lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 6 7 8 9
10 11 12 13 14 15 16
17 18 19 20 21 22 23
24 25 26 27 28 29 30
Wednesday, 05 April 2017
Crime Incidents 5-04-17

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 09/2017 ಕಲಂ 174 (ಸಿ) ಸಿ.ಆರ್‌.ಪಿ.ಸಿ

ದಿನಾಂಕ: 04-04-2017 ರಂದು ಮದ್ಯಾಹ್ನ 1-00 ಗಂಟೆಗೆ ತುಮಕೂರು ಟೌನ್, ಗೋಕುಲ ಬಡಾವಣೆ, 2 ನೇ ಮೇನ್ ವಾಸಿ ಶ್ರೀಮತಿ ನಂಜಮ್ಮ ಆರ್‌.ಸಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಮಗೆ ದೀಪಕ್‌‌ ಹಾಗೂ ರೂಪ ಎಂಬ ಇಬ್ಬರು ಮಕ್ಕಳಿದ್ದು, ನನ್ನ ಮಗ ದೀಪಕ್‌‌‌ ಈಗ್ಗೆ ಸುಮಾರು 4 ವರ್ಷಗಳ ಹಿಂದೆ ತೀರಿಕೊಂಡಿದ್ದು, ನಮ್ಮ ಮಗಳು ರೂಪಳನ್ನು ಬೆಂಗಳೂರು ವಾಸಿ ಸತೀಶ್‌‌ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು, ನನ್ನ ಮಗಳು ರೂಪ ಬೆಂಗಳೂರಿನಲ್ಲಿ ಇಂಜಿನಿಯರಿಂಗ್‌‌ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿ ಆಕೆಯ ಗಂಡನೊಂದಿಗೆ ವಾಸವಾಗಿರುತ್ತಾಳೆ.  ನಮ್ಮ ಯಜಮಾನರು ಹೆಚ್.ಎಂ.ಟಿ. ಯಲ್ಲಿ ಸೆಕ್ಯೂರಿಕೆ ಕೆಲಸ ಮಾಡುತ್ತಿದ್ದು ಈಗ್ಗೆ ಸುಮಾರು 4-5 ವರ್ಷಗಳ ಹಿಂದ ಸ್ವಯಂ ನಿವೃತ್ತಿ ಪಡೆದಿದ್ದು, ನಮ್ಮ ಸ್ವಂತ ಮನೆಯಲ್ಲಿಯೇ ವಾಸವಾಗಿದ್ದೆವು ನಮ್ಮ ಯಜಮಾನರು ಮೊದಲಿನಿಂದಲೂ ಹೇಳದೇ ಕೇಳದೇ ಎಲ್ಲೆಂದರಲ್ಲಿಗೆ ಹೋಗಿ 2-3 ದಿನಗಳ ನಂತರ ಬರುತ್ತಿದ್ದರು.  ಅದರಂತೆ ದಿನಾಂಕ: 02-04-2017 ರಂದು ಮದ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ಮನೆಯಲ್ಲಿ ಊಟ ಮಾಡಿಕೊಂಡು ಮಧುಗಿರಿಗೆ ಹೋಗಿ ಬರುತ್ತೇನೆಂತಾ ಹೇಳಿ ನಮ್ಮ ಬಾಬ್ತು ಕೆ.ಎ-06-ಎನ್- 4532 ನೇ ಮಾರುತಿ ಆಕ್ಟೋ ಕಾರಿನ್ನು ತೆಗೆದುಕೊಂಡು ಅವರೇ ಡ್ರೈವಿಂಗ್‌ ಮಾಡಿಕೊಂಡು ಹೋಗಿದ್ದರು.  ನಿನ್ನೆ ದಿನ ದಿನಾಂಕ: 03-04-2017 ರಂದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ತುಮಕೂರು ಟೌನ್ ಜಯನಗರ ಪೊಲೀಸರು ನಮ್ಮ ಮನೆಯನ್ನು ಪತ್ತೆ ಮಾಡಿಕೊಂಡು ಬಂದು ನಿಮ್ಮ ಯಜಮಾನರು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆಂತಾ ವಿಚಾರ ತಿಳಿಸಿದ್ದು, ತಕ್ಷಣ ನಾನು ಹಾಗೂ ನಮ್ಮ ಸಂಬಂಧಿಕರು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಳಿಗೆ ಹೋಗಿ ವಿಚಾರ ತಿಳಿಯಲಾಗಿ,  ದಿನಾಂಕ: 03-04-2017 ರಂದು ಮದ್ಯಾಹ್ನ ನಮ್ಮ ಯಜಮಾನರನ್ನು ಮಧುಗಿರಿಯಿಂದ ಆಸ್ಪತ್ರೆಯ ಆಂಬುಲೆನ್ಸ್‌‌ ವಾಹನದಲ್ಲಿ ಯಾರೋ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದರೆಂದು ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಮಯದಲ್ಲಿ ನಮ್ಮ ಯಜಮಾನರು ಸಾಯಂಕಾಲ ಸುಮಾರು 4-00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆಂತಾ ನಮ್ಮ ಯಜಮಾನರು ಯಾವುದೋ ವಿಷ ಸೇವನೆ ಮಾಡಿ ಮೃತಪಟ್ಟಿರಬಹುದೆಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ತಿಳಿದು ಬಂದಿರುತ್ತೆ.   ನಮ್ಮ ಯಜಮಾನರು ದಿನಾಂಕ: 02-04-2017 ರಂದು ಮದ್ಯಾಹ್ನ ನಮ್ಮ ಮನೆಯಿಂದ ಮಧುಗಿರಿಗೆ ಹೋಗಿ ಬರುತ್ತೇನೆಂತಾ ಹೇಳಿ ಹೋದವರು ವಾಪಾಸ್ಸು ಮನೆಗೆ ಬಂದಿರುವುದಿಲ್ಲ.   ನಮ್ಮ ಯಜಮಾನರು ಯಾವ ರೀತಿ ಮೃತಪಟ್ಟಿರುತ್ತಾರೆಂತಾ ತಿಳಿದು ಬಂದಿರುವುದಿಲ್ಲ.  ನಮ್ಮ ಯಜಮಾನರ ಸಾವಿನಲ್ಲಿ ಅನುಮಾನ ಇರುತ್ತೆ.  ನಾನು ನಮ್ಮ ಯಜಮಾನರ ಸಾವಿನ ವಿಚಾರವನ್ನು ಬೆಂಗಳೂರಿನಲ್ಲಿರುವ ನನ್ನ ಮಗಳು-ಅಳಿಯ ಹಾಗೂ ನಮ್ಮ ಸಂಬಂಧಿಕರಿಗೆಲ್ಲಾ ತಿಳಿಸಿ, ಅವರನ್ನು ಕರೆಸಿಕೊಂಡು ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ನಮ್ಮ ಯಜಮಾನರ ಶವವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ.   ತಾವು ದಯಮಾಡಿ ನಮ್ಮ ಯಜಮಾನರು ಯಾವ ಕಾರಣಕ್ಕಾಗಿ ಯಾವ ಸ್ಥಳದಲ್ಲಿ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾರೆಂತಾ ಕಂಡು ಹಿಡಿದು, ನಮ್ಮ ಯಜಮಾನರ ಸಾವಿಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಹಾಗೂ ನಮ್ಮ ಯಜಮಾನರ ಶವವನ್ನು ಅಂತಿಮ ಸಂಸ್ಕಾರ ಮಾಡಲು ಅನುವು ಮಾಡಿಕೊಡಬೇಕೆಂದು ಪಿರ್ಯಾದು ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-58/2017 ಕಲಂ 279.337 ಐ,ಪಿ,ಸಿ.

ದಿನಾಂಕ:04-04-2017 ರಂದು ಮದ್ಯಾಹ್ನ 03-30 ಗಂಟೆಗೆ ಪಿರ್ಯಾದುದಾರರಾದ ಸಿಂಧು,ಬಿ,ಎಸ್‌ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ:04-04-2017 ರಂದು ಬೆಳಿಗ್ಗೆ ಸುಮಾರು 09-30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ತಾಯಿಯಾದ ಪುಟ್ಟಗಂಗಮ್ಮ ಇಬ್ಬರೂ ನಮ್ಮ ಸ್ವಂತ ಕೆಲಸದ ನಿಮಿತ್ತ ನಮ್ಮ ಗ್ರಾಮದಿಂದ ತುಮಕೂರಿಗೆ ಹೋಗಲೆಂದು ಬಿದನಗೆರೆ ಗೇಟ್‌ನ ರಸ್ತೆಯ ಎಡಭಾಗದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ್ಗೆ, ಆಗ ಅದೇ ಸಮಯಕ್ಕೆ ತೊಂಡಗೆರೆ ಕಡೆಯಿಂದ ಬಿದನಗೆರೆ ಕಡೆಗೆ ಹೋಗಲು ಬಂದ ಕೆಎ-06-ಇ.ಡಬ್ಲ್ಯು-0147 ನೇ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ನನ್ನ ತಾಯಿ ಪುಟ್ಟಗಂಗಮ್ಮ ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ತಾಯಿ ಪುಟ್ಟಗಂಗಮ್ಮ ರವರಿಗೆ ಎಡಗಾಲಿನ ಮೂಳೆಗೆ ಬಲವಾದ ಪೆಟ್ಟು ಬಿದ್ದು, ದೇಹದ ಇತರೆ ಭಾಗಗಳಿಗೆ ಸಣ್ಣ ಪುಟ್ಟ ಗಾಯಗಳಾದವು. ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನ ಹೆಸರು ತಿಳಿಯಲಾಗಿ ಜಗದೀಶ ಬಿನ್ ಗಂಗಣ್ಣ ಎಂತಾ ತಿಳಿಯಿತು. ನಂತರ ನಾನು ಮತ್ತು ಸ್ಥಳದಲ್ಲಿಯೇ ಇದ್ದ ಈ ಅಪಘಾತವನ್ನು ಕಣ್ಣಾರೆ ಕಂಡ ದೇವಿಪ್ರಸಾದ್‌ ಹಾಗೂ ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನಾದ ಜಗದೀಶ ಎಲ್ಲರೂ ಸೇರಿಕೊಂಡು ಸ್ಥಳಕ್ಕೆ ಬಂದ ಯಾವುದೋ ಒಂದು ವಾಹನದಲ್ಲಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ಡಬ್ಲ್ಯು-0147 ನೇ ದ್ವಿಚಕ್ರ ವಾಹನದ ಸವಾರನಾದ ಜಗದೀಶ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂತಾ ನೀಡಿದ ದೂರನ್ನು ಪಡೆದು ಠಾಣಾ ಮೊ,ನಂ-58/2017 ಕಲಂ 279, 337 ಐ,ಪಿ,ಸಿ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್‌ ಠಾಣೆ  ಮೊ.ಸಂ 29/2017  ಕಲಂ  78(3) ಕೆ ಪಿ ಆಕ್ಟ್‌

ದಿ; 03/04/2017 ರಂದು ಸಂಜೆ 6-30 ಗಂಟೆಗೆ ನಾನು ಠಾಣೆಯಲ್ಲಿರುವಾಗ ಸೋದೇನಹಳ್ಳಿ ಗ್ರಾಮದಲ್ಲಿ ಮಟಕ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಸೋದೇನಹಳ್ಳಿ ಗ್ರಾಮದ ಶ್ರೀ ಆನೆ ಲಿಂಗೇಶ್ವರ ಸ್ವಾಮಿ ದೇವಸ್ಥಾನದ ಹತ್ತಿರ ಹೋಗಿ, ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ಗುಂಪು ಕಟ್ಟಿಕೊಂಡು ಮಟಕ ಜೂಜಾಟ ಆಡುತ್ತಿದ್ದು , ಆ ಗುಂಪಿನಲ್ಲಿ ಒಬ್ಬ ಆಸಾಮಿಯು  ಒಂದು ರೂಪಾಯಿಗೆ 70/- ರೂ  ಕೊಡುವುದಾಗಿ ಹೇಳಿತ್ತಾ,  ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದ ತಕ್ಷಣ ನಾವು ಆ ಮಟ್ಕಾ ಜೂಜುಕಟ್ಟೆಯ ಮೇಲೆ ದಾಳಿ ಮಾಡಲು ಹೊರಟಾಗ ಗುಂಪು ಸೇರಿದ್ದ ಜನರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು. ಅದರಲ್ಲಿ ಒಬ್ಬ ಆಸಾಮಿಯನ್ನು   ಸ್ಥಳದಲ್ಲೇ ಹಿಡಿದುಕೊಂಡು ವಿಚಾರ ಮಾಡಿ, ಆತನ ಹೆಸರು ತಿಳಿಯಲಾಗಿ ರಂಗನಾಥ ಬಿನ್ ನಾಗರಾಜಪ್ಪ, 23 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಸೋದೇನಹಳ್ಳಿ ಗ್ರಾಮ, ದೊಡ್ಡೇರಿ ಹೋ, ಮಧುಗಿರಿ ತಾ. ಎಂದು ತಿಳಿಸಿದ್ದು, ಆಸಾಮಿಯನ್ನು ಪರಿಶೀಲಿಸಿದಾಗ , ಆತನ ಬಳಿ ಒಂದು ಮಟ್ಕಾ ಚೀಟಿ ಮತ್ತು  ಜೂಜಾಟಕ್ಕೆ ಪಣವಾಗಿಟ್ಟಿದ್ದ 320/-ರೂ ನಗದು ಹಣ, ಆತನಲ್ಲಿ ಸಿಕ್ಕಿದ್ದು, ಒಂದು ಮಕಟ ಚೀಟಿ, ಮತ್ತು ಒಂದು ಲೇಡ್ ಪೆನ್ನ ದೊರೆತಿದ್ದು,ಅವುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿ ಮತ್ತು ಮಾಲಿನೊಂದಿಗೆ  ರಾತ್ರಿ 7-50 ಗಂಟೆಗೆ ಠಾಣೆಗೆ ಬಂದು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಲು  ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸುವಂತೆ ಸೂಚಿಸಿ ನೀಡಿದ ವರದಿ ಪಡೆದು ಘನ ನ್ಯಾಯಾಲಯದ ಅನುಮತಿ ಪಡೆದು ದಿನಾಂಕ:04/04/2017 ರಂದು ಬೆಳಗ್ಗೆ 11-00 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  38/2017   ಕಲಂ: 465.468.471  IPC

ದಿನಾಂಕ:04/04/2017ರಂದು  ಬೆಳಿಗ್ಗೆ 9:00 ಗಂಟೆಗೆ ಪಿರ್ಯಾದಿ ಕೆ.ಮುತ್ಯಾಲು, ಪೋತಗಾನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ, ರವರು ಠಾಣೆಗೆ  ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಈಗ್ಗೆ ಈಗ್ಗೆ 06 ತಿಂಗಳಿಂದ (ದಿ:17/09/2016) ರಿಂದ  ಪೋತಗಾನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ, ನಮ್ಮ ಗ್ರಾಮದ ಪಂಚಾಯ್ತಿ ವ್ಯಾಪ್ತಿಯ ದಳವಾಯಿಹಳ್ಳಿ ಗ್ರಾಮದ ಶ್ರೀಮತಿ ಮಂಜುಳ ಕೋಂ ಸಂಜೀವಪ್ಪ, ಎಂಬುವವರು ದಳವಾಯಿಹಳ್ಳಿ ಗ್ರಾಮದಲ್ಲಿ ಮನೆ ಕಟ್ಟಿದ್ದು ಸದರಿ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಮ ಪಂಚಾಯ್ತಿ ಯಿಂದ ನಿರಪೇಕ್ಷಣಾ ಪತ್ರದ ಅವಶ್ಯಕತೆ ಇದ್ದು ಸದರಿ ನಿರಾಪೇಕ್ಷಣಾ ಪತ್ರವನ್ನು ನಮ್ಮ ಗಮನಕ್ಕೆ ಬಾರದೇ ಅವರೇ ದಿನಾಂಕ:12/12/2016 ರಂದು ಸುಳ್ಳು ಸೃಷ್ಟನೆ ಮಾಡಿಕೊಂಡು ಸದರಿ ಪ್ರಮಾಣ ಪತ್ರವನ್ನು  ಸಂಬಂದಪಟ್ಟ  ಕೆ.ಇ.ಬಿ ರವರಿಗೆ ನೀಡಿ ವಿದ್ಯುತ್ ಸಂಪರ್ಕ ವನ್ನು ಪಡೆದಿರುತ್ತೇನೆ, ಈ ವಿಚಾರ ನಮಗೆ ದಿ:09/03/2017 ರಂದು ಗೊತ್ತಾಗಿರುತ್ತದೆ ಸದರಿ ವಿಚಾರವನ್ನು ನಮ್ಮ ಇಲಾಖಾ ಮೇಲಾಧಿಕಾರಿಗಳಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ , ನಿರಾಪೇಕ್ಷಣಾ ಪ್ರಮಾಣ ಪತ್ರ ವನ್ನು ಸುಳ್ಳು ಸೃಷ್ಟನೆ ಮಾಡಿಕೊಂಡು ವಿದ್ಯುತ್ ಸಂಪರ್ಕ ಪಡೆದಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ಇತ್ಯಾದಿಯಾಗಿ ನೀಡಿದ ಲಿಖೀತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ

 

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 64 guests online
Content View Hits : 322826