lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

  : : ಪತ್ರಿಕಾ ಪ್ರಕಟಣೆ : : ::   ದಿನಾಂಕ: 21-09-2017 : : ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ, ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ... >> :- ಪತ್ರಿಕಾ ಪ್ರಕಟಣೆ   :- ದಿನಾಂಕ: 19-09-2017.   ದಿನಾಂಕ:19-09-2017 ರಂದು ಬೆಳಿಗಿನ ಜಾವ... >> ::  Press Note  :: Date : 15-09-17   ಹೆಬ್ಬೂರು ಪೊಲೀಸ್ ಠಾಣೆಯ ಮೊ ನಂ -158/2017 ಕಲಂ 379 ಐಪಿಸಿ ಪ್ರಕರಣದ ಸಂಬಂಧ... >> :: ಪತ್ರಿಕಾ ಪ್ರಕಟಣೆ   ::   : ದಿನಾಂಕ 11/09/2017  :   ದಿನಾಂಕ 02/09/2017 ರಂದು ದಂಡಿನಶಿವರ ಪೊಲೀಸ್... >> :: ಪತ್ರಿಕಾ ಪ್ರಕಟಣೆ :: ದಿನಾಂಕ: 29.08.2017 ಕೋರ ಪೊಲೀಸ್ ಠಾಣಾ ಮೊ.ನಂ. 154/2017 ಕಲಂ: 379, 511 ಐಪಿಸಿ ... >> ಪತ್ರಿಕಾ ಪ್ರಕಟಣೆ ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ ಹಬ್ಬದ... >> ದಿನಾಂಕ 23-08-2017 ರಂದು ತುಮಕೂರು ಜಿಲ್ಲಾ  ಹೆಚ್ಚುವರಿ ಪೊಲೀಸ್‌ ಆಧೀಕ್ಷಕರಾಗಿ ಶೋಭರಾಣೆ ... >> ಪತ್ರಿಕಾ ಪ್ರಕಟಣೆ. 48 ಗಂಟೆಗಳಲ್ಲಿ    ಕೊಲೆ ಆರೋಪಿಯ ಬಂಧನ ******* ದಿನಾಂಕ 08/08/2017 ರಂದು... >> :: ಪತ್ರಿಕಾ ಪ್ರಕಟಣೆ :: ಬೆಂಗಳೂರು ನಗರದ ಸಿಪಿಸಿ/ಮಪಿಸಿ ಹುದ್ದೆಗಳ ನೇಮಕಾತಿ ಸಂಬಂಧ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< August 2017 >
Mo Tu We Th Fr Sa Su
  1 2 3 4 5 6
7 8 9 10 11 12 13
14 15 16 17 18 20
21 22 23 24 25 26 27
28 29 30 31      
Saturday, 19 August 2017
Crime Incidents 19-08-17

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  121/2017 ಕಲಂ 32, 34 ಕೆ ಇ ಆಕ್ಟ್

ದಿನಾಂಕ: 18/08/2017 ರಂದು ಮಧ್ಯಾಹ್ನ ನಾನು ಎಎಸ್‌ಐ ಬಿ.ಶಿವಣ್ಣ  ಸಿಬ್ಬಂದಿಯವರಾದ ಪಿ.ಸಿ. 1011 ಮಧುಸೂದನ್, ಪಿ.ಸಿ. 306 ಗೋಪಾಲ್, ಪಿಸಿ 678 ವೀರೇಶ್, ಎ.ಪಿ.ಸಿ. 162 ನಾಗಭೂಷಣ್ ರವರೊಂದಿಗೆ ಕೆಎ -06- ಜಿ- 421 ನೇ ಪೊಲೀಸ್ ಜೀಪಿನಲ್ಲಿ ತಿಪಟೂರು ತಾಲ್ಲೂಕು ಈಚನೂರು ಬಳಿ ಹೇಮಾವತಿ ನಾಲೆಯ ಪರಿಶೀಲನೆ ಮಾಡಿಕೊಂಡು ಗಸ್ತಿನಲ್ಲಿದ್ದಾಗ ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಈಚನೂರು ಕೆರೆ ಕೋಡಿ ಹತ್ತಿರದ ತಿಪಟೂರು – ಕರಡಾಳು ರಸ್ತೆಯಲ್ಲಿ ಬರುತ್ತಿದ್ದಾಗ ನಮ್ಮ ಎದುರುಗಡೆ ಈಚನೂರು ಕಡೆಯಿಂದ ಕರಡಾಳು ಕಡೆಗೆ ಒಂದು ಬೈಕಿನಲ್ಲಿ ಇಬ್ಬರು ಆಸಾಮಿಗಳು ಎರಡು ಪ್ಲಾಸ್ಟಿಕ್ ಚೀಲಗಳನ್ನು ಇಟ್ಟುಕೊಂಡು ಬರುತ್ತಿದ್ದವರನ್ನು ತಡೆದು ಅವರ ಬಳಿ ಇದ್ದ ಚೀಲಗಳ ಬಗ್ಗೆ ಪ್ರಶ್ನಿಸಲಾಗಿ ಆಸಾಮಿಗಳು ಸಮಂಜಸವಾದ ಉತ್ತರವನ್ನು ನೀಡದೇ ಇದ್ದುದರಿಂದ ನಂತರ ನಾನು ಚೀಲಗಳನ್ನು ಪರಿಶೀಲಿಸಲಾಗಿ ಚೀಲದಲ್ಲಿ ಮದ್ಯದ ಬಾಟಲ್‌ ಗಳಿದ್ದು ಇವುಗಳ ಸಾಗಾಣಿಕೆಯ ಬಗ್ಗೆ ಆಸಾಮಿಗಳನ್ನು ಕೇಳಲಾಗಿ ಹಾಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ವೈನ್ಸ್ ಸ್ಟೋರ್ ಮತ್ತು ಬಾರ್ ಗಳು ಬಂದ್ ಆಗಿದ್ದು, ನಾವು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ಮದ್ಯ ಮಾರಾಟ ಮಾಡಲು ಶಿವಪುರಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. ಆಗ ಅವರಿಗೆ ಮದ್ಯ ಮಾರಾಟ ಮತ್ತು ಸಾಗಾಣಿಕೆ ಮಾಡಲು ಪರವಾನಗಿಯ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲ ಎಂದು ತಿಳಿಸಿದರು. ನಂತರ ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಬೈಕ್ ಓಡಿಸುತ್ತಿದ್ದವನು 1) ಕರಿಯಪ್ಪ @ ಪ್ರತಾಪ್ ಬಿನ್ ರಂಗಪ್ಪ, 29 ವರ್ಷ, ಗೊಲ್ಲರು, ಮರವಂಜಿ, ಉಬ್ರಾಣಿ ಹೋಬಳಿ, ಚನ್ನಗಿರಿ ತಾಲ್ಲೂಕು. ದಾವಣಗೆರೆ ಜಿಲ್ಲೆ ಹಾಲಿ ವಾಸ ನಕ್ಷತ್ರ ಬಾರ್ ನಲ್ಲಿ ಕೆಲಸ, ಈಡೇನಹಳ್ಳಿ ಗೇಟ್, ತಿಪಟೂರು ಟೌನ್ ಎಂದು ತಿಳಿಸಿದ್ದು, ಬೈಕಿನ ಹಿಂಬದಿ ಕುಳಿತಿದ್ದವನು 2) ರವಿಕುಮಾರ್ ಆರ್. ಬಿನ್ ರಾಜಯ್ಯ, 20 ವರ್ಷ, ಆದಿ ಕರ್ನಾಟಕ ಜನಾಂಗ, ಶಿವಪುರ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೂಕು ಎಂದು ತಿಳಿಸಿದನು. ನಂತರ ಬೈಕ್ ಅನ್ನು ಪರಿಶೀಲಿಸಲಾಗಿ ಕೆಎ 44 ಆರ್ 0359 ನೇ ಬಜಾಜ್ ಡಿಸ್ಕವರ್ ಬೈಕ್ ಆಗಿರುತ್ತೆ. ನಂತರ ಪ್ಲಾಸ್ಟಿಕ್ ಚೀಲಗಳನ್ನು ಪರಿಶೀಲಿಸಲಾಗಿ ಈ ಚೀಲದಲ್ಲಿ ಎರಡು ರಟ್ಟಿನ ಬಾಕ್ಸ್ ಗಳಲ್ಲಿ

1)      180 ML ನ Mc-dowels Original whiskey ಬಾಟಲ್ ಗಳು-19

2)     180 ML ನ MANSON HOUSE BRANDY ಬಾಟಲ್ ಗಳು -03

3)     180 ML ನ Mc-dowels Original Brandy  ಪ್ಯಾಕೆಟ್ ಗಳು-15

4)     180 ML ನ 8 PM Whiskey ಪ್ಯಾಕೆಟ್ ಗಳು -23

5)     180 ML ನ BAG PIPER DELUX WHISKEY ಪ್ಯಾಕೆಟ್ ಗಳು-24

6)     90 ML ನ BAG PIPER DELUX WHISKEY ಪ್ಯಾಕೆಟ್ ಗಳು-24

7)      330 ML ನ UB EXPORT PREMIUM BEER ಬಾಟಲ್ ಗಳು-24

8)     180 ML ನ IMPERIAL BLUE WHISKEY ಬಾಟಲ್ ಗಳು-20

9)     180 ML ನ DSP BLACK WHISKEY ಬಾಟಲ್ ಗಳು-20

ದೊರೆತಿದ್ದು, ಇವುಗಳನ್ನು ಹಾಗೂ ಆರೋಪಿಗಳನ್ನು, ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್ ಸಮೇತ ವಶಕ್ಕೆ ಪಡೆದುಕೊಂಡಿರುತ್ತೆ. ಈ ಮೇಲ್ಕಂಡ ಮದ್ಯದ ಒಟ್ಟು ಅಂದಾಜು ಬೆಲೆ 16,917/ ರೂಗಳಾಗಿರುತ್ತೆ. ಆದ್ದರಿಂದ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ಆಸಾಮಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಹಾಜರ್ ಪಡಿಸುತ್ತಿದ್ದು, ಇವರುಗಳ ವಿರುದ್ಧ ಕಲಂ 32, 34 ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದೆ ಎಂತ ದಿನಾಂಕ:18/08/17 ರಂದು ಸಂಜೆ 4-15 ಗಂಟೆಗೆ ತಿಪಟೂರು  ಗ್ರಾಮಾಂತರ ವೃತ್ತ ನಿರೀಕ್ಷಕರು ಮೇಲ್ಕಂಡ ವಸ್ತುಗಳು ಮತ್ತು ಇಬ್ಬರು ಆಸಾಮಿಗಳೊಂದಿಗೆ ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ  ನೀಡಿದ ಜ್ಞಾಪನ ಸ್ವೀಕರಿಸಿ  ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಯುಡಿಆರ್.ನಂ; 26/2017 ಕಲಂ. 174 ಸಿ ಆರ್ ಪಿ ಸಿ

ದಿನಾಂಕ: 18-08-2017 ರಂದು ಮಧ್ಯಾಹ್ನ 12-15 ಗಂಟೆಗೆ ಕುಣಿಗಲ್ ತಾಲ್ಲೋಕು, ಹುಲಿಯೂರುದುರ್ಗ ಹೋಬಳಿ, ಆರ್,ಬ್ಯಾಡರಹಳ್ಳಿ ದಾಖ್ಲೆ, ಶಾಸ್ತ್ರಿಪಾಳ್ಯ ಗ್ರಾಮದ ವಾಸಿಯಾದ   ಪಿರ್ಯಾದಿ ಸುರೇಶ ಬಿನ್ ಲೇಟ್ ಗುಂಡಯ್ಯ ರವರು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಬಳಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಮ್ಮ ತಂದೆತಾಯಿಗೆ 04 ಜನ ಗಂಡು ಮಕ್ಕಳಿದ್ದು, ಅವರಲ್ಲಿ 3ನೇ ಮಗನಾದ ನಾನು ಮತ್ತು 1ನೇ ಮಗನಾದ ಚನ್ನಪ್ಪ ಗ್ರಾಮದಲ್ಲಿರುತ್ತೇವೆ.  2ನೇ ರಮೇಶ ಬೆಂಗಳೂರಿನಲ್ಲಿರುತ್ತಾನೆ. 4ನೇ ಯವನಾದ ಶ್ರೀನಿವಾಸ @ ಸೀನ ಎಂಬಾತನು ಇನ್ನೂ ಮದುವೆಯಾಗಿಲ್ಲದ ಕಾರಣ ನಮ್ಮ ತಾಯಿಯೊಂದಿಗೆ ಗ್ರಾಮದಲ್ಲಿಯೇ ವಾಸವಿರುತ್ತಾನೆ. ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ನಾವೆಲ್ಲರೂ ಸಮವಾಗಿ ವಿಭಾಗ ಮಾಡಿಕೊಂಡಿರುತ್ತೇವೆ. ಶ್ರೀನಿವಾಸ @ ಸೀನ ನು ಆತನ ಭಾಗದ ಜಮೀನು ಮತ್ತು ಮನೆಯನ್ನು ಮಾರಾಟ ಮಾಡಿಕೊಂಡಿದ್ದು, ಪ್ರತಿದಿನ ಕುಡಿಯುವ ಚಟವುಳ್ಳವನಾಗಿರುತ್ತಾನೆ. ಈಗ್ಗೆ ಸುಮಾರು 02 ವರ್ಷಗಳ ಹಿಂದೆ ಶ್ರೀನಿವಾಸ @ ಸೀನ ನು ಹಲಸಿನಮರದಲ್ಲಿ ಹಣ್ಣು ಕೀಳಲು ಹೋಗಿ ಮರದ ಮೇಲಿಂದ ಬಿದ್ದು ಆತನ ಸೊಂಟಕ್ಕೆ ಮತ್ತು ಬಲಕಾಲಿನ ಮಂಡಿಗೆ ಏಟು ಮಾಡಿಕೊಂಡಿದ್ದು,  ಆತನು ಊರಿನಲ್ಲಿಯೇ ಕುಂಟುತ್ತಾ ತಿರುಗಾಡಿಕೊಂಡು ಇದ್ದನು. ಮರದ ಮೇಲಿಂದ ಬಿದ್ದ ನಂತರ ಶ್ರೀನಿವಾಸ @ ಸೀನ ನಿಗೆ ಆಗಾಗ್ಗೆ ಹೊಟ್ಟೆನೋವು ಬರುತ್ತಿತ್ತು. ನನ್ನ ತಮ್ಮ ಜೀವನ ಮಾಡಲು ಕಷ್ಟವಾಗಿದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 18-08-2017 ರಂದು ಬೆಳಿಗ್ಗೆ ಸುಮಾರು 09-00 ಗಂಟೆಯಲ್ಲಿ ಶಾಸ್ತ್ರಿಪಾಳ್ಯ ಮತ್ತು ಗಂಗಾಪುರ ಊರಿನ ಮದ್ಯೆ ಇರುವ ರಾಮಣ್ಣ ಮಿಷಿನ್ ಮನೆ ನೇರದಲ್ಲಿ ರಸ್ತೆಯಲ್ಲಿ ಯಾವುದೋ ವಿಷವನ್ನು ಕುಡಿದು ಒದ್ದಾಡುತ್ತಿದ್ದಾಗ ವಿಷಯ ತಿಳಿದ ನಾನು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಹೋಗಿ ಶ್ರೀನಿವಾಸ @ ಸೀನ ನನ್ನು ಚಿಕಿತ್ಸೆಗಾಗಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ 108 ವಾಹನದಲ್ಲಿ ಬೆಳಿಗ್ಗೆ 11-00 ಗಂಟೆಗೆ  ಕರೆದುಕೊಂಡು ಬಂದಿದ್ದು, ಆಸ್ಪತ್ರೆಯಲ್ಲಿದ್ದ ಡಾಕ್ಟರ್ ರವರು ಶ್ರೀನಿವಾಸ @ ಸೀನ ನನ್ನು ಚೆಕ್ ಮಾಡಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಮೃತನ ಶವವು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ. ಈತನ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 177/2017 ಕಲಂ 379 ಐಪಿಸಿ ಮತ್ತು ಕಲಂ  4(1), 4(1ಎ), 21(1) ಎಂ.ಎಂ.ಆರ್‌.ಡಿ ಆಕ್ಟ್‌-1957 ಮತ್ತು ಕಲಂ 44(1), ಕೆ.ಎಂ.ಎಂ.ಸಿ.ಆರ್‌ ಆಕ್ಟ್‌-1994

ಈ ಕೇಸಿನ ಸಾರಾಂಶವೇನೆಂದರೆ ದಿನಾಂಕ:18-08-2017 ರಂದು ಬೆಳಿಗ್ಗೆ 09-45 ಗಂಟೆಗೆ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಎ.ಎಸ್‌.ಐ ರವರಾದ  ಶ್ರೀ ರಾಮಚಂದ್ರಯ್ಯ ಪಿ ರವರು ಠಾಣಾ ಸಿಬ್ಬಂದಿಯಾದ ರಂಗಸ್ವಾಮಿ ಎ.ಎಸ್,  ಪಿಸಿ-426 ರವರ ಮುಖೇನ ಕಳುಹಿಸಿಕೊಟ್ಟ ದೂರಿನ ಅಂಶವೇನೆಂದರೆ, ದಿನಾಂಕ:18-08-2017 ರಂದು ಬೆಳಿಗ್ಗೆ 08-15 ಗಂಟೆ ಸಮಯದಲ್ಲಿ ಎ.ಎಸ್‌.ಐ ರವರಿಗೆ ಬಂದ ಮಾಹಿತಿ ಏನೆಂದರೆ ಠಾಣಾ ಸರಹದ್ದು ಸಣಭ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ  ಟ್ರಾಕ್ಟರ್‌ ಮತ್ತು ಟ್ರೈಲರ್‌ನಲ್ಲಿ ಯಾವುದೇ ಪರವಾನಗಿಯನ್ನು ಪಡೆಯದೇ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಮಾರಾಟ ಮಾಡುವ ಸಲುವಾಗಿ ಕುಪ್ಪೆ ಮಾರ್ಗವಾಗಿ ಹೋಗುತ್ತಿದ್ದಾರೆಂದು ಮಾಹಿತಿ ಬಂದಿದ್ದರ ಮೇರೆಗೆ ಎ.ಎಸ್.ಐ ರವರು ಸಿಬ್ಬಂದಿಗಳಾದ ರಂಗಸ್ವಾಮಿ ಎ.ಎಸ್ ಪಿಸಿ-426, ಗುರುಕುಮಾರ ಪಿಸಿ-438 ರವರೊಂದಿಗೆ ಸ್ವಂತ ಮೋಟಾರು ಸೈಕಲ್ ನಲ್ಲಿ ಸಣಭಘಟ್ಟ ಗೇಟ್ ನ ಸ್ವಲ್ಪ ಮುಂದೆ ಇರುವ ಕುಪ್ಪೆ ಗ್ರಾಮಕ್ಕೆ ಹೋಗುವ ಕ್ರಾಸ್ ನಲ್ಲಿ ಬೆಳಿಗ್ಗೆ 08-40 ಗಂಟೆಯಲ್ಲಿ ಒಂದು ಟ್ರಾಕ್ಟರ್ ನ ಚಾಲಕನು ಟ್ರಾಕ್ಟರ್ ನಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು ಸಮವಸ್ತ್ರದಲ್ಲಿದ್ದ  ಪೊಲೀಸ್  ಸಿಬ್ಬಂದಿಗಳನ್ನು ನೋಡಿ ಸ್ವಲ್ಪ ದೂರದಲ್ಲಿಯೇ ಟ್ರಾಕ್ಟರ್‌ನ್ನು ನಿಲ್ಲಿಸಿ ಕೆಳಗಿಳಿದು ಅಲ್ಲಿಂದ ಆಸಾಮಿಯು  ತಪ್ಪಿಸಿಕೊಂಡಿರುತ್ತಾನೆ. ಪೊಲೀಸ್ ಸಿಬ್ಬಂದಿಯವರು ಆತನನ್ನು ಹಿಡಿಯಲು ಪ್ರಯತ್ನಿಸಿದರೂ ಸಹ ಸಿಕ್ಕಿರುವುದಿಲ್ಲ. ನಂತರ ರಸ್ತೆಯಲ್ಲಿ ನಿಂತಿದ್ದ ಮರಳು ತುಂಬಿದ ಟ್ರಾಕ್ಟರ್‌ ಮತ್ತು ಟ್ರೈಲರ್‌ನ್ನು ಪರಿಶೀಲನೆ ಮಾಡಲಾಗಿ ನಂಬರ್ ಇಲ್ಲದ ಕೆಂಪು ಬಣ್ಣದ  ಮಹೀಂದ್ರ ಕಂಪನಿಯ ಟ್ರಾಕ್ಟರ್‌ ಮತ್ತು ಟ್ರೈಲರ್‌ ಆಗಿರುತ್ತೆ. ಟ್ರಾಕ್ಟರ್‌ ಇಂಜಿನ್‌ ನಂಬರ್‌ NJJW00023 ಆಗಿರುತ್ತೆ,       ಟ್ರಾಕ್ಟರ್‌ ಟ್ರೈಲರ್‌ ನೋಡಲಾಗಿ ನೀಲಿ ಬಣ್ಣದ ನಂಬರ್ ಪ್ಲೇಟ್ ಇಲ್ಲದ ಟ್ರೈಲರ್ ಆಗಿದ್ದು, ಇದರ ಬಾಡಿಯಲ್ಲಿ ಪೂರ್ಣ ಪ್ರಮಾಣದಲ್ಲಿ  ಮರಳನ್ನು ತುಂಬಿರುತ್ತೆ. ಈ ಟ್ರಾಕ್ಟರ್‌ ನ ಚಾಲಕ ಮತ್ತು ಮಾಲೀಕ ಸೇರಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಸರ್ಕಾರದಿಂದ ಯಾವುದೇ ಪರವಾನಗಿಯನ್ನು ಪಡೆಯದೆ ನೈಸರ್ಗಿಕ ಖನಿಜ ಸಂಪತ್ತಾದ ಮರಳನ್ನು  ಕಳ್ಳತನದಿಂದ ತುಂಬಿಕೊಂಡು  ಮಾರಾಟ ಮಾಡುವ ಸಲುವಾಗಿ ಸಾಗಾಣೆಯಲ್ಲಿ  ತೊಡಗಿರುತ್ತಾರೆ. ಆದ್ದರಿಂದ ಮೇಲ್ಕಂಡ ಟ್ರಾಕ್ಟರ್‌ ಮತ್ತು ಟ್ರೈಲರ್‌ ಚಾಲಕ ಮತ್ತು ಮಾಲೀಕನ  ಮೇಲೆ ತ್ಯ ಪ್ರಕರಣ ದಾಖಲಿಸುವಂತೆ ಕಳುಹಿಸಿಕೊಟ್ಟ ದೂರಿನ ಅಂಶವಾಗಿರುತ್ತೆ.

 


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 74 guests online
Content View Hits : 166222