lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 5 6 8 9
10 11 12 13 14 15 16
17 18 19 20 21 22 23
24 25 26 27 28 29 30
Friday, 07 April 2017
Crime Incidents 7-04-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 59/2017 ಕಲಂ 44(1)ಕೆಎಂಎಂಸಿಆರ್‌ ಮತ್ತು 21(1) ಎಂಎಂಆರ್‌ಡಿ ರೆ/ವಿ 379 ಐಪಿಸಿ

ದಿನಾಂಕ-06/04/2017 ರಂದು ರಾತ್ರಿ 10-00 ಗಂಟೆಗೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಅಂಶವೇನೆಂಧರೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಘುರಾಮ್ ಎಸ್ ಸಿಪಿಸಿ-312 ಆದ ನಾನು ಠಾಣಾ ಎಸ್ ಹೆಚ್ ಓ ರವರಲ್ಲಿ ಕೊಟ್ಟ ವರಧಿ.ಏನೆಂದರೆ ದಿನಾಂಕ-06/04/2017 ರಂದು ರಾತ್ರಿ ಠಾಣಾಧಿಕಾರಿಗಳು ಠಾಣೆಗೆ ದೂರವಾಣಿ ಮೂಲಕ ಬಂದ ಮಾಹಿತಿ ಮೇರೆಗೆ ಕಣಕುಪ್ಪೆ ಗ್ರಾಮದ ಕಡೆಗೆ ಯಾರೋ ಆಸಾಮಿಗಳು ಟ್ರ್ಯಾಕ್ಟರ್‌ ನಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದಾರೆ ಎಂತಾ ಮಾಹಿತಿ ಮೇರೆಗೆ ನನಗೆ ಮತ್ತು ಠಾಣಾ ಪಿಸಿ-988 ರವರುಗಳಿಗೆ ರಾತ್ರಿ 9-00 ಗಂಟೆಗೆ ಠಾಣಾ ಎಸ್ ಹೆಚ್ ಓ ರವರು ಹೆಬ್ಬೂರು ಹೋಬಳಿಯ ಕಣಕುಪ್ಪೆ ಗ್ರಾಮದ ಕಡೆಗೆ ಯಾರೋ ಆಸಾಮಿಗಳು ಟ್ರ್ಯಾಕ್ಟರ್‌ ನಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದಾರೆ ಎಂದು ದೂರವಾಣಿ ಮೂಲಕ ಕರೆ ಮಾಡಿದ್ದು, ಆದ್ದರಿಂದ ಸದರಿ ಸ್ಥಳಕ್ಕೆ ಕಳುಹಿಸಿದ್ದು ಠಾಣಾಧಿಕಾರಿಗಳ ಆದೇಶದಂತೆ ರಾತ್ರಿ 9-15 ಗಂಟೆಗೆ ಕಣಕುಪ್ಪೆ ಗ್ರಾಮದ ಹೇಮಾವತಿ ಚಾನಲ್‌ನ ಬಳಿ ಹೋಗುತ್ತಿರುವಾಗ್ಗೆ ಎದುರು ಕಡೆಯಿಂದ ಯಾರೋ ಆಸಾಮಿಗಳು ಟ್ರ್ಯಾಕ್ಟರ್‌ ನಲ್ಲಿ ಸುಮಾರು ಅರ್ಧ ಟ್ರೈಲರ್ ನ್ನು ಮರಳನ್ನು ತುಂಬಿಕೊಂಡು ಬಂದಿದ್ದು ವಿಚಾರಿಸಲು ಟ್ರ್ಯಾಕ್ಟರ್‌ನ ಹತ್ತಿರ ಹೋಗಲಾಗಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಸದರಿ ಚಾಲಕನು ಕತ್ತಲಿನಲ್ಲಿ ಅಲ್ಲಿಂದ ಓಡಿ ಹೋಗಿರುತ್ತಾನೆ, ನಂತರ ವಾಹನವನ್ನು ನೋಡಲಾಗಿ ಕೆಎ-06-ಟಿಬಿ-2806 ಟ್ರ್ಯಾಕ್ಟರ್‌ ಮತ್ತು ಟ್ರೈಲರ್ ನಂ- ಕೆಎ-06-ಟಿಬಿ-2807 ಆಗಿದ್ದು, ನಂತರ ಸದರಿ ವಾಹನವನ್ನು ಮತ್ತೊಬ್ಬನ ಚಾಲಕನ ಸಹಾಯದಿಂದ ಠಾಣೆಗೆ ರಾತ್ರಿ 10-00 ಗಂಟೆಗೆ ಅರ್ಧ ತಿಂಬಿದ್ದ ಕೆಎ-06-ಟಿಬಿ-2806 ಟ್ರ್ಯಾಕ್ಟರ್‌ ಮತ್ತು ಟ್ರೈಲರ್ ನಂ- ಕೆಎ-06-ಟಿಬಿ-2807 ನಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ವಾಹನದ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಿಬೇಕೆಂದು ತಂದು ಹಾಜರುಪಡಿಸಿ ವರದಿಯನ್ನು ನೀಡಿರುತ್ತೇನೆ ಎಂದು ನೀಡಿದ ವರದಿ ಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ತಾವರೆಕೆರೆ ಪೊಲೀಸ್ ಠಾಣಾ  ಮೊ.ನಂ-51/2017 ಕಲಂ-  379 IPC

ದಿನಾಂಕ:06-04-17 ರಂದು ಮದ್ಯಾಹ್ಯ ಪಿರ್ಯಾದಿ ಶ್ರೀನಿವಾಸರೆಡ್ಡಿ  ಬಿನ್ ಲಕ್ಷ್ಮೀರೆಡ್ಡಿ, 32 ವರ್ಷ, ರೆಡ್ಡಿ ಜನಾಂಗ,  ಕೆಎ-34-ಎ-6085 ನೇ ಟ್ಯಾಂಕರ್ ಲಾರಿ ಚಾಲಕ, ಬೆಳಗಲ್ ಕ್ರಾಸ್,  ರಾಮಾಂಜಿನಿನಗರ, ಬಳ್ಳಾರಿ. ಆದ ಇವರು ಠಾಣೆಗೆ ಹಾಜರಾಗಿ ಮದ್ಯಾಹ್ನ 1-00 ಗಂಟೆಯಿಂದ 1-30 ಗಂಟೆವರೆಗೆ ಕೊಟ್ಟ ಹೇಳಿಕೆ ಅಂಶವೇನೆಂದರೆ    ನಾನು ಈಗ್ಗೆ ಸುಮಾರು 2 ವರ್ಷಗಳಿಂದ ಕೆಎ-34-ಎ-6085 ನೇ ನಂಬರಿನ ಸಿಮೆಂಟ್ ಟ್ಯಾಂಕರ್ ಲಾರಿಯಲ್ಲಿ  ಚಾಲಕನಾಗಿ  ಕೆಲಸ ಮಾಡುತ್ತಿರುತ್ತೇನೆ.  ದಿನಾಂಕ 06-04-2017 ರಂದು ಬೆಳಗಿನಜಾವ ಸುಮಾರು 4-00 ಗಂಟೆ ಸಮಯದಲ್ಲಿ  ಬಳ್ಳಾರಿ ಜಿಲ್ಲೆ ತೋರಂಣಗಲ್ ನಲ್ಲಿರುವ ಜಿಂದಾಲ್ ಫ್ಯಾಕ್ಟರಿಯಲ್ಲಿ  ಸಿಮೆಂಟ್ ಗೆ ಮಿಶ್ರಣ ಮಾಡುವ ಸುಮಾರು 18 ಟನ್ ಪ್ಲೈ ಆಷ್ ಪೌಡರ್ ನ್ನು ಲೋಡ್ ಮಾಡಿಕೊಂಡು ಗೌರಿಬಿದನೂರು ತಾಲ್ಲೂಕು ತೊಂಡೆಬಾವಿಯಲ್ಲಿರುವ  ಎಸಿಸಿ ಸಿಮೆಂಟ್ ಫ್ಯಾಕ್ಟರಿಯಲ್ಲಿ ಅನ್ ಲೋಡ್ ಮಾಡಲು  ಚಳ್ಳಕೆರೆ ಕಡೆಗೆ  ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದೆನು. ಬೆಳಿಗ್ಗೆ ಸುಮಾರು 8-30 ಗಂಟೆ ಸಮಯದಲ್ಲಿ ರಾಂಪುರ ಗೇಟ್ ಸಮೀಪ  ಖಾಕಿ ಶರ್ಟ ಹಾಕಿಕೊಂಡಿದ್ದ ಒಬ್ಬ ವ್ಯಕ್ತಿ  ನನ್ನ ಲಾರಿಗೆ ಕೈ ಹಾಕಿದನು ನಾನು ಲಾರಿ ಚಾಲಕ ಅಥವ ಕ್ಲೀನರ್ ಇರಬೇಕೆಂತ ಲಾರಿಯನ್ನು ನಿಲ್ಲಿಸಿ ಹತ್ತಿಸಿಕೊಂಡೆನು. ಇಬ್ಬರು ಮಾತನಾಡಿಕೊಂಡು ಚಳ್ಳಕೆರೆಗೆ ಬರುತ್ತಿದ್ದೆವು ಆತನು ನಾನು ಎನ್.ಕೆ ಟ್ರಾನ್ಸ್ ಪೊರ್ಟ್ ನಲ್ಲಿ ಕ್ಲೀನರ್ ಮತ್ತು ಡ್ರೈವರ್ ಕೆಲಸ ಮಾಡುತ್ತಿರುತ್ತೇನೆ. ನಮ್ಮ ಲಾರಿಯನ್ನು  ಚಳ್ಳಕೆರೆಯಲ್ಲಿ ರಿಪೇರಿಗೆ ಬಿಟ್ಟಿದ್ದಾರೆ ಎಂದು ಹೇಳಿ ನಾನು ನಿನ್ನ  ಲಾರಿಗೆ  ಕ್ಲೀನರ್  ಕೆಲಸ ಮಾಡುತ್ತೇನೆ ಎಂದು ಹೇಳಿದನು ನಾನು  ಇದು ಕಂಪನಿ ಲಾರಿ  ಕಂಪನಿಯಲ್ಲಿ ಕೇಳಬೇಕು ಎಂದು  ಹೇಳಿದೆ  ಹೆಸರು ಊರು ಕೇಳಲಾಗಿ  ಸಂತೋಷ,  ಜಗಳೂರು ಎಂದು ತಿಳಿಸಿ ನನಗೆ ಪರಿಚಯವಾದನು. ಮಧ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ  ಶಿರಾ ತಾಲ್ಲೂಕು ಉಜ್ಜನಕುಂಟೆ ಸಮೀಪ ಒಂದು ಢಾಭ ಬಳಿ ಲಾರಿಯನ್ನು ನಿಲ್ಲಿಸಿ ಆ ಡಾಭಾದಲ್ಲಿ ಇಬ್ಬರು ರೊಟ್ಟಿ ಚಿಕನ್, ರೈಸ್ ತಿಂದೆವು. ನಾನು ಲೆಟ್ರಿನ್ ಗೆ ಹೋಗಬೇಕಾದ್ದರಿಂದ ನನ್ನ ಬಳಿ ಇದ್ದ ಮೊಬೈಲ್ ಪೋನನ್ನು  ಸಂತೋಷನ ಬಳಿ ಕೊಟ್ಟು ಲಾರಿಯ ಬಳಿ ಇರುವಂತೆ ಹೇಳಿ ನಾನು ಲೆಟ್ರೀನ್ ಗೆ ಹೋಗಿ  ವಾಪಾಸ್ ಹೊರಗಡೆ ಬಂದು ನೋಡಿದಾಗ  ನನ್ನ ಲಾರಿ ಇರಲಿಲ್ಲ. ಆಗ ಮಧ್ಯಾಹ್ನ 12-30 ಗಂಟೆಯಾಗಿತ್ತು. ನಂತರ ನಾನು ಗಾಬರಿಗೊಂಡು  ಸಂತೋಷ ತೆಗೆದುಕೊಂಡು ಹೋಗಿರಬೇಕೆಂತ  ಹೈವೇಗೆ ಓಡಿ ಹೋಗಿ  ನೋಡಿದೆ ಲಾರಿ ಇರಲಿಲ್ಲ ಯಾವುದೋ ಬಲೋರೋ ಪಿಕಅಪ್ ವಾಹನಕ್ಕೆ ಕೈಮುಗಿದು ನಿಲ್ಲಿಸಿ ಹತ್ತಿಕೊಂಡು ಹತ್ತಿರದ ಪೊಲೀಸ್ ಠಾಣೆ ಎಲ್ಲಿದೆ ಎಂದು  ಕೇಳಿಕೊಂಡೆ ಅವರು  ತಾವರೆಕೆರೆ ಪೊಲೀಸ್ ಠಾಣೆ ಬಳಿ ಬಿಟ್ಟು  ಹೋದರು. ನನ್ನ ಲಾರಿಯನ್ನು ಸಂತೋಷ ಕಳ್ಳತನ ಮಾಡಿಕೊಂಡು ಎಲ್ಲಿಗೋ ತೆಗೆದುಕೊಂಡು ಹೋಗಿರುತ್ತಾನೆ. ಲಾರಿಯಲ್ಲಿರುವ 18 ಟನ್ ನ ಪ್ಲೈ ಆಷ್ ನ ಬೆಲೆ ಸುಮಾರು 4 ಲಕ್ಷ ರೂ  ಲಾರಿಯ ಬೆಲೆ  ಸುಮಾರು 20 ಲಕ್ಷವಾಗುತ್ತೆ  ನನ್ನ ಲಾರಿಯನ್ನು ಪತ್ತೆ ಮಾಡಿಕೊಡಬೇಕೆಂತ  ಕೋರುತ್ತೇನೆ.  ನನಗೆ ಓದಲು ಬರೆಯಲು ಬಾರದ ಕಾರಣ ಈ ನನ್ನ  ಹೇಳಿಕೆ ನೀಡಿರುತ್ತೇನೆಂತ ದೂರಿನ ಸಾರಾಂಶವಾಗಿರುತ್ತೆ.

ಸಿ.ಎಸ್.ಪುರ ಠಾಣಾ  ಮೊ.ನಂ:41/2017. ಕಲಂ:143, 147, 148, 323, 504, 427 ರೆ/ವಿ 149 ಐಪಿಸಿ

ದಿನಾಂಕ:06.04.2017 ರಂಧು ಪಿರ್ಯಾದುದಾರರಾದ  ರಂಗಸ್ವಾಮಯ್ಯ ಬಿನ್  ಲೇಟ್ ರಂಗಯ್ಯ, 52 ವರ್ಷ,  ವಕ್ಕಲಿಗರು, ಹುಲ್ಲೇಕೆರೆ ಗ್ರಾಮ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕು ರವರು ಠಾಣೆಗೆ  ಹಾಜರಾಗಿ ಸಂಜೆ 7.30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ಹಿಂಡಿಸ್ಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ  ಸೇರಿದ ಖಾನೇಷು ಮಾರಿ  ನಂ:44 ರಲ್ಲಿ  45*42 ಅಡಿ ನಿವೇಶನ ಇದ್ದು, ಇದರಲ್ಲಿ 43*26,1/2 ಅಡಿಗಳಲ್ಲಿ ವಾಸದ ಮನೆಯನ್ನು  ಕಟ್ಟಿಕೊಂಡು ಅನುಭವದಲ್ಲಿರುತ್ತೇನೆ, ಇನ್ನೂ ಉಳಿದ ಜಾಗದಲ್ಲಿ ಖಾಲಿ ಇದ್ದು ಧನಕರು ಕಟ್ಟುತ್ತಿದ್ದೆನು, ಮೇಲ್ಕಂಡ   ಖಾನೇಷು ಮಾರಿ  ದಾಖಲೆಯು ಮಂಡಲ ಪಂಚಾಯ್ತಿ ಇದ್ದಾಗ ಆಗಿತ್ತು, ಈಗ ಈ ಜಮೀನಿಗೆ ಸಂಬಂದ ಪಟ್ಟಂತೆ  ನಮ್ಮ  ಗ್ರಾಮದವರೇ ಆದ ಶ್ರೀರಂಗಯ್ಯ ಬಿನ್  ಲೇಟ್ ರಂಗಯ್ಯ, ಇವನು ಫಾರಿಕತ್ತು ಆದಾರದ ಮೇಲೆ ಗ್ರಾಮ ಪಂಚಾಯ್ತಿಗೆ ದಾಖಲೆ ಕೊಟ್ಟು ಖಾತೆ ಮಾಡಿಸಿಕೊಂಡಿರುತ್ತಾನೆ, ಈ ವಿಚಾರ  ತಿಳಿದು  ಹಿಂಡಿಸಿಗೆರೆ  ಗ್ರಾಮ ಪಂಚಾಯ್ತಿ ಪಿ.ಡಿ.ಓ ಗೆ ತಿಳಿಸಿದೆನು, ಈ ಜಾಗ ನಿಮ್ಮದೇ ಅಂತ ತಿಳಿಸಿದರು, ಆದರೂ ಈ ದಿನ ದಿನಾಂಕ:06.04.2017 ರಂದು ಬೆಳಗ್ಗೆ 7.30 ಗಂಟೆಗೆ  ಖಾಲಿ ಇದ್ದ ನಮ್ಮ  ಜಾಗಕ್ಕೆ ಶ್ರೀರಂಗಯ್ಯ, ಇವರ ಹೆಂಡತುಇ ಲತಾ ಎಂಬುವರು  ಇಟ್ಟಿಗೆಗಳನ್ನು  ಟ್ರಾಕ್ಟರ್ ನಲ್ಲಿ ತಂದು ಇಳಿಸುತಿದ್ದರು, ನಾನು ಲತಾರವರನ್ನು ಕೇಳಿದಾಗ ಲತಾಳು ಊರಿನೊಳಗೆ  ಹೋಗಿ ಕೃಷ್ಣಮೂರ್ತಿ ಹೆಚ್.ಸಿ & ನಟರಾಜು, ರಮೇಶ, ಚಂದ್ರ, ರಂಗಸ್ವಾಮಿ  ಇವರುಗಳು ಏಕಾಏಕಿ ನಮಗೆ ಬಾಯಿಗೆ ಬಂದಂತೆ ಬೈದು  , ಮೇಲ್ಕಂಡ  ನಟರಾಜ  ಎಂಬುವನು ನನ್ನ ಹೆಂಡತಿ ವಿಜಯಮ್ಮನಿಗೆ  ಕಾಲಿನಿಂದ ಹೊದ್ದು, ನೋವುಂಟು ಮಾಡಿದನು, ನಂತರ ನನಗೂ ಕೈಗಳಿಂದ ಮೈಕೈಗೆ ನೋವಾಗುವಂತೆ ಹೊಡೆದನು, ಮತ್ತು ರಂಗಸ್ವಾಮಿಯು  ಸ್ನಾನದ  ಮನೆಯ ಶೀಟುಗಳು & ಶೌಚಾಲಯದ  ಶೀಟುಗಳನ್ನು ದೊಣ್ಣೆಯಿಂದ ಹೊಡೆದು, ಚೂರು ಚೂರು ಮಾಡಿದನು, ಹಾಗೂ ಅಕ್ರಮವಾಗಿ ಖಾತೆ ಮಾಡಿಸಲು & ಈ ದಿನ ಮೇಲ್ಕಂಡವರು  ಬಂದು ಗಲಾಟೆ ಮಾಡಲು ಕೃಷ್ಣಮೂರ್ತಿ ಎಂಬುವನ ಕಮ್ಮಕ್ಕಿನಿಂದ  ಮಾಡಿರುತ್ತಾರೆ,  ನಂತರ ನನ್ನ  ಹೆಂಡತಿಯನ್ನು ಸಿ.ಎಸ್.ಪುರ  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುತ್ತೇನೆ ಇತ್ಯಾದಿಯಾಗಿ ದೂರು ನೀಡಿದನ್ನು ಸ್ವೀಕರಿಸಿ  ಪ್ರಕರಣ ದಾಖಲಿಸಿರುತ್ತೆ.

ಹಂದನಕೆರೆ ಪೊಲೀಸ್ ಠಾಣಾ ಮೊ ನಂ-23/2017 ಕಲಂ-279, 337, 304(ಎ) ಐಪಿಸಿ ಜೊತೆಗೆ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:06/04/2017 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಪಿರ್ಯಾದುದಾ ಗೌಸ್‌ ಮೊಹಿದ್ದೀನ್ ಬಿನ್ ರಸೂಲ್ ಸಾಭ್, 42 ವರ್ಷ, ಆರ್ಟಿಸ್ಟಿ್ ಮುಸ್ಲಿಂ , ಮಹಾಲಕ್ಷ್ಮಿ ಬಡಾವಣಿ, ಚಿ ನಾ ಹಳ್ಳಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ ದಿನಾಂಕ:02/04/2017 ರಂದು ಪಿರ್ಯಾದಿ ಅರಸೀಕೆರೆ ತಾಲ್ಲೋಕಿನ ಕಡ್ಲೇಮೊಗ್ಗೆಗೆ ತನ್ನ ಸ್ನೇಹಿತನ ಮನೆಯಲ್ಲಿ ಇಟ್ಟುಕೊಂಡಿದ್ದ ಸಮಾರಂಭಕ್ಕೆ ಹೋಗಲು ಚಿ ನಾ ಹಳ್ಳಿಯಿಂದ ಹಂದನಕೆರೆಗೆ ಬಂದು ಅಲ್ಲಿಂದ ತನ್ನ ಸ್ನೇಹಿತರಾದ ಶಿವಕುಮಾರ್‌ ಮತ್ತು ಚಂದ್ರು ರವರು ಅವರ ಬಾಬ್ತು ಕೆಎ-51 ಇಎಲ್-9423 ನೇ ವಾಹನದಲ್ಲಿ ಹಂದನಕೆರೆಯಿಂದ ಕಡ್ಲೇಮೊಗ್ಗೆಗೆ ಹೋಗುತ್ತಿರುವಾಗ ರಾಮಘಟ್ಟ ರಸ್ತೆಯ ಇಟ್ಟಿಗೆ ಕಾರ್ಖಾನೆಯ ಸಮೀಪ ಸುಮಾರು 6-00 ಗಂಟೆ ಸಮಯದಲ್ಲಿ ಹಿಂದೆ ಬರುತ್ತಿದ್ದು ತನ್ನ ಸ್ನೇಹಿತ ಶಿವಕುಮಾರ್‌ ಮತ್ತು ಚಂದ್ರು ಅವರ ವಾಹನ ಕಡೆಯಿಂದ ಇದ್ದಕ್ಕಿಂದಂತೆ ಜೋರಾಗಿ ಶಬ್ದ ಕೇಳಿದಾಗ ಪಿರ್ಯಾದಿ ತಮ್ಮ ವಾಹನ ನಿಲ್ಲಿಸಿ ಹಿಂತಿರುಗಿ ನೋಡಲಾಗಿ ತನ್ನ ಸ್ನೇಹಿತನ ವಾಹನಕ್ಕೆ ಬೇರೊಂದು ಮೋಟಾರ್‌ ಸೈಕಲ್ ಹಿಂದಿನಿಂದ ಡಿಕ್ಕಿ ಹೊಡೆಸಿದ್ದರಿಂದ ತನ್ನ ಸ್ನೇಹಿತ ಕೆಳಗೆ ಬಿದ್ದದ್ದನ್ನು ನೋಡಿ ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಸ್ನೇಹಿತ ಶಿವಕುಮಾರ್‌ ನಿಗೆ ತಲೆ ಮತ್ತು ಮುಖದ ಭಾಗಕ್ಕೆ ತೀವ್ರಸ್ವರೂಪದ ರಕ್ತ ಗಾಯವಾಗಿ ಜೊತೆಯಲ್ಲಿದ್ದ ಚಂದ್ರು ರವರಿಗೂ ಗಾಯಗಳಾಗಿದ್ದವು. ನಂತರ ಅಪಘಾತಪಡಿಸಿದ ವಾಹನದ ನಂಬರ್‌ ನೋಡಲಾಗಿ ಕೆಎ-44 ಎಸ್‌‌-5687 ನೇ ವಾಹನವಾಗಿದ್ದು ಅದರ ಚಾಲಕ ತಕ್ಷಣ ಅಲ್ಲಿಂದ ಓಡಿ ಹೋಗಿದನು. ಕೂಡಲೇ ಪಿರ್ಯಾದಿ ಮತ್ತು ಚಂದ್ರು 108 ಅಂಬುಲೆನ್ಸ್ ಗೆ ಪೋನ್ ಮಾಡಿ ತಿಪಟೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್ ಗೆ ತೋರಿಸಿ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಸ್ನೇಹಿತ ಶಿವಕುಮಾರ್‌ ಚಿಕಿತ್ಸೆ ಫಲಕಾರಿಯಾಗದೇ ದಿ:05/04/2017 ರಂದು ರಾತ್ರಿ ಸುಮಾರು 2-00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ. ಮೃತನ ಕಡೆಯವರು ಯಾರು ಸ್ಥಳದಲ್ಲಿ ಇರದ ಕಾರಣ ಅವರು ಬಂದ ನಂತರ ನಾನು ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆಂತ ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ ಮೊ. ಸಂ 36/2017 u/s 379 IPC

ದಿನಾಂಕ:-06/04/2017 ರಂದು ರಾತ್ರಿ 07-10 ಗಂಟೆಗೆ ಪಿರ್ಯಾದಿ ದೀಪಕ್, ಆರ್. ಬಿನ್ ಟಿ. ರಂಗಪ್ಪ, 27 ವರ್ಷ ,ಗೊಲ್ಲರ ಜನಾಂಗ, ಕೆನರಾ ಬ್ಯಾಂಕ್ , ಎಸ್ ಐ ಟಿ. ಶಾಖೆಯಲ್ಲಿ ಕೆಲಸ, ವಾಸ :- ಕೃಷ್ಣ ನಿಲಯ, 3ನೇ ಮೈನ್ 3ನೇ ಕ್ರಾಸ್, 2ನೇ ಬ್ಲಾಕ್,  ಕುವೆಂಪುನಗರ, ತುಮಕೂರು. ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೆನೆಂದರೆ  ದಿ: 30-03-2017 ರಂದು ಮಧ್ಯಾಹ್ನ 3-00 ಗಂಟೆಯಲ್ಲಿ ಪಿರ್ಯಾದಿಯು ತಮ್ಮ ಬಾಬ್ತು 40,000/-ರೂ ಬೆಲೆ ಬಾಳುವ KA 06 ES 1894 ಬಜಾಜ್ ಡಿಸ್ಕವರ್ ದ್ವಿ ಚಕ್ರ ವಾಹನವನ್ನು ಮನೆಯ ಮುಂದಿನ ರಸ್ತೆಯ ಮರದ ಕೆಳಗೆ ನಿಲ್ಲಿಸಿ ರಾತ್ರಿ ಸುಮಾರು 8-00 ಗಂಟೆಯಲ್ಲಿ ನೋಡಿಕೊಳ್ಳಲಾಗಿ ಸದರಿ ವಾಹನವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರು

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 30/2017 ಕಲಂ 468,471,420, 120(ಬಿ) ಐಪಿಸಿ

ದಿ:06/04/2017 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿ ವೆಂಕಟಾಚಲಪತಿ ವಿ , ಸಹಾಯಕ ಶಾಖಾಧಿಕಾರಿ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ( ಯು ಐ ಡಿ ಎ ಐ) ಪ್ರಾಂತೀಯ ಕಚೇರಿ, ನಂ 49, ಖನಿಜ ಭವನ ರೇಸ್‌ ಕೋರ್ಸ್ ರಸ್ತೆ, ಬೆಂಗಳೂರು-56001  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಹಾಗೂ ಶ್ರೀ ಮಹೇಶ್‌ ಹೆರವಟ್ಟಿ ಖುದ್ದಾಗಿ ದಿನಾಂಕ:06/04/2017 ರಂದು ಮದ್ಯಾಹ್ನ 1-15 ಕ್ಕೆ  ನಂದಗೋಕುಲ್‌ ಕಂಪ್ಯೂಟರ್ ಎಜುಕೇಷನ್‌ ಸೆಂಟರ್‌ ಗೆ ಬೇಟಿ ನೀಡಿ ವಿಚಾರಿಸಲಾಗಿ ಶ್ರೀ ರಂಗರಾಜು , ಮುಖ್ಯಸ್ಥ  ನಂದಗೋಕುಲ್‌ ಕಂಪ್ಯೂಟರ್ ಎಜುಕೇಷನ್‌ ಸೆಂಟರ್‌ ನಲ್ಲಿ ನಮ್ಮ ಸಿಬ್ಬಂದಿಯು ತಿಳಿಯದೆ ಆದಾರ್‌ ಮೂಲಪ್ರತಿಯನ್ನು ಕಂಪ್ಯೂಟರ್‌ ಸಾಪ್ಟ್ ವೇರ್ ಸೈಷ್ಟಿಸಿ ತಿದ್ದಿ ಪ್ರಿಂಟ್‌ ಮಾಡಿ ಕೊಟ್ಟಿರುವುದಾಗಿ ಒಪ್ಪಿರುತ್ತಾರೆ.  ಸರ್ಕಾರಿ ಗುರುತು/ದಾಖಲಾತಿ ಸುಳ್ಳು ಸೃಷ್ಟಿ ಮಾಡುವುದು ಹಾಗೂ ವಂಚಿಸುವ ಉದ್ದೇಶ ಹೊಂದಿರುವುದು ಕಂಡು ಬಂದಿರುತ್ತೆ.  ಈ ಮೂಲಕ ಮೇಲ್ಕಂಡ ವಿಷಯವಾಗಿ ಕಾನೂನು ಕಾಯಿದೆಗಳಾದ 468,471,420, 120(ಬಿ) ಐಪಿಸಿ  ರೀತ್ಯಾ ಸೂಕ್ತ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸಲು ಕೋರಿ ಇದರೊಂದಿಗೆ  ಉದ್ದೇಶಕ್ಕೋಸ್ಕರ 1] ಪೆರಿಸ್ವಾಮಿ 2] ರತ್ನಮ್ಮ 3] ಕಾವ್ಯ  ರವರ ಮೂಲ ಆದಾರ್ ಜೆರಾಕ್ಸ್‌‌ ಪ್ರತಿಗಳನ್ನು ದೃಢೀಕರಿಸಿ ನೀಡಲಾಗಿರುತ್ತೆಂತಾ ಇತ್ಯಾದಿಯಾಗಿ ನೀಡಿದ ಲಿಖಿತ ದೂರಿನ ಅಂಶ.

ಸಿ.ಎಸ್.ಪುರ ಠಾಣಾ  ಮೊ.ನಂ:41/2017. ಕಲಂ:143, 147, 148, 323, 504, 427 ರೆ/ವಿ 149 ಐಪಿಸಿ

ದಿನಾಂಕ:06.04.2017 ರಂಧು ಪಿರ್ಯಾದುದಾರರಾದ  ರಂಗಸ್ವಾಮಯ್ಯ ಬಿನ್  ಲೇಟ್ ರಂಗಯ್ಯ, 52 ವರ್ಷ,  ವಕ್ಕಲಿಗರು, ಹುಲ್ಲೇಕೆರೆ ಗ್ರಾಮ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕು ರವರು ಠಾಣೆಗೆ  ಹಾಜರಾಗಿ ಸಂಜೆ 7.30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ಹಿಂಡಿಸ್ಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ  ಸೇರಿದ ಖಾನೇಷು ಮಾರಿ  ನಂ:44 ರಲ್ಲಿ  45*42 ಅಡಿ ನಿವೇಶನ ಇದ್ದು, ಇದರಲ್ಲಿ 43*26,1/2 ಅಡಿಗಳಲ್ಲಿ ವಾಸದ ಮನೆಯನ್ನು  ಕಟ್ಟಿಕೊಂಡು ಅನುಭವದಲ್ಲಿರುತ್ತೇನೆ, ಇನ್ನೂ ಉಳಿದ ಜಾಗದಲ್ಲಿ ಖಾಲಿ ಇದ್ದು ಧನಕರು ಕಟ್ಟುತ್ತಿದ್ದೆನು, ಮೇಲ್ಕಂಡ   ಖಾನೇಷು ಮಾರಿ  ದಾಖಲೆಯು ಮಂಡಲ ಪಂಚಾಯ್ತಿ ಇದ್ದಾಗ ಆಗಿತ್ತು, ಈಗ ಈ ಜಮೀನಿಗೆ ಸಂಬಂದ ಪಟ್ಟಂತೆ  ನಮ್ಮ  ಗ್ರಾಮದವರೇ ಆದ ಶ್ರೀರಂಗಯ್ಯ ಬಿನ್  ಲೇಟ್ ರಂಗಯ್ಯ, ಇವನು ಫಾರಿಕತ್ತು ಆದಾರದ ಮೇಲೆ ಗ್ರಾಮ ಪಂಚಾಯ್ತಿಗೆ ದಾಖಲೆ ಕೊಟ್ಟು ಖಾತೆ ಮಾಡಿಸಿಕೊಂಡಿರುತ್ತಾನೆ, ಈ ವಿಚಾರ  ತಿಳಿದು  ಹಿಂಡಿಸಿಗೆರೆ  ಗ್ರಾಮ ಪಂಚಾಯ್ತಿ ಪಿ.ಡಿ.ಓ ಗೆ ತಿಳಿಸಿದೆನು, ಈ ಜಾಗ ನಿಮ್ಮದೇ ಅಂತ ತಿಳಿಸಿದರು, ಆದರೂ ಈ ದಿನ ದಿನಾಂಕ:06.04.2017 ರಂದು ಬೆಳಗ್ಗೆ 7.30 ಗಂಟೆಗೆ  ಖಾಲಿ ಇದ್ದ ನಮ್ಮ  ಜಾಗಕ್ಕೆ ಶ್ರೀರಂಗಯ್ಯ, ಇವರ ಹೆಂಡತುಇ ಲತಾ ಎಂಬುವರು  ಇಟ್ಟಿಗೆಗಳನ್ನು  ಟ್ರಾಕ್ಟರ್ ನಲ್ಲಿ ತಂದು ಇಳಿಸುತಿದ್ದರು, ನಾನು ಲತಾರವರನ್ನು ಕೇಳಿದಾಗ ಲತಾಳು ಊರಿನೊಳಗೆ  ಹೋಗಿ ಕೃಷ್ಣಮೂರ್ತಿ ಹೆಚ್.ಸಿ & ನಟರಾಜು, ರಮೇಶ, ಚಂದ್ರ, ರಂಗಸ್ವಾಮಿ  ಇವರುಗಳು ಏಕಾಏಕಿ ನಮಗೆ ಬಾಯಿಗೆ ಬಂದಂತೆ ಬೈದು  , ಮೇಲ್ಕಂಡ  ನಟರಾಜ  ಎಂಬುವನು ನನ್ನ ಹೆಂಡತಿ ವಿಜಯಮ್ಮನಿಗೆ  ಕಾಲಿನಿಂದ ಹೊದ್ದು, ನೋವುಂಟು ಮಾಡಿದನು, ನಂತರ ನನಗೂ ಕೈಗಳಿಂದ ಮೈಕೈಗೆ ನೋವಾಗುವಂತೆ ಹೊಡೆದನು, ಮತ್ತು ರಂಗಸ್ವಾಮಿಯು  ಸ್ನಾನದ  ಮನೆಯ ಶೀಟುಗಳು & ಶೌಚಾಲಯದ  ಶೀಟುಗಳನ್ನು ದೊಣ್ಣೆಯಿಂದ ಹೊಡೆದು, ಚೂರು ಚೂರು ಮಾಡಿದನು, ಹಾಗೂ ಅಕ್ರಮವಾಗಿ ಖಾತೆ ಮಾಡಿಸಲು & ಈ ದಿನ ಮೇಲ್ಕಂಡವರು  ಬಂದು ಗಲಾಟೆ ಮಾಡಲು ಕೃಷ್ಣಮೂರ್ತಿ ಎಂಬುವನ ಕಮ್ಮಕ್ಕಿನಿಂದ  ಮಾಡಿರುತ್ತಾರೆ,  ನಂತರ ನನ್ನ  ಹೆಂಡತಿಯನ್ನು ಸಿ.ಎಸ್.ಪುರ  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುತ್ತೇನೆ ಇತ್ಯಾದಿಯಾಗಿ ದೂರು ನೀಡಿದನ್ನು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 65 guests online
Content View Hits : 322826