lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< November 2017 >
Mo Tu We Th Fr Sa Su
    1 2 3 4 5
6 8 9 10 11 12
13 14 15 16 17 18 19
20 21 22 23 24 25 26
27 28 29 30      
Tuesday, 07 November 2017
Crime Incidents 07-11-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-197/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:06-11-2017 ರಂದು ಸಾಯಂಕಾಲ 4-00 ಗಂಟೆಗೆ ಪಿರ್ಯಾದಿಯಾದ ಮಹಮದ್‌ ಇಸಾಕ್‌ ಬಿನ್ ಲೇ|| ಅಬ್ದುಲ್‌ ಸತ್ತಾರ್‌ ಸಾಬ್‌, 48 ವರ್ಷ, ಮುಸ್ಲಿಂ, ಕಾರ್ಪೆಂಟರ್‌ ಕೆಲಸ, ಮೊಹಮದ್ದಿಯಾ ಮಸ್ಜಿದ್‌ ಹತ್ತಿರ, 2 ನೇ ಕ್ರಾಸ್, ವಿನೋಬ ನಗರ, ತುಮಕೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಖಿತ ದೂರನ ಅಂಶವೇನೆಂದರೆ ನನಗೆ ಮಹಮದ್‌ ಸಲ್ಮಾನ್‌ ಎಂಬ ಮಗನಿದ್ದು, ವರ್ಕ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ:05-11-2017 ರಂದು ನನ್ನ ಮಗನಾದ ಮಹಮದ್‌ ಸಲ್ಮಾನ್‌ ರವರು ನನ್ನ ಬಾಬ್ತು ಕೆಎ-06-ಇ.ಝಡ್‌-0088 ನೇ ಹೋಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ತುಮಕೂರಿನಿಂದ ಸಿ,ಎಸ್,ಪುರ ಹೋಬಳಿಯ ನೆಟ್ಟೆಕೆರೆ ಗ್ರಾಮದಲ್ಲಿರುವ ದರ್ಗಾಕ್ಕೆ ಹೋಗಲೆಂದು ತನ್ನ ಸ್ನೇಹಿತನಾದ ಮಹಮದ್‌ ಖತೀಭ್‌ ರವರ ಜೊತೆ ಹೋಗಿದ್ದು, ನಂತರ ಅದೇ ದಿವಸ ವಾಪಸ್‌ ತುಮಕೂರಿಗೆ ಬರಲೆಂದು ನನ್ನ ಮಗ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಮಹಮದ್ ಖತೀಭ್‌ ರವರು ಹಿಂಬದಿ ಸವಾರನಾಗಿ ಕುಳಿತುಕೊಂಡು ಸಾಯಂಕಾಲ ಸುಮಾರು 06-00 ಗಂಟೆ ಸಮಯದಲ್ಲಿ ಹೆಬ್ಬೂರಿನ ಬಳಿ ಇರುವ ದೊಡ್ಡಯ್ಯನಕಟ್ಟೆ ಪಾಳ್ಯದಲ್ಲಿ ತುಮಕೂರು-ಕುಣಿಗಲ್ ಟಾರ್ ರಸ್ತೆಯಲ್ಲಿ ತುಮಕೂರಿನ ಕಡೆಗೆ ಬರುತ್ತಿರುವಾಗ್ಗೆ, ಎದುರಿಗೆ ತುಮಕೂರು ಕಡೆಯಿಂದ ಕುಣಿಗಲ್‌ ಕಡೆಗೆ ಹೋಗಲು ಬಂದ ಕೆಎ-13-ಎನ್‌-5910 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನನ್ನ ಮಗ ಮಹಮದ್‌ ಸಲ್ಮಾನ್‌ ಹಾಗೂ ಆತನ ಸ್ನೇಹಿತ ಮಹಮದ್‌ ಖತೀಭ್‌ ರವರು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾದ ನನ್ನ ಮಗನಿಗೆ ತಲೆಗೆ ಹಾಗೂ ಕಾಲುಗಳಿಗೆ ಏಟು ಬಿದ್ದು ಗಾಯಗಳಾಗಿದ್ದು, ಮಹಮದ್ ಖತೀಭ್‌ ರವರಿಗೆ ಎರಡೂ ತೊಡೆಗಳು ಮುರಿದಿದ್ದು, ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದಿದ್ದು, ಅಘಫಾತಪಡಿಸಿದ ಕಾರಿನ ಚಾಲಕನು ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದು, ನಂತರ ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಗೊಂಡಿದ್ದ ನನ್ನ ಮಗ ಹಾಗೂ ಮಹಮದ್ ಖತೀಭ್‌ ರವರುಗಳನ್ನು ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಸದರಿ ಅಘಫಾತದ ವಿಚಾರವನ್ನು ಗಾಯಗೊಂಡಿದ್ದ ನನ್ನ ಮಗ ಮಹಮದ್‌ ಸಲ್ಮಾನ್ ರವರು ನನಗೆ ಪೋನ್ ಮಾಡಿ ತಿಳಿಸಿದನು. ನಂತರ ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಳಿ ಹೋಗಿ ನೋಡಗಾಗಿ ಅಫಘಾತದಿಂದ ನನ್ನ ಮಗ ಮಹಮದ್ ಸಲ್ಮಾನ್ ಹಾಗೂ ಮಹಮದ್‌ ಖತೀಭ್‌ ರವರುಗಳು ಗಾಯಗೊಂಡಿರುವುದು ನಿಜವಾಗಿತ್ತು. ನಾನು ನನ್ನ ಮಗನನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದೆನು. ಅಘಫಾತದ ವಿಚಾರ ತಿಳಿದ ಗಾಯಗೊಂಡಿದ್ದ ಮಹಮದ್‌ ಖತೀಭ್ ರವರ ಕುಟುಂಬದವರು ಜಿಲ್ಲಾಸ್ಪತ್ರೆಯ ಬಳಿ ಬಂದು ಮಹಮದ್‌ ಖತೀಫ್‌ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಬೆಂಗಳೂರಿನ ಹೆಗ್ಗಡೆ ನಗರದಲ್ಲಿರುವ ರೀಗಲ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-13-ಎನ್‌-5910 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-196/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:06-11-2017 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿಯಾದ ಗಂಗಾಧರಯ್ಯ ಬಿನ್ ಗಂಗಣ್ಣ, 35 ವರ್ಷ, ಒಕ್ಕಲಿಗರು, ವ್ಯವಸಾಯ, ಕುಡುವನಕುಂಟೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನ್ನ ತಂದೆಯವರಾದ ಗಂಗಣ್ಣ ರವರು ದಿನಾಂಕ:31-10-2017 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ತಮ್ಮ ಬಾಬ್ತು ಕೆಎ-06-ಇ,ಕ್ಯು-4216 ನೇ ಟಿ,ವಿ,ಎಸ್‌ ಎಕ್ಸ್‌ ಎಲ್‌ ಸೂಪರ್‌ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಚಿಕ್ಕಣ್ಣ ಸ್ವಾಮಿ ದೇವಸ್ಥಾನಕ್ಕೆ ಹೋಗಲೆಂದು ಹೋಗಿದ್ದು, ನಂತರ ಮದ್ಯಾಹ್ನ ಸುಮಾರು 12-15 ಗಂಟೆ ಸಮಯದಲ್ಲಿ ಕುರಿ ಬೋರಯ್ಯನಪಾಳ್ಯದ ರಾಜಣ್ಣ ರವರು ನನಗೆ ಪೋನ್‌ ಮಾಡಿ ಇದೇ ದಿವಸ ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ನಿಮ್ಮ ತಂದೆ ಗಂಗಣ್ಣ ರವರು ಹೆಬ್ಬೂರಿನ ಕಡೆಯಿಂದ ಕುಣಿಗಲ್‌ ಕಡೆಗೆ ಕೆಎ-06-ಇ,ಕ್ಯು-4216 ನೇ ಟಿ,ವಿ,ಎಸ್‌ ಎಕ್ಸ್‌ ಎಲ್‌ ಸೂಪರ್‌ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಹೆಬ್ಬೂರಿನ ಫ್ರೆಂಡ್ಸ್‌ ಮೆಕಾನಿಕ್ ಗ್ಯಾರೇಜ್‌ನ ಬಳಿ ತುಮಕೂರು-ಕುಣಿಗಲ್ ಟಾರ್ ರಸ್ತೆಯಲ್ಲಿ, ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ್ಗೆ, ಎದುರುಗಡೆಯಿಂದ ಅಂದರೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಕೆಎ-06-ಪಿ-1875 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನಿಮ್ಮ ತಂದೆ ಗಂಗಣ್ಣ ರವರು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನಿಮ್ಮ ತಂದೆ ಗಂಗಣ್ಣ ರವರಿಗೆ ಗಾಯಗಳಾಗಿರುತ್ತೇಂತಾ ಪೋನ್ ಮಾಡಿ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಫಘಾತದಲ್ಲಿ ನನ್ನ ತಂದೆ ಗಂಗಣ್ಣ ರವರಿಗೆ ಗಾಯಗಳಾಗಿರುವುದು ನಿಜವಾಗಿತ್ತು. ನನ್ನ ತಂದೆ ಗಂಗಣ್ಣ ರವರಿಗೆ ಬಲಗಾಲಿಗೆ, ಎಡ ಸೊಂಟಕ್ಕೆ, ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ರಕ್ತಗಾಯಗಳಾಗಿದ್ದು, ನಂತರ ಗಾಯಗೊಂಡಿದ್ದ ನನ್ನ ತಂದೆ ಗಂಗಣ್ಣ ರವರನ್ನು ನಾನು ಹಾಗೂ ರಾಜಣ್ಣ ಇಬ್ಬರೂ ಸೇರಿಕೊಂಡು ಯಾವುದೋ ಒಂದು ವಾಹನದಲ್ಲಿ ಹೆಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತೇವೆ. ಅಫಘಾತಪಡಿಸಿದ ಕಾರು ಹಾಗೂ ಅಪಘಾತಕ್ಕೊಳಗಾದ ದ್ವಿಚಕ್ರ ವಾಹನ ಫ್ರೆಂಡ್ಸ್‌ ಗ್ಯಾರೇಜ್‌ನ ಬಳಿ ಇರುತ್ತವೆ. ಆದ್ದರಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಪಿ-1875 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ನನ್ನ ತಂದೆ ಗಂಗಣ್ಣ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ ಮೊ,ನಂ-139/2017 U/S 392 R/W 34 IPC

ದಿನಾಂಕ : 06-11-2017 ರಂದು ಮಧ್ಯಾಹ್ನ  2-10  ಗಂಟೆಗೆ ಪಿರ್ಯಾದಿ ಸಾಗರ್ ಬಿನ್ ರಂಗರಾಜು (19) ಕಸ್ತೂರ್ಬಾ ಆಸ್ಪತ್ರೆ ಹತ್ತಿರ, ಎಸ್.ಎಸ್. ಪುರಂ ಮುಖ್ಯ ರಸ್ತೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿ: 22-10-2017 ರಂದು ಪಿರ್ಯಾದಿಯು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್ ಟೂರ್ನಿಮೆಂಟ್ ಮುಗಿಸಿಕೊಂಡು ರೈಲಿನಲ್ಲಿ  ತುಮಕೂರಿಗೆ ಬಂದು ಬೆಳಗಿನ ಜಾವ 00-50 ಗಂಟೆ ಸಮಯದಲ್ಲಿ ಉಪ್ಪಾರಹಳ್ಳಿ ಪ್ಲೈ ಓವರ್ ಬಳಿ ನಡೆದುಕೊಂಡು ಹೋಗುತ್ತಿರುವಾಗ್ಗೆ ನಾಲ್ಕು ಜನ ಆಸಾಮಿಗಳು  ದ್ವಿ ಚಕ್ರ ವಾಹನದಲ್ಲಿ ಬಂದು ಪಿರ್ಯಾದಿಯನ್ನು ಹೆದರಿಸಿ ಪಿರ್ಯಾದಿ ಬಳಿ ಇದ್ದ ಯುಫೋರಿಯಾ ಮೊಬೈಲ್ ಫೋನ್ ಮತ್ತು ಎಸ್ ಎಸ್ ಪುರಂ, ಕರ್ನಾಟಕ ಬ್ಯಾಂಕ್ ಶಾಖೆಯ ಎಟಿಎಂ ಕಾರ್ಡ್ ಮತ್ತು 1830/- ರೂ ನಗದು ಹಣವಿದ್ದ ಪರ್ಸನ್ನು ಕಿತ್ತುಕೊಂಡು ಹೋಗಿದ್ದು ಈ ಬಗ್ಗೆ ಕ್ರಮ ಕೋರಿ ನೀಡಿದ ದೂರು.

ಹೊಸಬಡಾವಣೆ ಪೊಲೀಸ್ ಠಾಣಾ ಮೊ,ನಂ 140/2017 U/S 341, 323, 504, 506 IPC

ದಿನಾಂಕ : 06-11-2017 ರಂದು ಸಂಜೆ 5-45  ಗಂಟೆಗೆ ಪಿರ್ಯಾದಿ ಪಿರ್ಯಾದಿ ಜಗದೀಶ್ ಬಿನ್ ಲೇಟ್ ಸಣ್ಣಪ್ಪ (36) ಸಹಾಯಕ ಕಂದಾಯಾಧಿಕಾರಿಗಳು ಮಹಾನಗರ ಪಾಲಿಕೆ, ತುಮಕೂರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿರವರು   ದಿ: 04-11-02017 ರಂದು ಬೆಳಗ್ಗೆ 7-15  ರಿಂದ 7-45 ಗಂಟೆ ಸಮಯದಲ್ಲಿ ಪಿರ್ಯಾದಿಯು  ಉಡುಪಿ ಡಿಲಕ್ಸ್ ಹೋಟೆಲ್‌ ನಲ್ಲಿ ತಿಂಡಿ ತಿನ್ನುತ್ತಿರುವಾಗ್ಗೆ ಅಲ್ಲಿಗೆ ಬಂದ ಆರೋಪಿ ವಿಶ್ವನಾಥ್ ರವರು ಪಿರ್ಯಾದಿಯನ್ನು ನೋಡಿದವರೇ ನಿನ್ನಿಂದ ನಾನು ಕೋರ್ಟಿಗೆ ಅಲೆಯುವಂತಾಯಿತು ಎಂದು ಹೇಳಿದ್ದು ಪಿರ್ಯಾದಿಯು ತಾನು ಸರ್ಕಾರಿ ಕೆಲಸ ನಿರ್ವಹಿಸಿರುತ್ತೇನೆಂದು ಹೇಳಿದಾಗ ಬೋಳಿಮಗ ನೀನೊಬ್ಬನೇ ಸರ್ಕಾರಿ ಕೆಲಸ ಮಾಡುವುದು, ನಿನ್ನಂತವರನ್ನು ಮುಗಿಸಿದರೆ ಸರಿಹೋಗುತ್ತೆ ಎಂದು ಹೇಳಿದವರೇ ಗಲಾಟೆ ಮಾಡಿದ್ದು ಪಿರ್ಯಾದಿಯು ಅಲ್ಲಿಂದ ಹೊರಡುವಾಗ್ಗೆ ಅವರನ್ನು ಮುಂದೆ ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿಕೊಂಡು ಪಿರ್ಯಾದಿ ಕೊರಳಪಟ್ಟಿಯನ್ನು ಹಿಡಿದು ಎಳೆದಾಡಿ, ಕುತ್ತಿಗೆಯನ್ನು ಹಿಸುಕಿ ನೋವು ಪಡಿಸಿರುತ್ತಾರೆ ಈ ಬಗ್ಗೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.


ಪತ್ರಿಕಾ ಪ್ರಕಟಣೆ.07-11-17

ತುಮಕೂರು ಜಿಲ್ಲಾ ಪೊಲೀಸ್, ತುಮಕೂರು.

ಪತ್ರಿಕಾ ಪ್ರಕಟಣೆ.

ದಿನಾಂಕ : 07/11/2017

ದಿನಾಂಕ:05-11-2017 ರಂದು ರಾತ್ರಿ ಸುಮಾರು 01-45 ಗಂಟೆ ಸಮಯದಲ್ಲಿ ಕುಮುಟದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕ್ಯಾಂಟರ್ ಲಾರಿಯ ಚಾಲಕ ಭ್ರವೀಶ್ ಎಂಬುವರು ಗುಬ್ಬಿ ಪೊಲೀಸ್ ಠಾಣಾ ಸರಹದ್ದಿನ ಎನ್.ಹೆಚ್ 206 ರಸ್ತೆಯ ಬದಿಯ ಗಂಟೆ ಬಸವಣ್ಣ ದೇವಸ್ಥಾನದ ಬಳಿ ನಿಲ್ಲಿಸಿಕೊಂಡು ಮಲಗಿದ್ದಾಗ 3 ಜನ ಆರೋಪಿತರು ಒಂದು ಮೋಟಾರ್‌ ಸೈಕಲ್‌ನಲ್ಲಿ ಬಂದು ಲಾರಿ ಹತ್ತಿ ಚಾಲಕನಿಗೆ ಡ್ರಾಗರ್ ಮತ್ತು ಚಾಕುವನ್ನು ಎದೆಯ ಮೇಲೆ ಇಟ್ಟು ಹೆದರಿಸಿ ಆತನಿಂದ ಮೊದಲಿಗೆ ಮೊಬೈಲ್ ಪೋನ್, ಡಿ.ಎಲ್ ಎ.ಟಿ.ಎಂ ಕಾರ್ಡ್‌ ಕಿತ್ತುಕೊಂಡು ನಂತರ ಪುನಃ ಅದೇ ರಸ್ತೆಯಲ್ಲಿ ಬರುತ್ತಿದ್ದ ಸದರಿ ಚಾಲಕನನ್ನು ತಡೆದು ನಿಲ್ಲಿಸಿ ಮೊಬೈಲ್ ಬೆಲೆ ಬಾಳುವುದಿಲ್ಲವೆಂದು ಡಿ.ಎಲ್. ಎ.ಟಿ.ಎಂ ಕಾರ್ಡ್‌, ಸಮೇತ ವಾಪಸ್ ಕೊಡುತ್ತೇನೆ ನಮಗೆ ಹಣ ಕೊಡು ಎಂದು ಪುನಃ ಬೆದರಿಸಿ 2150/- ರೂ ನಗದು ಹಣವನ್ನು ಕಿತ್ತುಕೊಂಡು ತುಮಕೂರು ಕಡೆಗೆ ಬರುತ್ತಿದ್ದವರನ್ನು ಹಿಂಭಾಲಿಸಿ ಬಂದು ಮಲ್ಲಸಂದ್ರ ಎ.ಟಿ.ಎಂ ಬಳಿ ಬೀಟ್ ಸಿಬ್ಬಂದಿಯವರು ಇದುದ್ದನ್ನು ಕಂಡು ಮಾಹಿತಿ ನೀಡಿದ್ದರ ಮೇರೆಗೆ ಸಿಬ್ಬಂದಿಯವರಾದ ಶ್ರೀ ಶಶಿಕುಮಾರ್‌ನಾಯ್ಕ್‌ ಸಿ.ಪಿ.ಸಿ 228 ಮತ್ತು ಶ್ರೀ ಮನು. ಹೆಚ್.ಜಿ 53 ಎಂಬುವರು ಲಾರಿಯ ಮುಂದೆ ಮೋಟಾರ್‌ ಸೈಕಲ್‌ನಲ್ಲಿ  ಹೋಗುತ್ತಿದ್ದ 3 ಜನರನ್ನು ಮೋಟಾರ್‌ ಸೈಕಲ್‌ ನಲ್ಲಿ ಹಿಂಬಾಲಿಸಿ ಒಬ್ಬ ಆರೋಪಿ ಖಾಸೀಫ್‌ ನನ್ನು  ಮೋಟಾರ್ ಸೈಕಲ್‌ ಸಮೇತ ವಶಕ್ಕೆ ಪಡೆದು ಠಾಣೆಗೆ ಹಾಜರು ಪಡಿಸಿದವನನ್ನು ವಿಚಾರಣೆಗೊಳಪಡಿಸಿ, ಆರೋಪಿಯಿಂದ ಒಂದು ಮೋಟಾರ್ ಸೈಕಲ್‌, ಒಂದು ಚಾಕು, ಒಂದು ಡ್ರಾಗರ್ ಮತ್ತು 800=00 ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ಬಳಸುತ್ತಿದ್ದ ವಾಹನವು ಕಳವು ಮಾಡಿರುವುದೆಂತ ತಿಳಿದು ಬಂದಿರುತ್ತೆ. ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರ್ ಪಡಿಸಿ ಪೊಲೀಸ್ ವಶಕ್ಕೆ ಹೆಚ್ಚಿನ ತನಿಖೆಗಾಗಿ ಪಡೆಯಲು ವಿನಂತಿಸಿಕೊಳ್ಳಲಾಗಿದೆ. ಉಳಿದ ಇಬ್ಬರು ಆರೋಫಿಗಳು ತಲೆಮರೆಸಿಕೊಂಡಿರುತ್ತಾರೆ. ಅವರ ಪತ್ತೆಗಾಗಿ ತಂಡ ರಚಿಸಲಾಗಿದೆ.

ಸದರಿ ಆರೋಪಿ ಖಾಸೀಪ್‌ ನನ್ನು ಮಾಲು ಸಮೇತ ಹಿಡಿದ ಶ್ರೀ ಶಶಿಕುಮಾರ್‌ನಾಯ್ಕ್‌ ಸಿ.ಪಿ.ಸಿ 228 ಮತ್ತು ಮನು. ಹೆಚ್.ಜಿ 53 ಎಂಬುವರ ಕಾರ್ಯದಕ್ಷತೆಗಾಗಿ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಯವರು ಶ್ಲಾಘಿಸಿರುತ್ತಾರೆ.


ಪತ್ರಿಕಾ ಪ್ರಕಟಣೆ.07-11-17

ತುಮಕೂರು ಜಿಲ್ಲಾ ಪೊಲೀಸ್, ತುಮಕೂರು.

ಪತ್ರಿಕಾ ಪ್ರಕಟಣೆ.

ದಿನಾಂಕ : 07/11/2017

ದಿನಾಂಕ : 05-11-2017 ರಂದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಹಾದು ಹೋಗುವ ಎನ್.ಹೆಚ್-48 ರಸ್ತೆಯಲ್ಲಿ ಲಾರಿಗಳನ್ನು ರಸ್ತೆಯ ಬದಿ ನಿಲ್ಲಿಸಿಕೊಂಡು ವಿಶ್ರಾಂತಿ ಮಾಡುವ ಸಂದರ್ಭ ಅವರುಗಳಿಗೆ ಬೆದರಿಸಿ ಹಣ ಮೊಬೈಲ್ ಇತ್ಯಾದಿಗಳನ್ನು ದೋಚುವ ಉದ್ದೇಶದಿಂದ ಆರೋಪಿಗಳ ತಂಡವೊಂದು ಹೊಂಚು ಹಾಕುವ ಬಗ್ಗೆ ಮಾಹಿತಿಯನ್ನು ತಿಳಿದು ಊರುಕೆರೆ ಬಳಿ ಹಾದು ಹೋಗುವ ರಸ್ತೆಯಲ್ಲಿ ಪರಿಶೀಲಿಸುತ್ತಿದ್ದಾಗ ಆರೋಪಿಗಳ ತಂಡವೊಂದು 2 ಮೋಟಾರ್ ಸೈಕಲ್‌ಗಳಲ್ಲಿ ಬಂದಿದ್ದು ಅವರುಗಳನ್ನು ಸುತ್ತುವರಿದು ಪರಿಶೀಲಿಸಲಾಗಿ ಅವರ ಬಳಿ  ಚಿಲ್ಲಿ ಪೌಡರ್ ಮತ್ತು ಮಾರಾಕಾಸ್ತ್ರಗಳು ಸಿಕ್ಕಿದ್ದು ವಿಚಾರ ಮಾಡಲಾಗಿ 1) ಮಲ್ಲಪ್ಪ ಶಂಕರ ಘಾಟಗೆ ಬಿನ್ ಲೇಟ್ ಶಂಕರ್ ಘಾಟಗೆ, 24 ವರ್ಷ 2) ಕಿರಣ್‌ಕುಮಾರ್ ಬಿನ್ ಲೋಕಾನಾಯ್ಕ, 23 ವರ್ಷ, 3) ಸಂತೋಷ ಬಿನ್ ನಾರಾಯಣ, 23 ವರ್ಷ, 4) ಲೋಕೇಶ @ ಲೋಕಿ ಬಿನ್ ರಂಗಸ್ವಾಮಿ, 23 ವರ್ಷ, 5) ರಂಗಸ್ವಾಮಿ @ ಸ್ವಾಮಿ ಬಿನ್ ಶಿವಲಿಂಗಣ್ಣ, 23 ವರ್ಷ, 6) ಚೇತನ @ ಚೇತು, 19 ವರ್ಷ, 7) ಭರತ್‌ @ ಕುಟ್ಟಿ ಬಿನ್ ಶಿವರಾಂ, 19 ವರ್ಷ, 8) ಚನ್ನಕೇಶವಮೂರ್ತಿ ಬಿನ್ ಲೊಕೇಶ್ವರಯ್ಯ, 39 ವರ್ಷ, ಎಂಬುವರುಗಳಿದ್ದು ಇವರುಗಳೆಲ್ಲಾ ಬೆಂಗಳೂರು, ಭದ್ರಾವತಿ, ಹಿರಿಯೂರು. ಹುಮ್ನಾಬಾದ್, ರಾಮನಗರ ಮತ್ತು ಚಿಕ್ಕನಾಯಕನಹಳ್ಳಿ ಕಡೆಯವರಾಗಿದ್ದು, ಈ ಎಲ್ಲಾ ಆರೋಪಿತರು ಚನ್ನಕೇಶವಮೂರ್ತಿ, ನೆಲಗೆದರಹಳ್ಳಿ ಎಂಬುವರ ಜೊತೆ ಅವರ ಮನೆಯೊಂದರಲ್ಲಿ ಒಟ್ಟಾಗಿ ಸೇರಿಕೊಂಡು ತುಮಕೂರು ಜಾಸ್ ಟೋಲ್‌ ಗೇಟ್‌ನಿಂದ ಹಿಡಿದು ಚಿತ್ರದುರ್ಗ, ಹಿರಿಯೂರು ವರೆಗೆ ಎನ್.ಹೆಚ್-48 ರಸ್ತೆಯಲ್ಲಿ ಸಂಚರಿಸುವ ಲಾರಿ ಚಾಲಕರಿಂದ ಹಣ ಮತ್ತು ಮೊಬೈಲ್‌ಗಳನ್ನು ದೋಚಲು ಸಂಚುರೂಪಿಸಿಕೊಂಡಿದ್ದು, ಈ ಹಿಂದೆ ಬೆಂಗಳೂರು ನಗರದ ವಿವಿದ ಪೊಲೀಸ್ ಠಾಣೆಗಳಲ್ಲಿ ಇಂತಹುದೇ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾರೆ. ತುಮಕೂರು ನಗರ, ತುಮಕೂರು ಗ್ರಾಮಾಂತರ ಮತ್ತು ತಿಲಕ್‌ ಪಾರ್ಕ್‌ ಪೊಲೀಸ್ ಠಾಣೆ ಸರಹದ್ದಿನಲ್ಲಿ ಕೃತ್ಯವನ್ನು ಎಸಗಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ.

ಪ್ರಕರಣ ಪತ್ತೆಹಚ್ಚುವಲ್ಲಿ ಶ್ರಮಿಸಿದ ಕೆ.ಎಸ್‌‌.ನಾಗರಾಜು, ಡಿಎಸ್‌ಪಿ, ತುಮಕೂರು ನಗರ ಉಪವಿಭಾಗ, ತಿಮ್ಮಯ್ಯ ಎ.ಕೆ. ಸಿ.ಪಿ.ಐ ತುಮಕೂರು ಗ್ರಾಮಾಂತರ ವೃತ್ತ, ಪಿ.ಎಸ್.ಐ ರವರುಗಳಾದ ಯೋಗಾನಂದ ಸೋನಾರ್‌, ರವಿಕುಮಾರ್, ಸಿಬ್ಬಂದಿಯವರುಗಳಾದ ಹೆಚ್,ಸಿ 127 ಪ್ರಸನ್ನಕುಮಾರ್, ಪಿ.ಸಿ 248 ಮಾಲತೇಶ, ಹೆಚ್,ಸಿ 388 ಶಾಂತಕುಮಾರ್. ಹೆಚ್,ಸಿ 429, ಮಹಮದ್ ನಯಾಜ್ ಪಾಷ, ಹೆಚ್,ಸಿ 417 ಉಮೇಶ್, ಹೆಚ್.ಸಿ 408 ವೆಂಕಟೇಶ್, ಪಿ.ಸಿ 254 ಕರೀಂಪಾಷ, ಪಿ.ಸಿ 92 ನೀಲಕಂಠೇಶ, ಪಿ.ಸಿ 463, ರಾಮಚಂದ್ರಯ್ಯರವರುಗಳನ್ನು ಪೊಲೀಸ್ ಅಧೀಕ್ಷಕರವರು ಅಭಿನಂದಿಸಿರುತ್ತಾರೆ.

ಜಿಲ್ಲಾ ಪೊಲೀಸ್ ಕಛೇರಿ

ತುಮಕೂರು


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 59 guests online
Content View Hits : 231879