lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< January 2018 >
Mo Tu We Th Fr Sa Su
1 2 3 5 6 7
8 9 10 11 12 13 14
15 16 17 18 19 20 21
22 23 24 25 26 27 28
29 30 31        
Thursday, 04 January 2018
ಅಪರಾಧ ಘಟನೆಗಳು 04-01-18

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.01/2018, ಕಲಂ:78(iii) ಕೆ.ಪಿ.ಆಕ್ಟ್.

ದಿನಾಂಕ:03/01/2018 ರಂದು ಮದ್ಯಾಹ್ನ 12:05 ಗಂಟೆಗೆ ಠಾಣಾ ಸರಹದ್ದು ಗಸ್ತಿನಲ್ಲಿದ್ದ ಠಾಣಾ ಸಿಪಿಸಿ-476 ವಿನಯ್ ಕುಮಾರ್.ಎಂ.ಎಸ್. ರವರು ವಾಪಸ್ಸ್ ಠಾಣೆಗೆ ಹಾಜರಾಗಿ, ಈ ದಿನ ಠಾಣಾಧಿಕಾರಿಯವರು ನನಗೆ ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಗುಪ್ತ ಮಾಹಿತಿ ಸಂಗ್ರಹಿಸಿಕೊಂಡು ಬರುವಂತೆ ನೇಮಿಸಿದ್ದು, ಅದರಂತೆ ನಾನು ಮಿಡಿಗೇಶಿ, ನಲ್ಲೇಕಾಮನಹಳ್ಳಿ, ಸತ್ತಿಗಾನಹಳ್ಳಿ, ಬೆನಕನಹಳ್ಳಿ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ನಂತರ ಬೆಳಿಗ್ಗೆ  ಸುಮಾರು 11:00 ಗಂಟೆಯ ಸಮಯದಲ್ಲಿ ಮಿಡಿಗೇಶಿ ಹೋಬಳಿ, ಕಸಾಪುರ ಗ್ರಾಮಕ್ಕೆ ಹೋಗಿ ಗಸ್ತಿನಲ್ಲಿರುವಾಗ್ಗೆ, ಸದರಿ ಕಸಾಪುರ ಗ್ರಾಮದಲ್ಲಿನ ಹಾಲಿನ ಡೈರಿ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಆಸಾಮಿಯೊಬ್ಬನು ಸಾರ್ವಜನಿಕರನ್ನು ಗುಂಪು  ಸೇರಿಸಿಕೊಂಡು 01  ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಇದು ಮಟ್ಕಾ ಜೂಜಾಟ ಬನ್ನಿ ಬನ್ನಿ ನಿಮ್ಮ ನಿಮ್ಮ ಅದೃಷ್ಟದ ನಂಬರ್‌ಗಳನ್ನು ಬರೆಸಿಕೊಳ್ಳಿ ಎಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ನಂಬರ್‌ ಬರೆದುಕೊಳ್ಳುತ್ತಾ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದಾನೆಂತ ಮಾಹಿತಿ ಬಂದಿರುತ್ತೆ ಆದ್ದರಿಂದ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೆರೆಗೆ ಪ್ರಕರಣ ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 01/2018, ಕಲಂ 379 ಐಪಿಸಿ.

ದಿನಾಂಕ 03/01/2018 ರಂದು ಮಧ್ಯಾಹ್ನ 01-00 ಗಂಟೆಗೆ ಪಿರ್ಯಾದಿ ಪ್ರೇಮಕುಮಾರಿ ಕೋಂ ಲೇಟ್ ಪರ್ವತಯ್ಯ, ಕೆಂಕೆರೆ ಗೊಲ್ಲರಹಟ್ಟಿ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಹೆಸರಿನಲ್ಲಿ 2006 ನೇ ಮಾಡೆಲ್ ಸ್ಪ್ಲೆಂಡರ್ ಪ್ಲಸ್ ಕಪ್ಪು ಬಣ್ಣದ ವಾಹನ ಇದ್ದು, ದಿನಾಂಕ 31/12/2017 ರಂದು ಭಾನುವಾರ ಸಂಜೆ 07-30 ರ ಸಮಯದಲ್ಲಿ ನನ್ನ ಚಿಕ್ಕಪ್ಪನ ಮಗನಾದ ಗಜೇಂದ್ರನು ನನ್ನನ್ನು ಬಸ್ಸಿಗೆ ಹತ್ತಿಸಲು ಹುಳಿಯಾರು ರಾಂ ಗೋಪಾಲ್ ಸರ್ಕಲ್ ಗೆ ಬಂದೆವು. ನಂತರ ತುಮಕೂರಿಗೆ ಹೋಗಲು ರಾಂ ಗೋಪಾಲ್ ಸರ್ಕಲ್ ನಲ್ಲಿ ಬೈಕನ್ನು ನಿಲ್ಲಿಸಿ ನನ್ನನ್ನು ಬೆಂಗಳೂರು ಬಸ್ಸಿಗೆ ಹತ್ತಿಸಿದನು. ನಂತರ ನನ್ನ ತಮ್ಮ ಹಿಂತಿರುಗಿ ನೋಡಿದಾಗ ಆ ಜಾಗದಲ್ಲಿ ಬೈಕ್ ಇರಲಿಲ್ಲ. ಆದ್ದರಿಂದ ಅಲ್ಲಿ ಸುತ್ತ ಮುತ್ತ ವಿಚಾರಿಸಿದಾಗ ಬೈಕ್ ಕಳುವಾಗಿರುವ ವಿಚಾರ ಗೊತ್ತಾಯಿತು. ಈ ಬೈಕ್ ನಂಬರ್ ಕೆ.ಎ-44 ಇ-6637 ಆಗಿರುತ್ತದೆ. ಈ ಬೈಕಿನ ಅಂದಾಜು ಬೆಲೆ 30,000/- ರೂ ಆಗಿರುತ್ತೆ. ಆದ್ದರಿಂದ ಈ ಬಗ್ಗೆ ದೂರು ದಾಖಲಿಸಿ ನನ್ನ ಬೈಕನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ

 

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 01/2018 U/S 306 r/w 34 IPC

ದಿನಾಂಕ ; 03/01/2018 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದಿ ಶ್ರೀ ಜಗದೀಶ್ ಬಿನ್ ಎಸ್.ಜಿ. ಆರಾಧ್ಯ (70)  ಹೊನ್ನುಡಿಕೆ ಗ್ರಾಮ, ಗೂಳೂರು ಹೋಬಳಿ, ತುಮಕೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಎರಡನೇ ಮಗಳಾದ ಪಲ್ಲವಿ @ ರೂಪಾ ರವರನ್ನು ಮೃತ 42 ವರ್ಷದ ರಾಜಶೇಖರ್ @ ಮಂಜುನಾಥ್  ರವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ರಾಜಶೇಖರ್ @ ಮಂಜುನಾಥ್  ರವರು ತುಮಕೂರು ನಗರದ ಎಂಜಿ ರಸ್ತೆಯಲ್ಲಿ ಹನುಮಂತಾಚಾರ್ ರವರಿಗೆ ಸೇರಿದ ಅಂಗಡಿ ಮಳಿಗೆಯನ್ನು ಬಾಡಿಗೆ ಪಡೆದುಕೊಂಡು ಜಗದಾಂಬ  ಎಲೆಕ್ಟ್ರಿಕಲ್ಸ್ ಎಂಬ ಹೆಸರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. ಅಂಗಡಿ ಮಾಲೀಕರಾದ ಹನುಮಂತಾಚಾರ್ ಹಾಗೂ ಅವರ ಮಗನಾದ ಅರುಣ್ ಕುಮಾರ್ ಇಬ್ಬರು ಈಗ್ಗೆ ಸುಮಾರು 3-4 ತಿಂಗಳಿನಿಂದ ಅಂಗಡಿಯನ್ನು ಖಾಲಿ ಮಾಡುವಂತೆ   ಮೃತ ರಾಜಶೇಖರ್ @ ಮಂಜುನಾಥ್  ರವರಿಗೆ ಮಾನಸಿಕವಾಗಿ ಕಿರುಕುಳ ನೀಡಿ ಅಂಗಡಿಯನ್ನು ಖಾಲಿ ಮಾಡಲು ಆಗದಿದ್ದರೆ ಎಲ್ಲಾದರೂ ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಹೋಗಿ ಸಾಯಿ ಇಲ್ಲದೇ ಹೋದರೆ ನಮಗೆ ಗೊತ್ತು ಹೇಗೆ ಅಂಗಡಿ ಖಾಲಿ ಮಾಡಿಸಬೇಕೆಂದು ತುಮಕೂರಿನಲ್ಲಿ ಎಲ್ಲಿಯೂ ವ್ಯಾಪಾರ ಮಾಡುವಂತಿಲ್ಲ ಎಂದು ಬೆದರಿಕೆ ಹಾಕಿದ್ದರಿಂದ ದಿ: 02/01/2018 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ರಾಜಶೇಖರ್ @ ಮಂಜುನಾಥ್  ಅಂಗಡಿ ಮಾಲೀಕರ ಒತ್ತಡಕ್ಕೆ ಬೇಸತ್ತು ಯಾವುದೋ ಕ್ರಿಮಿನಾಷಕ ಔಷಧಿಯನ್ನು ಸೇವಿಸಿ ನರಳಾಡುತ್ತಿದ್ದು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ನಂತರ  ಹೆಚ್ಚಿನ ಚಿಕಿತ್ಸೆಗಾಗಿ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಸಹಾ ಚಿಕಿತ್ಸೆ ಫಲಕಾರಿಯಾಗದೆ ದಿ: 03/01/2018 ರಂದು ಬೆಳಗಿನ ಜಾವ  1-00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ

 

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.02/2018, ಕಲಂ: 279, 304(ಎ) ಐಪಿಸಿ ರೆ/ವಿ 134(ಎ & ಬಿ), 187 ಐ.ಎಂ.ವಿ.ಆಕ್ಟ್.

ದಿನಾಂಕ:03/01/2018 ರಂದು ಮದ್ಯಾಹ್ನ 03:00 ಗಂಟೆಗೆ ಪಿರ್ಯಾದಿ ನಾಗರಾಜು ಬಿನ್ ಮಲ್ಲಣ್ಣ, 59 ವರ್ಷ, ಗೊಲ್ಲರ ಜನಾಂಗ, ಜಿರಾಯ್ತಿ, ಮಾಡಗಾನಹಟ್ಟಿ ಗ್ರಾಮ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೇ, ನನ್ನ ದೊಡ್ಡಪ್ಪ ಕಲುವೀರಣ್ಣನ ಮಗ ಲೇ||ಈರಣ್ಣನ ಮಗನಾದ ಮಂಜುನಾಥನಿಗೆ ಇದೇ ಮಧುಗಿರಿ ತಾಲ್ಲೂಕು, ಮಿಡಿಗೇಶಿ ಹೋಬಳಿ ಪಡಸಾಲಹಟ್ಟಿ ಗ್ರಾಮದ ವಾಸಿಯಾದ ಈರತಮ್ಮಣ್ಣನ ಮಗಳು ಅರುಣ ರವರೊಂದಿಗೆ ಮದುವೆ ಮಾಡಲು ನಿಶ್ಚಯವಾಗಿದ್ದು. ಸದರಿ ಮದುವೆಯ ಲಗ್ನಪತ್ರಿಕೆಗಳನ್ನು ಪ್ರಿಂಟ್ ಮಾಡಿಸುವ ಸಲುವಾಗಿ ಬೀಗರೊಂದಿಗೆ ಮಾತನಾಡಿಕೊಂಡು ಬರುತ್ತೇವೆಂತ ನನಗೆ ಹೇಳಿ ನನ್ನ ಅಣ್ಣ ಲೇ||ಈರಣ್ಣನ ಹೆಂಡತಿಯಾದ 55 ವರ್ಷ ಕಂಬಕ್ಕ ಮತ್ತು ಆಕೆಯ ಮಗನಾದ 28 ವರ್ಷದ ಮಂಜುನಾಥ ಇಬ್ಬರು ಕೆಎ-64-ಇ-3318 ನೇ ದ್ವಿ ಚಕ್ರ ವಾಹನದಲ್ಲಿ ಈ ದಿನ ಅಂದರೆ ದಿನಾಂಕ:03/01/2018 ರಂದು ಬೆಳಿಗ್ಗೆ ಸುಮಾರು 11:30 ಗಂಟೆಗೆ ಮಾಡಗಾನಹಟ್ಟಿಯಿಂದ ಬಂದರು. ನಂತರ ಇದೇ ದಿನ ಮದ್ಯಾಹ್ನ ಸುಮಾರು 01:00 ಗಂಟೆಯ ಸಮಯದಲ್ಲಿ ಪಡಸಾಲಹಟ್ಟಿ ಗ್ರಾಮದ ತಮ್ಮಣ್ಣ ಎಂಬುವರು ನನಗೆ ಪೋನ್ ಮಾಡಿ, ಇದೇ ದಿನ ಮದ್ಯಾಹ್ನ ಸುಮಾರು 12:45 ಗಂಟೆಯ ಸಮಯದಲ್ಲಿ ನಾನು ನಮ್ಮ ಗ್ರಾಮದ ಗೇಟಿನಲ್ಲಿರುವ ಸೇತುವೆ ಮೇಲೆ ಕುಳಿತ್ತಿದ್ದಾಗ ನಿನ್ನ ಅಣ್ಣ ಲೇ||ಈರಣ್ಣ ರವರ ಹೆಂಡತಿ ಕಂಬಕ್ಕ ಮತ್ತು ಆಕೆಯ ಮಗ ಮಂಜುನಾಥ ಇಬ್ಬರು ಕೆಎ-64-ಇ-3318 ನೇ ದ್ವಿ ಚಕ್ರ ವಾಹನದಲ್ಲಿ ಮಧುಗಿರಿ-ಪಾವಗಡ ಮುಖ್ಯರಸ್ತೆಯಲ್ಲಿ ಮಧುಗಿರಿ ಕಡೆಯಿಂದ ಬಂದು ಪಡಸಾಲಹಟ್ಟಿ ಗ್ರಾಮದ ಗೇಟ್ ನಲ್ಲಿ ಬೈಕನ್ನು ತಿರುಗಿಸಿಕೊಳ್ಳಲು ಸದರಿ ಬೈಕಿನ ಬಲಭಾಗದ ಇಂಡಿಕೇಟರನ್ನು ಹಾಕಿಕೊಂಡು ಹಾಗೂ ಕೈಸನ್ನೆ ತೋರಿಸುತ್ತಾ ಬೈಕನ್ನು ಪಡಸಾಲಹಟ್ಟಿ ಕಡೆ ತಿರುಗಿಸಿಕೊಳ್ಳುತ್ತಿದ್ದಾಗ ಅದೇ ರಸ್ತೆಯಲ್ಲಿ ಅದೇ ಸಮಯಕ್ಕೆ ಮಧುಗಿರಿ ಕಡೆಯಿಂದ ಬೈಕಿನ ಹಿಂದೆ ಬರುತ್ತಿದ್ದ ಕೆಎ-05-ಎಂ.ಜೆ-4827 ನೇ ಕಾರಿನ ಚಾಲಕ ತನ್ನ ಕಾರನ್ನು ತುಂಬಾ ಜೋರಾಗಿ, ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಬಂದು ಕಂಬಕ್ಕ ಮತ್ತು ಮಂಜುನಾಥ ಬರುತ್ತಿದ್ದ ಬೈಕಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ ಪರಿಣಾಮ ಕಂಬಕ್ಕ ರವರ ತಲೆಗೆ, ಬಲೈ ಕೈಗೆ ಹಾಗೂ ಮೈಕೈಗೆ ತೀರ್ವ ಸ್ವರೂಪದ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಹಾಗೂ ಬೈಕ್ ಓಡಿಸುತ್ತಿದ್ದ ಮಂಜುನಾಥನ ತಲೆಗೆ ಹಾಗೂ ಮೈಕೈಗೆ ತೀರ್ವ ಸ್ವರೂಪದ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿರುತ್ತವೆ ಆತನನ್ನು 108 ಆಂಬುಲೆನ್ಸ್ ನಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದೇವೆ ಎಂತ ನೀವು ಬೇಗ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಬನ್ನಿ ಎಂತ ವಿಷಯ ತಿಳಿಸಿದರು. ವಿಷಯ ತಿಳಿದ ಕೂಡಲೇ ನಾನು ಮತ್ತು ನಮ್ಮ ಸಂಬಂಧಿ ನಾಗಣ್ಣ ಇಬ್ಬರು ಮಧುಗಿರಿ ಸರ್ಕಾರಿ ಆಸ್ಪತ್ರೆಯ ಬಳಿ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ಅಷ್ಟರಲ್ಲಿ ಗಾಯಗೊಂಡಿದ್ದ ಮಂಜುನಾಥನಿಗೆ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಅದೇ ಆಂಬುಲೆನ್ಸ್ ನಲ್ಲಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ನಾಗಣ್ಣನ ಜೊತೆಯಲ್ಲಿ ಕಳುಹಿಸಿಕೊಟ್ಟೆನು. ಇದಾದ ಸುಮಾರು ಹೊತ್ತಿನ ನಂತರ ಗಾಯಾಳು ಮಂಜುನಾಥನ ಜೊತೆ ಆಂಬುಲೆನ್ಸ್ ನಲ್ಲಿ ಹೋಗಿದ್ದ ನಮ್ಮ ಸಂಬಂಧಿ ನಾಗಣ್ಣ ಎಂಬುವನು ಪೋನ್ ಮಾಡಿ ಗಾಯಾಳು ಮಂಜುನಾಥ ನನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಾಗ ವೈದ್ಯರು ಮಂಜುನಾಥನನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುತ್ತಾನೆಂತ ತಿಳಿಸಿದರು ಎಂತ ಹೇಳಿದನು. ಮಂಜುನಾಥನ ಶವ ತುಮಕೂರು ಸರ್ಕಾರಿ ಶವಾಗಾರದಲ್ಲಿರುತ್ತೆ,  ಹಾಗೂ ಕಂಬಕ್ಕನ ಶವವನ್ನು ನಮ್ಮ ಸಂಬಂಧಿಕರು ಯಾವುದೋ ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಇಟ್ಟಿರುತ್ತಾರೆ. ಆದ್ದರಿಂದ ಈ ದಿನ ಮದ್ಯಾಹ್ನ 12:45 ಗಂಟೆಯ ಸಮಯದಲ್ಲಿ ಮಂಜುನಾಥ ಮತ್ತು ಕಂಬಕ್ಕ ಬರುತ್ತಿದ್ದ ಕೆಎ-64-ಇ-3318 ನೇ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ಕಂಬಕ್ಕ ಮತ್ತು ಮಂಜುನಾಥ ರವರ ಸಾವಿಗೆ ಕಾರಣನಾದ ಕೆಎ-05-ಎಂ.ಜೆ-4827 ನೇ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 35 guests online
Content View Hits : 302186