lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< December 2017 >
Mo Tu We Th Fr Sa Su
        1 3
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 30 31
Saturday, 02 December 2017
Crime Incidents 2-12-17

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.108/2017, ಕಲಂ: 279, 337 ಐ.ಪಿ.ಸಿ.

ದಿನಾಂಕ:01/12/2017 ರಂದು ಸಂಜೆ 04:50 ಗಂಟೆ ಸಮಯಕ್ಕೆ ಪಿರ್ಯಾದಿ ಶಿವಶಂಕರ ಬಿನ್ ನಾಗರಾಜಪ್ಪ, 23 ವರ್ಷ, ಕುರುಬ ಜನಾಂಗ, ಜಿರಾಯ್ತಿ ಕೆಲಸ, ಚಿಕ್ಕದಾಳವಾಟ  ಗ್ರಾಮ, ಕೊಡಿಗೇನಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು,ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:27/11/2017 ರಂದು ಬೆಳಿಗ್ಗೆ ಸುಮಾರು 06:00 ಗಂಟೆ ಸಮಯದಲ್ಲಿ ಬ್ರಹ್ಮದೇವರಹಳ್ಳಿ ಗ್ರಾಮದ ಅಂಜಯ್ಯ ರವರಿಗೆ ದನಗಳನ್ನು ಕೊಂಡುಕೊಂಡ ಬಾಬ್ತು ಹಣವನ್ನು ಕೊಟ್ಟು ಬರುತ್ತೇನೆಂದು ನಮ್ಮ ತಂದೆ ನಾಗರಾಜಪ್ಪರವರು ನಮ್ಮ ಬಾಬ್ತು ಕೆಎ-06-ಇಕೆ-2493 ನೇ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಬಂದರು. ಅವರು ಮನೆಯಿಂದ ಬಂದ ಸುಮರು 2 ಗಂಟೆಗಳ ನಂತರ ನಮ್ಮ ಸಂಬಂದಿ ಬ್ರಹ್ಮದೇವರಹಳ್ಳಿ ಗ್ರಾಮದ ವಾಸಿ ರಘುಪತಿ ಎಂಬುವರು ನನಗೆ ಪೋನ್ ಮಾಡಿ ಈ ದಿನ ಬೆಳಿಗ್ಗೆ ಸುಮಾರು 08:00 ಗಂಟೆ ಸಮಯದಲ್ಲಿ ನಾನು ಚಿನ್ನೇನಹಳ್ಳಿ ಗ್ರಾಮದ ಬಸ್‌ಸ್ಟಾಂಡ್‌ನಲ್ಲಿ ನಿಂತಿದ್ದಾಗ ನಿನ್ನ ತಂದೆ ನಾಗರಾಜಪ್ಪನವರು  ನಿಮ್ಮ ಬಾಬ್ತು ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಮದುಗಿರಿ-ಪಾವಗಡ ಮುಖ್ಯರಸ್ತೆಯಲ್ಲಿ ಮಿಡಿಗೇಶಿ ಕಡೆಯಿಂದ ಬಂದು ಕತ್ತಿರಾಜನಹಳ್ಳಿ ಗ್ರಾಮದ ಕಡೆ ಹೋಗಲು ಸದರಿ ಟಿವಿಎಸ್‌ ನಲ್ಲಿ ರಸ್ತೆ ದಾಟುತ್ತಿದ್ದಾಗ ಅದೇ ಸಮಯಕ್ಕೆ ಅದೇ ರಸ್ತೆಯಲ್ಲಿ ಮಧುಗಿರಿ ಕಡೆಯಿಂದ ಬಂದ ಕೆಎ-51-ಎಂ-9708 ನೇ ಟಾಟಾ ಸುಮೋ ವಾಹನವನ್ನು ಅದರ ಚಾಲಕ ಅತಿ ಜೋರಾಗಿ ಮತ್ತು ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಿನ್ನ ತಂದೆ ನಾಗರಾಜಪ್ಪನವರಿಗೆ ಡಿಕ್ಕಿ ಹೊಡೆಸಿದ್ದರಿಂದ ನಿನ್ನ ತಂದೆಯ ಎಡ ಕಾಲಿಗೆ ಮತ್ತು ಎಡ ಹಣೆಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿರುತ್ತವೆ ಹಾಗೂ ಟಿವಿಎಸ್ ಸಹ ಜಖಂ ಆಗಿರುತ್ತೆ. ಅಪಘಾತದಲ್ಲಿ ಗಾಯಗೊಂಡಿರುವ ನಿಮ್ಮ ತಂದೆಯನ್ನು ಆಪಘಾತಪಡಿಸಿದ ಟಾಟಾ ಸುಮೋ ವಾಹನದಲ್ಲೆ ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ನೀನು ಮಧುಗಿರಿಗೆ ಬಾ ಎಂತ ತಿಳಿಸಿದರು.  ವಿಷಯ ತಿಳಿದ ನಾನು ಕೂಡಲೇ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ನನ್ನ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ವೈಧ್ಯರ ಸಲಹೆ ಮೇರೆಗೆ ನಮ್ಮ ತಂದೆ ನಾಗರಾಜಪ್ಪರವರನ್ನು ತುಮಕೂರು ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿದ್ದು ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ದಿನಾಂಕ:27/11/2017 ರಂದು ಬೆಳಿಗ್ಗೆ ಸುಮಾರು 08:00 ಗಂಟೆ ಸಮಯದಲ್ಲಿ ರಸ್ತೆ ದಾಟುತ್ತಿದ್ದ ನಮ್ಮ ತಂದೆಯ ಟಿವಿಎಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವುಂಟುಮಾಡಿದ ಕೆಎ-51-ಎಂ-9708 ನೇ ಟಾಟಾ ಸುಮೋ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ಗುಬ್ಬಿ ಪೊಲೀಸ್ ಠಾಣೆ ಮೊ.ಸಂ 181/2017 ಕಲಂ 397 ಐಪಿಸಿ

 

ದಿನಾಂಕ  01-12-2017 ರಂದು ಮಧ್ಯ ರಾತ್ರಿ 3-30 ಗಂಟೆಗೆ ಗುಬ್ಬಿ  ಸರ್ಕಾರಿಆಸ್ಪತ್ರೆಯಲ್ಲಿ ಗಾಯಾಳು  ಹೊನ್ನಮ್ಮ ರವರ ಹೇಳಿಕೆ ಪಡೆದಿದ್ದು ಹೇಳಿಕೆ ಅಂಶವೇನೆಂದರೆ,   ನಾನು ಮೇಲ್ಕಂಡ  ವಿಳಾಸದಲ್ಲಿ ನನ್ನ ಹೆಣ್ಣು ಮಕ್ಕಳಾದ ನಿತ್ಯ  10 ವರ್ಷ, ನಿರ್ಮಲ 7 ವರ್ಷ, ಮತ್ತು ಸಿಂಚನ  5 ವರ್ಷ  ಇವರುಗಳೊಂದಿಗೆ ತೋಟದ ಮನೆಯಲ್ಲಿ ವಾಸವಾಗಿರುತ್ತೇವೆ.    ನನ್ನ ಗಂಡ ನಾಗೇಶ ಈಗ್ಗೆ 4 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ.  ನನ್ನ ತವರು ಮನೆ ಸಂಪಿಗೆ  ಹತ್ತಿರ ಬೆಣ್ಣೂರು ಗ್ರಾಮವಾಗಿರುತ್ತೆ.  ನನ್ನ ಗಂಡ ತೀರಿದ ನಂತರ ನಮ್ಮ ಮನೆಯಲ್ಲಿ   ನನ್ನ ತಮ್ಮ ಕುಮಾರ ವಾಸವಾಗಿರುತ್ತಾನೆ.  ನಮ್ಮ ತಂದೆ ಮಾಳಗಯ್ಯ ಆಗಾಗ ಬಂದು  ನಮ್ಮನ್ನು ನೋಡಿಕೊಂಡು  ಹೋಗುತ್ತಿರುತ್ತಾರೆ.   ದಿ 30-11-2017ರಂದು ಸಂಜೆ 7 ರಿಂದ 7-30  ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಹೊರಗಡೆ ಪಾತ್ರೆಗಳನ್ನು ತೊಳೆಯುತ್ತಿದ್ದೆನು.    ಆಗ ತ್ಯಾಗಟೂರು ಗೇಟ್ ಕಡೆಯಿಂದ 2 ಬೈಕ್ ಗಳಲ್ಲಿ 5 ಜನರು ಬಂದು ನಮ್ಮ ಮನೆಯ   ಮುಂದೆ ರಸ್ತೆಯಲ್ಲಿ ನಿಲ್ಲಿಸಿಕೊಂಡು ಅವರಲ್ಲಿ ಮೂವರು ನನ್ನ ಹತ್ತಿರ ಬಂದು ಪೆಟ್ರೋಲ್ ಖಾಲಿಯಾಗಿದೆ ಖಾಲಿ ಕ್ಯಾನ್ ಕೊಡಿ ಎಂದು ಕೇಳಿದರು.   ನಾನು ನಮ್ಮಲ್ಲಿ ಖಾಲಿ ಕ್ಯಾನ್ ಇಲ್ಲಾ ಎಂದು ಹೇಳಿ  ಪಾತ್ರೆಗಳನ್ನು ತೆಗೆದುಕೊಂಡು ಮನೆಯೊಳಗೆ ಬಂದಾಗ ನನ್ನ ಹಿಂದೆಯಯೇ ಮೂವರು ಮನೆಯೊಳಗೆ ಬಂದು ಟಿ.ವಿ. ನೋಡುತ್ತಾ ಕುಳಿತಿದ್ದ ನನ್ನ ತಮ್ಮ ಕುಮಾರನಿಗೆ  ಒಬ್ಬನು ಸ್ಟೀಲ್  ರಾಡಿನಿಂದ  ತಲೆಗೆಹೊಡೆದಾಗ   ಆತ ಪ್ರಜ್ಞೆ  ತಪ್ಪಿದೆನು.   ನಂತರ ನನಗೆ ವಡವೆಗಳನ್ನೆಲ್ಲಾ ಕೊಡು ಎಂದು ಕೈ ನಿಂದ ಕೆನ್ನೆಗೆ ಹೊಡೆದು ರಾಡಿನಿಂದ ಬೆನ್ನಿಗೆ  ಹೊಡೆದು ನಿನ್ನನ್ನು ಕೊಲೆ  ಮಾಡುತ್ತೇವೆ  ಎಂದು ಹೆದರಿಸಿದಾಗ ನನ್ನ ಕೊರಳಿನಲ್ಲಿದ್ದ  60 ಗ್ರಾಂ ತೂಕದ 2 ಎಳೆ  ಮಾಂಗಲ್ಯದ ಸರವನ್ನು ತೆಗೆದುಕೊಟ್ಟೆನು.  ಆ ನಂತರ ನನ್ನ ಕಿವಿಯಲ್ಲಿದ್ದ  8 ಗ್ರಾಂ ತೂಕದ  ಲೆಗಳನ್ನು ಅವರೇ ಬಲವಂತವಾಗಿ ಬಿಚ್ಚಿಕೊಂಡರು.  ನನ್ನ  ಎರಡೂ ಕಾಲು  ಚೈನುಗಳನ್ನು  (ಬೆಳ್ಳಿ)   ಹಾಗೂ  ಇಬ್ಬರು ಹೆಣ್ಣು ಮಕ್ಕಳ ಬೆಳ್ಳಿಯ ಕಾಲು ಚೈನುಗಳನ್ನು  ಮತ್ತು ನನ್ನ ತಮ್ಮ ಕುಮಾರನ ಕೈಲಿದ್ದ ಬೆಳ್ಳಿಯ ಕಡಗವ ನ್ನು ಬಿಚ್ಚಿಕೊಂಡರು.  ನಂತರ ಬೀರುವಿನಲ್ಲಿ ಎಷ್ಟು ಹಣ ಇಟ್ಟಿದ್ದೀಯಾ  ಕೊಡು ಇಲ್ಲದಿದ್ದರೆ  ಕೊಲೆ ಮಾಡುತ್ತೇವೆಂದು ಬಟನ್ ಚಾಕುವಿನಿಂದ ನನ್ನ ಮೇಲ್ಭಾಗದ ತುಟಿಗೆ ಕೊಯ್ದು ರಾಡಿನಿಂದ ನನ್ನ  ಎಡಗೈಗೆ  ಹೊಡೆದು ಸ್ಕ್ರೂ ಡ್ರೈವ್ ನಿಂದ ನನ್ನ ಹೊಟ್ಟೆಗೆ ಚುಚ್ಚಿದರು.  ಆಗ ನನ್ನ ಹೆಣ್ಣು  ಮಕ್ಕಳು ನಮ್ಮಮ್ಮನನ್ನು ಕೊಲೆ ಮಾಡುತ್ತಾರೆಂದುಕೊಂಡು ನಮ್ಮ ತಂದೆಯವರು ನಾವು ನಿಟ್ಟೂರಿನಲ್ಲಿ ಹೊಸದಾಗಿ ಕಟ್ಟುತ್ತಿರುವ ಮನೆಗೆ ಮರದ ಸಾಮಾನುಗಳನ್ನು ತರಲೆಂದು ಇಟ್ಟಿದ್ದ 60 ಸಾವಿರ ರೂಗಳನ್ನು ಬೀರುವಿನಲ್ಲಿ ಇಟ್ಟಿರುತ್ತಾರೆಂದು ತಿಳಿಸಿ ಗೋಡೆಗೆ ನೇತು ಹಾಕಿದ್ದ ಬೀರುವಿನ ಬೀಗದ ಕೀ ಕೊಟ್ಟರು.  ಅವರು ಬೀರುವನ್ನು ತೆಗೆದು ಚೆಲ್ಲಾ-ಪಿಲ್ಲಿ ಮಾಡಿ 60 ಸಾವಿರ ಹಣವನ್ನು ತೆಗೆದುಕೊಂಡರು.  ಅಲ್ಲದೆ ನನ್ನ ತಮ್ಮನ  ಜೇಬಿನಲ್ಲಿದ್ದ ಸುಮಾರು 20 ಸಾವಿರ ರೂ. ಹಣವನ್ನು ತೆಗೆದುಕೊಂಡರು.  ನಂತರ ಮನೆಯಲ್ಲೆಲ್ಲಾ ತಡಕಾಡಿ ನಮ್ಮನನ್ನೆಲ್ಲಾ ರೂ.ನಲ್ಲಿ ಕೂಡಿ ಮನೆಯ ಡೋರ್ ಲಾಕ್ ಹಾಕಿಕೊಂಡು ಎರಡೂ ಬೈಕ್ ಗಳಲ್ಲಿ ಬಂದವರಲ್ಲಿ  ಇಬ್ಬರು ರಸ್ತೆಯಲ್ಲಿ ಕಾಯುತ್ತಿದ್ದರು.  ಮನೆಯೊಳಗೆ ಬಂದ ಮೂ ವರು ನಮ್ಮ ಮನೆಯ ಟಿ.ವಿ.ಯನ್ನು ಜೋರಾಗಿ ಸೌಂಡ್ ಕೊಟ್ಟು ನಮ್ಮ ಎರಡೂ ಮೊಬೈಲ್ ಫೋನ್ ಗಳನ್ನು ಕಿತ್ತುಕೊಂಡಿರುತ್ತಾರೆ.  ಈ  ಮೂವರಲ್ಲಿ ಒಬ್ಬನು ಮಂಕಿ ಕ್ಯಾಪ್ ಹಾಕಿದ್ದು ಮೀಸೆ ಬೋಳಿಸಿದ್ದನು.   ಮತ್ತೊಬ್ಬನು ದಪ್ಪನಾಗಿದ್ದು ಬೆಳ್ಳಗೆ ಇದ್ದನು.  ಈತನ ಕುತ್ತಿಗೆಯ ಎಡಭಾಗ ಸ್ಟಾರ್ ಹಾಗೂ ಸಿಂಹದ ಆಕೃತಿಯ ಹಚ್ಚೆ ಹಾಕಿಸಿದ್ದನು.  ಮತ್ತೊಬ್ಬ ಸಣ್ಣಗೆ  ಉದ್ದಕ್ಕಿದ್ದು  ಬಿಳಿ ಮತ್ತು ನೀಲಿ ಬಣ್ಣದ ಟೀ-ಷರ್ಟ್ ಮತ್ತು ಪ್ಯಾಂಟ್ ಧರಿಸಿದ್ದನು.  ಮೂವರೂ ಕನ್ನಡ- ಹಿಂದಿ ಮಾತನಾಡುತ್ತಿದ್ದರು.  ಆಮೇಲೆ 10-11 ಗಂಟೆಯಾದ ಮೇಲೆ ನನ್ನ ತಮ್ಮನಿಗೆ ಪ್ರಜ್ಞೆ ಬಂದಾಗ ನನ್ನ ತಮ್ಮ ಮನೆಯ ಮೇಲ್ಭಾಗದ ಷೀಟನ್ನು ಹೊಡೆದು ಹೊರಗೆ ಬಂದು ನೆರೆ-ಹೊರೆಯವರಾದ ಸಿದ್ದೇಶ್ ರವರಿಗೆ ತಿಳಿಸಿ ನನ್ನ ತಂದೆಗೆ ತಿಳಿಸಿದಾಗ  ಸುಮಾರು 11-30 ಗಂಟೆಗೆ ಬೆಣ್ಣೂರಿನಿಂದ  ನಮ್ಮ ತಂದೆ ಬಂದು ಅವರ ಹತ್ತಿರ  ಇದ್ದ  ಮನೆಯ  ಮತ್ತೊಂದು ಬೀಗದ ಕೀ ನಲ್ಲಿ ಬೀಗ ತೆಗೆದು  ನಮ್ಮನ್ನು ನಿಟ್ಟೂರಿಗೆ ಬೈಕಿನಲ್ಲಿ  ಕೂರಿಸಿಕೊಂಡು  ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಕೊಡಿಸಿ ಆನಂತರ  108 ಆಂಬುಲೆನ್ಸ್ ಗೆ ಫೋನ್ ಮಾಡಿ ಕರೆಸಿಕೊಂಡು  ಅದರಲ್ಲಿ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿರುತ್ತೇವೆ.  ಕಳ್ಳರೆಲ್ಲರೂ 25 ರಿಂ 30 ವರ್ಷ ಆಸುಪಾಸಿನವರಾಗಿರುತ್ತಾರೆ.   ನಮ್ಮ ಮನೆಗೆ ನುಗ್ಗಿ ನನ್ನ ಹಾಗೂ ನನ್ನ ತಮ್ಮ ಕುಮಾರನ ಮೇಲೆ ಹಲ್ಲೆ ಮಾಡಿ ನಮ್ಮಿಂದ ಹಣ ಮತ್ತು ವಡವೆಗಳನ್ನು ದೋಚಿಕೊಂಡು  ಹೋಗಿರುವ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ  ಹೇಳಿಕೆಯ  ಮೇರೆಗೆ   ಪ್ರಕರಣ  ದಾಖಲಿಸರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 74 guests online
Content View Hits : 304485