lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< December 2017 >
Mo Tu We Th Fr Sa Su
        1 2 3
4 5 7 8 9 10
11 12 13 14 15 16 17
18 19 20 21 22 23 24
25 26 27 28 29 30 31
Wednesday, 06 December 2017
Crime Incidents 6-12-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 220/2017 ಕಲಂ 279,337 ಐಪಿಸಿ

ದಿನಾಂಕ:05-12-2017 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿಯಾದ ನರಸಿಂಹಮೂರ್ತಿ ಬಿನ್ ದಾಸಪ್ಪ, 23 ವರ್ಷ, ಆದಿ ಕರ್ನಾಟಕ ಜನಾಂಗ, ಗಾರೆ ಕೆಲಸ, ರಾಯವಾರ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ:02-12-2017 ರಂದು ನಮ್ಮ ಗ್ರಾಮದ ವಾಸಿಯಾದ ದಯಾನಂದ ಬಿನ್ ಲೇಟ್ ಗೋವಿಂದಯ್ಯ ರವರು ನಮ್ಮ ಗ್ರಾಮದ ವಾಸಿ ನಾರಾಯಣಪ್ಪರವರ ಬಾಬ್ತು ಕೆಎ-06-ಇಯು-7935 ನೇ ಹೊಂಡಾ ಶೈನ್ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಸ್ವಂತ ಕೆಲಸದ ನಿಮಿತ್ತ ಹೆಬ್ಬೂರಿಗೆ ಹೋಗಿ ನಂತರ ವಾಪಸ್ ಗ್ರಾಮಕ್ಕೆ ಬರುವಾಗ ಹೆಬ್ಬೂರಿನಲ್ಲಿ ನನ್ನ ತಂಗಿಯ ಗಂಡನಾದ ರಾಜಶೇಖರಯ್ಯ ಬಿನ್ ಲೇಟ್ ರಂಗಶಾಮಯ್ಯ, 30 ವರ್ಷ, ಗಾರೆಕೆಲಸ, ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್, ಮಾಗಡಿ ತಾಲ್ಲೋಕು, ರಾಮನಗರ ಜಿಲ್ಲೆ ರವರನ್ನು ದಯಾನಂದನರವರು ಕೆಎ-06-ಇಯು-7935 ಹೊಂಡಾ ಶೈನ್ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕೂರಿಸಿಕೊಂಡು ಹೆಬ್ಬೂರು-ಸಿಎಸ್ ಪುರ ರಸ್ತೆಯ ಮಾರ್ಗವಾಗಿ ರಾಯವಾರಕ್ಕೆ ಬರುತ್ತಿರುವಾಗ ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ರಾಯವಾರದ ಕೆರೆಕೋಡಿ ಬಳಿ ದಯಾನಂದನು ತನ್ನ ದ್ವಿಚಕ್ರ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ, ರಸ್ತೆಯ ಬಲಭಾಗದ ಹಳ್ಳಕ್ಕೆ ಬೀಳಿಸಿದ್ದರಿಂದ ದಯಾನಂದಿಗೆ ತರಚಿದ ಗಾಯಗಳಾಗಿದ್ದು ಮತ್ತು ಹಿಂಬದಿಯಲ್ಲಿ ಕುಳಿದ್ದ ರಾಜಶೇಖರಯ್ಯ ರವರಿಗೆ ಬಲಗಾಲು ತೊಡೆಗೆ, ಹಣೆಗೆ ತೀವ್ರತರವಾದ ಗಾಯಗಳಾಗಿರುತ್ತವೆ, ನಂತರ ರಸ್ತೆಯಲ್ಲಿ ಬರುತ್ತಿದ್ದ ನಮ್ಮ ಗ್ರಾಮದ ನರಸಿಂಹಮೂರ್ತಿರವರು ನನ್ನ ತಂದೆ ದಾಸಪ್ಪರವರನ್ನು ಸ್ಥಳಕ್ಕೆ ಕರೆಸಿಕೊಂಡು ಕರೆಸಿಕೊಂಡು ಸಾರ್ವಜನಿಕರ ಸಹಾಯದಿಂದ 108 ಆಂಬುಲೆನ್ಸ್ ವಾಹನದಲ್ಲಿ ರಾಜಶೇಖರಯ್ಯ ಮತ್ತು ದಯಾನಂದ ರವರುಗಳನ್ನು ಕರೆದುಕೊಂಡು ಹೋಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ, ನಂತರ ನನ್ನ ತಂದೆ ಸದರಿ ವಿಚಾರವನ್ನು ತಿಳಿಸಿದ್ದರಿಂದ ನಾನು ಜಿಲ್ಲಾ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ತಂಗಿ ಗಂಡ ರಾಜಶೇಖರಯ್ಯರವರಿಗೆ ಅಪಘಾತವಾಗಿರುವುದು ನಿಜವಾಗಿತ್ತು, ಆದ್ದರಿಂದ ರಾಜಶೇಖರಯ್ಯರವರ ಅಪಘಾತಕ್ಕೆ ಕಾರಣನಾದ ಕೆಎ-06-ಇಯು-7935 ಹೊಂಡಾ ಶೈನ್ ದ್ವಿಚಕ್ರ ವಾಹನದ ಸವಾರ ದಯಾನಂದರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಗಯಾಳು ರಾಜಶೇಖರಯ್ಯರವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ ಮತ್ತು ಅಪಘಾತಕ್ಕೀಡಾದ ದ್ವಿಚಕ್ರ ವಾಹನವನ್ನು ರಾಯವಾರದ ಕೆರೆಕೋಡಿ ಬಳಿ ಇರುವ ಮಹದೇವಯ್ಯರವರ ಪಂಪ್ ರೂಮಿನ ಬಳಿ ನಿಲ್ಲಿಸಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಸಂಚಾರ ಪೊಲೀಸ್ ಠಾಣೆ ಮೊ.ಸಂ 234/17 ಕಲಂ 279,283 IPC

ದಿನಾಂಕ 05-12-2017 ರಂದು  ಪಿರ್ಯಾದಿ ಜಿ ರಮೇಶ್   ಹೆಚ್ ಸಿ 316  ಆದ  ನನಗೆ  ಶಿವಕುಮಾರ ಸ್ವಾಮೀಜಿ  ಸರ್ಕಲ್ ನಲ್ಲಿ  ಸಂಚಾರ  ನಿಯಂತ್ರಣ ಕರ್ತವ್ಯಕ್ಕೆ  ನೇಮಕವಾಗಿದ್ದು ನೇಮಕದಂತೆ  ಬೆಳಗ್ಗೆ  8-00 ಗಂಟೆ ಯಿಂದ 11-00 ಗಂಟೆವರೆಗೆ   ಸಂಚಾರಿ  ನಿಯಂತ್ರಣ  ಕರ್ತವ್ಯದಲ್ಲಿದ್ದಾಗ  ಸುಮಾರು 9-00 ಗಂಟೆ  ಸಮಯದಲ್ಲಿ  ಎಂ ಜಿ ಸ್ಟೇಡಿಯಂ  ಕಡೆಯಿಂದ  ಕೆಎ-44-3358 ನೇ  ಎಸ್ ಎಲ್ ಆರ್  ಬಸ್ ಚಾಲಕ    ಸಿಗ್ನಲ್  ಲೆಕ್ಕಿಸದೆ  ಚಾಲನೆ ಚಾಲನೆಕೊಂಡು   ಮಾಡಿಕೊಂಡು  ಮುಂದಕ್ಕೆ ಬಂದಿದ್ದಾಗ  ಬಟವಾಡಿ ಕಡೆಯಿಂದ  ಭದ್ರಮ್ಮ  ವೃತ್ತದ ಕಡೆಗೆ  ಸಿಗ್ನಲ್ ಕ್ಲಿಯರ್ ಇದ್ದು  ಭದ್ರಮ್ಮ ವೃತ್ತದ ಕಡೆಗೆ  ವಾಹನ ಬರುವಾಗ್ಗೆ  ಅದೇ  ಸಮಯಕ್ಕೆ   ಒಬ್ಬ ಹುಡುಗ  ರಸ್ತೆ ದಾಟಲು  ಬಂದಾಗ   ಒಂದು   ದ್ವಿ ಚಕ್ರ ವಾಹನಕ್ಕೆ  ಟಚ್ ಆಗಿ  ಕೆಳಗೆ  ಬಿದ್ದಾಗ  ಅದೇ ಸಮಯಕ್ಕೆ  ಎಸ್ ಎಲ್ ಆರ್   ಬಸ್ ಚಾಲಕ  ತನ್ನ ಬಸ್ಸನ್ನು  ಸಿಗ್ನಲ್  ಇಲ್ಲದಿದ್ದರೂ  ಸಹ  ಚಾಲನೆ ಮಾಡಿಕೊಂಡು  ಬಂದಿದ್ದರಿಂದ    ಸಂಚಾರಿ ನಿಯಂತ್ರಣಕ್ಕೆ  ಅಡೆತಡೆಯಾಗಿ  ಆಗುವಂತೆ  ಅಪಘಾತ  ತಪ್ಪಿತು  ಆದ್ದರಿಂದ  ಎಸ್  ಎಲ್ ಆರ್    ಚಾಲಕ ಆತನ   ನಿರ್ಲಕ್ಷತೆ ಮತ್ತು ಅಜಾಗರೂಕತೆಯಿಂದ  ವಾಹನ ಚಾಲನೆ ಮಾಡಿಕೊಂಡು ಬಂದಿದ್ದರಿಂದ  ಈತನ  ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು  ಮಾಡಿರುತ್ತೆ

 

ತುಮಕೂರು ನಗರ ಪೊಲೀಸ್  ಠಾಣೆ ಮೊ.ಸಂ 197/2017 ಕಲಂ  457 380 ಐಪಿಸಿ

ಮಾನ್ಯ ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ನೀಡಿದ ಹೇಳಿಕೆ ಅಂಶವೆನೆಂದರೆ, ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನಾನು ತುಮಕೂರು ಸಿರಾ ಗೇಟ್ ನಲ್ಲಿ ನ್ಯಾಯಾಧೀಶರ ವಸತಿ ಗೃಹದಲ್ಲಿ ವಾಸವಾಗಿದ್ದು, ದಿನಾಂಕ:01/12/2017 ರಿಂದ ದಿ:08/12/17 ರವರಗೆ ರಜೆ ಪಡೆದು ಮೈಸೂರಿಗೆ ಹೋಗಿದ್ದು, ಈ ದಿನ ದಿ:05/12/17 ರಂದು ಬೆಳಿಗ್ಗೆ 10-15 ಗಂಟೆ ಸಮಯದಲ್ಲಿ  ನಾನು ಮೈಸೂರಿನಲ್ಲಿ ಮನೆಯಲ್ಲಿದ್ದಾಗ  ಕೋರ್ಟ್ ಅಮೀನ್ ಆದ ವೆಂಕಟೇಶ್ ರವರು ನನಗೆ ಪೋನ್ ಮಾಡಿ ಕಟ್ಟಿಮನಿ ನ್ಯಾಯಾಧೀಶರ ಮನೆಯಲ್ಲಿ  ದಿ:04/12/17 ರಂದು ರಾತ್ರಿ ಯಾರೋ ಕಳ್ಳರು ಕಳವು ಮಾಡಲು ಬಂದು ಡೋರನ್ನು ಮೀಟಿ ಒಳಗೆ ಹೋದಾಗ  ಮನೆಯಲ್ಲಿದ್ದ ನ್ಯಾಯಾಧೀಶರು ಕೂಗಿಕೊಂಡಾಗ 4 ಜನ ಅಪರಿಚಿತರು ಓಡಿಹೋದರೆಂತಾ ತಿಳಿಸಿದರು. ಆಗ  ನಾನು ಕೂಡಲೇ  ವೆಂಕಟೇಶ್ ರವರಿಗೆ  ಪಿವೋನ್  ಹೇಮಂತಕುಮಾರ್   ನ ಬಳಿ ಗೇಟ್ ಬೀಗ ಇದೆ ತೆಗೆಸಿ ನಮ್ಮ ಮನೆಯನ್ನು ನೋಡಿ ಎಂದು ಹೇಳಿದೆ.  ಸ್ವಲ್ಪ ಹೊತ್ತಿನಲ್ಲಿಯೇ  ಹೇಮಂತಕುಮಾರ್ ಮತ್ತು ವೆಂಕಟೇಶ್  ಪೋನ್ ಮಾಡಿ  ನಿಮ್ಮ ಮನೆಯ ಬಾಗಿಲು ಸ್ವಲ್ಪ   ತೆರೆದಿದ್ದು ಬಾಗಿಲನ್ನು ಮೀಟಿರುವುದು  ಕಂಡು ಬರುತ್ತೆಂತಾ  ತಿಳಿಸಿದರು.  ನೀವು ಬೇಗ ಬನ್ನಿ ಎಂದು  ತಿಳಿಸಿದರು. ಅದಕ್ಕೆ ನಾನು ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿ ಎಫ್.ಐ.ಅರ್. ದಾಖಲಿಸಲು ದೂರು ನೀಡುವಂತೆ ಹೇಮಂತ್ ಕುಮಾರ್ ರವರಿಗೆ ತಿಳಿಸಿದೆ. ಕೂಡಲೇ ನಾನು ಮೈಸೂರಿನಿಂದ ತುಮಕೂರಿಗೆ ಹೊರಟು ಮದ್ಯಾಹ್ನ 01-30 ಗಂಟೆಗೆ  ಬಂದು  ಮನೆಯ ಹತ್ತಿರ ಬಂದಾಗ ಹೇಮಂತ್ ಕುಮಾರ್ ಮತ್ತು ವೆಂಕಟೇಶ್ ರವರು ಹಾಗೂ ಪೊಲೀಸರು ಇದ್ದರು. ಇವರುಗಳ ಸಮಕ್ಷಮದಲ್ಲಿ ಮನೆಯನ್ನು ನೋಡಲಾಗಿ ಮನೆಯ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆಗೆದಿರುವ ನಿಶಾನೆ ಕಂಡು ಬಂದಿದ್ದು, ಒಳಗೆ ಹೋಗಿ ನೋಡಿದಾಗ  ಮನೆಯ ಬೆಡ್  ರೂಮಿಗಳಲ್ಲಿನ ಕಬೋರ್ಡ್ ಮತ್ತು ಬೀರುಗಳನ್ನು ತೆಗೆದು ಬಟ್ಟೆಗಳನ್ನೆಲ್ಲಾ  ಕಿತ್ತುಹಾಕಿ  ಕಬೋರ್ಡ್ ನಲ್ಲಿದ್ದ  ವಡವೆ ಮತ್ತು ಹಣ  ಒಟ್ಟು ಅಂದಾಜು  ಬೆಲೆ 25,59,500/- ರೂ. ಆಗಿರುತ್ತೆ. ನಮ್ಮ ಮನೆಯಲ್ಲಿ ಕಳುವಾಗಿರುವ ಅಭರಣಗಳ ನಿಖರವಾದ ತೂಕ ಹೇಳಲು ಆಗುವುದಿಲ್ಲ. ಈ ಮೇಲ್ಕಂಡ ಆಭರಣಗಳನ್ನು ಖರೀದಿಸಿದ ಅಂದಾಜು ಬೆಲೆಯನ್ನು ಮಾತ್ರ ತಿಳಿಸಿರುತ್ತೇನೆ. ಆಭರಣಗಳನ್ನು ಖರೀದಿಸಿದ ಬಿಲ್ಲುಗಳು ಸಿಕ್ಕರೆ ಅವುಗಳನ್ನು ತನಿಖೆಗೆ ಹಾಜರುಪಡಿಸುತ್ತೇನೆ. ಇವುಗಳನ್ನು ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಡೋರ್ ಲಾಕನ್ನು ಯಾವುದೋ ಅಯುಧದಿಂದ ಮೀಟಿ ಒಳಗೆ ಹೋಗಿ ಬೆಡ್ ರೂಮಿನಲ್ಲಿ ಕಬಾರ್ಡ್‌ ಮತ್ತು ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ ಮೇಲ್ಕಂಡ ಆಭರಣಗಳನ್ನು ಮತ್ತು ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳನ್ನು ಪತ್ತೆ ಮಾಡಿ ಅರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನೀಡಿದ ಹೇಳಿಕೆ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 76 guests online
Content View Hits : 304494