lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< November 2017 >
Mo Tu We Th Fr Sa Su
    1 2 4 5
6 7 8 9 10 11 12
13 14 15 16 17 18 19
20 21 22 23 24 25 26
27 28 29 30      
Friday, 03 November 2017
Crime incidents 03-11-17

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 137/2017, ಕಲಂ 87 ಕೆ.ಪಿ ಆಕ್ಟ್.

ದಿನಾಂಕ 01/11/2017 ರಂದು ಸಂಜೆ 04-30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ:-01-11-2017 ರಂದು ಮದ್ಯಾಹ್ನ 02:30 ಗಂಟೆಗೆ ನಾನು ಹುಳಿಯಾರು ಪೊಲೀಸ್ ಠಾಣೆಯಲ್ಲಿದ್ದಾಗ ಹುಳಿಯಾರು ಠಾಣಾ ಸರಹದ್ದು ಹುಳಿಯಾರು ಹೋಬಳಿ, ಹೊನ್ನಯ್ಯನಪಾಳ್ಯ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಕಾನೂನು ಬಾಹಿರ ಅಂದರ್ - ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅಕ್ರಮ ಜೂಜಾಟದ ಮೇಲೆ ದಾಳಿ ಮಾಡುವ ಬಗ್ಗೆ ನ್ಯಾಯಾಲಯದಿಂದ ಅನುಮತಿ ಪಡೆದಿದ್ದು, ಠಾಣೆಗೆ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸಿಬ್ಬಂದಿಯವರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಮದ್ಯಾಹ್ನ 02:45 ಗಂಟೆಗೆ ಹುಳಿಯಾರು ಹೋಬಳಿ, ಹೊನ್ನಯ್ಯನ ಪಾಳ್ಯದ ಗ್ರಾಮದಿಂದ ಸ್ವಲ್ಪ ದೂರದಲ್ಲಿ ಬೇಲಿಯ ಮರೆಯಲ್ಲಿ ಜೀಪನ್ನು ನಿಲ್ಲಿಸಿ ನೋಡಲಾಗಿ ಹೊನ್ನಯ್ಯನ ಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ 4 ಜನ ಅಸಾಮಿಗಳು ನೆಲದ ಮೇಲೆ ವೃತ್ತಾಕಾರವಾಗಿ ಕುಳಿತುಕೊಂಡು ಮದ್ಯದಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು ಹಣವನ್ನು ಪಣಕ್ಕೆ ಕಟ್ಟಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ – ಬಾಹರ್ ಎಂತ ಹೇಳುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಸದರಿಯವರನ್ನು ಸುತ್ತುವರೆದು ದಾಳಿ ಮಾಡಿ ಮೇಲೆ ಹೇಳದಂತೆ ತಿಳಿಸಿದಾಗ್ಯೂ ನಮಗೆ ಸಿಗದೆ ಇಬ್ಬರು ಓಡಿಹೋದರು, ನಂತರ ನಮಗೆ ಸಿಕ್ಕಿದ ಇಬ್ಬರ ಅಸಾಮಿಗಳ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ 1) ಎಂ ಚನ್ನಬಸವಯ್ಯ ಬಿನ್ ಮಲ್ಲಿಕಾರ್ಜುನಯ್ಯ, 54 ವರ್ಷ, ಬೇಸಾಯ, ಲಿಂಗಾಯ್ತರು, ಹೊನ್ನಯ್ಯನಪಾಳ್ಯ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 180/- ರೂ ನಗದು ಹಣ ಇರುತ್ತೆ 2)ಕುಮಾರ ಸ್ವಾಮಿ ಬಿನ್ ನಾಗರಾಜು ಬಿ, 31 ವರ್ಷ, ಕೂಲಿ, ಲಿಂಗಾಯ್ತರು, ಹೊನ್ನಯ್ಯನಪಾಳ್ಯ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 120/- ರೂ ನಗದು ಹಣ ಇರುತ್ತೆ. ನಂತರ ಓಡಿಹೋದ ಆಸಾಮಿಗಳ ಹೆಸರು ವಿಳಾಸ ತಿಳಿಯಲಾಗಿ 3) ರಘು ಬಿನ್ ಮರುಳಪ್ಪ, 45 ವರ್ಷ, ಕೂಲಿ, ಲಿಂಗಾಯ್ತರು ಜನಾಂಗ, ಹೊನ್ನಯ್ಯನಪಾಳ್ಯ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು 4) ಪರಮೇಶ್ವರಯ್ಯ ಬಿನ್ ಲೇ ಹುಚ್ಚಯ್ಯ, 48 ವರ್ಷ, ಲಿಂಗಾಯ್ತರು ಜನಾಂಗ, ಹೊನ್ನಯ್ಯನಪಾಳ್ಯ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿದುಬಂದಿದ್ದು, ಸದರಿ ಆಸಾಮಿಗಳನ್ನು ಹಾಗೂ ಕಾನೂನು ಬಾಹಿರ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡಿದ್ದ ಒಟ್ಟು 300/- ರೂ ನಗದು ಹಣವನ್ನು ಇಸ್ಪೀಟ್ ಜೂಜಾಟಕ್ಕೆ ಬಳಿಸಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ನೆಲಕ್ಕೆ ಹಾಸಿಕೊಂಡಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಮದ್ಯಾಹ್ನ 03:00 ಗಂಟೆಯಿಂದ ಸಂಜೆ 04:00 ಗಂಟೆಯವರೆಗೆ ಲ್ಯಾಪ್ ಟಾಪ್ ಮೂಲಕ ಪಂಚನಾಮ ಕ್ರಮ ಜರುಗಿಸಿ ವಶಕ್ಕೆ ಪಡೆದು ಮೇಲ್ಕಂಡ ಆಸಾಮಿಗಳು ಮತ್ತು ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಲು ಸೂಚಿಸಿ ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 93/2017  ಕಲಂ: 78 Cls 3 KP Act

ದಿನಾಂಕ:31/10/2017 ರಂದು ಬೆಳಿಗ್ಗೆ   9:15 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗೆ ವೈ ನ್ ಹೊಸಕೋಟೆ ಪೊಲೀಸ್ ಠಾಣಾ ಸರಹದ್ದು ವೈ ಎನ್ ಹೊಸಕೋಟೆ ಗ್ರಾಮದ ಕೆನರಾ ಬ್ಯಾಂಕ್  ಸರ್ಕಲ್  ಮುಂಭಾಗ  ಹುಣಸೇಮರದ ಬಳಿ  ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜೂಜಾಟ ನಡೆಯುತ್ತಿದೆ ಎಂತ ಮಾಹಿತಿ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ  ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ವೈ.ಎನ್.ಹೊಸಕೋಟೆ ಗ್ರಾಮದ   ಕೆನರಾ ಬ್ಯಾಂಕ್  ಸರ್ಕಲ್  ಮುಂಭಾಗ  ಹುಣಸೇಮರದ     ಬಳಿ   ಒಬ್ಬ ಆಸಾಮಿಯು  ಜನರನ್ನು ಕುರಿತು ಬನ್ನಿ ಮಟ್ಕಾ ಚೀಟಿ ಬರೆಸಿಕೊಳ್ಳಿ 1 ರೂಗೆ 70 ರೂ ಕೊಡುತ್ತೇನೆಂತ ಕೂಗೂತ್ತಾ ಜನರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದು ಕೊಡುತ್ತಾ  ಮಟ್ಕಾ ಜೂಜಾಟದಲ್ಲಿ  ತೊಡಗಿದ್ದವನನ್ನು   ನಾನು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ನೆರೆದಿದ್ದ ಜನರು ಓಡಿ ಹೋಗಿದ್ದು ,ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದ   ಆಸಾಮಿಯನ್ನು   ಹಿಡಿದು ಆತನ  ಹೆಸರು ವಿಳಾಸ ಕೇಳಲಾಗಿ ಮುಸ್ತಾಫ ಬಿನ್ ರಹೀಂ ಸಾಬ್ ,31 ವರ್ಷ, ಮುಸ್ಲಿಂ ಜನಾಂಗ,ಇಂದಿರಾ ಬಡಾವಣೆ. ವೈ ಎನ್ ಹೊಸಕೋಟೆ ಟೌನ್   ಎಂತ ತಿಳಿಸಿದ್ದು,  ಒಂದು ಮಟ್ಕಾ ನಂಬರ್ ಬರೆದಿರುವ ಒಂದು  ಚೀಟಿ, ಒಂದು ಲೆಡ್ ಪೆನ್ ಹಾಗೂ ಪಣಕ್ಕೆ ಕಟ್ಟಿಸಿಕೊಂಡಿದ್ದ 450=00 ರೂ ನಗದು ಹಣ ಇದ್ದು,   ಪಂಚರ ಸಮಕ್ಷಮ ಪಂಚನಾಮೆ ಮುಖೇನ ವಶಪಡಿಸಿಕೊಂಡು   ಸ್ಥಳದಲ್ಲಿ ಸಿಕ್ಕ    ಆಸಾಮಿಯನ್ನು ಸ್ಥಳದಿಂದ ಕಳುಹಿಸಲಾಗಿರುತ್ತದೆಂತ ,ನಂತರ ಠಾಣೆಗೆ ಬೆಳಿಗ್ಗೆ  10:35 ಗಂಟೆಗೆ  ವಾಪಾಸ್ ಬಂದು ಠಾಣಾ ಎನ್ ಸಿ ಆರ್ :132/2017 ರಲ್ಲಿ ನೊಂದಾಯಿಸಿ ನ್ಯಾಯಾಲಯದ ಅನುಮತಿ ಪಡೆದು  ಠಾಣಾ ಮೊ.ನಂ:93/2017 ಕಲಂ:78 ಕ್ಲಾಸ್ 3 ಕೆ.ಪಿ./ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ

ಚೇಳೂರು ಪೊಲೀಸ್ ಠಾಣಾ  ಮೊ.ನಂ.172/2017  ಕಲಂ 3 & 4  ಡಿ.ಪಿ.ಆಕ್ಟ್  ಮತ್ತು ಕಲಂ:498(ಎ) ರೆ/ವಿ 149 ಐ.ಪಿ.ಸಿ

ದಿನಾಂಕ:02/11/2017  ರಂದು  ಸಂಜೆ 6-00  ಗಂಟೆ  ಸಮಯದಲ್ಲಿ  ಪಿರ್ಯಾದಿ  ಆಶಾರವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು  ಅಂಶವೇನಂದರೆ,  ನನ್ನ  ತವರು  ಮನೆ  ತಾಲ್ಲೋಕ್.  ಬೆಳ್ಳಾವಿ   ಹೋ, ರಂಗನಪಾಳ್ಯ   ಗ್ರಾಮವಾಗಿದ್ದು, ನನ್ನ  ತಂದೆ  ದೊಡ್ಡಹನುಮಯ್ಯ ತಾಯಿ -  ಮಂಗಳಮ್ಮ  ಆಗಿದ್ದು,  ನಮ್ಮ  ತಂದೆ- ತಾಯಿಗೆ     ಮೊದಲನೆಯವರು  ನಾನು  ಎರಡನೇಯವರು  ವಾಸುದೇವ   ಎಂಬ ಗಂಡು  ಮಗ  ಇರುತ್ತಾನೆ.  ನಮ್ಮ  ತಂದೆ -ತಾಯಿ   ನನ್ನನ್ನು   ಗುಬ್ಬಿ  ತಾ, ಚೇಳೂರು  ಹೋ,  ಬಿದರೆ ಗ್ರಾಮದ  ವಾಸಿ  ಹೊಸಳಯ್ಯನ  ಮಗನಾದ  ಸೋಮಶೇಖರ್  ಎಂಬುವರಿಗೆ   ಹಿಂದೂ  ಸಂಪ್ರದಾಯದಂತೆ  ವಡವೆ  ಮತ್ತು  ವಸ್ತುಗಳನ್ನು  ಕೊಟ್ಟು  ಬೆಳ್ಳಾವಿ   ಚನ್ನಕೇಶ್ವರ ಕಲ್ಯಾಣ ಮಂಟಪದಲ್ಲಿ   ದಿನಾಂಕ:13/06/2016  ರಂದು ಮದುವೆ  ಮಾಡಿಕೊಟ್ಟಿದ್ದು,   ಮದುವೆಯ  ಕಾಲದಲ್ಲಿ  ನನಗೆ  01  ಜೊತೆ  ಹ್ಯಾಂಗೀನ್ಸ್ , ಒಂದು  ಜೊತೆ  ಓಲೆ,  ವರನಿಗೆ  ಒಂದು  ಕೊರಳ  ಚೈನು, ಒಂದು  ಉಂಗುರ,  ಮದುವೆಯ  ಖರ್ಚಿಗೆ 50.000=00 ರೂ  ಹಣವನ್ನು   ಕೊಟ್ಟು  ಮದುವೆ  ಮಾಡಿಕೊಟ್ಟಿದ್ದು,   ಮದುವೆಯಾದ  ನಂತರ  ಸುಮಾರು 06 ತಿಂಗಳ  ಕಾಲ  ನಾನು  ನನ್ನ  ಗಂಡನ  ಮನೆಯಲ್ಲಿ ಅನ್ಯೋನ್ಯವಾಗಿ  ಸಂಸಾರ  ಮಾಡಿಕೊಂಡಿದ್ದು,   ನಂತರ   ನನ್ನ  ಗಂಡ  ಮತ್ತು   ಮಾವ ಹೊಸಳಯ್ಯ  ಅತ್ತೆ ಜಯರತ್ನಮ್ಮ   ಮನೆಯಲ್ಲಿ  ಸಣ್ಣ ಪುಟ್ಟ  ವಿಚಾರಗಳಿಗೆ  ಸೂಳೆ ಮುಂಡೆ, ಬೋಳಿ  ಮುಂಡೆ   ಎಂದು ಅವ್ಯಾಚ್ಯ  ಶಬ್ದಗಳಿಂದ  ಬೈದು,   ಕೈಗಳಿಂದ   ಹೊಡೆದು     ನೀನು  ನಿನ್ನ   ತವರು  ಮನೆಗೆ  ಹೋಗಿ  ಕೆ.ಜಿ. ಗಟ್ಟಲೆ   ಬಂಗಾರ   ತೆಗೆದುಕೊಂಡು   ಬಾ    ಎಂದು   ಹೊಡೆದು  ನೋವುಂಟು  ಮಾಡುತ್ತಿದ್ದರು.   ಹಾಗೂ  ಹಬ್ಬ ಮತ್ತು  ಹರಿದಿನಗಳಲ್ಲಿ   ನಮ್ಮ  ಊರಿಗೆ  ಬರುತ್ತಿದ್ದ   ನನ್ನ  ನಾದಿನಿಯರಾದ  ಶುಭ  ಮತ್ತು  ಚೈತ್ರ   ಹಾಗೂ  ಶುಭ ರವರ  ಗಂಡ  ಶೇಖರ್  ಬಾಬು  ತುಮಕೂರು    ಚೈತ್ರ ರವರ  ಗಂಡ  ಅಶೋಕ್   ಮರಳೇನಹಳ್ಳಿ ಇವರುಗಳು  ಮನೆಗೆ  ಬಂದಾಗ   ನಿನ್ನ   ಮಾವನ  ಆಸ್ತಿಯನ್ನು  ಬರೆದು ಕೊಟ್ಟು  ನೀನು   ಮನೆಯನ್ನು  ಬಿಟ್ಟು   ಹೋಗು   ಎಂದು  ಅವ್ಯಾಚ್ಯ  ಶಬ್ದಗಳಿಂದ  ಎಲ್ಲಿಯಾದರೂ  ಹೋಗಿ  ಸಾಯಿ   ಎಂದು  ಬೈಯುತ್ತಿದ್ದರು.   ಈ  ವಿಚಾರವನ್ನು ನಮ್ಮ  ತಂದೆ- ತಾಯಿಗಳಿಗೆ  ದೂರ ವಾಣಿಯ  ಮೂಲಕ  ತಿಳಿಸಿದಾಗ  ನನ್ನ  ತಂದೆ ತಾಯಿ  ಹಾಗೂ  ನನ್ನ  ತಮ್ಮ  ವಾಸುದೇವ  ಹಾಗೂ    ಗ್ರಾಮಸ್ಥರಾದ  ಮನ್ಮಥಯ್ಯ   ಬಿನ್ ವೀರಭದ್ರಯ್ಯ,   ದಶರಥರಾವ್  ಬಿನ್  ಕೃಷ್ಣೋಜಿ ರಾವ್,  ಉಮೇಶ್  ರಾವ್   ಬಿನ್  ದಶರಥ ರಾವ್  ಎಂಬುವರು  ನನ್ನ  ಗಂಡನ  ಮನೆಗೆ  ಬಂದು  ನ್ಯಾಯ  ಪಂಚಾಯ್ತಿ  ಮಾಡಿ  ನನ್ನ  ಗಂಡನಿಗೆ  ಮತ್ತು ನನ್ನ  ಅತ್ತೆ  ಮಾವನಿಗೆ  ಬುದ್ದಿ  ಮಾತನ್ನು   ಹೇಳಿ   ಹೋಗಿದ್ದರು. ನನ್ನನ್ನು ನನ್ನ  ಗಂಡನ ಮನೆಯಲ್ಲಿ  ಬಿಟ್ಟು  ಹೋದರು.  ಆದರೂ  ಸಹ   ನನ್ನ  ಅತ್ತೆ  ಮಾವ   ನನ್ನ  ಮೇಲೆ  ಗಲಾಟೆ  ಮಾಡಿ  ನೀನು  ನಿನ್ನ  ತವರು  ಮನೆಗೆ  ಹೋಗಿ  ಹೆಚ್ಚಿನ  ವಡವೆ  ಮತ್ತು  ವರದಕ್ಷಿಣೆಯನ್ನು   ಹಣವನ್ನು  ತರುವಂತೆ  ಗಲಾಟೆ  ಮಾಡುತ್ತಿದ್ದರು.  ದಿನಾಂಕ;26/07/2017  ರಂದು   ರಾತ್ರಿ 08- 00  ಗಂಟೆ  ಸಮಯದಲ್ಲಿ  ನನಗೆ  ನನ್ನ  ಗಂಡ , ಮಾವ- ಅತ್ತೆ  ನನ್ನ  ನಾದಿನಿಯರು  ಮತ್ತು  ಅವರ  ಗಂಡಂದಿರು  ಸೇರಿಕೊಂಡು  ನೀನು  ನಿನ್ನ  ತವರು ಮನೆಯಿಂದ  ಕೆ.ಜಿ ಗಟ್ಟಲೆ  ವಡವೆ  ಮತ್ತು  ಹಣವನ್ನು  ತೆಗೆದುಕೊಂಡು  ಬಾ   ಎಂದು  ದೈಹಿಕ ವಾಗಿ  ಮತ್ತು  ಮಾನಸಿಕವಾಗಿ   ಹಿಂಸೆ  ನೀಡಿ ನನ್ನನ್ನು   ನೀನು  ನಿನ್ನ   ತವರು  ಮನೆಗೆ  ಹೋಗು  ಎಂದು  ಮನೆಯಿಂದ   ಹೊರಹಾಕಿದರೂ  ಆಗ  ನಾನು ನನ್ನ  ತವರು  ಮನೆಗೆ  ಹೋಗಿ  ಈ  ವಿಚಾರವನ್ನು  ನನ್ನ  ತಂದೆ- ತಾಯಿಗಳಿಗೆ  ವಿಚಾರ  ತಿಳಿಸಿದ್ದು,  ಈ  ವಿಚಾರವಾಗಿ  ನನ್ನ  ತಂದೆ- ತಾಯಿಗಳು  ನನ್ನ  ಗಂಡನ  ಮನೆಯವರೊಂದಿಗೆ   ನ್ಯಾಯ ಮಾಡಲು   ಹೋಗಿದ್ದು,  ಅವರು   ನ್ಯಾಯಕ್ಕೆ  ಬಾರದೇ   ಇದ್ದುದ್ದರಿಂದ  ಈ  ದಿನ  ತಡವಾಗಿ  ಬಂದು  ದೂರು  ನೀಡಿರುತ್ತೇನೆ.  ಆದ್ದರಿಂದ  ನನಗೆ  ಹೆಚ್ಚಿನ  ವರದಕ್ಷಿಣೆಯನ್ನು  ನನ್ನ  ತವರು  ಮನೆಯಿಂದ  ತೆಗೆದುಕೊಂಡು  ಬಾ   ಎಂದು ಅವ್ಯಾಚ್ಯ  ಶಬ್ದಗಳಿಂದ  ಬೈದು  ಕೈಗಳಿಂದ  ಹೊಡೆದು  ದೈಕಿಕ  ಮತ್ತು  ಮಾನಸಿಕ  ಹಿಂಸೆ  ನೀಡಿರುವ  ನನ್ನ  ಮಾವ- ಅತ್ತೆ  ಹಾಗೂ  ನನ್ನ ನಾದನಿಯರು  ಹಾಗೂ  ಅವರುಗಳ  ಗಂಡಂದಿರ  ಮೇಲೆ ಕಾನೂನು  ರೀತ್ಯ  ಕ್ರಮ  ಜರುಗಿಸಿದೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣಾ ಮೊ.ಸಂ.125/2017 ಕಲಂ 32, 34 ಕೆ.ಇ ಆಕ್ಟ್

ದಿನಾಂಕ: 02/11/2017 ರಂದು ಸಂಜೆ 05-30 ಗಂಟೆಯಲ್ಲಿ ಪಿರ್ಯಾದಿ ಯೋಗೀಶ. ಟಿ.ಕೆ,  ಹೆಚ್.ಸಿ-297, ಡಿ.ಸಿ.ಬಿ ಪೊಲೀಸ್ ಠಾಣೆ ತುಮಕೂರು ಜಿಲ್ಲೆ. ರವರು ಠಾಣೆಗೆ ಹಾಜರಾಗಿ ದಿನಾಂಕ: 02/11/2017 ರಂದು ಬೆಳಿಗ್ಗೆ ಪಿ.ಐ . ಡಿ.ಸಿ.ಬಿ ಸಾಹೇಬರವರಿಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಬೂದೇನಹಳ್ಳಿ ಗ್ರಾಮದಲ್ಲಿ ಕೃಷ್ಣನಾಯ್ಕ ಎಂಬುವವರು ತಮ್ಮ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆಂತಾ ಮಾಹಿತಿ ಬಂದಿದ್ದು, ಅದರಂತೆ ಪಿ.ಐ ಸಾಹೇಬರು ಪತ್ತೆಗಾಗಿ ನನ್ನನ್ನು ಮತ್ತು ಹೆಚ್.ಸಿ 225 ಮಲ್ಲೇಶ ಹಾಗೂ ಹೆಚ್,ಸಿ-48 ಶಿವಶಂಕರ ರವರಿಗೆ ನೇಮಕ ಮಾಡಿ ಕಳುಹಿಸಿದ್ದು, ಅದರಂತೆ ನಾವುಗಳು ಮೇಲ್ಕಂಡ ಸ್ಥಳಕ್ಕೆ ಸಾಯಂಕಾಲ 05-00 ಗಂಟೆಗೆ ಬಂದು ಮರೆಯಲ್ಲಿ ನಿಂತು ನೋಡಲಾಗಿ ಮನೆ ಚಿಲ್ಲರೆ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದುದ್ದು ಕಂಡುಬಂತು ನಾವು ಹತ್ತಿರಕ್ಕೆ ಹೋದಾಗ ನಮ್ಮನ್ನು ನೋಡಿ ಓಡಿ ಹೋಗಿರುತ್ತಾನೆ. ಸದರಿ ಅಂಗಡಿಯಲ್ಲಿ ಮದ್ಯ ತುಂಬಿದ ಅಂದರೆ ಟೆಟ್ರಾ ಪ್ಯಾಕೇಟ್ ತುಂಬಿದ ಬಾಕ್ಸ್ ಇದ್ದು ಸ್ಥಳದಲ್ಲಿ ಹೆಚ್.ಸಿ-225 ಹೆಚ್.ಸಿ-48 ರವರನ್ನು ಬಿಟ್ಟು ನಾನು ಠಾಣೆಗೆ ಬಂದು ವರದಿ ನೀಡಿರುತ್ತೇನೆ. ವರದಿಯ ಮೇರೆಗೆ  ಕೃಷ್ಣನಾಯ್ಕನ ವಿರುದ್ದ ಕ್ರಮಕೈಗೊಳ್ಳಲಾಗಿದೆ.

ಕ್ಯಾತಸಂದ್ರ ಪೊಲೀಸ್ ಠಾಣಾ ಮೊ.ನಂ. 287/2017 ಕಲಂ 279, 337 ಭಾದಸಂ.

ದಿನಾಂಕ.01/11/2017 ರಂದು ಮಧ್ಯಾಹ್ನ 1.00 ಗಂಟೆಗೆ ಪಿರ್ಯಾದಿ ರಿಜ್ವಾನ್ ಪಾಷ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ.  ದಿನಾಂಕ:30-10-2017 ರಂದು ಸಂಜೆ 7-30 ಗಂಟೆ ಸಮಯದಲ್ಲಿ ತನ್ನ ಬಾಬ್ತು KA-06-B-6013 ನೇ ಆಟೋರಿಕ್ಷಾದಲ್ಲಿ ತುಮಕೂರಿನಿಂದ ಪ್ಯಾಸೇಂಜರ್ ಹಾಕಿಕೊಂಡು ಹಿರೇಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಹೋಗೋಣವೆಂದು ಹೋಗಿ ತುಮಕೂರು–ಬೆಂಗಳೂರು ಎನ್.ಹೆಚ್-48 ರಸ್ತೆಯ ಪಂಡಿತನಹಳ್ಳಿ ಗೇಟ್ ನ ಬಳಿ ಬೆಂಗಳೂರು ಕಡೆಯಿಂದ ಬಂದ ಒಂದು ಮಿನಿ ಕಂಟೈನರ್ ಚಾಲಕನು ತನ್ನ ವಾಹನವನ್ನು ತುಮಕೂರು ಕಡೆಗೆ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದವೇನೆ ಆಟೋಕ್ಕೆ ಡಿಕ್ಕಿ ಹೊಡೆಸಿದನು. ಅಪಘಾತವುಂಟು ಮಾಡಿದ್ದು. ಈ ಅಪಘಾತಕ್ಕೆ ಕಾರಣರಾಗಿರುವ KA-01-AG-7867 ನೇ ಮಿನಿ ಕಂಟೈನರ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ಕ್ಯಾತಸಂದ್ರ ಪೊಲೀಸ್ ಠಾಣಾ ಮೊ.ನಂ. 288/2017 ಕಲಂ 143,324,341,504,506 /149  ಭಾದಸಂ.

ದಿನಾಂಕ.01/11/2017 ರಂದು ಮಧ್ಯಾಹ್ನ 3.30 ಗಂಟೆಯಿಂದ 4.20 ಗಂಟೆಯ ವರೆಗೆ ವೈದ್ಯರ ಸಮಕ್ಷಮ ಹೆಚ್ ಸಿ.57 ರವರು ಗಾಯಳುವಿನ ಹೇಳಿಕೆಯನ್ನು ಪಡೆದು ಠಾಣೆಗೆ 5.00 ಗಂಟೆಗೆ ಬಂದು ಹಾಜರುಪಡಿಸಿದ ದೂರಿನ ಅಂಶವೇನೆಂದರೆ ನಮಗೂ ಮತ್ತು ನಮ್ಮ ಸಂಬಂದಿ ರುದ್ರೇಶ್ (ತಾಯಿಯ ಅಣ್ಣ)  ರವರಿಗೂ ಜಮೀನಿನ ವಿವಾದವಿತ್ತು. ದಿನಾಂಕ.31/10/2017 ರಂದು ರಂದು ರಾತ್ರಿ 8.30 ಗಂಟೆಯಲ್ಲಿ ನಮ್ಮ ಮನೆಯಲ್ಲಿ ಊಟ ಮಾಡಿಕೊಡು ನಮ್ಮ ಜಮೀನಿನ ತೊರಯ ಹಳ್ಳದ ಸಮೀಪ ಹೋಗುವಾಗ್ಗೆ ನಮ್ಮ ಗ್ರಾಮದವರಾದ ನಮ್ಮ ಮಾವ ರುದ್ರೇಶ್ ಪಾಲಣ್ಣ ಇಟ್ಟಿಗೆ ಪ್ಯಾಕ್ಟರಿ  ಆಶ್ವಥ ಈಶ್ವರ ನಾಗೇಶ ಶಿವಣ್ಣ  ಸುರೇಶ ರವರು ಗುಂಪುಕಟ್ಟಿಕೊ0ಡು ಬಂದು ನನ್ನನ್ನು ಅಡ್ಡ ಹಾಕಿ ಅವರುಗಳು ತಂದಿದ್ದ ದೊಣ್ಣೆಗಳಿಂದ ನನಗೆ ಹೊಡೆದು ಸೂಳೆ ಮಗನೇ ಬೋಳಿಮಗನೇ ಅಂತಾ ಅವಾಚ್ಯಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದರು ಆದ್ದರಿಂದ  ನನ್ನ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡ ರವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂತಾ ನನ್ನ ಹೇಳಿಕೆ ನೀಡಿರುತ್ತೇನೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ.260/2017 ಕಲಂ 279, 337, 304(ಎ) ಐಪಿಸಿ ರೆ/ವಿ 134(ಎ)&(ಬಿ).187 ಐಎಂವಿ ಆಕ್ಟ್

ದಿನಾಂಕ:01/11/2017 ರಂದು ರಜೆ ಇದ್ದುದರಿಂದ ಮನೆಯಲ್ಲಿ ಇದ್ದು, ನಮ್ಮ ಸಂಬಂದಿ ಶಿವಲಿಂಗಪ್ಪ ರವರ ಮಗ ಹನುಮಂತರಾಜು ರವರ ಬಾಬ್ತು KA-06-EV-3081ನೇ TVS Wego ದ್ವಿಚಕ್ರ ವಾಹನದಲ್ಲಿ ನನ್ನ ಮಹ ಹನುಂತರಾಯಪ್ಪ ಚಾಲನೆ ಮಾಡಿಕೊಂಡು ಹಿಂಬದಿಯಲ್ಲಿ ಹನುಮಂತರಾಜು ರವರನ್ನು ಕೂರಿಸಿಕೊಂಡು ತುಮಕೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ಸಂಜೆ 5-30 ಗಂಟೆ ಸಮುಯದಲ್ಲಿ ತುಮಕೂರಿನಿಂದ ವಾಪಸ್ ನಮ್ಮ ಊರಿಗೆ ಬರಲು ತುಮಕೂರು-ಕುಣಿಗಲ್ ರಸ್ತೆಯಲ್ಲಿ ಮರಳೂರು ಕೆರೆ ಏರಿಯ ಮೇಲೆ ಮಹೇಶ್ ಪಿ.ಯು ಕಾಲೇಜ್ ಮುಂಭಾಗ ಬರುತ್ತಿರುವಾಗ್ಗೆ ಕುಣಿಗಲ್ ಕಡೆಯಿಂದ ಬಂದ KA-02-P-6961 ನೇ ಮಾರುತಿ 800 ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ಮಗ ಹನುಮಂತರಾಯಪ್ಪ ಚಾಲನೆ ಮಾಡಿಕೊಂಡು ಬರುತ್ತಿದ್ದ KA-06-EV-3081ನೇ TVS Wego ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದು ಅಪಘಾತದಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಹನುಮಂತರಾಯಪ್ಪ.ಎಂ.ಎಲ್ ರವರಿಗೆ ತಲೆಗೆ, ಕುತ್ತಿಗೆ, ಮುಖಕ್ಕೆ, ಭುಜಕ್ಕೆ ಹಾಗೂ ಕೈಕಾಲುಗಳಿಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತ ಉಂಟುಮಾಡಿದ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ.  ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂತಾ ದೂರು ನೀಡಿರುತ್ತೆ.

ಜಯನಗರ  ಪೊಲೀಸ್ ಠಾಣಾ ಮೊ.ನಂ.145/2017 ಕಲಂ 96 ಬಿ ಕೆ ಪಿ ಆಕ್ಟ್.

ದಿನಾಂಕ: 02-11-2017 ರಂದು ಬೆಳಗಿನ ಜಾವ 3-30 ಗಂಟೆಗೆ ಠಾಣಾ ಎ.ಎಸ್‌.ಐ ಕೃಷ್ಣಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ರಿಪೋರ್ಟ್‌ ಅಂಶವೇನೆಂದರೆ, ಅಮರಜ್ಯೋತಿನಗರದಲ್ಲಿ ಗಸ್ತು ಮಾಡುತ್ತಿದ್ದಾಗ ದಿನಾಂಕ: 02-11-2017 ರಂದು ಬೆಳಗಿನ ಜಾವ 3-00 ಗಂಟೆ ಸಮಯದಲ್ಲಿ ಅಮರಜ್ಯೋತಿನಗರದ ಶ್ರೀ ಸಾಯಿಬಾಬಾ ದೇವಸ್ಥಾನದ ಮುಂಭಾಗ ಮರದ ಕೆಳಗೆ ಒಬ್ಬ ಆಸಾಮಿ ತನ್ನ ಮುಖವನ್ನು ಮರೆಮಾಚಿಕೊಂಡು ಅನುಮಾನಸ್ಪದವಾಗಿ ಓಡಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡ ಕೂಡಲೇ ತನ್ನ ಇರುವಿಕೆಯನ್ನು ಮರೆಮಾಚಿಕೊಳ್ಳುವ ಸಲುವಾಗಿ ಸದರಿ ಸ್ಥಳದಿಂದ ಓಡಲು ಪ್ರಯತ್ನಿಸಿದವನನ್ನು ನಾವು ಬೆನ್ನಟ್ಟಿ ಹಿಡಿದು ಈ ಸ್ಥಳದಲ್ಲಿ ಇರುವಿಕೆಯ  ಬಗ್ಗೆ ಕಾರಣವನ್ನು ನೀಡುವಂತೆ ಕೇಳಲಾಗಿ ಸಮಂಜಸ ಉತ್ತರ ನೀಡಿರುವುದಿಲ್ಲ. ಈತನು ಯಾವುದೋ ಅಪರಾದ ಮಾಡಲು ಹೊಂಚು ಹಾಕುತ್ತಿದ್ದನೆಂಬುದಾಗಿ ಅನುಮಾನ ಬಂದಿದ್ದರಿಂದ ಈತನನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ಕರೆತಂದು ಹಾಜರ್‌ ಪಡಿಸಿ ನೀಡಿರುವ  ರಿಪೋರ್ಟ್‌ ಪಡೆದು  ಪ್ರಕರಣ ದಾಖಲು ಮಾಡಿಕೊಂಡಿದೆ.

ಹೊಸಬಡಾವಣಾ ಪೊಲೀಸ್ ಠಾಣಾ ಮೊ.ನಂ 133/2017 ಕಲಂ 109 ಸಿಆರ್ ಪಿಸಿ

ಪಿರ್ಯಾದಿಯು ಠಾಣಾ ಮೊನಂ 131/2017 ರಲ್ಲಿ ಆರೋಪಿಗಳ ಪತ್ತೆ ವಿಶೇಷ ಕರ್ತವ್ಯದಲ್ಲಿರುವಾಗ್ಗೆ ಆರೋಪಿಯು ಕರ್ನಾಟಕ ಬ್ಯಾಂಕ್ ಮುಂಭಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದು ಸಮವಸ್ತ್ರದಲ್ಲಿದ್ದ ಪಿರ್ಯಾದಿಯನ್ನು ನೋಡಿದ ಕೂಡಲೆ ಓಡಲು ಪ್ರಯತ್ನಿಸಿದವನನ್ನು ಹಿಡಿದು ವಿಚಾರ ಮಾಡಲಾಗಿ ಆತನು ತನ್ನ ಇರುವುವಿಕೆಯನ್ನು ಸಮರ್ಥಿಸಿಕೊಳ್ಳಲು ವಿಫಲನಾಗಿದ್ದು ಯಾವುದೋ ಕಳವು ಮಾಡಲು ಹೊಂಚು ಹಾಕುತ್ತಿರುವುದು ಹೊರಪಟ್ಟ ಮೇರೆಗೆ ಪ್ರಕರಣ ದಾಖಲಿಸಿದೆ

ಬೆಳ್ಳಾವಿ  ಪೊಲೀಸ್ ಠಾಣಾ ಮೊ.ನಂ 78/2017 ಕಲಂ 379, 511 ರೆ/ವಿ 34 ಭಾದಸಂ.

ದಿನಾಂಕ 02/11/2017 ರಂದು  ಬೆಳಗ್ಗೆ  11-00 ಗಂಟೆಗೆ  ಪಿರ್ಯಾದಿ ಠಾಣೆಗೆ ಹಾಜರಾಗಿ ಟೈಪ್ ಮಾಡಿಸಿಕೊಟ್ಟ ದೂರಿನ ಸಾರಾಂಶವೇನೆಂದರೆ  ದಿನಾಂಕ 01/11/2017 ರಂದು  ರಾತ್ರಿ  11-30 ಗಂಟೆ  ಸಮಯದಲ್ಲಿ  ಕೆಂಚರಾಮ,ರಾಘವೇಂದ್ರ,ಹಾಗೂ  ಮತ್ತೊಬ್ಬ  ವ್ಯಕ್ತಿಯು   ಕೆಎ-44-ಜೆ-4333 ನೇ  ಬೈಕ್ ನಲ್ಲಿ  ನನ್ನ  ಮನೆಯ ಬಳಿ  ಬಂದು ಕಳ್ಳತನ  ಮಾಡುವ  ಉದ್ದೇಶದಿಂದ  ನಮ್ಮ  ಮನೆಯ  ಬಳಿ ಇದ್ದ ನಾವು  ಸಾಕಿದ್ದ ಸುಮಾರು  05 ಕೋಳಿಗಳನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿಯವರ ಮೇಲೆ  ಕಾನೂನು  ರೀತ್ಯಾ ಕ್ರಮ  ಕೈಗೊಳ್ಳಬೇಕೆಂದು       ಜರುಗಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 50 guests online
Content View Hits : 322815