lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2018 >
Mo Tu We Th Fr Sa Su
            1
2 3 4 5 6 7 8
9 10 11 12 14 15
16 17 18 19 20 21 22
23 24 25 26 27 28 29
30            
Friday, 13 April 2018
ಅಪರಾಧ ಘಟನೆಗಳು 13-04-18

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.40/2018, ಕಲಂ:279,337,304(A) IPC 187,134(A)&(B) IMV Act

ದಿನಾಂಕ:12/04/2018 ರಂದು ಬೆಳಿಗ್ಗೆ 11:45 ಗಂಟೆಗೆ ಪಿರ್ಯಾದಿ ಮುಳ್ಳಕಟ್ಟಯ್ಯ ಬಿನ್ ಲೇಟ್||ದಾಸಪ್ಪ, 48 ವರ್ಷ, ಎ.ಕೆ.ಜನಾಂಗ, ವ್ಯವಸಾಯ, ಅಂಚಿಪುರ ಗ್ರಾಮ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು, ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ಮೇಲ್ಕಂಡ ಗ್ರಾಮದಲ್ಲಿ ವಾಸವಾಗಿದ್ದು, ನನಗೆ ಒಂದು ಗಂಡು, ಒಂದು ಹೆಣ್ಣು ಒಟ್ಟು ಇಬ್ಬರು ಮಕ್ಕಳಿದ್ದು ಅದರಲ್ಲಿ ನನ್ನ ಮಗನಾದ ಸುಮಾರು 21 ವರ್ಷ ವಯಸ್ಸಿನ ಮುನಿರಾಜು.ಎ.ಎಂ. ರವರು ತುಮಕೂರಿನ ಖಾಸಗಿ ಹೆಲ್ತ್ ಸೆಂಟರ್ ನಲ್ಲಿ ಡಿಸ್ಟಿಬ್ಯೂಟರ್ ಆಗಿ ಈಗ್ಗೆ ಸುಮಾರು 02 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ತುಮಕೂರಿನಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದನು. ಆಗಾಗ್ಗೆ ಊರಿಗೆ ಬಂದು ಹೋಗುತ್ತಿದ್ದನು ಹಾಗೂ ಪ್ರತಿ ದಿನ ಪೋನ್ ಮಾಡಿ ನಮ್ಮ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿದ್ದನು. ಈಗಿರುವಾಗ್ಗೆ ದಿ:11/04/2018 ರಂದು ಸಂಜೆ ಸುಮಾರು 07:30 ಗಂಟೆಯ ಸಮಯದಲ್ಲಿ ನನ್ನ ಮಗನಾದ ಮುನಿರಾಜು ಪೋನ್ ಮಾಡಿ ನನ್ನ ಯೋಗಕ್ಷೇಮವನ್ನು ವಿಚಾರಿಸಿ ನಂತರ ನಾನು ಮತ್ತು ನನ್ನ ಸ್ನೇಹಿತ ಮಂಜುನಾಥ ಇಬ್ಬರು ಕೆಲಸ ನಿಮಿತ್ತಾ ಪಾವಗಡಕ್ಕೆ ಹೋಗಿ ಬರುವುದಾಗಿ ಹೇಳಿದ್ದನು. ನಂತರ ನಾವು ಊಟ ಮಾಡಿ ಮಲಗಿರುವಾಗ್ಗೆ ಅದೇ ದಿನ ರಾತ್ರಿ ಸುಮಾರು 11:45 ಗಂಟೆಯ ಸಮಯದಲ್ಲಿ ಮಧುಗಿರಿ ತಾಲ್ಲೂಕಿನ ಬಿದರೆಕೆರೆ ಗ್ರಾಮದ ದಿನೇಶ್ ಎಂಬುವರು ನನಗೆ ಪೋನ್ ಮಾಡಿ ಈ ದಿನ ರಾತ್ರಿ ಸುಮಾರು 10:30 ಗಂಟೆಯ ಸಮಯದಲ್ಲಿ ನಾನು ನಮ್ಮ ಬಾಬ್ತು ಗದ್ದೆಗೆ ನೀರು ಬಿಡುವ ಸಲುವಾಗಿ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿ ಬಿದರೆಕೆರೆಯ ಹೇರಿಯ ಮೇಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಅದೇ ಸಮಯಕ್ಕೆ ನಿಮ್ಮ ಮಗ ಮುನಿರಾಜು ಮತ್ತು ಆತನ ಸ್ನೇಹಿತ ಮಂಜುನಾಥ ಇಬ್ಬರು ಕೆಎ-06-ಹೆಚ್.ಎ-1760 ನೇ ಬೈಕಿನಲ್ಲಿ ಮಧುಗಿರಿ ಕಡೆಯಿಂದ ಪಾವಗಡದ ಕಡೆಗೆ ಹೋಗಲು ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಅದೇ ರಸ್ತೆಯಲ್ಲಿ ಅದೇ ಸಮಯಕ್ಕೆ ಪಾವಗಡ ಕಡೆಯಿಂದ ಎದುರಿಗೆ ಬಂದ ಕೆಎ-64-ಕ್ಯೂ-4699 ನೇ ಬೈಕಿನ ಸವಾರನು ಬೈಕನ್ನು ತುಂಬಾ ಸ್ಪೀಡಾಗಿ ಮತ್ತು ಎದ್ವಾತದ್ವಾವಾಗಿ ಓಡಿಸಿಕೊಂಡು ಬಂದು ನಿಮ್ಮ ಮಗ ಮುನಿರಾಜು ಮತ್ತು ಮಂಜುನಾಥ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿದ್ದರಿಂದ ನಿಮ್ಮ ಮಗ ಮುನಿರಾಜು ಮತ್ತು ಆತನ ಸ್ನೇಹಿತ ಮಂಜುನಾಥ ಇಬ್ಬರು ರಸ್ತೆಯ ಪಕ್ಕದಲ್ಲಿದ್ದ  ತಡೆಗೋಡೆಯ ಮೇಲೆ ಬಿದ್ದರು, ಕೂಡಲೇ ಅಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ನಾನು ಹತ್ತಿರ ಹೋಗಿ ನೋಡಲಾಗಿ ಮುನಿರಾಜು ರವರಿಗೆ ತಲೆಗೆ, ಮುಖಕ್ಕೆ ಮೈಕೈಗೆ ಜಾಸ್ತಿ ಪೆಟ್ಟುಗಳು ಬಿದ್ದು ತುಂಬಾ ರಕ್ತ ಹೋಗುತ್ತಿರುತ್ತೆ ಹಾಗೂ ಮಂಜುನಾಥನ ಎಡಗಾಲಿಗೆ, ಮೈಕೈಗೆ ಪೆಟ್ಟುಗಳು ಬಿದ್ದು ಗಾಯಗಳಾಗಿದ್ದವರನ್ನು ಉಪಚರಿಸುತ್ತಿದ್ದಾಗ, ಅಪಘಾತಪಡಿಸಿದ ಕೆಎ-64-ಕ್ಯೂ-4699 ನೇ ಬೈಕ್ ಸಾವಾರ ತನ್ನ ಬೈಕನ್ನು ತೆಗೆದುಕೊಡು ಅಲ್ಲಿಂದ ಹೊರಟು ಹೋದನು. ಅಷ್ಟರಲ್ಲಿ ಸ್ಥಳಕ್ಕೆ ಬಂದ 108 ಆಂಬುಲೆನ್ಸ್ ನಲ್ಲಿ ನಿಮ್ಮ ಮಗ ಮುನಿರಾಜು ರವರನ್ನು ಮತ್ತು ಮಂಜುನಾಥ ನನ್ನು ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇನೆ ನೀವು ಮಧುಗಿರಿ ಸರ್ಕಾರಿ ಆಸ್ಪತ್ರೆಯ ಬಳಿ ಬನ್ನಿ ಎಂತ ವಿಷಯ ತಿಳಿಸಿದರು. ಕೂಡಲೇ ನಾನು ಮತ್ತು ನನ್ನ ಸ್ನೇಹಿತ ನಾಗರಾಜು ಬಿನ್ ಗಂಗಯ್ಯ ಇಬ್ಬರು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ವಿಚಾರ ನಿಜವಾಗಿದ್ದು, ನನ್ನ ಮಗ ಮುನಿರಾಜು ರವರಿಗೆ ಅಪಘಾತದಲ್ಲಿ ತುಂಬಾ ಪೆಟ್ಟುಗಳು ಬಿದ್ದು ರಕ್ತ ಹೋಗಿ ಮೃತಪಟ್ಟಿದ್ದು ನನ್ನ ಮಗ ಮುನಿರಾಜು ರವರ ಶವ ಆಸ್ಪತ್ರೆಯ ಶವಾಗಾರದಲ್ಲಿತ್ತು, ನನ್ನ ಮಗನ ಸ್ನೇಹಿತ ಮಂಜುನಾಥನನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳುಹಿಸಿರುವುದಾಗಿ ಆಸ್ಪತ್ರೆಯಲ್ಲಿ ತಿಳಿಸಿದರು. ನಾನು ನಮ್ಮ ಮನೆಯವರಿಗೆ ಹಾಗೂ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿ ರಾತ್ರಿ ಅವೇಳೆಯಾಗಿದ್ದರಿಂದ ಈ ದಿನ ಅಂದರೆ ದಿ:12/04/2018 ರಂದು ಬೆಳಿಗ್ಗೆ ಠಾಣೆಗೆ ಬಂದು ಈ ಅಪಘಾತಕ್ಕೆ ಕಾರಣನಾದ ಕೆಎ-64-ಕ್ಯೂ-4699 ನೇ ಬೈಕ್ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದು ಪಡೆದು. ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 57/2018 ಕಲಂ   498() 304(ಬಿ ) 306 ರೆ/ವಿ 34 ಐಪಿಸಿ

ದಿ:12/04/2018 ರಂದು ಬೆಳಗ್ಗೆ 10-45 ಗಂಟೆಗೆ ಪಿರ್ಯಾದಿ ಗೋವಿಂದಪ್ಪ ಬಿನ್‌‌ ಗಿರುಪನಾಯಕ, ಬಿ ಎಂ ಪಾಳ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಮಗಳಾದ ವಿನುತಾಳನ್ನು ಕೊರಟಗೆರೆ ತಾಲ್ಲೂಕು ತಣ್ಣೇನಹಳ್ಳಿ ಗ್ರಾಮದ ಹನುಮಂತಪ್ಪನ ಮಗ ಹರೀಶನಿಗೆ ದಿನಾಂಕ:30/05/2012 ರಂದು ಕೊಟ್ಟು ಮದುವೆ ಮಾಡಿದ್ದೆವು. ಮದುವೆ ಕಾಲದಲ್ಲಿ ಒಲೆ , ಜುಮುಕಿ, ಮಾಂಗಲ್ಯ ಸರವನ್ನು ಮಗಳಿಗೆ ಕೊಟ್ಟಿದ್ದೆನು.  ಹಾಗೂ ಅಳಿಯನಿಗೆ ಎಂಟು ಗ್ರಾಂ ತೂಕದ ಬಂಗಾರದ ಉಂಗುರ ಹಾಗೂ ಐದು ಸಾವಿರ ಬೆಲೆ ಬಾಳುವ ಬಟ್ಟೆಗಳನ್ನು ಕೊಡಿಸಿದ್ದೆ. ನಾನು ಪೂರಾ ಹಣ ಖರ್ಚು ಮಾಡಿ ಮದುವೆ ಮಾಡಿ ಕೊಟ್ಟಿದ್ದೆ. ಮದುವೆಯಾದ ಒಂದು ವರ್ಷ ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು. ನಂತರ ನನ್ನ ಮಗಳಿಗೆ ಆಕೆಯ ಗಂಡ ಹರೀಶ , ಮಾವ ಹನುಮಂತಪ್ಪ ಅತ್ತೆ ಮಂಜಮ್ಮ ಹಾಗೂ ನಾದಿನಿ ಪುಷ್ಟ ಇವರುಗಳು ವರದಕ್ಷಿಣೆ ಹಣ ತರುವಂತೆ ಬಾಯಿಗೆ ಬಂದಂತೆ ಬೈಯ್ದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿತ್ತಿದ್ದರು. ನಾನು ನನ್ನ ಸಂಬಂದಿಕರು ಮತ್ತು ಗ್ರಾಮಸ್ಥರನ್ನು ಕರೆದುಕೊಂಡು ಹೋಗಿ ನ್ಯಾಯ ಪಂಚಾಯ್ತಿ ಮಾಡಿ ಬುದ್ದಿ ಹೇಳಿ ಬಂದಿದ್ದೆನು. ಕೆಲವು ದಿನಗಳ ನಂತರ ಅವರು ನನ್ನ ಮಗಳಿಗೆ ಮತ್ತೆ ಹಿಂಸೆ ಕೊಡುತ್ತಿದ್ದರು. ಆಗ ನಾನು ದಿ:08/07/2013 ರಂದು ಮಧುಗಿರಿ ಯಲ್ಲಿರುವ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಬುದ್ದಿ ಹೇಳಿ ಒಂದು ಮಾಡಿಸಿದ್ದೆನು. ಮತ್ತು ಕೆಲವು ತಿಂಗಳ ನಂತರ ನನ್ನ ಮಗಳಿಗೆ ಮುಂಡೆ ಎಲ್ಲಿಯಾದರೂ ಹೋಗಿ ಸಾಯಿ ನಮ್ಮ  ಕಣ್ಣ ಮುಂದೆ ಇರಬೇಡ, ಇಲ್ಲ ಮನೆ ಕೆಲಸ ಮಾಡಿಕೊಂಡು ಬಿದ್ದಿರು . ನಿನಗೆ ಮಕ್ಕಳಾಗಲು ಬಿಡುವುದಿಲ್ಲ , ಬದುಕಲೂ ಸಹ ಬಿಡುವುದಿಲ್ಲ ಎಂದು ಪದೇ ಪದೇ ಹಿಂಸೆ ಕೊಡುತ್ತಿದ್ದರಿಂದ ನನ್ನ ಮಗಳು ದಿ:10/03/2018 ರಂದು ಮನೆಗೆ ಬಂದು ಅಳುತ್ತಾ ಇನ್ನು ಮುಂದೆ ಅಲ್ಲಿಗೆ ಹೋಗುವುದಿಲ್ಲ ಎಂದು ಹೇಳಿದ್ದಳು . ದಿ:11/04/2018 ರಂದು ಮನೆಯಲ್ಲಿ ನನ್ನ ಮಗಳು ತಲೆ ಸುತ್ತು ಬಂದು ಕೆಳಗೆ ಬಿದ್ದಿದ್ದು, ನನ್ನ ಹೆಂಡತಿ ಮತ್ತು ಊರಿನವರು ಉಪಚರಿಸಿ ಅಂಬ್ಯುಲೆನ್ಸ್‌‌ ವಾಹನದಲ್ಲಿ ಬಡವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ  ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ನನ್ನ ಮಗಳು ಸತ್ತು ಹೋಗಿರುವ ಬಗ್ಗೆ ತಿಳಿಸಿರುತ್ತಾರೆ.. ನನ್ನ ಮಗಳ ಸಾವಿಗೆ ಕಾರಣರಾದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 77 guests online
Content View Hits : 302219