lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< June 2018 >
Mo Tu We Th Fr Sa Su
        2 3
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 30  
Friday, 01 June 2018
ಅಪರಾಧ ಘಟನೆಗಳು 01-06-18

ಪಟ್ಟನಾಯಕಹಳ್ಳಿ ಠಾಣಾ ಯು ಡಿ ಆರ್ ನಂ 19-18 ಕಲಂ 174 ಸಿ ಆರ್ ಪಿ ಸಿ

ದಿನಾಂಕ:31-05-2018 ರಂದು ರಾತ್ರಿ 7-30 ಗಂಟೆಗೆ  ಪಿರ್ಯಾದಿ ವಿಜಯಲಕ್ಷ್ಮೀ ಕೊಂ ಬೀರಣ್ಣ, ಗೊಲ್ಲಹಳ್ಳಿ ಗ್ರಾಮ, ಶಿರಾ ತಾಲ್ಲೋಕ್  ರವರು ಠಾಣೆಗೆ  ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ಪಿರ್ಯಾದಿ ವಿಜಯಲಕ್ಷ್ಮೀ ರವರಿಗೆ ಈಗ್ಗೆ ಸುಮಾರು 11 ವರ್ಷಗಳ ಹಿಂದೆ ಗೊಲ್ಲಹಳ್ಳಿ ಗ್ರಾಮದ ಲೇಟ್ ಮುದ್ದಣ್ಣ ರವರ ಕೊನೆಯ ಮಗನಾದ  ಮಗನಾದ ಬೀರಣ್ಣ ರವರನ್ನು ಮದುವೆಯಾಗಿದ್ದು 4ವರ್ಷದ ಹರ್ಷಿಕಾ ಎಂಬ ಹೆಣ್ಣು ಮಗಳಿದ್ದು, ಸಂಸಾರ  ಸಮೇತ ಗೊಲ್ಲಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು, ದಿನಾಂಕ:31-05-18 ರಂದು ಮದ್ಯಾಹ್ನ 03-00 ಗಂಟೆಗೆ ಪಿರ್ಯಾದಿ ಗಂಡನಾದ  ಬೀರಣ್ಣ ರವರು ಅವರ ಬಾಬ್ತು  ಮೇಲ್ಕುಂಟೆ ಸರ್ವೆ ನಂ  312ರ ಜಮೀನಿಗೆ ಕುರಿಗಳನ್ನು ಹೊಡೆದುಕೊಂಡು ಹೋಗಿ  ಮೇಯಿಸಿಕೊಂಡು  ವಾಪಸ್ ಮನೆಯ ಬಳೀ ಬಂದು  ಸಂಜೆ ಸುಮಾರು 07-00 ಗಂಟೆ ಸಮಯದಲ್ಲಿ  ಕುರಿಗಳನ್ನು  ನಮ್ಮ ಮನೆಯ ಮುಂಭಾಗ ಹುಣಸೆ ಮರದ ಬಳಿ ಕಟ್ಟು ಹಾಕುತ್ತಿರತುವಾಗ ಗುಡುಗು ಸಹಿ ಮಳೆಯಾಗುತ್ತಿದ್ದು ಜೋರಾಗಿ ಸಿಡಿಲು ಬಡಿದ ಕಾರಣ, ಸಿಡಿಲಿನ ಶಬ್ದ ಕೇಳಿ ಮೃತಪಟ್ಟಿರುತ್ತಾನೆ ಸ್ಥಳಕ್ಕೆ ಬಂದು  ಮುಂದಿನ  ಕ್ರಮ ಜರುಗಿಸಲು  ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಾವರೆಕೆರೆ ಪೊಲೀಸ್ ಠಾಣೆ ಮೊ.ಸಂ :35/2018 ಕಲಂ  279, 304[ಎ] ಐಪಿಸಿ

ದಿನಾಂಕ-31-05-2018 ರಂದು ಪಿರ್ಯಾದಿ ವಿನೋದ ರಾಜಭರ್ ಬಿನ್ ಅಮರ್ ಜೀತ್ ರಾಜಭರ್, 25ವರ್ಷ, ರಾಜಭರ್ ಜನಾಂಗ, MH-04 FD-4669 ನೇ ಲಾರಿ ಕ್ಲೀನರ್, #96, ಭರೋಟಾ ಗ್ರಾಮ, ಖಲೀಲ್ ಪುರ್ ಪೋಸ್ಟ್, ಸಹಗಂಜ್ ತಾಲೂಕ್, ಜೋನ್ ಪುರ್ ಜಿಲ್ಲೆ, ಉತ್ತರಪ್ರದೇಶ್ ರಾಜ್ಯ, ಮೊ ನಂ-9819410394 ರವರು ಠಾಣೆಗೆ ಹಾಜರಾಗಿ ಸಂಜೆ 5-30 ರಿಂದ 06-00 ಗಂಟೆಯವರೆಗೆ ಕೊಟ್ಟ ಹೇಳಿಕೆಯ ಸಾರಾಂಶವೇನೆಂದರೆ ಹೀಗೆ ಸುಮಾರು 02ವರ್ಷಗಳಿಂದ AGILITY ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ MH-04 FD-4669 ನೇ ಐಚರ್ ಲಾರಿಗೆ ಕ್ಲೀನರಾಗಿ ಕೆಲಸಮಾಡಿಕೊಂಡಿದ್ದು, ಈ ವಾಹನಕ್ಕೆ ಸತ್ಯಪ್ರಕಾಶ್ ಸಿಂಗ್ ರವರು ಚಾಲಕರಾಗಿದ್ದು, MH-04 FD-4669 ನೇ ಲಾರಿಯಲ್ಲಿ ಚೈನೈಯಿಂದ ಮುಂಬೈಗೆ ಪೈಪ್ ಗಳನ್ನು ಲೋಡ್ ಮಾಡಿಕೊಂಡು ಹೋಗುತ್ತಿರುವಾಗ ದಿನಾಂಕ-31-05-2018 ರಂದು ಮದ್ಯಾಹ್ನ ಸುಮಾರು 01-30 ಗಂಟೆಯಲ್ಲಿ ಸಿರಾ ಹಿರಿಯೂರು ಎನ್.ಹೆಚ್-48 ರಸ್ತೆ ತಾವರೆಕೆರೆ ಸಮೀಪ ಮುತ್ತು ಡಾಬಾ ಹೋಟಲ್ ಬಳಿ ಹೋಗುತ್ತಿರುವಾಗ ಹಿರಿಯೂರು ಸಿರಾ ಎನ್.ಹೆಚ್-48 ರಸ್ತೆಯಲ್ಲಿ ಬರುತಿದ್ದ ಒಂದು ಕಾರನ್ನು ಅದರ ಚಾಲಕ ಅತಿವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆ ಡಿವೈಡರ್ ಮೇಲೆ ಹತ್ತಿಸಿ ಸಿರಾ ಹಿರಿಯೂರು ಎನ್.ಹೆಚ್ 48 ರಸ್ತೆಯಲ್ಲಿ ಹಿರಿಯೂರು ಕಡೆಗೆ ಹೋಗುತ್ತಿದ್ದ ನಮ್ಮ ಐಚರ್ ಲಾರಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ 02 ವಾಹನಗಳು ಜಖಂಗೊಂಡು ಕಾರಿನಲ್ಲಿದ್ದ ಒಬ್ಬ ಹೆಂಗಸಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಕಾರನ್ನು ಚಾಲನೆ ಮಾಡುತ್ತಿದ್ದ ಹೆಂಗಸಿಗೆ ಯಾವುದೇ ಪೆಟ್ಟುಗಳು ಬಿದ್ದಿರಲಿಲ್ಲ, ಕಾರಿನ ಚಾಲಕಳ ಹೆಸರು ಕೇಳಿ ತಿಳಿಯಲಾಗಿ ಶ್ರೇಯಾ ಎಂತಲೂ, ಪೆಟ್ಟಿ ಬಿದ್ದಿದ್ದ ಹೆಂಗಸಿನ ಹೆಸರು ಮಾದುರಿ ಎಂತ ತಿಳಿಸಿದ್ದು, ಗಾಯಾಳುವನ್ನು ಕೂಡಲೇ ಸ್ಥಳಕ್ಕೆ ಬಂದ ಸಾರ್ವಜನಿಕರು ಹಾಗೂ ಪೊಲೀಸರ ಜೊತೆ ಸೇರಿ ಐಆರ್‌ಬಿ  ಆಂಬ್ಯೂಲೆನ್ಸ್‌ ವಾಹನದಲ್ಲಿ ಸಿರಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ಅಪಘಾತ ಪಡಿಸಿದ ಕಾರಿನ ನಂಬರ್ ನೋಡಲಾಗಿ PB-35 L-9391 ಆಗಿರುತ್ತೆ. ಇದಾದ ಸ್ವಲ್ಪ ಹೊತ್ತಿನ ನಂತರ ಗಾಯಾಳುವನ್ನು ಸಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದಾಗ ಆಗಾಗಲೇ ಮರಣ ಹೊಂದಿರುತ್ತಾರೆಂತ ತಿಳಿಸಿರುವುದಾಗಿ ಗೊತ್ತಾಯಿತು. ಈ ಅಪಘಾತವು ಕಾರಿನ ಚಾಲಕಳ ಅತಿವೇಗ & ಅಜಾಗರೂಕತೆಯಿಂದ ಉಂಟಾಗಿರುತ್ತೆ. ಈ ಅಪಘಾತಕ್ಕೆ ಕಾರಣವಾಗಿರುವ ಮೇಲ್ಕಂಡ PB-35 L-9391 ನೇ ಕಾರಿನ ಚಾಲಕಿ ಶ್ರೇಯಾರವರ ವಿರುದ್ದ ಕ್ರಮ ಜರುಗಿಸಬೇಕಂತ ಈ ನನ್ನ ಹೇಳಿಕೆಯನ್ನು ನೀಡಿರುತ್ತೇನೆ. ನಾನು ಹಿಂದಿಯಲ್ಲಿ ಹೇಳಿದ್ದನ್ನು ಪಿಸಿ-669 ಹುಸೇನ್ ಬಾದಶಯ ಎಂಬುವವರು ಕನ್ನಡಕ್ಕೆ ತರ್ಜುಮೆಮಾಡಿ ಬರೆಸಿರುತ್ತಾರೆಂತ ಕೊಟ್ಟ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 81/2018 ಕಲಂ:279,337ಐಪಿಸಿ

ದಿನಾಂಕ:31/05/2018 ರಂದು ಸಂಜೆ 05-45 ರಿಂದ 06-15 ಗಂಟೆಯವರೆಗೆ ತಿಪಟೂರಿನ ಕುಮಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ರಮೇಶ್‌ ಬಿನ್‌ ಹನುಮಂತರಾಯಪ್ಪ, 32 ವರ್ಷ,ಕೂಲಿ ಕೆಲಸ, ನಾಯಕ ಜನಾಂಗ, ನೆಹರು ನಗರ, ತಿಪಟೂರು ಟೌನ್‌ ರವರು ನೀಡಿರುವ ಹೇಳಿಕೆ ಅಂಶವೇನೆಂದರೆ, ನಾನು ದಿನಾಂಕ:31/05/2018 ರಂದು ಸುಮಾರು ಸಂಜೆ 5 ಗಂಟೆ ಸಮಯದಲ್ಲಿ ನನ್ನ ನಂಬರ್‌ ಇಲ್ಲದ ಹೊಸ(ವಿಕ್ರಾಂತ್‌) ವಿ-15 ನೀಲಿಬಣ್ಣದ ದ್ವಿ ಚಕ್ರ ವಾಹನದಲ್ಲಿ ನಮ್ಮ ಏರಿಯಾದ ಮಂಜುನಾಧ ಚಾಲನೆ ಮಾಡುತ್ತಿದ್ದು ನಾನು ಹಿಂಬದಿಯಲ್ಲಿ ಕುಳಿತುಕೊಂಡು ಚಾಮುಂಡೇಶ್ವರಿ ಬಡಾವಣೆಗೆ ಹೋಗಲು ಎಪಿಎಂಸಿ ಕಡೆಯಿಂದ ರಸ್ತೆಯಲ್ಲಿ ರೈಲ್ವೆಗೇಟ್‌ ಬಳಿ ಹೋಗುತ್ತಿದ್ದಾಗ ಇದೇ ಸಮಯಕ್ಕೆ ಗಾಂಧಿನಗರ ಕಡೆಯಿಂದ ಹಾಲಿನ ಟ್ಯಾಂಕ್‌ನ ದೊಡ್ಡ ಲಾರಿಯ ಚಾಲಕ ತನ್ನ ಲಾರಿಯನ್ನು ಅಜಾಗರೂಕತೆ ಮತ್ತು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಾವಿಬ್ಬರು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ನನ್ನ ಬಲಗಾಲು ಲಾರಿಯ ಮುಂದಿನ ಚಕ್ರಕ್ಕೆ ಸಿಕ್ಕಿಕೊಂಡು ಬಲಗಾಲಿನ ಮೀನುಖಂಡದ ಬಳಿ ರಕ್ತಗಾಯವಾಯಿತು. ನಂತರ ನಮಗೆ ಅಪಘಾತ ಉಂಟು ಮಾಡಿದ ಲಾರಿಯ ನಂಬರ್‌ ನೋಡಲಾಗಿ ಟಿಎನ್‌ 37 ಸಿಇ-1145 ನೇ ಹಾಲು ತುಂಬುವ ಟ್ಯಾಂಕರ್‌ ದೊಡ್ಡ ಲಾರಿಯಾಗಿರುತ್ತೆ. ಇದರ ಚಾಲಕನ ಹೆಸರು ಗೊತ್ತಿರುವುದಿಲ್ಲ. ನಂತರ ನನ್ನ ಜೊತೆಯಲ್ಲಿದ್ದ ಮಂಜುನಾಧನಿಗೆ ಬಲಗೈ, ಬಲಮಂಡಿಗೆ ತರಚಿದ ಗಾಯಗಳಾದವು. ನಂತರ ನನ್ನನ್ನು ಜೊತೆಯಲ್ಲಿ  ಇದ್ದ ಮಂಜುನಾಧ ಮತ್ತು ನಗರಸಭೆಯಲ್ಲಿ ಕೆಲಸ ಮಾಡುವ ಶಿವಕುಮಾರ ರವರು ಕೂಡಲೇ ಅಲ್ಲೆ ಹತ್ತಿರದಲ್ಲಿ ಇದ್ದ ಕುಮಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ. ಆದ್ದರಿಂದ ಅಪಘಾತ ಮಾಡಿದ ಮೇಲ್ಕಂಡ ಲಾರಿ ಚಾಲಕನನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನು ಕ್ರಮ ಜರುಗಸಿ ಎಂತ ನೀಡಿರುವ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 119/2018 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:31-05-2018 ರಂದು ಮಧ್ಯಾಹ್ನ 2-00 ಗಂಟೆಗೆ ಪಿರ್ಯಾದಿಯಾದ ಪ್ರಕಾಶ ಬಿನ್ ವೆಂಕಟಪ್ಪ, 45 ವರ್ಷ, ಒಕ್ಕಲಿಗರು, ಕೂಲಿ ಕೆಲಸ, ಗೋವಿಂದರಾಜಪುರ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ತಂದೆಯಾದ ವೆಂಕಟಪ್ಪ ರವರು ದಿನಾಂಕ: 28-05-2018 ರಂದು ತಮ್ಮ ಸ್ವಂತ ಕೆಲಸದ ಮೇಲೆ ತಮ್ಮ ಬಾಬ್ತು ಕೆಎ-06-ಇ.ಟಿ-4476 ನೇ ಟಿ,ವಿ,ಎಸ್‌ ಎಕ್ಸ್.ಎಲ್ ಸೂಪರ್ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಹೆಬ್ಬೂರಿಗೆ ಹೋಗಿದ್ದು, ನಂತರ ಅದೇ ದಿವಸ ವಾಪಸ್‌ ನಮ್ಮ ಗ್ರಾಮಕ್ಕೆ ಬರಲೆಂದು ಬರುತ್ತಿರುವಾಗ್ಗೆ, ಸಿರಿವರ ಪೆಟ್ರೋಲ್‌ ಬಂಕ್‌ಗೆ ಹೋಗಿ ಪೆಟ್ರೋಲ್ ಹಾಕಿಸಿಕೊಂಡು ಮದ್ಯಾಹ್ನ ಸುಮಾರು 03-45 ಗಂಟೆ ಸಮಯದಲ್ಲಿ ಪೆಟ್ರೋಲ್‌ ಬಂಕ್‌ನಿಂದ ಹೊರಗೆ ಬರುತ್ತಿರುವಾಗ್ಗೆ, ಹೆಬ್ಬೂರು ಕಡೆಯಿಂದ ಗುಬ್ಬಿ ಕಡೆಗೆ ಹೋಗಲು ಬಂದ ಕೆಎ-06-ಇ.ಕ್ಯೂ-5509 ನೇ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ನನ್ನ ತಂದೆಯವರು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ತಂದೆ ವೆಂಕಟಪ್ಪ ರವರಿಗೆ ತಲೆಗೆ ಹಾಗೂ ಇತರೆ ಭಾಗಗಳಿಗೆ ಏಟು ಬಿದ್ದು ಗಾಯಗಳಾಗಿರುತ್ತೆ. ಆಗ ಅಲ್ಲಿಯೇ ಇದ್ದ ಸದರಿ ಅಪಘಾತವನ್ನು ಕಣ್ಣಾರೆ ಕಂಡ ಗುಬ್ಬಿ ತಾಲ್ಲೂಕಿನ ನಾರಸಂದ್ರ ಗ್ರಾಮದ ವಾಸಿಯಾದ ಗಂಗಣ್ಣ ರವರು ಸದರಿ ಅಫಘಾತದ ವಿಚಾರವನ್ನು ನನಗೆ ಪೋನ್ ಮಾಡಿ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತದಿಂದ ನನ್ನ ತಂದೆ ವೆಂಕಟಪ್ಪ ರವರು ಗಾಯಗೊಂಡಿರುವುದು ನಿಜವಾಗಿತ್ತು. ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದು, ಆತನ ಹೆಸರು ವಿಳಾಸ ತಿಳಿಯಲಾಗಿ ಹೆಬ್ಬೂರಿನ ವಾಸಿಯಾದ ಗುರುಲಿಂಗಪ್ಪ ಎಂತಾ ತಿಳಿಯಿತು. ನಂತರ ಗಾಯಗೊಂಡಿದ್ದ ನನ್ನ ತಂದೆ ವೆಂಕಟಪ್ಪ ರವರನ್ನು ಅಲ್ಲಿಯೇ ಇದ್ದ ಸಿರಿವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಸ್ಥಳಕ್ಕೆ ಬಂದ ಯಾವುದೋ ಒಂದು ಕಾರಿನಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ, ನಂತರ ಬೆಂಗಳೂರಿನ ಮೂಡ್ಲಪಾಳ್ಯದಲ್ಲಿರುವ ಭಾರತಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿಂದ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ವೇಗಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ಕ್ಯೂ-5509 ನೇ ದ್ವಿಚಕ್ರ ವಾಹನದ ಸವಾರನಾದ ಗುರುಲಿಂಗಪ್ಪ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಫಘಾತಪಡಿಸಿದ ಹಾಗೂ ಅಫಘಾತಕ್ಕೊಳಗಾದ ಎರಡೂ ದ್ವಿಚಕ್ರ ವಾಹನಗಳು ಸಿರಿವರ ಪೆಟ್ರೋಲ್ ಬಂಕ್‌ನ ಬಳಿ ಇರುತ್ತವೆ. ನಾನು ನನ್ನ ತಂದೆ ವೆಂಕಟಪ್ಪ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 84 guests online
Content View Hits : 321523