lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1
3 4 5 6 7 8 9
10 11 12 13 14 15 16
17 18 19 20 21 22 23
24 25 26 27 28 29 30
Sunday, 02 April 2017
Crime Incidents 02-04-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ.ನಂ 37/2017 ಕಲಂ 143, 147, 355, 504, 506 ರೆ/ವಿ 149 ಐ.ಪಿ.ಸಿ ಮತ್ತು ಕಲಂ: 3 (1) (r) 3 (1) (s) The SC & ST (Prevention Of Atracities) Amendment Act-2015

, ದಿನಾಂಕ:01/04/2017 ರಂದು ರಾತ್ರಿ 09-00 ಗಂಟೆಯಲ್ಲಿ ಫಿರ್ಯಾದಿ ಬಲ್ಲೇಮಹಳ್ಳಿ ಗ್ರಾಮದ ವಾಸಿಗಳಾದ  ಶ್ರೀನಿವಾಸ ಬಿನ್‌ ಸನ್ನಮೈಲಾರಪ್ಪ ಮತ್ತು ತಿಪ್ಪೇಸ್ವಾಮಿ ಬಿನ್ ಲೇಟ್‌ ದುರ್ಗಪ್ಪ ರವರು ಠಾಣೆಗೆ ಹಾಜರಾಗಿ, ನಾವು ಇದೇ ಗ್ರಾಮದ ಖಾಯಂ ನಿವಾಸಿಯಾಗಿದ್ದು ಆದಿ ಕರ್ನಾಟಕ ಜಾತಿಗೆ ಸೇರಿರುತ್ತೇವೆ. ನಾವು ಇದೇ ಗ್ರಾಮದ ವಾಸಿಯಾದ ವಕ್ಕಲಿಗರ ಜಾತಿಗೆ ಸೇರಿದ ಬುಡ್ಡನ್ನ ಬಿನ್‌ ಲೇಟ್ ಹನುಮಂತಪ್ಪ ನವರ ತೋಟದಲ್ಲಿ ದಿನ ಕೂಲಿ ನೌಕರರಾಗಿದ್ದು ಸರಿಯಷ್ಟೆ. ದಿನಾಂಕ:01/04/17 ರಂದು ಬೆಳಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ 1.ಸಣ್ಣವೆಂಕಟರೆಡ್ಡಿ 2.ಮಂಜುನಾಥರೆಡ್ಡಿ 3.ರಂಜಿತ್‌ಕುಮಾರ 4.ನರಸಿಂಹರೆಡ್ಡಿ ಬಿನ್‌ ಹಾವಲರೆಡ್ಡಿ 5.ಕೃಷ್ಣಾರೆಡ್ಡಿ ಬಿನ್‌ ಸಿದ್ದಾರೆಡ್ಡಿ 6.ವಿಜಯ್‌ಕುಮಾರ್‌ ಬಿನ್‌ ವಿ.ಚಿಂತಲಯ್ಯ 7.ವಿ.ಚಿಂತಲಯ್ಯ ಬಿನ್‌ ವೆಂಕಟರೆಡ್ಡಿ 8.ಆಂದ್ರದ ಕಣಿಕಲ್‌ ನರಸಿಂಹರೆಡ್ಡಿ 9. ಆಂದ್ರದ ಕಣಿಕಲ್‌ ಚನ್ನಾರೆಡ್ಡಿ ಈ 9 ಜನ ಸೇರಿಕೊಂಡು ನಮ್ಮ ಯಜಮಾನರ ತೋಟದಲ್ಲಿ ಅದೇ ಸಮಯಕ್ಕೆ ಗಲಾಟೆ ಮಾಡುತ್ತಿದ್ದರು ಆಗ ನಾವು ಎಂದಿನಂತೆ ಲೆ;ಸಕ್ಕೆ ಹೋದಾಗ ಈ ಗಲಾಟೆ ನೆಡೆಯುತ್ತಿತ್ತು ನಾವು ಅಂದರೆ ಶ್ರೀನಿವಾಸ ಮತ್ತು ತಿಪ್ಪೇಸ್ವಾಮಿ ಮಧ್ಯದಲ್ಲಿ ಹೋಗಿ ಗಲಾಟೆಯನ್ನು ಬಿಡಿಸಲು ಹೋದಾಗ ನಮ್ಮನ್ನು ಅವಾಚ್ಯ ಶಬ್ದಗಳಿಂದ ಹೋಗಲೇ ಮಾದಿಗ ನನ್ನ ಮಗನೆ ನೀನು ಮದ್ಯದಲ್ಲಿ ಬಂದರೆ ಚಪ್ಪಲಿ ಏಟು ತಿನ್ನುತ್ತೀಯ ಮತ್ತು ದೊಡ್ಡ ಮಾಂಸ ತಿನ್ನುವವನು ನಿನಗೇನು ಗೊತ್ತು ಸುಮ್ಮನೆ ಹೋಗಲೇ ನನ್ನ ಮಗನೆ ಅಂತಾ ನಾನಾ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಹಾಗೂ ಈ 9 ಜನ ಸೇರಿಕೊಂಡು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಲು ನಾವು ಅಡ್ಡ ಹೋದಾಗ ನಮ್ಮು ಚಪ್ಪಲಿಯಲ್ಲಿ ಹೊಡೆದಿರುತ್ತಾರೆ. ನೀವು ಸಣ್ಣ ನನ್ನ ಮಕ್ಕಳು ನೀವು ಈ ತೋಟದಲ್ಲಿ ಕೆಲಸ ಮಾಡಲು ಬಂದರೆ ನಿಮ್ಮ ಪ್ರಾಣ ತೆಗೆಯುತ್ತೇವೆ ಉಷಾರ್‌ ನನ್ನ ಮಕ್ಕಳಾ ಎಂತಾ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಂದರೆ ನಾವು ಜೀವನ ಮಾಡಲು ಹೇಗೆ ಅಂತಾ ಇವರ ಸಂಬಂಧಿಕರು ಆಂದ್ರದಿಂದ ಬಂದಂತಹ ಕಣೆಕಲ್‌ ನರಸಿಂಹರೆಡ್ಡಿ ಮತ್ತು ಕಣೆಕಲ್‌ ಚನ್ನಾರೆಡ್ಡಿ ಇವರಿಬ್ಬರೂ  ಅವರ ಜೊತೆಯಲ್ಲಿ ಸೇರಿಕೊಂಡು ನಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿರುತ್ತಾರೆ. ದಯವಿಟ್ಟು ಈ ವಿಚಾರದಲ್ಲಿ ಪ್ರಾಣ ರಕ್ಷಣೆ ಕೊಡಬೇಕೆಂದು ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.  

 

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ; 193/2017  ಕಲಂ: 353,504 ಐ ಪಿ ಸಿ

ದಿನಾಂಕ.01/04/2017 ರಂದು ರಾತ್ರಿ 7-30 ಗಂಟೆಗೆ ಪಿರ್ಯಾದಿಯಾದ ಪಿಎಸ್‌‌ಐ ಶ್ರೀ ಕೇಶವಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ.01/04/2017 ರಂದು ಸಂಜೆ 6-30 ಗಂಟೆಯಲ್ಲಿ ಠಾಣಾ ಮೊನಂ.192/2017 ಕಲಂ 323,504,354,506 ಭಾದಂಸಂ ರೀತ್ಯ ಬೊಮ್ಮಡಿಗೆರೆ ವಾಸಿ ಲೇಟ್‌‌.ಗೋವಿಂದರಾಜು ರವರ ಮಗ ಬೆಟ್ಟಸ್ವಾಮಿ ರವರ ಮೇಲೆ ಕೇಸು ದಾಖಲಾಗಿದ್ದು, ಬೆಟ್ಟಸ್ವಾಮಿ ರವರು ಕುಣಿಗಲ್‌ ಟೌನ್‌‌ ಕೆ.ಆರ್‌.ಎಸ್‌ ಅಗ್ರಹಾರದ ಕಡೆಯಿಂದ ಕುಣಿಗಲ್‌‌ನ ಹುಚ್ಚಮಾಸ್ತಿಗೌಡ ವೃತ್ತದ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾನೆಂದು ಬಾತ್ಮಿದಾರರಿಂದ ಮಾಹಿತಿ ಬಂದ ಮೇರೆಗೆ ನಾನು ಠಾಣೆಯಿಂದ ಸಂಜೆ 7-00 ಗಂಟೆಯಲ್ಲಿ ಸಿಬ್ಬಂದಿಯವರಾದ ಪಿಸಿ 277 ರವರೊಂದಿಗೆ ತಾಲ್ಲೊಕ್ ಕಛೇರಿ ಮುಂಭಾಗದ ತೆರಳಿ ರಸ್ತೆಯಲ್ಲಿ ನಿಂತಿರುವಾಗ ಬೆಟ್ಟಸ್ವಾಮಿ ದ್ವಿಚಕ್ರ ವಾಹನದಲ್ಲಿ ಬರುವುದನ್ನು ನೋಡಿ ಈ ಕೇಸಿನ ಪಿರ್ಯಾದಿ ಶಿವಕುಮಾರ್‌‌ ತೋರಿಸಿದಾಗ ಆತನನ್ನು ನಾವು ಸಂಜೆ 7-15 ಗಂಟೆ ಸಮಯದಲ್ಲಿ ಆತನನ್ನು ತಡೆದು ನಿಲ್ಲಿಸಿ ಅವನ ಹೆಸರು ವಿಳಾಸ ವಿಚಾರ ಮಾಡುವಾಗ ನನ್ನ ಸಮವಸ್ತ್ರವನ್ನು ಹಿಡಿದು ಎಳೆದಾಗ ಸಮವಸ್ತ್ರದ ಗುಂಡಿಗಳು ಕಿತ್ತು ಹೋದವು. ನನ್ನ ಜೊತೆಯಲ್ಲಿದ್ದ ಸಿಬ್ಬಂದಿ ಚಂದ್ರುರವರನ್ನು ತಳ್ಳಿ ಸೂಳೆ ಮಕ್ಕಳ ನನ್ನನ್ನು ಹಿಡಿಯಲು ಬರುತ್ತೀರಾ ಪೊಲೀಸ್ ನನ್ನ ಮಕ್ಕಳಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಅವನು ತಂದಿದ್ದ ದ್ವಿಚಕ್ರ ವಾಹನದಲ್ಲಿ ತಪ್ಪಿಸಿಕೊಂಡು ಹೊರಟು ಹೋದನು. ನಾವು ಹಿಂಭಾಲಿಸಿದಾಗ ಅವನು ಸಿಗಲಿಲ್ಲ. ಆತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇತ್ಯಾದಿಯಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

 

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  35/2017   ಕಲಂ: 323.324.504.506 RW 34 IPC

 

ದಿನಾಂಕ:01/04/2017 ರಂದು ಸಂಜೆ 05-00 ಗಂಟೆಯಲ್ಲಿ ಫಿರ್ಯಾದಿ ವೈ.ಎನ್‌ ಹೊಸಕೋಟೆ ವಾಸಿ ರವಿ. ಜಿ ಬಿನ್ ಲೇಟ್‌ ಗೋಪಾಲಪ್ಪ ರವರು ಠಾಣೆಗೆ ಹಾಜರಾಗಿ, ನಾನು ದಿನಾಂಕ:01/04/2017 ರಂದು ಮದ್ಯಾಹ್ನ 01-00 ಗಂಟೆಯಲ್ಲಿ ಕೋಟಗುಡ್ಡ ರಸ್ತೆಯಲ್ಲಿರುವ ಮದರ್‌ಸಾಬ್‌ ಮಿಲ್ಲಿನ ಮುಂಭಾಗದ ಮೈಧಾನದಲ್ಲಿ ಕ್ರಿಕೇಟ್‌ ಆಡುತ್ತಿದ್ದುದ್ದನ್ನು ನೋಡಲು ಹೋಗಿದ್ದೆನು ಆ ಸಂದರ್ಭದಲ್ಲಿ ಅಲ್ಲಿಗೆ ಇದೇ ಗ್ರಾಮದ ಅಂಬೇಡ್ಕರ್‌ ನಗರ ವಾಸಿಯಾದ ಬಿ.ಎ ರಾಮಚಂದ್ರ ರವರ ಮಗನಾದ ನವೀನ್‌ ಮತ್ತು ಆತನ ಸಹೋದರನಾದ ಅನಿಲ್‌, ಹಾಗೂ ಬಾಬು ರವರು ಅಲ್ಲಿಗೆ ದೊಣ್ಣೆ, ಕಟ್ಟಿಗೆ, ಚಾಕುಗಳನ್ನು ಹಿಡಿದು ಬಂದು ನನ್ನನ್ನು ಹೊಡೆಯಲು ಮುಂದಾದರು. ಅವರ ಅನಿರೀಕ್ಷಿತ ದಾಳಿಯಿಂದ ತತ್ತರಿಸಿದ ನಾನು ಅವರಿಂದ ಬಿಡಿಸಿಕೊಳ್ಳುವ ಹೊತ್ತಿಗೆ ನನ್ನ ಕಾಲಿಗೆ ಅವರು ದೊಣ್ಣೆಯಿಂದ ಹೊಡೆದರು. ಅಷ್ಟೊತ್ತಿಗೆ ಅಲ್ಲಿ ಆಟವಾಡುತ್ತಿದ್ದ ಜನರು ಗಲಾಟೆ ಮಧ್ಯೆ ಪ್ರವೇಶಿಸಿ ನನ್ನ ಮೇಲೆ ನೆಡೆದ ಅನಿರೀಕ್ಷಿತ ದಾಳಿಯನ್ನು ತಡೆದರು.ನಮ್ಮ ಕುಟುಂಬಗಳ ನಡುವೆ ಹಳೇ ವೈಷಮ್ಯವಿದ್ದು, ನನ್ನನ್ನು ಹೊಡೆಯಲು ಸಂಚು ರೂಪಿಸಿದ್ದ ಅವರು ನಾನು ಒಬ್ಬಂಟಿಗನಾಗಿ ಸಿಕ್ಕ ಈ ಅವಕಾಶವನ್ನು ಬಳಸಿಕೊಂಡು ನನ್ನನ್ನು ಕೊಲೆ ಮಾಡಲು ಇಂದು ಪ್ರಯತ್ನಿಸಿದ್ದಾರೆ. ಈ ಹಿಂದೆ ಗ್ರಾಮ ಪಂಚಾಯ್ತಿ ಚುನಾವಣೆ ಸಂಧರ್ಬದಲ್ಲೂ ನಮ್ಮ ಮನೆಯ ಮೇಲೆ ಸದರಿಯವರು ಕಲ್ಲು ಗುಂಡುಗಳನ್ನು ತೂರಿ ನಮಗೆ ಆಘಾತ ನೀಡಿದ್ದರು. ಇಂತಹ ಅನೇಕ ಘಟನೆಗಳಲ್ಲಿ ಅವರು ನಮ್ಮ ಮೇಲೆ ಪದೇ ಪದೇ ದಾಳಿ ಮಾಡಿದ್ದಾರೆ ಏನಾದರೂ ಮಾತನಾಡಿದರೆ ಗೂಂಡಾಗಿರಿ ಮಾಡುತ್ತಾರೆ. ಈ ಬಗ್ಗೆ ಸದರಿಯವರ ಮೇಲೆ 2-3 ಕೇಸು ಗಳು ಪಾವಗಡ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿವೆ. ಆದಾಗ್ಯೂ ಸದರಿಯವರು ನಮ್ಮ ಮೇಲೆ ದ್ವೇಷ ತೋರುತ್ತಿದ್ದು, ನಮ್ಮ ಮನೆಯವರನ್ನು ಕೊಲೆ ಮಾಡುವ ಸಂಚಿನಲ್ಲಿದ್ದಾರೆ. ಇದೇ ರೀತಿ ಪದೇ ಪದೇ ಮಾರಣಾಂತಿಕ ಹಲ್ಲೆಗಳನ್ನು ಮಾಡುತ್ತಾ ಕೊಲೆ ಮಾಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರಿಂದ ನಮಗೆ ಪ್ರಾಣ ಬೆದರಿಕೆ ಇದೆ.  ಅವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಗಣಕ ಯಂತ್ರದಲ್ಲಿ ಟೈಪ್‌ ಮಾಡಿಸಿ ನೀಡಿದ ಅರ್ಜಿಯನ್ನು ಪಡೆದು ಪ್ರಕರಣ ದಾಖಲಿಸಿದೆ.

 

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  34/2017 ಕಲಂ:324.504.506 ರೆ/ವಿ 34 .ಪಿ.ಸಿ ಮತ್ತು ಕಲಂ: 3(1)(r)& 3(1)(s) The Sc& ST( Prevention Of Atracities ) Amendment Act 2015

ಈ ಕೇಸಿನ ಸಾರಾಂಶವೇನೆಂಧರೆ ದಿನಾಂಕ: 01/04/2017 ರಂದು ಸಂಜೆ 4:00 ಗಂಟೆಗೆ ಪಾವಗಡ ತಾ|| ಬಿ.ಹೊಸಹಳ್ಳಿ ಗ್ರಾಮದ ವಾಸಿಗಳಾದ ಆದಿ ಕರ್ನಾಟಕ  ಜನಾಂಗಕ್ಕೆ ಸೇರಿದ ಮಾರಪ್ಪ ಬಿನ್ ಹನುಮಂತಪ್ಪ ಹಾಗೂ ನಾಯಕ ಜನಾಂಗಕ್ಕೆ ಸೇರಿದ ಮೂರ್ತಿ ಬಿನ್ ಓಬಳೇಶಪ್ಪ ರವರುಗಳು ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ದಿನಾಂಕ:31/03/2017 ರಂದು ಸಾಯಂಕಾಲ 7:30 ಗಂಟೆ ಸಮಯದಲ್ಲಿ ಸಣ್ಣ ವೆಂಕಟರೆಡ್ಡಿ ಬಿನ್ ಲೇ|| ವೆಂಕಟರಾಮಪ್ಪ ರವರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸುತ್ತಿರುವಾಗ ನೋಡಲು ನಾವಿಬ್ಬರು ಹೋದಾಗ ಅಲ್ಲಿಗೆ ಬಲ್ಲೇನಹಳ್ಳಿ ಗ್ರಾಮದ ವಕ್ಕಲಿಗ ಜನಾಂಗಕ್ಕೆ ಸೇರಿದ 1] ದೊಡ್ಡ ಭೀಮಾರೆಡ್ಡಿ ಬಿನ್ ಬುಡ್ಡಾರೆಡ್ಡಿ, ಮತ್ತು 2] ಸಣ್ಣ ಭೀಮಾರೆಡ್ಡಿ ಬಿನ್ ಬುಡ್ಡಾರೆಡ್ಡಿ 3] ಕೃಷ್ಣಾರೆಡ್ಡಿ ಬಿನ್ ಬುಡ್ಡಾರೆಡ್ಡಿ  4] ಅಂಜನರೆಡ್ಡಿ ಬಿನ್ ಬುಡ್ಡಾರೆಡ್ಡಿ , 5] ವೇಮನರೆಡ್ಡಿ ಬಿನ್ ಬುಡ್ಡಾರೆಡ್ಡಿ 6] ಸಂಜೀವರೆಡ್ಡಿ ಬಿನ್ ಬುಡ್ಡಾರೆಡ್ಡಿ, 7] ಅಂಕಿತ ಬಿನ್ ದೊಡ್ಡ ಭೀಮಾರೆಡ್ಡಿ, 8] ಜಯಪಾಲರೆಡ್ಡಿ ಬಿನ್ ಸಣ್ಣ ಭೀಮಾರೆಡ್ಡಿ ಇವರುಗಳು ನಮ್ಮನ್ನು ಮಾದಿಗನನ್ನ ಮಕ್ಕಳ ,ಹೊಲಯ ನನ್ನ ಮಕ್ಕಳ, ಧನ ತಿನ್ನುವ ನನ್ನ ಮಕ್ಕಳ ನಿಮಗೇನೋ ಕೆಲಸ ,ಶಾಟ ಕೀಳೋಕೆ ಬಂದ್ರೇನ್ರೋ , ನಿಮ್ಮಮ್ಮನ್ನ ಕ್ಯಾಯ  ಅಂತ ಬೈಯ್ದು  ಜಾತಿ ನಿಂದನೆ ಮಾಡಿ ದೊಣ್ಣೆಯಿಂದ ಮೂರ್ತಿ ಕೈಗೆ ಹೊಡೆದು ದೊಡ್ಡಭೀಮರೆಡ್ಡಿ ಗಾಯ ಪಡೆಸಿರುತ್ತಾನೆ, ಸಣ್ಣ ಭೀಮರೆಡ್ಡಿ, ಅಂಜನರೆಡ್ಡಿ ದೊಣ್ಣೆಗಳಿಂದ ಮಾರಪ್ಪನ ಬೆನ್ನಿಗೆ ಹೊಡೆದು ಗಾಯ ಪಡಿಸಿರುತ್ತಾರೆ ಮತ್ತು ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ ಕೊಲೆ ಮಾಡಿ ಸಾಯಿಸುತ್ತೇವೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ, ಈ ಗಲಾಟೆಯನ್ನು ಎತ್ತಿನಹಳ್ಳಿ ಶ್ರೀನಿವಾಸರೆಡ್ಡಿ ಬಿನ್ ನರಸಿಂಹರೆಡ್ಡಿ ನಮ್ಮ ಗ್ರಾಮದ ವಸಂತರೆಡ್ಡಿ ಬಿನ್ ನಾರಾಯಣರೆಡ್ಡಿ ಸಣ್ಣ ವೆಂಕಟರೆಡ್ಡಿ ಬಿನ್ ಲೇ|| ವೆಂಕಟರಾಮಪ್ಪ ಆತನ ಮಗ ಮಂಜುಕುಮಾರ್ ನೋಡಿರುತ್ತಾರೆ, ನಾವು ಆಸ್ಪತ್ರೆಗೆ  ತೋರಿಸಿ ತಡವಾಗಿ ಬಂದು ದೂರು ನೀಡಿರುತ್ತಾರೆ, ಈ ಆರೋಪಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಘೊಳ್ಳ ಬೇಕೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ಪ್ರಕರಣ ದಾಖಲಿಸಿರುತ್ತದೆ

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 80 guests online
Content View Hits : 322831