lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< June 2018 >
Mo Tu We Th Fr Sa Su
        1 2 3
4 5 7 8 9 10
11 12 13 14 15 16 17
18 19 20 21 22 23 24
25 26 27 28 29 30  
Wednesday, 06 June 2018
ಅಪರಾಧ ಘಟನೆಗಳು 06-06-18

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 87/2018 ಕಲಂ: 279,304(ಎ) ಐ.ಪಿ.ಸಿ.

ದಿನಾಂಕ:05/06/2018 ರಂದು ರಾತ್ರಿ 8-15 ಗಂಟೆಗೆ ಪಿರ್ಯಾದಿ ಹರೀಶ್ ಬಿನ್ ಕುಮಾರಯ್ಯ, ಮಡಿವಾಳ ಜನಾಂಗ, ಮಗ್ಗದ ಕೆಲಸ, ಮಂಜುನಾಥನಗರ, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ಸ್ವಂತ ಊರು ಹಾರನಹಳ್ಳಿ ಕೋಡಿಮಠ, ಅರಸೀಕೆರೆ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ಅಕ್ಕ ಅನಿತಾಳನ್ನು ತರೀಕೆರೆ ತಾಲ್ಲೋಕ್ ನಾಗವಂಗಲದ ಶಂಕರಪ್ಪನವರಿಗೆ ಕೊಟ್ಟು ಮದುವೆ ಮಾಡಿದ್ದು, ಬಾವನಾದ ಶಂಕರಪ್ಪನವರು ಗಾರೆ ಕೆಲಸ ಮಾಡುತ್ತಿದ್ದು, ತಿಪಟೂರು ತಾಲ್ಲೋಕ್ ಮಣಿಕಿಕೆರೆ ಗ್ರಾಮದಲ್ಲಿ ಘತ್ರ ನಿರ್ಮಾಣದ ಕೆಲಸಕ್ಕೆ ಹೋಗುತ್ತಿದ್ದರು. ಅವರು ದಿನಾಂಕ:04/06/2018 ರಂದು ಅಕ್ಕನ ಊರಾದ ಕೋಡಿಮಠಕ್ಕೆ ಹೋಗಿ ವಾಪಸ್ ಅರಸೀಕೆರೆ ಕಡೆಯಿಂದ ತಿಪಟೂರಿನ ನಮ್ಮ ಮನೆಗೆ ಬರಲು ರಾತ್ರಿ ಸುಮಾರು 7-45 ಗಂಟೆಯಲ್ಲಿ ತನ್ನ ಬಾಬ್ತು ಕೆ.ಎ-13 ಇ.ಎಂ-5394 ನೇ ಟಿ.ವಿ.ಎಸ್ ನಲ್ಲಿ ಬಂದು ತಿಪಟೂರು ನಗರದ ಹಾಸನ ಸರ್ಕಲ್ ಬಳಿ ಇರುವ ಭೋಜೇಗೌಡರ ಹೋಟೆಲ್ ಮುಂಭಾಗ ಎನ್.ಹೆಚ್-206 ರಸ್ತೆಯಲ್ಲಿ ಯಾವುದೇ ಇಂಡಿಕೇಟರ್ ಹಾಕದೇ, ತಿಪಟೂರು ಬಸ್ ನಿಲ್ದಾಣದ ಕಡೆಗೆ ಮುಖಮಾಡಿ ನಿಲ್ಲಿಸಿದ್ದ ಕೆ.ಎ-14 ಎ-8071 ನೇ ಲಾರಿಗೆ ಗುದ್ದಿಸಿಕೊಂಡು ಕೆಳಗೆ ಬಿದ್ದು, ತಲೆಗೆ ರಕ್ತಗಾಯವಾಗಿರುತ್ತೆಂದು ಕೂಡಲೇ ನಾವು ಮತ್ತು ಸಾರ್ವಜನಿಕರು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತೇವೆಂದು ಸ್ಥಳದಲ್ಲಿದ್ದ ಆದಿಲಕ್ಷ್ಮೀನಗರದ ಯೋಗೀಶ್, ಮತ್ತು ದೇವರಾಜುರವರುಗಳು ನನಗೆ ಫೋನ್ ಮಾಡಿ ತಿಳಿಸಿದ್ದು, ನಾನು ತಕ್ಷಣ ಆಸ್ಪತ್ರೆಗೆ ಬಂದು ನೋಡಿದಾಗ ನಮ್ಮ ಬಾವ ಶಂಕರಪ್ಪನವರಿಗೆ ತಲೆಗೆ ಪೆಟ್ಟು ಬಿದ್ದು, ರಕ್ತಗಾಯವಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಬಾವ ಶಂಕರಪ್ಪನವರು ಈ ದಿನ ಸಂಜೆ 6-00 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಮೇಲ್ಕಂಡ ಕೆ.ಎ-14 ಎ-8071 ನೇ ಲಾರಿ ಚಾಲಕನು ತನ್ನ ಲಾರಿಯನ್ನು ರಸ್ತೆಯಲ್ಲಿ ಯಾವುದೇ ಅಡೆ-ತಡೆಗಳನ್ನು ಹಾಕದೇ, ಇಂಡಿಕೇಟರ್ ಅನ್ನು ಸಹ ಹಾಕದೇ ನಿರ್ಲಕ್ಷತೆಯಿಂದ ಲಾರಿಯನ್ನು ರಸ್ತೆಯಲ್ಲಿ ನಿಲ್ಲಿಸಿದ್ದರಿಂದ ಆ ವಾಹನಕ್ಕೆ ಗುದ್ದಿಸಿಕೊಂಡಿದ್ದು, ನಮ್ಮ ಬಾವ ಶಂಕರಪ್ಪನವರ ಸಾವಿಗೆ ಕಾರಣನಾಗಿರುತ್ತಾನೆ. ಸದರಿ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 86/2018 ಕಲಂ: 341,323, 504, 506 ಐ.ಪಿ.ಸಿ

ದಿನಾಂಕ:5/06/2018 ರಂದು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಸಯ್ಯದ್ ಖಾಜಾ ಬಿನ್ ಲೇಟ್ ಯೂಸೂಬ್ ಷರೀಫ್, 24 ವರ್ಷ, ಮುಸ್ಲೀಂ ಜನಾಂಗ, 3ನೇ ಕ್ರಾಸ್, ಗಾಂಧಿನಗರ, ತಿಪಟೂರು ಟೌನ್ ರವರಿಂದ ಪಡೆದ ಹೇಳಿಕೆಯ ಅಂಶವೇನೆಂದರೆ, ದಿನಾಂಕ: 04/06/2018 ರಂದು ರಾತ್ರಿ ನಾನು, ಸಾದತ್ ಹಾಗೂ ಗಾಂಧಿನಗರದ ಇತರ ಹುಡುಗರ ಜೊತೆ ಗಾಂಧಿನಗರ ಪಾರ್ಕ್ ಒಳಗೆ ಆಸ್ಪತ್ರೆಯ ಹಿಂಭಾಗ ಮಾತನಾಡುತ್ತಾ ನಿಂತಿದ್ದು, ನಂತರ ಅವರೆಲ್ಲರೂ ಹೋಗಿದ್ದು, ರಾತ್ರಿ 7-15 ಗಂಟೆಯಲ್ಲಿ ನಾನು ಮತ್ತು ಸಾದತ್ ಇಬ್ಬರೂ ಪಾರ್ಕ್ ನಿಂದ ಹೊರಗೆ ಹೋಗಲು ಹೋದಾಗ ಅಲ್ಲೇ ಇದ್ದ ಮಹಮದ್ ಯೂನಸ್ ಎಂಬಾತನು ನಮಗೂ ಅವರ ಮನೆಯವರಿಗೂ ಇದ್ದ ಹಿಂದಿನ ದ್ವೇಷದಿಂದ ನನ್ನ ಮೇಲೆ ಏಕೆ ಗುರಾಯಿಸುತ್ತೀಯಾ ಎಂದು ಜಗಳ ತೆಗೆದು, ಲೋಫರ್ ನನ್ನ ಮಗನೇ, ಸುವರ್ ನನ್ನ ಮಗನೇ ಎಂತಾ ಕೆಟ್ಟ ಮಾತುಗಳಿಂದ ಬೈದು ಕೈಯಿಂದ ಮೈಕೈಗೆ ಹೊಡೆದು, ಉಗುರಿನಿಂದ ಎದೆಯ ಬಳಿ ಪರಚಿ ನೋವುಂಟು ಮಾಡಿದ. ಅಷ್ಟರಲ್ಲಿ ನನ್ನ ಜೊತೆಯಲ್ಲಿದ್ದ ಸಾದತ್, ಈ ಗಲಾಟೆ ಬಿಡಿಸಿದರು. ಮಹಮದ್ ಯೂನಸ್ ಹೋಗುವಾಗ ಈ ಕೇಸು ಮುಗಿಯಲಿ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂತಾ ಬೆದರಿಕೆ ಹಾಕಿ ಹೋಗಿರುತ್ತಾನೆ. ನಾನು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ -121/2018 ಕಲಂ 279,337 ಐಪಿಸಿ ರೆ/ವಿ 134 (ಎ) & (ಬಿ) 187 ಐ ಎಂ ವಿ ಆಕ್ಟ್

ದಿನಾಂಕ-05/06/2018 ರಂದು ಮಧ್ಯಾಹ್ನ 12-45 ಗಂಟೆಗೆ ಪಿರ್ಯಾದುದಾರರಾದ ರುದ್ರೇಶಯ್ಯರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ದಿನಾಂಕ: 30-04-2018 ರಂದು ನಾನು ನನ್ನ ಸ್ವಂತ ಕೆಲಸದ ಮೇಲೆ ಚಾಸ್ಸಿಸ್‌ ನಂಬರ್‌-MD621BD1XF1A15706, ಇಂಜಿನ್‌ ನಂಬರ್‌- 0D1AF1070033 ನೇ ಟಿ,ವಿ,ಎಸ್ ಎಕ್ಸ್‌.ಎಲ್‌ ಸೂಪರ್‌ ದ್ವಿಚಕ್ರ ವಾಹನದಲ್ಲಿ ಸಿರಿವರ ಗ್ರಾಮಕ್ಕೆ ಹೋಗಿದ್ದು, ನಂತರ ವಾಪಸ್ ನಮ್ಮ ಗ್ರಾಮವಾದ ಕೆಂಬಳಲುವಿಗೆ ಹೋಗಲೆಂದು ಕೆಂಬಳಲು ಪಾಳ್ಯ ಗ್ರಾಮದ ಕೃಷ್ಣಪ್ಪ ಬಿನ್ ಹುಚ್ಚಹನುಮಯ್ಯ ರವರ ಜಮೀನಿನ ಮುಂಭಾಗದ ಗುಬ್ಬಿ-ಹೆಬ್ಬೂರು ರಸ್ತೆಯಲ್ಲಿನ ದೊಡ್ಡ ಸೇತುವೆಯ ಬಳಿ ರಾತ್ರಿ ಸುಮಾರು 09-30 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ್ಗೆ, ನನ್ನ ಎದುರಿಗೆ ಹೆಬ್ಬೂರು ಕಡೆಯಿಂದ ಗುಬ್ಬಿ ಕಡೆಗೆ ಹೋಗಲು ಬಂದ ಕೆಎ-06-ಇ.ಆರ್‌-7513 ನೇ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನಾನು ಹೋಗುತ್ತಿದ್ದ ಟಿ,ವಿ,ಎಸ್‌ ಎಕ್ಸ್‌‌.ಎಲ್‌ ಸೂಪರ್‌ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದನು. ಪರಿಣಾಮವಾಗಿ ನನಗೆ ಎಡಗಾಲಿಗೆ ತೀವ್ರತರವಾದ ಗಾಯಗಳಾದವು. ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನು ದ್ವಿಚಕ್ರ ವಾಹನವನ್ನು ಸ್ಥಳದಿಂದ ತೆಗೆದುಕೊಂಡು ಹೊರಟು ಹೋದನು. ಆಗ ಅಲ್ಲಿಯೇ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಕೆಂಬಳಲುಪಾಳ್ಯ ಗ್ರಾಮದ ವಾಸಿಯಾದ ಗಂಗಣ್ಣ ರವರು ನನ್ನನ್ನು ಎತ್ತಿ ಉಪಚರಿಸಿ ಸ್ಥಳಕ್ಕೆ ಬಂದ ಯಾವುದೋ ಒಂದು ಕಾರಿನಲ್ಲಿ ಹೆಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಆಂಬುಲೆನ್ಸ್‌ ನಲ್ಲಿ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾದೆನು. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ಆರ್‌-7513 ನೇ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಫಘಾತಕ್ಕೊಳಗಾದ ಟಿ,ವಿ,ಎಸ್ ಎಕ್ಸ್‌.ಎಲ್‌ ಸೂಪರ್ ದ್ವಿಚಕ್ರ ವಾಹನವು ಕೆಂಬಳಲು ಪಾಳ್ಯ ಗ್ರಾಮದ ಗಂಗಣ್ಣ ರವರ ಟೀ ಅಂಗಡಿಯ ಬಳಿ ನಿಲ್ಲಿಸಿರುತ್ತೆ,ಎಂತಾ ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 50/2018   ಕಲಂ: .143. 323.324. 504.506 RW 149 IPC

ದಿನಾಂಕ:05/06/2018 ರಂದು ಸಂಜೆ 4:00 ಗಂಟೆಗೆ ಪಿರ್ಯಾದಿ  ರಾಮಣ್ಣ ಬಿನ್ ಮಲ್ಲಪ್ಪ, 45 ವರ್ಷ, ಆದಿ ಕರ್ನಾಟಕ ಜನಾಂಗ ಕೂಲಿಕೆಲಸ  ಬಲ್ಲೇನಹಳ್ಳಿ ಗ್ರಾಮ,ಪಾವಗಡ ತಾ|| ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:02/06/2018 ರಂದು ಸಂಜೆ 5:30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಮಗಳು ಕೃಷ್ಣವೇಣಿ ಕೋಂ ಬಾಬು ನಮ್ಮ ಗ್ರಾಮದ ಕೃಷಮೂರ್ತಿ ಎಂಬುವವರ ಮನೆಯ ಮುಂದಿರುವ ನೀರಿನ ಟ್ಯಾಂಕಿಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಗ್ರಾಮದ ನಮ್ಮ ಜನಾಂಗಕ್ಕೆ ಸೇರಿದ ನೇತ್ರಾವತಿ ಡಿ./ಓ ಚೆನ್ನಪ್ಪ ಮತ್ತು ಲಕ್ಷ್ಮೀ ಕೋಂ ಕೃಷ್ಣಮೂರ್ತಿ ರವರು ಬಟ್ಟೆ ಒಗೆದ ಕೊಳೆಯ ನೀರನ್ನು ರಸ್ತೆಗೆ ಚೆಲ್ಲಿದ್ದು ಆಗ ನನ್ನ ಮಗಳಾದ ಕೃಷ್ಣವೇಣಿ ರಸ್ತೆಗೆ ಕೊಳೆ ನೀರು ಚೆಲ್ಲಬೇಡಿ ಜನರು ಓಡಾಡುತ್ತಿರುತ್ತಾರೆಂತ ಹೇಳಿದಾಗ ನೇತ್ರಾವತಿ ಎಂಬುವವಳು ನೀನ್ಯಾವಳೇ ನನಗೆ ಹೇಳೋದಕ್ಕೆ ನಾನು ಇಲ್ಲಿಯೇ ಚೆಲ್ತೀನಿ ಎಂತ ಗಲಾಟೆ ತೆಗೆದು ನಮ್ಮನ್ನು ಹೊಡೆಯ ಬೇಕೆಂಬ ಉದ್ದೇಶದಿದಿಂದ 1] ನೇತ್ರಾವತಿ ಡಿ/ಓ ಚೆನ್ನಪ್ಪ , 24 ವರ್ಷ , 2] ಅಂಜಯ್ಯ ಬಿನ್ ಸಣ್ಣ ಮೈಲಾರಪ್ಪ, 40 ವರ್ಷ 3] ಲಕ್ಷ್ಮೀ ಕೋಂ ಕೃಷ್ಣಮೂರ್ತಿ , 30 ವರ್ಷ 4] ರವಿ ಬಿನ್ ಮಾರಪ್ಪ ,30 ವರ್ಷ ಪೋತಗಾನಹಳ್ಳಿ 5] ನವೀನ ಬಿನ್ ರಾಮಾಂಜನೇಯ ,23 ವರ್ಷ 6] ಜಯಮ್ಮ ಕೋಂ ಚೆನ್ನಪ್ಪ ,40 ವರ್ಷ, 7] ಶ್ರೀನಿವಾಸ ಬಿನ್ ಸಣ್ಣ ಮೈಲಾರಪ್ಪ 8] ಕೆಂಚಮ್ಮ ಕೋಂ ಅಂಜಯ್ಯ ರವರುಗಳು ಅಕ್ರಮ ಗುಂಪುಕಟ್ಟಿಕೊಂಡು ಬಂದು ನೇತ್ರಾವತಿ ಎಂಬುವವಳು ನನ್ನ ಮಗಳಾದ ಕೃಷ್ಣವೇಣಿಯ ಜುಟ್ಟು ಹಿಡಿದು ಎಳೆದಾಡಿ ಕೃಷ್ಣವೇಣಿಯ ಬಲಕೈನ ತೋರ ಬೆರಳನ್ನು ತಿರುಚಿ ಗಾಯವನ್ನುಂಟು ಮಾಡಿದಳು ಬಿಡಿಸಿಕೊಳ್ಳಲು ಹೋದ ನನಗೆ ರವಿ ಎಂಬುವವನು ಕೆಳಕ್ಕೆ ಕಡೆವಿಕೊಂಡು ದೊಣ್ಣೆಯಿಂದ ನನ್ನ ಬಲ ಮೊಣಕಾಲಿಗೆ ಹೊಡೆದು ನೋವುಂಟು ಮಾಡಿದ್ದು ಬಿಡಿಸಿಕೊಳ್ಳಲು ಬಂದ ನನ್ನ ಹೆಂಡತಿ ಜಯಮ್ಮಳನ್ನು ಮೇಲ್ಕಂಡವರುಗಳೆಲ್ಲರೂ ಜುಟ್ಟು ಹಿಡಿದು ಎಳೆದಾಡಿ ಕೈಗಳಿಂದ ಮೈ ಕೈ ಗೆ ಗುದ್ದಿ ನೋವುಂಟು ಮಾಡಿದರು ಆಗ ಸ್ಥಳದಲ್ಲಿದ್ದ ನಮ್ಮ ಗ್ರಾಮದ ನಾಗರಾಜ ಬಿನ್ ತಿಪ್ಪಪ್ಪ, 40 ವರ್ಷ. ಪ.ಜಾತಿ ಮತ್ತು ಮಾಧವ ಬಿನ್ ತಿಮ್ಮಪ್ಪ 38 ವರ್ಷ ಪ.ಜಾತಿ ರವರುಗಳು ಜಗಳ ಬಿಡಿಸಿ ನಮ್ಮನ್ನು ಸಮಾಧಾನ ಪಡಿಸಿದ್ದು ಆಗ ಮೇಲ್ಕಂಡವರುಗಳೆಲ್ಲಾ ಸೂಳೇ ಮುಂಡೇರ ನೀವೇನಾದರೂ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಕೊಲೆ ಮಾಡಿ ಸಾಯಿಸುತ್ತೇವೆಂತ ಪ್ರಾಣಬೆದರಿಕೆ ಹಾಕಿ ಹೊರಟು ಹೋದರು, ಗಾಯವಾಗಿದ್ದ ನಾನು ಮತ್ತು ನನ್ನ ಮಗಳು ಕೃಷ್ಣವೇಣಿ ರವರು ದಿನಾಂಕ:03/06/2018 ರಂದು ವೈ ಎನ್ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ನನ್ನ ಹೆಂಡತಿಗೆ ಚಿಕಿತ್ಸೆ ಪಡೆಯುವಂತ ಗಾಯಗಳಾಗದೇ ಇದ್ದುದ್ದರಿಂದ ಜಯಮ್ಮ ಚಿಕಿತ್ಸೆ ಪಡೆದಿರುವುದಿಲ್ಲ, ನಾವು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇವೆ,. ಆದ್ದರಿಂದ ನಮ್ಮ ಮೇಲೆ ಗಲಾಟೆ ಮಾಡಿ ಹೊಡೆದಿರುವ ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ಇತ್ಯಾದಿಯಾಗಿ ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ  ದಾಖಲಿಸಿರುತ್ತದೆ

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ -121/2018 ಕಲಂ 279,337 ಐಪಿಸಿ ರೆ/ವಿ 134 (ಎ) & (ಬಿ) 187 ಐ ಎಂ ವಿ ಆಕ್ಟ್

ದಿನಾಂಕ-05/06/2018 ರಂದು ಮಧ್ಯಾಹ್ನ 12-45 ಗಂಟೆಗೆ ಪಿರ್ಯಾದುದಾರರಾದ ರುದ್ರೇಶಯ್ಯರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ದಿನಾಂಕ: 30-04-2018 ರಂದು ನಾನು ನನ್ನ ಸ್ವಂತ ಕೆಲಸದ ಮೇಲೆ ಚಾಸ್ಸಿಸ್‌ ನಂಬರ್‌-MD621BD1XF1A15706, ಇಂಜಿನ್‌ ನಂಬರ್‌- 0D1AF1070033 ನೇ ಟಿ,ವಿ,ಎಸ್ ಎಕ್ಸ್‌.ಎಲ್‌ ಸೂಪರ್‌ ದ್ವಿಚಕ್ರ ವಾಹನದಲ್ಲಿ ಸಿರಿವರ ಗ್ರಾಮಕ್ಕೆ ಹೋಗಿದ್ದು, ನಂತರ ವಾಪಸ್ ನಮ್ಮ ಗ್ರಾಮವಾದ ಕೆಂಬಳಲುವಿಗೆ ಹೋಗಲೆಂದು ಕೆಂಬಳಲು ಪಾಳ್ಯ ಗ್ರಾಮದ ಕೃಷ್ಣಪ್ಪ ಬಿನ್ ಹುಚ್ಚಹನುಮಯ್ಯ ರವರ ಜಮೀನಿನ ಮುಂಭಾಗದ ಗುಬ್ಬಿ-ಹೆಬ್ಬೂರು ರಸ್ತೆಯಲ್ಲಿನ ದೊಡ್ಡ ಸೇತುವೆಯ ಬಳಿ ರಾತ್ರಿ ಸುಮಾರು 09-30 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ್ಗೆ, ನನ್ನ ಎದುರಿಗೆ ಹೆಬ್ಬೂರು ಕಡೆಯಿಂದ ಗುಬ್ಬಿ ಕಡೆಗೆ ಹೋಗಲು ಬಂದ ಕೆಎ-06-ಇ.ಆರ್‌-7513 ನೇ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನಾನು ಹೋಗುತ್ತಿದ್ದ ಟಿ,ವಿ,ಎಸ್‌ ಎಕ್ಸ್‌‌.ಎಲ್‌ ಸೂಪರ್‌ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದನು. ಪರಿಣಾಮವಾಗಿ ನನಗೆ ಎಡಗಾಲಿಗೆ ತೀವ್ರತರವಾದ ಗಾಯಗಳಾದವು. ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನು ದ್ವಿಚಕ್ರ ವಾಹನವನ್ನು ಸ್ಥಳದಿಂದ ತೆಗೆದುಕೊಂಡು ಹೊರಟು ಹೋದನು. ಆಗ ಅಲ್ಲಿಯೇ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಕೆಂಬಳಲುಪಾಳ್ಯ ಗ್ರಾಮದ ವಾಸಿಯಾದ ಗಂಗಣ್ಣ ರವರು ನನ್ನನ್ನು ಎತ್ತಿ ಉಪಚರಿಸಿ ಸ್ಥಳಕ್ಕೆ ಬಂದ ಯಾವುದೋ ಒಂದು ಕಾರಿನಲ್ಲಿ ಹೆಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಆಂಬುಲೆನ್ಸ್‌ ನಲ್ಲಿ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾದೆನು. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ಆರ್‌-7513 ನೇ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಫಘಾತಕ್ಕೊಳಗಾದ ಟಿ,ವಿ,ಎಸ್ ಎಕ್ಸ್‌.ಎಲ್‌ ಸೂಪರ್ ದ್ವಿಚಕ್ರ ವಾಹನವು ಕೆಂಬಳಲು ಪಾಳ್ಯ ಗ್ರಾಮದ ಗಂಗಣ್ಣ ರವರ ಟೀ ಅಂಗಡಿಯ ಬಳಿ ನಿಲ್ಲಿಸಿರುತ್ತೆ,ಎಂತಾ ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 80/2018 ಕಲಂ 384 ಐಪಿಸಿ

ದಿನಾಂಕ: 05/06/2018 ರಂದು ಮದ್ಯಾಹ್ನ 1-30 ಗಂಟೆಗೆ ತುಮಕೂರು ಟೌನ್‌, ಬನಶಂಕರಿ, ಶ್ರೀ ಗಂಗಾಪರಮೇಶ್ವರಿ ವಿದ್ಯಾರ್ಥಿ ನಿಲಯದ ವಾಸಿ ಕಾರ್ತಿ ಕ್ ಹೆಚ್.ಸಿ ಬಿನ್ ಚಂದ್ರಶೇಖರ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ತುಮಕೂರು ಓಬಳಾಪುರದಲ್ಲಿ ಇರುವ ಏ.ಐ.ಟಿ ಇಂಜಿನಿಯರ್‍ ಕಾಲೇಜಿನಲ್ಲಿ 2 ನೇ ಬಿ.ಇ. ವಿದ್ಯಾರ್ಥಿ ಯಾಗಿರುತ್ತೆನೆ, ನಾನು ತುಮಕೂರು ಬನಶಂಕರಿಯಲ್ಲಿ ಶ್ರೀ ಗಂಗಾಪರಮೇಶ್ವರಿ ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿರುತ್ತೆ, ವಿದ್ಯಾರ್ಥಿ ನಿಲಯದಲ್ಲಿ ರೂಂಗಳನ್ನು ಮಾತ್ರ ನೀಡಿದ್ದು ನಮಗೆ ಊಟ ನೀಡುವುದಿಲ್ಲ, ನಾನು ಹೊರಗಡೆ ಊಟ ಮಾಡಿಕೊಂಡು ಇರುತ್ತಿದ್ದೆ. ಆದ್ದರಿಂದ ನಾನು ದಿನ ನಿತ್ಯದ ಆಗೆ ದಿನಾಂಕ: 03/06/2018 ರಂದು ರಾತ್ರಿ ಸುಮಾರು 8.30 ಗಂಟೆಯಲ್ಲಿ ಊಟಕ್ಕೆ ಟೌನ್‍ ಹಾಲ್‍ನಲ್ಲಿ ಇರುವ ಕ್ಯಾಂಟಿನ್‍ಗೆ ಹೋಗಿ ಊಟ ಮಾಡಿಕೊಂಡು ವಾಪಾಸ್‍ ಬಂದು  ರಾಮಕೃಷ್ಣಾ ಆಶ್ರಮದ ಪಕ್ಕ ಇರುವ ಐ ಮಾಸ್ಕ್‌ ಲೈಟ್‌ ಕೆಳಗೆ ಸಿಮೆಂಟ್‌ ಕಟ್ಟೆಯ ಮೇಲೆ ಕುಳಿತು ಫೋನ್‌ ಮಾಡುತ್ತಿದ್ದಾಗ ನನ್ನ ಹತ್ತಿರಕ್ಕೆ ಯಾರೋ ಮೂರು ಜನ ಹುಡುಗರು ಬಂದವರೇ ನನಗೆ ಚಾಕು ತೋರಿಸಿ ಮೊಬೈಲ್‌ ಫೋನ್ ಕೊಡುವಂತೆ ಹೆದರಿಸಿದ್ದರಿಂದ ನಾನು ನನ್ನ ಮೊಬೈಲ್‌ ಫೋನ್‌ ಅನ್ನು  ಅವರಿಗೆ ಕೊಟ್ಟಾಗ ಅವರು ಅಲ್ಲಿಂದ ಓಡಿ ಹೋಗಿರುತ್ತಾರೆ, ನನಗೆ ನಂತರ ಭಯವಾಗಿ ಈ ವಿಚಾರವನ್ನು ಯಾರಿಗೂ ಹೇಳದೆ ಮಾರನೇ ದಿನ ನಮ್ಮ ಊರಿಗೆ ಹೋಗಿ ನಮ್ಮ ತಂದೆತಾಯಿಗೆ ವಿಚಾರ ತಿಳಿಸಿದ್ದು ನಮ್ಮ ತಂದೆತಾಯಿ ಪೊಲೀಸ್‌ಗೆ ದೂರು ನೀಡುವಂತೆ ತಿಳಿಸಿದ್ದರಿಂದ ಈ ದಿನ ಪೊಲೀಸ್ ಠಾಣೆಗೆ ಬಂದು ಈ ದೂರು ನೀಡುತ್ತಿದ್ದೇನೆ.  ತಾವು ದಯಮಾಡಿ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ  ನನ್ನ ಮೊಬೈಲ್‌ ಫೋನ್‌ ( Motorola Mobile Phone, Model Number- Moto G5 Plus, Price- 16999 Rs, IMEI.No.- 358958062808156, 358958062808164 ) ಅನ್ನು ಕೊಡಿಸಿಕೊಡಬೇಕೆಂತ ಕೋರಿ ನೀಡಿರುವ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ

ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954

Today's Weather

We have 79 guests online
Content View Hits : 321520