lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< January 2018 >
Mo Tu We Th Fr Sa Su
1 3 4 5 6 7
8 9 10 11 12 13 14
15 16 17 18 19 20 21
22 23 24 25 26 27 28
29 30 31        
Tuesday, 02 January 2018
ಅಪರಾಧ ಘಟನೆಗಳು 02-01-18

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-02/2018 ಕಲಂ 279,304(ಎ) ಐಪಿಸಿ

ದಿನಾಂಕ:01-01-2018 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿಯಾದ ಮಾರುತಿ ಕೆ. ಬಿನ್ ಡಾ// ಎಂ.ಆರ್ ಕೃಷ್ಣಯ್ಯ, 36 ವರ್ಷ, ಒಕ್ಕಲಿಗರು ಜನಾಂಗ, ವಕೀಲರು, ನಂ-09, 1 ನೇ ಕ್ರಾಸ್, ಸಪ್ತಗಿರಿ ಬಡಾವಣೆ, ಟಿ.ಪಿ.ಕೆ. ರಸ್ತೆ, ತುಮಕೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ-01-01-2018 ರಂದು ನಮ್ಮ ತಂದೆಯಾದ ಸುಮಾರು 73 ವರ್ಷದ, ಡಾ// ಎಂ.ಆರ್ ಕೃಷ್ಣಯ್ಯ ಬಿನ್ ಲೇಟ್ ರಂಗಪ್ಪ ರವರ ತನ್ನ ಬಾಬ್ತು ಕೆಎ-06-ಎನ್-581 ನೇ ಮಾರುತಿ 800 ಕಾರಿನಲ್ಲಿ ಸ್ವಂತ ಕೆಲಸದ ನಿಮಿತ್ತ ಕುಣಿಗಲ್ ಗೆ ಬಂದಿದ್ದು, ನಂತರ ಕುಣಿಗಲ್ ನಿಂದ ತುಮಕೂರಿಗೆ ವಾಪಸ್ ಹೋಗಲೆಂದು ಈ ದಿನ ಸಂಜೆ 5-45 ಗಂಟೆಗೆ ತನ್ನ ಕಾರಿನಲ್ಲಿ ಹೊರಟು ತುಮಕೂರು-ಕುಣಿಗಲ್ ರಸ್ತೆಯ ಮಾರ್ಗವಾಗಿ ಹನುಮಂತನಗರದ ತಿರುವಿನ ಬಳಿ ಸಂಜೆ ಸುಮಾರು 6-45 ಗಂಟೆಗೆ ಬರುತ್ತಿರುವಾಗ್ಗೆ  ಎದುರುಗಡೆಯಿಂದ ಅಂದರೆ ತುಮಕೂರಿನ ಕಡೆಯಿಂದ ಕುಣಿಗಲ್ ಕಡೆಗೆ ಬಂದ ಕೆಎ-50-8675 ನೇ ಲಾರಿಯ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಬಲಭಾಗಕ್ಕೆ ಏಕಾ ಏಕಿ ತನ್ನ ವಾಹನವನ್ನು ತಿರುಗಿಸಿ ನಮ್ಮ ತಂದೆಯು ಬರುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ್ದು, ಸದರಿ ಕಾರಿನ ಮುಂಭಾಗ ಜಖಂಗೊಂಡು ನಮ್ಮ ತಂದೆಯವರಿಗೆ ಅಪಘಾತವಾಗಿ, ಸದರಿ ಲಾರಿ ಮತ್ತು ಕಾರು ಸ್ಥಳದಲ್ಲಿಯೇ ಇರುತ್ತವೆಂದು ಅದೇ ಮಾರ್ಗವಾಗಿ ಬರುತ್ತಿದ್ದ ಗುಳೂರಿನ ವಾಸಿಯಾದ ಪ್ರದೀಪ್ ರವರು ಸದರಿ ವಿಚಾರವನ್ನು ನನಗೆ ಪೋನ್ ಮೂಲಕ ತಿಳಿಸಿದರು, ನಂತರ ನಾನು ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ತಂದೆಯವರಿಗೆ ಅಪಘಾತವಾಗಿರುವುದು ನಿಜವಾಗಿತ್ತು,  ನಮ್ಮ ತಂದೆಯನ್ನು ನೋಡಲಾಗಿ ತಲೆಗೆ ಮತ್ತು ಕಾಲಿಗೆ ತೀವ್ರತರವಾದ ರಕ್ತಗಾಯವಾಗಿ ಮತ್ತು ದೇಹದ ಇತರೇ ಕಡೆಗಳಿಗೆ ಗಾಯವಾದ್ದು, ಕೂಡಲೆ ಖಾಸಗಿ ವಾಹನದಲ್ಲಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿನ ವೈಧ್ಯರಿಗೆ ತೋರಿಸಲಾಗಿ ಪರೀಕ್ಷಿಸಿದ ವೈಧ್ಯರು ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ. ಆದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ನನ್ನ ತಂದೆಯ ಸಾವಿಗೆ ಕಾರಣವಾದ ಕೆಎ-50-8675 ನೇ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ತಂದೆ ಡಾ// ಎಂ.ಆರ್ ಕೃಷ್ಣಯ್ಯ ರವರ ಮೃತ ದೇಹವು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 01/2018 ಕಲಂ 279,304(ಎ) ಐಪಿಸಿ

ದಿನಾಂಕ:01-01-2018 ರಂದು ಮಧ್ಯಾಹ್ನ 1-30 ಗಂಟೆಗೆ ಪಿರ್ಯಾದಿಯಾದ ಚಂದನ್ ಬಿನ್ ನಾರಾಯಣರಾವ್‌, 28 ವರ್ಷ, ಭಾವಸಾರ ಕ್ಷತ್ರೀಯ ಜನಾಂಗ, ಟೈಲರ್‌ ಕೆಲಸ, ಸಿ,ಎಸ್,ಪುರ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನಾನು ಮತ್ತು ನನ್ನ ಸ್ನೇಹಿತನಾದ ಭಾನುಪ್ರಕಾಶ್‌ ಇಬ್ಬರೂ ಒಂದು ದ್ವಿಚಕ್ರ ವಾಹನದಲ್ಲಿ ಹಾಗೂ ನನ್ನ ತಮ್ಮನಾದ ಸುಮಾರು 24 ವರ್ಷ ವಯಸ್ಸಿನ ಡಿ,ಎನ್‌,ಕುಮಾರ್ ರವರು ಒಂದು ದ್ವಿಚಕ್ರ ವಾಹನದಲ್ಲಿ ಇದೇ ದಿವಸ ಅಂದರೆ ದಿನಾಂಕ:01-01-2018 ರಂದು ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಲೆಂದು ಪ್ರತ್ಯೇಕ ದ್ವಿಚಕ್ರ ವಾಹನಗಳಲ್ಲಿ ಬೆಳಿಗ್ಗೆ ಸುಮಾರು 10-30 ಗಂಟೆ ಸಮಯದಲ್ಲಿ ಸಿ,ಎಸ್,ಪುರ ಗ್ರಾಮದಿಂದ ಹೊರಟು ಹೆಬ್ಬೂರಿನ ಕಡೆಗೆ ಬರುತ್ತಿರುವಾಗ್ಗೆ, ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ಮಣಿಕುಪ್ಪೆ ಗೇಟ್‌ ಹಾಗೂ ದೊಡ್ಡಗೊಲ್ಲಹಳ್ಳಿ ಮದ್ಯದಲ್ಲಿ ಬರುತ್ತಿರುವಾಗ್ಗೆ, ನಮ್ಮ ಮುಂಭಾಗದಲ್ಲಿ ಹೋಗುತ್ತಿದ್ದ ಒಂದು ಟ್ರಾಕ್ಟರ್ ಮತ್ತು ಟ್ರೈಲರ್‌ ವಾಹನದ ಚಾಲಕ ತನ್ನ ವಾಹನವನ್ನು ಅಜಾಗರೂಕತೆಯಿಂದ ಏಕಾಏಕಿ ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ತಿರುಗಿಸಿದ್ದರಿಂದ ನನ್ನ ಮುಂಭಾಗದಲ್ಲಿ ಕೆಎ-06-ಇ.ಎಲ್‌-8640 ನೇ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನನ್ನ ತಮ್ಮ ಡಿ,ಎನ್‌,ಕುಮಾರ್‌ ರವರು ಸದರಿ ಟ್ರಾಕ್ಟರ್‌ನ ಹಿಂಭಾಗದ ಟ್ರೈಲರ್‌ಗೆ ಡಿಕ್ಕಿ ಹೊಡೆದುಕೊಂಡರು. ನಂತರ ನಾನು ಮತ್ತು ಭಾನುಪ್ರಕಾಶ್‌ ಇಬ್ಬರೂ ಸೇರಿಕೊಂಡು ನನ್ನ ತಮ್ಮ ಡಿ,ಎನ್‌,ಕುಮಾರ್‌ ರವರನ್ನು ಉಪಚರಿಸಿ ನೋಡಲಾಗಿ ತಲೆಗೆ ತೀವ್ರತರವಾದ ರಕ್ತಗಾಯವಾಗಿತ್ತು. ಸದರಿ ಟ್ರಾಕ್ಟರ್ ಮತ್ತು ಟ್ರೈಲರ್‌ ವಾಹನದ ನಂಬರ್ ನೋಡಲಾಗಿ ಯಾವುದೇ ರಿಜಿಸ್ಟ್ರೇಷನ್‌ ನಂಬರ್‌ ಇರುವುದಿಲ್ಲ. ಟ್ರಾಕ್ಟರ್‌ನ ಇಂಜಿನ್‌ ನಂಬರ್ ಹಾಗೂ ಚಾಸ್ಸಿಸ್ ನಂಬರ್‌ ಅನ್ನು ಪರಿಶೀಲಿಸಲಾಗಿ T053345286DF ನೇ ಇಂಜಿನ್‌ ನಂಬರ್‌ನ ಹಾಗೂ E3387072 ನೇ ಚಾಸ್ಸಿಸ್‌ ನಂಬರ್‌‌ನ ಟ್ರಾಕ್ಟರ್ ಆಗಿರುತ್ತೆ. ನಂತರ ಗಾಯಗೊಂಡಿದ್ದ ನನ್ನ ತಮ್ಮ ಡಿ,ಎನ್‌,ಕುಮಾರ್ ರವರನ್ನು ಯಾವುದೋ ಒಂದು ಕಾರಿನಲ್ಲಿ ಹೆಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್‌ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ಪರಿಶೀಲಿಸಿದ ವೈದ್ಯಾಧಿಕಾರಿಗಳು ನನ್ನ ತಮ್ಮ ಡಿ,ಎನ್‌,ಕುಮಾರ್ ರವರು ಮೃತಪಟ್ಟಿರುವುದಾಗಿ ತಿಳಿಸಿದರು. ಆದ್ದರಿಂದ ತನ್ನ ಟ್ರಾಕ್ಟರ್‌ ಮತ್ತು ಟ್ರೈಲರ್‌ ವಾಹನವನ್ನು ಅಜಾಗರೂಕತೆಯಿಂದ ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಟ್ರಾಕ್ಟರ್ ಹಾಗೂ ಟ್ರೈಲರ್‌ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ತಮ್ಮ ಡಿ,ಎನ್‌,ಕುಮಾರ್ ರವರ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 01/2018 ಕಲಂ-279, 304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್

ದಿನಾಂಕ: 01/01/2018 ರಂದು 12-30 ಗಂಟೆಗೆ ಪಿರ್ಯಾದುದಾರರಾದ ಟಿ. ಶ್ರೀನಿವಾಸ ಎಂಬುವರು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಮ್ಮ ತಂದೆ ತಾಯಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು, ನನ್ನ ಚಿಕ್ಕ ತಂಗಿಯಾದ ರೇಖಾಗೆ ಮದುವೆಯಾಗಿರುವುದಿಲ್ಲ. ನಮ್ಮ ಅಕ್ಕ ಮಂಜಮ್ಮ ಸುಮಾರು 44 ವರ್ಷ ವಯಸ್ಸಿನವಳನ್ನು ನಮ್ಮ ಗ್ರಾಮದ ಮಲ್ಲೇಶಪ್ಪ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು, ಸದರಿಯವರು ನಮ್ಮ ಜೊತೆಯಲ್ಲಿಯೇ ಇದ್ದು, ನನ್ನ ತಂಗಿ ರೇಖಾ ಮತ್ತು ನಮ್ಮ ಅಕ್ಕ ಮಂಜಮ್ಮ ತುಮಕೂರಿನಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ರಜಾ ದಿನಗಳಲ್ಲಿ ಮನೆಗೆ ಬರುತ್ತಿರುತ್ತಾರೆ. ಈ ದಿನ ದಿನಾಂಕ:01/01/18 ರಂದು ಬೆಳಿಗ್ಗೆ ನಮ್ಮ ಅಕ್ಕ ಮಂಜಮ್ಮ ನಮಗೆ ಪೋನ್ ಮಾಡಿ ಈ ದಿನ ನಮ್ಮ ಹತ್ತಿರ ಸಂಬಂಧಿ ಶ್ರೀನಿವಾಸರವರ ಮನೆ ಅಮಲಗೊಂದಿಗೆ ಹೋಗಿ ನಂತರ ಮನೆಗೆ ಬರುತ್ತೇನೆಂತ ತಿಳಿಸಿದರು. ಈ ದಿನ ಬೆಳಿಗ್ಗೆ 9-20 ಗಂಟೆ ಸಮಯದಲ್ಲಿ ನಮಗೆ ಪರಿಚಯಸ್ಥರಾದ ನೆಲದಿಮ್ಮನಹಳ್ಳಿ ವಾಸಿ ಕೇಶವ ಮಂಜುನಾಥ ರವರು ನಮಗೆ ಪೋನ್ ಮಾಡಿ, ನಿಮ್ಮ ಅಕ್ಕ ಮಂಜಮ್ಮನವರಿಗೆ ಈ ದಿನ ಬೆಳಿಗ್ಗೆ 9-10 ಗಂಟೆ ಸಮಯದಲ್ಲಿ ದೊಡ್ಡ ಆಲದಮರ ಬಸ್ಸು ನಿಲ್ದಾಣದ ಹತ್ತಿರ ತುಮಕೂರು ಶಿರಾ ಎನ್.ಹೆಚ್-48 ರಸ್ತೆಯಲ್ಲಿ ನಿಮ್ಮ ಅಕ್ಕ ರಸ್ತೆ ದಾಟುತ್ತಿದ್ದಾಗ, ತುಮಕೂರು ಕಡೆಯಿಂದ ಕೆಎ-06.ಎನ್ 1345 ನೇ ಮಹೇಂದ್ರ ಬುಲೆರೋ ವಾಹನ ಅದರ ಚಾಲಕ ವಾಹನವನ್ನು ಅತೀವೇಗ ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ಮಂಜಮ್ಮನಿಗೆ ಡಿಕ್ಕಿ ಹೊಡೆಸಿ ಮಂಜಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದು. ವಾಹನ ಚಾಲಕ ವಾಹನವನ್ನು ನಿಲ್ಲಿಸಿ ಓಡಿ ಹೋಗಿರುತ್ತಾನೆಂತ ಅವನ ಹೆಸರು ವಿಳಾಸ ಗೊತ್ತಿಲ್ಲ. ಶವವನ್ನು ಕಳ್ಳಂಬೆಳ್ಳ ಆಸ್ಪತ್ರೆಗೆ ಎನ್.ಹೆಚ್.ಐ. ಎ ಅಂಬುಲೆನ್ಸ್ ನಲ್ಲಿ ಕಳಿಸಿಕೊಟ್ಟಿರುತ್ತೇವೆ ಎಂತ ತಿಳಿಸಿದರು. ನಂತರ ನಾನು ನಮ್ಮ ಸಂಬಂಧಿಕರಿಗೆ ತಿಳಿಸಿ ಸಂಬಂಧಿಕರೊಂದಿಗೆ ಈಗ ತಡವಾಗಿ ಬಂದು ದೂರು ನೀಡಿರುತ್ತೇನೆ. ಈ ಅಪಘಾತಕ್ಕೆ ಕಾರಣನಾದ ಕೆಎ-06.ಎನ್ 1345 ನೇ ಮಹೇಂದ್ರ ಬುಲೆರೋ ವಾಹನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ; 01/2018 ಕಲಂ;279,337,304(ಎ) ಐ.ಪಿ.ಸಿ  ರೆ/ವಿತ್ 122 ಐ.ಎಂ.ವಿ ಆಕ್ಟ್

ದಿನಾಂಕ: 01/01/2018 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಅನುಸೂಯ ಬಾಯಿ ಕೋಂ ಲೇಟ್ ಸಿದ್ದೋಜಿ ರಾವ್, 45 ವರ್ಷ, ಮರಾಠಿ ಜನಾಂಗ, ಚೌಡನಕುಪ್ಪೆ ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲ್ಲೊಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ದಿನಾಂಕ: 01/01/2018 ರಂದು ಪಿರ್ಯಾದಿ ಮತ್ತು ಪಿರ್ಯಾದಿ ಗಂಡನಾದ ಸಿದ್ದೋಜಿರಾವ್ ಬಿನ್ ಲೇಟ್ ಕಾಳೋಜಿರಾವ್, 55 ವರ್ಷ, ಪಿರ್ಯಾದಿ ಮಗನಾದ ಸತೀಶ್ ರಾವ್, 38 ವರ್ಷ,ಈತನ ಹೆಂಡತಿ ಉಷಾಬಾಯಿ, 25 ವರ್ಷ, ಇವರ ಮಕ್ಕಳಾದ ಕೀರ್ತನ, 7 ವರ್ಷ, ನವೀನ್ ಕುಮಾರ್. 5 ವರ್ಷ, ಹಾಗೂ ಪಿರ್ಯಾದಿಯ ಮತ್ತೊಬ್ಬ ಮಗನಾದ ಹರೀಶ್ ರಾವ್, 32 ವರ್ಷ, ಈತನ ಹೆಂಡತಿ  ಅಶ್ವಿನಿ ಬಾಯಿ, 23 ವರ್ಷ, ಇವರ ಮಕ್ಕಳಾದ ಲಿಖಿತ್, 3 ವರ್ಷ, ಹಿತೇಶ್, 1 ½ ವರ್ಷ, ಹಾಗೂ ಪಿರ್ಯಾದಿಯ ಮತ್ತೊಬ್ಬ ಮೊಮ್ಮಗನಾದ ಭುವನ್ ಬಿನ್ ಪ್ರಭಾಕರ್ ರಾವ್, 18 ವರ್ಷ ಒಟ್ಟು 11 ಜನರು ಕುಟುಂಬದ ಸಮೇತ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಲೆಂದು  ಪಿರ್ಯಾದಿ ಊರಿನಿಂದ ಹರೀಶ್ ರಾವ್  ರವರ ಬಾಬ್ತು ಮಾರುತಿ ಸುಜುಕಿ ಎರಿಟಿಗ ಕಾರಿನಲ್ಲಿ ಹರೀಶ್ ರಾವ್  ಚಾಲಕನಾಗಿ ಹೊರಟು ಹುಲಿಯೂರುದುರ್ಗ-ಕುಣಿಗಲ್ ಮುಖ್ಯರಸ್ತೆಯ ಗವಿಮಠ ಗ್ರಾಮದ ಬಳಿ ಬೆಳಿಗ್ಗೆ ಸುಮಾರು 6-45 ಗಂಟೆ ಸಮಯದಲ್ಲಿ ಹೋಗುತ್ತಿರಬೇಕಾದರೆ ಸದರಿ ಕಾರಿನ ಚಾಲಕ ಹರೀಶ್ ರಾವ್ ರವರು ತನ್ನ ಕಾರನ್ನು ಅತಿವೇಗವಾಗಿ ಚಾಲನೆ ಮಾಡುತ್ತಿದ್ದು, ಅದೇ ಸಮಯಕ್ಕೆ ಒಂದು ಮಗು ಕಾರಿಗೆ ಅಡ್ಡಲಾಗಿ ಬಂದ ಕಾರಣ ಹರೀಶ್ ರಾವ್ ರವರು ಕಾರನ್ನು ಏಕಾಏಕಿ ಎಡಕ್ಕೆ ತಿರುಗಿಸಿದ ಪರಿಣಾಮ ಕಾರಿನ ನಿಯಂತ್ರಣ ತಪ್ಪಿ ಕಾರು ಎಡರಸ್ತೆಯಲ್ಲಿ ವಾಹನ ನಿಲ್ಲಿಸಿರುವ ಬಗ್ಗೆ ಯಾವುದೇ ಇಂಡಿಕೇಟರ್ ಹಾಕದೇ ಕ್ಯಾಂಟರ್ ಅನ್ನು ನಿಲ್ಲಿಸಿದ್ದು, ನಿಂತಿದ್ದ ಕ್ಯಾಂಟರ್ ವಾಹನದ ಹಿಂಭಾಗಕ್ಕೆ ಅಪ್ಪಳಿಸಿ ಅಪಘಾತವಾಗಿದ್ದು,  ಸದರಿ ಅಪಘಾತದಿಂದ ಕಾರಿನಲ್ಲಿದ್ದ ಎಲ್ಲರಿಗೂ ತೀವ್ರ ತರಹದ ಪೆಟ್ಟು ಬಿದ್ದಿದ್ದು, ಹಾಗೂ ಕಾರಿಗೆ ಅಡ್ಡಲಾಗಿ ಬಂದ ಮಗುವಿಗೂ ಸಹ ಕಾರು ಡಿಕ್ಕಿಯಾಗಿ ಪೆಟ್ಟು ಬಿದ್ದಿರುತ್ತದೆ. ಸದರಿ ಅಪಘಾತದಲ್ಲಿ ಕಾರಿನಲ್ಲಿದ್ದ  ಪಿರ್ಯಾದಿ ಗಂಡ ಸಿದ್ದೋಜಿರಾವ್, ಪಿರ್ಯಾದಿ ಸೊಸೆ ಉಷಾಬಾಯಿ ಹಾಗೂ ಪಿರ್ಯಾದಿ ಮೊಮ್ಮಕ್ಕಳಾದ ಕೀರ್ತನ, ಹಿತೇಶ್, ಭುವನ್ ಈ ಜನರು  ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಉಳಿದ ಎಲ್ಲರಿಗೂ ಮೈಕೈ ಕಾಲುಗಳಿಗೆ ತೀವ್ರ ತರಹದ ಪೆಟ್ಟು ಬಿದ್ದಿದ್ದು, ನಂತರ ಗಾಯಾಳುಗಳೆಲ್ಲರೂ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆಂದು ಗಾಯಾಳುಗಳಾದ ಅಶ್ವಿನಿ ಬಾಯಿ, ಲಿಖಿತ್, ಸತೀಶ್ ರಾವ್, ನವೀನ್ ರಾವ್, ರವರುಗಳನ್ನು ಬೆಂಗಳೂರಿನ ಸ್ವರ್ಷ ಆಸ್ಪತ್ರೆಗೆ ಕಳುಹಿಸಿಕೊಟ್ಟು ಪಿರ್ಯಾದಿ ಸಂಬಂದಿಕರನ್ನು ಕರೆಸಿಕೊಂಡು ಮೃತರ ಶವಗಳನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ನಂತರ ಠಾಣೆಗೆ ಬಂದು ಅಪಘಾತಕ್ಕೀಡಾದ ಕಾರು ನೊಂದಣಿ ಆಗದ ಹೊಸ ಮಾರುತಿ ಸುಜುಕಿ ಎರಿಟಿಗ ಕಾರು ಆಗಿದ್ದು, ಕಾರಿನ ಟಿ.ಪಿ ಕೆ.ಎ-09/ಎನ್.ಟಿ 023043/2017-18  ಆಗಿರುತ್ತದೆ. ಕಾರಿಗೆ ಅಡ್ಡಲಾಗಿ ಬಂದ ಗಾಯಾಳು ಮಗುವಿನ ಹೆಸರು ಅರುಣ್ ಕುಮಾರ್ ಬಿನ್ ವೆಂಕಟೇಶ್, ಗವಿಮಠ ವಾಸಿ ಎಂದು ತಿಳಿದು ಬಂದಿರುತ್ತದೆ. ಆದ್ದರಿಂದ ತಾವುಗಳು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ. 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 35 guests online
Content View Hits : 302185