lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Smt. ISHA PANT IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ: 27-09-2017   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಈ ಮೂಲಕ... >> ಕ್ರಿಮಿನಲ್ ಮೊಕದ್ದಮೆಗಳ ತನಿಖೆಯ ಬಗ್ಗೆ  ಕಾರ್ಯಾಗಾರ   >> >> ಪತ್ರಿಕಾ  ಪ್ರಕಟಣೆ ತುಮಕೂರು  ಜಿಲ್ಲಾ  ಪೋಲಿಸ್ ಹಾಗೂ ಜನ ಶಿಕ್ಷಣ ಸಂಸ್ಥೆ, ತುಮಕೂರು... >>   ದಿನಾಂಕ 20 /03/17 ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 53 ನೇ ತಂಡದ  ನಾಗರೀಕ  ಬಂದೂಕು... >> ಅಮೃತೂರು ಪೊಲೀಸರ ಕಾರ್ಯಾಚರಣೆ. ಹೆದ್ದಾರಿ ಸುಲಿಗೆ ಕೋರರ ಬಂಧನ, ಕಾರು ಮತ್ತು ಮಾಲು ವಶ. ... >> Date: 15-03-17 ಪತ್ರಿಕಾ ಪ್ರಕಟಣೆ   ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಅನಧಿಕೃತವಾಗಿ... >>   ಕುಣಿಗಲ್  ಪೊಲೀಸರ ಕಾರ್ಯಾಚರಣೆ.   ಕೊಲೆ ಮಾಡಿದ ಆರೋಪಿಗಳ ಬಂಧನ , ಕೊಲೆ ಮಾಡಲು ಬಳಸಿದ... >>   ದಿನಾಂಕ: 27/02/2017 ರಂದು ಶ್ರೀ ಸಿದ್ದಗಂಗಾ ಮಹಿಳಾ ಕಾಲೇಜು ಸಭಾಂಗಣದಲ್ಲಿ ಮಹಿಳೆಯರ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ: 25/02/2017 ದಿನಾಂಕ: 27/02/2017 ರಂದು ಮತ್ತು ದಿನಾಂಕ: 28/02/2017 ರಂದು ಶ್ರೀ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ
March 2017

Tuesday, 28 March 2017

Crime Incidents 28-03-17

ಹೊನ್ನವಳ್ಳಿ ಪೊಲೀಸ್‌ ಠಾಣೆ  ಯು,ಡಿ,ಆರ್ ನಂ-04/2017 ಕಲಂ 174 ಸಿ,ಆರ್,ಪಿ,ಸಿ

ದಿನಾಂಕ-27/03/2017 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಶ್ರೀಮತಿ ಕಮಲಮ್ಮ ಕೊಂ ಶಂಕರಯ್ಯ ರವರು ಕೃತ್ಯ ನಡೆದ ಸ್ಥಳದಲ್ಲಿ ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾದಿಯ ಗಂಡನಾದ ಶಂಕರಯ್ಯನವರಿಗೆ 48ವರ್ಷ ವಯಸ್ಸಾಗಿದ್ದು ಶಂಕರಯ್ಯರವರು ಪ್ರತಿದಿನ ಕೂಲಿ ಕೆಲಸಕ್ಕೆ ಹೋಗುತ್ತಿದ್ದು ಹುಣಸೇ ಮರವನ್ನು ಬಡಿಯುವ ಕೆಲಸ ಮಾಡುತ್ತಿದ್ದು ದಿನಾಂಕ-27/03/2017 ರಂದು ಮಧ್ಯಾಹ್ನ ಸುಮಾರು 12-30 ಗಂಟೆ ಸುಮಾರಿನಲ್ಲಿ ಮೃತ ಶಂಕರಯ್ಯನು ಮಾವಿನಹಳ್ಳಿ ಗೊಲ್ಲರಹಟ್ಟಿ ವಾಸಿ ನಿಂಗಣ್ಣನವರ ಹುಣಸೇ ಮರಕ್ಕೆ ಹತ್ತಿ ಹುಣಸೇ ಮರವನ್ನು ಬಡಿಯುತ್ತಿರುವಾಗ ಮರದ ಟೊಂಗೆ ಕಿತ್ತುಕೊಂಡು ಶಂಕರಯ್ಯ ಮರದ ಮೇಲಿಂದ ನೆಲಕ್ಕೆ ಬಿದ್ದಾಗ ಶಂಕರಯ್ಯನ ತಲೆ ಮತ್ತು ಬಲಗಾಲಿಗೆ ಬಲವಾದ ಪೆಟ್ಟು ಬಿದ್ದು ಕಿವಿ ಮತ್ತು ಮೂಗಿನಲ್ಲಿ ರಕ್ತ ಹೊರಬಂದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-51/2017 ಕಲಂ: 96 ಕೆ.ಪಿ ಆಕ್ಟ್.

ದಿನಾಂಕ: 27-03/2017 ರಂದು ರಾತ್ರಿ 08-30 ಗಂಟೆಗೆ ಠಾಣಾ ಪಿ.ಸಿ-157 ಮೋಹನ್ ಕುಮಾರ್ ಜಿ.ಎಂ ರವರು ಪಿ.ಸಿ-301 ಪ್ರವೀಣ್ ಕುಮಾರ್ ರವರ ಜೊತೆಯಲ್ಲಿ ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ:27-03-2017 ರಂದು ರಾತ್ರಿ 07-30 ಗಂಟೆಗೆ ಎಸ್.ಹೆಚ್.ಓ ರವರ ಆದೇಶದಂತೆ ನಾನು ಮತ್ತು ಪಿ.ಸಿ-301 ಪ್ರವೀಣ್ ಕುಮಾರ್ ಇಬ್ಬರು ರಾತ್ರಿ ವಿಶೇಷ ಗಸ್ತುಗೆ ನೇಮಕಗೊಂಡಿದ್ದು, ಅದರಂತೆ ತಿಪಟೂರು ನಗರದ ಗಾಂಧಿನಗರ, ಇಂದಿರಾನಗರ, ಕೆರೆಗೋಡಿ ರಸ್ತೆ, ಅರಸುನಗರ, ಆರ್.ಎಂ.ಸಿ ಯಾರ್ಡ್‌, ಭೋವಿ ಕಾಲೋನಿ, ಹಾಸನ ರಸ್ತೆ ಕಡೆ ಗಸ್ತು ಮಾಡಿಕೊಂಡು ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು ಬಳಿ ಹೋದಾಗ ರಾತ್ರಿ  ಸುಮಾರು 08-00 ಗಂಟೆ ಸಮಯದಲ್ಲಿ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಒಳಭಾಗದ ಕಾಂಪೌಂಡ್ ಪಕ್ಕದಲ್ಲಿ ಒಬ್ಬ ಅಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಅವಿತುಕೊಂಡು ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದವರನ್ನು ನಾನು ಮತ್ತು ಪಿ.ಸಿ-301 ರವರು ಹಿಡಿದು, ಅತನ ಹೆಸರು ಮತ್ತು ವಿಳಾಸ ಕೇಳಲಾಗಿ, ಒಂದೊಂದು ಹೆಸರನ್ನು ತೊದಲುತ್ತಾ ಹೇಳುತ್ತಿದ್ದು, ಅನುಮಾನ ಬಂದು ಆತನನ್ನು  ಚೆಕ್‌ ಮಾಡಲಾಗಿ ಕೈಯಲ್ಲಿ ಒಂದು ಕಬ್ಬಿಣದ ರಾಡನ್ನು ಹಿಡಿದುಕೊಂಡಿದ್ದು, ತನ್ನ ಇರುವಿಕೆಯನ್ನು ಮರೆಮಾಚುತ್ತಾ ಕಳ್ಳತನ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡನ್ನು ಹಿಡಿದುಕೊಂಡು ನಮ್ಮನ್ನು ನೋಡಿ ಮರೆಮಾಚಲು ಪ್ರಯತ್ನಪಟ್ಟವನನ್ನು ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಮೇಲ್ಕಂಡಂತೆ ತಪ್ಪು ಒಪ್ಪಿಕೊಂಡಿರುತ್ತಾನೆ ಸದರಿ ಅಸಾಮಿಯ ಹೆಸರು ವಿಳಾಸ ತಿಳಿಯಲಾಗಿ ರಾಜು ಬಿನ್ ಪುಟ್ಟಾಭೋವಿ, 33 ವರ್ಷ, ಭೋವಿ ಜನಾಂಗ, ಕಲ್ಲು ಕೆಲಸ, ಸಜ್ಜೇನಹಳ್ಳಿ ಭೊವಿ ಕಾಲೋನಿ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೋಕ್ || ಜಿಲ್ಲೆ|| ಎಂದು ತಿಳಿಸಿರುತ್ತಾನೆ. ಸದರಿ ಆಸಾಮಿಯನ್ನು  ವಶಕ್ಕೆ ತೆಗೆದುಕೊಂಡು 08-30 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಆಸಾಮಿಯ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ವರದಿಯನ್ನು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 65/2017 ಕಲಂ; 279, 337 ಐ.ಪಿ.ಸಿ

ದಿನಾಂಕ-27-03-2017 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಪಿರ್ಯಾದಿ ಜೆ.ಗುರುಪ್ರಸಾದ್‌ ಬಿನ್‌ ಜೆ.ಎಲ್.ಕೆಂಪಯ್ಯ, 34 ವರ್ಷ, ವಕ್ಕಲಿಗರು, ಜಿರಾಯ್ತಿ, ಜಿನ್ನಾಗರ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-22-03-2017 ರಂದು ಸಂಜೆ 5-30 ರಿಂದ 6-00 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಅಣ್ಣ ಜೆ.ಕೆ. ಶಶಿಧರ ಮತ್ತು ಸಣಬ ಗ್ರಾಮದ ವಾಸಿಯಾದ ಎಸ್‌.ಕೆ.ಕೃಷ್ಣ ಬಿನ್ ಲೇಟ್‌ ಕುದುರೆ ಕೆಂಪಯ್ಯ ನಾವುಗಳು ಸಣಬ ಗ್ರಾಮದ ಗದ್ದೆ ಹುಚ್ಚಮ್ಮ ದೇವಸ್ಥಾನದ ಹತ್ತಿರ ಹಬ್ಬದ ವಿಶೇಷವಾಗಿ ಪೂಜೆ ಮತ್ತು ಜಾತ್ರೆ ಇದ್ದ ಕಾರಣದಿಂದಾಗಿ ಅಲ್ಲಿಗೆ ಹೋಗಲು ಯಡವಾಣಿ ಮತ್ತು ಅಮೃತೂರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ರಸ್ತೆಯ ಎಡಬದಿಯಲ್ಲಿ ಸಣಬ ಗ್ರಾಮದ ವಾಸಿ ಭಾಗ್ಯಮ್ಮ ರವರ ಜಮೀನಿನ ಹತ್ತಿರ ನಡೆದುಕೊಂಡು ಹೋಗುತ್ತಿದ್ದೆವು. ಅದೇ ಸಮಯಕ್ಕೆ ಯಡವಾಣಿ ಕಡೆಯಿಂದ ಸಣಬ ಕಡೆಗೆ ಬರಲು ಒಂದು ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕಲು ಹೋಗಿ ವಾಹನವನ್ನು ಸಂಪೂರ್ಣ ಬಲಭಾಗಕ್ಕೆ ತಿರುಗಿಸಿ ಎಡರಸ್ತೆಯಲ್ಲಿ ನನ್ನ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ನನ್ನ ಅಣ್ಣ ಜೆ.ಕೆ ಶಶಿಧರ ಮತ್ತು ಎಸ್‌.ಕೆ ಕೃಷ್ಣ ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮವಾಗಿ ಇಬ್ಬರೂ ಕೆಳಗೆ ಬಿದ್ದುಹೋದರು ಇವರನ್ನು ಮೇಲಕ್ಕೆ ಎತ್ತಿ ಸಮಾದಾನಪಡಿಸಿದಾಗ ಶಶಿಧರನಿಗೆ ಬಲಗಾಲಿನ ಬೆರಳುಗಳು ಮತ್ತು ಬಲಗೈ ಮೂಳೆ ಮುರಿದು ರಕ್ತಗಾಯವಾಗಿರುತ್ತದೆ. ಎಸ್‌.ಕೆ ಕೃಷ್ಣರವರಿಗೆ ಎಡಕಾಲಿನ ಮೂಳೆ ಮುರಿದುಹೋಗಿರುತ್ತದೆ. ನಂತರ ವಾಹನವನ್ನು ಗಮನಿಸಿದಾಗ ಕೆಎ-06-ಎಂ-2102 ಆಗಿರುತ್ತದೆ. ನಂತರ ಇವರನ್ನು ಸಣಬ ಗ್ರಾಮದ ವಾಸಿಯಾದ ರಾಮಚಂದ್ರಯ್ಯ ಬಿನ್‌ ರಾಜಯ್ಯ ಮತ್ತು ಎಸ್‌.ಹೆಚ್‌ ರವಿಕುಮಾರ್‌ ಬಿನ್‌ ಹುಚ್ಚಯ್ಯ ಇವರುಗಳು ಸೇರಿ ಅಮೃತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ಕುಣಿಗಲ್‌ ಸಮೀರ್‌ ಆಸ್ಪತ್ರೆಗೆ ತೆರಳಿ ಇಬ್ಬರನ್ನು ತಪಾಸಣೆಗೆ ಒಳಪಡಿಸಿದ್ದು, ಶಶಿಧರ ಎಂಬುವವರಿಗೆ ಒಳರೋಗಿಯಾಗಿ ಸೇರಿಸಿಕೊಂಡು ಕಾಲಿನ ಬೆರಳುಗಳನ್ನು ಹಾಗೂ ಕೈ ಮೂಳೆಯನ್ನು ಶಸ್ತ್ರಚಿಕಿತ್ಸೆ ಮಾಡಿರುತ್ತಾರೆ. ಎಸ್‌.ಕೆ ಕೃಷ್ಣ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಧಿತ್ಯಾಧಿಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿ ಮನೆಗೆ ಕಳುಹಿಸಿರುತ್ತಾರೆ. ಆದ್ದರಿಂದ ಈ ಮೇಲ್ಕಂಡ ಕಾರಿನ ಸಂಖ್ಯೆ ಕೆ ಕೆಎ-06-ಎಂ-2102 ಆಗಿರುತ್ತದೆ. ಆದ್ದರಿಂದ ಕಾನೂನು ರೀತ್ಯ ಕ್ರಮ ಜರುಗಿಸಿಕೊಡಬೇಕಾಗಿ ಮನವಿ. ನಾನು ನನ್ನ ಅಣ್ಣ ಜೊತೆಯಲ್ಲಿ ಆಸ್ಪತ್ರೆಯಲ್ಲಿ ಇದ್ದ ಕಾರಣ ಈ ದಿನ ತಡವಾಗಿ ಬಂದು ದೂರುನೀಡಿರುತ್ತೇನೆ. ಇತ್ಯಾದಿ.

ಜಯನಗರ ಪೊಲೀಸ್ ಠಾಣಾ ಮೊ.ನಂ. 47/2017 ಕಲಂ 454, 457, 380 ಐಪಿಸಿ.

ದಿನಾಂಕ: 27-03-2017 ರಂದು ರಾತ್ರಿ 8-15 ಗಂಟೆಗೆ ತುಮಕೂರು ಟೌನ್ ಜಯನಗರ ಪೂರ್ವ 5 ನೇ ಮುಖ್ಯರಸ್ತೆಯಲ್ಲಿ ವಾಸವಿರುವ ಡಾ|| ವಿಸ್ಮಯ ನಾಯಕ್‌ ಆರ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ದಿನಾಂಕ :19/02/2017 ರಂದು ಮದ್ಯಾಹ್ನ 1.30 ಗಂಟೆಗೆ ನಾನು ನನ್ನ ಗಂಡ ಮತ್ತು ಮಕ್ಕಳೊಂದಿಗೆ ಮೇಲ್ಕಂಡಂತೆ ಜಯನಗರ ಪೂರ್ವ, 5 ನೇ ಮುಖ್ಯರಸ್ತೆಯಲ್ಲಿರುವ ನನ್ನ ಮನೆಗೆ ಬೀಗ ಹಾಕಿಕೊಂಡು  ನನ್ನ ಗಂಡ ಮಹೇಶ್‌ ಮಾಲಗತ್ತಿ ರವರ ಸ್ವಂತ ಊರಾದ ಬಾಗಲಕೋಟೆ ಜಿಲ್ಲೆಯ ಇಳಕಲ್‌ ಗೆ ಹೋಗಿದ್ದು, ಇಳಕಲ್ ನಲ್ಲಿ ಆ ದಿನ ರಾತ್ರಿ ಉಳಿದುಕೊಂಡು ಮರು ದಿನ ರಾತ್ರಿ ವಾಪಾಸ್ ಹೊರಟು ದಿನಾಂಕ: 21-02-2017 ರಂದು ಬೆಳಗಿನ ಜಾವ 4-30 ಗಂಟೆಗೆ ಮನೆಗೆ ಬಂದು ಮನೆಯ ಮೇನ್ ಡೋರ್ ತೆಗೆದು ಒಳಗೆ ಹೋಗಿ  ಬೆಡ್‌ ರೂಂ ಗೆ ಹೋಗಿ ನೋಡಲಾಗಿ ವಾರ್ಡ್‌ ರೂಬ್‌ ನಲ್ಲಿದ್ದ ಬಟ್ಟೆಗಳೆಲ್ಲಾ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.  ಬೆಡ್‌ ರೂಂ ಡೋರ್‌ ನ್ನು ಯಾವುದೋ ಆಯುಧದಿಂದ ಮೀಟಿ ತೆಗೆದಿರುವಂತೆ ಕಂಡು ಬಂತು.  ನಂತರ ಬೆಡ್‌ ರೂಂ ನ ವಾರ್ಡ್‌ ರೂಬ್‌ ನಲ್ಲಿ ನೋಡಲಾಗಿ ಒಂದು ಬಾಕ್ಸ್ ನಲ್ಲಿಟ್ಟಿದ್ದ ಚಿನ್ನದ ವಡವೆಗಳು 1] ಸುಮಾರು 10 ಗ್ರಾಂ ನ 2 ಬಳೆಗಳು ಬೆಲೆ ಸುಮಾರು 20,000 ರೂ 2] ಸುಮಾರು 15 ಗ್ರಾಂ ನ ಒಂದು ಜೊತೆ ಕಾಲು ಚೈನು ಬೆಲೆ ಸುಮಾರು 30,000  3] ಸುಮಾರು 15 ಗ್ರಾಂ ನ 2 ಗೆಜ್ಜೆ ಇರುವ ನೆಕ್ ಚೈನು ಬೆಲೆ ಸುಮಾರು 30,000  4] ಸುಮಾರು 9 ಗ್ರಾಂನ ಮಕ್ಕಳ 7 ಉಂಗುರಗಳು ಬೆಲೆ ಸುಮಾರು 18,000  5] ಸುಮಾರು 7 ಗ್ರಾಂ ನ ಹೂವಿನ ಡಿಸೈನ್ ಇರುವ ಒಂದು ಉಂಗುರ ಬೆಲೆ ಸುಮಾರು 14,000 ರೂ 6]   ಸುಮಾರು 15 ಗ್ರಾಂ ತೂಕವಿರುವ 4 ಉಂಗುರಗಳು ಬೆಲೆ ಸುಮಾರು 30,000 ರೂ 7] ಸುಮಾರು 18 ಗ್ರಾಂ ತೂಕವಿರುವ ಫ್ಯಾನ್ಸಿ ಡಿಸೈನ್ ಡಾಲರ್‌  ಇರುವ ಎರಡು ಎಳೆ ಸರ ಬೆಲೆ ಸುಮಾರು 32,000 ರೂ 8]  ಸುಮಾರು 14 ಗ್ರಾಂನ 2 ತಾಳಿ ಇರುವ ಕರೆಮಣಿ ಸರ ಬೆಲೆ ಸುಮಾರು 28,000 9] ಸುಮಾರು 1.5 ಗ್ರಾಂನ ಚಿಕ್ಕ ತಾಳಿ ಬೆಲೆ ಸುಮಾರು 3,000 ರೂ 10] ಸುಮಾರು 10 ಗ್ರಾಂ ತೂಕವಿರುವ 2 ಜೊತೆ (ಪಿಯರಲ್ಸ್‌ ಮತ್ತು ಡೈಮೆಂಡ್‌) ಕಿವಿ ಓಲೆ ಬೆಲೆ ಸುಮಾರು 20,000 ರೂ 11] ಸುಮಾರು 80 ಗ್ರಾಂ ತೂಕವಿರುವ 2 ಜೊತೆ ಆ್ಯಂಟಿಕ್‌ ಡಿಸೈನ್‌ ಕಾಲು ಚೈನು ಬೆಲೆ ಸುಮಾರು 1,20,000 ರೂ ಹಾಗೂ ಸುಮಾರು 12 ಗ್ರಾಂನ ಬೆಳ್ಳಿಯ ಒಂದು ಚಿಕ್ಕ ಬಾಕ್ಸ್‌ ಬೆಲೆ ಸುಮಾರು 3000 ರೂ ಮತ್ತು  ಅದೇ ವಾರ್ಡ್‌ ರೂಬ್ ನಲ್ಲಿದ್ದ 1] Canon 400 D Black Colour Camera ಬೆಲೆ ಸುಮಾರು 30,000 ರೂ  2] Canon  5 D Mark iii (F 2.8 100mm) Black Colour  Camera ಬೆಲೆ ಸುಮಾರು 3,00,000 ರೂ  3] Canon 18-55 Black Colour Camera Lens ಬೆಲೆ ಸುಮಾರು 30,000 ರೂ 4] Canon 105 Lens F.44 ಬೆಲೆ ಸುಮಾರು 1,50,000 ರೂ 5] Sony Zoom Silver Colour Camera ಬೆಲೆ ಸುಮಾರು 9,000 ರೂ 6] Black Colour Nikon Binoculars ಬೆಲೆ ಸುಮಾರು 8,000 ರೂ  ಬೆಲೆಬಾಳುವ ಇವುಗಳು ಇರಲಿಲ್ಲ.  ಇದನ್ನು ನೋಡಿದರೆ, ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಯಾವಾಗಲೋ ಯಾರೋ ಕಳ್ಳರು ನಮ್ಮ ಮನೆಯ ಮೇನ್‌ ಡೋರ್ ಪಕ್ಕದಲ್ಲಿರುವ ಬೆಡ್‌ ರೂಂಗೆ ಲಗತ್ತಾಗಿರುವ ಡೋರ್‌ ನ್ನು ಹೊರಭಾಗದಿಂದ ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಪ್ರವೇಶಿಸಿ ಬೆಡ್‌ ರೂಂ ನ ವಾರ್ಡ್‌ ರೂಬ್‌ ನಲ್ಲಿಟ್ಟಿದ್ದ ಒಟ್ಟು ಸುಮಾರು 8,75,000 ರೂ ಮೌಲ್ಯದ ಮೇಲ್ಕಂಡ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಆ ದಿನ ನಾನು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ನಮ್ಮ ಮನೆಗೆ ಬಂದು ಸ್ಥಳ ಪರಿಶೀಲನೆ ಮಾಡಿದ್ದರು.  ನಾನು ಕೆಲಸದ ಒತ್ತಡದಲ್ಲಿದ್ದರಿಂದ ಲಿಖಿತವಾಗಿ ದೂರನ್ನು ನೀಡಿರಲಿಲ್ಲ.  ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 70/2017 ಕಲಂ 323, 324, 504, 506, 149 ಐಪಿಸಿ

ದಿನಾಂಕ:27/03/2017 ರಂದು ಸಂಜೆ 5-15 ಗಂಟೆಗೆ ತುಮಕೂರು ತಾಲ್ಲೋಕ್ ಅರಕೆರೆ ಗ್ರಾಮದ ಸರ್ವಮಂಗಳಾ ಕೋಂ ರಾಜಶೇಖರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿ:26/03/17 ರಂದು ನಮ್ಮ ಮನೆಯಲ್ಲಿ ಮುನಿಯಪ್ಪ ದೇವರ ಆರಾಧನಾ ಮಹೋತ್ಸವದ ಬಗ್ಗೆ ನಾನು, ನನ್ನ ಗಂಡ ರಾಜಶೇಖರ್ ಹಾಗೂ ನನ್ನ ಮೈದುನನ ಹೆಂಡತಿ ಶಾಮಲಾ ರವರು ಸೇರಿಕೊಂಡು ದಿನಾಂಕ:25/03/2017 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಕಾರ್ಯಕ್ರಮ ತಯಾರಿ ಮಾಡುತ್ತಿರುವಾಗ, ಸದರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಏಕಾಏಕಿ ರಮೇಶ್, ನವೀನ್, ಸುಧಾಮಣಿ, ಹೇಮಂತ್ ಕುಮಾರ್, ವಿಶಾಲಾಕ್ಷಿ, ಭೂಮಿಕಾ, ಸಿದ್ದರಾಮಯ್ಯ ಹಾಗೂ ಗುರುಲಿಂಗಪ್ಪ ರವರು ಹಿಂದಿನ ದ್ವೇಷದಿಂದ ವಿನಾಕಾರಣ ಜಗಳ ತೆಗೆದು ಬಾಯಿಗೆ ಬಂದಂತೆ ಬೈಯ್ದು, ರಮೇಶ್ ರವರು ತಾನಿ ತಂದಿದ್ದ ದೊಣ್ಣೆಯಿಂದ ನನ್ನ ಯಜಮಾನರಾದ ರಾಜಶೇಖರ್ ರವರ ತುಟಿಗೆ ಹೊಡೆದು ರಕ್ತ ಗಾಯಪಡಿಸಿದ, ಅಷ್ಟರಲ್ಲಿ ನವೀನ್ ಅದೆ ದೊಣ್ಣೆಯನ್ನು ತೆಗೆದುಕೊಂಡು ನಮ್ಮ ಯಜಮಾನರ ಕೈ-ಕಾಲುಗಳಿಗೆ ಹೊಡೆದು ಗಾಯಪಡಿಸಿದ, ಶಾಮಲಾ ರವರು ಬಿಡಿಸಿಕೊಳ್ಳಲು ಬಂದಾಗ ವಿಶಾಲಾಕ್ಷಿ, ಸುಧಾಮಣಿ ರವರು ಜುಟ್ಟು ಹಿಡಿದು ಎಳೆದಾಡಿ ಮೈ-ಕೈಗೆ ಗುದ್ದಿ ನೋವುಂಟು ಮಾಡಿದರು, ಹೇಮಂತ್ ಕುಮಾರ್, ಭೂಮಿಕಾ, ಸಿದ್ದರಾಮಯ್ಯ, ಗುರುಲಿಂಗಪ್ಪ ರವರು ಸೇರಿಕೊಂಡು ನನ್ನ ಯಜಮಾನರಿಗೆ ನನ್ನ ಯಜಮಾನರಿಗೆ ಕೈ ಗಳಿಂದ ಹೊಡೆದು ಜುಟ್ಟು ಹಿಡಿದು ಎಳೆದಾಡಿದರು. ಇವರು ದೊಣ್ಣೆಯನ್ನ ಬಿಸಾಡಿ ಇವರೆಲ್ಲರೂ ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ ಕೊಲೆ ಮಾಡಿ ತೀರುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ದಿನ ತಡವಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

 Monday, 27 March 2017

Press Note 27-03-17


ಪತ್ರಿಕಾ ಪ್ರಕಟಣೆ

ದಿನಾಂಕ: 27-09-2017

 

ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ದಿನಾಂಕ: 29-03-2017 ರಂದು ನಡೆಯಲಿರುವ ಯುಗಾದಿ ಹಬ್ಬದ ಆಚರಣೆ ಸಮಯದಲ್ಲಿ ಕಲ್ಯಾಣ ಮಂಟಪ, ಹೋಟೆಲ್, ವಸತಿ ಗೃಹಗಳು, ಮನೆ, ತೋಟದ ಮನೆಗಳು, ರಸ್ತೆಯ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಡುವುದನ್ನು ನಿಷೇಧಿಸಲಾಗಿದೆ. ಇಂದಿನಿಂದ ಈ ಸಂಬಂಧ ಯಾವುದೇ ರೀತಿಯ ಜೂಜಾಟ ಕಂಡುಬಂದಲ್ಲಿ ಅವರ ಮೇಲೆ  ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು. ಇದಕ್ಕೆ ಪ್ರೋತ್ಸಾಹಿಸಿದ ಸ್ಥಳದ ಮಾಲೀಕರು/ಮಧ್ಯವರ್ತಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಮತ್ತು ಜೊತೆಗೆ ಅಂತಹ ವ್ಯಕ್ತಿಗಳನ್ನು ಗಡಿಪಾರು ಮಾಡಲು ಕ್ರಮಕೈಗೊಳ್ಳಲಾಗುವುದು.

ಆದುದರಿಂದ ಸಾರ್ವಜನಿಕರು ಯಾವುದೇ ರೀತಿಯ ಜೂಜಾಟದಲ್ಲಿ ತೊಡಗುವುದಾಗಲಿ ಅದಕ್ಕೆ ಅವಕಾಶ ಮಾಡಿಕೊಡುವುದಾಗಲಿ ಪ್ರೋತ್ಸಾಹ ಕೊಡುವುದಾಗಲಿ ಮಾಡಬಾರದಾಗಿ ಈ ಮೂಲಕ ಎಚ್ಚರಿಕೆ ನೀಡಲಾಗಿದೆ.


Crime Incidents 27-03-17

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.29/2017,ಕಲಂ:279, 337 ಐಪಿಸಿ ರೆ/ವಿ 134(ಎ&ಬಿ),187 ಐಎಂವಿ ಆಕ್ಟ್.

 

ದಿನಾಂಕ:26/03/2017 ರಂದು ಮದ್ಯಾಹ್ನ 03:00 ಗಂಟೆಗೆ ಪಿರ್ಯಾದಿ ನಾಗರಾಜು ಬಿನ್ ಲೇ||ಹನುಮಂತರಾಯಪ್ಪ, 29 ವರ್ಷ, ಕುರುಬರು, ಬ್ರಹ್ಮದೇವರಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:26/03/2017 ರಂದು ನನ್ನ ಅಣ್ಣನಾದ ಮುದ್ದಪ್ಪ ಬಿನ್ ಲೇ||ಹನುಮಂತರಾಯಪ್ಪ ರವರು ಅವರ ಬಾಬ್ತು ಕೆಎ-09-ಆರ್-2522 ನೇ ಟಿ.ವಿ.ಎಸ್.ಎಕ್ಸ್.ಎಲ್.ನಲ್ಲಿ ನಮ್ಮ ಗ್ರಾಮದ ಕೋಡಪ್ಪನವರ ಮಗಳ ಮದುವೆಗೆಂದು ಮಧುಗಿರಿ ತಾಲ್ಲೋಕು ಕಸಬಾ ಹೋಬಳಿ, ಮೀನಗೊಂದಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದು, ಮದುವೆ ಮುಗಿಸಿಕೊಂಡು ನಮ್ಮ ಗ್ರಾಮಕ್ಕೆ ವಾಪಸ್ಸ್ ಮಧುಗಿರಿ ಕಡೆಯಿಂದ ಮಧುಗಿರಿ-ಪಾವಗಡ ರಸ್ತೆಯಲ್ಲಿ ಬರುತ್ತಿರುವಾಗ್ಗೆ ಮಧುಗಿರಿ-ಪಾವಗಡ ಮುಖ್ಯ ರಸ್ತೆಯ ಕೋಳಿಕಾಲು ಕಣಿವೆಯ ಬಳಿ ಇರುವ ಮುತ್ತರಾಯ ಸ್ವಾಮಿ ದೇವಸ್ಥಾನ ಹತ್ತಿರ ಬೆಳಿಗ್ಗೆ ಸುಮಾರು 10:30 ಗಂಟೆ ಸಮಯದಲ್ಲಿ ಮಧುಗಿರಿ ಕಡೆಯಿಂದ ಹಿಂಬದಿಯಲ್ಲಿ ಬರುತ್ತಿದ್ದ ಲಾರಿಯ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ನನ್ನ ಅಣ್ಣ ಮುದ್ದಪ್ಪ ರವರು ಬರುತ್ತಿದ್ದ ಟಿ.ವಿ.ಎಸ್.ಎಕ್ಸ್.ಎಲ್.ಗೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಅಣ್ಣನ ಬಲಗಾಲಿನ ಮಂಡಿಯಿಂದ ಕೆಳಗೆ ರಕ್ತಗಾಯವಾಗಿರುತ್ತದೆ. ಅಂತ ನನಗೆ ಯಾರೋ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದರು. ತಕ್ಷಣ ನಾನು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿದ್ದು ನನ್ನ ಅಣ್ಣ ಮುದ್ದಪ್ಪನ ಬಲಗಾಲಿನ  ಕೆಳಗೆ ರಕ್ತಗಾಯವಾಗಿರುತ್ತೆ. ಅಪಘಾತ ಉಂಟುಮಾಡಿದ ಲಾರಿಯ ನಂಬರ್ ನೋಡಲಾಗಿ ಲಾರಿಯ ಇಂಜಿನ್ ನಂಬರ್ TN-28-BB-1518 ಆಗಿದ್ದು ಲಾರಿಯ ಟ್ರೈಲರ್ ನಂಬರ್ HR-55-L-7610 ಆಗಿರುತ್ತೆ. ಲಾರಿಯ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನನ್ನ ಅಣ್ಣ ಮುದ್ದಪ್ಪ ರವರನ್ನು ಚಿಕಿತ್ಸೆಗಾಗಿ 108 ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇನೆ. ಅದ್ದರಿಂದ ನನ್ನ ಅಣ್ಣ ಮುದ್ದಪ್ಪ ರವರಿಗೆ ಅಪಘಾತ ಉಂಟುಮಾಡಿರುವ ಮೇಲ್ಕಂಡ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.28/2017,ಕಲಂ:279,304(ಎ) ಐಪಿಸಿ ರೆ/ವಿ 134(ಎ&ಬಿ),187 ಐಎಂವಿ ಆಕ್ಟ್.

ದಿನಾಂಕ:26/03/2017 ರಂದು ಮದ್ಯಾಹ್ನ 01:30 ಗಂಟೆಗೆ ಪಿರ್ಯಾದಿ ರಾಜಣ್ಣ ಬಿನ್ ರಾಯಣ್ಣ, 42 ವರ್ಷ, ನಾಯಕರು, ಹೆಚ್.ಬಸವನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ದೊಡ್ಡಪ್ಪ ಲೇ||ಪಾಲಯ್ಯ ರವರ ಮಗನಾದ ಬಸವರಾಜು ಎಂಬುವರು ಹೊಸಕೆರೆ ಗ್ರಾಮದಲ್ಲಿ ವಾಸವಿದ್ದು ದಿನಾಂಕ:25/03/2017 ರಂದು ಸಂಜೆ ಸುಮಾರು 07:45 ಗಂಟೆಯ ಸಮಯದಲ್ಲಿ ನನ್ನ ಅಣ್ಣ ಬಸವರಾಜು ರವರು ಹೊಸಕೆರೆ ಗ್ರಾಮದ ಹಾಲಿ ಡೈರಿಗೆ ಹಾಲನ್ನು ಹಾಕಲು ಮನೆಯಿಂದ ಮಧುಗಿರಿ-ಪಾವಗಡ ಮುಖ್ಯ ರಸ್ತೆಯ ಎಡ ಭಾಗದಲ್ಲಿ ಅನ್ನಪೂರ್ಣೇಶ್ವರಿ ವೈನ್ಸ್‌ ಸೆಂಟರ್‌ ಮುಂದೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಹಿಂದಿನಿಂದ ಅಂದರೆ ಮಧುಗಿರಿ ಕಡೆಯಿಂದ ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದ ಕಾರಿನ ಚಾಲಕ ನನ್ನ ಅಣ್ಣ ಬಸವರಾಜು ರವರಿಗೆ ಡಿಕ್ಕಿ ಹೊಡೆಸಿದ್ದು, ಬಸವರಾಜು ರವರ ತಲೆಯ ಹಿಂಭಾಗಕ್ಕೆ ಮತ್ತು ಎಡ ಮತ್ತು ಬಲ ಕಿವಿಗಳ ಮೇಲ್ಭಾಗಕ್ಕೆ ತೀರ್ವ ತರವಾದ ರಕ್ತಗಾಯಗಳಾಗಿರುತ್ತವೆ. ಮತ್ತು ನನ್ನ ಅಣ್ಣನಿಗೆ ಅಪಘಾತ ಉಂಟುಮಾಡಿದ ಕಾರಿನ ಸಂಖ್ಯೆ ಕೆಎ-51-3030 ನೇ ಮಾರುತಿ ಸ್ವಿಫ್ಟ್ ಡಿಸೈರ್ ಕಾರಾಗಿರುತ್ತೆ ಎಂದು ಸ್ಥಳದಲ್ಲೇ ಇದ್ದ ಹೆಚ್.ಬಸವನಹಳ್ಳಿ ಗ್ರಾಮದ ಬಿ.ಪಿ.ನಾಗರಾಜು ರವರು ಪೋನ್ ಮಾಡಿ ತಿಳಿಸಿದ್ದು, ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿದ್ದು, ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಮತ್ತು ಗಾಯಾಳುವನ್ನು ಉಪಚರಿಸದೆ ಹೊರಟು ಹೋಗಿದ್ದನು. ನಾನು ತಕ್ಷಣ ನನ್ನ ಅಣ್ಣ ಬಸವರಾಜನನ್ನು ಉಚರಿಸಿ ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು, ತುಮಕೂರಿನ ವೈದ್ಯಾಧಿಕಾರಿಯವರು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು ಅದರಂತೆ ನಿಮಾನ್ಸ್ ಆಸ್ಪತ್ರೆಯಿಂದ ಬೇರೆ ಆಶ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ದಿನಾಂಕ:26/03/2017 ರಂದು ಬೆಳಿಗ್ಗೆ 11:00 ಗಂಟೆಗೆ ನನ್ನ ಅಣ್ಣ ಬಸವರಾಜು ರವರು ಮೃತಪಟ್ಟಿರುತ್ತಾರೆ. ಆದ್ದರಿಂದ ನನ್ನ ಅಣ್ಣ ಬಸವರಾಜು ರವರಿಗೆ ಅಪಘಾತ ಉಂಟುಮಾಡಿ ಅವರ ಸಾವಿಗೆ ಕಾರಣನಾದ ಕೆಎ-51-3030 ನೇ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು, ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ.  

 

ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ .58/2017 ಕಲಂ 279,  304[]

ದಿನಾಂಕ:26/01/2017 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಈ ದಿನ ದಿನಾಂಕ:26/01/2017 ರಂದು ಮದ್ಯಾಹ್ನ 12-10 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿರುವಾಗ್ಗೆ ನನ್ನ ಮಗ ವಿಶ್ವಕುಮಾರ್ ರವರು ಬಂದು ಅಪ್ಪಾಜಿಗೆ ಅಪಘಾತವಾಗಿದ್ದು ರಕ್ತಗಾಯವಾಗಿರುತ್ತೆ. ತುಮಕೂರು ಜಿಲ್ಲಾ ಸರ್ಕಾರಿ ಆಸ್ಫತ್ರೆಗೆ ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿರುತ್ತಾರೆಂದು. ವಿಶ್ವಾಸ್ ರವರು ತಿಳಿಸಿದರು ಎಂದು ಹೇಳಿದೆನು, ನಾನು ತಕ್ಷಣ ನನ್ನ ಮಗ ವಿಶ್ವಕುಮಾರ್ ರವರೊಂದಿಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಫತ್ರೆಗೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿರುತ್ತೆ. ವಿಶ್ವಾಸ್ ರವರನ್ನು ವಿಚಾರ ಮಾಡಲಾಗಿ ನನ್ನ ಯಜಮಾನರಾದ ಮಹಂತೇಶ್ ರವರು ಅವರ ಬಾಬ್ತು ಕೆಎ-06-ಇಕ್ಸ್-5894 ನೇ ಸುಜಕಿ ಮೊಪೆಡ್ ನಲ್ಲಿ ಕ್ಯಾತ್ಸಂದ್ರ ದಿಂದ ತುಮಕೂರಿಗೆ ಕೆಲಸಕ್ಕೆ ಬರುತ್ತಿರುವಾಗ ಮದ್ಯಾಹ್ನ 12-00 ಗಂಟೆಸಮಯದಲ್ಲಿ ಕ್ಯಾತ್ಸಂದ್ರದ ಹತ್ತಿರ ಎನ್.ಹೆಚ್.48 ರಸ್ತೆಯ ಡಿ.ಎನ್.ಡಿ.ಎಸ್ ಮುಂಭಾಗ ರಸ್ತೆಯಲ್ಲಿ ಬರುತ್ತಿರುವಾಗ ಹಿಂದಿನಿಂದ ಅಂದರೆ ಕ್ಯಾತ್ಸಂದ್ರ ಕಡೆಯಿಂದ ತುಮಕೂರು ಕಡೆಗೆ ಕೆಎ-16-ಟಿಬಿ-0216-0217 ನೇ ಟ್ರಾಕ್ಟರ್ ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದವನೇ ಸಡನ್ನಾಗಿ ಟ್ರಾಕ್ಟರ್ ನ್ನು ಬಲಗಡಿಗೆ ತಿರುಗಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ನಮ್ಮ ಯಜಮಾನರಾದ ಮಹಂತೇಶ್ ರವರು ಗಾಡಿಯ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ನಮ್ಮ ಯಜಮಾನರಿಗೆ ಮುಖಕ್ಕೆ ಎದೆಗೆ ಎರಡೂ ಕೈ ಗಳಿಗೆ ಬಲವಾದ ಪೆಟ್ಟುಬಿದ್ದು, ತೀವ್ರವಾದ ರಕ್ತಶ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ತಿಳಿಸಿದರು.  ನಮ್ಮ ಯಜಮಾನರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಟ್ರಾಕ್ಟರ್ ಚಾಲಕನ ಹೆಸರು ವಿಳಾಸ ಕೇಳಲಾಗಿ ಏಕಾಂತ, ಉಪ್ಪಳಗೆರೆ ಹಿರಿಯೂರು ತಾಲ್ಲೂಕ್ ಎಂದು ತಿಳಿಯಿತು. ನಮ್ಮ ಯಜಮಾನರ ಸಾವಿಗೆ ಕಾರಣರಾದ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿರುತ್ತೆ

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-50/2017 ಕಲಂ: 279,337 ಐ.ಪಿ.ಸಿ.

ದಿನಾಂಕ:26/03/2017 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿ ಸಿದ್ದರಾಜು ಹೆಚ್.ಎಸ್ ಬಿನ್ ಲೇಟ್ ಸಿದ್ದಪ್ಪಾಜಿ, 29 ವರ್ಷ, ವಿಶ್ವಕರ್ಮ ಜನಾಂಗ, ಹಂಪಾಪುರ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೋಕ್, ಮಂಡ್ಯ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ತಮ್ಮನಾದ ಶಿವರಾಜ್ ಹೆಚ್.ಎಸ್ ರವರು ತಿಪಟೂರು ಟೌನ್ ಆರ್ಶೀರ್ವಾದ್ ಮೈಕ್ರೋ ಫೈನಾನ್ಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ: 28/02/2017 ರಂದು ಬೆಳಿಗ್ಗೆ ಸುಮಾರು 7-30 ಗಂಟೆಯಲ್ಲಿ ನನ್ನ ತಮ್ಮ ಶಿವರಾಜು ಕೆಲಸಕ್ಕೆಂದು ತಿಪಟೂರು ನಗರದ ಬಿಹೆಚ್ ರಸ್ತೆಯಲ್ಲಿ ವಿಜಯಾ ಬ್ಯಾಂಕ್ ಮುಂಭಾಗದಲ್ಲಿ ಕೋಡಿ ಸರ್ಕಲ್ ಕಡೆಗೆ ತನ್ನ ಬಾಬ್ತು ಕೆ.ಎ-09 ಇ.ಆರ್-8976 ನೇ ಬ್ಲಾಕ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಅದೇ ಸಮಯಕ್ಕೆ ಎದುರುಗಡೆಯಿಂದ ಕೆ.ಎ-44 ಹೆಚ್-9719 ನೇ ಬಜಾಜ್ ಡಿಸ್ಕವರಿ ದ್ವಿಚಕ್ರ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನ ವಾಹನವನ್ನು ಓಡಿಸಿಕೊಂಡು ಬಂದು ನನ್ನ ತಮ್ಮನಿಗೆ ಡಿಕ್ಕಿ ಹೊಡೆಸಿದ್ದು, ಪರಿಣಾಮ ನನ್ನ ತಮ್ಮ ಪ್ರಜ್ಞೆ ತಪ್ಪಿದ್ದು, ಈತನ ಹಣೆ, ಭುಜ,ಮತ್ತು ಕೈಗೆ ಪೆಟ್ಟು ಬಿದ್ದಿದ್ದು, ಅವನ ಸ್ನೇಹಿತರಾದ ಪ್ರಕಾಶ ಮತ್ತು ನಾಗರಾಜು ರವರು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಹಾಲಿ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಆದ್ದರಿಂದ ನನ್ನ ತಮ್ಮನಿಗೆ ಅಪಾಘಾತಪಡಿಸಿದ ಮೇಲ್ಕಂಡ ವಾಹನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನನ್ನ ತಮ್ಮನು ಚಿಕಿತ್ಸೆ ಪಡೆಯುತ್ತಿರುವುದರಿಂದ ನಾನು ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ ಎಂದು ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿರುತ್ತೆ.

 Friday, 24 March 2017

ಕ್ರಿಮಿನಲ್ ಮೊಕದ್ದಮೆಗಳ ತನಿಖೆಯ ಬಗ್ಗೆ ಕಾರ್ಯಾಗಾರ

ಕ್ರಿಮಿನಲ್ ಮೊಕದ್ದಮೆಗಳ ತನಿಖೆಯ ಬಗ್ಗೆ  ಕಾರ್ಯಾಗಾರ

 


Crime Incidents 24-03-17

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.27/2017, ಕಲಂ:87 ಕೆ.ಪಿ.ಆಕ್ಟ್.

ದಿ:21/03/2017 ರಂದು ರಾತ್ರಿ 11:30 ಗಂಟೆಗೆ ಠಾಣಾ ಪಿ.ಎಸ್.ಐ-ಹನುಮಂತರಾಯಪ್ಪ. ಹೆಚ್‌.ಜಿ. ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ನಾನು ದಿನಾಂಕ:21/03/2017 ರಂದು ರಾತ್ರಿ 08-20 ಗಂಟೆಯಲ್ಲಿ  ವಿಶ್ರಾಂತಿಗಾಗಿ ಮನೆಗೆ ಹೋಗುತ್ತಿದ್ದಾಗ   ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದು ಚೌಳಹಳ್ಳಿ ಗ್ರಾಮದ ನಾಗಮ್ಮ ದೇವಸ್ಥಾನದ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಸಿಬ್ಬಂದಿಯೊಂದಿಗೆ ಚೌಳಹಳ್ಳಿ ಗ್ರಾಮಕ್ಕೆ ಹೋಗಿ ಪಂಚಾಯ್ತು ದಾರರನ್ನು ಜೊತೆಯಲ್ಲಿ ಕರೆದುಕೊಂಡು ಮೇಲ್ಕಂಡ ನಾಗಮ್ಮ ದೇವಸ್ಥಾನದ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ನಾಗಮ್ಮ ದೇವಸ್ಥಾನದ ಮುಂಭಾಗ ಜನರು ಗುಂಡಾಕಾರವಾಗಿ ಕುಳಿತು ಒಳಗೆ-ಹೊರಗೆ ಎಂತ ಜೋರಾಗಿ ಹೇಳುತ್ತಾ ಅಂದರ್-ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿದ್ದುದ್ದನ್ನು ಖಚಿತಪಡಿಸಿಕೊಂಡು ಜೂಜಾಟವಾಡುತ್ತಿದ್ದ ಆಸಾಮಿಗಳ ಮೇಲೆ ಸಿಬ್ಬಂದಿಯೊಂದಿಗೆ ದಾಳಿಮಾಡಿ ಜೂಜಾಟದಲ್ಲಿ ತೊಡಗಿದ್ದ ಆಸಾಮಿಗಳನ್ನು ಹಿಡಿದುಕೊಂಡು ವಿಚಾರ ಮಾಡಿ ಹೆಸರು ವಿಳಾಸ ತಿಳಿಯಲಾಗಿ 1) ರಾಮಾಂಜಿನೇಯ ಬಿನ್ ಶ್ರೀರಾಮಪ್ಪ, 45ವರ್ಷ, ಗೊಲ್ಲರು, ಜಿರಾಯ್ತಿ, ಕಾಮೇಗೌಡನಹಳ್ಳಿ  ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ  ತಾಲ್ಲೋಕು, 2) ಗಂಗಪ್ಪ ಬಿನ್  ಲೇ|| ನಾಗಪ್ಪ, 50 ವರ್ಷ, ಉಪ್ಪಾರ ಜನಾಂಗ, ಕೂಲಿ ಕೆಲಸ, ಚೌಳಹಳ್ಳಿ ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ ತಾಲ್ಲೋಕು 3) ಶ್ರೀರಾಮಪ್ಪ  ಬಿನ್ ಲೇ|| ನರಸಿಂಹಪ್ಪ, 45 ವರ್ಷ, ಉಪ್ಪಾರ ಜನಾಂಗ, ಕೂಲಿ ಕೆಲಸ, ಚೌಳಹಳ್ಳಿ ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ ತಾಲ್ಲೋಕು 4) ಬಾಬು ಬಿನ್ ವೆಂಕಟರವಣಪ್ಪ, 25 ವರ್ಷ,ಶೆಟ್ಟಿಬಲಿಜಿಗ, ಪ್ಯಾಕ್ಟರಿಯಲ್ಲಿ ಕೆಲಸ, ಚೌಳಹಳ್ಳಿ ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ ತಾಲ್ಲೋಕು 5) ಸಿದ್ದಗಂಗಪ್ಪ ಬಿನ್ ಲೇ||ಸಿಂಗ್ರಪ್ಪ, 35 ವರ್ಷ, ಗೊಲ್ಲರು, ಜಿರಾಯ್ತಿ, ಚೌಳಹಳ್ಳಿ ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ ತಾಲ್ಲೋಕು, 6) ಗಂಗಪ್ಪ ಬಿನ್ ಲೇ||ರಂಗಪ್ಪ, 55 ವರ್ಷ, ಉಪ್ಪಾರ ಜನಾಂಗ, ಗಾರೆ ಕೆಲಸ, ಚೌಳಹಳ್ಳಿ ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ ತಾಲ್ಲೋಕು ಎಂತ ತಿಳಿಸಿರುತ್ತಾರೆ.

ನಂತರ ಅಖಾಡದಲ್ಲಿ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 1)2480/-ರೂ ನಗದು ಹಣ,  2)52 ಇಸ್ಪೀಟ್ ಎಲೆಗಳು, 3)ಎರಡು ಹಳೆಯ ನ್ಯೂಸ್ ಪೇಪರ್ ಇವುಗಳನ್ನು ಪಂಚರ ಸಮಕ್ಷಮ ರಾತ್ರಿ  09-45 ಗಂಟೆಯಿಂದ 10-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಳ್ಳಲಾಯಿತು. ನಂತರ ಜೂಜಾಟದಲ್ಲಿ ತೊಡಗಿ ಸ್ಥಳದಲ್ಲಿ ಸಿಕ್ಕಿಬಿದ್ದ ಆಸಾಮಿಗಳಿಗೆ ಕರೆ ಮಾಡಿದಾಗ ಠಾಣೆಗಾಗಲಿ ಅಥವಾ ನ್ಯಾಯಾಲಯಕ್ಕಾಗಲಿ ಹಾಜರಾಗುವಂತೆ ಸೂಕ್ತ ತಿಳುವಳಿಕೆ ನೀಡಿ ಸ್ಥಳದಿಂದ ಕಳುಹಿಸಿಕೊಟ್ಟಿರುತ್ತೆ.

ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಇಸ್ಟೀಟ್ ಜೂಜಾಟದಲ್ಲಿ ತೊಡಗಿದ್ದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ   ಕ್ರಮ ಜರುಗಿಸಲು ಈ ಮೂಲಕ ನಿಮಗೆ ಸೂಚಿಸಿ, ಇದರೊಂದಿಗೆ ಸ್ಥಳ ಪಂಚನಾಮೆ ಮತ್ತು ಕೃತ್ಯ ನಡೆದ ಸ್ಥಳದಲ್ಲಿ ವಶಪಡಿಸಿಕೊಂಡ ಮೇಲ್ಕಂಡ ಮಾಲುಗಳನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆಂತ ನೀಡಿದ ಜ್ಞಾಪನದ ಮೇರೆಗೆ ಠಾಣಾ ಎನ್‌.ಸಿ.ಆರ್‌.GSC.No. PO1657170600042/2017 ರಲ್ಲಿ ನೊಂದಾಯಿಸಿಕೊಂಡಿರುತ್ತೆ.

ಸದರಿ ಎನ್.ಸಿ.ಆರ್. ವಿಷಯವು ಅಸಂಜ್ಞೇಯ ಅಪರಾಧವಾಗಿರುವುದರಿಂದ ಮುಂದಿನ ಕ್ರಮ ಜರುಗಿಸಲು  ಘನ ನ್ಯಾಯಾಲಯವು ಸದರಿ ಅಪರಾಧವನ್ನು ಸಂಜ್ಞೇಯ ಅಪರಾಧವಾಗಿ ಪರಿಗಣಿಸಿ ಕಲಂ:87 ಕೆ.ಪಿ.ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಬೇಕೆಂದು ಘನ ನ್ಯಾಯಾಲಯದಲ್ಲಿ ಕೋರಿ ಮನವಿಯನ್ನು ಸಲ್ಲಿಸಿಕೊಂಡಿದ್ದು, ಮಧುಗಿರಿ ಘನ ಎ.ಸಿ.ಜೆ.(ಜೆ.ಡಿ) & ಜೆ.ಎಂ.ಎಫ್‌.ಸಿ. ನ್ಯಾಯಾಲಯವು ಮೇಲ್ಕಂಡ ಎನ್‌.ಸಿ.ಆರ್. ವಿಷಯನ್ನು ಸಂಜ್ಞೆಯ ಅಪರಾಧವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಿದ್ದನ್ನು ಠಾಣಾ ಹೆಚ್.ಸಿ-79 ರವರು ಪಡೆದುಕೊಂಡು ದಿನಾಂಕ:23/03/2017 ರಂದು ಬೆಳಿಗ್ಗೆ 10-30 ಗಂಟೆಗೆ ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ ಠಾಣಾ ಮೊ ನಂ-54/2017 ಕಲಂ 457,380 ಐ ಪಿ ಸಿ

ದಿನಾಂಕ:23-03-2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದುದಾರರಾದ ಹುಚ್ಚಮ್ಮ ಕೋಂ ಲೇ|| ದೊಡ್ಡವೆಂಕಟಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದುಕೊಂಡು ಜಿರಾಯ್ತಿ ಹಾಗೂ ಕುರಿ ಮೇಕೆ ಸಾಕಾಣಿಕೆ ಮಾಡಿಕೊಂಡು ನನ್ನ ಮಗಳು ಗಂಗಮ್ಮಳೊಂದಿಗೆ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ: 22-03-2017 ರಂದು ನಾನು ಎಂದಿನಂತೆ ಕುರಿ ಹಾಗೂ ಮೇಕೆ ಮೇಯಿಸಿಕೊಂಡು ಸಾಯಂಕಾಲ ಸುಮಾರು 06-30 ಗಂಟೆ ಸಮಯದಲ್ಲಿ ನಮ್ಮ ಮನೆಗೆ ಹೊಂದಿಕೊಂಡಂತೆ ಪಕ್ಕದಲ್ಲಿಯೇ ಇರುವ ಕೊಟ್ಟಿಗೆಯಲ್ಲಿ ಕುರಿ ಮತ್ತು ಮೇಕೆಗಳನ್ನು ತಂದು ಬಿಟ್ಟಿದ್ದು, ನಂತರ ನಾನು ಮತ್ತು ನನ್ನ ಮಗಳು ಗಂಗಮ್ಮ ಇಬ್ಬರೂ ನಮ್ಮ ಮನೆಯಲ್ಲಿಯೇ ಮಲಗಿಕೊಂಡೆವು. ನಂತರ ದಿನಾಂಕ:23-03-2017 ರಂದು ಬೆಳಗಿನ ಜಾವ ಸುಮಾರು 03-30 ಗಂಟೆ ಸಮಯದಲ್ಲಿ ನಾವು ನಮ್ಮ ಮನೆಯಲ್ಲಿ ಮಲಗಿರುವಾಗ್ಗೆ, ಕುರಿಗಳು ಹಾಗೂ ಮೇಕೆ ಕೂಗಾಡುವ ಶಬ್ದ ಕೇಳಿಬಂತು. ನಂತರ ನಾನು ನಮ್ಮ ಮನೆಯ ಬಾಗಿಲನ್ನು ತೆಗೆಯಲು ಹೋಗಿದ್ದು, ಬಾಗಿಲನ್ನು ಹೊರಗಿನಿಂದ ಯಾರೋ ಕಳ್ಳರು ಹಗ್ಗದಿಂದ ಎಳೆದು ಕಟ್ಟಿದ್ದರು. ಆ ನಂತರ ನಾನು ಮನೆಯ ಕಿಟಕಿಯ ಬಳಿ ಬಂದು ನೋಡಲಾಗಿ ಕಿಟಿಕಿಯನ್ನು ಯಾರೋ ಕೆಲವರು ಅದುಮಿಕೊಂಡಿದ್ದರು. ನಂತರ ನಾನು ಮನೆಯ ಲೈಟ್‌ ಅನ್ನು ಹಾಕಲಾಗಿ, ಮನೆಯ ಹೊರಗಡೆ ಇದ್ದವರೆಲ್ಲಾ ಮನೆಯವರು ಎದ್ದರೆಂತಾ ಮಾತನಾಡಿಕೊಂಡು ಯಾವುದೋ ಒಂದು ವಾಹನದಲ್ಲಿ ಹೊರಟು ಹೋದರು, ವಾಹನದ ಶಬ್ದ ನನಗೆ ಕೇಳಿಸಿತು. ನಂತರ ನಾನು ಜೋರಾಗಿ ಕಿರುಚಿಕೊಳ್ಳಲಾಗಿ ಗ್ರಾಮಸ್ಥರುಗಳಾದ ಜಯಣ್ಣ ಬಿನ್ ಹನುಮಂತಯ್ಯ ಹಾಗೂ ಇತರರು ಬಂದು ಬಾಗಿಲಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದರು. ನಂತರ ನಾನು ಹೊರಗೆ ಬಂದು ಮನೆಯ ಪಕ್ಕದಲ್ಲಿಯೇ ಇದ್ದ ಕೊಟ್ಟಿಗೆಗೆ ಹೋಗಿ ನೋಡಲಾಗಿ, 28 ಕುರಿಗಳು ಹಾಗೂ ಒಂದು ಮೇಕೆಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂತು. ಸದರಿ 28 ಕುರಿಗಳು ಮತ್ತು ಒಂದು ಮೇಕೆಯ ಬೆಲೆಯನ್ನು ತಿಳಿಯಬೇಕಾಗಿರುತ್ತೆ. ಆದ್ದರಿಂದ ನನ್ನ ಬಾಬ್ತು 28 ಕುರಿಗಳು ಹಾಗೂ ಒಂದು ಮೇಕೆಯನ್ನು ಕಳ್ಳತನದಿಂದ ಕಳವು ಮಾಡಿಕೊಂಡು ಹೋಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

 Thursday, 23 March 2017

Crime Incidents 23-03-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಯು.ಡಿ.ಆರ್‌ .ನಂ; 10/2017 ಕಲಂ; 174 , ಸಿ.ಆರ್ .ಪಿ.ಸಿ

ದಿನಾಂಕ-22-03-2017 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಪಿರ್ಯಾದಿ ಶಶಿಕಲಾ ಕೋಂ ಲೇಟ್‌ ಶ್ರೀನಿವಾಸ, 25 ವರ್ಷ, ಬಣಜಿಗರು, ಮನೆಕೆಲಸ, ಶಾಂತಿ ನಗರ, ಹುಲಿಯೂರುದುರ್ಗ ಟೌನ್, ಕುಣಿಗಲ್‌ ತಾಲ್ಲೋಕು ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ನನ್ನ ಗಂಡ ಶ್ರೀನಿವಾಸ್‌ ರವರನ್ನು ಮದುವೆಯಾಗಿ ಸುಮಾರು 5 ವರ್ಷಗಳಾಗಿದ್ದು ನಾವು ಗೋಬಿ ಮಂಚೂರಿ ಗಾಡಿಯನ್ನು ಮಾಡಿಕೊಂಡು ವ್ಯಾಪಾರ ಮಾಡಿಕೊಂಡಿದ್ದೆವು. ಆದರೆ ನನ್ನಗಂಡ ಶ್ರೀನಿವಾಸ್‌ ರವರು ಜೀವನದಲ್ಲಿ ಜಿಗುಪ್ಸೆಗೊಂಡು ಕಳೆದ 2-3 ವರ್ಷಗಳಿಂದ ವ್ಯಾಪಾರದಲ್ಲಿ ತೊಂದರೆಯಾಗಿ ಕೈಸಾಲ ಮಾಡಿಕೊಂಡು ಅನೇಕ ಬಾರಿ ನೇಣುಹಾಕಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ದಿನಾಂಕ-22-03-2017 ರಂದು ನಾನು ಅಂಗಡಿಗೆ ಹೋಗಿಬರಲು ಹೋಗಿರುವಾಗ್ಗೆ ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ತೊಲೆಗೆ ನೇಣುಹಾಕಿಕೊಂಡಿರುತ್ತಾರೆ. ನಾನು ಅಂಗಡಿಯಿಂದ ಬಂದ ಮೇಲೆ ಮನೆಯ ಬಾಗಿಲನ್ನು ತೆಗೆಯದಿರುವುದನ್ನು ನೋಡಿ ಕಿರುಚಿಕೊಂಡಾಗ ಮನೆಯ ಅಕ್ಕಪಕ್ಕದವರು ಬಂದು ಬಾಗಿಲನ್ನು ತೆಗೆದು ನೋಡಿಗಾದ ನೇಣು ಹಾಕಿಕೊಂಡಿರುವುದು ಕಂಡು ಬಂದಿತು. ನಂತರ ನಾವು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈಧ್ಯರು ನನ್ನ ಗಂಡ ಮೃತಪಟ್ಟಿರುವುದಾಗಿ ತಿಳಿಸಿದರು. ನನ್ನ ಗಂಡನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಗಂಡ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಹಾಕಿಕೊಂಡು ಮೃತಪಟ್ಟಿರುತ್ತಾರೆ. ತಾವು ಸ್ಥಳಕ್ಕೆ ಬಂದು ಮುಂದಿನ ಕ್ರಮವನ್ನು ಜರುಗಿಸುವಂತೆ ನೀಡಿದ ದೂರಿನ ಅಂಶವಾಗಿರತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 63/2017 ಕಲಂ; 279, 337 ಐ.ಪಿ.ಸಿ.

ದಿನಾಂಕ-22-03-2017 ರಂದು ರಾತ್ರಿ 7-15 ಗಂಟೆ ಸಮಯದಲ್ಲಿ ಪಿರ್ಯಾದಿ ಹೆಚ್.ಜಿ ರಮೇಶ ಬಿನ್ ಗೋವಿಂದರಾಜು, 26 ವರ್ಷ, ವಕ್ಕಲಿಗರು, ಟಿ.ಹೊಸಹಳ್ಳಿ, ಕಸಭಾ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-10-03-2017 ರಂದು ನಮ್ಮ ತಂದೆಯವರಾದ ಗೋವಿಂದರಾಜು ರವರು ಅವರ ಸ್ನೇಹಿತ ಎಂ.ಜಿ ಯೋಗೀಶ್‌ ರವರು ಚಾಲನೆಮಾಡುತ್ತಿದ್ದ ಕೆಎ-41-ಇಇ-3878 ನೇ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಮಾದಪ್ಪನಹಳ್ಳಿ ಗ್ರಾಮದಿಂದ ಕಾರ್ಯಕ್ರಮವನ್ನು ಮುಗಿಸಿಕೊಂಡು ಟಿ.ಹೊಸಹಳ್ಳಿ ಗೆ ಮನೆಗೆ ಬರುವಾಗ ಗೊಲ್ಲರಹಟ್ಟಿಯ ಬಳಿಯಲ್ಲಿ ನಮ್ಮ ತಂದೆ ಕುಳಿತಿದ್ದ ದ್ವಿಚಕ್ರ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಮುಂದೆ ಹೋಗುತ್ತಿದ್ದ ವಾಹನವನ್ನು ಓವರ್‌ ಟೇಕ್‌ ಮಾಡಲು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-05-ಇಯು-6536 ನೇ ಸಿಟಿ-100 ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮವಾಗಿ ಎರಡು ವಾಹನಗಳು ಜಖಂ ಗೊಂಡು ನಮ್ಮ ತಂದೆ ಕುಳಿತಿದ್ದ ವಾಹನವು ಕೆಳಗೆಬಿದ್ದು ನಮ್ಮ ತಂದೆಯ ಎದೆ, ತಲೆ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯವಾಗಿದ್ದು ಬಲಗಾಲಿನ ಮೂಳೆ ಮುರಿದಿರುತ್ತದೆ. ಕೂಡಲೇ ನಾವು ನಮ್ಮ ತಂದೆಯನ್ನು ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡುಹೋಗಿ ಪ್ರಥಮ ಚಕಿತ್ಸೆಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ, ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಸೇರಿಸಿ ನಂತರ ವೈಧ್ಯರ ಸಲಹೆಯ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಓಳರೋಗಿಯಾದಿ ದಾಖಲು ಪಡಿಸಿರುತ್ತೇವೆ. ನಾನು ನಮ್ಮ ತಂದೆಗೆ ಚಿಕಿತ್ಸೆಕೊಡಿಸಿ  ಠಾಣೆಗೆ ಹಾಜರಾಗಿ ದೂರುನೀಡುವಲ್ಲಿ ತಡವಾಗಿದ್ದು, ನಮ್ಮ ತಂದೆಗೆ ಅಪಘಾತಪಡಿಸಿದ ಕೆಎ-41-ಇಇ-3878 ನೇ ದ್ವಿಚಕ್ರ ವಾಹನ ಚಾಲಕನ ಮೇಲೆ ಕಾನೂನು ಕ್ರಮವನ್ನು ಜರುಗಿಸುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 67/2017 ಕಲಂ 279, 337 ಐಪಿಸಿ 134(A&B),187 ಐಎಂವಿ ಆಕ್ಟ್

ದಿನಾಂಕ:22/03/2017 ರಂದು ರಾತ್ರಿ 9-00 ಗಂಟೆಗೆ ಗುಬ್ಬಿ ತಾಲ್ಲೋಕ್ ಚೇಳೂರು ಹೋಬಳಿ ಸಿ.ನಂದಿಹಳ್ಳಿ ಗ್ರಾಮದ ಮಂಜುನಾಥ ಬಿನ್ ಗುರುಸಿದ್ದಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:19/02/2017 ರಂದು ನಮ್ಮ ತಂದೆಯವರಾದ ಗುರುಸಿದ್ದಯ್ಯ ರವರು ಕೆಲಸದ ನಿಮಿತ್ತ KA-06-EP-5475ನೇ TVS WEGO ದ್ವಿಚಕ್ರ ವಾಹನದಲ್ಲಿ ತುಮಕೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಬರುವಾಗ ತುಮಕೂರು-ಗುಬ್ಬಿ NH 206 ರಸ್ತೆಯಲ್ಲಿರುವ ಪ್ರಕೃತಿ ಸಾಲ್ವೆಕ್ಸ್ ನಲ್ಲಿ ತಮ್ಮ ಸ್ನೇಹಿತರನ್ನು ಮಾತನಾಡಿಸಲು ಹೋಗುವ ಸಲುವಾಗಿ ಸಂಜೆ 7-00 ಗಂಟೆ ಸಮಯದಲ್ಲಿ ನಿಂತಿದ್ದಾಗ ತುಮಕೂರು ಕಡೆಯಿಂದ KA-50-W-4212 ನೇ ಪಲ್ಸರ್ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ತಂದೆಯವರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದ್ದರಿಂದ ನಮ್ಮ ತಂದೆಯವರು ವಾಹನ ಸಮೇತ ಕೆಳಗೆ ಬಿದ್ದಿದ್ದರಿಂದ ತಲೆಯ ಭಾಗಕ್ಕೆ, ಕೈ-ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಶಿವಮೂರ್ತಿರವರು & ಇತರೆಯವರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ ಬಗ್ಗೆ ದೂರವಾಣಿ ಮೂಲಕ ತಿಳಿಸಿದ್ದು, ನಾನು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿರುತ್ತೇನೆ. ಅಪಘಾತಪಡಿಸಿದ KA-50-W-4212 ನೇ ಪಲ್ಸರ್ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ನಿಲ್ಲಿಸದೇ ಹೊರಟುಹೋಗಿರುತ್ತಾನೆ. ಈತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  44/2017 ಕಲಂ 279, 337 ಐಪಿಸಿ

ದಿನಾಂಕ:22/03/2017 ರಂದು ಮದ್ಯಾಹ್ನ 14-30 ಗಂಟೆಗೆ ಪಿರ್ಯಾದಿ ಶಿವಣ್ಣ ಬಿನ್ ಸಿದ್ದಬಸವಯ್ಯ, ಸುಮಾರು 44 ವರ್ಷ, ಕುರುಬರು, ಪ್ರಕಾಶ ಬಸ್ ನಲ್ಲಿ ಚಾಲಕನ ಕೆಲಸ, ನಂದಿಹಳ್ಳಿ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ   ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು  ಕಳೆದ ಸುಮಾರು ಒಂದು ವರ್ಷದಿಂದ ಪ್ರಕಾಶ ಬಸ್ ನಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ: 20/03/2017 ರಂದು ಮಧ್ಯಾಹ್ನ ನಾನು ಪ್ರಕಾಶ ಬಸ್ ನ್ನು ಓಡಿಸಿಕೊಂಡು ಚಿ.ನಾ.ಹಳ್ಳಿಯಿಂದ ಶೆಟ್ಟಿಕೆರೆ ಮಾರ್ಗವಾಗಿ ತಿಪಟೂರಿಗೆ ಬರುತ್ತಿರುವಾಗ ಮಧ್ಯಾಹ್ನ ಸುಮಾರು 2-15 ಗಂಟೆ ಸಮಯದಲ್ಲಿ ತಿಪಟೂರು ತಾಲ್ಲೂಕು ಕಲ್ಲೇಗೌಡನಪಾಳ್ಯ ಸಮೀಪ ರಾಮಶೆಟ್ಟಿಹಳ್ಳಿ ಗೇಟ್ ಹತ್ತಿರ KA 44 M 3341 ನೇ ಮಾರುತಿ ರಿಟ್ಜ್‌ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ನನ್ನ ಬಸ್‌ ಗೆ ಓವರ್ ಟೇಕ್ ಮಾಡಿಕೊಂಡು ಹೋದನು. ಇದೇ ಸಮಯಕ್ಕೆ ಎದುರುಗಡೆ ತಿಪಟೂರು ಕಡೆಯಿಂದ KA 03 ER 8684 ನೇ ಹೀರೋಹೊಂಡಾ ಪ್ಯಾಷನ್ ಪ್ಲಸ್ ಬೈಕಿನ ಚಾಲಕ ಅತಿವೇಗವಾಗಿ ಶೆಟ್ಟಿಕೆರೆ ಕಡೆಗೆ ಓಡಿಸಿಕೊಂಡು ಬಂದಾಗ ಮೇಲ್ಕಂಡ ಕಾರಿಗೂ ಹಾಗೂ ಬೈಕಿಗೂ ಡಿಕ್ಕಿ ಉಂಟಾಗಿ ಅಪಘಾತ ಉಂಟಾಯಿತು. ಈ ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡು ಬೈಕಿನಲ್ಲಿದ್ದ ಮೂರು ಜನರಿಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾದವು. ನಂತರ ನಾನು ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರು ಸೇರಿ ಗಾಯಾಳುಗಳಿಗೆ ನೀರು ಕುಡಿಸಿ ಉಪಚರಿಸಿ ನಂತರ ಗಾಯಾಳುಗಳ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತಿಪಟೂರು ತಾಲ್ಲೂಕು ಈರಲಗೆರೆ ಗ್ರಾಮದ ವಾಸಿಗಳಾದ ಗಂಗಾಧರ, ಈತನ ತಂದೆ ಸಿದ್ದಬಸಪ್ಪ ಮತ್ತು ತಾಯಿ ಜಯಮ್ಮ ಎಂದು ತಿಳಿದು ಬಂತು. ಆಗ ಗಂಗಾಧರ ನಾವು ಮೂರು ಜನ ರೇಷನ್ ಕಾರ್ಡ್‌ ಫೋಟೋ ತೆಗೆಸಲು ಹುಚ್ಚಗೊಂಡನಹಳ್ಳಿ ಗೆ ಹೋಗಿ ನಂತರ ವಾಪಸ್ಸು ಈರಲಗೆರೆಗೆ ಹೋಗುತ್ತಿದ್ದೆವು ಎಂದು ತಿಳಿಸಿದನು. ಕಾರಿನ ಚಾಲಕನ ಹೆಸರು ವಿಳಾಸ ತಿಳಿಯಲಾಗಿ ಮಂಜುನಾಥ, ಕಲ್ಲೇಗೌಡನಪಾಳ್ಯ ಎಂದು ತಿಳಿಯಿತು. ನಂತರ ಗಾಯಾಳುಗಳನ್ನು ಕಾರಿನ ಚಾಲಕ ಮಂಜುನಾಥರವರೇ ತಿಪಟೂರು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದರು. ಈ ಅಪಘಾತವು ಮೇಲ್ಕಂಡ ಕಾರಿನ ಚಾಲಕ ಮಂಜುನಾಥ ಮತ್ತು ಬೈಕಿನ ಚಾಲಕ ಗಂಗಾಧರ ರವರ ಅತಿವೇಗ ಮತ್ತು ಅಜಾಗರೂಕತೆಯ ವಾಹನ ಚಾಲನೆಯಿಂದ ಉಂಟಾಗಿರುತ್ತೆ.  ನಂತರ ಈಗ ವಿಚಾರ ತಿಳಿಯಲಾಗಿ ಗಾಯಾಳುಗಳಾದ ಗಂಗಾಧರ್, ಸಿದ್ದಬಸಪ್ಪ ಮತ್ತು ಜಯಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ ಎಂದು ತಿಳಿದಿರುತ್ತೆ. ನಾನು ಎರಡು ದಿನಕ್ಕೊಮ್ಮೆ ಈ ರೂಟ್ ನಲ್ಲಿ ಬಸ್ಸನ್ನು ಓಡಿಸಿಕೊಂಡು ಬರುತ್ತಿದ್ದು ಹಾಗೂ ನಮ್ಮ ಊರಿನಲ್ಲಿ ದೇವರ ಕಾರ್ಯ ಇದ್ದುದರಿಂದ ನಾನು ಈ ದಿವಸ ತಡವಾಗಿ ಪೊಲೀಸ್ ಠಾಣೆಗೆ ಬಂದು ಮೇಲ್ಕಂಡ ಮಂಜುನಾಥ ಮತ್ತು ಗಂಗಾಧರ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ.

 

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 34/2017 u/s 380  IPC

ದಿನಾಂಕ:- 21/03/2017 ರಂದು ಸಾಯಂಕಾಲ 04-10 ಗಂಟೆಗೆ ಶ್ರೀಮತಿ ಶಾವೆ ಸುಲ್ತಾನ  ಕೋಂ ಅಪ್ಸರ್ ಅನ್ವರ್ ಸಾಬ್, ವಾಸ :- 3ನೇ ಕ್ರಾಸ್ , ಬಾಲಾಜಿ ಹಾರ್ಡ್ ವೇರ್ ಹಿಂಭಾಗ,  ಗಂಗೋತ್ರಿನಗರ, ತುಮಕೂರು ರವರು  ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೆನೆಂದರೆ ದಿನಾಂಕ: 21/03/2017 ರಂದು ಬೆಳಿಗ್ಗೆ ಸುಮಾರು 08-45 ಗಂಟೆಗೆ ಅಪರಿಚಿತ ಮಹಿಳೆಯೊಬ್ಬಳು ಪಿರ್ಯಾದಿ  ಮನೆಗೆ ಕೆಲಸ ಕೇಳಿಕೊಂಡು ಬಂದಿದ್ದು  ಅವರನ್ನು ಹಾಲ್‌ ನಲ್ಲಿ ಕುಳ್ಳಿರಿಸಿ ಬೆಳಗ್ಗೆ 10-00 ಗಂಟೆಯಲ್ಲಿ ಅಪರಿಚಿತ ಮಹಿಳೆಯು ಕಾಣದೇ ಇದ್ದುದರಿಂದ ಗಾಬರಿಯಾಗಿ ಮನೆಯಲ್ಲಿ ಪರಿಶೀಲಿಸಲಾಗಿ ಪಿರ್ಯಾದಿ ಸೊಸೆ ಹುಸ್ಮಾ ಕೌಸರ್ ರೂಂನಲ್ಲಿನನ ಬೀರುವಿನಲ್ಲಿದ್ದ ಚಿನ್ನದ ವಡವೆಗಳು ನಾಪತ್ತೆಯಾಗಿದ್ದು ಸದರಿ ಒಡವೆಗಳನ್ನು ಅಪರಿಚಿತ ಮಹಿಳೆಯು ಕಳವು ಮಾಡಿಕೊಂಡು ಹೋಗಿರುತ್ತಾಳೆಂದು ನೀಡಿದ ದೂರುWednesday, 22 March 2017

Crime Incidents 22-03-17

ಹೊನ್ನವಳ್ಳಿ  ಪೊಲೀಸ್‌ ಠಾಣೆ ಮೊ,ನಂ-33/2017 ಕಲಂ-323 324 504 506 ರೆ,ವಿ 34 ಐಪಿಸಿ

ದಿನಾಂಕ-21/03/2017 ರಂದು ಮಧ್ಯಾಹ್ನ 04-00 ಗಂಟೆಯಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಮೀಸೆತಿಮ್ಮನಹಳ್ಳಿ ಗ್ರಾಮದ ಯೋಗೀಶ ಬಿನ್ ಗಂಗಾನಾಯಕ ರವರು ನೀಡಿದ ಹೇಳಿಕೆ ಅಂಶವೇನೆಂದರೆ. ಪಿರ್ಯಾದಿಯ ತಂದೆ ಗಂಗಾನಾಯಕ ಮತ್ತು ತಮ್ಮ ಗ್ರಾಮದ ಕರೀನಾಯಕರವರಿಗೆ ಕಲ್ಕೆರೆ ಗ್ರಾಮದ ಸರ್ವೆ ನಂ-94 ರಲ್ಲಿ ಇರುವ ಹುಣಸೇ ಮರದ ವಿಚಾರವಾಗಿ ಮತ್ತು ಹಣ್ಣನ್ನು ಬಡಿದುಕೊಳ್ಳುವ ವಿಚಾರವಾಗಿ ತಕರಾರು ಇದ್ದು ಪಿರ್ಯಾದಿಯ ಅಕ್ಕ ಚಂದ್ರಮ್ಮಳಿಗೆ  ಈ ಹುಣಸೇ ಮರದ ಹಣ್ಣನ್ನು ಬಡಿದುಕೊಳ್ಳಲು 5000 ರೂಗೆ ಮಾರಿದ್ದು ದಿನಾಂಕ-21/03/2017 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಚಂದ್ರಮ್ಮಳು ಹುಣಸೇ ಹಣ್ಣನು ಬಡಿಯುವಾಗ ತಮ್ಮ ಗ್ರಾಮದ ಸುಜಾತಮ್ಮ ಆಕೆಯ ಗಂಡ ಕರೀನಾಯಕ ಮತ್ತು ಇವರ ಮಗ ರಂಗಸ್ವಾಮಿ ರವರುಗಳು ಹುಣಸೇ ಹಣ್ಣು ಬಡಿಯವುದು ಏಕೆ ಎಂದು ಜಗಳ ತೆಗೆದು ಸುಜಾತಮ್ಮಳು ಚಂದ್ರಮ್ಮಳಿಗೆ ಅವಾಚ್ಯವಾಗಿ ಬೈಯ್ಯುವಾಗ ಪಿರ್ಯಾದಿ ತನ್ನತಂದೆ ಗಂಗಾನಾಯಕನೊಂದಿಗೆ ಕೇಳಲು ಹೋದಾಗ ಸುಜಾತಮ್ಮಳ ಗಂಡ ಕರೀನಾಯಕ ಮತ್ತು ಮಗ ರಂಗಸ್ವಾಮಿಯವರು ಸೇರಿಕೊಂಡು ಅಲ್ಲೇ ಬಿದ್ದಿದ್ದ ಕಲ್ಲಿನಿಂದ ಪಿರ್ಯಾದಿಯ ತಲೆ ಮುಂಭಾಗಕ್ಕೆ, ಎದೆಗೆ ಹೊಡೆದು ಗಾಯಪಡಿಸಿದರು ಮತ್ತು ತಂದೆ ಗಂಗಾನಾಯಕರಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು ನಮ್ಮ ಮತ್ತು ಹುಣಸೇ ಮರದ ತಂಟೆಗೆ ಬಂದರೆ ಕೊಲೆ ಮಾಡುತ್ತೇನೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ ನಂತರ ಗಾಯಗೊಂಡ  ನಾವುಗಳು 108 ವಾಹನ ಕರೆಯಿಸಿಕೊಂಡು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿರುತ್ತೇವೆ ಹುಣಸೇ ಮರದ ವಿಚಾರದಲ್ಲಿ ಗಲಾಟೆ ಮಾಡಿ ಹೊಡೆದ ಮೇಲ್ಕಂಡ ಮೂವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆಯ್ನು ಪಡೆದು ವಾಪಸ್ ಠಾಣೆಗೆ ಸಂಜೆ 05-00 ಗಂಟೆಗೆ ಬಂದು ಪ್ರಕರಣ ದಾಖಲಿಸಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  30/2017   ಕಲಂ: 78 Cls 3 Kp Act

ದಿನಾಂಕ:20/03/2017 ರಂದು ಸಂಜೆ 7:00 ಗಂಟೆ ಸಮಯದಲ್ಲಿ ವೈ ಎನ್ ಹೊಸಕೋಟೆ ಠಾಣಾ ಸರಹದ್ದು ತಿಪ್ಪಗಾನಹಳ್ಳಿ  ಗ್ರಾಮದ ಅರಳೀಕಟ್ಟೆ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ಪಂಚಾಯ್ತರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ  ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ತಿಪ್ಪಗಾನಹಳ್ಳಿ  ಗ್ರಾಮದ   ಅರಳೀಕಟ್ಟೆ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ  ಒಬ್ಬ  ಆಸಾಮಿಯು  ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಬನ್ನಿ 1 ರೂಗೆ 70 ರೂ ಕೊಡುತ್ತೇವೆ ನಿಮ್ಮ ಅದೃಷ್ಟದ  ನಂಬರ್ ಅನ್ನು ಬರೆಸಿಕೊಳ್ಳಿ ಎಂತ ಕೂಗುತ್ತಾ   ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದು   ನಂತರ ನಾನು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ನೆರೆದಿದ್ದ ಜನರು ಜನರು ಓಡಿ ಹೋಗಿದ್ದು ,ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದ   ಆಸಾಮಿಯನ್ನು ಹಿಡಿದು  ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮೂಡಲಗಿರಿಯಪ್ಪ ಬಿನ್ ಗೋವಿಂದಪ್ಪ, 55 ವರ್ಷ, ಪ.ಜಾತಿ.  ತಿಪ್ಪಗಾನಹಳ್ಳಿ ಗ್ರಾಮ,ಪಾವಗಡ ತಾ|| ಎಂತ ತಿಳಿಸಿದ್ದು ಆತನ ಬಳಿ ಇದ್ದ ಮಟ್ಕಾ ಜೂಜಾಟಕ್ಕೆ ಕಟ್ಟಿಸಿಕೊಂಡಿದ್ದ 610=00 ರೂ ನಗದು ಹಣ, ಮಟ್ಕಾ ನಂಬರ್ ಗಳನ್ನು ಬರೆದಿರುವ ಒಂದು  ಮಟ್ಕಾ ನಂಬರ್ ಬರೆದಿರುವ  ಚೀಟಿಗಳನ್ನು  ಹಾಗೂ ಒಂದು ಲೆಡ್ ಪೆನ್ ನ್ನು ಪಂಚರ ಸಮಕ್ಷಮ ಪಂಚನಾಮೆ ಮುಖೇನ ವಶಪಡಿಸಿಕೊಂಡು   ಪ್ರಕರಣ ದಾಖಲಿಸಿದೆTuesday, 21 March 2017

IGP Central Range Visit


Press Note 21-03-17

ಪತ್ರಿಕಾ  ಪ್ರಕಟಣೆ

ತುಮಕೂರು  ಜಿಲ್ಲಾ  ಪೋಲಿಸ್ ಹಾಗೂ ಜನ ಶಿಕ್ಷಣ ಸಂಸ್ಥೆ, ತುಮಕೂರು ರವರ  ಸಹಯೋಗದೊಂದಿಗೆ  ತುಮಕೂರು ಜಿಲ್ಲಾ ಪೋಲಿಸ್ ಅಧಿಕಾರಿ/ಸಿಬ್ಬಂದಿಗಳ  ಕುಟುಂಬವರ್ಗದವರಿಗೆ  ವಿವಿಧ  ಸ್ವ-ಉದ್ಯೋಗ ತರಬೇತಿಗಳನ್ನು ನೀಡುವ ಕಾರ್ಯಕ್ರಮವನ್ನು ಈ ದಿನ ಶ್ರೀ ಸೀಮಂತ್ ಕುಮಾರ್ ಸಿಂಗ್ , ಆರಕ್ಷಕ ಮಹಾ ನೀರೀಕ್ಷಕರು,  ಕೇಂದ್ರ ವಲಯ, ಬೆಂಗಳೂರು  ರವರು ಉದ್ಘಾಟಿಸಿದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ಇಶಾ ಪಂತ್ ರವರು ಅಧ್ಯಕ್ಷತೆ  ವಹಿಸಿದ್ದರು.  ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ  ಶ್ರೀ ಮಂಜುನಾಥ.ಜಿ.ಬಿ, ಡಿ.ವೈ.ಎಸ್.ಪಿ ಡಿಎಆರ್ ರವರಾದ  ಶ್ರೀ ಮಂಜುನಾಥ.ಎ.ಸಿ ಮತ್ತು ತುಮಕೂರು ನಗರ ಡಿ.ವೈ.ಎಸ್.ಪಿ ರವರಾದ ಶ್ರೀ ನಾಗರಾಜು  ಹಾಗೂ ಜಿಲ್ಲೆಯ ಇತರ ಅಧಿಕಾರಿಗಳು/ಸಿಬ್ಬಂದಿಗಳು ಹಾಗೂ ಕುಟುಂಬವರ್ಗದವರು ಉಪಸ್ಥಿತರಿದ್ದರು. ಈ ತರಬೇತಿಯಲ್ಲಿ ಪೋಲಿಸ್ ಅಧಿಕಾರಿ/ಸಿಬ್ಬಂದಿಗಳ  ಕುಟುಂಬವರ್ಗದವರಿಗೆ  ಹೊಲಿಗೆ ತರಬೇತಿ, ಎಂಬ್ರಾಯ್ಡರಿ ತರಬೇತಿ, ಡ್ರೆಸ್ ಮೇಕಿಂಗ್ ಮತ್ತು ಡಿಸೈನಿಂಗ್ ತರಬೇತಿ, ಬ್ಯುಟಿಷಿಯನ್ ತರಬೇತಿ, ಇಂಗ್ಲೀಷ್ ಸ್ಪೀಕಿಂಗ್ ಕೊರ್ಸ್  ತರಬೇತಿಗಳನ್ನು ನೀಡಲಾಗುತ್ತದೆ.   ಹಾಗೂ ಇದೇ ಸಮಯದಲ್ಲಿ ಜಿಲ್ಲೆಯಾದ್ಯಂತ ಗಸ್ತು ಕರ್ತವ್ಯ ನಿರ್ವಹಿಸಲು ಮೂರು ಹೊಸ ಮಾರುತಿ ಎರ್ಟಿಗಾ ವಾಹನಗಳಿಗೆ ಚಾಲನೆ ನೀಡಲಾಯಿತು ಮತ್ತು ಸಂಚಾರಿ ನಿಯಮಗಳಿಗೆ ಸಂಬಂಧಪಟ್ಟ ಫಲಕಗಳನ್ನು ಅನಾವರಣಗೊಳಿಸಲಾಯಿತು.


Crime Incidents 21-03-17

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 65/2017 ಕಲಂ 279, 337 ಐಪಿಸಿ 134(A&B),187 ಐಎಂವಿ ಆಕ್ಟ್

ದಿನಾಂಕ:20/03/2017 ರಂದು ರಾತ್ರಿ 8-30 ಗಂಟೆಗೆ ತುಮಕೂರು ತಾಲ್ಲೋಕ್ ಹೆಗ್ಗೆರೆ ಗ್ರಾಮದ ಸಂಜಯ್ ಎಂ ಬಿನ್ ಮಲ್ಲಿಕಾರ್ಜುನ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ತಮ್ಮ ವಿಜಯ್ ಕುಮಾರ್ ರವರು ತುಮಕೂರು ಕೈಗಾರಿಕಾ ಪ್ರದೇಶದ ಎಸ್.ಆರ್ ಅಟೋಮೊಬೈಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ:02/03/2017 ರಂದು ಕೆಲಸಕ್ಕೆ ಹೋಗಲು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಹೆಗ್ಗೆರೆ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಿರುವಾಗ್ಗೆ ಗುಬ್ಬಿ ಕಡೆಯಿಂದ KA-06-EC-5761 ನೇ ದ್ವಿ ಚಕ್ರ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ವಿಜಯ್ ಕುಮಾರ್ ರವರಿಗೆ ಡಿಕ್ಕಿ ಹೊಡೆಸಿದ್ದು, ನನ್ನ ತಮ್ಮನಿಗೆ ಬಲಗಾಲ ಮಂಡಿಗೆ ತೀವ್ರತರವಾದ ಪೆಟ್ಟಾಗಿದ್ದು ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ವೈದ್ಯರು ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ಅಪಘಾತ ಉಂಟು ಮಾಡಿರುವ KA-06-EC-5761ನೇ ದ್ವಿಚಕ್ರ ವಾಹನದ ಸವಾರ ವಾಹನ ಸಮೇತ ಪರಾರಿಯಾಗಿರುತ್ತಾನೆ. ನನ್ನ ತಮ್ಮನನ್ನು ನೋಡಿಕೊಳ್ಳಲು ಯಾರು ಇರದ ಕಾರಣ ನಾನು ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು KA-06-EC-5761ನೇ ದ್ವಿಚಕ್ರ ವಾಹನದ ಸವಾರನನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

 

ಸಿ. ಎಸ್.ಪುರ ಠಾಣಾ ಮೊ.ನಂ:22/2017. ಕಲಂ:363 ಐಪಿಸಿ

ದಿನಾಂಕ:20.03.2017 ರಂದು ಪಿರ್ಯಾದುದಾರರಾದ ಪ್ರೇಮ ಕೊಂ ಶಿವಲಿಂಗಯ್ಯ. 38 ವರ್ಷ, ವಕ್ಕಲಿಗರು, ದೇವಿರಮ್ಮನ ಪಾಳ್ಯ, ಅಂಕಳಕೊಪ್ಪ ಮಜರೆ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ಪಿರ್ಯಾದುದಾರರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೊದಲನೇಯವಳು ಕಾವ್ಯ, 2 ನೇಯವಳು ಅನಿತಾ.ಎಸ್ ಆಗಿದ್ದು, ತಮ್ಮ ಮಗಳಾದ ಅನಿತಾಳನ್ನು ಪಿರ್ಯಾದಿಯ ಅಜ್ಜಿಯಾದ ಮುನಿಯಮ್ಮ ಕೊಂ ಲೇಟ್ ಬೆಟ್ಟಸ್ವಾಮಿಗೌಡರವರ ಬಳಿ ಅಜ್ಜಿಯನ್ನು ಹಾರೈಕೆ ಮಾಡುವ ಸಲುವಾಗಿ ದೇವಿರಮ್ಮನ ಪಾಳ್ಯದಲ್ಲಿ ಬಿಟ್ಟಿದ್ದು, ಮಾವಿನಹಳ್ಳಿ ಶಾಲೆಯಲ್ಲಿ 10 ನೇ ತರಗತಿ ವಿಧ್ಯಾಬ್ಯಾಸ ಮಾಡಿದ್ದು, ಇವಳ ಜನ್ಮ ದಿನಾಂಕ:12.06.2000 ಆಗಿರುತ್ತೆ.  ಅನಿತಾ.ಎಸ್ ರವರು ದಿ:18.03.2017 ರಂದು  ಬೆಳಗ್ಗೆ  10.00 ಗಂಟೆ ಸಮಯದಲ್ಲಿ  ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿ ಇಟ್ಟಿದ್ದ ಸುಮಾರು 40 ಸಾವಿರ ರೂಗಳನ್ನು ಹಣ ಹಾಗೂ 2 ಉಂಗುರ & ಓಲೆಗಳನ್ನು ತೆಗೆದುಕೊಂಡು  ಹೋಗಿರುತ್ತಾಳೆ, ಇವಳು ಹೋಗಬೇಕಾದರೆ  ತಮ್ಮ ಗ್ರಾಮದ ಭಾಗ್ಯಮ್ಮ ಕೊಂ ಶಿವಣ್ಣರವರಿಗೆ ಸಿಕ್ಕಿದ್ದು, ಅವರು ಎಲ್ಲಿಗೆ ಎಂದು ಕೇಳಿದ್ದಕ್ಕೆ ಬಟ್ಟೆ ಹೊಲೆಸಲು ಹೆಬ್ಬೂರಿಗೆ ಹೋಗುತ್ತೇನೆ ಎಂದು ಹೇಳಿ ಹೋದವಳು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲಾ, ಪಿರ್ಯಾದಿ ಕಡೆಯವರು ತಮ್ಮ ಸಂಬಂದಿಕರ& ಸ್ನೇಹಿತರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲಾ, ಆದ್ದರಿಂದ ಕಾಣೆಯಾದ ಹುಡುಗಿ ಅನಿತಾಳನ್ನು ಪತ್ತೆ ಮಾಡಿಕೊಡಿ ಎಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 60/2017 ಕಲಂ; 279, 337 ಐ.ಪಿ.ಸಿ

ದಿನಾಂಕ-20-03-2017 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಪಿರ್ಯಾದಿ ಗಂಗಾಧರ ಎಂ.ಎನ್‌ ಬಿನ್‌ ಲೇಟ್‌ ನಂಜೇಗೌಡ, ಸುಮಾರು 42 ವರ್ಷ, ವಕ್ಕಲಿಗರು, ಜಿರಾಯ್ತಿ, ಮಲ್ಲಾಪುರ, ಅಮೃತೂರು ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-19-03-2017 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ನಮ್ಮ ಸಂಭಂದಿಯಾದ ನಮ್ಮ ಗ್ರಾಮದ ಅನಿಲ್‌ಕುಮಾರ್‌ ಬಿನ್‌ ರಾಮಕೃಷ್ಣ ರವರು ಕೆಲಸದ ನಿಮಿತ್ತ ಸಂತೆಮಾವತ್ತೂರಿಗೆ ಹೋಗಲೆಂದು ಅವರ ಬಾಬ್ತು ಕೆಎ-06-ಇವಿ-4363 ನೇ ಬೈಕಿನಲ್ಲಿ ಅವರ ತಾಯಿಯಾದ ಲಕ್ಕಮ್ಮ ಸುಮಾರು 45 ವರ್ಷ ರವರನ್ನು ಕೂರಿಸಿಕೊಂಡು ಅಮೃತೂರು-ಸಂತೆಮಾವತ್ತೂರು ಮುಖ್ಯ ರಸ್ತೆಯ ಹೆಗ್ಗಡತಿಹಳ್ಳಿ ಗ್ರಾಮದ ಬಳಿ ಹೋಗುತ್ತಿರುವಾಗ್ಗೆ ಅನಿಲ್‌ಕುಮಾರ್ ರವರರು ತನ್ನ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿ ರಸ್ತೆಯಲ್ಲಿದ್ದ ಗುಂಡಿಗೆ ಬೈಕನ್ನು ಇಳಿಸಿದ ಪರಿಣಾಮವಾಗಿ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಲಕ್ಕಮ್ಮ ರವರು ಕೆಳಕ್ಕೆ ಬಿದ್ದು ಅವರ ತಲೆಗೆ ಮತ್ತು ಕೈಕಲುಗಳಿಗೆ ಪೆಟ್ಟುಬಿದ್ದಿದ್ದು ನಂತರ ಅಲ್ಲಿಯೇ ಇದ್ದ ಹೆಗ್ಗಡತಿಹಳ್ಳಿ ಗ್ರಾಮದ ಕೃಷ್ಣ ರವರು ಗಾಯಾಳು ಲಕ್ಕಮ್ಮ ರವರನ್ನು ಚಿಕಿತ್ಸೆಗಾಗಿ ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನಂತರ ಲಕ್ಕಮ್ಮ ರವರು ಕುಣಿಗಲ್‌ ನಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಆದ್ದರಿಂದ ಲಕ್ಕಮ್ಮ ರವರಿಗೆ ಅಪಘಾತಪಡಿಸಿದ ಬೈಕ್‌ ಚಾಲಕ ಅನಿಲ್‌ಕುಮಾರ್‌ ರವರ ವಿರುದ್ದ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ಅರ್ಜಿಯ ಅಂಶವಾಗಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-47/2017 ಕಲಂ: 332,353,354,504,506 ಐ.ಪಿ.ಸಿ

ದಿನಾಂಕ: 20/03/2017 ರಂದು ಸಂಜೆ 05-20 ಗಂಟೆಗೆ ಪಿರ್ಯಾದಿ ಶ್ರೀಮತಿ ಮಮತಾ ಆರ್.ಎಸ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಬೆಸ್ಕಾಂನ, ಕಾ ಮತ್ತು ಪಾ ಘಟಕ-2 ರಲ್ಲಿ ಮಾಪಕ ಓದುಗ ಹುದ್ದೆ ನಿರ್ವಹಿಸುತ್ತಿದ್ದು, ದಿನಾಂಕ: 20/03/2017 ರಂದು ನನ್ನ ಮೇಲಾಧಿಕಾರಿಗಳವರಾದ ಶ್ರೀ ತೋಂಟಾರಾದ್ಯ ಸ.ಇಂ.(ವಿ) ನಿರ್ಧೇಶನದ ಮೇರೆಗೆ ಎಂ.ಆರ್-15 ರ 2ನೇ ದಿನಾಂಕದ ಕಂದಾಯ ವಸೂಲಾತಿಗಾಗಿ ಮಧ್ಯಾಹ್ನ 01-40 ಗಂಟೆಯಲ್ಲಿ ತಿಪಟೂರು ಟೌನ್ ಗಾಂಧಿನಗರದ ಕರಿಬಸಪ್ಪ ಕಾಲೋನಿಯಲ್ಲಿರುವ ಟಿ.ಎಲ್- 5364 ನೇ ವಿಧ್ಯುತ್ ಸ್ಥಾವರದ ಕಂದಾಯವು 877/- ರೂ ಬಾಕಿ ಇದ್ದು, ಸದರಿ ಸ್ಥಾವರದ ವಿಧ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ನನ್ನ ಸಹೋದ್ಯೋಗಿ ದರ್ಶನ್ ಎನ್.ಎಸ್, ಜೆ.ಎಲ್.ಎಂ (ಕಿರಿಯ ಮಾರ್ಗದಾಳು) ರವರೊಂದಿಗೆ ಮುಂದಾದಾಗ ಸದರಿ ಮನೆಯಲ್ಲಿ ವಾಸವಿರುವ ಪ್ಯಾರೆಜಾನ್ ರವರ ಮಗನಾದ ಜಾವೇದ್ ಎಂಬುವರು ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿ, ನನ್ನ ಬಲಕೈಯನ್ನು ಹಿಡಿದು ಗೋಡೆಗೆ ಜೋರಾಗಿ ನೂಕಿ, ಹೊಡೆದು ಗಾಯ ಮಾಡಿರುತ್ತಾರೆ. ನಂತರ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಾಗೂ ಮಾನಸಿಕವಾಗಿ ಹಲ್ಲೆ ಮಾಡಿರುತ್ತಾರೆ. ಅಲ್ಲದೆ ನನ್ನ ಸಹೋದ್ಯೋಗಿ ದರ್ಶನ್ ರವರ ಮೇಲೂ ಹಲ್ಲೆ ಮಾಡಿ ಮೀಟರನ್ನು ಮುಟ್ಟು ನೋಡೋಣ ನಿನ್ನ ಕೈಯನ್ನು ಕತ್ತರಿಸುತ್ತೇನೆ. ಎಂದು ಬೆದರಿಕೆಯನ್ನು ಹಾಕಿದ್ದು, ನಾನು ನನ್ನ ಕರ್ತವ್ಯವನ್ನು ಮಾಡಲು ಬಿಡದೇ, ಸರ್ಕಾರಿ ಸೇವೆಯನ್ನು ಮಾಡಲು ಅಡಚಣೆ ಮಾಡಿ, ನನ್ನ ಹಾಗೂ ನನ್ನ ಸಹೋದ್ಯೋಗಿಯ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವ ಹಾಗೂ ಒಂದು ಹೆಣ್ಣು ಮಗಳೆಂದು ಪರಿಗಣಿಸದೇ ಹಲ್ಲೆ ಮಾಡಿರುವ ಮೇಲ್ಕಂಡ ಜಾವೇದ್ ರವರ ಮೇಲೆ ಕಾನುನು ರೀತ್ಯಾ ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ. 68/2017  ಕಲಂ 379 ಐ.ಪಿ.ಸಿ  ಮತ್ತು  ಕಲಂ  136 Indian Electricity act-2003

ದಿನಾಂಕ:20/03/2017 ರಂದು ಮದ್ಯಾಹ್ನ 4-00 ಗಂಟೆಗೆ ಪಿರ್ಯಾದಿ ಗೋಪಿನಾಯ್ಡು, ಸೀನಿಯರ್ ಮ್ಯಾನೇಜರ್, ಕೆ.ಇ.ಸಿ ಇಂಟರ್ ನ್ಯಾಷನಲ್ ಲಿಮಿಟೆಡ್, ಬೆಂಗಳೂರುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಪಿರ್ಯಾದಿ ಕೆ.ಇ.ಸಿ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ನಮ್ಮ ಕಂಪನಿಯ ವತಿಯಿಂದ ಕೆ.ಪಿ.ಟಿ.ಸಿ.ಎಲ್‌ ನ 400 ಕೆ.ವಿ (ಡಿ.ಸಿ) ವಿದ್ಯುತ್ ಲೈನ್ ಕಾಮಗಾರಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಕೆಳಗಿನ ಕಣಿವೆಯಿಂದ ತುಮಕೂರು ಜಿಲ್ಲೆಯ ವಸಂತ ನರಸಾಪುರ ವರೆಗಿನ ವಿದ್ಯುತ್ ಮಾರ್ಗದ ಲೈನ್ ಎಳೆಯುವ ಕೆಲಸ ಮಾಡುತ್ತಿದ್ದು, ದಿನಾಂಕ:06/02/2017 ರಂದು ರಾತ್ರಿ ಯಾವುದೋ ವೇಳೆಯಲ್ಲಿ ಸಿರಾ ತಾಲ್ಲೋಕಿನ  ರತ್ನ ಸಂದ್ರ ಗ್ರಾಮದ ಸಮೀಪ ಇರುವ ವಿದ್ಯತ್ ಟವರ್ ನಂ 100/4 ಮತ್ತು 100/5 ರಲ್ಲಿನ ವಿದ್ಯುತ್ ಟವರ್‌‌ಗಳಲ್ಲಿನ ಕಂಡಕ್ಟರ್‌ಗಳಲ್ಲಿ ಅಳವಡಿಸಿದ್ದ ಅಲ್ಯುಮಿನಿಯಂ ವೈರ್ ಅನ್ನು ಯಾರೋ ಕಳ್ಳರು ಕತ್ತರಿಸಿಕೊಂಡು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ದಿನಾಂಕ:07/02/2017 ರಂದು ಬೆಳಗ್ಗೆ ಸುಮಾರು 7-00 ಗಂಟೆಯಲ್ಲಿ ನಮ್ಮ ಕೆಲಸಗಾರರಿಂದ ನನಗೆ ವಿಚಾರ ತಿಳಿದಿದ್ದು ನಾನು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ನೋಡಲಾಗಿ ಕಳ್ಳತನವಾಗಿರುವುದು ನಿಜವಾಗಿತ್ತು. ಈ ಸ್ಥಳದಲ್ಲಿ ಸುಮಾರು 2125 ಮೀಟರ್ ಉದ್ದದ ಅಲ್ಯುಮಿನಿಯಂ ತಂತಿ ಕಳ್ಳತನವಾಗಿರುತ್ತೆ. ನಂತರ ನಾನು ನಮ್ಮ ಕಂಪನಿಯ ಮೇಲಾಧಿಕಾರಿಗಳಿಗೆ ವಿಚಾರ ತಿಳಿಸಿ ಅವರೊಂದಿಗೆ ಚರ್ಚಿಸಿ ನಮ್ಮ ಮೇಲಾಧಿಕಾರಿಗಳು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ತಿಳಿಸಿದರ ಮೇರೆಗೆ ಮತ್ತು ನಾನು ತುರ್ತು ಕಾಮಗಾರಿ ನಡೆಸುತ್ತಿದ್ದರಿಂದ ಠಾಣೆಗೆ ಹಾಜರಾಗಿ ದೂರು ನೀಡಲು ಸಾದ್ಯವಾಗಿರಲಿಲ್ಲ. ಆದ್ದರಿಂದ ಈದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಈ ಸ್ಥಳದಲ್ಲಿ ಕಳ್ಳತನವಾಗಿರುವ ಅಲ್ಯುಮಿನಿಯಂ ವಿದ್ಯುತ್ ತಂತಿಯ ಒಟ್ಟು ಅಂದಾಜು ಬೆಲೆ ಸುಮಾರು 7,50,000-00 ರೂಗಳಾಗಿರುತ್ತವೆ. ತಾವುಗಳು ಸೂಕ್ತ ಕಾನೂನು ಕ್ರಮ ಜರುಗಿಸಿ ಇತ್ಯಾದಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ


Page 1 of 4
Start
Prev
1

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 85 guests online
Content View Hits : 89370