lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

  : : ಪತ್ರಿಕಾ ಪ್ರಕಟಣೆ : : ::   ದಿನಾಂಕ: 21-09-2017 : : ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ, ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ... >> :- ಪತ್ರಿಕಾ ಪ್ರಕಟಣೆ   :- ದಿನಾಂಕ: 19-09-2017.   ದಿನಾಂಕ:19-09-2017 ರಂದು ಬೆಳಿಗಿನ ಜಾವ... >> ::  Press Note  :: Date : 15-09-17   ಹೆಬ್ಬೂರು ಪೊಲೀಸ್ ಠಾಣೆಯ ಮೊ ನಂ -158/2017 ಕಲಂ 379 ಐಪಿಸಿ ಪ್ರಕರಣದ ಸಂಬಂಧ... >> :: ಪತ್ರಿಕಾ ಪ್ರಕಟಣೆ   ::   : ದಿನಾಂಕ 11/09/2017  :   ದಿನಾಂಕ 02/09/2017 ರಂದು ದಂಡಿನಶಿವರ ಪೊಲೀಸ್... >> :: ಪತ್ರಿಕಾ ಪ್ರಕಟಣೆ :: ದಿನಾಂಕ: 29.08.2017 ಕೋರ ಪೊಲೀಸ್ ಠಾಣಾ ಮೊ.ನಂ. 154/2017 ಕಲಂ: 379, 511 ಐಪಿಸಿ ... >> ಪತ್ರಿಕಾ ಪ್ರಕಟಣೆ ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ ಹಬ್ಬದ... >> ದಿನಾಂಕ 23-08-2017 ರಂದು ತುಮಕೂರು ಜಿಲ್ಲಾ  ಹೆಚ್ಚುವರಿ ಪೊಲೀಸ್‌ ಆಧೀಕ್ಷಕರಾಗಿ ಶೋಭರಾಣೆ ... >> ಪತ್ರಿಕಾ ಪ್ರಕಟಣೆ. 48 ಗಂಟೆಗಳಲ್ಲಿ    ಕೊಲೆ ಆರೋಪಿಯ ಬಂಧನ ******* ದಿನಾಂಕ 08/08/2017 ರಂದು... >> :: ಪತ್ರಿಕಾ ಪ್ರಕಟಣೆ :: ಬೆಂಗಳೂರು ನಗರದ ಸಿಪಿಸಿ/ಮಪಿಸಿ ಹುದ್ದೆಗಳ ನೇಮಕಾತಿ ಸಂಬಂಧ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< August 2017 >
Mo Tu We Th Fr Sa Su
  1 2 3 4 5 6
7 8 9 10 11 12 13
14 15 16 18 19 20
21 22 23 24 25 26 27
28 29 30 31      
Thursday, 17 August 2017
Crime Incidents 17-08-17

ಚೇಳೂರು  ಪೊಲೀಸ್  ಠಾಣಾ  ಯು.ಡಿ.ಆರ್  ನಂ 28/2017  ಕಲಂ 174  ಸಿ.ಆರ್.ಪಿ.ಸಿ

ದಿನಾಂಕ:16/08/2017  ರಂದು  ಬೆಳಿಗ್ಗೆ 9-00  ಗಂಟೆ  ಸಮಯದಲ್ಲಿ   ಪಿರ್ಯಾದಿ  ಲಕ್ಷ್ಮೀರಂಗಯ್ಯ ರವರು   ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ,  ನನಗೆ ಇಬ್ಬರು ಮಕ್ಕಳಿದ್ದು  ಮೊದಲನೇ ಗೀತಾ ಎರಡನೇ  ದರ್ಶನ್‌ ಎಂಬುವರಾಗಿದ್ದು , ಪಿರ್ಯಾದಿ  ಮಗಳಾದ ಗೀತಾರನ್ನು ತುಮಕೂರು ತಾಲ್ಲೂಕು,ಹೆಬ್ಬೂರು ಹೋಬಳಿ,ಸಿರಿವಾರ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿದ್ದು ಆಕೆಯ ಗಂಡ ನಮ್ಮ ಮನೆಯಲ್ಲಿ ವಾಸವಿರುತ್ತಾನೆ, ನನ್ನ ಮನೆಯಲ್ಲಿ ಪಿರ್ಯಾದಿ  ಮತ್ತು ಪಿರ್ಯಾದಿ  ಹೆಂಡತಿ ಲಕ್ಷ್ಮೀದೇವಮ್ಮ ಹಾಗೂ ಪಿರ್ಯಾದಿ  ಮಗ 22 ವರ್ಷದ ದರ್ಶನ್‌ ವಾಸವಾಗಿದ್ದು, ಪಿರ್ಯಾದಿ  ಮತ್ತು ಪಿರ್ಯಾದಿ  ಮಗ ಕೂಲಿ ಕೆಲಸ ಮಾಡಿಕೊಂಡು ಸಂಸಾರ ನಡೆಸಿಕೊಂಡು ಬರುತ್ತಿದ್ದು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಪಿರ್ಯಾದಿ  ಮಗನ ಮೇಲೆ ಬಿಟ್ಟಿದ್ದು ಮನೆಯ ಸಂಸಾರವನ್ನು ಅವನೇ ನಿಬಾಯಿಸಿಕೊಂಡು ಬರುತ್ತಿದ್ದನು, ಪಿರ್ಯಾದಿ  ಮಗ ದರ್ಶನ್‌ ಆಗಾಗ ಮನೆಯಲ್ಲಿ ನನ್ನಿಂದ ಸಂಸಾರವನ್ನು ನಿಭಾಯಿಸಲು ಸಾದ್ಯವಾಗುತ್ತಿಲ್ಲ ಹಾಗೂ ವ್ಯವಸಾಯದಿಂದಲೂ ಸಹ ಯಾವುದೇ ಆದಾಯ ಬರುತ್ತಿಲ್ಲ, ಮನೆಯನ್ನು ನಿರ್ವಹಣೆ ಮಾಡಲು ಸಾದ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದನು, ಆಗ ಪಿರ್ಯಾದಿ   ಮತ್ತು ಪಿರ್ಯಾದಿ   ಹೆಂಡತಿ  ನಿನ್ನ ಜೊತೆ ನಾವಿದ್ದೇವೆ ನೀನು ಹೆದರ ಬೇಡ ಎಂದು ಸಮಾದಾನ ಪಡಿಸುತ್ತಿದ್ದೆವು,ಆದರೂ ಸಹ ಪಿರ್ಯಾದಿ  ಮಗ ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿದ್ದನು, ದಿನಾಂಕ;15/08/2017 ರಂದು ಮದ್ಯಾಹ್ನ 01-00 ಗಂಟೆಗೆ ಜಮೀನಿನ ಹತ್ತಿರ ಹೋಗಿ ಬರುತ್ತೇನೆಂತ  ಹೇಳಿ ಜಮೀನಿ ಬಳಿ ಹೋಗಿದ್ದು ಸುಮಾರು 04-00ಗಂಟೆ ಸಮಯದಲ್ಲಿ ಆತನಿಗೆ ಪೋನ್‌ ಮಾಡಿದಾಗ ಆವನ ಪೋನ್‌ ಸ್ವಿಚ್‌ ಆಪ್‌ ಆಗಿತ್ತು,ಆಗ ನಾವು ಎಲ್ಲೊ ಜಮೀನಿನ ಹತ್ತಿರ ಇರಬಹುದೆಂದು ನಾವು ಸುಮ್ಮನಾದೆವು, ಪಿರ್ಯಾದಿ   ಮಗ ದರ್ಶನ್‌ ರಾತ್ರಿ ಯಾದರೂ ಸಹ ಮನೆಗೆ ಬರದ ಕಾರಣ ನಾನು ನಮ್ಮ ಗ್ರಾಮದಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲಾ ಆಗ ನಮ್ಮ ಪಕ್ಕದ ಮನೆಯವರಾದ ಪುಟ್ಟರಾಜು ಮತ್ತು ನರಸಿಂಹಮೂರ್ತಿ ಹಾಗೂ ಪಿರ್ಯಾದಿ   ಮೂರು ಜನರು ಪಿರ್ಯಾದಿ   ಜಮೀನಿನ ಬಳಿ ಬಂದು ಹುಡುಕಲಾಗಿ ಪಿರ್ಯಾದಿ   ಮಗ ದರ್ಶನ್‌ ಪಿರ್ಯಾದಿ   ಜಮೀನಿನಲ್ಲಿ ಇರುವ ಹೊಂಗೆ ಮರದ ಕೊಂಬೆಗೆ ನೂಲಿನ ಹಗ್ಗವನ್ನು ಕೊರಳಿಗೆ ಕಟ್ಟಿಕೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಪಿರ್ಯಾದಿ ಮಗ ದರ್ಶನ್‌ ಪಿರ್ಯಾದಿ ಮನೆಯ ಸಂಸಾರವನ್ನು ನಿಬಾಯಿಸಲಾಗದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ನಮ್ಮ ಜಮೀನಿನಲ್ಲಿರುವ ಹೊಂಗೆ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ , ನನ್ನ ಮಗನ  ಸಾವಿನಲ್ಲಿ  ಬೇರೆ  ಯಾವುದೇ  ಅನುಮಾನ  ಇರುವುದಿಲ್ಲ.  ಈ  ವಿಚಾರನನ್ನು  ನಮ್ಮ  ಸಂಬಂದಿಕರಿಗೆ  ತಿಳಿಸಿ  ಈ  ದಿನ  ತಡವಾಗಿ  ಬಂದು  ದೂರು  ನೀಡಿರುತ್ತೇನೆ.  ಆದ್ದರಿಂದ   ತಾವು ಸ್ಥಳಕ್ಕೆ   ಬಂದು  ಮುಂದಿನ  ಕ್ರಮ  ಜರುಗಿಸಲು  ಕೋರಿ ಇತ್ಯಾದಿಯಾದ   ಪಿರ್ಯಾದು ಅಂಶ

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ; 176/2017 ಕಲಂ. 279 ಐ ಪಿ ಸಿ

ದಿನಾಂಕ: 16-08-2017 ರಂದು ಸಂಜೆ 06-15 ಗಂಟೆಗೆ ತುಮಕೂರು ಟೌನ್ ಮೆಳೆಕೋಟೆ ವಾಸಿಯಾದ ಹರೀಶ್ ಬಾಬು ಬಿನ್ ವೆಂಕಟರಮಣಯ್ಯ ಎನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಪಿರ್ಯಾದಿಯು ದಿನಾಂಕ: 15-08-2017 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ತಮ್ಮ ಬಾಬ್ತು ಕೆಎ-27-ಎಂ-7484 ನೇ ನಂಬರಿನ ರೊನಾಲ್ಟ್ ಡಸ್ಟರ್ ಕಾರಿಗೆ ಚಾಲಕನಾಗಿ ರವಿಕುಮಾರ್ ಜಿ ರವರನ್ನು ನೇಮಿಸಿಕೊಂಡು ಪಿರ್ಯಾದಿ ಮತ್ತು ಅವರ ಸ್ನೇಹಿತರಾದ ಜಗದೀಶ, ರವಿಕುಮಾರ್ ಹಾಗೂ ಅವರ ಪತ್ನಿ ಕಲಾವತಿ ರವರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ವಾಪಾಸ್ ತುಮಕೂರಿಗೆ ಬರುವಾಗ್ಗೆ ಕಸಬಾ ಹೋಬಳಿ ಸಂತೆಮಾವತ್ತೂರು ಗ್ರಾಮದ ರೇಷ್ಮೆ ಮಾರುಕಟ್ಟೆ ಮುಂಭಾಗ ರಾತ್ರಿ 10-30 ಗಂಟೆ ಸಮಯದಲ್ಲಿ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗುತ್ತಿದ್ದು, ಮಳೆ ಬಂದು ರಸ್ತೆಯಲ್ಲಿದ್ದ ನೀರು ಕಾರಿನ ಗಾಜಿಗೆ ಹಾರಿದ ಕಾರಣ ರಸ್ತೆ ಕಾಣದಂತಾಗಿ ರಸ್ತೆಯ ಎಡಭಾಗದ ಕಬ್ಬಿಣದ ತಡೆಗೋಡೆಗೆ ತಗುಲಿ ಕಾರು ಬಲಭಾಗಕ್ಕೆ ಬಿದ್ದು ಸಂಪುರ್ಣವಾಗಿ ಜಖಂಗೊಂಡಿದ್ದು ಕಾರಿನಲ್ಲಿದ್ದ ಪಿರ್ಯಾದಿ, ಕಾರಿನ ಚಾಲಕ ಮತ್ತು ಪಿರ್ಯಾದಿಯ ಸ್ನೇಹಿತರಿಗೆ ಯಾವುದೇ ಚಿಕಿತ್ಸೆ ಪಡೆಯುವಂತಹ ಗಾಯಗಳು ಆಗಿರುವುದಿಲ್ಲ. ಪಿರ್ಯಾದಿಯು ಕಾರಿನಲ್ಲಿದ್ದವರನ್ನು ಊರಿಗೆ ಕಳುಹಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಿನ ಚಾಲಕ ರವಿಕುಮಾರ್ ಜಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.      

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ-431/2017, ಕಲಂ-279, 337, 304() .ಪಿ.ಸಿ

ದಿನಾಂಕ: 16-08-2017 ರಂದು ಬೆಳಿಗ್ಗೆ 7-30 ಗಂಟೆಗೆ ಪಿರ್ಯಾದಿ ಹೊನ್ನಯ್ಯ ಬಿನ್ ವೆಂಕಟೇಶ್, 18 ವರ್ಷ, ಈಚಲಪಾಳ್ಯ, ಹೇರೂರು ಪೋಸ್ಟ್, ಕಸಬಾ ಹೋಬಳಿ, ಕುಣಿಗಲ್ ತಾಲ್ಲೊಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿ: 15-08-17 ರಂದು ನಾನು ಮತ್ತು ನನ್ನ ಸ್ನೇಹಿತ ಚೇತನ್ ರವರು ಚೇತನ್ ನ ಬಾಬ್ತು ಕೆಎ-06 ಇಡಬ್ಲ್ಯೂ-6558 ನೇ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ನಮ್ಮ ಊರಿನಿಂದ ಹೂಗಳನ್ನು ತೆಗೆದುಕೊಂಡು ಕುಣಿಗಲ್ ಗೆ ಹೋಗಿ ಅಂಗಡಿಗೆ ಹಾಕಿ ಮತ್ತೆ ಕುಣಿಗಲ್ ನಿಂದ ದ್ವಿ ಚಕ್ರ ವಾಹನದಲ್ಲಿ ಚೇತನ್ ರವರು ಚಾಲಕನಾಗಿ ನಾನು ಹಿಂಬದಿ ಸವಾರನಾಗಿ ಹೇರೂರಿಗೆ ವಾಪಸ್ ಬರಲು ಹೊರಟು ಮಳೆ ಬರುತ್ತಿದ್ದರಿಂದ ಸ್ವಲ್ಪ ಹೊತ್ತು ಕುಣಿಗಲ್ ನಲ್ಲಿ ಕಾದು ನಂತರ ಹೊರಟು ರಾತ್ರಿ ಸುಮಾರು 11-30 ಗಂಟೆ ಸಮಯದಲ್ಲಿ ಹೇರೂರು ಗ್ರಾಮದ ಕುಣಿಗಲ್ -ಅಮತೂರು ರಸ್ತೆಯಲ್ಲಿ ಶ್ರೀಧರ್ ರವರ ಮನೆ ಹತ್ತಿರ ಹೋಗುತ್ತಿರಬೇಕಾದರೆ, ಅದೇ ಸಮಯಕ್ಕೆ ಒಬ್ಬ ಟಿಪ್ಪರ್ ಲಾರಿ ಚಾಲಕ ತನ್ನ ಟಿಪ್ಪರ್ ಲಾರಿಯನ್ನು ಅಜಾಗರೂಕತೆಯಿಂದ ರಸ್ತೆಯಲ್ಲಿ ಯಾವುದೇ ಇಂಡಿಕೇಟರ್ ಹಾಕದೇ ಮತ್ತು ಸೂಚನೆಗಳು ಇಲ್ಲದೆ ರಸ್ತೆಯ ಮೇಲೆ ನಿಲ್ಲಿಸಿದ್ದು, ಸದರಿ ಟಿಪ್ಪರ್ ಲಾರಿ ನಮಗೆ ಕಾಣಿಸದೆ ಟಿಪ್ಪರ್ ಲಾರಿಗೆ ಚೇತನ್ ಡಿಕ್ಕಿ ಹೊಡೆಸಿದ್ದರಿಂದ ದ್ವಿ ಚಕ್ರ ವಾಹನದ ಸಮೇತ ಕೆಳಗೆ ಬಿದ್ದೆವು. ಸದರಿ ಅಪಘಾತದಿಂದ ಚೇತನ್ ರವರ ತಲೆಗೆ ತೀವ್ರತರದ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟರು. ನನಗೆ ತಲೆಗೆ ಪೆಟ್ಟಾಯಿತು. ನಂತರ ಟಿಪ್ಪರ್ ಲಾರಿ ನಂಬರ್ ನೋಡಲಾಗಿ ಕೆಎ-51 ಡಿ-8357 ಆಗಿತ್ತು. ನಂತರ ನನಗೆ ಸಾರ್ವಜನಿಕರಾದ ರಾಮಚಂದ್ರ ಮತ್ತು ಇತರರು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಈಗ ಬಂದು ಈ ಅಪಘಾತಕ್ಕೆ ಕಾರಣವಾದ ಕೆಎ-51 ಡಿ-8357 ನೇ ಟಿಪ್ಪರ್ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂತ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ

 

ಬಡವನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್‌‌ ನಂ 13/2017 ಕಲಂ 174  ಸಿ ಆರ್‌ ಪಿ ಸಿ

ದಿನಾಂಕ:16/08/2017 ರಂದು ಬೆಳಗ್ಗೆ 9-45 ಗಂಟೆಗೆ ಪಿರ್ಯಾದಿ ಎಂ ನಾಗರಾಜು ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ದಿನಾಂಕ:-15/08/2017 ರಂದು ಮದ್ಯಾಹ್ನ 2-30 ರಿಂದ 3-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಕೆಲವು ಹುಡುಗರೊಂದಿಗೆ ನನ್ನ ಮಗ ಕಾರ್ತಿಕ್ ಗ್ರಾಮದ ಪಕ್ಕದಲ್ಲಿರುವ ಕಟ್ಟೆಯಲ್ಲಿ ಆಟವಾಡಲು ಹೋಗಿ ನನ್ನ ಮಗ ಆಕಸ್ಮಿಕವಾಗಿ ನೀರಿನ ಆಳಕ್ಕೆ ಹೋಗಿ ನೀರು ಕುಡಿದಿದ್ದು , ತಕ್ಷಣ ಸೆಲ್ವಂ ಮತ್ತು ಲಕ್ಷ್ಮೀಕಾಂತ ಎಂಬುವರು ನನ್ನ ಮಗನನ್ನು ಎತ್ತಿಕೊಂಡು ಬಂದರು. ಆಗ ನಾನು ಮತ್ತು ಸೆಲ್ವಂ ಇಬ್ಬರು ನನ್ನ ಮಗನನ್ನು ಬಡವನಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಬಂದು ತೋರಿಸಿ , ನಂತರ ಮದುಗಿರಿ ಆಸ್ಪತ್ರೆಗೆ ಸಾಗಿಸಿ ವೈದ್ಯರಿಗೆ ತೋರಿಸಿದಾಗ ಕಾರ್ತಿಕ್‌‌ ಆಗಲೇ ಮೃತನಾಗಿರುತ್ತಾನೆಂತಾ ತಿಳಿಸಿದ್ದರಿಂದ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಿರುತ್ತೆ. ನನ್ನ ಮಗ ನೀರು ಕುಡಿದು ಮೃತನಾಗಿದ್ದು, ಸಾವಿನಲ್ಲಿ ಯಾರ ಮೇಲೂ ಯಾವುದೇ ಅನುಮಾನ ಇರುವುದಿಲ್ಲ. ನಾವು ನಮ್ಮ ಸಂಬಂದಿಕರಿಗೆ ತಿಳಿಸಿ , ಈ ದಿನ ತಡವಾಗಿ ದೂರು ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಬೇಕೆಂತ ನೀಡಿದ ದೂರಿನ ಅಂಶವಾಗಿರುತ್ತೆ.


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 33 guests online
Content View Hits : 166196