lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2017 >
Mo Tu We Th Fr Sa Su
        1 2 3
4 5 6 7 8 9 10
11 12 13 14 15 16 17
18 19 20 21 22 23
25 26 27 28 29 30  
Sunday, 24 September 2017
Crime Incidents 24-09-17

ಜಯನಗರ ಪೊಲೀಸ್ ಠಾಣಾ ಮೊ.ನಂ. 129/2017 ಕಲಂ 454, 457, 380 ಐಪಿಸಿ

ದಿನಾಂಕ: 23-09-2017 ರಂದು ಸಂಜೆ 5-30 ಗಂಟೆಗೆ ತುಮಕೂರು ಟೌನ್‌, ಗೋಕುಲ ಬಡಾವಣೆ ವಾಸಿ ಚಿಂತಾಮಣಿಶಿಂಧೆ ಬಿನ್ ಲೇಟ್ ಹುಲಗಪ್ಪಶಿಂಧೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 21-09-2017 ರಂದು ಬೆಳಿಗ್ಗೆ ಸುಮಾರು 6-30 ಗಂಟೆಯಲ್ಲಿ  ನಾನು ನನ್ನ ಸಂಸಾರದ ಸಮೇತ ನಮ್ಮ ಮನೆಗೆ ಡೋರ್‌ಲಾಕ್‌‌  ಮಾಡಿಕೊಂಡು ನಮ್ಮ ಸಂಬಂಧಿಕರ ಊರಾದ ಆಂದ್ರಪ್ರದೇಶದ ಅನಂತಪುರಕ್ಕೆ ಹೋಗಿದ್ದೆವು.   ಈ ದಿನ ದಿನಾಂಕ: 23-09-2017 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯಕ್ಕೆ ವಾಪಾಸ್ಸು ನಮ್ಮ ಮನೆಗೆ ಬಂದಿದ್ದು, ಮನೆಯ ಬಳಿ ನೋಡಲಾಗಿ ನಮ್ಮ ಮನೆಯ ಮುಂಭಾಗಿಲಿಗೆ ಹಾಕಿದ್ದ  ಡೋರ್‌‌ಲಾಕ್‌‌ ಅನ್ನು ಯಾರೋ ಕಳ್ಳರು ಮನೆಯೊಳಗೆ ಮೀಟಿ ತೆಗೆದು ಮನೆಯೊಳಗೆ ಪ್ರವೇಶ ಮಾಡಿ, ಮನೆಯ ರೂಮಿನಲ್ಲಿ ಇಟ್ಟಿದ್ದ ಗಾಡ್ರೇಜ್‌‌ ಬೀರುವಿನ ಬಾಗಿಲನ್ನೂ ಸಹಾ ಮೀಟಿ ತೆಗೆದು ಬೀರುವಿನಲ್ಲಿಟ್ಟಿದ್ದ ಒಂದು ಚಿನ್ನದ ಲಾಂಗ್‌‌ ಚೈನ್, ಒಂದು ಚಿನ್ನದ ನೆಕ್ಲೆಸ್‌, ಎರಡು ಬಳೆಗಳು, ಹಾಗೂ ಮೂರು ಉಂಗುರಗಳನ್ನು ಹಾಗೂ ದೇವರ ಮನೆಯಲ್ಲಿ ಇಟ್ಟಿದ್ದ ಬೆಳ್ಳಿಯ ಒಂದು ಚೆಂಬು, ಬೆಳ್ಳಿಯ ದೀಪಗಳು, ಎರಡು ಕುಂಕುಮದ ಬಟ್ಟಲು ಗಳನ್ನು ಹಾಗೂ ಡ್ರಸಿಂಗ್‌‌ ಟೇಬಲ್‌‌ ಬಳಿ ಇಟ್ಟಿದ್ದ ಸ್ಯಾಮ್‌ಸಾಂಗ್‌‌ ಟಚ್‌‌ ಸ್ಕೀನ್‌‌ ಮೊಬೈಲ್‌  ಹಾಗೂ ಲವಾ ಕಂಪನಿಯ ಕೀ ಪ್ಯಾಡ್‌‌ ಮೊಬೈಲ್‌‌ ಪೋನ್‌‌‌ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.   ಮೇಲ್ಕಂಡ ಚಿನ್ನದ ವಡವೆಗಳು ಅಂದಾಜು ಸುಮಾರು 100 ಗ್ರಾಂ ಆಗಬಹುದಿದ್ದು, ಬೆಲೆ ಸುಮಾರು 2,50,000 ರೂಪಾಯಿ ಬೆಳ್ಳಿಯ ವಡವೆಗಳು ಸುಮಾರು ಅಂದಾಜು ಒಂದು ಕೆ.ಜಿ. ತೂಕ ಇದ್ದು ಬೆಲೆ ಸುಮಾರು 30,000 ರೂಪಾಯಿ ಮೊಬೈಲ್‌‌ ಪೋನ್‌‌ಗಳು ಎರಡರಿಂದ ಸುಮಾರು 10,000 ಸಾವಿರ ರೂಪಾಯಿಗಳಾಗುತ್ತೆ. ನಮ್ಮ ಮನೆಗೆ ಯಾರೋ ಕಳ್ಳರು ದಿನಾಂಕ: 21-09-2017 ರಿಂದ ದಿನಾಂಕ: 23-09-2017 ರ ನಡುವೆ ಯಾವಾಗಲೋ ನಮ್ಮ ಮನೆಯ ಬಾಗಿಲ ಡೋರ್‌ಲಾಕ್‌‌ ಮೀಟಿ ಮನೆಯೊಳಗೆ ಪ್ರವೇಶ ಮಾಡಿ ಮೇಲ್ಕಂಡ ವಡವೆಗಳನ್ನು ಹಾಗೂ ಮೊಬೈಲ್‌‌ ಪೋನ್‌ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.   ನಾನು ನಮ್ಮ ಮನೆಯಲ್ಲಿ ಕಳುವಾಗಿರುವ ವಿಚಾರವನ್ನು ನಮ್ಮ ಸಂಬಂಧಿಕರಿಗೆಲ್ಲಾ ತಿಳಿಸಿ ನಾನೂ ಸಹಾ ನಮ್ಮ ಮನೆಯಲ್ಲಿ ಎಲ್ಲಾ ವಿವರವಾಗಿ ಚೆಕ್‌‌ ಮಾಡಿಕೊಂಡು ಈ ದಿನ ದಿನಾಂಕ 23-09-2017 ರಂದು ಸಾಯಂಕಾಲ ಪೊಲೀಸ್ ಠಾಣೆಗೆ ತಡವಾಗಿ ಬಂದು ಈ ದೂರು ನೀಡಿರುತ್ತೇನೆ. ತಾವು ದಯಮಾಡಿ ಆರೋಪಿಗಳನ್ನು ಪತ್ತೆ ಮಾಡಿ ನಮ್ಮ ಮನೆಯಲ್ಲಿ ಕಳವು ಮಾಡಿರುವ ವಡವೆಗಳನ್ನು ಹಾಗೂ ಮೊಬೈಲ್‌‌ ಪೋನ್‌‌ಗಳನ್ನು ಕೊಡಿಸಿಕೊಡಲು ಕೋರಿ ನೀಡಿರುವ ದೂರಿನ ಅಂಶವಾಗಿರುತ್ತೆ.

 

ಮಧುಗಿರಿ ಪೊಲೀಸ್ ಠಾಣಾ ಮೊ.ಸಂ :180/2017 u/s 379 IPC

ಈ ಕೇಸಿನ ಪಿರ್ಯಾದಿ ಶ್ರೀಮತಿ ಮಂಜುಳ ಕೋಂ ಲೇ.ಅಮರನಾಥ, 45 ವರ್ಷ, ಜೆ.ಎಸ್ ಆಸ್ಪತ್ರೆಯಲ್ಲಿ ಸಹಾಯಕಿ, ಸರ್ಕಾರಿ ಆಸ್ಪತ್ರೆಯ ಪಕ್ಕ, ಮಧುಗಿರಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯು ಮಧುಗಿರಿ ಟೌನ್ ನ ಜೆ.ಎಸ್ ಆಸ್ಪತ್ರೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಪ್ರತಿದಿನ ತನ್ನ ಬಾಬ್ತು KA-06-EK-2545 Hero Plessore Moped ದ್ವಿಚಕ್ರವಾಹನದಲ್ಲಿ ಬಂದು ಹೋಗುತ್ತಿದ್ದು, ಎಂದಿನಂತೆ ದಿನಾಂಕ: 21-09-2017 ರಂದು ಬೆಳಿಗ್ಗೆ 10.30 ಗಂಟೆಗೆ ಕೆಲಸಕ್ಕೆ ಬಂದು ಮದ್ಯಾಹ್ನ ಊಟಕ್ಕೆ ಹೋಗಿ, ಊಟ ಮುಗಿಸಿಕೊಂಡು ಸಂಜೆ 05.30 ಗಂಟೆಗೆ  ತನ್ನ ಬಾಬ್ತು ದ್ವಿಚಕ್ರವಾಹನವನ್ನು ಜೆ.ಎಸ್‌ ಆಸ್ಪತ್ರೆಯ ಮುಂಭಾಗದಲ್ಲಿನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ, ಆಸ್ಪತ್ರೆಗೆ ಕೆಲಸಕ್ಕೆ ಹೋಗಿರುತ್ತಾರೆ. ನಂತರ ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 08.15 ಗಂಟೆಗೆ ಮನೆಗೆ ಹೋಗಲು ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ, ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳದಲ್ಲಿರಲಿಲ್ಲ. ಆಗ ಪಿರ್ಯಾದಿಯು  ಗಾಬರಿಗೊಂಡು ಅಕ್ಕ-ಪಕ್ಕ ವಿಚಾರ ಮಾಡಿದ್ದು, ಪತ್ತೆಯಾಗಲಿಲ್ಲ. ಯಾರೋ ಕಳ್ಳರು ಪಿರ್ಯಾದಿ ಬಾಬ್ತು KA-06-EK-2545 Hero Plessore Moped ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ದ್ವಿಚಕ್ರವಾಹನದ ಈಗಿನ ಬೆಲೆ ಸುಮಾರು 21,000/- ರೂ ಗಳಾಗುತ್ತದೆ. ಪಿರ್ಯಾದಿಯು ಅಂದಿನಿಂದ ಇಂದಿನವರೆಗೂ ಹುಡುಕಾಡಿದ್ದು, ಪತ್ತೆಯಾಗಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ಕಳ್ಳತನವಾಗಿರುವ ತನ್ನ ಬಾಬ್ತು KA-06-EK-2545 Hero Plessore Moped ದ್ವಿಚಕ್ರವಾಹನವನ್ನು ಪತ್ತೆ ಮಾಡಿ, ಕಳ್ಳತನ ಮಾಡಿರುವ  ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 156/2017 ಕಲಂ: 279 ,337 ಐ.ಪಿ.ಸಿ

ದಿನಾಂಕ: 23/09/2017 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಭರತ್ ರಾಜ್ ಬಿನ್ ಕಾಶಿರಾಮ್ ಪ್ರಸಾದ್, 54 ವರ್ಷ, ವಕೀಲರು, ರಜಪೂತ ಜನಾಂಗ, 2ನೇ ಮುಖ್ಯರಸ್ತೆ, ವಿನಾಯಕನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ದಿನಾಂಕ: 08/09/2017 ರಂದು ರಾತ್ರಿ ಸುಮಾರು 11-20 ಗಂಟೆಯ ಸಮಯದಲ್ಲಿ ಕೆ.ಎ-44 ಕ್ಯೂ- 5884 ನೇ ಫ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ವಿನಾಯಕನಗರದ ನಮ್ಮ ಮನೆಗೆ ಹೋಗಲು ಎನ್.ಹೆಚ್ -206 ರಸ್ತೆಯಲ್ಲಿ ಗುರುದರ್ಶನ್ ಹೋಟೆಲ್ ಮುಂಭಾಗ ಯು ಟರ್ನ್ ನಲ್ಲಿ ತಿರುಗಿಸಿಕೊಂಡು ಹೋಗುತ್ತಿರುವಾಗ ಅದೇ ಸಮಯಕ್ಕೆ ಬಸ್ ನಿಲ್ದಾಣದ ಕಡೆಯಿಂದ ಕೆ.ಎ-44 ಎಸ್-7766 ನೇ ಫ್ಯಾಷಿಯೋ ದ್ವಿಚಕ್ರ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ದ್ವಿಚಕ್ರ ವಾಹನದ ಸಮೇತ ಬಲಮಗ್ಗುಲಿಗೆ ಬಿದ್ದು, ನನಗೆ ಬಲಗೈ ರಟ್ಟೆಗೆ, ಎಡಗೈ ಮೊಣಕೈಗೆ, ಎಡಗಾಲು ಮಂಡಿಗೆ ಮತ್ತು ಎಡಪಕ್ಕೆಗೆ ಪೆಟ್ಟುಗಳು ಬಿದ್ದಿರುತ್ತೆ. ಆಗ ಅಲ್ಲೆ ಹೋಟೆಲ್ ಬಳಿ ಇದ್ದ ಈ ಅಪಘಾತವನ್ನು ನೋಡಿದ ಶಂಕರಮೂರ್ತಿ & ಅಶೋಕ ಎಂಬುವರು ಸ್ಥಳಕ್ಕೆ ಬಂದು ನನ್ನನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ನಂತರ ಅಲ್ಲಿನ ವೈದ್ಯರ ಸಲಹೆಯಂತೆ ತಿಪಟೂರು ಹೇಮಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿ ಈ ದಿನ ತಡವಾಗಿ ಬಂದು ಅಪಘಾತ ಮಾಡಿರುವ ಮೇಲ್ಕಂಡ ಕೆ.ಎ-44 ಎಸ್-7766 ನೇ ಫ್ಯಾಷಿಯೋ ದ್ವಿಚಕ್ರ ವಾಹನದ ಚಾಲಕನಾದ ನೊಣವಿನಕೆರೆಯ ಮನೋಹರ ಎಂಬುವರ .ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 97 guests online
Content View Hits : 321530