lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< June 2018 >
Mo Tu We Th Fr Sa Su
        1 2 3
4 6 7 8 9 10
11 12 13 14 15 16 17
18 19 20 21 22 23 24
25 26 27 28 29 30  
Tuesday, 05 June 2018
ಅಪರಾಧ ಘಟನೆಗಳು 05-06-18

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 84/2018 ಕಲಂ: 323,504,506 r/w  34 ಐ.ಪಿ.ಸಿ

ದಿನಾಂಕ:04/06/2018 ರಂದು ರಾತ್ರಿ 08-20 ಗಂಟೆಯಿಂದ 09-00 ಗಂಟೆವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮಹಮ್ಮದ್‌ ಯೂನಸ್‌‌ ಬಿನ್‌ ಟಿ.ಎಸ್‌ ಮುನೀರ್‌ಪಾಷ , 22 ವರ್ಷ, ಹಾರ್ಡ್‌ ವೇರ್‌ ಅಂಗಡಿ ಮಾಲೀಕ, 5ನೇ ಕ್ರಾಸ್‌‌, ಪಾರ್ಕ್‌ ರಸ್ತೆ, ಗಾಂಧಿನಗರ, ತಿಪಟೂರು ಟೌನ್‌ ರವರು ನೀಡಿರುವ ಹೇಳಿಕೆ ಅಂಶವೇನೆಂದರೆ, ದಿನಾಂಕ:04/06/2018 ರಂದು ರಾತ್ರಿ ಸುಮಾರು 07-30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಸ್ನೇಹಿತ ಸುಹೇಲ್‌ ಇಬ್ಬರೂ ತಿಪಟೂರಿನ ಗಾಂಧಿನಗರದ ಪಾರ್ಕ್‌ ಬಳಿ ಮಾತನಾಡುತ್ತಾ ನಿಂತಿದ್ದಾಗ ನಮ್ಮ ಗಾಂಧಿನಗರದ ಖಾಜಾ, ಸಾದತ್‌‌ ಮತ್ತು ಇತರೆ 3 ಜನ ಅಲ್ಲಿಯೇ ಮಾತನಾಡುತ್ತಾ ನಿಂತಿದ್ದರು, ಸ್ವಲ್ಪ ಹೊತ್ತು ಬಿಟ್ಟು ಎಲ್ಲರೂ ಹೊರಟು ಹೋದರು. ಮತ್ತೆ ಸ್ವಲ್ಪ ಹೊತ್ತು ಆದ ಮೇಲೆ ಖಾಜಾ ಮತ್ತು ಸಾದತ್‌ ಇಬ್ಬರೂ ನನ್ನ ಬಳಿ ಬಂದು ಏನೋ ಗುರಾಯಿಸುತ್ತೀಯ ಅಂತ ಅಂದನು, ಆಗ ನಾನು ನಾನೇಕೆ ಗುರಾಯಿಸಲಿ ಅಂತ ಅಂದಾಗ ಏಕಾಏಕೀ ನನ್ನ ಎಡಭಾಗದ ದವಡೆಗೆ ಹೊಡೆದು ಗಾಯಪಡಿಸಿದ, ನಂತರ ಕೈಯಿಂದ ನನ್ನ ಹೊಟ್ಟೆಯ ಹತ್ತಿರ ಗುದ್ದಿ ನೋವುಂಟು ಮಾಡಿದ ಅಷ್ಟರಲ್ಲಿ ನನ್ನ ಸ್ನೇಹಿತ ಸುಹೇಲ್‌ ಬಿಡಿಸಲು ಬಂದಾಗ ಅವನಿಗೂ ಕೈಯಿಂದ ಅವನ ಕಾಪಳಕ್ಕೆ ಹೊಡೆದು ನೋವುಂಟು ಮಾಡಿದನು. ನನಗೆ ಕೈಯಿಂದ ಹೊಡೆಯುವಾಗ ಅವನ ಕೈಯಲ್ಲಿ ಒಳಗೆ ಯಾವುದೋ ವಸ್ತುವನ್ನು ಇಟ್ಟುಕೊಂಡು ಹೊಡೆದಿರುತ್ತಾನೆ. ಖಾಜಾಗೂ ನಮಗೂ ಈ ಹಿಂದೆ ಗಲಾಟೆಯಾದ ಬಗ್ಗೆ ಕೇಸು ಆಗಿದ್ದ ಬಗ್ಗೆ ಅದೇ ದ್ವೇಷವನ್ನು ಇಟ್ಟುಕೊಂಡು ಹಲ್ಲೆ ಮಾಡಿರುತ್ತಾನೆ. ಅಷ್ಟರಲ್ಲಿ ಅಲ್ಲಿದ್ದವರು ಜಗಳ ಬಿಡಿಸಿದಾಗ ಬೋಳಿಮಗನೇ, ಲೋಫರ್‌ ನನ್ನ ಮಗನೇ ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ನನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿರುವ ಖಾಜಾನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಂತ ನೀಡಿರುವ ಹೇಳಿಕೆ ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 85/2018 ಕಲಂ: 332, 353, 354, 504, 506 r/w  34 ಐ.ಪಿ.ಸಿ

ದಿನಾಂಕ:05/06/2018 ರಂದು ಬೆಳಗ್ಗೆ 00-30 ಗಂಟೆಗೆ ಪಿರ್ಯಾದಿ  ಡಾ// ಕೆ.ರಂಗನಾಧ, ವೈಧ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ, ತಿಪಟೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:04/06/2018 ರಂದು ನಾನು ಮತ್ತು ಸಿಬ್ಬಂದಿಗಳಾದ ಶುಶ್ರೂಷಕಿ ಆಶಾ,ಲತಾ ಮತ್ತು ಡಿ ಗ್ರೂಪ್‌ ನೌಕರನಾದ ದಿನೇಶ್‌ಕುಮಾರ ಹಾಗೂ ಗುತ್ತಿಗೆ ನೌಕರರಾದ ಶ್ರೀಕಂಠಸ್ವಾಮಿ, ಗಿರೀಶ್‌, ವೆಂಕಟೇಶ್‌, ಚೇತನ್‌ ರವರು ಹಾಗೂ ಸ್ವಾಮಿ ರವರುಗಳು ರಾತ್ರಿ ವೇಳೆಯ ಕರ್ತವ್ಯದಲ್ಲಿದ್ದಾಗ ರಾತ್ರಿ ಸುಮಾರು 11-30 ಗಂಟೆ ಸಮಯದಲ್ಲಿ ನಾನು ದಾಖಲಾಗಿದ್ದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗ ಆಸ್ಪತ್ರೆಯ ಓಪಿಡಿ ವಿಭಾಗದ ಮುಂದೆ ಕೂಗಾಡುತ್ತಿದ್ದ ಶಬ್ದ ಕೇಳಿ ಹೊರಬಂದು ನೋಡಿದಾಗ ನಮ್ಮ ಸಿಬ್ಬಂದಿಗಳಾದ ದಿನೇಶ್‌ಕುಮಾರ್ ಮತ್ತು ಆಶಾ, ಲತಾ ರವರುಗಳೊಂದಿಗೆ ಯಾರೊ ಮೂರು ಜನ ಸಾರ್ವಜನಿಕರು ಮೇಲ್ಕಂಡ ಸಿಬ್ಬಂದಿಗಳೊಂದಿಗೆ ಹಿಡಿದು ಎಳೆದಾಡುತ್ತಿದ್ದು, ಅವರುಗಳ ಪೈಕಿ ಸಣ್ಣಗೆ ತೆಳ್ಳಗಿರುವ ಒಬ್ಬ ವ್ಯಕ್ತಿ ದಿನೇಶ್‌ಕುಮಾರ್‌ಗೆ ತನ್ನ ಕೈಯಲ್ಲಿ ಹಾಕಿಕೊಂಡಿದ್ದ ರಿಂಗ್‌ನಿಂದ ಆತನ ತಲೆ ಮೇಲ್ಬಾಗಕ್ಕೆ ಹೊಡೆದು ರಕ್ತಗಾಯಪಡಿಸಿದ, ಇನ್ನೊಬ್ಬ ದಪ್ಪಗಿರುವ ವ್ಯಕ್ತಿ ದಿನೇಶ್‌ನನ್ನು ತಬ್ಬಿ ಹಿಡಿದುಕೊಂಡಿದ್ದ, ಇದನ್ನು ನೋಡಿದ ನಮ್ಮ ಮಹಿಳಾ ಶುಶ್ರೂಷಕಿಯರಾದ ಆಶಾ ಮತ್ತು ಲತಾ ರವರನ್ನು ಹಿಡಿದು ಮೂರು ಜನರು ಎಳೆದಾಡಿದರು. ಅಷ್ಟರಲ್ಲಿ ಆಸ್ಪತ್ರೆಯಲ್ಲಿದ್ದ ಸಾರ್ವಜನಿಕರು ಹಾಗೂ ನಮ್ಮ ಇತರೆ ಸಿಬ್ಬಂದಿಯವರು ಜಗಳ ಬಿಡಿಸಿ ಕಳುಹಿಸುತ್ತಿದ್ದರು ಸಹ ಸೂಳೆ ಮಕ್ಕಳ, ಬೊಳಿಮಕ್ಕಳ ಎಂದು ಬೈದು ನಿಮ್ಮನ್ನು ಸಾಯಿಸದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು. ಅಷ್ಟರಲ್ಲಿ ವಿಷಯ ತಿಳಿದು ಬಂದ ಪೋಲಿಸರನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಅಷ್ಟರಲ್ಲಿ ಪೋಲಿಸರು ನಮ್ಮ ಸಿಬ್ಬಂದಿ ಸಹಾಯದಿಂದ ಹಿಡಿದು ತೆಳ್ಳಗಿದ್ದವನ ಹೆಸರು ತಿಳಿಯಲಾಗಿ ಆಸೀಫ್‌, ದಪ್ಪಗಿದ್ದವನ ಹೆಸರು ಇರ್ಫಾನ್‌ಖಾನ್‌ ಮತ್ತೊಬ್ಬನ ಹೆಸರು ನವೀನ್‌ ಆಗಿದ್ದು, ಮೂರು ಜನರು ಗಾಂಧಿನಗರ ವಾಸಿಗಳಾಗಿದ್ದಾರೆ ಎಂದು ತಿಳಿಯಿತು. ಮೇಲ್ಕಂಡ ಮೂರು ಜನ ಆರೋಪಿತರುಗಳು ಕರ್ತವ್ಯನಿರತ ಆಸ್ಪತ್ರೆಯ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಿಬ್ಬಂದಿ ದಿನೇಶ್‌ಕುಮಾರ್‌ ಮೇಲೆ ಹಲ್ಲೆ ಮಾಡಿ ರಕ್ತಗಾಯಪಡಿಸಿ ಮಹಿಳಾ ಸಿಬ್ಬಂದಿಗಳಾದ ಆಶಾ ಮತ್ತು ಲತಾ ರವರುಗಳನ್ನು ಹಿಡಿದು ಎಳೆದಾಡಿರುವ ಮೂರು ಜನರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಕಳ್ಳಂಬೆಳ್ಳ  ಪೊಲೀಸ್ಠಾಣಾ ಮೊ.ನಂ: 136/2018 ಕಲಂ-279, 283, 337, 304(ಎ)  ಐಪಿಸಿ

ದಿನಾಂಕ;04/06/2018 ರಂದು ರಾತ್ರಿ 10-45 ಗಂಟೆ ಸಮಯದಲ್ಲಿ ಪಿರ್ಯಾದಿ ಪಿ,ಎಸ್, ತಿಮ್ಮಯ್ಯ ಬಿನ್ ಹುಲಗಾಭೋವಿ 60 ವರ್ಷ ಬೋವಿ ಜನಾಂಗ ಕೆಂಚಪ್ಪನಹಳ್ಳಿ ವಡ್ಡರಹಟ್ಟಿ, ಬುಕ್ಕಾಪಟ್ಟಣ ಹೋಬಳಿ, ಸಿರಾ ತಾಲ್ಲೂಕ್, ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ 04/06/2018 ರಂದು ರಾತ್ರಿ 8-20 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ ಗ್ರಾಮದ ತಿಮ್ಮರಾಜು ಇಬ್ಬರೂ ಚಿಕ್ಕನಹಳ್ಳಿ ಬಸ್ ನಿಲ್ದಾಣದ ಬಳಿ ನಿಂತ್ತಿರುವಾಗ್ಗೆ ನಮ್ಮ ಗ್ರಾಮದ ಲಾರಿ ಚಾಲಕ ಮರಿಈರಣ್ಣನ ಮಗ ತಿಮ್ಮರಾಜು ತುಮಕೂರು- ಶಿರಾ ಎನ್.ಹೆಚ್, 48 ರಸ್ತೆಯ ಚಿಕ್ಕನಹಳ್ಳಿ ಬಸ್ ನಿಲ್ದಾಣದ ಬಳಿ ತನ್ನ ಲಾರಿಯನ್ನು ರಸ್ತೆ ನಿಯಮದ ವಿರುದ್ದವಾಗಿ ರಸ್ತೆಯಲ್ಲಿ ನಿಲ್ಲಿಸಿಕೊಂಡು ನಮ್ಮ ಗ್ರಾಮದ ಹುಲಗಯ್ಯನ ಮಗ ಶರತ್ ಈತನೊಂದಿಗೆ ಮಾತನಾಡುತ್ತಿರುವಾಗ್ಗೆ ಹಿಂದಿನಿಂದ ಒಂದು ಲಾರಿಯನ್ನು ಅದರ ಚಾಲಕ ಅತೀವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ತಕ್ಷಣ ನಾನು ಮತ್ತು ತಿಮ್ಮರಾಜು ಹೋಗಿ ನೋಡಲಾಗಿ ಶರತ್ ಮುಂದೆ ನಿಂತ್ತಿದ್ದ ಲಾರಿ ಮುಂದಕ್ಕೆ ಚಲಿಸಿ ಹಿಂದಿನ ಚಕ್ರಕ್ಕೆ ಸಿಕ್ಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದ ಹಾಗೂ ಹಿಂದಿನ ಲಾರಿಯಲ್ಲಿ ಎಡಭಾಗದಲ್ಲಿ ಕುಳಿತ್ತಿದ್ದ ಒಬ್ಬ ಆಸಾಮಿಯು ಸಹ ಮೃತಪಟ್ಟಿದ್ದು ಹಿಂದಿನ ಲಾರಿಯ ಚಾಲಕ ಮತ್ತು ಪತ್ತೋಬ್ಬ ಪ್ರಯಾಣಿಕನಿಗೆ ರಕ್ತಗಾಯಗಳಾಗಿದ್ದವು ಹಾಗೂ ಮುಂದಿನ ಲಾರಿಯ ಚಾಲಕ ತಿಮ್ಮರಾಜುವಿಗೂ ಸಹ ತೆಲೆ ರಕ್ತಗಾಯವಾಗಿತ್ತು  ಮುಂದೆ ನಿಂತ್ತಿದ್ದ ಲಾರಿ ನಂಬರ್ ನೋಡಲಾಗಿ ಕೆಎ-01 ಡಿ-9278 ಆಗಿದ್ದು ಹಿಂದೆ ಅಪಘಾತಪಡಿಸಿದ ಲಾರಿ ನಂಬರ್ ಕೆಎ-17 ಎ-6160 ಆಗಿತ್ತು ಹಿಂದಿನ ಲಾರಿಯ ಕ್ಯಾಬಿನ್ ಸಂಪೂರ್ಣ ಜಖಂಗೊಡಿತ್ತು ಲಾರಿಯಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟವನ ಹೆಸರು ಆನಂದ ಮಾರಿಕಣಿವೆ ಹಾಲಿ ವಾಸ ಜಗಳೂರು ಎಂತ ತಿಳಿದು ಬಂದಿರುತ್ತೆ ತಕ್ಷಣ ಎನ್,ಹೆಚ್,ಎ,ಐ ಆಂಬುಲೇನ್ಸ್ ನಲ್ಲಿ ಗ್ರಾಯಳುಗಳನ್ನು ಶಿರಾ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು ನಂತರ ಶವಗಳನ್ನು ಸಿರಾ ಆಸ್ಪತ್ರೆಗೆ ಸಾಗಿಸಿರುತ್ತೆ. ಈ ಅಪಘಾತಕ್ಕೆ ಕೆಎ-01- 9278 ನೇ ಲಾರಿ ಚಾಲಕ ತಿಮ್ಮರಾಜು ಲಾರಿಯನ್ನು ರಸ್ತೆಯ ನಿಯಮಕ್ಕೆ ವಿರುದ್ದವಾಗಿ ನಿಲ್ಲಿಸಿದ್ದು ಮತ್ತು ಕೆಎ-17ಎ- 6160 ನೇ ಲಾರಿ ಚಾಲಕ ಅತೀವೇಗ ಮತ್ತು ನಿರ್ಲಕ್ಷತೆಯಿಂದ  ಓಡಿಸಿಕೊಂಡು ಬಂದು ಅಪಘಾತಪಡಿಸಿದ್ದೇ ಕಾರಣವಾಗಿರುತ್ತೆ. ಸದರಿ ಚಾಲಕರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 84/2018 ಕಲಂ: 323,504,506 r/w  34 ಐ.ಪಿ.ಸಿ

ದಿನಾಂಕ:04/06/2018 ರಂದು ರಾತ್ರಿ 08-20 ಗಂಟೆಯಿಂದ 09-00 ಗಂಟೆವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮಹಮ್ಮದ್‌ ಯೂನಸ್‌‌ ಬಿನ್‌ ಟಿ.ಎಸ್‌ ಮುನೀರ್‌ಪಾಷ , 22 ವರ್ಷ, ಹಾರ್ಡ್‌ ವೇರ್‌ ಅಂಗಡಿ ಮಾಲೀಕ, 5ನೇ ಕ್ರಾಸ್‌‌, ಪಾರ್ಕ್‌ ರಸ್ತೆ, ಗಾಂಧಿನಗರ, ತಿಪಟೂರು ಟೌನ್‌ ರವರು ನೀಡಿರುವ ಹೇಳಿಕೆ ಅಂಶವೇನೆಂದರೆ, ದಿನಾಂಕ:04/06/2018 ರಂದು ರಾತ್ರಿ ಸುಮಾರು 07-30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಸ್ನೇಹಿತ ಸುಹೇಲ್‌ ಇಬ್ಬರೂ ತಿಪಟೂರಿನ ಗಾಂಧಿನಗರದ ಪಾರ್ಕ್‌ ಬಳಿ ಮಾತನಾಡುತ್ತಾ ನಿಂತಿದ್ದಾಗ ನಮ್ಮ ಗಾಂಧಿನಗರದ ಖಾಜಾ, ಸಾದತ್‌‌ ಮತ್ತು ಇತರೆ 3 ಜನ ಅಲ್ಲಿಯೇ ಮಾತನಾಡುತ್ತಾ ನಿಂತಿದ್ದರು, ಸ್ವಲ್ಪ ಹೊತ್ತು ಬಿಟ್ಟು ಎಲ್ಲರೂ ಹೊರಟು ಹೋದರು. ಮತ್ತೆ ಸ್ವಲ್ಪ ಹೊತ್ತು ಆದ ಮೇಲೆ ಖಾಜಾ ಮತ್ತು ಸಾದತ್‌ ಇಬ್ಬರೂ ನನ್ನ ಬಳಿ ಬಂದು ಏನೋ ಗುರಾಯಿಸುತ್ತೀಯ ಅಂತ ಅಂದನು, ಆಗ ನಾನು ನಾನೇಕೆ ಗುರಾಯಿಸಲಿ ಅಂತ ಅಂದಾಗ ಏಕಾಏಕೀ ನನ್ನ ಎಡಭಾಗದ ದವಡೆಗೆ ಹೊಡೆದು ಗಾಯಪಡಿಸಿದ, ನಂತರ ಕೈಯಿಂದ ನನ್ನ ಹೊಟ್ಟೆಯ ಹತ್ತಿರ ಗುದ್ದಿ ನೋವುಂಟು ಮಾಡಿದ ಅಷ್ಟರಲ್ಲಿ ನನ್ನ ಸ್ನೇಹಿತ ಸುಹೇಲ್‌ ಬಿಡಿಸಲು ಬಂದಾಗ ಅವನಿಗೂ ಕೈಯಿಂದ ಅವನ ಕಾಪಳಕ್ಕೆ ಹೊಡೆದು ನೋವುಂಟು ಮಾಡಿದನು. ನನಗೆ ಕೈಯಿಂದ ಹೊಡೆಯುವಾಗ ಅವನ ಕೈಯಲ್ಲಿ ಒಳಗೆ ಯಾವುದೋ ವಸ್ತುವನ್ನು ಇಟ್ಟುಕೊಂಡು ಹೊಡೆದಿರುತ್ತಾನೆ. ಖಾಜಾಗೂ ನಮಗೂ ಈ ಹಿಂದೆ ಗಲಾಟೆಯಾದ ಬಗ್ಗೆ ಕೇಸು ಆಗಿದ್ದ ಬಗ್ಗೆ ಅದೇ ದ್ವೇಷವನ್ನು ಇಟ್ಟುಕೊಂಡು ಹಲ್ಲೆ ಮಾಡಿರುತ್ತಾನೆ. ಅಷ್ಟರಲ್ಲಿ ಅಲ್ಲಿದ್ದವರು ಜಗಳ ಬಿಡಿಸಿದಾಗ ಬೋಳಿಮಗನೇ, ಲೋಫರ್‌ ನನ್ನ ಮಗನೇ ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ನನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿರುವ ಖಾಜಾನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಂತ ನೀಡಿರುವ ಹೇಳಿಕೆ ಪಡೆದು ಪ್ರಕರಣ ದಾಖಲಿಸಿರುತ್ತೆ.

 

ತುಮಕೂರು ಸಂಚಾರ ಪೊಲೀಸ್ ಠಾಣಾ ಮೊ.ಸಂಖ್ಯೆ 124/2018 ಕಲಂ 279,304(ಎ) ಐಪಿಸಿ & 134(ಎ&ಬಿ) 187 ಐಎಂವಿ ಆಕ್ಟ್.

ದಿನಾಂಕ 04.06.2018 ರಂದು ಮದ್ಯಾಹ್ನ 1-00ಗಂಟೆಗೆ  ಪಿರ್ಯಾದಿ  ಕೋಡಿರಂಗಪ್ಪ ಬಿನ್ ಬುಡ್ಡಚಿಕ್ಕಪ್ಪ, 70ವರ್ಷ, ವ್ಯವಸಾಯ, ಕುರುಬರು ಜನಾಂಗ, ನಂದಿಹಳ್ಳಿ, ಹಿರಿಯುರು ತಾ,, ಚಿತ್ರದುರ್ಗಾ ಜಿಲ್ಲೆ    ಇವರು ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ 03.06.2018 ರಂದು ರಾತ್ರಿ 7-30 ಗಂಟೆಯಲ್ಲಿ   ಯಾವುದೋ ಆಟೋರಿಕ್ಷಾ ಚಾಲಕ ಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಭೀಮಸಂದ್ರ  ಗ್ರಾಮದ ಎಸ್ಎಸ್ಐಎಲ್ ಹತ್ತಿರ ಎನ್.ಹೆಚ್.206 ರಸ್ತೆಯನ್ನು ದಾಟುತ್ತಿದ್ದ ನನ್ನ ಮಗ  ಸಣ್ಣಪ್ಪ ಬಿನ್ದ ಕೋಡಿರಂಗಪ್ಪ, 28ವರ್ಷ,ಕುರುಬರು, ಗಾರೆಕೆಲಸ,  ನಂದಿಹಳ್ಳಿ, ಹಿರಿಯೂರು ತಾ,, ಚಿತ್ರದುರ್ಗಾ ಜಿಲ್ಲೆ ,,    ಅಪಘಾತಪಡಿಸಿದ್ದರಿಂದ,  ಸಣ್ಣಪ್ಪ ರವರಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿದ್ದು, ತುಮಕೂರು ಜಿಲ್ಲಾ   ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ   , ದಿನಾಂಕ 04.06.2018 ರಂದು ಬೆಳಗಿನ ಜಾವ 3-00  ಗಂಟೆಯಲ್ಲಿ  ಸಣ್ಣಪ್ಪ  ರವರು ಮೃಪಟ್ಟಿರುತ್ತಾರೆಂತ ದೂರಿನ ಅಂಶ.

 

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 49/2018   ಕಲಂ: .143.147.323.504.506 RW 149 IPC

ದಿನಾಂಕ:04/06/2018 ರಂದು ಮದ್ಯಾಹ್ನ 13:30 ಗಂಟೆಗೆ ಪಿರ್ಯಾದಿ ನೇತ್ರಾವತಿ. ಸಿ. ಡಿ/ಒ ಚೆನ್ನಪ್ಪ ,25 ವರ್ಷ, ವಿಧ‍್ಯಾರ್ಥಿನಿ,ಬಲ್ಲೇನಹಳ್ಳಿ ಗ್ರಾಮ, ಪಾವಗಡ ತಾ|| ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:02/06/2018 ರಂದು ಸಂಜೆ 5:30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಅಕ್ಕ ಲಕ್ಷ್ಮೀ ಕೋಂ ಕೃಷ್ಣಮೂರ್ತಿ ಇಬ್ಬರೂ ಬಲ್ಲೇನಹಳ್ಳಿ ಗ್ರಾಮದ ನಮ್ಮ ಮನೆಯ ಮುಂದೆ ಬಟ್ಟೆ ಹೊಗೆಯುತ್ತಿದ್ದೆವು ಆಗ ಬಟ್ಟೆ ಹೊಗೆದ ನೀರು ಚರಂಡಿಗೆ ಹೋಗುತ್ತಿದ್ದು, ಆಗ ಅದೇ ವೇಳೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಮ್ಮ  ಗ್ರಾಮದ ನಮ್ಮ ಜನಾಂಗಕ್ಕೆ ಸೇರಿದ ಜಯಮ್ಮ ಕೋಂ ರಾಮಣ್ಣ, 35 ವರ್ಷ ಎಂಬುವವರು ಏನೇ ನೀವು ಬಟ್ಟೆ ಹೊಗೆದ ಕೊಳೆ ನೀರು ತುಳಿದುಕೊಂಡು ನಾವು ಓಡಾಡಬೇಕಾ ಎಂತ ಏಕಾ-ಏಕಿ ಜಗಳ ತೆಗೆದು ನನ್ನನ್ನು ಹೊಡೆಯಬೇಕೆಂಬ ಉದ್ದೇಶದಿಂದ 1] ಜಯಮ್ಮ ಕೋಂ ರಾಮಣ್ಣ, 35 ವರ್ಷ, 2] ಮೈಲಾರಪ್ಪ ಬಿನ್ ನೆಡ್ಡಿ ಮಲ್ಲಪ್ಪ, 30 ವರ್ಷ, 3] ಚಿಟ್ಟಮ್ಮ ಕೋಂ ಮೈಲಾರಪ್ಪ  29 ವರ್ಷ, 4] ರಾಮಣ್ಣ ಬಿನ್ ನೆಡ್ಡಿ ಮಲ್ಲಪ್ಪ, 40 ವರ್ಷ 5] ಈರಣ್ಣ ಬಿನ್ ಯರ್ರಿ ಮಲ್ಲಪ್ಪ ,38 ವರ್ಷ 6] ಮಹೇಶ ಬಿನ್ ಮಾರಪ್ಪ ,24 ವರ್ಷ, 7]  ಆನಂದ ಬಿನ್ ನೆಡ್ಡಿ ಮಲ್ಲಪ್ಪ ,32 ವರ್ಷ, 8] ಶಿವಮ್ಮ ಕೋಂ ಆನಂದ ,28 ವರ್ಷ, ರವರುಗಳು ಅಕ್ರಮ ಗುಂಪುಕಟ್ಟಿಕೊಂಡು ಬಂದು ಏಕಾ ಏಕಿ ಜಗಳ ತೆಗೆದು ಕೈಗಳಲ್ಲಿ ದೊಣ್ಣೆ ಮಚ್ಚುಗಳನ್ನು ಹಿಡಿದುಕೊಂಡು ಬಂದು ಜಯಮ್ಮ ಎಂಬುವವರು ನನ್ನ ಜುಟ್ಟು ಹಿಡಿದುಕೊಂಡು ಎಳೆದಾಡಿ ಕೈಗಳಿಂದ ಮೈ  ಕೈಗೆ ಹೊಡೆದು ನೋವುಂಟು ಮಾಡಿದಳು , ಮೈಲಾರಪ್ಪ ಎಂಬುವವನು ತನ್ನ ಕೈಯಿಂದ ನನ್ನ ಮುಖಕ್ಕೆ ಜೋರಾಗಿ ಗುದ್ದಿ ನೋವುಂಟು ಮಾಡಿದ್ದು ಇದರಿಂದ ನನ್ನ ಕೆಳದವಡೆಯ ಮುಂಭಾಗದ ಒಂದು ಹಲ್ಲು ಉದುರಿ ಹೋಗಿರುತ್ತದೆ, ಉಳಿದವರೆಲ್ಲರೂ ನನ್ನನ್ನು ಕೆಳಕ್ಕೆ ಕೆಡವಿಕೊಂಡು ಕಾಲುಗಳಿಂದ ತುಳಿದು ಮೈ ಕೈ ನೋವುಂಟು ಮಾಡಿ ಸೂಳೇ ಮುಂಡೆ, ಬೋಳಿ ಮುಂಡೆ ನೀನು ಏನಾದರೂ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿನ್ನನ್ನು ಮತ್ತು ನಿಮ್ಮ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ ಕೊಲೆ ಮಾಡಿ ಸಾಯಿಸುತ್ತೇವೆಂತ ಪ್ರಾಣಬೆದರಿಕೆ ಹಾಕಿದರು ಆಗ ಸ್ಥಳದಲ್ಲಿದ್ದ ನಮ್ಮೂರಿನ ದುರ್ಗೇಶ ಬಿನ್ ಹನುಮಂತಪ್ಪ, ಪ.ಜಾತಿ 35 ವರ್ಷ , ಹರೀಶ ಬಿನ್ ಚೆನ್ನರಾಯಪ್ಪ, 25 ವರ್ಷ ಪ.ಜಾತಿ , ಕೃಷ್ಣಪ್ಪ ಬಿನ್ ಕಾಮಣ್ಣ ,40 ವರ್ಷ , ಗೊಲ್ಲರ ಜನಾಂಗ ಪೋತಗಾನಹಳ್ಳಿ ರವರುಗಳು ಜಗಳ ಬಿಡಿಸಿ ಸಮಾಧಾನ ಪಡಿಸಿದ್ದು, ಈ ಗಲಾಟೆಯಲ್ಲಿ ಉದಿರಿ ಹೋದ ನನ್ನ ಒಂದು ಹಲ್ಲು ಸಿಕ್ಕಿರುವುದಿಲ್ಲ, ನಾನು ದಿನಾಂಕ:03/06/2018 ರಂದು ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ, ಆದ್ದರಿಂದ ನನ್ನ ಮೇಲೆ ವಿನಾ ಕಾರಣ ಜಗಳ ತೆಗೆದು ನನ್ನ ಹಲ್ಲು ಉದಿರಿ ಹೋಗುವಂತೆ ಹೊಡೆದು ನೋವುಂಟು ಮಾಡಿರುವ ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂತ ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ

 

ಸಿ.ಎಸ್.ಪುರ ಠಾಣಾ ಮೊ.ನಂ:66/2018, ಕಲಂ:279. 337 ಐಪಿಸಿ

ದಿನಾಂಕ:04.06.2018 ರಂಧು ಈ ಕೇಸಿನ ಫಿರ್ಯಾದುದಾರರಾದ ಗೋಪಾಲಯ್ಯ ಬಿನ್ ಮೂಡ್ಲಗಿರಯ್ಯ,49ವರ್ಷ,            ವಕ್ಕಲಿಗರು, ವ್ಯವಸಾಯ,  ಸಿ.ಕೊಡಗೇಹಳ್ಳಿ, ಗುಬ್ಬಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಶವೆಂದರೆ,  ದಿನಾಂಕ:21.05.2018 ರಂಧು  ಕೆಲಸದ ನಿಮಿತ್ತ ಸಿ.ಎಸ್.ಪುರ ಗ್ರಾಮಕ್ಕೆ  ನಾನು & ನನ್ನ ಅಳಿಯನಾದ ಸಂತೋಷ್  ಎಸ್.ಆರ್ ರವರು  ನಮ್ಮ ಬಾಬ್ತು ಕೆ.ಎ06-ಇಪಿ-5445 ನೇ ದ್ವಿಚಕ್ರವಾಹನದಲ್ಲಿ  ಬಂದಿದ್ದು, ನಂತರ ಕೆಲಸ ಮುಗಿದ  ನಂತರ , ಸಿ.ಎಸ್.ಪುರದಿಂದ  ವಾಪಸ್ಸು ನಮ್ಮ ಗ್ರಾಮಕ್ಕೆ  ಹೋಗುತ್ತಿರುವಾಗ್ಗೆ, ಸಿ.ಕೊಡಗೇಹಳ್ಳಿ ಗ್ರಾಮದ ಹೊನ್ನಮ್ಮನ ಗುಡಿ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ, ಸಂಜೆ ಸುಮಾರು 4.30 ಗಂಟೆ ಸಮಯದಲ್ಲಿ ನಮ್ಮ ಬಾಬ್ತು ಕೆ.ಎ06-ಇಪಿ-5445 ಹೊಂಡಾ ಡ್ರೀಮ್  ಯುಗಾ ನೇ ದ್ವಿಚಕ್ರವಾಹನವನ್ನು  ನನ್ನ ಅಳಿಯ ಚಾಲನೆ ಮಾಡುತಿದ್ದು, ಬೈಕನ್ನು  ಅತಿ ಜೋರಾಗಿ ಓಡಿಸಿಕೊಂಡು ಬರುತಿದ್ದು, ಹಠಾತ್ತನೆ ಒಂದು  ಬೀದಿ ನಾಯಿಯು ನಾವು ಹೋಗುತಿದ್ದ ರಸ್ತೆಯ ದ್ವಿ ಚಕ್ರವಾಹನಕ್ಕೆ ಅಡ್ಡ ಬಂದಿದ್ದರಿಂದ, ಬೈಕಿನ ನಿಯಂತ್ರಣ ತಪ್ಪಿ ಬೈಕಿನ ಸಮೇತ ಇಬ್ಬರೂ  ಬಲಭಾಗಕ್ಕೆ ಬಿದ್ದಿದ್ದು, ಬೈಕಿನ ಹಿಂದೆ ಕುಳಿತಿದ್ದ  ನನ್ನ  ಬಲಗಾಲಿಗೆ & ದೇಹದ ಇತರ ಭಾಗಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತೆ. ಬೈಕು ಚಾಲನೆ ಮಾಡುತಿದ್ದ ಸಂತೋಷ.ಎಸ್.ಆರ್ ರವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತೆ. ನಂತರ ಗಾಯಾಳುವಾದ ನನ್ನನ್ನು, ನನ್ನ ಅಳಿಯನಾದ ಸಂತೋಷರವರು 108 ಆಂಬ್ಯುಲೆನ್ಸ್ ನಲ್ಲಿ ನನ್ನನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು  ಹೋಗಿ ಹೊರರೋಗಿಯಾಗಿ ಚಿಕಿತ್ಸೆ ಕೊಡಿಸಿ, ನಂತರ ವೈದ್ಯರ ಸಲಹೆ ಮೇರೆಗೆ ಒಳರೋಗಿಯಾಗಿ  ಚಿಕಿತ್ಸೆಗೆ ದಾಖಲುಮಾಡಿದ್ದು, ದಿನಾಂಕ:03.06.2018 ರಂದು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಬಂದು ಈ ದಿನ ತಡವಾಗಿ ದೂರು ನೀಡುತಿದ್ದು,ಈ ಅಪಘಾತಕ್ಕೆ ಕಾರಣನಾದ  ಕೆ.ಎ06-ಇಪಿ-5445 ನೇ ಹೊಂಡಾ ಡ್ರೀಮ್  ಯುಗಾ ದ್ವಿ ಚಕ್ರವಾಹನದ ಚಾಲಕನಾದ  ನನ್ನ ಅಳಿಯ ಸಂತೋಷ ಎಸ್.ಆರ್ . ರವರ  ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ  ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 92 guests online
Content View Hits : 321528