lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2017 >
Mo Tu We Th Fr Sa Su
        1 2 3
4 5 6 7 8 9 10
11 12 13 14 15 16 17
18 19 20 21 22 23 24
25 26 27 29 30  
Thursday, 28 September 2017
Crime Incidents 28-09-17

ಸಿ.ಎಸ್.ಪುರ ಠಾಣಾ ಮೊ.ನಂ:86/2017. ಕಲಂ:279. 337 ಐಪಿಸಿ

ದಿನಾಂಕ:27.09.2017 ರಂದು  ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಗಾಯಾಳು  ಮೋಹನ್ ಕುಮಾರ್  ಬಿನ್ ನಾಗರಾಜು, 25 ವರ್ಷ, ಈಡಿಗರು, ಕೂಲಿ ಕೆಲಸ, ಕಾಳೇನಹಳ್ಳಿ,  ಗುಬ್ಬಿ ತಾಲ್ಲೂಕು ರವರು ನೀಡಿದ ಹೇಳಿಕೆ ಸಾರಾಂಶವೆದರೆ, ದಿನಾಂಕ:19.09.2017 ರಂದು ಹರಿವೇಸಂದ್ರ ಗ್ರಾಮಕ್ಕೆ  ಆರ್ಕೆಸ್ಟ್ರಾ  ನೋಡಲು  ನಾನು & ನನ್ನ  ಸ್ನೇಹಿತರಾದ ರಾಮುರವರು ಹೋಗಿದ್ದು,. ರಾತ್ರಿ ಸುಮಾರು 10.30 ಸಮಯದಲ್ಲಿ ನಾನು & ರಾಮುರವರು  ಮೂತ್ರ ವಿಸರ್ಜನೆ ಮಾಡಲು  ಸಿ.ಎಸ್.ಪುರ-ಗುಬ್ಬಿ ರಸ್ತೆಯ  ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುವಾಗ, ಗುಬ್ಬಿಯ ಕಡೆಯಿಂದ  ಬಂದ ಕೆ.ಎ-06ಇಎಕ್ಸ್-2608 ನ ದ್ವಿ ಚಕ್ರವಾಹನದ ಸವಾರನು  ತನ್ನ ಬೈಕನ್ನು ಅತಿ ವೇಗ & ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ನನಗೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಎಡಗಾಲಿನ ಮೂಳೆ ಮುರಿದಿದ್ದು, ನಂತರ ಆರೋಪಿ ಚಾಲಕನು & ನನ್ನ ಸ್ನೇಹಿತನಾದ ರಾಮುರವರು 108 ಆಂಬ್ಯುಲೆನ್ಸ್ ನಲ್ಲಿ   ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿಂದ ದಿ:20.09.2017 ರಂದು ಸಿದ್ದಾರ್ಥ ಮೆಡಿಕಲ್  ಕಾಲೇಜಿಗೆ  ತಂದು ಚಿಕಿತ್ಸೆಗೆ  ಸೇರಿಸಿರುತ್ತಾರೆ, ನಂತರ ಈ ವಿಚಾರವನ್ನು ನನ್ನ ತಂದೆ & ಸಂಬಂದಿಕರಿಗೆ ತಿಳಿಸಿದ್ದು, ನನ್ನ ಸಂಬಂದಿಕರಾದ  ಬಿ.ಆರ್. ರಾಮಣ್ಣರವರು ಆಸ್ಪತ್ರೆಯಲ್ಲಿ  ವಿಚಾರ ಮಾಡಿದ್ದು, ಆರೋಪಿ ಪರಮೇಶ್ ರವರು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಯಲ್ಲಿ ಹಾಗೂ ಸಿದ್ದಾರ್ಥ ಮೆಡಿಕಲ್  ಕಾಲೇಜಿಗೆ  ಚಿಕಿತ್ಸೆಗೆ ತಂದು ಸೇರಿಸಿದ ಸಮಯದಲ್ಲಿ ಸ್ವತಹ ಮೋಹನ್ ಕುಮಾರ್ ರವರೇ ಬೈಕಿನಿಂದ ಬಿದ್ದು ಅಪಘಾತವಾಗಿರುತ್ತೆ ಎಂದು ನಮೂದು ಮಾಡಿಸಿರುತ್ತಾರೆ ಎಂಬ ವಿಚಾರ ತಿಳಿಯಿತು, ನನಗೆ & ನನ್ನ ತಂದೆ ಅವಿಧ್ಯಾವಂತರಾದ ಕಾರಣ ಈ ಬಗ್ಗೆ ಮಾಹಿತಿ ತಿಳಿದಿರಲಿಲ್ಲಾ ಹಾಗೂ ಠಾಣೆಗೆ ದೂರು ನೀಡಿರಲಿಲ್ಲಾ, ಆದ್ದರಿಂದ ನನಗೆ ಅಫಘಾತಮಾಡಿದ ಕೆ.ಎ-06ಇಎಕ್ಸ್-2608 ನ ದ್ವಿ ಚಕ್ರವಾಹನದ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಸ್ವೀಕರಿಸಿ  ಠಾಣೆಗೆ ವಾಪಸ್ಸು ಬಂದು ಸಿ.ಎಸ್.ಪುರ ಠಾಣಾ ಮೊ.ನಂ:86/2017. ಕಲಂ:279. 337 ಐಪಿಸಿ ರೀತ್ಯಾ ಪ್ರಕರಣ  ದಾಖಾಲಿಸಿರುತ್ತೆ.

ಮದುಗಿರಿ ಪೊಲೀಸ್ ಠಾಣೆ ಮೊ.ಸಂ 187/17 ಕಲಂ 279,337  IPC

ಪಿರ್ಯಾದಿ ರಮೇಶ ಬಿನ್ ಚಿಕ್ಕವೆಂಕಟಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಹಾಗೂ ನನ್ನ ದೊಡ್ಡಪ್ಪನ ಮಗನಾದ ತಿಮ್ಮರಾಜು ರವರು ದಿನಾಂಕ: 27-09-2017 ರಂದು KA-64-H-0720 ನೇ ದ್ವಿಚಕ್ರ ವಾಹನದಲ್ಲಿ ಮಧುಗಿರಿಯಿಂದ ನಮ್ಮ ಊರಾದ ಹಳೆಹಟ್ಟಿಗೆ ರಸ್ತೆಯ ಎಡ ಬದಿಯಲ್ಲಿ ನಿಧಾನವಾಗಿ ಹೋಗುತ್ತಿರುವಾಗ್ಗೆ ಮಾರ್ಗಮದ್ಯೆ ಇದೇ ದಿನ ಮದ್ಯಾನ;2.00 ಗಂಟೆಯನ ಸಮಯದಲ್ಲಿ ಮಧುಗಿರಿ ತಾ|| ಮುದ್ದಯ್ಯನಪಾಳ್ಯ- ಮಲ್ಲೇನಹಳ್ಳಿ ಗ್ರಾಮದ ನಡುವೆ ಸಿಗುವ ನರ್ಸರಿ ಬಳಿ ಮಧುಗಿರಿ – ಹಿಂದೂಪುರ ಮುಖ್ಯ ರಸ್ತೆಯಲ್ಲಿ,ಪುರವರ ಕಡೆಯಿಂದ ಬರುತ್ತಿದ್ದ KA-64 1213 ನೇ ಅಟೋ ಚಾಲಕನು ಅಟೋವನ್ನು ಅತೀವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ ಪರಿಣಾಮ,ನಾನು ಹಾಗು ತಿಮ್ಮರಾಜು ರವರು ವಾಹನ ಸಮೇತ ಕೆಳಗೆ ಬಿದ್ದಿದ್ದು ಈ ಅಪಘಾತದಿಂದ ನನ್ನ ಬಲ ಕೈ,ಬಲ ಕಾಲಿಗೆ ಗಾಯಗಳಾಗಿದ್ದು, ತಿಮ್ಮರಾಜನ ಬಲ ಕಾಲಿಗೆ ಗಾಯಗಳಾದವು ನಂತರ ಅಪಘಾತ ಮಾಡಿದ ಅಟೋ ಚಾಲಕ ಹಾಗು ಇದೇ ರಸ್ತೆಯಲ್ಲಿ ಬರುತ್ತಿದ್ದ ಕುಮಾರ್ ಬಿನ್ ಗೋವಿಂದಪ್ಪ ರವರು ನಮ್ಮನ್ನು ಉಪಚರಿಸಿ ನಂತರ ಅಪಘಾತ ಮಾಡಿದ ಅಟೋದಲ್ಲಿ ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿರುತ್ತಾರೆ,ಹೆಚ್ಚಿನ ಗಾಯಗಳಾಗಿದ್ದ ತಿಮ್ಮರಾಜು ರವರನ್ನು ವೈದ್ಯರ ಸಲಹೆಯಂತೆ ತುಮಕೂರಿನ ಹೇಮಾವತಿ ಅಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆ. ಅದ್ದರಿಂದ ಈ ಅಪಘಾತ ಮಾಡಿದ KA-64 1213 ನೇ ಅಟೋ ಚಾಲಕನ ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೊನ್ನವಳ್ಳಿ ಪೊಲೀಸ್ ಠಾಣೆ      ಠಾಣಾ ಮೊ ನಂ 119/2017 ಕಲಂ:448.504.506.427 ಐಪಿಸಿ

ದಿನಾಂಕ;-27/09/2017 ರಂದು ಸಂಜೆ 4-30  ಗಂಟೆಗೆ ಕೇಸಿನ ಪಿರ್ಯಾದಿದಾರರಾದ ಶೇಖಯ್ಯ ಬಿನ್‌ ಲೇ|| ನಿಂಗಪ್ಪ ಆಲೂರು ಗ್ರಾಮದ ವಾಸಿಯವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಆಂಶವೆನೆಂದರೆ ಪಿರ್ಯಾದಿದಾರರ ತಮ್ಮ ರಾಮಚಂದ್ರನಿಗೆ ಸಾರ್ಥವಳ್ಳಿ ಗ್ರಾಮಪಂಚಾಯ್ತಿ ವತಿಯಿಂದ ಶೌಚಾಲಯ ಕಾಮಗಾರಿ ಮಂಜೂರು ಹಾಕಿದ್ದು ನಿಯಮದಂತೆ ಶೌಚಾಲಯ ಕಟ್ಟಿಸಿಕೊಡಲು ನನಗೆ 8000 ರೂಗಳನ್ನು ನನ್ನ ತಮ್ಮ ನೀಡಿದ್ದು ಈಗ್ಗೆ ಒಂದು ತಿಂಗಳ ಹಿಂದೆ ಶೌಚಾಲಯವನ್ನು ಕಟ್ಟಿಸಿ ಕೊಟ್ಟಿರುತ್ತೇನೆ. ಆದರೆ ಗ್ರಾಮ ಪಂಚಾಯ್ತಿಯಲ್ಲಿ ಹಣ ಬಿಡುಗಡೆಯಾಗದ ಕಾರಣ ಹಣವನ್ನು ರಾಮಚಂದ್ರನಿಗೆ ಕೊಡಲು ಸಾಧ್ಯವಾಗಿರುವುದಿಲ್ಲಾ, ಆದರೆ ಪ್ರತಿ ದಿನ ನನ್ನ ತಮ್ಮ ಕೊಟ್ಟಿರುವ 8000 ರೂ ಹಣವನ್ನು ಕೊಡು ಅಂತ ಕೇಳುತ್ತಿದ್ದು ಹಣ ಬಿಡುಗಡೆಯಾದ ಮೇಲೆ ಕೊಡುತ್ತೇನೆ ಎಂದು ಹೇಳಿದರು ದಿನಾಂಕ 25-09-2017 ರಂಧು ರಾತ್ರಿ ಸುಮಾರು 8-00 ಗಂಟೆಯಲ್ಲಿ ನನ್ನ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮನೆಯ ಮೇಲ್ಛಾವಣೆಗೆ ಹಾಕಿದ್ದ ಸುಮಾರು 800 ಕೆಂಪುಹೆಂಚುಳನ್ನು ಸಂಪೂರ್ಣವಾಗಿ ಹೊಡೆದು ಹಾಕಿ ಸುಮಾರು 8000 ರೂಗಳ ನಷ್ಟವಾಗಿರುತ್ತದೆ. ಇದನ್ನು ಕೇಳು ಮತ್ತು ತಡೆಯಲು ಹೋದಾಗ ಬೋಳಿಮಗನೆ ಸೂಳೇ ಮಗನೆ ಎಂತ ಅವ್ಯಾಚ್ಯ ಶಬ್ದಗಳಿಂದ ಬೈದು ನೀನು ಹತ್ತಿರ ಬಂದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆ ಎಂದು ಹೆಂಚಿನಿಂದ ಎಸೆಯಲು ಬಂದಿರುತ್ತಾನೆ. ನಮ್ಮ ಗ್ರಾಮ ಯವರಾಜ ಬಿನ್‌ ರಂಗಸ್ವಾಮಿ  ಮತ್ತು ಚಿಕ್ಕಣ್ಣ ಬಿನ್‌ ಕೆಂಚಶೆಟ್ಟಿ ಮುಂತಾದವರು ನೋಡಿರುತ್ತಾರೆ ನನ್ನ ತಮ್ಮನ ಮೇಲೆ ದೂರು ಕೊಡುವುದು ಬೇಡವೆಂದು ಸುಮ್ಮನಿದ್ದು . ಆದರೆ ಆತನ ಉಪಟಳ ಜಾಸ್ತಿಯಾಗಿದ್ದು,  ಈ ದಿನ ಠಾಣೆಗೆ ತಡವಾಗಿ ಬಂದು ನನ್ನ ಮನೆಯ ಹೆಂಚುಗಳನ್ನು ಹೊಡೆದು ಹಾಕಿ ನಷ್ಟ ಉಂಟು ಮಾಡಿ ಮನೆಗೆ ಅಕ್ರಮ ಪ್ರವೇಶಿಸಿ ಬೈದು ಪ್ರಾಣಬೆದರಿಕೆ ಹಾಕಿರುವ ಪಿರ್ಯಾದಿಯ ತಮ್ಮ ರಾಮಚಂದ್ರನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ  ಮೇರೆಗೆ ಠಾಣಾ ಮೊ ನಂ 119/2017 ಕಲಂ:448.504.506.427  ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 98 guests online
Content View Hits : 321531