lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2017 >
Mo Tu We Th Fr Sa Su
        1 2 3
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 30  
September 2017

Thursday, 28 September 2017

Crime Incidents 28-09-17

ಸಿ.ಎಸ್.ಪುರ ಠಾಣಾ ಮೊ.ನಂ:86/2017. ಕಲಂ:279. 337 ಐಪಿಸಿ

ದಿನಾಂಕ:27.09.2017 ರಂದು  ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಗಾಯಾಳು  ಮೋಹನ್ ಕುಮಾರ್  ಬಿನ್ ನಾಗರಾಜು, 25 ವರ್ಷ, ಈಡಿಗರು, ಕೂಲಿ ಕೆಲಸ, ಕಾಳೇನಹಳ್ಳಿ,  ಗುಬ್ಬಿ ತಾಲ್ಲೂಕು ರವರು ನೀಡಿದ ಹೇಳಿಕೆ ಸಾರಾಂಶವೆದರೆ, ದಿನಾಂಕ:19.09.2017 ರಂದು ಹರಿವೇಸಂದ್ರ ಗ್ರಾಮಕ್ಕೆ  ಆರ್ಕೆಸ್ಟ್ರಾ  ನೋಡಲು  ನಾನು & ನನ್ನ  ಸ್ನೇಹಿತರಾದ ರಾಮುರವರು ಹೋಗಿದ್ದು,. ರಾತ್ರಿ ಸುಮಾರು 10.30 ಸಮಯದಲ್ಲಿ ನಾನು & ರಾಮುರವರು  ಮೂತ್ರ ವಿಸರ್ಜನೆ ಮಾಡಲು  ಸಿ.ಎಸ್.ಪುರ-ಗುಬ್ಬಿ ರಸ್ತೆಯ  ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುವಾಗ, ಗುಬ್ಬಿಯ ಕಡೆಯಿಂದ  ಬಂದ ಕೆ.ಎ-06ಇಎಕ್ಸ್-2608 ನ ದ್ವಿ ಚಕ್ರವಾಹನದ ಸವಾರನು  ತನ್ನ ಬೈಕನ್ನು ಅತಿ ವೇಗ & ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ನನಗೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಎಡಗಾಲಿನ ಮೂಳೆ ಮುರಿದಿದ್ದು, ನಂತರ ಆರೋಪಿ ಚಾಲಕನು & ನನ್ನ ಸ್ನೇಹಿತನಾದ ರಾಮುರವರು 108 ಆಂಬ್ಯುಲೆನ್ಸ್ ನಲ್ಲಿ   ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿಂದ ದಿ:20.09.2017 ರಂದು ಸಿದ್ದಾರ್ಥ ಮೆಡಿಕಲ್  ಕಾಲೇಜಿಗೆ  ತಂದು ಚಿಕಿತ್ಸೆಗೆ  ಸೇರಿಸಿರುತ್ತಾರೆ, ನಂತರ ಈ ವಿಚಾರವನ್ನು ನನ್ನ ತಂದೆ & ಸಂಬಂದಿಕರಿಗೆ ತಿಳಿಸಿದ್ದು, ನನ್ನ ಸಂಬಂದಿಕರಾದ  ಬಿ.ಆರ್. ರಾಮಣ್ಣರವರು ಆಸ್ಪತ್ರೆಯಲ್ಲಿ  ವಿಚಾರ ಮಾಡಿದ್ದು, ಆರೋಪಿ ಪರಮೇಶ್ ರವರು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಯಲ್ಲಿ ಹಾಗೂ ಸಿದ್ದಾರ್ಥ ಮೆಡಿಕಲ್  ಕಾಲೇಜಿಗೆ  ಚಿಕಿತ್ಸೆಗೆ ತಂದು ಸೇರಿಸಿದ ಸಮಯದಲ್ಲಿ ಸ್ವತಹ ಮೋಹನ್ ಕುಮಾರ್ ರವರೇ ಬೈಕಿನಿಂದ ಬಿದ್ದು ಅಪಘಾತವಾಗಿರುತ್ತೆ ಎಂದು ನಮೂದು ಮಾಡಿಸಿರುತ್ತಾರೆ ಎಂಬ ವಿಚಾರ ತಿಳಿಯಿತು, ನನಗೆ & ನನ್ನ ತಂದೆ ಅವಿಧ್ಯಾವಂತರಾದ ಕಾರಣ ಈ ಬಗ್ಗೆ ಮಾಹಿತಿ ತಿಳಿದಿರಲಿಲ್ಲಾ ಹಾಗೂ ಠಾಣೆಗೆ ದೂರು ನೀಡಿರಲಿಲ್ಲಾ, ಆದ್ದರಿಂದ ನನಗೆ ಅಫಘಾತಮಾಡಿದ ಕೆ.ಎ-06ಇಎಕ್ಸ್-2608 ನ ದ್ವಿ ಚಕ್ರವಾಹನದ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಸ್ವೀಕರಿಸಿ  ಠಾಣೆಗೆ ವಾಪಸ್ಸು ಬಂದು ಸಿ.ಎಸ್.ಪುರ ಠಾಣಾ ಮೊ.ನಂ:86/2017. ಕಲಂ:279. 337 ಐಪಿಸಿ ರೀತ್ಯಾ ಪ್ರಕರಣ  ದಾಖಾಲಿಸಿರುತ್ತೆ.

ಮದುಗಿರಿ ಪೊಲೀಸ್ ಠಾಣೆ ಮೊ.ಸಂ 187/17 ಕಲಂ 279,337  IPC

ಪಿರ್ಯಾದಿ ರಮೇಶ ಬಿನ್ ಚಿಕ್ಕವೆಂಕಟಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಹಾಗೂ ನನ್ನ ದೊಡ್ಡಪ್ಪನ ಮಗನಾದ ತಿಮ್ಮರಾಜು ರವರು ದಿನಾಂಕ: 27-09-2017 ರಂದು KA-64-H-0720 ನೇ ದ್ವಿಚಕ್ರ ವಾಹನದಲ್ಲಿ ಮಧುಗಿರಿಯಿಂದ ನಮ್ಮ ಊರಾದ ಹಳೆಹಟ್ಟಿಗೆ ರಸ್ತೆಯ ಎಡ ಬದಿಯಲ್ಲಿ ನಿಧಾನವಾಗಿ ಹೋಗುತ್ತಿರುವಾಗ್ಗೆ ಮಾರ್ಗಮದ್ಯೆ ಇದೇ ದಿನ ಮದ್ಯಾನ;2.00 ಗಂಟೆಯನ ಸಮಯದಲ್ಲಿ ಮಧುಗಿರಿ ತಾ|| ಮುದ್ದಯ್ಯನಪಾಳ್ಯ- ಮಲ್ಲೇನಹಳ್ಳಿ ಗ್ರಾಮದ ನಡುವೆ ಸಿಗುವ ನರ್ಸರಿ ಬಳಿ ಮಧುಗಿರಿ – ಹಿಂದೂಪುರ ಮುಖ್ಯ ರಸ್ತೆಯಲ್ಲಿ,ಪುರವರ ಕಡೆಯಿಂದ ಬರುತ್ತಿದ್ದ KA-64 1213 ನೇ ಅಟೋ ಚಾಲಕನು ಅಟೋವನ್ನು ಅತೀವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ ಪರಿಣಾಮ,ನಾನು ಹಾಗು ತಿಮ್ಮರಾಜು ರವರು ವಾಹನ ಸಮೇತ ಕೆಳಗೆ ಬಿದ್ದಿದ್ದು ಈ ಅಪಘಾತದಿಂದ ನನ್ನ ಬಲ ಕೈ,ಬಲ ಕಾಲಿಗೆ ಗಾಯಗಳಾಗಿದ್ದು, ತಿಮ್ಮರಾಜನ ಬಲ ಕಾಲಿಗೆ ಗಾಯಗಳಾದವು ನಂತರ ಅಪಘಾತ ಮಾಡಿದ ಅಟೋ ಚಾಲಕ ಹಾಗು ಇದೇ ರಸ್ತೆಯಲ್ಲಿ ಬರುತ್ತಿದ್ದ ಕುಮಾರ್ ಬಿನ್ ಗೋವಿಂದಪ್ಪ ರವರು ನಮ್ಮನ್ನು ಉಪಚರಿಸಿ ನಂತರ ಅಪಘಾತ ಮಾಡಿದ ಅಟೋದಲ್ಲಿ ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿರುತ್ತಾರೆ,ಹೆಚ್ಚಿನ ಗಾಯಗಳಾಗಿದ್ದ ತಿಮ್ಮರಾಜು ರವರನ್ನು ವೈದ್ಯರ ಸಲಹೆಯಂತೆ ತುಮಕೂರಿನ ಹೇಮಾವತಿ ಅಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆ. ಅದ್ದರಿಂದ ಈ ಅಪಘಾತ ಮಾಡಿದ KA-64 1213 ನೇ ಅಟೋ ಚಾಲಕನ ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೊನ್ನವಳ್ಳಿ ಪೊಲೀಸ್ ಠಾಣೆ      ಠಾಣಾ ಮೊ ನಂ 119/2017 ಕಲಂ:448.504.506.427 ಐಪಿಸಿ

ದಿನಾಂಕ;-27/09/2017 ರಂದು ಸಂಜೆ 4-30  ಗಂಟೆಗೆ ಕೇಸಿನ ಪಿರ್ಯಾದಿದಾರರಾದ ಶೇಖಯ್ಯ ಬಿನ್‌ ಲೇ|| ನಿಂಗಪ್ಪ ಆಲೂರು ಗ್ರಾಮದ ವಾಸಿಯವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಆಂಶವೆನೆಂದರೆ ಪಿರ್ಯಾದಿದಾರರ ತಮ್ಮ ರಾಮಚಂದ್ರನಿಗೆ ಸಾರ್ಥವಳ್ಳಿ ಗ್ರಾಮಪಂಚಾಯ್ತಿ ವತಿಯಿಂದ ಶೌಚಾಲಯ ಕಾಮಗಾರಿ ಮಂಜೂರು ಹಾಕಿದ್ದು ನಿಯಮದಂತೆ ಶೌಚಾಲಯ ಕಟ್ಟಿಸಿಕೊಡಲು ನನಗೆ 8000 ರೂಗಳನ್ನು ನನ್ನ ತಮ್ಮ ನೀಡಿದ್ದು ಈಗ್ಗೆ ಒಂದು ತಿಂಗಳ ಹಿಂದೆ ಶೌಚಾಲಯವನ್ನು ಕಟ್ಟಿಸಿ ಕೊಟ್ಟಿರುತ್ತೇನೆ. ಆದರೆ ಗ್ರಾಮ ಪಂಚಾಯ್ತಿಯಲ್ಲಿ ಹಣ ಬಿಡುಗಡೆಯಾಗದ ಕಾರಣ ಹಣವನ್ನು ರಾಮಚಂದ್ರನಿಗೆ ಕೊಡಲು ಸಾಧ್ಯವಾಗಿರುವುದಿಲ್ಲಾ, ಆದರೆ ಪ್ರತಿ ದಿನ ನನ್ನ ತಮ್ಮ ಕೊಟ್ಟಿರುವ 8000 ರೂ ಹಣವನ್ನು ಕೊಡು ಅಂತ ಕೇಳುತ್ತಿದ್ದು ಹಣ ಬಿಡುಗಡೆಯಾದ ಮೇಲೆ ಕೊಡುತ್ತೇನೆ ಎಂದು ಹೇಳಿದರು ದಿನಾಂಕ 25-09-2017 ರಂಧು ರಾತ್ರಿ ಸುಮಾರು 8-00 ಗಂಟೆಯಲ್ಲಿ ನನ್ನ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮನೆಯ ಮೇಲ್ಛಾವಣೆಗೆ ಹಾಕಿದ್ದ ಸುಮಾರು 800 ಕೆಂಪುಹೆಂಚುಳನ್ನು ಸಂಪೂರ್ಣವಾಗಿ ಹೊಡೆದು ಹಾಕಿ ಸುಮಾರು 8000 ರೂಗಳ ನಷ್ಟವಾಗಿರುತ್ತದೆ. ಇದನ್ನು ಕೇಳು ಮತ್ತು ತಡೆಯಲು ಹೋದಾಗ ಬೋಳಿಮಗನೆ ಸೂಳೇ ಮಗನೆ ಎಂತ ಅವ್ಯಾಚ್ಯ ಶಬ್ದಗಳಿಂದ ಬೈದು ನೀನು ಹತ್ತಿರ ಬಂದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆ ಎಂದು ಹೆಂಚಿನಿಂದ ಎಸೆಯಲು ಬಂದಿರುತ್ತಾನೆ. ನಮ್ಮ ಗ್ರಾಮ ಯವರಾಜ ಬಿನ್‌ ರಂಗಸ್ವಾಮಿ  ಮತ್ತು ಚಿಕ್ಕಣ್ಣ ಬಿನ್‌ ಕೆಂಚಶೆಟ್ಟಿ ಮುಂತಾದವರು ನೋಡಿರುತ್ತಾರೆ ನನ್ನ ತಮ್ಮನ ಮೇಲೆ ದೂರು ಕೊಡುವುದು ಬೇಡವೆಂದು ಸುಮ್ಮನಿದ್ದು . ಆದರೆ ಆತನ ಉಪಟಳ ಜಾಸ್ತಿಯಾಗಿದ್ದು,  ಈ ದಿನ ಠಾಣೆಗೆ ತಡವಾಗಿ ಬಂದು ನನ್ನ ಮನೆಯ ಹೆಂಚುಗಳನ್ನು ಹೊಡೆದು ಹಾಕಿ ನಷ್ಟ ಉಂಟು ಮಾಡಿ ಮನೆಗೆ ಅಕ್ರಮ ಪ್ರವೇಶಿಸಿ ಬೈದು ಪ್ರಾಣಬೆದರಿಕೆ ಹಾಕಿರುವ ಪಿರ್ಯಾದಿಯ ತಮ್ಮ ರಾಮಚಂದ್ರನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ  ಮೇರೆಗೆ ಠಾಣಾ ಮೊ ನಂ 119/2017 ಕಲಂ:448.504.506.427  ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆWednesday, 27 September 2017

Crime Incidents 27-09-17

ಬಡವನಹಳ್ಳಿ ಪೊಲೀಸ್ ಠಾಣೆ  ಮೊ.ಸಂ 80/2017   ಕಲಂ 87 ಕೆ ಪಿ ಆಕ್ಟ್‌

ದಿನಾಂಕ 26/09/2017 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಕೋರ ಪೊಲೀಸ್ ಠಾಣೆಯ ಪಿ.ಎಸ್.ಐ ಸಿ.ರವಿ ಕುಮಾರ್ ರವರು ನೀಡಿದ ದೂರಿನ ಅಂಶವೇನೆಂದರೆ ಈ ದಿನ ಮಾನ್ಯ ಎಸ್.ಪಿ ಸಾಹೇಬರವರು ಮದ್ಯಾಹ್ನ ನನ್ನನ್ನು ಕಛೇರಿಗೆ ಕರೆಯಿಸಿಕೊಂಡು ಅಕ್ರಮ ಜೂಜಾಟದ ಮೇಲೆ ದಾಳಿ ನಡೆಸಲು ಆದೇಶ ಮಾಡಿ ನನ್ನ ಜೊತೆಗೆ ಡಿ.ಎ.ಆರ್ ನ 15 ಜನ ಸಿಬ್ಬಂದಿಯನ್ನು ನೀಡಲು ಆರ್.ಪಿ.ಐ ರವರಿಗೆ ಸೂಚಿಸಿದ್ದರಿಂದ ನಾನು ಕೆಎ-08- 2105 ನೇ ಖಾಸಗೀ ವಾಹನದಲ್ಲಿ 15 ಜನ ಸಿಬ್ಬಂದಿಯನ್ನು ಕರೆದುಕೊಂಡು ಶಿರಾ ನಗರದ ಕಡವಿಗೆರೆ ಗೇಟ್ ಅಂಡರ್ ಪಾಸ್ ಬಳಿ ನಿಂತಿದ್ದಾಗ ವ್ಯಕ್ತಿಯೊಬ್ಬ ನಮ್ಮ ವಾಹನದ ಬಳಿ ಬಂದು ನಾನು ಎಸ್.ಪಿ ಮೇಡಂ ರವರ ಮಾಹಿತಿದಾರನೆಂದು ಪರಿಚಯಿಸಿಕೊಂಡು ಅಕ್ರಮ ಇಸ್ಪೀಟು ಜೂಜಾಟ ಸ್ಥಳ ತೋರಿಸುವುದಾಗಿ ಹೇಳಿದ್ದರಿಂದ ಆತನನ್ನು ವಾಹನದಲ್ಲಿ ಕರೆದುಕೊಂಡು ಶಿರಾ ಮಧುಗಿರಿ ರಸ್ತೆಯಲ್ಲಿ ಸಜ್ಜೇಹೊಸಹಳ್ಳಿಗೆ ಹೋಗುವ ರಸ್ತೆಯಲ್ಲಿ ಸುಮಾರು 5-6 ಕಿ,ಮೀ ಹೋದ ನಂತರ ಒಂದು ಗುಡ್ಡದ ಸಾಲಿನಲ್ಲಿ ಅಕ್ರಮ ಜೂಜಾಟ ಆಡುತ್ತಿದ್ದವರನ್ನು ತೋರಿಸಿ ಮಾಹಿತಿದಾರ ಹೊರಟು ಹೋದ, ನನ್ನ ಜೊತೆಯಲ್ಲಿದ್ದ ಎಲ್ಲಾ ಸಿಬ್ಬಂದಿಯೊಂದಿಗೆ ಅಕ್ರಮ ಜೂಜಾಟ ಆಡುತ್ತಿದ್ದವರನ್ನು ಮರೆಯಲ್ಲಿ ಸುತ್ತು ವರಿದು ನೋಡಲಾಗಿ 12-15 ರಿಂದ ಜನರು ಗುಂಡಾಕಾರವಾಗಿ ಕುಳಿತು ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂದು ಹೇಳುತ್ತಾ ಜೂಜಾಟದಲ್ಲಿ ತೊಡಗಿದ್ದರು. ಸಿಬ್ಬಂದಿಯನ್ನು ಮರೆಯಲ್ಲಿ ಬೆಂಗಾವಲು ಇರುವಂತೆ ಸೂಚಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳುವಂತೆ ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಿಸಿ, ನಂತರ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ..

ಮಧುಗಿರಿ ಪೊಲೀಸ್ ಠಾಣಾ ಮೊ.ಸಂ 182/2017 ಕಲಂ 78[3] KP Act

ಪಿರ್ಯಾದಿ ಶ್ರೀ ಪಾಲಾಕ್ಷ ಪ್ರಭು ಕೆ.ಎನ್, ಪಿಎಸ್‌ಐ, ಮಧುಗಿರಿ ಪೊಲೀಸ್ ಠಾಣೆರವರು ಅಪರಾಧ ವಿಭಾಗದ ಸಿಬ್ಬಂದಿಯಾದ ಶ್ರೀಕಂಠಪ್ಪ ಕೆ.ಸಿ,ಪಿಸಿ-371, ಮಾರುತಿನಾಯ್ಕ ಪಿಸಿ-351 ರವರ ಮಾಹಿತಿ ಮೇರೆಗೆ ಈ ದಿನ ದಿನಾಂಕ: 26-09-2017 ರಂದು ಸಂಜೆ 18.30 ಗಂಟೆಯ ಸಮಯದಲ್ಲಿ ಮಧುಗಿರಿ ಟೌನ್ APMC ಯಾರ್ಡ್ ಹತ್ತಿರ 1 ನೇ ಬಳಿಯ ಕಾವಲುಗಾರರ ಕೊಠಡಿ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಎದುರು ಅರ್ಜಿದಾರರು 1 ರೂ ಗೆ 70 ರೂ ಕೊಡುತ್ತೇನೆಂತಾ ಸಾರ್ವಜನಿಕರಿಗೆ ಆಮೀಷ ಒಡ್ಡುತ್ತಾ, ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾಗ, ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ, ಆರೋಪಿಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ 3050/ ರೂ ನಗದು, 1 ಮಟ್ಕಾ ಚೀಟಿ, ಒಂದು ಲೆಡ್ ಪೆನ್ನನ್ನು ವಶಕ್ಕೆ ಪಡೆದು, ಆರೋಪಿಗಳನ್ನು ನೋಡಿಕೊಂಡು ಸಿಬ್ಬಂದಿ ನೇಮಕ ಮಾಡಿ, ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ಜ್ಞಾಪನ ಸ್ವೀಕರಿಸಿ, ಸಂಜ್ಞೇಯ ಪ್ರಕರಣವಾದ್ದರಿಂದ ಎನ್.ಸಿ.ಆರ್ ದಾಖಲಿಸಿ, ನಂತರ ಘನ ನ್ಯಾಯಾಲಯದ ಅನುಮತಿ ಪಡೆದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-167/2017 ಕಲಂ 323,324,506,ರೆ/ವಿ 143 ಐಪಿಸಿ

ದಿನಾಂಕ-26/09/2017 ರಂದು ಬೆಳಿಗ್ಗೆ 8-30 ಗಂಟೆಗೆ ನ್ಯಾಯಾಲಯದ ಹೆಚ್ ಸಿ 37 ರವರು ತಂದು ಹಾಜರುಪಡಿಸಿದ ಪಿಸಿಆರ್ ನಂ-561/2017 ನೇದನ್ನು ಪಡೆದು ಪರಿಶೀಲಿಸಲಾಗಿ ಪಿರ್ಯಾದಿಯಾದ ವೆಂಕಟಚಲಯ್ಯ ಬಿನ್ ಲೇಟ್ ದಾಸಭೋವಿ, 50 ವರ್ಷ, ಮಾಕನಹಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು ರವರು ದಿನಾಂಕ-09/09/2017 ರಂದು ರಾತ್ರಿ 7-00 ಗಂಟೆಯಲ್ಲಿ ಮಾಕನಹಳ್ಳಿ ಗ್ರಾಮದಲ್ಲಿ ತನ್ನ ಮಗನಿಗೆ ನೀರಾವರಿ ಜಮೀನಿಗೆ ಆಳುಗಳನ್ನು ಕರೆದುಕೊಂಡು ಬಾ ಎಂತಾ ತಿಳಿಸಿದ್ದನ್ನು ಸದರಿ ಗ್ರಾಮದ ವಾಸಿಗಳಾದ 1)ಕೃಷ್ಣಮೂರ್ತಿ ಬಿನ್ ಲೇಟ್ ಗೋಪಾಲಯ್ಯ, 55 ವರ್ಷ, 2) ನಾಗಮ್ಮ ಕೋಂ ಕೃಷ್ಣಮೂರ್ತಿ, 48 ವರ್ಷ, 3) ಕರಿಬಸವಯ್ಯ ಬಿನ್ ಲೇಟ್ ಗೋಪಾಲಯ್ಯ, 50 ವರ್ಷ, 4) ಗೋಪಾಲಯ್ಯ ಬಿನ್ ಕೃಷ್ಣಮೂರ್ತಿ, 28 ವರ್ಷ, 5) ಪುನೀತ್ ಬಿನ್ ಕರಿಬಸವಯ್ಯ, 27 ವರ್ಷ, ಮತ್ತು 6) ಸಿದ್ದಲಿಂಗಯ್ಯ ಬಿನ್ ಸಿದ್ದಯ್ಯ, 55 ವರ್ಷ ರವರುಗಳು ತಪ್ಪಾಗಿ ಭಾವಿಸಿಕೊಂಡು ನನ್ನ ಮೇಲೆ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡಿ ಕೈಮುಷ್ಟಿಯಿಂದ ಹೊಡೆದು, ಕಾಲುಗಳಿಂದ ಹೊದ್ದು ನನ್ನನ್ನು ಕೇಳಗೆ ಬೀಳಿಸಿಕೊಂಡು ನನ್ನ ದೇಹದ ಎಲ್ಲಾ ಭಾಗಗಳಿಗೂ ನೋವುಂಟು ಮಾಡಿ, ಮತ್ತು ನನಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆ, ಆದ್ದರಿಂದ ಸದರಿ ಮೇಲ್ಕಂಡವರ ಮೇಲೆ ಕಾನೂನು ರಿತ್ಯಾ ಕ್ರಮ ತೆಗೆದುಕೊಳ್ಳಬೇಕೆಂದು ನೀಡಿದ ಪಿಸಿಆರ್ ನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 157/2017 ಕಲಂ: 457,380 ಐ.ಪಿ.ಸಿ

ದಿನಾಂಕ; 26/09/2017 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿ ಶ್ರೀಮತಿ ಸುರೇಖ ಕೋಂ ಮಹೇಶ್ 44ವರ್ಷ, ಲಿಂಗಾಯಿತರು, ಸರ್ಕಾರಿ ಸ್ಕೂಲ್ ಪಕ್ಕ, ನಂ-193, ಕಂಚಾಘಟ್ಟ ಬಡಾವಣೆ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಗಂಡ ಚಿಕ್ಕನಾಯಕನಹಳ್ಳಿ ತಾಲ್ಲೋಕ್ ತೀರ್ಥಪುರ ಕೆ.ಜಿ.ಬಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ದಿನಾಂಕ; 23/09/2017 ರಂದು ಬೆಳಿಗ್ಗೆ ನನ್ನ ಗಂಡ ಸ್ವಂತ ಕೆಲಸದ ಮೇಲೆ ಚಿಕ್ಕನಾಯಕನಹಳ್ಳಿಗೆ ಹೋಗಿದ್ದು, ನಾನು ಮತ್ತು ನನ್ನ ಮೊದಲನೆಯ ಮಗ ಲಿಖಿತ್ ಇಬ್ಬರು ನಮ್ಮ ಊರಾದ ತುರುವೇಕೆರೆ ತಾಲ್ಲೋಕ್ ರಾಮಡಿಹಳ್ಳಿಗೆ ಹೋಗಿದ್ದೆವು. ಮನೆಯಲ್ಲಿ ಯಾರೂ ಇರಲಿಲ್ಲ. ಮನೆಗೆ ಡೋರ್ ಲಾಕ್ ಹಾಕಲಾಗಿತ್ತು. ನನ್ನ ಗಂಡ ಚಿಕ್ಕನಾಯಕನಹಳ್ಳಿಯಿಂದ ರಾಮಡಿಹಳ್ಳಿಗೆ ಬಂದಿದ್ದು ಎಲ್ಲರೂ ಅಲ್ಲಿಯೇ ಇದ್ದೆವು. ದಿನಾಂಕ: 25/09/2017 ರಂದು ನನ್ನ ಗಂಡ ಅಲ್ಲಿಂದಲೇ ತೀರ್ಥಪುರಕ್ಕೆ ಹೋದರು.ಇದೇ ದಿನ ಮಧ್ಯಾಹ್ನ ಸುಮಾರು 2-30 ಗಂಟೆಗೆ ನನ್ನ ಮಗ ಲಿಖಿತ್ ವಾಪಸ್ ತಿಪಟೂರಿಗೆ ಬಂದಿದ್ದು ನಾನು ಅಲ್ಲಿಯೇ ಇದ್ದೆನು. ರಾತ್ರಿ 8-30 ಗಂಟೆಯ ಸಮಯದಲ್ಲಿ ನನ್ನ ಮಗ ಲಿಖಿತ್ ಫೋನ್ ಮಾಡಿ ನಾನು ಮನೆಗೆ ಬೀಗ ಹಾಕಿಕೊಂಡು ನನ್ನ ಸ್ನೇಹಿತನ ಅಂಗಡಿಯ ಬಳಿ ಹೋಗಿದ್ದು, ಸಂಜೆ 7-45 ಗಂಟೆಗೆ ಅಪ್ಪ ಫೋನ್ ಮಾಡಿ ಬಸ್ ನಿಲ್ದಾಣದಲ್ಲಿ ಇದ್ದೇನೆ. ಬೈಕ್ ತೆಗೆದುಕೊಂಡು ಬಾ ಎಂದು ಹೇಳಿದ್ದು, ನಾನು ಅಪ್ಪನನ್ನು ಕರೆದುಕೊಂಡು ರಾತ್ರಿ 8-00 ಗಂಟೆಯಲ್ಲಿ ಮನೆಗೆ ಬಂದು ನೋಡಲಾಗಿ ರಾತ್ರಿ 6-30 ಗಂಟೆಯಿಂದ 8-00 ಗಂಟೆಯ ಮಧ್ಯೆ ಯಾರೋ ಕಳ್ಳರು ಮನೆಯ ಡೋರ್ ಲಾಕ್ ನ್ನು ಮುರಿದು ಒಳಗಡೆ ಹೋಗಿ ಬಿರುವಿನಲ್ಲಿದ್ದ ಕೊಬ್ಬರಿಯ ದುಡ್ಡು 3.00000/- ರೂ ಹಣವನ್ನು ಹಾಗೂ ರೋಡ್ ಗೋಲ್ಡ್ ನ 6 ಚಿಕ್ಕ ಬಳೆಗಳು ಹಾಗೂ ಒಂದು ನಕ್ಲೇಸ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ತಿಳಿಸಿದ್ದು, ನಾನು ಊರಿನಿಂದ ವಾಪಸ್ ಬಂದು ವಿಚಾರ ಮಾಡಿ ಪರಿಶೀಲಿಸಿದ್ದು, ಈ ದಿನ ತಡವಾಗಿ ಬಂದು ಕಳವು ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ದೂರನ್ನು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.Tuesday, 26 September 2017

Crime Incidents 26-09-17

ಹೊಸಬಡಾವಣೆ ಪೊಲೀಸ್ ಠಾಣಾ ಮೊ. ಸಂ. 1145/2017 U/S 323, 353, 504  IPC

ದಿ: 26-09-2017 ರಂದು ಬೆಳಗಿನ ಜಾವ 2-30 ಗಂಟೆಯಲ್ಲಿ ಪಿರ್ಯಾದಿ ಗೊಲ್ಲಾಳಪ್ಪ ಬಿರಾದಾರ (38) ಸಂಚಾರ ನಿರೀಕ್ಷರು, ಕೆ.ಎಸ್.ಆರ್.ಟಿ.ಸಿ. ಶಾಂತಿನಗರ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ಕೇಂದ್ರ ಕಚೇರಿಯ ಆದೇಶದ ಮೇರೆಗೆ ಪಿರ್ಯಾದಿಯು ಬೆಳಗಿನ ಜಾವ ಸುಮಾರು 1-07 ಗಂಟೆ ಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ತುಮಕೂರು ಜಾಸ್ ಟೋಲ್ ಸಮೀಪ ಕೆ.ಎ. 34 ಎಫ್ 1273 ನೇ ಕೆ.ಎಸ್.ಆರ್.ಟಿ.ಸಿ ಬಸ್‌ ನ್ನು ಹತ್ತಿ ತಪಾಸಣೆ ಮಾಡುತ್ತಿದ್ದು ಸದರಿ ಬಸ್ಸಿನ  ನಿರ್ವಾಹಕರ ಕೆಲವೊಂದು ನ್ಯೂನತೆಗಳು ಕಂಡು ಬಂದ ಮೇರೆಗೆ  ಪಿರ್ಯಾದಿಯು ಅಪರಾಧ ಜ್ಞಾಪನ ಪತ್ರವನ್ನು ತಯಾರಿಸಿ ನಿರ್ವಾಹಕರಾದ ಫಿರ್ದೋಸ್ ಖಾನ್ ರವರಿಗೆ ನೀಡಲು ಹೋದಾಗ ನಿರ್ವಾಹಕರಾದ ಫಿರ್ದೋಸ್ ಖಾನ್ ರವರು ಜ್ಞಾಪನವನ್ನು ಸ್ವೀಕರಿಸದೆ ಉದ್ಧಟತನದಿಂದ ವರ್ತಿಸಿದ್ದಲ್ಲದೆ ಪಿರ್ಯಾದಿ ಮೇಲೆ ಕೈಗಳಿಂದ ಹಲ್ಲೆ ಮಾಡಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ  ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದಲ್ಲದೆ  ಬಸ್ ತಿರುವಿನಲ್ಲಿ  ನಿಧಾನಗತಿಯಲ್ಲಿ ಹೋಗುವಾಗ ಬಸ್ ನಿಂದ ಧುಮುಕಿ ಓಡಿಹೋಗಿರುತ್ತಾರೆ ಆದ್ದರಿಂದ ಫಿರ್ದೋಸ್ ಖಾನ್ ರವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿದೆ.

 

ಜಯನಗರ ಪೊಲೀಸ್ ಠಾಣಾ ಮೊ.ನಂ. 130/2017 ಕಲಂ 454, 457, 380 ಐಪಿಸಿ

ದಿನಾಂಕ: 25-09-2017 ರಂದು ರಾತ್ರಿ 8-15 ಗಂಟೆಗೆ ತುಮಕೂರು ಟೌನ್‌, ಸಪ್ತಗಿರಿ ಬಡಾವಣೆ ವಾಸಿ ಶ್ರೀಮತಿ ಸುಬ್ಬಲಕ್ಷ್ಮಮ್ಮ ಟಿ.ಎನ್ ಕೋಂ ಭಕ್ತವತ್ಸಲಂ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು  ಬೆಂಗಳೂರಿನ ಚಿಕ್ಕಬೊಮ್ಮಸಂದ್ರದಲ್ಲಿ ನಮ್ಮ ತಾಯಿಯ ಮನೆಯಲ್ಲಿ ಅನಂತಪದ್ಮನಾಭ ವ್ರತ ಪೂಜಾ ಕಾರ್ಯಕ್ರಮ ಇದ್ದರಿಂದ ದಿನಾಂಕ: 22-09-2017 ರಂದು ಬೆಳಿಗ್ಗೆ ಸುಮಾರು 11-00 ಗಂಟೆಗೆ ಮನೆಗೆ ಡೋರ್ ಲಾಕ್ ಹಾಕಿಕೊಂಡು ಮನೆಯ ಮುಂಭಾಗ ಕಬ್ಬಿಣದ ಗ್ರಿಲ್ಸ್‌ ಡೋರ್‌ಗಳಿಗೂ ಸಹ ಲಾಕ್ ಮಾಡಿಕೊಂಡು ಬೆಂಗಳೂರಿಗೆ ಹೋಗಿದ್ದೆನು.  ಅಲ್ಲಿಂದ ಈ ದಿನ ದಿನಾಂಕ: 25-09-2017 ರಂದು ಸಂಜೆ ಸುಮಾರು 4-35 ಗಂಟೆ  ಸಮಯಕ್ಕೆ ನಮ್ಮ ಮನೆಯ ಬಳಿಗೆ ಬಂದಾಗ ಯಾರೋ ಕಳ್ಳರು ನಮ್ಮ ಮನೆಯ ಮುಂಭಾಗ ಮೆಟ್ಟಿಲ ಕೆಳಗೆ ಇದ್ದ ಕಬ್ಬಿಣದ ಗ್ರಿಲ್ ಡೋರಿಗೆ ಹಾಕಿದ್ದ ಲಾಕ್‌ ಅನ್ನು  ಮೀಟಿ ಅಲ್ಲಿಂದ ಹೋಗಿ ಮನೆಯ ಮುಂಭಾಗಿಲಿಗೆ ಹಾಕಿದ್ದ ಡೋರ್ ಲಾಕ್‌ ಅನ್ನು  ಸಹ ಯಾವುದೋ ಆಯುಧದಿಂದ ಮೀಟಿ ಮನೆಯ ಒಳಗೆ ಹೋಗಿ ಕಳುವು ಮಾಡಿರುವುದು ಕಂಡು ಬಂದಿದ್ದು, ನಾನು ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯ ರೂಮಿನಲ್ಲಿದ್ದ 2 ಗಾಡ್ರೇಜ್‌ ಬೀರುವಿನ ಬಾಗಿಲುಗಳು ತೆರೆದಿದ್ದು, ಒಂದು ಬೀರುವಿನಲ್ಲಿಟ್ಟಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಲಾಂಗ್ ಚೈನ್‌, 3 ಜೊತೆ ಚಿನ್ನದ ಓಲೆ ಹಾಗೂ ಬೆಳ್ಳಿ ಸಾಮಾನುಗಳಾದ ಒಂದು ಬಾದಾಮಿ ಆಕಾರದ ತಟ್ಟೆ, ಒಂದು ಗುಂಡಾಕಾರದ ತಟ್ಟೆ, 5 ಕುಂಕುಮದ ಬಟ್ಟಲುಗಳು, ಒಂದು ಬೆಳ್ಳಿಯ ಚಂಬು, 1 ಪಂಚಪತ್ರೆ ಉದ್ದರಣೆ, ಒಂದು ಜೊತೆ ಚಿಕ್ಕ ಆರತಿ ದೀಪ ಹಾಗೂ ಚಿಕ್ಕ ತಟ್ಟೆ ಇವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಕಳುವಾಗಿರುವ ಚಿನ್ನದ ವಡವೆಗಳು ಅಂದಾಜು ಸುಮಾರು 60 ಗ್ರಾಂ ಆಗಿದ್ದು, ಬೆಲೆ ಸುಮಾರು 1,50,000 ರೂ ಆಗಿರುತ್ತೆ.  ಬೆಳ್ಳಿ ಸಾಮಾನುಗಳ ಸುಮಾರು 1 ಕೆ.ಜಿ ಯಷ್ಟಿದ್ದು, ಬೆಲೆ ಸುಮಾರು 35,000 ರೂ ಆಗಿರುತ್ತೆ.  ನಮ್ಮ ಮನೆಗೆ ಯಾರೋ ಕಳ್ಳರು ದಿನಾಂಕ: 22-09-2017 ರಿಂದ ದಿನಾಂಕ: 25-09-2017 ರ ನಡುವೆ ಯಾವಾಗಲೂ ಮನೆಯ ಬಾಗಿಲ ಡೋರ್ ಲಾಕ್‌ ನ್ನು ಮೀಟಿ ಮನೆ ಒಳಗೆ ಪ್ರವೇಶ ಮಾಡಿ ಬೀರುವಿನಲ್ಲಿಟ್ಟಿದ್ದ ಚಿನ್ನದ ವಡವೆಗಳು ಹಾಗೂ ಬೆಳ್ಳಿ ಸಾಮಾನುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಾನು ನಮ್ಮ ಮನೆಯಲ್ಲಿ ಕಳುವು ಆಗಿರುವ ವಿಚಾರವನ್ನು ನನ್ನ ಮಗಳು, ಅಳಿಯ ಹಾಗೂ ಸಂಬಂಧಿಕರಿಗೆ ತಿಳಿಸಿ ನಾನು ಸಹ ನಮ್ಮ ಮನೆಯಲ್ಲಿ ವಿವರವಾಗಿ ಚಕ್ ಮಾಡಿಕೊಂಡು ಈ ದಿನ ದಿನಾಂಕ: 25-09-2017 ರಂದು ರಾತ್ರಿ ಪೊಲೀಸ್ ಠಾಣೆಗೆ ತಡವಾಗಿ ಬಂದು ದೂರು ನೀಡಿರುತ್ತೇನೆ. ತಾವು ದಯಮಾಡಿ ಆರೋಪಿಗಳನ್ನು ಪತ್ತೆ ಮಾಡಿ ನಮ್ಮ ಮನೆಯಲ್ಲಿ ಕಳುವು ಮಾಡಿರುವ ಚಿನ್ನದ ವಡವೆ ಹಾಗೂ ಬೆಳ್ಳಿಯ ಸಾಮಾನುಗಳನ್ನು ಹುಡುಕಿಸಿಕೊಡಲು ಕೋರಿ ಇತ್ಯಾದಿಯಾಗಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ CR 114/2017 U/S 379  IPC

ದಿನಾಂಕ:-25/09/2017 ರಂದು  ಮದ್ಯಾಹ್ನ 01-00 ಗಂಟೆಗೆ ಪಿರ್ಯಾದಿ ಮನು,ಎ,ಜಿ. ಬಿನ್ ಗುರುರಾಜ್, ಎಆರ್. ವಾಸ  ಎಪಿಎಂಸಿ ಹರೀಶ್ ರವರ ಪ್ರಾವಿಜನ್ ಸ್ಟೋರ್ ಹತ್ತಿರ 4ನೇ ಕ್ರಾಸ್, ವಿದ್ಯಾನಗರ, ತುಮಕೂರು. ರವರು ನೀಡಿದ ದೂರಿನ ಅಂಶವೆನೆಂದರೆ  ಪಿರ್ಯಾದಿಯು  KTM DUKE 200 CC ನೇ  KA 64J 7000 ನೇ ದ್ವಿ ಚಕ್ರ ವಾಹನವನ್ನು ಹೊಂದಿದ್ದು ದಿನಾಂಕ:-06/09/2017 ರಂದು ಮದ್ಯಾಹ್ನ ಸುಮಾರು 01-00 ಗಂಟೆಗೆ ಮೇಲ್ಕಂಡ ಬೈಕ್ ನಲ್ಲಿ ಗಂಗೋತ್ರಿನಗರ 8ನೇ ಕ್ರಾಸ್ ನಲ್ಲಿ ವಾಸವಾಗಿರುವ ಶರಣ್ ರವರ ರೂಂ ಹತ್ತಿರ ಬಂದಿದ್ದು ಬೈಕನ್ನ ಶರಣ್ ರವರ ರೂಂ ಮುಂಭಾಗ ರಸ್ತೆ ಬದಿಯಲ್ಲಿ ನಿಲ್ಲಿಸಿ ರೂನೊಳಗೆ ಹೋಗಿದ್ದು ಮದ್ಯಾಹ್ನ ಸುಮಾರು 03-00 ಗಂಟೆಗೆ ಹೊರಗೆ ಬಂದು ನೋಡಲಾಗಿ ಮೇಲ್ಕಂಡ ದ್ವಿ ಚಕ್ರ ವಾಹನವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರು

 Monday, 25 September 2017

Crime Incidents 25-09-17

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ ನಂ 71/2017  ಕಲಂ 279,337,304(ಎ) IPC.

ದಿನಾಂಕ 24/09/2017 ರಂದು ರಾತ್ರಿ 08.15 ಗಂಟೆಗೆ ಪಿರ್ಯಾದಿ ವೆಂಕಟೇಶ್ ಬಿನ್ ಕೃಷ್ಣಪ್ಪ, 40 ವರ್ಷ, ಆದಿ ಕರ್ನಾಟಕ ಜನಾಂಗ, ಗಾರೆಕೆಲಸ, ಮಾರನಗೆರೆ ಕಾಲೋನಿ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆಯವರಿಗೆ ನಾವು ಒಟ್ಟು 06 ಜನ ಮಕ್ಕಳಿದ್ದು ನಾನು 02ನೇಯವನಾಗಿರುತ್ತೇನೆ. ನನ್ನ ತಮ್ಮ ಗಂಗಾಧರ 03ನೇಯವನಾಗಿರುತ್ತಾನೆ. ಈ ದಿನ ಸಂಜೆ 6 ಗಂಟೆಯ ಸಮಯದಲ್ಲಿ ನನ್ನ ಮೊಬೈಲ್ ಗೆ ಯಾರೋ ಸಾರ್ವಜನಿಕರು ಕರೆ ಮಾಡಿ  ನಿಮ್ಮ ತಮ್ಮ ಗಂಗಾಧರ ಮತ್ತು ನಿಮ್ಮೂರಿನ ಕೃಷ್ಣಮೂರ್ತಿ ಎಂಬುವರಿಗೆ ಜಯಂತಿಗ್ರಾಮದ ಹತ್ತಿರ  ಅಫಘಾತವಾಗಿರುತ್ತೆ. ನಿಮ್ಮ ತಮ್ಮ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂತ  ವಿಚಾರ ತಿಳಿಸಿದ್ದು ನಾನು ಕೂಡಲೇ ನನ್ನ ಸ್ನೇಹಿತರ ಜೊತೆ ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ  ಈ ಅಪಘಾತ ನಿಜವಾಗಿದ್ದು ನನ್ನ ತಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ತಿಳಿದಿದ್ದು ಆ ನಂತರ ವಿಚಾರ ತಿಳಿಯಲಾಗಿ ನಮ್ಮೂರಿನ ವಾಸಿ ಈರಪ್ಪನವರ ಮಗ ಕೃಷ್ಣಮೂರ್ತಿಯವರ ಜೊತೆಯಲ್ಲಿ ನನ್ನ ತಮ್ಮ ಗಂಗಾಧರ ಚೇಳೂರಿನ ಹತ್ತಿರ ಹಾರನಹಳ್ಳಿಗೆ ಹಬ್ಬಕ್ಕೆಂದು ಹೋಗಲು ಕೃಷ್ಣಮೂರ್ತಿಯವರ ಬಾಬ್ತು KA-44 R-8038 HERO PASSION PRO ಬೈಕಿನಲ್ಲಿ  ತಿಪಟೂರು ಬಿಟ್ಟು ಈ ದಿನ ಸಂಜೆ ಸುಮಾರು 05.45 ಗಂಟೆಯ ಸಮಯದಲ್ಲಿ  ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಸರಹದ್ದಿನ NH-206 ರಸ್ತೆಯ ಜಯಂತಿಗ್ರಾಮದ ಬಳಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರಬೇಕಾದರೆ ಕೆ.ಬಿ. ಕ್ರಾಸ್ ಕಡೆಯಿಂದ ಬಂದ KA-44 5951 ನೇ ನಂಬರಿನ ಮಹೀಂದ್ರ ಬುಲೇರೋ ಗೂಡ್ಸ್ ವಾಹನದ  ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಕೃಷ್ಣಮೂರ್ತಿಯವರು ಓಡಿಸುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಸಿದ ಪರಿಣಾಮ  ಬೈಕಿನ ಹಿಂಬದಿಯಲ್ಲಿ ಕುಳಿತ್ತಿದ್ದ ನನ್ನ ತಮ್ಮನಿಗೆ  ಪೆಟ್ಟು ಬಿದ್ದು ರಕ್ತ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿದ್ದು ಬೈಕ್ ಚಾಲಕ ಕೃಷ್ಣಮೂರ್ತಿಗೆ ಹಾಗೂ ಮಹೀಂದ್ರ ಬುಲೇರೋ ಗೂಡ್ಸ್ ವಾಹನದಲ್ಲಿದ್ದವರಿಗೆ ಕೂಡ ಪೆಟ್ಟು ಬಿದ್ದು ರಕ್ತ ಗಾಯಗಳಾಗಿದ್ದು ಎರಡೂ ವಾಹನಗಳು ಜಖಂಗೊಂಡಿದ್ದು ಗಾಯಾಳುಗಳನ್ನು 108 ಆಂಬುಲೆನ್ಸ್ ತರಿಸಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು ನನ್ನ ತಮ್ಮ ಗಂಗಾಧರನ ಶವವನ್ನು ಸಹ ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಪೊಲೀಸರು ಸಾಗಿಸಿರುತ್ತಾರೆಂತ ವಿಷಯ ತಿಳಿದಿದ್ದು ನಂತರ ನಾನು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಹೋಗಿ ಶವಗಾರದಲ್ಲಿದ್ದ ಶವವನ್ನು ನೋಡಿದ್ದು, ಇದು ನನ್ನ ತಮ್ಮ ಗಂಗಾಧರನ ಶವವಾಗಿರುತ್ತೆ. ನಂತರ ನಾನು ಕೆ.ಬಿ.ಕ್ರಾಸ್ ಪೊಲೀಸ್ ಠಾಣೆಗೆ ವಾಪಾಸ್ ಬಂದು ಈ ಅಪಘಾತಕ್ಕೆ ಕಾರಣಾನಾದ KA-44 5951 ನೇ ಮಹೀಂದ್ರ ಬುಲೇರೋ ಗೂಡ್ಸ್ ವಾಹನದ  ಚಾಲಕನ ಮೇಲೆ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಿ ಎಂಬಿತ್ಯಾದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಮಧುಗಿರಿ ಪೊಲೀಸ್ ಠಾಣಾ ಮೊ.ಸಂ :181/2017 u/s 279,337 IPC

ಪಿರ್ಯಾದಿ ಪಿ.ಹನುಮಂತರಾಯ ಬಿನ್ ಲೇಟ್ ಪಾತಲಿಂಗಪ್ಪ ರೆಡ್ಡಿ ಕಾಲೋನಿ ಪಾವಗಡ ಟೌನ್ ರವರು ಠಾಣೆಗೆ  ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ಪಿರ್ಯಾದಿಯ ಮಗಳಾದ ಹೆಚ್ .ಪ್ರತಿಮಾ ರವರು ತುಮಕೂರು ವಿ.ವಿ ಯಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದು ,ದಿನಾಂಕ;14-09-2017 ರಂದು ಮದ್ಯಾಹ್ನ ಮಧುಗಿರಿ ತಾಲ್ಲೂಕು ಹುಣಸೆಮರದಹಟ್ಟಿ ಗ್ರಾಮದ ಬಳಿ ನನ್ನ ಮಗಳು ಹೆಚ್. ಪ್ರತಿಮಾಳಿಗೆ ರಸ್ತೆ ಆಪಘಾತವಾಗಿರುತ್ತದೆ ಎಂದು ವಿಚಾರ ತಿಳಿದು ನಂತರ ನನ್ನ ಮಗಳು ಚಿಕಿತ್ಸೆ ಪಡೆಯುತ್ತಿದ್ದ ನಿಮಾನ್ಸ್  ಆಸ್ಪತ್ರೆಗೆ ಹೋಗಿ ಈ ಅಪಘಾತದ ಬಗ್ಗೆ ತಿಳಿಯಲಾಗಿ ನನ್ನ ಸ್ವಂತ ಊರಾದ ಕಡಪಲಕೆರೆ ಗ್ರಾಮದ ಮಂಜುನಾಥ ತಂದೆ ಲೇಟ್ ಮಾರಪ್ಪ ರವರೊಂದಿಗೆ KA-04 HP-2532 ದ್ವಿಚಕ್ರ ವಾಹನದಲ್ಲಿ ಮಡಕಶಿರಾದಿಂದ ತುಮಕೂರಿಗೆ ಹೋಗುತ್ತಿರುವಾಗ್ಗೆ ಮಾರ್ಗ ಮಧ್ಯೆ ಮದ್ಯಾಹ್ನ 01-00 ಗಂಟೆ ಸಮಯದಲ್ಲಿ ಮಧುಗಿರಿ ತಾಲ್ಲೂಕು ಹುಣಸೆಮರದಹಟ್ಟಿ ಗ್ರಾಮದ ಬಳಿ ಸದರಿ KA-04 HP-2532 ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಮಂಜುನಾಥರವರು ಸದರಿ ದ್ವಿಚಕ್ರ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ದ್ವಿಚಕ್ರವಾಹನದ ಮೇಲೆ ನಿಯಂತ್ರಣ ತಪ್ಪಿ ವಾಹನದೊಂದಿಗೆ ರಸ್ತೆ ಮೇಲೆ ಬಿದ್ದ ಕಾರಣ ಸದರಿ ದ್ವಿಚಕ್ರವಾಹನದಲ್ಲಿ ಹಿಂಬದಿ ಕುಳಿತಿದ್ದ ನನ್ನ ಮಗಳು ಪ್ರತಿಮಾ ಹೆಚ್. ರವರ ತಲೆ ಮೈ.ಕೈಗಳಿಗೆ.ಗಾಯಗಳಾಗಿದ್ದು ಮಂಜುನಾಥನಿಗೂ ಗಾಯಗಳಾಗಿದ್ದು ನಂತರ 108 ವಾಹನದಲ್ಲಿ ಗಾಯಾಳುವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ಚಿಕಿತ್ಸೆ ಪಡೆದು ನಂತರ ಅಂಬುಲೆನ್ಸ್ ನಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗ ಬಂದು ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ನಿಮಾನ್ಸ್ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿರುವುದು ತಿಳಿಯಿತು ನನ್ನ ಮಗಳು ಪ್ರತಿಮಾರವರನ್ನು ನಾನು ನೋಡಿ ಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಆದ್ದರಿಂದ ಈ ಅಪಘಾತ ಮಾಡಿದ KA-04 HP-2532 ದ್ವಿಚಕ್ರ ವಾಹನ ಹಾಗೂ ಇದರ ಚಾಲಕ ಮಂಜುನಾಥರವರ ಮೇಲೆ ಕಾನೂನಿನ ರೀತ್ಯಾಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೊನ್ನವಳ್ಳಿಪೊಲೀಸ್ ಠಾಣೆ   ಮೊನಂ 118/2017 ಕಲಂ 279.337. ಐಪಿಸಿ

ದಿನಾಂಕ: 24/09/2017 ರಂದು ಮದ್ಯಾಹ್ನ 3-15  ಗಂಟೆಗೆ ಕೇಸಿನ ಪಿರ್ಯಾದಿದಾರರಾದ ಕೇಶಮೂರ್ತಿ ಬಿನ್‌ ಪುಟ್ಟಲಿಂಗೇಗೌಡ  ಅಂಚೆಕೊಪ್ಪಲು ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ ದಿನಾಂಕ 23/09/2017 ರಂದು ಮದ್ಯಾಹ್ನ ಸುಮಾರು 3-00 ಗಂಟೆ ಸಮಯದಲ್ಲಿ ನನ್ನ ತಂದೆ ಪುಟ್ಟಲಿಂಗೇಗೌಡರವರು ತಿಪಟೂರಿಗೆ ಹೋಗಿ ಹಗ್ಗ ತರುವುದಾಗಿ ಹೇಳಿ ಹೋಗಿದ್ದು ಸಂಜೆ 4.10 ಸಮಯದಲ್ಲಿ ಶಶಿಧರ ಬಿನ್‌ ಲೇ ಗಂಗೇಗೌಡರವರು 4-00 ಗಂಟೆ ಸಮಯದಲ್ಲಿ  ಫೋನ್‌ ಮಾಡಿ ನಿಮ್ಮ ತಂದೆಗೆ ಬೈಕಿನಿಂದ ಬಿದ್ದು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕಲುಹಿಸಿರುವುದಾಗಿ ತಿಳಿಸಿದ್ದು ಎಂದು ಹೇಳಿದ್ದರಿಂದ ನಾನು ತಿಪಟೂರು ಹೇಮಾವತಿ ಆಸ್ಪತ್ರೆಗೆ ಹೋಗಿ ನೋಡಿ ವಿಚಾರ ಮಾಡಿದ್ದು ಅಂಚೆಕೊಪ್ಪಲು ಗೇಟ್‌ ನಿಂದ ತಿಪಟೂರಿಗೆ ಬರಲು ಬಸ್ಸಿಗಾಗಿ ಕಾಯುತ್ತಿರುವಾಗ ಅರಸೀಕೆರೆ ಕಡೆಯಿಂದ ಬರುತ್ತಿದ್ದ ಕೆಎ.04.ಇವೈ 4518 ನೇ ಹೀರೋಹೊಂಡಾ ಸ್ಪ್ಲೆಂಡರ್‌ ಪ್ಲಸ್‌‌‌‌ ದ್ವಿಚಕ್ರ ವಾಹನದಲ್ಲಿ ಹತ್ತಿಕೊಂಡು ಹೋಗುವಾಗ ಸಂಜೆ 4-00 ಸಮಯದಲ್ಲಿ ಸಿದ್ದಾಪುರ ಹತ್ತಿರ ರಸ್ತೆ ತಿರುವಿನಲ್ಲಿ ಬೈಕು ಸವಾರ ಇದ್ದಕ್ಕಿಂದಂತೆ ಬ್ರೇಕ್‌ ಹಾಕಿದ್ದರಿಂಧ ಆಯಾತಪ್ಪಿ ಕೆಳಗೆ ಬಿದ್ದು ಎಡಕುಂಡಿಯ ಹತ್ತಿರ ಪೆಟ್ಟಾಗಿರುತ್ತೆ ನಂತರ   ಯಾವುದೋ ಒಂದು ವಾಹನ ತಿಪಟೂರು  ಆಸ್ಪತ್ರೆಗೆ ಕಳುಹಿಸಿರುತ್ತಾರೆ, ಬೈಕ್‌ ಸವಾರನ ಹೆಸರು ಎಂ.ಬಿ ಸೋಮಶೇಖಯ್ಯ  ಬಿನ್‌ ಲೇ ಬಸವಲಿಂಗಯ್ಯ  ಮಲ್ಲೇನಹಳ್ಳಿ ಎಂದು ಗೊತ್ತಾಗಿರುತ್ತೆ, ಈ ಅಪಘಾತಕ್ಕೆ ಬೈಕ್‌ ಸವಾರನ ಅತೀವೇಗ ಮತ್ತು ಅಜಾಗರೂಕತೆ ಕಾರಣ ಎಂಬುದಾಗಿ ತಿಳಿಸಿದರು .ಈ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಠಾಣೆಗೆ ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಕೆಎ 04.ಇವೈ 4518  ನೇ ಬೈಕ್‌ನ  ಚಾಲಕ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿನ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತದೆ.Sunday, 24 September 2017

Crime Incidents 24-09-17

ಜಯನಗರ ಪೊಲೀಸ್ ಠಾಣಾ ಮೊ.ನಂ. 129/2017 ಕಲಂ 454, 457, 380 ಐಪಿಸಿ

ದಿನಾಂಕ: 23-09-2017 ರಂದು ಸಂಜೆ 5-30 ಗಂಟೆಗೆ ತುಮಕೂರು ಟೌನ್‌, ಗೋಕುಲ ಬಡಾವಣೆ ವಾಸಿ ಚಿಂತಾಮಣಿಶಿಂಧೆ ಬಿನ್ ಲೇಟ್ ಹುಲಗಪ್ಪಶಿಂಧೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 21-09-2017 ರಂದು ಬೆಳಿಗ್ಗೆ ಸುಮಾರು 6-30 ಗಂಟೆಯಲ್ಲಿ  ನಾನು ನನ್ನ ಸಂಸಾರದ ಸಮೇತ ನಮ್ಮ ಮನೆಗೆ ಡೋರ್‌ಲಾಕ್‌‌  ಮಾಡಿಕೊಂಡು ನಮ್ಮ ಸಂಬಂಧಿಕರ ಊರಾದ ಆಂದ್ರಪ್ರದೇಶದ ಅನಂತಪುರಕ್ಕೆ ಹೋಗಿದ್ದೆವು.   ಈ ದಿನ ದಿನಾಂಕ: 23-09-2017 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯಕ್ಕೆ ವಾಪಾಸ್ಸು ನಮ್ಮ ಮನೆಗೆ ಬಂದಿದ್ದು, ಮನೆಯ ಬಳಿ ನೋಡಲಾಗಿ ನಮ್ಮ ಮನೆಯ ಮುಂಭಾಗಿಲಿಗೆ ಹಾಕಿದ್ದ  ಡೋರ್‌‌ಲಾಕ್‌‌ ಅನ್ನು ಯಾರೋ ಕಳ್ಳರು ಮನೆಯೊಳಗೆ ಮೀಟಿ ತೆಗೆದು ಮನೆಯೊಳಗೆ ಪ್ರವೇಶ ಮಾಡಿ, ಮನೆಯ ರೂಮಿನಲ್ಲಿ ಇಟ್ಟಿದ್ದ ಗಾಡ್ರೇಜ್‌‌ ಬೀರುವಿನ ಬಾಗಿಲನ್ನೂ ಸಹಾ ಮೀಟಿ ತೆಗೆದು ಬೀರುವಿನಲ್ಲಿಟ್ಟಿದ್ದ ಒಂದು ಚಿನ್ನದ ಲಾಂಗ್‌‌ ಚೈನ್, ಒಂದು ಚಿನ್ನದ ನೆಕ್ಲೆಸ್‌, ಎರಡು ಬಳೆಗಳು, ಹಾಗೂ ಮೂರು ಉಂಗುರಗಳನ್ನು ಹಾಗೂ ದೇವರ ಮನೆಯಲ್ಲಿ ಇಟ್ಟಿದ್ದ ಬೆಳ್ಳಿಯ ಒಂದು ಚೆಂಬು, ಬೆಳ್ಳಿಯ ದೀಪಗಳು, ಎರಡು ಕುಂಕುಮದ ಬಟ್ಟಲು ಗಳನ್ನು ಹಾಗೂ ಡ್ರಸಿಂಗ್‌‌ ಟೇಬಲ್‌‌ ಬಳಿ ಇಟ್ಟಿದ್ದ ಸ್ಯಾಮ್‌ಸಾಂಗ್‌‌ ಟಚ್‌‌ ಸ್ಕೀನ್‌‌ ಮೊಬೈಲ್‌  ಹಾಗೂ ಲವಾ ಕಂಪನಿಯ ಕೀ ಪ್ಯಾಡ್‌‌ ಮೊಬೈಲ್‌‌ ಪೋನ್‌‌‌ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.   ಮೇಲ್ಕಂಡ ಚಿನ್ನದ ವಡವೆಗಳು ಅಂದಾಜು ಸುಮಾರು 100 ಗ್ರಾಂ ಆಗಬಹುದಿದ್ದು, ಬೆಲೆ ಸುಮಾರು 2,50,000 ರೂಪಾಯಿ ಬೆಳ್ಳಿಯ ವಡವೆಗಳು ಸುಮಾರು ಅಂದಾಜು ಒಂದು ಕೆ.ಜಿ. ತೂಕ ಇದ್ದು ಬೆಲೆ ಸುಮಾರು 30,000 ರೂಪಾಯಿ ಮೊಬೈಲ್‌‌ ಪೋನ್‌‌ಗಳು ಎರಡರಿಂದ ಸುಮಾರು 10,000 ಸಾವಿರ ರೂಪಾಯಿಗಳಾಗುತ್ತೆ. ನಮ್ಮ ಮನೆಗೆ ಯಾರೋ ಕಳ್ಳರು ದಿನಾಂಕ: 21-09-2017 ರಿಂದ ದಿನಾಂಕ: 23-09-2017 ರ ನಡುವೆ ಯಾವಾಗಲೋ ನಮ್ಮ ಮನೆಯ ಬಾಗಿಲ ಡೋರ್‌ಲಾಕ್‌‌ ಮೀಟಿ ಮನೆಯೊಳಗೆ ಪ್ರವೇಶ ಮಾಡಿ ಮೇಲ್ಕಂಡ ವಡವೆಗಳನ್ನು ಹಾಗೂ ಮೊಬೈಲ್‌‌ ಪೋನ್‌ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.   ನಾನು ನಮ್ಮ ಮನೆಯಲ್ಲಿ ಕಳುವಾಗಿರುವ ವಿಚಾರವನ್ನು ನಮ್ಮ ಸಂಬಂಧಿಕರಿಗೆಲ್ಲಾ ತಿಳಿಸಿ ನಾನೂ ಸಹಾ ನಮ್ಮ ಮನೆಯಲ್ಲಿ ಎಲ್ಲಾ ವಿವರವಾಗಿ ಚೆಕ್‌‌ ಮಾಡಿಕೊಂಡು ಈ ದಿನ ದಿನಾಂಕ 23-09-2017 ರಂದು ಸಾಯಂಕಾಲ ಪೊಲೀಸ್ ಠಾಣೆಗೆ ತಡವಾಗಿ ಬಂದು ಈ ದೂರು ನೀಡಿರುತ್ತೇನೆ. ತಾವು ದಯಮಾಡಿ ಆರೋಪಿಗಳನ್ನು ಪತ್ತೆ ಮಾಡಿ ನಮ್ಮ ಮನೆಯಲ್ಲಿ ಕಳವು ಮಾಡಿರುವ ವಡವೆಗಳನ್ನು ಹಾಗೂ ಮೊಬೈಲ್‌‌ ಪೋನ್‌‌ಗಳನ್ನು ಕೊಡಿಸಿಕೊಡಲು ಕೋರಿ ನೀಡಿರುವ ದೂರಿನ ಅಂಶವಾಗಿರುತ್ತೆ.

 

ಮಧುಗಿರಿ ಪೊಲೀಸ್ ಠಾಣಾ ಮೊ.ಸಂ :180/2017 u/s 379 IPC

ಈ ಕೇಸಿನ ಪಿರ್ಯಾದಿ ಶ್ರೀಮತಿ ಮಂಜುಳ ಕೋಂ ಲೇ.ಅಮರನಾಥ, 45 ವರ್ಷ, ಜೆ.ಎಸ್ ಆಸ್ಪತ್ರೆಯಲ್ಲಿ ಸಹಾಯಕಿ, ಸರ್ಕಾರಿ ಆಸ್ಪತ್ರೆಯ ಪಕ್ಕ, ಮಧುಗಿರಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯು ಮಧುಗಿರಿ ಟೌನ್ ನ ಜೆ.ಎಸ್ ಆಸ್ಪತ್ರೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಪ್ರತಿದಿನ ತನ್ನ ಬಾಬ್ತು KA-06-EK-2545 Hero Plessore Moped ದ್ವಿಚಕ್ರವಾಹನದಲ್ಲಿ ಬಂದು ಹೋಗುತ್ತಿದ್ದು, ಎಂದಿನಂತೆ ದಿನಾಂಕ: 21-09-2017 ರಂದು ಬೆಳಿಗ್ಗೆ 10.30 ಗಂಟೆಗೆ ಕೆಲಸಕ್ಕೆ ಬಂದು ಮದ್ಯಾಹ್ನ ಊಟಕ್ಕೆ ಹೋಗಿ, ಊಟ ಮುಗಿಸಿಕೊಂಡು ಸಂಜೆ 05.30 ಗಂಟೆಗೆ  ತನ್ನ ಬಾಬ್ತು ದ್ವಿಚಕ್ರವಾಹನವನ್ನು ಜೆ.ಎಸ್‌ ಆಸ್ಪತ್ರೆಯ ಮುಂಭಾಗದಲ್ಲಿನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ, ಆಸ್ಪತ್ರೆಗೆ ಕೆಲಸಕ್ಕೆ ಹೋಗಿರುತ್ತಾರೆ. ನಂತರ ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 08.15 ಗಂಟೆಗೆ ಮನೆಗೆ ಹೋಗಲು ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ, ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳದಲ್ಲಿರಲಿಲ್ಲ. ಆಗ ಪಿರ್ಯಾದಿಯು  ಗಾಬರಿಗೊಂಡು ಅಕ್ಕ-ಪಕ್ಕ ವಿಚಾರ ಮಾಡಿದ್ದು, ಪತ್ತೆಯಾಗಲಿಲ್ಲ. ಯಾರೋ ಕಳ್ಳರು ಪಿರ್ಯಾದಿ ಬಾಬ್ತು KA-06-EK-2545 Hero Plessore Moped ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ದ್ವಿಚಕ್ರವಾಹನದ ಈಗಿನ ಬೆಲೆ ಸುಮಾರು 21,000/- ರೂ ಗಳಾಗುತ್ತದೆ. ಪಿರ್ಯಾದಿಯು ಅಂದಿನಿಂದ ಇಂದಿನವರೆಗೂ ಹುಡುಕಾಡಿದ್ದು, ಪತ್ತೆಯಾಗಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ಕಳ್ಳತನವಾಗಿರುವ ತನ್ನ ಬಾಬ್ತು KA-06-EK-2545 Hero Plessore Moped ದ್ವಿಚಕ್ರವಾಹನವನ್ನು ಪತ್ತೆ ಮಾಡಿ, ಕಳ್ಳತನ ಮಾಡಿರುವ  ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 156/2017 ಕಲಂ: 279 ,337 ಐ.ಪಿ.ಸಿ

ದಿನಾಂಕ: 23/09/2017 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಭರತ್ ರಾಜ್ ಬಿನ್ ಕಾಶಿರಾಮ್ ಪ್ರಸಾದ್, 54 ವರ್ಷ, ವಕೀಲರು, ರಜಪೂತ ಜನಾಂಗ, 2ನೇ ಮುಖ್ಯರಸ್ತೆ, ವಿನಾಯಕನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ದಿನಾಂಕ: 08/09/2017 ರಂದು ರಾತ್ರಿ ಸುಮಾರು 11-20 ಗಂಟೆಯ ಸಮಯದಲ್ಲಿ ಕೆ.ಎ-44 ಕ್ಯೂ- 5884 ನೇ ಫ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ವಿನಾಯಕನಗರದ ನಮ್ಮ ಮನೆಗೆ ಹೋಗಲು ಎನ್.ಹೆಚ್ -206 ರಸ್ತೆಯಲ್ಲಿ ಗುರುದರ್ಶನ್ ಹೋಟೆಲ್ ಮುಂಭಾಗ ಯು ಟರ್ನ್ ನಲ್ಲಿ ತಿರುಗಿಸಿಕೊಂಡು ಹೋಗುತ್ತಿರುವಾಗ ಅದೇ ಸಮಯಕ್ಕೆ ಬಸ್ ನಿಲ್ದಾಣದ ಕಡೆಯಿಂದ ಕೆ.ಎ-44 ಎಸ್-7766 ನೇ ಫ್ಯಾಷಿಯೋ ದ್ವಿಚಕ್ರ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ದ್ವಿಚಕ್ರ ವಾಹನದ ಸಮೇತ ಬಲಮಗ್ಗುಲಿಗೆ ಬಿದ್ದು, ನನಗೆ ಬಲಗೈ ರಟ್ಟೆಗೆ, ಎಡಗೈ ಮೊಣಕೈಗೆ, ಎಡಗಾಲು ಮಂಡಿಗೆ ಮತ್ತು ಎಡಪಕ್ಕೆಗೆ ಪೆಟ್ಟುಗಳು ಬಿದ್ದಿರುತ್ತೆ. ಆಗ ಅಲ್ಲೆ ಹೋಟೆಲ್ ಬಳಿ ಇದ್ದ ಈ ಅಪಘಾತವನ್ನು ನೋಡಿದ ಶಂಕರಮೂರ್ತಿ & ಅಶೋಕ ಎಂಬುವರು ಸ್ಥಳಕ್ಕೆ ಬಂದು ನನ್ನನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ನಂತರ ಅಲ್ಲಿನ ವೈದ್ಯರ ಸಲಹೆಯಂತೆ ತಿಪಟೂರು ಹೇಮಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿ ಈ ದಿನ ತಡವಾಗಿ ಬಂದು ಅಪಘಾತ ಮಾಡಿರುವ ಮೇಲ್ಕಂಡ ಕೆ.ಎ-44 ಎಸ್-7766 ನೇ ಫ್ಯಾಷಿಯೋ ದ್ವಿಚಕ್ರ ವಾಹನದ ಚಾಲಕನಾದ ನೊಣವಿನಕೆರೆಯ ಮನೋಹರ ಎಂಬುವರ .ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.Saturday, 23 September 2017

Crime Incidents 23-09-17

ಹೊಸಬಡಾವಣೆ ಪೊಲೀಸ್ ಠಾಣಾ ಮೊ .ನಂ 113/2017 U/S 341, 307  IPC

ದಿನಾಂಕ : 22-09-2017 ರಂದು ಮಧ್ಯಾಹ್ನ ಸುಮಾರು 3-30 ಗಂಟೆ ಯಲ್ಲಿ ಪಿರ್ಯಾದಿ ಮಂಜುನಾಥ್. ಟಿ.ಎಸ್. ಸಿಪಿಸಿ 648 ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ  ಆರೋಪಿ ದೇವರಾಜು ಬಿನ್ ಪ್ರತಾಪ್, 25 ವರ್ಷ, ಲಿಂಗಾಯಿತ ಜನಾಂಗ, ಪಾನಿಪುರಿ ಅಂಗಡಿ ವ್ಯಾಪಾರ, ಎಸ್.ಐ.ಟಿ ಮುಖ್ಯ ರಸ್ತೆ, ತುಮಕೂರು  ಹಾಗೂ ಗಾಯಾಳು ಶ್ರೀಮತಿ ಅಂಜಲಿ ಕೋಂ ಮಂಜುನಾಥ್  (24 )ಖಾಸಾ ಅಣ್ಣ ತಂಗಿಯಾಗಿದ್ದು ಅಂಜಲಿ ರವರು ಮದುವೆಯಾದ ನಂತರವೂ ಸಹಾ ಪಿರ್ಯಾದಿಗೆ ನಿವೇಶನ ಕೊಡಿಸು, ಸೋಫಾಸೆಟ್ ಕೊಡಿಸು ಎಂದು ಪದೇ ಪದೇ ತವರಿಗೆ ಬಂದು ಹಿಂಸೆ ನೀಡುತ್ತಿದ್ದು ದಿ: 22-09-17 ರಂದು ಸಹಾ ಗಂಡನ ಮನೆಯಿಂದ ತುಮಕೂರಿಗೆ ಬಂದು ಸಂಜೆ ಹಾಗೂ ಈ ದಿವಸ ಮಧ್ಯಾಹ್ನ 1-30 ಗಂಟೆ ಸಮಯದಲ್ಲಿಯೂ ಸಹಾ ಮನೆಯಲ್ಲಿ  ಗಲಾಟೆ ಮಾಡಿದ್ದರಿಂದ ಆರೋಪಿಯು ಇವಳನ್ನು ಹೀಗೇ ಬಿಟ್ಟರೆ ಜಗಳ ಮಾಡಿ ಮರ್ಯಾದೆ ತೆಗೆಯುತ್ತಾಳೆಂದು ಯೋಚಿಸಿ ಮನೆಯಲ್ಲಿಟ್ಟಿದ್ದ ಚಾಕುವನ್ನು ತೆಗೆದುಕೊಂಡು ಅಂಜಲಿರವರನ್ನು ಹಿಂಬಾಲಿಸಿಕೊಂಡು ಎಸ್.ಎಸ್. ಪುರಂ 15ನೇ ಕ್ರಾಸ್‌ ನಲ್ಲಿ ಅಂಜಲಿ ರವರು ನಡೆದುಕೊಂಡು ಬರುತ್ತಿರುವಾಗ್ಗೆ ಆಕೆಯನ್ನು ಅಡ್ಡಗಟ್ಟಿ  ಚಾಕುವಿನಿಂದ ಕುತ್ತಿಗೆ ಕುಯ್ದಿದ್ದು ಅದೇ ಸಮಯದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಪಿರ್ಯಾದಿಯು ಘಟನೆಯನ್ನು ನೋಡಿ ಆರೋಪಿಯನ್ನು ಸ್ಥಳಿಯರ ಸಹಾಯದಿಂದ ಹಿಡಿದು ಠಾಣೆಗೆ ಕಳುಹಿಸಿ ಗಾಯಾಳುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 155/2017 ಕಲಂ: 78 ಕ್ಲಾಸ್ (3) ಕೆ.ಪಿ.ಆಕ್ಟ್.

ದಿನಾಂಕ : 22/09/2017 ರಂದು ಮಧ್ಯಾಹ್ನ 4-00 ಗಂಟೆಗೆ ಮಾನ್ಯ ಪಿ.ಐ ಸಾಹೇಬರವರು ಠಾಣಾ ಪಿ.ಸಿ-968 ಮಂಜುನಾಥ್  ರವರ ಮೂಲಕ ಕಳುಹಿಸಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ: 22/09/2017 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನಮ್ಮ ಗಾಂಧಿನಗರದ ಉಪಠಾಣೆಯ ಹೆಚ್.ಸಿ-32 ಉಸ್ಮಾನ್ ಸಾಬ್ ಹಾಗೂ ಬೀಟ್ ಸಿಬ್ಬಂದಿಯಾದ ಪಿ.ಸಿ-968 ಮಂಜುನಾಥ್ ರವರಿಂದ ತಿಪಟೂರು ಟೌನ್ ಗಾಂದಿನಗರದ ಗುರಪ್ಪನಕಟ್ಟೆ 10ನೇ ಕ್ರಾಸ್ ಬಳಿ ರಂಗಪುರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಪ್ಯಾರೇಜಾನ್ ಬಿನ್ ಸಯ್ಯದ್ ಕರೀಂ ರವರು ಸಾರ್ವಜನಿಕರನ್ನು ಸೇರಿಸಿಕೊಂಡು ಅವರಿಂದ ಹಣ ಪಡೆದು, ಮಟ್ಕಾ ಜೂಜಾಟ ಆಡುತ್ತಿದ್ದಾರೆಂತ ಖಚಿತ ವರ್ತಮಾನ ಬಂದಿದ್ದು, ಈತನನ್ನು ದಾಳಿ ಮಾಡಿ ಬಂದಿಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು, ಹೆಚ್.ಸಿ-32 ಉಸ್ಮಾನ್ ಸಾಬ್, ಪಿ.ಸಿ-968 ಮಂಜುನಾಥ್, ಪಿ.ಸಿ-210 ಅಶೋಕ್  ಮತ್ತು ಪಂಚರುಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಪ್ಯಾರೇಜಾನ್ ರವರು ಮೇಲ್ಕಂಡ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಅವರು ಹೇಳುತ್ತಿದ್ದ ನಂಬರ್ ಗಳನ್ನು ಒಂದು ಚೀಟಿಗೆ ಪೆನ್ನಿನಿಂದ ಬರೆದುಕೊಳ್ಳುತ್ತಾ 1 ರೂಗೆ 80 ರೂ ಕೊಡುತ್ತೇನೆಂದು ಮಟಕಾ ಜೂಜಾಟವಾಡುತ್ತಿದ್ದವನನ್ನು ಸಿಬ್ಬಂದಿಯರೊಂದಿಗೆ ಹಿಡಿದು, ಹೆಸರು ವಿಳಾಸ ಕೇಳಲಾಗಿ ಪ್ಯಾರೇಜಾನ್ ಬಿನ್ ಸಯ್ಯದ್ ಕರೀಂ, 60 ವರ್ಷ, ಮುಸ್ಲೀಂ ಜನಾಂಗ, ಅಮಾಲಿ ಕೆಲಸ, 10ನೇ ಕ್ರಾಸ್  ಗುರಪ್ಪನಕಟ್ಟೆ, ಗಾಂಧಿನಗರ, ತಿಪಟೂರು ಟೌನ್ ಎಂತ ತಿಳಿಸಿದ್ದು, ಈತನನ್ನು ಮಧ್ಯಾಹ್ನ 03-30  ಗಂಟೆಗೆ ವಶಕ್ಕೆ ಪಡೆದಿರುತ್ತೆ. ಹಾಗೂ ಈತನ ಬಳಿ  2230/- ರೂ  ನಗದು ಹಣ,  ಮಟ್ಕಾ ನಂಬರ್ ಬರೆದಿರುವ ಒಂದು ಚೀಟಿ ಮತ್ತು ಒಂದು ಲೆಡ್ ಪೆನ್ನು ಇದ್ದು, ಈತನ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 79/2017 - ಕಲಂ 279-337 ಐಪಿಸಿ ರೆ/ವಿ  134(ಎ)(ಬಿ)  ಐ ಎಂ ವಿ ಆಕ್ಟ್‌. .

ದಿನಾಂಕ:-22/09/2017 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿ ಶ್ರೀನಿವಾಸ ಬಿನ್ ತಿಮ್ಮಣ್ಣ ಕಂಬತನಹಳ್ಳಿ   ಗ್ರಾಮ, ಮಧುಗಿರಿ ತಾ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ದೊಡ್ಡೇರಿ ಹೋಬಳಿ ಮಾದೇನಹಳ್ಳಿ ಗ್ರಾಮದ ಸಿದ್ದಗಂಗಯ್ಯರವರ ಮನೆಯ ಮೇಲ್ಛಾವಣೆಯ ಕಾಂಕ್ರೀಟ್ ಕೆಲಸ ಒಪ್ಪಿಕೊಂಡಿದ್ದು,  ದಿನಾಂಕ:02/08/2017 ರಂದು ಕೆಲಸ ಮಾಡಲು ನಾನು ಮತ್ತು ನನ್ನ ಸ್ನೇಹಿತ ಬಾಲು ಕೆಲಸಕ್ಕೆ ಬಂದು ಕೆಲಸ ಮುಗಿಸಿಕೊಂಡು ಸಂಜೆ 5-00 ಗಂಟೆಯಲ್ಲಿ ಶೌಚಕ್ಕೆಂದು ನಾನು ಮತ್ತು ನನ್ನ ಸ್ನೇಹಿತ ಬಾಲು ರಸ್ತೆ ಎಡಬದಿಯಲ್ಲಿ ನಡೆದುಕೊಂಡು ಹೋಗುವಾಗ, ದಂಡಿನದಿಬ್ಬದ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ಅನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ್ದರಿಂದ ಟ್ರಾಕ್ಟರ್ ನನ್ನ ಎರಡು ಕಾಲುಗಳ ಮೇಲೆ ಹಾಗೂ ಬಾಲುವಿನ ಮೇಲೆ ಟ್ರಾಕ್ಟರ್ ಹರಿದಿದ್ದರಿಂದ, ನನ್ನ ಎರಡು ಕಾಲುಗಳು ಮುರಿದು ಬಾಲುವಿನ ಸೊಂಟ ಮುರಿದಿರುತ್ತೆ. ಅಲ್ಲಿ ಕೆಲಸಕ್ಕೆ ಬಂದಿದ್ದವರು ಯಾವುದೋ ಒಂದು ವಾಹನದಲ್ಲಿ ನಮ್ಮನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಸೇರಿಸಿದ್ದು ನಾನು ಚಿಕಿತ್ಸೆ ಪಡೆದಿರುತ್ತೇನೆ ನಮಗೆ ಅಪಘಾತ ಪಡಿಸಿದ ಟ್ರಾಕ್ಟರ್ ನಂ ಕೆಎ-64 ಟಿ-1520 ಆಗಿದ್ದು, ಚಾಲಕನ  ಹೆಸರು ಸರೇಶ ಬಿನ್ ರಂಗನಾಥ ನಾಗೇನಹಳ್ಳಿ ಹಾಲಿ ವಾಸ ಬಡವನಹಳ್ಳಿ ಎಂತಾ ತಿಳಿದು ಬಂದಿರುತ್ತೆ. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ  ತಡವಾಗಿ ಬಂದು ದೂರು ನೀಡುತ್ತಿದ್ದು ಟ್ರಾಕ್ಟರ್ ಚಾಲಕನ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  89/2017   ಕಲಂ: 323.324.504.506 RW 34 IPC

ದಿನಾಂಕ:22/09/2017 ರಂದು ಮದ್ಯಾಹ್ನ 12:00 ಗಂಟೆಗೆ ಪಿರ್ಯಾದಿ ನಾಗಭೂಷಣ ಬಿನ್ ಲೇ|| ಪೆದ್ದಾಯಪ್ಪ 40 ವರ್ಷ ಹೆಚ್.ಪಿ ಪೆಟ್ರೋಲ್ ಬಂಕ್ ಮುಂಭಾಗ ಚಿಲ್ಲರೆ ಅಂಗಡಿ ವ್ಯಾಪಾರ ವೈ.ಎನ್ ಹೊಸಕೋಟೆ ಟೌನ್ ಪಾವಗಡ ತಾ|| ರವರು ನೀಡಿದ ಲಿಖೀತ ದೂರಿನ ಅಂಶವನೆಂದರೆ ನಾನು ನಮ್ಮೂರಿನ ಹೆಚ್.ಪಿ ಪೆಟ್ರೋಲ್ ಬಂಕ್ ಮುಂಭಾಗ ನಮ್ಮ ತಂದೆಗೆ ಸೇರಿದ ಪಿತ್ರಾರ್ಜಿತ ಜಮೀನು ಇದ್ದು ಸದರಿ ಜಮೀನಿನಲ್ಲಿ ನಾನು ಒಂದು ಮನೆ ಕಟ್ಟಿಕೊಂಡು,ರಸ್ತೆ ಪಕ್ಕದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿರುತ್ತೇನೆ, ದಿನಾಂಕ:21/09/2017 ರಂದು ಸಂಜೆ 4:30 ಗಂಟೆಯಲ್ಲಿ ನಾವು ಹೊಸದಾಗಿ ಕಟ್ಟಿರುವ ಮನೆಯ ಮುಂದೆ  ಶೀಟ್ ಹಾಕುತ್ತಿದ್ದಾಗ ನಮ್ಮ ಅಣ್ಣಂದಿರಾದ ಹನುಮಪ್ಪ ಮತ್ತು ರಘು ಇಬ್ಬರೂ ಬಂದು ಶೀಟ್ ಹಾಕುವುದನ್ನು ನಿಲ್ಲಿಸಿ ನೀನು ಶೀಟ್ ಹಾಕಬೇಡ ಈ ಜಾಗದಲ್ಲಿ ನನಗೆ ಒಂದು ನಿವೇಶನ ಬರಬೇಕು ನಿವೇಶನ ಕೊಡುವವರೆವಿಗೂ ಮತ್ತು ಈ ಬಗ್ಗೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ದಾವೆ ಮುಕ್ತಾಯ ಆಗುವವರೆವಿಗೂ ಶೀಟ್ ಹಾಕಬೇಡ ಎಂತ ಹೇಳಿದರು ಅದಕ್ಕೆ ನಾನು ಈಗಾಗಲೇ ನಿಮ್ಮ ಭಾಗಕ್ಕೆ ಬಂದಿರುವ ಜಮೀನನ್ನು ನೀವು ಮಾರಿಕೊಂಡು ವಿನಾಃ ಕಾರಣ ಕೋರ್ಟ ನಲ್ಲಿ ಕೇಸ್ ಹಾಕಿಕೊಂಡು ನನಗೆ ಯಾಕೆ ತೊಂದರೆ ಕೊಡಲು ಬಂದಿದ್ದೀರಾ ಎಂದಿದ್ದಕ್ಕೆ ಹನುಮಪ್ಪ ಎಂಬುವವನು ನೀನು ಶೀಟ್ ಹಾಕಬೇಡ ಸೂಳೇ ಮಗನೇ ಎಂತ ನನ್ನನ್ನು ಹಿಡಿದುಕೊಂಡ ಆಗ ರಘು ಗಡಾರಿಯಿಂದ ನನ್ನ ಬಲ ಕೈ ಭುಜಕ್ಕೆ ಹೊಡೆದು ನೋವುಂಟು ಮಾಡಿದ.  ನಾನು ಕೆಳಕ್ಕೆ ಬಿದ್ದು ಒದ್ದಾಡುತ್ತಿದ್ದಾಗ ಅವರುಗಳಿಬ್ಬರು ನನ್ನನ್ನು ಕೈಗಳಿಂದ ಗುದ್ದಿ ಕಾಲಿನಿಂದ ಒದ್ದು ನೋವುಂಟು ಮಾಡಿ ನೀನೇನಾದರೂ ಮನೆಗೆ ಶೀಟ್ ಹಾಕಿದರೆ ನಿನ್ನನ್ನು ಕೊಲೆ ಮಾಡಿ ಸಾಯಿಸುತ್ತೇವೆಂತ ಪ್ರಾಣಬೆದರಿಕೆ ಹಾಕಿ ಹೋದರು. ಇವರು ಈ ಹಿಂದೆಯೂ ಕೂಡ ನನ್ನ ಹೊಸ ಮನೆಗೆ ಕರೆಂಟ್ ವೈರ್ ಎಳೆದುಕೊಳ್ಳುವಾಗ ತೊಂದರೆ ಮಾಡಿರುತ್ತಾರೆ, ಈ ಗಲಾಟೆಯನ್ನು ನನ್ನ ಹೆಂಡತಿ ಉಮಾ ಮತ್ತು ಅಂಜನೇಯ ಬಿನ್ ಮಲ್ಲೇಶ ರವರು ನೋಡಿರುತ್ತಾರೆ, ನಂತರ ನನ್ನನ್ನು ಆಂಜನೇಯ  ವೈ ಎನ್ ಹೊಸಕೋಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಯಂತೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು, ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂತ ಇತ್ಯಾದಿಯಾಗಿ  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆFriday, 22 September 2017

Crime Incidents 22-09-17

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 14/2017 ಕಲಂ 174 ಸಿ ಆರ್ ಪಿ ಸಿ

ದಿನಾಂಕ:20-09-17 ರಂದು ಮದ್ಯಾಹ್ನ 02:30 ಗಂಟೆಗೆ ಪಿರ್ಯಾದಿ ಗಾಳಪ್ಪ ಬಿನ್ ಲೇಟ್ ಸಣ್ಣಪ್ಪ, ಕದಿರೇಹಳ್ಳಿ ಗ್ರಾಮ, ಶಿರಾ  ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಮತ್ತು ಪಿರ್ಯಾದಿ ಹೆಂಡತಿ ಗಂಗಮ್ಮ ಜೀವನೋಪಯಕ್ಕಾಗಿ ಕೂಲಿಕೆಲಸ ಮಾಡುತ್ತಿದ್ದು ಇವರಿಗೆ 8ವರ್ಷದ ಹಣ್ಣು ಮಗು 6ವರ್ಷದ ಗಂಡು ಮಗು ಇದ್ದು ಪಿರ್ಯಾದಿಯವರಿಗೆ ಕದಿರೆಹಳ್ಳಿ ಗ್ರಾಮದ ಸ ನಂ 75ರಲ್ಲಿ 3 ಏಕರೆ ಜಮೀನಿ ಇದ್ದು ಸದರಿ ಜಮೀನಿನಲ್ಲಿ ಕಡಲೆಕಾಯಿ ಬೆಳೆ ಹಾಕಿದ್ದು, ಕಳೆ ಬಂದಿರುವುದರಿಂದ ಪಿರ್ಯಾದಿ ಮತ್ತು ಪಿರ್ಯಾದಿ ಹೆಂಡತಿ ಗಂಗಮ್ಮ ರವರು ಈ ದಿನ ಜಮೀನಿಗೆ ಕಳೆಕಿಳಲು ಹೋಗಿದ್ದು ಮಧ್ಯಾಹ್ನ ಸುಮಾರು 12:00 ಗಂಟೆಯಲ್ಲಿ ಪಿರ್ಯಾದಿ  ಹೆಂಡತಿ ಗಂಗಮ್ಮ ರವರು ಜಮೀನಲ್ಲಿ ಕೆಲಸ ಮಾಡುತ್ತದ್ದಾಗ ಗಂಗಮ್ಮರವರ ಬಲಪಾದದ ಬಳಿ ಯಾವುದೋ ವಿಷ ಪುರಿತ ಹಾವು ಕಚ್ಚಿದ್ದು ಚಿಕಿತ್ಸೆಗಾಗಿ ಅಕ್ಕ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಸಹಾಯದಿಂದ ಬರಗೂರು ಆಸ್ಪತ್ರಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿ ಪರೀಕ್ಷಿಸಿದ ವೈದ್ಯರು ಗಂಗಮ್ಮ ಮೃತಪಟ್ಟರುವುದಾಗಿ ತಿಳಿಸಿದ್ದು ಶವವು ಬರಗೂರು ಆಸ್ಪತ್ರಯಲ್ಲಿದ್ದು ಸ್ಥಳಕ್ಕೆ  ಬಂದು ಮುಂದಿನ ಕ್ರಮ ಜರುಗಿಸಲು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಿಲಿಸಿರುತ್ತೆ

 

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-165/2017 ಕಲಂ 160 ಐ,ಪಿ,ಸಿ

ದಿನಾಂಕ:21-09-2017 ರಂದು ರಾತ್ರಿ 09-30 ಗಂಟೆಗೆ ಠಾಣಾ ಪಿ,ಸಿ-220, ಮಂಜುನಾಥ್‌,ಎಂ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ:21-09-2017 ರಂದು ನಾನು ಗುಪ್ತ ಮಾಹಿತಿ ಸಂಗ್ರಹಿಸಲೆಂದು ನರುಗನಹಳ್ಳಿ, ಹುಳ್ಳೇನಹಳ್ಳಿ, ಚೋಳಂಬಳ್ಳಿ ಕಡೆಗಳಿಗೆ ಹೋಗಿದ್ದು, ನಂತರ ಹೊನ್ನುಡಿಕೆಗೆ ಹೋಗಿ ಹೊನ್ನುಡಿಕೆ ಉಪಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ,ಸಿ-783 ಮಹೇಶ್‌,ಎಂ,ಸಿ ರವರೊಂದಿಗೆ ಬನದಪಾಳ್ಯ, ಕಲ್ಲುಪಾಳ್ಯ, ಕೋಡಿಹಳ್ಳಿ ಕಡೆಗಳಿಗೆ ಹೋಗಲೆಂದು ಇಬ್ಬರೂ ದ್ವಿಚಕ್ರ ವಾಹನದಲ್ಲಿ ಬನದಪಾಳ್ಯದಲ್ಲಿ ಹೊನ್ನುಡಿಕೆ-ಕುದೂರು ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ, ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ಬನದಪಾಳ್ಯ ಗೇಟ್‌ನ ಬಳಿ ಇರುವ ಕಟಿಂಗ್‌ ಶಾಪ್‌ ಮುಂಭಾಗದಲ್ಲಿ ಜನಗಳು ಗುಂಪು ಕಟ್ಟಿಕೊಂಡಿದ್ದು ನಾವುಗಳು ದ್ವಿಚಕ್ರ ವಾಹನವನ್ನು ನಿಲ್ಲಿಸಿ ನೋಡಲಾಗಿ, ಎರಡು ಗುಂಪುಗಳ ಮದ್ಯೆ ಗಲಾಟೆ ನಡೆಯುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಸಾರ್ವಜನಿಕರ ನೆಮ್ಮದಿ ಹಾಗೂ ಶಾಂತಿಗೆ ಭಂಗ ಉಂಟಾಗುವಂತೆ ಹೊಡೆದಾಡುತ್ತಿದ್ದರು. ಸಮವಸ್ತ್ರದಲ್ಲಿದ್ದ ನಾವುಗಳು ಅವರುಗಳನ್ನು ಬಿಡಿಸಿ ಒಂದು ಗುಂಪಿನವರ ಹೆಸರು ವಿಳಾಸವನ್ನು ಕೇಳಲಾಗಿ, 1) ಮುನೀರ್ ಪಾಷಾ @ ತೌಫೀಕ್‌ ಬಿನ್ ಅಲ್ತಾಫ್‌ ಪಾಷಾ, 24 ವರ್ಷ, ಮುಸ್ಲಿಂ, ಎಂ,ಎಸ್ಸಿ ವಿದ್ಯಾರ್ಥಿ, ತಾವರೇಕೆರೆ, ಹೆಬ್ಬೂರು ಹೋಬಳಿ 2) ವಸೀಂ ಪಾಷಾ ಬಿನ್ ಲೇ|| ಅಬ್ದುಲ್‌ ಕರೀಂ, 24 ವರ್ಷ, ಮುಸ್ಲಿಂ, ಕೂಲಿ ಕೆಲಸ, ಹಳೇ ಪೇಟೆ, ಹುಲಿಯೂರು ದುರ್ಗ, ಕುಣಿಗಲ್‌ ತಾಲ್ಲೂಕು, ತುಮಕೂರು ಜಿಲ್ಲೆ ಎಂತಾ ತಿಳಿಸಿದರು. ಮತ್ತೊಂದು ಗುಂಪಿನವರ ಹೆಸರು ವಿಳಾಸ ಕೇಳಲಾಗಿ 1) ಶಿವರಾಜ್‌ ಕುಮಾರ್‌,ಎನ್‌ ಬಿನ್ ನಾರಾಯಣಪ್ಪ, 24 ವರ್ಷ, ಲಿಂಗಾಯಿತರು, ಜಿರಾಯ್ತಿ, ಬನದಪಾಳ್ಯ, ಹೆಬ್ಬೂರು ಹೋಬಳಿ 2) ವಸಂತ್‌ ಕುಮಾರ್,ಬಿ,ಹೆಚ್ ಬಿನ್ ಹನುಮಂತಯ್ಯ, 23 ವರ್ಷ, ಲಿಂಗಾಯಿತರು, ಪ್ರೈವೇಟ್‌ ಕಂಪನಿಯಲ್ಲಿ ಕೆಲಸ, ಬನದಪಾಳ್ಯ, ಹೆಬ್ಬೂರು ಹೋಬಳಿ ಎಂತಾ ತಿಳಿಸಿದರು. ನಂತರ ಸದರಿಯವರುಗಳನ್ನು ಗಲಾಟೆ ಮಾಡಿಕೊಳ್ಳಲು ಕಾರಣವೇನೆಂತಾ ಕೇಳಲಾಗಿ ನಾವುಗಳು ಫೇಸ್‌ ಬುಕ್‌ನಲ್ಲಿ ಕಾಮೆಂಟ್‌ ಮಾಡಿದ ವಿಚಾರವಾಗಿ ಗಲಾಟೆ ಮಾಡಿಕೊಂಡೆವೆಂತಾ ತಿಳಿಸಿದರು. ನಂತರ ಮೇಲ್ಕಂಡ ಆಸಾಮಿಗಳನ್ನು ರಾತ್ರಿ 09-30 ಗಂಟೆಗೆ ಠಾಣೆಗೆ ಕರೆತಂದು ಮಾನ್ಯ ಪಿ,ಎಸ್,ಐ ಸಾಹೇಬರವರ ಮುಂದೆ ಹಾಜರ್‌ ಪಡಿಸಿ ಈ ವರದಿಯನ್ನು ನೀಡಿರುತ್ತೇನೆ ಎಂತಾ ನೀಡಿದ ರಿಪೋರ್ಟ್‌ ಅನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಹೊನ್ನವಳ್ಳಿ ಪೊಲೀಸ್ ಠಾಣೆ    ಮೊ,ನಂ-116/2017 ಕಲಂ- 143.147.148.324.307.504.506 ರೆ,ವಿ 149 ಐಪಿಸಿ

ದಿನಾಂಕ-22/09/2017 ರಂದು ಬೆಳಿಗ್ಗೆ 1-30 ಗಂಟೆಯಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಕಬ್ಬಿನಕೆರೆ  ಕಸಬಾ ಹೋ|| ಗ್ರಾಮದ ಶ್ರೀಮತಿ ಪಾಪಮ್ಮ ಕೋಂ ಸಣ್ಣಪ್ಪ ನೀಡಿದ ಹೇಳಿಕೆ ಅಂಶವೇನೆಂದರೆ. ಪಿರ್ಯಾದಿಯ ಮದಲನೆಯ ಸೂಸೆ ದೇವಮ್ಮಳು  ದಿನಾಂಕ 21/09/2017 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಮನೆಯಿಂದ ಹೋದವಳು ವಾಪಸ್‌ ಬಾರದೇ ಇದ್ದುದರಿಂದ ದೇವಮ್ಮ ತವರು ಮನೆಗೆ ಹೋಗಿರ ಬಹುದೆಂದು ನಾವು ತಿಳಿದು ನನ್ನ ಗಂಡ ಸಣ್ಣಪ್ಪ ದೇವಮ್ಮಳ ತಂದೆ ಗುರುಸ್ವಾಮಿಗೆ ಪೋನ್‌ ಮಾಡಿ ವಿಚಾರ ತಿಳಿಸಿದ್ದು, ನಂತರ ಇದೇ ದಿನ ರಾತ್ರಿ  ಸುಮಾರು 9-00 ಗಂಟೆಗೆ ನಮ್ಮ ಮನೆಯ ಮುಂದೆ ನಾನು ಸಣ್ಣಪ್ಪ, ಮಕ್ಕಳಾದ ಕುಮಾರ,ಸಿದ್ದೇಶ ಹಾಗೂ ನಾದಿನಿ ಕಮಲಮ್ಮರೊಂದಿಗೆ ಕುಳಿತಿರುವಾಗ್ಗೆ ವೀರಭದ್ರಸ್ವಾಮಿ ಬಿನ್‌ ಗುರುಸ್ವಾಮಿ, ಕುಮಾರ ಬಿನ್‌ ಗುರುಸ್ವಾಮಿ ಹಾಗೂ ಜಯಪುರದ ಪ್ರದೀಪ ಬಿನ್‌ ಸೋಮಾಬೋವಿ ಹಾಗೂ ಚೇತನ ಬಿನ್‌ ಸೋಮಬೋವಿ  ರವರುಗಳು ಬೈಕ್‌ನಲ್ಲಿ ಮನೆಯ ಬಳಿ ಬಂದು ನಮ್ಮ ದೇವಮ್ಮ ಎಲ್ಲಿ ಎಂದು ಕೇಳಿ ಏಕಾಏಕಿ ಸೂಳೇಮಕ್ಕಳ , ಬೀಳಿಮಕ್ಕಳ ಅಂತ ಬೈದು ವೀರಭದ್ರಸ್ವಾಮಿಯು ತನ್ನ ಕೈಯಲ್ಲಿದ್ದ ರಾಡಿನಿಂದ ಸಿದ್ದೇಶನ ತಲೆಗೆ  ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿದ, ಆತನ ಜೊತೆಯಲ್ಲಿ ಬಂದಿದ್ದ  ಯೋಗೀಶನು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಪಿರ್ಯಾದಿಯ ಗಂಡ ಸಣ್ಣಪ್ಪನಿಗೆ ತಲೆಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತ ಗಾಯ ಮಾಡಿರುತ್ತಾರೆ, ಹಾಗೂ ಪ್ರದೀಪ ತನ್ನ ಕೈಯಲ್ಲಿದ್ದ ದೊಣ್ಣೇಯಿಂದ ನ್ನ ಬಲ ಕೈಗೆ ಹೊಡೆದು ಗಾಯ ಪಡಿಸಿರುತ್ತಾನೆ , ಆಗ ಸ್ಥಳದಲ್ಲಿದ್ದ ಕಮಲಮ್ಮ ನನ್ನ ಸೂಸೆ ಸುನಂದ ರವರು ಜಗಳ ಬಿಡಿಸಿ ಸಮಾಧಾನ ಮಾಡಿರುತ್ತಿರುವಾಗ ನಮ್ಮ ದೇವಮ್ಮಳನ್ನು ಮನೆಗೆ ಕರೆದುಕೊಂಡು ಬರದಿದ್ದರೆ ನಿಮ್ನ್ನು ಜೀವಂತವಾಗಿ ಭೂಮಿಯ ಮೇಲೆ ಉಳಿಸುವುದಿಲ್ಲಾ ಕೊಲೆ ಮಾಡುತ್ತೇವೆ   ಎಂದು ಪ್ರಾಣ ಬೆದರಿಕೆ ಹಾಕಿ ತಮ್ಮ ಕೈಯಲ್ಲಿದ್ದ ರಾಡ್‌ ಮತ್ತು ದೊಣ್ಣೆಗಳನ್ನು ಅಲ್ಲಿ ಬಿಸಾಡಿ ಹೋಗಿರುತ್ತಾರೆ. ಗಯಗೊಂಡ ನಮ್ಮನ್ನು 108 ಅಂಬುಲೇನ್ಸ್‌  ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದು ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತಾರೆ .ಆದ್ದರಿಂದ ನಮ್ಮ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ರಕ್ತಗಾಯ ಪಡಿಸಿದ ಮೇಲ್ಕಂಡವರ  ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆಯ್ನು ಪಡೆದು ವಾಪಸ್ ಠಾಣೆಗೆ  ಪ್ರಕರಣ ದಾಖಲಿಸಿರುತ್ತೇನೆ.

ಹೊನ್ನವಳ್ಳಿ ಪೊಲೀಸ್ ಠಾಣೆ   ಮೊ,ನಂ-115/2017 ಕಲಂ- 324 504 506 ರೆ,ವಿ 34 ಐಪಿಸಿ

ದಿನಾಂಕ-22/09/2017 ರಂದು ಬೆಳಿಗ್ಗೆ 12-45 ಗಂಟೆಯಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಕಾಟಮ್ಮದೇವರ ಹಟ್ಟಿ ಕಂದಿಕೆರೆ ಹೋ|| ಗ್ರಾಮದ ವೀರಭದ್ರಸ್ವಾಮಿ ಬಿನ್‌ ಗುರುಸ್ವಾಮಿ  ರವರು ನೀಡಿದ ಹೇಳಿಕೆ ಅಂಶವೇನೆಂದರೆ. ಪಿರ್ಯಾದಿಯ ತಂಗಿ ದೇವಮ್ಮಳನ್ನು ಈಗ್ಗೆ ಸುಮಾರು 8 ವರ್ಷಗಳ ಹಿಂದೆ ಕಬ್ಬಿನಕೆರೆ ಗ್ರಾಮದ ತೋಟದ ಮನೆಯ ವಾಸಿ ಕುಮಾರ ಬಿನ್‌ ಸಣ್ಣಪ್ಪ ನಿಗೆ ವಿವಾಹಮಾಡಿ ಕೊಟ್ಟಿದ್ದು,  ದಿನಾಂಕ-21/09/2017 ರಂದು ಸಂಜೆ ಸಣ್ಣಪ್ಪ ಫೋನ್‌ ಮಾಡಿ ದೇವಮ್ಮ ಮದ್ಯಾಹ್ನ  ಮನೆಯಿಂದ ಹೋದವಳು ಬಂದಿರುವುದಿಲ್ಲಾ ನಿಮ್ಮ ಮನೆಗೆ ಬಂದಿರುತ್ತಾಳಾ ಇಲ್ಲವೋ ಎಂದು ವಿಚಾರ ಮಾಡಿದ್ದು, ಸಂಜೆಯಾದರು ಪಿರ್ಯಾದಿಯ ತಂಗಿ ಮನೆಗೆ ಬರದ ಕಾರಣ, ಅನುಮಾನ ಬಂದು ನಾನು,ಜಯಪುರ ವಾಸಿ ಪ್ರದೀಪ ಬಿನ್‌ ಸೋಮಬೋವಿ,ನಮ್ಮ ಗ್ರಾಮದ ನವೀನ ಬಿನ್‌ ಲೇ|| ನರಸಿಂಹಯ್ಯ ಮತ್ತು ಯೋಗೀಶ ಬಿನ್‌ ಲೇ|| ಹನುಮಂತಯ್ಯರವರ ಜೊತೆ ಕಬ್ಬಿನಕೆರೆ ಗ್ರಾಮದ ವಾಸಿ ನಮ್ಮ ಮಾವನ ಮನೆಗೆ ರಾತ್ರಿ 8-30 ಗಂಟೆಗೆ ಹೋಗಿ ನನ್ನ ತಂಗಿ ಎಲ್ಲಿ ಎಂತ ಕೇಳಿದಕ್ಕೆ ಏಕಾಏಕಿ ಜಗಳ ತೆಗೆದು ಪಾಪಮ್ಮಲು ಕಾರದ ಪುಡಿಯನ್ನು ಎರಚಿದಾಗ ಕುಮಾರ ತನ್ನ ಕೈಯಲ್ಲಿ ರಾಡನ್ನು ಹಿಡಿದುಕೊಂಡು ಬಂದು ಪ್ರದೀಪ ಮತ್ತು ಯೋಗೀಶನ ತಲೆಗೆ ಹೋಡೆದು ರಕ್ತಗಾಯ ಪಡಿಸಿದರು ಸಣ್ಣಪ್ಪ ಪಿರ್ಯಾದಿಗೆ ಕಲ್ಲಿನಿಂದ ಹೊಡೆದು ಗಾಯ ಪಡಿಸಿದರು ಅಲ್ಲದೇ ಮೇಲ್ಕಂಡ ಪಾಪಮ್ಮ ಸಣ್ಣಪ್ಪ ಕುಮಾರ ಸಿದ್ದೇಶ ರವರುಗಳು ಬೋಳಿಮಕ್ಕಳ ಸೂಳೇಮಕ್ಕಳ ನಮ್ಮ ಮನೆಯ ಬಾಗಿಲಿಗೆಬಂದು ನಮ್ಮನ್ನೇ ಕೇಳುತ್ತಿರಾ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲಾ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ . ಸ್ಥಳದಲ್ಲಿದ್ದ ನವೀನ ಜಗಳ ಬಿಡಿಸಿ ಗಾಯಾಗಗೊಂಡ ನಮ್ಮನ್ನು ಬೈಕಿನಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿರುತ್ತಾರೆ .ಮೇಲ್ಕಂಡ ನಾಲ್ಕು ಜನರ  ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆಯ್ನು ಪಡೆದು ವಾಪಸ್ ಠಾಣೆಗೆ ಬೆಳಿಗ್ಗೆ  02-00 ಗಂಟೆಗೆ ಬಂದು ಪ್ರಕರಣ ದಾಖಲಿಸಿರುತ್ತೇನೆ.


Crime Incidents 21-09-17

ಜಯನಗರ ಪೊಲೀಸ್ ಠಾಣೆ ಮೊ.ಸಂ 16/2017 ಕಲಂ 174 (c) Crpc

 

ದಿನಾಂಕ: 21/09/2017 ರಂದು ರಾತ್ರಿ 7.30 ಗಂಟೆಯ ಸಮಯದಲ್ಲಿ ತುಮಕೂರು ಟೌನ್‌ ಜಯನಗರ ಪೂರ್ವ 2 ನೇ ಮೈನ್‌ ರಸ್ತೆಯಲ್ಲಿ ವಾಸವಾಗಿರುವ ಸತೀಶ್‌‌ ಸಿ.ಎ  ಬಿನ್. ಲೇ|| ಸಿ.ಎಸ್. ಅನಂತರಾಮು ಎಂಬುವವರು ಠಾಣೆಗೆ ಹಾಜರಾಗಿ, ನಮಗೆ ಸಿ.ಎಸ್. ಸುಪ್ರಜ ಎಂಬ ಒಬ್ಬಳೇ ಮಗಳಿದ್ದು, ಆಕೆಯು ತುಮಕೂರು ಟೌನ್ ಬಟವಾಡಿಯಲ್ಲಿರುವ ಸಿದ್ದಗಂಗಾ ಪಾಲಿಟೆಕ್ನಿಕ್‌‌ ಕಾಲೇಜಿನಲ್ಲಿ ಅಂತಿಮ ವರ್ಷದ ಡಿಪ್ಲೋಮೋ ವ್ಯಾಸಂಗ ಮಾಡುತ್ತಿದ್ದಳು. ನನ್ನ ಪತ್ನಿ ಲಲಿತಾ ಡಿ.ಎನ್. ಇದೇ ತುಮಕೂರು ಟೌನ್ ವಿಜಯನಗರದಲ್ಲಿರುವ ಸರ್ವೋದಯ ಪ್ರೈಮರಿ ಸ್ಕೂಲ್‌‌ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುತ್ತಾರೆ. ನಾನು ಪ್ರತಿದಿನ ಬೆಳಿಗ್ಗೆ ಸುಮಾರು 8-00 ಗಂಟೆಗೆ ಮನೆಯನ್ನು ಬಿಟ್ಟು ನನ್ನ ಹೆಂಡತಿ ಲಲತಾಳನ್ನು ಸ್ಕೂಲಿಗೆ ಬಿಟ್ಟು ಕೆಲಸಕ್ಕೆ ಹೋಗುತ್ತಿರುತ್ತೇನೆ.   ನಾವಿಬ್ಬರೂ ಕೆಲಸಕ್ಕೆ ಹೋದ ನಂತರ ನಮ್ಮ ಮಗಳು ಸುಪ್ರಜ ಕಾಲೇಜಿಗೆ ಬೆಳಿಗ್ಗೆ 8-15 ಕ್ಕೆ ಹೋಗಿ ಸಾಯಂಕಾಲ ಸುಮಾರು 4-45 ಕ್ಕೆ ಮನೆಗೆ ಬರುತ್ತಿದ್ದಳು.  ಪ್ರತಿದಿನದಂತೆ ನಾನು, ನನ್ನ ಹೆಂಡತಿ ಲಲಿತಾ ಈ ದಿನ ಬೆಳಿಗ್ಗೆ ಮನೆಯಲ್ಲಿ ತಿಂಡಿ ತಿಂದು ಬೆಳಿಗ್ಗೆ 8-00 ಗಂಟೆಗೆ ಮನೆಯನ್ನು ಬಿಟ್ಟು, ನನ್ನ ಹೆಂಡತಿಯನ್ನು ಅವರ ಸ್ಕೂಲ್‌‌ ಬಳಿ ಬಿಟ್ಟು ನಾನು ಶ್ರೀದೇವಿ ಇಂಜಿನಿಯರಿಂಗ್‌ ಕಾಲೇಜಿಗೆ ಹೋಗಿದ್ದೆನು. ಸಾಯಂಕಾಲ ವಾಪಾಸ್ಸು ಬೈಕಿನಲ್ಲಿ ಬರುವಾಗ ಪೋನ್‌‌ ರಿಂಗ್‌ ಆಗಿದ್ದು, ನಾನು ಬೈಕ್‌‌ನಲ್ಲಿ ಬರುತ್ತಿದ್ದರಿಂದ ಪೋನ್‌‌ ರಿಸೀವ್‌‌ ಮಾಡಲಿಲ್ಲ, ಸುಮಾರು 5-00 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಬಳಿಗೆ ಬಂದಾಗ ನಮ್ಮ ಮನೆಯ ಮುಂದೆ ಜನರು ಗುಂಪು ಸೇರಿದ್ದು, ಮನೆಯ ಮುಂದೆ ನನ್ನ ತಮ್ಮ ಮಹೇಶ್‌‌ ಹಾಗೂ ನನ್ನ ಹೆಂಡತಿ ಜೋರಾಗಿ  ಆಳುತ್ತಿದ್ದು, ನಮ್ಮ ಮಗಳು ಸುಪ್ರಜ ಮಹಡಿಯ ಮೇಲೆ ರೂಮಿನಲ್ಲಿ ನೇಣು ಹಾಕಿಕೊಂಡಿದ್ದಾಳೆಂತಾ ತಿಳಿಸಿದರು.  ನಾನು ಗಾಬರಿಯಲ್ಲಿ ಮಹಡಿಯ ಮೇಲೆ ರೂಮಿನ ಬಳಿಗೆ ಹೋಗಿ ನೋಡಲಾಗಿ ನಮ್ಮ ಮಗಳೂ ಸುಪ್ರಜ ಚೂಡೀಧಾರ್‌‌ನ ವೇಲಿನಿಂದ ಕುತ್ತಿಗೆಗೆ ಬಿಗಿದುಕೊಂಡು ರೂಮಿನಲ್ಲಿರುವ ಪ್ಯಾನಿಗೆ ನೇಣುಹಾಕಿಕೊಂಡು ಮೃತಪಟ್ಟು ನೇತಾಡುತ್ತಿದ್ದಳು. ನನ್ನ ಹೆಂಡತಿಯನ್ನು ವಿಚಾರ ಮಾಡಿದ್ದಕ್ಕೆ ನಾನು ಸಾಯಂಕಾಲ ಸುಮಾರು 4-30 ಗಂಟೆಗೆ ಮನೆಗೆ ಬಂದಿದ್ದು, ಮನೆಯ ಮುಂದೆ ಕಾಂಪೌಂಡ್‌‌ನಲ್ಲಿ ಸಪ್ರಜಳ ಸ್ಕೂಟರ್‌‌ ನಿಂತಿದ್ದು, ಮುಂಬಾಗಲಿನ ಬೀಗ ತೆಗೆದು ಒಳಗೆ ಹೋಗಿದ್ದು, ಸುಪ್ರಜಳನ್ನು ಕೂಗಿದೆನು. ಮಾತನಾಡದೇ ಇದ್ದರಿಂದ ಎಲ್ಲೋ ಸುಪ್ರಜಳು ಮಲಗಿರಬಹುದೆಂದು ನಾನು ಮನೆಯ ಕೆಲಸ ಮಾಡುತ್ತಿದ್ದು, ಕಾಫಿ ಮಾಡಿಕೊಂಡು ಈಗ 5 ನಿಮಿಷ ಮುಂಚೆ ಸುಪ್ರಜಳಿಗೆ ಕೊಡಲು ಆಕೆಯ ರೂಮಿನ ಬಳಿಗೆ ಹೋದಾಗ ಆಕೆಯು ಯಾವಾಗಲೋ ನೇಣುಹಾಕಿಕೊಂಡು  ಮೃತಪಟ್ಟು ನೇತಾಡುತ್ತಿದ್ದಳೆಂತಾ  ವಿಚಾರ ತಿಳಿಸಿದಳು.   ನಮ್ಮ ಮಗಳು ಯಾವ ಕಾರಣಕ್ಕಾಗಿ ಈ ರೀತಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆಂತಾ ನಮಗೆ ಗೊತ್ತಿರುವುದಿಲ್ಲ.  ಆಕೆಯು ವಿದ್ಯಾಬ್ಯಾಸದಲ್ಲಿ ಬೇಸರಗೊಂಡೋ, ಇಲ್ಲವೇ ಸ್ನೇಹಿತರ ಮೇಲೆ ಬೇಜಾರು ಮಾಡಿಕೊಂಡೋ ಅಥವಾ ಇನ್ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೇ ಈ ರೀತಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಎಂತ ಕಂಡುಬಂದಿರುತ್ತೆ. ಆದರು ಸಹ ನನ್ನ ಮಗಳ ಸಾವಿನಲ್ಲಿ ಅನುಮಾನ ಇರುತ್ತದೆ.  ತಾವು ದಯಮಾಡಿ ಮುಂದಿನ ಕ್ರಮ ಜರುಗಿಸಿ ನನ್ನ ಮಗಳ ಸಾವಿನ ಬಗ್ಗೆ ಸ್ಪಷ್ಟ ಕಾರಣವನ್ನು ತಿಳಿಸಿಕೊಡಲು ಕೋರುತ್ತೇನೆಂತ  ಇತ್ಯಾದಿಯಾಗಿ ಪಿರ್ಯಾದಿ ಅಂಶವಾಗಿರುತ್ತೆ.Wednesday, 20 September 2017

Crime Incidents 20-09-17

ಚೇಳೂರು ಪೊಲೀಸ್ ಠಾಣಾ ಮೊ. ನಂ 146/2017 ಕಲಂ 143.147.188.341.323.504.506.353. ರೆ/ವಿ 149 .ಪಿ.ಸಿ

ದಿನಾಂಕ; 19/09/2017  ರಂದು  ಮದ್ಯಾಹ್ನ  2-00   ಗಂಟೆಗೆ   ಪಿರ್ಯಾಧಿ  ಪ್ರಭಾಕರ್ ರವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ನಾನು  ಈಗ್ಗೆ  ಸುಮಾರು 01  ವರ್ಷಗಳಿಂದ  ಕೆಲಸ   ನಿರ್ವಹಿಸುತ್ತಿರುತ್ತೇನೆ.   ಪ್ರಸ್ತುತ ವರ್ಷದ ಬರಗಾಲದ ಪರಿಸ್ಥಿತಿಯಲ್ಲಿ, ವ್ಯವಸಾಯ ಹಾಗೂ ಕುಡಿಯುವ ನೀರಿನ ಪೂರೈಕೆಯ ಬಗ್ಗೆ ಮಾನ್ಯ ತುಮಕೂರು  ಜಿಲ್ಲಾಧಿಕಾರಿಗಳ  ಸಮ್ಮುಖದಲ್ಲಿ  ಹೇಮಾವತಿ ನದಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ  ಸರ್ಕಾರಿ  ಅಧಿಕಾರಿಗಳ ಸಭೆ ಜರುಗಿರುತ್ತದೆ, ಈ ಸಭೆಯಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗಿತ್ತು, ಅಂತೆಯೇ , ಮೊದಲಿಗೆ  ತುಮಕೂರು  ಬುಗುಡನಹಳ್ಳಿ  ಕೆರೆಗೆ  ನೀರನ್ನು ಹರಿಸಿ ,  ನಂತರ   ಕುಣಿಗಲ್  ಕೆರೆಗೆ  ನೀರನ್ನು ಹರಿಸಲಾಗುತ್ತಿದೆ. ಚೇಳೂರು ಹಾಗೂ ಅಕ್ಕ- ಪಕ್ಕದ  ವ್ಯಾಪ್ತಿಯ   ಕೆರೆಗಳಿಗೆ ಕುಡಿಯುವ ನೀರನ್ನು ಹರಿಸುವ ಪ್ರಸ್ತಾಪ ವಿರುತ್ತದೆ, ಸದರಿ  ಸಭೆಯಲ್ಲಿ ಮಾನ್ಯ  ತುಮಕೂರು   ಜಿಲ್ಲಾಧಿಕಾರಿಯವರು   ಹೇಮಾವತಿ  ನಾಲೆ  ಹರಿಯುವ  ಎಲ್ಲಾ  ಎಸ್ಕೇಪ್  ಮತ್ತು  ತೂಬ್  ಗಳನ್ನು  ವೆಲ್ಡ್  ಮಾಡಿ  ನೀರನ್ನು  ಮುಂದೆ  ಹರಿಸಲು  ಆದೇಶ  ಮಾಡಿದ್ದು,  ಹೇಮಾವತಿ  ನಾಲೆಯ  ಅಕ್ಕ- ಪಕ್ಕ  100 ಮೀಟರ್  ಅಂತರದಲ್ಲಿ  ಕಲಂ 144  ಸಿ.ಆರ್.ಪಿ.ಸಿ  ರೀತ್ಯ  ನಿಷೇದಾಜ್ಞೆಯನ್ನು  ಜಾರಿ  ಮಾಡಿದ್ದು, ಅದರಂತೆ   ದಿನಾಂಕ; 31/08/2017 ರಂದು  ಚೇಳೂರು ಹೇಮಾವತಿ  ನಾಲಾ  ವಿತರಣಾ  ಉಪ  ವಿಭಾಗದ   ಹೇಮಾವತಿ  ನಾಲೆಯಲ್ಲಿ  ಬರುವ   ಎಲ್ಲಾ ಎಸ್ಕೇಪ್  ಮತ್ತು  ತೂಬ್ ಗಳನ್ನು ಸಂಪೂರ್ಣವಾಗಿ  ಬಂದ್  ಮಾಡಿಕೊಂಡು   ಬರುತ್ತಿರುವಾಗ್ಗೆ   ಗುಬ್ಬಿ  ತಾಲ್ಲೋಕ್, ನಿಟ್ಟೂರು  ಹೋ,   ಸೋಮಲಾಪುರ  ಗ್ರಾಮದ  ಸಮೀಪ   ಸೋಮಲಾಪುರ  ಗ್ರಾಮದ  ಕೆರೆಗೆ  ಹೋಗುವ  ನೇರ  ತೂಬ್ ಅನ್ನು   ನಾನು  ಮತ್ತು  ನನ್ನ  ಸಿಬ್ಬಂದಿಯವರಾದ   ಸಹಾಯಕ  ಇಂಜಿಯರ್  ನಾಗಭೂಷಣ್ , ಕೆ.ಇ.ಬಿ. ಅಧಿಕಾರಿಗಳು  , ಮಾನ್ಯ  ಗುಬ್ಬಿ    ವೃತ್ತ  ನಿರೀಕ್ಷಕರು,  ಚೇಳೂರು  ಪೊಲೀಸ್  ಠಾಣೆಯ  ಸಬ್ ಇನ್ಸ್  ಪೆಕ್ಟರ್  ರವರು ,  ಮತ್ತು  ಅವರ  ಸಿಬ್ಬಂದಿಯೊಂದಿಗೆ  ನಾವು  ಸೋಮಲಾಪುರ  ಗ್ರಾಮದ  ಕೆರೆಗೆ  ಬರುವ  ನೇರ  ತೂಬ್ ಅನ್ನು  ವೆಲ್ಡ್  ಮಾಡಿಸುತ್ತಿರುವಾಗ್ಗೆ   ಬೆಳಗ್ಗೆ ಸುಮಾರು 11-00  ಗಂಟೆ   ಸಮಯದಲ್ಲಿ  ಹೇಮಾವತಿ  ನಾಲೆಯ  ಅಕ್ಕ- ಪಕ್ಕ  100 ಮೀಟರ್  ಅಂತರದಲ್ಲಿ  ಕಲಂ 144  ಸಿ.ಆರ್.ಪಿ.ಸಿ  ರೀತ್ಯ  ನಿಷೇದಾಜ್ಞೆಯನ್ನು  ಜಾರಿ  ಮಾಡಿದ್ದರು ಸಹ  ಸೋಮಲಾಪುರದ  ಮತ್ತು  ಅಕ್ಕ- ಪಕ್ಕದ  ಗ್ರಾಮದ   ಸುಮಾರು 25 ರಿಂದ 30  ಜನ  ಗ್ರಾಮಸ್ಥರುಗಳು  ಬಂದು  ಇದು  ಕುಡಿಯುವ  ನೀರಿಗೆ   ಮಂಜೂರಾಗಿದ್ದು,  ಈ ತೂಬನ್ನು  ನೀವು  ಏಕೆ  ಮುಚ್ಚುತ್ತೀರಾ  ಎಂದು  ಕೇಳುತ್ತಿರುವಾಗ್ಗೆ  ಸೋಮಲಾಪುರ  ಗ್ರಾಮದ  ವಾಸಿ   ಚಲುವರಾಜು  ಬಿನ್  ಚನ್ನಕೇಶವಯ್ಯ   ಎಂಬುವನು   ಆಕಸ್ಮಿಕವಾಗಿ  ಹೇಮಾವತಿ  ನಾಲೆಯಲ್ಲಿ  ಹರಿಯುತ್ತಿದ್ದ  ನೀರಿಗೆ  ಬಿದ್ದು  ಮೃತಪಟ್ಟು,   ಹೇಮಾವತಿ  ನೀರಿನಲ್ಲಿ  ಮೃತ  ದೇಹವು  ಮುಳುಗಿದ್ದು,  ಈ  ವಿಚಾರವನ್ನು  ಇಟ್ಟುಕೊಂಡು  ಅಲ್ಲಿ  ಸೇರಿದ್ದ   ಸೀಬೆಗೌಡ  (  ಪಟೇಲ),  ಹಾಗೂ  ಇತರೆಯವರು  ನೀವು  ನಮ್ಮ  ತೂಬನ್ನು  ಮುಚ್ಚಲು  ಬಂದು  ಅನವಶ್ಯಕವಾಗಿ   ಚಲುವರಾಜನನ್ನು   ಬಲಿ ತೆಗೆದುಕೊಂಡಿರುತ್ತೀರಾ  ನಿಮ್ಮಗಳನ್ನು  ಈ ದಿವಸ  ಬಿಡುವುದಿಲ್ಲ, ಎಂದು  ನಮ್ಮಗಳ  ಜೀಪುಗಳ  ಟೈರ್ ಗಳ  ಗಾಳಿಯನ್ನು  ಬಿಟ್ಟು   ಈ  ನನ್ನ ಮಕ್ಕಳನ್ನು  ಹಿಡಿದುಕೊಂಡು   ಇದೇ ಚಾನಲ್ ಗೆ  ಎತ್ತಿ  ಹಾಕಿರೋ  ಎಂದು  ನನ್ನನ್ನು  ಎಲ್ಲಾರೂ  ಸೇರಿಕೊಂಡು   ಕೈಗಳಿಂದ  ಹೊಡೆದರು.  ಅಷ್ಟರಲ್ಲಿ  ಪೋಲೀಸ್   ಸಿಬ್ಬಂದಿಯವರು  ಬಂದು  ಸಮಾಧಾನ  ಮಾಡಿದರು  ಅಷ್ಟರಲ್ಲಿ   ಸುಮಾರು 500  ರಿಂದ 600  ಜನರು  ಸೇರಿಕೊಂಡು   ಚೇಳೂರು-  ನಿಟ್ಟೂರು   ರಸ್ತೆಯನ್ನು  ಸೋಮಲಾಪುರ  ಗ್ರಾಮದ   ಬಳಿ  ಬಂದ್   ಮಾಡಿ   ಬಸ್ ನಿಲ್ದಾಣದ  ಮುಂಭಾಗ  ಕಟ್ಟಿಗೆ  ಮತ್ತು  ಟೈರ್ ಗಳನ್ನು  ಹಾಕಿ  ಬೆಂಕಿಯನ್ನು  ಇಟ್ಟು   ಸಾರ್ವಜನಿಕರ  ವಾಹನಗಳ  ಸಂಚಾರಕ್ಕೆ  ತಡೆಯುಂಟುಮಾಡಿರುತ್ತಾರೆ.  ಈ  ವಿಚಾರ ಮಾನ್ಯ  ಜಿಲ್ಲಾಧಿಕಾರಿಯವರಿಗೆ  ಮತ್ತು  ಮಾನ್ಯ  ತುಮಕೂರು  ಪೊಲೀಸ್  ವರಿಷ್ಠಾಧಿಕಾರಿರವರಿಗೆ  ತಿಳಿದು  ಸ್ಥಳಕ್ಕೆ   ಆಗಮಿಸಿ  ಜನರ  ಹತ್ತಿರ   ಸಂದಾನ  ಮಾಡುಲು  ಹೋದಾಗ  ಅಕ್ರಮ  ಗುಂಪುಕಟ್ಟಿಕೊಂಡು ಪ್ರತಿ ಭಟನೆ  ಮಾಡುತ್ತಿದ್ದ ಜನರು  ಡಿ.ಸಿ ಸಾಹೇಬರವರನ್ನು  ಮತ್ತು  ಎಸ್.ಪಿ  ಮೇಡಂರವರನ್ನು   ಅವ್ಯಾಚ್ಯ  ಶಬ್ದಗಳಿಂದ  ಬೈದಿರುತ್ತಾರೆ.   ಮಾನ್ಯ  ತುಮಕೂರು  ಜಿಲ್ಲಾ  ಪೊಲೀಸ್ ಅದೀಕ್ಷಕರವರು  ಮೃತ  ಚಲುವರಾಜುರವರ  ಸಂಬಂದಿಕರನ್ನು   ಸಮಾಧಾನ  ಪಡಿಸಲು   ಹೋದಾಗ  ಸೋಮಲಾಪುರ  ಗ್ರಾಮ,  ಪಾರ್ವತಮ್ಮ ,  ರೇಣುಕಮ್ಮ ,  ಶಾರದಮ್ಮ  ಚೇಳೂರು ಗ್ರಾಮ ಪಂಚಾಯ್ತಿ ಅದ್ಯಕ್ಷೆ,  ರವರುಗಳು  ಮಾನ್ಯ  ಜಿಲ್ಲಾ  ಪೊಲೀಸ್  ವರಿಷ್ಟಾಧಿಕಾರಿಗಳನ್ನು  ಹಿಡಿದುಕೊಂಡು    ನೂಕಿ  ತಳಾಡಿದರು,  ಇದಕ್ಕೆಲ್ಲಾ  ಕಾರಣರಾದ  ಹೇಮಾವತಿ  ಚಾನಲ್ ನ ಅಧಿಕಾರಿಗಳು  ಪುನಃ  ಈ  ತೂಬನ್ನು  ಮುಚ್ಚಲು  ಬಂದರೆ  ನಿಮ್ಮನ್ನು  ಕೊಲೆ  ಮಾಡಿ  ಇದೇ  ಚಾನಲ್  ಗೆ  ಎಸೆಯುತ್ತೇವೆ .  ಎಂದು  ಪ್ರಾಣ ಬೆದರಿಕೆ  ಹಾಕಿದರು.   ಈ  ಗಲಾಟೆಯಲ್ಲಿ  ಸೋಮಲಾಪುರ  ಗ್ರಾಮದ   ಸೀಬೆಗೌಡ (  ಪಟೇಲ್ )   ಮುಂದಾಳತ್ವ ವನ್ನು  ವಹಿಸಿಕೊಂಡಿದ್ದು,  ಇವರ  ಜೊತೆಯಾಗಿ   ಸೋಮಲಾಪುರ ಗ್ರಾಮದ  ,ಕುಮಾರಸ್ವಾಮಿ, ದಿಲೀಪ್,  ರಂಗಸ್ವಾಮಿ,   ಉಲ್ಲೇಕೆರೆ ಪಾಳ್ಯದ  ಉದಯ,  ತಿಪ್ಪೂರು  ಗ್ರಾಮದ  ವಾಸಿ  ಸಂತೋಷ (  ಮಂಡಿ ವ್ಯಾಪಾರಿ)   ಚೇಳೂರು  ಗ್ರಾಮದ,   ಮೋಹನ್  ಕುಮಾರ  ಬಿನ್  ಚಿಕ್ಕ ಸಿದ್ದಪ್ಪ,  ಮತ್ತು ಶಾರದಮ್ಮ ,    ಹೊಸಹಳ್ಳಿ ಗ್ರಾಮ  ಸಿದ್ದರಾಮ, ಬೆಟ್ಟದಹಳ್ಳಿ  ಗ್ರಾಮದ  ಪರಮೇಶ್ , ಬಸವರಾಜು  ಬಿನ್  ಮಲ್ಲಯ್ಯ, ಮಲ್ಲೇನಹಳ್ಳಿ  ಗ್ರಾಮ,  ಹಾಗೂ  ಇತರೆಯವರು 100 ರಿಂದ 150  ಜನರು  ಸೇರಿಕೊಂಡು   ಈ  ಗಲಾಟೆಯನ್ನು  ಮಾಡಿ  ನಮ್ಮಗಳನ್ನು  ಮತ್ತು  ಕೆ.ಇ.ಬಿ. ಅಧಿಕಾರಿಗಳನ್ನು  ಮತ್ತು  ಪೊಲೀಸಿನವರನ್ನು  ಸರ್ಕಾರಿ  ಕೆಲಸವನ್ನು  ಮಾಡಲು  ಬಿಡದೆ  ಅಡ್ಡಿಪಡಿಸಿ,  ಅವ್ಯಾಚ್ಯ  ಶಬ್ದಗಳಿಂದ  ಬೈದು ನನ್ನನ್ನು  ಕೈಗಳಿಂದ  ಹೊಡೆದು,  ಕೊಲೆ  ಬೆದರಿಕೆ  ಹಾಕಿರುತ್ತಾರೆ.  ಈ  ವಿಚಾರವನ್ನು   ನಮ್ಮ  ಮೇಲಾಧಿಕಾರಿಗಳಿಗೆ  ತಿಳಿಸಿ   ಸದರಿ  ಚಾನಲ್ ನಲ್ಲಿ  ನೀರು  ಹರಿಯುತ್ತಿದ್ದರಿಂದ ,  ಈಗ  ಪಿರ್ಯಾದು  ನೀಡಿದರೆ ,   ಕೆಲಸ  ನಿರ್ವಹಿಸಲು  ತೊಂದರೆಯಾಗುತ್ತದೆ.   ಹಾಗಾಗಿ  ನೀರು  ನಿಲ್ಲಿಸುವ  ಸಮಯದಲ್ಲಿ   ದೂರು  ನೀಡುವಂತೆ   ಮೌಖಿಕವಾಗಿ   ಸೂಚನೆ ನೀಡಿದ್ದು,    ಅವರು  ಈ ದಿನ ಚೇಳೂರು  ಪೊಲೀಸ್  ಠಾಣೆಗೆ  ದೂರು  ನೀಡುವಂತೆ   ತಿಳಿಸಿದರ  ಮೇರೆಗೆ  ಈ  ದಿನ  ತಡವಾಗಿ  ಬಂದು  ದೂರು  ನೀಡಿರುತ್ತೇನೆ.   ಮೇಲ್ಕಂಡವರ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು  ಕೋರಿ ಇತ್ಯಾದಿಯಾದ  ಪಿರ್ಯಾದು ಅಂಶTuesday, 19 September 2017

Crime Incidents 19-09-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ; 186/2017 ಕಲಂ; 279,337,304(A)IPC 134 (A) (B) 187 IMV ACT

ದಿನಾಂಕ:18-09-2017 ರಂದು ಬೆಳಿಗ್ಗೆ 6-30 ಗಂಟೆಗೆ ಪಿರ್ಯಾದಿಯಾದ ಮುನಿಯಪ್ಪ ಉರುಫ್‌ ಪಟೇಲ ಬಿನ್ ಲೇಟ್ ಕಾಳಮುನಿಯಪ್ಪ ಅರಮಾನೆಹೊನ್ನಮಾಚನಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ಮತ್ತು ನನ್ನ ತಮ್ಮನಾದ ಸಣ್ಣಪ್ಪ ಇಬ್ಬರು ಗ್ರಾಮದಲ್ಲಿ ವ್ಯವಸಾಯ ಮತ್ತು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿರುತ್ತೇವೆ. ದಿನಾಂಕ:17-09-2017 ರಂದು ನಾನು ಮತ್ತು ನನ್ನ ತಮ್ಮನಾದ ಸಣ್ಣಪ್ಪ ಇಬ್ಬರು ನಮ್ಮ ಹೊಲದಲ್ಲಿ ವ್ಯವಸಾಯದ ಕೆಲವನ್ನು ಮಾಡಲು ಹೋಗಿದ್ದೆವು. ಹೊಲದಲ್ಲಿ ಕೆಲಸವನ್ನು ಮುಗಿಸಿಕೊಂಡು ವಾಪಸ್‌‌ ಮನೆಗೆ ಹೋಗೋಣವೆಂದು ರಾತ್ರಿ ಸುಮಾರು 7-30 ಗಂಟೆಯಲ್ಲಿ ನಮ್ಮ ಊರಿನ ಹತ್ತಿರ ಕುಳ್ಳನಿಂಗಯ್ಯ ರವರು ಜಮೀನು ನೇರದಲ್ಲಿ ಹಾದು ಹೋಗಿರುವ  ರಸ್ತೆ ಬದಿಯಲ್ಲಿ ನೆಡೆದುಕೊಂಡು ಊರಿನ ಕಡೆಗೆ ಬರುತ್ತಿದ್ದೆವು. ಆಗ ನನ್ನ ತಮ್ಮನಾದ ಸಣ್ಣಪ್ಪನು ಕಕ್ಕಸ್‌ಗೆ ಹೋಗುವ ಸಲುವಾಗಿ ರಸ್ತೆಯಿಂದ ಬಲಗಡೆಗೆ ಹೋಗಲು ರಸ್ತೆಯನ್ನು ದಾಟುತ್ತಿರುವಾಗ ಅದೇ ಸಮಯಕ್ಕೆ ಹುಲಿಯೂರುದುರ್ಗದ ಕಡೆಯಿಂದ ಮದ್ದೂರು ಕಡೆಗೆ ಹೋಗಲು ಬಂದ ಕಾರಿನ ಚಾಲಕನು ಕಾರ್‌ನ್ನು ಅತಿ ಜೋರಾಗಿ ಓಡಿಸಿಕೊಂಡು ಬಂದು ನನ್ನ ತಮ್ಮನಿಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿ ನಂತರ ಕಾರ್‌ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ. ನನ್ನ ತಮ್ಮನಿಗೆ ತಲೆಗೆ, ಮುಖಕ್ಕೆ ಬಲವಾಗಿ ಏಟು ಬಿದ್ದು ಜಜ್ಜಿ ಹೋಗಿ, ಕಾಲು ಮುರಿದು ಹೋಗಿ ಸ್ಥಳದಲ್ಲಿಯೇ ಸತ್ತು ಹೋದ. ಅದೇ ಸಮಯಕ್ಕೆ ನಮ್ಮ ಊರಿನ ಕಡೆಯಿಂದ   ಬಿಸೇಗೌಡನದೊಡ್ಡಿ ಕಡೆಗೆ ಹೋಗಲು ಬಂದ ನಮ್ಮ ಊರಿನ ಶಿವಾನಂದ ಬಿನ್ ಸಿದ್ದಲಿಂಗಯ್ಯ ರವರು ಅಪಘಾತ ಮಾಡಿದ ಕಾರಿನ ನಂಬರನ್ನು ನೋಡಲಾಗಿ ಕೆಎ-05-ಎಂಲ್‌-4893 ನೇ ಕಾರ್‌ ಆಗಿದ್ದು ಅವರು ಕಾರಿನ ನಂಬರ್‌ ಬರೆದುಕೊಂಡರು. ನಂತರ ಕಾರಿನ ಚಾಲಕನು ಕಾರ್‌ನ್ನು ಅಲ್ಲಿಂದ ತೆಗೆದುಕೊಂಡು ಹೊರಟು ಹೋಗಿರುತ್ತಾನೆ. ತಕ್ಷಣ ವಿಚಾರವನ್ನು ಶಿವಾನಂದ ರವರು ನಮ್ಮ ಊರಿನವರಿಗೆ ತಿಳಿಸಿ ನನ್ನ ತಮ್ಮನ ಹೆಣವನ್ನು ಟಾಟಾ ಏಸ್‌ ವಾಹನದಲ್ಲಿ ಹಾಕಿ ಕುಣಿಗಲ್‌ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತಾರೆ. ಈ ಅಪಘಾತವಾದ ವಿಚಾರವನ್ನು ನಾನು ನನ್ನ ಸಂಬಂದಿಕರುಗಳಿಗೆ ತಿಳಿಸಿ  ಈ ದಿನ ಠಾಣೆಗೆ ಬಂದು ಮೇಲ್ಕಂಡ ಕೆಎ-05-ಎಂಎಲ್‌-4893 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಿಬೇಕೆಂದು ನೀಡಿದ ದೂರನ್ನು ಪಡೆದು ಹೆಚ್ ದುರ್ಗ ಠಾಣಾ ಮೊನಂ 186/2017 ಕಲಂ; 279,337,304(A)IPC 134 (A) (B) 187 IMV ACT   ರೀತ್ಯ ಪ್ರಕರಣವನ್ನು ದಾಖಲು  ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ; ಮೊನಂ 187/2017 ಕಲಂ 324, 504, 506 ರೆ/ವಿ 34 ಐ.ಪಿ.ಸಿ

ದಿನಾಂಕ 18/09/2017 ರಂದು ಮಧ್ಯಾಹ್ನ 02-30 ಗಂಟೆಗೆ ಪಿರ್ಯಾದಿ  ಸುನೀಲ್ ಬಿನ್ ಲೇಟ್ ಕುಪ್ಪಣ್ಣ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಇದೇ ದಿನ ಬೆಳಿಗ್ಗೆ 06-30 ಗಂಟೆ ಸಮಯದಲ್ಲಿ ಹೊಲದ ಹತ್ತಿರ ಹೋಗಿ ಜಮೀನು ನೋಡಿಕೊಂಡು ವಾಪಸ್ ಬರುತ್ತಿರುವ ವೇಳೆಯಲ್ಲಿ ನಮ್ಮ ಗ್ರಾಮದ ಕುಮಾರ್ ಬಿನ್ ಲೇಟ್ ಚನ್ನಯ್ಯ ಮತ್ತು ನಾಗೇಂದ್ರ ಬಿನ್ ಕುಮಾರ್ ಇಬ್ಬರೂ ಸೇರಿಕೊಂಡು ನಮ್ಮ ಜಮೀನಿನಲ್ಲಿ ಕಲ್ಲನ್ನು  ಟ್ರಾಕ್ಟರ್ ನಲ್ಲಿ ತೆಗೆದುಕೊಂಡು ಬರುತ್ತಿರುವ ವೇಳೆಯಲ್ಲಿ ಆಗ ನಾನು ನಮ್ಮ ಜಮೀನಿನಲ್ಲಿ ಟ್ರಾಕ್ಟರ್ ಓಡಿಸ ಬೇಡಿ ಎಂದು ಹೇಳೀದ್ದಕ್ಕೆ ನನಗೆ ಹೀನಾ ಮಾನವಾಗಿ ಬೈದ್ದು ನಿಂದಿಸಿದ್ದು ಅಲ್ಲೇ ಬಿದ್ದಿದ್ದ ದೊಣ್ಣೆಯಿಂದ ಸದರಿ ಕುಮಾರ ಎಂಬುವನು ನನ್ನ ಬಲಗೈ ಮೇಲೆ ಮತ್ತು ಎಡಗೈ ಕಿರುಬೆರಳಿನ ಮೇಲೆ ಬಲವಾಗಿ ಹೊಡೆದು ತುಂಬಾ ನೋವುಂಟು ಮಾಡಿರುತ್ತಿರುವಾಗ್ಗೆ , ನಾಗೇಂದ್ರ ಬಿನ್ ಕುಮಾರ ಅದೇ ದೊಣ್ಣೆಯನ್ನು ಕಿತ್ತುಕೊಂಡು ನನ್ನ ಬಲಗಾಲಿನ ತೊಡೆಯ ಭಾಗಕ್ಕೆ ಬಲವಾಗಿ ಹೊಡೆದು ತುಂಬಾ ನೋವುಂಟು ಮಾಡಿ ಕೊಲೆ ಮಾಡಿಬಿಡುವುದಾಘಿ  ಪ್ರಾಣ ಬೆದರಿಕೆ ಹಾಕುತ್ತಿರುವಾಗ್ಗೆ ನಮ್ಮ ಗ್ರಾಮದ ಶಿವರಾಜು ಬಿನ್ ಲೇಟ್ ಕೆಂಪಣ್ಣ ಮತ್ತು ಶಿವಣ್ಣ ಬಿನ್ ಲೇಟ್ ಹುಚ್ಚಯ್ಯ ಎಂಬುವರು ಜಗಳ ಬಿಡಿಸಿ ಸಮಧಾನ ಪಡಿಸಿರುತ್ತಾರೆ. ಮೇಲ್ಕಂಡ ಆರೋಪಿಗಳ ಮೇಲೆ ಕ್ರಮ ಜರುಗಿಸಿ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.


Page 1 of 3
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 77 guests online
Content View Hits : 302226