lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 5 6 7 8 9
10 11 12 13 14 15 16
17 18 19 20 21 22 23
24 25 26 27 28 29 30
April 2017

Sunday, 30 April 2017

Crime Incidents 30-04-17

ದಂಡಿನಶಿವರ ಪೊಲೀಸ್ ಠಾಣಾ ಮೊ.ನಂ 41/2017 ಕಲಂ 87 ಕೆ.ಪಿ ಆಕ್ಟ್

ದಿನಾಂಕ 29/04/2017 ರಂದು ಸಂಜೆ 06-30 ಗಂಟೆಗೆ ಜಿ.ವಿ ಅರುಣ್ ಕುಮಾರ್. ಪಿ.ಐ, ಡಿ.ಸಿ.ಐ.ಬಿ ಘಟಕ ತುಮಕೂರು ರವರು ನೀಡಿದ ವರದಿಯ ಅಂಶವೇನೆಂದರೆ 29/04/2017 ರಂದು ನಾನು ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮದ್ಯಾಹ್ನ 01-00 ಗಂಟೆಗೆ ನನಗೆ ಬಂದ ಖಚಿತ ಮಾಹಿತಿ ಎನೆಂದರೆ, ತುರುವೇಕೆರೆ ತಾಲ್ಲೋಕ್, ದಂಡಿನಶಿವರ ಹೋಬಳಿ, ಅರಕೆರೆ ಗ್ರಾಮದ ಇಟ್ಟಿಗೆ ಪ್ಯಾಕ್ಟರಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಜೂಜಾಟವನ್ನು ಕೆಲವು ಜನರು ಆಡುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು. ಈ ಮಾಹಿತಿಯನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಿಗೆ ಮಾಹಿತಿ ತಿಳಿಸಿದ್ದು. ಮಾನ್ಯ ಪೊಲೀಸ್ ಅಧೀಕ್ಷಕರವರು, ತುಮಕೂರು ಜಿಲ್ಲಾ ಡಿ.ಸಿ.ಐ.ಬಿ ಘಟಕದ ಸಿಬ್ಬಂದಿ ಮತ್ತು ತುಮಕೂರು ಟೌನ್ ನ ಹೊಸಬಡವಾಣೆ,  ತಿಲಕ್ ಪಾರ್ಕ್. ಜಯನಗರ, ತುಮಕೂರು ಗ್ರಾಮಾಂತರ. ಕ್ಯಾತಸಂದ್ರ. ಹೆಬ್ಬೂರು, ಗುಬ್ಬಿ, ಬೆಳ್ಳಾವಿ, ಠಾಣೆಗಳ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಿ ದಾಳಿ ನಡೆಸುವಂತೆ ಮಾರ್ಗದರ್ಶನ ನೀಡಿದ್ದು. ಮಾನ್ಯ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಂತೆ ನಾನು ಮತ್ತು ನಮ್ಮ ಘಟಕದ ಹೆಚ್.ಸಿ 14 ಸಿದ್ದೇಶ್,  ಪಿ.ಸಿ 454 ಶಶಿಕುಮಾರ್.   ಜಯನಗರ ಪೊಲೀಸ್ ಠಾಣೆಯ ಪಿ.ಸಿ 505 ಹನುಮಂತ ಕಡ್ಲೀಮಠ, ಪಿ.ಸಿ 370 ಪರಶುರಾಮಪ್ಪ,  ಪಿ.ಸಿ 384 ಮುಜೀಬುಲ್ಲಾ,  ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಸಿ 228 ಶಶಿಕುಮಾರ್,  ಹೊಸಬಡವಾಣೆ ಠಾಣೆಯ ಪಿ.ಸಿ 191 ಮಂಜುನಾಥ,  ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಪಿ.ಸಿ 704 ರವಿಕುಮಾರ್,  ಪಿ.ಸಿ 759 ಪವನ್,  ಹೆಬ್ಬರೂ ಪೊಲೀಸ್ ಠಾಣೆಯ ಪಿ.ಸಿ 106 ಬಸವರಾಜು, ಗುಬ್ಬಿ ಪೊಲೀಸ್ ಠಾಣೆ ಪಿ.ಸಿ 536 ವಿಜಯ್ ಕುಮಾರ್,   ಬೆಳ್ಳಾವಿ ಪೊಲೀಸ್ ಠಾಣೆಯ ಪಿ.ಸಿ 519 ಶಿವಣ್ಣ,  ಕ್ಯಾತಸಂದ್ರ ಪೊಲೀಸ್ ಠಾಣೆಯ ಪಿ.ಸಿ 895 ಚಿದಾನಂದಸ್ವಾಮಿ, ರವರುಗಳೊಂದಿಗೆ ಸಾಯಂಕಾಲ 05-00 ಗಂಟೆ ಸಮಯಕ್ಕೆ ಎರಡು ಖಾಸಗಿ ವಾಹನಗಳಲ್ಲಿ ತುರುವೇಕೆರೆ ತಾಲ್ಲೋಕ್, ದಂಡಿನಶಿವರ ಹೋಬಳಿಯ ಅರಕೆರೆ ಗ್ರಾಮದ ಪಕ್ಕ ಇರುವ ಒಂದು ಇಟ್ಟಿಗೆ ಪ್ಯಾಕ್ಟರಿಯ ಸಮೀಪ ಬಂದಾಗ ಸುಮಾರು ಜನರು ವೃತ್ತಾಕಾರವಾಗಿ ಕುಳಿತು ಒಂದು ದೊಡ್ಡ ಪ್ಲಾಸ್ಟಿಕ್ ಕವರ್ ಮೇಲೆ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಜೂಜಾಟ ಆಡುತ್ತಿದ್ದುದು ಕಂಡು ಬಂತು. ನಾನು ಮತ್ತು ಸಿಬ್ಬಂದಿ ಸದರಿ ಜೂಜಾಟವಾಡುತ್ತಿದ್ದವರನ್ನು ಸುತ್ತುವರೆದು. ಅವರಿಗೆ  ಯಾರೂ ತಪ್ಪಿಸಿಕೊಳ್ಳಲು ಪ್ರಯತ್ನಿಸದಂತೆ ಸೂಚನೆ ನೀಡಿ ಎಲ್ಲರನ್ನು ಸಿಬ್ಬಂದಿಯವರು ಸುತ್ತುವರೆದಾಗ ಸ್ಥಳದಲ್ಲಿ ಜೂಜಾಡುತ್ತಿದ್ದ ವ್ಯಕ್ತಿಗಳು ಸುಮಾರು 24 ಜನ ಇದ್ದರು. ಮತ್ತು ಪ್ಲಾಸ್ಟಿಕ್ ಕವರ್ ನ ಮೇಲೆ ಇಸ್ಪೀಟ್ ಎಲೆಗಳು ಮತ್ತು ಹಣ ಚಲ್ಲಾಪಿಲ್ಲಿಯಾಗಿ ಬಿದ್ದಿತ್ತು. ನಂತರ ನಾನು ಸಿಬ್ಬಂದಿಯವರಿಗೆ ಮೇಲ್ಕಂಡವರು ತಪ್ಪಿಸಿಕೊಳ್ಳದಂತೆ ಸೂಚಿಸಿ ದಂಡಿನಶಿವರ ಪೊಲೀಸ್ ಠಾಣೆಗೆ ಬಂದು ಮೇಲ್ಕಂಡ ಜೂಜಾಡುತ್ತಿದ್ದವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಈ ವರದಿ ನೀಡಿದ್ದು. ಸದರಿ ವರದಿಯನ್ನು ಸ್ವೀಕರಿಸಿ ಠಾಣಾ ಜಿ.ಎಸ್.ಸಿ ನಂಬರ್ 69/2017 ರಲ್ಲಿ ನೊಂದಾಯಿಸಿರುತ್ತೆ.

ನಂತರ ಕೃತ್ಯ ನಡೆದ ಸ್ಥಳಕ್ಕೆ ನಾನು ಸಿಬ್ಬಂದಿ ಸ್ಥಳಕ್ಕೆ ಸಂಜೆ 07-00 ಗಂಟೆಗೆ ಭೇಟಿ ನೀಡಿ ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು ತುಮಕೂರು ಜಿಲ್ಲಾ ಡಿ.ಸಿ.ಐ.ಬಿ ಘಟಕದ  ಪಿ.ಐ ರವರ ಜೊತೆಯಲ್ಲಿ ಬಂದಿದ್ದ ಸಿಬ್ಬಂದಿಯವರು ಸುತ್ತುವರೆದು ವೃತ್ತಾಕಾರವಾಗಿ ಕುಳ್ಳರಿಸಿದ್ದ ಜೂಜಾಟವಾಡುತ್ತಿದ್ದವರು ಒಟ್ಟು 24 ಜನ ಇದ್ದು. ಅವರುಗಳ ಹೆಸರು ವಿಳಾಸ ವಿಚಾರ ಮಾಡಲಾಗಿ 1) ಉಮೇಶ್ ಬಿನ್ ಚಿಕ್ಕಲಿಂಗಯ್ಯ. 45 ವರ್ಷ. ಕುರುಬರು ಜಿರಾಯ್ತಿ, 2 ನೇ ವಾರ್ಡ್ . ಜೋಗಿಹಳ್ಳಿ, ಚಿಕ್ಕನಾಯಕನಹಳ್ಳಿ ಟೌನ್.  02) ಲಕ್ಕಣ್ಣಶೆಟ್ಟಿ ಬಿನ್ ಲೇ ಶಿವಣ್ಣಶೇಟ್ಟಿ, 57 ವರ್ಷ. ಕುಂಬಾರಶೆಟ್ಟರು, ಕೂಲಿ ಕೆಲಸ, ದಂಡಿನಶಿವರ, ತುರುವೇಕೆರೆ ತಾಲ್ಲೋಕ್,  3) ಜಯರಾಜು ಬಿನ್ ಲೇ. ನಂಜುಂಡಪ್ಪ. 44 ವರ್ಷ. ಲಿಂಗಾಯ್ತರು, ಜಿರಾಯ್ತಿ, ಕಲ್ಲುಸಾದರಹಳ್ಳಿ, ಬಾಣಾವರ ಹೋಬಳಿ, ಅರಸಿಕೆರೆ ತಾಲ್ಲೋಕ್,  4) ವಿಶ್ವನಾಥ ಹೆಚ್.ಎನ್. ಬಿನ್ ನಂಜುಂಡಸ್ವಾಮಿ ಹೆಚ್.ಎಂ. 36 ವರ್ಷ. ವಕ್ಕಲಿಗರು. ಚಾಲಕ, ಟಿ ಹೊಸಹಳ್ಳಿ, ಕಸಬಾ ಹೋಬಳಿ, ತುರುವೇಕೆರೆ ತಾಲ್ಲೋಕ್,  5) ಮಂಜುನಾಥ ಬಿನ್ ಲೇ ದ್ಯಾವಯ್ಯ. 38 ವರ್ಷ. ಉಪ್ಪಾರ ಜನಾಂಗ, ಜಿರಾಯ್ತಿ, ಕೊಂಡ್ಲಿಘಟ್ಟ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್,  ಮರುಳಪ್ಪ ಬಿನ್ ಶಿವನಂಜಪ್ಪ, 50 ವರ್ಷ. ಲಿಂಗಾಯ್ತರು,  ಜಿರಾಯ್ತಿ, ಶಿವಸಂದ್ರ. ನಿಟ್ಟೂರು ಹೋಬಳಿ, ಗುಬ್ಬಿ ತಾಲ್ಲೋಕ್,  7) ರವೀಶ್ ಬಿನ್ ಕುಮಾರಸ್ವಾಮಿ, 24 ವರ್ಷ. ಕುರುಬರು, ಜಿರಾಯ್ತಿ, ಅರಕೆರೆ, ದಂಡಿನಶಿವರ ಹೋಬಳಿ, ತುರುವೇಕೆರೆ ತಾಲ್ಲೋಕ್,  8)ಸುರೇಶ್ ಬಿನ್ ಸಿದ್ದರಾಮಯ್ಯ, 45 ವರ್ಷ. ಲಿಂಗಾಯ್ತರು, ಜಿರಾಯ್ತಿ, ಗಡಬನಹಳ್ಳಿ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್,  9) ಪದ್ಮನಾಭ ಬಿನ್ ವೆಂಕಟರಾಮಯ್ಯ, 33 ವರ್ಷ. ರೆಡ್ಡಿ ಜನಾಂಗ, ಜಿರಾಯ್ತಿ, ಕಿಬ್ಬನಹಳ್ಳಿ, ತಿಪಟೂರು ತಾಲ್ಲೋಕ್,  10) ರಾಜೇಗೌಡ ಬಿನ್ ಪುಟ್ಟಹನುಮಯ್ಯ, 45 ವರ್ಷ, ತಿಗಳರು, ಜಿರಾಯ್ತಿ, ಅಡಿಕೆ ವ್ಯಾಪಾರ, ಕಲ್ಲೂರು, ಕಡಬಾ ಹೋಬಳಿ, ಗುಬ್ಬಿ ತಾಲ್ಲೋಕ್,  11) ಮಹಾಲಿಂಗಯ್ಯ ಬಿನ್ ಲೇ ಮರಿಲಿಂಗಯ್ಯ, 45 ವರ್ಷ, ವಕ್ಕಲಿಗರು, ಜಿರಾಯ್ತಿ, ಕುಣಿಕೇನಹಳ್ಳಿ, ಕಸಬಾ ಹೋಬಳಿ, ತುರುವೇಕೆರೆ ತಾಲ್ಲೋಕ್, 12) ಇಮ್ರಾನ್ ಬಿನ್ ಸರ್ದಾರ್ ಸಾಬ್, 30 ವರ್ಷ. ಮುಸ್ಲಿಂ ಜನಾಂಗ, ಕಬ್ಬಿಣದ ಕೆಲಸ, ದೇವೇಗೌಡ ಬಡವಾಣೆ, ತುರುವೇಕೆರೆ ಟೌನ್, 13) ಶಬ್ಬೀರ್ ಬಿನ್ ಬಾಷಾಸಾಬ್ 39 ವರ್ಷ ಪ್ಲಾಸ್ಟಿಕ್ ವ್ಯಾಪಾರ, ಚಾಮುಂಡಿ ಬಡಾವಣೆ,ತಿಪಟೂರು ಟೌನ್.  14) ಕುಮಾರಯ್ಯ ಬಿನ್ ಶಿವಣ್ಣ, 35 ವರ್ಷ. ಮಡಿವಾಳರು ಕೂಲಿ ಕೆಲಸ, ದುಗುಡಿಹಳ್ಳಿ, ಚಿಕ್ಕನಾಯಕನಹಳ್ಳಿ ತಾಲ್ಲೋಕ್,  15) ಶಫೀ ಬಿನ್ ಖಲೀಲ್ ಸಾಬ್, 45 ವರ್ಷ, ಆಟೋ ಚಾಲಕ, ಬೋವಿ ಕಾಲೋನಿ, 10 ನೇ ಕ್ರಾಸ್ ಗಾಂಧಿನಗರ, ತಿಪಟೂರು ಟೌನ್,  16) ತಿಮ್ಮಪ್ಪ ಬಿನ್ ಗಿರಿದಾಸಪ್ಪ, 45 ವರ್ಷ. ಕುರುಬರು, ಜಿರಾಯ್ತಿ, ಹಾರೋಘಟ್ಟ, ನೊಣವಿನಕೆರೆ ಹೋಬಳಿ, ತಿಪಟೂರು ತಾಲ್ಲೋಕ್, 17) ರಮೇಶ್ ಬಿನ್ ಗಂಗಪ್ಪ, 45 ವರ್ಷ. ವಕ್ಕಲಿಗರು ಜಿರಾಯ್ತಿ, ಟಿ ಹೊಸಹಳ್ಳಿ, ಕಸಬಾ  ಹೋಬಳಿ, ತುರುವೇಕೆರೆ ತಾಲ್ಲೋಕ್, 18) ಗಂಗಾಧರ್ ಬಿನ್ ನಂಜುಂಡಪ್ಪ. 44 ವರ್ಷ.ದೇವಾಂಗಶೆಟ್ಟರು, 4 ನೇ ಕ್ರಾಸ್, ವಿದ್ಯಾನಗರ, ತುರುವೇಕೆರೆ ಟೌನ್, 19) ಸ್ವಾಮಿ ಬಿನ್ ಬೋರೇಗೌಡ, 35 ವರ್ಷ, ವಕ್ಕಲಿಗರು, ಜಿರಾಯ್ತಿ, ಕುಣಿಕೇನಹಳ್ಳಿ, ಕಸಬಾ ಹೋಬಳಿ, ತುರುವೇಕೆರೆ ತಾಲ್ಲೋಕ್, 20) ಮಲ್ಲೇಶ್ ಬಿನ್ ಶಿವಣ್ಣ, 54 ವರ್ಷ.ಮಡಿವಾಳರು, ಡ್ರೈವರ್ ಕೆಲಸ, ಮೊದ್ಲೇಹಳ್ಳಿ, ಕಿಬ್ಬನಹಳ್ಳಿ,ತಿಪಟೂರು ತಾಲ್ಲೋಕ್,  21) ಗೋವಿಂದರಾಜು ಬಿನ್ ಲೇ ರಾಮಣ್ಣ, 56 ವರ್ಷ.ಕುರುಬರು,  ತರಕಾರಿ ವ್ಯಾಪಾರ, ನೆಹರು ನಗರ, ರೈಲ್ವೆ ಬ್ರಿಡ್ಜ್ ಹತ್ತಿರ,ತಿಪಟೂರು ಟೌನ್,  22) ಪರಮೇಶ ಬಿನ್ ಲೇ ಸಣ್ಣಕರಿಯಪ್ಪ. 60 ವರ್ಷ.ಲಿಂಗಾಯ್ತರು, ಜಿರಾಯ್ತಿ,ಕೊಡಗಿಹಳ್ಳಿ ಕಸಬಾ ಹೋಬಳಿ, 23) ರಾಜಗೋಪಾಲ ಬಿನ್ ಲೇ ರಾಮಚಂದ್ರಯ್ಯ, 48 ವರ್ಷ, ನಾಯಕರು, ಜಿರಾಯ್ತಿ,ಪುರ, ನಿಟ್ಟೂರು ಹೋಬಳಿ, ಗುಬ್ಬಿ ತಾಲ್ಲೋಕ್,,  24) ಗಿರೀಶ್ ಬಿನ್ ಲೇ ಪರಮೇಶ್ವರಯ್ಯ, 30 ವರ್ಷ.ಲಿಂಗಾಯ್ತರು ಜಿರಾಯ್ತಿ, ಸಿಡ್ಲೇಹಳ್ಳಿ, ಕಿಬ್ಬನಹಳ್ಳಿ ಹೋಬಳಿ,ತಿಪಟೂರು ತಾಲ್ಲೋಕ್ ಎಂದು ತಿಳಿಸಿದ್ದು. ಅವರ ಮುಂಭಾಗ ಒಂದು ದೊಡ್ಡ ಪ್ಲಾಸ್ಟಿಕ್ ಕವರ್ ಹಾಸಿದ್ದು. ಕವರ್ ಮೇಲೆ 52 ಇಸ್ಪೀಟ್ ಎಲೆಗಳು ಮತ್ತು 1.71.510=00 ರೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು. 2 ಗ್ಯಾಸ್ ಲೈಟ್ ಗಳು ಇದ್ದವು.  ಮೇಲ್ಕಂಡ ಆರೋಪಿತರನ್ನು ವಶಕ್ಕೆ ಪಡೆದು ಪಂಚರ ಸಮಕ್ಷಮ ಮೇಲ್ಕಂಡ 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಕವರ್,  1.71.510=00 ರೂ ಹಣ ಹಾಗೂ 2 ಗ್ಯಾಸ್ ಲೈಟ್ ಗಳನ್ನು ಪಂಚರ ಸಮಕ್ಷಮ ರಾತ್ರಿ 07-15 ಗಂಟೆಯಿಂದ 09-15 ಗಂಟೆಯವರೆಗೆ ಪಂಚನಾಮ ಕ್ರಮ ಜರುಗಿಸಿರುತ್ತೆ. ಮೇಲ್ಕಂಡ ಆರೋಪಿತರ ಮೇಲೆ ಕಲಂ 87 ಕೆ.ಪಿ ಆಕ್ಟ್ ರೀತ್ಯ ರಾತ್ರಿ 09-45 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

 

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.43/2017, ಕಲಂ: 309 ಐ.ಪಿ.ಸಿ.

ಮಧುಗಿರಿ ತಾಲ್ಲೋಕು ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹನುಮಂತರಾಯಪ್ಪ.ಹೆಚ್.ಜಿ. ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿ ಕೊಳ್ಳುವುದೇನೆಂದರೆ, ದಿ:28/04/2017 ರಂದು ಬೆಳಿಗ್ಗೆ 07:00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗೆ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಸಿ-140 ಸಾಧಿಕ್ ಪಾಷ ರವರ ಪತ್ನಿಯಾದ ರಹೀಮ ರವರು ಮತ್ತು ಇದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಪಿಸಿ-802 ಶೈಲಜಾ ರವರು ವಾಸವಿರುವ ಪೊಲೀಸ್ ವಸತಿ ಗೃಹದ ಮುಂದೆ ನಾಯಿಗಳಿಗೆ ಅನ್ನ ಹಾಕುವ ವಿಚಾರದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು ಆಗ ಠಾಣೆಯಲ್ಲಿದ್ದ ನಾನು ಮತ್ತು ಹೆಚ್.ಸಿ-217 ಮಹಾಂತೇಶ್ ಇಬ್ಬರು ಠಾಣಾ ಆವರಣಲ್ಲಿರುವ ಪೊಲೀಸ್ ವಸತಿ ಗೃಹಗಳ ಬಳಿಗೆ ಬೇಟಿ ನೀಡಿ ಗಲಾಟೆ ಮಾಡಿಕೊಳ್ಳುತ್ತಿದ್ದ ಪಿಸಿ-140 ರವರ ಹೆಂಡತಿ ರಹೀಮಾ ಮತ್ತು ಮಪಿಸಿ-802 ರವರಿಗೆ ಸೂಕ್ತ ತಿಳುವಳಿಕೆ ಹಾಗೂ ಬುದ್ದಿವಾದ ಹೇಳಿ, ನಂತರ ಪಿಸಿ-140 ರವರಿಗೆ ನಮ್ಮದು ಶಿಸ್ತಿನ ಇಲಾಖೆ ಪೊಲೀಸ್ ವಸತಿ ಗೃಹಗಳಲ್ಲಿ ಅಕ್ಕಪಕ್ಕ ವಾಸವಿರುವವರು ಅನ್ಯೂನ್ಯತೆಯಿಂದ ಒಳ್ಳೆಯ ರೀತಿಯಲ್ಲಿ ಇರುವಂತೆ ಹಾಗೂ ಇನ್ನೂ ಮುಂದೆ ಯಾವುದೇ ಗಲಾಟೆ ಮಾಡಿಕೊಳ್ಳದಂತೆ ತಿಳುವಳಿಕೆ ನೀಡಲಾಗಿತ್ತು.

ನಂತರ ಈ ದಿನ ಅಂದರೆ ದಿನಾಂಕ:29/04/2017 ರ ಸಂಯುಕ್ತ ಕರ್ನಾಟಕ ಮತ್ತು ವಿಜಯವಾಣಿ ದಿನ ಪತ್ರಿಕೆಗಳಲ್ಲಿ ದಿನಾಂಕ:28/04/2017 ರಂದು ಬೆಳಿಗ್ಗೆ 07:00 ಗಂಟೆಯಲ್ಲಿ ನಡೆದ ವಿಚಾರದ ಬಗ್ಗೆ  ಹಾಗೂ ಗರ್ಭಿಣಿ ಸ್ತ್ರೀ  ಮೇಲೆ ಮಹಿಳಾ ಪೇದೆ ಶೈಲಜಾರವರಿಂದ ಹಲ್ಲೆ ಎಂತ ಪ್ರಕಟವಾಗಿರುವ ಬಗ್ಗೆ ಸದರಿ ಮಹಿಳಾ ಪೇದೆ ಶೈಲಜಾ ರವರನ್ನು ಮತ್ತು ಪಿ.ಸಿ-140 ಸಾಧಿಕ್ ಪಾಷ ರವರನ್ನು ಈ ದಿನ ಅಂದರೆ ದಿ:29/04/2017 ರಂದು ಬೆಳಿಗ್ಗೆ 09:00 ಸಮಯದಲ್ಲಿ ಠಾಣೆಗೆ ಕರೆಯಿಸಿಕೊಂಡು ವಿಚಾರ ಮಾಡಿ, ಇಬ್ಬರಿಗೂ ಮುಂದೆ ಈ ರೀತಿ ಗಲಾಟೆ ವಗೈರೆಗಳನ್ನು ಮಾಡಿಕೊಳ್ಳದಂತೆ ಹಾಗೂ ಇಲಾಖಾ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಯಾವುದೇ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡದಂತೆ ಸೂಕ್ತ ತಿಳುವಳಿಕೆ ನೀಡಿ ಹೋಗಲು ಸೂಚಿಸಿದಾಗ ಇಬ್ಬರು ಹೊರಡುವ ಸಮಯದಲ್ಲಿ ಪಿಸಿ-140 ರವರು ನನ್ನನ್ನು ಕ್ಷಮೆ ಕೇಳುವಂತೆ ತಿಳಿಸಿ ಎಂತ ಮಪಿಸಿ-802 ರವರು ನನಗೆ ಹೇಳುತ್ತಿದ್ದಾಗ, ಅಲ್ಲಿಯೇ ನಿಂತಿದ್ದ ಪಿಸಿ-140 ರವರಿ ಯಾರ ಸೂಚನೆಯು ಇಲ್ಲದೆ ಹಠಾತನೆ ಮಪಿಸಿ-802 ರವರ ಕಾಲಿಗೆ ಬಿದ್ದು ನನ್ನನ್ನು ಕ್ಷಮಿಸು ಎಂತ ಹೇಳಿದನು. ಇದನ್ನು ನೋಡಿದ ಪಿಸಿ-140 ರವರ ಹೆಂಡತಿಯಾದ ರಹೀಮಾ ರವರು ತನ್ನ ಗಂಡನನ್ನು ಕುರಿತು ಈ ರೀತಿ ಮಾಡುವುದಕ್ಕಿಂತ ಎಲ್ಲಿಯಾದರೂ ಹೋಗಿ ಸಾಯಿ, ನೀನು ಬದುಕಿದ್ದರು ವ್ಯರ್ಥ ನಾಯಿನನ್ನ ಮಗನೇ, ಸುವರ್ ನನ್ನಮಗನೇ ಎಂತ ಇತ್ಯಾದಿಯಾಗಿ ಬೈದರು. ಆಗ ನಾನು ಮೂರು ಜನರಿಗೂ ಬುದ್ದಿ ಹೇಳಿ ಮನೆಗೆ ಕಳುಹಿಸಿದೆನು.

ಇದಾದ ನಂತರ ಮನೆಗೆ ಹೋದ ಪಿಸಿ-140 ಸಾಧಿಕ್ ಪಾಷ ಮತ್ತು ಆತನ ಹೆಂಡತಿ ರಹೀಮ ರವರು ಇದೇ ದಿನ ಬೆಳಿಗ್ಗೆ ಸುಮಾರು 11:00 ಗಂಟೆಯ ಸಮಯದಲ್ಲಿ ಪಿಸಿ-140 ರವರ ಮನೆಗೆ ಮನೆಗೆಲಸಕ್ಕೆ ಬಂದಿದ್ದ ಮಿಡಿಗೇಶಿ ಗ್ರಾಮದ ವಾಸಿ ಈರಮ್ಮ ಕೋಂ ವೀರಭದ್ರಯ್ಯ ಎಂಬುವರು ಠಾಣೆಗೆ ಓಡಿ ಬಂದು ಸಾಧಿಕ್ ಪಾಷ ರವರು ಮತ್ತು ಆತನ ಹೆಂಡತಿ ರಹೀಮಾ ರವರು ಮನೆಯಲ್ಲಿ ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡು ನಾನು ಸಾಯುತ್ತೇನೆ ನೀನೇ ಇರು, ನಾನು ಸಾಯುತ್ತೇನೆ ನೀನೇ ಇರು ಎಂತ ಕೂಗಾಡುತ್ತಾ ರಹೀಮಾ ರವರು ಮನೆಯಲ್ಲಿದ್ದ ಪಿನಾಯಿಲ್ ಬಾಟೆಲನ್ನು ತೆಗೆದುಕೊಂಡು ಕುಡಿಯುತ್ತಿದ್ದಾಗ, ಸಾಧಿಕ್ ಪಾಷ ರವರ ಆಕೆಯ ಕೈಯಲ್ಲಿದ್ದ ಪಿನಾಯಿಲ್ ಬಾಟೆಲನ್ನು ಕಿತ್ತುಕೊಂಡು ಅವರು ಸಹ ಪಿನಾಯಿಲನ್ನು ಕುಡಿಯುತ್ತಿದ್ದಾರೆ ಬೇಗ ಬನ್ನಿ ಎಂತ ತಿಳಿಸಿದರು. ಕೂಡಲೇ ನಾನು ಮತ್ತು ಎ.ಎಸ್.ಐ-ಸಣ್ಣ ಓಬಳಪ್ಪ, ಸಿ.ಹೆಚ್.ಸಿ-211 ನಾಗಭೂಷಣ.ಡಿ, ಸಿ.ಹೆಚ್.ಸಿ-361 ನಾಗರಾಜು.ಕೆ.ಟಿ. ಹಾಗೂ ಮಪಿಸಿ-469 ಮಹಾದೇವಿ ರವರೊಂದಿಗೆ ಪಿಸಿ-140 ರವರು ವಾಸವಾಗಿದ್ದ ಪೊಲೀಸ್ ವಸತಿ ಗೃಹಕ್ಕೆ ಓಡಿ ಹೋಗಿ ನೋಡಲಾಗಿ ಪಿಸಿ-140 ರವರು ಪಿನಾಯಿಲನ್ನು ಕುಡಿಯುತ್ತಿದ್ದನು ಆಗ ನಾನು ಆತನ ಕೈಯಲ್ಲಿದ್ದ ಪಿನಾಯಲ್ ಬಾಟೆಲನ್ನು ಕಿತ್ತುಕೊಂಡೆನು. ಪಿನಾಯಿಲನ್ನು ಕುಡಿದು ಅಸ್ವಸ್ಥಗೊಂಡಿದ್ದ ಪಿಸಿ-140 ಸಾಧಿಕ್ ಪಾಷ ಮತ್ತು ಆತನ ಹೆಂಡತಿ ರಹೀಮಾ ರವರನ್ನು ಕೂಡಲೇ ಚಿಕಿತ್ಸೆಗಾಗಿ ಎ.ಎಸ್.ಐ-ಸಣ್ಣ ಓಬಳಪ್ಪ ಮತ್ತು ಮಪಿಸಿ-469 ರವರ ಜೊತೆಯಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆನೆ. ಆದ್ದರಿಂದ ಪಿನಾಯಿಲನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಪಿಸಿ-140 ಸಾಧಿಕ್ ಪಾಷ ಮತ್ತು ಆತನ ಹೆಂಡತಿ ರಹೀಮಾ ರವರ ಮೇಲೆ ಸ್ವ-ದೂರಿನ ಮೇಲೆ ಪ್ರಕರಣ ದಾಖಲಿಸಿರುತ್ತೇನೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  56/2017 ಕಲಂ 279, 337 ಐಪಿಸಿ

ದಿನಾಂಕ:29-04-17 ರಂದು  ರಾತ್ರಿ 8-00 ಗಂಟೆಗೆ ಈ ಕೇಸಿನ ಪಿರ್ಯಾದಿ ಶಕೀನ ಬಿನ್ ಅನ್ವರ್ ಸಾಬ್ 22ವರ್ಷ, ಪೇಂಟಿಂಗ್ ಕೆಲಸ ಕುದ್ದೂರು ಅಮೃತಾಪರ ಹೋಬಳಿ ತರೀಕೆರೆ ತಾ|| ಚಿಕ್ಕಮಗಳೂರು ಜಿಲ್ಲೆ.  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ   ದಿನಾಂಕ:24/04/2017 ರಂದು ನಾನು ಮೈಸೂರಿನಲ್ಲಿರುವಾಗ ನನ್ನ ತಂಗಿಯಾದ ರೇಷ್ಮರವರು ಫೋನ್ ಮಾಡಿ ತಿಳಿಸಿದ ವಿಚಾರ ಏನೆಂದರೆ ಈ ದಿನ ನಾನು ಮತ್ತು ನನ್ನ ಚಿಕ್ಕಮ್ಮ ಮಮತಾಜ್ ರವರೊಂದಿಗೆ ಕೆ.ಎ06-ಆರ್-945 ನೇ ಟಿ.ವಿ.ಎಸ್ ಎಕ್ಸ್ .ಎಲ್. ನಲ್ಲಿ ತಿಪಟೂರಿನಿಂದ ಹಿಂಡಿಸ್ಗೆರೆಗೆ ಹೋಗುತ್ತಿರುವಾಗ ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಹಿಂಡಿಸ್ಗೆರೆ ಗೇಟ್ ಬಳಿ ನಮ್ಮ ಚಿಕ್ಕಮ್ಮ ಮಮತಾಜ್ ರವರು ತನ್ನ ಕೆ.ಎ06-ಆರ್-945 ದ್ವಿಚಕ್ರ ವಾಹನವನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಎನ್.ಹೆಚ್. 206 ರಸ್ತೆಯಿಂದ ಹಿಂಡಿಸ್ಗೆರೆ ರಸ್ತೆಗೆ ತಿರುಗಿಸಿಕೊಳ್ಳುವಾಗ ಅದೇ ಸಮಯಕ್ಕೆ ಕೆ.ಬಿ.ಕ್ರಾಸ್ ಕಡೆಯಿಂದ ಕೆ.ಎ44-ಕ್ಯೂ-5084    ದ್ವಿಚಕ್ರ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಚಿಕ್ಕಮ್ಮ ಓಡಿಸುತ್ತಿದ್ದ ಟಿ.ವಿ.ಎಸ್ ಎಕ್ಸ್ .ಎಲ್. ಗೆ ಪರಸ್ಪರ ಡಿಕ್ಕಿ ಹೊಡೆಸಿಕೊಂಡಾಗ ಎರಡೂ ಬೈಕ್ ಗಳು ಕೆಳಗೆ ಬಿದ್ದವು. ನನಗೆ ಎಡಗೈಗೆ ಪೆಟ್ಟು ಬಿದ್ದಿರುತ್ತೆ. ಮಮತಾಜ್ ರವರ ತಲೆಗೆ ಪೆಟ್ಟು ಬಿದ್ದಿರುತ್ತೆ. ನನ್ನನ್ನ ರಹೀಂ ರವರು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸುತ್ತಾರೆ ಎಂದು ತಿಳಿಸಿದಾಗ ನಾನು ಬಂದು ನನ್ನ ತಂಗಿಯಾದ  ರೇಷ್ಮರವರನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ  ಬಂದು ಈ ಅಪಘಾತಕ್ಕೆ ಕೆ.ಎ06-ಆರ್-945 ರ ಚಾಲಕರಾದ ಮಮತಾಜ್ ಮತ್ತು ಕೆ.ಎ44-ಕ್ಯೂ-5084 ನೇ ದ್ವಿಚಕ್ರ ವಾಹನದ ಚಾಲಕ ಜಿತನ್ ಈಡೇನಹಳ್ಳಿ ರವರು ಅತಿವೇಗ ಮತ್ತು ಅಜಾಗರೂಕತೆಯೇ ಕಾರಣವಾಗಿರುತ್ತೆ ಇವರುಗಳ ಮೇಲೆ ಕಾನೂನು ಕ್ರಮ ತೆಗದುಕೊಳ್ಳಬೇಕೆಂದು ಇತ್ಯಾದಿ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 70/2017 ಕಲಂ 279 ಐಪಿಸಿ

ದಿನಾಂಕ-29/04/2017 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಯಾದ ಹೆಚ್.ವಿ ವಿನೋದ್ ಕುಮಾರ್ ಬಿನ್ ಲೇಟ್ ವಿರೂಪಾಕ್ಷಯ್ಯ, 36 ವರ್ಷ, ಲಿಂಗಾಯ್ತರು, ಕೆಎ-02-ಡಿ-7295 (ಟಾಟಾ.ಎಸ್.ಸಿ.1613) ನೇ ಲಾರಿ ಮಾಲೀಕರು, ಹೊನ್ನೇನಹಳ್ಳಿ,ದಾಬಸ್ ಪೇಟೆ ಹೋಬಳಿ, ನೆಲಮಂಗಲ ತಾಲ್ಲೋಕ್,  ಬೆಂಗಳೂರು ಗ್ರಾಮಾಂತರ ಜಿಲ್ಲೆ ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೆಂಧರೆ ನಾನು  ಮೇಲ್ಕಂಡ ವಿಳಾಸದಲ್ಲಿ ವಾಸವಿದ್ದು, ದಿನಾಂಕ:29-04-2017 ರಂದು ಬೆಳಿಗ್ಗೆ 8-00 ಗಂಟೆಗೆ ನಮ್ಮ ಬಾಬ್ತು ಕೆಎ-02-ಡಿ-7295 ನೇ (ಟಾಟಾ ಎಸ್.ಸಿ. 1613 ) ಲಾರಿಯನ್ನು ಹೊನ್ನುಡಿಕೆ ಹತ್ತಿರ ಬಾಡಿಗೆಗೆ ಲಾರಿ ಚಾಲಕನಾದ  ಶಿವಕುಮಾರಯ್ಯನಿಗೆ ಹೇಳಿ ಕಳುಹಿಸಿದ್ದು, ಅದರಂತೆ  ಬಾಡಿಗೆಯ ಕೆಲಸವನ್ನು ಮುಗಿಸಿಕೊಂಡು ಹೋನ್ನೇನಹಳ್ಳೀಗೆ ಬರಲೇಂದು ಹೊನ್ನುಡಿಕೆ ಹತ್ತಿರ ಬರುತ್ತಿರುವಾಗ್ಗೆ ಇದೇ ದಿನ ಹೊನ್ನುಡಿಗೆ-ದಾಬಸ್ ಪೇಟೆ ರಸ್ತೆಯ ಮಸ್ಕಲ್ ಸಮೀಪ ದೊಡ್ಡ ಸೇತುವೆ ಬಳಿ ಬರುತ್ತಿರುವಾಗ್ಗೆ  ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ಮಸ್ಕಲ್ ಸಮೀಪ ದೊಡ್ಡ ಸೇತುವೆಯ ತಿರುವಿನ ಹತ್ತಿರ ಲಾರಿ ಅಯಾ ತಪ್ಪಿ ರಸ್ತೆಯ ಬಲಭಾಗ  ಬಿದ್ದಿರುತ್ತೇಂತ ಲಾರಿ ಚಾಲಕ ನನಗೆ ಪೋನ್ ಮಾಡಿ ತಿಳಿಸಿದ್ದರಿಂದ ನಾನು ತಕ್ಷಣ ಲಾರಿ ಬಿದ್ದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಲಾರಿಯು ದೊಡ್ಡ ಸೇತುವೆ ಬಳಿ ರಸ್ತೆ ಬಲಬಾಗ ಬಿದ್ದಿರುತ್ತೆ. ನಮ್ಮ ಲಾರಿಯ ಚಾಲಕ ಲಾರಿಯನ್ನು ಅತೀವೇಗ ಮತ್ತು ಅಜಾರುಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ತಿರುವಿನ ಬಲಭಾಗದ ಹಳ್ಳಕ್ಕೆ ಬಿದ್ದಿದ್ದು ಲಾರಿಯನ್ನು ನೋಡಲಾಗಿ ಪೂರಾ ಜಖಂ ಗೊಂಡಿರುತ್ತದೆ. ನಂತರ ಅಪಘಾತವಾದ ಸ್ಥಳದಲ್ಲಿಯೇ ಇದ್ದ  ದಾಬಸ್‌ ಪೇಟಯ ಶಿವಶಂಕರ ಬಿನ್ ಎಲ್ ಸಿದ್ದಗಂಗಯ್ಯ ರವರು ಉಪಚರಿಸಿ ನೋಡಲಾಗಿ ಈ ಸದರಿ ಲಾರಿಯ ಚಾಲಕನಿಗೆ ಯಾವುದೇ ಗಾಯಗಳಾಗಿರಿಲ್ಲ ಎಂದು ತಿಳಿಸಿದನು. ಆದ್ದರಿಂದ ಈ ಅಪಘಾತವು ಚಾಲಕ ನಿರ್ಲಕ್ಷತೆಯಿಂದ ಅಪಘಾತವಾಗಿದ್ದು ಈ ಅಪಘಾತಕ್ಕೆ ಕಾರಣರಾದ  ಕೆಎ-02-ಡಿ-7295 ನೇ ಲಾರಿಯ ಚಾಲಕ ಶಿವಕುಮಾರಯ್ಯ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಪ್ರಕರಣ ದಾಖಲಿಸಿರುತ್ತೆ.

 Saturday, 29 April 2017

Crime Incidents 29-04-17

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ:ನಂ: 88/2017 ಕಲಂ 279. 337, 304 (ಎ)  ಐ.ಪಿ.ಸಿ

ದಿನಾಂಕ: 29/04/2017 ರಂದು ತುಮಕೂರು ನಗರದ ಅದಿತ್ಯ ಆಸ್ಪತ್ರೆಯಲ್ಲಿ ಠಾಣಾ ಎ ಎಸ್ ಐ ಬಾಬು ಕಿಲಾರಿಯವರ ಸಮಕ್ಷಮ ತೆಲಂಗಾಣ ರಾಜ್ಯ ಹೈದರಾಬಾದನ ಸೈಯದ್ ಗೌಸ್ ಬಿನ್ ಸೈಯದ್ ಸಾದಿಕ್ ರವರು ನೀಡಿದ ಹೇಳಿಕೆ ಅಂಶವೆನೆಂದರೆ ನಮ್ಮ ಚಿಕ್ಕಪ್ಪನವರಾದ ಮೊಹಮದ್ ಷರೀಫ್ ರವರ ಬಾಬ್ತು AP-05-W-5959 ನೇ ಲಾರಿಗೆ ನಾನಿ ಕ್ಲೀನರ್ ಆಗಿ ನಮ್ಮ ಚಿಕ್ಕಪ್ಪನವರಾದ ಮೊಹಮದ್ ಷರೀಫ್ ರವರು ಚಾಲಕ ರಾಗಿ ದಿ: 27/04/17 ರಂದು ತೆಲಂಗಾಣ ರಾಜ್ಯದಲ್ಲಿ ಬಿಯರ್ ಬಾಟಲ್ ಗಳನ್ನು ಲೋಡ್ ಮಾಡಿಕೊಂಡು ಬೆಂಗಳೂರಿನ ಬಾಗಳಗುಂಟೆಯಲ್ಲಿ ಅನ್ ಲೋಡ್ ಮಾಡಲು ತುಮಕೂರು ನ ಎನ್ ಹೆಚ್ 48 ರಸ್ತೆಯಲ್ಲಿ ದಿನಾಂಕ: 28/29-04-2017 ರ ಮದ್ಯ ರಾತ್ರಿ 2-30 ಗಂಟೆಗೆ ರಂಗಾಪುರ ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರ ಹೋಗುತ್ತಿರುವಾಗ ನಮ್ಮ ಲಾರಿಯ ಜಾಯಿಂಟ್ ಬಿಟ್ಟುಕೊಂಡಿದ್ದು, ಲಾರಿಯನ್ನು ರಸ್ತೆಯ ಎಡಭಾಗದಲ್ಲಿ ಇಂಡಿಕೇಟರ್ ಹಾಕಿ ನಿಲ್ಲಿಸಿ ನಾನು ಮತ್ತು ನಮ್ಮ ಚಾಲಕ ಚೆಕ್ ಮಾಡಲು ಕೆಳಗೆ ಇಳಿದು ನಾನು ಬ್ಯಾಟರಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದು, ನಮ್ಮ ಡ್ರೈವರ್ ಜಾಯಿಂಟ್ ಚೆಕ್ ಮಾಡುತ್ತಿರುವಾಗ ಶಿರಾ ಕಡೆಯಿಂದ MH-46-F-5261 ನೇ ಲಾರಿ ಚಾಲಕ ಅತಿವೇಗ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಲಾರಿಯ ಹಿಂಭಾಗದ ಬಲಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ಲಾರಿಯ ಚಕ್ರಗಳು ನನ್ನ ಬಲಗಾಲಿನ ಮತ್ತು ಎಡಪಾದದ ಮೇಲೆ ಹರಿದು ನಂತರ ಮೊಹಮದ್ ಷರೀಫ್ ರವರ ಬಲಗೈ ಮೇಲೆ ಮತ್ತು ತಲೆಗೆ ತೀವ್ರತರದ ಪೆಟ್ಟುಬಿದ್ದು ರಕ್ತಸ್ರವವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು, ನನ್ನನ್ನು ಸಾರ್ವಜನಿಕರು 108 ಅಂಬುಲೈನ್ಸ್ ನಲ್ಲಿ ಅದಿತ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟರು. ಈ ಅಪಘಾತಕ್ಕೆ ಕಾರಣನಾದ  MH-46-F-5261 ನೇ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಇತ್ಯಾದಿಯಾಗಿ ಹಿಂದಿಯಲ್ಲಿ ನೀಡಿದ ಹೇಳಿಕೆಯನ್ನು ಠಾಣಾ ಪಿ ಸಿ 991 ಮುನೀರ್ ಅಹಮದ್ ರವರು ಕನ್ನಡಕ್ಕೆ ಅನುವಾದ ಮಾಡಿರುತ್ತಾರೆ. ನಂತರ ವಾಪಸ್ ಠಾಣೆಗೆ 10-30 ಗಂಟೆಗೆ ತಂದು  ಹಾಜರ್ ಪಡಿಸಿದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿದೆ.

ಸಿ.ಎಸ್.ಪುರ ಠಾಣಾ ಯು.ಡಿ.ಆರ್ ನಂ:08/2017, ಕಲಂ:174 ಸಿ.ಆರ್.ಪಿ.ಸಿ

ದಿನಾಂಕ: 28.04.2017 ರಂದು ಪಿರ್ಯಾದುದಾರರಾದ ಲೋಕೇಶ  ಬಿನ್ ನಂಜಪ್ಪ ಶೆಟ್ಟರ್, 45 ವರ್ಷ, ಗಾಣಿಗ ಶೆಟ್ಟರು, ಜಿರಾಯ್ತಿ, ನಾರನಹಳ್ಳಿ ಗ್ರಾಮ, ಗುಬ್ಬಿ ತಾಲ್ಲೂಕು ಇವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ನನಗೆ ಇಬ್ಬರೂ ಮಕ್ಕಳಿದ್ದು,ಮೊದಲನೇಯವಳು  13 ವರ್ಷದ ಪ್ರಿಯಾ 8 ನೇ ತರಗತಿಯಲ್ಲಿ  ವ್ಯಾಸಾಂಗ ಮಾಡುತಿದ್ದು, ಎರಡನೇಯ ಮಗಳು ನಂದಿನಿಯಾಗಿರುತ್ತಾಳೆ, ನಾನು & ನನ್ನ  ಹೆಂಡತಿ & ಮಕ್ಕಳು ನಾರನಹಳ್ಳಿ ಗ್ರಾಮದಲ್ಲಿ  ವಾಸವಾಗಿರುತ್ತೇವೆ, ನಮ್ಮ  ತಂದೆ ತಾಯಿಗಳು ತೋಟದ ಮಮನೆಯಲ್ಲಿ ವಾಸವಾಗಿರುತ್ತಾರೆ. ದಿನಾಂಕ:27.04.2017 ರಂದು ನನ್ನ ಮಗಳಾದ ಪ್ರಿಯಾಳು ನಮ್ಮ ತಂದೆ ತಾಯಿ ಇರುವ ತೋಟದ ಮನೆಗೆ  ಸಾಯಾಂಕಾಲ ಹೋಗಿದ್ದು, ರಾತ್ರಿ ಅಲ್ಲೆ  ಇರಬೇಕಾದರೆ ಸುಮಾರು ರಾತ್ರಿ 8.00 ಗಂಟೆ ಸಮಯದಲ್ಲಿ ಪ್ರಿಯಾಳು ಮೂತ್ರ ವಿಸರ್ಜನೆಗೆ ಎಂದು ಮನೆಯ ಹೊರಗೆ ಹೋದಾಗ ಯಾವುದೋ ಪೂರಿತವಾದ ಕ್ರಿಮಿಯು ಅಥವಾ ಹಾವು ನನ್ನ ಮಗಳಿಗೆ ಕಡಿದಿದ್ದು, ಈ ವಿಷಯವನ್ನು ನಮಗೆ ತಿಳಿಸಿದ್ದು, ರಾತ್ರಿ ವಾಹನ ಸೌಕರ್ಯವಿಲ್ಲದ ಕಾರಣ ಬೆಳಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಿನಾಂಕ:28.04.2017   ಬೆಳಗ್ಗೆ 8.00 ಗಂಟೆ ಸಮಯದಲ್ಲಿ ಹೊರಟಾಗ  ನನ್ನ ಮಗಳು ಮೃತಪಟ್ಟಿದ್ದು, ನನ್ನ ಮಗಳ ಸಾವಿಗೆ ಯಾರು ಕಾರಣರಲ್ಲ, ನನ್ನ ಮಗಳಾದ ಪ್ರಿಯಾಳಿಗೆ  ಯಾವುದೋ ವಿಷಪೂರಿತ ಕ್ರಿಮಿಯು ಅಥವಾ ಹಾವು  ಕತ್ತಲಲ್ಲಿ  ಎಡಗಾಲಿನ  ಹೆಬ್ಬೆಟ್ಟಿಗೆ  ಕಚ್ಚಿ ಈ ಸಾವು ಸಂಭವಿಸಿರುತ್ತೆ ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತೆ.

ಹೊನ್ನವಳ್ಳಿ  ಪೊಲೀಸ್ ಠಾಣೆ  ಮೊನಂ- 49/2017 ಕಲಂ: 323. 324. 504. 354(ಬಿ) ಐಪಿಸಿ

ದಿನಾಂಕ:28/4/2017 ರಂದು ಕೇಸಿನ ಗಾಯಾಳುವಾದ ತಿಪಟೂರು ತಾಲ್ಲೂಕು ಹೊನ್ನವಳ್ಳಿ ಹೋಬಳಿ, ಹಾಲ್ಕುರಿಕೆ ಗ್ರಾಮದ ಶ್ರೀ ಮತಿ ನಾಗಮಣಿ ಕೊಂ ನಾಗರಾಜು ರವರು ತಿಪಟೂರು ಜನರಲ್‌ ಆಸ್ವತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವಾಗ ನೀಡಿದ ಹೇಳಿಕೆಯ ಅಂಶವೆನೆಂದರೆ ದಿನಾಂಕ:28/4/2017 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಪಿರ್ಯಾದಿಯವರು ತಮ್ಮ ಮನೆಯ ಮುಂದೆ ಎಂದಿನಂತೆ ದನಗಳನ್ನು ಕಟ್ಟಿದ್ದು ನನ್ನ ಮೈದುನ ಅಲ್ಲಿಗೆ ಆಶ್ವಥ್‌ನಾರಾಯಣ ಅಲ್ಲಿಗೆ ಬಂದು ಸೂಳೆಮುಂಡೆ, ರಂಡೆ ಅಂತಾ ಅವಾಚ್ಯವಾಗಿ ಬೈಯ್ದು ದನಗಳನ್ನು ಬಿಜ್ಜಿ  ಓಡಿಸಲು ಹೋದಾಗ ಪಿರ್ಯಾದಿದಾರರು ಕೇಳುವಾಗ ಪಿರ್ಯಾದಿಯನ್ನು ಆಶ್ವಥ್‌ನಾರಾಯಣ ಹಿಡಿದು ಎಳೆದಾಡಿ ಮಾನಬಂಗ ಮಾಡುವ ಉದ್ದೇಶದಿಂದ ಜಾಕೀಟ್‌ನ್ನು ಹರಿದು ಹಾಕಿದ ಮತ್ತು ಅಲ್ಲೆ ಬಿದಿದ್ದ ಕೋಲಿನಿಂದ ಪಿರ್ಯಾದಿಯ ಸೊಂಟಕ್ಕೆ ಹೊಡೆದ ಮತ್ತೆ ಮರ್ಯಾದೆಯನ್ನು ಕಳೆಯುತ್ತೆನೆಂತಾ ಬಳೆಯ ಸಮೇತ ಬಲಗೈಯನ್ನು ಹಿಡಿದು ಕೈಯಿಂದ ಪರಚಿದಾಗ  ರಕ್ತಗಾಯವಾಗಿರುತ್ತೆ  ಅಲ್ಲದೆ ಪಿರ್ಯಾದಿಯನ್ನು ಆಶ್ವಥ್‌ನಾರಾಯಣರವರು ನೆಲದ ಮೇಲೆ ಕೆಡವಿಕೊಂಡು ಕೈಗಳಿಂದ ಗುದ್ದಿ ಮೈ ಕೈ ನೊಂಟುಮಾಡಿದಾಗ ಅಷ್ಠರಲ್ಲಿ ಅಲ್ಲಿಗೆ ಬಂದ ಗಂಡ ನಾಗರಾಜು, ಗ್ರಾಮದ ಚಂದ್ರಯ್ಯ  ಜಯಣ್ಣರವರುಗಳು ಜಗಳವನ್ನು ಬಿಡಿಸಿದ್ದ ಗಾಯಾಳುವನ್ನು ನಾಗರಾಜುರವರು ಕರೆದುಕೊಂಡು ಬಂದು ತಿಪಟೂರು ಸರ್ಕಾರಿ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುತ್ತಾರೆ ಆಶ್ವಥ್‌ನಾರಾಯಣರವರ ಮೇಲೆ  ಕಾನೂನು ಕ್ರಮ ಕೈಗೊಳ್ಳಿ ಆಂತಾ ನೀಡಿದ ಹೇಳಿಕೆಯ ಮೇರೆಗೆ ವಾಪ್ಪಸು ಮದ್ಯಾಹ್ನ 1-00 ಗಂಟೆಗೆ ಬಂದು  ಪ್ರಕರಣ ದಾಖಲಿಸಿರುತ್ತೆ.

 Friday, 28 April 2017

Press Note 28-04-17

 

:: ಪತ್ರಿಕಾ ಪ್ರಕಟಣೆ  ::

::  ದಿನಾಂಕ 28-04-17  ::

ಎ.ಟಿ.ಎಂ. ಚೋರರ ಬಂದನ

 

ಇತ್ತೀಚೆಗೆ ತುಮಕೂರು ನಗರದ ಗುಬ್ಬಿ     ಗೇಟ್‌ ಕರ್ನಾಟಕ ಎ.ಟಿ.ಎಂ. ದರೋಡೆ, ಮಂಚಕಲ್ಗುಪ್ಪೆ ಇಂಡಿಯಾ ಎ.ಟಿ.ಎಂ. ದರೋಡೆ ಪ್ರಯತ್ನ, ತುರುವೇಕೆರೆ ನಗರದ ಎ.ಟಿ.ಎಂ. ದರೋಡೆಗೆ ಸಿದ್ದತೆ ಹಾಗು ಸಾರ್ವಜನಿಕರಲ್ಲಿ ವಿಸ್ಮಯ ರೀತಿಯಲ್ಲಿ ಕಳವು ಮಾಡಿ ಯಾವುದೇ ಸುಳಿವು ಇಲ್ಲದ ಪ್ರಕರಣಗಳನ್ನು ಬೇದಿಸಲು ತುಮಕೂರು ಎಸ್.ಪಿ.ಸಾಹೇಬರಾದ ಶ್ರೀಮತಿ ಇಶಾಪಂತ್ ಐಪಿಎಸ್, ಶ್ರೀ ಲೋಕೇಶ್‌ಕುಮಾರ್ ಐಪಿಎಸ್ ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಜಿ.ಬಿ. ಮಂಜುನಾಥ್ ರವರು ಒಂದು ವಿಶೇಷ ಜಿಲ್ಲಾ ತಂಡವನ್ನು ರಚಿಸಿದ್ದು ಈ ತಂಡದಲ್ಲಿ ತುಮಕೂರು ನಗರ ಡಿ.ಎಸ್.ಪಿ. ನಾಗರಾಜು, ಕುಣಿಗಲ್ ಡಿ.ಎಸ್.ಪಿ. ಚಂದ್ರಶೇಖರ್, ಸಿ.ಪಿ.ಐ ಗಳಾದ ರಾಘವೇಂದ್ರ, ರಾಮಚಂದ್ರ, ಗೌತಮ್, ಗಂಗಲಿಂಗಯ್ಯ ಒಳಗೊಂಡ ವಿಶೇಷ ತಂಡ ರಚಿಸಿದ್ದು ಕಾರ್ಯ ಪ್ರವೃತ್ತರಾಗಿ ಅನೇಕ ಮಾರ್ಗಗಳನ್ನು ಅನುಸರಿಸಿದ್ದು ಪತ್ತೆಯ ಬಗ್ಗೆ ವ್ಯಾಪಕ ಬಲೆ ಬೀಸಿರುತ್ತಾರೆ.

ದಿನಾಂಕ 16/04/2017 ರಂದು ರಾತ್ರಿ ವೇಳೆಯಲ್ಲಿ ತುರುವೇಕೆರೆ ಮಾದೀಹಳ್ಳಿ ಗ್ರಾಮದ ಮದ್ಯೆ ರಸ್ತೆಯ ಬದಿಯಲ್ಲಿ ಯಾರೋ 5 ಜನ ಆಸಾಮಿಗಳು ಕೆ.ಎ.05-ಎಂ. 3058ನೇ ನಂಬರ್ ಉಳ್ಳ ಮಾರುತಿ ಓಮಿನಿಯನ್ನು ನಿಲ್ಲಿಸಿಕೊಂಡಿದ್ದು ಅದರಲ್ಲಿ ದರೋಡೆ ಮಾಡಲು ಆಯುಧಗಳನ್ನು ಇಟ್ಟುಕೊಂಡು ತಯಾರಿ ಮಾಡಿಕೊಳ್ಳುತ್ತಿದ್ದಾರೆಂದು ಬಂದ ಖಚಿತ ವರ್ತಮಾನದ ಮೇರೆಗೆ ತುರುವೇಕೆರೆ ವೃತ್ತದ ಸಿ.ಪಿ.ಐ ರಾಮಚಂದ್ರ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿಗಳಾದ ಪ್ರಭು ತಂದೆ ಗಂಗಣ್ಣ, ಸುಮಾರು 29 ವರ್ಷ, ದಾಬಸ್ ಪೇಟೆ ಹತ್ತಿರ ಇಮಚೇನಹಳ್ಳಿಪಾಳ್ಯ. 2)ಮೋಹನ ತಂದೆ ರಮೇಶ್ ಸುಮಾರು 28 ವರ್ಷ, ಕಿರಿಸಾವೆ ಹಿರಿಸಾವೆ ಹೋಬಳಿ. 3) ಸ್ವಾಮಿ ಬಿನ್ ಅಣ್ಣಪ್ಪ, ಸುಮಾರು 26 ವರ್ಷ, ಬನವಾಸಿ ಅರಕಲಗೂಡು ತಾಲ್ಲೋಕು 4)ಪುನೀತಾ ತಂದೆ ಕೃಷ್ಣಪ್ಪ, 22 ವರ್ಷ, ಶಿವಪುರ ಇಂಡಸ್ಟ್ರೀಯಲ್ ಏರಿಯಾ ಬೆಂಗಳೂರು. ಮತ್ತು 5)ರಘು ತಂದೆ ಸಿದ್ದೋಜಿರಾವ್, ಸುಮಾರು 24 ವರ್ಷ, ಕಳ್ಳಂಬೆಳ್ಳ ಸಿರಾ ತಾಲ್ಲೋಕು. ಇವರುಗಳನ್ನು ಹಿಡಿದು ವಿಚಾರಣೆಗೊಳಪಡಿಸಲಾಗಿ ತುರುವೇಕೆರೆ ನಗರದ ಕರ್ನಾಟಕ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್‌  ಎ.ಟಿ.ಎಂ.ಗಳನ್ನು ಕಳ್ಳತನ ಮಾಡಲು ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಮತ್ತು ಈಗಾಗಲೇ ದಿನಾಂಕ 23-24/01/2017 ರಂದು ತುಮಕೂರು ಗುಬ್ಬಿ ಗೇಟ್ ಬಳಿ ಇರುವ ಕರ್ನಾಟಕ ಬ್ಯಾಂಕ್ ಎ.ಟಿ.ಎಂ.ನ ಕಾವಲುಗಾರನನ್ನು ಕಟ್ಟಿಹಾಕಿ ಚಾಕು ತೋರಿಸಿ ಹೆದರಿಸಿ 21,73,300-00 ರೂ ಹಣವನ್ನು ದೋಚಿಕೊಂಡು ಹೋಗಿ ಹಂಚಿಕೊಂಡಿರುವುದಾಗಿ ಮತ್ತು ಮಂಚಕಲ್ಗುಪ್ಪೆ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಇಂಡಿಯಾ 1 ಎ.ಟಿ.ಎಂ.ನ್ನು ದರೋಡೆ ಮಾಡಲು ಪ್ರಯತ್ನಿಸಿರುವುದಾಗಿ ತನಿಖೆಯಿಂದ ತಿಳಿದು ಬಂದಿದ್ದು, ದಾಳಿಯ ಸಮಯದಲ್ಲಿ ಆರೋಪಿಗಳ ಕಡೆಯಿಂದ ಕೃತ್ಯಕ್ಕೆ ಬಳಸಿರುವ ಮಾರುತಿ ವ್ಯಾನ್, ಅದರಲ್ಲಿದ್ದ ಆಕ್ಸಿಜನ್ ಸಿಲಿಂಡರ್, ಇಂಡೇನಾ ಗ್ಯಾಸ್ ಸಿಲಿಂಡರ್, ರಿಂಚ್ ಸ್ಪಾನರ್, ಸ್ಕ್ರೂ ಡೈವರ್, 5 ಹ್ಯಾಂಡ್ ಗ್ಲೋಸ್, ಮುಖ ಮುಚ್ಚಿ ಕೊಳ್ಳುವ ಚೀಲಗಳು, ಕಾರದ ಪುಡಿ ಪ್ಯಾಕೇಟ್ಗಳು, ಸ್ಟೀಲ್ ಚಾಕು, ಹಾರೇ ಕೋಲು, ಕೇಬಲ್ ಕಟ್ ಮಾಡುವ ಕಟರ್ ಮತ್ತು 5 ಮೊಬೈಲ್ ಸೆಟ್‌ಗಳನ್ನು ಅಮಾನತ್ತು ಪಡಿಸಿ, ತನಿಖೆಯನ್ನು ಕೈಗೊಂಡು ಆರೋಪಿಗಳಾದ ಪ್ರಭು, ಮೋಹನ, ಸ್ವಾಮಿ ಮತ್ತು ಪುನೀತಾ ಇವರುಗಳನ್ನು ತನಿಖೆಯ ಬಗ್ಗೆ ಪೊಲೀಸ್ ವಶಕ್ಕೆ ಪಡೆದು ತುಮಕೂರು ನಗರ ಠಾಣೆ ವ್ಯಾಪ್ತಿಯ ತುಮಕೂರುನಗರ ಗುಬ್ಬಿ ಗೇಟ್ ಬಳಿ ಇರುವ ಕರ್ನಾಟಕ ಬ್ಯಾಂಕ್‌  ಎ.ಟಿ.ಎಂ. ದರೋಡೆ ಮಾಡಿದ್ದ ಹಣದಲ್ಲಿ ಸುಮಾರು 11,21,000-00 ರೂ ಬೆಲೆಯ ಚಿನ್ನದ ವಡವೆಗಳು ಮತ್ತು ಹಣವನ್ನು ಅಮಾನತ್ತು ಪಡಿಸಿ ಆರೋಪಿಗಳನ್ನು ಘನ ನ್ಯಾಯಲಯಕ್ಕೆ ಹಾಜರ್ ಪಡಿಸಿದ್ದು ನ್ಯಾಯಾಂಗ ಬಂದನಕ್ಕೆ ಆದೇಶವಾಗಿರುತ್ತೆ.

ಸದರಿ ಕೇಸಿನಲ್ಲಿ ತುಮಕೂರು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಇಶಾಪಂತ್ ಐಪಿಎಸ್  ಹಾಗು  ಶ್ರೀ ಲೊಕೇಶ್‌ ಕುಮಾರ್ ಐಪಿಎಸ್‌  ರವರು ಮತ್ತು ಹೆಚ್ಚುವರಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಜಿ.ಬಿ.ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಕುಣಿಗಲ್ ಉಪ ವಿಬಾಗದ ಡಿ.ಎಸ್.ಪಿ. ಶ್ರೀ ಚಂದ್ರಶೇಖರ್ ರವರ ನೇತೃತ್ವದಲ್ಲಿ ತುರುವೇಕೆರೆ ವೃತ್ತದ ಸಿ.ಪಿ.ಐ ಶ್ರೀ ರಾಮಚಂದ್ರ ರವರ ತನಿಖೆಯನ್ನು ಕೈಗೊಂಡು ಮತ್ತು ಪಿ.ಎಸ್.ಐ ಹೊನ್ನೇಗೌಡ, ಸಿಬ್ಬಂದಿಯವರಾದ ರಮೇಶ್, ಶಶಿಧರ, ಮಧುಸೂದನ್, ಡಿ.ಕೃಷ್ಣಪ್ಪ, ರಾಜಕುಮಾರ್, ಮಹೇಶ್, ಮುತ್ತಪ್ಪ, ಜೀಪ್ ಚಾಲಕರಾದ ಪರಮೇಶ್ವರಪ್ಪ ರವರು ಪತ್ತೆಕಾರ್ಯದಲ್ಲಿ ಬಾಗವಹಿಸಿ ಸಹಕರಿಸಿರುತ್ತಾರೆ. ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಘಟನೆಯನ್ನು ಬೇದಿಸಿದ ಅದಿಕಾರಿ ಮತ್ತು ಸಿಬ್ಬಂದಿಯವರನ್ನು ಪ್ರಶಂಶಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.


Crime Incidents 28-04-17

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ .ನಂ-03/2017 ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ 27-04-2017 ರಂದು ರಾತ್ರಿ 10-30 ಗಂಟೆಗೆ ಅರ್ಜಿದಾರರಾದ ಆಸೀಪ್ ಬಿನ್ ಎಕ್ಬಾಲ್, ರಾಮಣ್ಣ ಲೇಔಟ್, ಗಾಂಧಿನಗರ ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಮ್ಮ ತಂದೆಯವರಿಗೆ 4 ಜನ ಗಂಡು ಮಕ್ಕಳು ಮತ್ತು 1 ಹೆಣ್ಣು ಮಗು ಇದ್ದು, ಕಾಸೀಪ್ ರವರು ಮೊದಲನೆಯವರಾಗಿರುತ್ತಾರೆ  ನಾನು 3ನೆಯವನಾಗಿರುತ್ತಾನೆ. ಕೌಸಿಪ್ ರವರಿಗೆ ಈಗ್ಗೆ ಸುಮಾರು ಎರಡುವರೆ ವರ್ಷಗಳ ಹಿಂದೆ ಬೆಂಗಳೂರು 8 ನೇ ಮೈಲುಗಲ್ಲಿನಲ್ಲಿರುವ ಇಬ್ರಾಹಿಂ ರವರ ಮಗಳು ಅಮ್ರೀನ ರವರ ಜೊತೆ ಮದುವೆಯಾಗಿದ್ದು ಸುಮಾರು 1 ವರ್ಷದ ಆಸಿಯಾ ಎಂಬ ಹೆಣ್ಣು ಮಗುವಿರುತ್ತೆ. ದಿನಾಂಕ 24-04-2017 ರಂದು ಸುಮಾರು 10-00 ಗಂಟೆ ಸಮಯದಲ್ಲಿ ನನ್ನ ಅಣ್ಣನ ಮಗಳು ಆಸೀಯ ರವರಿಗೆ ನನ್ನ ಅತ್ತಿಗೆ ಮನೆ ಹತ್ತಿರ ಸ್ನಾನ ಮಾಡಿಸಲು ಬಚ್ಚಲು ಮನೆ ಹತ್ತಿರ ಬಿಸಿನೀರನ್ನು ಬಕೇಟ್ ಗೆ ತೋಡಿಕೊಂಡಿದ್ದಾಗ  ಮಗು  ಆಕಸ್ಮಿಕವಾಗಿ ಬಕೇಟ್ ಎಳೆದಾಗ ಬಕೇಟ್ ಕೆಳಕ್ಕೆ ಬಿದ್ದು ಬಿಸಿನೀರು ಮೈ ಮೇಲೆ ಬಿದ್ದು ಸುಟ್ಟ ಗಾಯಗಳಾಗಿ ತಿಪಟೂರು ಬಾಲಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತಾರೆ. ಈ ದಿವಸ ದಿನಾಂಕ 27-04-2017 ರಂದು ಸುಮಾರು ರಾತ್ರಿ 09-30 ಗಂಟೆಯಲ್ಲಿ ಮಗು ಮೃತಪಟ್ಟಿರುತ್ತೆ ಎಂತ ತಿಳಿಸಿರುತ್ತಾರೆ.  ಇದರಲ್ಲಿ ಬೇರಾವುದೇ ಅನುಮಾನವಿರುವುದಿಲ್ಲ ಅದರೂ ಸಹ ವ್ಯದ್ಯಾದಿಕಾರಿಗಳ ತಪಾಸಣೆ ಮಾಡಿಸಿ ಮುಂದಿನ ಕ್ರಮ ಜರುಗಿಸಿ  ಎಂದು ಇತ್ಯಾದಿಯಾಗಿ ನೀಡಿರುವ ಪಿರ್ಯಾದು ಅಂಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 47/2017 u/s 304A r/w 34 IPC

ದಿನಾಂಕ : 27-04-2017 ರಂದು ರಾತ್ರಿ 10-30  ಗಂಟೆಗೆ ಪಿರ್ಯಾದಿ ಶ್ರೀ ನಂಜಪ್ಪ ಬಿನ್ ಲೇಟ್ ಕಂಭಯ್ಯ, 55 ವರ್ಷ, ವಾಸ 2ನೇ ಹಂತ, ಬನಶಂಕರಿ, ತುಮಕೂರು ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಹೆಂಡತಿಯಾದ 50 ವರ್ಷದ ಶ್ರೀಮತಿ   ಕಮಲಮ್ಮ ರವರನ್ನು  ದಿನಾಂಕ : 26-04-2017 ರಂದು ಬೆಳಗ್ಗೆ ಚಿಕಿತ್ಸೆಗಾಗಿ ತುಮಕೂರಿನ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದು ಈ ದಿವಸ ದಿನಾಂಕ : 27-04-2017 ರಂದು ಸಂಜೆ ಸುಮಾರು 4-30 ಗಂಟೆಯಲ್ಲಿ ಆಸ್ಪತ್ರೆಯ ವೈದ್ಯರಾದ ಡಾ|| ಸಿದ್ದೇಶ್ವರಸ್ವಾಮಿ, ಡಾ|| ದುರ್ಗಾದಾಸ್ ರವರುಗಳು ಕಮಲಮ್ಮ ರವರಿಗೆ ಯಾವುದೋ ಔಷಧಿಗಳನ್ನು ನೀಡಿ ರಕ್ತ ಹಾಕಿದ ತಕ್ಷಣ ಕಮಲಮ್ಮ ರವರು ಸಂಜೆ 6-00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ ಪಿರ್ಯಾದಿ ಹೆಂಡತಿಯು ತಕ್ಷಣಕ್ಕೆ ಸಾಯುವಂತಹ ಯಾವುದೇ ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವುದಿಲ್ಲ ಆದರೆ ವೈದ್ಯರಾದ ಡಾ|| ಸಿದ್ದೇಶ್ವರಸ್ವಾಮಿ, ಡಾ|| ದುರ್ಗಾದಾಸ್ ರವರುಗಳ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನನಿಂದಲೇ ಕಮಲಮ್ಮ ರವರು ಮೃತಪಟ್ಟಿದ್ದು ಈ ಬಗ್ಗೆ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರಾದ ಡಾ|| ಸಿದ್ದೇಶ್ವರಸ್ವಾಮಿ, ಡಾ|| ದುರ್ಗಾದಾಸ್ ರವರುಗಳ ವಿರುದ್ಧ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿದೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-65/2017 ಕಲಂ: 96 ಕೆ.ಪಿ ಆಕ್ಟ್

ದಿನಾಂಕ:27-04-2017 ರಂದು ಬೆಳಿಗ್ಗೆ 4-15 ಗಂಟೆಗೆ ಠಾಣಾ ಹೆಚ್ ಸಿ 32 ಉಸ್ಮಾನ್ ಸಾಬ್ ರವರು ನೀಡಿದ ವರದಿಯ ಅಂಶವೇನೆಂದರೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಸ್ಮಾನ್ ಸಾಬ್ ಸಿ ಹೆಚ್ ಸಿ 32 ಆದ ನನಗೆ ಮತ್ತು ಪಿ ಸಿ 437 ಲೋಕೇಶ ರವರಿಗೆ ದಿನಾಂಕ:26-04-2017 ರಂದು ರಾತ್ರಿ ವಿಶೇಷ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ನೇಮಕದಂತೆ ಗಾಂಧಿನಗರದಲ್ಲಿ ಗಸ್ತುಮಾಡಿಕೊಂಡು ಇಂದಿರಾನಗರದ ಸರ್ಕಲ್ ಬಳಿ ಇರುವ ಆಂಜನೇಯದೇವಸ್ಥಾನದ ಬಳಿ ಬಂದಾಗ  ರಾತ್ರಿ 3-30 ಗಂಟೆ ಸಮಯದಲ್ಲಿ ದೇವಸ್ಥಾನದ ಹತ್ತಿರ ಇಬ್ಬರು ಆಸಾಮಿಗಳು  ಕತ್ತಲೆಯಲ್ಲಿ ತಮ್ಮ ಇರುವಿಕೆಯನ್ನು ಮರೆಮಾಚಿಕೊಂಡು ಇದ್ದು, ನಾವು ಅವರ ಹತ್ತಿರ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು, ಓಡಿ ಹೋಗಲು ಪ್ರಯತ್ನಿಸಿದವರನ್ನು  ಹಿಡಿದು ಒಬ್ಬನು ಕೈಯ್ಯಲಿ ಕಬ್ಬಿಣದ ರಾಡು ಹಿಡಿದುಕೊಂಡಿದ್ದು ಈತನ ಹೆಸರು ವಿಳಾಸ ಕೇಳಲಾಗಿ ಕುಮಾರ್ ತಂದೆ ಗಿರೀಶ, 19 ವರ್ಷ, ಶಿಳ್ಳೆಕ್ಯಾತರು ಜನಾಂಗ, ಕೇರಳದಲ್ಲಿ ಬಟ್ಟೆ ವ್ಯಾಪಾರ, ಆಸ್ಪತ್ರೆ ಸರ್ಕಲ್, ದುರ್ಗಮ್ಮ ದೇವಸ್ಥಾನದ ಬಳಿ, ಬುಕ್ಕಾಪಟ್ಟಣ, ಶಿರಾ ತಾಲ್ಲೋಕು ಎಂದು ಮತ್ತೊಬ್ಬನು ಕೈಯಲ್ಲಿ ಸ್ಕೂಡ್ರೈವರ್ ಹಿಡಿದುಕೊಂಡಿದ್ದು ಈತನ ಹೆಸರು ವಿಳಾಸ ಕೇಳಲಾಗಿ ವಿಶ್ವನಾಥ @ ವಿಶ್ವ ತಂದೆ ರಂಗನಾಥ, 20 ವರ್ಷ, ಶಿಳ್ಳೆಕ್ಯಾತರು ಜನಾಂಗ, ಕೇರಳದಲ್ಲಿ ಬಟ್ಟೆ ವ್ಯಾಪಾರ, ಆಸ್ಪತ್ರೆ ಸರ್ಕಲ್, ದುರ್ಗಮ್ಮ ದೇವಸ್ಥಾನದ ಬಳಿ, ಬುಕ್ಕಾಪಟ್ಟಣ, ಶಿರಾ ತಾಲ್ಲೋಕು ಎಂದು ತಿಳಿಸಿದ್ದು  ಇವರು ರಾತ್ರಿ  ಅವೇಳೆಯಲ್ಲಿ ಇರುವ ಬಗ್ಗೆ ವಿಚಾರಣೆ ಮಾಡಲಾಗಿ ಕಳ್ಳತನ ಮಾಡುವ ಉದ್ದೇಶದಿಂದ ತಮ್ಮ  ಇರುವಿಕೆಯನ್ನು ಮರೆಮಾಚಿಕೊಂಡು ಹೊಂಚು ಹಾಕುತ್ತಿದ್ದುದಾಗಿ ತಿಳಿಸಿದ್ದು ಆದ್ದರಿಂದ ಮೇಲ್ಕಂಡ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ದಿನಾಂಕ:27-04-2017 ರಂದು ಬೆಳಗಿನ ಜಾವ  4-00 ಗಂಟೆಗೆ ಠಾಣೆಗೆ ಕರೆತಂದು ಎಸ್ ಹೆಚ್ ಓ ರವರಿಗೆ ಆಸಾಮಿಗಳು, ಅವರ ಬಳಿ ಇದ್ದ ಮಾಲು ಮತ್ತು ವರದಿಯನ್ನು ಮುಂದಿನ ಕ್ರಮಕ್ಕಾಗಿ ನೀಡಿರುತ್ತೇನೆ. ಎಂದು ಇದ್ದ ವರದಿಯ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-67/2017 ಕಲಂ: 420,465, ರೆ/ವಿ 34 ಐ.ಪಿ.ಸಿ.

ದಿನಾಂಕ:27-04-2017 ರಂದು ಶ್ರೀಮತಿ ಗಂಗಮ್ಮ ಕೋಂ ಲೇಟ್ ಬಸವಯ್ಯ, 82 ವರ್ಷ, ಬೊಮ್ಮೇನಹಳ್ಳಿ, ತಿಪಟೂರು ತಾಲ್ಲೋಕ್ ರವರು ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ತಿಪಟೂರು ತಾಲ್ಲೋಕು ಮಾರನಗೆರೆ ಸರ್ವೆ ನಂ 131/4ಎ ಮತ್ತು 54/2ಎ ರ ಜಮೀನಿನ 11 ಇ ನಕ್ಷೆ ತಯಾರು ಮಾಡಲು ನನ್ನ ಅಕ್ಕನ ಮಗ ಎಂ ಸಿ ಲಿಂಗರಾಜು ರವರು ತಿಪಟೂರು ತಾಲ್ಲೋಕು ಕಛೇರಿ ಅರ್ಜಿ ಸಲ್ಲಿಸಿದ್ದು. ಜಮೀನಿನ ಸರ್ವೆಯನ್ನು ಹಾಗೂ ದುರಸ್ತನ್ನು ತಾಲ್ಲೋಕು ಕಛೇರಿಯಲ್ಲಿ ಸಿದ್ದಪಡಿಸಿಕೊಂಡು ಎಂ ಸಿ ಲಿಂಗರಾಜು ಮತ್ತು ಸರ್ವೆಯರ್ ಬಸವರಾಜು ರವರು ಗಂಗಮ್ಮ ರವರ ಗಮನಕ್ಕೆ ಬಾರದೇ ದುರಸ್ತು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳಾದ ನೋಟೀಸ್ ಪ್ರತಿ, ಹೇಳೀಕೆ ಪ್ರತಿ ಗಳಿಗೆ ಸಹಿಯನ್ನು ನಕಲು ಮಾಡಿದ್ದು ಹಾಗೂ ಮೋಸದಿಂದ ಶುದ್ದಕ್ರಯಪತ್ರಕ್ಕೆ ಎಂ ಸಿ ಲಿಂಗರಾಜು ರವರು ಸಹಿ ಪಡೆದಿರುತ್ತಾರೆ. ನನ್ನ ಸಹಿಯನ್ನು ದಾಖಲೆಗಳಿಗೆ ನಕಲು ಮಾಡಿ ಮೋಸ ಮಾಡಿರುವ ಎಂ ಸಿ ಲಿಂಗರಾಜು ಮತ್ತು ಸರ್ವೆಯರ್ ಬಸವರಾಜು ರವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲು ಮಾಡಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ .ನಂ-02/2017 ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ:27/04/2017 ರಂದು ಸಂಜೆ 04-00 ಗಂಟೆಗೆ ಪಿರ್ಯಾದಿ ನಂಜುಂಡಯ್ಯ ಬಿನ್ ಪುಟ್ಟೇಗೌಡ, 68 ವರ್ಷ, ಬಜಗೂರು, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ತಂದೆಯ ಅಕ್ಕನ ಮಗನಾದ ನಮ್ಮ ಗ್ರಾಮದ ಬಿ.ಎಲ್ ಮಹಲಿಂಗಪ್ಪ, 66 ವರ್ಷ ಇವರು ಸುಮಾರು 4-5 ವರ್ಷಗಳಿಂದ ತಿಪಟೂರು ಟೌನ್ ಷಡಾಕ್ಷರಿ ಬಡಾವಣೆಯಲ್ಲಿ ವಾಸವಿದ್ದು, ಇವರು ಮದುವೆಯಾಗಿ ಸಂಸಾರದಲ್ಲಿ ಹೊಂದಾಣಿಕೆಯಾಗದೇ ಒಂಟಿಯಾಗಿದ್ದರು. ದಿನಾಂಕ: 27/04/2017 ರಂದು ಸುಮಾರು ಮಧ್ಯಾಹ್ನ 01-00 ಗಂಟೆಯಿಂದ 01-30 ಗಂಟೆಯಲ್ಲಿ ತಿಪಟೂರು ಟೌನ್ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಪ್ಲೇಗಿನಮ್ಮ ದೇವಸ್ಥಾನದ ಸರ್ಕಲ್ ನಲ್ಲಿರುವ ಸೇತುವೆಯ ಮೇಲೆ ಕುಳಿತಿದ್ದು, ಇವರಿಗೆ ತಲೆ ಸುತ್ತು ಬಂದೋ ಅಥವಾ ನಡುಕ ಬಂದೋ ಆಯತಪ್ಪಿ ಆಕಸ್ಮಿಕವಾಗಿ ಸೇತುವೆಯ ಪಕ್ಕ ಇರುವ ಚರಂಡಿಯಲ್ಲಿ ಬಿದ್ದು ಮೃತಪಟ್ಟಿರುತ್ತಾರೆ. ಶವವನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುತ್ತೇವೆ. ಆದ್ದರಿಂದ ತಾವುಗಳು ಸ್ಥಳಪರಿಶೀಲನೆ ಮಾಡಿ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.42/2017, ಕಲಂ:87 ಕೆ.ಪಿ.ಆಕ್ಟ್‌.

ದಿನಾಂಕ:26/04/2017 ರಂದು ಸಂಜೆ ಠಾಣಾ ಎ.ಎಸ್.ಐ-ಸಣ್ಣ ಓಬಳಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ನನಗೆ ದಿನಾಂಕ:26/04/2017 ರಂದು ಸಾಯಂಕಾಲ 04-00 ಗಂಟೆಯಲ್ಲಿ ಠಾಣೆಯಲ್ಲಿರುವಾಗ್ಗೆ ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದು ಕಸಾಪುರ ಗ್ರಾಮದ ಹಳೇ ಅಂಗನವಾಡಿ ಕೇಂದ್ರದ ಹಿಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಸಿಬ್ಬಂದಿಯೊಂದಿಗೆ ಕಸಾಪುರ ಗ್ರಾಮಕ್ಕೆ ಹೋಗಿ ಅಲ್ಲಿಂದ ಪಂಚಾಯ್ತುದಾರರನ್ನು  ಜೊತೆಯಲ್ಲಿ ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಜನರು ಗುಂಡಾಕಾರವಾಗಿ ಕುಳಿತು ಒಳಗೆ-ಹೊರಗೆ ಎಂತ ಜೋರಾಗಿ ಹೇಳುತ್ತಾ ಅಂದರ್-ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿದ್ದುದ್ದನ್ನು ಖಚಿತಪಡಿಸಿಕೊಂಡು ಜೂಜಾಟವಾಡುತ್ತಿದ್ದ ಆಸಾಮಿಗಳ ಮೇಲೆ ಸಿಬ್ಬಂದಿಯೊಂದಿಗೆ ದಾಳಿಮಾಡಿ ಜೂಜಾಟದಲ್ಲಿ ತೊಡಗಿದ್ದ ಆಸಾಮಿಗಳನ್ನು ಹಿಡಿದುಕೊಂಡು ವಿಚಾರ ಮಾಡಿ ಹೆಸರು ವಿಳಾಸ ತಿಳಿಯಲಾಗಿ 1) ಗೋವಿಂದರಾಜು   ಬಿನ್ ಲೇ|| ತಿಮ್ಮಣ್ಣ ,32 ವರ್ಷ,ನಾಯಕರು, ಮರಿ ವ್ಯಾಪಾರ ಕಸಾಪುರ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು, 2)ಮಹೇಶ್  ಬಿನ್ ಲೇ|| ಮಲೇರಂಗಪ್ಪ , 27 ವರ್ಷ,ನಾಯಕರು ಕೂಲಿ ಕೆಲಸ, ಕಸಾಪುರ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು, 3)ಶಂಕರಪ್ಪ ಬಿನ್ ಲೇ|| ಸಾಂಬಶಿವಯ್ಯ, 60 ವರ್ಷ, ವಕ್ಕಲಿಗರು,ಜಿರಾಯ್ತಿ, ಕಸಾಪುರ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು, 4) ಹನುಮಂತರಾಯಪ್ಪ ಬಿನ್ ಲೇ||ನರಸಪ್ಪ,65 ವರ್ಷ, ಕೂಲಿ ಕೆಲಸ, ಎಕೆ ಜನಾಂಗ, ಕಸಾಪುರ ಗ್ರಾಮ, ಮಿಡಿಗೇಶಿ ಹೋಬಳಿ,ಮಧುಗಿರಿ ತಾಲ್ಲೋಕು ಎಂತ ತಿಳಿಸಿರುತ್ತಾರೆ.

ನಂತರ ಅಖಾಡದಲ್ಲಿ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 1) 1130/-ರೂ ನಗದು ಹಣ 2)52 ಇಸ್ಪೀಟ್ ಎಲೆಗಳು  3)ಎರಡು ಹಳೆಯ ನ್ಯೂಸ್ ಪೇಪರ್ ಇವುಗಳನ್ನು ಪಂಚರ ಸಮಕ್ಷಮ ಸಂಜೆ 04:30 ಗಂಟೆಯಿಂದ 05:00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಳ್ಳಲಾಯಿತು. ನಂತರ ಜೂಜಾಟದಲ್ಲಿ ತೊಡಗಿ ಸ್ಥಳದಲ್ಲಿ ಸಿಕ್ಕಿಬಿದ್ದ ಆಸಾಮಿಗಳಿಗೆ ಕರೆ ಮಾಡಿದಾಗ ಠಾಣೆಗಾಗಲಿ ಅಥವಾ ನ್ಯಾಯಾಲಯಕ್ಕಾಗಲಿ ಹಾಜರಾಗುವಂತೆ ಸೂಕ್ತ ತಿಳುವಳಿಕೆ ನೀಡಿ ಸ್ಥಳದಿಂದ ಕಳುಹಿಸಿಕೊಟ್ಟಿರುತ್ತೆ.

ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಇಸ್ಟೀಟ್ ಜೂಜಾಟದಲ್ಲಿ ತೊಡಗಿದ್ದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ   ಕ್ರಮ ಜರುಗಿಸಲು ಈ ಮೂಲಕ ನಿಮಗೆ ಸೂಚಿಸಿ, ಇದರೊಂದಿಗೆ ಸ್ಥಳ ಪಂಚನಾಮೆ ಮತ್ತು ಕೃತ್ಯ ನಡೆದ ಸ್ಥಳದಲ್ಲಿ ವಶಪಡಿಸಿಕೊಂಡ ಮೇಲ್ಕಂಡ ಮಾಲುಗಳನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆಂತ ನೀಡಿದ ಜ್ಞಾಪನದ ಮೇರೆಗೆ ಠಾಣಾ NCR.GSC.No.PO1657170600053/2017 ರಲ್ಲಿ

ಸದರಿ NCR ವಿಷಯವು ಅಸಂಜ್ಞೇಯ ಅಪರಾಧವಾಗಿರುವುದರಿಂದ ಮುಂದಿನ ಕ್ರಮ ಜರುಗಿಸಲು ಘನ ನ್ಯಾಯಾಲಯವು ಸದರಿ ಅಪರಾಧವನ್ನು ಸಂಜ್ಞೇಯ ಅಪರಾಧವಾಗಿ ಪರಿಗಣಿಸಿ ಕಲಂ:87 ಕೆ.ಪಿ.ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಬೇಕೆಂದು ಘನ ನ್ಯಾಯಾಲಯದಲ್ಲಿ ಕೋರಿ ಮನವಿಯನ್ನು ಸಲ್ಲಿಸಿಕೊಂಡಿದ್ದು, ಮಧುಗಿರಿ ಘನ ಎ.ಸಿ.ಜೆ.(ಜೆ.ಡಿ) & ಜೆ.ಎಂ.ಎಫ್‌.ಸಿ. ನ್ಯಾಯಾಲಯವು ಮೇಲ್ಕಂಡ ಎನ್‌.ಸಿ.ಆರ್. ವಿಷಯನ್ನು ಸಂಜ್ಞೆಯ ಅಪರಾಧವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಿದ ಮೇರೆಗೆ ದಿನಾಂಕ:27/04/2017 ರಂದು ಸಾಯಂಕಾಲ 04:00 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.05/2017, ಕಲಂ:174 ಸಿ.ಆರ್.ಪಿ.ಸಿ.

ದಿನಾಂಕ:27/04/2017 ರಂದು ಬೆಳಿಗ್ಗೆ 09:10 ಗಂಟೆಗೆ ಪಿರ್ಯಾದಿ ಹನುಮಪ್ಪ ಬಿನ್ ಲೇ||ವೆಂಕಟಪ್ಪ, 51 ವರ್ಷ, ಕೂಲಿ ಕೆಲಸ, ಬೋವಿ ಜನಾಂಗ, ಗೊಲ್ಲಹಳ್ಳಿ ಗ್ರಾಮ, ಮಡಕಶಿರಾ ತಾಲೋಕು ರವರು ಠಾಣೆಗೆ ಹಾಜರಾಗಿ ನೀಡಿ  ದೂರಿನ ಅಂಶವೇನೆಂದರೆ, ನನ್ನ ಮಗಳಾದ ಜಯಂತಿ ಎಂಬುವರನ್ನು ತೊಂಡೋಟಿ ಗ್ರಾಮದ ತಿಪ್ಪೇಸ್ವಾಮಿ ಬಿನ್ ಟಿ.ಹೆಚ್.ನಾಗಯ್ಯನಿಗೆ ಈಗ್ಗೆ 10 ವರ್ಷಗಳ ಹಿಂದೆ ಮಧುವೆ ಮಾಡಿಕೊಟ್ಟಿದ್ದು,  ಗಂಡ-ಹೆಂಡತಿ ಇಬ್ಬರೂ ಸಂಸಾರದಲ್ಲಿ ಅನ್ಯೂನ್ಯವಾಗಿದ್ದರು. ಆಕೆಗೆ ಇಬ್ಬರು ಹೆಣ್ಣು ಮಕ್ಕಳು ಒಂದು ಗಂಡು ಮಗ ಇದ್ದಾರೆ. 1)ಪವಿತ್ರ, 2)ಸೌಮ್ಯ, ಕೌಶಿಕ್ ಎಂಬ ಮಕ್ಕಳಿರುತ್ತಾರೆ. ನನ್ನ ಮಗಳು ಜಯಂತಿ ರವರಿಗೆ ಈಗ್ಗೆ ಮೂರು ನಾಲ್ಕು ವರ್ಷಗಳಿಂದ ಹೊಟ್ಟೆ ನೋವಿದ್ದು ಗಂಡನ ಮನೆಯವರೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೂ ಸಹ ಈಕೆಗೆ ಹೊಟ್ಟೆ ನೋವು ವಾಸಿಯಾಗಿರಲಿಲ್ಲ. ಈಗಿರುವಾಗ್ಗೆ ದಿ:25/04/2017 ರಂದು ನನ್ನ ಮಗಳು ಜಯಂತಿ ರವರು ತೊಂಡೋಟಿಯ ಗ್ರಾಮದ ತನ್ನ ಗಂಡನ ಮನೆಯಲ್ಲಿ ಬೆಳಿಗ್ಗೆ ಸುಮಾರು 08:00 ಗಂಟೆಯ ಸಮಯದಲ್ಲಿ ಹೊಟ್ಟೆ ನೋವಿನ ಬಾದೆಯನ್ನು ತಾಳಲಾರದೆ ತನ್ಮೂಲಕ ತಾನೆ ವಿಷ ಸೇವನೆ ಮಾಡಿದ್ದು, ಚಿಕಿತ್ಸೆಗಾಗಿ ಹಿಂದೂಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಂತಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸದರೂ ಫಲಕಾರಿಯಾಗದೆ ದಿನಾಂಕ:26/04/2017 ರಂದು ರಾತ್ರಿ 07:30 ಗಂಟೆಯ ಸಮಯದಲ್ಲಿ ಮೃತಪಟ್ಟಿರುತ್ತಾಳೆ. ಮೃತೆಯ ದೇಹವು ಅನಂತಪುರ ಸರ್ಕಾರಿ ಆಸ್ಪತ್ರೆಯಲ್ಲಿದ್ದು, ಮೃತಳ ಸಾವಿನಲ್ಲಿ ಬೇರೆ ಯಾವ ಅನುಮಾನವಿರುವುದಿಲ್ಲ. ಆದ್ದರಿಂದ ಆದ್ದರಿಂದ ತಾವುಗಳು ಮುಂದಿನ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ .ನಂ-03/2017 ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ 27-04-2017 ರಂದು ರಾತ್ರಿ 10-30 ಗಂಟೆಗೆ ಅರ್ಜಿದಾರರಾದ ಆಸೀಪ್ ಬಿನ್ ಎಕ್ಬಾಲ್, ರಾಮಣ್ಣ ಲೇಔಟ್, ಗಾಂಧಿನಗರ ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಮ್ಮ ತಂದೆಯವರಿಗೆ 4 ಜನ ಗಂಡು ಮಕ್ಕಳು ಮತ್ತು 1 ಹೆಣ್ಣು ಮಗು ಇದ್ದು, ಕಾಸೀಪ್ ರವರು ಮೊದಲನೆಯವರಾಗಿರುತ್ತಾರೆ  ನಾನು 3ನೆಯವನಾಗಿರುತ್ತಾನೆ. ಕೌಸಿಪ್ ರವರಿಗೆ ಈಗ್ಗೆ ಸುಮಾರು ಎರಡುವರೆ ವರ್ಷಗಳ ಹಿಂದೆ ಬೆಂಗಳೂರು 8 ನೇ ಮೈಲುಗಲ್ಲಿನಲ್ಲಿರುವ ಇಬ್ರಾಹಿಂ ರವರ ಮಗಳು ಅಮ್ರೀನ ರವರ ಜೊತೆ ಮದುವೆಯಾಗಿದ್ದು ಸುಮಾರು 1 ವರ್ಷದ ಆಸಿಯಾ ಎಂಬ ಹೆಣ್ಣು ಮಗುವಿರುತ್ತೆ. ದಿನಾಂಕ 24-04-2017 ರಂದು ಸುಮಾರು 10-00 ಗಂಟೆ ಸಮಯದಲ್ಲಿ ನನ್ನ ಅಣ್ಣನ ಮಗಳು ಆಸೀಯ ರವರಿಗೆ ನನ್ನ ಅತ್ತಿಗೆ ಮನೆ ಹತ್ತಿರ ಸ್ನಾನ ಮಾಡಿಸಲು ಬಚ್ಚಲು ಮನೆ ಹತ್ತಿರ ಬಿಸಿನೀರನ್ನು ಬಕೇಟ್ ಗೆ ತೋಡಿಕೊಂಡಿದ್ದಾಗ  ಮಗು  ಆಕಸ್ಮಿಕವಾಗಿ ಬಕೇಟ್ ಎಳೆದಾಗ ಬಕೇಟ್ ಕೆಳಕ್ಕೆ ಬಿದ್ದು ಬಿಸಿನೀರು ಮೈ ಮೇಲೆ ಬಿದ್ದು ಸುಟ್ಟ ಗಾಯಗಳಾಗಿ ತಿಪಟೂರು ಬಾಲಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತಾರೆ. ಈ ದಿವಸ ದಿನಾಂಕ 27-04-2017 ರಂದು ಸುಮಾರು ರಾತ್ರಿ 09-30 ಗಂಟೆಯಲ್ಲಿ ಮಗು ಮೃತಪಟ್ಟಿರುತ್ತೆ ಎಂತ ತಿಳಿಸಿರುತ್ತಾರೆ.  ಇದರಲ್ಲಿ ಬೇರಾವುದೇ ಅನುಮಾನವಿರುವುದಿಲ್ಲ ಅದರೂ ಸಹ ವ್ಯದ್ಯಾದಿಕಾರಿಗಳ ತಪಾಸಣೆ ಮಾಡಿಸಿ ಮುಂದಿನ ಕ್ರಮ ಜರುಗಿಸಿ  ಎಂದು ಇತ್ಯಾದಿಯಾಗಿ ನೀಡಿರುವ ಪಿರ್ಯಾದು ಅಂಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

 Thursday, 27 April 2017

Crime Incidents 27-04-17

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 35/2017 ಕಲಂ 143,147,148,447,420,464,468 ರೆ/ವಿ 34  ಐಪಿಸಿ

ದಿನಾಂಕ:- 26/04/2017 ರಂದು ಸಂಜೆ 6-10 ಗಂಟೆಗೆ ಠಾಣಾ ನ್ಯಾಯಾಲಯದ ಸಿಬ್ಬಂದಿ ಸಿ ಹೆಚ್‌ ಸಿ 94 ಮಂಜುನಾಥ್‌ ರವರು ಮಧುಗಿರಿ ನ್ಯಾಯಾಲಯದ ಪಿ ಸಿ ಆರ್ ನಂ 11/2017  ರ ದೂರನ್ನು ತಂದು ನೀಡಿದ್ದು,  ಸದರಿ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ  ಶ್ರೀ ಗೋವಿಂದಪ್ಪ ಬಿನ್‌ ವೆಂಕಟಪ್ಪ ರವರ ಹೆಸರಿಗೆ ಬಿ ಎಂ ಪಾಳ್ಯದ ಖಾತೆ ನಂ 41/43 ರಲ್ಲಿ ಒಂದು ನಿವೇಶನ ಇರುತ್ತೆ. ಸದರಿ ನಿವೇಶನವನ್ನು  ಆರೋಪಿ 02,03,04,05 ಮತ್ತು 06 ರವರುಗಳು ಆರೋಪಿ -01 ಮತ್ತು 07 ರವರೊಂದಿಗೆ ಶಾಮೀಲಾಗಿ  ಸದರಿ ನಿವೇಶನವನ್ನು ಆರೋಪಿ-02 ರವರ ಹೆಸರಿಗೆ  ಕಾನೂನು ವಿರುದ್ದವಾಗಿ ಖಾತೆ ಮಾಡಿಕೊಂಡಿರುತ್ತಾರೆ. ಸದರಿ ಖಾತೆ ವಿರುದ್ದ ಮಧುಗಿರಿ ತಾಲ್ಲೂಕು  ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿ ತಡೆಯಾಜ್ಞೆ ಸಹ ತಂದಿರುತ್ತಾರೆ. ಈಗಿದ್ದರೂ ಸಹ ದಿನಾಂಕ:07/03/2017 ರಂದು ಬೆಳಗ್ಗೆ ಆರೋಪಿತರು ಒಟ್ಟುಗೂಡಿಕೊಂಡು ತೊಂದರೆಕೊಡುವ ಉದ್ದೇಶದಿಂದ ಪಿರ್ಯಾದಿಯ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿ ಪಾಯ ಹಾಕಿರುತ್ತಾರೆ.  ಆರೋಪಿ -01 ರವರು ಸರ್ಕಾರಿ ಅಧಿಕಾರಿಯಾಗಿದ್ದು,  ಪಂಚಾಯ್ತಿಯಲ್ಲಿ ಯಾವುದೆ ಠರಾವು ಪಾಸ್ ಮಾಡದೆ ಏಕಾಏಕಿ ಅಕ್ರಮ  ಖಾತೆಯನ್ನು ಮಾಡಿ ಪಿರ್ಯಾದುದಾರರಿಗೆ ಮೋಸ ಮಾಡಿರುತ್ತಾರೆ.  ಹಾಗೂ ಪಿರ್ಯಾದುದಾರರಿಗೆ ತೊಂದರೆ ಕೊಡುವ ಉದ್ದೇಶದಿಂದ ಅಕ್ರಮವಾಗಿ ಮನೆ ಕಟ್ಟಲು ಯತ್ನಿಸಿದ್ದು, ಪ್ರಾಣ ತೆಗೆಯಲು ಹುನ್ನಾರ ನಡೆಸುತ್ತಿದ್ದಾರೆ  ಮೇಲ್ಕಂಡವರಿಗೆ ಕಾನೂನಾತ್ಮಕವಾಗಿ ಶಿಕ್ಷಿಸಿ ಪಿರ್ಯಾದುದಾರರಿಗೆ ರಕ್ಷಣೆ ನೀಡಲು ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ .ನಂ. 85/2017 ಕಲಂ 323,324,341,504,506 IPC ದಿ:26/04/2017

ದಿನಾಂಕ:26/04/2017 ರಂದು ಸಂಜೆ 5-30 ಗಂಟೆಗೆ ಕೊರಟಗೆರೆ ತಾಲ್ಲೋಕ್ ಹೊಳವನಹಳ್ಳಿ ಹೋಬಳಿ ಬಸವನಹಳ್ಳಿ ಗ್ರಾಮದ ಶಿವಕುಮಾರ ಬಿನ್ ಸತ್ಯಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು AP-02-TB-7659ನೇ ಲಾರಿಯಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದು ನಿನ್ನೆ ದಿವಸ ಆಂದ್ರಪ್ರದೇಶದಿಂದ ಭತ್ತವನ್ನು ಲೋಡ್ ಮಾಡಿಕೊಂಡು ಈ ದಿನ ದಿನಾಂಕ:26/04/2017 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ರತ್ನಾಂಬಾ ರೈಸ್ ಮಿಲ್‌ಗೆ ಅನ್‌ಲೋಡ್ ಮಾಡಲು ಮಿಲ್ ಮುಂದೆ ಲಾರಿ ನಿಲ್ಲಿಸಿ ಮಿಲ್‌ಗೆ ಹೋಗುತ್ತಿದ್ದಾಗ ತುಮಕೂರು ನಗರ ಮರಳೂರಿನ ರಂಗಪ್ಪ ರವರು ಹಿಂದಿನ ದ್ವೇಷದಿಂದ ಬೋಳಿ ಮಗನೇ, ಸೂಳೆ ಮಗನೇ ಎಂತಾ ಬೈಯ್ದು ನನ್ನನ್ನು ಅಡ್ಡಗಟ್ಟಿ ಆತನು ತಂದಿದ್ದ ಯಾವುದೋ ಚಾಕುವಿನಿಂದ ನನ್ನ ಎಡಭಾಗದ ಕುತ್ತಿಗೆಗೆ ತಿವಿದು ರಕ್ತಗಾಯಪಡಿಸಿದ್ದು, ನಮ್ಮ ಲಾರಿಯ ಕ್ಲೀನರ್ ರವಿ ಹಾಗೂ ರಂಗಪ್ಪನ ಗಡಿ ಕ್ಲೀನರ್ ನಾರಾಯಣ ರವರು ನನ್ನನ್ನು ಬಿಡಿಸಿಕೊಂಡಾಗ ರಂಗಪ್ಪನು ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ಸಾಯಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿದ್ದು ಚಾಕುವನ್ನು ಎಸೆದು ಹೋಗಿರುತ್ತಾನೆ. ನನ್ನನ್ನು ರವಿ, ನಾರಾಯಣ ರವರು ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು, ನಾನು ಚಿಕಿತ್ಸೆ ಪಡೆದು ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು, ಅಡ್ಡಗಟ್ಟಿ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ರಂಗಪ್ಪ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

 

 Wednesday, 26 April 2017

Crime Incidents 26-04-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 80/2017 ಕಲಂ; 32, 34 ಕೆ.ಇ ಆಕ್ಟ್.

ದಿನಾಂಕ-25-04-2017 ರಂದು ಸಂಜೆ 6-15 ಗಂಟೆ ಸಮಯದಲ್ಲಿ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಅನಿಲ್‌ಕುಮಾರ್‌ ಎಂ.ಎಸ್‌ - ಪಿಎಸ್‌ಐ ರವರು ಠಾಣಾ ಹೆಚ್‌ಸಿ-126 ಶ್ರೀನಿವಾಸಮೂರ್ತಿ ರವರ ಮುಖೇನ ಕಳುಹಿಸಿಕೊಟ್ಟ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-25-04-2017 ರಂದು ನಾನು ಸಿಬ್ಬಂದಿಯೊಂದಿಗೆ ಹುಲಿಯೂರುದುರ್ಗ ಠಾಣಾ ಸರಹದ್ದು ಪಡುವಗೆರೆ ಗ್ರಾಮದ ಶ್ರೀ ಕೊಲ್ಲಪುರದಮ್ಮ ದೇವರ ಅಗ್ನಿಕೊಂಡ ಮಹೋತ್ಸವದ ಜಾತ್ರಾ ಬಂದೋಬಸ್ತ್ ಕರ್ತವ್ಯದಲ್ಲಿರುವಾಗ್ಗೆ ಮಾನ್ಯ ಪೊಲೀಸ್‌ ವೃತ್ತನಿರೀಕ್ಷಕರು ನನಗೆ ಮೌಖಿಕವಾಗಿ, ಇದೇ ದಿವಸ ಗ್ರಾಮದಲ್ಲಿ ರಾಜಣ್ಣ ಎಂಬುವವರ ಚಿಲ್ಲರೆ ಅಂಗಡಿಯೊಳಗೆ ಹೆಚ್ಚಿನ ಹಣ ಸಂಪಾದನೆಗಾಗಿ ವಿವಿದ ಬಗೆಯ ಮಧ್ಯ ಮಾರಾಟ ಮಾಡುತ್ತಿರುತ್ತರೆಂತ 4-30 ಗಂಟೆಗೆ ಸಾರ್ವಜನಿಕರಿಮದ ಬಂದ ಖಚಿತ ಮಾಹಿತಿ ಬಂದಿರುತ್ತೆ. ನೀವು ಮುಂದಿನ ಕ್ರಮ ಕೈಗೊಳ್ಳಿ ಎಂದು ಆದೇಶ ಮಾಡಿದರು. ನಾನು ಮಾನ್ಯ ಆದೇಶದಂತೆ ಸಂಜೆ 5-00 ಗಂಟೆ ಸಮಯದಲ್ಲಿ ಠಾಣಾ ಹೆಚ್‌ಸಿ-126 ಶ್ರೀನಿವಾಸಮೂರ್ತಿ, ಪಿಸಿ-438 ಗುರುಕುಮಾರ್‌, ಪಿಸಿ-426 ರಂಗಸ್ವಾಮಿ, ಪಿಸಿ-718 ವಿಜಯ್‌ಕುಮಾರ್‌ ರವರೊಂದಿಗೆ ಪಡುವಗೆರೆ ಗ್ರಾಮದ ರಾಜಣ್ಣ ರವರ ಅಂಗಡಿಯ ಬಳಿ ಹೋಗುತ್ತಿರುವಾಗ್ಗೆ ಅಂಗಡಿಯ ಮುಂದೆ ಸಾರ್ವಜನಿಕ ಗಿರಾಕಿಗಳು ನಮ್ಮಗಳನ್ನು ನೋಡಿ ಮಧ್ಯಪಾನ ಮಾಡಲು ಉಪಯೋಗಿಸುತ್ತಿದ್ದ ಪ್ಲಾಸ್ಟಿಕ್‌ ಲೋಟಗಳನ್ನು ಹಾಗೋ ಕಾಲಿ ಟೆಟ್ರಾ ಪಾಕೇಟ್‌ಗಳನ್ನು ಬಿಸಾಡಿ ಓಡಿಹೋದರು. ನಂತರ ನಾನು ಮತ್ತು ಸಿಬ್ಬಂದಿಗಳು ಅಂಗಡಿಯ ಬಳಿ ಸುತ್ತಿವರೆದು ಅಂಗಡಿಯೊಳಗಿದ್ದ ಮಾಲೀಕನ ಹೆಸರು ವಿಳಾಸವನ್ನು ಕೇಳಲಾಗಿ, ನನ್ನ ಹೆಸರು ರಾಜಣ್ಣ ಬಿನ್‌ ಲೇಟ್ ಪಾಪಣ್ಣ, 55 ವರ್ಷ, ವಕ್ಕಲಿಗರು, ಎಂತ ತಿಳಿಸಿದನು. ನಾವು ಮಧ್ಯಮಾರಾಟ ಮಾಡುವ ಬಗ್ಗೆ ಪರವಾನಗಿಯನ್ನು ಕೇಳಲಾಗಿ, ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಸ್ಥಳಕ್ಕೆ ಪಂಚರರನ್ನು ಬರಮಾಡಿಕೊಂಡು ಆಸಾಮಿಯನ್ನು ಪಂಚರರ ಸಮಕ್ಷಮ ಅಂಗಡಿಯೊಳಗೆ ಅಕ್ರಮವಾಗಿ ಮಾರಾಟಮಾಡುತ್ತಿದ್ದ ಮಧ್ಯದ ಬಾಟೆಲ್‌ಗಳನ್ನು ಹಾಜರುಪಡಿಸುವಂತೆ ತಿಳಿಸಿದೆವು. ಸದರಿ ಆಸಾಮಿಯು ಅಂಗಡಿಯೊಳಗಿದ್ದ ಪ್ಲಾಸ್ಟಿಕ್‌ ಚೀಲವನ್ನು ಹಾಜರುಪಡಿಸಿದನು. ಪರಿಶೀಲಿಸಲಾಗಿ 1). 180 ಎಂ.ಎಲ್‌ ನ ಮಧ್ಯ ತುಂಬಿರುವ 05 ಬ್ಯಾಗ್‌ ಪೈಪರ್‌ ಟೆಟ್ರಾ ಪಾಕೇಟ್‌ಗಳು. 2). 180 ಎಂ.ಎಲ್‌ ನ ಮಧ್ಯ ತುಂಬಿರುವ 07 ಓಲ್ಡ್‌ ಟವರಿನ್‌ ಟೆಟ್ರಾ ಪಾಕೇಟ್‌ಗಳು. 3). 90 ಎಂ.ಎಲ್‌ನ 15 ಮಧ್ಯತುಂಬಿರುವ ಸಿಲ್ವರ್‌ ಕಪ್‌ ಟೆಟ್ರಾ ಪಾಕೇಟ್‌ಗಳು. 5). 90 ಎಂ.ಎಲ್‌ ನ 14 ಮಧ್ಯತುಂಬಿರುವ ಒರಿಜಿನಲ್‌ ಚಾಯ್ಸ್‌ ಟೆಟ್ರಾ ಪಾಕೇಟ್‌ಗಳು, ನಂತರ ಸ್ಥಳದಲ್ಲಿ ಸಾರ್ವಜನಿಕರು ಕುಡಿದು ಬಿಸಾಡಿದ್ದ 4 ಪ್ಲಾಸ್ಟಿಕ್‌ ಲೋಟಗಳು ಮತ್ತು  04 ಖಾಲಿ 07 ಟೆಟ್ರಾ ಪಾಕೇಟ್ & 90 ಎಂ.ಎಲ್‌ ನ ಖಾಲಿ ವಾಟರ್ ಕ್ಯಾನ್‌ ಇರುತ್ತದೆ. ಸದರಿಯಾಸಮಿಯು ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಹಣ ಸಂಪಾದನೆಗಾಗಿ ವಿವಿದ ಬಗೆಯ ಮಧ್ಯವನ್ನು ಚಿಲ್ಲರೆಯಾಗಿ ಮಾರಾಟ ಮಾಡಿ ಸಾರ್ವಜನಿಕರು ಕುಳಿತು ಕುಡಿಯಲು ಅವಹಾಶ ಮಾಡಿಕೊಟ್ಟಿರುತ್ತಾನೆಂತ, ಈತನ ಮೇಲೆ ಕಲಂ; 32, 34 ಆಕ್ಟ್‌ ರೀತ್ಯ ಪ್ರಕರಣವನ್ನು ದಾಖಲಿಸುವಂತೆ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದ ಅಂಶವಾಗಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ .ನಂ. 84/2017 ಕಲಂ 279, 337 IPC r/w 134(A&B), 187 IMV Act

ದಿನಾಂಕ;-25-40-17 ರಂದು ರಾತ್ರಿ 9-15 ಗಂಟೆಗೆ ಶಶಿಧರ ಸಿ ಬಿನ್ ಲೇಟ್ ಚಿಕ್ಕಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ದಿನಾಂಕ; 20-04-17 ರಂದು ಪಿರ್ಯಾದಿಯ ಅಣ್ಣ ಶಿವಕುಮಾರ್ ಸಿ ರವರ ಬಾಬ್ತು  KA-06-ER-1437ನೇ ಹಿರೋ ಹೊಂಡಾ ಪ್ಯಾಷನ್ ಪ್ರೂ ದ್ವಿ ಚಕ್ರವಾಹನದಲ್ಲಿ ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ  ತುಮಕೂರು – ಮಧುಗಿರಿ ರಸ್ತೆಯ ಅಂತರಸನಹಳ್ಳಿ ಬಸ್ ನಿಲ್ದಾನದ ಹತ್ತಿರ  ಶ್ರೀ ಕೃಷ್ಣ ಕಾಂಪ್ಲೇಕ್ಸ್ ಮುಂಭಾಗ ಕೊರಟಗೆರೆ ಕಡೆಯಿಂದ  ಶಿವಕುಮಾರ್ ರವರು ಬಸವರಾಜು ರವರನ್ನು ತನ್ನ ಬೈಕಿನ ಹಿಂಬದಿಯಲ್ಲಿ ಕೂರಿಸಿಕೊಂಡು ತುಮಕೂರಿಗೆ ಹೋಗಲು  ಹೊಗುತ್ತಿರುವಾಗ ಎದುರಿಗೆ ಅಂದರೆ ತುಮಕೂರು ಕಡೆಯಿಂದ KA-06-P-0621 OMINI ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂಗೊಂಡು ಶಿವಕುಮಾರ್ ರವರಿಗೆ ಎರಡೂ ಕೈಗಳಿಗೆ ಎಡ ತೊಡೆಗೆ  ಭುಜಕ್ಕೆ, ಹಾಗೂ ಇತರೆ ಕಡೆ ಮತ್ತು ಬಸವರಾಜು ರವರಿಗೆ ಎಡಗೈ ಬೆರಳಿಗೆ ಪೆಟ್ಟು ಬಿದ್ದು ರಕ್ತ ಗಾಯ ಆಗಿದ್ದು  ಅಪಘಾತ ಉಂಟುಮಾಡಿದ ವಾಹನ ಚಾಲಕ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸದೆ ಹೊರಟು ಹೋಗಿದ್ದು ನಂತರ ಗಾಯಾಳುಗಳನ್ನು ತುಮಕೂರಿನ ಆದಿತ್ಯ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿ ಈ ದಿನ ದಿನಾಂಕ;-25-04-17 ರಂದು ತಡವಾಗಿ ಬಂದು ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ 84/2017 ಕಲಂ 279,337, ಐ.ಪಿ.ಸಿ ರೆ..ವಿ 134(ಎ) &(ಬಿ) 187 ಐ.ಎಂ.ವಿ ಆಕ್ಟ್ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ CR 45/2017 u/s 406, 420 IPC

ದಿನಾಂಕ : 25-04-2017 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿ ಶ್ರೀ ಚನ್ನೇಗೌಡ ಬಿನ್ ಚಿಕ್ಕೇಗೌಡ, ವ್ಯವಸ್ಥಾಪಕರು, ಮಹೀಂದ್ರ & ಮಹೀಂದ್ರ ಫೈನಾನ್ಸ್ ಕಂಪನಿ, ಮಹಾಲಕ್ಷ್ಮಿನಗರ, ಬಟವಾಡಿ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ : 07-01-2015  ರಂದು ಪಿರ್ಯಾದಿರವರ  ಕಂಪನಿಗೆ ಆರೋಪಿಯಾದ ಡಿ.ಎನ್. ಕಾರ್ತಿಕ್ ರವರು ಫೀಲ್ಡ್ ಅಸಿಸ್ಟೆಂಟ್ ಆಪರೇಷನ್ ರಿಕವರಿ ಹುದ್ದೆಗೆ ನೇಮಕಗೊಂಡಿದ್ದು  ಕಂಪನಿಗೆ  ಗ್ರಾಹಕರಿಂದ ಬರಬೇಕಾದ EMI ಹಣವನ್ನು ವಸೂಲು ಮಾಡಿ ಹಣವನ್ನು ಕಂಪನಿಗೆ ಕಟ್ಟಬೇಕಾಗಿರುವುದು ಆರೋಪಿಯ ಕರ್ತವ್ಯವಾಗಿರುತ್ತದೆ ದಿನಾಂಕ : 23-03-2017 ಹಾಗೂ ದಿನಾಂಕ : 24-03-2017 ರಂದು ಆರೋಪಿಯು ಕಂಪನಿಯ ಗ್ರಾಹಕರಾದ ಶ್ರೀ ಹರೀಶ್, ಶ್ರೀಮತಿ ವಿಜಯಲಕ್ಷ್ಮಿ, ಶ್ರೀ ಸುಧೀರ್, ಶ್ರೀ ಮಲ್ಲಿಕಾರ್ಜುನ ರವರುಗಳಿಂದ  ಒಟ್ಟು 1,44,020/-ರೂಗಳ EMI ಹಣವನ್ನು ವಸೂಲು ಮಾಡಿದ್ದು ವಸೂಲು ಮಾಡಿದ  ಹಣವನ್ನು ಕಂಪನಿಗೆ ಜಮಾ ಮಾಡದೆ ದಿನಾಂಕ : 24-03-2017 ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ಹಣವನ್ನು ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡು ಕಂಪನಿಗೆ ನಂಬಿಕೆ ದ್ರೋಹ ಹಾಗೂ  ವಂಚನೆ ಎಸಗಿರುತ್ತಾರೆ ಹಾಗೂ ಕಂಪನಿಯ ವತಿಯಿಂದ ನೀಡಿರುವ Hand held device machine ನ್ನು ಸಹಾ ನೀಡಿರುವುದಿಲ್ಲ. ಆರೋಪಿಯು ವಂಚಿಸಿ ದುರ್ಬಳಕೆ ಮಾಡಿಕೊಂಡ ಹಣದಲ್ಲಿ 80,000/-ರೂಗಳನ್ನು ಆರೋಪಿಯ ಸಹೋದರ ಸತೀಶ್ ರವರು ದಿನಾಂಕ : 01-04-2017 ರಂದು ವಾಪಸ್ ಕಂಪನಿಗೆ ಜಮಾ ಮಾಡಿದ್ದು ಆರೋಪಿಯಿಂದ ಬಾಕಿ 64,020/-ರೂಗಳು ಬರಬೇಕಾಗಿರುತ್ತದೆ ಆರೋಪಿಯು ಕಾನೂನಿನ ಅರಿವು ಇದ್ದರೂ ಸಹಾ ಕಂಪನಿಗೆ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡುವ ದೃಷ್ಠಿಯಿಂದಲೇ  ಗ್ರಾಹಕರಿಂದ ವಸೂಲು ಮಾಡಿದ ಹಣವನ್ನು ಕಂಪನಿಗೆ ಜಮೆ ಮಾಡದೆ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡಿರುತ್ತಾರೆ ಈ ಬಗ್ಗೆ ಡಿ.ಎನ್. ಕಾರ್ತಿಕ್ ರವರ ವಿರುದ್ಧ  ಮುಂದಿನ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ CR 46/2017 u/s 353, 504 R/W 34 IPC

ದಿನಾಂಕ : 25-04-2017 ರಂದು ಸಂಜೆ 7-30 ಗಂಟೆಗೆ ಪಿರ್ಯಾದಿ ಬಸವರಾಜು. ಎ.ಎಸ್.ಐ ಸಂಚಾರಿ ಪೊಲೀಸ್ ಠಾಣೆ, ತುಮಕೂರು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿವಸ ಪಿರ್ಯಾದಿ ರವರು ಸಂಜೆ 6-20 ಗಂಟೆ ಸಮಯದಲ್ಲಿ ಶಂಕರಮಠ ವೃತ್ತದಲ್ಲಿ ಪಿಸಿ 389 ಕಾಂತರಾಜು, ಹೆಚ್.ಜಿ 39 ರಾಮಚಂದ್ರ ರವರೊಂದಿಗೆ ಐಎಂವಿ ಪ್ರಕರಣಗಳನ್ನು ದಾಖಲಿಸುತ್ತಿದ್ದು KA 06 R 4540 ನೇ ವಾಹನ ಚಲಾಯಿಸಿಕೊಂಡು ಬಂದ ಅಪ್ರಾಪ್ತ ಹುಡುಗರನ್ನು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ಬಗ್ಗೆ ನೋಟೀಸ್ ನೀಡಲಾಗುವುದು ಎಂದು ಹೇಳುತ್ತಿದ್ದ ಸಮಯದಲ್ಲಿ ಅಲ್ಲಿಗೆ ಮತ್ತೊಬ್ಬ ವ್ಯಕ್ತಿಯು ಹೆಲ್ಮೆಟ್ ಧರಿಸದೇ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದು ಸದರಿ  ವಾಹನ ಸವಾರರನ್ನು ಡಿಎಲ್ ಹಾಗೂ ಹೆಲ್ಮೆಟ್ ಧರಿಸದೇ ಇರುವ ಬಗ್ಗೆ ವಿಚಾರ ಮಾಡಿ ದಂಡ ಕಟ್ಟಲು ಸೂಚನೆ ನೀಡುತ್ತಿರುವಾಗ್ಗೆ ಅಲ್ಲಿಗೆ ಬಂದ ಆರೋಪಿ ಎಬಿವಿಪಿ ಸಂಘಟನೆಯ ಸಿದ್ದು ಎಂಬ ವ್ಯಕ್ತಿಯು ಪಿರ್ಯಾದಿಯೊಂದಿಗೆ ಜಗಳ ತೆಗೆದು ಪೊಲೀಸರು ರಸ್ತೆಯಲ್ಲಿ ನಿಂತು ಸುಲಿಗೆ ಮಾಡುತ್ತೀರಾ, ದಿನಾ ನಿಮ್ಮ ಕೆಲಸ ಇದೇ ಆಗಿದೆ, ಎಂದು ಪಿರ್ಯಾದಿರವರನ್ನು ಏಕವಚನದಲ್ಲಿ ನಿಂದಿಸಿ ಗಾಡಿಗಳನ್ನು ಹಿಡಿಯಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದು ದಂಡ ಕಟ್ಟುವುದಿಲ್ಲ ಅದೇನು ಮಾಡುತ್ತೀಯೋ ಮಾಡಿಕೋ ಎಂದು ಎಂದು ಗಲಾಟೆ ಮಾಡಿ ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ ಅದೇ ಸಮಯಕ್ಕೆ ಅಲ್ಲಿಗೆ ಬಂದ ಕುಮಾರ್ ಬಿನ್ ನರಸಪ್ಪ, ಸೀಬಿ, ಶಿರಾ ತಾಲ್ಲೋಕ್, ಎಂಬುವನೂ ಸಹಾ ಪಿರ್ಯಾದಿಗೆ ಬಾಯಿಗೆ ಬಂದಂತೆ ಬೈಯ್ದು ಸರ್ಕಾರಿ ಕೆಲಸ ನಿರ್ವಹಿಸಲು ಅಡ್ಡಿ ಪಡಿಸಿದ್ದು ಈ ಬಗ್ಗೆ ಮೇಲ್ಕಂಡ  ಎಬಿವಿಪಿ ಸಂಘಟನೆಯ ಸಿದ್ದು ಹಾಗೂ ಕುಮಾರ್ ಎಂಬುವರುಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 78/2017 ಕಲಂ; 309 ಐಪಿಸಿ

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಅನಿಲ್‌ಕುಮಾರ್‌.ಎಂ.ಎಸ್‌- ಪಿಎಸ್‌ಐ ಹುಲಿಯೂರುದುರ್ಗ ಪೊಲೀಸ್‌ ಠಾಣೆ ಆದ ನಾನು ದಿನಾಂಕ-23-04-2017 ರಂದು ರಾತ್ರಿ 7-20 ಗಂಟೆ ಸಮಯದಲ್ಲಿ ಕುಣಿಗಲ್‌ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಶ್ರೀಮತಿ ಶಶಿಕಲಾ ಕೋಂ ಡಿ.ಕೆ.ರಮೇಶ್, ಸುಮಾರು 27 ವರ್ಷ, ವಕ್ಕಲಿಗರು, ಮನೆ ಕೆಲಸ, ದೊಡ್ಡಕೊಪ್ಪಲು ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ವೈಧ್ಯರ ಸಮಕ್ಷಮ ಪಡೆದ ಹೇಳಿಕೆಯ ಅಂಶವೇನೆಂದರೆ, ನನ್ನ ತವರು ಮನೆ ಮದ್ದೂರು ತಾಲ್ಲೋಕು ದುಂಡನಹಳ್ಳಿ ಗ್ರಾಮವಾಗಿರುತ್ತೆ. ನನಗೆ ಈಗ್ಗೆ ಸುಮಾರು 10 ವರ್ಷಗಳ ಹಿಂದೆ ಕುಣಿಗಲ್‌ ತಾಲ್ಲೋಕು, ಹುಲಿಯೂರುದುರ್ಗ ಹೋಬಳಿ, ದೊಡ್ಡಕೊಪ್ಪಲು ಗ್ರಾಮದ ಕರಿಯಪ್ಪ ರವರ ಮಗನಾದ ರಮೇಶ ಎಂಬುವವರೊಂದಿಗೆ ಮದುವೆಯಾಗಿರುತ್ತೆ. ನನಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇರುತ್ತೆ. ನಾನು ಮತ್ತು ನನ್ನ ಗಂಡ ಮಕ್ಕಳೊಂದಿಗೆ ನಮ್ಮ ಅತ್ತೆ, ಮಾವರೊಂದಿಗೆ ದೊಡ್ಡಕೊಪ್ಪಲು ಗ್ರಾಮದಲ್ಲಿ ವಾಸವಾಗಿರುತ್ತೇನೆ. ನನಗೆ ಸಂಸಾರದಲ್ಲಿ ಬೇಜಾರು ಆಗಿ ನಾನು ನನ್ನ ವಯಕ್ತಿಕ ವಿಚಾರವಾಗಿ ಬೇಜಾರು ಮಾಡಿಕೊಂಡು ದಿನಾಂಕ-23-04-2017 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯಲ್ಲಿ ಇದ್ದ ಯಾವುದೋ ವಿಷವನ್ನು ಕುಡಿದಿರುತ್ತೇನೆ. ನಾನು ವಿಷ ಕುಡಿದಿರುವ ವಿಚಾರ ನಮ್ಮ ಮನೆಯಲ್ಲಿ ಮತ್ತು ನಮ್ಮ ಯಜಮಾನರಿಗೆ ಗೊತ್ತಾಗಿ, ನನಗೆ ಚಿಕಿತ್ಸೆಯನ್ನು ಕೊಡಿಸಲು ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ನಾನು ಯಾರ ಒತ್ತಾಯದಿಂದಲೂ ಅಥವ ಯಾರ ಹಿಂಸೆಯಿಂದಲೂ ವಿಷವನ್ನು ಕುಡಿದಿರುವುದಿಲ್ಲ. ಎಂತ ನೀಡಿದ ಹೇಳಿಕೆಯನ್ನು ಪಡೆದುಕೊಂಡು ದಿನಾಂಕ-23-04-2017 ರಂದು ಸಂಜೆ 9-10 ಗಂಟೆಗೆ ವಾಪಾಸ್‌ ಠಾಣೆಗೆ ಹಾಜರಾಗಿ ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 79/2017 ಕಲಂ; 87 ಕೆ.ಪಿ ಆಕ್ಟ್.

ದಿನಾಂಕ: 22-04-2017  ರಂದು ರಾತ್ರಿ 9-55 ಗಂಟೆಗೆ ಠಾಣಾ ಪಿಎಸ್‌ಐ ಸಾಹೇಬರಾದ ಶ್ರೀ ಅನಿಲ್‌ಕುಮಾರ್‌. ಎಂ.ಎಸ್  ರವರು  ಪಿಸಿ-426 ರವರ ಮುಖೇನ ಕಳುಹಿಸಿಕೊಟ್ಟ ದೂರಿನ ಅಂಶವೇನೆಂದರೆ, ದಿನಾಂಕ: 22-04-2017 ರಂದು ರಾತ್ರಿ 8-30 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಮಾಹಿತಿ ಏನೆಂದರೆ ಠಾಣಾ ಸರಹದ್ದು ಹಳೆಊರು ಗ್ರಾಮದ ವೆಂಕಟರಮಣಸ್ವಾಮಿ ದೇವಸ್ತಾನದ ಮುಂಭಾಗದ ರಸ್ತೆ ಬದಿಯಲ್ಲಿರುವ ವಿಧ್ಯುತ್‌ ಕಂಬದ ದೀಪದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಅಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟು ಎಲೆಗಳಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು ಜೂಜಾಟವಾಡುತ್ತಿರುವವರ ಮೇಲೆ ದಾಳಿಮಾಡಿ ಕಾನೂನು ಕ್ರಮ ಜರುಗಿಸುವ ಸಲುವಾಗಿ ಪಂಚಾಯ್ತಿದಾರರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ದಾಳಿ ಮಾಡುವ ಸಮಯದಲ್ಲಿ  ನೀವುಗಳು ನಮ್ಮೊಂದಿಗೆ ಪಂಚಾಯ್ತಿದಾರರಾಗಿ ಬಂದು ಸಹಕರಿಸುವಂತೆ ಅವರಿಗೆ ತಿಳಿಸಿ ಅವರು ಒಪ್ಪಿದ ನಂತರ ರಾತ್ತಿ 8-45  ಗಂಟೆಗೆ ಠಾಣೆಯನ್ನು ಬಿಟ್ಟು ನಾನು, ಪೊಲೀಸ್ ಸಿಬ್ಬಂದಿ ಮತ್ತು  ಪಂಚಾಯ್ತುದಾರರೊಂದಿಗೆ ಖಾಸಗಿ ವಾಹನದಲ್ಲಿ ರಾತ್ರಿ 9-00 ಗಂಟೆಗೆ ಹಳೆಊರು ಗ್ರಾಮದ ವೆಂಕಟರಮಣಸ್ವಾಮಿ ದೇವಸ್ತಾನದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿಯೇ ವಾಹನವನ್ನು ನಿಲ್ಲಿಸಿ ರಸ್ತೆ ಬದಿಯಲ್ಲಿರುವ  ಮರದ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ವಿಧ್ಯುತ್‌ ದೀಪದ ಬೆಳಕಿನಲ್ಲಿ ನಾಲ್ಕು ಜನರು ಕುಳಿತುಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟು ಎಲೆಗಳಿಂದ  ಆಚೆ, ಒಳಗೆ (ಅಂದರ್-ಬಾಹರ್) ಎಂತ ಮಾತನಾಡಿಕೊಳ್ಳುತ್ತಾ ಜೂಜಾಟವಾಡುತ್ತಿದ್ದುದು ಕಂಡು ಬಂತು. ಕೂಡಲೇ ನಾನು ಮತ್ತು ನಮ್ಮ ಸಿಬ್ಬಂದಿಯವರು ಸೇರಿಕೊಂಡು ಜೂಜಾಟವಾಡುತ್ತಿದ್ದವರನ್ನು ಸುತ್ತುವರಿದು ದಾಳಿ ಮಾಡಲು ಹೋಗುವಷ್ಟರಲ್ಲಿ ಜೂಜಾಟವಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಎದ್ದು ಓಡಿ ಹೋಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆಗ ನಾವುಗಳು ಅವರನ್ನು ಸುತ್ತುವರಿದು ಅಸಾಮಿಗಳನ್ನು ಸ್ಥಳದಲ್ಲಿಯೇ ಹಿಡಿದುಕೊಂಡೆವು. ಸ್ಥಳದಲ್ಲಿ ಹಿಡಿದುಕೊಂಡ ಅಸಾಮಿಗಳ ಹೆಸರು ವಿಳಾಸವನ್ನು ಕೇಳಲಾಗಿ, 1). ಪಾಪಣ್ಣ ಬಿನ್‌ ದೊಡ್ಡಮರಿಯಪ್ಪ, ಸುಮಾರು 34 ವರ್ಷ ವಕ್ಕಲಿಗರು, ಜಿರಾಯ್ತಿ, ಬೂದಾನಹಳ್ಳಿ, ಕಸಬಾ ಹೋಬಳಿ, ಕುಣಿಗಲ್‌ ತಾಲ್ಲೋಕು, 2) ಶ್ರೀನಿವಾಸ ಉರುಫ್‌ ಓಡಾಟ ಬಿನ್ ಲೇಟ್‌ ಚೆಲುವಯ್ಯ ಸುಮಾರು 39 ವರ್ಷ ವಕ್ಕಲಿಗರು  ಚೌಡೇಶ್ವರಿ ಬೇಕರಿ ಮಾಲೀಕರು,  ಕೊಡವತ್ತಿ ರಸ್ತೆ,  ಹೊಸಪೇಟೆ  ಹುಲಿಯೂರುದುರ್ಗ ಟೌನ್‌ ಕುಣಿಗಲ್‌ ತಾಲ್ಲೂಕು, 3). ಸಿದ್ದರಾಮಯ್ಯ ಬಿನ್‌ ಪ್ರಭುಲಿಂಗಯ್ಯ, ಸುಮಾರು 36 ವರ್ಷ, ಲಿಂಗಾಯಿತರು, ಜೆಸಿಬಿ ಆರೇಟರ್‌, ಹೊಸಪೇಟೆ, ಹುಲಿಯೂರುದುರ್ಗ ಟೌನ್‌, ಕುಣಿಗಲ್‌ ತಾಲ್ಲೋಕು, 4). ಗೌರೀಶ ಬಿನ್‌ ಶಿವರುದ್ರಯ್ಯ, ಸುಮಾರು 32 ವರ್ಷ, ಲಿಂಗಾಯಿತರು, ಪೆಟ್ರೋಲ್‌ ಬಂಕಿನಲ್ಲಿ ಕೆಲಸ, ಹೇರೋಹಳ್ಳಿ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು, ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಅಖಾಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣವನ್ನು ಎಣಿಕೆ ಮಾಡಲಾಗಿ 10,200-00 ರೂ (ಹತ್ತು ಸಾವಿರದ ಇನ್ನೂರು ರೂಪಾಯಿಗಳು) ನಗದು ಹಣ, 52 ಇಸ್ಪೀಟು ಎಲೆಗಳು ಮತ್ತು ಒಂದು ಹಳೆಯ ಟವಲ್ ಇರುತ್ತೆ. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟು ಜೂಜಾಟವಾಡುತ್ತಿದ್ದ ಮೇಲ್ಕಂಡ 4 ಜನ ಅಸಾಮಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಇತ್ಯಾದಿಯಾಗಿ  ಕಳುಹಿಸಿಕೊಟ್ಟ ದೂರನ್ನು ಪಡೆದುಕೊಂಡು ಠಾಣಾ ಎನ್‌ಸಿಆರ್‌ ನಂಬರ್‌ 91/2017  ರಲ್ಲಿ ನೋಂದಾಯಿಸಿಕೊಂಡಿರುತ್ತೆ. ಈ ದೂರು ಅಸಂಜ್ಞೆಯ  ದೂರು ಆಗಿದ್ದು ಆರೋಪಿತರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಬೇಕೆಂದು ಘನ ನ್ಯಾಯಾಲಯದಲ್ಲಿ ದಿನಾಂಕ:24-04-2017 ರಂದು  ಮನವಿಯನ್ನು ಸಲ್ಲಿಸಿಕೊಂಡಿದ್ದು  ಘನ ನ್ಯಾಯಾಲಯವು ಅನುಮತಿಯನ್ನು ನೀಡಿದ್ದು ದಿನಾಂಕ:24-04-2017 ರಂದು ಸಂಜೆ 5-00 ಗಂಟೆಗೆ  ಪ್ರಕರಣ ದಾಖಲು ಮಾಡಿರುತ್ತೆ.

 Tuesday, 25 April 2017

Crime Incidents 25-04-17

ತಾವರೇಕರೆ ಪೊಲೀಸ್‌ ಠಾಣೆ ಮೊ.ಸಂ 63/2017 ಕಲಂ 279, 337, 304(ಎ) ಮತ್ತು 187 ಐ..ಎಂ ವಿ ಅಕ್ಟ್‌

ದಿನಾಂಕ;-24/4/2017 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿ ಮೊಹಮದ್ ಯೂಸುಫ್ ಬಿನ್ ಮಹಮದ್‌ ಸಾದಿಕ್‌ ನಂ 24/11 ಇ ಅಂತೋನಿಪುರಂ ವೋಡೈ ಸೂರಮಂಗಲಂ ಸೇಲಂ  ರೈಲ್ವೆ ಜಂಕ್ಷನ್ ಸೇಲಂ ತಮಿಳುನಾಡು ರಾಜ್ಯ   ವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ದಿ;24/4/2017 ರಂದು ನಾನು ನನ್ನ ತಂದೆ ಮೊಹಮ್ಮದ್ ಸಾದಿಕ್ ಮತ್ತು ನನ್ನ ತಾಯಿ ಆಯೀಷಾ ಸಿದ್ದಿಕಾ ರವರುಗಳೊಂದಿಗೆ ಬಾಂಬೆಯಲ್ಲಿರುವ ನನ್ನ ತಂದೆ ಸ್ನೇಹಿತರ ಮನೆಗೆ ಮತ್ತು ಪ್ರವಾಸಕ್ಕಾಗಿ ನನ್ನ ಅಣ್ಣ ರವರಿಗೆ ಸೇರಿದ TN-01-AM-6633 ನೇ ಟಾಟಾ ಟಯೋಟೋ ಫಾರ್ಚುನರ್ ಕಾರಿನಲ್ಲಿ ಹೊರಟು ಕಾರಿಗೆ ಜಾಫರ್ ಷರೀಫ್ ರವರನ್ನು ಚಾಲಕನನ್ನಾಗಿ ಕರೆದುಕೊಂಢು ಬೆಳಿಗ್ಗೆ 9-00 ಗಂಟೆಗೆ ಸೇಲಂನಿಂದ ಹೊರಟು ಬೆಂಗಳೂರಿಗೆ ಬಂದು ಊಟ ಮಾಡಿ ಬಾಂಬೆಗೆ ಹೋಗಲು ತುಮಕೂರು ಮುಖೇನ ಎನ್.ಹೆಚ್48 ರಸ್ತೆಯಲ್ಲಿ ಬಾಂಬೆ ಕಡೆಗೆ ಹೋಗುತ್ತಿದ್ದಾಗ ಸಾಯಂಕಾಲ ಸುಮಾರು 4-00 ಗಂಟೆಯಲ್ಲಿ  ಶಿರಾದಿಂದ ಸುಮಾರು 6 ಕಿ.ಮೀ ದೂರ ಹೋದಾಗ ನಮ್ಮ ಕಾರಿನ ಮುಂಭಾಗ ರಸ್ತೆಯ ಬಲಭಾಗದಲ್ಲಿ  ಒಂದು ಲಾರಿ ಹೋಗುತ್ತಿದ್ದು ಆ ಲಾರಿಯ ಚಾಲಕ ಯಾವುದೇ ಇಂಡಿಕೇಟರ್ ಲೈಟ್ ಹಾಕದೇ ಯಾವುದೇ ಸಿಗ್ನಲ್ ತೋರಿಸದೇ ನಿರ್ಲಕ್ಷತೆಯಿಂದ ಏಕಾ ಏಕಿ ಲಾರಿಯನ್ನು ರಸ್ತೆಯ ಬಲಭಾಗದಿಂದ ರಸ್ತೆಯ ಎಡಭಾಗಕ್ಕೆ ತಿರುಗಿಸಿ ನಮ್ಮ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಮ್ಮ ಕಾರು ಪಲ್ಟಿಯಾಗಿ ಎಡಭಾಗದ ಡಿವೈಡರ್ ಮೇಲೆ ಬಿದ್ದು ಲಾರಿ ಕೂಡ ರಸ್ತೆಯ ಮೇಲೆ ಬಿದ್ದು ಎರಡು ವಾಹನಗಳು ಜಖಂಗೊಂಡು ಕಾರಿನಲ್ಲಿದ್ದ ನನ್ನ ತಂದೆ ಮತ್ತು ನನ್ನ ತಾಯಿ ರವರಿಗೆ ಪೆಟ್ಟುಗಳು ಬಿದ್ದು ರಕ್ತಸ್ರಾವವಾಗಿ ಕಾರಿನಿಂದ ರಸ್ತೆಯ ಮೇಲೆ ಬಿದ್ದರು. ನನಗೆ ಎರಡೂ ಕೈಗಳಿಗೆ ಮತ್ತು ಬೆನ್ನಿಗೆ ಪೆಟ್ಟುಗಳಾಗಿದ್ದವು. ಕಾರಿನ ಚಾಲಕ ಕಾರಿನಲ್ಲಿ  ಸಿಕ್ಕಿಹಾಕಿಕೊಂಡು ತಲೆಗೆ ಪೆಟ್ಟು ಬಿದ್ದು ರಕ್ತ ಬಂದು ಸ್ಥಳದಲ್ಲೇ ಸತ್ತು ಹೋಗಿದ್ದನು. ನಾನು ಕಾರಿನಿಂದ ಳಿದು ನನ್ನ ತಂದೆ ತಾಯಿಯನ್ನು ನೋಡಲಾಗಿ ಇಬ್ಬರಿಗೂ ಪೆಟ್ಟುಗಳಾಗಿದ್ದು ರಕ್ತ ಸ್ರಾವವಾಗಿ ಸ್ಥಳದಲ್ಲೇ ಸತ್ತು ಹೋಗಿದ್ದರು. ಲಾರಿಯ ಚಾಲಕ ಲಾರಿಯನ್ನು ಬಿಟ್ಟು ಓಡಿಹೋಗಿದ್ದನು. ಲಾರಿಯ ನಂಬರ್ ನೋಡಲಾಗಿ MH-12-HD-6868 ನೇ ಟಾಟಾ 1109 ಲಾರಿಯಾಗಿತ್ತು. ನಂತರ ಸ್ಥಳಕ್ಕೆ ಬಂದ ಸಾರ್ವಜನಿಕರು ಮತ್ತು ಪೊಲೀಸರು ಕಾರಿನ ಚಾಲಕನನ್ನು ಕಾರಿನಿಂದ ಹೊರತೆಗೆದು ನನ್ನ ತಂದೆ ಮತ್ತು ನನ್ನ ತಾಯಿ ಹಾಗೂ ಚಾಲಕನ ಶವಗಳನ್ನು ಹೈವೇ ಆಂಬ್ಯುಲೆನ್ಸ್ ನಲ್ಲಿ ತುಮಕೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿಕೊಟ್ಟರು. ನಾನು ತಾವರೆಕೆರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡಿದಿರುತ್ತೇನೆ. ಈ ಅಪಘಾತವು ಶಿರಾ ತಾಲ್ಲೂಕ್ ಪಂಜಿಗಾನಹಳ್ಳಿ ಗೇಟ್ ಸಮೀಪ ಉಂಟಾಗಿರುತ್ತೆಂತ ಗೊತ್ತಾಯಿತು. ಈ ಅಪಘಾತವು ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷತೆಯಿಂದ ಉಂಟಾಗಿರುತ್ತೆ. ಮೇಲ್ಕಂಡ ಲಾರಿ ಚಾಲಕನ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ  

ಜಯನಗರ ಪೊಲೀಸ್ ಠಾಣಾ ಮೊ.ನಂ. 61/2017 ಕಲಂ 379  ಐಪಿಸಿ

 

ದಿನಾಂಕ: 24-04-2017 ರಂದು ರಾತ್ರಿ 8-30 ಗಂಟೆಗೆ ತುಮಕೂರು ಟೌನ್ ಸರಸ್ವತಿಪುರಂ 2 ನೇ ಹಂತದ ವಾಸಿ ಡಿ.ಜಯನಾಯ್ಕ ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 13-04-2017 ರ ಸಂಜೆ 8-00 ಗಂಟೆಗೆ ಸರಿಯಾಗಿ ಆರ್ಯ ಭಾರತಿ ಪಾಲಿಟೆಕ್ನಿಕ್ ಕಾಲೇಜು ರಸ್ತೆ ಕುಣಿಗಲ್ ಮುಖ್ಯರಸ್ತೆಯ ಕಾರ್ನರ್ ನಲ್ಲಿ ಸಾಂಸ್ಕೃತಿಕ ಕರಕುಶಲ ವಸ್ತು ಪ್ರದರ್ಶನವನ್ನು ನೋಡಲು ನನ್ನ ದ್ವಿಚಕ್ರ ವಾಹನ ಕೆಎ-06 ವೈ-5308 ವನ್ನು ಹ್ಯಾಂಡ್ & ಪೆಟ್ರೋಲ್ ಲಾಕ್ ಮಾಡಿ ನಿಲ್ಲಿಸಿ ನಂತರ ವಸ್ತು ಪ್ರದರ್ಶನವನ್ನು ನೋಡಿಕೊಂಡು ಸುಮಾರು 8-15 ಗಂಟೆಗೆ ಹೊರಗಡೆ ಬಂದು ಗಾಡಿಯನ್ನು ತೆಗೆಯಲು ಹೋದಾಗ ನನ್ನ ಗಾಡಿಯು ಕಳುವಾಗಿತ್ತು.  ತಕ್ಷಣ ನಾನು 2 ಕಿ.ಮೀ ವಿಸ್ತೀರ್ಣದವರೆಗೋ ಎಲ್ಲಾ ರಸ್ತೆಗಳು ಹಾಗೂ ಸ್ನೇಹಿತರು, ಸಂಬಂಧಿಕರನ್ನು  ವಿಚಾರಿಸಿದರೂ ಗಾಡಿ ಸಿಗಲಿಲ್ಲ. ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ನನ್ನ ಗಾಡಿಯನ್ನು ಹುಡುಕಿಕೊಡಲು ಕೋರಿ ಇತ್ಯಾದಿಯಾಗಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-64/2017 ಕಲಂ: 379 ಐ.ಪಿ.ಸಿ

ದಿನಾಂಕ: 24/04/2017 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿ ನಿರಂಜನ್ ಬಿನ್ ಕಮಲಾನಾಭ, 20 ವರ್ಷ, ಗೋಪಿಕುಂಟೆ ಗ್ರಾಮ, ಹುಲಿಕುಂಟೆ ಹೋಬಳಿ, ಶಿರಾ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಈಗ್ಗೆ 2ವರ್ಷಗಳಿಂದ ತಿಪಟೂರು ಕಲ್ಪತರು ಕೆ.ಐ.ಟಿ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ತಿಪಟೂರು ನಗರದ ಶಾರದಾನಗರದ ಶ್ರೀರಾಮಸ್ವಾಮಿ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಿರುತ್ತೇನೆ. ಪ್ರತಿದಿನ ಕಾಲೇಜಿಗೆ ನನ್ನ ಬಾಬ್ತು ಟಿ.ವಿ.ಎಸ್ ಅಪ್ಪಾಜಿ ಬೈಕಿನಲ್ಲಿ ಹೋಗಿ ಬರುತ್ತಿದ್ದು, ದಿನಾಂಕ: 06/03/2017 ರಂದು ಎಂದಿನಂತೆ ರಾತ್ರಿ 9-00 ಗಂಟೆಗೆ ಮನೆಯ ಕಾಂಪೌಂಡ್ ನಲ್ಲಿ ಬೈಕನ್ನು ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿ, 11-00 ಗಂಟೆಗೆ ಮಲಗಿದ್ದು, ದಿನಾಂಕ:07/03/2017 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಲಾಗಿ ಮನೆಯ ಗೇಟಿನ ಬೀಗ ಕಿತ್ತು ಹಾಕಿದ್ದು, ನನ್ನ ಹೊಸ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಬೈಕನ್ನು ಈಗ್ಗೆ ಒಂದು ತಿಂಗಳ ಹಿಂದೆ ತೆಗೆದುಕೊಂಡಿದ್ದು, ಇನ್ನು ರಿಜಿಸ್ಟ್ರೇಷನ್ ಮಾಡಿಸಿರುವುದಿಲ್ಲ. ಇಂಜಿನ್ ನಂ- OE6AH2179519 & ಚಾಸಿಸ್ ನಂ -MD634KE61H2A68202 ಆಗಿದ್ದು, ಅದರ ನಿಖರವಾದ ಬೆಲೆ ಗೊತ್ತಿರುವುದಿಲ್ಲ. 30.000/- ರೂಗಳನ್ನು ಬ್ಯಾಂಕಿನಲ್ಲಿ ಕಟ್ಟಿ ಕೊಂಡುಕೊಂಡಿರುತ್ತೇನೆ. ಸದರಿ ನನ್ನ ಬೈಕನ್ನು ಸ್ನೇಹಿತರು, ಹಾಗು ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲಿಯೂ ಸಹ ಪತ್ತೆಯಾಗಿರುವುದಿಲ್ಲ.ಆದ್ದರಿಂದ ಕಳ್ಳತನವಾಗಿರುವ ನನ್ನ ಬೈಕನ್ನು ಪತ್ತೆ ಮಾಡಿಕೊಡಿ ಎಂದು ಈ ದಿನ ತಡವಾಗಿ ಬಂದು ದೂರನ್ನು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 55/2017 ಕಲಂ 279, 337  ಐಪಿಸಿ ರೆ/ವಿ 187 ಐಎಂವಿ ಆಕ್ಟ್.

ದಿನಾಂಕ: 24-04-17 ರಂದು  ಮಧ್ಯಾಹ್ನ  1-30 ಗಂಟೆಯಲ್ಲಿ   ಈ ಕೇಸಿನ ಗಾಯಾಳು ಉಮಾಶಂಕರ್ ಬಿನ್ ರೇಣುಕಪ್ಪ, 33 ವರ್ಷ,  ಹಿಪ್ಪೇತೋಪು, ತಿಪಟೂರು  ಟೌನ್  ರವರು  ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ  ನೀಡಿದ ಹೇಳಿಕೆ ಅಂಶವೇನೆಂದರೆ,  ಇಂದು ದಿ:-24-04-17 ರಂದು   ನನ್ನ ಬಾಭ್ತು KA-44, Q-9879  ನೇ ಬೈಕಿನಲ್ಲಿ  ಬಸವಪುರಕ್ಕೆ ಹೋಗಿ ವಾಪಸ್  11-15 ಗಂಟೆ ಸಮಯದಲ್ಲಿ  ತಿಪಟೂರು ಕರೆಗೋಡಿ ರಸ್ತೆಯ, ನಂಜುಂಡಪ್ಪ ರವರ  ತೋಟದ  ಹತ್ತಿರ,  ರಸ್ತೆಯ ಎಡಭಾಗದಲ್ಲಿ  ಬರುತ್ತಿರುವಾಗ್ಗೆ   ತಿಪಟೂರು ಕಡೆಯಿಂದ  ಬಂದ  KA-13,R-6455   ನೇ ಪಲ್ಸರ್ ಬೈಕ್  ಸವಾರ ತನ್ನ ವಾಹನವನ್ನು ಅತಿ ವೇಗ & ಆಜಾಗರೂಕತೆಯಿಂದ ಓಡಿಸಿಕೊಂಡು  ನನ್ನ ದ್ವಿ ಚಕ್ರ ವಾಹನಕ್ಕೆ  ಡಿಕ್ಕಿ ಹೊಡೆಸಿದ ಪರಿಣಾಮ   ಬೈಕ್ ಸಮೇತ ಕೆಳಕ್ಕೆ ಬಿದ್ದ ನನಗೆ  ತಲೆಗೆ,ಎಡಕಾಲಿನ ಪಾದದ ಬಳಿ, ಬಲಕೈ ಹತ್ತಿರ ತರಚಿದ ಗಾಯಗಳಾಗಿರುತ್ತೆ ಹಾಗೂ ಬೈಕ್ ಜಕಂಗೊಂಡಿರುತ್ತೆ,  ನನಗೆ ಡಿಕ್ಕಿ ಹೊಡೆಸಿದ  ಬೈಕ್  KA-13,R-6455   ನೇ ಪಲ್ಸರ್ ಬೈಕ್   ಆಗಿದ್ದು , ಸದರಿ ಬೈಕ್ ಚಾಲಕ  ನನಗೆ  ಅಪಘಾತಪಡಿಸಿ  ಬೈಕ್ ನಿಲ್ಲಿಸದೆ ಹೋಗಿರುತ್ತಾನೆ  ಸದರಿ ಚಾಲಕನ ಮೇಲೆ ಕಾನೂನು ರೀತ್ಯಾ  ಕ್ರಮ ಜರುಗಿಸಿ ಎಂತಾ ಪಿರ್ಯದಿ  ನೀಡಿದ ಹೇಳಿಕೆ ಅಂಶವಾಗಿರುತ್ತೆMonday, 24 April 2017

Crime Incidents 24-04-17

ತಾವರೇಕೆರೆ ಪೊಲೀಸ್‌ ಠಾಣೆ ಮೊ.ಸಂ . 62/2017 ಕಲಂ 279, 337,304() ಐಪಿಸಿ

ದಿನಾಂಕ: 24-04-2017 ರಂದು 03-30 ಗಂಟೆಯಲ್ಲಿ ಪಿರ್ಯಾಧುದಾರರಾದ ಶ್ರೀನಿವಾಸ್‌‌‌‌‌ ರವರು ಕೃತ್ಯ ನಡೆದ ಸ್ಥಳದಲ್ಲಿ ನೀಡಿದ ಹೇಳಿಕೆಯ ಪಿರ್ಯಾಧಿನ ಸಾರಾಂಶವೇನೆಂದರೆ,  ನಾನು ದಿನಾಂಕ: 22-04-2017 ರಂದು ಬೆಂಗಳೂರಿನಿಂದ ನಮ್ಮ ಸಂಬಂದಿಕರ ಮದುವೆಗಾಗಿ ದಾವಣಗೆರೆಗೆ ಹೋಗಿದ್ದೆನು.  ಅಲ್ಲಿ ಮದುವೆ ಮುಗಿಸಿಕೊಂಡು ದಿನಾಂಕ: 23-04-2017 ರಂದು ರಾತ್ರಿ 11-45 ಗಂಟೆಗೆ ಬೆಂಗಳೂರಿಗೆ ಹೋಗಲು ಮಹದೇವಿ ಬಸ್‌‌‌ ನಂ. ಕೆಎ-01, ಎಎ-5514ನೇ ಬಸ್‌‌‌‌ ಹತ್ತಿದೆನು.  ಈ ಬಸ್‌‌ನಲ್ಲಿ ಸುಮಾರು 45 ರಿಂದ 50 ಜನ ಪ್ರಯಾಣಿಸುತ್ತಿದ್ದರು.  ಈ ಬಸ್‌‌‌‌ ಚಿತ್ರದುರ್ಗ, ಹಿರಿಯೂರು ಮುಖಾಂತರ ಬೆಂಗಳೂರು ಕಡೆಗೆ ಹೋಗುತ್ತಿತ್ತು.  ದಿನಾಂಕ: 24-04-2017 ರಂದು ಮುಂಜಾನೆ 02-45 ಗಂಟೆಯಲ್ಲಿ ನಾವು ಪ್ರಯಾಣಿಸುತ್ತಿದ್ದ ಬಸ್ಸಿನ ಚಾಲಕ ಬಸ್ಸನ್ನು ಶಿರಾ ತಾಲ್ಲೂಕ್‌‌‌‌‌‌, ತಾವರೇಕೆರೆ ಗ್ರಾಮದ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ ಒಂದು ಲಾರಿಗೆ ಡಿಕ್ಕಿ ಹೊಡೆಸಿದ ಇದರಿಂದಾಗಿ ಬಸ್‌‌‌‌‌‌ ಮತ್ತು ಲಾರಿ ಜಕಂಗೊಂಡು ಬಸ್‌‌ ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 25 ರಿಂದ 30 ವರ್ಷ ವಯಸ್ಸಿನ ಒಬ್ಬ ಗಂಡಸು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.  ಬಸ್‌‌‌‌‌ ಚಾಲಕನಿಗೂ ಸಹ ತೀವ್ರ ಸ್ವರೂಪದ ಗಾಯಗಳಾಗಿರುತ್ತವೆ.  ಬಸ್‌‌‌ ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 12 ರಿಂದ 15 ಜನ ಪ್ರಯಾಣಿಕರಿಗೆ ಗಾಯಗಳಾಗಿರುತ್ತವೆ.  ನನಗೆ ಬಲಕೈಗೆ, ಮುಖಕ್ಕೆ ಏಟುಗಳಾಗಿರುತ್ತವೆ.  ನಂತರ ಲಾರಿಯ ನಂಬರ್‌‌‌ ನೋಡಲಾಗಿ ಟಿಎನ್‌‌‌‌‌-36, ಎಯು-5431 ಆಗಿರುತ್ತೆ.  ಈ ಅಪಘಾತಕ್ಕೆ ಕಾರಣನಾದ ಕೆಎ-01, ಎಎ-5514ನೇ ಬಸ್‌‌‌‌ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂತಾ ಕೋರಿಕೊಳ್ಳುತ್ತೇನೆಂತಾ ಇತ್ಯಾಧಿಯಾಗಿ ನೀಡಿದ ಪಿರ್ಯಾಧಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ ತನಿಖೆ ಕೈಗೊಂಡಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-63/2017 ಕಲಂ: 324,307,327 ರೆ/ವಿ 34 ಐ.ಪಿ.ಸಿ

ದಿನಾಂಕ:23-04-2017 ರಂದು ಸಂಜೆ 6-30 ಗಂಟೆಗೆ ಪಿರ್ಯಾಧಿ ಶಶಿಧರ್ ಬಿನ್ ಸಿದ್ದಯ್ಯ ಜಿ 40 ವರ್ಷ, ಶಾರದಾನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನಂದರೆ ದಿನಾಂಕ:22-04-2017 ರಂದು ತನ್ನ ಸ್ನೇಹಿತ ಗೊರಗೊಂಡನಹಳ್ಳಿ ನಿರಂಜನಸ್ವಾಮಿ ಇಬ್ಬರು ರಾತ್ರಿ ತಿಪಟೂರು ನಗರ ಹಿಡೇನಹಳ್ಳಿ ಗೇಟ್ ಬಳಿ ಇರುವ ನಕ್ಷತ್ರ ಬಾರ್ ಅಂಡ್ ರೆಸ್ಟೋರೆಂಟ್ ಹತ್ತಿರ ಇರುವ ಬೀಡಾ ಸ್ಟಾಲ್ ಹತ್ತಿರ ಹೋಗಿ ಬೀಡ ತೆಗೆದುಕೊಳ್ಳುತ್ತಿರುವಾಗ ಅಲ್ಲಿಯೇ ಇದ್ದ ಗೊರಗೊಂಡನಹಳ್ಳಿಯ ವಾಸಿ ಶಿವಶಂಕರ ರವರು ನನ್ನ ಸ್ನೇಹಿತ ನಿರಂಜನಸ್ವಾಮಿ ಗೆ ಪರಿಚಯವಿದ್ದುದರಿಂದ ಅವರ ಜೊತೆಯಲ್ಲಿದ್ದ ಶಿವಶಂಕರ್ ರವರನ್ನು ಮಾತನಾಡಿಸುತ್ತಿದ್ದಾಗ ಶಿವಶಂಕರ ನೊಂದಿಗೆ ಇದ್ದ ಸ್ಟುಡಿಯೋ ರಮೇಶ ಮಾರನಗೆರೆ ವಾಸಿ ಮತ್ತು ಮಾದಿಹಳ್ಳಿ ಮೀಸೆ ಕುಮಾರ್ ಇಬ್ಬರು ಆಯಿತು ಕಳಚಿಕೋ ಎಂದು ಏರುಧ್ವನಿಯಲ್ಲಿ ಮಾತನಾಡಿದಾಗ ನಾನು ಹೋಗಿ ಆಯಿತು ಬಿಡಿ ಹೋಗುತ್ತೇವೆ ಎಂದು ಹೇಳಿ ಹೊರಡುತ್ತಿರುವಾಗ ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ನನ್ನ ಮೇಲೆ ಗಲಾಟೆ ಮಾಢುವ ಉದ್ದೇಶದಿಂಧ ನಿರಂಜನಸ್ವಾಮಿಯನ್ನು ಬಾರೋ ಇಲ್ಲಿ ಎಲ್ಲಿಗೆ ಹೋಗುತ್ತೀಯ ಎಂದು ಗಲಾಟೆ ಮಾಡಲು ಬಂದರು, ಆಗ ನಾನು ಗಲಾಟೆ ಮಾಡಬೇಡಿ ಎಂದು ಹೇಳಿದಾಗ ಸ್ಟುಡಿಯೋ ರಮೇಶ ತನ್ನ ಬೈಕ್ ನಲ್ಲಿದ್ದ ಸೈಕಲ್ ಚೈನ್ ನ್ನು ತಂದು ನನ್ನ ಕುತ್ತಿಗೆಗೆ ಹಾಕಿ ಸಾಯಿಸಲು ಬಂದನು ಆಗ ನಾನು ತಪ್ಪಿಸಿಕೊಳ್ಳಲು ಹೋದರು ಸಹ ಬಿಡದೆ ಕುತ್ತಿಗೆಗೆ ಚೈನ್ ನ್ನು ಹಾಕಿ ಕೆಳಕ್ಕೆ ಕೆಡವಿ ಹೊಡೆದರು. ಅಷ್ಟರಲ್ಲಿ ಮೀಸೆ ಕುಮಾರ್ ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಹೊಟ್ಟೆಯ ಎಡಭಾಗಕ್ಕೆ ಹೊಡೆದು ನೋವುಂಟು ಮಾಡಿದನು. ನಂತರ ಸ್ಟುಡಿಯೋ ರಮೇಶ ಅದೇ ಬೈಕ್ ನಿಂದ ನನ್ನ ತಲೆಯ ಎಡಭಾಗಕ್ಕೆ ಹೊಡೆದು ಗಾಯಮಾಡಿದನು ನನ್ನ ಕುತ್ತಿಗೆಯಲ್ಲಿದ್ದ ಸುಮಾರು 50 ಗ್ರಾಂ ತೂಕದ ಚಿನ್ನದ ಸರವು ನನಗೆ ಹೊಡೆಯುವ ಸಂದರ್ಭದಲ್ಲಿ ಬಿದ್ದು ಹೋಗಿರುತ್ತದೆ. ನಂತರ ಅಷ್ಟರಲ್ಲಿ ನನ್ನ ಸ್ನೇಹಿತ ನಿರಂಜನಸ್ವಾಮಿ ಮತ್ತು ಶಿವಕುಮಾರ್ ಜಗಳವನ್ನು ಬಿಡಿಸಿ ಕಳುಹಿಸಿಕೊಟ್ಟಿರುತ್ತಾರೆ. ಈ ವಿಚಾರವನ್ನು ಮನೆಗೆ ತಿಳಿಸಿ ದಿನಾಂಕ:23-04-2017 ರಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.38/2017, ಕಲಂ:323. 324. 341. 504. 34 ಐಪಿಸಿ.

ದಿನಾಂಕ:23/04/2017 ರಂದು ರಾತ್ರಿ 08-15 ಗಂಟೆಗೆ ಪಿರ್ಯಾದಿ ಬೆಳಗೆರಪ್ಪ ಬಿನ್‌ ಕೋನಪ್ಪ  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿ:23/04/2017 ರಂದು ಮದ್ಯಾಹ್ನ 01-10 ಗಂಟೆ ಸುಮಾರಿನಲ್ಲಿ ನನ್ನ ತಮ್ಮ ರಾಜಣ್ಣ ಬ್ರಹ್ಮಸಮುದ್ರ  ಹಳೇ ಗೊಲ್ಲರಹಟ್ಟಿ ಯಿಂದ ಹೋಗಿ ಬ್ರಹ್ಮಸಮುದ್ರ ಗೇಟಿನಲ್ಲಿ ಈರಣ್ಣ  ಎಂಬುವವರ ಸೈಟಿನ ವಿಚಾರವಾಗಿ ನೀನು ಯಾಕೆ ಅವರ ಪರವಾಗಿ ಬರುವುದು ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಗ್ರಾಮದ ತಮ್ಮಣ್ಣ ಬಿನ್‌ ಚಿತ್ತಯ್ಯ , ಶಿವಲಿಂಗಯ್ಯ ಬಿನ್‌ ಚಿತ್ತಯ್ಯ ಇವರುಗಳು ಜಗಳ ತೆಗೆದು ಕಲ್ಲಿನಿಂದ ನನ್ನ ತಮ್ಮ ರಾಜಣ್ಣನ ತಲೆಗೆ ಗುದ್ದಿರುತ್ತಾರೆ ತಮ್ಮಣ್ಣ ನು ಕಾಲಿನಿಂದ ಒದ್ದು ಕೈಯಿಂದ ಗುದ್ದಿರುತ್ತಾರೆ ಅಲ್ಲೇ ಇದ್ದ ಗೋವಿಂದರಾಜು ಎಂಬುವವರು ಜಗಳ ಬಿಡಿಸಿ ನಮಗೆ ವಿಚಾರ ತಿಳಿಸಿರುತ್ತಾರೆ ನಾನು ಬ್ರಹ್ಮಸಮುದ್ರ ಗೇಟಿಗೆ ಬಂದು ನನ್ನ ತಮ್ಮನನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿ ನಂತರ ವೈದ್ಯಾದಿಕಾರಿಗಳು ತುಮಕೂರಿನ ಆಸ್ಪತ್ರೆಗೆ ಕಳಿಸಿಕೊಟ್ಟಿರುತ್ತಾರೆ ಗಲಾಟೆಮಾಡಿ ನನ್ನ ತಮ್ಮ ನನ್ನು ಹೊಡೆದಿರುವ ತಮ್ಮಣ್ಣ ಹಾಗೂ ಶಿವಲಿಂಗಯ್ಯ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳ ಬೇಕೆಂದು ನೀಡಿದ ಫಿರ್ಯಾದುವಿನ ಅಂಶವಾಗಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 60/2017 ಕಲಂ 448, 435, 427 ರೆ/ವಿ 34 ಐಪಿಸಿ

ದಿನಾಂಕ: 23-04-2017 ರಂದು ಬೆಳಿಗ್ಗೆ 7-30 ಗಂಟೆಗೆ ತುಮಕೂರು ಟೌನ್ ಸಿದ್ದರಾಮೇಶ್ವರ ಬಡಾವಣೆ ವಾಸಿ ಪುಷ್ಪ ಡಿ ಕೋಂ ರಾಜಣ್ಣ.ಡಿ ಎಂಬುವರು ಠಾಣೆಗೆ ಹಾಜರಾಗಿ ದಿನಾಂಕ: 23-04-2017 ರಂದು ಬೆಳಗಿನ ಜಾವ ಸುಮಾರು 1-45 ಗಂಟೆ ಸಮಯದಲ್ಲಿ ಕೆಲ ದುಷ್ಕರ್ಮಿಗಳಾದ ಮುನಿಯಪ್ಪ, ಭೂತರಾಜ್‌, ಮಂಜುಯಾದವ್ ಮತ್ತು ಮಧು ಎಂಬುವರು ನಮ್ಮ ಮನೆಯ ಕಾಂಪೌಂಡ್‌ ನಲ್ಲಿ ನಿಲ್ಲಿಸಿದ್ದ ನಮ್ಮ ಬಾಬ್ತು ಇನೋವಾ ಕಾರ್ ನಂಬರ್ ಕೆಎ-06 ಪಿ-3708 ರನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೋಗಿರುತ್ತಾರೆ.  ನಾನು ನನ್ನ ಪತಿ ಮನೆಯಲ್ಲಿ ಮೇಲಿನ ಕೋಣೆಯಲ್ಲಿ ಮಲಗಿದ್ದು ಶಬ್ದ ಕೇಳಿ ಓಡಿ ಬಂದು ನೋಡಿದಾಗ ನಮ್ಮ ಕಾರ್ ಪೂರ್ತಿಯಾಗಿ ಹತ್ತಿ ಉರಿಯುತ್ತಿತ್ತು.  ನನ್ನ ಪತಿ ಕೂಗಿಕೊಂಡ ಶಬ್ದ ಕೇಳಿ ಆ ವ್ಯಕ್ತಿ ಓಡಿ ಹೋದನು.  ಅವನು ಮುಸುಕು ಧರಿಸಿ 2 ಲೀಟರ್‌ ನ 2 ಪೆಟ್ರೋಲ್ ಬಾಟಲ್ ಹಿಡಿದು ಬಂದಿರುವ ದೃಷ್ಯ ನಮ್ಮ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದೆ.  ನಾನು ನನ್ನ ಮೈದುನನಿಗೆ ಕರೆ ಮಾಡಿದಾಗ ಅವರು ಬಂದು ಬೆಂಕಿಯನ್ನು ನೀರು ಹಾಕಿ ನಂದಿಸಿದರು. ಮೇಲ್ಕಂಡ ಎಲ್ಲರೂ ಸೇರಿ ಈ ಕೃತ್ಯವೆಸಗಿರುತ್ತಾರೆ.  ಈ ಕೃತ್ಯದಿಂದ ನಮಗೆ ಸುಮಾರು 22 ಲಕ್ಷ ರೂಪಾಯಿ ನಷ್ಟ ಉಂಟಾಗಿರುತ್ತೆ.  ಆದ್ದರಿಂದ ತಾವು ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಪಿರ್ಯಾದು ಅಂಶವಾಗಿರುತ್ತೆ.

ಹೊನ್ನವಳ್ಳಿ ಪೊಲೀಸ್‌ ಠಾಣೆ ಮೊನಂ-47/2017 ಕಲಂ 324, 506, ರೆ,ವಿ 34 ಐಪಿಸಿ

ದಿನಾಂಕ:23/04/2017 ರಂದು ಸಂಜೆ 04-45 ಗಂಟೆಗೆ ಪಿರ್ಯಾದಿ ಶ್ರೀಮತಿ ಜಯಮ್ಮ ಕೊಂ ಲೇಟ್ ಪುಟ್ಟಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಪಿರ್ಯಾದಿಗೆ ಇಬ್ಬರು ಗಂಡು ಮಕ್ಕಳಿದ್ದು ಮೊದಲನೇ ಮಗನಾದ ಪ್ರಭುಸ್ವಾಮಿಗೆ ಮದುವೆಯಾಗಿ ಮನೆಯ ಪಕ್ಕದಲ್ಲಿ ವಾಸವಾಗಿದ್ದು ಈ ದಿನ ದಿನಾಂಕ-23/04/2017 ರಂದು ಮಧ್ಯಾಹ್ನ ಸುಮಾರು 02-00 ಗಂಟೆ ಸಮಯದಲ್ಲಿ ಮಕ್ಕಳಿಗೆ ಆಸ್ತಿ ಪಾಲು ಮಾಡಿಕೊಡಲು ಪಿರ್ಯಾದಿ ಹೆಣ್ಣುಮಕ್ಕಳನ್ನು ಮತ್ತು ಸಂಬಂದಿಕರನ್ನು ಮನೆಗೆ ಕರೆಯಿಸಿ ಮಾತುಕತೆ ಮಾಡುವಾಗ ಪಿರ್ಯಾದಿಯು ಪ್ರಭುಸ್ವಾಮಿಗೆ ನಮ್ಮ ಜೀವನಾಂಶಕ್ಕೆ ಜಮೀನು ಬಿಡುವಂತೆ ಕೇಳಿದ್ದಕ್ಕೆ ಪ್ರಭುಸ್ವಾಮಿ ಯಾರಿಗೂ ಜಮೀನು ಬಿಡುವುದಿಲ್ಲವೆಂದು ಏಕಾಏಕಿ ಜಗಳ ತೆಗೆದು ಪಿರ್ಯಾದಿಯ ಕೈ ನುಲುಚಿದ್ದು ಈತನ ಜೊತೆ ಆತನ ಹೆಂಡತಿ ಕಲಾವತಿ ಮತ್ತು ಅವರ ತಂದೆ ಸಿದ್ದರಾಮಯ್ಯ ಸೇರಿಕೊಂಡು ಪಿರ್ಯಾದಿಯ ಮೈದುನ ಶ್ರೀನಿವಾಸನ ಬಲಗೈಗೆ ಪ್ರಭುಸ್ವಾಮಿ ಹಲ್ಲಿನಿಂದ ಕಚ್ಚಿ ಗಾಯಪಡಿಸಿದ್ದು ಬಿಡಿಸಲು ಹೋದ ಲೋಕಾಕ್ಷಿಗೂ ಕೂಡ ಪ್ರಭುಸ್ವಾಮಿ ಎಡಗೈಗೆ ಕಚ್ಚಿ ಗಾಯಪಡಿಸಿದ್ದು ಅಲ್ಲದೆ ಮೇಲ್ಕಂಡ ಮೂವರು ಕೂಡ ಪಾಲು ಕೊಡದಿದ್ದರೆ ನಿಮ್ಮಗಳನ್ನು ಜೀವಂತವಾಗಿ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕುತ್ತಿರುವಾಗ ಕಲ್ಕೆರೆ ಗ್ರಾಮದ ಜಯರಾಜ್‌ ಸಿಂಗ್ ನಟರಾಜ್ ಹಾಗು ಲಕ್ಷ್ಮಯ್ಯ ರವರು ಬಂದು ಜಗಳ ಬಿಡಿಸಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.Sunday, 23 April 2017

Crime Incidents 23-04-17

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 54/2017 ಕಲಂ 279, 304(ಎ)  ಐಪಿಸಿ

ದಿಲೀಪ ಹೆಚ್.ಬಿ  ಬಿನ್ ಹೆಚ್,.ಬಿ ಬಸವಲಿಂಗಪ್ಪ 28 ವರ್ಷ ಕುರುಬರು ಹೊಸಹಳ್ಳಿ,ಕಸಬಾ ಹೋ ತಿಪಟೂರು ತಾಲ್ಲೂಕು  ರವರು ದಿನಾಂಕ:22-04-17 ರಂದು ಮಧ್ಯಾಹ್ನ 02-10  ಗಂಟೆಗೆ  ಠಾಣೆಗೆ  ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ದಿ:22-04-17 ರಂದು  ಮಧ್ಯಾಹ್ನ  12-10 ರ  ಸಮಯದಲ್ಲಿ  ನನಗೆ  ಶಿವಕುಮಾರ್  ಎಂಬುವರು  ಪೋನ್ ಮಾಡಿ  ನಿಮ್ಮ ಅಣ್ಣನಾದ ರೇವಣಸ್ವಾಮಿಯವರಿಗೆ ಶಂಕರೇಶ್ವರ  ನಗರದ   ಹತ್ತಿರ  ಅಪಘಾತವಾಗಿದೆ  ಎಂತಾ ತಿಳಿಸಿದ್ದು  ನಾನು ಸ್ಥಳಕ್ಕೆ  ಹೋಗಿ  ನೋಡಲಾಗಿ  ನಮ್ಮ ಅಣ್ಣ  ಕೆಎ-20, ಕೆ-4951  ಮೋಟಾರ್  ಸೈಕಲ್ ನಲ್ಲಿ ರಂಗಾಪುರ ಕಡೆಯಿಂದ ತಿಪಟೂರು - ರಂಗಾಪುರ   ರಸ್ತೆಯ ಶಂಕರೇಶ್ವರ ನಗರದ ಹತ್ತಿರ  ಹೊಸಳ್ಳಿ ಕಡೆಗೆ   ಬರುತ್ತಿರುವಾಗ್ಗೆ  ಅದೇ ವೇಳೆಗೆ  ತಿಪಟೂರು   ಕಡೆಯಿಂದ  ಬಂದ ಕೆಎ-13-ಎಫ್ 1496 ನೇ ಕೆ.ಎಸ್,.ಆರ್.ಟಿ ವಾಹನದ ಚಾಲಕ ತನ್ನ  ವಾಹನವನ್ನು  ಅತಿ ವೇಗ & ಆಜಾಗರೂಕತೆಯಿಂದ ಓಡಿಸಿ  ನಮ್ಮ ಅಣ್ಣ ಬರುತ್ತಿದ್ದ  ದ್ವಿ ಚಕ್ರ ವಾಹನಕ್ಕೆ  ಡಿಕ್ಕಿ ಹೊಡೆಸಿದ ಪರಿಣಾಮ  ಬೈಕ್  ಸಂಪೂರ್ಣ ಜಖಂಗೊಂಡು   ನನ್ನ ಅಣ್ಣನ ತಲೆಗೆ ತೀವ್ರವಾದ ಪೆಟ್ಟು ಬಿದ್ದು  ಸ್ಥಳದಲ್ಲೆ   ಮೃತಪಟ್ಟಿರುತ್ತಾರೆ  ಈ ಅಪಘಾತಕ್ಕೆ  ಕೆಎ-13-ಎಫ್ 1496 ನೇ ಕೆ.ಎಸ್,.ಆರ್.ಟಿ.ಸಿ  ವಾಹನದ ಚಾಲಕನ ಅತಿ ವೇಗ & ಆಜಾಗರೂಕತೆಯೆ ಕಾರಣವಾಗಿರುತ್ತೆ  ಸದರಿ ಬಸ್ ಚಾಲಕನ ಹೆಸರು ವಿಳಾಸ  ತಿಳಿದಿಲ್ಲ ಆತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂತಾ  ಪಿರ್ಯಾದಿ ನೀಡಿದ ದೂರಿನ ಅಂಶವಾಗಿರುತ್ತೆ

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 34/2017 ಕಲಂ 447,341,504,506 R/W 34  ಐಪಿಸಿ

 

ದಿನಾಂಕ: 22/04/2017 ರಂದು ಬೆಳಗ್ಗೆ 10-00 ಗಂಟೆ ಠಾಣಾ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ರೂಪ್ಲಾನಾಯಕ್‌ ಪಿಸಿ 161 ರವರು  ಪಿ.ಸಿ.ಆರ್-ನಂ 14/2017 ರ ನ್ಯಾಯಾಲಯದ ನಿರ್ದೇಶಿತ ದೂರನ್ನು ತಂದು ಹಾಜರುಪಡಿಸಿದ್ದು, ಸದರಿ ದೂರಿನ  ಸಾರಾಂಶವೇನೆಂದರೆ, ದಿ:-25/03/2017 ರಂದು ಬೆಳಗ್ಗೆ ಸುಮಾರು 11-00 ಗಂಟೆಗೆ ಪಿರ್ಯಾದಿ ಮತ್ತು ಆಕೆಯ ಗಂಡ ಸಿದ್ದಬಸಪ್ಪ ರವರು ಪೂಜಾರಹಳ್ಳಿಯ ಮನೆಯಲ್ಲಿದ್ದಾಗ  ಆರೋಪಿತರು ಏಕಾಏಕಿ ಅನುಮತಿ ಇಲ್ಲದೆ ಒಳಗೆ ನುಗ್ಗಿ ಪಿರ್ಯಾದಿಯನ್ನು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದಾಗ, ಪಿರ್ಯಾದಿ ಗಂಡ ಬಂದು ಆರೋಪಿತರನ್ನು ಏಕೆ ಹೀಗೆ ಕೂಗಾಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಆರೋಪಿತರೆಲ್ಲರೂ ಮತ್ತು ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ಬೈದು ನಾವಿರುವ ಮನೆ ನಮ್ಮದು ಕೋರ್ಟಿಗೆ ಹಾಕಿರುವ ಕೇಸು ವಾಪಾಸ್ ತೆಗೆದರೆ ಸರಿ,ಇಲ್ಲವಾದರೆ ನಿಮ್ಮ ಕೈ ಕಾಲು ಮುರಿದು ಒಂದು ಗತಿ ಕಾಣಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕುವಾಗ ಆರೋಪಿ-02 ಮತ್ತು 05 ರವರು ಇವರಿಗೆ ಮಾತಲ್ಲಿ ಹೇಳಿದರೆ ಸಾಕಾಲ್ಲ, ಕಿಟಕಿಯಲ್ಲಿರುವ ಮಚ್ಚು ತೆಗೆದುಕೊಂಡು ಬನ್ನಿ ಇಬ್ಬರ ಕೈ ಕಾಲುಗಳನ್ನು ಕತ್ತರಿಸಿ ಬಿಡೋಣ ಆಗ ಇವರು ಹೆದರಿ ಕೇಸು ವಾಪಾಸ್ ತೆಗೆಯುತ್ತಾರೆಂದು  ಕುಮ್ಮಕ್ಕು  ನೀಡಿರುತ್ತಾರೆ. ಅಷ್ಟರಲ್ಲಿ  ಗಲಾಟೆ ನೋಡಿ  ಪಕ್ಕದ ಮನೆಯ ಪಿ.ಎಂ.ನಟರಾಜು ಬಿನ್ ಮಲ್ಲಪ್ಪ ಮತ್ತು ಜೆ.ಸಿ. ಮಲ್ಲಪ್ಪ ಬಿನ್‌ ಚೆನ್ನವೀರಪ್ಪ ರವರು ಜಗಳ  ಬಿಡಿಸಲು ಬಂದಾಗ ನಿಮಗೂ ಇದಕ್ಕೂ ಸಂಬಂದವಿಲ್ಲ ಎಂದು ಆರೋಪಿತರು ಗದರಿಸಿರುತ್ತಾರೆ, ಇಷ್ಟಕ್ಕೂ ನೀವು ಕೇಸು ವಾಪಸ್ ತೆಗೆಯದಿದ್ದರೆ ನನ್ನ ಹೆಣಡತಿ ಮತ್ತು ಮಗಳನ್ನು ಕೊಲೆ ಮಾಡಲು ಹಾಗೂ ಅತ್ಯಾಚಾರ ಮಾಡಲು ಬಂದಿದ್ದಾರೆ ಎಂದು ನಿಮ್ಮ ಮೇಲೆ ಠಾಣೆಯಲ್ಲಿ ಕೇಸು ದಾಖಲಿಸಿ ಕಂಬಿ ಎಣಿಸುವಂತೆ ,ಮಾಡುತ್ತೇವೇಂದು  ಆರೋಪಿಗಳು ಬೈದು, ಬೆದರಿಕೆ ಹಾಕಿರುತ್ತಾರೆ ಎಂದು ಇತ್ಯಾದಿಯಾಗಿ  ನ್ಯಾಯಾಲಯಕ್ಕೆ ಕೊಟ್ಟ ದೂರಿನ ಅಂಶವಾಗಿರುತ್ತೆ

 

 

 

 Saturday, 22 April 2017

Crime Incidents 22-04-17

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ 53/2017 ಕಲಂ 379 ಐಪಿಸಿ

ದಿನಾಂಕ:21-04-17 ರಂದು  ಜಿ. ಕೋಮಲ ಕೋಂ ದೇವರಾಜು, ದಸರಿಘಟ್ಟ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿ:19-04-17 ರಂದು ನಮ್ಮೂರಿನ ಶ್ರೀ ಚೌಡೇಶ್ವರಿ ದೇವಿಯವರ   ಜಾತ್ರೆಯನ್ನು ನೋಡಲು ದೇವಸ್ಥಾನದ  ಹತ್ತಿರ ಹೋಗಿದ್ದು  ಜಾತ್ರೆಯಲ್ಲಿ ವಿಪರೀತ ಜನಸಂದಣಿಯಿದ್ದು  ನಾನು ಜನರ ಮಧ್ಯದಲ್ಲಿ  ದೊಡ್ಡ ಅರಳಿಮರದ ಹತ್ತಿರ ಸಂಜೆ 5-30 ಗಂಟೆ ಸಮಯದಲ್ಲಿ  ನಾನು ಚೌಡೇಶ್ವರಿ  ದೇವಿಯ ಉತ್ಸವವನ್ನು  ನೋಡುತ್ತಾ  ನಿಂತ್ತಿದ್ದು ನನ್ನ ಕೊರಳನ್ನು ನೋಡಿಕೊಂಡಾಗ  ನನ್ನ ಕೊರಳಿನಲ್ಲಿದ್ದ ಸರ ಇರಲಿಲ್ಲ  ಯಾರೋ ಕಳ್ಳರು  ನನ್ನ ಸರವನ್ನು ಕಳ್ಳತನ ಮಾಡಿರುತ್ತಾರೆ   ನನ್ನ ಚಿನ್ನದ ಮಾಂಗಲ್ಯದ ಸರ ( ಬಲ್ಪ್ ಮಿಕ್ಸ್ ಡಿಸೈನ್ ) ಸುಮಾರು  30 ಗ್ರಾಂ ನದ್ದಾಗಿದ್ದು  ಅದರ ಬೆಲೆ  ಸುಮಾರು 90,000-00 ರೂಗಳಾಗಿರುತ್ತೆ  ಸದರಿ ಸರವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ   ಈ ವಿಚಾರವನ್ನು ನಮ್ಮ ಮನೆಯವರಿಗೆ  ತಿಳಿಸಿ ಈ ದಿನ ತಡವಾಗಿ ಬಂದು ಠಾಣೆಗೆ  ದೂರು ನೀಡಿರುತ್ತೇನೆ  ಕಳ್ಳತನವಾಗಿರುವ ನನ್ನ ಸರವನ್ನು ಪತ್ತೆ ಮಾಡಿಕೊಡಿ  ಎಂತಾ ಪಿರ್ಯಾದಿ ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿರುತ್ತೆ

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 77/2017 ಕಲಂ; 419, 420, 465, 468, 120 (ಬಿ) ಐಪಿಸಿ

ದಿನಾಂಕ-21-04-2017 ರಂದು ಪಿರ್ಯಾದಿ ಹೆಚ್‌.ಎಂ.ಗಂಗಮ್ಮ ಕೋಂ ನರಸಿಂಹಮೂರ್ತಿ, ಸುಮಾರು 55 ವರ್ಷ, ಲಿಂಗಾಯಿತರು, ಹಾಲಿವಾಸ ಚಾಂಮುಂಡಿ ರಸ್ತೆ, ರಾಮನಗರ ಟೌನ್‌, ರಾಮನರ ಜಿಲ್ಲೆ ರವರು ಲಿಖಿತ ದೂರನ್ನು ಅವರ ಪರವಾಗಿ ಜಿಪಿಎ ಹೋಲ್ಡರ್‌ ಆದ ಎನ್‌, ನಂಜುಂಡಸ್ವಾಮಿ ರವರು ಈ ದಿನ ಸಂಜೆ 8-00 ರಂದು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ಮತ್ತು ನಮ್ಮ ಕುಟುಂಬದವರು ಸೇರಿ 2003 ನೇ ಸಾಲಿನಲ್ಲಿ ಕುಣಿಗಲ್‌ ತಾಲ್ಲೋಕು, ಹುಲಿಯೂರುದುರ್ಗ ಹೋಬಳಿ ಮತ್ತು ಹಸೀಗೆ ಹೋಬಳಿಯ ಸರ್ವೇ ನಂ; 512, 512/3, 479/1, 498/3 ರಲ್ಲಿರುವ ಜಮೀನು ಮತ್ತು ಹುಲಿಯೂರುದುರ್ಗ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಅಸೆಸ್‌ಮೆಂಟ್ ನಂ; 96/1 ಮತ್ತು 96/2 ರ ನಿವೇಶನವನ್ನು ಮಾರಾಟ ಮಾಡಿರುತ್ತೇವೆ. ನಂತರ ನನ್ನ ಸಹೋದರಿಯು ಹಕ್ಕು ಕುಲಾಸೆ ಮಾಡಿಕೊಟ್ಟಿರುತ್ತಾರೆ. ನಾನೂ ಸಹ ಹುಲಿಯೂರುದುರ್ಗ ಸಬ್‌ ರಿಜಿಸ್ಟರ್‌ ಕಛೇರಿಯಲ್ಲಿ ಹಕ್ಕು ಕುಲಾಸೆ ಪ್ರಮಾಣ ಪತ್ರವನ್ನು ನೀಡಿರುತ್ತೇನೆ. ಸದರಿ ಆಸ್ತಿಯ ಬಗ್ಗೆ ನಮಗೆ ಯಾವುದೇ ವಿದವಾಗ ವಿವಾದ ಇರುವುದಿಲ್ಲ.

ಆದರೂ ಸಹ ನನಗೆ ಮಾನ್ಯ ಉಚ್ಚ ನ್ಯಾಯಾಲಯ ಬೆಂಗಳೂರು ವಿಭಾಗದಿಂದ ರಿಟ್ ಅರ್ಜಿ ಸಂಖ್ಯೆ ನಂ; 1539/2017 ರಲ್ಲಿ ಮತ್ತು ಅ.ಸಂ; 237/2015 ಕುಣಿಗಲ್‌ ಸಿವಿಲ್‌ ಜಡ್ಜ್‌ ನ್ಯಾಯಾಲಯದ ಆದೇಶಕ್ಕೆ ಸಂಭಂದಿಸಿದಂತೆ, ನೋಟಿಸ್‌ ಬಂದಿರುತ್ತದೆ. ನಂತರ ನಾನು ಈ ಬಗ್ಗೆ ವಿಚಾರಮಾಡಿದಾಗ ನನಗೆ ಮತ್ತು ನಮ್ಮ ಕುಟುಂಬದ ಸ್ಥಿರಾಸ್ತಿಗಳಿಗೆ ಸಂಭಂದಿಸಿದಂತೆ ನಾನು ಮತ್ತು ನನ್ನ ಸಹೋದರಿಯಾದ ಪುಷ್ಪಲತಾ ಎಂಬುವವರು ಕುಣಿಗಲ್‌ ಸಿವಿಲ್‌ ಜಡ್ಜ್‌ ನ್ಯಾಯಾಲಯದಲ್ಲಿ ಅ.ಸಂ; 237/2015 ರಲ್ಲಿ ಭಾಗಕ್ಕೆ ಸಂಭಂದಿಸಿದಂತೆ ನನಗೆ ತಿಳಸದೆ ನನ್ನ ಹೆಸರನ್ನು ಸಹ ಸೇರಿಸಿಕೊಂಡು ನ್ಯಾಯಾಲಯದಲ್ಲಿ ದಾವೆ ಹೂಡಿರುವುದು ಕಂಡುಬಂದಿರುತ್ತದೆ. ನಂತರ ನಾನು ಈ ಬಗ್ಗೆ ಖುದ್ದಾಗಿ ಮಾಹಿತಿ ಪಡೆದು ಪರಿಶೀಲಿಸಿದಾಗ ನನ್ನ ಗಮನಕ್ಕೆ ಬಾರದೆಯೇ ನನ್ನ ಸಹಿಯನ್ನು ನಕಲು ಮಾಡಿ ದಾವೆ ಹೂಡಿರುವುದು ಕಂಡುಬಂದಿರುತ್ತದೆ. ನಂತರ ನಾನು ನನ್ನ ಸಹೋದರಿ ಪುಷ್ಪಲತ ರವರನ್ನು ವಿಚಾರಿಸಿದಾಗ, ಅವರು ನನ್ನ ಸಹಿಯನ್ನು ನಕಲುಮಾಡಿ ದಾವೆ ಹೂಡಿರುವುದು ಸತ್ಯವೆಂದು ಒಪ್ಪಿಕೊಂಡಿರುತ್ತಾರೆ. ನಂತರ ನಾನು ನಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ನನ್ನ ಸ್ವ-ಇಚ್ಚಾ ಹೇಳಿಕೆಯ ಪ್ರಮಾಣ ಪತ್ರವನ್ನು ಸಲ್ಲಿಸಿರುತ್ತೇನೆ. ನಂತರ ದಿನಾಂಕ-02-02-2017 ರಂದು ನಾನು ಅದೇ ರೀತಿ ಉಚ್ಚ ನ್ಯಾಯಾಲಕ್ಕೆ ರಿಟ್‌ ಪಿಟಿಷನ್‌ ಸಹ ಸಲ್ಲಿಸಿರುತ್ತೇನೆ.

ಹಾಲಿ ನಾನು ಅಂಗನವಾಡಿಯಲ್ಲಿ ಶಿಕ್ಷಕಿಯಾಗಿರುವುದರಿಂದ ನನಗೆ ತೊಂದರೆ ಕೊಡುವ ಉದ್ದೇಶದಿಂದ ನನ್ನ ಸಹೋದರಿಯಾದ ಪುಷ್ಪಲತಾ, ನನ್ನ ಸಹೋದರ ಹೆಚ್‌.ಎಂ.ನಾಗರಾಜು, ಆತನ ಹೆಂಡತಿ ಹೇಮಾವತಿ, ಇವರ ತಂದೆ ಶಿವರುದ್ರಪ್ಪ, ಇವರ ಮಗ ಚೇತನ, ಶಿವಮ್ಮ ಕೋಂ ಲೇಟ್‌ ನಂಜಪ್ಪ ರವರು ಖಳ್ಳ ಸಂಚುಮಾಡಿ ಮೇಲ್ಕಂಡ ಕೃತ್ಯವನ್ನು ಮಾಡಿರುತ್ತಾರೆ. ನಾನು ದಿನಾಂಕ-22-03-2017 ರಂದು ನನ್ನ ಸ್ವ-ಇಚ್ಚಾ ಹೇಳಿಕೆಯ ಪ್ರಮಾಣ ಪತ್ರವನ್ನು ಸಲ್ಲಿಸಿ ಅದರಲ್ಲಿ ಈ ಎಲ್ಲಾ ವಿಚಾರದ ಬಗ್ಗೆ ಹೇಳಿರುತ್ತೇನೆ ಮತ್ತು ಸದರಿ ದಾವೆಯನ್ನು ವಜಾಮಾಡಬೇಕೆಂದು ನಾನು ಕುಣಿಗಲ್‌ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತೇನೆ. ನಂತರ ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲೂ ಸಹ ಸದರಿ ವಿಚಾರವಾಗಿ ಪ್ರಮಾಣ ಪತ್ರವನ್ನು ಸಲ್ಲಿಸಿರುತ್ತೇನೆ. ಆದ್ದರಿಂದ ಸದರಿ ರವರ ಮೇಲೆ ಕಾನೂನು ಕ್ರಮವನ್ನು ಸಲ್ಲಿಸುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 55/2017 ಕಲಂ 379 IPC & 4 (1A) 21(1) MMRD Act- 1957, 42, 44 KMMCR-1994.

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ಆದ ನಾನು ದಿನಾಂಕ: 21/04/2017 ರಂದು ರಾತ್ರಿ ತಿಪಟೂರು ಗ್ರಾಮಾಂತರ  ಪೊಲೀಸ್ ಠಾಣಾ ಸರಹದ್ದಿನಲ್ಲಿ ರಾತ್ರಿ ಗಸ್ತಿನಲ್ಲಿ ಇದ್ದಾಗ ತಿಪಟೂರು ತಾಲ್ಲೂಕು ಹಾಲ್ಕುರಿಕೆ ರಸ್ತೆಯಲ್ಲಿ ಟಿಪ್ಪರ್ ಲಾರಿಯೊಂದರಲ್ಲಿ ನಿರುವಗಲ್ಲು ವಾಸಿ ಮಧು @ ಮಧುಚಂದ್ರ ರವರು ಅಕ್ರಮವಾಗಿ ಮರಳು ತುಂಬಿಕೊಂಡು ತಿಪಟೂರು ನಗರದ ಕಡೆಗೆ ಸಾಗಾಣಿಕೆ ಮಾಡುತ್ತಿರುತ್ತಾರೆಂದು ಬೆಳಗಿನ ಜಾವ 04-00 ಗಂಟೆ ಸಮಯದಲ್ಲಿ ಖಚಿತ ಮಾಹಿತಿ ಬಂದಿದ್ದು, ನಾನು ಮತ್ತು  ಸಿಬ್ಬಂದಿಯಾದ ಹೆಚ್ ಸಿ 177 ಲೋಕೇಶ್ ಮತ್ತು ಪಿ ಸಿ 574 ದಯಾನಂದ  ರವರೊಂದಿಗೆ KA-06 G-347 ಜೀಪ್ ನಲ್ಲಿಹೋಗಿ, ಮಂಜುನಾಥ ನಗರದ ಸಮೀಪದ ತಿಪಟೂರು – ಹಾಲ್ಕುರಿಕೆ ರಸ್ತೆಯ ತಿರುವಿನಲ್ಲಿ ಬೆಳಗಿನ ಜಾವ 04-30 ಗಂಟೆ ಸಮಯದಲ್ಲಿ ನಿಂತಿರುವಾಗ ಹಾಲ್ಕುರಿಕೆ ಕಡೆಯಿಂದ ಒಂದು ಲಾರಿಯು ತಿಪಟೂರು ನಗರದ ಕಡೆಗೆ ಬರುತ್ತಿದ್ದು, ಲಾರಿಯವರು ಪೊಲೀಸ್  ಜೀಪ್ ನ್ನು  ನೋಡಿ ಲಾರಿಯ ಚಾಲಕ ಲಾರಿಯನ್ನು ರಸ್ತಯಲ್ಲಿ ನಿಲ್ಲಿಸಿ  ಲಾರಿಯಲ್ಲಿದ್ದ ಇಬ್ಬರು ಅದರಲ್ಲಿ ಚಾಲಕ ಮತ್ತು ಮತೊಬ್ಬನಾದ ಮಧು @ ಮಧುಚಂದ್ರ  ರವರುಗಳು ಲಾರಿಯಿಂದ ಇಳಿದು ಓಡಲು ಆರಂಬಿಸಿದ್ದು ಕೂಡಲೆ  ಸಿಬ್ಬಂದಿಗಳು ಅವರುಗಳನ್ನು ಹಿಡಿಯಲು ಪ್ರಯತ್ನಿಸಿದ್ದು ಅವರುಗಳು ಕತ್ತಲಿನಲ್ಲಿ ತಪ್ಪಿಸಿಕೊಂಡರು, ನಂತರ   ಲಾರಿಯನ್ನು ಪರಿಶೀಲಿಸಲಾಗಿ, ಟಾಟಾ ಕಂಪನಿಯ, ಟಾಟಾ-1613 ಟಿಪ್ಪರ್ ಲಾರಿಯಾಗಿದ್ದು,ಇದಕ್ಕೆ ನೊಂದಣಿ ಸಂಖ್ಯೆ ಬರೆದಿರುವುದಿಲ್ಲ , ಈ ಲಾರಿಯಲ್ಲಿ ಬಾಡಿ ಲೆವೆಲ್ ವರೆಗೆ ಮರಳನ್ನು ತುಂಬಿರುತ್ತೆ. ಲಾರಿಯಲ್ಲಿ ಮರಳು ಸಾಗಾಣಿಕೆ ಮಾಡುವ ಬಗ್ಗೆ ಅಧಿಕೃತ ಪರವಾನಿಗೆ ಪತ್ರಗಳು ಕಂಡುಬಂದಿರುವುದಿಲ್ಲ. ಇವರು ಓಡಿ ಹೋಗಿರುವುದನ್ನು ನೋಡಿದರೆ ಅಕ್ರಮ ಹಣ ಸಂಪಾದನೆ ಮಾಡುವ ಸಲುವಾಗಿ ನೈಸರ್ಗಿಕವಾಗಿ ದೊರೆಯುವ ಮರಳನ್ನು ಎಲ್ಲಿಂದಲೋ ಕಳ್ಳತನದಿಂದ, ಲಾರಿಗೆ ತುಂಬಿಸಿ, ಸಾಗಾಣಿಕೆ ಮಾಡಲು ಯಾವುದೇ ಪರವಾನಗಿ ಇಲ್ಲದೆ, ಸಾಗಾಣಿಕೆ ಮಾಡುತ್ತಿರುವುದು  ಕಂಡು ಬಂದಿರುತ್ತೆ. ನಂತರ ಮೇಲ್ಕಂಡ ಲಾರಿಯನ್ನು ವಶಕ್ಕೆ ಪಡೆದು ಠಾಣೆಗೆ ಬೆಳಿಗಿನ ಜಾವ 05-00 ಗಂಟೆಗೆ ಬಂದು, ಅಕ್ರಮ ಮರಳು ಸಾಗಾಣಿಕೆ ಮಾಡಿ ಓಡಿ ಹೋದ ಮಧು @ ಮಧುಚಂದ್ರ  ಮತ್ತು ಲಾರಿಯ ಚಾಲಕ ರವರುಗಳ ಮೇಲೆ ಪ್ರಕರಣ ದಾಖಲಿಸಿರುತ್ತೆ.

 

 


Page 1 of 4
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 89 guests online
Content View Hits : 231891