lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< January 2018 >
Mo Tu We Th Fr Sa Su
1 2 3 4 5 6 7
8 9 10 11 12 14
15 16 17 18 19 20 21
22 23 24 25 26 27 28
29 30 31        
Saturday, 13 January 2018
ಠಾಣಾ ದಾಖಲಾತಿಗಳ ನಿರ್ವಹಣೆ ಕಾರ್ಯಗಾರ

ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ

ದಿನಾಂಕ 13/1/2018

 

 

 

 

 


ಅಪರಾಧ ಘಟನೆಗಳು 13-01-18

ನೊಣವಿನಕೆರೆ ಪೊಲೀಸ್ ಠಾಣೆ ಮೊ.ಸಂ 04/2018 ಕಲಂ 454-380  ಐ ಪಿ ಸಿ

ದಿನಾಂಕ; 12-1-2018 ರಂದು  ರಾತ್ರಿ  8-00  ಗಂಟೆಗೆ ಫಿರ್ಯಾಧಿ  ಉದಯ  ಬಿನ್   ಇನ್ನಾಸಪ್ಪ  38 ವರ್ಷ,    ಕ್ರಿಶ್ಚಿಯನ್     ಜನಾಂಗ,  ಸಣ್ಣೇನಹಳ್ಳಿ  ನೊಣವಿನಕೆರೆ  ಹೋಬಳಿ  ತಿಪಟೂರು ತಾ// ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ  ಸಾರಂಶವೇನೆಂದರೆ  ನನಗೆ ಜೀವಿತ  ಹಾಗೂ  ಜನಿತ  ಎಂಬ  ಇಬ್ಬರೂ  ಮಕ್ಕಳಿದ್ದು ನನ್ನ ಹೆಂಡತಿ  ಕನಕ  ರವರು   ನಮ್ಮ ಗ್ರಾಮದಲ್ಲಿರುವ  ಕಾನ್ವೆಂಟ್  ಗೆ  ಶಿಕ್ಷಕಿಯಾಗಿ  ಕರ್ತವ್ಯ ನಿರ್ವಹಿಸುತ್ತಿದ್ದು  ಇದೇ ಶಾಲೆಯಲ್ಲಿ ನನ್ನ  ಇಬ್ಬರೂ  ಮಕ್ಕಳು   ವ್ಯಾಸಂಗ ಮಾಡುತ್ತಿದ್ದು  ನಾನು  ಜೀವನೋಪಾಯಕ್ಕಾಗಿ  ವ್ಯವಸಾಯ ಮಾಡಿಕೊಂಡಿರುತ್ತೇನೆ   ದಿನಾಂಕ; 12-01-2018 ರಂದು  ಬೆಳಿಗ್ಗೆ  ಸುಮಾರು  7-45  ಗಂಟೆ ಸಮಯದಲ್ಲಿ  ನನ್ನ  ಮಕ್ಕಳು  ತಿಂಡಿ  ತಿಂದು  ಎಂದಿನಂತೆ  ಶಾಲೆಗೆ  ಹೋಗಿದ್ದು ನಂತರ  ನನ್ನ ಹೆಂಡತಿ  ಕನಕ ರವರು ಬೆಳಿಗ್ಗೆ ಸುಮಾರು 8-45 ಗಂಟೆ  ಸಮಯದಲ್ಲಿ  ಅವರು  ಕರ್ತವ್ಯ  ನಿರ್ವಹಿಸುತ್ತಿರುವ ಶಾಲೆಗೆ   ಮನೆಯಿಂದ  ಹೋದರು  ನಂತರ   ನನ್ನ  ತಾಯಿ  ಜೋಸೆಫ್  ಮರಿಯಮ್ಮ  ರವರು   ಕೂಡ   ಎಮ್ಮೆಯನ್ನು  ಮೇಯಿಸುವ ಸಲುವಾಗಿ  ಎಮ್ಮೆ ಯನ್ನು  ಹೊಡೆದುಕೊಂಡು  ನಮ್ಮ  ಮನೆಯಿಂದ  ಬೆಳಿಗ್ಗೆ 10-00  ಗಂಟೆ  ಸಮಯದಲ್ಲಿ  ನಮ್ಮ   ತೋಟಕ್ಕೆ  ಹೋದರು   ನಂತರ   ನಾನು  ನಮ್ಮ ಮನೆಯ  ಬಾಗಿಲಿಗೆ   ಬೀಗ  ಹಾಕಿಕೊಂಡು  ಬೆಳಿಗ್ಗೆ  ಸುಮಾರು 10-45  ಗಂಟೆಗೆ   ಕಣದ  ಕೆಲಸಕ್ಕೆ  ಹೋದವನು  ಮತ್ತೆ   ವಾಪಸ್  ಮಧ್ಯಾಹ್ನ   ಸುಮಾರು  2-30   ಗಂಟೆ  ಸಮಯದಲ್ಲಿ ನಮ್ಮ  ಮನೆಯ ಹತ್ತಿರ   ಬಂದು  ನನ್ನ  ಮನೆಯ  ಹತ್ತಿರ   ನಿಲ್ಲಿಸಿದ್ದ  ನಮ್ಮ  ಬಾಬ್ತು ಟ್ರ್ಯಾಕ್ಟರ್  ಕೀಯನ್ನು  ತೆಗೆದುಕೊಂಡು   ಕಣದ   ಹತ್ತಿರ  ಹೋಗಿ  ಕಣದ   ಕೆಲಸವನ್ನು  ಮಾಡುತ್ತಿರುವಾಗ್ಗೆ   ಸಂಜೆ   ಸುಮಾರು   4-20  ಗಂಟೆ  ಸಮಯದಲ್ಲಿ  ನನ್ನ ಮಗಳು  ಜೀವಿತಾ  ನನ್ನ  ಮೋಬೈಲ್ ಗೆ  ಫೋನ್ ಮಾಡಿ  ನಮ್ಮ  ಮನೆಯ   ಬೀಗವನ್ನು   ಯಾರೋ  ಕಳ್ಳರು  ಹೊಡೆದು   ಹಾಕಿರುತ್ತಾರೆ   ಎಂತ  ಭಯದಿಂದ  ಹೇಳಿದಳು   ಕೂಡಲೇ  ನಾನು   ಕಣದ  ಕೆಲಸವನ್ನು   ಬಿಟ್ಟು   ನಮ್ಮ ಮನೆಯ  ಹತ್ತಿರ  ಹೋಗಿ  ನೋಡಲಾಗಿ  ನಮ್ಮ  ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು  ಯಾರೋ ದುರಾತ್ಮರು  ಯಾವುದೋ ಆಯುಧದಿಂದ  ಹೊಡೆದು  ಹಾಕಿ   ಬಾಗಿಲನ್ನು ಹೊಡೆದು   ಮನೆಯೊಳಗೆ ಪ್ರವೇಶಿಸಿರುವುದು  ಕಂಡು ಬಂತು   ಅದೇ  ವೇಳೆಗೆ  ನನ್ನ   ಹೆಂಡತಿ    ಕನಕ    ರವರು  ಕೂಡ   ನನ್ನ   ಇನ್ನೊಬ್ಬ   ಮಗಳೊಂದಿಗೆ   ನಮ್ಮ ಮನೆಯ  ಹತ್ತಿರ  ಬಂದು  ಈಕೆಯು ಕೂಡ  ನಮ್ಮ  ಮನೆಗೆ   ಹಾಕಿರುವ  ಬೀಗವನ್ನು ಯಾರೋ  ಹೊಡೆದು  ಹಾಕಿರುವ  ಬಗ್ಗೆ  ಗಮನಿಸಿದಳು ನಂತರ    ನಾನು  ಹಾಗೂ   ನನ್ನ  ಹೆಂಡತಿ  ಕನಕ   ಇಬ್ಬರೂ    ನಮ್ಮ ಮನೆಯೊಳಗೆ  ಹೋಗಿ ನೋಡಲಾಗಿ ನಮ್ಮ  ಮನೆಯಲ್ಲಿನ ರೂಂ  ನಲ್ಲಿರುವ  ಬೀರುವಿನ ಲಾಕ್ ನ್ನು   ಯಾವುದೋ ಆಯುಧದಿಂದ ಮೀಟಿ 237  ಗ್ರಾಂ  ಚಿನ್ನದ ಆಭರಣಗಳ ಒಟ್ಟು ಮೌಲ್ಯ ಸುಮಾರು   5,00000  ರೂಗಳಾಗಿರುತ್ತೆ   ಹಾಗೂ  ಕಳ್ಳತನ ಮಾಡಿರುವ  ಸುಮಾರು  150  ಗ್ರಾಂ   ಬೆಳ್ಳಿಯ  ಆಭರಣಗಳ ಒಟ್ಟು ಮೌಲ್ಯ ಸುಮಾರು 4500   ರೂಗಳಾಗಿರುತ್ತ  ನಾವು  ಮನೆಯಲ್ಲಿ ಇಲ್ಲದೆ ಇರುವ ಸಮಯವನ್ನು ನೋಡಿಕೊಂಡು  ಹಗಲು  ಹೊತ್ತಿನಲ್ಲಿ  ಮಧ್ಯಾಹ್ನ  ಸುಮಾರು  2-35  ಗಂಟೆಯಿಂದ  ಸಂಜೆ 4-00  ಗಂಟೆಯ ನಡುವೆ ಯಾರೋ ಕಳ್ಳರು  ನಮ್ಮ ಮನೆಯ ಮುಂದಿನ ಬಾಗಿಲಿಗೆ ಹಾಕಿದ್ದ  ಬೀಗವನ್ನು  ಯಾವುದೋ  ಆಯುಧದಿಂದ   ಹೊಡೆದು  ಹಾಕಿ  ಮನೆಯೋಳಗೆ ಪ್ರವೇಶಿಸಿ ಮನೆಯಲ್ಲಿದ್ದ  ಬೀರುವಿಗೆ ಹಾಕಿದ್ದ ಲಾಕ್‌ ನ್ನು  ಯಾವುದೋ  ಆಯುಧದಿಂದ ಮೀಟಿ  ಬೀರು ಬಾಗಿಲನ್ನು  ತೆರೆದು  ಮೇಲ್ಕಂಡ  ಚಿನ್ನದ  ಹಾಗೂ ಬೆಳ್ಳಿಯ ಆಭರಣಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆ  ಆದ್ದರಿಂದ ನಮ್ಮ  ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು  ಪತ್ತೆ ಮಾಡಿ,    ಕಳ್ಳತನವಾಗಿರುವ ಚಿನ್ನದ, ಬೆಳ್ಳಿಯ  ಆಭರಣಗಳನ್ನು  ಹಾಗೂ  ನಗದು ಹಣವನ್ನು ನಮಗೆ ಕೋಡಿಸಿಕೊಡಬೇಕೆಂದು ಹಾಗೂ ಕಳ್ಳತನ ಮಾಡಿರುವ ಆಸಾಮಿಗಳ ಮೇಲೆ  ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು  ನೀಡಿದ  ಲಿಖಿತ ದೂರನ್ನು ಸ್ವೀಕರಿಸಿ  ಪ್ರಕರಣ ದಾಖಲು ಮಾಡಿರುತ್ತೆ .

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ -08/2018 ಕಲಂ 279, 337 ಐ,ಪಿ,ಸಿ

ದಿನಾಂಕ:12-01-2018 ರಂದು ಸಾಯಂಕಾಲ 06-15 ಗಂಟೆಗೆ ಪಿರ್ಯಾದುದಾರರಾದ ಗಂಗಯ್ಯ ಬಿನ್ ಲೇ|| ನರಸಯ್ಯ, 40 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಕರಡಗೆರೆ ಕಾವಲ್‌, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಹೆಂಡತಿ ಲಕ್ಷ್ಮಮ್ಮ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಹೆಂಡತಿ ಲಕ್ಷ್ಮಮ್ಮ ರವರು ದಿನಾಂಕ: 11-01-2018 ರಂದು ಕೂಲಿ ಕೆಲಸಕ್ಕೆಂದು ಮಲ್ಲಪ್ಪನಹಳ್ಳಿ ಗ್ರಾಮದ ನಾಗರಾಜು ರವರ ಜಮೀನಿಗೆ ಹೋಗಿದ್ದು, ಸದರಿ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ್ಗೆ ಸಾಯಂಕಾಲ ಸುಮಾರು 04-30 ಗಂಟೆ ಸಮಯದಲ್ಲಿ ನನ್ನ ಹೆಂಡತಿ ಲಕ್ಷ್ಮಮ್ಮ ಹಾಗೂ ಕರಡಗೆರೆ ಕಾವಲ್‌ ಗ್ರಾಮದ ವಾಸಿಯೇ ಆದ ಲಕ್ಷ್ಮಮ್ಮ ಕೋಂ ವೀರನರಸಯ್ಯ ಇಬ್ಬರೂ ಹುಲ್ಲಿನ ಕಣದ ಪಕ್ಕದ ಬದುವಿನಲ್ಲಿ ಕುಳಿತಿರುವಾಗ್ಗೆ, ಆಗ ಅದೇ ಸಮಯಕ್ಕೆ ಹುಲ್ಲಿನ ಕಣದಲ್ಲಿ ಕೆಲಸ ಮಾಡುತ್ತಿದ್ದ ಕೆಎ-06-ಟಿ.ಬಿ-5272 ನೇ ಟ್ರಾಕ್ಟರ್ ವಾಹನದ ಚಾಲಕ ತನ್ನ ಟ್ರಾಕ್ಟರ್‌ ಅನ್ನು ಅಜಾಗರೂಕತೆಯಿಂದ ಹಿಂಭಾಗಕ್ಕೆ ಚಾಲನೆ ಮಾಡಿಕೊಂಡು ಬಂದು ಬದುವಿನ ಬಳಿ ಕುಳಿತ್ತಿದ್ದ ನನ್ನ ಹೆಂಡತಿ ಲಕ್ಷ್ಮಮ್ಮ ಹಾಗೂ ಲಕ್ಷ್ಮಮ್ಮ ಕೋಂ ವೀರನರಸಯ್ಯ ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ಹೆಂಡತಿ ಲಕ್ಷ್ಮಮ್ಮ ರವರಿಗೆ ಸೊಂಟಕ್ಕೆ ಹಾಗೂ ಎರಡೂ ಕಾಲುಗಳಿಗೆ ಏಟು ಬಿದ್ದಿರುತ್ತೆ. ಹಾಗೂ ಲಕ್ಷ್ಮಮ್ಮ ಕೋಂ ವೀರನರಸಯ್ಯ ರವರಿಗೆ ಹೊಟ್ಟೆ ಹಾಗೂ ಸೊಂಟದ ಭಾಗಕ್ಕೆ ತೀವ್ರತರವಾದ ಏಟು ಬಿದ್ದಿರುತ್ತೆ. ಸದರಿ ಅಫಘಾತದ ವಿಚಾರವನ್ನು ಅಲ್ಲಿಯೇ ಕೂಲಿ ಕೆಲಸಕ್ಕೆ ಹೋಗಿದ್ದ ನಮ್ಮ ಗ್ರಾಮದ ವಾಸಿಯೇ ಆದ ಶಿವಮ್ಮ ರವರು ನನಗೆ ಪೋನ್ ಮಾಡಿ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿತ್ತು. ನಂತರ ಗಾಯಗೊಂಡಿದ್ದ ನನ್ನ ಹೆಂಡತಿ ಲಕ್ಷ್ಮಮ್ಮ ಹಾಗೂ ಲಕ್ಷ್ಮಮ್ಮ ಕೋಂ ವೀರನರಸಯ್ಯ ರವರುಗಳನ್ನು ಸ್ಥಳಕ್ಕೆ ಬಂದ 108 ಆಂಬುಲೆನ್ಸ್ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನನ್ನ ಹೆಂಡತಿ ಲಕ್ಷ್ಮಮ್ಮ ರವರನ್ನು ಚಿಕಿತ್ಸೆಗೆ ದಾಖಲಿಸಿದ್ದು, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಲಕ್ಷ್ಮಮ್ಮ ಕೋಂ ವೀರನರಸಯ್ಯ ರವರನ್ನು ಅವರ ಮಗನಾದ ನರಸಿಂಹಮೂರ್ತಿ ರವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಆದ್ದರಿಂದ ತನ್ನ ಟ್ರಾಕ್ಟರ್ ಅನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಟಿ.ಬಿ-5272 ನೇ ಟ್ರಾಕ್ಟರ್‌ ಚಾಲಕನ ಮೇಲೆ ಕಾನೂನು ರೀತ್ಯ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ನನ್ನ ಹೆಂಡತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇನೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 04/2018. ಕಲಂ 15 (a). 32(3) K E Act

ದಿನಾಂಕ 12/01/2018 ರಂದು ಸಂಜೆ 06-00 ಗಂಟೆಗೆ ಪಿಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನ ಏನೆಂದರೆ, ನಾನು ದಿನಾಂಕ:12.01.2018 ರಂದು ಸಂಜೆ 04:00 ಗಂಟೆ ಸಮಯದಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಾತ್ಮೀದಾರರು ನನಗೆ ಪೋನ್ ಮಾಡಿ ಹುಳಿಯಾರು ಹೋಬಳಿ ಗುರುವಾಪುರ ಗ್ರಾಮದಲ್ಲಿರುವ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಮುಂಭಾಗ ಗುರುವಾಪುರ– ಮೇಲನಹಳ್ಳಿ ಟಾರ್ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಒಂದು ಟೆಟ್ರಾ ಪ್ಯಾಕೇಟ್ ಅನ್ನು ಓಪನ್ ಮಾಡಿ ಮದ್ಯಪಾನ ಮಾಡುತ್ತಿರುತ್ತಾನೆ ಎಂತ ಮಾಹಿತಿ ಬಂದಿದ್ದು ನಾನು ಮತ್ತು ಬೀಟ್ ಸಿಬ್ಬಂದಿ ಪಿ.ಸಿ 739 ಮಂಜಪ್ಪ ರವರು ಇಲಾಖಾ ಜೀಪಿನಲ್ಲಿ ಸದರಿ ಸ್ಥಳಕ್ಕೆ ಸಂಜೆ 04:30 ಗಂಟೆಗೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ಗುರುವಾಪುರ ಗ್ರಾಮದಲ್ಲಿರುವ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಮುಂಭಾಗ ಗುರುವಾಪುರ – ಮೇಲನಹಳ್ಳಿ ಟಾರ್ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ 1 ಮದ್ಯದ ಪ್ಯಾಕೇಟ್ ಅನ್ನು ಇಟ್ಟುಕೊಂಡು ಮತ್ತೊಂದು ಮದ್ಯದ ಪ್ಯಾಕೇಟ್ ಅನ್ನು ಓಪನ್ ಮಾಡಿ ಒಂದು ಪ್ಲಾಸ್ಟಿಕ್ ಲೋಟದಲ್ಲಿ ಹಾಕಿಕೊಂಡು ಪಕ್ಕದಲ್ಲಿ ಒಂದು ಲೀಟರ್ ನ ಒಂದು ವಾಟರ್ ಬಾಟಲ್ ಅನ್ನ ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದು ಆತನನ್ನು ಹಿಡಿದು ಸದರಿ ಸ್ಥಳಕ್ಕೆ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಆತನನ್ನು ವಿಚಾರ ಮಾಡಲಾಗಿ ಆತನ ಹೆಸರು ಶ್ರೀನಿವಾಸ ಬಿನ್ ಲೇಟ್ ರಾಮಯ್ಯ, 38 ವರ್ಷ, ಸರ್ಪ ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಗುರುವಾಪುರ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿರುತ್ತಾನೆ. ಸ್ಥಳದಲ್ಲಿ ಆತನ ಬಳಿ ಇದ್ದ 1) ರಾಜಾ ವಿಸ್ಕಿ 90 ಎಂ.ಎಲ್ ನ ಒಂದು ತುಂಬಿದ ಸೀಲ್ ಓಪನ್ ಮಾಡದ 1 ಟೆಟ್ರಾ ಪ್ಯಾಕೇಟ್ 2) ರಾಜಾ ವಿಸ್ಕಿ 90 ಎಂ.ಎಲ್ ನ ಒಂದು ಖಾಲಿ ಇರುವ ಒಂದು ಮದ್ಯದ ಟೆಟ್ರಾ ಪ್ಯಾಕೇಟ್ 3) ಒಂದು ಪ್ಲಾಸ್ಟಿಕ್ ಲೋಟ 4) ಒಂದು ಲೀಟರ್ ನ ಒಂದು ವಾಟರ್ ಬಾಟಲ್ ಹಾಗೂ ಆರೋಪಿಯನ್ನು ಪಂಚರ ಸಮಕ್ಷಮ ಸಂಜೆ 04:45 ಗಂಟೆಯಿಂದ ಸಂಜೆ 05:30 ಗಂಟೆಯವರೆಗೆ ಪಂಚನಾಮ ಕ್ರಮವನ್ನು ಕೈಗೊಂಡು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 56 guests online
Content View Hits : 302203