lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< December 2017 >
Mo Tu We Th Fr Sa Su
        2 3
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 30 31
Friday, 01 December 2017
Crime Incidents 1-12-17

ಅಮೃತೂರು ಪೊಲೀಸ್ ಠಾಣಾ ಮೊನಂ-215/2017 ಕಲಂ-279, 337 ಐಪಿಸಿ ಜೊತೆಗೆ 134(ಎ&ಬಿ)187 ಐಎಂವಿ ಆಕ್ಟ್.

 

ದಿನಾಂಕ: 30-11-2017 ರಂದು 21-30 ಗಂಟೆಯಲ್ಲಿ ಪಿರ್ಯಾದಿ ಸುರೇಂದ್ರ ಬಿನ್ ವಿಶ್ವನಾಥ ಗೌಡ, 28 ವರ್ಷ, ಒಕ್ಕಲಿಗರು, ವ್ಯವಸಾಯ, ಕಲ್ಮಂಜ ಗ್ರಾಮ, ಕಲ್ಮಂಜ ಹೋಬಳಿ, ಬೆಳ್ತಂಗಡಿ ತಾಲೋಕ್, ದಕ್ಷಿಣ ಕನ್ನಡ ಜಿಲ್ಲೆರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ದಿನಾಂಕ: 29-11-2017 ರಂದು  ಸಂಜೆ ಸುಮಾರು 4-30 ಗಂಟೆಗೆ ನಾನು ನನ್ನ ಬಾಬ್ತು ಕೆಎ-21, ಎಂ-7401 ನೇ ಸ್ಕಾರ್ಪಿಯೋ ಕಾರಿನಲ್ಲಿ ನಮ್ಮ ಗ್ರಾಮವನ್ನು ಬಿಟ್ಟು ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ನಮ್ಮ ಸಂಬಂದಿಗಳಾದ ದಿನೇಶ್ ಗೌಡ, ಕಾಮರಾಜ್ ಮತ್ತು ಶರತ್ ಪ್ರಿಯಾ ರವರನ್ನು ಪಿಕಪ್ ಮಾಡಬೇಕಾಗಿದ್ದರಿಂದ ಬೆಂಗಳೂರಿಗೆ ರಾತ್ರಿ ಸುಮಾರು 12-00 ಗಂಟೆಗೆ ಹೋಗಿ ಅವರನ್ನು ದಿನಾಂಕ: 30-11-2017 ರಂದು ರಾತ್ರಿ ಸುಮಾರು 1-00 ಗಂಟೆಯಲ್ಲಿ ಪಿಕಪ್ ಮಾಡಿ ಅಲ್ಲಿ ಊಟ ಮಾಡಿ ನಂತರ ಅವರನ್ನು ನನ್ನ ಬಾಬ್ತು ಕೆಎ-21, ಎಂ-7401 ನೇ ಸ್ಕಾರ್ಪಿಯೋ ಕಾರಿನಲ್ಲಿ ಕರೆದುಕೊಂಡು ದಿನಾಂಕ: 30-11-2017 ರಂದು ಬೆಳಗಿನ ಜಾವ ಸುಮಾರು 3-55 ಗಂಟೆಯಲ್ಲಿ ಎನ್.ಹೆಚ್-75 ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಹಾಸನ ಮಾರ್ಗವಾಗಿ ನಮ್ಮ ಗ್ರಾಮದ ಕಡೆಗೆ ಹೋಗುವಾಗ ಎಡೆಯೂರಿನ ಹತ್ತಿರ ಹೇಮಾವತಿ ಕ್ರಾಸ್ ಬಳಿ ಬೆಂಗಳೂರು-ಹಾಸನ ರಸ್ತೆಯಲ್ಲಿ ರಸ್ತೆಯ ಬಲ ಟ್ರಾಕ್ ನಲ್ಲಿ ಹೋಗುತ್ತಿರುವಾಗ್ಗೆ ನಮ್ಮ ಹಿಂಬದಿಯಿಂದ ಬಂದ ಒಂದು ಕ್ಯಾಂಟರ್ ನ ಚಾಲಕ ಎಡಭಾಗದಿಂದ ಓವರ್ ಟೇಕ್ ಮಾಡಿ ಯಾವುದೇ ಸಿಗ್ನಲ್ ನೀಡದೇ ತನ್ನ ವಾಹನವನ್ನು ಬಲ ಟ್ರಾಕ್‌ ಗೆ ಅಠಾತ್ತಾಗಿ ತೆಗೆದುಕೊಂಡಿದ್ದರಿಂದ ನಮ್ಮ ಕಾರು ಸದರಿ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ನಮ್ಮ ಕಾರಿನ ಟಾಪ್, ಎಡಭಾಗದ ಡೋರ್ ಗಳು, ಬಾನೆಟ್, ಕಾರಿನ ಎಲ್ಲಾ ಗ್ಲಾಸ್ ಗಳು, ಅಪಘಾತದ ರಭಸಕ್ಕೆ ಹಿಂಭಾಗದ ಡೋರ್ ಓಪನ್ ಆಗಿರುತ್ತದೆ. ಕ್ಯಾಂಟರ್ ನ ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಈ ಅಪಘಾತದಿಂದ ನನಗೆ, ದಿನೇಶ್ ಗೌಡ ಮತ್ತು ಶರತ್ ಪ್ರಿಯಾ ರವರಿಗೆ ಯಾವುದೇ ಗಾಯಗಳಾಗಲಿಲ್ಲ. ಕಾಮರಾಜ್ ರವರಿಗೆ ಮುಖಕ್ಕೆ ಪೆಟ್ಟು ಬಿದ್ದಿರುತ್ತೆ. ನಾವುಗಳು ಕಾಮರಾಜ್ ರವರಿಗೆ ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ನಾನು ಅಪಘಾತದಿಂದಾದ ಗಾಬರಿಯಿಂದ ನಮ್ಮ ಸಂಬಂದಿಗಳ ಮನೆ ಬೆಂಗಳೂರಿಗೆ ಹೋಗಿ ವಿಚಾರವನ್ನು ನಮ್ಮ ಸಂಬಂದಿಕರುಗಳಿಗೆ ತಿಳಿಸಿ ಈಗ ಬಂದು ದೂರು ನೀಡುತ್ತಿದ್ದೇನೆ. ರಸ್ತೆಯಲ್ಲಿ ಎಡಗಡೆಯಿಂದ ಓವರ್ ಟೇಕ್  ಮಾಡಿ ಯಾವುದೇ ಸಿಗ್ನಲ್ ನೀಡದೇ ಅತಿವೇಗವಾಗಿ ಕ್ಯಾಂಟರ್ ಅನ್ನು ಬಲಗಡೆಗೆ ತೆಗೆದುಕೊಂಡು ನಮ್ಮ ಕಾರಿಗೆ ಅಪಘಾತಪಡಿಸಿದ ಕ್ಯಾಂಟರ್ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.107/2017, ಕಲಂ:78(iii) ಕೆ.ಪಿ.ಆಕ್ಟ್.

ದಿನಾಂಕ:30/11/2017 ರಂದು ರಾತ್ರಿ 08:30 ಗಂಟೆಗೆ ಎಂ.ಜಿ.ನಾಗರಾಜು, ಪಿ.ಐ. ಡಿಸಿಐಬಿ, ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ:30/11/2017 ರಂದು 04:30 ಪಿ.ಎಂ.ಗಂಟೆಗೆ ನಾನು ಕಛೇರಿಯಲ್ಲಿ ಕರ್ತವ್ಯದಲ್ಲಿರುವಾಗ್ಗೆ ನನಗೆ ಬಂದ ಖಚಿತ ಮಾಹಿತಿ ಏನೆಂದರೆ, ಮಿಡಿಗೇಶಿ ಪೊಲೀಸ್‌ ಠಾಣೆ ಸರಹದ್ದು ಮಧುಗಿರಿ ತಾಲ್ಲೋಕು, ನಾರಪ್ಪನಹಳ್ಳಿ ಗ್ರಾಮದ ಲೋಕೇಶರೆಡ್ಡಿ ಎಂಬುವವರ ಮನೆ ಹತ್ತಿರ ಮಟ್ಕಾ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಮಾಹಿತಿಯನ್ನು ಮಾನ್ಯ ಎಸ್.ಪಿ.ರವರಿಗೆ ತಿಳಿಸಿ ಸದರಿಯವರ ಮಾರ್ಗದರ್ಶನದ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಸಿಹೆಚ್‌ಸಿ-281, ಸಿಹೆಚ್‌ಸಿ-290, ಸಿಹೆಚ್‌ಸಿ-14, ಸಿಹೆಚ್‌ಸಿ-16, ಹೆಚ್‌‌ಸಿ-157, ಸಿಪಿಸಿ-454 ರವರುಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ 06:30 ಪಿ.ಎಂ.ಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಲೋಕೇಶರೆಡ್ಡಿ ಎಂಬುವವರ ಮನೆಯ ಬಳಿ ಒಬ್ಬ ಆಸಾಮಿಯು ಜನರನ್ನು ಕುರಿತು ಬನ್ನಿ ಮಟ್ಕಾ ಚೀಟಿ ಬರೆಸಿಕೊಳ್ಳಿ ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇವೆ ಎಂತ ಹೇಳುತ್ತಾ ನಂತರ ಮೊಬೈಲ್‌ನಲ್ಲೂ ಸಹ ಈ ವಿಚಾರವನ್ನೇ ಮಾತನಾಡುತ್ತಾ ಹಣವನ್ನು ಕಟ್ಟಿಸಿಕೊಳ್ಳುತ್ತಾ ಮಟ್ಕಾ ಜೂಜಾಟದಲ್ಲಿ ತೊಡಗಿದ್ದವನನ್ನು ನಾನು ಮತ್ತು ಸಿಬ್ಬಂದಿಯವರುಗಳು ಹೋಗಿ ದಾಳಿ ನಡೆಸಿದ್ದು ಅಲ್ಲಿ ನೆರೆದಿದ್ದವರು ಓಡಿ ಹೋಗಿದ್ದು, ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಾ ಮತ್ತು ಮೊಬೈಲ್‌ನಲ್ಲಿ ಪಣಕ್ಕೆ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದ ಆಸಾಮಿಗಳನ್ನು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ಲೋಕೇಶರೆಡ್ಡಿ ಬಿನ್ ಅಂಜನರೆಡ್ಡಿ, 47 ವರ್ಷ, ನಾರಪ್ಪನಹಳ್ಳಿ, ಮಧುಗಿರಿ ತಾಲ್ಲೋಕು ಎಂತ ತಿಳಿಸಿದ್ದು, ಮತ್ತೊಬ್ಬನ ಹೆಸರು ವಿಳಾಸ ಕೇಳಲಾಗಿ ಗೋವಿಂದಪ್ಪ ಬಿನ್ ಲೇಟ್‌ ಉಗ್ರಪ್ಪ, 74 ವರ್ಷ, ಚಂದ್ರಬಾವಿ, ಮಧುಗಿರಿ ತಾಲ್ಲೋಕು ಎಂತ ತಿಳಿಸಿದ್ದು, ಸ್ಥಳದಲ್ಲಿ ದೊರೆತ ಮಟ್ಕಾ ನಂಬರ್‌ ಬರೆದಿರುವ ಮೂರು ಚೀಟಿ, ಮಟ್ಕಾ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದ ಎರಡು ಮೊಬೈಲ್‌ಗಳು, ಒಂದು ಪೆನ್‌ ಹಾಗೂ ಪಣಕ್ಕೆ ಕಟ್ಟಿಸಿಕೊಂಡಿದ್ದ 31,270 ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದು ಮಿಡಿಗೇಶಿ ಪೊಲೀಸ್‌ ಠಾಣೆಯ ಪಿ.ಎಸ್.ಐ.ರವರನ್ನು ಸ್ಥಳಕ್ಕೆ ಬರಮಾಡಿಕೊಂಡು ಅವರ ವಶಕ್ಕೆ ಮೇಲ್ಕಂಡ ಆಸಾಮಿಗಳನ್ನು ಮತ್ತು ಸ್ಥಳದಲ್ಲಿ ದೊರೆತ ವಸ್ತುಗಳನ್ನು ನೀಡಿ, ಠಾಣೆಗೆ ಬಂದು 08:30 ಪಿ.ಎಂ.ಗೆ ಈ ವರದಿಯನ್ನು ನೀಡಿರುತ್ತೇನೆಂತ ನೀಡಿದ ವರದಿಯ ಅಂಶವಾಗಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ ಮೊ. ಸಂ 155/2017 U/S 379 IPC

ದಿನಾಂಕ:-30/11/2017 ರಂದು ಸಾಯಂಕಾಲ 05-15 ಗಂಟೆಗೆ ಪಿರ್ಯಾದಿ ಶಿಲ್ಪಶ್ರೀ ಬಿನ್ ನಾಗರಾಜು ,ವಾಸ :-ಹಲಸಿನಮರದ ಪಾಳ್ಯ, ಕಲ್ಲಳ್ಳಿ ಮಜಿರೆ , ಊರ್ಡಿಗೆರೆ ಹೋಬಳಿ, ತುಮಕೂರು ತಾಲ್ಲೂಕು.  ಪಿರ್ಯಾದಿ ಬಾಭ್ತು   KA 06 EZ 3751 ನೇ ಹೊಂಡಾ ಡಿಯೋ ವಾಹನವನ್ನು ದಿನಾಂಕ: 08/11/2017 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯಲ್ಲಿ ಪಿರ್ಯಾದಿ ತಮ್ಮನು ಸುಧಾ ಟೀ ಹೌಸ್ ಪಕ್ಕ ಇರುವ  ಫ್ಲವರ್ ಬೊಕೆ ಶಾಪ್ ಮುಂಭಾಗ ನಿಲ್ಲಿಸಿದ್ದು ರಾತ್ರಿ ಸುಮಾರು 09-00 ಗಂಟೆಯಲ್ಲಿ ನೋಡಿಕೊಳ್ಳಲಾಗಿ  ಸದರಿ ವಾಹನವುವನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು ಕಳವುವಾದ  ವಾಹನದ ಬೆಲೆ  ಸುಮಾರು 48,000/- ರೂ ಆಗಿರುತ್ತದೆ ಈ ಬಗ್ಗೆ ಕ್ರಮ ಜರುಗಿಸಲು ಕೋರಿ ನೀಡಿದ ದೂರು

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 76 guests online
Content View Hits : 304488