lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 5 6 7 8 9
10 11 12 13 14 15 16
17 18 19 20 21 22 23
24 26 27 28 29 30
Tuesday, 25 April 2017
Crime Incidents 25-04-17

ತಾವರೇಕರೆ ಪೊಲೀಸ್‌ ಠಾಣೆ ಮೊ.ಸಂ 63/2017 ಕಲಂ 279, 337, 304(ಎ) ಮತ್ತು 187 ಐ..ಎಂ ವಿ ಅಕ್ಟ್‌

ದಿನಾಂಕ;-24/4/2017 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿ ಮೊಹಮದ್ ಯೂಸುಫ್ ಬಿನ್ ಮಹಮದ್‌ ಸಾದಿಕ್‌ ನಂ 24/11 ಇ ಅಂತೋನಿಪುರಂ ವೋಡೈ ಸೂರಮಂಗಲಂ ಸೇಲಂ  ರೈಲ್ವೆ ಜಂಕ್ಷನ್ ಸೇಲಂ ತಮಿಳುನಾಡು ರಾಜ್ಯ   ವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ದಿ;24/4/2017 ರಂದು ನಾನು ನನ್ನ ತಂದೆ ಮೊಹಮ್ಮದ್ ಸಾದಿಕ್ ಮತ್ತು ನನ್ನ ತಾಯಿ ಆಯೀಷಾ ಸಿದ್ದಿಕಾ ರವರುಗಳೊಂದಿಗೆ ಬಾಂಬೆಯಲ್ಲಿರುವ ನನ್ನ ತಂದೆ ಸ್ನೇಹಿತರ ಮನೆಗೆ ಮತ್ತು ಪ್ರವಾಸಕ್ಕಾಗಿ ನನ್ನ ಅಣ್ಣ ರವರಿಗೆ ಸೇರಿದ TN-01-AM-6633 ನೇ ಟಾಟಾ ಟಯೋಟೋ ಫಾರ್ಚುನರ್ ಕಾರಿನಲ್ಲಿ ಹೊರಟು ಕಾರಿಗೆ ಜಾಫರ್ ಷರೀಫ್ ರವರನ್ನು ಚಾಲಕನನ್ನಾಗಿ ಕರೆದುಕೊಂಢು ಬೆಳಿಗ್ಗೆ 9-00 ಗಂಟೆಗೆ ಸೇಲಂನಿಂದ ಹೊರಟು ಬೆಂಗಳೂರಿಗೆ ಬಂದು ಊಟ ಮಾಡಿ ಬಾಂಬೆಗೆ ಹೋಗಲು ತುಮಕೂರು ಮುಖೇನ ಎನ್.ಹೆಚ್48 ರಸ್ತೆಯಲ್ಲಿ ಬಾಂಬೆ ಕಡೆಗೆ ಹೋಗುತ್ತಿದ್ದಾಗ ಸಾಯಂಕಾಲ ಸುಮಾರು 4-00 ಗಂಟೆಯಲ್ಲಿ  ಶಿರಾದಿಂದ ಸುಮಾರು 6 ಕಿ.ಮೀ ದೂರ ಹೋದಾಗ ನಮ್ಮ ಕಾರಿನ ಮುಂಭಾಗ ರಸ್ತೆಯ ಬಲಭಾಗದಲ್ಲಿ  ಒಂದು ಲಾರಿ ಹೋಗುತ್ತಿದ್ದು ಆ ಲಾರಿಯ ಚಾಲಕ ಯಾವುದೇ ಇಂಡಿಕೇಟರ್ ಲೈಟ್ ಹಾಕದೇ ಯಾವುದೇ ಸಿಗ್ನಲ್ ತೋರಿಸದೇ ನಿರ್ಲಕ್ಷತೆಯಿಂದ ಏಕಾ ಏಕಿ ಲಾರಿಯನ್ನು ರಸ್ತೆಯ ಬಲಭಾಗದಿಂದ ರಸ್ತೆಯ ಎಡಭಾಗಕ್ಕೆ ತಿರುಗಿಸಿ ನಮ್ಮ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಮ್ಮ ಕಾರು ಪಲ್ಟಿಯಾಗಿ ಎಡಭಾಗದ ಡಿವೈಡರ್ ಮೇಲೆ ಬಿದ್ದು ಲಾರಿ ಕೂಡ ರಸ್ತೆಯ ಮೇಲೆ ಬಿದ್ದು ಎರಡು ವಾಹನಗಳು ಜಖಂಗೊಂಡು ಕಾರಿನಲ್ಲಿದ್ದ ನನ್ನ ತಂದೆ ಮತ್ತು ನನ್ನ ತಾಯಿ ರವರಿಗೆ ಪೆಟ್ಟುಗಳು ಬಿದ್ದು ರಕ್ತಸ್ರಾವವಾಗಿ ಕಾರಿನಿಂದ ರಸ್ತೆಯ ಮೇಲೆ ಬಿದ್ದರು. ನನಗೆ ಎರಡೂ ಕೈಗಳಿಗೆ ಮತ್ತು ಬೆನ್ನಿಗೆ ಪೆಟ್ಟುಗಳಾಗಿದ್ದವು. ಕಾರಿನ ಚಾಲಕ ಕಾರಿನಲ್ಲಿ  ಸಿಕ್ಕಿಹಾಕಿಕೊಂಡು ತಲೆಗೆ ಪೆಟ್ಟು ಬಿದ್ದು ರಕ್ತ ಬಂದು ಸ್ಥಳದಲ್ಲೇ ಸತ್ತು ಹೋಗಿದ್ದನು. ನಾನು ಕಾರಿನಿಂದ ಳಿದು ನನ್ನ ತಂದೆ ತಾಯಿಯನ್ನು ನೋಡಲಾಗಿ ಇಬ್ಬರಿಗೂ ಪೆಟ್ಟುಗಳಾಗಿದ್ದು ರಕ್ತ ಸ್ರಾವವಾಗಿ ಸ್ಥಳದಲ್ಲೇ ಸತ್ತು ಹೋಗಿದ್ದರು. ಲಾರಿಯ ಚಾಲಕ ಲಾರಿಯನ್ನು ಬಿಟ್ಟು ಓಡಿಹೋಗಿದ್ದನು. ಲಾರಿಯ ನಂಬರ್ ನೋಡಲಾಗಿ MH-12-HD-6868 ನೇ ಟಾಟಾ 1109 ಲಾರಿಯಾಗಿತ್ತು. ನಂತರ ಸ್ಥಳಕ್ಕೆ ಬಂದ ಸಾರ್ವಜನಿಕರು ಮತ್ತು ಪೊಲೀಸರು ಕಾರಿನ ಚಾಲಕನನ್ನು ಕಾರಿನಿಂದ ಹೊರತೆಗೆದು ನನ್ನ ತಂದೆ ಮತ್ತು ನನ್ನ ತಾಯಿ ಹಾಗೂ ಚಾಲಕನ ಶವಗಳನ್ನು ಹೈವೇ ಆಂಬ್ಯುಲೆನ್ಸ್ ನಲ್ಲಿ ತುಮಕೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿಕೊಟ್ಟರು. ನಾನು ತಾವರೆಕೆರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡಿದಿರುತ್ತೇನೆ. ಈ ಅಪಘಾತವು ಶಿರಾ ತಾಲ್ಲೂಕ್ ಪಂಜಿಗಾನಹಳ್ಳಿ ಗೇಟ್ ಸಮೀಪ ಉಂಟಾಗಿರುತ್ತೆಂತ ಗೊತ್ತಾಯಿತು. ಈ ಅಪಘಾತವು ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷತೆಯಿಂದ ಉಂಟಾಗಿರುತ್ತೆ. ಮೇಲ್ಕಂಡ ಲಾರಿ ಚಾಲಕನ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ  

ಜಯನಗರ ಪೊಲೀಸ್ ಠಾಣಾ ಮೊ.ನಂ. 61/2017 ಕಲಂ 379  ಐಪಿಸಿ

 

ದಿನಾಂಕ: 24-04-2017 ರಂದು ರಾತ್ರಿ 8-30 ಗಂಟೆಗೆ ತುಮಕೂರು ಟೌನ್ ಸರಸ್ವತಿಪುರಂ 2 ನೇ ಹಂತದ ವಾಸಿ ಡಿ.ಜಯನಾಯ್ಕ ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 13-04-2017 ರ ಸಂಜೆ 8-00 ಗಂಟೆಗೆ ಸರಿಯಾಗಿ ಆರ್ಯ ಭಾರತಿ ಪಾಲಿಟೆಕ್ನಿಕ್ ಕಾಲೇಜು ರಸ್ತೆ ಕುಣಿಗಲ್ ಮುಖ್ಯರಸ್ತೆಯ ಕಾರ್ನರ್ ನಲ್ಲಿ ಸಾಂಸ್ಕೃತಿಕ ಕರಕುಶಲ ವಸ್ತು ಪ್ರದರ್ಶನವನ್ನು ನೋಡಲು ನನ್ನ ದ್ವಿಚಕ್ರ ವಾಹನ ಕೆಎ-06 ವೈ-5308 ವನ್ನು ಹ್ಯಾಂಡ್ & ಪೆಟ್ರೋಲ್ ಲಾಕ್ ಮಾಡಿ ನಿಲ್ಲಿಸಿ ನಂತರ ವಸ್ತು ಪ್ರದರ್ಶನವನ್ನು ನೋಡಿಕೊಂಡು ಸುಮಾರು 8-15 ಗಂಟೆಗೆ ಹೊರಗಡೆ ಬಂದು ಗಾಡಿಯನ್ನು ತೆಗೆಯಲು ಹೋದಾಗ ನನ್ನ ಗಾಡಿಯು ಕಳುವಾಗಿತ್ತು.  ತಕ್ಷಣ ನಾನು 2 ಕಿ.ಮೀ ವಿಸ್ತೀರ್ಣದವರೆಗೋ ಎಲ್ಲಾ ರಸ್ತೆಗಳು ಹಾಗೂ ಸ್ನೇಹಿತರು, ಸಂಬಂಧಿಕರನ್ನು  ವಿಚಾರಿಸಿದರೂ ಗಾಡಿ ಸಿಗಲಿಲ್ಲ. ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ನನ್ನ ಗಾಡಿಯನ್ನು ಹುಡುಕಿಕೊಡಲು ಕೋರಿ ಇತ್ಯಾದಿಯಾಗಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-64/2017 ಕಲಂ: 379 ಐ.ಪಿ.ಸಿ

ದಿನಾಂಕ: 24/04/2017 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿ ನಿರಂಜನ್ ಬಿನ್ ಕಮಲಾನಾಭ, 20 ವರ್ಷ, ಗೋಪಿಕುಂಟೆ ಗ್ರಾಮ, ಹುಲಿಕುಂಟೆ ಹೋಬಳಿ, ಶಿರಾ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಈಗ್ಗೆ 2ವರ್ಷಗಳಿಂದ ತಿಪಟೂರು ಕಲ್ಪತರು ಕೆ.ಐ.ಟಿ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ತಿಪಟೂರು ನಗರದ ಶಾರದಾನಗರದ ಶ್ರೀರಾಮಸ್ವಾಮಿ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಿರುತ್ತೇನೆ. ಪ್ರತಿದಿನ ಕಾಲೇಜಿಗೆ ನನ್ನ ಬಾಬ್ತು ಟಿ.ವಿ.ಎಸ್ ಅಪ್ಪಾಜಿ ಬೈಕಿನಲ್ಲಿ ಹೋಗಿ ಬರುತ್ತಿದ್ದು, ದಿನಾಂಕ: 06/03/2017 ರಂದು ಎಂದಿನಂತೆ ರಾತ್ರಿ 9-00 ಗಂಟೆಗೆ ಮನೆಯ ಕಾಂಪೌಂಡ್ ನಲ್ಲಿ ಬೈಕನ್ನು ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿ, 11-00 ಗಂಟೆಗೆ ಮಲಗಿದ್ದು, ದಿನಾಂಕ:07/03/2017 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಲಾಗಿ ಮನೆಯ ಗೇಟಿನ ಬೀಗ ಕಿತ್ತು ಹಾಕಿದ್ದು, ನನ್ನ ಹೊಸ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಬೈಕನ್ನು ಈಗ್ಗೆ ಒಂದು ತಿಂಗಳ ಹಿಂದೆ ತೆಗೆದುಕೊಂಡಿದ್ದು, ಇನ್ನು ರಿಜಿಸ್ಟ್ರೇಷನ್ ಮಾಡಿಸಿರುವುದಿಲ್ಲ. ಇಂಜಿನ್ ನಂ- OE6AH2179519 & ಚಾಸಿಸ್ ನಂ -MD634KE61H2A68202 ಆಗಿದ್ದು, ಅದರ ನಿಖರವಾದ ಬೆಲೆ ಗೊತ್ತಿರುವುದಿಲ್ಲ. 30.000/- ರೂಗಳನ್ನು ಬ್ಯಾಂಕಿನಲ್ಲಿ ಕಟ್ಟಿ ಕೊಂಡುಕೊಂಡಿರುತ್ತೇನೆ. ಸದರಿ ನನ್ನ ಬೈಕನ್ನು ಸ್ನೇಹಿತರು, ಹಾಗು ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲಿಯೂ ಸಹ ಪತ್ತೆಯಾಗಿರುವುದಿಲ್ಲ.ಆದ್ದರಿಂದ ಕಳ್ಳತನವಾಗಿರುವ ನನ್ನ ಬೈಕನ್ನು ಪತ್ತೆ ಮಾಡಿಕೊಡಿ ಎಂದು ಈ ದಿನ ತಡವಾಗಿ ಬಂದು ದೂರನ್ನು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 55/2017 ಕಲಂ 279, 337  ಐಪಿಸಿ ರೆ/ವಿ 187 ಐಎಂವಿ ಆಕ್ಟ್.

ದಿನಾಂಕ: 24-04-17 ರಂದು  ಮಧ್ಯಾಹ್ನ  1-30 ಗಂಟೆಯಲ್ಲಿ   ಈ ಕೇಸಿನ ಗಾಯಾಳು ಉಮಾಶಂಕರ್ ಬಿನ್ ರೇಣುಕಪ್ಪ, 33 ವರ್ಷ,  ಹಿಪ್ಪೇತೋಪು, ತಿಪಟೂರು  ಟೌನ್  ರವರು  ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ  ನೀಡಿದ ಹೇಳಿಕೆ ಅಂಶವೇನೆಂದರೆ,  ಇಂದು ದಿ:-24-04-17 ರಂದು   ನನ್ನ ಬಾಭ್ತು KA-44, Q-9879  ನೇ ಬೈಕಿನಲ್ಲಿ  ಬಸವಪುರಕ್ಕೆ ಹೋಗಿ ವಾಪಸ್  11-15 ಗಂಟೆ ಸಮಯದಲ್ಲಿ  ತಿಪಟೂರು ಕರೆಗೋಡಿ ರಸ್ತೆಯ, ನಂಜುಂಡಪ್ಪ ರವರ  ತೋಟದ  ಹತ್ತಿರ,  ರಸ್ತೆಯ ಎಡಭಾಗದಲ್ಲಿ  ಬರುತ್ತಿರುವಾಗ್ಗೆ   ತಿಪಟೂರು ಕಡೆಯಿಂದ  ಬಂದ  KA-13,R-6455   ನೇ ಪಲ್ಸರ್ ಬೈಕ್  ಸವಾರ ತನ್ನ ವಾಹನವನ್ನು ಅತಿ ವೇಗ & ಆಜಾಗರೂಕತೆಯಿಂದ ಓಡಿಸಿಕೊಂಡು  ನನ್ನ ದ್ವಿ ಚಕ್ರ ವಾಹನಕ್ಕೆ  ಡಿಕ್ಕಿ ಹೊಡೆಸಿದ ಪರಿಣಾಮ   ಬೈಕ್ ಸಮೇತ ಕೆಳಕ್ಕೆ ಬಿದ್ದ ನನಗೆ  ತಲೆಗೆ,ಎಡಕಾಲಿನ ಪಾದದ ಬಳಿ, ಬಲಕೈ ಹತ್ತಿರ ತರಚಿದ ಗಾಯಗಳಾಗಿರುತ್ತೆ ಹಾಗೂ ಬೈಕ್ ಜಕಂಗೊಂಡಿರುತ್ತೆ,  ನನಗೆ ಡಿಕ್ಕಿ ಹೊಡೆಸಿದ  ಬೈಕ್  KA-13,R-6455   ನೇ ಪಲ್ಸರ್ ಬೈಕ್   ಆಗಿದ್ದು , ಸದರಿ ಬೈಕ್ ಚಾಲಕ  ನನಗೆ  ಅಪಘಾತಪಡಿಸಿ  ಬೈಕ್ ನಿಲ್ಲಿಸದೆ ಹೋಗಿರುತ್ತಾನೆ  ಸದರಿ ಚಾಲಕನ ಮೇಲೆ ಕಾನೂನು ರೀತ್ಯಾ  ಕ್ರಮ ಜರುಗಿಸಿ ಎಂತಾ ಪಿರ್ಯದಿ  ನೀಡಿದ ಹೇಳಿಕೆ ಅಂಶವಾಗಿರುತ್ತೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 69 guests online
Content View Hits : 322827