lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< January 2018 >
Mo Tu We Th Fr Sa Su
1 2 4 5 6 7
8 9 10 11 12 13 14
15 16 17 18 19 20 21
22 23 24 25 26 27 28
29 30 31        
Wednesday, 03 January 2018
ಅಪರಾಧ ಘಟನೆಗಳು 03-01-18

ಅಮೃತೂರು ಪೊಲೀಸ್ ಠಾಣಾ ಮೊನಂ-03/2018 ಕಲಂ-323, 324, 504, 506 ರೆ/ವಿ 34 ಐಪಿಸಿ.

ದಿನಾಂಕ: 02-01-2018 ರಂದು 20-00 ಗಂಟೆಯಲ್ಲಿ ಪಿರ್ಯಾದಿ ನರಸಿಂಹಮೂರ್ತಿ.ಎ.ವಿ ಬಿನ್ ವೆಂಕಟಾಚಲಯ್ಯ, 38 ವರ್ಷ, ಆಟೋ ಚಾಲಕ, ಕೊಡಗೀಹಳ್ಳಿ ಬಡಾವಣೆ, ಅಮೃತೂರು ಹೋಬಳಿ, ಕುಣಿಗಲ್ ತಾಲೋಕ್ ಹಾಲಿ ವಾಸ: ನಂ-219, ಕೆ.ಕೆ ರಸ್ತೆ, ಟಿ ದಾಸರಹಳ್ಳಿ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನಲ್ಲಿ ನನ್ನ ಕುಟುಂಬ ಸಮೇತ ವಾಸವಾಗಿದ್ದೇನೆ. ನಾನು ವಾಸವಿರುವ ಟಿ.ದಾಸರಹಳ್ಳಿಯಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ವಾಸವಿದ್ದ ಆರತಿ.ಎನ್.ಎಸ್ ತಂದೆ ನಿಂಗಯ್ಯರವರು ನನಗೆ ಪರಿಚಯವಾಗಿದ್ದು, ನನ್ನ ಹತ್ತಿರ ಕಷ್ಟಕ್ಕಾಗಿ ಹಣ ಪಡೆದಿದ್ದರು. ಈ ಸಂಬಂದ ನಗೆ ಚೆಕ್ ನೀಡಿದ್ದರು. ಹಣ ವಾಪಸ್ ಕೊಡದೇ ಇದ್ದುದರಿಂದ ನಾನು ಬೆಂಗಳೂರಿನಲ್ಲಿ ಚೆಕ್ ಬೌನ್ಸ್ ಕೇಸು ಹಾಕಿರುತ್ತೇನೆ. ನಾನು ಚೆಕ್ ಬೌನ್ಸ್ ಕೇಸು ಹಾಕಿರುವುದರಿಂದ ನನ್ನ ಮೇಲೆ ಆರತಿ ದ್ವೇಷ ಮಾಡುತ್ತಿದ್ದು, ದಿನಾಂಕ: 01-01-2018 ರಂದು ಸೋಮವಾರ ರಾತ್ರಿ 8-30 ಗಂಟೆ ಸಮಯದಲ್ಲಿ ನಾನು ನನ್ನ ಹೆಂಡತಿ ಶೋಭರೊಂದಿಗೆ ಎಡೆಯೂರು ದೇವಸ್ಥಾನಕ್ಕೆ ಹೋಗಿ ರಾತ್ರಿ 8-30 ಕ್ಕೆ ವಾಪಸ್ ಬರುವಾಗ ಎಡೆಯೂರು ಮಾರ್ಕೋನಹಳ್ಳಿ ಬಸವೇಶ್ವರ ದೇವಸ್ಥಾನದ ಮುಂಭಾಗ ರಸ್ತೆಯಲ್ಲಿ ನಾನು ಆಟೋದಲ್ಲಿ ಬರುತ್ತಿರುವಾಗ ಆರತಿ ತನ್ನ ಅಣ್ಣಂದಿರಾದ ಯೋಗೇಶ, ರವಿ, ನಿಂಗಯ್ಯ ಇವರೊಂದಿಗೆ ರಸ್ತೆಯಲ್ಲಿ ನಿಂತಿದ್ದರು. ನನ್ನ ಆಟೋ ನಿಲ್ಲಿಸುವಂತೆ ಕೈ ತೋರಿಸಿದ್ದರು. ನಾನು ಆಟೋ ನಿಲ್ಲಿಸಿದ ತಕ್ಷಣ ಆರತಿ ಬೋಳಿ ಮಗನೆ , ಸೂಳೆ ಮಗನೆ ಎಂದು ಕೆಟ್ಟ ಮಾತುಗಳಿಂದ ಬೈದಿದ್ದು, ನನ್ನ ಕಣ್ಣಿಗೆ ಖಾರದ ಪುಡಿ ಎರಚಿದರು. ಯೋಗೇಶ ನನ್ನ ಎಡ ಕೈಗೆ ಮುಂಗೈಗೆ ಮೇಲು ಭಾಗದಲ್ಲಿ ಬ್ಲೇಡಿನಿಂದ ಕುಯ್ದು ರಕ್ತಗಾಯಪಡಿಸಿದರು. ರವಿ ಮತ್ತು ನಿಂಗಯ್ಯ ಕೈಗಳಿಂದ ನನ್ನ ಮುಖಕ್ಕೆ ಗುದ್ದಿದರು ಹಾಗೂ ನನ್ನ ಹೊಟ್ಟೆಗೆ ಕಾಲಿನಿಂದ ಒದ್ದರು. ನನಗೆ ಆರತಿ, ಯೋಗೇಶ, ರವಿ, ನಿಂಗಯ್ಯ, ಮಗನೆ ಚೆಕ್ಕುಬೌನ್ಸ್ ಕೇಸ್ ವಾಪಸ್ಸು ತೆಗೆದುಕೊಳ್ಳದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ನಿನ್ನನ್ನು ಮುಗಿಸುತ್ತೇನೆ ಅಂತ ಪ್ರಾಣ ಬೆದರಿಕೆ ಹಾಕಿದ್ದರು. ನನ್ನ ಪತ್ನಿ ಶೋಭಳೊಂದಿಗೆ ನಾನು ಎಡೆಯೂರು ಆಸ್ಪತ್ರೆಗೆ ತೆರಳಿ  ನನ್ನ ಎಡ ಕೈಯಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಪಡೆದಿರುತ್ತೇನೆ. ದಿನಾಂಕ: 02/01/2018 ರಂದು ನನಗೆ ಹೊಟ್ಟೆ ನೋವು ಇದ್ದುದರಿಂದ ಅಮೃತೂರು ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದಿರುತ್ತೇನೆ. ರವಿ, ನಿಂಗಯ್ಯ ನನಗೆ ಹೊಟ್ಟೆಗೆ ಒದ್ದಿದ್ದರಿಂದ ನನಗೆ ಹೊಟ್ಟೆ ನೋವಾಗಿರುತ್ತೆ. ದಿನಾಂಕ : 01/01/2018 ರಂದು ರಾತ್ರಿ 08:30 ಗಂಟೆಗೆ ನಾನು ನನ್ನ ಆಟೋದಲ್ಲಿ ಎಡೆಯೂರು ಮಾರ್ಕೋನಹಳ್ಳಿ ರಸ್ತೆಯಲ್ಲಿ ಬರುತ್ತಿರುವಾಗ ಬ್ಲೆಡುನಿಂದ ಹಲ್ಲೆ ಮಾಡಿ ರಕ್ತ ಗಾಯಪಡಿಸಿ ನನ್ನ ಹೊಟ್ಟೆಗೆ ಕಾಲಿನಿಂದ ಒದ್ದು ನನಗೆ ಕೆಟ್ಟ ಕೆಟ್ಟ ಮಾತುಗಳಿಂದ ಬೈಯಿದು ಪ್ರಾಣ ಬೆದರಿಕೆ ಹಾಕಿದ ಆರತಿ, ಯೋಗೇಶ, ರವಿ, ನಿಂಗಯ್ಯ, ಬೆಂಗಳೂರು ವಾಸಿಗಳು ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿವಸ ತಡವಾಗಿ ಬಂದು ದೂರು ನೀಡಿದ್ದೇನೆ ಎಂದು ಇತ್ಯಾದಿಯಾಗಿ ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

 

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊನಂ 01/18 ಕಲಂ 279,337 ಐಪಿಸಿ

ದಿನಾಂಕ:02/01/2018 ರಂದು ಮಧ್ಯಾಹ್ನ 02:30 ಗಂಟೆಗೆ ಪಿರ್ಯಾದಿ ನಾರಾಯಣಪ್ಪ ಬಿನ್ ದಾಸಪ್ಪ, ಹುಲಿಕುಂಟೆ ಹೋಬಳಿ,ರಂಗಾಪುರ ಗ್ರಾಮ,ಸಿರಾ ತಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ಪಿರ್ಯಾದಿಯ ಚಿಕ್ಕಮ್ಮನ ಮಗನಾದ ರಾಜಣ್ಣ ಬಿನ್ ಲೇಟ್ ದೊಡ್ಡನರಸಪ್ಪ,ಸುಮಾರು 30 ವರ್ಷ, ರವರು  ಕೆಲಸದ ನಿಮಿತ್ತ ಕದಿರೇಹಳ್ಳಿಗೆ ಹೋಗುವಾಗ ಬರಗೂರು-ಕದಿರೇಹಳ್ಳಿ ಮದ್ಯೆ ದಿನಾಂಕ:01/01/2018 ರಂದು ಸಂಜೆ 05:00 ಗಂಟೆ ಸಮಯದಲ್ಲಿ KA-64-L-9930 ಮೋಟಾರ್ ಸೈಕಲ್ ನಲ್ಲಿ ಚಾಲನೆ ಮಾಡುವಾಗ ಎದುರಿಗೆ ಬಂದ ಇನ್ನೊಂದು ದ್ವಿಚಕ್ರವಾಹನವಾದ KA-06-EW-0117 ಹೀರೋ ಹೆಚ್ ಎಫ್ ಡಿಲೆಕ್ಸ್ ಮೋಟಾರ್ ಸೈಕಲ್ ಸವಾರ ತನ್ನ ಮೋಟಾರ್ ಸೈಕಲ್ ನ್ನು  ಅತಿವೆಗ ಮತ್ತು ಅಜಾಗರೂಕತೆಯಿಂದ ಪಿರ್ಯಾದಿಯ ತಮ್ಮನ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ರಾಜಣ್ಣರವರಿಗೆ  ತೀವ್ರ ತರದ ಮತ್ತು ರಕ್ತ ಗಾಯಗಳಾಗಿ ಪ್ರಜ್ಞಾಹೀನತೆಯಲ್ಲಿ ಇದ್ದು ಆತನ ಮೋಟಾರ್ ಸೈಕಲ್ ನ ಹಿಂಭಾಗ ಕುಳಿತಿದ್ದ ಲಕ್ಷ್ಮೀಕಾಂತನಿಗೂ ಸಹ ತಲೆಗೆ,ಮುಖ,ಮತ್ತು ಕೈಕಾಲುಗಳಿಗೆ ಪೆಟ್ಟುಗಳು ಬಿದ್ದಿದ್ದು ಅಲ್ಲೇ ಇದ್ದ ಲಕ್ಷ್ಮಪ್ಪ ಮತ್ತು ಕುಮಾರರವರು ಸ್ಥಳಕ್ಕೆ ಬಂದು ಗಾಯಾಳುಗಳಿಗೆ ಉಪಚರಿಸಿ ಸ್ಥಳಕ್ಕೆ ಬಂದ 108 ವಾಹನದಲ್ಲಿ ಸಿರಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ವೈಧ್ಯರ ಸಲಹೆಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸಿ ಈ ದಿನ ದಿನಾಂಕ:02/01/2018 ರಂದು ಠಾಣೆಗೆ ತಡವಾಗಿ ಬಂದು ಅಪಘಾತಪಡಿಸಿದ KA-06-EW-0117 ಈ ಮೋಟಾರ್ ಸೈಕಲ್ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊನಂ 02/18 ಕಲಂ 379 ಐಪಿಸಿ 21,44 ಎಂ ಎಂ ಆರ್ ಡಿ ಆಕ್ಟ್  ಮತ್ತು 44  ಕೆ ಎಂ ಎಂ ಸಿ ಆಕ್ಟ್

ದಿನಾಂಕ:02-01-2018 ರಂದು ಮದ್ಯಾಹ್ನ 02:30ಗಂಟೆ ಸಮಯದಲ್ಲಿ ಪಿರ್ಯಾದಿ  ಚಂದ್ರಶೇಖರ್. ಪಿ.ಎಸ್.ಐ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ ರವರು ಠಾಣಾ ಸರಹದ್ದಿನ ಹಳ್ಳಿಗಳ ಕಡೆ  ಗಸ್ತಿನಲ್ಲಿದ್ದಾಗ  ಪಿರ್ಯಾದಿ ರವರಿಗೆ  ಬಾತ್ಮೀದಾರರು ಕರೆ ಮಾಡಿ ಠಾಣಾ ವ್ಯಾಪ್ತಿಯ ಹೊಸಕೋಟೆ ಗ್ರಾಮದ ಪಿ ವಿ ಲೈನ್ ಫವರ್  ಸೊಲಾರ್ ಪಾರ್ಕ್ ನ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಮರಳನ್ನು ದಾಸ್ತಾನು ಮಾಡಿರುತ್ತಾರೆ ಎಂದು ಬಂದ  ಖಚಿತ ಬಾತ್ಮೀ ಮೇರೆಗೆ ಪಿರ್ಯಾದಿ ರವರು ಠಾಣೆಯ ಬಳಿ ಪಂಚರನ್ನು ಬರಮಾಡಿಕೊಂಡು ಪಂಚರು ಹಾಗೂ  ಸಿಬ್ಬಂದಿಯೊಂದಿಗೆ ಇಲಾಖಾ ಜೀಪಿನಲ್ಲಿ ಮದ್ಯಾಹ್ನ 03:30 ಗಂಟೆಗೆ ಹೊಸಕೋಟೆ ಗ್ರಾಮದ ಪಿ ವಿ ಲೈನ್ ಮಿನಿ ಸೋಲಾರ್ ಬಳಿ ಜೀಪನ್ನು ನಿಲ್ಲಿಸಿ ಹೋಗಿ ನೋಡಲಾಗಿ  ಪಿ ವಿ ಫವರ್ ಮಿನಿ ಸೋಲಾರ್  ನಿರ್ಮಾಣದ ಕಾಮಗಾರಿ ಮಾಡುತ್ತಿರುವ ಸ್ಥಳದಲ್ಲಿ ಅಲ್ಲಲ್ಲಿ ಅರ್ಧಟ್ರ್ಯಾಕ್ಟರ್ ಲೋಡ್ ಮರಳು ಮತ್ತು ಕಾಲು ಟ್ರ್ಯಾಕ್ಟರ್ ಲೋಡ್ ನಷ್ಠು ಮರಳನ್ನು ಅಲ್ಲಲ್ಲಿ ಗುಡ್ಡೆಗಳನ್ನು ಹಾಕಿರುತ್ತಾರೆ. ಇವುಗಳನ್ನು ಏಣಿಸಿ ನೋಡಲಾಗಿ ಸುಮಾರು 57ಮರಳಿನ ಗುಡ್ಡೆಗಳು ಇರುತ್ತವೆ.  ಈ ಎಲ್ಲಾ ಮರಳಿನ ಗುಡ್ಡೆಗಳಿಂದ ಸುಮಾರು 10 ರಿಂದ 15 ಟ್ರ್ಯಾಕ್ಟರ್ ಲೋಡ್ ನಷ್ಠು ಮರಳನ್ನು ದಾಸ್ತಾನು ಮಾಡಿರುವುದು ಕಂಡುಬಂದಿರುತ್ತದೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ  ಮದ್ಯಾಹ್ನ 04:00 ಗಂಟೆಯಿಂದ 05:00 ಗಂಟೆಯವರೆಗೆ ಪಂಚನಾಮೆ ಮಾಡಿ ಪಂಚನಾಮೆ ಮೂಲಕ ಸುಮಾರು 10 ರಿಂದ 15 ಟ್ರ್ಯಾಕ್ಟರ್ ಲೋಡ್ ನಷ್ಠು  ಇರುವ ಮರಳನ್ನು ಮುಂದಿನ ನಡವಳಿಕೆ ಬಗ್ಗೆ ವಶಕ್ಕೆ ಪಡೆದುಕೊಂಡಿರುತ್ತೆ. ಅಲ್ಲಲ್ಲಿ ದಾಸ್ತಾನು ಮಾಡಿರುವ ಮರಳುಗುಡ್ಡೆಗಳಿಂದ ಶ್ಯಾಂಪಲ್ ಗಾಗಿ ಪಡೆದು ಎರಡು ಬಿಳಿ ಚೀಲದಲ್ಲಿ ಶೇಖರಿಸಿ ಇವುಗಳಿಗೆ ಎ ಎಂ ಎಂಬ ಅಕ್ಷರದಿಂದ ಸೀಲು ಮಾಡಿ ಮುಂದಿನ ನಡವಳಿಕೆ ಬಗ್ಗೆ ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡಿರುತ್ತೆ. ಪಿ ವಿ ಲೈನ್ ಫವರ್ ಮಿನಿ ಸೊಲಾರ್  ಕಂಪನಿಯವರು  ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳನ್ನು ಯಾರಿಂದಲೊ ಕಳ್ಳತನದಿಂದ ತರಿಸಿ  ಮರಳನ್ನು ತಂದು ಶೇಖರಿಸಿರುವುದು ಕಂಡುಬಂದಿರುತ್ತೆ. ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳು ಶೇಖರಣೆ ಮಾಡಿರುವ ಪಿ ವಿ ಲೈನ್ ಮಿನಿ ಸೊಲಾರ್ ನ ಕಂಟ್ರ್ಯಾಕ್ಟರ್ಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಪಂಚನಾಮೆಯೊಂದಿಗೆ  ಸಂಜೆ 05:50ಗಂಟೆಗೆ ವಾಪಸ್ ಠಾಣೆಗೆ ಬಂದು ಕ್ರಮ  ಜರುಗಿಸಲು  ಸೂಚಿಸಿದ್ದನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ 01/2018 ಕಲಂ: 174 ಸಿ.ಆರ್.ಪಿ.ಸಿ

 

ದಿನಾಂಕ:02/01/2017 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿ ಜಗಧೀಶ್ ರಾವ್ ಕೆ.ಆರ್ ಬಿನ್ ಲೇಟ್ ರಾಮರಾವ್ ಕೆ.ಎಸ್ 37 ವರ್ಷ, ಮಾವಿನತೋಪು, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ಹಿರಿಯಣ್ಣನಾದ ಆರ್ ಸ್ವಾಮಿರಾವ್ (45 ವರ್ಷ) ರವರು ಆನೇಕಲ್ ಡಿಪೋದಲ್ಲಿ ಕೆ.ಎಸ್.ಆರ್.ಟಿ.ಸಿ ಚಾಲಕನಾಗಿದ್ದು, ಇವರ ಸಂಸಾರ ತಿಪಟೂರು ಟೌನ್ ಮಾವಿನತೋಪುನಲ್ಲಿ ಇದ್ದು, ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಇವನು 2 ದಿನಗಳ ಹಿಂದೆ ರಜೆಹಾಕಿ ಬಂದು ಮನೆಯಲ್ಲಿ ಇದ್ದು, ಅವನಿಗೆ ಮೊದಲಿನಿಂದಲೂ ಹೊಟ್ಟೆನೋವು ಬರುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಕೊಡಿಸಿದರೂ ಸಹ ಗುಣಮುಖವಾಗಿರಲಿಲ್ಲ. ಈಗಿರುವಾಗ ದಿನಾಂಕ: 02/01/2018 ರಂದು ಸುಮಾರು ಮಧ್ಯಾಹ್ನ 12-30 ಗಂಟೆಯಲ್ಲಿ ನಮ್ಮ ಅಣ್ಣನ ಹೆಂಡತಿ ಮತ್ತು ಮಕ್ಕಳು ಟೌನ್ ಒಳಗೆ ಹೋಗಿದ್ದು, ಮನೆಯಲ್ಲಿ ನಮ್ಮ ಅಣ್ಣ ಒಬ್ಬನೇ ಇದ್ದನು. ಈ ವೇಳೆಯಲ್ಲಿ ಈತನಿಗೆ ಹೊಟ್ಟೆನೋವು ಬರುತ್ತಿದ್ದರಿಂದ ಬಾಧೆ ತಾಳಲಾರದೇ ಯಾವುದೋ ಕ್ರಿಮಿನಾಶಕ ಔಷಧಿಯನ್ನು ಕುಡಿದು ಒದ್ದಾಡುತ್ತಿದ್ದಾಗ ಮನೆಗೆ ಬಂದ ನಮ್ಮ ಅತ್ತಿಗೆ ಕಮಲಾಬಾಯಿ, ನೋಡಿ ಕೂಗಾಡಿದಾಗ ನಾನು ಸಹ ಅಕ್ಕಪಕ್ಕದವರ ಜೊತೆಯಲ್ಲಿ ಹೋಗಿ ನೋಡಿದೆ. ನಮ್ಮ ಅಣ್ಣ ವಿಷ ಕುಡಿದಿದ್ದು, ವಿಚಾರ ಮಾಡಲಾಗಿ ಹೊಟ್ಟೆನೋವು ತಾಳಲಾರದೇ ಕ್ರಿಮಿನಾಶಕ ಕುಡಿದಿರುವುದಾಗಿ ತಿಳಿಸಿದ್ದು, ನಂತರ ಕೂಡಲೇ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3-00 ಗಂಟೆಗೆ ಮೃತಪಟ್ಟಿರುತ್ತಾರೆ. ಶವವು ಆಸ್ಪತ್ರೆಯ ಶವಾಗಾರದಲ್ಲಿ ಇದ್ದು, ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಸಿ.ಎಸ್.ಪುರ ಠಾಣಾ  ಯು.ಡಿ.ಆರ್ ನಂ. 01/2018. ಕಲಂ:174 ಸಿ.ಆರ್.ಪಿ.ಸಿ

ದಿನಾಂಕ:02.01.2018 ರಂದು ಬೆಳಗ್ಗೆ 9.30 ಗಂಟೆಗೆ ಫಿರ್ಯಾದಿ ಪರಮ್ಮ ಕೊಂ ಪಾನ್ ಪರಾಗ್ ಮಂಜುನಾಥ್ ಎಂಬುವರು ಠಾಣೆಗೆ ಹಾಜರಾಗಿ ಕೊಟ್ಟ  ದೂರಿನ ಸಾರಾಂಶವೆಂಧರೆ, ನನಗೆ ಈಗ್ಗೆ 38 ವರ್ಷಗಳ ಹಿಂದೆ ಮೃತ ನನ್ನ  ಗಂಡ ಪಾನ್ ಪರಾಗ್  ಮಂಜುನಾಥ್ ಎಂಬುವರೊಂದಿಗೆ ಮದುವೆಯಾಗಿದ್ದು, 3 ಜನ ಹೆಣ್ಣು ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿರುತ್ತೆ. ಈಗ್ಗ 15 ವರ್ಷಗಳ ಹಿಂದೆ  ನನ್ನ ಗಂಡ ನನ್ನ  & ನನ್ನ  ಮಕ್ಕಳನ್ನು ಬಿಟ್ಟು  ಹೊರಗಡೆ ಮಗ್ಗ ಕೆಲಸಕ್ಕೆ  ಹೋಗಿದ್ದರು, ಎಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದಿರಲಿಲ್ಲಾ, ಮೂರ ಜನ ಹೆಣ್ಣು ಮಕ್ಕಳಿಗೂ ಮದುವೆ ಮಾಡಿ ಕೊಟ್ಟಿರುತ್ತೇನೆ, ಮದುವೆ  ಕಾರ್ಯಕ್ಕೆ ಸಹ ಬಂದಿರುವುದಿಲ್ಲಾ, ನಮ್ಮನ್ನು ಬಿಟ್ಟು ಹೋದ ಮೇಲೆ ಚಂದ್ರಾಂಬ ಎಂಬಾಕೆಯನ್ನು ಮದುವೆ ಮಾಡಿಕೊಂಡಿರುತ್ತಾರೆ, ಇವರಿಗೆ ಶಂಕರಪ್ಪ ಎಂಬ ಗಂಡು ಮಗನಿದ್ದು, ಇವರ ಊರು  ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕು ಕುರುವಂಕ ಎಂಬ  ಗ್ರಾಮ ಎಂತ  ವಿಚಾರ  ಗೊತ್ತು, ನನ್ನ ಗಂಡ  ಇವರ ಜೊತೆ ಇದ್ದರೂ ಎಂಬುದು ನನಗೆ ಗೊತ್ತಿಲ್ಲಾ, ಎಲ್ಲೆಂದರಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸಿಸುತ್ತಿದ್ದರು ಎಂಬುದು ಗೊತ್ತು, ನಮ್ಮನ್ನು ಬಿಟ್ಟು ಹೋದ ಮೇಲೆ ಈಗ್ಗೆ 3 ತಿಂಗಳ   ಹಿಂಧೆ ಎಲ್ಲಿಯೋ ಇದ್ದವರು ವಾಪಸ್ಸು ಕಲ್ಲೂರಿಗೆ  ಬಂದು ಸಂತೆ ಮೈದಾನದಲ್ಲಿ ಇದ್ದು, ನಮ್ಮ ಮನೆಗೆ ಬಂದಿರುವುದಿಲ್ಲಾ, ಇವರಿಗೆ ವಯಸ್ಸಾಗಿದ್ದು, ಅಲ್ಲಿಯೇ ಊಟ ತಿಂಡಿ  ಮಾಡಿಕೊಂಡು ಇದ್ದರು, ಇವರಿಗೆ ವಯಸ್ಸಾಗಿದ್ದು ನಡೆದಾಡುತ್ತಿರುವುದಿಲ್ಲಾ, ಮತ್ತು ಲಕ್ವ  ಹೊಡೆದಿದ್ದರಿಂದ ದೇಕಾಡುತ್ತಿದ್ದರು, ಈಗಿರುವಲ್ಲಿ ದಿನಾಂಕ:01.01.2018 ರಂದು ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಬಹಿರ್ದೆಸೆಗೆಂದು ಕಲ್ಲೂರು  ಕೆರೆಯ ಬಳಿ ನೀರು ಮುಟ್ಟಲು  ಹೋದಾಗ ಲಕ್ವ ಹೊಡೆದಿದ್ದ  ಕಾರಣ ಆಯ ತಪ್ಪಿ ಕೆರೆಯ ಹೊಂಡದ ನೀರಿಗೆ ಬಿದ್ದು, ನೀರು ಕುಡಿದು  ಉಸಿರುಗಟ್ಟಿ ಮೃತಪಟ್ಟಿರುತ್ತಾರೆ, ಅವೇಳೆಯಾದ್ದರಿಂದ ಯಾವ ಸಮಯದಲ್ಲಿ ಹೋದರೆಂದು ತಿಳಿದಿರುವುದಿಲ್ಲಾ, ದಿನಾಂಕ:02.01.2018 ರಂದು ಬೆಳಗ್ಗೆ 9.00 ಗಂಟೆಗೆ ನಿನ್ನ  ಗಂಡ ಪಾನ್ ಪರಾಗ್  ಮಂಜುನಾಥ್ ರವರು ಕಲ್ಲೂರು ಕೆರೆಯ ಹೊಸದಾಗಿ ಮಣ್ಣು ತೆಗೆದಿರುವ ಹೊಂಡದಲ್ಲಿ ಬಿದ್ದು ಮೃತರಾಗಿರುತ್ತಾರೆ , ನನ್ನ  ಗಂಡನ ಮರಣ ಕಾರಣದಲ್ಲಿ  ಬೇರೆ ಯಾವುದೇ ಅನುಮಾನ ಇರುವುದಿಲ್ಲಾ  ಎಂಧು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ  ಸಿ.ಎಸ್.ಪುರ ಠಾಣಾ  ಯು.ಡಿ.ಆರ್ ನಂ. 01/2018. ಕಲಂ:174 ಸಿ.ಆರ್.ಪಿ.ಸಿ  ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ 01/2018 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ:02/01/2017 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿ ಜಗಧೀಶ್ ರಾವ್ ಕೆ.ಆರ್ ಬಿನ್ ಲೇಟ್ ರಾಮರಾವ್ ಕೆ.ಎಸ್ 37 ವರ್ಷ, ಮಾವಿನತೋಪು, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ಹಿರಿಯಣ್ಣನಾದ ಆರ್ ಸ್ವಾಮಿರಾವ್ (45 ವರ್ಷ) ರವರು ಆನೇಕಲ್ ಡಿಪೋದಲ್ಲಿ ಕೆ.ಎಸ್.ಆರ್.ಟಿ.ಸಿ ಚಾಲಕನಾಗಿದ್ದು, ಇವರ ಸಂಸಾರ ತಿಪಟೂರು ಟೌನ್ ಮಾವಿನತೋಪುನಲ್ಲಿ ಇದ್ದು, ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಇವನು 2 ದಿನಗಳ ಹಿಂದೆ ರಜೆಹಾಕಿ ಬಂದು ಮನೆಯಲ್ಲಿ ಇದ್ದು, ಅವನಿಗೆ ಮೊದಲಿನಿಂದಲೂ ಹೊಟ್ಟೆನೋವು ಬರುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಕೊಡಿಸಿದರೂ ಸಹ ಗುಣಮುಖವಾಗಿರಲಿಲ್ಲ. ಈಗಿರುವಾಗ ದಿನಾಂಕ: 02/01/2018 ರಂದು ಸುಮಾರು ಮಧ್ಯಾಹ್ನ 12-30 ಗಂಟೆಯಲ್ಲಿ ನಮ್ಮ ಅಣ್ಣನ ಹೆಂಡತಿ ಮತ್ತು ಮಕ್ಕಳು ಟೌನ್ ಒಳಗೆ ಹೋಗಿದ್ದು, ಮನೆಯಲ್ಲಿ ನಮ್ಮ ಅಣ್ಣ ಒಬ್ಬನೇ ಇದ್ದನು. ಈ ವೇಳೆಯಲ್ಲಿ ಈತನಿಗೆ ಹೊಟ್ಟೆನೋವು ಬರುತ್ತಿದ್ದರಿಂದ ಬಾಧೆ ತಾಳಲಾರದೇ ಯಾವುದೋ ಕ್ರಿಮಿನಾಶಕ ಔಷಧಿಯನ್ನು ಕುಡಿದು ಒದ್ದಾಡುತ್ತಿದ್ದಾಗ ಮನೆಗೆ ಬಂದ ನಮ್ಮ ಅತ್ತಿಗೆ ಕಮಲಾಬಾಯಿ, ನೋಡಿ ಕೂಗಾಡಿದಾಗ ನಾನು ಸಹ ಅಕ್ಕಪಕ್ಕದವರ ಜೊತೆಯಲ್ಲಿ ಹೋಗಿ ನೋಡಿದೆ. ನಮ್ಮ ಅಣ್ಣ ವಿಷ ಕುಡಿದಿದ್ದು, ವಿಚಾರ ಮಾಡಲಾಗಿ ಹೊಟ್ಟೆನೋವು ತಾಳಲಾರದೇ ಕ್ರಿಮಿನಾಶಕ ಕುಡಿದಿರುವುದಾಗಿ ತಿಳಿಸಿದ್ದು, ನಂತರ ಕೂಡಲೇ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3-00 ಗಂಟೆಗೆ ಮೃತಪಟ್ಟಿರುತ್ತಾರೆ. ಶವವು ಆಸ್ಪತ್ರೆಯ ಶವಾಗಾರದಲ್ಲಿ ಇದ್ದು, ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಯು.ಡಿ.ಆರ್ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 40 guests online
Content View Hits : 229943