದು ಇದುವರೆಗೂ ಎಲ್ಲಾ ಕಡೆ  ಹುಡುಕಾಡಿ  ಪತ್ತೆಯಾಗದ ಕಾರಣ,ಯಾರೋ ಕಳ್ಳರು ಬೈಕ್ ಅನ್ನು ಕಳವು ಮಾಡಿರುತ್ತಾರೆ,  ಬೆಲೆ25,000/- ರೂ ಆಗಿರುತ್ತದೆ.ಆದ್ದರಿಂದ   ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ,  ನನ್ನ  ಮೇಲ್ಕಂಡ ಬೈಕ್ ಅನ್ನು  ಕಳ್ಳತನ ಮಾಡಿರುವ  ಕಳ್ಳರನ್ನು ಪತ್ತೆ ಹಚ್ಚಿ ನನ್ನ  ಬೈಕ್ ಅನ್ನು  ಪತ್ತೆ  ಮಾಡಿಕೊಡಬೇಕಂತ  ದೂರಿನ   ಮೇರೆಗೆ ಪ್ರಕರಣ ದಾಖಲಿಸಿರುತ್ತೆ

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ.107/2017 ಕಲಂ.279, 337 IPC.

ದಿನಾಂಕ-25-05-2017 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಪಿರ್ಯಾದಿ ನಾಗರಾಜು ಡಿ.ಸಿ ಬಿನ್‌ ಲೇಟ್‌ ಚನ್ನಪ್ಪ, 33 ವರ್ಷ, ವಕ್ಕಲಿಗರು, ಜಿರಾಯ್ತಿ, ದೊಡ್ಡಮಾವತ್ತೂರು ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-22-05-2017 ರಂದು ಬೆಳಿಗ್ಗೆ 5-45 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ ಚಿಕ್ಕಮ್ಮ ಸಿದ್ದಲಿಂಗಮ್ಮ ಕೋಂ ಕೆಂಪಯ್ಯ ರವರೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಡೈರಿಗೆ ಹಾಲನ್ನು ಹಾಕಲು ಹೋಗುತ್ತಿರುವಾಗ್ಗೆ ಕುಣಿಗಲ್‌ ಕಡೆಯಿಂದ  ಹುಲಿಯೂರುದುರ್ಗ ಕಡೆಗೆ ಬಂದ AP-02-AQ-0558 ನೇ ಟಯೋಟಾ ಇನ್ನೋವ ಕಾರಿನ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ನಮ್ಮ ಚಿಕ್ಕಮ್ಮ ರವರಿಗೆ ಡಿಕ್ಕಿಪಡಿಸಿ ಪರಾರಿಯಾಗಿರುತ್ತಾರೆ. ನಂತರ 108 ಆಂಬುಲೆನ್ಸ್‌ ಗೆ ಕರೆಮಾಡಿ ನಮ್ಮ ಚಿಕ್ಕಮ್ಮ ರವರನ್ನು ನಾನು ಮತ್ತು ಅಲ್ಲೇ ಬರುತ್ತಿದ್ದ ಡಿ.ಎಸ್‌ ಶಶಿಧರ ಬಿನ್‌ ಲೇಟ್‌ ಎ.ಸಿ ಶಂಕರಯ್ಯ ಎಂಬುವವರು ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಿ ನಂತರ ಠಾಣೆಗೆ ಹಾಜರಾಗಿ ದೂರು ನೀಡುವಲ್ಲಿ ತಡವಾಗಿದ್ದು, ಅಪಘಾತಪಡಿಸಿದ ಇನ್ನೋವಾ ಕಾರಿನ ಚಾಲಕ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರತ್ತೆ.Thursday, 25 May 2017

Crime Incidents 25-05-17

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.06/2017, ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ:24/05/2017 ರಂದು ಮದ್ಯಾಹ್ನ 02:00 ಗಂಟೆಯಲ್ಲಿ ಪಿರ್ಯಾದಿ ಚಿಕ್ಕವೀರಭದ್ರಯ್ಯ.ಪಿ.ವಿ. ಬಿನ್ ವೀರಣ್ಣ, 40 ವರ್ಷ, ಲಿಂಗಾಯ್ತರು, ಜಿರಾಯ್ತಿ, ಪುಲುಮಾಚಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ಗ್ರಾಮದ ನಮ್ಮ ಸಂಬಂಧಿಯಾದ ವೀರಭದ್ರಯ್ಯ ಬಿನ್ ಈರಣ್ಣ, 36 ವರ್ಷ, ರವರಿಗೆ  ಈಗ್ಗೆ ಸುಮಾರು ಒಂದು ವರ್ಷದಿಂದ ಹೊಟ್ಟೆನೋವು ಬರುತ್ತಿದ್ದು ಈ ಬಗ್ಗೆ ಆಗಾಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಈಗಿರುವಾಗ ದಿನಾಂಕ:24/05/2017 ರಂದು  ಬೆಳಿಗ್ಗೆ  ಸುಮಾರು 10:00 ಗಂಟೆ ಸಮಯದಲ್ಲಿ  ಹೊಟ್ಟೆನೋವಿನ ಬಾದೆ ತಾಳಲಾರದೆ  ಯಾವುದೋ  ವಿಷ  ಸೇವನೆ ಮಾಡಿದ್ದವನನ್ನು ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು  ಹೋಗುತ್ತಿರುವಾಗ ಮಾರ್ಗ ಮದ್ಯೆ ಮೃತಪಟ್ಟಿರುತ್ತಾರೆ. ಮೃತನ ಸಾವಿನಲ್ಲಿ  ಬೇರೆ ಯಾವುದೇ ಅನುಮಾನವಿರುವುದಿಲ್ಲ. ಆದ್ದರಿಂದ ತಾವು ಸ್ಥಳಕ್ಕೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಪಿರ್ಯಾದು ಅಂಶದ ಮೇರೆಗೆ ಪ್ರಕರಣ ದಾಖಲಿಸಿದೆ.

 

ಪಾವಗಡ ಪೊಲೀಸ್ ಠಾಣಾ ಮೊ,ನಂ 123/2017 ಕಲಂ 279,304(A) IPC R/w 134(A&B) IMV Act

ದಿನಾಂಕ;24/05/2017 ರಂದು ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಪಾವಗಡ ಟೌನ್, ಗಾಂಧಿನಗರ ವಾಸಿಯಾದ P.S ನರಸಿಂಹಮೂರ್ತಿ ಬಿನ್ ಸೀಬಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:24/05/2017 ರಂದು ಬೆಳಿಗ್ಗೆ 6-15 ಗಂಟೆಯಲ್ಲಿ ನನ್ನ ಭಾವನಾದ ನಾಗೇಶನು ನನಗೆ ಪೋನ್ ಮಾಡಿ ಪಾವಗಡ ತಾಲ್ಲೊಕಿನ  ರಂಗ ಸಮುದ್ರದಲ್ಲಿ ಹುಣಸೆ ಮರಗಳನ್ನು ತೆಗೆದುಕೊಳ್ಳಬೇಕಿರುವುದರಿಂದ ಪಾವಗಡಕ್ಕೆ ಬರುತ್ತಿದ್ದೇನೆ ಎಂತ ತಿಳಿಸಿದ್ದು, ನಂತರ ಇದೇ ದಿನ ಬೆಳಿಗ್ಗೆ 7-55 ಗಂಟೆ ಸುಮಾರಿನಲ್ಲಿ ನಮ್ಮ ಭಾವನ ಮೊಬೈಲ್ ನಿಂದ ಲಕ್ಕಣ್ಣ ಎಂಬುವರು ನನಗೆ ಪೋನ್ ಮಾಡಿ ರಾಜವಂತಿ ಜನತಾ ಕಾಲೋನಿ ಬಳಿ ನಾಗೇಶನಿಗೆ ಆಕ್ಸಿಡೆಂಟ್ ಆಗಿದೆ ಎಂತ ತಿಳಿಸಿದನು, ಕೂಡಲೇ ನಾನು ನನ್ನ ಸ್ನೇಹಿತನಾದ ನಟರಾಜು ಮತ್ತು ನವೀನ್ ರವರೊಂದಿಗೆ ರಾಜವಂತಿ ಜನತಾ ಕಾಲೋನಿಯ ಬಳಿ ಪಾವಗಡ - ತುಮಕೂರು  ಮುಖ್ಯ ರಸ್ತೆಯ ಅಪಘಾತ ಸ್ಥಳಕ್ಕೆ ಹೊಗಿ ನೊಡಿಲಾಗಿ ನಮ್ಮ ಭಾವನು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದು ಬಾಯಿ ಮೂಗಿನಲ್ಲಿ ರಕ್ತ ಬರುತ್ತಿತ್ತು, ನಂತರ ಲಕ್ಕಣ್ಣನಿಂದ ವಿಚಾರ ತಿಳಿಯಲಾಗಿ ಇದೇ ದಿನ ಬೆಳಿಗ್ಗೆ ಸುಮಾರು 7-40 ಗಂಟೆಯಲ್ಲಿ ನಾನು ಮತ್ತು ನಾಗೇಶ ಇಬ್ಬರು KA64-K-5710 ನೇ ಬೈಕ್ ನಲ್ಲಿ ಪಾವಗಡಕ್ಕೆ ಬರಲು ರಾಜವಂತಿ ಜನತಾ ಕಾಲೋನಿ ಬಳಿ ರಸ್ತೆಯ ಎಡ ಬದಿಯಲ್ಲಿ ಬರುತ್ತಿರುವಾಗ ಪಾವಗಡ ಕಡೆಯಿಂದ ಬೈಕ್ ಸವಾರನೊಬ್ಬನು ತನ್ನ ಬೈಕ್ ಅನ್ನು ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂತೆಯಿಂದ ಓಡಿಸಿಕೊಂಡು ಬಂದು ನಾಗೇಶನು ಓಡಿಸುತಿದ್ದ ಬೈಕ್ ಗೆ ಅಪಘಾತ ಪಡಿಸಿದನು ಎಂತ ತಿಳಿಸಿದನು. ನಾವು ಕೂಡಲೇ ನಾಗೇಶನನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದ್ದರಿಂದ   ಬೆಂಗಳೂರಿಗೆ ಆಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗುವಾಗ ಇದೇ ದಿನ ಬೆಳಿಗ್ಗೆ 8-45 ಗಂಟೆ ಸುಮಾರಿನಲ್ಲಿ ಮಾರ್ಗ ಮದ್ಯೆ ಮಧುಗಿರಿ ಬಳಿ ಬಸವನಹಳ್ಳಿ ಸಮೀಪ ನಾಗೇಶ ಮೃತಪಟ್ಟಿದ್ದು, ನಾಗೇಶನ ಶವವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರುತ್ತೆ. ನಾಗೇಶನಿಗೆ ಅಪಘಾತಪಡಿಸಿದ ಬೈಕ್ ಸವಾರನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 93/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ-24/05/2017 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿಯಾದ ಸ್ವಾಮಿ ಬಿನ್ ಅನಂತಯ್ಯ, 20 ವರ್ಷ, ವಕ್ಕಲಿಗರು,  ಜಿರಾಯ್ತಿ, ಕಾವೇರಿಪಾಳ್ಯ, ತಿಪ್ಪಸಂದ್ರ  ಹೋಬಳಿ, ಮಾಗಡಿ ತಾಲ್ಲೋಕು, ರಾಮನಗರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ:21-05-2017 ರಂದು ನಮ್ಮ ತಂದೆ ಸುಮಾರು 45 ವರ್ಷದ, ಅನಂತಯ್ಯರವರು ನಮ್ಮ ಸಂಬಂಧಿಕರ ಮಧುವೆಗೆಂದು ತುಮಕೂರು ತಾಲ್ಲೋಕಿನ ಹೆಬ್ಬೂರು ಹೋಬಳಿಯ ಕೆಂಬಾಳಪುರದ ಶ್ರೀ ಮಾರುತಿ ಸಮೂದಾಯ ಭವನದಲ್ಲಿ ಮಧುವೆ ಮುಗಿಸಿಕೊಂಡು ನಮ್ಮ ಊರಿಗೆ ಬರುವುದಕ್ಕೆ ಬಸ್ಸಿಗಾಗಿ ಈ ದಿನ ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ಸಿರಿವಾರ-ಹೆಬ್ಬೂರು ಟಾರ್ ರಸ್ತೆಯ ಕೆಂಬಾಳುಪುರ ಗ್ರಾಮದ ರಸ್ತೆಯ ಎಡಬಾಗ ನಿಂತಿದ್ದಾಗ, ಸಿರಿವಾರದ ಕಡೆಯಿಂದ ಒಂದು ದ್ವಿಚಕ್ರ ವಾಹನದಲ್ಲಿ ಹೆಬ್ಬೂರಿನ ಕಡೆಗೆ ಹೋಗಲು ಬಂದ ದ್ವಿಚಕ್ರ ವಾಹನದ ಸವಾರನು ಯಾವುದೇ ಮುನ್ಸೂಚನೆ ನೀಡಿದ ರಸ್ತೆಯ ಬಲಭಾಗಕ್ಕೆ ತನ್ನ ದ್ವಿಚಕ್ರ ವಾಹನವನ್ನು ಅತೀವೇಗ, ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಬದಿ ನಿಂತಿದ್ದ ನಮ್ಮ ತಂದೆಗೆ ಡಿಕ್ಕಿ ಹೊಡೆದಿದ್ದರಿಂದ ತಲೆಗೆ ಮತ್ತು ಎಡಗಾಲಿಗೆ ರಕ್ತ ಗಾಯವಾಗಿರುತ್ತೆ, ಅಪಘಾತಪಡಿಸಿದ ದ್ವಿಚಕ್ರ ವಾಹನವನ್ನು ನೋಡಲಾಗಿ ಕೆಎ-06-ಇಎಕ್ಷ್‌-4430 ಆಗಿದ್ದು, ಸದರಿ ವಾಹನದ ಸವಾರನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾನೆ, ನಂತರ ಅಲ್ಲೇ ಇದ್ದ ನಮ್ಮ ಸಂಬಂಧಿಕರಾದ ರಾಮಣ್ಣ ಬಿನ್ ಮುನೆಗೌಡ ರವರು ಸದರಿ ನಮ್ಮ ತಂದೆಯನ್ನು ಯಾವುದೋ ಒಂದು ಆಟೋದಲ್ಲಿ ಹೆಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂಧ್ರಕ್ಕೆ ಚಿಕಿತ್ಸೆಗೆ ಕರೆದುಕೊಂಡು ಬಂದು ತೋರಸಿಲಾಗಿ ನಂತರ ಹೆಚ್ಚಿನ ಚಿಕಿತ್ಸೆಗೆ 108 ನೇ ಅಂಬುಲೆನ್ಸ್ ವಾಹನದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಅಲ್ಲಿನ ವೈಧ್ಯರ ಸಲಹೆಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಗೆ ಕರೆದುಕೊಂಡು ಓಳರೋಗಿಯಾಗಿ ಚಿಕಿತ್ಸೆಯನ್ನು ಕೊಡಿಸುತ್ತಿರುತ್ತೇನೆ ಎಂದು ನನಗೆ ರಾಮಣ್ಣರವರು ತಿಳಿಸಿದ್ದರಿಂದ ನಾನು ಆಸ್ಪತ್ಸೆಗೆ ಬಂದು ನೋಡಲಾಗಿ ಅಪಘಾತವಾರುವುದು ನಿಜವಾಗಿದ್ದು, ಈ ದಿನ ನಮ್ಮ ತಂದೆಗೆ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಮತ್ತು ಯಾರು ನೋಡಿಕೊಳ್ಳಲು ಇಲ್ಲವಾದ್ದರಿಂದ ತಡವಾಗಿ ಠಾಣೆಗೆ ಬಂದು ನಮ್ಮ ತಂದೆಗೆ ಅಪಘಾತ ಮಾಡಿದ  ಕೆಎ-06-ಇಎಕ್ಷ್‌-4430 ನೇ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಪ್ರಕರ ಜರುಗಿಸಿಬೇಕೆಂಧು ದೂರು ನೀಡಿರುತ್ತೇನೆ, ನಮ್ಮ ತಂದೆಗೆ ಅಪಘಾತ ಮಾಡಿದ ಸದರಿ ದ್ವಿಚಕ್ರ ವಾಹನವನ್ನು ಕೆಂಬಾಳಪುರದ ಶ್ರೀ ಮಾರುತಿ ಸಮೂದಾಯ ಭವನದಲ್ಲಿ ನಿಲ್ಲಿಸಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 94/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ-24/05/2017 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿಯಾದ ಆಸೀಫ್‌ ಉಲ್ಲಾ ಖಾನ್‌ ಬಿನ್ ಲೇ|| ಆಫೀಜ್‌ ಉಲ್ಲಾ ಖಾನ್‌, 34 ವರ್ಷ, ಮುಸ್ಲಿಂ, ಝರಿ ಕೆಲಸ, ಜಿ,ಹೆಚ,ರಿಸಾಲ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿ ದೂರಿನ ಅಂಶವೇನೇಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ:22-05-2017 ರಂದು ನಾನು ಮತ್ತು ನನ್ನ ತಮ್ಮನಾದ ಅಬಿದುಲ್ಲಾ ಖಾನ್‌ ಇಬ್ಬರೂ ಕೆಎ-06-ಇ.ಜೆ-0708 ನೇ ದ್ವಿಚಕ್ರ ವಾಹನದಲ್ಲಿ ನಾನು ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ನನ್ನ ತಮ್ಮ ಅಬಿದುಲ್ಲಾ ಖಾನ್‌ ರವರು ಹಿಂಬದಿ ಸವಾರನಾಗಿ ಕುಳಿತುಕೊಂಡು ನಮ್ಮ ಗ್ರಾಮವಾದ ಜಿ,ಹೆಚ್,ರಿಸಾಲದಿಂದ ನಾಗವಲ್ಲಿಗೆ ಅಂಗಡಿ ಸಾಮಾನುಗಳನ್ನು ತರಲೆಂದು ಸಾಯಂಕಾಲ ಸುಮಾರು 06-00 ಗಂಟೆ ಸಮಯದಲ್ಲಿ ನಾಗವಲ್ಲಿ ಗ್ರಾಮದ ಚಂದ್ರ ರವರ ಅಡಿಕೆ ತೋಟದ ಬಳಿ ನಾಗವಲ್ಲಿ-ಸಿರಿವರ ಟಾರ್ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ್ಗೆ, ಎದುರಿಗೆ ನಾಗವಲ್ಲಿ ಕಡೆಯಿಂದ ಸಿರಿವರ ಕಡೆಗೆ ಹೋಗಲು ಬಂದ ಕೆಎ-02-ಎಎ-5165 ನೇ ತವೇರಾ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನಾವು ಹೋಗುತ್ತಿದ್ದ ಕೆಎ-06-ಇ.ಜೆ-0708 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ಪರಿಣಾಮವಾಗಿ ನಾನು ಮತ್ತು ನನ್ನ ತಮ್ಮ ಅಬಿದುಲ್ಲಾ ಇಬ್ಬರೂ ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದೆವು. ಆಗ ಅಲ್ಲಿಯೇ ರಸ್ತೆಯಲ್ಲಿ ಹೋಗುತ್ತಿದ್ದ ಆಯಾಜ್‌ ಅಲಿ ಖಾನ್‌ ಬಿನ್ ಇಸ್ಮಾಯಿಲ್‌ ಖಾನ್ ರವರು ನಮ್ಮನ್ನು ಮೇಲಕ್ಕೆ ಎತ್ತಿ ಉಪಚರಿಸಿದರು. ನಂತರ ನೋಡಲಾಗಿ ನನ್ನ ತಮ್ಮ ಅಬಿದುಲ್ಲಾ ಖಾನ್‌ ರವರಿಗೆ ಬಲಗಾಲಿಗೆ ಏಟು ಬಿದ್ದು ತೀವ್ರತರವಾದ ಗಾಯವಾಗಿದ್ದು, ಬಲಗೈಗೆ ಹಾಗೂ ಮುಖಕ್ಕೆ ರಕ್ತಗಾಯವಾಗಿತ್ತು. ನನಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದವು. ನಂತರ ಅಪಘಾತಪಡಿಸಿದ ಕಾರಿನ ಚಾಲಕನು ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋದನು. ನಂತರ ನಾನು ಮತ್ತು ಆಯಾಜ್‌ ಅಲಿ ಖಾನ್‌ ಇಬ್ಬರೂ ಸೇರಿಕೊಂಡು ಸ್ಥಳಕ್ಕೆ ಬಂದ ಯಾವುದೋ ಒಂದು ಕಾರಿನಲ್ಲಿ ಗಾಯಗೊಂಡಿದ್ದ ಅಬಿದುಲ್ಲಾ ಖಾನ್‌ ರವರನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ತುಮಕೂರಿನ ಸರ್ವೋದಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ನನಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಯಾವುದೇ ಚಿಕಿತ್ಸೆಯನ್ನು ಪಡೆಯಲಿಲ್ಲ. ನಾನು ನನ್ನ ತಮ್ಮ ಅಬಿದುಲ್ಲಾ ಖಾನ್‌ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ಈ ಅಪಘಾತಕ್ಕೆ ಕಾರಣನಾದ ಕೆಎ-02-ಎಎ-5165 ನೇ ತವೇರಾ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಫಘಾತಪಡಿಸಿದ ಕಾರು ಹಾಗೂ ಅಪಘಾತಕ್ಕೊಳಗಾದ ದ್ವಿಚಕ್ರ ವಾಹನ ನಾಗವಲ್ಲಿ ಗ್ರಾಮದ ಚಂದ್ರ ರವರ ಅಡಿಕೆ ತೋಟದಲ್ಲಿರುವ ತೋಟದ ಮನೆಯ ಬಳಿ ನಿಲ್ಲಿಸಿರುತ್ತೆ. ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 Wednesday, 24 May 2017

Crime Incidents 24-05-17

ಬಡವನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ 46/2017  ಕಲಂ  87 ಕೆ.ಪಿ ಆಕ್ಟ್‌

ದಿನಾಂಕ;23/05/2017 ರಂದು ಮಧುಗಿರಿ ಉಪಾಧೀಕ್ಷಕರಾದ ಶ್ರೀ ಓ.ಬಿ ಕಲ್ಲೇಶಪ್ಪ ರವರು ಕಚೇರಿಯಲ್ಲಿದ್ದಾಗ, ಬಡವನಹಳ್ಳಿ ಪೊಲೀಸ್ ಠಾಣಾ ಸರಹದ್ದು ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ, ಶಿವನಗೆರೆ ಗ್ರಾಮದ ಕೆರೆ ಕೋಡಿಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಇಸ್ಟೀಟ್‌ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಡಿ.ಎಸ್.ಪಿ ಸಾಹೇಬರು ಸಿಬ್ಬಂದಿ ಹೆಚ್.ಸಿ 444 ರಾಮಕೃಷ್ಣಯ್ಯ, ಪಿಸಿ 340 ದಿಲೀಪ್ ಕುಮಾರ್, ಪಿಸಿ 325 ನಾಗರಾಜು, ಪಿ.ಸಿ125 ಧರ್ಮಪಾಲನಾಯ್ಕ, ಹೆಚ್.ಸಿ 365 ಶ್ರೀನಿವಾಸ್, ಪಿಸಿ 138 ಮಂಜುನಾಥ್, ಪಿಸಿ 662 ದಾದಾಪೀರ್ ರವರೊಂದಿಗೆ ಸಂಜೆ 4-30 ಗಂಟೆಯಲ್ಲಿ ಜೂಜುಕಟ್ಟೆಯ ಹತ್ತಿರ ಹೋಗಿ ನೋಡಲಾಗಿ, ಸುಮಾರು ಜನರು ದುಂಡಾಕಾರವಾಗಿ ಕುಳಿತುಕೊಂಡು ಒಳಗೆ – ಹೊರಗೆ ಎಂದು ಹೇಳುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಟೀಟ್‌ ಆಡುತ್ತಿದ್ದವರ ಮೇಲೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ, ಹಿಡಿದು  ಹೆಸರು ವಿಳಾಸ ಕೇಳಲಾಗಿ 1] ಕರಿಯಣ್ಣ ಬಿನ್ ಗಜ್ಜಪ್ಪ, 35 ವರ್ಷ, ವಕ್ಕಲಿಗರು, ಜಿರಾಯ್ತಿ, ಸೋದೇನಹಳ್ಳಿ, ದೊಡ್ಡೇರಿ ಹೋ, ಮಧುಗಿರಿ ತಾ. 2] ರಂಗನಾಥ ಬಿನ್ ನರಸಪ್ಪ, 36 ವರ್ಷ, ಪ.ಜಾತಿ, ಕೂಲಿ ಕೆಲಸ, ಬೊಮ್ಮರಸನಹಳ್ಳಿ, ಅಗಳಿ ಮಂಡಲ್, ಮಡಕಶಿರಾ ತಾ. 3] ಕೆಂಚ ಬಿನ್ ಚಿಕ್ಕಯ್ಯ, 24 ವರ್ಷ, ಉಪ್ಪಾರರು, ಕೂಲಿ ಕೆಲಸ, ಶಿವನಗೆರೆ, ದೊಡ್ಡೇರಿ ಹೋ, ಮಧುಗಿರಿ ತಾ. 4] ಜಯಣ್ಣ ಬಿನ್ ರಾಮಣ್ಣ, 50 ವರ್ಷ, ವಕ್ಕಲಿಗರು, ಜಿರಾಯ್ತಿ, ಸಜ್ಜೇಹೊಸಹಳ್ಳಿ, ದೊಡ್ಡೇರಿ ಹೋ, ಮಧುಗಿರಿ ತಾ. 5] ಜಿ. ಗೋವಿಂದರಾಜು ಬಿನ್ ಗಿರಿಯಪ್ಪ, 37 ವರ್ಷ, ವಕ್ಕಲಿಗರು, ಗುಟ್ಟೆ, ದೊಡ್ಡೇರಿ ಹೋ, ಮಧುಗಿರಿ ತಾ 6] ಉಗ್ರಪ್ಪ ಬಿನ್ ಉಗ್ರಪ್ಪ, 50 ವರ್ಷ, ಉಪ್ಪಾರರು, ಶಿವನಗೆರೆ, ದೊಡ್ಡೇರಿ ಹೋ, ಮಧುಗಿರಿ ತಾ 7] ಮುದ್ದಣ್ಣ ಬಿನ್ ಬೇವಿನ ಹಳ್ಳಪ್ಪ, 60 ವರ್ಷ, ಕುಂಚಿಟಿಗರು, ವ್ಯಾಪಾರ, ಜಕ್ಕೇನಹಳ್ಳಿ, ದೊಡ್ಡೇರಿ ಹೋ, ಮಧುಗಿರಿ ತಾ 8] ಲಕ್ಷ್ಮೀ ನರಸಪ್ಪ ಬಿನ್ ಉಗ್ರಪ್ಪ, 43 ವರ್ಷ, ಡ್ರೈವರ್, ಗೊಲ್ಲರು, ಬೊಮ್ಮರಸನಹಳ್ಳಿ, ಅಗಳಿ ಮಂಡಲ್, ಮಡಕಶಿರಾ ತಾ. 9] ಪಾಲಾಕ್ಷಪ್ಪ ಬಿನ್ ನರಸಿಂಹಣ್ಣ, 65 ವರ್ಷ, ಉಪ್ಪಾರರು, ಕೂಲಿ ಕೆಲಸ, ಜಕ್ಕೇನಹಳ್ಳಿ, ದೊಡ್ಡೇರಿ ಹೋ, ಮಧುಗಿರಿ ತಾ ಎಂಬ 09 ಜನ ಆರೋಪಿಗಳು ಇದ್ದು, ಈ ಆರೋಪಿಗಳು ಸ್ಥಳದಲ್ಲೇ ಇದ್ದು, ಆರೋಪಿಗಳ ಬೆಂಗಾವಲಿಗೆ ಸಿಬ್ಬಂದಿಗಳನ್ನು ನೇಮಿಸಿದ್ದು, ನೀವು ಈ ಕೂಡಲೇ ಸ್ಥಳಕ್ಕೆ ಬೇಟಿ ನೀಡಿ ಆರೋಪಿಗಳನ್ನು ವಶಕ್ಕೆ ಪಡೆಯುವುದು ಮತ್ತು ಆರೋಪಿಗಳು ಜೂಜಾಟಕ್ಕೆ ಪಣವಾಗಿ ಕಟ್ಟಿ ಅಖಾಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದದ್ದ ಹಣ 5440/- ರೂಗಳು, 52 ಇಸ್ಟೀಟ್‌ ಎಲೆಗಳು ಹಾಗೂ ಒಂದು ನ್ಯೂಸ್ ಪೇಪರ್ ಮತ್ತು KA 06 Q 42 ಸಿಡಿ-100 ದ್ವಿ ಚಕ್ರ ವಾಹನವನ್ನು ‌ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಟ್ಟಿದ್ದು, ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸುವಂತೆ ನೀಡಿದ ವರದಿಯನ್ನು ಪಡೆದು, ಕೇಸು ದಾಖಲಿಸಿರುತ್ತೆ.

 

ಹೊಸಬಡಾವಣೆ ಪೊಲೀಸ್ ಠಾಣಾ  ಮೊ.ಸಂ 61/2017 ಕಲಂ 379 IPC

ದಿನಾಂಕ : 23-05-2017 ರಂದು ಮಧ್ಯಾಹ್ನ  2-00 ಗಂಟೆಗೆ ಪಿರ್ಯಾದಿ ಶ್ರೀ ರಾಮಕೃಷ್ಣ ಬಿನ್ ಮೋಹನ್ ಕುಮಾರ್, (41) ಸುಶೀಲ ನಿಲಯ, ರೈಲ್ವೇ ನಿಲ್ದಾಣದ ರಸ್ತೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯು 2014ನೇ ಸಾಲಿನಲ್ಲಿ ಸ್ವಂತ ಉಪಯೋಗಕ್ಕೆಂದು KA 06 ES 0746 (CHASSIS No:-MD621BD11E1H87834  ENGINE No:- 0D1HE1777867 ) ನೇ ಟಿವಿಎಸ್ ಹೆವಿ ಡ್ಯೂಟಿ ದ್ವಿ ಚಕ್ರ ವಾಹನವನ್ನು ಖರೀದಿ ಮಾಡಿ ಉಪಯೋಗಿಸಿಕೊಂಡಿದ್ದು ದಿನಾಂಕ : 28-04-2017 ರಂದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ತಮ್ಮ ಬಾಬ್ತು ದ್ವಿ ಚಕ್ರ ವಾಹನದಲ್ಲಿ ಅಂಗಡಿಯ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮನೆಯ ಕಾಂಪೌಂಡ್‌‌ ನಲ್ಲಿ ವಾಹನವನ್ನು ನಿಲ್ಲಿಸಿ ದಿನಾಂಕ : 29-04-2017 ರಂದು ಬೆಳಗ್ಗೆ ಸುಮಾರು 7-30 ಗಂಟೆ ಸಮಯದಲ್ಲಿ ನೋಡಲಾಗಿ ವಾಹನವು ಇರುವುದಿಲ್ಲ ಸದರಿ ವಾಹನವನ್ನು ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇದುವರೆಗೂ ಸಹಾ ಸಿಕ್ಕಿರುವುದಿಲ್ಲ ಕಳುವಾದ ದ್ವಿ ಚಕ್ರ ವಾಹನವು ಸುಮಾರು 19,000/-ರೂ ಬೆಲೆಯುಳ್ಳದ್ದಾಗಿದ್ದು ಕಳ್ಳತನ ಮಾಡಿರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿದೆ

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 82/2017 ಕಲಂ 32 & 34 KE Act

ದಿನಾಂಕ 23/05/17 ರಂದು 6-30  ಗಂಟೆ ಸಮಯದಲ್ಲಿ ಶ್ರೀಕಾಂತ್ ಪಿ.ಎಸ್.ಐ ತಿಪಟೂರು ಗ್ರಾ. ಠಾಣೆ  ಆದ ನಾನು  ಗಸ್ತಿನಲ್ಲಿದ್ದಾಗ  ಬೆನ್ನನಾಯ್ಕನಹಳ್ಳಿ  ಗೊಲ್ಲರಹಟ್ಟಿಯ  ರೇಣುಕ ಪ್ರಸಾದ್ ರವರ ಅಂಗಡಿಯಲ್ಲಿ   ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರು , ಸಿಬ್ಬಂದಿಗಳೊಂದಿಗೆ  ಕೆಎ-06, ಜಿ-347  ನೇ ಜೀಪಿನಲ್ಲಿ   ಮೇಲ್ಕಂಡ ರೇಣುಕ ಪ್ರಸಾದ್  ರವರ  ಅಂಗಡಿ ಹತ್ತಿರ  6-45 ಗಂಟೆ ಸಮಯದಲ್ಲಿ  ಹೋಗಿ ನೋಡಲಾಗಿ  ಅಂಗಡಿಯಲ್ಲಿದ್ದ ಒಬ್ಬ ಆಸಾಮಿ  ಮಧ್ಯ ಮಾರಾಟ ಮಾಡುತ್ತಿದ್ದು  ಪೊಲೀಸ್ ಜೀಪ್ ನೋಡಿ  ಓಡಿ  ಹೋಗಲು ಪ್ರಯತ್ನಿಸಿದವರನ್ನು  ಹಿಡಿದು ಹೆಸರು ವಿಳಾಸ ಕೇಳಲಾಗಿ  ರೇಣುಕ ಪ್ರಸಾದ್  ಬಿನ್   ತ್ಯಾಗರಾಜು, 21 ವರ್ಷ, ಗೊಲ್ಲರು, ಅಂಗಡಿ ವ್ಯಾಪಾರ,  ಬೆನ್ನಾಯಕನಹಳ್ಳಿ ಗೊಲ್ಲರಹಟ್ಟಿ  ಎಂತಾ  ತಿಳಿಸಿದ್ದು  ನಾವುಗಳು ಹತ್ತಿರ ಹೋಗಿ ನೋಡಲಾಗಿ  ಅಕ್ರಮವಾಗಿ ಮಧ್ಯ ತುಂಬಿರುವ ಬಾಟೆಲ್ ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಪಂಚಾಯ್ತುದಾರರ ಸಮಕ್ಷಮ ಚೆಕ್ ಮಾಡಲಾಗಿ 1) IMPERIAL BLUE  Whisky ಯ 180ML ಇರುವ 03 ಬಾಟಲ್ ಗಳು   2) MC DOWELLS Whisky ಯ 180ML 03 ಬಾಟಲ್ ಗಳು   3) BAGPIPER  Whisky ಯ 180ML 07 ಟೆಟ್ರಾ ಪ್ಯಾಕ್ ಗಳು  4) MC DOWELLS RUM ನ 180ML 04 ಟೆಟ್ರಾ ಪ್ಯಾಕ್ ಗಳು  5)  HAYWADES Whisky ಯ 90ML ಇರುವ 45 ಟೆಟ್ರಾ ಪ್ಯಾಕ್ ಗಳು  6)  KNOCK OUT BEER ನ 180MLಇರುವ 07  ಬಾಟಲ್ ಗಳು ಪತ್ತೆಯಾಗಿದ್ದು, 69 ಮಧ್ಯ ತುಂಬಿದ ಬಾಟೆಲ್   ಸಿಕ್ಕಿದ್ದು, ಒಟ್ಟು ಸುಮಾರು 3496/- ರೂ ಬೆಲೆ ಆಗುತ್ತದೆ. ಸದರಿ ಸ್ಥಳದಲ್ಲಿ  ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಧ್ಯದ ತುಂಬಿದ ಬಾಟೆಲ್ ಗಳನ್ನು ಮಾರಾಟ ಮಾಡುತ್ತಿದ್ದರಿಂದ ಇವುಗಳನ್ನು ಎಲ್ಲಿಂದ ತಂದ ಬಗ್ಗೆ ವಿಚಾರ ಮಾಡಲಾಗಿ ತಿಪಟೂರು ಟೌನ್ ಸಿದ್ದೇಶ್ವರ ವೈನ್ಸ ಅಂಗಡಿಯನ್ನು ನೋಡಿಕೊಳ್ಳುತ್ತಿರುವ ರಾಕೇಶ್ ರವರು ನೀನು ಎಷ್ಷು ಬೇಕಾದರು ನಮ್ಮ ಅಂಗಡಿಯಿಂದ ತೆಗೆದುಕೊಂಡು ಹೋಗು ಏನೇ ಬಂದರು ನಾನು ನೋಡಿಕೊಳ್ಳುತ್ತೇನೆ ಎಂತಾ ತಿಳಿಸಿದ ಮೇರೆಗೆ ನಾನು ಅವರ ಅಂಗಡಿಯಿಂದ ತಂದು  ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು , ನಮ್ಮಗಳ  ಸಮಕ್ಷಮ ಮೇಲ್ಕಂಡ ಮಾಲುಗಳನ್ನು ಪಂಚನಾಮೆ ಮೂಲಕ ನಮ್ಮ ಸಮಕ್ಷಮ  ಅಮಾನತ್ತು ಪಡಿಸಿಕೊಂಡಿರುತ್ತಾರೆ ಈ ಸದರಿ  ಮಾಲುಗಳನ್ನು ರಾತ್ರಿ   06-45 ಗಂಟೆಯಿಂದ ರಾತ್ರಿ 07:30 ಗಂಟೆಯವರೆಗೆ ಪಂಚನಾಮೆ ಮೂಲಕ ಪಂಚರ ಸಮಕ್ಷಮ  ಅಮಾನತ್ತು ಪಡಿಸಿಕೊಂಡಿರುತ್ತೆ.  ಯಾವುದೇ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ     ರೇಣುಕ ಪ್ರಸಾದ್  ಬಿನ್  ತ್ಯಾಗರಾಜು &  ರಾಕೇಶ್  ಎಂಬುವರು ಪ್ರಕರಣ ದಾಖಲಿಸಿರುತ್ತೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ.106/2017 ಕಲಂ. 379 ರೆ/ವಿ 86, 87 ಕೆ.ಎಫ್.ಆಕ್ಟ್‌.

ದಿನಾಂಕ-23-05-2017 ರಂದು ರಾತ್ರಿ 8-10 ಗಂಟೆ ಸಮಯದಲ್ಲಿ ಪಿರ್ಯಾದಿ ಕೆ.ಎಸ್‌.ರಾಜಣ್ಣ @ ಮೂಗೂರಯ್ಯ ಬಿನ್‌ ಲೇಟ್‌ ಶ್ರೀಕಂಠಯ್ಯ, 61 ವರ್ಷ, ವಕ್ಕಲಿಗರು, ಉಂಗ್ರ ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-21-05-2017 ರಂದು ರಾತ್ರಿ ತಮ್ಮ ಮನೆಯಲ್ಲಿ ಮಲಗಿರುವಾಗ್ಗೆ ಯಾರೋ ಆಸಾಮಿಗಳು ಪಿರ್ಯಾದುದಾರರ ಮನೆಯ ಅಂಗಳದಲ್ಲಿದ್ದ ಸುಮಾರಿ 20 ವರ್ಷ ವಯಸ್ಸಿನ, 1 ½ ಅಡಿ ಸುತ್ತಳತೆಯನ್ನು ಹೊಂದಿರುವ, ಸುಮಾರು 40 ಸಾವಿರ ರೂಪಾಯಿ ಬೆಲೆಬಾಳುವ ಗಂಧದ ಮರವನ್ನು ಕಡಿದು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ನಾವು ಅಲಯ ಅರಣ್ಯಾಧಿಕಾರಿರವರಿಗೆ ದೂರನ್ನು ಸಲ್ಲಿಸಿದ್ದು ಅವರು ಸದರಿ ಪ್ರಕರಣವು ಪೊಲೀಸ್ ಇಲಾಖೆಗೆ ಅನ್ವಯವಾಗುವುದಾಗಿ ತಿಳಿಸಿ ತಾವು ಅಲ್ಲೇ ಹೋಗಿ ದೂರನ್ನು ದಾಖಲಿಸುವಂತೆ ತಿಳಿಸಿ ಕಳುಹಿಸಿರುತ್ತಾರೆ. ಆದ್ದರಿಂದ ತಾವು ದೂರನ್ನು ದಾಖಲಿಸಿಕೊಂಡು ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

 

 

 Tuesday, 23 May 2017

Crime Incidents 23-05-17

ಚೇಳೂರು  ಪೊಲೀಸ್  ಠಾಣಾ ಯು.ಡಿ.ಆರ್. ನಂ 18/2017  ಕಲಂ 174  ಸಿ.ಆರ್.ಪಿ.ಸಿ

ದಿನಾಂಕ:22-05-2017 ರಂದು ಬೆಳಿಗ್ಗೆ  9-00 ಗಂಟೆ ಸಮಯದಲ್ಲಿ ಪಿರ್ಯಾದಿ ಎಸ್.ಬಿ.ನಾಗರಾಜು ರವರ ತಂದೆ  ಬಸವರಾಜು  ಹಾಗೂ ಅವರ ಅಣ್ಣ ಚೇತನ ಇಬ್ಬರೂ  ಅವರ ತೋಟಕ್ಕೆ ನೀರು ಹಾಯಿಸಲು ಹೋಗಿದ್ದರು.   ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ  ಬಸವರಾಜು ರವರು  ತೋಟದ ಕೆಳ ಭಾಗದಲ್ಲಿ ಬೋರ್  ಹತ್ತಿರ ಸ್ಟಾರ್ಟರ್  ನೋಡಿಕೊಂಡು ಬರುತ್ತೇನೆಂದು ಹೋದವರು  ಸುಮಾರು ಅರ್ಧ ಗಂಟೆಯಾದರೂ ಬರಲಿಲ್ಲ.    ಆಗ ಚೇತನ ರವರು ಹೋಗಿ ನೋಡಿದಾಗ ಬಸವರಾಜು ರವರು  ಕೆಳಗಡೆ ಬಿದ್ದು ಒದ್ದಾಡುತ್ತಿದ್ದರು.  ತಕ್ಷಣ ಅವರನ್ನು ಆಟೊದಲ್ಲಿ ಕೂರಿಸಿಕೊಂಡು ನಿಟ್ಟೂರಿಗೆ  ಸ್ವಾಮಿ ಕ್ಲಿನಿಕ್ ಗೆ ಕರೆದುಕೊಂಡು ಹೋದಾಗ ವೈದ್ಯರು ತುಮಕೂರು  ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ  ತಿಳಿಸಿದ ಮೇರೆಗೆ ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ತುಮಕೂರಿನಲ್ಲಿ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರು ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಬಸವರಾಜು ರವರಿಗೆ ಉಸಿರಾಟದ ತೊಂದರೆಯಾಗಿ ಹತ್ತಿರದ ಫೋರ್ಟಿಸ್ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದಾಗ  ಚಿಕಿತ್ಸೆ ಗುಣಮುಖರಾಗದೆ ರಾತ್ರಿ 7-40 ಗಂಟೆ ಸಮಯದಲ್ಲಿ  ಬಸವರಾಜು ಮೃತಪಟ್ಟಿರುತ್ತಾರೆ.   ವೈದ್ಯರು ವಿದ್ಯುತ್ ಶಾಕ್ ನಿಂದ ಮೃತಪಟ್ಟಿರುತ್ತಾರೆ  ಎಂದು ತಿಳಿಸಿರುತ್ತಾರೆ.  ಆದ್ದರಿಂದ ಮುಂದಿನ ಕ್ರಮ ಜರುಗಿಸಿ ಎಂದು ಪಿರ್ಯಾದು ಅಂಶವಾಗಿದೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ;108/2017 ಕಲಂ; ಕಲಂ: 498 (ಎ), 323,504,506 ರೆ/ವಿ 34 ಐ.ಪಿ.ಸಿ ಮತ್ತು 3 & 4 ಡಿ.ಪಿ ಆಕ್ಟ್,

ದಿನಾಂಕ 17-04-2017 ರಂದು ಶ್ರೀಮತಿ ಸಲ್ಮಾಭಾನು ಕೋಂ ಅಲಿಖಾನ್ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ತನ್ನನ್ನು ದಿನಾಂಕ 25-5-2014 ರಂದು ತಿಪಟೂರು ಗಾಂದೀನಗರದ 6 ನೇ ಕ್ರಾಸ್‌‌ನಲ್ಲಿ ವಾಸವಾಗಿರುವ ಟೌನ್‌‌ನ ಆಲಿಖಾನ್‌‌ರವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು,ಒಂದು ವರ್ಷ ನಾಲ್ಕು ತಿಂಗಳ ಒಂದು ಹೆಣ್ಣು ಮಗುವಿರುತ್ತೆ.      ಮದುವೆ ಸಂಧರ್ಭದಲ್ಲಿ ವರ ಮತ್ತು ಆತನ ತಂದೆ, ತಾಯಿಯ ಡಿಮ್ಯಾಂಡ್‌‌ನಂತೆ ವರದಕ್ಷಿಣೆಯಾಗಿ 8 ಗ್ರಾಂ ತೂಕದ ಚಿನ್ನದ ಉಂಗುರ, 18 ಗ್ರಾಂ ತೂಕದ ಹ್ಯಾಗಿಂಗ್ಸ್‌‌ ಓಲೆ ನನಗೆ ಕೊಟ್ಟು  ಸುಮಾರು 06 ಲಕ್ಷ ರೂ ಖರ್ಚು ಮಾಡಿ, ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡನ ಮನೆಯಾದ ತಿಪಟೂರಿಗೆ ಬಂದು 03 ತಿಂಗಳ ಕಾಲ ನನ್ನ ಅತ್ತೆ, ಮಾವ, ಅತ್ತಿಗೆ, ಇವರುಗಳೆಲ್ಲಾ ಚೆನ್ನಾಗಿಯೇ ನೋಡಿಕೊಂಡಿದ್ದರು. ತದನಂತರ ಮೇಲ್ಕಂಡವರುಗಳೆಲ್ಲಾ ಸೇರಿ ನಿಮ್ಮಪ್ಪ ನಮಗೆ ಕೊಟ್ಟಿರುವ ವರದಕ್ಷಿಣೆ ಹಣ ಸಾಲದು ಮತ್ತೆ 50,000-00 ರೂ ವರದಕ್ಷಿಣೆಯಾಗಿ ನಿಮ್ಮಪ್ಪನಿಂದ ಪಡೆದುಕೊಂಡು ಬಾ ಎಂದು ಪ್ರತಿ ದಿನ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಲು ಪ್ರಾರಂಭಿಸಿದರು. ನನ್ನ ಬಳಿ ಚಿನ್ನದ ವಡವೆಗಳನ್ನು ನನ್ನ ಗಂಡ, ಅತ್ತೆ, ಮಾವ, ಅತ್ತಿಗೆ ರವರುಗಳು ಕಿತ್ತು ಇಟ್ಟುಕೊಂಡಿರುತ್ತಾರೆ. ಮತ್ತು ಕಳೆದ 2015 ನೇ ಸಾಲಿನಲ್ಲಿ ನನಗೆ ಸರ್ಕಾರದಿಂದ ನೀಡಿದ್ದ ಶಾದಿಭಾಗ್ಯ ಯೋಜನೆಯಡಿಯಲ್ಲಿ ನೀಡಿದ್ದ 50,000-00 ರೂಗಳನ್ನು ಸಹ ನನ್ನ ಅತ್ತೆ, ಮಾವ, ಗಂಡ ಪಡೆದುಕೊಂಡಿರುತ್ತಾರೆ.ನನಗೆ ವರದಕ್ಷಿಣೆ ಹಣ ತರುವಂತೆ ಮೇಲ್ಕಂಡವರುಗಳು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಿರುವ ಮೇಲ್ಕಂಡವರುಗಳನ್ನು ಕರೆಯಿಸಿ, ನನ್ನ ಸಂಸಾರದ ಬಗ್ಗೆ  ತಾಲ್ಲೋಕು ಕಾನೂನು  ನೆರವು ಸಮಿತಿಗೆ ಕಳುಹಿಸಿ ನಂತರ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ದೂರು ನೀಡಿದ್ದು, ಸದರಿ ಮೂಲ ದೂರನ್ನು ಮಾನ್ಯ ಅಧ್ಯಕ್ಷರು ಸದಸ್ಯ ಕಾರ್ಯದರ್ಶಿಗಳು ತಾಲ್ಲೋಕು ಕಾನೂನು ಸೇವಾ ಸಮಿತಿ.ತಿಪಟೂರು ರವರಲ್ಲಿಗೆ ಆಪ್ತ ಸಮಾಲೊಚನೆಗಾಗಿ ಕಳುಹಿಸಿದ್ದು, ಮಧ್ಯಸ್ಥಿಕೆ ಕೇಂದ್ರದಲ್ಲಿ ದಿನಾಂಕ 8-5-2017 ರಂದು ನಡೆಸಿ ವರದಿಯನ್ನು ಕಳುಹಿಸಿ ಕೊಟ್ಟಿದ್ದು, ಸದರಿ ವರದಿಯನ್ನು ದಿನಾಂಕ 22-5-2017 ರಂದು ಬೆಳಿಗ್ಗೆ 10-30 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ.103/2017 ಕಲಂ 379, 188 ಐಪಿಸಿ ರೆ/ವಿ 21(1), 4(1), 4(1ಎ) ಎಂ.ಎಂ.ಆರ್.ಡಿ ಆಕ್ಟ್-1957 ರೆ/ವಿ 44(1) ಕೆ.ಎಂ.ಎಂ.ಸಿ.ಆರ್-1994

ದಿನಾಂಕ-22-05-2017 ರಂದು ಮಧ್ಯಾಹ್ನ 13-00 ಗಂಟೆ ಸಮಯದಲ್ಲಿ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಎಎಸ್‌ಐ  ರಾಮಚಂದ್ರಯ್ಯ.ಪಿ ರವರು ಪಿಸಿ-426 ರಂಗಸ್ವಾಮಿ ರವರ ಮುಖೇನ ಕಳುಹಿಸಿಕೊಟ್ಟ ದೂರಿನ ವರದಿಯ ಅಂಶವೇನೆಂದರೆ, ದಿನಾಂಕ-22-05-2017 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ಬಂದೋಬಸ್ತ್‌ ಕರ್ತವ್ಯದಲ್ಲಿದ್ದ ಪಿಎಸ್‌ಐ ರವರಿಗೆ ಬಂದ ಖಚಿತ ಮಾಹಿತಿ ಏನೆಂದರೆ, ಉಂಗ್ರ ಗ್ರಾಮದ ಲೊಕೇಶ್‌ ಬಿನ್‌ ರಾಮಣ್ಣ ಎಂಬುವವರು ಶಿಂಷಾ ನದಿ ತೊರೆಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುತ್ತಾರೆಂತ ಬಂದ ಖಚಿತ ಮಾಹಿತಿಯನ್ನು ನನಗೆ ಮತ್ತು ಠಾಣಾ ಪಿಸಿ-426 ರಂಗಸ್ವಾಮಿ ಮತ್ತು ಹೆಚ್‌ಸಿ-168 ರೇವಣ್ಣ ಜಿ ರವರಿಗೆ ತಿಳಿಸಿದ್ದರ ಮೇರೆಗೆ ನಾವು ಬೆಳಿಗ್ಗೆ 11-10 ಗಂಟೆ ಸಮಯದಲ್ಲಿ ಠಾಣೆಯನ್ನು ಬಿಟ್ಟು ಉಂಗ್ರ ಗ್ರಾಮದ ಸಮೀಪ ಹೋಗುತ್ತಿರುವಾಗ್ಗೆ ಬೆಳಿಗ್ಗೆ 11-40 ಗಂಟೆ ಸಮಯದಲ್ಲಿ ಉಂಗ್ರ ಗ್ರಾಮದ ಹತ್ತಿರ ಇರುವ ಸೇತುವೆಯ ಹತ್ತಿರ ಒಂದು ಟ್ರಾಕ್ಟರ್‌ ಮತ್ತು ಟ್ರೇಲರ್‌ ಚಾಲಕ ಎದುರಿಗೆ ಬರುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಟ್ರಾಕ್ಟರ್‌ನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಓಡಿಹೋದನು. ಈತನನ್ನು ಹಿಡಿಯಲು ಸಿಬ್ಬಂದಿರವರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಟ್ರಾಕ್ಟರ್‌ ಹತ್ತಿರ ಹೋಗಿ ನೋಡಲಾಗಿ ಟ್ರಾಕ್ಟರ್‌ ಟ್ರೇಲರ್‌ನ ಬಾಡಿಯ ಒಳಗೆ ಅರ್ಧ ಪ್ರಮಾಣದ ಮರಳನ್ನು ತುಂಬಿದ್ದು ಟ್ರಾಕ್ಟರ್‌ ಮತ್ತು ಟ್ರೇಲರ್‌ನ್ನು ಪರಿಶೀಲಿಸಲಾಗಿ MASSY FERGUSON 1035 DI COMPANY, ENGINE NO: S33784768 & CHASISS NO: 656075 ಆಗಿರುತ್ತೆ. ಸದರಿ ಟ್ರಾಕ್ಟರ್‌ ಕೆಂಪು ಬಣ್ಣದ್ದಾಗಿದ್ದು, ಟ್ರೇಲರ್‌ ಹಸಿರು ಬಣ್ಣದ್ದಾಗಿರುತ್ತೆ. ಸದರಿ ಟ್ರಾಕ್ಟರ್‌‌ನ ಚಾಲಕ ಲೊಕೇಶ್‌ ಬಿನ್‌ ರಾಮಣ್ಣ ಉಂಗ್ರ ಗ್ರಾಮ ಮತ್ತು ಟ್ರಾಕ್ಟರ್‌ ಮಾಲೀಕ ಸೇರಿಕೊಂಡು ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಮಾರಾಟ ಮಾಡಲು ಸರ್ಕಾರದಿಂದ ಯಾವುದೇ ಪರವಾನಗಿಯನ್ನು ಪಡೆಯದೇ ಉಂಗ್ರ ಗ್ರಾಮದ ಹತ್ತಿರ ಹರಿಯುವ ಶಿಂಷಾ ನದಿಯಲ್ಲಿ ಸರ್ಕಾರ ಮರಳು ತುಂಬುವುದನ್ನು ನಿಶೇಧಿಸಿ ಸಂರಕ್ಷಿತ ವಲಯ ಎಂದು ಘೋಶಿಸಿದ್ದರೂ ಶಿಂಷಾ ನದಿಯಲ್ಲಿ ನೈಸರ್ಗಿಕ ಖನಿಜ ಸಂಪತ್ತಾದ ಮರಳನ್ನು ಕಳ್ಳತನದಿಂದ ಟ್ರಾಕ್ಟರ್‌ ಟ್ರೇಲರ್‌ಗೆ ತುಂಬಿಕೊಂಡು ಸಾಗಾಣಿಕೆ ಸಾಗಾಣಿಕೆ ಮಾಡುತ್ತಿದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಕಳುಹಿಸಿಕೊಟ್ಟ ದೂರನ್ನು ಪಡೆದು ಪ್ರಕರಣ  ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಯು ಡಿ ಆರ್ ನಂ  14/2017 ಕಲಂ 174 ಸಿಆರ್‌ಪಿಸಿ

ದಿನಾಂಕ-22-05-2017 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿಯಾದ ಮುನಿರಾಜು ಬಿನ್ ಲೇ|| ಮುನಿಗಂಗಯ್ಯ, 21 ವರ್ಷ, ಒಕ್ಕಲಿಗರು, ಜಿರಾಯ್ತಿ, ಕಾಚೇನಹಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೇಂಧರೆ  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ಅಜ್ಜಿಯಾದ ಸುಮಾರು 70 ವರ್ಷ ವಯಸ್ಸಿನ ಹುಚ್ಚಮ್ಮ ರವರು ನಮ್ಮೊಂದಿಗೆ ವಾಸವಾಗಿರುತ್ತಾರೆ. ದಿನಾಂಕ:19-05-2017 ರಂದು ನಾಗವಲ್ಲಿಯ ತಿಮ್ಮಸಂದ್ರ ಗ್ರಾಮದ ನಮ್ಮ ಸಂಬಂಧಿಕರಾದ ಬೋರೇಗೌಡ ರವರ ಕುಟುಂಬದವರೆಲ್ಲಾ ಮದುವೆ ಕಾರ್ಯಕ್ಕೆಂದು ಬೆಂಗಳೂರಿನ ತಮ್ಮ ಸಂಬಂದಿಕರ ಮನೆಗೆ ಹೋಗಿದ್ದು, ಸದರಿ ಮನೆಯಲ್ಲಿರುವ ದನ ಕರುಗಳನ್ನು ನೋಡಿಕೊಳ್ಳಲೆಂದು ನನ್ನ ಅಜ್ಜಿ ಹುಚ್ಚಮ್ಮ ಹಾಗೂ ನನ್ನ ತಂಗಿ ವಸಂತ ಕುಮಾರಿ ಇಬ್ಬರೂ ದಿನಾಂಕ:19-05-2017 ರಂದು ನಾಗವಲ್ಲಿ ತಿಮ್ಮಸಂದ್ರದ ಬೋರೇಗೌಡ ರವರ ಮನೆಗೆ ಹೋಗಿದ್ದು, ನನ್ನ ಅಜ್ಜಿ ಹುಚ್ಚಮ್ಮ ಹಾಗೂ ನನ್ನ ತಂಗಿ ವಸಂತ ಕುಮಾರಿ ಇಬ್ಬರೂ ತಿಮ್ಮಸಂದ್ರ ಗ್ರಾಮದ ಬೋರೆಗೌಡ ರವರ ಮನೆಯಲ್ಲಿ ಇರುವಾಗ್ಗೆ, ರಾತ್ರಿ ಸುಮಾರು 02-00 ಗಂಟೆ ಸಮಯದಲ್ಲಿ ಸಣ್ಣಗೆ ಮಳೆ ಶುರುವಾದ್ದರಿಂದ, ಮನೆಯ ಹೊರಗೆ ಕಟ್ಟಿದ್ದ ದನ ಕರುಗಳನ್ನು ಒಳಗೆ ಕಟ್ಟಲೆಂದು ನನ್ನ ಅಜ್ಜಿ ಹುಚ್ಚಮ್ಮ ರವರು ಮನೆಯಿಂದ ಹೊರಗೆ ಹೋಗಿದ್ದು, ನಂತರ ವಾಪಸ್ ಮನೆಗೆ ಬಂದು ನನಗೆ ಹಾವು ಕಚ್ಚಿರುವುದಾಗಿ ವಸಂತ ಕುಮಾರಿ ರವರಿಗೆ ತಿಳಿಸಿದ್ದು, ಸದರಿ ವಿಚಾರವನ್ನು ವಸಂತಕುಮಾರಿ ರವರು ನನ್ನ ಚಿಕ್ಕಪ್ಪ ಶಿವಕುಮಾರ್‌ ರವರಿಗೆ ಪೋನ್‌ ಮಾಡಿ ತಿಳಿಸಿದ್ದು, ನಂತರ ನನ್ನ ಚಿಕ್ಕಪ್ಪ ಶಿವಕುಮಾರ್‌ ರವರು ನನ್ನ ಅಜ್ಜಿ ಹುಚ್ಚಮ್ಮ ರವರನ್ನು ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ಅಜ್ಜಿ ಹುಚ್ಚಮ್ಮ ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇದೇ ದಿವಸ ಅಂದರೆ ದಿನಾಂಕ:22-05-2017 ರಂದು ಮದ್ಯಾಹ್ನ ಸುಮಾರು 02-00 ಗಂಟೆಗೆ ಮೃತಪಟ್ಟಿರುತ್ತಾರೆ. ನನ್ನ ಅಜ್ಜಿ ಹುಚ್ಚಮ್ಮ ರವರಿಗೆ ದಿನಾಂಕ:19-05-2017 ರಂದು ರಾತ್ರಿ ಸುಮಾರು 02-00 ಗಂಟೆ ಸಮಯದಲ್ಲಿ ತಿಮ್ಮಸಂದ್ರ ಗ್ರಾಮದ ನಮ್ಮ ಸಂಬಂಧಿಕರಾದ ಬೋರೇಗೌಡ ರವರ ಮನೆಯ ಬಳಿ ಯಾವುದೋ ಒಂದು ವಿಷಪೂರಿತ ಹಾವು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಯೇ ವಿನಃ ಅವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಆದ್ದರಿಂದ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಅಜ್ಜಿ ಹುಚ್ಚಮ್ಮ ರವರ ಮೃತ ದೇಹವು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  79/2017 ಕಲಂ 323, 324, 504, 506 ಐಪಿಸಿ

ದಿನಾಂಕ: 22-05-17 ರಂದು  ಮದ್ಯಾಹ್ನ  12-30  ಗಂಟೆಯಿಂದ  1-00 ಗಂಟೆಯವೆರೆಗೆ  ಈ ಕೇಸಿನ ಗಾಯಾಳು  ಜಯಣ್ಣ ಬಿನ್ ಲೇಟ್ ಬಸವಲಿಂಗಪ್ಪ, 50ವರ್ಷ, ಲಿಂಗಾಯ್ತರು, ಜಿರಾಯ್ತಿ, ಕೆರೆಗೋಡಿ, ಕಸಬಾ ಹೋ, ತಿಪಟೂರು ತಾ. ರವರು  ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಅಂಶವೇನೆಂದರೆ,  ದಿ:22-05-17 ರಂದು  ಬೆಳಗ್ಗೆ 7-00 ಗಂಟೆಯಲ್ಲಿ ನಾನು ನಮ್ಮ ತೋಟ ನೋಡಲೆಂದು ಹೋಗಿದ್ದೆನು. ಆಗ ನನ್ನ ಪಕ್ಕದ ತೋಟದ ನನ್ನ ತಮ್ಮನಾದ ಪ್ರಕಾಶನು ನನಗೂ ಮತ್ತು ಆತನಿಗೂ ಇರುವ ಜಮೀನು ವಿವಾದ ಮತ್ತು ಬೋರಿನ ನೀರಿನ ವಿಚಾರವಾಗಿ ಏಕಾಏಕಿ ಜಗಳ ತೆಗೆದು ಈ ಬೋರಿನಿಂದ ನಿನಗೆ ನೀರು ಬಿಡುವುದಿಲ್ಲ ಕಣೋ ಸೂಳೆಮಗನೆ ಎಂತ ಆವಾಚ್ಯ ಶಬ್ದಗಳಿಂದ ಬೈಯ್ಯುತ್ತ ಅಲ್ಲೆ ಬಿದ್ದಿದ್ದ ಬಿದಿರು ದೊಣ್ಣೆಯನ್ನು ತೆಗೆದುಕೊಂಡು ನನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದನು. ನಂತರ ಇನ್ನುಮುಂದೆ ಈ ಬೋರ್ ವೆಲ್ ವಿಚಾರಕ್ಕೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂತ ಪ್ರಾಣ ಬೆದರಿಕೆ ಹಾಕಿದ್ದಲ್ಲದೆ ಕೈಗಳಿಂದ ನನ್ನ ಮೈಕೈಗೆ ಗುದ್ದಿ ನೋವುಂಟು ಮಾಡಿರುತ್ತಾನೆ. ಈ ಗಲಾಟೆ ಶಬ್ದದ ಕೇಳಿ ಬಂದದ ನನ್ನ ತಮ್ಮ ದಯಾನಮದ ಜಗಳ ಬಿಡಿಸಿ ಸಮಾಧಾನಪಡಿಸಿದನು ನಂತರ ವಿಚಾರ ತಿಳಿದ ನನ್ನ ಅಣ್ಣ ಗಂಗಾಧರನು ಯಾವುದೋ ಆಟೋದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಸೇರಿಸಿರುತ್ತಾರೆ ನಾನು ಈಗ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತೇವೆ.  ನನ್ನ  ಮೇಲೆ ಗಲಾಟೆ ಮಾಡಿದ ಪ್ರಕಾಶನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು   ಕೋರಿಕೊಳ್ಳುತ್ತೇನೆ  ಎಂತ ನೀಡಿದ ದೂರು ಪಡೆದು ಠಾಣೆಗೆ ವಾಪಸ್ಸು ಬಂದು ಮದ್ಯಾಹ್ನ  1-15 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ .Monday, 22 May 2017

Crime Incidents 22-05-17

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-90/2017 ಕಲಂ-392,ಪಿ,ಸಿ

ದಿನಾಂಕ-19/05/2017 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿಯಾದ ಚಿಕ್ಕಮ್ಮ ಕೋಂ ರಂಗಸ್ವಾಮಯ್ಯ, ಸುಮಾರು 50 ವರ್ಷ, ವಕ್ಕಲಿಗರು, ಗೃಹಿಣಿ, ವಾಸ ಕಲ್ಕರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕ್ ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು,ದಿನಾಂಕ 19/05/2017 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ನಮ್ಮ ಗ್ರಾಮದಿಂದ ಹೆಬ್ಬೂರು ಸಂತೆಗೆ ಬಂದಿದ್ದು, ಮನೆಗೆ ಬೇಕಾದ ತರಕಾರಿ ಮತ್ತು ಇತರೆ ಸಾಮಾನುಗಳನ್ನು ತೆಗೆದುಕೊಂಡು ಕುಣಿಗಲ್ ರಸ್ತೆ ಮಾರ್ಗವಾಗಿ ವಾಪಸ್ಸು ಮನೆಗೆ  ಹೋಗುವಾಗ ನಮ್ಮ ಗ್ರಾಮದ   ಕೆಂಪಣ್ಣನವರ ಮನೆ ಸಮೀಪ ನಾನು  ಮದ್ಯಾಹ್ನ 2-30 ಗಂಟೆಯಲ್ಲಿ ಒಬ್ಬಳೆ ನಡೆದುಕೊಂಡು ಹೋಗುತ್ತಿ ರುವಾಗ್ಗೆ  ನಮ್ಮ ಗ್ರಾಮದ ಕಡೆಯಿಂದ ಯಾರೋ ಇಬ್ಬರು  ಅಪರಿಚಿತ ವ್ಯಕ್ತಿಗಳು ಕಪ್ಪು ಕಲ್ಲರ್ ದ್ವಿಚಕ್ರ ವಾಹನದಲ್ಲಿ  ಬಂದು ದ್ವಿಚಕ್ರ ವಾಹನದ ಹಿಂಭಾಗದಲ್ಲಿ ಕುಳಿತ್ತಿದ್ದ  ಒಬ್ಬ ವ್ಯಕ್ತಿಯು ಬೈಕ್‌ನಿಂದ ಕೆಳಗೆ ಇಳಿದು ಬಂದು  ನನ್ನ ಕತ್ತಿನಲ್ಲಿದ್ದ  ಸುಮಾರು 25 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕೈ ಹಾಕಿ ಕಿತ್ತುಕೊಳ್ಳುವಾಗ  ನಾನು ಚೈನ್‌ನ್ನು ಹಿಡಿದುಕೊಂಡಾಗ ಮಾಂಗಲ್ಯ ಜೋಡಿಸಿ ಲಿಂಗ್ ಮಾತ್ರ ಇದ್ದು ಉಳಿದ ಸರವನ್ನು ಕಿತ್ತುಕೊಂಡು ಹೋದರು. ಅವರು ನೀಲಿ ಕಲ್ಲರ್ ಶರ್ಟ್‌ ಹಾಕಿದ್ದು ಕಪ್ಪು ಬಣ್ಣದವನಾಗಿದ್ದು ದೃಡಕಾಯ ಶರೀರವಾಗಿರುತ್ತದೆ. ಆದ್ದರಿಂದ ನನ್ನ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಸದರಿ ಆಸಾಮಿಯ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 78/2017 ಕಲಂ 87 ಕೆ.ಪಿ.ಆಕ್ಟ್

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ಎಸ್  ಆದ ನಾನು   ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿರುವಾಗ್ಗೆ ,  ಕೋಟೆನಾಯಕನಹಳ್ಳಿ ಗ್ರಾಮದ ಕರೆಕಲ್ಲು ಬಂಡೆ ಮೇಲೆ  ಯಾರೋ ಕೆಲವು ಆಸಾಮಿಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುತ್ತಾರೆ ಎಂತಾ ನನಗೆ ಸಂಜೆ 07-00 ಗಂಟೆಗೆ ನಮ್ಮ ಠಾಣಾ 24 ನೇ ಗ್ರಾಮಗಸ್ತಿನ ಬೀಟ್ ಸಿಬ್ಬಂದಿಯಾದ ಪಿ ಸಿ 997 ಜಗದೀಶ ರವರು ಖಚಿತ ಮಾಹಿತಿ ನೀಡಿರುತ್ತಾರೆ. ನಾನು ಕೂಡಲೆ ಠಾಣೆ ಬಳಿ ಬಂದು,  ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು, ಠಾಣಾ ಬಳಿ ಪಂಚರನ್ನು ಬರ ಮಾಡಿಕೊಂಡು,ಪಂಚರೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ KA 06 G 347 ನೇ ಪೊಲೀಸ್ ಜೀಪಿನಲ್ಲಿ ಕೂರಿಸಿಕೊಂಡು ಕೋಟೆನಾಯಕನಹಳ್ಳಿ ಗ್ರಾಮದ ಕರೆಕಲ್ಲು ಬಂಡೆ ಸಮೀಪಕ್ಕೆ ಬಂದು ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗಿಳಿದು ಮರೆಮಾಚಿ ನೋಡಲಾಗಿ ಬಂಡೆಯ ಮೇಲೆ    ಕೆಲವು ಜನರು ವೃತ್ತಾಕಾರವಾಗಿ ಕುಳಿತುಕೊಂಡು ಚಾರ್ಚರ್ ಲೈಟ್ ಬೆಳಕಿನಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂದು ಮಾತನಾಡುತ್ತಾ ಹಣವನ್ನು ಮತ್ತು ಬೈಕ್ ಗಳನ್ನು  ಪಣವಾಗಿಟ್ಟುಕೊಂಡು ಇಸ್ಪೀಟ್ ಜೂಜಾಟ ಆಡುತ್ತಿದ್ದು, ಪೊಲೀಸರು ಅವರನ್ನು ಸುತ್ತುವರಿದು ದಾಳಿ ಮಾಡಿದಾಗ ಆಸಾಮಿಗಳು ಓಡಿಹೋಗುಲು ಪ್ರಯತ್ನಸಿದರು ಆಗ ಪೊಲೀಸ್ ರವರು ಕೆಲವರನ್ನು ಬೆನ್ನಟ್ಟಿ  ಹಿಡಿದು ನಮ್ಮ ಸಮಕ್ಷಮ ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಪಾಂಡುರಂಗ  @ ಪಾಂಡಿ ಬಿನ್  ಲೇಟ್   ರಾಮಯ್ಯ, 36 ವರ್ಷ,  ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಈರಲಗೆರೆ, ಕಸಬಾ  ಹೋಬಳಿ, ತಿಪಟೂರು  ತಾ. 2) ಗುರುಸಿದ್ದಯ್ಯ ಬಿನ್ ಸಿದ್ದರಾಮಯ್ಯ , 26 ವರ್ಷ, ಪರಿಶಿಷ್ಟ ಜನಾಂಗ, ಕೂಲಿ  ಕೆಲಸ, ಈರಲಗೆರೆ, ಕಸಬಾ  ಹೋಬಳಿ, ತಿಪಟೂರು ತಾ.  3) ತಿಮ್ಮಯ್ಯ  ಬಿನ್  ಲೇಟ್  ಕೆಂಪರಂಗಯ್ಯ, 55 ವರ್ಷ,  ಆದಿ ಕರ್ನಾಟಕ ಜನಾಂಗ, ಕೂಲಿ  ಕೆಲಸ,ಈರಲಗೆರೆ, ಕಸಬಾ ಹೋಬಳಿ, ತಿಪಟೂರು 4) ಪಾತಯ್ಯ  ಬಿನ್ ಲೇ. ನಿಂಗಪ್ಪ, 50 ವರ್ಷ, ಉಪ್ಪಾರರು, ವ್ಯವಸಾಯ,  ಬೆನ್ನಾಯಕನಹಳ್ಳಿ, ಕಸಬಾ ಹೋಬಳಿ, ತಿಪಟೂರು, ತಾ  5)  ಉಮಾಶಂಕರ್ @ ಉದಯ್  ಕೆ.ಬಿ  ಬಿನ್ ಬಸವರಾಜು, 19 ವರ್ಷ, ದೇವಾಂಗ ಜನಾಂಗ,  ನೇಯ್ಗೆ  ಕೆಲಸ, ಕೆ.ಎನ್ ಹಳ್ಳಿ , ಕಸಬಾ  ಹೋಬಳಿ, ತಿಪಟೂರು ತಾ 6) ಕಿರಣ್ ಎ.ಜಿ.  ಬಿನ್  ಗಂಗಾಧರ್ , 19 ವರ್ಷ,  ದೇವಾಂಗ ಜನಾಂಗ,  ಮಗ್ಗದ ಕೆಲಸ, ಕೆ.ಎನ್. ಹಳ್ಳಿ, ತಿಪಟೂರು  ತಾ 7) ಯತೀಶ್  ಬಾಬು  ಕೆ.ಎಲ್.  ಬಿನ್  ಲೋಕೇಶ್, 20 ವರ್ಷ, ದೇವಾಂಗ ಜನಾಂಗ, ಸೀರೆ  ವ್ಯಾಪಾರ, ಕೆ.ಎನ್. ಹಳ್ಳಿ, ಕಸಬಾ ಹೋಬಳಿ, ತಿಪಟೂರು ಎಂದು ತಿಳಿಸಿದ್ದು, ಇವರಿಂದ ಸ್ಥಳದಲ್ಲಿ ಜೂಜಾಟ ಆಡಿ ಓಡಿಹೋದವರ ಹೆಸರು ವಿಳಾಸವನ್ನು ಕೇಳಲಾಗಿ 8) ಕೋಟೆನಾಯಕನಹಳ್ಳಿ ಗ್ರಾಮದ ಹರ್ಷ ಹಾಗೂ 9) KA-06 U-4971 ಬೈಕ್ ರ ಚಾಲಕ  ಎಂತ ತಿಳಿಸಿದರು. ನಂತರ ಸ್ಥಳವನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲದ ಮೇಲೆ ಆಸಾಮಿಗಳು ಪಣಕ್ಕೆ ಇಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಹಣವನ್ನು ಎಣಿಸಲಾಗಿ ಒಟ್ಟು  2670/- ರೂಗಳಿದ್ದು, ಇಸ್ಪೀಟ್ ಎಲೆಗಳು ಒಟ್ಟು 52 ಇರುತ್ತವೆ. ಸ್ಥಳದಲ್ಲಿಯೇ ಅಖಾಡದಲ್ಲಿ ಪಣಕ್ಕಿಟ್ಟಿದ್ದ ಬೈಕ್ ಗಳನ್ನು ಪರಿಶೀಲಿಸಲಾಗಿ 1) KA-03 EB-1202 ನೇ ಹಿರೋ ಸ್ಪ್ಲೇಂಡರ್ ಬೈಕ್, 2) KA-44 S-8532 ನೇ  ಪಲ್ಸರ್  ಬೈಕ್  3) KA-06 U-4971 ನೇ ಹಿರೋ ಸ್ಪ್ಲೇಂಡರ್ ಬೈಕ್  4) KA-44 R-8967  ಟಿವಿಎಸ್ ಎಕ್ಸ್ ಎಲ್  ವಾಹನಗಳು ಮತ್ತು ಮೇಲ್ಕಂಡ 1) 2670/- ರೂ ನಗದು ಹಣ. 2) 52 ಇಸ್ಪೀಟ್ ಎಲೆಗಳು 3)  ಒಂದು ಪ್ಲಾಸ್ಟಿಕ್ ಚೀಲ 4) ಚಾರ್ಚರ್ ಲೈಟ್ ನ್ನು ರಾತ್ರಿ 07-30. ಗಂಟೆಯಿಂದ 08-15 ಗಂಟೆಯವರೆಗೆ ಬರೆದ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ 07 ಜನ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 45/2017 ಕಲಂ 379 ಐಪಿಸಿ ಮತ್ತು 42(1) ,44(6)  ಕೆ.ಎಂ.ಎಂ.ಆರ್‌.ಸಿ ಆಕ್ಟ್‌‌ 1994 ಮತ್ತು 4(1),4(ಎ),21(1) ಎಂಎಂಡಿ ಆರ್‌ಆಕ್ಟ್‌.

 

ದಿನಾಂಕ:21/05/2017 ರಂದು ಬೆಳಿಗ್ಗೆ 11-15 ಗಂಟೆಗೆ ಠಾಣಾ ಡಿ.ಎಸ್.ಪಿ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ 21/05/2017 ರಂದು ಬೆಳಿಗ್ಗೆ ಬಡವನಹಳ್ಳಿ ಠಾಣಾ ಸರಹದ್ದು ಗೂಬಲಗುಟ್ಟೆ ಕಡೆಯಿಂದ ಗಿಡದಾಗಲಹಳ್ಳಿ ಕಡೆಗೆ ಪರವಾನಗಿ ಇಲ್ಲದೆ ಲಾರಿಯಲ್ಲಿ ಮರಳು ಸಾಗಿಸುತ್ತಿರುವ ಬಗ್ಗೆ ನನಗೆ ಖಚಿತ ಮಾಹಿತಿ ಬಂದಿದ್ದರಿಂದ ನಾನು ಸಿಬ್ಬಂದಿ ನಾಗರಾಜು ರವರೊಂದಿಗೆ ಬೆಳಿಗ್ಗೆ 9-00 ಗಂಟೆಗೆ ಬಡವನಹಳ್ಳಿ ಠಾಣಾ ಸರಹದ್ದಿನ ಕೆ.ಟಿ ಹಳ್ಳಿ ಕ್ರಾಸ್ ಗೆ ಹೋದಾಗ ಈಗ್ಗೆ ಸುಮಾರು ಒಂದು ಗಂಟೆ ಮುಂಚೆ ಒಂದು ಮರಳು ತುಂಬಿರುವ ಲಾರಿ ಕೆ.ಟಿ ಹಳ್ಳಿ ಮಾರ್ಗವಾಗಿ ಗಿಡದಾಗಲಹಳ್ಳಿ ಕಡೆಗೆ ಹೋದ ಬಗ್ಗೆ ಬಾತ್ಮೀದಾರರಿಂದ ಬಂದ ಮಾಹಿತಿ ತಿಳಿದು ಕೆ.ಟಿ ಹಳ್ಳಿ ಮಾರ್ಗವಾಗಿ ಗಿಡದಾಗಲಹಳ್ಳಿ ಸ್ಕೂಲ್ ಹತ್ತಿರದ ಕ್ರಾಸ್ ಹೋದಾಗ ಲಾರಿ ಕಾಣಿಸಲಿಲ್ಲ. ಅಲ್ಲಿಂದ ವಾಪಸ್ ಬಡವನಹಳ್ಳಿಗೆ ಬರುವಾಗ ಬೆಳಿಗ್ಗೆ 10-30 ಗಂಟೆಗೆ ಬೋರಾಗುಂಟೆ ಸಮೀಪ ಬಡವನಹಳ್ಳಿ ನಾಗರಾಜು ರವರ ಇಟ್ಟಿಗೆ ಪ್ಯಾಕ್ಟರಿಯ ಹತ್ತಿರ ಒಂದು ಲಾರಿ ನಿಂತಿದ್ದು, ಲಾರಿಯಿಂದ ಮರಳನ್ನು ಕೆಳಕ್ಕೆ ಸುರಿಯುತ್ತಿದ್ದರು. ರಸ್ತೆಯಲ್ಲಿ ನಮ್ಮ ಜೀಪನ್ನು ನೋಡಿ ಮರಳನ್ನು ಸುರಿಯುತ್ತಿದ್ದವರು ಮತ್ತು ಚಾಲಕ ಸೇರಿ ಎಲ್ಲರು ಓಡಿ ಹೋದರು. ನಾವು ಹತ್ತಿರ ಹೋಗಿ ನೋಡಿದಾಗ ಲಾರಿಯಲ್ಲಿ ಸುಮಾರು 20 ಬಾಂಡ್ಲಿಯಷ್ಟು ಮರಳು ಇದ್ದು, ಉಳಿದ ಸುಮಾರು ಒಂದು ಲಾರಿ ಲೋಡಿನಷ್ಟು ಮರಳನ್ನು ಕೆಳಕ್ಕೆ ಸುರಿದಿದ್ದರು. ಲಾರಿ ನಂಬರ್ ನೋಡಲಾಗಿ KA-02 – AD – 3667 ನಂಬರಿನ ಮಾರುತಿ ಪ್ರಸನ್ನ ಲಾರಿಯಾಗಿರುತ್ತೆ. ಸದರಿ ಲಾರಿಯನ್ನು ವಶಕ್ಕೆ ತೆಗೆದುಕೊಂಡು, ಬೆಳಿಗ್ಗೆ 11-15 ಗಂಟೆಗೆ ಠಾಣೆಯ ಮುಂದೆ ಲಾರಿ ತಂದು ನಿಲ್ಲಿಸಿ, ಯಾವುದೇ ಪರವಾನಗಿ ಇಲ್ಲದೆ ಲಾರಿಯಲ್ಲಿ ಮರಳನ್ನು ಸಾಗಿಸುತ್ತಿದ್ದ KA-02 – AD - 3667 ನೇ ಲಾರಿ ಚಾಲಕ ಮತ್ತು ಲಾರಿ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಹಾಗೂ ನಾಗರಾಜು ರವರ ಇಟ್ಟಿಗೆ ಪ್ಯಾಕ್ಟರಿ ಹತ್ತಿರ ಸುರಿದಿರುವ ಮರಳನ್ನು ವಶಕ್ಕೆ ತೆಗೆದುಕೊಳ್ಳಲು ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.50/2017, ಕಲಂ:323, 324, 504, 506 ರೆ/ವಿ 34 ಐಪಿಸಿ.

ದಿನಾಂಕ:21/05/2017 ರಂದು ಮಧ್ಯಾಹ್ನ 01:30 ಗಂಟೆಗೆ ಪಿರ್ಯಾದಿ ಕೆಂಚರಾಜು ಬಿನ್ ಲೇ||ತಿಪ್ಪಯ್ಯ, 53 ವರ್ಷ, ಎಕೆ ಜನಾಂಗ, ಕೂಲಿಕೆಲಸ, ಗರಣಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ, ದಿನಾಂಕ:11/05/2017 ರಂದು ಬೆಳಿಗ್ಗೆ ಸುಮಾರು 06:30 ಗಂಟೆಯ ಸಮಯದಲ್ಲಿ ನನ್ನ ಅಣ್ಣನಾದ ಉಗ್ರಪ್ಪನು ನಮ್ಮ ಗ್ರಾಮದ ನಮ್ಮ ಜನಾಂಗದ ನಿಂಗಪ್ಪ ರವರ ಮನೆಯ ಮುಂದಿರುವ ರಸ್ತೆಯಲ್ಲಿ ಕೆರೆ ಕಡೆಗೆ ಹೋಗಲು ನಡೆದುಕೊಂಡು ಹೋಗುತ್ತಿರುವಾಗ್ಗೆ. ನಮ್ಮ ಗ್ರಾಮದ ನಿಂಗಪ್ಪ ಮತ್ತು ಆತನ ಮಕ್ಕಳಾದ ಮೈಲಾರಪ್ಪ, ತಿಮ್ಮಯ್ಯ ಮೂರು ಜನರು ಸೇರಿಕೊಂಡು ವಿನಾಕಾರಣ ನಮ್ಮ ಅಣ್ಣ ಉಗ್ರಪ್ಪನ ಮೇಲೆ ಗಲಾಟೆ ಮಾಡುತ್ತಿದ್ದರು. ಗಲಾಟೆ ಶಬ್ದ ಕೇಳಿಸಿಕೊಂಡು ನಾನು, ನನ್ನ ಮಗ ಕಾರ್ತಿಕ್ ಹಾಗೂ ನನ್ನ ಅಣ್ಣ ಕದರಪ್ಪ ಮೂರು ಜನರು ಹೋಗಿ ಏಕೆ ಈ ರೀತಿ ವಿನಾಕಾರಣ ನಮ್ಮ ಅಣ್ಣನ ಮೇಲೆ ಗಲಾಟೆ ಮಾಡುತ್ತಿದ್ದೀರಾ ಎಂತ ಕೇಳಿದಕ್ಕೆ ಅವರುಗಳು ನಮ್ಮನ್ನು ಬಾಯಿಗೆ ಬಂದಂತೆ ಬೈದು ಏಕಾಏಕಿ ನಮ್ಮ ಮೇಲೂ ಸಹ ಗಲಾಟೆ ಮಾಡಿ ತಿಮ್ಮಯ್ಯ ಎಂಬುವನು ಕಲ್ಲಿನಿಂದ ನನ್ನ ಮಗ ಕಾರ್ತಿಕ್ ರವರ ತಲೆಗೆ ಹೊಡೆದು ರಕ್ತಗಾಯಪಡಿಸಿದನು, ಮೈಲಾರಪ್ಪ ಎಂಬುವನು ಇಟ್ಟಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿದನು. ನಿಂಗಪ್ಪ ಎಂಬುವವನು ನಮ್ಮ ಅಣ್ಣ ಕದರಪ್ಪನಿಗೆ ಕೈಗಳಿಂದ ಮೈಕೈಗೆ ಗುದ್ದಿ, ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದನು. ಅಷ್ಟರಲ್ಲಿ ಅಲ್ಲಿಯೇ ಇದ್ದ ನಮ್ಮ ಗ್ರಾಮದ ಲಕ್ಷ್ಮಿನರಪ್ಪ ಬಿನ್ ರಾಮಯ್ಯ, ರಮೇಶ ಬಿನ್ ಮಚ್ಚಪ್ಪ ರವರು ಬಂದು ಜಗಳ ಬಿಡಿಸಿ ಸಮಾಧಾನಪಡಿಸಿದರು. ಅಷ್ಟಕ್ಕೂ ಸುಮ್ಮನಾಗದ ತಿಮ್ಮಯ್ಯ, ಮೈಲಾರಪ್ಪ, ನಿಂಗಪ್ಪ ರವರು ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲಾ ನಿಮಗೊಂದು ಗತಿ ಕಾಣಿಸುತ್ತೇವೆಂತ ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೋಗುವಾಗ ತಮ್ಮ ಕೈಗಳಲ್ಲಿದ್ದ ಇಟ್ಟಿಗೆ ಮತ್ತು ಕಲ್ಲುಗಳನ್ನು ಅಲ್ಲಿಯೇ ಎಸೆದು ಹೊರಟು ಹೋದರು.ನಂತರ ನಾನು ಗಾಯಗೊಂಡಿದ್ದ ನಾನು ಮತ್ತು ನನ್ನ ಮಗ ಕಾರ್ತಿಕ್ ಹಾಗೂ ನಮ್ಮ ಅಣ್ಣನಾದ ಕದರಪ್ಪ ಮೂರು ಜನರು ಮಿಡಿಗೇಶಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದೆವು. ಈ ಬಗ್ಗೆ ಗ್ರಾಮದಲ್ಲಿ ಗ್ರಾಮಸ್ಥರುಗಳು ನ್ಯಾಯಾ ಪಂಚಾಯ್ತಿ ಮಾಡುತ್ತೇವೆಂತ ತಿಳಿಸಿದ್ದು, ಮೇಲ್ಕಂಡವರು ರಾಜಿ ಪಂಚಾಯ್ತಿಗೆ ಒಪ್ಪದೇ ಇದುದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು, ದಿನಾಂಕ:11/05/2017 ರಂದು ಬೆಳಿಗ್ಗೆ ಸುಮಾರು 06:30 ಗಂಟೆಯ ಸಮಯದಲ್ಲಿ ನಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 43/2017 ಕಲಂ 379 ಐಪಿಸಿ ಮತ್ತು 42(1) ,44(6)  ಕೆ.ಎಂ.ಎಂ.ಆರ್‌.ಸಿ ಆಕ್ಟ್‌‌ 1994 ಮತ್ತು 4(1),4(ಎ),21(1) ಎಂಎಂಡಿ ಆರ್‌ಆಕ್ಟ್‌.

 

ದಿನಾಂಕ:21/05/2017 ರಂದು ಬೆಳಿಗ್ಗೆ 08-15 ಗಂಟೆಗೆ ಠಾಣಾ ಪಿ.ಐ (ಪ್ರಭಾರ) ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ 21/05/2017 ರಂದು ಬೆಳಿಗ್ಗೆ ಬಡವನಹಳ್ಳಿ ಠಾಣಾ ಸರಹದ್ದು ಬೋರಮುತ್ತನಹಳ್ಳಿ ಗ್ರಾಮದ ಹತ್ತಿರ ಪರವಾನಗಿ ಇಲ್ಲದೆ ಟ್ರಾಕ್ಟರ್ ನಲ್ಲಿ ಮರಳು ಸಾಗಿಸುತ್ತಿರುವ ಬಗ್ಗೆ ನನಗೆ ಬಂದ ಖಚಿತ ಮಾಹಿತಿ ಬಂದಿದ್ದರಿಂದ ನಾನು ಚಾಲಕನೊಂದಿಗೆ ಬೆಳಿಗ್ಗೆ 7-30 ಗಂಟೆಗೆ ಬೋರಮುತ್ತನಹಳ್ಳಿ ಗ್ರಾಮದ ಹತ್ತಿರ ಹೋದಾಗ ಒಂದು ಟ್ರಾಕ್ಟರ್ ಬರುತ್ತಿದ್ದು, ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಟ್ರಾಕ್ಟರ್ ನ ಟ್ರೈಲರ್ ನಲ್ಲಿ ಮರಳು ತುಂಬಿದ್ದು, ಟ್ರಾಕ್ಟರ್ ನಂಬರ್ KA-52 – T -1771 - 72 ಆಗಿದ್ದು, ಟ್ರಾಕ್ಟರ್ ನ ಚಾಲಕನನ್ನು ಮರಳು ಸಾಗಿಸಲು ಪರವಾನಗಿ ಇದೆಯೇ ಎಂದು ಕೇಳಿದಾಗ ಇಲ್ಲ ಎಂದು ತಿಳಿಸಿದ. ಆತನ ಹೆಸರು ವಿಳಾಸ ಕೇಳಲಾಗಿ ಹನುಮಂತ ಬಿನ್ ಚಂದ್ರಪ್ಪ, 30 ವರ್ಷ, ನಾಯಕರು, ವಿಠಲಾಪುರ ಗ್ರಾಮ, ಮಧುಗಿರಿ ತಾ ಎಂತ ತಿಳಿಸಿದ. ಸದರಿ ಟ್ರಾಕ್ಟರ್ ಅನ್ನು ವಶಕ್ಕೆ ತೆಗೆದುಕೊಂಡು ಚಾಲಕನೊಂದಿಗೆ ಟ್ರಾಕ್ಟರ್ ಅನ್ನು ಓಡಿಸಿಕೊಂಡು ಬಂದು ಬೆಳಿಗ್ಗೆ 8-15 ಗಂಟೆಗೆ ಠಾಣೆಯ ಮುಂದೆ ಟ್ರಾಕ್ಟರ್ ನಿಲ್ಲಿಸಿ, ಟ್ರಾಕ್ಟರ್ ಚಾಲಕ ಹನುಮಂತ ನನ್ನು ವಶಕ್ಕೆ ನೀಡಿದ್ದು, ಯಾವುದೇ ಪರವಾನಗಿ ಇಲ್ಲದೆ ಟ್ರಾಕ್ಟರ್ ನಲ್ಲಿ ಮರಳನ್ನು ಸಾಗಿಸುತ್ತಿದ್ದ KA-52 – T -1771 - 72 ನೇ ಟ್ರಾಕ್ಟರ್ ಚಾಲಕ ಹನುಮಂತ ಮತ್ತು ಟ್ರಾಕ್ಟರ್ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


Page 1 of 4
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 81 guests online
Content View Hits : 274886