lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2017 >
Mo Tu We Th Fr Sa Su
            1
2 3 4 5 7 8
9 10 11 12 13 14 15
16 17 18 19 20 21 22
23 24 25 26 27 28 29
30 31          
Friday, 06 October 2017
Crime Incidents 06-10-17

ಜಯನಗರ ಪೊಲೀಸ್ ಠಾಣಾ ಮೊ.ನಂ. 133/2017 ಕಲಂ 15(ಎ), 32(3) ಕೆ.ಇ ಆಕ್ಟ್‌

ದಿನಾಂಕ: 05-10-2017 ರಂದು ಸಂಜೆ 4-00 ಗಂಟೆಯಲ್ಲಿ ಸಿಪಿಐ ತಿಲಕ್‌ಪಾರ್ಕ್‌ ರವರು ಠಾಣಾ ಹೆಚ್‌.ಸಿ 239 ತಿರುಮಲೇಶ್‌ ರವರ ಮೂಲಕ ಕಳುಹಿಸಿಕೊಟ್ಟ ವರದಿ ಅಂಶವೇನೆಂದರೆ, ದಿನಾಂಕ: 05-10-2017 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಗಸ್ತುಮಾಡುತ್ತಿದ್ದಾಗ ಬಂದ ಮಾಹಿತಿ ಮೇರೆಗೆ ಚನ್ನಪ್ಪನಪಾಳ್ಯದಲ್ಲಿರುವ ಧನಲಕ್ಷ್ಮೀ @ ಲಕ್ಷ್ಮೀ ಕೋಂ. ವೆಂಕಟೇಶ ರವರ ಮನೆಯ ಬಳಿಗೆ ಹೋದಾಗ ಮನೆಯ ಪಕ್ಕದಲ್ಲಿರುವ ಗರಿ-ಗಳದ ವಪ್ಪಾರಿನ ಕೆಳಗೆ ಸಾರ್ವಜನಿಕರಿಗೆ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ನಿಯಮ ಬಾಹಿರವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವುದು ದೃಡಪಟ್ಟಿರುತ್ತೆ.   ಆದ್ದರಿಂದ ಎಫ್.ಐ.ಆರ್ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 161/2017 ಕಲಂ: 32,34 ಕೆ.ಇ ಆಕ್ಟ್.

ದಿನಾಂಕ: 05/10/2017 ರಂದು ಮಧ್ಯಾಹ್ನ 3-45 ಗಂಟೆಗೆ ಮಾನ್ಯ ಪಿ.ಐ ರವರು ಠಾಣಾ ಪಿ.ಸಿ-210 ಅಶೋಕ್ ರವರ ಮೂಲಕ ಕಳುಹಿಸಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ; 05/10/2017 ರಂದು ಮಧ್ಯಾಹ್ನ 3-00 ಗಂಟೆಯಲ್ಲಿ ತಿಪಟೂರು ಟೌನ್ ನೆಹರುನಗರದ ಕೃಷ್ಣಪ್ಪ  ಎಂಬುವರ ಮನೆಯ ಮುಂಭಾಗ ಅವರ ಮಗ ವಿಜಯಕುಮಾರ್ ಎಂಬುವನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡುತ್ತಿದ್ದಾನೆಂದು ನನಗೆ ಬಂದ ಖಚಿತ ಮಾಹಿತಿ ಮೇರೆಗೆ ನಾನು ಠಾಣೆಗೆ ಪಂಚರನ್ನು ಬರಮಾಡಿಕೊಂಡು ಪಂಚರು ಮತ್ತು ಸಿಬ್ಬಂದಿಯವರಾದ ಪಿ.ಸಿ-210 ಅಶೋಕ್, ಪಿ.ಸಿ-661 ದಕ್ಷಿಣಮೂರ್ತಿ ಮತ್ತು ಪಂಚರುಗಳೊಂದಿಗೆ ಇಲಾಖಾ ವಾಹನದಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ನೋಡಲಾಗಿ ಒಬ್ಬ ಅಸಾಮಿ ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು, ನಮ್ಮನ್ನು ನೋಡಿ ಅಲ್ಲಿಂದ ಪಾನಿಕರು ಓಡಿ ಹೋಗಿದ್ದು, ಸದರಿ ಅಸಾಮಿಯನ್ನು ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ಕೇಳಲಾಗಿ ವಿಜಯಕುಮಾರ್ ಬಿನ್ ಕೃಷ್ಣಪ್ಪ, 30 ವರ್ಷ, ವಣ್ಣಿಗೌಂಡರ್ ಜನಾಂಗ, ತರಕಾರಿ ವ್ಯಾಪಾರ, ನೆಹರುನಗರ, ತಿಪಟೂರು ಟೌನ್ ಅಂತ ತಿಳಿಸಿದ್ದು, ಆತನನ್ನು ಮಾರಾಟ ಮಾಡಲು ಪರವಾನಗಿಯ ಬಗ್ಗೆ ಕೇಳಲಾಗಿ ನನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೆಚ್ಚಿನ ಲಾಭಕ್ಕೆ ತಂದು ಮಾರಾಟ ಮಾಡುತ್ತಿದ್ದೆನೆಂದು ನುಡಿದಿದ್ದು, ಆತನ ಬಳಿ ಇದ್ದ ಟೆಟ್ರಾ ಪಾಕೇಟ್ ಗಳನ್ನು ಪರಿಶೀಲಿಸಿ ನೋಡಲಾಗಿ 2 ಕಪ್ಪು ಪ್ಲಾಸ್ಟಿಕ್ ಕವರ್ ನಲ್ಲಿ ಮದ್ಯ ತುಂಬಿದ ಟೆಟ್ರಾ ಪಾಕೇಟ್ ಗಳಿದ್ದು,  ಏಣಿಸಿ ನೋಡಲಾಗಿ ಎರಡೂ ಕವರ್ ನಲ್ಲಿ ಒಟ್ಟು  90 ಎಂ.ಎಲ್ ನ, 32 ಟೆಟ್ರಾ ಪಾಕೇಟ್ ಗಳು ಮತ್ತು 05 ಪ್ಲಾಸ್ಟಿಕ್ ಲೋಟಗಳು ಇದ್ದು, ಈತನ ಬಳಿ ಹಣವನ್ನು ಏಣಿಸಿ ನೋಡಲಾಗಿ 100/- ರೂ ಇದ್ದು, ಈ ಹಣವು ಮದ್ಯ ಮಾರಾಟ ಮಾಡಿರುವ ಹಣವಾಗಿರುತ್ತದೆಂದು ಮತ್ತು ಈ ಪಾಕೇಟ್ ಗಳನ್ನು ತಿಪಟೂರಿನ ಬೇರೆ ಬೇರೆ ಅಂಗಡಿಗಳಿಂದ ತಂದಿರುವುದಾಗಿ ತಿಳಿಸಿರುತ್ತಾನೆ. ಆದ್ದರಿಂದ ಈತನ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿರುವ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಮಧುಗಿರಿ ಪೊಲೀಸ್ ಠಾಣಾ CR :186/2017 u/s 78[3] KP ACT.

ಈ ಕೇಸಿನ ಪಿರ್ಯಾದಿ ಶ್ರೀ ನರಸಿಂಹಮೂರ್ತಿ,ಸಿಪಿಐ, ಮಧುಗಿರಿ ವೃತ್ತ, ಮಧುಗಿರಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 05-10-2017 ರಂದು ಮದ್ಯಾಹ್ನ 01.00 ಗಂಟೆಯ ಸಮಯದಲ್ಲಿ ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿ ಮೇರೆಗೆ ಮಧುಗಿರಿ ಪೊಲೀಸ್ ಠಾಣಾ ಪಿ.ಎಸ್‌.ಐ ಪಾಲಾಕ್ಷ ಪ್ರಭು ಕೆ.ಎನ್, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಪಿಸಿ-461, ಮಾರುತಿನಾಯ್ಕ ಪಿಸಿ-351 ರವರೊಂದಿಗೆ ಮಧುಗಿರಿ ಟೌನ್ ಸಿವಿಲ್ ಬಸ್ಟಾಂಡ್ ನಲ್ಲಿರುವ ಸಾರ್ವಜನಿಕ ಪಾರ್ಕ್‌ ನಲ್ಲಿ 1 ರೂ ಕಟ್ಟಿ ನಂಬರ್ ಬರೆಸಿದರೆ ಅದೇ ನಂಬರ್ ಬಂದರೆ 1 ರೂ ಗೆ 70 ರೂ ಕೊಡುತ್ತೇನೆಂತಾ ಸಾರ್ವಜನಿಕರಿಗೆ ಆಮಿಷ ಒಡ್ಡುತ್ತಾ ಕಾನೂನು ಬಾಹಿರ ಮಟ್ಕಾ ಜೂಜಾಟವಾಡುತ್ತಿದ್ದಾಗ, ದಾಳಿ ಮಾಡಿ, ವಶಕ್ಕೆ ಪಡೆದು ಹೆಸರು ಮತ್ತು ವಿಳಾಸ ಪಡೆಯಲಾಗಿ ಮಂಜುನಾಥ ಬಿನ್ ನಾಗಪ್ಪ, ಎಂತಾ ತಿಳಿಸಿದ್ದು, ಮಟ್ಕಾ ಚೀಟಿಯ ಪಟ್ಟಿಯನ್ನು ದೊಡ್ಡೇರಿಯ ಮಂಜುನಾಥ@ರಮೇಶನಿಗೆ ಕೊಡುವುದಾಗಿ ತಿಳಿಸಿರುತ್ತಾನೆ. ಪಿರ್ಯಾದಿಯು ಸದರಿ ಆರೋಪಿಯನ್ನು ನೋಡಿಕೊಂಡು ಇರಲು ಸಿಬ್ಬಂದಿ ನೇಮಕ ಮಾಡಿ, ನಂತರ ಠಾಣೆಗೆ ಬಂದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ಜ್ಞಾಪನದ ಮೇರೆಗೆ ಎನ್.ಸಿ.ಆರ್ ದಾಖಲಿಸಿ ಘನ ನ್ಯಾಯಾಲಯದ ಅನುಮತಿ ಪಡೆದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 160/2017 ಕಲಂ: 32,34 ಕೆ.ಇ ಆಕ್ಟ್.

ದಿನಾಂಕ: 05/10/2017 ರಂದು ಮಧ್ಯಾಹ್ನ 1-00 ಗಂಟೆಗೆ ಮಾನ್ಯ ಪಿ.ಐ ರವರು ಠಾಣಾ ಪಿ.ಸಿ-210 ಅಶೋಕ್ ರವರ ಮೂಲಕ ಕಳುಹಿಸಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ; 05/10/2017 ರಂದು ಮಧ್ಯಾಹ್ನ 12-00 ಗಂಟೆಯಲ್ಲಿ ತಿಪಟೂರು ಟೌನ್ ಹಳೇಪಾಳ್ಯ ಸರ್ಕಲ್ ಬಳಿ ಚೌಡೇಶ್ವರಿ ಗುಡಿ ಬೀದಿಯಲ್ಲಿ ಯಾರೋ ಒಬ್ಬ ಹೆಂಗಸು ಅನಧಿಕೃತವಾಗಿ ಯಾವುದೇ ಪರವಾನಗಿ ಇಲ್ಲದೆ ಮದ್ಯದ ಬಾಟಲ್ ಗಳನ್ನು ಮಾರಾಟ ಮಾಡುತ್ತಿದ್ದಾರೆಂದು ನನಗೆ ಬಂದ ಖಚಿತ ಮಾಹಿತಿ ಮೇರೆಗೆ ನಾನು ಠಾಣೆಗೆ ಪಂಚರನ್ನು ಬರಮಾಡಿಕೊಂಡು ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-469 ಮಹೇಶ್, ಪಿ.ಸಿ-210 ಅಶೋಕ್ ಹಾಗೂ ಮಹಿಳಾ ಸಿಬ್ಬಂದಿ ಎ.ಎಸ್.ಐ ಶ್ರೀಮತಿ ಶಮೀನ್ ರವರೊಂದಿಗೆ ಇಲಾಖಾ ವಾಹನದಲ್ಲಿ ಮಧ್ಯಾಹ್ನ 12-15 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ  ಒಂದು ತರಕಾರಿ ಅಂಗಡಿಯ ಮುಂದೆ ಒಬ್ಬ ಹೆಂಗಸು ಸಾರ್ವಜನಿಕ ರಸ್ತೆಯಲ್ಲಿ ಕಾಗದದ ಟೆಟ್ರಾ ಪಾಕೇಟ್ ನಲ್ಲಿ ಮದ್ಯ ತುಂಬಿರುವ ಪಾಕೇಟ್ ಗಳನ್ನು 35/- ರೂಗಳಿಗೆ ಮಾರುತ್ತಿದ್ದು, ಅವಳ ಬಳಿ ಇದ್ದ ಒಂದು ಪ್ಲಾಸ್ಟಿಕ್ ಚೀಲದ ಬ್ಯಾಗಿನಲ್ಲಿ ಮದ್ಯದ ಪಾಕೇಟ್ ಗಳನ್ನು ಮತ್ತು ಪ್ಲಾಸ್ಟಿಕ್ ಲೋಟಗಳನ್ನು ಅಕ್ರಮವಾಗಿ ಶೇಖರಿಸಿ ಇಟ್ಟುಕೊಂಡು ಯಾವುದೇ ಪರವಾನಗಿ ಇಲ್ಗದೇ ಅನಧಿಕೃತವಾಗಿ ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆದು ಮಾರಾಟ ಮಾಡುತ್ತಿದ್ದು, ನಮ್ಮನ್ನು ನೋಡಿ ಅಲ್ಲಿ ಸೇರಿದ್ದ ಜನರು ಓಡಿ ಹೋಗಿದ್ದು, ಮಧ್ಯಾಹ್ನ 12-30 ಗಂಟೆಗೆ ಈ ಹೆಂಗಸನ್ನು ಪಂಚರು ಮತ್ತು ಮಹಿಳಾ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಬಂದಿಸಿದ್ದು, ಈಕೆಯ ಹಸರು ವಿಳಾಸ ಕೇಳಲಾಗಿ ರತ್ನಮ್ಮ ಕೋಂ ಚಂದ್ರಶೇಖರ್ 34 ವರ್ಷ, ದೇವಾಂಗ ಜನಾಂಗ, ತರಕಾರಿ ವ್ಯಾಪಾರ, ಹಳೇಪಾಳ್ಯ ಸರ್ಕಲ್, ತಿಪಟೂರು ಟೌನ್ ಅಂತ ತಿಳಿಸಿದ್ದು, ಈಕೆಯು ಈ ಮದ್ಯದ ಬಾಟೆಲ್ ಗಳನ್ನು ತಿಪಟೂರಿನ ವೈನ್ ಸ್ಟೋರಿನಲ್ಲಿ ನಾನು ಮತ್ತು ಇತರೆಯವರ ಕಡೆಯಿಂದ ಸ್ವಂತಕ್ಕೆಂದು ಹೇಳಿ ಸ್ವಲ್ಪ ಸ್ವಲ್ಪವಾಗಿ ಮದ್ಯದ ಪಾಕೇಟ್ ಗಳನ್ನು 1 ಕ್ಕೆ 28/-ರೂನಂತೆ ತೆಗೆದುಕೊಂಡು ಬಂದು ಶೇಖರಿಸಿ ಇಟ್ಟುಕೊಂಡು ಸಾರ್ವಜನಿಕರಿಗೆ ಹೆಚ್ಚಿಗೆ ಹಣಕ್ಕೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿರುವ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 132/2017 ಕಲಂ 15(ಎ), 32(3) ಕೆ.ಇ ಆಕ್ಟ್‌

ದಿನಾಂಕ: 05-10-2017 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಪಿಎಸ್‌ಐ (ಕಾ & ಸು) ರವರು ಠಾಣೆಯಲ್ಲಿ ಹಾಜರುಪಡಿಸಿದ ವರದಿ ಅಂಶವೇನೆಂದರೆ, ದಿನಾಂಕ: 05-10-2017 ರಂದು ಮದ್ಯಾಹ್ನ 1-15 ಗಂಟೆ ಸಮಯದಲ್ಲಿ ನಾನು ಪೊಲೀಸ್ ಠಾಣೆಯಲ್ಲಿದ್ದಾಗ  ಜಯನಗರ ಪೊಲೀಸ್ ಠಾಣಾ ಸರಹದ್ದು ಚೆನ್ನಪ್ಪನಪಾಳ್ಯದಲ್ಲಿ ಭಾಗ್ಯಲಕ್ಷ್ಮೀ @ ಭಾಗ್ಯ  ಕೋಂ. ಆನಂದ, 29 ವರ್ಷ, ಬೋವಿ ಜನಾಂಗ, ಮನೆಕೆಲಸ, ವಾಸ ಚನ್ನಪ್ಪನಪಾಳ್ಯ, ತುಮಕೂರು ಟೌನ್ ಎಂಬುವರು ಅವರ ವಾಸದ ಮನೆಯ ಪಕ್ಕ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಯಾವುದೇ ಪರವಾನಗೆ ಇಲ್ಲದೇ ತಮ್ಮ ವಾಸದ ಮನೆಯ ಪಕ್ಕ ಗರಿ-ವಪ್ಪಾರ ನಿರ್ಮಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಿ ಸ್ಥಳದಲ್ಲಿಯೇ ಕುಡಿಯಲು ಅನುವು ಮಾಡಿಕೊಡುತ್ತಿರುತ್ತಾರೆಂತಾ ಭಾತ್ಮಿದಾರರಿಂದ ಖಚಿತ ಮಾಹಿತಿ ಬಂದಿರುತ್ತೆ.  ಸದರಿ ಭಾಗ್ಯಲಕ್ಷ್ಮೀ @ ಭಾಗ್ಯ ಕೋಂ. ಆನಂದ ರವರ ವಾಸದ ಮನೆಯ ಬಳಿಗೆ ಹೋಗಿ ಧಾಳಿ ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿದ್ದು, ಕಲಂ 15(ಎ), 32(3) ಕೆ.ಇ. ಆಕ್ಟ್‌‌ ರೀತ್ಯಾ ಪ್ರಕರಣ ದಾಖಲಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದೆ.

 

ಬಡವನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್‌‌ ನಂ 16/2017 ಕಲಂ 174  ಸಿ ಆರ್‌ ಪಿ ಸಿ

ದಿ:-05/10/2017 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದಿ ಗಂಗಮ್ಮ ಕೊಂ ಲೇಟ್‌  ಹನುಮಂತರಾಯಪ್ಪ  ,ಕಳ್ಳಿಪಾಳ್ಯ  ಗ್ರಾಮ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ  ಅಂಶವೇನೆಂದರೆ,  ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದು,  ಈಗ್ಗೆ 12 ವರ್ಷಗಳ ಹಿಂದೆ ನನ್ನ ಗಂಡ ಮೃತರಾಗಿರುತ್ತಾರೆ. ನನ್ನ ದೊಡ್ಡ ಮಗಳು ಲಲಿತ ಕೆ ಹೆಚ್‌‌  ಳನ್ನು  ಮಧುಗಿರಿ ತಾಲ್ಲೂಕು ಬಡವನಹಳ್ಳಿ ಗ್ರಾಮದ ಉಮೇಶ್‌  ಬಿನ್‌ ಲೇಟ್‌ ನಾರಾಯಣಪ್ಪ ಎಂಬುವವರಿಗೆ ಕೊಟ್ಟು ಮಧುವೆ ಮಾಡಿದ್ದು , ಗಂಡ ಹೆಂಡತಿ ಅನ್ಯೋನ್ಯವಾಗಿದ್ದು, ಇವರಿಗೆ ಒಂದು ಗಂಡು ಮಗು ಇರುತ್ತೆ.  ನನ್ನ ಮಗಳಿಗೆ ಹೆರಿಗೆ ಆದ ನಂತರ ಹೆಚ್ಚು ರಕ್ತಸ್ರಾವವಾಗಿದ್ದರಿಂದ  ಆನಂತರ ದಿನಗಳಲ್ಲಿ ಮಾನಸಿಕ ಅಸ್ವಸ್ಥಳಾಗಿದ್ದು, ನಾವುಗಳು  ನಿಮಾನ್ಸ್‌‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಸಹ ಗುಣಮುಖಳಾಗಿರಲಿಲ್ಲ. ನನ್ನ ಮಗಳು ಗಂಡ ಮತ್ತು ಮಗುವಿನೊಂದಿಗೆ ಬಡನವಹಳ್ಳಿ ಗ್ರಾಮದಲ್ಲಿದ್ದು,  ಮಾನಸಿಕ ಅಸ್ವಸ್ಥೆಯಾದ್ದರಿಂದ ಒಂದೊಂದು ದಿನ ಎಲ್ಲಿಗಾದರೂ ಹೋಗಿ ಬರುತ್ತಿದ್ದಳು.         ದಿನಾಂಕ:03/10/2017 ರಂದು ಮದ್ಯರಾತ್ರಿ ಮನೆಯಿಂದ ಹೋದವಳು ಮನೆಗೆ ಬಂದಿಲ್ಲ ಹುಡುಕಿದರೂ ಸಿಗಲಿಲ್ಲ ಎಂದು ದಿ:04/10/2017 ರಂದು ನನ್ನ ಅಳಿಯ ತಿಳಿಸಿದ್ದು, ದಿ:05/10/2017 ರಂದು ಬೆಳಗ್ಗೆ 8-00 ಗಂಟೆಗೆ ಪೋನ್‌ ಮಾಡಿ ಬಡವನಹಳ್ಳಿ ಗ್ರಾಮದ ಕುಂಬಾರ ಬಾವಿಗೆ ಲಲಿತ ಬಿದ್ದಿದ್ದು, ಹೆಣ ತೇಲುತ್ತಿರುತ್ತೆಂತಾ ತಿಳಿಸಿದರು. ನಾನು ನನ್ನ ಸಂಬಂದಿಕರೊಂದಿಗೆ 10-00 ಗಂಟೆಗೆ ಬಂದು ನೋಡಿದೆ.ನನ್ನ ಮಗಳ ಶವ ತೇಲುತ್ತಿದ್ದು, ನನ್ನ ಮಗಳು ಮಾನಸಿಕ ಅಸ್ವಸ್ಥೆಯಾದ್ದರಿಂದ ದಿ:03/10/2017 ರಂದು ರಾತ್ರಿ ಮನೆಯಿಂದ ಹೋದವಳು  ಬಾವಿಗೆ ಬಿದ್ದು ಸತ್ತಿರಬಹುದು  ಮಗಳ ಸಾವಿನಲ್ಲಿ  ಯಾವುದೇ ಅನುಮಾನ ಇರುವುದಿಲ್ಲ. ಮಗಳ ಶವ ಸಂಸ್ಕಾರ ನಡೆಸಲು ಅನುಕೂಲ ಮಾಡಿಕೊಡಬೇಕೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-171/2017 ಕಲಂ 15(ಎ) ರೆ/ವಿ 32(3) ಕೆ,ಇ ಆಕ್ಟ್‌

ಗೌರವಾನ್ವಿತ ಘನ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳುವುದೇನೆಂದರೆ, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಎ,ಎಸ್,ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ತ್ಯಾಗರಾಜು ಆದ ನಾನು ಹೊನ್ನುಡಿಕೆ ಉಪ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ:-05-10-2017 ರಂದು ನಾನು ಹೊನ್ನುಡಿಕೆ ಉಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ, ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ಗೂಳೂರು ಹೋಬಳಿ, ಕಳ್ಳೀಪಾಳ್ಯ ಗ್ರಾಮದಲ್ಲಿ ರಾಜಣ್ಣ ಎಂಬುವರು ತಮ್ಮ ವಾಸದ ಮನೆಗೆ ಹೊಂದಿಕೊಂಡಂತಿರುವ ಅಂಗಡಿ ಮನೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಕೆಲವು ಸಾರ್ವಜನಿಕರು ಮದ್ಯಪಾನ ಮಾಡುತ್ತಿರುತ್ತಾರೆಂತ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಠಾಣಾ ಹೆಚ್,ಸಿ-323, ಏಜಾಜ್‌ ಹುಸೇನ್‌ ಇಬ್ಬರೂ ಕಳ್ಳೀಪಾಳ್ಯ ಗ್ರಾಮದ ರಾಜಣ್ಣ ರವರ ಅಂಗಡಿ ಮನೆಯ ಬಳಿ ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ಹೋಗಿ ನೋಡಲಾಗಿ, ರಾಜಣ್ಣ ರವರ ಅಂಗಡಿ ಮನೆಯಲ್ಲಿ ನಾಲ್ಕೈದು ಜನರು ಮದ್ಯಪಾನ ಮಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು. ನಂತರ ಅಂಗಡಿಯ ಮಾಲೀಕನ ಹೆಸರು ವಿಳಾಸ ಕೇಳಲಾಗಿ ರಾಜಣ್ಣ ಬಿನ್ ಲೇ|| ಯಲ್ಲಯ್ಯ, 55 ವರ್ಷ, ಈಡಿಗರು, ವ್ಯವಸಾಯ, ಕಳ್ಳೀಪಾಳ್ಯ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ಎಂತಾ ತಿಳಿಸಿದ್ದು, ರಾಜಣ್ಣ ರವರನ್ನು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶವನ್ನು ಮಾಡಿಕೊಟ್ಟಿರುವ ಬಗ್ಗೆ ವಿಚಾರ ಮಾಡಿ, ಈ ರೀತಿಯಾಗಿ ಮದ್ಯಪಾನ ಮಾಡಲು ಅವಕಾಶ ಮಾಡಿ ಕೊಡಲು ನಿನಗೆ ಯಾವುದಾದರೂ ಪರವಾನಗೀ ಇದೆಯೇ ಎಂತಾ ಕೇಳಲಾಗಿ, ರಾಜಣ್ಣನು ಆ ರೀತಿ ಯಾವುದೇ ಪರವಾನಗಿ ಇರುವುದಿಲ್ಲವೆಂತ ತಿಳಿಸಿರುತ್ತಾರೆ. ಸದರಿ ಅಂಗಡಿ ಮನೆಯಲ್ಲಿ ಎರಡು ಕುಡಿದು ಖಾಲಿ ಮಾಡಿರುವ ರಾಜಾ ವಿಸ್ಕಿ ಸಾಚೆಟ್‌‌‌ಗಳು, ಮೂರು ಉಪಯೋಗಿಸಿರುವ ಪ್ಲಾಸ್ಟಿಕ್‌ ಲೋಟಗಳು ಹಾಗೂ ಒಂದು ಮದ್ಯ ತುಂಬಿರುವ ಓಲ್ಡ್ ಟ್ರಾವರ್ನ್ ವಿಸ್ಕಿ ಟೆಟ್ರಾಪ್ಯಾಕ್‌ ಕಂಡು ಬಂದಿದ್ದು, ಸದರಿಯವುಗಳನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದು, ಆಸಾಮಿಯೊಂದಿಗೆ ಸಾಯಂಕಾಲ 06-30 ಗಂಟೆಗೆ ಠಾಣೆಗೆ ಬಂದು ಈತನ ವಿರುದ್ದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 172/2017 ಕಲಂ 279,337 ಐಪಿಸಿ

ದಿನಾಂಕ-05/10/2017 ರಂದು ರಾತ್ರಿ 9-30 ಗಂಟೆಗೆ ಠಾಣಾ ಪಿಸಿ-977 ರವರು ತುಮಕೂರು ಜಿಲ್ಲಾ ಆಸ್ಪತ್ರೆಯಿಂದ  ತುಮಕೂರು ತಾಲ್ಲೋಕು, ಗುಳೂರು ಹೋಬಳಿಯ ಸಾಸಲು ಗ್ರಾಮದ ವಾಸಿ ಶಶಿಕಲಾ ಕೊಂ ಶೆಟ್ಟಳಯ್ಯ, 33 ವರ್ಷ, ಆದಿಕರ್ನಾಟಕ ಜನಾಂಗದರವರು ನೀಡಿದ ಹೇಳಿಕೆಯನ್ನು  ಪಡೆದು ಠಾಣೆಗೆ ತಂದು ಹಾಜರಿಪಡಿಸಿದ್ದನ್ನು ಪರಿಶೀಲಿಸಲಾಗಿ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ದಿನಾಂಕ-03/10/2017 ರಂದು ಸಂಜೆ ಸುಮಾರು 4-00 ಗಂಟೆಗೆ ಸಮಯದಲ್ಲಿ ನನಗೆ ಬಂದ ದೂರವಾಣಿಯ ಮಾಹಿತಿ ಏನೆಂಧರೆ ನನ್ನ ಚಿಕ್ಕಪ್ಪನ ಮಗನಾದ ಕಾಂತಕುಮಾರ್ ರವರು ಕೆರೆ ಮಾಡಿ ನಾನು ಸಾಸಲು ಗ್ರಾಮದಲ್ಲಿರುತ್ತೇನೆ, ಈ ದಿನ ಸಂಜೆ 3-45 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಹೊನ್ನುಡಿಕೆ ಮತ್ತು ಸಾಸಲು ಗ್ರಾಮದ ಎಲೆಕಲ್ಲಿನ ಬಳಿಯಲ್ಲಿ ನಿಮ್ಮ ತಂದೆಯವರಾದ ನರಸಿಂಹಯ್ಯ ಬಿನ್ ಲೇಟ್ ಗುಂಡಯ್ಯ ರವರು ಜಮೀನು ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಬರುತ್ತಿರುವಾಗ್ಗೆ ಎಲೆಕಲ್ಲಿನ ಬಳಿಯಲ್ಲಿ ಹೊನ್ನುಡಿಕೆ ಕಡೆಯಿಂದ ಬಂದ ಕೆಎ-06-ಇಎಫ್-4218 ನೇ ಸ್ಪಂಡರ್ + ದ್ವಿಚಕ್ರ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ನಿಮ್ಮ ತಂದೆ ನರಸಿಂಹಯ್ಯರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ನಿಮ್ಮ ತಂದೆಯು ಕೆಳಗೆ ಬಿದ್ದು ತಲೆಯ ಬಲಭಾಗಕ್ಕೆ ಮತ್ತು ಎಡಗಾಲಿಗೆ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತದೆ. ಹಾಗೂ ಕಿಬ್ಬೊಟ್ಟೆಗೆ ಮತ್ತು ದೇಹದ ಇತರ ಭಾಗಗಳಿಗೆ ಪೆಟ್ಟು ಬಿದ್ದಿರುತ್ತದೆ, ನೀವು ಕೂಡಲೆ ಬರುವಂತೆ ತಿಳಿಸಿದರು, ನಂತರ ನಾನು ಕೂಡಲೆ ನಮ್ಮ ಊರಿಗೆ ಹೋಗಿ ವಿಚಾರ ಮಾಡಲಾಗಿ ಕಾಂತಕುಮಾರ್ ಮತ್ತು ಕಿರಣ್ ರವರು ಯಾವುದೋ ಒಂದು ಆಟೋದಲ್ಲಿ ನಮ್ಮ ತಂದೆಯನ್ನು ಹೊನ್ನುಡಿಕೆಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದರು. ನಂತರ ನಾನು ಕೂಡಲೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಹೋಗಿ ನೋಡಲಾಗಿ ನಮ್ಮ ತಂದೆಗೆ ಅಪಘಾತವಾಗಿರುವುದು ಸತ್ಯವಾಗಿದ್ದು, ಅವರ ತಲೆಯ ಬಲಭಾಗಕ್ಕೆ,ಎಡಗಾಲಿಗೆ ತೀವ್ರತರವಾದ ಪೆಟ್ಟು ಬಿದ್ದಿದ್ದು ಕಂಡು ಬಂದಿತ್ತು, ನಂತರ ನಾನು 108 ನೇ ಆಂಬುಲೆನ್ಸ್ ನಲ್ಲಿ ನಮ್ಮ ಅಕ್ಕರವರೊಂದಿಗೆ ಹಾಗೂ ನನ್ನ ಗಂಡ ಶೆಟ್ಟಳ್ಳಯ್ಯರವರೊಂದಿಗೆ ನಮ್ಮ ತಂದೆಯನ್ನು ಕೂಡಲೆ ವೈಧ್ಯರ ಸಲಹೆ ಮೇರೆ ಬೆಂಗಳೂರಿನ ನಿಮಾನ್ಸ್ ಗೆ ಕೆರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲುಪಡಿಸಿದೆವು. ನಂತರ ಅಲ್ಲಿನ ವೈಧ್ಯರು ಚಿಕಿತ್ಸೆ ಕೊಟ್ಟು ನಮ್ಮ ತಂದೆಯನ್ನು ತುಮಕೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರ ಮೇರೆಗೆ ನಾವು ಖಾಸಗಿ ವಾಹನದಲ್ಲಿ ನಮ್ಮ ತಂಧೆಯನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲುಪಡಿಸಿದೆವು. ನಮ್ಮ ತಂದೆಯವರು ಮಾತನಾಡುವ ಪರಿಸ್ಥಿತಿಯಲ್ಲಿರುವುದಿಲ್ಲ. ನಮ್ಮ ತಂದೆಯವರನ್ನು ಆಸ್ಪತ್ರೆಗೆ ದಾಖಿಲಿಸಿ ನಂತರ ಚಿಕಿತ್ಸೆ ಕೊಡಿಸಿ ಪೊಲೀಸ್ ಠಾಣೆಗೆ ದೂರು ನೀಡುವಲ್ಲಿ ತಡವಾಗಿದ್ದು ನಮ್ಮ ತಂದೆಗೆ ಅಪಘಾತಪಡಿಸಿದ ಕೆಎ-06-ಇಎಫ್-4218 ನೇ ಸ್ಪಂಡರ್ + ದ್ವಿಚಕ್ರ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆಯನ್ನು ಪಡೆದು ಠಾಣಾ ಮೊ ನಂ 172/2017 ಕಲಂ 279,337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್ ಠಾಣಾ ಮೊನಂ-182/2017 ಕಲಂ-15(ಎ), 32(3)ಕೆಇ ಆಕ್ಟ್

ದಿನಾಂಕ: 05-10-2017 ರಂದು ರಾತ್ರಿ 7-45 ಗಂಟೆಯಲ್ಲಿ ಪಿಸಿ-932 ಜಾಪರ್ ಪಾಷ ರವರು ತಂದು ಹಾಜರುಪಡಿಸಿದ ವರದಿಯ ಅಂಶವೇನೆಂದರೆ ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ, ಈ ದಿನ ದಿನಾಂಕ:05-10-2017 ರಂದು ಸಂಜೆ 6-15 ಗಂಟೆ ಸಮಯದಲ್ಲಿ ನಾನು ಅಮೃತೂರು ಠಾಣೆಯಲ್ಲಿರುವಾಗ್ಗೆ ಅಮೃತೂರು ಠಾಣಾ ಸರಹದ್ದಿನ ಮಾರ್ಕೋನಹಳ್ಳಿ ಗ್ರಾಮದಲ್ಲಿ ಆಕಾಶ್ ಎಂಬುವವರು ತನ್ನ ಚಿಲ್ಲರೆ ಅಂಗಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆಂದು ಮಾಹಿತಿ ಬಂದಿದ್ದು, ಈ ಬಗ್ಗೆ ದಾಳಿ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸುವ ಸಲುವಾಗಿ ಪಂಚಾಯ್ತಿದಾರರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ದಾಳಿ ಮಾಡುವ ಸಮಯದಲ್ಲಿ ನೀವುಗಳು ಪಂಚಾಯ್ತಿದಾರರಾಗಿ ಹಾಜರಿದ್ದು ಸಹಕರಿಸಬೇಕೆಂದು ಕೋರಿದ್ದರ ಮೇರೆಗೆ ಅವರು ಒಪ್ಪಿದ ನಂತರ ಸಂಜೆ 6-30 ಗಂಟೆಗೆ ಠಾಣೆಯನ್ನು ಬಿಟ್ಟು, ಪೊಲೀಸ್ ಸಿಬ್ಬಂದಿ ಮತ್ತು ಪಂಚಾಯ್ತಿದಾರರೊಂದಿಗೆ ಇಲಾಖಾ ಜೀಪಿನಲ್ಲಿ ಹನುಮಾಪುರ ಮಾರ್ಗವಾಗಿ ಮಾರ್ಕೋನಹಳ್ಳಿ ಗ್ರಾಮದಲ್ಲಿ ಎಡೆಯೂರು ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಮಾರ್ಕೋನಹಳ್ಳಿ ಹಾಲಿನ ಡೈರಿ ಪಕ್ಕದಲ್ಲಿರುವ ಆಕಾಶ್ ರವರ ಚಿಲ್ಲರೆ ಅಂಗಡಿಯಲ್ಲಿ ಸಂಜೆ ಸುಮಾರು 6-50 ಗಂಟೆ ಸಮಯಕ್ಕೆ ಹೋಗಿ ನೋಡಲಾಗಿ ಅಂಗಡಿಯ ಒಳಗೆ  ಮೂರು ಜನ ವ್ಯಕ್ತಿಗಳು ಕುಳಿತುಕೊಂಡು ಪ್ಲಾಸ್ಟಿಕ್ ಲೋಟಗಳಲ್ಲಿ ಮದ್ಯಪಾನ ಮಾಡುತ್ತಿದ್ದರು. ನಮ್ಮನ್ನು ನೋಡಿದ ತಕ್ಷಣ ಮದ್ಯಪಾನ ಮಾಡುತ್ತಿದ್ದ ಒಬ್ಬ ವ್ಯಕ್ತಿ ತನ್ನ ಕೈಲಿದ್ದ ಮದ್ಯ ತುಂಬಿದ ಪ್ಲಾಸ್ಟಿಕ್ ಲೋಟವನ್ನು ಕೆಳಗೆ ಎಸೆದು ಅಂಗಡಿಯ ಹಿಂಭಾಗಿಲಿನಿಂದ ಓಡಿ ಹೋದನು. ಅಂಗಡಿಯಲ್ಲಿ ಕುಳಿತಿದ್ದ ಉಳಿದ ಇಬ್ಬರು ವ್ಯಕ್ತಿಗಳನ್ನು ವಿಚಾರ ಮಾಡಿ ಹೆಸರು ವಿಳಾಸ ಕೇಳಲಾಗಿ 1) ರಾಮಾಂಜನೇಯ ಬಿನ್ ಲೇಟ್ ಹೊಂಬಾಳಯ್ಯ, 45 ವರ್ಷ, ಒಕ್ಕಲಿಗರು, ಅಂಗಡಿ ವ್ಯಾಪಾರ, ತೂಬಿನಕೆರೆ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್ ತಾಲೋಕ್, 2) ಪ್ರಕಾಶ್ ಬಿನ್ ಹುಲ್ಲೂರಯ್ಯ, 27 ವರ್ಷ, ತಿಗಳರು, ಗಾರೆ ಕೆಲಸ, ತಿಗಳರಪಾಳ್ಯ, ಎಡೆಯೂರು ಹೋಬಳಿ, ಕುಣಿಗಲ್ ತಾಲೋಕ್ ಎಂದು ತಿಳಿಸಿದರು. ಇವರುಗಳ ಮುಂದೆ ನೆಲದ ಮೇಲೆ ಮದ್ಯದ ಸಾಚೆಟ್ ಗಳಿದ್ದು,  ಪರಿಶೀಲಿಸಲಾಗಿ ಸಿಲ್ವರ್ ಕಪ್ ಬ್ರಾಂಡಿ 90 ಎಂ.ಎಲ್ ಖಾಲಿಯಾದ ಮೂರು ಸ್ಯಾಚೆಟ್‌ಗಳು ಹಾಗೂ ಎರಡು ಓಲ್ಡ್ ಟವೆರಿನ್ ವಿಸ್ಕಿಯ 180 ಎಂ.ಎಲ್ ಖಾಲಿಯಾದ ಸ್ಯಾಚೆಟ್ ಗಳು, ಮೂರು ಸಿಲ್ವರ್ ಕಪ್ ಬ್ರಾಂಡಿ 90 ಎಂ.ಎಲ್ ನ ಓಪನ್ ಆಗಿರದ ಸ್ಯಾಚೆಟ್‌ಗಳು ಹಾಗೂ ಒಂದು ಓಲ್ಡ್ ಟವೆರಿನ್ ವಿಸ್ಕಿಯ 180 ಎಂ.ಎಲ್ ನ ಓಪನ್ ಆಗಿರದ ಸ್ಯಾಚೆಟ್,  ಮೂರು ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ. ಅಲ್ಲೇ ಕುರುಕಲು ತಿಂಡಿಗಳು ಸಹ ಇರುತ್ತವೆ. ಅಲ್ಲೇ ಇದ್ದ ಅಂಗಡಿ ಮಾಲಿಕನ ಹೆಸರು ಮತ್ತು ವಿಳಾಸ ಕೇಳಲಾಗಿ ಆಕಾಶ್ ಬಿನ್ ಲೇಟ್ ರಾಮಚಂದ್ರ, 24 ವರ್ಷ, ಒಕ್ಕಲಿಗರು, ಅಂಗಡಿ ವ್ಯಾಪಾರ, ಮಾರ್ಕೋನಹಳ್ಳಿ, ಅಮೃತೂರು ಹೋಬಳಿ, ಕುಣಿಗಲ್ ತಾಲೋಕ್ ಎಂದು ತಿಳಿಸಿದನು. ನಂತರ ಓಡಿ ಹೋದ  ವ್ಯಕ್ತಿಯ ಬಗ್ಗೆ ವಿಚಾರ ಮಾಡಿ ಕೇಳಲಾಗಿ ರಾಜಣ್ಣ ಬಿನ್ ಯಳವಯ್ಯ, 55 ವರ್ಷ, ಒಕ್ಕಲಿಗರು, ಅಂಗಡಿ ವ್ಯಾಪಾರ, ಮಾರ್ಕೋನಹಳ್ಳಿ, ಅಮೃತೂರು ಹೋಬಳಿ, ಕುಣಿಗಲ್ ತಾಲೋಕ್ ಎಂದು ತಿಳಿಸಿದನು. ಮುಂದುವರೆದು ವಿಚಾರ ಮಾಡಲಾಗಿ ತನ್ನ ಅಂಗಡಿಗೆ ಬರುವ ಕೆಲವು ಗಿರಾಕಿಗಳು ಇಲ್ಲಿ ಬಂದು ಕುರುಕಲು ತಿಂಡಿಗಳನ್ನು ಖರೀದಿಸಿ ಹೊರಗಡೆಯಿಂದ ಮದ್ಯವನ್ನು ತೆಗೆದುಕೊಂಡು ಬಂದು ಇಲ್ಲಿ ಮದ್ಯಪಾನ ಮಾಡಿಕೊಂಡು ಹೋಗುತ್ತಾರೆ ಎಂದು ತಿಳಿಸಿದನು. ಸಾರ್ವಜನಿಕ ಸ್ಥಳವಾದ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರಕ್ಕಾಗಿ ಬರುವ ಗಿರಾಕಿಗಳಿಗೆ ಕುರುಕಲು ತಿಂಡಿಗಳನ್ನು ಮಾರಾಟ ಮಾಡಿ ಮದ್ಯಪಾನ ಮಾಡಲು ಅಂಗಡಿ ಮಾಲಿಕರಾದ ಆಕಾಶ್ ಎಂಬುವರು ಅವಕಾಶ ಮಾಡಿಕೊಟ್ಟಿರುವುದರಿಂದ  ಮತ್ತು ಇದೇ ಸಾರ್ವಜನಿಕ ಸ್ಥಳದಲ್ಲಿ ರಾಮಾಂಜನೇಯ, ಪ್ರಕಾಶ್ ಮತ್ತು ರಾಜಣ್ಣ ಇವರುಗಳು ಮದ್ಯಪಾನ ಮಾಡುತ್ತಿದ್ದರಿಂದ ಇವರುಗಳ ಮೇಲೆ ಕಲಂ-15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ ರೀತ್ಯ ಕಾನೂನು ಕ್ರಮ ಜರುಗಿಸಲು ಸ್ಥಳದಲ್ಲಿ ವಿದ್ಯುತ್ ದೀಪದ ಬೆಳಕಿನಲ್ಲಿ ದೂರನ್ನು ಬರೆಸಿ ಠಾಣಾ ಸಿಬ್ಬಂದಿಯಾದ ಸಿಪಿಸಿ-932 ಜಾಪರ್ ಪಾಷ ರವರ ಮುಖೇನ ಕಳುಹಿಸಿಕೊಟ್ಟಿರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 52 guests online
Content View Hits : 304477