lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< November 2017 >
Mo Tu We Th Fr Sa Su
    2 3 4 5
6 7 8 9 10 11 12
13 14 15 16 17 18 19
20 21 22 23 24 25 26
27 28 29 30      
Wednesday, 01 November 2017
Crime Incidents 01-11-17

ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಮೊ.ನಂ 124/2017 ಕಲಂ:302, 201 ಐಪಿಸಿ

ದಿನಾಂಕ: 31/10/2017 ರಂದು ಸಂಜೆ 07-00 ಗಂಟೆಗೆ ಪಿರ್ಯಾದಿ ರಮ್ಯ ಕೋಂ ಗಂಗಾಧರಯ್ಯ, 35 ವರ್ಷ, ತಿಗಳ ಜನಾಂಗ, ಗೃಹಿಣಿ, ಕೊಡಿಗೇನಹಳ್ಳಿ ಗ್ರಾಮ, ಕೊಡಿಗೇನಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕ್ ಠಾಣೆಗೆ ಹಾಜರಾಗಿ ನೀಡಿದ ದೂರಿನಂಶವೇನೆಂದರೆ, ನಾನು ನನ್ನ ಗಂಡ ಗಂಗಾಧರಯ್ಯ ಮತ್ತು ನನ್ನ ಇಬ್ಬರು ಮಕ್ಕಳಾದ ತೇಜಸ್ವಿನಿ, ರೂಪ ರೊಂದಿಗೆ ವಾಸವಾಗಿದ್ದು ನನ್ನ ಗಂಡ ಪ್ರತಿ ಸೋಮವಾರ ಹಳ್ಳಿ ಹಳ್ಳಿಗಳಿಗೆ ಹೋಗಿ ಟೀ ಪುಡಿ. ಕಾಫಿಪುಡಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಅದೇ ರೀತಿ ದಿನಾಂಕ 30-10-17 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ನನ್ನ ಗಂಡನ ಬಾಬ್ತು ಟಿ ವಿ ಎಸ್ ಎಕ್ಸ್‌ ಎಲ್‌ ಹೆವಿಡ್ಯೂಟಿ ವಾಹನದಲ್ಲಿ ಕಾಫಿ ಪುಡಿ ಟೀ ಪುಡಿಯನ್ನು ಇಟ್ಟುಕೊಂಡು ಪ್ರತಿದಿನದಂತೆ ಮನೆಯಿಂದ ಹೋಗಿದ್ದು, ಸಾಯಂಕಾಲ 05-30 ಗಂಟೆ ಸಮಯದಲ್ಲಿ ನನ್ನ ದೊಡ್ಡ ಮಗಳು ತೇಜಸ್ವಿನಿ ನನ್ನ ಗಂಡನ ಬಾಬ್ತು ಪೋನ್‌ ನಂ.9008351530 ಗೆ ಕರೆ ಮಾಡಿ ನನ್ನ ಗಂಡನನ್ನು ಮಾತನಾಡಿಸಿದ್ದು ನನ್ನ ಗಂಡ ಮಿಡಿಗೇಶಿಯಲ್ಲಿರುವುದಾಗಿ ರಾತ್ರಿ 08=00 ಗಂಟೆಯ ಓಳಗೆ ಬರುವುದಾಗಿ ನನ್ನ ಮಗಳಿಗೆ ತಿಳಿಸಿದರು.ನಂತರ ನಾನು ರಾತ್ರಿ 07-30 ಗಂಟೆಯಲ್ಲಿ ಪೋನ್ ಮಾಡಿ ನನ್ನ ಗಂಡನಿಗೆ ಮುದ್ದೆ ಮಾಡಲು ಕೇಳಿದ್ದು ನನ್ನ ಗಂಡ ನಾನು ಬಂದ ಮೇಲೆ ಮುದ್ದೆ ಮಾಡುವಂತೆ ತಣ್ಣಗಾಗುತ್ತದೆಂದು ತಿಳಿಸಿದರು. ನಂತರ ಪುನಃ 10-00 ಗಂಟೆಯಾದರೂ ನನ್ನ ಗಂಡ ಬಾರದ್ದರಿಂದ ನಾನು ನನ್ನ ಗಂಡನ ಮೊಬೈಲ್‌ ನಂಬರ್‌ ಗೆ ಕರೆ ಮಾಡಿದ್ದು ನಾಟ್‌ ರೀಚಬಲ್‌ ಅಂತ ಬರುತ್ತಿತ್ತು. ನಂತರ ನಾನು ನನ್ನ ಮೈದ ಶಂಕರಪ್ಪ ಎಂಬುವರಿಗೆ ಪೋನ್‌ ಮಾಡಿ ನಿಮ್ಮ ಅಣ್ಣ ಇಷ್ಟು ವತ್ತಾದರೂ ಮನೆಗೆ ಬಂದಿಲ್ಲ  ಹೋಗಿ ನೋಡಿಕೊಂಡು ಬನ್ನಿ ಅಂತ ಹೇಳಿದ್ದು ಶಂಕರಪ್ಪ ಪೋನ್‌ ಮಾಡಿ ನೋಡುತ್ತೇನೆಂದು ತಿಳಿಸಿದ. ನಂತರ ನಾನು ನನ್ನ ಗಂಡನ ಪರಿಚಯಸ್ಥ ಕುರುಬರ ನಾಗರಾಜು ವಿಗೆ ಪೋನ್ ಮಾಡಿ ನನ್ನ ಗಂಡ ಮನೆಗೆ ಬಾರದೆ ಇರುವ ವಿಚಾರ ತಿಳಿಸಿದ್ದು ಅವರು ನಮ್ಮ ಮನೆಯ ಬಳಿ ನನ್ನ ಬಾಮೈದ ಶಂಕರಪ್ಪನವರ ಜೊತೆ ನಮ್ಮ ಮನೆಯ ಬಳಿ ಬಂದರು. ನಂತರ ನನ್ನ ಗಂಡನನ್ನು ಹುಡುಕಿಕೊಂಡು ಬರುತ್ತೇವೆಂದು ತಿಳಿಸಿದರು. ನಂತರ ಮಧ್ಯ ರಾತ್ರಿ ವೇಳೆಯಲ್ಲಿ ನಾಗರಾಜಣ್ಣ, ಶಂಕರಿ  ಪೋನ್‌ ಮಾಡಿ  ನಿನಗೇನಾದರೂ ಅಣ್ಣ ಪೋನ್‌ ಮಾಡಿತ್ತಾ ಅಂತ ಕೇಳಿದರು. ಅದಕ್ಕೆ ನಾನು ಪೋನ್ ಮಾಡಿಲ್ಲ ಅಂತ ತಿಳಿಸಿದೆ. ನಂತರ ಅವರು ಪೋನ್‌ ಮಾಡಿದ ಅರ್ಥಗಂಟೆಯ ನಂತರ ನಾಗರಾಜಣ್ಣ ನಮ್ಮ ಮನೆಯ ಬಳಿ ಬಂದು ನಮ್ಮ ಹೆಂಗಸರನ್ನು ಮನೆಯ ಬಳಿ ಮಲಗಲು ಕಳುಹಿಸಬೇಕೆನಮ್ಮ ಅಂತ ಕೇಳಿದ್ದು ನಾನು ಬೇಡವೆಂದು ಹೇಳಿದೆ. ನಂತರ ಬೆಳಗಿನ ಜಾವದಲ್ಲಿ 2 ಸಾರಿ ಪೋನ್‌ ಮಾಡಿ ನನ್ನ ಗಂಡನ ಬಗ್ಗೆ ವಿಚಾರಿಸಿ ದೈರ್ಯ ಹೇಳಿದರು. ನಂತರ ಈ ದಿನ ದಿನಾಂಕ 31-10-17 ರಂದು ಬೆಳಿಗ್ಗೆ 07-00 ಗಂಟೆಗೆ ಹಾಲು ತೆಗೆದುಕೊಂಡು ಬಂದು ನಮಗೆ ಕೊಟ್ಟಿದ್ದು ನಾನು ನನ್ನ ದೊಡ್ಡ ಮಗಳು ತೇಜಸ್ವಿನಿಯನ್ನು ನನ್ನ ಬಾಮೈದ ಶಂಕರಪ್ಪನವರ ಮನೆಯ ಬಳಿಗೆ ಕಳುಹಿಸಿ ಕರೆಸಿಕೊಂಡು ನನ್ನ ಬಾಮೈದನಿಗೆ 150-00 ರೂ ಪೆಟ್ರೋಲ್‌ ಗೆ ಹಣಕೊಟ್ಟು ನನ್ನ ಗಂಡನನ್ನು ನೋಡಿಕೊಂಡು ಬರುವಂತೆ ನಾಗರಾಜಪ್ಪನನ್ನು ಜೊತೆ ಮಾಡಿ ಕಳುಹಿಸಿದೆ. ನಂತರ ನಾನು ಶಂಕರಪ್ಪ ಮತ್ತು ನಾಗರಾಜಪ್ಪನಿಗೆ ಆಗಾಗ್ಗೆ ಪೋನ್ ಮಾಡಿ ನನ್ನ ಗಂಡನ ಬಗ್ಗೆ ವಿಚಾಠಿಸುತ್ತಿದ್ದೆ. ಅವರು ಅಲ್ಲಿ ಇಲ್ಲಿ ಹುಡುಕುತ್ತಿದ್ದೆವೆಂದು ತಿಳಿಸಿದ್ದು ಮಧ್ಯಾಹ್ನ 02-00 ಗಂಟೆಗೆ ಶಂಕರಪ್ಪ ನನಗೆ ಪೋನ್‌ ಮಾಡಿ ನನ್ನ ಗಂಡನನ್ನು ಕೊಲೆ ಮಾಡಿ ಅಡವಿನಾಗೇನಹಳ್ಳಿ ಕೆರೆಯ ನೀರಿನಲ್ಲಿ ಹೂತು ಹಾಕಿರುತ್ತಾರೆಂದು ತಿಳಿಸಿದರು. ನಂತರ ನಾನು  ನನ್ನ ತಮ್ಮ ಚಂದ್ರಕುಮಾರ ನನ್ನು ಕರೆಸಿಕೊಂಡು ಅಡವಿ ನಾಗೇನಹಳ್ಳಿಕೆರೆಯ ಬಳಿ ಕರೆದುಕೊಂಡು ಹೋಗಿ ನೋಡಲಾಗಿ ಯಾರೋ ದುರಾತ್ಮರು ಯಾವುದೋ ಉದ್ದೇಶದಿಂದ ಯಾವುದೋ ಆಯುಧದಿಂದ ಅಡವಿನಾಗೇನಹಳ್ಳಿ ತಿಪ್ಪಾಪುರ ರಸ್ತೆಯಲ್ಲಿ  ಹೊಡೆದು ಕೊಲೆ ಮಾಡಿ ಕೆರೆಯ ಕೋಡಿಯ ಬಳಿ ಹೊಸದಾಗಿ ಮಣ್ಣು ತೆಗೆದಿರುವ ಗುಂಡಿಗೆ ಹಾಕಿ ಕಲ್ಲುಗಳನ್ನು ಮೇಲಿಟ್ಟು ಮಣ್ಣನ್ನು ಅರೆಬರೆ ಮುಚ್ಚಿರುವುದು ಕಂಡು ಬರುತ್ತಿದ್ದು ನನ್ನ ಮೈದ ಶಂಕರಪ್ಪ ಮತ್ತು ಮಂಜುನಾಥ ಮತ್ತು ನನ್ನ ಬಾವ ಬಾಲಪ್ಪನವರ ಸಹಾಯದಿಂದ ಕಲ್ಲುಗಳನ್ನು ಮತ್ತು ಮಣ್ಣನ್ನು ಸರಿಸಿ ನೋಡಲಾಗಿ ಮುಖದಲ್ಲಿ ಸ್ವಲ್ಪ ರಕ್ತ ಬರುತ್ತಿರುವುದು ಕಂಡು ಬಂತು. ಯಾರೋ ದುರಾತ್ಮರು ನನ್ನ ಗಂಡನನ್ನು ಯಾವುದೋ ಉದ್ದೇಶದಿಂದ ಕೊಲೆ ಮಾಡಿ  ನನ್ನ ಗಂಡನ ಬಾಬ್ತು ಟಿ ವಿ ಎಸ್‌, ಎಕ್ಸ್ ಎಲ್‌ ಹೆವಿಡ್ಯೂಟಿ ಯನ್ನು ತೆಗೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ತಾವು ಸ್ಥಳ ತನಿಖೆ ಕೈಗೊಂಡು ನನ್ನ ಗಂಡನನ್ನು ಕೊಲೆ ಮಾಡಿರುವ ಅಸಾಮಿಗಳನ್ನು ಮತ್ತು ನನ್ನ ಗಂಡನ ಬಾಬ್ತು ದ್ವಿಚಕ್ರ ವಾಹನವನ್ನು ಪತ್ತೆ ಹಚ್ಚಿ ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕೆಂದು ಕೋರುತ್ತೇನೆಂತಾ ನೀಡಿದ ದೂರನ್ನು ಪಡೆದು ಠಾಣಾ ಮೊನಂ. 124/2017 ಕಲಂ 302,201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಪ್ರ,ವ,ವರದಿಯನ್ನು ಘನ ನ್ಯಾಯಾಲಯಕ್ಕೆ ಹಾಗೂ ತುರ್ತು ವರದಿಯೊಂದಿಗೆ ನಕಲುಗಳನ್ನು ಇಲಾಖಾ ಮೇಲಾಧಿಕಾರಿಗಳಿಗೆ ನಿವೇದಿಸಿಕೊಂಡಿರುತ್ತೇನೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 88/2017 - ಕಲಂ.15(ಎ) 32(3) ಕೆ ಇ ಆಕ್ಟ್‌‌‌

ದಿನಾಂಕ;31/10/2017  ರಂದು ಸಂಜೆ 4-00 ಗಂಟೆಯಲ್ಲಿ ಠಾಣಾ ಹೆಚ್‌ ಸಿ 158 ಶ್ರೀರಂಗಯ್ಯ ರವರು ಠಾಣೆಗೆ ವಾಪಾಸ್‌‌ ಆಗಿ ಈ ದಿನ ನನಗೂ ಮತ್ತು ಪಿ ಸಿ 182 ಹರೀಶ ರವರಿಗೆ ಹಗಲು ಕರ್ತವ್ಯಕ್ಕೆ ನೇಮಕ ವಾಗಿದ್ದು, ನೇಮಕದಂತೆ ಠಾಣೆಯಲ್ಲಿ ಹಗಲು ಕರ್ತವ್ಯದಲ್ಲಿದ್ದಾಗ 2 ನೇ ಗ್ರಾಮಗಸ್ತು ಸಿಬ್ಬಂದಿಯಾದ ನನಗೆ ನನ್ನ ಬಾತ್ಮೀದಾರರೊಬ್ಬರು ಠಾಣೆಯ ಹತ್ತಿರ ಬಂದು ಸಿಡಿದರಗಲ್ಲು ಗ್ರಾಮದಲ್ಲಿ ಆಸಾಮಿಯೊಬ್ಬ ತನ್ನ ಅಂಗಡಿಯ ಪಕ್ಕದ ಜಾಗದಲ್ಲಿ ಮದ್ಯವನ್ನು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದಾನೆಂದು ಬಾತ್ಮಿ ತಿಳಿಸಿದ ಮೇರೆಗೆ ನಾನು ಮತ್ತು ಪಿಸಿ 182 ರವರು ಬಾತ್ಮೀ ಬಂದ ಸ್ಥಳಕ್ಕೆ ಮದ್ಯಾಹ್ನ ಹೋಗಿ ನೋಡಲಾಗಿ ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿದ್ದ ಅಂಗಡಿಯೊಂದರ ಆಸಾಮಿಯು ತನ್ನ ಅಂಗಡಿ ಮುಂದೆ ಮಾಡಿಕೊಂಡಿದ್ದ ಗರಿ ಚಪ್ಪರದ ಮರೆಯ ಜಾಗದಲ್ಲಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಗಲಾಟೆ ಮಾಡುತ್ತಾ ಮದ್ಯ ಪಾನ ಮಾಡುತ್ತಿದ್ದರು ಅದನ್ನು ಖಚಿತ ಪಡಿಸಿಕೊಂಡ ನಾನು ಮತ್ತು ಪಿಸಿ 182 ರವರು ಹತ್ತಿರ ಹೋಗಿ ನೋಡಲಾಗಿ ಮದ್ಯಪಾನ ಮಾಡುತ್ತಿದ್ದರು. ಸ್ಥಳದಿಂದ ಓಡಿ ಹೋದರು. ಅಂಗಡಿಯವನ ಹೆಸರು ವಿಳಾಸ ತಿಳಿಯಲಾಗಿ ರಂಗಪ್ಪ ಬಿನ್ ಸಿದ್ದಲಿಂಗಪ್ಪ, 55 ವರ್ಷ, ಕುಂಬಾರರು, ಅಂಗಡಿ ವ್ಯಾಪಾರ ಸಿಡಿದರಗಲ್ಲು, ಮದುಗಿರಿ ತಾಲ್ಲೂಕು ಎಂತಾ ತಿಳಿಸಿದ. ಮದ್ಯ ಪಾನ ಮಾಡುಲು ಜನರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದಕ್ಕೆ ಯಾವುದಾದರು ಪರವಾನಗಿ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ. ಸ್ಥಳದಲ್ಲಿ ಸಾರ್ವಜನಿಕರು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದ ಮದ್ಯದ ಪಾಕೇಟ್‌ ಮತ್ತು ಪ್ಲಾಸ್ಟಿಕ್‌ ಗ್ಲಾಸ್‌ ಮತ್ತು ನೀರಿನ ಬಾಟೆಲ್‌ ಬಿದ್ದಿದ್ದು, ಸದರಿ ಕೃತ್ಯ ಸ್ಥಳವನ್ನು ಯಥಾವತ್ತಾಗಿ ಸಂರಕ್ಷಿಸಲು ಮತ್ತು ಆರೋಪಿ ಬೆಂಗಾವಲಾಗಿ ಪಿಸಿ 182 ರವರನ್ನು ಸ್ಥಳದಲ್ಲಿಯೇ ಬಿಟ್ಟು ಠಾಣೆಗೆ ವಾಪಾಸ್‌ ಆಗಿ ಮೇಲ್ಕಂಡ ಆಸಾಮಿಯ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

 

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 89 /2017 - ಕಲಂ.15(ಎ) 32(3) ಕೆ ಇ ಆಕ್ಟ್‌‌‌

ದಿನಾಂಕ:- 31/10/2017 ರಂದು ಠಾಣಾ ಎ ಎಸ್ ಐ ರಾಮಕೃಷ್ಣಯ್ಯ ಡಿ ರವರು  ಠಾಣೆಗೆ ಬಂದು ನೀಡಿದ ವರದಿ ಅಂಶವೇನೆಂದರೆ  ಈ ದಿನ ಮದ್ಯಾಹ್ನ ಹೆಚ್‌‌ ಸಿ 152 ಈಶ್ವರಯ್ಯ ರವರೊಂದಿಗೆ  ಕನಪನಾಯಕನಹಳ್ಳಿ, ಆಪನಹಳ್ಳಿ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ದಂಡಿನದಿಬ್ಬ ಗ್ರಾಮಕ್ಕೆ ಹೋಗುವಾಗ ದಂಡಿನದಿಬ್ಬ ಗ್ರಾಮದಲ್ಲಿ ಸಿಡಿದರಗಲ್ಲು ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕ ವ್ಯಕ್ತಿಯೊಬ್ಬರು ಅಂಗಡಿ ಪಕ್ಕದಲ್ಲಿ ಮದ್ಯ ಸೇವನೆ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂತಾ ಬಾತ್ಮಿದಾರರಿಂದ ಪೋನ್‌‌ ಮೂಲಕ ಮಾಹಿತಿ ಪಡೆದು ದಂಡಿನದಿಬ್ಬ ಗ್ರಾಮಕ್ಕೆ ಹೋಗಿ ರಸ್ತೆಯ ಪಶ್ಚಿಮದ ಕಡೆ ಇರುವ ಒಂದು ಅಂಗಡಿ ಹತ್ತಿರ ಸಂಜೆ  4 -00 ಗಂಟೆಗೆ ಹೋದಾಗ ಅಂಗಡಿಗೆ ಹೊಂದಿಕೊಂಡಂತೆ ಇರುವ ಖಾಲಿ ಜಾಗದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಓಡಿಹೋಗಿದ್ದು,  ಸದರಿ ಜಾಗದಲ್ಲಿ ಮದ್ಯದ ಎರಡು  ಟೆಟ್ರಾ ಬಾಗ್‌ ಪೈಪರ್‌ ಪ್ಯಾಕೇಟ್ ಗಳು ಮತ್ತು ಎರಡು ಪ್ಲಾಸ್ಟಿಕ್‌ ಲೋಟಗಳು ಮತ್ತು 1/2 ಲೀಟರ್‌‌ ನ ಎರಡು ನೀರಿನ ಖಾಲಿ ಬಾಟೆಲ್‌ ಗಳು ಇದ್ದವು. ಸ್ಥಳದಲ್ಲಿ ಅಂಗಡಿ ಬಳಿ ಇದ್ದ ವ್ಯಕ್ತಿಯನ್ನು ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಿಗೆ ಇದೆಯೇ ಎಂದು ಕೇಳಿದ್ದಕ್ಕೆ ಇರುವುದಿಲ್ಲ ಎಂದು ತಿಳಿಸಿದ್ದು , ಆತನ ಹೆಸರು ವಿಳಾಸ ತಿಳಿದುಕೊಂಡು  ಸಂಜೆ 4-30 ಗಂಟೆಗೆ ವಾಪಾಸ್ ಠಾಣೆಗೆ ಬಂದು  ಯಾವುದೆ ಪರವಾನಿಗೆ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಗೋವಿಂದರಾಜು ರವರ ಮೇಲೆ ಕಾನೂನುಕ್ರಮ ಜರುಗಿಸಬೇಕೆಂದು ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 19/2017 ಕಲಂ 174 ಸಿಆರ್ಪಿಸಿ

ದಿನಾಂಕ: 30-10-2017 ರಂದು ಸಂಜೆ 4-30 ಗಂಟೆಗೆ ತುಮಕೂರು ಟೌನ್‌, ಸರಸ್ವತಿಪುರಂ 9 ನೇ ಕ್ರಾಸ್ ವಾಸಿ ಅಬೀದ ಕೋಂ ಲೇಟ್ ಶ್ರೀಧರ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮಗೆ ಮಕ್ಕಳಿಲ್ಲದ ಕಾರಣ ನಾನು ಹಾಗೂ ನನ್ನ ಗಂಡ ಶ್ರೀಧರ ಇಬ್ಬರೂ ಸೇರಿ 2013 ನೇ ಸಾಲಿನಲ್ಲಿ ತುಮಕೂರು ಟೌನ್ ಅಮರಜ್ಯೋತಿನಗರದಲ್ಲಿರುವ ಬಾಲಕೀಯರ ಬಾಲಮಂದಿರದಿಂದ ಎಲಿಸಾ ಎಂಬ ಹುಡುಗಿಯನ್ನು ದತ್ತು ತೆಗೆದುಕೊಂಡು ನಮ್ಮ ಮನೆಯಲ್ಲಿಯೇ ಸಾಕಿಕೊಂಡಿದ್ದೆವು.  ನಮ್ಮ ಯಜಮಾನರು ದಿನಾಂಕ: 24-03-2015 ರಲ್ಲಿ ಕಿಡ್ನಿ ವೈಪಲ್ಯದಿಂದ ತೀರಿ ಹೋಗಿದ್ದು, ನಂತರ ನಾನು ಹಾಗೂ ನನ್ನ ಸಾಕು ಮಗಳು ಎಲಿಸಾ @ ಅಮೂಲ್ಯ ಇಬ್ಬರೇ ನಮ್ಮ ಮನೆಯಲ್ಲಿದ್ದೆವು.  ನಮ್ಮ ಸಾಕು ಮಗಳು ಎಲಿಸಾ @ ಅಮೂಲ್ಯ ತುಮಕೂರು ಟೌನ್ ಎಂಪ್ರೆಸ್‌‌ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದಳು.  ಹೀಗಿರುವಲ್ಲಿ ನಮ್ಮ ಸಾಕು ಮಗಳು ಎಲಿಸಾ ಇತ್ತೀಚೆಗೆ ನಮ್ಮ ಮನೆಯಲ್ಲಿ ನಾನು ಇಟ್ಟಿದ್ದ ಹಣವನ್ನು ನನಗೆ ಹೇಳದೆ ತೆಗೆದುಕೊಂಡು ಹೋಗುತ್ತಿದ್ದು,  ಈ ಬಗ್ಗೆ ನಾನು ಆಕೆಯನ್ನು ದತ್ತು ತೆಗೆದುಕೊಂಡಿದ್ದ ಬಾಲಕಿಯರ ಬಾಲಮಂದಿರಕ್ಕೂ ಸಹಾ ವಿಚಾರ ತಿಳಿಸಿ ಅವರ ಸಮಕ್ಷಮ ನಮ್ಮ ಸಾಕು ಮಗಳಿಗೆ ಬುದ್ದಿ ಹೇಳಿಸಿದ್ದೆನು.   ಅಂದಿನಿಂದ ಎಲಿಸಾ ನನ್ನೊಂದಿಗೆ ಹೆಚ್ಚು ಬೆರೆಯದೇ ಅವಳ ಪಾಡಿಗೆ ಆಕೆ ಇದ್ದು ಬಿಡುತ್ತಿದ್ದಳು.  ನಿನ್ನೆ ದಿನ ದಿನಾಂಕ: 29-10-2017 ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯಲ್ಲಿ ಸ್ಪೆಷಲ್‌ ಕ್ಲಾಸ್‌‌ ಇದೆ ಎಂತಾ ತಿಳಿಸಿ ಕಾಲೇಜಿಗೆ ಹೋಗಿದ್ದು, ಸಾಯಂಕಾಲ ಸುಮಾರು 5-45 ಗಂಟೆಗೆ ಸ್ಪೆಷಲ್‌‌ ಕ್ಲಾಸ್‌‌ ಮುಗಿಸಿಕೊಂಡು ಮನೆಗೆ ಬಂದಿದ್ದಳು.  ಈ ದಿನ ದಿನಾಂಕ: 30-10-2017 ರಂದು ಬೆಳಿಗ್ಗೆ ಮನೆಯಲ್ಲಿಯೇ ಇದ್ದಳು.  ನಾನು ಎಲಿಸಾ @ ಅಮೂಲ್ಯಳಿಗೆ ಕಾಲೇಜಿಲ್ಲವೇ ಎಂತಾ ಕೇಳಿದ್ದಕ್ಕೆ ಆಕೆ ನನಗೆ ಹುಷಾರಿಲ್ಲ ನಾನು ಕಾಲೇಜಿಗೆ ಹೋಗುವುದಿಲ್ಲವೆಂತಾ ತಿಳಿಸಿದಳು.  ಮನೆಯಲ್ಲಿಯೇ ಇದ್ದ ನಮ್ಮ ಸಾಕು ಮಗಳು ಎಲಿಸಾ @ ಅಮೂಲ್ಯಳು ಆಕೆಯ ರೂಮಿನ ಬಾಗಿಲನ್ನು ಹಾಕಿಕೊಂಡಿದ್ದು, ಮದ್ಯಾಹ್ನ ಸುಮಾರು 1-00 ಗಂಟೆ ಸಮಯದಲ್ಲಿ ನಾನು  ಎಷ್ಟು ಕೂಗಿದರೂ ಸಹಾ ಎಲಿಸಾ @ ಅಮೂಲ್ಯಳು ರೂಮಿನ ಬಾಗಿಲನ್ನು ತೆಗೆಯಲಿಲ್ಲ ನಂತರ ನಾನು ನಮ್ಮ ಮನೆಯ ಮುಂದೆ ಬಂದು ರೂಮಿನ ಕಿಟಕಿಯಲ್ಲಿ ನೋಡಲಾಗಿ ನಮ್ಮ ಸಾಕುಮಗಳು ಎಲಿಸಾ @ ಅಮೂಲ್ಯ ರೂಮಿನಲ್ಲಿ ಸೀಲಿಂಗ್‌‌ ಪ್ಯಾನಿಗೆ ಸೀರೆಯನ್ನು ಬಿಗಿದುಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡು ನೇತಾಡುತ್ತಿದ್ದಳು.  ನಂತರ ನನಗೆ ಗಾಬರಿಯಾಗಿ ನಾನು ಯಾವುದೋ ಒಂದು ಆಟೋದಲ್ಲಿ ಅಮರಜ್ಯೋತಿನಗರದಲ್ಲಿರುವ ಬಾಲಕೀಯರ ಬಾಲಮಂದಿರದ ಬಳಿಗೆ ಹೋಗಿ ವಿಚಾರ ತಿಳಿಸಿದೆ. ಬಾಲಮಂದಿರದಿಂದ ಕೆಲವು ಅಧಿಕಾರಿಗಳೂ ಸಹಾ ಬಂದು ನೋಡಿ, ಎಲಿಸಾ @ ಅಮೂಲ್ಯ ಮೃತಪಟ್ಟಿರುತ್ತಾಳೆಂತಾ ವಿಚಾರ ತಿಳಿಸಿದರು.  ನಂತರ ನಾನು ಈ ವಿಚಾರವನ್ನು ನಮ್ಮ ಸಂಬಂಧಿಕರಿಗೆ ಹಾಗೂ ಬಾಲಕೀಯರ ಬಾಲಮಂದಿರದ ಅಧಿಕಾರಿಗಳಿಗೆಲ್ಲಾ ತಿಳಿಸಿ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇನೆ.  ನಮ್ಮ ಸಾಕು ಮಗಳೂ ಎಲಿಸಾ @ ಅಮೂಲ್ಯಳು ನಮ್ಮ ಮನೆಯಲ್ಲಿ ಹಣವನ್ನು ನನಗೆ ಗೊತ್ತಿಲ್ಲದಂತೆ ತೆಗೆದುಕೊಂಡು ಹೋಗುತ್ತಿದ್ದರಿಂದ ನಾನು ಆಕೆಗೆ ಭೈದು ಬಾಲಕೀಯರ ಬಾಲಮಂದಿರದ ಅಧಿಕಾರಿಗಳ ಸಮಕ್ಷಮದಲ್ಲಿ ಬುದ್ದಿ ಹೇಳಿಸಿದ್ದರಿಂದಲೇ ಏನೋ ಮನಸ್ಸಿಗೆ ಬೇಜಾರು ಮಾಡಿಕೊಂಡು ಈ ರೀತಿ ತನ್ಮೂಲಕ ತಾನೇ ನಮ್ಮ ಮನೆಯಲ್ಲಿ ರೂಮಿನಲ್ಲಿ ಸೀರೆಯಿಂದ ನೇಣುಹಾಕಿಕೊಂಡು ಮೃತಪಟ್ಟಿರುತ್ತಾಳೆ.  ನಮ್ಮ ಸಾಕು ಮಗಳು ಎಲಿಸಾ @ ಅಮೂಲ್ಯಳ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ. ತಾವು ದಯಮಾಡಿ ಸ್ಥಳಕ್ಕೆ ಬಂದು ಮೃತೆ ನಮ್ಮ ಸಾಕು ಮಗಳು ಎಲಿಸಾ @ ಅಮೂಲ್ಯಳ ಶವದ ಮೇಲೆ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್ ಠಾಣಾ ಮೊನಂ-202/2017, ಕಲಂ-279, 304(ಎ) ಐಪಿಸಿ

ದಿನಾಂಕ: 31-10-17 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ಮಂಜೇಗೌಡ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 29-10-17 ರಂದು ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ನಾನು ನಮ್ಮ ಊರಿನಲ್ಲಿದ್ದಾಗ ಹುಲಿವಾನ ಗ್ರಾಮದ ಆನಂದ ಎಂಬುವರು ನನಗೆ ಪೋನ್ ಮಾಡಿ ಈ ದಿನ ರಾತ್ರಿ 7-00 ಗಂಟೆ ಸಮಯದಲ್ಲಿ ನಿಮ್ಮ ಮಾವ ಎಂದು ಹೇಳುತ್ತಿರುವ ದ್ಯಾವೇಗೌಡ ರವರು ಕೆಎ-02 ಜೆಕೆ-2437 ರ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತು ಚಾಲಕನಾಗಿ ಮಾಗಡಿಪಾಳ್ಯ ಗ್ರಾಮದ ವಾಸಿಂ ಅಕ್ರಂ @ ಆಸಿಫ್ ರವರ ಜೊತೆಯಲ್ಲಿ ಹುಲಿವಾನ ಕಡೆಯಿಂದ ಮಾಗಡಿಪಾಳ್ಯ ಗೇಟ್‌ಗೆ ಹೋಗಲು ರಸ್ತೆಯ ಎಡಪಕ್ಕದಲ್ಲಿ ಕೊಪ್ಪ ಗ್ರಾಮದ ಶನಿಮಹಾತ್ಮ ದೇವಸ್ಥಾನದ ಬಳಿ ಹೋಗುತ್ತಿರುವಾಗ್ಗೆ, ಅದೇ ಸಮಯಕ್ಕೆ ಎದುರುಗಡೆಯಿಂದ ಅಂದರೆ ಮಾಗಡಿಪಾಳ್ಯ ಕಡೆಯಿಂದ ಹುಲಿವಾನ ಕಡೆಗೆ ಹೋಗಲು ಕೆಎ-06 ಇವೈ-6851 ರ ಬೈಕಿನ ಚಾಲಕ ತನ್ನ ಬೈಕನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಿಮ್ಮ ಮಾವ ಮತ್ತು ವಾಸಿಂ ಅಕ್ರಂ ರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ಎರಡೂ ಬೈಕಿನವರು ರಸ್ತೆಯ ಮೇಲೆ ಬಿದ್ದರು. ವಾಸಿಂ ಅಕ್ರಂ ರವರಿಗೆ ಯಾವುದೇ ಗಾಯಗಳಾಗಲಿಲ್ಲ. ನಿಮ್ಮ ಮಾವ ದ್ಯಾವೇಗೌಡ ರವರಿಗೆ ಹಣೆಗೆ, ತಲೆಗೆ, ಕಾಲಿನ ಮಂಡಿಗೆ ತೀವ್ರತರ ಪೆಟ್ಟು ಬಿದ್ದು ರಕ್ತ ಗಾಯಗಳಾಗಿದ್ದವು. ಅಪಘಾತ ಪಡಿಸಿದ ಬೈಕಿನ ಚಾಲಕನಿಗೂ ಸಹ ತಲೆಗೆ ಪೆಟ್ಟು ಬಿದ್ದು ರಕ್ತಗಾಯವಾಗಿತ್ತು. ತಕ್ಷಣ ಅಲ್ಲೇ ಹೋಗುತ್ತಿದ್ದ ನಾನು 108 ಆಂಬುಲೆನ್ಸ್ ನಲ್ಲಿ ನಿಮ್ಮ ಮಾವ ಮತ್ತು ಅಪಘಾತ ಪಡಿಸಿದ ಬೈಕಿನ ಚಾಲಕನನ್ನು ಕರೆದುಕೊಂಡು ಎಸಿ ಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಬೇಗ ಬನ್ನಿ ಎಂತ ತಿಳಿಸಿದರು. ತಕ್ಷಣ ನಾನು ಬೆಳ್ಳೂರಿನ ಎಸಿ ಗಿರಿ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ಮಾವ ದ್ಯಾವೇಗೌಡ ರವರಿಗೆ ಅಪಘಾತವಾಗಿರುವುದು ನಿಜವಾಗಿತ್ತು. ನಂತರ ಎಸಿ ಗಿರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ನಮ್ಮ ಮಾವ ದ್ಯಾವೇಗೌಡ ರವರನ್ನು ಬೆಂಗಳೂರಿನ ಸ್ಪರ್ಶ ಆಸ್ಪತ್ರೆ, ನಂತರ ಗಿರಿನಗರದ ಪಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪುನಃ ಬೆಳ್ಳೂರಿನ ಎಸಿ ಗಿರಿ ಆಸ್ಪತ್ರೆಗೆ ದಿ: 30-10-17 ರಂದು ರಾತ್ರಿ ಸುಮಾರು 11-30 ಗಂಟೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಮಾಡಿದೆವು. ಅಲ್ಲಿಯ ವೈದ್ಯರು ನಮ್ಮ ಮಾವ ದ್ಯಾವೇಗೌಡ ರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು. ನಂತರ ನಾನು ನಮ್ಮ ಸಂಬಂಧಿಕರಿಗೆ ವಿಚಾರ ತಿಳಿಸಿ ಈಗ ಬಂದು ಅಪಘಾತಕ್ಕೆ ಕಾರಣನಾದ ಕೆಎ-06 ಇವೈ-6851 ರ ಬೈಕಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 30 guests online
Content View Hits : 322805