lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2018 >
Mo Tu We Th Fr Sa Su
            1
2 3 4 5 6 7
9 10 11 12 13 14 15
16 17 18 19 20 21 22
23 24 25 26 27 28 29
30            
Sunday, 08 April 2018
ಅಪರಾಧ ಘಟನೆಗಳು 08-04-18

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 46/2018 ಕಲಂ: 304(A) ಐ.ಪಿ.ಸಿ

ದಿನಾಂಕ: 07/04/2018 ರಂದು ರಾತ್ರಿ 8-15 ಗಂಟೆಗೆ ಪಿರ್ಯಾದಿ ರೇಖಾ ಬಿ.ಎಸ್ ಕೋಂ ಶ್ರೀಕಾಂತ್ 28 ವರ್ಷ, ಗೋಡೆಕೆರೆ ಚಿಕ್ಕನಾಯಕನಹಳ್ಳಿ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:07/04/2018 ರಂದು ನನ್ನ ಮಗ 10 ವರ್ಷದ ಯಶವಂತ್ ಸುಮಾರು ಮಧ್ಯಾಹ್ನ 3-30 ಗಂಟೆಯ ಸಮಯದಲ್ಲಿ  ಈಜು ಕಲಿಯುವುದಕ್ಕೆಂದು ತಿಪಟೂರು ನಗರದ ದೊಡ್ಡಯ್ಯನಪಾಳ್ಯದಲ್ಲಿರುವ ಮೂರ್ತಿರವರ ಈಜು ಕೊಳಕ್ಕೆ ಹೋಗಿದ್ದು, ಅವರು ಶುಲ್ಕವನ್ನು ತೆಗೆದುಕೊಂಡು ಈಜಾಡಲು ಒಳಗಡೆ ಬಿಟ್ಟಿರುತ್ತಾರೆ. ಈಜು ಆಡುವಾಗ ಯಶವಂತ್ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಪ್ರಾಣ ಬಿಟ್ಟಿರುತ್ತಾನೆ. ಆ ವೇಳೆಯಲ್ಲಿ ಪ್ರಾಣ ರಕ್ಷಿಸುವ ಯಾವುದೇ ಸಲಕರಣೆ ಇಲ್ಲದೆ ಹಾಗೂ ವೀಕ್ಷಕರು ಯಾರು ಇಲ್ಲದ ಕಾರಣ ಹಾಗೂ ಮಾಲೀಕರ ನಿರ್ಲಕ್ಷತೆಯಿಂದ ಈ ಸಾವು ಸಂಭವಿಸಿರುತ್ತೆ. ಈ ಸಾವಿಗೆ ಸಂಪೂರ್ಣ ಜವಾಬ್ದಾರರು ಮಾಲೀಕರಾದ ಮೂರ್ತಿಯವರದ್ದೇ ಆಗಿರುತ್ತದೆ. ಆದ್ದರಿಂದ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನ್ಯಾಯ ದೊಕಿಸಿಕೊಡಬೇಕೆಂದು ಇತ್ಯಾದಿಯಾಗಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್‌ ಠಾಣಾ ಮೊನಂ-83/2018, ಕಲಂ- 279, 337, 304(ಎ) ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ: 07-04-2018 ರಂದು ಬೆಳಿಗ್ಗೆ 6-30 ಗಂಟೆಯಲ್ಲಿ ಪಿರ್ಯಾದಿ ಕುಣಿಗಲ್ ಟೌನ್, ಕೆ.ಆರ್‌‌.ಎಸ್ ಅಗ್ರಹಾರ, ಮಾರುತಿ ರಸ್ತೆಯಲ್ಲಿ ವಾಸವಾಗಿರುವ ನಂಜುಂಡಯ್ಯ ಬಿನ್ ಲೇಟ್ ನಂಜಪ್ಪ, 66 ವರ್ಷ, ಒಕ್ಕಲಿಗ ಜನಾಂಗ, ನಿವೃತ್ತ ಬೆಸ್ಕಾಂ ನೌಕರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 06-04-2018 ರಂದು ಮದ್ಯಾಹ್ನ ಸುಮಾರು 2-20 ಗಂಟೆಯಲ್ಲಿ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮ ಸಂಬಂದಿಕರಾದ ಮಂಜು, ಆನೆಕೆರೆ ಗ್ರಾಮ, ಚನ್ನರಾಯಪಟ್ಟಣ ತಾಲೋಕ್ ರವರು ನನಗೆ ಪೋನ್ ಮಾಡಿ ನನ್ನ ತಂಗಿ ಮತ್ತು ನನ್ನ ಭಾವರವರು ಬೆಂಗಳೂರಿಗೆ ಹೋಗುತ್ತಿದ್ದಾಗ ಅವರಿಗೆ ಮಾಗಡಿಪಾಳ್ಯದ ಬಳಿ ಆಕ್ಸಿಡೆಂಟ್ ಆಗಿದೆಯಂತೆ ಅವರು ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರಂತೆ ನೀವು ಹೋಗಿ ನೋಡಿ ಎಂತ ನನಗೆ ವಿಚಾರವನ್ನು ತಿಳಿಸಿದರು. ನಂತರ ನಾನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಸಂಬಂದಿ ಮಂಜುರವರ ಭಾವ ರವೀಶ್ ಮತ್ತು ತಂಗಿ ಲೀಲಾವತಿಯವರಿಗೆ ಚಿಕಿತ್ಸೆ ನಡೆಯುತ್ತಿತ್ತು. ನಂತರ ಮಂಜುರವರ ಭಾವ ರವೀಶ್ ಬಿನ್ ಮಾಳಿಗೇಗೌಡ ರವರನ್ನು ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ರವೀಶ್ ರವರು ಮತ್ತು ಅವರ ಹೆಂಡತಿ ಲೀಲಾವತಿ ರವರು ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗಲೆಂದು ಅವರ ಬಾಬ್ತು ಕೆಎ-50, ಜೆ-6620 ರ ಸ್ಪೆಂಡರ್ ಪ್ಲೇಸ್ ಬೈಕ್ ನಲ್ಲಿ ಆನೆಕೆರೆಯಿಂದ ಹೊರಟು ಎಡೆಯೂರು ಮಾರ್ಗವಾಗಿ ಮಾಗಡಿಪಾಳ್ಯದ ಬಳಿ ಎನ್.ಹೆಚ್-75 ರಸ್ತೆಯಲ್ಲಿ ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ಹೋಗುತ್ತಿರಬೇಕಾದರೆ, ಅದೇ ಸಮಯಕ್ಕೆ ಎಡೆಯೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಹೋಗುತ್ತಿದ್ದ ಒಂದು ಕಾರಿನ ಚಾಲಕ ತನ್ನ ಕಾರನ್ನು ಅತಿವೇಗವಾಗಿ ಓಡಿಸಿಕೊಂಡು ಬಂದು ನಮ್ಮ ವಾಹನಕ್ಕೆ ಓವರ್ ಟೇಕ್ ಮಾಡಿ ಮುಂದೆ ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯಾವುದೇ ಸೂಚನೆ ನೀಡದೆ ಅಜಾಗರೂಕತೆಯಿಂದ ತಕ್ಷಣ ಎಡಭಾಗಕ್ಕೆ ಕಾರನ್ನು ತೆಗೆದುಕೊಂಡಿದ್ದರಿಂದ ನಾನು ಚಾಲನೆ ಮಾಡುತ್ತಿದ್ದ ಬೈಕ್ ಸದರಿ ಕಾರಿಗೆ ಡಿಕ್ಕಿ ಹೊಡೆಯಿತು. ನಂತರ ನಾವು ಬೈಕ್ ಸಮೇತ ಕೆಳಗೆ ಬಿದ್ದೆವು. ಆ ಕಾರಿನ ಚಾಲಕ ತನ್ನ ಕಾರನ್ನು ನಿಲ್ಲಿಸದೆ ಕುಣಿಗಲ್ ಕಡೆಗೆ ಹೊರಟು ಹೋದನು. ಈ ಅಪಘಾತದಿಂದ ನಮ್ಮಿಬ್ಬರಿಗೂ ತಲೆಗೆ, ಮೈಕೈಗೆ, ಕಾಲುಗಳಿಗೆ ಪೆಟ್ಟುಗಳು ಬಿದ್ದಿದ್ದು, ನಮ್ಮನ್ನು ಅಲ್ಲೇ ಇದ್ದ ಸಾರ್ವಜನಿಕರು ಉಪಚರಿಸಿ 108 ಅಂಬ್ಯುಲೆನ್ಸ್ ನಲ್ಲಿ ಕುಣಿಗಲ್ ಆಸ್ಪತ್ರೆಗೆ ಕರೆ ತಂದು ಸೇರಿಸಿದರು ಎಂದು ತಿಳಿಸಿದರು. ನಂತರ ನಾನು ವೈದ್ಯರು ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರಿಬ್ಬರನ್ನೂ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕಳುಹಿಸಿಕೊಟ್ಟೆನು. ನಂತರ ನಾನು ಮನೆಯಲ್ಲಿದ್ದಾಗ ಮಂಜುರವರು ಪುನಃ ನನಗೆ ಪೋನ್ ಮಾಡಿ ನನ್ನ ಭಾವ ರವೀಶ್ ರವರು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಅದೇ ದಿನ ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿರುತ್ತಾರೆ. ನೀವು ಬೆಳಿಗ್ಗೆ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೆಂಟ್ ಕೊಡಿ ಎಂದು ತಿಳಿಸಿದ ಮೇರೆಗೆ ನಾನು ಈಗ ಬಂದು ದೂರು ನೀಡುತ್ತಿದ್ದೇನೆ. ಈ ಅಪಘಾತಕ್ಕೆ ಕಾರಣನಾದ ಕಾರನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-88/2018 ಕಲಂ 279,337 ಐಪಿಸಿ.

ದಿನಾಂಕ-07/04/2018 ರಂದು ಮಧ್ಯಾಹ್ನ 2-30 ಗಂಟೆಗೆ ಪಿರ್ಯಾದಿಯಾದ ನಾಗೇಶ್‌,ಆರ್ ಬಿನ್ ರಾಜಣ್ಣ, 29 ವರ್ಷ, ಒಕ್ಕಲಿಗರು, ಕಂಟ್ರಾಕ್ಟರ್ ಕೆಲಸ, ಮನೆ ನಂಬರ್‌-367, 1 ನೇ ಕ್ರಾಸ್‌, 2 ನೇ ಮೈನ್‌, ಮಂಜುನಾಥ ನಗರ, ಬೆಂಗಳೂರು-73 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೇಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ದಿನಾಂಕ: 03-04-2018 ರಂದು ನನ್ನ ತಂಗಿ ರತ್ನ,ಆರ್ ರವರ ಊರಾದ ತುಮಕೂರು ತಾಲ್ಲೂಕು, ಗೂಳೂರು ಹೋಬಳಿ, ಬಿದರಕಟ್ಟೆ ಗ್ರಾಮಕ್ಕೆ ಹಬ್ಬದ ಪ್ರಯುಕ್ತ ಹೋಗಿದ್ದೆನು. ನಂತರ ದಿನಾಂಕ: 04-04-2018 ರಂದು ಬೆಳಿಗ್ಗೆ ನಾನು ಮತ್ತು ನನ್ನ ತಂಗಿಯ ಗಂಡನಾದ ಅಂದರೆ ನನ್ನ ಭಾವನಾದ ನರಸಿಂಹರಾಜು,ಎನ್‌ ಇಬ್ಬರೂ ನರಸಿಂಹರಾಜು,ಎನ್ ರವರ ಬಾಬ್ತು ಕೆಎ-06-ಇ.ಡಬ್ಲ್ಯು-5480 ನೇ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನದಲ್ಲಿ ದ್ವಿಚಕ್ರ ವಾಹನವನ್ನು ನಾನು ಸವಾರಿ ಮಾಡಿಕೊಂಡು ಹಿಂಬದಿಯಲ್ಲಿ ನನ್ನ ಬಾವನಾದ ನರಸಿಂಹರಾಜು ರವರು ಕುಳಿತುಕೊಂಡು ಬಿದರಕಟ್ಟೆ ಗ್ರಾಮದ ನನ್ನ ತಂಗಿಯ ಮನೆಯಿಂದ ಬಿದರಕಟ್ಟೆ ಗ್ರಾಮದ ಹೊನ್ನುಡಿಕೆ-ಶಿವಗಂಗೆ ಟಾರ್ ರಸ್ತೆಯ ಪಕ್ಕದಲ್ಲಿ ತೋಟದ ಮನೆಯಲ್ಲಿರುವ ಸುರೇಶ ರವರ ಮನೆಗೆ ಸ್ವಂತ ಕೆಲಸದ ನಿಮಿತ್ತ ಹೋಗುತ್ತಿರುವಾಗ್ಗೆ, ಬೆಳಿಗ್ಗೆ ಸುಮಾರು 05-30 ಗಂಟೆ ಸಮಯದಲ್ಲಿ ನಾನು ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಶಿವಗಂಗೆ ಕಡೆಯಿಂದ ಸುರೇಶ ರವರ ಮನೆಯ ಕಡೆಗೆ ದ್ವಿಚಕ್ರ ವಾಹನದಲ್ಲಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ್ಗೆ, ಎದುರಿಗೆ ಹೊನ್ನುಡಿಕೆ ಕಡೆಯಿಂದ ಶಿವಗಂಗೆ ಕಡೆಗೆ ಹೋಗಲು ಬಂದ ಕೆಎ-06-ಇ.ಜೆ-4562 ನೇ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ನಾವುಗಳು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನಾವಿಬ್ಬರೂ ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದೆವು. ನಂತರ ನೋಡಲಾಗಿ ನನ್ನಭಾವ ನರಸಿಂಹರಾಜು ರವರಿಗೆ ತಲೆಗೆ, ಮುಖಕ್ಕೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ರಕ್ತಗಾಯಗಳಾಗಿದ್ದು, ನನಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನಿಗೂ ಸಹ ಏಟು ಬಿದ್ದು ಗಾಯಗಳಾಗಿದ್ದವು. ನಂತರ ಸದರಿ ಅಫಘಾತದ ವಿಚಾರವನ್ನು ತಿಳಿದು ಸ್ಥಳಕ್ಕೆ ಬಂದ ನನ್ನ ಬಾವ ನರಸಿಂಹರಾಜು ರವರ ಅಣ್ಣನಾದ ತಿಮ್ಮೇಗೌಡ,ಎನ್‌ ಹಾಗೂ ನಾನು ಇಬ್ಬರೂ ಸೇರಿಕೊಂಡು ಗಾಯಗೊಂಡಿದ್ದ ನರಸಿಂಹರಾಜು ರವರನ್ನು ಸ್ಥಳಕ್ಕೆ ಬಂದ ಯಾವುದೋ ಒಂದು ಕಾರಿನಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ತುಮಕೂರಿನ ನರಸಿಂಹಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದೆವು. ನನಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಯಾವುದೇ ರೀತಿಯ ಚಿಕಿತ್ಸೆಯನ್ನು ಪಡೆಯಲಿಲ್ಲ. ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.  ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ಜೆ-4562 ನೇ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ನನ್ನ ಬಾವ ನರಸಿಂಹರಾಜು ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಫಘಾತಪಡಿಸಿದ ಹಾಗೂ ಅಪಘಾತಕ್ಕೊಳಗಾದ ಎರಡೂ ದ್ವಿಚಕ್ರ ವಾಹನಗಳು ಬಿದರಕಟ್ಟೆ ಗ್ರಾಮದ ಸುರೇಶ ರವರ ಮನೆಯ ಬಳಿ ನಿಲ್ಲಿಸಿರುತ್ತೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 88/2018 ಕಲಂ 279,337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-89/2018 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ: 07-04-2018 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿಯಾದ ವೇದಾವತಿ ಬಿನ್ ಲೇ|| ಭದ್ರಾಚಾರ್‌, 50 ವರ್ಷ, ವಿಶ್ವಕರ್ಮ ಜನಾಂಗ, ಟೀಚರ್ ಕೆಲಸ, ಕಾಮಾಕ್ಷಿ ಮಠದ ರಸ್ತೆ, ಹೆಬ್ಬೂರು, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ: 02-04-2018 ರಂದು ಬೆಳಗಿನ ಜಾವ ಸುಮಾರು 06-30 ಗಂಟೆ ಸಮಯದಲ್ಲಿ ನಾನು ಹಾಗೂ ನನ್ನ ತಾಯಿಯಾದ ಸುಶೀಲಮ್ಮ ಇಬ್ಬರೂ ಹೆಬ್ಬೂರಿನ ಅಂಬೇಡ್ಕರ್‌ ಭವನದ ಮುಂಭಾಗದ ಕುಣಿಗಲ್‌-ತುಮಕೂರು ಟಾರ್ ರಸ್ತೆಯ ಎಡಭಾಗದಲ್ಲಿ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ವಾಯುವಿಹಾರ ಮಾಡಿಕೊಂಡು ಹೋಗುತ್ತಿರುವಾಗ್ಗೆ, ನಮ್ಮ ಹಿಂಬದಿಯಿಂದ ಅಂದರೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಕೆಎ-42-ಯು-5933 ನೇ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ನನ್ನ ತಾಯಿ ಸುಶೀಲಮ್ಮ ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ತಾಯಿ ಸುಶೀಲಮ್ಮ ರವರ ತಲೆಗೆ ಹಾಗೂ ಎಡಗೈಗೆ ತೀವ್ರತರವಾದ ರಕ್ತಗಾಯಗಳಾದವು. ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಸ್ಥಳದಲ್ಲಿ ನಿಲ್ಲಿಸಿದ್ದವನು ನಂತರ ತೆಗೆದುಕೊಂಡು ಹೊರಟು ಹೋದನು. ನಂತರ ಅಲ್ಲಿಯೇ ಇದ್ದ ಹೆಬ್ಬೂರಿನ ವಾಸಿಯಾದ ವರದರಾಜು ಬಿನ್ ದೊಡ್ಡಯ್ಯ ಹಾಗೂ ನಾನು ಇಬ್ಬರೂ ಸೇರಿಕೊಂಡು ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆಎ-42-ಯು-5933 ನೇ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ನನ್ನ ತಾಯಿ ಸುಶೀಲಮ್ಮ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 45/2018 ಕಲಂ: 279,337 ಐ.ಪಿ.ಸಿ

ದಿನಾಂಕ:07/04/2018 ರಂದು ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿ ಸುರೇಶ್ ಬಿನ್ ಗಿರಿಯಪ್ಪ 35 ವರ್ಷ, ಗೊಲ್ಲರು, ಮಗ್ಗದ ಕೆಲಸ,  ಟಿ.ಎಂ ಮಂಜುನಾಥನಗರ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:06/04/2018 ರಂದು ರಾತ್ರಿ 9-45 ಗಂಟೆ ಸಮಯದಲ್ಲಿ ನನ್ನ ಬಾಬ್ತು ಕೆ.ಎ-55 -3163 ನೇ ಕ್ಯಾಂಟರ್ ವಾಹನವನ್ನು ಚಾಲಕ ಓಡಿಸುತ್ತಿದ್ದು, ನಾನು ವಾಹನದಲ್ಲಿ ಇದ್ದೆನು. ನಾವು ಐ.ಬಿ ಸರ್ಕಲ್ ಕಡೆಯಿಂದ ಅಣ್ಣಾಪುರ ಗೇಟ್ ಕಡೆಗೆ ಹೋಗಲು ಹಾಲ್ಕುರಿಕೆ ರಸ್ತೆಯಲ್ಲಿ ಇರುವ ಎಸ್,ಎಲ್.ಆರ್ ಪೆಟ್ರೋಲ್ ಬಂಕ್  ನಿಂದ ಸುಮಾರು 100 ಮೀ ಹಿಂದೆ ರಸ್ತೆಯಲ್ಲಿ ಹೋಗುತ್ತಿರುವಾಗ ಇದೇ ಸಮಯಕ್ಕೆ ಎದುರಿಗೆ ಅಣ್ಣಾಪುರ ಗೇಟ್ ಕಡೆಯಿಂದ ಬಂದ ಕೆ.ಎ-44 ಆರ್-7332 ನೇ ದ್ವಿಚಕ್ರವಾಹನದ ಚಾಲಕ ತನ್ನ ವಾಹನವನ್ನು ಅತಿ ಜೋರಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಕ್ಯಾಂಟರ್ ನ ಮುಂದಿನ ಬಲಚಕ್ರದ ಬಳಿ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡು ಬೈಕ್ ಸವಾರನಿಗೆ ತಲೆಗೆ, ಕೈಕಾಲುಗಳಿಗೆ ಪೆಟ್ಟುಗಳಾದವು. ನಂತರ ಗಾಯಗೊಂಡ ವ್ಯಕ್ತಿಯ ಹೆಸರು ವಿಳಾಸ ತಿಳಿಯಲಾಗಿ ರೇಣುಕಯ್ಯ ಬಿನ್ ದೊಡ್ಡಯ್ಯ ಹಾಲ್ಕುರಿಕೆ ಎಂತ ತಿಳಿಯಿತು. ಆಗ ಸ್ಥಳದಲ್ಲಿದ್ದ ತಿಪಟೂರು ಎಸ್.ಎಲ್.ಆರ್ ಪೆಟ್ರೋಲ್ ಬಂಕ್ ನ ಮಹೇಶ ಮತ್ತು ಅಕ್ಕಪಕ್ಕದವರು ಗಾಯಾಳುವನ್ನು ಉಪಚರಿಸಿ ಅಲ್ಲಿಗೆ ಬಂದ ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು. ಆದ್ದರಿಂದ ನಮ್ಮ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆಸಿಕೊಂಡು ಗಾಯಗೊಂಡ ಕೆ.ಎ-44 ಆರ್-7332 ನೇ ದ್ವಿಚಕ್ರ ವಾಹನದ ಸವಾರ ರೇಣುಕಯ್ಯನವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 44/2018 ಕಲಂ: 379 ಐ.ಪಿ.ಸಿ

ದಿನಾಂಕ:07/04/2018 ರಂದು ಮಧ್ಯಾಹ್ನ 12-00 ಗಂಟೆಗೆ ಪಿರ್ಯಾದಿ ಎಸ್, ಪರಮೇಶ್ ಬಿನ್ ಲೇಟ್ ಶಿವನಂಜಪ್ಪ 50ವರ್ಷ, ಲಿಂಗಾಯಿತರು, ವ್ಯವಸಾಯ. ವಾಸ ಕೆ.ಎಲ್ ಬಸಪ್ಪ ಲೇಔಟ್,ಶೆಟ್ಟಿಕೆರೆ ರಸ್ತೆ, ಬಂಡೀಹಳ್ಳಿ ಕ್ರಾಸ್, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ತಿಪಟೂರಿನ ಮೋರ್ ಪಕ್ಕದಲ್ಲಿರುವ ಶ್ರೀ ಜಿ ಎಂ ಲಕ್ಷ್ಮಿ ವೈರಟಿ ಸೆಂಟರ್ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ  ನನ್ನ ಮಗ ಚೇತನ್ ರವರಿಗೆ  ದಿನನಿತ್ಯದ ಕೆಲಸ ಕಾರ್ಯಗಳಿಗೆ ಓಡಾಡಲು ಕೆ ಎ  44 ಎಸ್   8515 ನೇ ನಂಬರಿನ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್  500 ಸಿಸಿ ದ್ವಿಚಕ್ರವಾಹನವನ್ನು ತೆಗೆದುಕೊಟ್ಟಿದ್ದು, ಇದೇ ದ್ವಿಚಕ್ರವಾಹನದಲ್ಲಿ ಪ್ರತಿದಿನ ಅಂಗಡಿಗೆ ಹೋಗಿ ಬರುತ್ತಿದ್ದನು, ಎಂದಿನಂತೆ ದಿನಾಂಕ 13/2/2018 ರಂದು ಬೆಳಗ್ಗೆ ಇದೇ ದ್ವಿಚಕ್ರವಾಹನದಲ್ಲಿ ಅಂಗಡಿಗೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ 9=00 ಗಂಟೆಗೆ ಮನೆಗೆ ವಾಪಸ್ಸು ಬಂದು ನಾವು ವಾಸವಿರುವ ಮನೆಯ ಮುಂಭಾಗ ನನ್ನ ಬಾಬ್ತು ಕೆ ಎ  44 ಎಸ್  8515 ನೇ ನಂಬರಿನ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್  500 ಸಿಸಿ ದ್ವಿಚಕ್ರವಾಹನವನ್ನು ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿ, ಊಟ ಮಾಡಿ ಮಲಗಿದ್ದು, ಮರುದಿನ ಬೆಳಗಿನ ಜಾವ ಸುಮಾರು 5=00 ಗಂಟೆಗೆ ಎದ್ದು ನೋಡಲಾಗಿ ನಾವು ನಿಲ್ಲಿಸಿದ್ದ ದ್ವಿಚಕ್ರವಾಹನ ಕಾಣಲಿಲ್ಲ, ತಕ್ಷಣ ನಾನು ಮತ್ತು ನನ್ನ ಮಗ ಚೇತನ್ ನಮ್ಮ ಮನೆಯ ಸುತ್ತಮುತ್ತ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ, ಮತ್ತು ಅಂದಿನಿಂದ ಇಲ್ಲಿಯವರೆವಿಗೆ ನಾನು ಮತ್ತು ನನ್ನ ಮಗ ಚೇತನ್ ಹಾಗೂ ಆತನ ಸ್ವೇಹಿತರೂ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ,  ಸದರಿ ದ್ವಿಚಕ್ರವಾಹನದ ಚಾಸ್ಸಿ ನಂಬರ್  ME3U5S5F1GL097808 ಆಗಿದ್ದು, ಇಂಜಿನ್ ನಂಬರ್ U5S5F0GL177923 ಆಗಿರುತ್ತದೆ, ಇದರ ಅಂದಾಜು ಬೆಲೆ 35,000=00 ರೂಗಳು ಆಗಬಹುದು, ಯಾರೋ ಕಳ್ಳರು ನನ್ನ ಬಾಬ್ತು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಾನೂನು ರೀತ್ಯ ಕ್ರಮ ಕೈಗೊಂಡು ವಾಹನವನ್ನು ಪತ್ತೆ ಮಾಡಿ ಕೊಡಬೇಕೆಂದು ಕೋರಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ, ಎಂತಾ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ. 96/2018, ಕಲಂ: 279,  304(ಎ) ಐಪಿಸಿ

ದಿನಾಂಕ: 07-04-2018 ರಂದು ಬೆಳಿಗ್ಗೆ 07-30  ಗಂಟೆಗೆ ಮಹಮದ್ ಗೌಸ್ ಬಿನ್ ಮಹಮದ್ ಮೊಹಿದ್ದೀನ್, 29 ವರ್ಷ, ಮುಸ್ಲಿಂ, ಶಾಖಾಧಿಕಾರಿ, ಬೆ.ವಿ.ಕಂ, ಹುಲಿಯೂರುದುರ್ಗ ಶಾಖೆ, ಕುಣಿಗಲ್ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ: 06-04-2018 ರಂದು ಪಿರ್ಯಾದಿಯು ತಮ್ಮ ಇಲಾಖೆಯ ಸಿಬ್ಬಂದಿಯಾದ ಶ್ರೀ ಸೋಮಶೇಖರ್ ಸಿ ಬಿನ್ ಚನ್ನಸ್ವಾಮಿ, ಮಾರ್ಗದಾಳು ಇವರನ್ನು ಎಫ್ 3 ಮಾದಪ್ಪನಹಳ್ಳಿ ಫೀಡರ್ ದುರಸ್ಥಿಯಲ್ಲಿದ್ದ ಕಾರಣ ಸರಿಪಡಿಸಲು ನಿಯೋಜಿಸಿದ್ದು, ಸೋಮಶೇಖರ್ ರವರು ದುರಸ್ಥಿಯನ್ನು ಸರಿಪಡಿಸಿಕೊಂಡು ರಾತ್ರಿ ಸುಮಾರು 07-45 ಗಂಟೆ ಸಮಯದಲ್ಲಿ ದೊಡ್ಡಮಾವತ್ತೂರು ಗ್ರಾಮದ ಬಳಿ  ವಾಪಸ್ ಬರುವಾಗ ತಮ್ಮ ಬೈಕ್ ನಂಬರ್ ಕೆಎ06 ಇ ಕ್ಯೂ 9791 ವಾಹನವು ಎತ್ತಿನ ಗಾಡಿಗೆ ತಗುಲಿ ಅಪಘಾತವಾಗಿದ್ದು ಈ ಅಪಘಾತದ ವಿಚಾರವನ್ನು ದೊಡ್ಡಮಾವತ್ತೂರು ಗ್ರಾಮಸ್ಥರು ಪಿರ್ಯಾದಿಗೆ ದೂರವಾಣಿ ಮುಖೇನ ವಿಚಾರ ತಿಳಿಸಿದ್ದು, ಆಗ ಪಿರ್ಯಾದಿಯು ಇಲಾಖೆಯ ವಾಹನದಲ್ಲಿ ಸ್ಥಳಕ್ಕೆ ಹೋಗಿ ಗಾಯಾಳು ಸೋಮಶೇಖರ್ ರವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರಿಶೀಲಿಸಿ ಸೋಮಶೇಖರ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ನಂತರ ಪಿರ್ಯಾದಿಯು ಮೃತನ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆಂತ ತುರ್ತು ವರದಿಯನ್ನು ನಿವೇದಿಸಿಕೊಂಡಿರುತ್ತೆ .


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 74 guests online
Content View Hits : 302218