lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< June 2018 >
Mo Tu We Th Fr Sa Su
        1 2 3
4 5 6 7 8 9 10
11 13 14 15 16 17
18 19 20 21 22 23 24
25 26 27 28 29 30  
Tuesday, 12 June 2018
ಅಪರಾಧ ಘಟನೆಗಳು 12-06-18

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 95/2018 ಕಲಂ: 279,337 IPC & 134 (A&B) 187 IMV Act.

ದಿನಾಂಕ: 11/06/2018 ರಂದು ಬೆಳಿಗ್ಗೆ 11-45 ಗಂಟೆಗೆ ಪಿರ್ಯಾದಿ ಲೋಕೇಶ್ ಬಿನ್ ಗಣೇಶಪ್ಪ, 28ವರ್ಷ, ಕೊಪ್ಪ ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 29/05/2018 ರಂದು ಸಂಜೆ ನಾನು ಬೆಂಗಳೂರಿನಲ್ಲಿ ಇರುವಾಗ ನಮ್ಮ ದೊಡ್ಡಪ್ಪನ ಮಗನಾದ ಕುಮಾರ್ ರವರು ನನಗೆ ಫೋನ್ ಮಾಡಿ ನಿಮ್ಮ ತಂದೆ ಮತ್ತು ಅಕ್ಕನಿಗೆ ತಿಪಟೂರು ನಗರದಲ್ಲಿ ಅಪಘಾತವಾಗಿದ್ದು, ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ, ಬೇಗ ಬಾ ಎಂದು ತಿಳಿಸಿದ್ದು, ನಾನು ಕೆಲಸ ಮುಗಿಸಿಕೊಂಡು ದಿನಾಂಕ: 30/05/2018 ರಂದು ಬೆಳಿಗ್ಗೆ 11-00 ಗಂಟೆಗೆ ತಿಪಟೂರಿಗೆ ಬಂದು ಆಸ್ಪತ್ರೆಗೆ  ಹೋಗಿ ನೋಡಲಾಗಿ ನಮ್ಮ ತಂದೆಯಾದ ಗಣೇಶಪ್ಪ ಬಿನ್ ಗುಂಡಶೆಟ್ಟಿ, (62 ವರ್ಷ) ರವರು ಮತ್ತು ನಮ್ಮ ಅಕ್ಕನಾದ ಹೇಮಲತಾ ಕೆ.ಜಿ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಮ್ಮ ತಂದೆಗೆ ಎಡಗಾಲಿನ ಮಂಡಿಗೆ ಪೆಟ್ಟಾಗಿರುವುದು ಮತ್ತು ನಮ್ಮ ಅಕ್ಕನಿಗೆ ಬಲಭಾಗದ ಹಿಪ್ ಗೆ ಪೆಟ್ಟುಬಿದ್ದು, ಇತರೆ ಭಾಗಗಳಲ್ಲಿ ತರಚಿದ ಗಾಯಗಳು ಆಗಿದ್ದು, ಕಂಡು ಬಂತು. ನಂತರ ನಮ್ಮ ತಂದೆಯನ್ನು ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ನೆನ್ನೆ ದಿನಾಂಕ: 29/05/2018 ರಂದು ಮಧ್ಯಾಹ್ನ ನಿಮ್ಮ ಅಕ್ಕನಾದ ಹೇಮಲತಾ ಮತ್ತು ನಾನು ಇಬ್ಬರು ಮೊಮ್ಮಗಳಾದ ಭಾವನಾ ರವರಿಗೆ ತಿಪಟೂರು ನಗರದ ಸ್ಟೆಲ್ಲಾ ಮೆರೀಸ್ ಸ್ಕೂಲ್ ನಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಬರಲು ನನ್ನ ಬಾಬ್ತು ಕೆ.ಎ-44 ಕೆ-8436 ನೇ ಟಿ.ವಿ.ಎಸ್ ಎಕ್ಸೆಲ್ ದ್ವಿಚಕ್ರವಾಹನದಲ್ಲಿ ಊರನ್ನು ಬಿಟ್ಟು, ಸಂಜೆ ಸುಮಾರು 4-15 ರಿಂದ 4-50 ಗಂಟೆಯ ಸಮಯ ಮದ್ಯದಲ್ಲಿ ತಿಪಟೂರು ನಗರದಲ್ಲಿ ಎನ್.ಹೆಚ್ -206 ರಸ್ತೆಯಲ್ಲಿ ಕಾರ್ಫೋರೇಷನ್ ಬ್ಯಾಂಕ್ ಮುಂಭಾಗ ಹೋಗುತ್ತಿರುವಾಗ ಹಿಂಭಾಗದಿಂದ ಒಂದು ಆಟೋ ರಿಕ್ಷಾ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನ ಆಟೋವನ್ನು ಓಡಿಸಿಕೊಂಡು ಬಂದು ನಾನು ಹೋಗುತ್ತಿದ್ದ  ಟಿ.ವಿ.ಎಸ್ ಗೆ ಡಿಕ್ಕಿ ಹೊಡೆಸಿ ಆಟೋವನ್ನು ನಿಲ್ಲಿಸದೇ ಹೋಗಿರುತ್ತಾನೆ. ಆತನು ಡಿಕ್ಕಿ ಹೊಡೆಸಿದ ಪರಿಣಾಮ ನಾನು ಮತ್ತು ಹೇಮಲತಾ  ಇಬ್ಬರೂ ಗಾಡಿ ಸಮೇತ ಕೆಳಗೆ ಬಿದ್ದಿದ್ದು, ನನಗೆ ಎಡಗಾಲಿನ ಮಂಡಿಗೆ ಬಲವಾದ ಪೆಟ್ಟು ಬಿದ್ದಿರುತ್ತೆ. ಮತ್ತು ನಿಮ್ಮ ಅಕ್ಕನಿಗೆ ಬಲಭಾಗದ ಹಿಪ್ ಗೆ ಪೆಟ್ಟು ಬಿದ್ದು, ಇತರೆ ಭಾಗಗಳಲ್ಲಿ ತರಚಿದ ಗಾಯಗಳು ಆಗಿರುತ್ತೆ. ಆಗ ಅಲ್ಲಿದ್ದ ಸಾರ್ವಜನಿಕರು ನಮ್ಮನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ. ನಂತರ ಅಪಘಾತ ಪಡಿಸಿದ ಆಟೋ ರಿಕ್ಷಾ ವಾಹನದ ಬಗ್ಗೆ ವಿಚಾರ ಮಾಡಲಾಗಿ ಕೆ.ಎ-02 ಬಿ-676 ನೇ ಆಟೋ ರಿಕ್ಷಾ ಎಂದು ತಿಳಿದು ಬಂದಿದ್ದು, ಚಾಲಕನ ಹೆಸರು ಮತ್ತು ವಿಳಾಸ ಗೊತ್ತಿಲ್ಲವೆಂತ ತಿಳಿಸಿರುತ್ತಾರೆ, ಇದುವರೆವಿಗೂ ನಮ್ಮ ತಂದೆಗೆ ಮತ್ತು ಅಕ್ಕನಿಗೆ ಚಿಕಿತ್ಸೆಯನ್ನು ಕೊಡಿಸಿದ್ದು, ನಮ್ಮ ತಂದೆ ಮತ್ತು ಅಕ್ಕನವರಿಗೆ  ಅಪಘಾತಪಡಿಸಿದ ಮೇಲ್ಕಂಡ ಆಟೋ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆಂತಾ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 96/2018 ಕಲಂ: 78 (111) KP Act.

ದಿನಾಂಕ:11/06/2018 ರಂದು ಠಾಣಾ ಪಿ.ಸಿ-968 ಮಂಜುನಾಥ್ ರವರು ನೀಡಿದ ವರದಿಯ ಅಂಶವೇನೆಂದರೆ, ನನಗೆ ಈ ದಿನ ದಿನಾಂಕ: 11/06/2018 ರಂದು ತಿಪಟೂರು ನಗರ ಠಾಣಾ ವ್ಯಾಪ್ತಿಯಲ್ಲಿ ಗುಪ್ತ ಮಾಹಿತಿ ವರದಿ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ನಾನು ತಿಪಟೂರು ನಗರದ ಗೋವಿನಪುರ, ಕೆ.ಆರ್ ಬಡಾವಣೆ ಕಡೆಗಳಲ್ಲಿ ಗಸ್ತು ಮಾಡಿಕೊಂಡು ತಿಪಟೂರು ನಗರದ ಸಿವಿಲ್ ಬಸ್ ನಿಲ್ದಾಣದ ಪಕ್ಕ ಕೆ.ಆರ್ ಬಡಾವಣೆಯ 3ನೇ ಮುಖ್ಯ ರಸ್ತೆಯ ಬಳಿ ಮಧ್ಯಾಹ್ನ 2-45 ಗಂಟೆಯ ಸಮಯದಲ್ಲಿ ಬಂದು ಸಾರ್ವಜನಿಕ ರಸ್ತೆಯಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಇಂದಿರಾನಗರದ ಪ್ರಫುಲ್ ಚಂದ್ರ @ ಪಾಪುಳ್ಳಿ ಎಂಬುವರು ಜನಗಳನ್ನು ಗುಂಪಾಗಿ ಸೇರಿಸಿಕೊಂಡು ಬನ್ನಿ ಮಟಕಾ ಜೂಜಾಟ ಆಡೋಣ 1 ರೂಪಾಯಿಗೆ 70 ರೂಪಾಯಿ ಕೊಡುತ್ತೇವೆ. ಎಂದು ಅವರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ನಂಬರ್ ಬರೆದುಕೊಳ್ಳುತ್ತಿದ್ದರು. ಎಂದು ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ ನಂ 133/2018, ಕಲಂ: 279 337 ಐ ಪಿಸಿ

ದಿನಾಂಕ: 11-06-2018 ರಂದು ಸಂಜೆ 06-15 ಗಂಟೆಗೆ ನಾಗಣ್ಣ ಬಿನ್ ಲೇಟ್ ದಾಸಪ್ಪ, ಸುಮಾರು 60 ವರ್ಷ, ವಕ್ಕಲಿಗರು, ಜಿರಾಯ್ತಿ, ಮಾದಪ್ಪನಹಳ್ಳಿ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾದಿಯ ಮಗಳಾದ ಸುವರ್ಣ ಎಂಬುವವಳನ್ನು ಮದ್ದೂರು ತಾಲ್ಲೋಕು ಅರಕನಹಳ್ಳಿ ಗ್ರಾಮದ ಗಿರೀಶ @ ಗಿರಿ ಬಿನ್ ರಾಮಣ್ಣ ರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಅನಾರೋಗ್ಯದ ನಿಮಿತ್ತ ಸುವರ್ಣ ರವರು ಅರ್ಜಿದಾರರ ಮನೆಗೆ ಬಂದಿದ್ದು, ದಿನಾಂಕ: 10-06-2018 ರಂದು ಸಂಜೆ ಸುಮಾರು 05-30 ಗಂಟೆಯಲ್ಲಿ ಮನೆಯಿಂದ ಹಾಲಿನ ಕ್ಯಾನನ್ನು ತೆಗೆದುಕೊಂಡು ಢೈರಿಗೆ ಹಾಕಲು ರಸ್ತೆಯಲ್ಲಿ ಹೋಗುತ್ತಿದ್ದಾಗ ಚೌಡನಕುಪ್ಪೆ ಕಡೆಯಿಂದ ಬಂದ ಕೆಎ06-ಇವೈ- 0589 ನೇ ದ್ವಿಚಕ್ರ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಮಗಳು ಸುವರ್ಣ ಳಿಗೆ ಡಿಕ್ಕಿಪಡಿಸಿ ಅಪಘಾತವುಂಟು ಮಾಡಿದ್ದು, ಆಗ ಸುವರ್ಣ ಕಿರುಚಿಕೊಂಡಾಗ ಪಿರ್ಯಾದಿಯು ಮನೆಯಿಂದ ಓಡಿ ಬಂದು ನೋಡಿದಾಗ ಸುವರ್ಣ ಳ ಎಡಕೈ ಗೆ ಬಲವಾದ ಪೆಟ್ಟು ಬಿದ್ದು ರಕ್ತಗಾಯವಾಗಿತ್ತು. ಆಗ ಪಿರ್ಯಾದಿಯು ಅಲ್ಲೇ ಇದ್ದ ಸಾರ್ವಜನಿಕರು ಮತ್ತು ಹರೀಶ ಬಿನ್ ತಿರುಮಲಯ್ಯ, ರಾಜಣ್ಣ ಬಿನ್ ನಂಜೇಗೌಡ ರವರ ಸಹಾಯದಿಂದ  108 ವಾಹನದಲ್ಲಿ ಎ ಸಿ ಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಅಪಘಾತಪಡಿಸಿದ ಕೆಎ06-ಇವೈ- 0589 ನೇ ದ್ವಿಚಕ್ರ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ತನಿಖೆ ಕೈಗೊಂಡಿರುತ್ತೆ .


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 79 guests online
Content View Hits : 321520