lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2018 >
Mo Tu We Th Fr Sa Su
            1
2 3 4 5 7 8
9 10 11 12 13 14 15
16 17 18 19 20 21 22
23 24 25 26 27 28 29
30            
Friday, 06 April 2018
ಅಪರಾಧ ಘಟನೆಗಳು 06-04-18

ಹೊನ್ನವಳ್ಳಿ ಪೊಲೀಸ್ ಠಾಣೆ  ಮೊನಂ, 19/2018 ಕಲಂ, 32.34 ಕೆಇ ಆಕ್ಟ್‌

ದಿನಾಂಕ:05.04.2018 ರಂದು ಸಂಜೆ  7-00 ಗಂಟೆ ಸಮಯದಲ್ಲಿ ಪಿ.ಎಸ್.ಐ  ಠಾಣೆಯಲ್ಲಿರುವಾಗ ನನಗೆ ಬಂದ ಖಚಿತ ಮಾಹಿತಿ ಮೇರೆಗೆ ಪಂಚಾಯ್ತಧಾರರೊಂದಿಗೆ, ಠಾಣಾ ಸರಹದ್ದಿನ ಬಿದರೆಗುಡಿ ಗ್ರಾಮದಲ್ಲಿ ರಮೇಶ್.ಬಿ.ಹೆಚ್.  ಬಿನ್ ಲೇಟ್ ಹುಚ್ಚಪ್ಪ, ಸುಮಾರು 40 ವರ್ಷ, ಬೆಸ್ತರು ಜನಾಂಗ ಕೊಲಿ  ಕೆಲಸ, ಬಿದರೆಗುಡಿ ಗ್ರಾಮ, ಕಸಬಾ ಹೋಬಳಿ ತಿಪಟೂರು ತಾ:ರವರು ಅವರ ಅಂಗಡಿಯ ಮುಂದೆ ಧಾಳಿ ಮಾಡಿ, ಅವರು ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಆತನು ಸಾರ್ವಜನಿಕರಿಗೆ ಮಾರಾಟ ಮಾಡಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಕೆಂಪು ಬಣ್ಣದ ಬ್ಯಾಗ್ ನಲ್ಲಿ   ದಾಸ್ತಾನು ಮಾಡಲಾಗಿದ್ದ 1) .90 ML ನ HAYWARDS CHEERS WHISKY  ಕಂಪನಿಯ 22 Tetra Packet ಗಳು Rs. 28-13  2) 90 ML  Raja WHISKY Packet 24 , Rs. 26- 03 3) 10 ಖಾಲಿ ಪ್ಲಾಸ್ಟಿಕ್‌‌ ಲೋಟಗಳನ್ನು, 4). ಮದ್ಯವನ್ನು ಶೇಖರಣೆ ಮಾಡಿದ್ದ ಒಂದು ಕೆಂಪು ಬಣ್ಣದ ಬ್ಯಾಗ್  ಮತ್ತು 5) ಮದ್ಯವನ್ನು ಮಾರಾಟ ಮಾಡಿ ಸಂಪಾದನೆ ಮಾಡಿದ್ದ 300-00 ರೂ ನಗದು ಹಣ 6) .90 ML ನ HAYWARDS CHEERS WHISKY  ಕಂಪನಿಯ 5 ಖಾಲಿ Tetra Packet ಗಳು 7) 90 ML  Raja WHISKY 5 ಖಾಲಿ ಪ್ಯಾಕೇಟ್ ಗಳ ಸಮೇತ ರಾತ್ರಿ 7-45 ರಿಂದ 8-30 ಗಂಟೆವರೆಗೆ ಪಂಚನಾಮೆಯನ್ನು ಕೈಗೊಂಡು ಅಮಾನತ್ತುಪಡಿಸಿಕೊಂಡಿರುತ್ತೆ. ಮದ್ಯ ತುಂಬಿದ ಟೆಟ್ರಾ ಪಾಕೇಟ್‌‌ಗಳ ಪೈಕಿ ತಲಾ ಒಂದೊಂದನ್ನು ಎಪ್.ಎಸ್.ಎಲ್. ತಜ್ಞರ ಪರೀಕ್ಷೆಗೆ ಕಳುಯಿಸುವ ಸಲುವಾಗಿ ಪ್ರತ್ಯೇಕವಾಗಿ ಒಂದು ಬಿಳಿ ಬಟ್ಟೆಯನ್ನು ಸುತ್ತಿ ಹರಗು ಹಾಕಿ “R” ಎಂಬ ಇಂಗ್ಲೀಷ್‌‌ ಅಕ್ಷರದಿಂದ ಸೀಲು ಮಾಡಿ, ಅವುಗಳ ಮೇಲೆ ಪಂಚಾಯ್ತಧಾರರಾದ ನಮ್ಮಗಳ ಸಹಿಯುಳ್ಳ ಚೀಟಿಯನ್ನು ಅಂಟಿಸಿ ವಶಕ್ಕೆ ಪಡೆದುಕೊಂಡಿರುತ್ತೆ. ಆರೋಪಿಯಾದ ರಮೇಶ್.ಬಿ.ಹೆಚ್.  ನನ್ನು, ಪಂಚನಾಮೆಯನ್ನು,ವಸ್ತುಗಳನ್ನು  ಪಿಎಸ್‌ಐ ರವರು ಠಾಣೆಗೆ ಬಂದು ನನ್ನ ವಶಕ್ಕೆ ನೀಡಿ ಆರೋಪಿ, ರಮೇಶ್.ಬಿ.ಹೆಚ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿ ಸುಚಿಸಿದ ಜ್ಞಾಪನದ ಮೇರೆಗೆ  ರಾತ್ರಿ 8-45 ಗಂಟೆಗೆ ಜ್ಞಾಪನಾವನ್ನು ಪಡೆದು ಠಾಣಾ ಮೊನಂ, 19/2018 ಕಲಂ, 32.34 ಕೆಇ ಆಕ್ಟ್‌ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೇನೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-87/2018 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:05-04-2018 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿಯಾದ ಮಣಿಕಂಠ ಬಿನ್ ಚಿನ್ನರಾಜು, 20 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಪಂಡಿತನಹಳ್ಳಿ ಹ್ಯಾಂಡ್ ಪೋಸ್ಟ್‌, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಹೀಗ್ಗೆ ಸುಮಾರು 30 ವರ್ಷಗಳಿಂದ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಬಂಡೆ ಕೆಲಸವನ್ನು ಮಾಡಿಕೊಂಡಿರುತ್ತೇನೆ. ನನ್ನ ಅಕ್ಕನ ಮಗನಾದ ಸುಮಾರು 10 ವರ್ಷದ ನವೀನ್‌ನನ್ನು ನಾನು ಮೇಲ್ಕಂಡ ನನ್ನ ವಿಳಾಸದಲ್ಲಿ ಸಾಕಿಕೊಂಡಿದ್ದು, ದಿನಾಂಕ: 03-04-2018 ರಂದು ನನ್ನ ಅಕ್ಕನ ಮಗನಾದ ನವೀನ್‌ನು ಪಂಡಿತನಹಳ್ಳಿ ಹ್ಯಾಂಡ್‌ಪೋಸ್ಟ್‌ನಲ್ಲಿ ಅಂಗಡಿಗೆಂದು ಹೋಗಿದ್ದು, ನಂತರ ವಾಪಸ್ ಮನೆಗೆ ಬರಲೆಂದು ಸಾಯಂಕಾಲ ಸುಮಾರು 06-00 ಗಂಟೆ ಸಮಯದಲ್ಲಿ ಶೆಟ್ಟಳ್ಳಪ್ಪನವರ ಅಂಗಡಿಯ ಮುಂಭಾಗದಲ್ಲಿ ರಸ್ತೆಯ ಎಡಭಾಗದಲ್ಲಿ ಬರುತ್ತಿರುವಾಗ್ಗೆ, ಹಿಂದಿನಿಂದ ಅಂದರೆ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ನಿಂದ ಹೊನ್ನುಡಿಕೆ ಕಡೆಗೆ ಹೋಗಲು ಬಂದ ಕೆಎ-53-ಎಂ-4907 ನೇ ಇನ್ನೋವಾ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಎಡಭಾಗದ ಪುಟ್‌ಪಾತ್‌ಗೆ ಬಂದು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ನನ್ನ ಅಕ್ಕನ ಮಗ ನವೀನ್‌ನಿಗೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದ ಪರಿಣಾಮ ಬಲಗಾಲಿಗೆ ಹಾಗೂ ಎಡಕಿವಿಯ ಬಳಿ ಏಟು ಬಿದ್ದು ರಕ್ತಗಾಯವಾಗಿದ್ದು, ಅಪಘಾತಪಡಿಸಿದ ಕಾರಿನ ಚಾಲಕ ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಆಗ ಅಲ್ಲಿಯೇ ದಾಸಪ್ಪ ರವರ ಅಂಗಡಿಯ ಬಳಿ ಕುಳಿತ್ತಿದ್ದ ಈ ಅಪಘಾತವನ್ನು ಕಣ್ಣಾರೆ ಕಂಡ ಕಾಳಿಂಗಯ್ಯನಪಾಳ್ಯ ಗ್ರಾಮದ ವಾಸಿಯಾದ ಲಕ್ಷ್ಮೀನರಸೇಗೌಡ @ ರಮೇಶ್‌ ಬಿನ್ ಲೇ|| ಗಿರಿಯಣ್ಣ ರವರು ನನಗೆ ಪೋನ್ ಮಾಡಿ ಅಫಘಾತದ ವಿಚಾರವನ್ನು ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಫಘಾತವಾಗಿರುವುದು ನಿಜವಾಗಿತ್ತು. ನಂತರ ಸ್ಥಳಕ್ಕೆ ಬಂದ ಯಾವುದೋ ಒಂದು ವಾಹನದಲ್ಲಿ ಗಾಯಗೊಂಡಿದ್ದ ನವೀನ್‌‌ನನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆನು. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-53-ಎಂ-4907 ನೇ ಇನ್ನೋವಾ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ನವೀನ್‌ನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಫಘಾತಪಡಿಸಿದ ಕಾರು ದಾಸಪ್ಪ ರವರ ಅಂಗಡಿಯ ಬಳಿ ನಿಲ್ಲಿಸಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಸಿರುತ್ತೆ.

ಚೇಳೂರು  ಪೊಲೀಸ್  ಠಾಣಾ  ಮೊ.ನಂ 80/2018  ಕಲಂ   302 ಐ.ಪಿ.ಸಿ

ದಿನಾಂಕ 05/04/2018  ರಂದು  ಕೃತ್ಯ  ನಡೆದ ಸ್ಥಳದಲ್ಲಿ  ಪಿರ್ಯಾದಿ  ಲಕ್ಕಮ್ಮನವರು  ನೀಡಿದ  ದೂರನ್ನು  ಪಡೆದು ಸಂಜೆ 4-40  ಗಂಟೆಯಲ್ಲಿ  ಪಡೆದು  ಠಾಣೆಗೆ  5-00  ಗಂಟೆಗೆ  ಹಾಜರಾಗಿ ಪ್ರಕರಣದಾಖಲಿಸಿದ  ಪಿರ್ಯಾದು  ಅಂಶವೇನಂದರೆ,  ನನ್ನ  ತವರು  ಮನೆ  ತುರುವೇಕೆರೆ  ತಾಲ್ಲೋಕ್, ದೆಬ್ಬೆಘಟ್ಟ ಹೋ,  ಗಾಂಧಿ ಗ್ರಾಮವಾಗಿದ್ದು,  ಈಗ್ಗೆ  ಸುಮಾರು  ವರ್ಷಗಳ  ಹಿಂದೆ  ಗುಬ್ಬಿ  ತಾಲ್ಲೋಕ್,  ತ್ಯಾಗಟೂರು  ಗ್ರಾಮದ  ವಾಸಿ  ಲೇ  ಕೆಂಪಯ್ಯನವರ  ಮಗನಾದ  ಕೆಂಪತಿಮ್ಮಯ್ಯ  ಎಂಬುವರನ್ನು  ಮದುವೆಯಾಗಿದ್ದು,  ನಮಗೆ  ಒಟ್ಟು  04 ಜನ  ಮಕ್ಕಳಿದ್ದು,  1 ನೇ  ವಸಂತ  ಕುಮಾರಿ 2ನೇ  ಮಂಜುನಾಥ 3 ನೇ  ಲತಾ 4 ನೇ ರಮೇಶ   ವಸಂತ  ಕುಮಾರಿ ರವರನ್ನು  ತುಮಕೂರಿನ  ಕಂದೂರು  ವಾಸಿ  ರಾಮಕೃಷ್ಣಯ್ಯ ಎಂಬುವರಿಗೆ  ಕೊಟ್ಟು  ಮದುವೆ  ಮಾಡಿರುತ್ತೆ.  ಅವರು  ಕುಂದೂರಿನಲ್ಲಿ ಅವರ ಗಂಡನ ಮನೆಯಲ್ಲಿ   ವಾಸವಾಗಿರುತ್ತಾಳೆ. 2 ನೇ  ಮಂಜುನಾಥನಿಗೆ  ಕೊರಟಗೆರೆ  ತಾಲ್ಲೋಕ್,  ಪಟ್ಟದಯ್ಯನಪಾಳ್ಯ   ಗ್ರಾಮದ ಲೇ ಕ್ಯಾತಯ್ಯನವರ  ಮಗಳಾದ ರಾಜಮ್ಮ @ ತಾಯಿಮುದ್ದಮ್ಮ  ಎಂಬುವರ  ಜೊತೆ  ಮದುವೆ  ಮಾಡಿದ್ದು,ಇವರಿಗೆ  ಈಗ್ಗೆ ಸುಮಾರು ವರ್ಷಗಳ ಹಿಂದೆ  ಸಂಸಾರದ  ವಿಚಾರದಲ್ಲಿ  ಜಗಳವಾಗಿ  ರಾಜಮ್ಮ @ ತಾಯಿಮುದ್ದಮ್ಮ   ರವರು  ಅವರ  ತಾಯಿ  ಮನೆಯಲ್ಲಿವಾಸವಾಗಿರುತ್ತಾಳೆ. ನಾನು  ಮತ್ತು  ನನ್ನ  ಮಕ್ಕಳು  ಎಲ್ಲರೂ   ಜೊತೆಯಲ್ಲಿ   ಒಂದೇ  ಮನೆಯಲ್ಲಿ  ವಾಸವಾಗಿರುತ್ತೇ ವೆ.   ನನ್ನ  3 ನೇ  ಮಗಳು  ಲತಾಳು  ಈಗ್ಗೆ  10  ವರ್ಷಗಳ  ಹಿಂದೆ  ಮೃತಪಟ್ಟಿರುತ್ತಾಳೆ. ಈಗ್ಗೆ  ಸುಮಾರು 08 ವರ್ಷಗಳ  ಹಿಂದೆ  ನನ್ನ  ಗಂಡ   ಮನೆಯಲ್ಲಿ  ನನ್ನ ಜೊತೆ  ಮತ್ತು  ನನ್ನ  ಗಂಡು  ಮಕ್ಕಳ  ಜೊತೆಯಲ್ಲಿ ನಾನು  ಸಂಪಾದನೆ  ಮಾಡಿರುವ  ಜಮೀನು  ನನ್ನದು  ಎಂದು ಜಮೀನಿನ  ವಿಚಾರದಲ್ಲಿ  ಜಗಳ   ಮಾಡಿಕೊಂಡು  ನಮ್ಮನ್ನು  ಮನೆಯಿಂದ  ಹೊರಗೆ  ಹಾಕಿದ್ದು,  ಅಂದಿನಿಂದ  ನಾನು  ಮತ್ತು  ನನ್ನ ಗಂಡು ಮಕ್ಕಳು  ತ್ಯಾಗಟೂರು  ಗ್ರಾಮದಲ್ಲಿ  ಬಾಡಿಗೆ  ಮನೆ  ಮಾಡಿಕೊಂಡು  ವಾಸವಾಗಿರುತ್ತೇವೆ. ನನ್ನ  ಗಂಡ  ನಮ್ಮ  ಬಾಬ್ತು  ಜಮೀನಿನಲ್ಲಿ  ಇರುವ  ಮನೆಯಲ್ಲಿ  ಒಬ್ಬರೇ  ವಾಸವಾಗಿರುತ್ತಾರೆ. ಆಗಾಗ್ಗೆ  ನನ್ನ  ಗಂಡ  ಕೆಂಪತಿಮ್ಮಯ್ಯನಿಗೆ  ಮತ್ತು  ನನ್ನ ಮಕ್ಕಳಿಗೆ  ಬಾಯಿ  ಮಾತಿನ  ಜಗಳವಾಗುತ್ತಿದ್ದು,  ಈಗ್ಗೆ  ಸುಮಾರು 01 ವರ್ಷದ  ಹಿಂದೆ  ನನ್ನ  ಗಂಡನಿಗೆ  ಮತ್ತು  ನನ್ನ  ಮಕ್ಕಳಿಗೆ  ಜಮೀನಿನ  ವಿಚಾರದಲ್ಲಿ  ಜಗಳವಾಗಿ  ನನ್ನ  ಗಂಡ  ಕೆಂಪತಿಮ್ಮಯ್ಯ ನವರು  ಚೇಳೂರು  ಪೊಲೀಸ್  ಠಾಣೆಗೆ  ನನ್ನ  ಮೇಲೆ  ಹಾಗೂ  ನನ್ನ  ಮಕ್ಕಳಾದ  ಮಂಜುನಾಥ  ಮತ್ತು  ರಮೇಶ  ರವರ  ಮೇಲೆ  ಕೇಸುಕೊಟ್ಟಿದ್ದರು.  ಈ  ಕೇಸು  ಇನ್ನೂ  ನ್ಯಾಯಾಲಯದಲ್ಲಿ  ವಿಚಾರಣೆಯಲ್ಲಿರುತ್ತೆ.  ಈ  ಕೇಸು  ದಾಖಲಾದಾಗಿನಿಂದ  ನನ್ನ  ಚಿಕ್ಕ  ಮಗ  ರಮೇಶ  ನಿಮ್ಮ ಸಹವಾಸವೇ  ಬೇಡ  ಎಂದು ತುರುವೇಕೆರೆಯಲ್ಲಿ   ನಮ್ಮ ಸಂಬಂಧಿಕರ  ಮನೆಯಲ್ಲಿ  ಕೂಲಿ  ಕೆಲಸ ಮಾಡಿಕೊಂಡು  ಅಲ್ಲಿಯೇ  ವಾಸವಾಗಿರುತ್ತಾನೆ.   ನನ್ನ  ಮಗ ಮಂಜುನಾಥ  ಜಮೀನಿನ ಬಳಿ ಹೋದಾಗ  ಆಗಾಗ್ಗೆ  ನನ್ನ  ಮಗ  ಮಂಜುನಾಥನಿಗೆ  ಮತ್ತು  ನನ್ನ  ಗಂಡ ಕೆಂಪತಿಮ್ಮಯ್ಯನಿಗೆ  ಜಮೀನಿನ  ವಿಚಾರದಲ್ಲಿ  ಜಗಳವಾಗುತ್ತಿದ್ದು,  ಆಗ ಇಬ್ಬರಿಗೂ  ಸಮಾಧಾನ  ಮಾಡುತ್ತಿದ್ದೆನು.   ನನ್ನ  ಗಂಡ   ಈಗ್ಗೆ  20  ದಿನಗಳ  ಹಿಂದೆ  ನನ್ನ  ದೊಡ್ಡ  ಮಗನಾದ  ಮಂಜುನಾಥನ  ಹೆಂಡತಿ  ರಾಜಮ್ಮ   @  ತಾಯಿಮುದ್ದಮ್ಮ  ಕೊರಟಗೆರೆ ತಾಲ್ಲೋಕ್,  ಪಟ್ಟದಯ್ಯನಪಾಳ್ಯ  ಗ್ರಾಮಕ್ಕೆ  ಹೋಗಿದ್ದು,   ದಿನಾಂಕ; 05/04/2018  ರಂದು  ಮಧ್ಯಾಹ್ನ 3-30 ಗಂಟೆ  ಸಮಯದಲ್ಲಿ  ನಾನು  ನಮ್ಮ  ತೋಟದಲ್ಲಿ  ತೆಂಗಿನ  ಗರಿ ಕಡ್ಡಿಯನ್ನು  ಸಿಗಿಯುತ್ತಿದ್ದು,  ನನ್ನ  ಮಗ   ನಮ್ಮ   ತೋಟದಲ್ಲಿ ಇರುವ  ಬೋರ್ ವೆಲ್  ಹತ್ತಿರ   ಇದ್ದನು.  ಆಗ ನನ್ನ  ಗಂಡ   ಕೆಂಪತಿಮ್ಮಯ್ಯರವರು  ಅಲ್ಲಿಗೆ  ಬಂದು  ನನ್ನ  ಮಗ  ಮಂಜುನಾಥನನ್ನು ಈ  ಜಮೀನು  ನನ್ನದು   ನೀನು ಏಕೆ  ಇಲ್ಲಿ ಓಡಾಡುತ್ತಿದ್ದೀಯಾ  ಎಂದು  ಕೇಳಿದಾಗ ನನ್ನ  ಮಗ  ಮಂಜುನಾಥ ನೀನು  ನನ್ನನ್ನು  ಬಿಟ್ಟು  ಹೋಗಿರುವ   ನನ್ನ  ಹೆಂಡತಿಯ  ಮನೆಗೆ  ಏಕೆ   ಹೋದೆ  ನೀನು  ನನ್ನ  ಹೆಂಡತಿಯ ಹತ್ತಿರ   ಅನೈತಿಕ  ಸಂಬಂಧ   ಇಟ್ಟುಕೊಂಡಿರುತೀಯಾ    ನನಗೆ  ಬೇಕಿಲ್ಲದ  ನನ್ನ  ಹೆಂಡತಿ  ನನಗೆ  ಬೇಕೆ  ಈ  ಜಮೀನು  ಸಹ  ನಿನಗೇನೇ  ಬೇಕು  ಎಂದು  ಜಗಳ  ತೆಗೆದು  ನಿನ್ನನ್ನು ಈ  ಭೂಮಿ  ಮೇಲೆ  ಇಲ್ಲದಂತೆ  ಮಾಡುತ್ತೇನೆ  ಎಂದು ಅಲ್ಲಿಯೇ  ಬಿದ್ದಿದ್ದ  ಅಡಿಕೆ  ದೆಬ್ಬೆಯನ್ನು  ತೆಗೆದುಕೊಂಡು  ನನ್ನ ಗಂಡನ  ಮೈಕೈಗೆ  ಹೊಡೆದನು  ಗ  ನನ್ನ  ಗಂಡ  ಕೆಳಗೆ  ಬಿದ್ದನು.  ಆಗ  ನನ್ನ  ಮಗ  ಕರೆಂಟ್  ರೂಂ  ಬಳಿ  ಹೋಗಿ   ಕರೆಂಟ್  ರೂಂನಲ್ಲಿ  ಇದ್ದ  ಮಚ್ಚನ್ನು  ತೆಗೆದುಕೊಂಡು  ಬಂದು  ಮಚ್ಚಿನಿಂದ  ನನ್ನ  ಗಂಡನ  ಬಲ ತಲೆಗೆ  ಮತ್ತು  ಎಡ  ಕೈಗೆ  ಹೊಡೆದನು.  ಆಗ  ನನ್ನ  ಗಂಡ  ಕಿರುಚಿಕೊಂಡಾಗ  ಓಡಿ  ಹೋಗಿ  ನೊಡಲಾಗಿ  ನನ್ನ  ಗಂಡ  ರಕ್ತದ  ಮಡುಗಿನಲ್ಲಿ  ಅಂಗಾತನಾಗಿ  ಬಿದಿದ್ದು,  ನನ್ನ  ಗಂಡ  ಕಿರುಚಿಕೊಂಡ  ಶಬ್ದಕೇಳಿ   ನಮ್ಮ ಪಕ್ಕದ  ತೋಟದ   ಗಂಗಯ್ಯನವರ  ಮಗನಾದ  ಕಲ್ಲೇಶಯ್ಯ ಮತ್ತು  ಮಾಂತೇಶ  ಬಿನ್  ರಾಮಯ್ಯ   ಕುರುಬರು  ಎಂ. ಎನ್  ಕೋಟೆ  ರವರು  ಸಹ  ಬಂದರು ಅಷ್ಟರಲ್ಲಿ  ನನ್ನ  ಗಂಡ  ಸ್ಥಳದಲ್ಲಿಯೇ  ಮೃತಪಟ್ಟಿದ್ದರು.  ನನ್ನ  ಮಗ ಮಂಜುನಾಥ ಮಚ್ಚನ್ನು  ತೆಗೆದುಕೊಂಡು  ನಮ್ಮ  ಗ್ರಾಮದ  ಕಡೆ  ಹೋದನು. ಇವರ  ಸಾವಿಗೆ  ನನ್ನ  ಮಗ ಮಂಜುನಾಥನೇ  ಕಾರಣನಾಗಿರುತ್ತಾನೆ.  ಆದ್ದರಿಂದ  ನನ್ನ  ಮಗ ಮಂಜುನಾಥನ  ಮೇಲೆ  ಕಾನೂನು  ರೀತ್ಯ ಕ್ರಮ  ಜರುಗಿಸಲು  ಕೋರಿ  ಇತ್ಯಾದಿಯಾದ  ಪಿರ್ಯಾದು  ಅಂಶ.

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 42/2018 ಕಲಂ: 379,384 IPC

ದಿನಾಂಕ:05/04/2018 ರಂದು ಸಂಜೆ 6-00 ಗಂಟೆಗೆ ಠಾಣಾ ಹೆಚ್.ಸಿ-40 ಶ್ರೀನಿವಾಸ್ ರವರು ನ್ಯಾಯಾಲಯದ ನಿರ್ಧೇಶಿತ ಪಿರ್ಯಾದನ್ನು ತಂದು ಹಾಜರುಪಡಿಸಿದ್ದು, ಸದರಿ ದೂರಿನ ಅಂಶವೇನೆಂದರೆ. ಪಿರ್ಯಾದಿ ಎನ್.ಆರ್ ಪ್ರಸನ್ನ ಕುಮಾರ್ ಮಾಜಿ ಕಾರ್ಯದರ್ಶಿಗಳು, ಸುಜ್ಞಾನ ಶಿಕ್ಷಣ ಸಂಸ್ಥೆ ಶಂಕರನಗರ ತಿಪಟೂರು ರವರು ಮತ್ತು ಆರೋಪಿತರೆನ್ನಲಾದ 1,ಶೋಭಾ ಪ್ರಸನ್ನಕುಮಾರ್ 2 ಎಲ್.ಎ.ಆರ್.ಪ್ರಸನ್ನಕುಮಾರ್ ಮತ್ತು 3 ಸುರೇಶ್ ಆರ್,ಎನ್ ರವರುಗಳು ಸದರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿದ್ದು, ಸದರಿ ಶಿಕ್ಷಣ ಸಂಸ್ಥೆಗೆ ಸಂಬಂದಪಟ್ಟ ಪ್ರಮುಖ ಹಾಗೂ ಬೆಲೆ ಬಾಳುವ ದಾಖಲೆಗಳಾದ ಕ್ಯಾಷ್ ಬುಕ್ಸ್, ಅಕೌಂಟ್ಸ್ ಬುಕ್ಸ್ ಹಾಗೂ ಫೈನಾಸ್ಸಿಯಲ್ ಸ್ಟೇಟ್ ಮೆಂಟ್ಸ್, ರಿಜಿಸ್ಟರ್ ಆಫ್ ಬೋರ್ಡ್ ಆಫ್ ಡೈರೆಕ್ಟರ್ ಮತ್ತು ಎ.ಜಿ.ಎಂ ರೆಜುಲೇಷನ್ಸ್ ಮತ್ತು ಸುಜ್ಞಾನ ಇಂಗ್ಲೀಷ್ ಪ್ರೈಮರಿ ಸ್ಕೂಲ್ ನ 32 ಬ್ಲಾಂಕ್  ಚೆಕ್ಕುಗಳನ್ನು ಸಂಸ್ಥೆಯ ವ್ಯವಹಾರಕ್ಕೆ ಸಹಿ ಮಾಡಿ ಪಿರ್ಯಾದಿ ಇಟ್ಟುಕೊಂಡಿದ್ದವುಗಳನ್ನು 2014 ನೇ ಸಾಲಿನಲ್ಲಿ ಆರೋಪಿತರುಗಳೆನ್ನಲಾದ 1,2 ಮತ್ತು 3 ರವರುಗಳು ಸಂಸ್ಥೆಯ ಕಛೇರಿಯಲ್ಲಿದ್ದ ಪಿರ್ಯಾದಿಯಿಂದ ಬಲವಂತದಿಂದ ಪಡೆದು ಕಳ್ಳತನ ಮಾಡಿಕೊಂಡು ಹೋಗಿ ನ್ಯಾಯಾಲಯದಲ್ಲಿ ಕೇಸುಗಳನ್ನು ಹಾಕಿರುತ್ತಾರೆಂದು ಇತ್ಯಾದಿಯಾಗಿ ಸಲ್ಲಿಸಿಕೊಂಡಿರುವ  ದೂರಿನ ಅಂಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 50/2018 ಕಲಂ 279, 304(ಎ ) ಐಪಿಸಿ  187 ಐ.ಎಂ.ವಿ ಆಕ್ಟ್

ದಿ:-05/04/2018 ರಂದು ಮದ್ಯಾಹ್ನ 12-15 ಗಂಟೆಗೆ ಫಿರ್ಯಾದಿ ರಂಗಪ್ಪ ಬಿ ಎಲ್‌ ಬಿನ್‌‌‌ ಲಿಂಗಪ್ಪ , ಬೆಲ್ಲದಮಡಗು ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿ:04/04/2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಬೆಲ್ಲದಮಡಗು ಗ್ರಾಮದ ರಾಮಕೃಷ್ಣಪ್ಪ ಬಿನ್ ರಾಮಯ್ಯ ರವರ ಬಾಬ್ತು ಕೆಎ-35-ಟಿ-6893 ನೇ ನಂಬರಿನ ಟ್ರಾಕ್ಟರ್‌‌‌  ಬೆಲ್ಲದಮಡಗು ಗ್ರಾಮದಿಂದ ಗೇಟ್‌‌ ಕಡೆ ಹೋಗುವಾಗ  ನನ್ನ ಮಗ ಮಹೇಶ್‌ ಕುಮಾರ್  ರಸ್ತೆಯಲ್ಲಿ ಹೋಗುತ್ತಿದ್ದಾಗ, ಟ್ರಾಕ್ಟರ್‌‌ ಪಲ್ಟಿಯಾಗಿ ಅಪಘಾತ ಸಂಭವಿಸಿರುತ್ತೆ. ತಕ್ಷಣ ಅಲ್ಲಿದ್ದ ಶ್ರೀನಿವಾಸ ಎಂಬುವರು ಮಹೇಶ್‌ಕುಮಾರ್ ನನ್ನು ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.  ಅಲ್ಲಿ ವೈದ್ಯರು ಮಹೇಶ್‌ ಕುಮಾರನ ಎಡಬಾಗದ ಎದೆಗೆ ಮತ್ತು ಬೆನ್ನಿಗೆ ಪೆಟ್ಟು ಬಿದ್ದಿದೆ ಎಂದು ಹೇಳಿದ್ದಾರೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ  ತುಮಕೂರಿನ  ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಮತ್ತೆ  ತುಮಕೂರಿನ ವೈದ್ಯರ ಸಲಹೆಯಂತೆ  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರು. ನಾವು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಮಹೇಶ್‌ ಕುಮಾರನನ್ನು ಕರೆದುಕೊಂಡು ಹೋದೆವು. ಆಸ್ಪತ್ರೆಯಲ್ಲಿ  ವೈದ್ಯರು ಪರೀಕ್ಷಿಸಿ ಸದರಿ ವ್ಯಕ್ತಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ. ಆಗ ಸಮಯ ರಾತ್ರಿ 2-30 ಗಂಟೆ ಆಗಿರುತ್ತೆ. ಮೃತನ ಶವ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ. ನಾವು ಮೃತನ ಶವ ಸಂಸ್ಕಾರ ನಡೆಸಲು ತಾವುಗಳು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇವೆ. ಅಪಘಾತ ಸಂಭವಿಸಿದ ಟ್ರಾಕ್ಟರ್‌‌ ನ ಚಾಲಕ ಯಾರೆಂದು ಗೊತ್ತಿರುವುದಿಲ್ಲ ಎಂತಾ ನೀಡಿದ ಪಿರ್ಯಾದು ಅಂಶ

 

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 41/2018 ಕಲಂ: 323,504,506,448,363 R/W 34 IPC and 3(1) (r), 3(1) (s), 3(2)(Va) The SC& ST(Prevention of Atracities) Amendment Act-2015

ದಿನಾಂಕ:05/04/2018 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಮಹೇಶ್ ಬಿನ್ ಮಂಜುನಾಥ್, 26 ವರ್ಷ, ಗೋವಿನಪುರ, ತಿಪಟೂರು ಟೌನ್ ರವರು ಸ್ನೇಹಿತ ರಘುರವರಿಂದ ಠಾಣೆಗೆ ಕಳುಹಿಸಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ತಿಪಟೂರು ನಗರದ ಸತ್ಯಂ ಟೆಕ್ಸ್ ಟೈಲ್ಸ್ ಮಲೀಕರಾದ ರಘುನಾಥ್ ಸಿಂಗ್ ರವರ ಮಗಳಾದ ಶೀಥಲ್ ಪುರೋಹಿತ್ ನನ್ನು 2 ವರ್ಷಗಳಿಂದ ಪ್ರೀತಿಸುತ್ತಿದ್ದು, ನಂತರ ಇಬ್ಬರ ಒಪ್ಪಿಗೆಯಂತೆ ದಿನಾಂಕ:09/03/2018 ರಂದು ಬೆಂಗಳೂರು ಲಗ್ಗೆರೆಯಲ್ಲಿನ ನೊಂದಾಣಾಧಿಕಾರಿ ಕಛೇರಿಯಲ್ಲಿ ನಮ್ಮ ವಿವಾಹವು ನಡೆದಿರುತ್ತೆ. ನಂತರ ಅವರ ತಂದೆ ತಿಪಟೂರು ನಗರ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲು ಮಾಡಿದ್ದು ತಿಳಿದು ನಾನು ಮತ್ತು ನನ್ನ ಹೆಂಡತಿ ಠಾಣೆಗೆ ಹೋಗಿ ನಾವಿಬ್ಬರು ಪರಸ್ಪರ ಒಪ್ಪಿ ಪ್ರೀತಿಸಿ ಮದುವೆಯಾಗಿರುವುದಾಗಿ ಹೇಳಿಕೆಯನ್ನು ನೀಡಿರುತ್ತೇವೆ. ನಂತರ ತಿಪಟೂರು ನಗರದ ಗೋವಿನಪುರದಲ್ಲಿರುವ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದೆವು. ದಿನಾಂಕ: 02/04/2018 ರಂದು ರಾತ್ರಿ ಸುಮಾರು 7-00 ಗಂಟೆಯಲ್ಲಿ ನಾವು ಮನೆಯಲ್ಲಿ ಇರುವಾಗ ನಗರಸಭೆ ಸದಸ್ಯರಾದ ಪ್ರಸನ್ನಕುಮಾರ್, ನನ್ನ ಹೆಂಡತಿಯ ಚಿಕ್ಕಪ್ಪ ಹಾಗೂ ಅವರ ಅಣ್ಣ ಸುರೇಂದ್ರ ಈ ಮೂವರು ಏಕಾಏಕಿ ನಮ್ಮ ಮನೆಗೆ ನುಗ್ಗಿ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಹೊಡೆದು, ಚಾಕುವನ್ನು ತೋರಿಸಿ ಬೆದರಿಸಿ, ಏನೋ ಒಲೆಯ ಸೂಳೆ ಮಗನೇ, ನಿನಗೆ ಎಷ್ಟೋ ಧೈರ್ಯ ನನ್ನ ಮಗಳನ್ನು ಮದುವೆಯಾಗುವುದಕ್ಕೆ ಕೀಲು ಜಾತಿಯವನೆ ಎಂದು ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದಿದ್ದು, ನಂತರ ಪ್ರಸನ್ನಕುಮಾರ್ ರವರು ನಿನ್ನನ್ನು ಕೊಲೆ ಮಾಡಿಬಿಡುತ್ತೇನೆ ಒಲೆಯಮಾದಿಗ ನನ್ನಮಗನೆ ಎಂದು ಬೈಯುತ್ತಾ ಹೊಡೆದು ನಾಳೆ ಬೆಳಿಗ್ಗೆ 10-00 ಗಂಟೆಯೊಳಗೆ ಶೀಥಲ್ ನನ್ನು ನೀನೇ ವಾಪಸ್ ಅವರ ಮನೆಗೆ ಕಳುಹಿಸಿಕೊಡಬೇಕು. ಎಂದು ಬೆದರಿಕೆಯನ್ನು ಹಾಕಿ ಹೋದರು. ನಂತರ ನಾವು ಭಯಬೀತಗೊಂಡು ದಿನಾಂಕ: 03/04/2018 ರಂದು ಬೆಳಿಗ್ಗೆ ಎದ್ದು ಮನೆಯಲ್ಲಿ ಈ ವಿಷಯದ ಬಗ್ಗೆ ಯೋಚಿಸುತ್ತಿರುವಾಗ ಸುಮಾರು 10-00 ಗಂಟೆಯ ಸಮಯದಲ್ಲಿ ಪುನಃ ಪ್ರಸನ್ನ ಕುಮಾರ್ ಮತ್ತು ಅವಳ ಅಣ್ಣ ಸುರೇಂದ್ರ ಇಬ್ಬರು ಏಕಾಏಕಿ ಮನೆಗೆ ನುಗ್ಗಿ ನನ್ನ ಹೆಂಡತಿಯ ಮುಂದೆ ಹೊಡೆದು ನಮ್ಮ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿದರೆ ನಿಮ್ಮ ಮೇಲೆ ಕೇಸು ದಾಖಲಿಸಿ ಜೈಲಿಗೆ  ಹಾಕಿಸುವುದಾಗಿ ಬೆದರಿಕೆಯನ್ನು ಹಾಕಿರುತ್ತಾರೆ. ನಂತರ ಬಲವಂತವಾಗಿ ನನ್ನ ಹೆಂಡತಿ ಶೀಥಲ್ ನನ್ನು ಅಪಹರಿಸಿಕೊಂಡು ಹೋದರು. ನಾನು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೇಲ್ಕಂಡವರ ಮೇಲೆ  ಕಾನೂನು ರೀತಿಯ ಕ್ರಮ ಕೈಗೊಂಡು ನನ್ನ ಹೆಂಡತಿಯನ್ನು ನನ್ನ ಜೊತೆ ಕಳುಹಿಸಿಕೊಡಬೇಕೆಂದು ಹಾಗೂ ನನಗೆ ರಕ್ಷಣೆಯನ್ನು ನೀಡಬೇಕೆಂದು ಕೋರಿರುತ್ತೇನೆ. ಮತ್ತು ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಈ ದಿನ ನನ್ನ ಸ್ನೇಹಿತ ರಘು ಕಡೆಯಿಂದ ದೂರನ್ನು ಕೊಟ್ಟು ಕಳುಹಿಸಿರುತ್ತೇನೆ. ಎಂತಾ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 74 guests online
Content View Hits : 302221