lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< June 2018 >
Mo Tu We Th Fr Sa Su
        1 2
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 30  
Sunday, 03 June 2018
ಅಪರಾಧ ಘಟನೆಗಳು 03-06-18

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 82/2018 ಕಲಂ:279,337 ಐ.ಪಿ.ಸಿ ಮತ್ತು 134 (ಎ&ಬಿ) , 187 ಐ.ಎಂ.ವಿ ಆಕ್ಟ್

ದಿನಾಂಕ: 02/06/2018 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿ ನರಸಿಂಹಮೂರ್ತಿ ಬಿನ್ ದಾಸಪ್ಪ, 52 ವರ್ಷ, ಎಂ.ಹೆಚ್ ಕಾವಲ್ ಗೊಲ್ಲರಹಟ್ಟಿ, ಕಂದಿಕೆರೆ ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:29/05/2018 ರಂದು ನಾನು ಮನೆಯಲ್ಲಿದ್ದಾಗ ನನ್ನ ಬಾಮೈದನಾದ ಸಿದ್ದರಾಜುವಿನ ಸ್ನೇಹಿತನಾದ ಧರಣೇಶನು ನನಗೆ ಫೊನ್ ಮಾಡಿ ತಿಳಿಸಿದ್ದು, ಈ ದಿನ ದಿನಾಂಕ; 29/05/2018 ರಂದು ಮಧ್ಯಾಹ್ನ 2-50 ಗಂಟೆಯ ಸಮಯದಲ್ಲಿ ತಿಪಟೂರು ನಗರದ ಬಂಡೀಹಳ್ಳಿ ರಸ್ತೆಯ ಧನಲಕ್ಷ್ಮಿ ಹಾರ್ಡ್ ವೇರ್ ಮುಂಭಾಗ ಎನ್.ಹೆಚ್ 206 ರಸ್ತೆಯ ಎಡಬದಿಯ ಮಣ್ಣಿನ ರಸ್ತೆಯಲ್ಲಿ ನನ್ನ ಬಾಮೈದನ ಸ್ನೇಹಿತನಾದ ದಿನೇಶನ ಬಾಬ್ತು ಕೆ.ಎ-44 -8364 ನೇ ಆಟೋದಲ್ಲಿ ಹೋಗಿ ಕಬ್ಬಿನ ಹಾಲು ಕುಡಿಯಲೆಂದು ಆಟೋವನ್ನು ನಿಲ್ಲಿಸಿಕೊಂಡು ನಿಂತಿದ್ದಾಗ ಅದೇ ಸಮಯಕ್ಕೆ ಕಿಬ್ಬನಹಳ್ಳಿ ಕ್ರಾಸ್ ಕಡೆಯಿಂದ ಒಂದು ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ಬಾಮೈದ ಸಿದ್ದರಾಜು ರವರಿಗೆ ಅಪಘಾತಪಡಿಸಿ ಲಾರಿ ಚಾಲಕನು ಲಾರಿಯನ್ನು ನಿಲ್ಲಿಸದೇ ಹೊರಟು ಹೋಗಿದ್ದು,  ಆತನಿಗೆ ಬಲಗಾಲಿನ ಮಂಡಿ ಚಿಪ್ಪುಗೆ ಪೆಟ್ಟು ಬಿದ್ದು, ಇತರ ಭಾಗಗಳಿಗೂ ಸಹ ಪೆಟ್ಟು ಬಿದ್ದಿರುತ್ತದೆ. ತಕ್ಷಣ ಆತನ ಸ್ನೇಹಿತರಾದ ಧರಣೇಶ, ಸ್ವಾಮಿ ಹಾಗೂ ದಿನೇಶ ರವರುಗಳು ಆಟೋದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಆದರ್ಶ ನರ್ಸಿಂಗ್ ಹೋಮ್ ಗೆ ಸೇರಿಸಿರುತ್ತೆ. ನಂತರ ತಿಳಿಯಲಾಗಿ ಸಿದ್ದರಾಜುವಿಗೆ ಅಪಘಾತಪಡಿಸಿದ ಲಾರಿಯ ನಂಬರ್ ಕೆ.ಎ-43 -8886 ಆಗಿದ್ದು, ಲಾರಿಯ ಮುಂಭಾಗದ ಕ್ಯಾಬಿನ್ ಮೇಲೆ ಲಕ್ಷ್ಮಿ ನರಸಿಂಹ ಹಾಗೂ ಬಲಭಾಗದ ಬಾಡಿಯ ಮೇಲೆ HCM ಎಂತಲೂ ಇರುತ್ತೆ. ಆದ್ದರಿಂದ ನನ್ನ ಬಾಮೈದನಾದ ಸಿದ್ದರಾಜುವಿಗೆ ಅಪಘಾತಪಡಿಸಿದ ಮೇಲ್ಕಂಡ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಆಸ್ಪತ್ರೆಯಿಂದ ಈ ದಿನ ಠಾಣೆಗೆ ಬಂದು ದೂರು ನೀಡಿರುತ್ತೇನೆ ಎಂತಾ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 81/2018  -  ಕಲಂ 279-337 ಐಪಿಸಿ. .

ದಿನಾಂಕ:02/06/2018 ರಂದು ಸಂಜೆ 5-00  ಗಂಟೆಗೆ ಪಿರ್ಯಾದಿ ತಿಮ್ಮಪ್ಪ ಬಿನ್‌ ಲೇಟ್‌ ತಿರುಮಲಪ್ಪ, ರಾಮಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ  ದೂರಿನ ಅಂಶವೇನೆಂದರೆ, ನನ್ನ ಮಗನಾದ ಶ್ರೀನಿವಾಸ  ಟಿ ಸುಮಾರು 35 ವರ್ಷ ಈತನು ದಿ:01/06/2018 ರಂದು  ತನ್ನ ಬಾಬ್ತು  ಕೆಎ-64-ಇ-6069 ನಂಬರಿನ ಹಿರೋಹೊಂಡಾ ಶೈನ್‌‌ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ದಯಾನಂದ್‌ ಬಿನ್‌ ಚಿಕ್ಕಪ್ಪಯ್ಯ , ಬೊಮ್ಮಸನಹಳ್ಳಿ ಗ್ರಾಮದ ವಾಸಿಯನ್ನು ಕೂರಿಸಿಕೊಂಡು ನಮ್ಮ ಗ್ರಾಮದಿಂದ ಕಾಕಿ ಗ್ರಾಮಕ್ಕೆ ಬರುವಾಗ್ಗೆ ಮಾರ್ಗಮದ್ಯೆ ರಂಟವಾಳ ವೈನ್‌ ಸ್ಟೋರ್‌ ನಿಂದ ಸ್ವಲ್ಪ ಮುಂದಕ್ಕೆ ಬೆಳಗ್ಗೆ 9-30 ಗಂಟೆಗೆ  ಬಂದಾಗ ಬ್ಯಾಡಗೆರೆ ಕಡೆಯಿಂದ ಬಂದಂತಹ ಒಂದು ದ್ವಿಚಕ್ರ ವಾಹನ ಹಿರೋ ಹೊಂಡ ಸ್ಪ್ಲೆಂಡರ್‌ ಪ್ಲಸ್‌‌ ಕೆಎ-02-ಹೆಚ್‌ ಕ್ಯೂ-406 ರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮಗನ ಗಾಡಿಗೆ ಡಿಕ್ಕಿ  ಪಡಿಸಿದ ಪರಿಣಾಮ ಆತನ ತಲೆಗೆ ಮತ್ತು ಎಡಭುಜಕ್ಕೆ ಪೆಟ್ಟಾಗಿದ್ದು, ರಕ್ತ ಸಿಕ್ತ ಗಾಯಗಳಾಗಿದ್ದು, ಹಿಂಬದಿಯಲ್ಲಿ ಕುಳಿತಿದ್ದ ದಯಾನಂದನಿಗೆ ಬಲಭುಜಕ್ಕೆ ಪೆಟ್ಟಾಗಿ ಬಲಭಾಗದ ಬೆನ್ನಿನ ಮೂಳೆ ಮುರಿದಿರುತ್ತೆ. ಅಪಘಾತ ನಡೆದ ಸ್ಥಳದಲ್ಲಿಯೇ ಇದ್ದ  ರಾಮಾಪುರ ಗ್ರಾಮದ ವಾಸಿಯಾದ ಶಶಿಕುಮಾರ್‌ ಬಿನ್‌ ಲೇಟ್‌ ಗೋವಿಂದಪ್ಪ , ಗಾಯಾಳುಗಳನ್ನು ಯಾವುದೋ ಒಂದು ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ,   ನಂತರ ನನಗೆ ಪೋನ್‌ ಮೂಖಾಂತರ ವಿಚಾರ ತಿಳಿಸಿರುತ್ತಾರೆ. ನಾನು ಹೋಗಿ ನೋಡಿದಾಗ ಅಪಘಾತವಾಗಿರುವುದು ಖಚಿತವಾಗಿರುತ್ತೆ. ನಂತರ ವೈದ್ಯರ ಅನುಮತಿ ಮೇರೆಗೆ ಗಾಯಾಳುಗಳನ್ನು 108 ವಾಹನದ ಸಹಾಯದಿಂದ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಶ್ರೀನಿವಾಸನನ್ನು ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ದಾಖಲಿಸಿ ಈ ದಿನ  ಬಂದು ಕೆಎ-02-ಹೆಚ್‌ ಕ್ಯೂ-406 ಬೈಕ್‌ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

 

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 80/2018 ಕಲಂ 87 ಕೆ ಪಿ ಆಕ್ಟ್‌‌

ದಿನಾಂಕ:02/06/2018 ರಂದು ಮದ್ಯಾಹ್ನ 12-30 ಗಂಟೆಗೆ  ಪಿಸಿ 949 ರಂಗನಾಥ ರವರ ಠಾಣೆಗೆ ಹಾಜರಾಗಿ ಈ ದಿನ ದಿಳ:02/06/2018 ರಂದು  ದಿನಾಂಕ:02/06/2018 ರಂದು ರಂಗನಾಥ ಪಿ.ಸಿ 949 ನನಗೆ ಗುಪ್ತ ಮಾಹಿತಿ ಕರ್ತವ್ಯ ನೇಮಕವಾಗಿದ್ದು ಮಾನ್ಯ ಪಿ ಐ ಸಾಹೇಬರವರ ಆದೇಶದಂತೆ ನಾನು ಮತ್ತು ಠಾಣಾ ಮೀಸಲು ಕರ್ತವ್ಯಕ್ಕೆ ನೇಮಕವಾಗಿದ್ದ ಪಿ.ಸಿ 411 ಸುರೇಶ್ ರವರು ಗ್ರಾಮಗಸ್ತಿಗಾಗಿ ಬೆಳಗ್ಗೆ 9-30 ಗಂಟೆಗೆ ಠಾಣೆಯನ್ನು ಬಿಟ್ಟು  ಕೈಮರ, ಬಡಿಗೊಂಡನಹಳ್ಳಿ, ಮಾಯಗೊಂಡನಹಳ್ಳಿ, ಗ್ರಾಮಗಳಿಗೆ ಭೇಟಿ ನೀಡಿ ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ನೇರಳೆಕೆರೆಗೆ ಹೋಗಿ ನೇರಳೇಕರೆ ಬಸ್‌ನಿಲ್ದಾಣದಲ್ಲಿ ಗಸ್ತು ಮಾಡುತ್ತಿರುವಾಗ್ಗೆ ಅಲ್ಲಿಗೆ ಬಾತ್ಮೀದಾರನೊಬ್ಬ ಬಂದು ನೇರಳೆಕೆರೆ ಹೊಂಗೆಮಾರಮ್ಮನ ದೇವಸ್ಥಾನದ ಹಿಂಭಾಗ ನೇರಳೇಕೆರೆ ಗಿರೀಶ ಮತ್ತು ಇತರೆ 3-4 ಜನರು ಇಸ್ಟೀಟ್‌ ಜೂಜಾಟ ಆಡುತ್ತಿದ್ದಾರೆಂಬ ಮಾಹಿತಿ ತಿಳಿಸಿದ, ತಕ್ಷಣ ನಾನು ಮತ್ತು ಸುರೇಶ್‌ ರವರುಗಳು ಬಾತ್ಮೀ ಬಂದ ಜಾಗದ ಕಡೆಗೆ ಹೋಗಿ ಗಿಡದ ಮರೆಯಲ್ಲಿ ನಿಂತು ನೋಡಲಾಗಿ ಸುಮಾರು 4 ಜನರು ಗುಂಡಾಕಾರವಾಗಿ ಕುಳಿತುಕೊಂಡು ಇಸ್ಟೀಟ್‌ ಜೂಜಾಟ ಆಡುತ್ತಿದ್ದುದು ನಿಜವಾಗಿತ್ತು.  ಇಸ್ಟೀಟ್‌ ಜೂಜಾಟದ ಖಚಿತ ಮಾಹಿತಿ ಇದ್ದ ಮೇರೆಗೆ ಪಿ.ಸಿ-411 ಸುರೇಶ್‌ ರವರನ್ನು ಸ್ಥಳದಲ್ಲಿ ನಿಗಾವಣೆಗೆ ಬಿಟ್ಟು ವಾಪಾಸ್ ಠಾಣೆಗೆ ಬಂದು ಅಂದರ್‌-ಬಾಹರ್ ಜೂಜಾಟ ಆಡುತ್ತಿರುವವರ ಮೇಲೆ  ಕ್ರಮ ಜರುಗಿಸಲು  ನೀಡಿದ ವರದಿ ಪಡೆದು ಠಾಣಾ ಎನ್.ಸಿ.ಆರ್‌ ನಂ:75/2018 ನಮೂದಿಸಿ, ಆರೋಪಿಗಳು ಕರ್ನಾಟಕ ಪೊಲೀಸ್ ಕಾಯ್ದೆ ಕಲಂ:87 ರ ಪ್ರಕಾರ ಅಪರಾಧ ಎಸಗಿದ್ದು ಸದರಿ ಪ್ರಕರಣ ಅಸಂಜ್ಞೆಯ ಅಪರಾಧವಾಗಿದ್ದರಿಂದ, ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ನೀಡಲು ಘನ ನ್ಯಾಯಾಲಯದಲ್ಲಿ ಕೋರಿ, ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 90 guests online
Content View Hits : 321527