ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.38/2018, ಕಲಂ:279,337 304(A) IPC
ದಿನಾಂಕ:04/04/2018 ರಂದು ರಾತ್ರಿ 09:30 ಗಂಟೆಗೆ ಪಿರ್ಯಾದಿ ಶಿವಕುಮಾರ್ ಬಿನ್ ಚಿಕ್ಕಮಲ್ಲಪ್ಪ, 29 ವರ್ಷ, ಎ.ಕೆ. ಜನಾಂಗ, ಡ್ರೈವರ್ ಕೆಲಸ, ಐ.ಡಿ.ಹಳ್ಳಿ ಗ್ರಾಮ, ಮಧುಗಿರಿ ತಾಲ್ಲೋಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ಅಕ್ಕಳಾದ ಸಿದ್ದಲಿಂಗಮ್ಮ ರವರನ್ನು ಸುದ್ದೇಕುಂಟೆ ಗ್ರಾಮದ ಅಂಜಪ್ಪರವರಿಗೆ ಮಧುವೆ ಮಾಡಿಕೊಟ್ಟಿದ್ದು ಈ ದಿನ ಅಂದರೆ ದಿನಾಂಕ:-04/04/2018 ರಂದು ಮದ್ಯಾಹ್ನ ಸುಮಾರು 02:00 ಗಂಟೆ ಸಮಯದಲ್ಲಿ ಸುದ್ದೇಕುಂಟೆ ಗ್ರಾಮದಿಂದ ಐ.ಡಿ.ಹಳ್ಳಿ ಗ್ರಾಮಕ್ಕೆ ಸಂದೇಶಬಾಬು ಬಿನ್ ಕೊಂಡಪ್ಪ 22 ವರ್ಷ, ರವರೊಂದಿಗೆ ಕೆಎ-06-ಸಿ-6970 ನೇ ಆಟೋದಲ್ಲಿ ಪ್ರಯಾಣಿಸುತ್ತಿರುವಾಗ್ಗೆ ಜನಕಲೋಟಿ ಗ್ರಾಮದ ಗೇಟ್ ಹತ್ತಿರ ಕ್ರಾಸ್ನಲ್ಲಿ ಸದರಿ ಆಟೋವನ್ನು ಅದರ ಚಾಲಕ ಅತಿ ಜೋರಾಗಿ ಮತ್ತು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿ ಆಟೋವನ್ನು ಪಲ್ಟಿ ಹೊಡೆಸಿ ಅಪಘಾತವುಂಟು ಮಾಡಿದ್ದರಿಂದ ಆಟೋದಲ್ಲಿದ್ದ ನನ್ನ ಅಕ್ಕ ಸ್ಥಳದಲ್ಲೆ ಮೃತಪಟ್ಟಿದ್ದು ಆಕೆಯ ಜೊತೆ ಪ್ರಯಾಣಿಸುತ್ತಿದ್ದ ಸಂದೇಶಬಾಬುವಿನ ಎಡಗೈ ಮುರಿತಗೊಂಡಿದ್ದನ್ನು ಸಂದೇಶಬಾಬು ನನಗೆ ಪೋನ್ ಮೂಲಕ ತಿಳಿಸಿದ್ದು ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ಗಾಯಗೊಂಡಿದ್ದ ಸಂದೇಶಬಾಬು ರವರನ್ನು ಆಸ್ಪತ್ರೆಗೆ ಸೇರಿಸಿ ನನ್ನ ಅಕ್ಕಳ ಶವವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿ ನಂತರ ಠಾಣೆಗೆ ಬಂದು ಸದರಿ ಅಪಘಾತಕ್ಕೆ ಕಾರಣನಾದ ಆಟೋ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದುವನ್ನು ಪಡೆದುಕೊಂಡು ಠಾಣಾ ಪ್ರಕರಣ ದಾಖಲಿಸಿರುತ್ತೆ.
ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 47-2018 ಕಲಂ 87 ಕೆ ಪಿ ಆಕ್ಟ್
ದಿ:03/04/2018 ರಂದು ರಾತ್ರಿ 8-30 ಗಂಟೆಗೆ ಎಲ್ ಅಂಜಪ್ಪ, ಪಿ ಐ ರವರು ನೀಡಿದ ವರದಿ ಅಂಶವೇನೆಂದರೆ, ದಿನಾಂಕ:03/04/2018 ರಂದು ಸಂಜೆ 7-00 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ಠಾಣಾ ಸರಹದ್ದು ಬಳೆಹಳ್ಳಿ ಸಮೀಪ ರಸ್ತೆ ಬದಿಯಲ್ಲಿರುವ ಗಣೇಶ ದೇವಸ್ಥಾನದ ಸಮೀಪ ಜನರು ಗುಂಪುಸೇರಿಕೊಂಡು ಇಸ್ಟೀಟ್ ಜೂಜಾಟ ಆಡುತ್ತಿದ್ದಾರೆಂದು ಠಾಣಾ ದೂರವಾಣಿಗೆ ಬಂದ ಮಾಹಿತಿ ಮೇರೆಗೆ ಪಂಚರು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್ ಸಿ 152 ಈಶ್ವರಯ್ಯ, ಪಿಸಿ 161 ರೂಪ್ಲಾನಾಯ್ಕ 286 ಶ್ರೀನಿವಾಸ ಕುಮಾರ್ ಪಿಸಿ 949 ರಂಗನಾಥ 1056 ಸಿಮನ್ ಬಿ ರವರೊಂದಿಗೆ ಇಲಾಖಾ ಜೀಪಿನಲ್ಲಿ 7-15 ಕ್ಕೆ ಠಾಣೆಯನ್ನು ಬಿಟ್ಟು 7-30 ಕ್ಕೆ ಬಳೆಹಳ್ಳಿ ಸಮೀಪ ಹೋಗಿ ಜೀಪನ್ನು ಸ್ವಲ್ಪ ದೂರದಲ್ಲಿ ಮರೆಯಾಗಿ ನಿಲ್ಲಿಸಿ ಜೀಪಿನಿಂದಿಳಿದು ಗಣೇಶ ದೇವಸ್ಥಾನದ ಕಡೆಗೆ ನೆಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಗಣೇಶ ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಬೀದಿ ದೀಪದ ಬೆಳಕಿನಲ್ಲಿ 4-5 ಜನರು ಗುಂಡಾಕಾರವಾಗಿ ಕುಳಿತುಕೊಂಡು ಒಳಗೆ–ಹೊರಗೆ ಎಂದು ಕೂಗಾಡುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಟೀಟ್ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯೊಂದಿಗೆ ಒಮ್ಮೆಗೆ ದಾಳಿ ಮಾಡಿದಾಗ 2 ಜನ ಸಿಕ್ಕಿದ್ದು, 3 ಜನ ಸ್ಥಳದಿಂದ ಓಡಿ ಹೋದರು ಸ್ಥಳದಲ್ಲಿ ಸಿಕ್ಕಿದ ಇಬ್ಬರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1] ವೇಣುಗೋಪಾಲ ಬಿನ್ ಚಿಕ್ಕಣ್ಣ 45 ವರ್ಷ ವಕ್ಕಲಿಗರು ಜಿರಾಯ್ತಿ ಜಕ್ಕೇನಹಳ್ಳಿ ಮಧುಗಿರಿ ತಾ. 2] ಚೌಡಪ್ಪ ಬಿನ್ ರಾಮಣ್ಣ 27 ವರ್ಷ ವಕ್ಕಲಿಗರು ಜಿರಾಯ್ತಿ ಬಳೆಹಳ್ಳಿ ಮಧುಗಿರಿ ತಾ. ಎಂತಾ ತಿಳಿಸಿದರು ಓಡಿಹೋದವರ ಹೆಸರು ವಿಳಾಸ ಕೇಳಲಾಗಿ 3] ಗಿರೀಶ ಜಕ್ಕೇನಹಳ್ಳಿ ಮಧುಗಿರಿ ತಾ. 4] ಜಗದೀಶ ಜಕ್ಕೇನಹಳ್ಳಿ ಮಧುಗಿರಿ ತಾ. 5] ನಟರಾಜ ಜಕ್ಕೇನಹಳ್ಳಿ ಮಧುಗಿರಿ ತಾ. ಎಂತಾ ತಿಳಿಸಿದರು ಜೂಜಾಟಕ್ಕೆ ಪಣವಾಗಿ ಕಟ್ಟಿ ಅಖಾಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದದ್ದ ಹಣವನ್ನು ಸಂಗ್ರಹಿಸಿ ಎಣಿಸಲಾಗಿ 1] 6050/- ರೂ ನಗದು ಹಣ 2] 52 ಇಸ್ಟೀಟ್ ಎಲೆಗಳು 3] ಒಂದು ಹಳೆಯ ನ್ಯೂಸ್ ಪೇಪರ್ ಇದ್ದು ಇವುಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಕರೆ ಬಂದಾಗ ಠಾಣೆಗೆ ಬಂದು ಹಾಜರಾಗಿ ತನಿಖೆಗೆ ಸಹಕರಿಸುವಂತೆ ತಿಳಿಸಿ ಅಲ್ಲಿಯೇ ಬಿಟ್ಟು ಪಂಚನಾಮೆ ಮತ್ತು ಮಾಲಿನೊಂದಿಗೆ ಠಾಣೆಗೆ ರಾತ್ರಿ 08-30 ಗಂಟೆಗೆ ಬಂದು, ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿ ನೀಡಿದ ವರದಿ ಮೇರೆಗೆ ಠಾಣಾ ಎನ್.ಸಿ.ಆರ್ 44/2018 ರಲ್ಲಿ ದಾಖಲಿಸಿ ನಂತರ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.
ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 48-2018 ಕಲಂ 279-337 ಐಪಿಸಿ ರೆ/ವಿ 187 ಐ ಎಂ ವಿ ಆಕ್ಟ್
ದಿ:04/04/2018 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಫಿರ್ಯಾದಿ ಡಿ ಎಸ್ ಸಿದ್ದಪ್ಪ ಬಿನ್ ಲೇಟ್ ಡಿ ಸಿದ್ದಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿ:28/02/2018 ರಂದು ರಾತ್ರಿ ನಾನು ತೋಟಕ್ಕೆ ನೀರು ಕಟ್ಟಿ ವಾಪಾಸ್ ಮನೆಗೆ ಬರಲು ರಸ್ತೆಗೆ ಬಂದಾಗ ನನ್ನ ಅಣ್ಣ ರಾಮಣ್ಣ ಡಿ ಎಸ್ ರವರು ಮೂತ್ರ ವಿಸರ್ಜನೆ ಮಾಡಲು ಮನೆಯಿಂದ ರಸ್ತೆ ದಾಟಿ ನಮ್ಮ ಬಾಬ್ತು ತಿಪ್ಪೆ ಬಳಿ ಮೂತ್ರ ವಿಸರ್ಜನೆ ಮಾಡಿ ವಾಪಾಸ್ ಮನೆಗೆ ಹೋಗಲು ರಾತ್ರಿ 9-30 ಗಂಟೆ ಸಮಯದಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದಾಗ ಮಧುಗಿರಿ ಕಡೆಯಿಂದ ಒಂದು ದ್ವಿಚಕ್ರ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ಅಣ್ಣನಿಗೆ ಡಿಕ್ಕಿ ಹೊಡೆಸಿದ್ದರಿಂದ ನನ್ನ ಅಣ್ಣ ಕೆಳಕ್ಕೆ ಬಿದ್ದು , ಕಿರುಚಿಕೊಂಡರು. ಆಗ ನಾನು ಮತ್ತು ನಮ್ಮ ಗ್ರಾಮದ ಜಗನ್ನಾಥ ಇಬ್ಬರು ನನ್ನ ಅಣ್ಣನ ಬಳಿ ಹೋಗಿ ಉಪಚರಿಸಿ ನೋಡಿದಾಗ ನನ್ನ ಅಣ್ಣನ ಮುಖಕ್ಕೆ ಮತ್ತು ಎಡಕಾಲಿಗೆ ಪೆಟ್ಟು ಬಿದ್ದಿತ್ತು. ಅಪಘಾತ ಪಡಿಸಿದ ಬೈಕ್ ಅನ್ನು ಸ್ಥಳದಲ್ಲಿ ನಿಲ್ಲಿಸಿದ್ದು, ನಂಬರ್ ನೋಡಲಾಗಿ ಕೆಎ-64-ಇ-0045 ನೇ ನಂಬರಿನ ಪ್ಯಾಷನ್ ಪ್ರೋ ಬೈಕ್ ಆಗಿತ್ತು. ಆಗ ನಾವು ನನ್ನ ಅಣ್ಣನನ್ನು ಒಂದು ಕಾರಿನಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುತ್ತೆ. ವೈದ್ಯರ ಸಲಹೆಯಂತೆ ಗಾಯಾಳುವನ್ನು ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರಗೆ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತೇವೆ . ಅಪಘಾತ ಪಡಿಸಿದ ಚಾಲಕನ ಹೆಸರು ಬಿಟ್ಟನಕುರಿಕೆ ಗ್ರಾಮದ ಅಂಜಿನಪ್ಪ ತಂದೆ ಸಂಜೀವಪ್ಪ ಎಂತಾ ತಿಳಿದು ಬಂದಿರುತ್ತೆ. ನನ್ನ ಅಣ್ಣನಿಗೆ 2-3 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ದೂರು ನೀಡಲು ತಡವಾಗಿರುತ್ತೆ. ಅಪಘಾತ ಪಡಿಸಿದ ಕೆಎ-64-ಇ-0045 ನೇ ನಂಬರಿನ ಪ್ಯಾಷನ್ ಪ್ರೋ ಬೈಕ್ ಚಾಲಕ ಅಂಜಿನಪ್ಪ ಬಿನ್ ಸಂಜೀವಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.
ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 49-2018 ಕಲಂ 457-511 ಐಪಿಸಿ
ದಿ:04/04/2018 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಫಿರ್ಯಾದಿ ಜಿ ಪಿ ಮಹಂತೇಶಪ್ಪ, ಮುಖ್ಯಶಿಕ್ಷಕರು, ಶ್ರೀ ಸಿದ್ದಾರ್ಥ ಗ್ರಾಮಾಂತರ ಪ್ರೌಢಶಾಲೆ ದಂಡಿನದಿಬ್ವಬ್ಬ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,ನಾನು ಶ್ರೀ ಸಿದ್ದಾರ್ಥ ಗ್ರಾಮಾಂತರ ಪ್ರೌಢಶಾಲೆ ದಂಡಿನದಿಬ್ಬ ಗ್ರಾಮದಲ್ಲಿ ಮುಖ್ಯಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ದಿ:03/04/2018 ರಂದು ಸಂಜೆ 4-30 ಗಂಟೆಗೆ ಶಾಲೆಗೆ ಬೀಗ ಹಾಕಿಕೊಂಡು ಹೋಗಿದ್ದು, ದಿ:04/04/2018 ರಂದು ಬೆಳಗ್ಗೆ 7-00 ಗಂಟೆಗೆ ಬಂದು ಶಾಲೆಯ ಕಚೇರಿ ಬಾಗಿಲು ತೆಗೆಯಲು ಹೋದಾಗ ಬಾಗಿಲು ತೆರವಾಗಿತ್ತು. ಒಳಗಡೆ ನೋಡಿದಾಗ ಬೀರುವನ್ನು ಮೀಟಿ ತೆಗೆದಿದ್ದರು. ಅದೇ ರೀತಿ ಪಕ್ಕದಲ್ಲಿರುವ ಶಿಕ್ಷಕರ ಕೊಠಡಿಯ ರೂಂ ಅನ್ನು ಯಾರೋ ಕಳ್ಳರು ಮೀಟಿ ತೆಗೆದಿದ್ದರು. ಯಾರೋ ಕಳ್ಳರು ಯಾವುದೇ ವೇಳೆಯಲ್ಲಿ ಶಾಲೆಯೊಳಗೆ ಬಂದು ವಿದ್ಯುತ್ ಸಂಪರ್ಕಕ್ಕೆ ಅಳವಡಿಸಿದ್ದ ಢಿ ಫಿ ಸ್ವಿಚ್ ಅನ್ನು ಆಪ್ ಮಾಡಿ ಮುಖ್ಯ ಶಿಕ್ಷಕರ ಕೊಠಡಿ ಮತ್ತು ಶಿಕ್ಷಕರ ಕೊಠಡಿಗಳ ಡೋರ್ ಲಾಕ್ ಅನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾರೆ. ಶಾಲೆಯ 2 ಕೊಠಡಿಯಲ್ಲಿದ್ದ ಯಾವುದೇ ವಸ್ತುಗಳು ಕಳವು ಆಗಿರುವುದಿಲ್ಲಾದರೆ ಬೀರುವಿನಲ್ಲಿದ್ದ ಶಾಲೆ ಕೊಠಡಿಗಳ ಬೀಗದ ಗೊಂಚಲು ಕಾಣೆಯಾಗಿರುತ್ತೆ. ಇದೇ ರೀತಿ ನಮ್ಮ ಶಾಲೆಯ ಪಕ್ಕದಲ್ಲಿರುವ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಯೂ ಸಹ 2 ರೂಂ ಗಳ ಬೀಗವನ್ನು ಒಡೆದು ಕಳ್ಲತನಕ್ಕೆ ಪ್ರಯತ್ನಿಸಿರುತ್ತಾರೆ. ಆ ಶಾಲೆಯಲ್ಲಿಯೂ ಸಹ ಯಾವುದೇ ವಸ್ತುಗಳು ಕಳವು ಆಗಿರುವುದಿಲ್ಲ. ಎಂದು ಆ ಶಾಲೆಯ ಮುಖ್ಯ ಶಿಕ್ಷಕಿಯವರು ತಿಳಿಸಿರುತ್ತಾರೆ. ಆದ್ದರಿಂದ ಈ ಎರಡೂ ಶಾಲೆಗಳಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ್ದು, ತಾವು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಿ ಎಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
|