lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ಜಯನಗರ ಪೊಲೀಸ್ ಠಾಣಾ ಮೊ.ನಂ. 156/2017 ಕಲಂ 20 (ಬಿ) ಎನ್‌.ಡಿ.ಪಿ.ಎಸ್ ಆಕ್ಟ್‌ ದಿನಾಂಕ: 25-11-2017 ರಂದು... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >> NEW BEAT BEST STAFF AND BEST CRIME DETECTION STAFF >> ಶಿರಾ ಗೇಟ್ ರಸ್ತೆಯ ಆಗಲೀಕರಣ ಹಿನ್ನಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ. >> ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ
Monday, 04 December 2017
Crime Incidents 4-12-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 233/2017 ಕಲಂ: 380 IPC

ದಿನಾಂಕ: 03-12-2017 ರಂದು ಸಂಜೆ 05-00 ಗಂಟೆಗೆ ಕುಣಿಗಲ್ ತಾಲ್ಲೋಕು ಹುಲಿಯೂರುದುರ್ಗ ಹೋಬಳಿ ಹುಲಿಕಟ್ಟೆ ಗ್ರಾಮದ ವಾಸಿಯಾದ ಅಂಕೇಗೌಡ ಬಿನ್ ಲೇಟ್ ಶಿವಲಿಂಗಯ್ಯ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಪಿರ್ಯಾದಿ ಮತ್ತು ಅವರ ಹೆಂಡತಿ ನರಸಮ್ಮ , ತಾಯಿ ಕಲ್ಯಾಣಮ್ಮ ರವರು ಹುಲಿಕಟ್ಟೆ ಗ್ರಾಮದಲ್ಲಿ ವಾಸವಾಗಿದ್ದು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇರುತ್ತಾನೆ. ಇಬ್ಬರೂ ಹೆಣ್ಣು ಮಕ್ಕಳಿಗೆ ಮದುವೆ ಆಗಿದ್ದು ಮಗನಾದ ಕುಮಾರನು ಬೆಂಗಳೂರಿನಲ್ಲಿ ಯಾವುದೋ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಇರುತ್ತಾರೆ. ಪಿರ್ಯಾದಿಯ ಹೆಂಡತಿಯು ದಿನಾಂಕ: 02-12-2017 ರಂದು ಅವರ ಅಳಿಯನಿಗೆ ಉಷಾರಿಲ್ಲದೇ ಇದ್ದರಿಂದ ಬೆಂಗಳೂರಿಗೆ ಹೋಗಿದ್ದರು. ದಿನಾಂಕ: 03-12-2017 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಪಿರ್ಯಾದಿಯು ಕೆಂಚನಹಳ್ಳಿಯಲ್ಲಿ ಸಂಬಂಧಿಕರ ಬೀಗರ ಊಟಕ್ಕೆ ಹೋಗಿದ್ದು, ಅವರ ತಾಯಿ ದನಗಳನ್ನು ಮೇಯಿಸಲು ಹೊಲದ ಹತ್ತಿರ ಹೋಗಿದ್ದರು. ಪಿರ್ಯಾದಿಯು ಊಟ ಮುಗಿಸಿಕೊಂಡು ಮದ್ಯಾಹ್ನ 01-00 ಗಂಟೆಗೆ ಮನೆಯ ಹತ್ತಿರ ಬಂದಾಗ ಮನೆಗೆ ಹಾಕಿದ್ದ ಬೀಗ ತೆಗೆದು ಮನೆಯ ಬಾಗಿಲ ಹತ್ತಿರ ಬಿದ್ದಿದ್ದು ಮನೆಯ ಮುಂಬಾಗಿಲಿನ ಕದವು ತೆರೆದಿದ್ದು, ಪಿರ್ಯಾದಿಯು ಗಾಬರಿಗೊಂಡು ಒಳಗೆ ಹೋಗಿ ನೋಡಲಾಗಿ ಹಾಲ್ ನಲ್ಲಿದ್ದ ಬೀರುವಿನ ಬಾಗಿಲು ತೆರೆದಿದ್ದು ಅದರಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಕೆಳಕ್ಕೆ ಬಿದ್ದಿದ್ದು, ಬೀರುವಿನಲ್ಲಿ ಇಟ್ಟಿದ್ದ 01 ಚಿನ್ನದ ಉಂಗುರ , ಸುಮಾರು 05 ಗ್ರಾಂ ನ ಒಂದು ಜೊತೆ ಓಲೆ, ಸುಮಾರು 05 ಗ್ರಾಂ ನ ಒಂದು ಜೊತೆ ಜುಮುಕಿ, ಒಂದು ಜೊತೆ ಕೆನೆ ಚೈನ್, ಈ ಚಿನ್ನದ ವಡವೆಗಳನ್ನು ಯರೋ ಕಳ್ಳರು ಪಿರ್ಯಾದಿಯ ಮನೆಯವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಈ ವಡವೆಗಳ ಒಟ್ಟು ಬೆಲೆ ಸುಮಾರು 48 ಸಾವಿರ ರೂಗಳಾಗಿರುತ್ತೆ. ಆದ್ದರಿಂದ ಕಳುವಾಗಿರುವ ವಡವೆಗಳನ್ನು ಮತ್ತು ಆರೋಪಿತನನ್ನು ಪತ್ತೆ ಮಾಡಿಕೊಡಬೇಕೆಂದು, ಸದರಿ ವಿಚಾರವನ್ನು ಪಿರ್ಯಾದಿಯು ತನ್ನ ಮಗನಿಗೆ ತಿಳಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆಂತ ಇತ್ಯಾದಿ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ: 185/2017 ಕಲಂ: 379 ಐ.ಪಿ.ಸಿ

ದಿನಾಂಕ: 02/12/2017 ರಂದು ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿ ರುದ್ರೇಶ್ ಬಿನ್ ಲೇಟ್ ಶಿವಣ್ಣ 55 ವರ್ಷಲಿಂಗಾಯಿತರು, ಪ್ಲಂಬಿಂಗ್ ಕೆಲಸ ಹೊಸಬಡಾವಣೆ, ಬಸವೇಶ್ವರ ನಗರ ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಪ್ರತಿದಿನ ತಿಪಟೂರಿನಲ್ಲಿ ಹಾಗೂ ಸುತ್ತಮುತ್ತಲ ಹಳ್ಳಿಗಳಿಗೆ ಪ್ಲಂಬಿಗ್ ಕೆಲಸ ಮಾಡಲು  ಹೋಗುತ್ತಿರುತ್ತೇನೆ, ನನ್ನ ದಿನ ನಿತ್ಯದ  ಕೆಲಸ ಕಾರ್ಯಗಳಿಗೆ ಈಗ್ಗೆ ಸುಮಾರು  03  ವರ್ಷಗಳ ಹಿಂದೆ  ಟಿವಿಎಸ್ ಕಂಪನಿಯ  ಕೆ ಎ 44 ಆರ್ 3037 ನೇ ನಂಬರಿನ   TVS  PHOENIX DISC   ದ್ವಿಚಕ್ರವಾಹನವನ್ನು  ತಿಪಟೂರಿನ ಟಿವಿಎಸ್ ಷೋ ರೂಮಿನಲ್ಲಿ ಖರೀದಿ ಮಾಡಿರುತ್ತೇನೆ, ದಿನಾಂಕ 21/05/2017 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ನಾನು ನನ್ನ ಸ್ವಂತ ಕೆಲಸದ  ನಿಮಿತ್ತ  ತಿಪಟೂರು ಟೌನ್ನಿನೊಳಗೆ ಬಂದು ತಿಪಟೂರಿನ ಬಿ,ಹೆಚ್ ರಸ್ತೆಯಲ್ಲಿರುವ ವೈಭವ ಮಹಲ್ ಮುಂದೆ ನನ್ನ ಬಾಬ್ತು  ಕೆ ಎ 44 ಆರ್ 3037 ನೇ ನಂಬರಿನ TVS  PHOENIX  DISC ದ್ವಿಕಚ್ರವಾಹನವನ್ನು ನಿಲ್ಲಿಸಿ, ವೈಭವ ರೆಸ್ಟೋರೆಂಟಿಗೆ ಹೋಗಿ ಊಟ ಮಾಡಿಕೊಂಡು ಬಂದು ನಾನು ನಿಲ್ಲಿಸಿದ್ದ ನನ್ನ ದ್ವಿಚಕ್ರವಾಹನವನ್ನು ನೋಡಲಾಗಿ ಕಾಣಲಿಲ್ಲ, ನಾನು ಮನೆಗೆ ಹೋಗಿ ನನ್ನ ಮಕ್ಕಳಿಗೆ ವಿಚಾರ ತಿಳಿಸಿ,  ನಾನು ಮತ್ತು ನನ್ನ ಮಕ್ಕಳು ಹಾಗೂ ನನ್ನ ಸ್ನೇಹಿತರು ತಿಪಟೂರಿನ ಎಲ್ಲಾ ಕಡೆ ಹಾಗೂ ತಿಪಟೂರಿನ ಸುತ್ತ-ಮುತ್ತಲಿನ ಹಳ್ಳಿಗಳ ಕಡೆ ಇಲ್ಲಿಯವರೆವಿಗೆ ಹುಡಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ, ಯಾರೋ ಕಳ್ಳರು ನನ್ನ  ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ನನ್ನ ಬಾಬ್ತು TVS  PHOENIX  DISC ದ್ವಿಚಕ್ರವಾಹನದ ಚಾಸ್ಸಿ ನಂಬರ್ MD625SF46E1D77672, ಇಂಜಿನ್ ನಂಬರ್ CF4DE1077115 ಆಗಿದ್ದು, ಇದರ ಬೆಲೆ ಅಂದಾಜು ಬೆಲೆ 35,000=00 ರೂ ಆಗಿರುತ್ತದೆ, ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗದೇ ಇರುವುದರಿಂದ  ನನ್ನ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಈ ದಿನ ತಡವಾಗಿ ಬಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 103/2017 ಕಲಂ 324, 427, 447, 504, 506, 149 ಐಪಿಸಿ

ದಿನಾಂಕ:-03/12/2017 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಪಿರ್ಯಾದಿ ಆನಂದಮೂರ್ತಿ ಬಿನ್ ರಂಗಪ್ಪ, ನಾಗೇನಹಳ್ಳಿ, ದೊಡ್ಡೇರಿ ಹೋ, ಮಧುಗಿರಿ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂಧರೆ ನನ್ನ ಹೆಸರಿನಲ್ಲಿ ಚಂದ್ರಗಿರಿ ಗ್ರಾಮದ ಸ.ನಂ 482 ರಲ್ಲಿ 2 ಎಕರೆ ಜಮೀನು ಇದ್ದು, ಇದಕ್ಕೆ ಖಾತೆ ಪಹಣಿ ಇರುತ್ತದೆ. ಈ ಜಮೀನಿನಲ್ಲಿರುವ ಅಡಿಕೆ ಫಸಲನ್ನು ಸುಮಾರು 10 ವರ್ಷದಿಂದ ಅನುಭವಿಸಿಕೊಂಡು ಬಂದಿರುತ್ತೇನೆ. ದಿ 02/12/2017 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ನನ್ನ ಅಣ್ಣಂದಿರಾದ ರಂಗನಾಥಪ್ಪ, ರಮೇಶ ಮತ್ತು ತಮ್ಮಂದಿರಾದ ಪ್ರಕಾಶ, ಚಂದ್ರಣ್ಣ, ರಮೇಶನ ಮಗನಾದ ಪವನ್, ರಂಗನಾಥಪ್ಪನ ಮಗ ಸುರೇಶ, ರಮೇಶನ ಹೆಂಡತಿ ಪುಟ್ಟಮ್ಮ, ಪ್ರಕಾಶನ ಹೆಂಡತಿ ಸಾವಿತ್ರಮ್ಮ ರವರುಗಳು ಸೇರಿ ಸುಮಾರು 5 ಜನ ಕೂಲಿಗಾರರನ್ನು ಕರೆದುಕೊಂಡು ಹೋಗಿ ಫಸಲಿಗೆ ಬಂದಿರುವ ಒಂದು ಟ್ರಾಕ್ಟರ್ ಅಡಿಕೆ ಕಿತ್ತು ಕೆಎ 06 ಟಿ 5014 ನೇ ಟ್ರಾಕ್ಟರ್ ಗೆ ಲೋಡ್ ಮಾಡಿದ್ದಾರೆ. ಈ ಅಡಿಕೆ ಬೆಲೆ 2 ಲಕ್ಷವಾಗಿರುತ್ತೆ. ಈ ವಿಚಾರವನ್ನು ನಾನು ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ, ದೌರ್ಜನ್ಯ ಎಸಗಿದ್ದಾರೆ. ನಂತರ ನಾನು ಕಂಪ್ಲೇಂಟ್ ಕೊಡಲು ಬಡವನಹಳ್ಳಿ ಠಾಣೆಗೆ ಬಂದಾಗ ಜಮೀನಿನ ಹತ್ತಿರ ನನ್ನ ಹೆಂಡತಿಯಾದ ಮಹದೇವಮ್ಮಳನ್ನು ಈ 8 ಜನ ಸೇರಿಕೊಂಡು ದೌರ್ಜನ್ಯ ಎಸಗಿದ್ದಾರೆ. ಹಾಗೂ ಪುಟ್ಟಮ್ಮ, ಸಾವಿತ್ರಮ್ಮ ದೊಣ್ಣೆಯಿಂದ ಬಲಗೈಗೆ ಕಾಲುಗಳಿಗೆ ಹೊಡೆದು ಹಲ್ಲೆ ಮಾಡಿ, ಮಹದೇವಮ್ಮಳ ಎದೆಯ ಮೇಲೆ ಕಾಲಿಟ್ಟು ತುಳಿದಿದ್ದಾರೆ. ರಮೇಶ ಎಂಬುವರ ಮಗನಾದ ಪವನ್ ಎಂಬಾತ ಮಚ್ಚಿನಿಂದ ಹೊಡೆಯಲು ಬಂದಿದ್ದಾನೆ. ನಂತರ ಫಸಲು ತುಂಬಿರುವ ಅಡಿಕೆಯ ಟ್ರಾಕ್ಟರ್ ಅನ್ನು ತೆಗೆದುಕೊಂಡು ಹೋಗಿರುತ್ತಾರೆಂತ ಇತ್ಯಾದಿಯಾಗಿ ನೀಡಿದ ದೂರಿನ ಅಂಶವಾಗಿರುತ್ತೆ.


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 28 guests online
Content View Hits : 212338