lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ:16-11-2017 ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 261 /2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ:05-11-2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ :... >>   Date: 03-11-2017       ದಿನಾಂಕ : 03-11-2017 ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಎರಡು... >>   ಪತ್ರಿಕಾ ಪ್ರಕಟಣೆ. DATE: 02-11-17 ವೃದ್ದೆಯರಿಂದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿ... >> ಪತ್ರಿಕಾ ಪ್ರಕಟಣೆ ದಿನಾಂಕ: 30/10/2017 ದಿನಾಂಕ/30/10/17 ರಂದು ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ... >> ಪತ್ರಿಕಾ ಪ್ರಕಟಣೆ ದಿನಾಂಕ : 25/10/2017 ತುಮಕೂರು ನಗರದಲ್ಲಿ ಕೆ.ಎಸ್.ಅರ್.ಟಿ.ಸಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< November 2017 >
Mo Tu We Th Fr Sa Su
    1 2 3 4 5
6 7 8 10 11 12
13 14 15 16 17 18 19
20 21 22 23 24 25 26
27 28 29 30      
Thursday, 09 November 2017
Crime Incidents 09-11-17

ಹೊಸಬಡಾವಣೆ ಪೊಲೀಸ್ ಠಾಣಾ CR 143/2017 U/S 79, 80 KP Act

ದಿನಾಂಕ : 09-11-2017 ರಂದು ರಾತ್ರಿ 00-15 ಗಂಟೆ ಸಮಯದಲ್ಲಿ ಸಿಪಿಐ ತಿಲಕ್ ಪಾರ್ಕ್‌ ವೃತ್ತ ರವರು ಠಾಣೆಗೆ 08  ಜನ ಆಸಾಮಿಗಳನ್ನು ಹಾಜರು ಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ  ಆರೋಪಿಗಳಾದ 1) ರವಿ ಕುಮಾರ್ 2) ಶಿವು 3) ಸಲ್ಮಾನ್  4) ನಿಸರ್ಗ 5) ನಂದನ್ 6) ದರ್ಶನ್ 7) ಆನಂದ 8) ಮಲ್ಲಿಕಾರ್ಜುನ  ರವರುಗಳು ಠಾಣಾ ಸರಹದ್ದು ವಾಲ್ಮೀಕಿನಗರದ ವಿಲಾಸ್ ಎಂಬುವರ ಮನೆಯಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ನಡೆಸುತ್ತಿರುವ ಬಗ್ಗೆ ಪಿ.ಎಸ್.ಐ ರವರಿಗೆ ಬಂದ ಮಾಹಿತಿ ಮೇರೆಗೆ ಸಿಪಿಐ ರವರಿಗೆ ವಿಚಾರ ತಿಳಿಸಿದ್ದು ಸಿಪಿಐ ರವರು ಪೊಲೀಸ್ ಉಪಾಧೀಕ್ಷಕರ ಅನುಮತಿ ಪಡೆದು ಪಂಚರು ಹಾಗೂ ಸಿಬ್ಬಂದಿಗಳ ಸಹಾಯದಿಂದ  ಜೂಜಾಟದ ಅಖಾಡದ ಮೇಲೆ ದಾಳಿ ಮಾಡಿ 41,120/-ರೂ ನಗದು ಹಣ, 52 ಇಸ್ಪೀಟ್ ಎಲೆಗಳು ಹಾಗೂ ಹಳೆಯ ದಿನಪತ್ರಿಕೆಯನ್ನು ಅಮಾನತ್ತು ಪಡಿಸಿಕೊಂಡು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದೆ

 

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 92/2017 ಕಲಂ 87 ಕೆ ಪಿ ಆಕ್ಟ್‌‌

ದಿನಾಂಕ:08/11/2017 ರಂದು ಸಂಜೆ 4-30 ಗಂಟೆಗೆ ಪಿ ಐ ರವರು  ಆರೋಪಿತರು ಮತ್ತು ಮಾಲು ಮತ್ತು ಪಂಚನಾಮೆಯೊಂದಿಗೆ  ಠಾಣೆಗೆ ಬಂದು ನೀಡಿದ ವರದಿ ಅಂಶವೇನೆಂದರೆ, ದಿನಾಂಕ:08/11/2017 ರಂದು ಮದ್ಯಾಹ್ನ 3-00  ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗೆ ಠಾಣಾ ಸರಹದ್ದು  ಕುರುಬರಹಳ್ಳಿ ಗ್ರಾಮದ ಸಮೀಪ  ಇರುವ ಜಿ.ಡಿ.ಗುಟ್ಟೆ ಬೆಟ್ಟದ ಸಮೀಪ  ಜನರು ಗುಂಪು ಸೇರಿಕೊಂಡು ಇಸ್ಪೀಟ್‌ ಜೂಜಾಟ ಆಡುತ್ತಿದ್ದಾರೆಂದು ಮಾಹಿತಿ ಇರುತ್ತೆ ಎಂದು  ಠಾಣಾ ಗುಪ್ತ ಮಾಹಿತಿ ಸಿಬ್ಬಂದಿ ಪಿ.ಸಿ-949 ರಂಗನಾಥ ರವರು ತಿಳಿಸಿದ್ದರ ಮೇರೆಗೆ ಜೂಜಾಟದ ಮೇಲೆ ದಾಳಿ ನೆಡೆಸಲು  ಸಿಬ್ಬಂದಿಯವರಾದ ಎ ಎಸ್ ಐ ನಾಗರಾಜು ಬಿ, ಹೆಚ್‌ ಸಿ 152 ಈಶ್ವರಯ್ಯ , ಹೆಚ್‌ ಸಿ 244 ರಂಗನಾಥ ಮತ್ತು ಪಿಸಿ 1015 ಯೋಗೀಶ್‌, ಪಿಸಿ 286 ಶ್ರೀನಿವಾಸ ಕುಮಾರ್‌, ಪಿಸಿ 820 ರವೀಶ  ಮತ್ತು ಪಂಚರನ್ನು  ಕರೆದುಕೊಂಡು ಮದ್ಯಾಹ್ನ 3-10 ಗಂಟೆಗೆ ಠಾಣೆಯನ್ನು ಬಿಟ್ಟು ಇಲಾಖಾ ಜೀಪಿನಲ್ಲಿ ಮದ್ಯಾಹ್ನ 3-30 ಗಂಟೆಗೆ  ಕುರುಬರಹಳ್ಳಿಯ ಸಮೀಪ ಇರುವ ಜಿ.ಡಿಗುಟ್ಟೆಯ ಬೆಟ್ಟದ ಬಳಿಗೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ, 7-8 ಜನರು ಗುಂಡಾಕಾರವಾಗಿ ಕುಳಿತುಕೊಂಡು  ಇಸ್ಪೀಟ್‌ ಎಲೆಗಳ ಸಹಾಯದಿಂದ ಒಳಗೆ-ಹೊರಗೆ ಎಂತಾ ಕೂಗಾಡುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದವರನ್ನು ನೋಡಿ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯೊಂದಿಗೆ ಸುತ್ತುವರೆದು ಜೂಜಾಟದ ಮೇಲೆ ದಾಳಿ ಮಾಡಿದಾಗ  ನಾಲ್ಕು ಜನರು ಸಿಕ್ಕಿದ್ದು ಉಳಿದವರು ಓಡಿ ಹೋದರು ಸಿಕ್ಕಿದವರ ಹೆಸರು ವಿಳಾಸ ತಿಳಿಯಲಾಗಿ 1] ನರಸಪ್ಪ ಬಿನ್‌‌‌ ಲೇಟ್‌‌ ಪಾಪೇಗೌಡ, 50 ವರ್ಷ, ಕುಂಚಿಟಿಗರು, ಜಿರಾಯ್ತಿ, ಬಿಟ್ಟನಕುರಿಕೆ  ಗ್ರಾಮ ಮಧುಗಿರಿ ತಾ. 2]ಕೆ ಬಿ ಮಂಜುನಾಥ ಬಿನ್‌ ಬೊಮ್ಮಣ್ಣ, 29 ವರ್ಷ, ನಾಯಕರು, ಕಾರ್ ಡ್ರೈವರ್‌  , ಕುರುಬರಹಳ್ಳಿ  ಗ್ರಾಮ, ಮಧುಗಿರಿ ತಾಲ್ಲೂಕು  3]  ರಂಗನಾಥಪ್ಪ ಬಿನ್‌ ಲೇಟ್‌ ಮುದ್ದರಂಗಪ್ಪ, 45 ವರ್ಷ, ವಕ್ಕಲಿಗರು, ಜಿರಾಯ್ತಿ, ಬಿಟ್ಟನಕುರಿಕೆ ಗ್ರಾಮ, ದೊಡ್ಡೇರಿ ಹೋಬಳಿ, ಮಧುಗಿರಿ ತಾಲ್ಲೂಕು 4] ಹನುಮಂತರಾಯಪ್ಪ ಬಿನ್‌ ತಿಮ್ಮಯ್ಯ, 65 ವರ್ಷ, ಬೋವಿ ಜನಾಂಗ, ಜಿರಾಯ್ತಿ  ಕೆಲಸ ಬಿಟ್ಟನಕುರಿಕೆ  ಮಧುಗಿರಿ ತಾಲ್ಲೂಕು ಎಂತಾ ತಿಳಿಸಿದರು ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು ಜೂಜಾಟದ ಅಖಾಡವನ್ನು ಪಂಚರ ಸಮಕ್ಷಮ ಪರಿಶೀಲಿಸಲಾಗಿ ಅಖಾಡದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣ ಮತ್ತು ಇಸ್ಪೀಟ್‌ ಎಲೆಗಳನ್ನು ಒಟ್ಟು ಗೂಡಿಸಿ ಪರಿಶೀಲಿಸಲಾಗಿ 1] 52 ಇಸ್ಪೀಟ್‌ ಎಲೆಗಳು 2] 3920/- ನಗದು ಹಣ ಮತ್ತು 3] ಒಂದು ಹಳೆಯ ನ್ಯೂಸ್‌ ಪೇಪರ್‌ ಇದ್ದು ಇವುಗಳನ್ನು ಪಂಚನಾಮೆ ಮೂಲಕ ಅಮಾತ್ತು ಪಡಿಸಿಕೊಂಡು  ಆರೋಪಿಗಳು  ಮತ್ತು ಮಾಲಿನೊಂದಿಗೆ  ಸಂಜೆ 4-30 ಗಂಟೆಗೆ ವಾಪಾಸ್‌ ಠಾಣೆಗೆ ಬಂದು ಆರೋಪಿತರ ಮೇಲೆ ಪ್ರಕರಣ ದಾಖಲಿಸಿರುತ್ತೆ.

 

ವೈ. ಎನ್. ಹೊಸಕೋಟೆ ಪೊಲೀಸ್ ಠಾಣಾ ಮೊ. ನಂ- 95/2017 ಕಲಂ: 78 Cls 3 KP Act

ದಿನಾಂಕ:08/11/2017 ರಂದು ಮದ್ಯಾಹ್ನ 1:15 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗೆ ವೈ ಎನ್ ಹೊಸಕೋಟೆ ಪೊಲೀಸ್ ಠಾಣಾ ಸರಹದ್ದು ವೈ ಎನ್ ಹೊಸಕೋಟೆ ಗ್ರಾಮದ ಹಳೇ ಆಸ್ಪತ್ರೆ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ಮಾಹಿತಿ ಮೇರೆಗೆ  ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಮೇಲ್ಕಂಡ ಸ್ಥಳಕ್ಕೆ ಸರ್ಕಾರಿ ಜೀಪ್ ನಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ವೈ.ಎನ್.ಹೊಸಕೋಟೆ  ಗ್ರಾಮದ ಹಳೆಯ ಸರ್ಕಾರಿ ಆಸ್ಪತ್ರೆ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿಯು ಜನರನ್ನು ಗುಂಪು ಸೇರಿಸಿಕೊಂಡು ಸಾರ್ವಜನಿಕರನ್ನು ಕೂಗಿ ಕರೆಯುತ್ತಾ ಬನ್ನಿ ನಿಮ್ಮ ಅಧೃಷ್ಟದ ನಂಬರ್ ಬರೆಸಿಕೊಳ್ಳಿ ಒಂದು ರೂಪಾಯಿಗೆ 70 ರೂ ನೀಡುತ್ತೇನೆಂತ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ನಂಬರ್ ಬರೆದುಕೊಡುತ್ತಿದ್ದವನನ್ನು ನಾನು ಪಂಚರು ಹಾಗೂ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ನಡೆಸಿದ್ದು ಸ್ಥಳದಲ್ಲಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ನಮ್ಮನ್ನು  ನೋಡಿ ಸ್ಥಳದಿಂದ ಓಡಿ ಹೋಗಿದ್ದು ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಪಟ್ಟಿಸಿಕೊಂಡು ಮಟ್ಕಾ ನಂಬರ್  ಬರೆದುಕೊಡುತ್ತಿದ್ದ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ರಾಮಾಂಜನೇಯ ಬಿನ್ ಲೇ|| ತಿಮ್ಮಪ್ಪ, 65 ವರ್ಷ, ಕುರುಬ ಜನಾಂಗ, ಕಾಳಿದಾಸ ನಗರ, ವೈ ಎನ್ ಹೊಸಕೋಟೆ ಟೌನ್ ಎಂತ ತಿಳಿಸಿದ್ದು ನಂತರ ಸದರಿ ಆಸಾಮಿಯ ಬಳಿ ಇದ್ದ ಮಟ್ಕಾ ಜೂಜಾಟಕ್ಕೆ ಸಂಬಂದಪಟ್ಟ 1620=00 ರೂ ನಗದು ಹಣ , ಒಂದು ಮಟ್ಕಾ ಚೀಟಿ ಹಾಗೂ ಒಂದು ಲೆಡ್ ಪೆನ್ ನ್ನು ಪಂಚರ ಸಮಕ್ಷಮ ಪಂಚನಾಮೆ ಮುಖೇನ ಅಮಾನತ್ತು ಪಡಿಸಿಕೊಂಡು ಆಸಾಮಿಯನ್ನು ಸೂಕ್ತ ತಿಳುವಳಿಕೆ ನೀಡಿ ಸ್ಥಳದಲ್ಲಿಯೇ ಬಿಟ್ಟು ಠಾಣೆಗೆ 2:35 ಗಂಟೆಗೆ ವಾಪಸ್ ಬಂದು ಆಸಾಮಿ ವಿರುದ್ದ ಪ್ರಕರಣ ದಾಖಲಿಸಿರುತ್ತದೆ

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 21/2017 ಕಲಂ 174 ಸಿಆರ್ಪಿಸಿ

ದಿನಾಂಕ: 08-11-2017 ರಂದು ಮದ್ಯಾಹ್ನ 2-00 ಗಂಟೆಗೆ ತುಮಕೂರು ತಾಲ್ಲೂಕು, ಕಸಬ ಹೋಬಳಿ, ಅರಕೆರೆ ಗ್ರಾಮದ ವಾಸಿ ಶಿವಣ್ಣ ಬಿನ್ ಲೇಟ್ ದೊಡ್ಡಕದರಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನನಗೆ 1 ನೇ ಮಂಜುನಾಥ 2 ನೇ ಶಿಲ್ಪ ಹಾಗೂ 3 ನೇ ಸಂಗೀತ ಎಂಬ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿರುತ್ತಾನೆ.  ನನ್ನ 2 ನೇ ಮಗಳಾದ ಶಿಲ್ಪಳು ಎಸ್.ಎಸ್.ಎಲ್.ಸಿ. ವಿದ್ಯಾಬ್ಯಾಸ ಮಾಡಿದ್ದು,  ನಂತರ ಆಕೆಯನ್ನು  ಕೆ. ಪಾಲಸಂದ್ರ ಗ್ರಾಮದಲ್ಲಿರುವ ನಮ್ಮ ಅತ್ತೆ-ಮಾವ ರವರು ಆಕೆಯನ್ನು ಸಾಕಿಕೊಂಡಿದ್ದು,  ಈಗ್ಗೆ ಸುಮಾರು 3 ವರ್ಷಗಳಿಂದ ಕೆ. ಪಾಲಸಂದ್ರ ಗ್ರಾಮದಲ್ಲಿ ಆಕೆಯ ಅಜ್ಜಿ-ತಾತ ರವರ ಜೊತೆಯಲ್ಲಿಯೇ ವಾಸವಾಗಿದ್ದಳು.  ನನ್ನ ಮಗಳು ಶಿಲ್ಪಳಿಗೆ ಈಗ್ಗೆ ಸುಮಾರು 5-6 ವರ್ಷಗಳಿಂದ ಪಿಡ್ಸ್ ಖಾಯಿಲೆ ಇದ್ದು, ನಾವು ಅಲ್ಲಿ ಇಲ್ಲಿ ನಾಟಿ ಔಷದಿ ಕೊಡಿಸಿದ್ದರೂ ಸಹಾ ಗುಣವಾಗಿರಲಿಲ್ಲ.  ಈ ದಿನ ದಿನಾಂಕ: 08-11-2017 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ನನ್ನ ಭಾಮೈದ ರಮೇಶ ನನಗೆ ಪೋನ್  ಮಾಡಿ ನಮ್ಮ ಮನೆಯಲ್ಲಿದ್ದ ನಿಮ್ಮ ಮಗಳು ಶಿಲ್ಪ ಈ ದಿನ ಬೆಳಿಗ್ಗೆ ಸುಮಾರು 7-00 ಗಂಟೆಯಲ್ಲಿ ಮನೆಯ ಲೆಟ್ರಿನ್‌‌ ರೂಮಿಗೆ ಹೋದವಳು ಲೆಟ್ರಿನ್‌‌ ರೂಮಿನ ಬಾಗಿಲನ್ನು ಹಾಕಿಕೊಂಡಿದ್ದು, ಎಷ್ಟು ಹೊತ್ತಾದರೂ ಸಹಾ ಲೆಟ್ರಿನ್‌ ರೂಮಿನ ಬಾಗಿಲನ್ನು ತೆಗೆಯದ ಕಾರಣ ನಾನು ಹಾಗೂ ನಮ್ಮ ತಾಯಿ ತಿಮ್ಮಕ್ಕ ನೋಡಿ ಬಾಗಿಲನ್ನು ಎಷ್ಟು ಬಡಿದರೂ ಸಹಾ ತೆಗೆಯದ ಕಾರಣ, ಲೆಟ್ರಿನ್‌‌ ರೂಮಿನ ಬಾಗಿಲನ್ನು ಕಿತ್ತು ನೋಡಲಾಗಿ,  ಶಿಲ್ಪಳು ಚೂಡೀಧಾರ್‌‌ ವೇಲ್‌‌ನಿಂದ ಮೇಲ್ಚಾವಣಿಗೆ ಅಳವಡಿಸಿದ್ದ ಮರದ ತೀರಿಗೆ ನೇಣು ಹಾಕಿಕೊಂಡಿದ್ದು, ಆಗ ನಾನು ಹಾಗೂ ನಮ್ಮ ತಾಯಿ ತಿಮ್ಮಕ್ಕ ಇಬ್ಬರೂ ಇನ್ನೂ ಜೀವ ಇರಬಹುದೆಂದು ನೇಣುಹಾಕಿಕೊಂಡಿದ್ದ ವೇಲ್‌‌ನ ಚೂಡೀಧಾರ್‌‌ ವೇಲನ್ನು ಬಿಚ್ಚಿ ಇಳಿಸಿಕೊಂಡು ಇನ್ನೂ ಜೀವ ಇರಬಹುದೆಂದು ತಿಳಿದು  ಯಾವುದೇ ಒಂದು ಆಟೋದಲ್ಲಿ ನಾನು ಹಾಗೂ ನಮ್ಮ ತಾಯಿ ತಿಮ್ಮಕ್ಕ ಇಬ್ಬರೂ  ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುತ್ತೇವೆಂತಾ ತಿಳಿಸಿದರು.  ತಕ್ಷಣ ನಾನು ನಮ್ಮೂರಿನಿಂದ  ತುಮಕೂರಿಗೆ ಜಿಲ್ಲಾ ಆಸ್ಪತ್ರೆಯ ಬಳಿಗೆ ಬಂದಿದ್ದು, ಅಷ್ಟರಲ್ಲಿ ನನ್ನ ಭಾಮೈದ ರಮೇಶ ಹಾಗೂ ನಮ್ಮ ಅತ್ತೆ ತಿಮ್ಮಕ್ಕ ರವರು ಆಟೋದಲ್ಲಿ ನನ್ನ ಮಗಳು ಶಿಲ್ಪಳನ್ನು ಹಾಕಿಕೊಂಡು ಬಂದ್ದಿದ್ದು, ಬೆಳಿಗ್ಗೆ ಸುಮಾರು 8-30 ಗಂಟೆ ಸಮಯದಲ್ಲಿ  ಆಸ್ಪತ್ರೆಯಲ್ಲಿ ನನ್ನ ಮಗಳನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ತೀರಿ ಹೋಗಿರುವುದಾಗಿ ತಿಳಿಸಿರುತ್ತಾರೆ. ನನ್ನ ಮಗಳು ಶಿಲ್ಪಳಿಗೆ ಈಗ್ಗೆ ಸುಮಾರು 5-6 ವರ್ಷಗಳಿಂದ ಪಿಡ್ಸ್‌ ಖಾಯಿಲೆ ಬರುತ್ತಿದ್ದು, ಈ ಖಾಯಿಲೆಯಿಂದ ಮಾನಸಿಕವಾಗಿ ಕೊರಗುತ್ತಿದ್ದಳು.  ನಮ್ಮ ಮಗಳು ಆಕೆಗೆ ಇದ್ದ ಪಿಡ್ಸ್‌‌ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ತನ್ಮೂಲಕ ತಾನೇ ಆಕೆಯ ಅಜ್ಜಿಯ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ.   ನಮ್ಮ ಮಗಳು ಶಿಲ್ಪಳ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ.  ನಮ್ಮ ಮಗಳ ಶವವನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೇವೆ.  ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ, ಮುಂದಿನ ಕ್ರಮ ಜರುಗಿಸಿ, ನಮ್ಮ ಮಗಳ ಶವ ಸಂಸ್ಕಾರ ಮಾಡಲು ಕೋರಿ ನಿಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ  ಯು ಡಿ ಆರ್ ನಂ 21/17 ಕಲಂ 174 ಸಿ ಆರ್ ಪಿ ಸಿ

ದಿನಾಂಕ:08-11-17 ರಂದು ಬೆಳಿಗ್ಗೆ 08:30ಗಂಟೆಗೆ ಪಿರ್ಯಾದಿ ಹನುಮಂತರಾಯಪ್ಪ ಬಿನ್ ಗೋಪಾಲಪ್ಪ, ಬಂದಕುಂಟೆ ಗ್ರಾಮ, ಶಿರಾ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ  ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ  ತಂದೆ  ಹನುಮಂತರಾಯಪ್ಪ , ತಾಯಿ ರಾಮಕ್ಕೆ ರವರಿಗೆ ಪಿರ್ಯಾದಿ ರವರು ಒಬ್ಬನೇ ಮಗನಾಗಿದ್ದು, ಇವರು  ಜೀವನೋಪಯಕ್ಕಾಗಿ ಕೂಲಿ ಮತ್ತು ವ್ಯವಸಾಯ ಮಾಡಿಕೊಂಡಿದ್ದು, ಬಂದಕುಂಟೆ ರಿ.ಸ ನಂ 10/7ರಲ್ಲಿ ಸುಮಾರು 0.30ಗುಂಟೆ  ಜಮೀನು ಇದ್ದು, ಸದರಿ ಜಮೀನಿನಲ್ಲಿ ಕಡ್ಲೆ ಗಿಡವನ್ನು ಬಿತ್ತಿದ್ದು, ನಂತರ  ಕಡ್ಲೆ ಫಸಲನ್ನು ಕಿತ್ತಿದ್ದು, ದಿನಾಂಕ:07-11-2017 ರಂದು ಸಂಜೆ  ಸುಮಾರು 05:45 ಗಂಟೆಯಲ್ಲಿ  ಪಿರ್ಯಾದಿ ಮತ್ತು ಪಿರ್ಯಾದಿ  ತಂದೆ ಗೋಪಾಲಪ್ಪ ರವರೊಂದಿಗೆ ಕಿತ್ತ ಕಡಲೆ  ಬಳ್ಳಿಯನ್ನು  ಅದೇ ಜಮೀನಿನಲ್ಲಿ ಮೆದೆ ಹಾಕುತ್ತಿರುವಾಗ ಪಿರ್ಯಾದಿ ತಂದೆ ಕೂಗಿಕೊಂಡಾಗ ಪಿರ್ಯಾದಿ ತಂದೆಯನ್ನು ನೋಡಲಾಗಿ ಹಾವು ಕಚ್ಚಿತು ಎಂದು ತಿಳಿಸಿದ್ದು ನೋಡಲಾಗಿ  ಹಾವು ಪೊದೆ ಕಡೆಯಿತು.ಗೋಪಾಲಪ್ಪ ರವರಿಗೆ ಎಡಪಾದದ ಹಿಂದಿ ಮೇಲ್ಬಾಗ ಕಚ್ಚಿದಂತೆ  ರಕ್ತ  ಬಂದಿದ್ದು,ತಕ್ಷಣ ಪಿರ್ಯಾದಿ ಅವರಿವರಿಗೆ ವಿಷಯ ತಿಳಿಸಿ  ಮನೆಯ ಹತ್ತಿರ ಕರೆದುಕೊಂಡು ಹೋಗಿ ನಾಟಿ ಔಷದಿ ಕೊಡಿಸಿ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಲು 108 ಅಂಬುಲೆನ್ಸ್ ಗೆ  ಕರೆ ಮಾಡಿದ್ದು ಅಷ್ಠರಲ್ಲಿ ಪಿರ್ಯಾದಿ ತಂದೆ ಬಾಯಿಂದ ಬಿಳಿ ನೊರೆ ಬಂದು ಆಗ ಈಗ ಎನ್ನುವಷ್ಠರಲ್ಲಿ  ಮೃತಪಟ್ಟಿರುತ್ತಾರೆ, ಪಿರ್ಯಾದಿ ತಂದೆಗೆ ಯಾವುದೊ  ವಿಷದ ಜಂತು ಕಡಿದಿದ್ದು, ಮೈಗೆಲ್ಲಾ ವಿಷವು ಹರಡಿ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಲು ನೀಡಿದ  ಪಿರ್ಯಾದಿಯನ್ನು ಪಡೆದು  ಪ್ರಕರಣ ದಾಖಲಿಸಿರುತ್ತೆ


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 81 guests online
Content View Hits : 194485
Hackguard Security Enabled