lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2017 >
Mo Tu We Th Fr Sa Su
    1 2 3 4 5
6 7 8 9 10 11 12
13 14 15 16 17 18 19
20 21 22 23 24 25 26
27 28 29 30 31    
March 2017

Friday, 31 March 2017

Police Flag Day 2017


Crime Incidents 31-03-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 68/2017 ಕಲಂ; IPC 1860 (U/s-427,323,506(B)); SC AND THE ST (PREVENTION OF ATTROCITIES) ACT, 1989 (U/s-3(1)(c),3(1)(r),3(1)(s),3(2)(v-a))

ದಿನಾಂಕ-30-03-2017 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಪಿರ್ಯಾದಿ ಜಯಲಕ್ಷ್ಮಮ್ಮ ಕೋಂ ಲೇಟ್‌ ಮಳ್ಳೇ ಬೋರಯ್ಯ, 50 ವರ್ಷ, ಪರಿಶಿಷ್ಟಜಾತಿ ಜನಾಂಗ, ಸೀಗೇಪಾಳ್ಯ ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-30-03-2017 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಮಾದುಗೋನಹಳ್ಳಿ ಗ್ರಾಮದ ವಕ್ಕಲಿಗ ಜನಾಂಗದ ರಾಜು ಅಲಿಯಾಸ್‌ ಬಸವ ಬಿನ್‌ ಕೃಷ್ಣ ಎಂಬುವವನು ಏಕಾಏಕಿ ನಮ್ಮ ಮನೆಯ ಹತ್ತಿರ ಬಂದು ನಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ಗೆ ಕಲ್ಲು ಹೆತ್ತಿಹಾಕಿ ಹೊಡೆದು ನಷ್ಟ ವುಂಟುಮಾಡಿದನು. ನಾನು ಹೀಗೇಕೆ ಮಾಡುತ್ತೀಯ ಎಂದು ಕೇಳಿದ್ದಕ್ಕೆ ನನ್ನನ್ನು ಯಾಕೆ ಹೊಲತಿ ಮುಂಡೆ ಎಂದು ಬೈದು ನಿಂದನೆ ಮಾಡಿ ಕಾಲಿನಿಂದ ಒದ್ದನು. ನಂತರ ತನ್ನ ಬಳಿ ಇದ್ದ ಚಾಕುವನ್ನು ತೆಗೆದು ನಿನ್ನನ್ನು ಸಾಯಿಸುತ್ತೇನೆಂದು ಕೊಲೆ ಬೆದರಿಕೆ ಹಾಕಿದನು. ಅಷ್ಟರಲ್ಲಿ ನನ್ನ ಮಗ ಲಿಂಗರಾಜು ಬಂದು ಏಕೆ ಈ ರೀತಿ ಮಾಡುತ್ತೀಯ ಎಂದು ಕೇಳಿದ್ದಕ್ಕೆ ಅವನಿಗೂ ಸಹ ರಾಜು ಅಲಿಯಾಸ್‌ ಬಸವ ಚಾಕು ತೋರಿಸಿ ನಿನ್ನನ್ನು ಕೊಲೆ ಮಾಡುತ್ತೇನೆ, ಹೊಲೆ ಮಾದಿಗ ನನ್ನ ಮಗನೆ ಎಂದು ಬೈದು, ನನ್ನ ವಿಚಾರಕ್ಕೆ ಬಂದರೆ, ನಿಮ್ಮನ್ನು ಮುಗಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದನು. ನಂತರ ಈ ವಿಚಾರವನ್ನು ನಮ್ಮ ಗ್ರಾಮದ ಗಂಗಾಧರ್ ರವರಿಗೆ ತಿಳಿಸಿ ನಂತರ ಪೊಲೀಸ್‌ ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು. ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ವೈ ಎನ್ ಹೊಸಕೋಟೆ  ಪೊಲೀಸ್ ಠಾಣಾ ಯು.ಡಿ.ಆರ್. ನಂ:06/2017  .ಕಲಂ:174  ಸಿ.ಆರ್.ಪಿ.ಸಿ

ದಿನಾಂಕ:30/03/2017  ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಪಾವಗಡ ತಾ|| ಮರಿದಾಸನಹಳ್ಳಿ ಗ್ರಾಮದ ವಾಸಿ ನಾಗರಾಜ.ಪಿ.ಡಿ ಬಿನ್ ಲೇ|| ಪಿ. ದೊಡ್ಡಯ್ಯ, 42 ವರ್ಷ,ವಕ್ಕಲಿಗ ಜನಾಂಗ  ರವರು ಠಾಣೆಗೆ ಹಾಜರಾಗಿ ನೀಡಿದ ದೂರೆನೆಂದರೆ ನನ್ನ ತಮ್ಮ    ಪಿ.ಡಿ ಅನಿಲ್ ಕುಮಾರ್, 40 ವರ್ಷ ರೈತನಾಗಿದ್ದು ನನ್ನ ತಾಯಿ ಹೆಸರಿನಲ್ಲಿ ಕೆನರಾ ಬ್ಯಾಂಕ್ ನಲ್ಲಿ 4 ಲಕ್ಷ ರೂ ಬೆಳೆ ಸಾಲ ಹಾಗೂ ಗ್ರಾಮದಲ್ಲಿ ಮಾಡಿಕೊಂಡಿದ್ದ ಕೈ ಸಾಲ ತೀರಿಸಲಾಗದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ:29/03/2017 ರಂದು ಬಳಗಿನ ಜಾವ 3:30 ಗಂಟೆ ಸುಮಾರಿಗೆ ಜಮೀನಿನ ಬಳಿ ಹೋಗಿ ಯಾವುದೋ ಕ್ರಿಮಿನಾಶಕ ವಿಷಸೇವನೆ ಮಾಡಿದ್ದು ಚಿಕಿತ್ಸೆ ಬಗ್ಗೆ ಪಾವಗಡ & ತುಮಕೂರು ಆಸ್ಪತ್ರೆಗೆ ತೋರಿಸಿದ್ದು ದಿ:29/03/2017 ರಂದು ರಾತ್ರಿ ಸುಮಾರು 7:00 ಗಂಟೆಗೆ ಮೃತಪಟ್ಟಿರುತ್ತಾನೆಯೇ ಹೊರತು ನನ್ನ ತಮ್ಮನ ಮರಣ ಕಾರಣದಲ್ಲಿ ಯಾವುದೇ ಅನುಮಾನ ಇರುವುದಿಲ್ಲವೆಂತ  ಇತ್ಯಾದಿಯಾಗಿ ನೀಡಿದ ಲಿಖೀತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ.Thursday, 30 March 2017

Crime Incidents 30-03-17

ಸಿ.ಎಸ್.ಪುರ ಠಾಣಾ ಮೊ.ನಂ:34/2017. ಕಲಂ:323. 324.448. 504. 506 ರೆ/ವಿ 34 ಐಪಿಸಿ

ದಿನಾಂಕ:29.03.2017 ರಂದು ಪಿರ್ಯಾದುದಾರರಾದ  ಮಹೇಂದ್ರ ಕುಮಾರ್ ಬಿನ್  ಲೇಟ್ ಡಿ.ಗೋವಿಂದಯ್ಯ, 51 ವರ್ಷ, ವಕ್ಕಲಿಗರು, ಜಿರಾಯ್ತಿ, ಬಿಟ್ಟಗೊಂಡನಹಳ್ಳಿ, ಕಡಬಾ ಹೋಬಳಿ, ಗುಬ್ಬಿ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ನನ್ನ ಬಾಬ್ತು ಬಿಟ್ಟಗೊಂಡನಹಳ್ಳಿ ಗ್ರಾಮದ  ಚೌಳು ಕಟ್ಟೆ ಸರ್ವೆ ನಂ.131 ರಲ್ಲಿ ಒಂದು ಎಕರೆ 25 ಗುಂಟೆ ಜಮೀನು ಇದ್ದು, ಈನ ಜಮೀನಿನ ಪಕ್ಕದಲ್ಲಿ ನಮ್ಮ  ಗ್ರಾಮದ ಲಿಂಗಣ್ಣರವರ ಜಮೀನು ಇದ್ದು, ಇವರು ನಮ್ಮ ಜಮೀನಿಗೆ ಸೇರಿದ ಬದುವನ್ನು  ಕೊಚ್ಚಿಹಾಕಿ ಕತ್ತರಿಸಿ ಒತ್ತುವರಿ ಮಾಡಿದ್ದು, ಈ ವಿಚಾರವಾಗಿ ದಿನಾಂಕ:27.03.2017 ರಂದು  ಸಂಜೆ ಲಿಂಗಣ್ಣರವರ ಮನೆಯ ಹತ್ತಿರ  ಹೋಗಿ ಏತಕ್ಕೆ ನಮಗೆ ಸೇರಿದ ಜಾಗದಲ್ಲಿ ಒತ್ತುವರಿ ಮಾಡಿದ್ದೀರಾ ಎಂತ ಕೇಳಿದಾಗ, ಲಿಂಗಣ್ಣ  & ಈತನ ಹೆಂಡತಿ ಶಾಂತಮ್ಮ ಇವರು ಇಬ್ಬರೂ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ  ಬೈದರು, ಆದರೂ ನಾವು ವಾಪಸ್ಸು ತಾಳ್ಮೆಯಿಂದ  ಮನೆಗೆ ಬಂದೆವು, ಆದರೆ ಅದರೇ ದಿನ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಯಾರೋ ಬಂದು ಮನೆಯ ಬಾಗಿಲು ತಟ್ಟಿದ  ಶಬ್ದ ಕೇಳಿ ಬಾಗಿಲು ತೆಗೆದು ನೋಡಿದಾಗ ಮೇಲ್ಕಂಡ  ಲಿಂಗಣ್ಣ & ಈತನ ಹೆಂಡತಿ ಶಾಂತಮ್ಮ ಹಾಗೂ ಇವರ ಮಗನಾದ ಮಹೇಶ ಇವರುಗಳು ಏಕಾಏಕಿ ಮನೆಯೊಳಗೆ  ನುಗ್ಗಿ, ಕೈಗಳಿಂದ ಹೊಡೆದು, ಲಿಂಗಣ್ಣನ ಮಗನಾದ ಮಹೇಶನು ದೊಣ್ಣೆಯಿಂದ ನನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಮಾಡಿದ್ದು, ಅಷ್ಟರಲ್ಲಿ ನಮ್ಮ ಗಲಾಟೆಯ ಶಬ್ದ ಕೇಳಿ  ಅಕ್ಕಪಕ್ಕದ ಮನೆಯವರಾದ  ರಮೇಶ & ಲೋಕೇಶ ಇವರುಗಳು ಬಂದು ಜಗಳ ಬಿಡಿಸಿದರು, ನಂತರ ಅವರು ಹೋಗಬೇಕಾದರೆ ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲಾ ಎಂದು ನಿನಗೆ ಒಂದು ಗತಿಕಾಣಿಸುತ್ತೇವೆ ಎಂದು ಹೇಳಿ ಹೋದರು, ನನಗೆ ಗಾಯಗಳಾಗಿದ್ದರಿಂದ  108 ಆಂಬ್ಯುಲೆನ್ಸ್ ನಲ್ಲಿ  ಸಿ.ಎಸ್.ಪುರ ಸರ್ಕಾರಿ  ಆಸ್ಪತ್ರೆಗೆ ಬಂದು  ಪ್ರಥಮ ಚಿಕಿತ್ಸೆ ಪಡೆದು, ವೈದ್ಯರಿಲ್ಲದ ಕಾರಣ ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು ಈ ದಿನ ತಢವಾಗಿ ಬಂದು ದೂರು ನೀಡಿರುತ್ತೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.

ಸಿ.ಎಸ್.ಪುರ ಠಾಣಾ ಮೊ.ನಂ:35/2017. ಕಲಂ:279.337 ಐಪಿಸಿ ಮತ್ತು 134 (ಎ&ಬಿ) ರೆ/ವಿ 187 ಐ.ಎಂ.ವಿ ಆಕ್ಟ್

ದಿನಾಂಕ:29.03.2017 ರಂದು ಪಿರ್ಯಾದುದಾರರಾದ   ಸಿ.ಆರ್. ಶ್ರೀರಾಮ ಮೂರ್ತಿ ಬಿನ್  ಲೇಟ್ ರಾಮಯ್ಯ, 60 ವರ್ಷ, ಬ್ರಾಹ್ಮಣರು, ಸಿ.ಎಸ್.ಪುರ ಗ್ರಾಮ, ಗುಬ್ಬಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ಇದನಾಂಕ:26.03.2017 ರಂದು ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ  ಯಾರೋ ನಮ್ಮ 08131-246537 ನೇ ನಂಬರಿಗೆ ಕರೆ ಮಾಡಿ ನಿಮ್ಮ  ಅಣ್ಣನ ಮಗನಾದ ಶಶಿಧರನಿಗೆ ಹಿಂಡಿಸ್ಕೆರೆ ಗ್ರಾಮದ ಹತ್ತಿರ ಅಪಘಾತವಾಗಿದೆ  ಎಂತ ತಿಳಿಸಿದರು, ಆಗ ನಾನು ತಕ್ಷಣ ಹಿಂಡಿಸ್ಕೆರೆ ಹತ್ತಿರ ತಿಮ್ಮೇಗೌಡನ ಪಾಳ್ಯ ಗೇಟ್ ಹತ್ತಿರ  ಹೋಗಿ ನೋಡಿದೆ, ಅಲ್ಲಿ  ಶಶಿಧರನಿಗೆ  ತಲೆಗೆ, ಹಣೆಯ ಭಾಗಕ್ಕೆ ಹಾಗೂ ಕುತ್ತಿಗೆಯ ಹತ್ತಿರ  ಏಟು ಬಿದ್ದು, ರಕ್ತಗಾಯವಾಗಿತ್ತು, ಈತನು ಓಡಿಸಿಕೊಂಡು ಹೋಗುತಿದ್ದ  ಹಿರೋಹೊಂಡಾ ದ್ವಿಚಕ್ರ ವಾಹನ ನಂ. ಕೆ.ಎ-11ಕೆ-7634 ಆಗಿದ್ದು, ದ್ವಿಚಕ್ರ ವಾಹನದ ಹಿಂಭಾಗದ ಸೈಲೆನ್ಸರ್ ಹಾಗೂ ಮುಂಭಾಗ ಪೂರ್ಣ ಜಖಂ ಆಗಿರುತ್ತೆ. ನಂತರ ವಿಚಾರ ತಿಳಿಯಲಾಗಿ ಶಶಿಧರ ನಮ್ಮ ಊರಿನಿಂದ  ರಾತ್ರಿ ಗುಬ್ಬಿ ಹತ್ತಿರ ಚೀಕ್ಕೋನಹಳ್ಳಿ ಪಾಳ್ಯಕ್ಕೆ ಕಥೆಗೆ ಹೋಗುತಿದ್ದನು, ಗಾಯಾಳು ಶಶಿಧರನನ್ನು ನಾನು & ನಮ್ಮ ಗ್ರಾಮದ ವಾಸಿ ಬಾನು ಪ್ರಕಾಶ್ & ಮುರುಳಿರವರೊಂದಿಗೆ ಸಿ.ಎಸ್.ಪುರ ಆಸ್ಪತ್ರೆಗೆ ಕರೆತಂದು ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಾಯಿ ಅಂಬಿಕಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿರುತ್ತೇವೆ, ಶಶಿಧರನಿಗೆ ಡಿಕ್ಕಿ ಹೊಡೆದ ವಾಹನ ಯಾವುದೆಂದು ಗೊತ್ತಾಗಿರುವುದಿಲ್ಲಾ, ವೇಗವಾಗಿ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆಸಿದ ವಾಹನದ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ  ನೀಡಿದ ಅರ್ಜಿಯನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 71/2017 ಕಲಂ 279, 337 ಐಪಿಸಿ

ದಿನಾಂಕ:29/03/2017 ರಂದು ಬೆಳಿಗ್ಗೆ 10-30 ಗಂಟೆಗೆ ತುಮಕೂರು ತಾಲ್ಲೋಕ್ ಗೂಳೂರು ಗ್ರಾಮದ ರವೀಂದ್ರಕುಮಾರ್ ಬಿನ್ ಸಿದ್ದರಾಮಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:26/03/2017 ರಂದು ನನ್ನ ತಮ್ಮ ಜಗದೀಶ್ ರವರು ನಮ್ಮ ಬಾಬ್ತು KA-06-EP-6598ನೇ ದ್ವಿ ಚಕ್ರ ವಾಹನದಲ್ಲಿ ಮಣ್ಣಮ್ಮನ ದೇವಸ್ಥಾನಕ್ಕೆ ಹೋಗುವ ಸಲುವಾಗಿ ಹೆಗ್ಗೆರೆ ಮಾರ್ಗವಾಗಿ ರಾತ್ರಿ 7-45 ಗಂಟೆ ಸಮಯದಲ್ಲಿ ಹೆಗ್ಗೆರೆ ಬಸ್ ನಿಲ್ದಾಣದಲ್ಲಿ ಹೋಗುತ್ತಿದ್ದಾಗ, ಗುಬ್ಬಿ ಕಡೆಯಿಂದ KA-06-EV-7690ನೇ ದ್ವಿ ಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ತಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ ಪರಿಣಾಮ ಜಗದೀಶ್ ರಸ್ತೆಯ ಮೇಲೆ ಬಿದ್ದು ಬಲಗಾಲಿನ ಪಾದ ಹಾಗೂ ಹಿಮ್ಮಡಿಯ ಮೂಳೆ ಮುರಿದು ಹೋಗಿ ರಕ್ತಸ್ರಾವವಾಗಿರುತ್ತದೆ. ನನ್ನ ತಮ್ಮನಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಸೂರ್ಯ ನರ್ಸಿಂಗ್ ಹೋಂನಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಈ ಅಪಘಾತಕ್ಕ ಕಾರಣನಾದ KA-06-EV-7690ನೇ ದ್ವಿ ಚಕ್ರ ವಾಹನದ ಸವಾರನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಡವಾಗಿ ನೀಡಿದ ದೂರನ್ನು ಪಡೆದು ಪ್ರರಕಣ ದಾಖಲಿಸಿದೆ.

ಕೋರಾ ಪೊಲಿಸ್‌ ಠಾಣೆ ಎಪ್‌ .ಎ.ಆರ್‌  ಸಂಖ್ಯೆ 06/2017 ಆಕಸ್ಮಿಕ ಬೆಂಕಿ ಪಕ್ರರಣ

ದಿನಾಂಕ 29/03/2017 ರಂದು ಬೆಳಿಗ್ಗೆ ಯಲ್ಲದಡ್ಲು ಗ್ರಾಮದ ವಾಸಿ ಮಂಜಣ್ಣ ಬಿನ್‌ ಮುನಿಯಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿಯ ಸಾರಾಂಶವೇನೆಂದರೆ, ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಈಗ್ಗೆ 12 ವರ್ಷಗಳಿಂದ ಯಲದಡ್ಲು ಗ್ರಾಮದ  ಆಶ್ರಯ ಯೋಜನೆಯ ಸೈಟಿನಲ್ಲಿ ಗುಡಿಸಲು ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುತ್ತೇನೆ. ನಮ್ಮ ಮನೆಯ ಅಕ್ಕ-ಪಕ್ಕ ಸುಮಾರು ಗುಡಿಸಲು ಮನೆಗಳಿದ್ದು, ದಿನಾಂಕ:28/03/2017 ರಂದು ರಾತ್ರಿ ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಊಟ ಮುಗಿಸಿ ಮಲಗಿದ್ದೆವು. ರಾತ್ರಿ ಸುಮಾರು 12 ಗಂಟೆಯ ಸಮಯದಲ್ಲಿ ನಾವು ವಾಸ ಮಾಡುತ್ತಿರುವ ಕೆರೆಯ ತೀರದ ಕಡೆಯಿಂದ ಆಕಸ್ಮಿಕ ಬೆಂಕಿ ಹತ್ತಿಕೊಂಡು ತೀರದಲ್ಲಿರುವ ಗಂಗಮ್ಮನ ಮನೆ ಹತ್ತಿಕೊಂಡು ಉರಿಯಲಾರಂಬಿಸಿತು, ಅಷ್ಟರಲ್ಲಿ ನಾವು ಎಚ್ಚರಗೊಂಡು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ಒಂದರ ನಂತರ ಒಂದು ಗುಡಿಸಲುಗಳು ಬೆಂಕಿ ಹತ್ತಿಕೊಂಡವು, ಅಗ್ನಿಶಾಮಕ ದಳದವರಿಗೆ ಕರೆ ಮಾಡಿ, ಬೆಂಕಿಯನ್ನು ಅವರಿಂದ ಹಾರಿಸಿದೆವು. ಆದರೂ ಅಷ್ಟರಲ್ಲಿ ಗಂಗಮ್ಮ, ಮಲ್ಲಕ್ಕ, ನಾಗರಾಜು, ಕೆಂಪಮ್ಮ, ನರಸಿಂಹಮೂರ್ತಿ ರವರ ಶೀಟಿನ ಮನೆ ಹಾಗೂ ನನ್ನ ಗುಡಿಸಲು ಸಂಪೂರ್ಣವಾಗಿ ಸುಟ್ಟುಹೋದವು. ಅದರಲ್ಲಿ ಇಟ್ಟಿದ್ದ ದಿನಸಿ ಪದಾರ್ಥಗಳು, ಸಂಸಾರದ ಪಾತ್ರೆ ಪಗಡುಗಳು, ಬಟ್ಟೆ ಬರೆಗಳು, ವಡವೆ-ವಸ್ತ್ರಗಳು, ಗೃಹ ಉಪಯೋಗಿ ವಸ್ತುಗಳು ಪೂರಾ ಸುಟ್ಟು ಹೋಗಿದ್ದು, ಈ ಬೆಂಕಿ ಅನಾಹುತದಿಂದ 06 ಗುಡಿಸಲು ಮನೆಗಳು ಸುಟ್ಟಿರುವುದರಿಂದ ಸುಮಾರು 2,06,000.00 ರೂ  ನಷ್ಟ ಉಂಟಾಗಿರುವುದು ಕಂಡು ಬಂದಿರುತ್ತೆ. ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ಕೇಳಿಕೊಳ್ಳುತ್ತೇವೆ ಇತ್ಯಾದಿ ಅರ್ಜಿಯ ಅಂಶವಾಗಿರುತ್ತೆ.

 Wednesday, 29 March 2017

Crime Incidents 29-03-17

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.31/2017, ಕಲಂ:279, 304(ಎ) ಐಪಿಸಿ.

ದಿನಾಂಕ:28/03/2017 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿ ಹರೀಶ ಬಿನ್ ಹನುಮಂತಪ್ಪ, 26 ವರ್ಷ ನಾಯಕರು, ಕೂಲಿ ಕೆಲಸ, ಮೋಟೆಬೆನ್ನೂರು ಗ್ರಾಮ, ಬ್ಯಾಡಗಿ ತಾಲೋಕು, ಹಾವೇರಿ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ತುಮಕೂರು ತಾಲ್ಲೋಕು ಅರಕೆರೆ ಗ್ರಾಮದ ಬಳಿ ತೇರಕ್ರಾಫ್ಟ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತೇನೆ, ಈಗ್ಗೆ ಸುಮಾರು 09 ವರ್ಷಗಳ ಹಿಂದೆ ನನ್ನ ತಂಗಿ ನೀಲಮ್ಮ ರವರನ್ನು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೋಕಿನ ಚಳಗೇರಿ ಗ್ರಾಮದ ವಾಸಿಯಾದ ತಿರುಕಪ್ಪ ರವರ ಮಗನಾದ ಹನುಮಂತಪ್ಪ ಬಾರ್ಕಿ ರವರಿಗೆ ಕೊಟ್ಟು ಮದುವೆ ಮಾಡಿದ್ದೆವು, ಅವರಿಗೆ 07 ವರ್ಷದ ಮಾರುತಿ ಎಂಬ ಗಂಡು ಮಗು ಹಾಗೂ 04 ವರ್ಷದ ದೇವಿಕ ಎಂಬ ಹೆಣ್ಣು ಮಗು ಇರುತ್ತದೆ. ಈಗ್ಗೆ 05 ವರ್ಷಗಳ ಹಿಂದೆ ಕೂಲಿ ಕೆಲಸಕ್ಕಾಗಿ ನಾನು ಮತ್ತು ನನ್ನ ತಂಗಿ ನೀಲಮ್ಮ ಮತ್ತು ಆಕೆಯ ಕುಟುಂಬದೊಂದಿಗೆ ತುಮಕೂರು ತಾಲೋಕು ಯಲ್ಲಾಪುರದ ಹತ್ತಿರ ಅರಕೆರೆ ಗ್ರಾಮಕ್ಕೆ ಬಂದು, ಅರಕೆರೆ ಬಳಿಯಿರುವ ತೇರಕ್ರಾಫ್ಟ್ ಟೈಲ್ಸ್ ಫ್ಯಾಕ್ಟರಿಯಲ್ಲಿ ನಾನು ಮತ್ತು ನನ್ನ ತಂಗಿ ಗಂಡ ಹನುಮಂತಪ್ಪ ಬಾರ್ಕಿ ಇಬ್ಬರು ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಫ್ಯಾಕ್ಟರಿಯವರು ನೀಡಿರುವ ಕ್ವಾಟ್ರಸ್ ನಲ್ಲಿಯೇ ವಾಸವಾಗಿದ್ದೆವು. ಈಗ್ಗೆ 04 ತಿಂಗಳ ಹಿಂದೆ ನನ್ನ ತಂಗಿ ಗಂಡ ಹನುಮಂತಪ್ಪ ಬಾರ್ಕಿ, 28 ವರ್ಷ ರವರು ಪಾವಗಡ ತಾಲೋಕಿನ ಕಡಪಲಕೆರೆ ಗ್ರಾಮದ ರವಿ ಎಂಬುವರ ಇಟ್ಟಿಗೆ ಮತ್ತು ಹೆಂಚಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ವಾರಕ್ಕೊಮ್ಮೆ ತುಮಕೂರಿಗೆ ಬಂದು ಹೆಂಡತಿ-ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದರು.

ಈಗಿರುವಾಗ್ಗೆ ದಿನಾಂಕ:28/03/2017 ರಂದು ಬೆಳಿಗ್ಗೆ ನನ್ನಗೆ ಯಾರೋ ಪೋನ್ ಮಾಡಿ ನಿಮ್ಮ ಸಂಬಂಧಿಕರಾದ ಹನುಮಂತಪ್ಪ ಬಾರ್ಕಿ ರವರು ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿರುವ ವೀರಚಿನ್ನೇನಹಳ್ಳಿ ಗೇಟ್ ಸಮೀಪದ ಕೋಳಿಕಾಲು ಕಣಿವೆಯ ಹತ್ತಿರ ದಿನಾಂಕ:27/03/2017 ರಂದು ರಾತ್ರಿ ಯಾವುದೋ ಸಮಯದಲ್ಲಿ  ಕೆಎ-27-ಇಡಿ-9180 ನೇ ದ್ವಿ ಚಕ್ರ ವಾಹನವನ್ನು  ತುಂಬಾ ಜೋರಾಗಿ ಮತ್ತು ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಬಂದು ರಸ್ತೆಯ ಎಡ ಪಕ್ಕದಲ್ಲಿ ಅಳವಡಿಸಿರುವ ರಿಪ್ಲೆಕ್ಟರ್ ಬೋರ್ಡ್ ಮತ್ತು ಕಬ್ಬಿಣದ ತಡೆಗೋಡೆಗೆ ಸ್ವತಃ ಡಿಕ್ಕಿಹೊಡೆಸಿ ರಸ್ತೆಯ ಪಕ್ಕದ ಗುಂಡಿಗೆ ಬಿದ್ದು ಹನುಮಂತಪ್ಪ ಬಾರ್ಕಿ ರವರ ತಲೆಗೆ ಪೆಟ್ಟುಗಳು ಬಿದ್ದು ಎರಡು ಕಿವಿ ಮತ್ತು ಮೂಗಿನಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ, ನೀವು ಸ್ಥಳಕ್ಕೆ ಬೇಗ ಬನ್ನಿ ಎಂತ ತಿಳಿಸಿದರು. ಕೂಡಲೇ ನಾನು ಮತ್ತು ಚಿಕ್ಕಪ್ಪನ ಮಗನಾದ ಅಶೋಕ್ ಬಿನ್ ಹನುಮಂತಪ್ಪ ಇಬ್ಬರು ಅಪಘಾತ ನಡೆದ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ನನ್ನ ತಂಗಿಯ ಗಂಡ ತನ್ನ ಬಾಬ್ತು ಕೆಎ-27-ಇಡಿ-9180 ನೇ ಬಜಾಜ್ ಸಿಟಿ100 ದ್ವಿ ಚಕ್ರ ವಾಹನದಲ್ಲಿ  ಪಾವಗಡದಿಂದ ದಿನಾಂಕ:27/03/2017 ರಂದು ರಾತ್ರಿ ಸುಮಾರು 09:30 ಗಂಟೆಗೆ ಹೊರಟು ಮಿಡಿಗೇಶಿ ಮಾರ್ಗವಾಗಿ ತುಮಕೂರಿಗೆ ಬರುತ್ತಿರುವಾಗ್ಗೆ ರಾತ್ರಿ ಸುಮಾರು 11:30 ಗಂಟೆಯ ಸಮಯದಲ್ಲಿ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿ ವೀರಚಿನ್ನೇನಹಳ್ಳಿ ಗೇಟ್ ಸಮೀಪದ ಕೋಳಿಕಾಲು ಕಣಿವೆಯ ಹತ್ತಿರ ತನ್ನ ಬಾಬ್ತು ಕೆಎ-27-ಇಡಿ-9180 ನೇ ಬಜಾಜ್ ಸಿಟಿ100 ದ್ವಿ ಚಕ್ರ ವಾಹನವನ್ನು ತುಂಬಾ ಸ್ಪೀಡಾಗಿ ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಬಂದು ಸದರಿ ರಸ್ತೆಯ ಎಡಪಕ್ಕದಲ್ಲಿರುವ ರಿಪ್ಲೆಕ್ಟರ್ ಭೋರ್ಡ್‌ ಮತ್ತು ಕಬ್ಬಿಣದ ತಡೆ ಗೋಡೆಗೆ ದ್ವಿ ಚಕ್ರ ವಾಹನವನ್ನು ಸ್ವತಃ ಡಿಕ್ಕಿ ಹೊಡೆಸಿ ರಸ್ತೆಯ ಪಕ್ಕದ ಗುಂಡಿಗೆ ಬಿದ್ದ ಪರಿಣಾಮ ನನ್ನ ತಂಗಿಯ ಗಂಡ ಹನುಮಂತಪ್ಪ ಬಾರ್ಕಿ ರವರ ತಲೆಗೆ ತೀರ್ವ ಸ್ವರೂಪದ ಪೆಟ್ಟುಗಳು ಬಿದ್ದು ಕಿವಿಗಳಲ್ಲಿ ಮತ್ತು ಮೂಗಿನಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಹಾಗೂ ಮೈಕೈ ಮತ್ತು ಕಾಲಿಗೆ  ಪೆಟ್ಟುಗಳು ಬಿದ್ದಿರುತ್ತವೆ ಮತ್ತು ಹನುಮಂತಪ್ಪ ಬಾರ್ಕಿ ಯವರು ಓಡಿಸಿಕೊಂಡು ಬರುತ್ತಿದ್ದ ಕೆಎ-27-ಇಡಿ-9180 ನೇ ದ್ವಿ ಚಕ್ರ ವಾಹನದ ಮುಂಭಾಗ  ಜಖಂಗೊಡಿರುತ್ತದೆ. ಆದ್ದರಿಂದ ತಾವುಗಳು ಕಾನೂನು ರೀತ್ಯ ಕ್ರಮವನ್ನು ಜರುಗಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ.  ಸ್ವತಃ ಅಪಘಾತ ಉಂಟುಮಾಡಿಕೊಂಡ ಹನುಮಂತಪ್ಪ ಬಾರ್ಕಿ ರವರು ಆತನ ಸಾವಿಗೆ ಆತನೇ ಕಾರಣನಾಗಿರುತ್ತಾನೆಂತ ಇದ್ದ ಪಿರ್ಯಾದು ಅಂಶ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-55/2017 ಕಲಂ 324, 504 ರೆ/ವಿ 34 ಐ,ಪಿ,ಸಿ

ದಿನಾಂಕ:28-03-2017 ರಂದು ಬೆಳಗ್ಗೆ 8-45 ಗಂಟೆಗೆ ಪಿರ್ಯಾದುದಾರರಾದ ಮಹದೇವಯ್ಯ ಬನ್ ಲೇಟ್ ಗಂಗಯ್ಯ, 48 ವರ್ಷ, ರಾಮೇನಹಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು.  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ:27-03-2017 ರಂದು ಬೆಳಿಗ್ಗೆ ಸುಮಾರು 09-30 ರ ಸಮಯದಲ್ಲಿ ನಾನು ನನ್ನ ಪತಿ ಮನೆಯ ಬಳಿ ಇರುವಾಗ್ಗೆ, ನಮ್ಮ ಗ್ರಾಮದ ನಮ್ಮ ಮನೆಯ ಪಕ್ಕ ಇರುವ ಸಿದ್ದಲಿಂಗಸ್ವಾಮಿ ಬಿನ್ ಲೇ|| ಶಾಂತಪ್ಪ ಮತ್ತು ಹೆಂಡತಿ ಮಂಗಳಮ್ಮ, ಸಿದ್ದಲಿಂಗಸ್ವಾಮಿಯ ತಾಯಿ ರುದ್ರಮ್ಮ ಇವರುಗಳು ನಮ್ಮ ಮನೆಯ ಪಕ್ಕದ ಜಾಗಕ್ಕೆ ಅಕ್ರಮವಾಗಿ ನಮ್ಮ ಜಾಗದಲ್ಲಿ ಕಾಂಪೌಂಡ್‌ ನಿರ್ಮಿಸಿದ್ದು, ಅದರ ಪಕ್ಕದಲ್ಲಿ ಕಾಂಕ್ರೀಟ್‌ ಕೂಡ ಹಾಕುತ್ತಿದ್ದರು. ಅದನ್ನು ಕೇಳಲು ಹೋದಾಗ ನನ್ನ ಪತಿ ಮಹದೇವಯ್ಯ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಮತ್ತು ನಾವು ಈಗಾಗಲೇ ಎರಡು ಬಾರಿ ನಮ್ಮ ಸೈಟ್‌(106) ಅನ್ನು ಅಳತೆ ಮಾಡಿಸಿ ಕಲ್ಲು ಹಾಕಿಸಿದ್ದೆವು. ಎರಡು ಬಾರಿಯೂ ಸಹ ಸಿದ್ದಲಿಂಗಸ್ವಾಮಿ ಆತನ ಅಮ್ಮ ಮತ್ತು ಹೆಂಡತಿ ಕಿತ್ತು ಹಾಕಿದ್ದರು. ಮತ್ತೆ ಅದೇ ಜಾಗದಲ್ಲಿ ಕಾಂಕ್ರೀಟ್‌ ಹಾಕಿಸುತ್ತಿದ್ದ ಸಮಯದಲ್ಲಿ ನಮ್ಮ ಪತಿಯವರು ಕೇಳಲು ಹೋದಾಗ, ನೀನು ಯಾವನು ಕೇಳುವುದಕ್ಕೆ ಇದು ನಮ್ಮ ಜಾಗ ಎಂದು ಏಕಾಏಕಿ ಕಲ್ಲಿನಿಂದ ನನ್ನ ಪತಿಯ ತಲೆಯ ಬುರುಡೆಗೆ ಹೊಡೆದನು. ಆ ಸಮಯಕ್ಕೆ ಆತನ ಹೆಂಡತಿ ಮತ್ತು ಅವನ ತಾಯಿ ಕಬ್ಬಿಣದ ಗಡಾರಿಯಿಂದ ನನ್ನ ಪತಿಯ ಬುರುಡೆಗೆ ಅವರು ಸಹ ಹೊಡೆದರು. ಆ ಹೊಡೆತದಿಂದ ನೋವು ತಾಳಲಾಗದೇ ಕೆಳಗೆ ಕುಕ್ಕರಿಸಿ ಬಿದ್ದರು. ರಕ್ತಸ್ರಾವ ತೀವ್ರವಾಗಿದ್ದರಿಂದ ಯಾರೋ ದ್ವಿಚಕ್ರ ವಾಹನದಾರರು ನನ್ನ ಪತಿಯನ್ನು ಪೊಲೀಸ್‌ ಠಾಣೆಗೆ ಕರೆತಂದರು. ತದನಂತರ ನಾನು ಸಹ ಅವರ ಹಿಂದೆ ಬಂದು ಠಾಣೆಗೆ ಭೇಟಿ ಕೊಟ್ಟು ತದ ನಂತರ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಸಿದ್ದಲಿಂಗಸ್ವಾಮಿ ಆತನ ಹೆಂಡತಿ ಮಂಗಳಮ್ಮ ಮತ್ತು ತಾಯಿ ರುದ್ರಮ್ಮ ಇವರಿಗೆ ಕಾನೂನು ರೀತಿ ಕ್ರಮ ಜರುಗಿಸಲು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂತಾ ನೀಡಿದ ದೂರನ್ನು ಪಡೆದು  ಪ್ರಕರಣವನ್ನು ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ  ಮೊ,ನಂ 56/2017 ಕಲಂ-324,341,384, 506 ರೆ/ವಿ 34 ಐ,ಪಿ,ಸಿ ಮತ್ತು 3(2)(ವಿ-ಎ) ಎಸ್ ಸಿ/ಎಸ್ ಟಿ ಆಕ್ಟ್

ದಿನಾಂಕ:28-03-2017 ರಂದು ಬೆಳಗ್ಗೆ 10-30 ಗಂಟೆಗೆ ಪಿರ್ಯಾದುದಾರರಾದ ಕೆಂಪಮ್ಮ ಕೋಂ ಹೆಚ್, ರವಿಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ, ಚಿಕ್ಕಣ್ಣ ಬಿನ್ ಗಂಗಭೈರಪ್ಪ, ಅರೇಹಳ್ಳಿ ಗ್ರಾಮ, ಹೆಬ್ಬೂರು ಹೋಬಳಿ ಎಂಬುವವರು ನನ್ನ ಗಂಡನಿಂದ ರೂ 18,000/- ಗಳನ್ನು ಕೈಸಾಲವಾಗಿ ಮಿಲ್ಟ್ರಿ ಹೋಟೆಲ್‌ ನಡೆಸಲು ಪಡೆದಿದ್ದರು. ಈ ಕೈಸಾಲದ ಹಣವನ್ನು ಪೋನ್‌ ಮಾಡಿ ನನ್ನ ಗಂಡ ಕೇಳಲಾಗಿ ದಿನಾಂಕ:26-03-2017 ರಂದು ರಾತ್ರಿ 10-00 ಗಂಟೆಯ ಸಮಯದಲ್ಲಿ ಹಣ ಕೊಡುತ್ತೇನೆ, ಹೊನ್ನುಡಿಕೆ ಗ್ರಾಮದ ಗಾರ್ಡನ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ ಹತ್ತಿರ ಕರೆಸಿಕೊಂಡು ನನ್ನ ಗಂಡ ಹೆಚ್,ರವಿಕುಮಾರ್‌ನನ್ನು ರೆಸ್ಟೋರೆಂಟ್‌ನ ಒಳಗೆ ಕೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿ ನಿನ್ನನ್ನು ಮತ್ತೆ ಹಣ ಕೇಳದಂತೆ ಮುಗಿಸಿಬಿಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿ, ನಿನಗೆ ಹಣ ಕೊಡುತ್ತೇವೆ, ತೆಗೆದುಕೋ ಎಂದು ಕಬ್ಬಿಣದ ರಾಡಿನಿಂದ ಮತ್ತು ದೊಣ್ಣೆಯಿಂದ ಚಿಕ್ಕಣ್ಣ ಬಿನ್ ಗಂಗಬೈರಪ್ಪ ಮತ್ತು ಆತನ ಸಹಚರರು ತಲೆಗೆ, ಎದೆಗೆ, ತುಟಿಗೆ, ಬಲಗಾಲಿಗೆ ಹೊಡೆದು ತೀವ್ರತರವಾದ ರಕ್ತಗಾಯಗಳನ್ನುಂಟು ಮಾಡಿರುತ್ತಾರೆ. ಈ ರೀತಿ ತೀವ್ರತರವಾದ ರಕ್ತಗಾಯದಿಂದ ನನ್ನ ಗಂಡ ಹೆಚ್,ರವಿಕುಮಾರ್ ರವರು ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಾಗ ನನ್ನ ಗಂಡನ ಜೇಬಿನಲ್ಲಿದ್ದ ರೂ 30,000/- ಗಳನ್ನು ಕಸಿದುಕೊಂಡು ಪರಾರಿಯಾಗಿರುತ್ತಾರೆ. ಆಗ ಅಲ್ಲೇ ದಾರಿಯಲ್ಲಿ ಓಡಾಡುತ್ತಿದ್ದ ದಾರಿಹೋಕರು 108 ಆಂಬುಲೆನ್ಸ್‌‌ನಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ನಂತರ ನಾನು ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಗಂಡ ತೀವ್ರತರವಾದ ರಕ್ತಗಾಯಗಳಿಂದ ಬಳಲುತ್ತಿದ್ದರು ಹಾಗೂ ವೈದ್ಯರ ಸಲಹೆಯಂತೆ ನನ್ನ ಗಂಡನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ಸೇರಿಸಿರುತ್ತೇನೆ. ಸದರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇಲೆ ಪುನಃ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿ  ಚಿಕಿತ್ಸೆ ಕೊಡಿಸುತ್ತಿದ್ದೇನೆ. ಈಗ ನನ್ನ ಗಂಡ ಓಡಾಡುವ ಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ಹೆಂಡತಿಯಾದ ನಾನು ಚಿಕಿತ್ಸೆ ಕೊಡಿಸಿ, ತಡವಾಗಿ ಬಂದು ಈ ಪಿರ್ಯಾದನ್ನು ಸಲ್ಲಿಸುತ್ತಿದ್ದೇನೆ. ಆದ್ದರಿಂದ ಮೇಲ್ಕಂಡಂತೆ ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಹೊಡೆದು ರಕ್ತಗಾಯ ಉಂಟು ಮಾಡಿರುವ ಹಾಗೂ ಈ ದುಷ್ಕೃತ್ಯಕ್ಕೆ ಕಾರಣವಾಗಿರುವ ಚಿಕ್ಕಣ್ಣ ಬಿನ್ ಗಂಗಭೈರಪ್ಪ, ಅರೇಹಳ್ಳಿ ಗ್ರಾಮ, ಮತ್ತು ಆತನ ಸಹಚರರ ವಿರುದ್ದ ಕಾನೂನು ಕ್ರಮ ಕೈಗೊಂಡು ನನ್ನ ಗಂಡನಿಗೆ ಮತ್ತು ನನಗೆ ಹಾಗೂ ನಮ್ಮ ಕುಟುಂಬದ ಸದಸ್ಯರಿಗೆ ರಕ್ಷಣೆ ನೀಡಿ, ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ

ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ 58/2017 ಕಲಂ  279, 304[A]  I.P.C, 134(A&B) 187 IMV Act

ದಿನಾಂಕ:28/03/2017 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿ ಭೂತರಾಜು ಬಿನ್ ಸಿದ್ದಯ್ಯ ತಿಮ್ಮನಹಳ್ಳಿ  ಕಳ್ಳಂಬೆಳ್ಳ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ. ಈ ದಿನ ದಿನಾಂಕ:28/03/2017 ರಂದು ನಾನು ನಮ್ಮ ಮಾವ ರಂಗಯ್ಯ ಇಬ್ಬರು ತುಮಕೂರು ನಗರ ಎಪಿಎಂಸಿ ಯಾರ್ಡ್ ನಲ್ಲಿ ಕುರಿಸಂತೆಗೆ ಬಂದು ವ್ಯಾಪಾರ ಮುಗಿಸಿಕೊಂಡು ಇಬ್ಬರು ಎಪಿಎಂಸಿ ಯಾರ್ಡ್ ಮುಂದೆ ರಸ್ತೆ ಹತ್ತಿರ ಬಂದು ನಾನು ರಸ್ತೆಯ ಎಡಭಾಗದಲ್ಲಿ ನಿಂತುಕೊಂಡೆ ನಮ್ಮ ಮಾವ ರಂಗಯ್ಯರವರು ಬೆಳಗ್ಗೆ 09-45 ಗಂಟೆ ಸಮಯದಲ್ಲಿ ಅಂಗಡಿಗೆ ಹೋಗಿ ಬರುತ್ತೇನೆಂದು ಬಟವಾಡಿಯಿಂದ ಕ್ಯಾತ್ಸಂದ್ರ ಕಡೆಗೆ ಹೋಗುವ ಎನ್ .ಹೆಚ್ 48 ರಸ್ತೆಯನ್ನು ನಡೆದುಕೊಂಡು ದಾಟುತ್ತಿರುವಾಗ್ಗೆ, ಅದೇ ಸಮಯಕ್ಕೆ ಶಿರಾ ಕಡೆಯಿಂದ ಬಂದ ಒಂದು ಕಾರನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಮ್ಮ ಮಾವನವರಿಗೆ ಅಪಘಾತ ಪಡಿಸಿದನು ಆಗ ನಮ್ಮ ಮಾವ ಕಾರು ಒಡೆದ ರಭಸಕ್ಕೆ ಸ್ವಲ್ಫ ದೂರ ಹೋಗಿ ರಸ್ತೆಯ  ಮೇಲೆ ಬಿದ್ದರು, ನಾನು ತಕ್ಷಣ ಹತ್ತಿರಕ್ಕೆ ಓಡಿ ಹೋಗಿ ನೊಡಲಾಗಿ ನಮ್ಮ ಮಾವನವರ ತಲೆಗೆ, ಹಣೆಗೆ, ಬಲ ಕೈ ಎರಡೂ ಕಾಲುಗಳಿಗೆ ಹಾಗೂ ಮೈಗೆ ಬಲವಾದ ಪೆಟ್ಟುಬಿದ್ದು ತೀವ್ರ ರಕ್ತಶ್ರಾವವಾಗಿತ್ತು, ಅಪಘಾತ ಪಡಿಸಿದ ಕಾರನ್ನು ಅದರ ಚಾಲಕ ರಸ್ತೆ ಪಕ್ಕ ನಿಲ್ಲಿಸಿ ಓಡಿ ಹೋದನು ನಂತರ ಕಾರ್ ನಂಬರ್ ನೋಡಲಾಗಿ ಕೆಎ-01-ಎಂಎಲ್-7333 ನೇ ಕಾರ್ ಆಗಿತ್ತು. ನಂತರ ನಾನು ನಮ್ಮ ಸಂಬಂಧಿಕರು ಸೇರಿ ಅಂಬುಲೆನ್ಸ್ ನಲ್ಲಿ ಜಿಲ್ಲಾ ಆಸ್ಫತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದೆವು ನಂತರ ವೈದ್ಯರು ಚಿಕಿತ್ಸೆ ನೀಡಿ ಐಸಿಯು ವಾರ್ಡಗೆ ದಾಖಲಿಸಿದರು ನಮ್ಮ ಮಾವನವರಿಗೆ ತೀವ್ರವಾಗಿ ಪೆಟ್ಟು ಬಿದ್ದು ರಕ್ತ ಶ್ರಾವವಾಗಿ ಆಗಿದ್ದರಿಂದ ಹಾಗೂ ಚಿಕಿತ್ಸೆಯಿಂದ ಗುಣಮುಖರಾಗದೇ ಇದೇ ದಿನ ಮದ್ಯಾಹ್ನ 12-10 ಗಂಟೆಗೆ ಮೃತಪಟ್ಟರು ನನ್ನ ಮಾವನವರ ಸಾವಿಗೆ ಕೆಎ-01-ಎಂಎಲ್-7333 ನೇ ಕಾರಿನ ಚಾಲಕನೇ ಕಾರಣ ನಾಗಿದ್ದು ಸದರಿ ಕಾರಿನ ಚಾಲಕನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ .Tuesday, 28 March 2017

Crime Incidents 28-03-17

ಹೊನ್ನವಳ್ಳಿ ಪೊಲೀಸ್‌ ಠಾಣೆ  ಯು,ಡಿ,ಆರ್ ನಂ-04/2017 ಕಲಂ 174 ಸಿ,ಆರ್,ಪಿ,ಸಿ

ದಿನಾಂಕ-27/03/2017 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಶ್ರೀಮತಿ ಕಮಲಮ್ಮ ಕೊಂ ಶಂಕರಯ್ಯ ರವರು ಕೃತ್ಯ ನಡೆದ ಸ್ಥಳದಲ್ಲಿ ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾದಿಯ ಗಂಡನಾದ ಶಂಕರಯ್ಯನವರಿಗೆ 48ವರ್ಷ ವಯಸ್ಸಾಗಿದ್ದು ಶಂಕರಯ್ಯರವರು ಪ್ರತಿದಿನ ಕೂಲಿ ಕೆಲಸಕ್ಕೆ ಹೋಗುತ್ತಿದ್ದು ಹುಣಸೇ ಮರವನ್ನು ಬಡಿಯುವ ಕೆಲಸ ಮಾಡುತ್ತಿದ್ದು ದಿನಾಂಕ-27/03/2017 ರಂದು ಮಧ್ಯಾಹ್ನ ಸುಮಾರು 12-30 ಗಂಟೆ ಸುಮಾರಿನಲ್ಲಿ ಮೃತ ಶಂಕರಯ್ಯನು ಮಾವಿನಹಳ್ಳಿ ಗೊಲ್ಲರಹಟ್ಟಿ ವಾಸಿ ನಿಂಗಣ್ಣನವರ ಹುಣಸೇ ಮರಕ್ಕೆ ಹತ್ತಿ ಹುಣಸೇ ಮರವನ್ನು ಬಡಿಯುತ್ತಿರುವಾಗ ಮರದ ಟೊಂಗೆ ಕಿತ್ತುಕೊಂಡು ಶಂಕರಯ್ಯ ಮರದ ಮೇಲಿಂದ ನೆಲಕ್ಕೆ ಬಿದ್ದಾಗ ಶಂಕರಯ್ಯನ ತಲೆ ಮತ್ತು ಬಲಗಾಲಿಗೆ ಬಲವಾದ ಪೆಟ್ಟು ಬಿದ್ದು ಕಿವಿ ಮತ್ತು ಮೂಗಿನಲ್ಲಿ ರಕ್ತ ಹೊರಬಂದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-51/2017 ಕಲಂ: 96 ಕೆ.ಪಿ ಆಕ್ಟ್.

ದಿನಾಂಕ: 27-03/2017 ರಂದು ರಾತ್ರಿ 08-30 ಗಂಟೆಗೆ ಠಾಣಾ ಪಿ.ಸಿ-157 ಮೋಹನ್ ಕುಮಾರ್ ಜಿ.ಎಂ ರವರು ಪಿ.ಸಿ-301 ಪ್ರವೀಣ್ ಕುಮಾರ್ ರವರ ಜೊತೆಯಲ್ಲಿ ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ:27-03-2017 ರಂದು ರಾತ್ರಿ 07-30 ಗಂಟೆಗೆ ಎಸ್.ಹೆಚ್.ಓ ರವರ ಆದೇಶದಂತೆ ನಾನು ಮತ್ತು ಪಿ.ಸಿ-301 ಪ್ರವೀಣ್ ಕುಮಾರ್ ಇಬ್ಬರು ರಾತ್ರಿ ವಿಶೇಷ ಗಸ್ತುಗೆ ನೇಮಕಗೊಂಡಿದ್ದು, ಅದರಂತೆ ತಿಪಟೂರು ನಗರದ ಗಾಂಧಿನಗರ, ಇಂದಿರಾನಗರ, ಕೆರೆಗೋಡಿ ರಸ್ತೆ, ಅರಸುನಗರ, ಆರ್.ಎಂ.ಸಿ ಯಾರ್ಡ್‌, ಭೋವಿ ಕಾಲೋನಿ, ಹಾಸನ ರಸ್ತೆ ಕಡೆ ಗಸ್ತು ಮಾಡಿಕೊಂಡು ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು ಬಳಿ ಹೋದಾಗ ರಾತ್ರಿ  ಸುಮಾರು 08-00 ಗಂಟೆ ಸಮಯದಲ್ಲಿ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಒಳಭಾಗದ ಕಾಂಪೌಂಡ್ ಪಕ್ಕದಲ್ಲಿ ಒಬ್ಬ ಅಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಅವಿತುಕೊಂಡು ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದವರನ್ನು ನಾನು ಮತ್ತು ಪಿ.ಸಿ-301 ರವರು ಹಿಡಿದು, ಅತನ ಹೆಸರು ಮತ್ತು ವಿಳಾಸ ಕೇಳಲಾಗಿ, ಒಂದೊಂದು ಹೆಸರನ್ನು ತೊದಲುತ್ತಾ ಹೇಳುತ್ತಿದ್ದು, ಅನುಮಾನ ಬಂದು ಆತನನ್ನು  ಚೆಕ್‌ ಮಾಡಲಾಗಿ ಕೈಯಲ್ಲಿ ಒಂದು ಕಬ್ಬಿಣದ ರಾಡನ್ನು ಹಿಡಿದುಕೊಂಡಿದ್ದು, ತನ್ನ ಇರುವಿಕೆಯನ್ನು ಮರೆಮಾಚುತ್ತಾ ಕಳ್ಳತನ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡನ್ನು ಹಿಡಿದುಕೊಂಡು ನಮ್ಮನ್ನು ನೋಡಿ ಮರೆಮಾಚಲು ಪ್ರಯತ್ನಪಟ್ಟವನನ್ನು ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಮೇಲ್ಕಂಡಂತೆ ತಪ್ಪು ಒಪ್ಪಿಕೊಂಡಿರುತ್ತಾನೆ ಸದರಿ ಅಸಾಮಿಯ ಹೆಸರು ವಿಳಾಸ ತಿಳಿಯಲಾಗಿ ರಾಜು ಬಿನ್ ಪುಟ್ಟಾಭೋವಿ, 33 ವರ್ಷ, ಭೋವಿ ಜನಾಂಗ, ಕಲ್ಲು ಕೆಲಸ, ಸಜ್ಜೇನಹಳ್ಳಿ ಭೊವಿ ಕಾಲೋನಿ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೋಕ್ || ಜಿಲ್ಲೆ|| ಎಂದು ತಿಳಿಸಿರುತ್ತಾನೆ. ಸದರಿ ಆಸಾಮಿಯನ್ನು  ವಶಕ್ಕೆ ತೆಗೆದುಕೊಂಡು 08-30 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಆಸಾಮಿಯ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ವರದಿಯನ್ನು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 65/2017 ಕಲಂ; 279, 337 ಐ.ಪಿ.ಸಿ

ದಿನಾಂಕ-27-03-2017 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಪಿರ್ಯಾದಿ ಜೆ.ಗುರುಪ್ರಸಾದ್‌ ಬಿನ್‌ ಜೆ.ಎಲ್.ಕೆಂಪಯ್ಯ, 34 ವರ್ಷ, ವಕ್ಕಲಿಗರು, ಜಿರಾಯ್ತಿ, ಜಿನ್ನಾಗರ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-22-03-2017 ರಂದು ಸಂಜೆ 5-30 ರಿಂದ 6-00 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಅಣ್ಣ ಜೆ.ಕೆ. ಶಶಿಧರ ಮತ್ತು ಸಣಬ ಗ್ರಾಮದ ವಾಸಿಯಾದ ಎಸ್‌.ಕೆ.ಕೃಷ್ಣ ಬಿನ್ ಲೇಟ್‌ ಕುದುರೆ ಕೆಂಪಯ್ಯ ನಾವುಗಳು ಸಣಬ ಗ್ರಾಮದ ಗದ್ದೆ ಹುಚ್ಚಮ್ಮ ದೇವಸ್ಥಾನದ ಹತ್ತಿರ ಹಬ್ಬದ ವಿಶೇಷವಾಗಿ ಪೂಜೆ ಮತ್ತು ಜಾತ್ರೆ ಇದ್ದ ಕಾರಣದಿಂದಾಗಿ ಅಲ್ಲಿಗೆ ಹೋಗಲು ಯಡವಾಣಿ ಮತ್ತು ಅಮೃತೂರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ರಸ್ತೆಯ ಎಡಬದಿಯಲ್ಲಿ ಸಣಬ ಗ್ರಾಮದ ವಾಸಿ ಭಾಗ್ಯಮ್ಮ ರವರ ಜಮೀನಿನ ಹತ್ತಿರ ನಡೆದುಕೊಂಡು ಹೋಗುತ್ತಿದ್ದೆವು. ಅದೇ ಸಮಯಕ್ಕೆ ಯಡವಾಣಿ ಕಡೆಯಿಂದ ಸಣಬ ಕಡೆಗೆ ಬರಲು ಒಂದು ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕಲು ಹೋಗಿ ವಾಹನವನ್ನು ಸಂಪೂರ್ಣ ಬಲಭಾಗಕ್ಕೆ ತಿರುಗಿಸಿ ಎಡರಸ್ತೆಯಲ್ಲಿ ನನ್ನ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ನನ್ನ ಅಣ್ಣ ಜೆ.ಕೆ ಶಶಿಧರ ಮತ್ತು ಎಸ್‌.ಕೆ ಕೃಷ್ಣ ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮವಾಗಿ ಇಬ್ಬರೂ ಕೆಳಗೆ ಬಿದ್ದುಹೋದರು ಇವರನ್ನು ಮೇಲಕ್ಕೆ ಎತ್ತಿ ಸಮಾದಾನಪಡಿಸಿದಾಗ ಶಶಿಧರನಿಗೆ ಬಲಗಾಲಿನ ಬೆರಳುಗಳು ಮತ್ತು ಬಲಗೈ ಮೂಳೆ ಮುರಿದು ರಕ್ತಗಾಯವಾಗಿರುತ್ತದೆ. ಎಸ್‌.ಕೆ ಕೃಷ್ಣರವರಿಗೆ ಎಡಕಾಲಿನ ಮೂಳೆ ಮುರಿದುಹೋಗಿರುತ್ತದೆ. ನಂತರ ವಾಹನವನ್ನು ಗಮನಿಸಿದಾಗ ಕೆಎ-06-ಎಂ-2102 ಆಗಿರುತ್ತದೆ. ನಂತರ ಇವರನ್ನು ಸಣಬ ಗ್ರಾಮದ ವಾಸಿಯಾದ ರಾಮಚಂದ್ರಯ್ಯ ಬಿನ್‌ ರಾಜಯ್ಯ ಮತ್ತು ಎಸ್‌.ಹೆಚ್‌ ರವಿಕುಮಾರ್‌ ಬಿನ್‌ ಹುಚ್ಚಯ್ಯ ಇವರುಗಳು ಸೇರಿ ಅಮೃತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ಕುಣಿಗಲ್‌ ಸಮೀರ್‌ ಆಸ್ಪತ್ರೆಗೆ ತೆರಳಿ ಇಬ್ಬರನ್ನು ತಪಾಸಣೆಗೆ ಒಳಪಡಿಸಿದ್ದು, ಶಶಿಧರ ಎಂಬುವವರಿಗೆ ಒಳರೋಗಿಯಾಗಿ ಸೇರಿಸಿಕೊಂಡು ಕಾಲಿನ ಬೆರಳುಗಳನ್ನು ಹಾಗೂ ಕೈ ಮೂಳೆಯನ್ನು ಶಸ್ತ್ರಚಿಕಿತ್ಸೆ ಮಾಡಿರುತ್ತಾರೆ. ಎಸ್‌.ಕೆ ಕೃಷ್ಣ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಧಿತ್ಯಾಧಿಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿ ಮನೆಗೆ ಕಳುಹಿಸಿರುತ್ತಾರೆ. ಆದ್ದರಿಂದ ಈ ಮೇಲ್ಕಂಡ ಕಾರಿನ ಸಂಖ್ಯೆ ಕೆ ಕೆಎ-06-ಎಂ-2102 ಆಗಿರುತ್ತದೆ. ಆದ್ದರಿಂದ ಕಾನೂನು ರೀತ್ಯ ಕ್ರಮ ಜರುಗಿಸಿಕೊಡಬೇಕಾಗಿ ಮನವಿ. ನಾನು ನನ್ನ ಅಣ್ಣ ಜೊತೆಯಲ್ಲಿ ಆಸ್ಪತ್ರೆಯಲ್ಲಿ ಇದ್ದ ಕಾರಣ ಈ ದಿನ ತಡವಾಗಿ ಬಂದು ದೂರುನೀಡಿರುತ್ತೇನೆ. ಇತ್ಯಾದಿ.

ಜಯನಗರ ಪೊಲೀಸ್ ಠಾಣಾ ಮೊ.ನಂ. 47/2017 ಕಲಂ 454, 457, 380 ಐಪಿಸಿ.

ದಿನಾಂಕ: 27-03-2017 ರಂದು ರಾತ್ರಿ 8-15 ಗಂಟೆಗೆ ತುಮಕೂರು ಟೌನ್ ಜಯನಗರ ಪೂರ್ವ 5 ನೇ ಮುಖ್ಯರಸ್ತೆಯಲ್ಲಿ ವಾಸವಿರುವ ಡಾ|| ವಿಸ್ಮಯ ನಾಯಕ್‌ ಆರ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ದಿನಾಂಕ :19/02/2017 ರಂದು ಮದ್ಯಾಹ್ನ 1.30 ಗಂಟೆಗೆ ನಾನು ನನ್ನ ಗಂಡ ಮತ್ತು ಮಕ್ಕಳೊಂದಿಗೆ ಮೇಲ್ಕಂಡಂತೆ ಜಯನಗರ ಪೂರ್ವ, 5 ನೇ ಮುಖ್ಯರಸ್ತೆಯಲ್ಲಿರುವ ನನ್ನ ಮನೆಗೆ ಬೀಗ ಹಾಕಿಕೊಂಡು  ನನ್ನ ಗಂಡ ಮಹೇಶ್‌ ಮಾಲಗತ್ತಿ ರವರ ಸ್ವಂತ ಊರಾದ ಬಾಗಲಕೋಟೆ ಜಿಲ್ಲೆಯ ಇಳಕಲ್‌ ಗೆ ಹೋಗಿದ್ದು, ಇಳಕಲ್ ನಲ್ಲಿ ಆ ದಿನ ರಾತ್ರಿ ಉಳಿದುಕೊಂಡು ಮರು ದಿನ ರಾತ್ರಿ ವಾಪಾಸ್ ಹೊರಟು ದಿನಾಂಕ: 21-02-2017 ರಂದು ಬೆಳಗಿನ ಜಾವ 4-30 ಗಂಟೆಗೆ ಮನೆಗೆ ಬಂದು ಮನೆಯ ಮೇನ್ ಡೋರ್ ತೆಗೆದು ಒಳಗೆ ಹೋಗಿ  ಬೆಡ್‌ ರೂಂ ಗೆ ಹೋಗಿ ನೋಡಲಾಗಿ ವಾರ್ಡ್‌ ರೂಬ್‌ ನಲ್ಲಿದ್ದ ಬಟ್ಟೆಗಳೆಲ್ಲಾ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.  ಬೆಡ್‌ ರೂಂ ಡೋರ್‌ ನ್ನು ಯಾವುದೋ ಆಯುಧದಿಂದ ಮೀಟಿ ತೆಗೆದಿರುವಂತೆ ಕಂಡು ಬಂತು.  ನಂತರ ಬೆಡ್‌ ರೂಂ ನ ವಾರ್ಡ್‌ ರೂಬ್‌ ನಲ್ಲಿ ನೋಡಲಾಗಿ ಒಂದು ಬಾಕ್ಸ್ ನಲ್ಲಿಟ್ಟಿದ್ದ ಚಿನ್ನದ ವಡವೆಗಳು 1] ಸುಮಾರು 10 ಗ್ರಾಂ ನ 2 ಬಳೆಗಳು ಬೆಲೆ ಸುಮಾರು 20,000 ರೂ 2] ಸುಮಾರು 15 ಗ್ರಾಂ ನ ಒಂದು ಜೊತೆ ಕಾಲು ಚೈನು ಬೆಲೆ ಸುಮಾರು 30,000  3] ಸುಮಾರು 15 ಗ್ರಾಂ ನ 2 ಗೆಜ್ಜೆ ಇರುವ ನೆಕ್ ಚೈನು ಬೆಲೆ ಸುಮಾರು 30,000  4] ಸುಮಾರು 9 ಗ್ರಾಂನ ಮಕ್ಕಳ 7 ಉಂಗುರಗಳು ಬೆಲೆ ಸುಮಾರು 18,000  5] ಸುಮಾರು 7 ಗ್ರಾಂ ನ ಹೂವಿನ ಡಿಸೈನ್ ಇರುವ ಒಂದು ಉಂಗುರ ಬೆಲೆ ಸುಮಾರು 14,000 ರೂ 6]   ಸುಮಾರು 15 ಗ್ರಾಂ ತೂಕವಿರುವ 4 ಉಂಗುರಗಳು ಬೆಲೆ ಸುಮಾರು 30,000 ರೂ 7] ಸುಮಾರು 18 ಗ್ರಾಂ ತೂಕವಿರುವ ಫ್ಯಾನ್ಸಿ ಡಿಸೈನ್ ಡಾಲರ್‌  ಇರುವ ಎರಡು ಎಳೆ ಸರ ಬೆಲೆ ಸುಮಾರು 32,000 ರೂ 8]  ಸುಮಾರು 14 ಗ್ರಾಂನ 2 ತಾಳಿ ಇರುವ ಕರೆಮಣಿ ಸರ ಬೆಲೆ ಸುಮಾರು 28,000 9] ಸುಮಾರು 1.5 ಗ್ರಾಂನ ಚಿಕ್ಕ ತಾಳಿ ಬೆಲೆ ಸುಮಾರು 3,000 ರೂ 10] ಸುಮಾರು 10 ಗ್ರಾಂ ತೂಕವಿರುವ 2 ಜೊತೆ (ಪಿಯರಲ್ಸ್‌ ಮತ್ತು ಡೈಮೆಂಡ್‌) ಕಿವಿ ಓಲೆ ಬೆಲೆ ಸುಮಾರು 20,000 ರೂ 11] ಸುಮಾರು 80 ಗ್ರಾಂ ತೂಕವಿರುವ 2 ಜೊತೆ ಆ್ಯಂಟಿಕ್‌ ಡಿಸೈನ್‌ ಕಾಲು ಚೈನು ಬೆಲೆ ಸುಮಾರು 1,20,000 ರೂ ಹಾಗೂ ಸುಮಾರು 12 ಗ್ರಾಂನ ಬೆಳ್ಳಿಯ ಒಂದು ಚಿಕ್ಕ ಬಾಕ್ಸ್‌ ಬೆಲೆ ಸುಮಾರು 3000 ರೂ ಮತ್ತು  ಅದೇ ವಾರ್ಡ್‌ ರೂಬ್ ನಲ್ಲಿದ್ದ 1] Canon 400 D Black Colour Camera ಬೆಲೆ ಸುಮಾರು 30,000 ರೂ  2] Canon  5 D Mark iii (F 2.8 100mm) Black Colour  Camera ಬೆಲೆ ಸುಮಾರು 3,00,000 ರೂ  3] Canon 18-55 Black Colour Camera Lens ಬೆಲೆ ಸುಮಾರು 30,000 ರೂ 4] Canon 105 Lens F.44 ಬೆಲೆ ಸುಮಾರು 1,50,000 ರೂ 5] Sony Zoom Silver Colour Camera ಬೆಲೆ ಸುಮಾರು 9,000 ರೂ 6] Black Colour Nikon Binoculars ಬೆಲೆ ಸುಮಾರು 8,000 ರೂ  ಬೆಲೆಬಾಳುವ ಇವುಗಳು ಇರಲಿಲ್ಲ.  ಇದನ್ನು ನೋಡಿದರೆ, ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಯಾವಾಗಲೋ ಯಾರೋ ಕಳ್ಳರು ನಮ್ಮ ಮನೆಯ ಮೇನ್‌ ಡೋರ್ ಪಕ್ಕದಲ್ಲಿರುವ ಬೆಡ್‌ ರೂಂಗೆ ಲಗತ್ತಾಗಿರುವ ಡೋರ್‌ ನ್ನು ಹೊರಭಾಗದಿಂದ ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಪ್ರವೇಶಿಸಿ ಬೆಡ್‌ ರೂಂ ನ ವಾರ್ಡ್‌ ರೂಬ್‌ ನಲ್ಲಿಟ್ಟಿದ್ದ ಒಟ್ಟು ಸುಮಾರು 8,75,000 ರೂ ಮೌಲ್ಯದ ಮೇಲ್ಕಂಡ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಆ ದಿನ ನಾನು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ನಮ್ಮ ಮನೆಗೆ ಬಂದು ಸ್ಥಳ ಪರಿಶೀಲನೆ ಮಾಡಿದ್ದರು.  ನಾನು ಕೆಲಸದ ಒತ್ತಡದಲ್ಲಿದ್ದರಿಂದ ಲಿಖಿತವಾಗಿ ದೂರನ್ನು ನೀಡಿರಲಿಲ್ಲ.  ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 70/2017 ಕಲಂ 323, 324, 504, 506, 149 ಐಪಿಸಿ

ದಿನಾಂಕ:27/03/2017 ರಂದು ಸಂಜೆ 5-15 ಗಂಟೆಗೆ ತುಮಕೂರು ತಾಲ್ಲೋಕ್ ಅರಕೆರೆ ಗ್ರಾಮದ ಸರ್ವಮಂಗಳಾ ಕೋಂ ರಾಜಶೇಖರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿ:26/03/17 ರಂದು ನಮ್ಮ ಮನೆಯಲ್ಲಿ ಮುನಿಯಪ್ಪ ದೇವರ ಆರಾಧನಾ ಮಹೋತ್ಸವದ ಬಗ್ಗೆ ನಾನು, ನನ್ನ ಗಂಡ ರಾಜಶೇಖರ್ ಹಾಗೂ ನನ್ನ ಮೈದುನನ ಹೆಂಡತಿ ಶಾಮಲಾ ರವರು ಸೇರಿಕೊಂಡು ದಿನಾಂಕ:25/03/2017 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಕಾರ್ಯಕ್ರಮ ತಯಾರಿ ಮಾಡುತ್ತಿರುವಾಗ, ಸದರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಏಕಾಏಕಿ ರಮೇಶ್, ನವೀನ್, ಸುಧಾಮಣಿ, ಹೇಮಂತ್ ಕುಮಾರ್, ವಿಶಾಲಾಕ್ಷಿ, ಭೂಮಿಕಾ, ಸಿದ್ದರಾಮಯ್ಯ ಹಾಗೂ ಗುರುಲಿಂಗಪ್ಪ ರವರು ಹಿಂದಿನ ದ್ವೇಷದಿಂದ ವಿನಾಕಾರಣ ಜಗಳ ತೆಗೆದು ಬಾಯಿಗೆ ಬಂದಂತೆ ಬೈಯ್ದು, ರಮೇಶ್ ರವರು ತಾನಿ ತಂದಿದ್ದ ದೊಣ್ಣೆಯಿಂದ ನನ್ನ ಯಜಮಾನರಾದ ರಾಜಶೇಖರ್ ರವರ ತುಟಿಗೆ ಹೊಡೆದು ರಕ್ತ ಗಾಯಪಡಿಸಿದ, ಅಷ್ಟರಲ್ಲಿ ನವೀನ್ ಅದೆ ದೊಣ್ಣೆಯನ್ನು ತೆಗೆದುಕೊಂಡು ನಮ್ಮ ಯಜಮಾನರ ಕೈ-ಕಾಲುಗಳಿಗೆ ಹೊಡೆದು ಗಾಯಪಡಿಸಿದ, ಶಾಮಲಾ ರವರು ಬಿಡಿಸಿಕೊಳ್ಳಲು ಬಂದಾಗ ವಿಶಾಲಾಕ್ಷಿ, ಸುಧಾಮಣಿ ರವರು ಜುಟ್ಟು ಹಿಡಿದು ಎಳೆದಾಡಿ ಮೈ-ಕೈಗೆ ಗುದ್ದಿ ನೋವುಂಟು ಮಾಡಿದರು, ಹೇಮಂತ್ ಕುಮಾರ್, ಭೂಮಿಕಾ, ಸಿದ್ದರಾಮಯ್ಯ, ಗುರುಲಿಂಗಪ್ಪ ರವರು ಸೇರಿಕೊಂಡು ನನ್ನ ಯಜಮಾನರಿಗೆ ನನ್ನ ಯಜಮಾನರಿಗೆ ಕೈ ಗಳಿಂದ ಹೊಡೆದು ಜುಟ್ಟು ಹಿಡಿದು ಎಳೆದಾಡಿದರು. ಇವರು ದೊಣ್ಣೆಯನ್ನ ಬಿಸಾಡಿ ಇವರೆಲ್ಲರೂ ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ ಕೊಲೆ ಮಾಡಿ ತೀರುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ದಿನ ತಡವಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

 Monday, 27 March 2017

Crime Incidents 27-03-17

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.29/2017,ಕಲಂ:279, 337 ಐಪಿಸಿ ರೆ/ವಿ 134(ಎ&ಬಿ),187 ಐಎಂವಿ ಆಕ್ಟ್.

 

ದಿನಾಂಕ:26/03/2017 ರಂದು ಮದ್ಯಾಹ್ನ 03:00 ಗಂಟೆಗೆ ಪಿರ್ಯಾದಿ ನಾಗರಾಜು ಬಿನ್ ಲೇ||ಹನುಮಂತರಾಯಪ್ಪ, 29 ವರ್ಷ, ಕುರುಬರು, ಬ್ರಹ್ಮದೇವರಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:26/03/2017 ರಂದು ನನ್ನ ಅಣ್ಣನಾದ ಮುದ್ದಪ್ಪ ಬಿನ್ ಲೇ||ಹನುಮಂತರಾಯಪ್ಪ ರವರು ಅವರ ಬಾಬ್ತು ಕೆಎ-09-ಆರ್-2522 ನೇ ಟಿ.ವಿ.ಎಸ್.ಎಕ್ಸ್.ಎಲ್.ನಲ್ಲಿ ನಮ್ಮ ಗ್ರಾಮದ ಕೋಡಪ್ಪನವರ ಮಗಳ ಮದುವೆಗೆಂದು ಮಧುಗಿರಿ ತಾಲ್ಲೋಕು ಕಸಬಾ ಹೋಬಳಿ, ಮೀನಗೊಂದಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದು, ಮದುವೆ ಮುಗಿಸಿಕೊಂಡು ನಮ್ಮ ಗ್ರಾಮಕ್ಕೆ ವಾಪಸ್ಸ್ ಮಧುಗಿರಿ ಕಡೆಯಿಂದ ಮಧುಗಿರಿ-ಪಾವಗಡ ರಸ್ತೆಯಲ್ಲಿ ಬರುತ್ತಿರುವಾಗ್ಗೆ ಮಧುಗಿರಿ-ಪಾವಗಡ ಮುಖ್ಯ ರಸ್ತೆಯ ಕೋಳಿಕಾಲು ಕಣಿವೆಯ ಬಳಿ ಇರುವ ಮುತ್ತರಾಯ ಸ್ವಾಮಿ ದೇವಸ್ಥಾನ ಹತ್ತಿರ ಬೆಳಿಗ್ಗೆ ಸುಮಾರು 10:30 ಗಂಟೆ ಸಮಯದಲ್ಲಿ ಮಧುಗಿರಿ ಕಡೆಯಿಂದ ಹಿಂಬದಿಯಲ್ಲಿ ಬರುತ್ತಿದ್ದ ಲಾರಿಯ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ನನ್ನ ಅಣ್ಣ ಮುದ್ದಪ್ಪ ರವರು ಬರುತ್ತಿದ್ದ ಟಿ.ವಿ.ಎಸ್.ಎಕ್ಸ್.ಎಲ್.ಗೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಅಣ್ಣನ ಬಲಗಾಲಿನ ಮಂಡಿಯಿಂದ ಕೆಳಗೆ ರಕ್ತಗಾಯವಾಗಿರುತ್ತದೆ. ಅಂತ ನನಗೆ ಯಾರೋ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದರು. ತಕ್ಷಣ ನಾನು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿದ್ದು ನನ್ನ ಅಣ್ಣ ಮುದ್ದಪ್ಪನ ಬಲಗಾಲಿನ  ಕೆಳಗೆ ರಕ್ತಗಾಯವಾಗಿರುತ್ತೆ. ಅಪಘಾತ ಉಂಟುಮಾಡಿದ ಲಾರಿಯ ನಂಬರ್ ನೋಡಲಾಗಿ ಲಾರಿಯ ಇಂಜಿನ್ ನಂಬರ್ TN-28-BB-1518 ಆಗಿದ್ದು ಲಾರಿಯ ಟ್ರೈಲರ್ ನಂಬರ್ HR-55-L-7610 ಆಗಿರುತ್ತೆ. ಲಾರಿಯ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನನ್ನ ಅಣ್ಣ ಮುದ್ದಪ್ಪ ರವರನ್ನು ಚಿಕಿತ್ಸೆಗಾಗಿ 108 ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇನೆ. ಅದ್ದರಿಂದ ನನ್ನ ಅಣ್ಣ ಮುದ್ದಪ್ಪ ರವರಿಗೆ ಅಪಘಾತ ಉಂಟುಮಾಡಿರುವ ಮೇಲ್ಕಂಡ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.28/2017,ಕಲಂ:279,304(ಎ) ಐಪಿಸಿ ರೆ/ವಿ 134(ಎ&ಬಿ),187 ಐಎಂವಿ ಆಕ್ಟ್.

ದಿನಾಂಕ:26/03/2017 ರಂದು ಮದ್ಯಾಹ್ನ 01:30 ಗಂಟೆಗೆ ಪಿರ್ಯಾದಿ ರಾಜಣ್ಣ ಬಿನ್ ರಾಯಣ್ಣ, 42 ವರ್ಷ, ನಾಯಕರು, ಹೆಚ್.ಬಸವನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ದೊಡ್ಡಪ್ಪ ಲೇ||ಪಾಲಯ್ಯ ರವರ ಮಗನಾದ ಬಸವರಾಜು ಎಂಬುವರು ಹೊಸಕೆರೆ ಗ್ರಾಮದಲ್ಲಿ ವಾಸವಿದ್ದು ದಿನಾಂಕ:25/03/2017 ರಂದು ಸಂಜೆ ಸುಮಾರು 07:45 ಗಂಟೆಯ ಸಮಯದಲ್ಲಿ ನನ್ನ ಅಣ್ಣ ಬಸವರಾಜು ರವರು ಹೊಸಕೆರೆ ಗ್ರಾಮದ ಹಾಲಿ ಡೈರಿಗೆ ಹಾಲನ್ನು ಹಾಕಲು ಮನೆಯಿಂದ ಮಧುಗಿರಿ-ಪಾವಗಡ ಮುಖ್ಯ ರಸ್ತೆಯ ಎಡ ಭಾಗದಲ್ಲಿ ಅನ್ನಪೂರ್ಣೇಶ್ವರಿ ವೈನ್ಸ್‌ ಸೆಂಟರ್‌ ಮುಂದೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಹಿಂದಿನಿಂದ ಅಂದರೆ ಮಧುಗಿರಿ ಕಡೆಯಿಂದ ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದ ಕಾರಿನ ಚಾಲಕ ನನ್ನ ಅಣ್ಣ ಬಸವರಾಜು ರವರಿಗೆ ಡಿಕ್ಕಿ ಹೊಡೆಸಿದ್ದು, ಬಸವರಾಜು ರವರ ತಲೆಯ ಹಿಂಭಾಗಕ್ಕೆ ಮತ್ತು ಎಡ ಮತ್ತು ಬಲ ಕಿವಿಗಳ ಮೇಲ್ಭಾಗಕ್ಕೆ ತೀರ್ವ ತರವಾದ ರಕ್ತಗಾಯಗಳಾಗಿರುತ್ತವೆ. ಮತ್ತು ನನ್ನ ಅಣ್ಣನಿಗೆ ಅಪಘಾತ ಉಂಟುಮಾಡಿದ ಕಾರಿನ ಸಂಖ್ಯೆ ಕೆಎ-51-3030 ನೇ ಮಾರುತಿ ಸ್ವಿಫ್ಟ್ ಡಿಸೈರ್ ಕಾರಾಗಿರುತ್ತೆ ಎಂದು ಸ್ಥಳದಲ್ಲೇ ಇದ್ದ ಹೆಚ್.ಬಸವನಹಳ್ಳಿ ಗ್ರಾಮದ ಬಿ.ಪಿ.ನಾಗರಾಜು ರವರು ಪೋನ್ ಮಾಡಿ ತಿಳಿಸಿದ್ದು, ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿದ್ದು, ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಮತ್ತು ಗಾಯಾಳುವನ್ನು ಉಪಚರಿಸದೆ ಹೊರಟು ಹೋಗಿದ್ದನು. ನಾನು ತಕ್ಷಣ ನನ್ನ ಅಣ್ಣ ಬಸವರಾಜನನ್ನು ಉಚರಿಸಿ ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು, ತುಮಕೂರಿನ ವೈದ್ಯಾಧಿಕಾರಿಯವರು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು ಅದರಂತೆ ನಿಮಾನ್ಸ್ ಆಸ್ಪತ್ರೆಯಿಂದ ಬೇರೆ ಆಶ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ದಿನಾಂಕ:26/03/2017 ರಂದು ಬೆಳಿಗ್ಗೆ 11:00 ಗಂಟೆಗೆ ನನ್ನ ಅಣ್ಣ ಬಸವರಾಜು ರವರು ಮೃತಪಟ್ಟಿರುತ್ತಾರೆ. ಆದ್ದರಿಂದ ನನ್ನ ಅಣ್ಣ ಬಸವರಾಜು ರವರಿಗೆ ಅಪಘಾತ ಉಂಟುಮಾಡಿ ಅವರ ಸಾವಿಗೆ ಕಾರಣನಾದ ಕೆಎ-51-3030 ನೇ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು, ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ.  

 

ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ .58/2017 ಕಲಂ 279,  304[]

ದಿನಾಂಕ:26/01/2017 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಈ ದಿನ ದಿನಾಂಕ:26/01/2017 ರಂದು ಮದ್ಯಾಹ್ನ 12-10 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿರುವಾಗ್ಗೆ ನನ್ನ ಮಗ ವಿಶ್ವಕುಮಾರ್ ರವರು ಬಂದು ಅಪ್ಪಾಜಿಗೆ ಅಪಘಾತವಾಗಿದ್ದು ರಕ್ತಗಾಯವಾಗಿರುತ್ತೆ. ತುಮಕೂರು ಜಿಲ್ಲಾ ಸರ್ಕಾರಿ ಆಸ್ಫತ್ರೆಗೆ ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿರುತ್ತಾರೆಂದು. ವಿಶ್ವಾಸ್ ರವರು ತಿಳಿಸಿದರು ಎಂದು ಹೇಳಿದೆನು, ನಾನು ತಕ್ಷಣ ನನ್ನ ಮಗ ವಿಶ್ವಕುಮಾರ್ ರವರೊಂದಿಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಫತ್ರೆಗೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿರುತ್ತೆ. ವಿಶ್ವಾಸ್ ರವರನ್ನು ವಿಚಾರ ಮಾಡಲಾಗಿ ನನ್ನ ಯಜಮಾನರಾದ ಮಹಂತೇಶ್ ರವರು ಅವರ ಬಾಬ್ತು ಕೆಎ-06-ಇಕ್ಸ್-5894 ನೇ ಸುಜಕಿ ಮೊಪೆಡ್ ನಲ್ಲಿ ಕ್ಯಾತ್ಸಂದ್ರ ದಿಂದ ತುಮಕೂರಿಗೆ ಕೆಲಸಕ್ಕೆ ಬರುತ್ತಿರುವಾಗ ಮದ್ಯಾಹ್ನ 12-00 ಗಂಟೆಸಮಯದಲ್ಲಿ ಕ್ಯಾತ್ಸಂದ್ರದ ಹತ್ತಿರ ಎನ್.ಹೆಚ್.48 ರಸ್ತೆಯ ಡಿ.ಎನ್.ಡಿ.ಎಸ್ ಮುಂಭಾಗ ರಸ್ತೆಯಲ್ಲಿ ಬರುತ್ತಿರುವಾಗ ಹಿಂದಿನಿಂದ ಅಂದರೆ ಕ್ಯಾತ್ಸಂದ್ರ ಕಡೆಯಿಂದ ತುಮಕೂರು ಕಡೆಗೆ ಕೆಎ-16-ಟಿಬಿ-0216-0217 ನೇ ಟ್ರಾಕ್ಟರ್ ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದವನೇ ಸಡನ್ನಾಗಿ ಟ್ರಾಕ್ಟರ್ ನ್ನು ಬಲಗಡಿಗೆ ತಿರುಗಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ನಮ್ಮ ಯಜಮಾನರಾದ ಮಹಂತೇಶ್ ರವರು ಗಾಡಿಯ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ನಮ್ಮ ಯಜಮಾನರಿಗೆ ಮುಖಕ್ಕೆ ಎದೆಗೆ ಎರಡೂ ಕೈ ಗಳಿಗೆ ಬಲವಾದ ಪೆಟ್ಟುಬಿದ್ದು, ತೀವ್ರವಾದ ರಕ್ತಶ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ತಿಳಿಸಿದರು.  ನಮ್ಮ ಯಜಮಾನರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಟ್ರಾಕ್ಟರ್ ಚಾಲಕನ ಹೆಸರು ವಿಳಾಸ ಕೇಳಲಾಗಿ ಏಕಾಂತ, ಉಪ್ಪಳಗೆರೆ ಹಿರಿಯೂರು ತಾಲ್ಲೂಕ್ ಎಂದು ತಿಳಿಯಿತು. ನಮ್ಮ ಯಜಮಾನರ ಸಾವಿಗೆ ಕಾರಣರಾದ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿರುತ್ತೆ

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-50/2017 ಕಲಂ: 279,337 ಐ.ಪಿ.ಸಿ.

ದಿನಾಂಕ:26/03/2017 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿ ಸಿದ್ದರಾಜು ಹೆಚ್.ಎಸ್ ಬಿನ್ ಲೇಟ್ ಸಿದ್ದಪ್ಪಾಜಿ, 29 ವರ್ಷ, ವಿಶ್ವಕರ್ಮ ಜನಾಂಗ, ಹಂಪಾಪುರ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೋಕ್, ಮಂಡ್ಯ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ತಮ್ಮನಾದ ಶಿವರಾಜ್ ಹೆಚ್.ಎಸ್ ರವರು ತಿಪಟೂರು ಟೌನ್ ಆರ್ಶೀರ್ವಾದ್ ಮೈಕ್ರೋ ಫೈನಾನ್ಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ: 28/02/2017 ರಂದು ಬೆಳಿಗ್ಗೆ ಸುಮಾರು 7-30 ಗಂಟೆಯಲ್ಲಿ ನನ್ನ ತಮ್ಮ ಶಿವರಾಜು ಕೆಲಸಕ್ಕೆಂದು ತಿಪಟೂರು ನಗರದ ಬಿಹೆಚ್ ರಸ್ತೆಯಲ್ಲಿ ವಿಜಯಾ ಬ್ಯಾಂಕ್ ಮುಂಭಾಗದಲ್ಲಿ ಕೋಡಿ ಸರ್ಕಲ್ ಕಡೆಗೆ ತನ್ನ ಬಾಬ್ತು ಕೆ.ಎ-09 ಇ.ಆರ್-8976 ನೇ ಬ್ಲಾಕ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಅದೇ ಸಮಯಕ್ಕೆ ಎದುರುಗಡೆಯಿಂದ ಕೆ.ಎ-44 ಹೆಚ್-9719 ನೇ ಬಜಾಜ್ ಡಿಸ್ಕವರಿ ದ್ವಿಚಕ್ರ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನ ವಾಹನವನ್ನು ಓಡಿಸಿಕೊಂಡು ಬಂದು ನನ್ನ ತಮ್ಮನಿಗೆ ಡಿಕ್ಕಿ ಹೊಡೆಸಿದ್ದು, ಪರಿಣಾಮ ನನ್ನ ತಮ್ಮ ಪ್ರಜ್ಞೆ ತಪ್ಪಿದ್ದು, ಈತನ ಹಣೆ, ಭುಜ,ಮತ್ತು ಕೈಗೆ ಪೆಟ್ಟು ಬಿದ್ದಿದ್ದು, ಅವನ ಸ್ನೇಹಿತರಾದ ಪ್ರಕಾಶ ಮತ್ತು ನಾಗರಾಜು ರವರು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಹಾಲಿ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಆದ್ದರಿಂದ ನನ್ನ ತಮ್ಮನಿಗೆ ಅಪಾಘಾತಪಡಿಸಿದ ಮೇಲ್ಕಂಡ ವಾಹನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನನ್ನ ತಮ್ಮನು ಚಿಕಿತ್ಸೆ ಪಡೆಯುತ್ತಿರುವುದರಿಂದ ನಾನು ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ ಎಂದು ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿರುತ್ತೆ.

 Friday, 24 March 2017

ಕ್ರಿಮಿನಲ್ ಮೊಕದ್ದಮೆಗಳ ತನಿಖೆಯ ಬಗ್ಗೆ ಕಾರ್ಯಾಗಾರ

ಕ್ರಿಮಿನಲ್ ಮೊಕದ್ದಮೆಗಳ ತನಿಖೆಯ ಬಗ್ಗೆ  ಕಾರ್ಯಾಗಾರ

 


Crime Incidents 24-03-17

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.27/2017, ಕಲಂ:87 ಕೆ.ಪಿ.ಆಕ್ಟ್.

ದಿ:21/03/2017 ರಂದು ರಾತ್ರಿ 11:30 ಗಂಟೆಗೆ ಠಾಣಾ ಪಿ.ಎಸ್.ಐ-ಹನುಮಂತರಾಯಪ್ಪ. ಹೆಚ್‌.ಜಿ. ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ನಾನು ದಿನಾಂಕ:21/03/2017 ರಂದು ರಾತ್ರಿ 08-20 ಗಂಟೆಯಲ್ಲಿ  ವಿಶ್ರಾಂತಿಗಾಗಿ ಮನೆಗೆ ಹೋಗುತ್ತಿದ್ದಾಗ   ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದು ಚೌಳಹಳ್ಳಿ ಗ್ರಾಮದ ನಾಗಮ್ಮ ದೇವಸ್ಥಾನದ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಸಿಬ್ಬಂದಿಯೊಂದಿಗೆ ಚೌಳಹಳ್ಳಿ ಗ್ರಾಮಕ್ಕೆ ಹೋಗಿ ಪಂಚಾಯ್ತು ದಾರರನ್ನು ಜೊತೆಯಲ್ಲಿ ಕರೆದುಕೊಂಡು ಮೇಲ್ಕಂಡ ನಾಗಮ್ಮ ದೇವಸ್ಥಾನದ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ನಾಗಮ್ಮ ದೇವಸ್ಥಾನದ ಮುಂಭಾಗ ಜನರು ಗುಂಡಾಕಾರವಾಗಿ ಕುಳಿತು ಒಳಗೆ-ಹೊರಗೆ ಎಂತ ಜೋರಾಗಿ ಹೇಳುತ್ತಾ ಅಂದರ್-ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿದ್ದುದ್ದನ್ನು ಖಚಿತಪಡಿಸಿಕೊಂಡು ಜೂಜಾಟವಾಡುತ್ತಿದ್ದ ಆಸಾಮಿಗಳ ಮೇಲೆ ಸಿಬ್ಬಂದಿಯೊಂದಿಗೆ ದಾಳಿಮಾಡಿ ಜೂಜಾಟದಲ್ಲಿ ತೊಡಗಿದ್ದ ಆಸಾಮಿಗಳನ್ನು ಹಿಡಿದುಕೊಂಡು ವಿಚಾರ ಮಾಡಿ ಹೆಸರು ವಿಳಾಸ ತಿಳಿಯಲಾಗಿ 1) ರಾಮಾಂಜಿನೇಯ ಬಿನ್ ಶ್ರೀರಾಮಪ್ಪ, 45ವರ್ಷ, ಗೊಲ್ಲರು, ಜಿರಾಯ್ತಿ, ಕಾಮೇಗೌಡನಹಳ್ಳಿ  ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ  ತಾಲ್ಲೋಕು, 2) ಗಂಗಪ್ಪ ಬಿನ್  ಲೇ|| ನಾಗಪ್ಪ, 50 ವರ್ಷ, ಉಪ್ಪಾರ ಜನಾಂಗ, ಕೂಲಿ ಕೆಲಸ, ಚೌಳಹಳ್ಳಿ ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ ತಾಲ್ಲೋಕು 3) ಶ್ರೀರಾಮಪ್ಪ  ಬಿನ್ ಲೇ|| ನರಸಿಂಹಪ್ಪ, 45 ವರ್ಷ, ಉಪ್ಪಾರ ಜನಾಂಗ, ಕೂಲಿ ಕೆಲಸ, ಚೌಳಹಳ್ಳಿ ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ ತಾಲ್ಲೋಕು 4) ಬಾಬು ಬಿನ್ ವೆಂಕಟರವಣಪ್ಪ, 25 ವರ್ಷ,ಶೆಟ್ಟಿಬಲಿಜಿಗ, ಪ್ಯಾಕ್ಟರಿಯಲ್ಲಿ ಕೆಲಸ, ಚೌಳಹಳ್ಳಿ ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ ತಾಲ್ಲೋಕು 5) ಸಿದ್ದಗಂಗಪ್ಪ ಬಿನ್ ಲೇ||ಸಿಂಗ್ರಪ್ಪ, 35 ವರ್ಷ, ಗೊಲ್ಲರು, ಜಿರಾಯ್ತಿ, ಚೌಳಹಳ್ಳಿ ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ ತಾಲ್ಲೋಕು, 6) ಗಂಗಪ್ಪ ಬಿನ್ ಲೇ||ರಂಗಪ್ಪ, 55 ವರ್ಷ, ಉಪ್ಪಾರ ಜನಾಂಗ, ಗಾರೆ ಕೆಲಸ, ಚೌಳಹಳ್ಳಿ ಗ್ರಾಮ, ಐ.ಡಿ.ಹಳ್ಳಿ  ಹೋಬಳಿ, ಮಧುಗಿರಿ ತಾಲ್ಲೋಕು ಎಂತ ತಿಳಿಸಿರುತ್ತಾರೆ.

ನಂತರ ಅಖಾಡದಲ್ಲಿ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 1)2480/-ರೂ ನಗದು ಹಣ,  2)52 ಇಸ್ಪೀಟ್ ಎಲೆಗಳು, 3)ಎರಡು ಹಳೆಯ ನ್ಯೂಸ್ ಪೇಪರ್ ಇವುಗಳನ್ನು ಪಂಚರ ಸಮಕ್ಷಮ ರಾತ್ರಿ  09-45 ಗಂಟೆಯಿಂದ 10-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಳ್ಳಲಾಯಿತು. ನಂತರ ಜೂಜಾಟದಲ್ಲಿ ತೊಡಗಿ ಸ್ಥಳದಲ್ಲಿ ಸಿಕ್ಕಿಬಿದ್ದ ಆಸಾಮಿಗಳಿಗೆ ಕರೆ ಮಾಡಿದಾಗ ಠಾಣೆಗಾಗಲಿ ಅಥವಾ ನ್ಯಾಯಾಲಯಕ್ಕಾಗಲಿ ಹಾಜರಾಗುವಂತೆ ಸೂಕ್ತ ತಿಳುವಳಿಕೆ ನೀಡಿ ಸ್ಥಳದಿಂದ ಕಳುಹಿಸಿಕೊಟ್ಟಿರುತ್ತೆ.

ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಇಸ್ಟೀಟ್ ಜೂಜಾಟದಲ್ಲಿ ತೊಡಗಿದ್ದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ   ಕ್ರಮ ಜರುಗಿಸಲು ಈ ಮೂಲಕ ನಿಮಗೆ ಸೂಚಿಸಿ, ಇದರೊಂದಿಗೆ ಸ್ಥಳ ಪಂಚನಾಮೆ ಮತ್ತು ಕೃತ್ಯ ನಡೆದ ಸ್ಥಳದಲ್ಲಿ ವಶಪಡಿಸಿಕೊಂಡ ಮೇಲ್ಕಂಡ ಮಾಲುಗಳನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆಂತ ನೀಡಿದ ಜ್ಞಾಪನದ ಮೇರೆಗೆ ಠಾಣಾ ಎನ್‌.ಸಿ.ಆರ್‌.GSC.No. PO1657170600042/2017 ರಲ್ಲಿ ನೊಂದಾಯಿಸಿಕೊಂಡಿರುತ್ತೆ.

ಸದರಿ ಎನ್.ಸಿ.ಆರ್. ವಿಷಯವು ಅಸಂಜ್ಞೇಯ ಅಪರಾಧವಾಗಿರುವುದರಿಂದ ಮುಂದಿನ ಕ್ರಮ ಜರುಗಿಸಲು  ಘನ ನ್ಯಾಯಾಲಯವು ಸದರಿ ಅಪರಾಧವನ್ನು ಸಂಜ್ಞೇಯ ಅಪರಾಧವಾಗಿ ಪರಿಗಣಿಸಿ ಕಲಂ:87 ಕೆ.ಪಿ.ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಬೇಕೆಂದು ಘನ ನ್ಯಾಯಾಲಯದಲ್ಲಿ ಕೋರಿ ಮನವಿಯನ್ನು ಸಲ್ಲಿಸಿಕೊಂಡಿದ್ದು, ಮಧುಗಿರಿ ಘನ ಎ.ಸಿ.ಜೆ.(ಜೆ.ಡಿ) & ಜೆ.ಎಂ.ಎಫ್‌.ಸಿ. ನ್ಯಾಯಾಲಯವು ಮೇಲ್ಕಂಡ ಎನ್‌.ಸಿ.ಆರ್. ವಿಷಯನ್ನು ಸಂಜ್ಞೆಯ ಅಪರಾಧವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಿದ್ದನ್ನು ಠಾಣಾ ಹೆಚ್.ಸಿ-79 ರವರು ಪಡೆದುಕೊಂಡು ದಿನಾಂಕ:23/03/2017 ರಂದು ಬೆಳಿಗ್ಗೆ 10-30 ಗಂಟೆಗೆ ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ ಠಾಣಾ ಮೊ ನಂ-54/2017 ಕಲಂ 457,380 ಐ ಪಿ ಸಿ

ದಿನಾಂಕ:23-03-2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದುದಾರರಾದ ಹುಚ್ಚಮ್ಮ ಕೋಂ ಲೇ|| ದೊಡ್ಡವೆಂಕಟಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದುಕೊಂಡು ಜಿರಾಯ್ತಿ ಹಾಗೂ ಕುರಿ ಮೇಕೆ ಸಾಕಾಣಿಕೆ ಮಾಡಿಕೊಂಡು ನನ್ನ ಮಗಳು ಗಂಗಮ್ಮಳೊಂದಿಗೆ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ: 22-03-2017 ರಂದು ನಾನು ಎಂದಿನಂತೆ ಕುರಿ ಹಾಗೂ ಮೇಕೆ ಮೇಯಿಸಿಕೊಂಡು ಸಾಯಂಕಾಲ ಸುಮಾರು 06-30 ಗಂಟೆ ಸಮಯದಲ್ಲಿ ನಮ್ಮ ಮನೆಗೆ ಹೊಂದಿಕೊಂಡಂತೆ ಪಕ್ಕದಲ್ಲಿಯೇ ಇರುವ ಕೊಟ್ಟಿಗೆಯಲ್ಲಿ ಕುರಿ ಮತ್ತು ಮೇಕೆಗಳನ್ನು ತಂದು ಬಿಟ್ಟಿದ್ದು, ನಂತರ ನಾನು ಮತ್ತು ನನ್ನ ಮಗಳು ಗಂಗಮ್ಮ ಇಬ್ಬರೂ ನಮ್ಮ ಮನೆಯಲ್ಲಿಯೇ ಮಲಗಿಕೊಂಡೆವು. ನಂತರ ದಿನಾಂಕ:23-03-2017 ರಂದು ಬೆಳಗಿನ ಜಾವ ಸುಮಾರು 03-30 ಗಂಟೆ ಸಮಯದಲ್ಲಿ ನಾವು ನಮ್ಮ ಮನೆಯಲ್ಲಿ ಮಲಗಿರುವಾಗ್ಗೆ, ಕುರಿಗಳು ಹಾಗೂ ಮೇಕೆ ಕೂಗಾಡುವ ಶಬ್ದ ಕೇಳಿಬಂತು. ನಂತರ ನಾನು ನಮ್ಮ ಮನೆಯ ಬಾಗಿಲನ್ನು ತೆಗೆಯಲು ಹೋಗಿದ್ದು, ಬಾಗಿಲನ್ನು ಹೊರಗಿನಿಂದ ಯಾರೋ ಕಳ್ಳರು ಹಗ್ಗದಿಂದ ಎಳೆದು ಕಟ್ಟಿದ್ದರು. ಆ ನಂತರ ನಾನು ಮನೆಯ ಕಿಟಕಿಯ ಬಳಿ ಬಂದು ನೋಡಲಾಗಿ ಕಿಟಿಕಿಯನ್ನು ಯಾರೋ ಕೆಲವರು ಅದುಮಿಕೊಂಡಿದ್ದರು. ನಂತರ ನಾನು ಮನೆಯ ಲೈಟ್‌ ಅನ್ನು ಹಾಕಲಾಗಿ, ಮನೆಯ ಹೊರಗಡೆ ಇದ್ದವರೆಲ್ಲಾ ಮನೆಯವರು ಎದ್ದರೆಂತಾ ಮಾತನಾಡಿಕೊಂಡು ಯಾವುದೋ ಒಂದು ವಾಹನದಲ್ಲಿ ಹೊರಟು ಹೋದರು, ವಾಹನದ ಶಬ್ದ ನನಗೆ ಕೇಳಿಸಿತು. ನಂತರ ನಾನು ಜೋರಾಗಿ ಕಿರುಚಿಕೊಳ್ಳಲಾಗಿ ಗ್ರಾಮಸ್ಥರುಗಳಾದ ಜಯಣ್ಣ ಬಿನ್ ಹನುಮಂತಯ್ಯ ಹಾಗೂ ಇತರರು ಬಂದು ಬಾಗಿಲಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದರು. ನಂತರ ನಾನು ಹೊರಗೆ ಬಂದು ಮನೆಯ ಪಕ್ಕದಲ್ಲಿಯೇ ಇದ್ದ ಕೊಟ್ಟಿಗೆಗೆ ಹೋಗಿ ನೋಡಲಾಗಿ, 28 ಕುರಿಗಳು ಹಾಗೂ ಒಂದು ಮೇಕೆಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂತು. ಸದರಿ 28 ಕುರಿಗಳು ಮತ್ತು ಒಂದು ಮೇಕೆಯ ಬೆಲೆಯನ್ನು ತಿಳಿಯಬೇಕಾಗಿರುತ್ತೆ. ಆದ್ದರಿಂದ ನನ್ನ ಬಾಬ್ತು 28 ಕುರಿಗಳು ಹಾಗೂ ಒಂದು ಮೇಕೆಯನ್ನು ಕಳ್ಳತನದಿಂದ ಕಳವು ಮಾಡಿಕೊಂಡು ಹೋಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

 Thursday, 23 March 2017

Crime Incidents 23-03-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಯು.ಡಿ.ಆರ್‌ .ನಂ; 10/2017 ಕಲಂ; 174 , ಸಿ.ಆರ್ .ಪಿ.ಸಿ

ದಿನಾಂಕ-22-03-2017 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಪಿರ್ಯಾದಿ ಶಶಿಕಲಾ ಕೋಂ ಲೇಟ್‌ ಶ್ರೀನಿವಾಸ, 25 ವರ್ಷ, ಬಣಜಿಗರು, ಮನೆಕೆಲಸ, ಶಾಂತಿ ನಗರ, ಹುಲಿಯೂರುದುರ್ಗ ಟೌನ್, ಕುಣಿಗಲ್‌ ತಾಲ್ಲೋಕು ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ನನ್ನ ಗಂಡ ಶ್ರೀನಿವಾಸ್‌ ರವರನ್ನು ಮದುವೆಯಾಗಿ ಸುಮಾರು 5 ವರ್ಷಗಳಾಗಿದ್ದು ನಾವು ಗೋಬಿ ಮಂಚೂರಿ ಗಾಡಿಯನ್ನು ಮಾಡಿಕೊಂಡು ವ್ಯಾಪಾರ ಮಾಡಿಕೊಂಡಿದ್ದೆವು. ಆದರೆ ನನ್ನಗಂಡ ಶ್ರೀನಿವಾಸ್‌ ರವರು ಜೀವನದಲ್ಲಿ ಜಿಗುಪ್ಸೆಗೊಂಡು ಕಳೆದ 2-3 ವರ್ಷಗಳಿಂದ ವ್ಯಾಪಾರದಲ್ಲಿ ತೊಂದರೆಯಾಗಿ ಕೈಸಾಲ ಮಾಡಿಕೊಂಡು ಅನೇಕ ಬಾರಿ ನೇಣುಹಾಕಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ದಿನಾಂಕ-22-03-2017 ರಂದು ನಾನು ಅಂಗಡಿಗೆ ಹೋಗಿಬರಲು ಹೋಗಿರುವಾಗ್ಗೆ ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ತೊಲೆಗೆ ನೇಣುಹಾಕಿಕೊಂಡಿರುತ್ತಾರೆ. ನಾನು ಅಂಗಡಿಯಿಂದ ಬಂದ ಮೇಲೆ ಮನೆಯ ಬಾಗಿಲನ್ನು ತೆಗೆಯದಿರುವುದನ್ನು ನೋಡಿ ಕಿರುಚಿಕೊಂಡಾಗ ಮನೆಯ ಅಕ್ಕಪಕ್ಕದವರು ಬಂದು ಬಾಗಿಲನ್ನು ತೆಗೆದು ನೋಡಿಗಾದ ನೇಣು ಹಾಕಿಕೊಂಡಿರುವುದು ಕಂಡು ಬಂದಿತು. ನಂತರ ನಾವು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈಧ್ಯರು ನನ್ನ ಗಂಡ ಮೃತಪಟ್ಟಿರುವುದಾಗಿ ತಿಳಿಸಿದರು. ನನ್ನ ಗಂಡನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಗಂಡ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಹಾಕಿಕೊಂಡು ಮೃತಪಟ್ಟಿರುತ್ತಾರೆ. ತಾವು ಸ್ಥಳಕ್ಕೆ ಬಂದು ಮುಂದಿನ ಕ್ರಮವನ್ನು ಜರುಗಿಸುವಂತೆ ನೀಡಿದ ದೂರಿನ ಅಂಶವಾಗಿರತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 63/2017 ಕಲಂ; 279, 337 ಐ.ಪಿ.ಸಿ.

ದಿನಾಂಕ-22-03-2017 ರಂದು ರಾತ್ರಿ 7-15 ಗಂಟೆ ಸಮಯದಲ್ಲಿ ಪಿರ್ಯಾದಿ ಹೆಚ್.ಜಿ ರಮೇಶ ಬಿನ್ ಗೋವಿಂದರಾಜು, 26 ವರ್ಷ, ವಕ್ಕಲಿಗರು, ಟಿ.ಹೊಸಹಳ್ಳಿ, ಕಸಭಾ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-10-03-2017 ರಂದು ನಮ್ಮ ತಂದೆಯವರಾದ ಗೋವಿಂದರಾಜು ರವರು ಅವರ ಸ್ನೇಹಿತ ಎಂ.ಜಿ ಯೋಗೀಶ್‌ ರವರು ಚಾಲನೆಮಾಡುತ್ತಿದ್ದ ಕೆಎ-41-ಇಇ-3878 ನೇ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಮಾದಪ್ಪನಹಳ್ಳಿ ಗ್ರಾಮದಿಂದ ಕಾರ್ಯಕ್ರಮವನ್ನು ಮುಗಿಸಿಕೊಂಡು ಟಿ.ಹೊಸಹಳ್ಳಿ ಗೆ ಮನೆಗೆ ಬರುವಾಗ ಗೊಲ್ಲರಹಟ್ಟಿಯ ಬಳಿಯಲ್ಲಿ ನಮ್ಮ ತಂದೆ ಕುಳಿತಿದ್ದ ದ್ವಿಚಕ್ರ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಮುಂದೆ ಹೋಗುತ್ತಿದ್ದ ವಾಹನವನ್ನು ಓವರ್‌ ಟೇಕ್‌ ಮಾಡಲು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-05-ಇಯು-6536 ನೇ ಸಿಟಿ-100 ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮವಾಗಿ ಎರಡು ವಾಹನಗಳು ಜಖಂ ಗೊಂಡು ನಮ್ಮ ತಂದೆ ಕುಳಿತಿದ್ದ ವಾಹನವು ಕೆಳಗೆಬಿದ್ದು ನಮ್ಮ ತಂದೆಯ ಎದೆ, ತಲೆ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯವಾಗಿದ್ದು ಬಲಗಾಲಿನ ಮೂಳೆ ಮುರಿದಿರುತ್ತದೆ. ಕೂಡಲೇ ನಾವು ನಮ್ಮ ತಂದೆಯನ್ನು ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡುಹೋಗಿ ಪ್ರಥಮ ಚಕಿತ್ಸೆಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ, ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಸೇರಿಸಿ ನಂತರ ವೈಧ್ಯರ ಸಲಹೆಯ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಓಳರೋಗಿಯಾದಿ ದಾಖಲು ಪಡಿಸಿರುತ್ತೇವೆ. ನಾನು ನಮ್ಮ ತಂದೆಗೆ ಚಿಕಿತ್ಸೆಕೊಡಿಸಿ  ಠಾಣೆಗೆ ಹಾಜರಾಗಿ ದೂರುನೀಡುವಲ್ಲಿ ತಡವಾಗಿದ್ದು, ನಮ್ಮ ತಂದೆಗೆ ಅಪಘಾತಪಡಿಸಿದ ಕೆಎ-41-ಇಇ-3878 ನೇ ದ್ವಿಚಕ್ರ ವಾಹನ ಚಾಲಕನ ಮೇಲೆ ಕಾನೂನು ಕ್ರಮವನ್ನು ಜರುಗಿಸುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 67/2017 ಕಲಂ 279, 337 ಐಪಿಸಿ 134(A&B),187 ಐಎಂವಿ ಆಕ್ಟ್

ದಿನಾಂಕ:22/03/2017 ರಂದು ರಾತ್ರಿ 9-00 ಗಂಟೆಗೆ ಗುಬ್ಬಿ ತಾಲ್ಲೋಕ್ ಚೇಳೂರು ಹೋಬಳಿ ಸಿ.ನಂದಿಹಳ್ಳಿ ಗ್ರಾಮದ ಮಂಜುನಾಥ ಬಿನ್ ಗುರುಸಿದ್ದಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:19/02/2017 ರಂದು ನಮ್ಮ ತಂದೆಯವರಾದ ಗುರುಸಿದ್ದಯ್ಯ ರವರು ಕೆಲಸದ ನಿಮಿತ್ತ KA-06-EP-5475ನೇ TVS WEGO ದ್ವಿಚಕ್ರ ವಾಹನದಲ್ಲಿ ತುಮಕೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಬರುವಾಗ ತುಮಕೂರು-ಗುಬ್ಬಿ NH 206 ರಸ್ತೆಯಲ್ಲಿರುವ ಪ್ರಕೃತಿ ಸಾಲ್ವೆಕ್ಸ್ ನಲ್ಲಿ ತಮ್ಮ ಸ್ನೇಹಿತರನ್ನು ಮಾತನಾಡಿಸಲು ಹೋಗುವ ಸಲುವಾಗಿ ಸಂಜೆ 7-00 ಗಂಟೆ ಸಮಯದಲ್ಲಿ ನಿಂತಿದ್ದಾಗ ತುಮಕೂರು ಕಡೆಯಿಂದ KA-50-W-4212 ನೇ ಪಲ್ಸರ್ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ತಂದೆಯವರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದ್ದರಿಂದ ನಮ್ಮ ತಂದೆಯವರು ವಾಹನ ಸಮೇತ ಕೆಳಗೆ ಬಿದ್ದಿದ್ದರಿಂದ ತಲೆಯ ಭಾಗಕ್ಕೆ, ಕೈ-ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಶಿವಮೂರ್ತಿರವರು & ಇತರೆಯವರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ ಬಗ್ಗೆ ದೂರವಾಣಿ ಮೂಲಕ ತಿಳಿಸಿದ್ದು, ನಾನು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿರುತ್ತೇನೆ. ಅಪಘಾತಪಡಿಸಿದ KA-50-W-4212 ನೇ ಪಲ್ಸರ್ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ನಿಲ್ಲಿಸದೇ ಹೊರಟುಹೋಗಿರುತ್ತಾನೆ. ಈತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  44/2017 ಕಲಂ 279, 337 ಐಪಿಸಿ

ದಿನಾಂಕ:22/03/2017 ರಂದು ಮದ್ಯಾಹ್ನ 14-30 ಗಂಟೆಗೆ ಪಿರ್ಯಾದಿ ಶಿವಣ್ಣ ಬಿನ್ ಸಿದ್ದಬಸವಯ್ಯ, ಸುಮಾರು 44 ವರ್ಷ, ಕುರುಬರು, ಪ್ರಕಾಶ ಬಸ್ ನಲ್ಲಿ ಚಾಲಕನ ಕೆಲಸ, ನಂದಿಹಳ್ಳಿ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ   ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು  ಕಳೆದ ಸುಮಾರು ಒಂದು ವರ್ಷದಿಂದ ಪ್ರಕಾಶ ಬಸ್ ನಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ: 20/03/2017 ರಂದು ಮಧ್ಯಾಹ್ನ ನಾನು ಪ್ರಕಾಶ ಬಸ್ ನ್ನು ಓಡಿಸಿಕೊಂಡು ಚಿ.ನಾ.ಹಳ್ಳಿಯಿಂದ ಶೆಟ್ಟಿಕೆರೆ ಮಾರ್ಗವಾಗಿ ತಿಪಟೂರಿಗೆ ಬರುತ್ತಿರುವಾಗ ಮಧ್ಯಾಹ್ನ ಸುಮಾರು 2-15 ಗಂಟೆ ಸಮಯದಲ್ಲಿ ತಿಪಟೂರು ತಾಲ್ಲೂಕು ಕಲ್ಲೇಗೌಡನಪಾಳ್ಯ ಸಮೀಪ ರಾಮಶೆಟ್ಟಿಹಳ್ಳಿ ಗೇಟ್ ಹತ್ತಿರ KA 44 M 3341 ನೇ ಮಾರುತಿ ರಿಟ್ಜ್‌ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ನನ್ನ ಬಸ್‌ ಗೆ ಓವರ್ ಟೇಕ್ ಮಾಡಿಕೊಂಡು ಹೋದನು. ಇದೇ ಸಮಯಕ್ಕೆ ಎದುರುಗಡೆ ತಿಪಟೂರು ಕಡೆಯಿಂದ KA 03 ER 8684 ನೇ ಹೀರೋಹೊಂಡಾ ಪ್ಯಾಷನ್ ಪ್ಲಸ್ ಬೈಕಿನ ಚಾಲಕ ಅತಿವೇಗವಾಗಿ ಶೆಟ್ಟಿಕೆರೆ ಕಡೆಗೆ ಓಡಿಸಿಕೊಂಡು ಬಂದಾಗ ಮೇಲ್ಕಂಡ ಕಾರಿಗೂ ಹಾಗೂ ಬೈಕಿಗೂ ಡಿಕ್ಕಿ ಉಂಟಾಗಿ ಅಪಘಾತ ಉಂಟಾಯಿತು. ಈ ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡು ಬೈಕಿನಲ್ಲಿದ್ದ ಮೂರು ಜನರಿಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾದವು. ನಂತರ ನಾನು ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರು ಸೇರಿ ಗಾಯಾಳುಗಳಿಗೆ ನೀರು ಕುಡಿಸಿ ಉಪಚರಿಸಿ ನಂತರ ಗಾಯಾಳುಗಳ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತಿಪಟೂರು ತಾಲ್ಲೂಕು ಈರಲಗೆರೆ ಗ್ರಾಮದ ವಾಸಿಗಳಾದ ಗಂಗಾಧರ, ಈತನ ತಂದೆ ಸಿದ್ದಬಸಪ್ಪ ಮತ್ತು ತಾಯಿ ಜಯಮ್ಮ ಎಂದು ತಿಳಿದು ಬಂತು. ಆಗ ಗಂಗಾಧರ ನಾವು ಮೂರು ಜನ ರೇಷನ್ ಕಾರ್ಡ್‌ ಫೋಟೋ ತೆಗೆಸಲು ಹುಚ್ಚಗೊಂಡನಹಳ್ಳಿ ಗೆ ಹೋಗಿ ನಂತರ ವಾಪಸ್ಸು ಈರಲಗೆರೆಗೆ ಹೋಗುತ್ತಿದ್ದೆವು ಎಂದು ತಿಳಿಸಿದನು. ಕಾರಿನ ಚಾಲಕನ ಹೆಸರು ವಿಳಾಸ ತಿಳಿಯಲಾಗಿ ಮಂಜುನಾಥ, ಕಲ್ಲೇಗೌಡನಪಾಳ್ಯ ಎಂದು ತಿಳಿಯಿತು. ನಂತರ ಗಾಯಾಳುಗಳನ್ನು ಕಾರಿನ ಚಾಲಕ ಮಂಜುನಾಥರವರೇ ತಿಪಟೂರು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದರು. ಈ ಅಪಘಾತವು ಮೇಲ್ಕಂಡ ಕಾರಿನ ಚಾಲಕ ಮಂಜುನಾಥ ಮತ್ತು ಬೈಕಿನ ಚಾಲಕ ಗಂಗಾಧರ ರವರ ಅತಿವೇಗ ಮತ್ತು ಅಜಾಗರೂಕತೆಯ ವಾಹನ ಚಾಲನೆಯಿಂದ ಉಂಟಾಗಿರುತ್ತೆ.  ನಂತರ ಈಗ ವಿಚಾರ ತಿಳಿಯಲಾಗಿ ಗಾಯಾಳುಗಳಾದ ಗಂಗಾಧರ್, ಸಿದ್ದಬಸಪ್ಪ ಮತ್ತು ಜಯಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ ಎಂದು ತಿಳಿದಿರುತ್ತೆ. ನಾನು ಎರಡು ದಿನಕ್ಕೊಮ್ಮೆ ಈ ರೂಟ್ ನಲ್ಲಿ ಬಸ್ಸನ್ನು ಓಡಿಸಿಕೊಂಡು ಬರುತ್ತಿದ್ದು ಹಾಗೂ ನಮ್ಮ ಊರಿನಲ್ಲಿ ದೇವರ ಕಾರ್ಯ ಇದ್ದುದರಿಂದ ನಾನು ಈ ದಿವಸ ತಡವಾಗಿ ಪೊಲೀಸ್ ಠಾಣೆಗೆ ಬಂದು ಮೇಲ್ಕಂಡ ಮಂಜುನಾಥ ಮತ್ತು ಗಂಗಾಧರ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ.

 

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 34/2017 u/s 380  IPC

ದಿನಾಂಕ:- 21/03/2017 ರಂದು ಸಾಯಂಕಾಲ 04-10 ಗಂಟೆಗೆ ಶ್ರೀಮತಿ ಶಾವೆ ಸುಲ್ತಾನ  ಕೋಂ ಅಪ್ಸರ್ ಅನ್ವರ್ ಸಾಬ್, ವಾಸ :- 3ನೇ ಕ್ರಾಸ್ , ಬಾಲಾಜಿ ಹಾರ್ಡ್ ವೇರ್ ಹಿಂಭಾಗ,  ಗಂಗೋತ್ರಿನಗರ, ತುಮಕೂರು ರವರು  ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೆನೆಂದರೆ ದಿನಾಂಕ: 21/03/2017 ರಂದು ಬೆಳಿಗ್ಗೆ ಸುಮಾರು 08-45 ಗಂಟೆಗೆ ಅಪರಿಚಿತ ಮಹಿಳೆಯೊಬ್ಬಳು ಪಿರ್ಯಾದಿ  ಮನೆಗೆ ಕೆಲಸ ಕೇಳಿಕೊಂಡು ಬಂದಿದ್ದು  ಅವರನ್ನು ಹಾಲ್‌ ನಲ್ಲಿ ಕುಳ್ಳಿರಿಸಿ ಬೆಳಗ್ಗೆ 10-00 ಗಂಟೆಯಲ್ಲಿ ಅಪರಿಚಿತ ಮಹಿಳೆಯು ಕಾಣದೇ ಇದ್ದುದರಿಂದ ಗಾಬರಿಯಾಗಿ ಮನೆಯಲ್ಲಿ ಪರಿಶೀಲಿಸಲಾಗಿ ಪಿರ್ಯಾದಿ ಸೊಸೆ ಹುಸ್ಮಾ ಕೌಸರ್ ರೂಂನಲ್ಲಿನನ ಬೀರುವಿನಲ್ಲಿದ್ದ ಚಿನ್ನದ ವಡವೆಗಳು ನಾಪತ್ತೆಯಾಗಿದ್ದು ಸದರಿ ಒಡವೆಗಳನ್ನು ಅಪರಿಚಿತ ಮಹಿಳೆಯು ಕಳವು ಮಾಡಿಕೊಂಡು ಹೋಗಿರುತ್ತಾಳೆಂದು ನೀಡಿದ ದೂರುWednesday, 22 March 2017

Crime Incidents 22-03-17

ಹೊನ್ನವಳ್ಳಿ  ಪೊಲೀಸ್‌ ಠಾಣೆ ಮೊ,ನಂ-33/2017 ಕಲಂ-323 324 504 506 ರೆ,ವಿ 34 ಐಪಿಸಿ

ದಿನಾಂಕ-21/03/2017 ರಂದು ಮಧ್ಯಾಹ್ನ 04-00 ಗಂಟೆಯಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಮೀಸೆತಿಮ್ಮನಹಳ್ಳಿ ಗ್ರಾಮದ ಯೋಗೀಶ ಬಿನ್ ಗಂಗಾನಾಯಕ ರವರು ನೀಡಿದ ಹೇಳಿಕೆ ಅಂಶವೇನೆಂದರೆ. ಪಿರ್ಯಾದಿಯ ತಂದೆ ಗಂಗಾನಾಯಕ ಮತ್ತು ತಮ್ಮ ಗ್ರಾಮದ ಕರೀನಾಯಕರವರಿಗೆ ಕಲ್ಕೆರೆ ಗ್ರಾಮದ ಸರ್ವೆ ನಂ-94 ರಲ್ಲಿ ಇರುವ ಹುಣಸೇ ಮರದ ವಿಚಾರವಾಗಿ ಮತ್ತು ಹಣ್ಣನ್ನು ಬಡಿದುಕೊಳ್ಳುವ ವಿಚಾರವಾಗಿ ತಕರಾರು ಇದ್ದು ಪಿರ್ಯಾದಿಯ ಅಕ್ಕ ಚಂದ್ರಮ್ಮಳಿಗೆ  ಈ ಹುಣಸೇ ಮರದ ಹಣ್ಣನ್ನು ಬಡಿದುಕೊಳ್ಳಲು 5000 ರೂಗೆ ಮಾರಿದ್ದು ದಿನಾಂಕ-21/03/2017 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಚಂದ್ರಮ್ಮಳು ಹುಣಸೇ ಹಣ್ಣನು ಬಡಿಯುವಾಗ ತಮ್ಮ ಗ್ರಾಮದ ಸುಜಾತಮ್ಮ ಆಕೆಯ ಗಂಡ ಕರೀನಾಯಕ ಮತ್ತು ಇವರ ಮಗ ರಂಗಸ್ವಾಮಿ ರವರುಗಳು ಹುಣಸೇ ಹಣ್ಣು ಬಡಿಯವುದು ಏಕೆ ಎಂದು ಜಗಳ ತೆಗೆದು ಸುಜಾತಮ್ಮಳು ಚಂದ್ರಮ್ಮಳಿಗೆ ಅವಾಚ್ಯವಾಗಿ ಬೈಯ್ಯುವಾಗ ಪಿರ್ಯಾದಿ ತನ್ನತಂದೆ ಗಂಗಾನಾಯಕನೊಂದಿಗೆ ಕೇಳಲು ಹೋದಾಗ ಸುಜಾತಮ್ಮಳ ಗಂಡ ಕರೀನಾಯಕ ಮತ್ತು ಮಗ ರಂಗಸ್ವಾಮಿಯವರು ಸೇರಿಕೊಂಡು ಅಲ್ಲೇ ಬಿದ್ದಿದ್ದ ಕಲ್ಲಿನಿಂದ ಪಿರ್ಯಾದಿಯ ತಲೆ ಮುಂಭಾಗಕ್ಕೆ, ಎದೆಗೆ ಹೊಡೆದು ಗಾಯಪಡಿಸಿದರು ಮತ್ತು ತಂದೆ ಗಂಗಾನಾಯಕರಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು ನಮ್ಮ ಮತ್ತು ಹುಣಸೇ ಮರದ ತಂಟೆಗೆ ಬಂದರೆ ಕೊಲೆ ಮಾಡುತ್ತೇನೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ ನಂತರ ಗಾಯಗೊಂಡ  ನಾವುಗಳು 108 ವಾಹನ ಕರೆಯಿಸಿಕೊಂಡು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿರುತ್ತೇವೆ ಹುಣಸೇ ಮರದ ವಿಚಾರದಲ್ಲಿ ಗಲಾಟೆ ಮಾಡಿ ಹೊಡೆದ ಮೇಲ್ಕಂಡ ಮೂವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆಯ್ನು ಪಡೆದು ವಾಪಸ್ ಠಾಣೆಗೆ ಸಂಜೆ 05-00 ಗಂಟೆಗೆ ಬಂದು ಪ್ರಕರಣ ದಾಖಲಿಸಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  30/2017   ಕಲಂ: 78 Cls 3 Kp Act

ದಿನಾಂಕ:20/03/2017 ರಂದು ಸಂಜೆ 7:00 ಗಂಟೆ ಸಮಯದಲ್ಲಿ ವೈ ಎನ್ ಹೊಸಕೋಟೆ ಠಾಣಾ ಸರಹದ್ದು ತಿಪ್ಪಗಾನಹಳ್ಳಿ  ಗ್ರಾಮದ ಅರಳೀಕಟ್ಟೆ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ಪಂಚಾಯ್ತರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ  ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ತಿಪ್ಪಗಾನಹಳ್ಳಿ  ಗ್ರಾಮದ   ಅರಳೀಕಟ್ಟೆ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ  ಒಬ್ಬ  ಆಸಾಮಿಯು  ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಬನ್ನಿ 1 ರೂಗೆ 70 ರೂ ಕೊಡುತ್ತೇವೆ ನಿಮ್ಮ ಅದೃಷ್ಟದ  ನಂಬರ್ ಅನ್ನು ಬರೆಸಿಕೊಳ್ಳಿ ಎಂತ ಕೂಗುತ್ತಾ   ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದು   ನಂತರ ನಾನು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ನೆರೆದಿದ್ದ ಜನರು ಜನರು ಓಡಿ ಹೋಗಿದ್ದು ,ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದ   ಆಸಾಮಿಯನ್ನು ಹಿಡಿದು  ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮೂಡಲಗಿರಿಯಪ್ಪ ಬಿನ್ ಗೋವಿಂದಪ್ಪ, 55 ವರ್ಷ, ಪ.ಜಾತಿ.  ತಿಪ್ಪಗಾನಹಳ್ಳಿ ಗ್ರಾಮ,ಪಾವಗಡ ತಾ|| ಎಂತ ತಿಳಿಸಿದ್ದು ಆತನ ಬಳಿ ಇದ್ದ ಮಟ್ಕಾ ಜೂಜಾಟಕ್ಕೆ ಕಟ್ಟಿಸಿಕೊಂಡಿದ್ದ 610=00 ರೂ ನಗದು ಹಣ, ಮಟ್ಕಾ ನಂಬರ್ ಗಳನ್ನು ಬರೆದಿರುವ ಒಂದು  ಮಟ್ಕಾ ನಂಬರ್ ಬರೆದಿರುವ  ಚೀಟಿಗಳನ್ನು  ಹಾಗೂ ಒಂದು ಲೆಡ್ ಪೆನ್ ನ್ನು ಪಂಚರ ಸಮಕ್ಷಮ ಪಂಚನಾಮೆ ಮುಖೇನ ವಶಪಡಿಸಿಕೊಂಡು   ಪ್ರಕರಣ ದಾಖಲಿಸಿದೆ


Page 1 of 4
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 70 guests online
Content View Hits : 322827