lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

  : : ಪತ್ರಿಕಾ ಪ್ರಕಟಣೆ : : ::   ದಿನಾಂಕ: 21-09-2017 : : ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ, ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ... >> :- ಪತ್ರಿಕಾ ಪ್ರಕಟಣೆ   :- ದಿನಾಂಕ: 19-09-2017.   ದಿನಾಂಕ:19-09-2017 ರಂದು ಬೆಳಿಗಿನ ಜಾವ... >> ::  Press Note  :: Date : 15-09-17   ಹೆಬ್ಬೂರು ಪೊಲೀಸ್ ಠಾಣೆಯ ಮೊ ನಂ -158/2017 ಕಲಂ 379 ಐಪಿಸಿ ಪ್ರಕರಣದ ಸಂಬಂಧ... >> :: ಪತ್ರಿಕಾ ಪ್ರಕಟಣೆ   ::   : ದಿನಾಂಕ 11/09/2017  :   ದಿನಾಂಕ 02/09/2017 ರಂದು ದಂಡಿನಶಿವರ ಪೊಲೀಸ್... >> :: ಪತ್ರಿಕಾ ಪ್ರಕಟಣೆ :: ದಿನಾಂಕ: 29.08.2017 ಕೋರ ಪೊಲೀಸ್ ಠಾಣಾ ಮೊ.ನಂ. 154/2017 ಕಲಂ: 379, 511 ಐಪಿಸಿ ... >> ಪತ್ರಿಕಾ ಪ್ರಕಟಣೆ ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ ಹಬ್ಬದ... >> ದಿನಾಂಕ 23-08-2017 ರಂದು ತುಮಕೂರು ಜಿಲ್ಲಾ  ಹೆಚ್ಚುವರಿ ಪೊಲೀಸ್‌ ಆಧೀಕ್ಷಕರಾಗಿ ಶೋಭರಾಣೆ ... >> ಪತ್ರಿಕಾ ಪ್ರಕಟಣೆ. 48 ಗಂಟೆಗಳಲ್ಲಿ    ಕೊಲೆ ಆರೋಪಿಯ ಬಂಧನ ******* ದಿನಾಂಕ 08/08/2017 ರಂದು... >> :: ಪತ್ರಿಕಾ ಪ್ರಕಟಣೆ :: ಬೆಂಗಳೂರು ನಗರದ ಸಿಪಿಸಿ/ಮಪಿಸಿ ಹುದ್ದೆಗಳ ನೇಮಕಾತಿ ಸಂಬಂಧ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< August 2017 >
Mo Tu We Th Fr Sa Su
  1 2 3 4 5 6
7 8 9 10 11 12 13
14 15 16 17 18 19 20
21 23 24 25 26 27
28 29 30 31      
Tuesday, 22 August 2017
Crime Incidents 22-08-17

ಕಳ್ಳಂಬೆಳ್ಳ ಪೊಲೀಸ್ ಠಾಣಾ 14/17 ಕಲಂ 174 CRPC

ದಿನಾಂಕ: 21/8/2017 ರಂದು ಪಿರ್ಯಾದಿ ಠಾಣೆಗೆ ಹಾಜರಾಗಿ ನನ್ನ 3ನೇ ಮಗ ಗೋಪಾಲಕೃಷ್ಣ ಎಂಬುವನು ಈಗ್ಗೆ 4 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದು, ಈತನು ಯಾವುದೇ ಕೆಲಸಕಾರ್ಯಗಳನ್ನು ಮಾಡದೆ ಸೋಮಾರಿಯಾಗಿದ್ದು ಪಿರ್ಯಾದಿ ಮತ್ತು ಮನೆಯವರು ಎಷ್ಟೇ ಬುದ್ದಿಹೇಳಿದರು ಸಹ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು, ಬೇಜಾರುಮಾಡಿಕೊಂಡು ಈದಿನ ಸಂಜೆ 5-15 ಗಂಟೆಯಲ್ಲಿ ಮನೆಯಲ್ಲಿದ್ದ  ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಕುಡಿದಿದ್ದು ಈತನು ಸಿರಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಗುಣಮುಖನಾಗದೇ ಸಂಜೆ 6-40 ಗಂಟೆಯಲ್ಲಿ ಮೃತಪಟ್ಟಿರುತ್ತಾನೆ. ಸಾವಿನ ಬಗ್ಗೆ ಯಾವುದೇ ಅನುಮಾನ ಇರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಿ ಅಂತ ಪಿರ್ಯಾದು

ಹೊಸಬಡಾವಣೆ ಪೊಲೀಸ್ ಠಾಣಾ UDR 09/2017  U/S 174 (c) CrPC

ದಿ: 20-08-2017 ರಂದು ಮೃತೆ ಪೂರ್ಣೀಮಾ ಕಜೋಂ ನಾಗರಾಜು, (24) ವಾಸ 9ನೇ ಕ್ರಾಸ್, ಎಸ್.ಎಸ್. ಪುರಂ, ತುಮಕೂರು ರವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಲು ಹೋಗುವಾಗ್ಗೆ ಮೃತಪಟ್ಟಿರುತ್ತಾರೆಂದು ಆಕೆಯ ಗಂಡ ನಾಗರಾಜು ರವರು ಬಡಾವಣೆಯಲ್ಲಿ ತಿಳಿಸಿ ಈ ದಿವಸ ದಿನಾಂಕ : 21-08-2017 ರಂದು ಶವವನ್ನು ಬನಶಂಕರಿಯ  ಸಾರ್ವಜನಿಕ ಸ್ಮಶಾನದಲ್ಲಿ ದಫನ್ ಮಾಡಿದ್ದು ಆಕೆಯ ಸಾವಿನ ವಿಚಾರದಲ್ಲಿ ಅನಾಮಧೇಯ ವ್ಯಕ್ತಿಯು ಠಾಣೆಗೆ ಕರೆ ಮಾಡಿ ಸಂಶಯ ವ್ಯಕ್ತಪಡಿಸಿದ್ದರಿಂದ ಪಿರ್ಯಾದಿ ಶ್ರೀ ಕಾಂತರಾಜು. ಎ.ಎಸ್.ಐ ಹೊಸ ಬಡಾವಣೆ ಪೊಲೀಸ್ ಠಾಣೆ ರವರು ಸ್ಥಳಕ್ಕೆ ಹೋಗಿ ವಿಚಾರ ಮಾಡಲಾಗಿ ಸ್ಥಳದಲ್ಲಿನ ನಿವಾಸಿಗಳು ಸಹಾ ಪೂರ್ಣೀಮಾ ರವರ ಸಾವಿನ ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸಿರುವುದರಿಂದ ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿರುತ್ತದೆ

 

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 177/2017 ಕಲಂ-279, 304(ಎ) ಐಪಿಸಿ ರೆ/ವಿ 187 ಐ.ಎಂ.ವಿ ಆಕ್ಟ್

ದಿನಾಂಕ:21/08/2017 ರಂದು ಬೆಳಿಗ್ಗೆ 6-30 ಗಂಟೆಗೆ ಠಾಣೆಗೆ ಹಾಜರಾಗಿ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಂಗನಾಥ. ಎಂ. ಎ.ಎಸ್.ಐ ರವರು ನೀಡಿದ ವರದಿ ಅಂಶವೇನೆಂದರೆ ದಿನಾಂಕ:20/08/2017 ರಂದು ರಾತ್ರಿ 9-00 ಗಂಟೆಯಿಂದ ದಿ:21/08/2017 ರಂದು ಬೆಳಿಗ್ಗೆ 6-00 ಗಂಟೆಯವರೆಗೆ ಠಾಣಾ ಸರಹದ್ದಿನಲ್ಲಿ ರಾತ್ರಿ ಹೈವೇ ಗಸ್ತಿಗೆ ನೇಮಿಸಿದ್ದು, ನೇಮಕದಂತೆ ನಾನು ಠಾಣಾ ಸರಹದ್ದಿನ ದೊಡ್ಡಾಲದಮರ, ಜೋಗಿಹಳ್ಳಿ, ಕುಂಟೇಗೌಡನಹಳ್ಳಿ ಗೇಟ್. ಕಠಾವೀರನಹಳ್ಳಿ ಗೇಟ್ ಕಡೆ ಗಸ್ತು ಮಾಡಿಕೊಂಡು ಗಾಂಧಿನಗರ ಕಡೆ ಗಸ್ತು ಮಾಡಿಕೊಂಡು ಕರೇಜವನಹಳ್ಳಿ ಟೋಲ್ ಗೇಟ್ ಕಡೆ ಬೆಳಗಿನ 4-15 ಗಂಟೆಯ ಸಮಯದಲ್ಲಿ ಗಸ್ತು ಮಾಡುತ್ತಿರುವಾಗ್ಗೆ, ಹೈವೇ ಮೊಬೈಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಎಸ್.ಐ ಸಿದ್ದಾರ್ಥ ರವರು ಫೋನ್ ಮಾಡಿ ಶಿರಾ-ತುಮಕೂರು ಎನ್.ಹೆಚ್-48 ರಸ್ತೆಯ ತರೂರು ಗೇಟ್ ಬಳಿ ಯಾವುದೋ ವಾಹನ ಒಬ್ಬ ವ್ಯಕ್ತಿಗೆ ಢಿಕ್ಕಿ ಹೊಡೆಸಿ ಹೊರಟು ಹೋಗಿದ್ದು ವಾಹನವನ್ನು ಚಾಲಕ ನಿಲ್ಲಿಸದೇ ತೆಗೆದುಕೊಂಡು ಹೊರಟು ಹೋಗಿರುತ್ತಾನೆ. ಎಂದು ವಿಚಾರ ತಿಳಿಸಿದಾಗ ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಶಿರಾ-ತುಮಕೂರು ರಸ್ತೆಯ ಢಿವೈಢರ್ ಪಕ್ಕದ 1 ನೇ ಟ್ರ್ಯಾಕ್ ನಲ್ಲಿ ಅಪಘಾತವಾಗಿದ್ದು ಸ್ಥಳದಲ್ಲಿ ಒಬ್ಬ ಆಸಾಮಿಯು ಬಿದ್ದಿದ್ದು ತಲೆಗೆ ಮತ್ತು ಬಲಪಕ್ಕೆಗೆ ತೀವ್ರ ಪೆಟ್ಟು ಬಿದ್ದು ಮೈ ಕೈಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿದ್ದು ಆಸಾಮಿಯು ಉಸಿರಾಡುತ್ತಿದ್ದು ನಾವುಗಳು ಸದರಿ ಆಸಾಮಿಯನ್ನು ಉಪಚರಿಸಿ ಅಷ್ಟರಲ್ಲಿ ಸ್ಥಳಕ್ಕೆ ಬಂದ ಎನ್.ಹೆಚ್.ಐ ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು, ನಂತರ ಆಸಾಮಿಯನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದ ಎನ್.ಹೆಚ್.ಐ ಆಂಬುಲೆನ್ಸ್ ಸಿಬ್ಬಂದಿ ವಿಜಯಕುಮಾರ್ ರವರು ಈ ದಿನ ಬೆಳಗಿನ ಜಾವ 5-15 ಗಂಟೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ಸುಮಾರು 5-45 ಗಂಟೆಯಲ್ಲಿ ವೈದ್ಯರು ಆಸಾಮಿ ಮೃತ ಪಟ್ಟಿರುವುದಾಗಿ ತಿಳಿಸಿದರು ಎಂದು ವಿಚಾರ ತಿಳಿಸಿದರು. ಅಪಘಾತಕ್ಕೆ ಈಡಾದ ಆಸಾಮಿಯು ಸುಮಾರು 50 ರಿಂದ 60 ವರ್ಷ ವಯಸ್ಸಾಗಿದ್ದು, ಸದರಿ ಆಸಾಮಿಯ ದೇಹದ ಮೇಲೆ ಒಂದು ಬಿಳಿ ಬಣ್ಣದ ಸ್ಯಾಂಡು ಬನಿಯನ್, ಒಂದು ಕಪ್ಪು ಕಲರ್ ನ ಅಂಡರ್ ವೇರ್, ನೀಲಿ ಮತ್ತು ಕಪ್ಪು ಚೌಕಳಿ ಪಂಚೆ, ಕೆಂಪು ಬಣ್ಣದ 4 ಎಳೆಯ ಉಡದಾರ ಇರುತ್ತೆ. ತೆಳ್ಳನೆಯ ಶರೀರ, ಕೋಲು ಮುಖ, ತಲೆಯ ಕೂದಲನ್ನು ಬೋಡ ಮಾಡಿಸಿರುತ್ತೆ. ಬಿಳಿ ಮತ್ತು ಕಪ್ಪು ಮಿಶ್ರಿತ ಅರ್ಧ ಸೆಂ ಮೀ ಉದ್ದದ ಕೂದಲು ಇರುತ್ತೆ. ಆಸಾಮಿಯು ಸುಮಾರು 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ, ಎಡಕೈನ ಮೇಲೆ “ರಾಜಣ್ಣ” ಎಂದು ಹಚ್ಚೆ ಗುರುತು ಇರುತ್ತೆ. ಆದ್ದರಿಂದ ಅಪರಿಚಿತ ಸುಮಾರು 50 ರಿಂದ 60 ವರ್ಷ, ವಯಸ್ಸಿನ ಗಂಡಸಿಗೆ ಢಿಕ್ಕಿ ಹೊಡೆಸಿ ಅಪಘಾತ ಪಡಿಸಿ ಮೃತ ಪಡಲು ಕಾರಣನಾಗಿರುವ ಯಾವುದೋ ವಾಹನದ ಚಾಲಕನ ಮೇಲೆ ಕಾನೂನೂ ರಿತ್ಯಾ ಕ್ರಮ ಜರುಗಿಸಿ ಎಂತಾ ಇತ್ಯಾದಿಯಾಗಿ ನೀಡಿದ ದೂರಿನ ಪ್ರಕರಣ ದಾಖಲಿಸಿಕೊಂಡು   ತನಿಖೆ ಕೈಗೊಂಡಿರುತ್ತೆ.


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 17 guests online
Content View Hits : 166186