lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2018 >
Mo Tu We Th Fr Sa Su
            1
2 4 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30            
Tuesday, 03 April 2018
ಅಪರಾಧ ಘಟನೆಗಳು 03-04-18

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್. ನಂ- 9/2018 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ:02-04-2018 ರಂದು ಬೆಳಗ್ಗೆ 08.00 ಗಂಟೆಗೆ ಪಿರ್ಯಾದಿ ರಾಜಣ್ಣ ಬಿನ್‌ ಪಿ.ವೈ  ಬಸವಾರಾಜು, 53 ರ್ವ, ತಿಪಟೂರು ನಗರ ಸಭೆಯಲ್ಲಿ ಕೆಲಸ, ವಿವೇಕನಾಂದ ನಗರ, ತಿಪಟೂರು ಟೌನ್‌ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ದಿನಾಂಕ:02-04-2018 ರಂದು ಪ್ರತಿದಿನದಂತೆ ತಿಪಟೂರು ನಗರ ಸಭೆಯ ಬಳಿ ಕೆಲಸಕ್ಕೆ ಹೋಗಿ  ನಮ್ಮ ನಗರಸಭೆಯ (ಪೌರರು) ಸಿಬ್ಬಂದಿಯವರನ್ನು ಕರೆದುಕೊಂಡು ಬಸ್‌ನಿಲ್ದಾಣದ ಕಡೆ ಸ್ವಚ್ಚತೆ ಮಾಡಲು ಹೋದಾಗ ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಹಳೆಪಾಳ್ಯ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಕೆಲಸ ಮಾಡುತ್ತಿದ್ದಾಗ ರಸ್ತೆಯ ಪಕ್ಕ ಕರೆಯ ಕಡೆ ನಿರ್ಮಾಣ ಮಾಡಿರುವ ಫೆನ್ಸಿಂಗ್‌ ಪಕ್ಕದ ವಾಕಿಂಗ್‌ ಪಾತ್‌ನಲ್ಲಿ ಮರದ ಕೆಳಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಈತನ ಪಕ್ಕದಲ್ಲಿ ಕೆಂಪು ಬ್ಯಾಗ್‌, ಕೊಡೆಗಳ ಬಿಡಿಭಾಗಗಳು ಬಿದ್ದಿರುತ್ತವೆ. ಈತ ಕೊಡೆ ರೀಪೆರಿ ಮಾಡುವ ವ್ಯಕ್ತಿಯಾಗಿದ್ದು, ಈತ ಅಲ್ಲಿ ಇಲ್ಲಿ ಕೊಡೆ ರೀಪೆರಿ ಮಾಡಿಕೊಂಡು ಓಡಾಡುತ್ತಿದ್ದು, ಈತನ ಹೆಸರು ವಿಳಾಸ ಗೊತ್ತಿಲ್ಲ, ಈತ ಸುಮಾರು 40-45 ವರ್ಷ ವಯಸ್ಸಿನ ಅಪರಚಿತ ಗಂಡಸಿನ ಶವವಾಗಿದ್ದು, ಈತ ನಿನ್ನೆ ದಿನ ದಿನಾಂಕ:01-04-2018 ರಂದು ರಾತ್ರಿ ಯಾವಾಗಲೊ ಮಧ್ಯಪಾನ ಮಾಡಿಕೊಂಡು ಬಂದು ಮರದ ಕೆಳಗೆ ಮಲಗಿಕೊಂಡಿದ್ದು, ಯಾವುದೋ ಸಮಯದಲ್ಲಿ ಈತ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವಂತೆ ಕಂಡು ಬಂದಿರುತ್ತೆ. ಈತ ನೀಲಿ ಮತ್ತು ಕಪ್ಪು ಚೌಕಳಿ ಶರ್ಟ್‌ಮತ್ತು  ಕಪ್ಪು ಬಣ್ಣದ ಪ್ಯಾಂಟ್‌ ತೊಟ್ಟಿದ್ದ ಈತನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ,  ಆದ್ದರಿಂದ ತಾವು ಸ್ದಳಕ್ಕೆ ಬಂದು ಪರೀಶಿಲನೆ ಮಾಡಿ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿರುವ ದೂರಿನ ಅಂಶವಾಗಿರುತ್ತೆ

 

ಹೊನ್ನವಳ್ಳಿ ಪೊಲೀಸ್ ಠಾಣೆ      ಮೊ.ಸಂಖ್ಯೆ. 16/2018 ಕಲಂ. 304.429 ಐಪಿಸಿ ಮತ್ತು 135 ಇಂಡಿಯನ್‌‌‌ ಎಲೆಕ್ಟ್ರಿಸಿಟಿ ಆಕ್ಟ್‌

ದಿನಾಂಕ 02/04/2018 ರಂದು ಮದ್ಯಾಹ್ನ 3-00 ಗಂಟೆಗೆ ತಿಪಟೂರು ತಾಲ್ಲೂಕು, ಹೊನ್ನವಳ್ಳಿ ಹೋಬಳಿ, ಸತ್ತೆರಾಮನಹಳ್ಳಿ ಗ್ರಾಮದ ವಾಸಿ, ಆರ್.ಎಸ್. ನೀಲಕಂಠಯ್ಯ ಬಿನ್‌‌ ಲೇಟ್‌ ಶಿವಣ್ಣ, 52 ವರ್ಷ, ಲಿಂಗಾಯ್ತರ ಜನಾಂಗ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೆನೆಂದರೆ.ನನಗೆ ಇಬ್ಬರು ಅವಳಿ ಜವಳಿ ಮಕ್ಕಳಿದ್ದು, ಒಂದನೆಯವಳು ತೀರ್ಪು, 2ನೇಯವನು ತೀರ್ಥಕುಮಾರ್‌‌ ಆಗಿದ್ದು, ತೀರ್ಥಕುಮಾರ ಡಿಪ್ಲಮೋ ಮುಗಿಸಿ ಮನೆ ಕಡೆ ಇದ್ದನು. ಈ ದಿನ ದಿನಾಂಕ;02.04.2018 ರಂದು ಬೆಳಿಗ್ಗೆ ಸುಮಾರು 11-30ರ ಸಮಯದಲ್ಲಿ ತೋಟದ ಕಡೆ ಹೋಗಿ ಬರುವುದಾಗಿ ತೀರ್ಥಕುಮಾರ ಹೇಳಿ ಹೋಗಿದ್ದನು. ನಂತರ ಬೆಳಿಗ್ಗೆ ಸುಮಾರು 11-50ರ ಸಮಯದಲ್ಲಿ ನಮ್ಮ ಮನೆಗೆ ಸ್ವಲ್ಪ ದೂರದಲ್ಲಿರುವ ಘಟಕಿನಕೆರೆ ವಾಸಿ ಹಾಲ್ಕುರಿಕೆ ಗ್ರಾಮ ಪಂಚಾಯ್ತಿ ಉಪಾದ್ಯಕ್ಷರಾದ ಕುಮಾರಸ್ವಾಮಿರವರ ತಾಯಿಯವರು ಅವರ ಜಮೀನಿನ ಹತ್ತಿರ ಕೂಗಾಡುತ್ತಿರುವ ಶಬ್ದ ಕೇಳಿ ನಾನು ಮತ್ತು ನನ್ನ ಹೆಂಡತಿ ಪ್ರೇಮಕುಮಾರಿ ಇನ್ನೂ ಮುಂತಾದವರು ಅಲ್ಲಿಗೆ ಹೋಗಿ ನೋಡಿದಾಗ ನಮ್ಮೂರಿನ ರವೀಶ್‌‌ರವರ ಜಮೀನಿನ ಕಡೆ ನಮ್ಮ ಜಮೀನಿಗೆ ಹಾಕಿರುವ ಪೆನ್ಸಿಂಗ್‌‌ ಮುಳ್ಳು ತಂತಿಗೆ ವಿದ್ಯುತ್ ಹರಿದು ನನ್ನ ಮಗ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದನು. ಆತನ ಪಕ್ಕದಲ್ಲಿ ಮೇಲ್ಕಂಡ ಕುಮಾರಸ್ವಾಮಿಯರವರಿಗೆ ಸೇರಿದ ಸೀಮೆ ಹಸುವೊಂದು ಒದ್ದಾಡುತ್ತಿತ್ತು. ನಮ್ಮ ಜಮೀನಿನ ಪಕ್ಕ ಇರುವ ಘಟಕಿನಕೆರೆಯ ರಾಜಪ್ಪ @ ಹನುಮರಾಜು ಬಿನ್‌‌‌‌ ಚಿಕ್ಕಮಲ್ಲಯ್ಯ ಎಂಬುವರು ಅವರ ಜಮೀನಿನಲ್ಲಿರುವ ಕೊಳವೆಬಾವಿಗೆ ಎಳೆದುಕೊಂಡು ಹೋಗಿದ್ದ ಮೈನ್ಸ್‌‌ ವೈರನ್ನು ನಮ್ಮ ಜಮೀನಿಗೆ ಹಾಕಿರುವ ಪೆನ್ಸಿಂಗ್‌‌‌‌ ಮುಳ್ಳು ತಂತಿ ಮೇಲೆ ಎಳೆದುಕೊಂಡು ಹೋಗಿದ್ದು ಮುಳ್ಳು ತಂತಿಗೆ ವಿದ್ಯುತ್‌‌‌‌‌ ಹರಿದಿದ್ದು ನಾವು ತಕ್ಷಣ ನನ್ನ ಮಗನನ್ನು 108 ಆಂಬುಲೆನ್ಸ್‌‌ ನಲ್ಲಿ ಕರೆದುಕೊಂಡು ಮದ್ಯಾಹ್ನ ಸುಮಾರು 1 ಗಂಟೆ ಸಮಯಕ್ಕೆ ತಿಪಟೂರು ಜನರಲ್‌‌ ಆಸ್ಪತ್ರೆಗೆ ಹೋದಾಗ, ವೈದ್ಯರು ಚಿಕಿತ್ಸೆ ನೀಡಲು ಬಂದು, ನೋಡಿ ಮೃತಪಟ್ಟಿರುವುದನ್ನು ಖಚಿತ ಪಡಿಸಿದರು. ರಾಜಪ್ಪನು ಬೋರ್‌‌ವೆಲ್‌‌ಗೆ ಕೆ.ಇ.ಬಿ.ಯವರಿಂದ ಯಾವುದೇ ಪರವಾನಗಿಯನ್ನು ಪಡೆಯದೇ ಅನಧಿಕೃತವಾಗಿ ವಿದ್ಯುತ್‌‌‌ ಸಂಪರ್ಕ ಹೊಂದಿರುತ್ತಾನೆ.ನನ್ನ ಮಗ ತೋಟದ ಕಡೆ ಹೋದಾಗ ಘಟಕಿನಕೆರೆ ರಾಜಪ್ಪನವರು ಅವರ ಜಮೀನಿನಲ್ಲಿರುವ ಕೊಳವೇಬಾವಿಗೆ ನಮ್ಮ ಜಮೀನಿಗೆ ಹಾಕಿರುವ ಪೆನ್ಸಿಂಗ್‌‌‌ ತಂತಿ ಮೇಲೆ ಸರ್ವೀಸ್‌‌ ಮೈನ್ಸ್‌‌ ನ್ನು ಎಳೆದುಕೊಂಡು ಹೋಗಿದ್ದು, ವೈರ್‌‌ನಿಂದ ಮುಳ್ಳು ತಂತಿಗೆ ವಿದ್ಯುತ್‌ ಹರಿದು ಸೀಮೆಹಸು  ಪೆನ್ಸಿಂಗ್‌‌ಗೆ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿರುವುದನ್ನು ನೋಡಿ ಅದು ಕರೆಂಟಿಗೆ ಸಿಕ್ಕಿ ಹಾಕಿಕೊಂಡಿರುತ್ತೆ ಎಂಬುದನ್ನು ಗಮನಿಸದೇ ಹಸುವಿಗೆ ನೀರನ್ನು ಕುಡಿಸಲು ಹೋದಾಗ ತೀರ್ಥಕುಮಾರ ವಿದ್ಯುತ್‌ ಹರಿದಿದ್ದ ಪೆನ್ಸಿಂಗ್‌‌ ತಂತಿಗೆ ಸಿಕ್ಕಿ ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಮಗನ ಸಾವಿಗೆ ರಾಜಪ್ಪ ಬಿನ್‌‌‌‌ ಚಿಕ್ಕಮಲ್ಲಯ್ಯನೇ ಕಾರಣನಾಗಿರುತ್ತಾನೆ. ಆದ್ದರಿಂದ ಸದರಿ ರಾಜಪ್ಪನ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ನನ್ನ ಮಗನ  ಹೆಣವನ್ನುಶವ  ಪರೀಕ್ಷೆ ಮಾಡಿಸಿ ನನಗೆ ಕೊಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಎಂದು ಇದ್ದ ಸದರಿ ದೂರನ್ನು ಪಡೆದು ಠಾಣಾ ಮೊ.ಸಂಖ್ಯೆ. 16/2018 ಕಲಂ. 304.429 ಐಪಿಸಿ ಮತ್ತು 135 ಇಂಡಿಯನ್‌‌‌ ಎಲೆಕ್ಟ್ರಿಸಿಟಿ ಆಕ್ಟ್‌ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೇನೆ

 

ತುಮಕೂರು ನಗರ ಪೊಲೀಸ್‌ ಠಾಣಾ  ಮೊ.ನಂ.108/2018 U/S 379IPC

ದಿನಾಂಕ:02/04/2018 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ಹೆಸರಿನಲ್ಲಿರುವ ಅಪೇ ಲಗೇಜ್‌ ಆಟೋ ಕೆಎ-16-ಎ-6150 ರ ಆಟೋದಲ್ಲಿ ತರಕಾರಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತೇನೆ. ದಿನಾಂಕ:30/03/2018 ರಂದು ಮಮೂಲಿನಂತೆ ತರಕಾರಿ ತರಲು ನನ್ನ ತಮ್ಮಂದಿರಾದ ನಟರಾಜು ಮತ್ತು ಚೌಡಪ್ಪ ಎಂಬುವವರು ಬೆಳಿಗ್ಗೆ 6-00 ಗಂಟೆಗೆ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಗೆ ಹೋಗಿ ಆಟೋ ನಿಲ್ಲಿಸಿ ಮಾರ್ಕೇಟ್‌‌ ಒಳಗೆ ಹೋಗಿ ವಾಪಸ್ 7-00 ಗಂಟೆಗೆ ಬಂದು ನೋಡಲಾಗಿ ನಿಲ್ಲಿಸಿದ್ದ ಜಾಗದಲ್ಲಿ ಆಟೋ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಆಟೋ ಸಿಗಲಿಲ್ಲವೆಂದು ನನ್ನ ತಮ್ಮಂದಿರು ಪೋನ್ ಮಾಡಿ ತಿಳಿಸಿದರು. ಎಲ್ಲಾ ಕಡೆ ಹುಡುಕಾಡಿ, ಸ್ನನೇಹಿತಿರು, ಸಂಬಂಧಿಕರುಗಳನ್ನೇಲ್ಲಾ ವಿಚಾರಿಸಿದರೂ ಈ ದಿನದವರೆಗೆ ಆಟೋ ಸಿಕ್ಕಿರುವುದಿಲ್ಲ. ಆದ್ದರಿಂದ ಈ ದಿನ ಠಾಣೆಗೆ ಬಂದು ಕಳೆದುಹೋಗಿರುವ ನನ್ನ ಅಪೇ ಲಗೇಜ್‌ ಆಟೋ ಕೆಎ-16-ಎ-6150 ,ಇಂಜಿನ್ ನಂ-R7E043612  ಚಾರ್ಸಿಸ್ ನಂ-BJE521556, ನೀಲಿ ಬಣ್ಣದ್ದಾಗಿದ್ದು, ಇದರ ಬೆಲೆ 49,000/- ರೂ ಆಗಿದ್ದು, ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಿ ಆಟೋ  ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ.108/2018 ಕಲಂ 379 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 69 guests online
Content View Hits : 302218