ಅಮೃತೂರು ಪೊಲೀಸ್ ಠಾಣಾ ಮೊನಂ-87/2018, ಕಲಂ- 279,337, 304(ಎ) ಐಪಿಸಿ
ದಿನಾಂಕ: 14-04-2018 ರಂದು ರಾತ್ರಿ 7-30 ಗಂಟೆಯಲ್ಲಿ ಪಿರ್ಯಾದಿ ಸಂತೋಷ.ಕೆ ಬಿನ್ ಕೃಷ್ಣಮೂರ್ತಿ, 26 ವರ್ಷ, ಒಕ್ಕಲಿಗರು, ಟೊಯೋಟಾ ಕಂಪನಿಯಲ್ಲಿ ಮ್ಯಾನೇಜರ್ ಕೆಲಸ, ವಾಸ: 54/9, 1 ನೇ ಮೇನ್, 7 ನೇ ಕ್ರಾಸ್, ಕೊಟ್ಟಿಗೆಪಾಳ್ಯ ಬೆಂಗಳೂರು, ಸ್ವಂತ ಊರು-ರಾಮಚಂದ್ರಪುರ, ಮಾದಿಹಳ್ಳಿ ಹೋಬಳಿ, ಬೇಲೂರು ತಾಲೋಕ್,ಹಾಸನ ಜಿಲ್ಲೆರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 14-04-2018 ರಂದು ದೇವರಕನ್ನಸಂದ್ರದಲ್ಲಿರುವ ನನ್ನ ಹೆಂಡತಿಯ ಅಜ್ಜಿ ಮನೆಯಲ್ಲಿ ಹಬ್ಬ ಇದ್ದುದರಿಂದ ಹಬ್ಬಕ್ಕೆ ಬರಲು ನಾನು ಬೆಂಗಳೂರಿನಿಂದ ದೇವರಕನ್ನಸಂದ್ರಕ್ಕೆ ಬಂದಿದ್ದು ಮದ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ರಾಮನಾಯ್ಕನ ಪಾಳ್ಯದ ಸತ್ಯನಾರಾಯಣ ಎಂಬುವವರು ನನಗೆ ಪೋನ್ ಮಾಡಿ ಈಗ ಮದ್ಯಾಹ್ನ 3-15 ಗಂಟೆ ಸಮಯದಲ್ಲಿ ನಮ್ಮೂರಿನ ಕೊರಮ ಶೆಟ್ರ ಮನೆ ಮತ್ತು ಗಂಗಾಧರರವರ ಮನೆಯ ಮದ್ಯದಲ್ಲಿ ಹಾದು ಹೋಗಿರುವ ನಾಗಸಂದ್ರ ಸಿಎಸ್ಪುರ ರಸ್ತೆಯಲ್ಲಿ ನಿಮ್ಮ ಭಾಮೈದ ನಿರಂಜನ್ ರವರು ಚಾಲಕರಾಗಿ ಮತ್ತು ನಿಮ್ಮ ಸಂಬಂದಿ ಅಂಜನ್ ಎಂಬುವರು ಹಿಂಬದಿ ಸವಾರನಾಗಿ ಕುಳಿತು ಕೆಎ-06, ಇಎಸ್-3649 ರ ಹೀರೋ ಸ್ಪ್ಲೆಂಡರ್ ಬೈಕಿನಲ್ಲಿ ನಾಗಸಂದ್ರ ಕಡೆಯಿಂದ ದೇವರಕನ್ನಸಂದ್ರ ಗ್ರಾಮಕ್ಕೆ ಹೋಗುತ್ತಿರುವಾಗ್ಗೆ ಸಿ.ಎಸ್ ಪುರ ಕಡೆಯಿಂದ ನಾಗಸಂದ್ರ ಕಡೆಗೆ ಹೋಗಲು ಕೆಎ-02, ಜೆಹೆಚ್-8236 ರ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಚಾಲಕ ತನ್ನ ಬೈಕನ್ನು ಅತಿವೇಗವಾಗಿ ಓಡಿಸಿಕೊಂಡು ಬಂದು ನಿಮ್ಮ ಭಾಮೈದ ಮತ್ತು ಅಂಜನ್ ಹೋಗುತ್ತಿದ್ದ ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆಸಿದ್ದರಿಂದ ನಿಮ್ಮ ಭಾಮೈದ ನಿರಂಜನ್ ಮತ್ತು ಅಂಜನ್ ಇಬ್ಬರೂ ಬೈಕ್ ಸಮೇತ ರಸ್ತೆ ಮೇಲೆ ಬಿದ್ದಿದ್ದರಿಂದ ನಿರಂಜನ್ ಗೆ ತಲೆಗೆ ಮತ್ತು ಮುಖಕ್ಕೆ ಹೆಚ್ಚಿನ ಪೆಟ್ಟು ಬಿದ್ದು ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಅಂಜನ್ ಎಂಬ ಹುಡುಗನಿಗೆ ತಲೆಗೆ ಮತ್ತು ಬೆನ್ನಿಗೆ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತೆ. ನೀವು ಬೇಗ ಬನ್ನಿ ಎಂದು ತಿಳಿಸಿದರು. ಆಗ ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಸತ್ಯನಾರಾಯಣ್ ರವರು ಹೇಳಿದಂತೆ ನನ್ನ ಭಾಮೈದ ನಿರಂಜನ್ ಅಪಘಾತದಿಂದ ಸ್ಥಳದಲ್ಲಿ ಮೃತಪಟ್ಟಿದ್ದು, ಅಂಜನ್ ಗೆ ರಕ್ತಗಾಯಗಳಾಗಿದ್ದು ನಿಜವಾಗಿತ್ತು. ಎರಡು ಬೈಕ್ ಗಳು ಸ್ಥಳದಲ್ಲೇ ಬಿದ್ದಿದ್ದವು. ನಂತರ ನಾನು ಮೃತ ನನ್ನ ಭಾಮೈದ ನಿರಂಜನ್ ರವರ ಶವವನ್ನು ಮತ್ತು ಗಾಯಗೊಂಡಿದ್ದ ಅಂಜನ್ ನನ್ನು ಯಾವುದೋ ಒಂದು ಆಟೋದಲ್ಲಿ ಬೆಳ್ಳೂರಿನ ಎಸಿ ಗಿರಿ ಆಸ್ಪತ್ರೆಯ ಬಳಿಗೆ ಹೋಗಿ ನಿರಂಜನ್ ನ ಶವವನ್ನು ಶವಾಗಾರದಲ್ಲಿರಿಸಿ, ಅಂಜನ್ ನನ್ನು ಚಿಕಿತ್ಸೆಗಾಗಿ ದಾಖಲು ಮಾಡಿ ನಂತರ ಈ ವಿಚಾರವನ್ನು ನಮ್ಮ ಅತ್ತೆ ಮಾವರವರಿಗೆ ತಿಳಿಸಿ ಈಗ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಈ ಅಪಘಾತಕ್ಕೆ ಕಾರಣನಾದ ಕೆಎ-02, ಜೆಹೆಚ್-8236 ರ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.
ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 43-18 ಕಲಂ 465,468 ಐಪಿಸಿ
ದಿನಾಂಕ:14-04-18 ರಂದು ಮದ್ಯಾಹ್ನ 03-30 ಗಂಟೆಗೆ ಕೆ.ಪುಟ್ಟಾನಾಯ್ಕ, ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢ ಶಾಲೆ, ಹುಳಿಗೆರೆ ಗ್ರಾಮ, ಶಿರಾ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಸರ್ಕಾರಿ ಪ್ರೌಢ ಶಾಲೆ ಹುಳಿಗೆರೆ, ಶಿರಾ ತಾಲ್ಲೂಕ್ ನಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಟಿ,ಯಲ್ಲಪ್ಪ ರವರು ದಿನಾಂಕ:02-07-2016 ರಂದು ಡಿ ಸಿ ಸಿ ಬ್ಯಾಂಕ್ ಸಿರಾ ದಲ್ಲಿ ಸಾಲ ಪಡೆಯಬೇಕಾದರೆ ಬ್ಯಾಂಕ್ ಅಂಡರ್ ಟೇಕಿಂಗ್ ಅರ್ಜಿಗಳಿಗೆ ಶಾಲಾ ಮೊಹರು ಕದ್ದು ಮುಖ್ಯೋಪಾಧ್ಯಾಯರ ಪೊರ್ಜರಿ ಸಹಿ ಮಾಡಿ ಸಾಲ ಪಡೆದಿದ್ದಾರ. ಬ್ಯಾಂಕ್ ವ್ಯವಸ್ಥಾಪಕರು ಈ ವಿಚಾರವಾಗಿ ಸದರಿ ಶಿಕ್ಷಕರು ಸಾಲ ಮರುಪಾವತಿ ಮಾಡಿರುವುದಿಲ್ಲ ಎಂದು ಮುಖ್ಯಶಿಕ್ಷಕರಿಗೆ ನೋಟೀಸ್ ನೀಡಿದ್ದು, ಪಿರ್ಯಾದಿ ರವರು ಬ್ಯಾಂಕ್ ಕೋರ್ಟ್ ಗೆ ಮಧುಗಿರಿಗೆ ಹೋಗಿದ್ದು, ಈ ವಿಚಾರ ತಿಳಿದಿ ಟಿ,ಯಲ್ಲಪ್ಪ, ಸಹ ಶಿಕ್ಷಕರು ಶಾಲಾ ಪ್ರಾರಂಭದ ದಿನ ದಿನಾಂಕ:29-05-17 ರಿಂದ 02-10-2017 ರ ವರೆಗೆ ಅನಧಿಕೃತವಾಗಿ ಗೈರು ಹಾಜರಾಗಿದ್ದು,ಈ ಬಗ್ಗೆ ಮೇಲಾಧಿಕಾರಿ ರವರಿಗೆ ವರದಿ ಸಲ್ಲಿಸಿಕೊಂಡು ಅನುಮತಿ ಪಡೆದು ಈ ದಿನ ಠಾಣೆಗೆ ಬಂದು ಯಲ್ಲಪ್ಪ, ಸಹ
ಹುಲಿಯೂರುದುರ್ಗ ಪೊಲೀಸ್ ಠಾಣಾ ಮೊ.ನಂ. 103/2018 ಕಲಂ 379 IPC
ದಿನಾಂಕ:14/04/2018 ರಂದು ಮದ್ಯಾಹ್ನ 01-30 ಗಂಟೆಗೆ ಗಂಗಯ್ಯ ಬಿನ್ ಲೇ//ಕಪನಯ್ಯ , ಸುಮಾರು 48 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ ಕೆಲಸ, ಹಿತ್ತಲಹಳ್ಳಿ ಗ್ರಾಮ, ಕಸಬಾ ಹೋ//, ಕುಣಿಗಲ್ ತಾ//, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಪಿರ್ಯಾದುದಾರರು ದಿನಾಂಕ: 12/04/2018 ರಂದು ರಾತ್ರಿ 08-30 ಗಂಟೆಯಲ್ಲಿ ತಮ್ಮ ಬಾಬ್ತು KA06-HA 3408 ನೇ ನಂಬರಿನ TVS XL SUPER 100 BS4 ದ್ವಿಚಕ್ರ ವಾಹನವನ್ನುಹುಲಿಯುರುದುರ್ಗ ಹೋ// ಸಂತೆಮಾವುತ್ತುರು ದಾಖಲೆ, ಅರೆಪಾಳ್ಯ ಗ್ರಾಮದ ಶ್ರೀ ವೆಂಕಟರಾಮಣಸ್ವಾಮಿ ದೇವರ ಹರಿಸೇವೆ ಕಾರ್ಯಕ್ರಮಕ್ಕೆ ತೆಗೆದುಕೊಂಡು ಹೋಗಿದ್ದ ವೇಳೆಯಲ್ಲಿ ತನ್ನ ದ್ವಿಚಕ್ರ ವಾಹನವನ್ನು ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಿ ಊಟ ಮಾಡಲೆಂದು ಹೋಗಿ ಮತ್ತೆ ಬಂದು ನೋಡಲಾಗಿ ಪಿರ್ಯಾದಿಯ ದ್ವಿಚಕ್ರ ವಾಹನವನ್ನು ಕೆಎ06 ಎಚ್ ಎ-3408 ಕಂಡು ಬಂದಿರುವುದಿಲ್ಲ. ಸುಮಾರು 42 ಸಾವಿರ ರೂ ಬೆಲೆ ಬಾಳುವ ಪಿರ್ಯಾದಿಯ ಬಾಬ್ತು ಬಾಬ್ತು KA06-HA 3408 ನೇ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಪಿರ್ಯಾದಿಯು ಕಳುವಾಗಿರುವ ತನ್ನ ದ್ವಿಚಕ್ರ ವಾಹನದ ಬಗ್ಗೆ ಎಲ್ಲಾ ಕಡೆ ಹುಡುಕಿದರೂ ಸಹಾ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ. ಆದುದರಿಂದ ಕಳುವಾಗಿರುವ ಪಿರ್ಯಾದಿಯ ದ್ವಿಚಕ್ರ ವಾಹನವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.
|