lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2017 >
Mo Tu We Th Fr Sa Su
        1 2 3
4 5 6 7 8 9 10
11 12 13 14 15 16 17
18 19 20 21 22 24
25 26 27 28 29 30  
Saturday, 23 September 2017
Crime Incidents 23-09-17

ಹೊಸಬಡಾವಣೆ ಪೊಲೀಸ್ ಠಾಣಾ ಮೊ .ನಂ 113/2017 U/S 341, 307  IPC

ದಿನಾಂಕ : 22-09-2017 ರಂದು ಮಧ್ಯಾಹ್ನ ಸುಮಾರು 3-30 ಗಂಟೆ ಯಲ್ಲಿ ಪಿರ್ಯಾದಿ ಮಂಜುನಾಥ್. ಟಿ.ಎಸ್. ಸಿಪಿಸಿ 648 ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ  ಆರೋಪಿ ದೇವರಾಜು ಬಿನ್ ಪ್ರತಾಪ್, 25 ವರ್ಷ, ಲಿಂಗಾಯಿತ ಜನಾಂಗ, ಪಾನಿಪುರಿ ಅಂಗಡಿ ವ್ಯಾಪಾರ, ಎಸ್.ಐ.ಟಿ ಮುಖ್ಯ ರಸ್ತೆ, ತುಮಕೂರು  ಹಾಗೂ ಗಾಯಾಳು ಶ್ರೀಮತಿ ಅಂಜಲಿ ಕೋಂ ಮಂಜುನಾಥ್  (24 )ಖಾಸಾ ಅಣ್ಣ ತಂಗಿಯಾಗಿದ್ದು ಅಂಜಲಿ ರವರು ಮದುವೆಯಾದ ನಂತರವೂ ಸಹಾ ಪಿರ್ಯಾದಿಗೆ ನಿವೇಶನ ಕೊಡಿಸು, ಸೋಫಾಸೆಟ್ ಕೊಡಿಸು ಎಂದು ಪದೇ ಪದೇ ತವರಿಗೆ ಬಂದು ಹಿಂಸೆ ನೀಡುತ್ತಿದ್ದು ದಿ: 22-09-17 ರಂದು ಸಹಾ ಗಂಡನ ಮನೆಯಿಂದ ತುಮಕೂರಿಗೆ ಬಂದು ಸಂಜೆ ಹಾಗೂ ಈ ದಿವಸ ಮಧ್ಯಾಹ್ನ 1-30 ಗಂಟೆ ಸಮಯದಲ್ಲಿಯೂ ಸಹಾ ಮನೆಯಲ್ಲಿ  ಗಲಾಟೆ ಮಾಡಿದ್ದರಿಂದ ಆರೋಪಿಯು ಇವಳನ್ನು ಹೀಗೇ ಬಿಟ್ಟರೆ ಜಗಳ ಮಾಡಿ ಮರ್ಯಾದೆ ತೆಗೆಯುತ್ತಾಳೆಂದು ಯೋಚಿಸಿ ಮನೆಯಲ್ಲಿಟ್ಟಿದ್ದ ಚಾಕುವನ್ನು ತೆಗೆದುಕೊಂಡು ಅಂಜಲಿರವರನ್ನು ಹಿಂಬಾಲಿಸಿಕೊಂಡು ಎಸ್.ಎಸ್. ಪುರಂ 15ನೇ ಕ್ರಾಸ್‌ ನಲ್ಲಿ ಅಂಜಲಿ ರವರು ನಡೆದುಕೊಂಡು ಬರುತ್ತಿರುವಾಗ್ಗೆ ಆಕೆಯನ್ನು ಅಡ್ಡಗಟ್ಟಿ  ಚಾಕುವಿನಿಂದ ಕುತ್ತಿಗೆ ಕುಯ್ದಿದ್ದು ಅದೇ ಸಮಯದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಪಿರ್ಯಾದಿಯು ಘಟನೆಯನ್ನು ನೋಡಿ ಆರೋಪಿಯನ್ನು ಸ್ಥಳಿಯರ ಸಹಾಯದಿಂದ ಹಿಡಿದು ಠಾಣೆಗೆ ಕಳುಹಿಸಿ ಗಾಯಾಳುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 155/2017 ಕಲಂ: 78 ಕ್ಲಾಸ್ (3) ಕೆ.ಪಿ.ಆಕ್ಟ್.

ದಿನಾಂಕ : 22/09/2017 ರಂದು ಮಧ್ಯಾಹ್ನ 4-00 ಗಂಟೆಗೆ ಮಾನ್ಯ ಪಿ.ಐ ಸಾಹೇಬರವರು ಠಾಣಾ ಪಿ.ಸಿ-968 ಮಂಜುನಾಥ್  ರವರ ಮೂಲಕ ಕಳುಹಿಸಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ: 22/09/2017 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನಮ್ಮ ಗಾಂಧಿನಗರದ ಉಪಠಾಣೆಯ ಹೆಚ್.ಸಿ-32 ಉಸ್ಮಾನ್ ಸಾಬ್ ಹಾಗೂ ಬೀಟ್ ಸಿಬ್ಬಂದಿಯಾದ ಪಿ.ಸಿ-968 ಮಂಜುನಾಥ್ ರವರಿಂದ ತಿಪಟೂರು ಟೌನ್ ಗಾಂದಿನಗರದ ಗುರಪ್ಪನಕಟ್ಟೆ 10ನೇ ಕ್ರಾಸ್ ಬಳಿ ರಂಗಪುರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಪ್ಯಾರೇಜಾನ್ ಬಿನ್ ಸಯ್ಯದ್ ಕರೀಂ ರವರು ಸಾರ್ವಜನಿಕರನ್ನು ಸೇರಿಸಿಕೊಂಡು ಅವರಿಂದ ಹಣ ಪಡೆದು, ಮಟ್ಕಾ ಜೂಜಾಟ ಆಡುತ್ತಿದ್ದಾರೆಂತ ಖಚಿತ ವರ್ತಮಾನ ಬಂದಿದ್ದು, ಈತನನ್ನು ದಾಳಿ ಮಾಡಿ ಬಂದಿಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು, ಹೆಚ್.ಸಿ-32 ಉಸ್ಮಾನ್ ಸಾಬ್, ಪಿ.ಸಿ-968 ಮಂಜುನಾಥ್, ಪಿ.ಸಿ-210 ಅಶೋಕ್  ಮತ್ತು ಪಂಚರುಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಪ್ಯಾರೇಜಾನ್ ರವರು ಮೇಲ್ಕಂಡ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಅವರು ಹೇಳುತ್ತಿದ್ದ ನಂಬರ್ ಗಳನ್ನು ಒಂದು ಚೀಟಿಗೆ ಪೆನ್ನಿನಿಂದ ಬರೆದುಕೊಳ್ಳುತ್ತಾ 1 ರೂಗೆ 80 ರೂ ಕೊಡುತ್ತೇನೆಂದು ಮಟಕಾ ಜೂಜಾಟವಾಡುತ್ತಿದ್ದವನನ್ನು ಸಿಬ್ಬಂದಿಯರೊಂದಿಗೆ ಹಿಡಿದು, ಹೆಸರು ವಿಳಾಸ ಕೇಳಲಾಗಿ ಪ್ಯಾರೇಜಾನ್ ಬಿನ್ ಸಯ್ಯದ್ ಕರೀಂ, 60 ವರ್ಷ, ಮುಸ್ಲೀಂ ಜನಾಂಗ, ಅಮಾಲಿ ಕೆಲಸ, 10ನೇ ಕ್ರಾಸ್  ಗುರಪ್ಪನಕಟ್ಟೆ, ಗಾಂಧಿನಗರ, ತಿಪಟೂರು ಟೌನ್ ಎಂತ ತಿಳಿಸಿದ್ದು, ಈತನನ್ನು ಮಧ್ಯಾಹ್ನ 03-30  ಗಂಟೆಗೆ ವಶಕ್ಕೆ ಪಡೆದಿರುತ್ತೆ. ಹಾಗೂ ಈತನ ಬಳಿ  2230/- ರೂ  ನಗದು ಹಣ,  ಮಟ್ಕಾ ನಂಬರ್ ಬರೆದಿರುವ ಒಂದು ಚೀಟಿ ಮತ್ತು ಒಂದು ಲೆಡ್ ಪೆನ್ನು ಇದ್ದು, ಈತನ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 79/2017 - ಕಲಂ 279-337 ಐಪಿಸಿ ರೆ/ವಿ  134(ಎ)(ಬಿ)  ಐ ಎಂ ವಿ ಆಕ್ಟ್‌. .

ದಿನಾಂಕ:-22/09/2017 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿ ಶ್ರೀನಿವಾಸ ಬಿನ್ ತಿಮ್ಮಣ್ಣ ಕಂಬತನಹಳ್ಳಿ   ಗ್ರಾಮ, ಮಧುಗಿರಿ ತಾ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ದೊಡ್ಡೇರಿ ಹೋಬಳಿ ಮಾದೇನಹಳ್ಳಿ ಗ್ರಾಮದ ಸಿದ್ದಗಂಗಯ್ಯರವರ ಮನೆಯ ಮೇಲ್ಛಾವಣೆಯ ಕಾಂಕ್ರೀಟ್ ಕೆಲಸ ಒಪ್ಪಿಕೊಂಡಿದ್ದು,  ದಿನಾಂಕ:02/08/2017 ರಂದು ಕೆಲಸ ಮಾಡಲು ನಾನು ಮತ್ತು ನನ್ನ ಸ್ನೇಹಿತ ಬಾಲು ಕೆಲಸಕ್ಕೆ ಬಂದು ಕೆಲಸ ಮುಗಿಸಿಕೊಂಡು ಸಂಜೆ 5-00 ಗಂಟೆಯಲ್ಲಿ ಶೌಚಕ್ಕೆಂದು ನಾನು ಮತ್ತು ನನ್ನ ಸ್ನೇಹಿತ ಬಾಲು ರಸ್ತೆ ಎಡಬದಿಯಲ್ಲಿ ನಡೆದುಕೊಂಡು ಹೋಗುವಾಗ, ದಂಡಿನದಿಬ್ಬದ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ಅನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ್ದರಿಂದ ಟ್ರಾಕ್ಟರ್ ನನ್ನ ಎರಡು ಕಾಲುಗಳ ಮೇಲೆ ಹಾಗೂ ಬಾಲುವಿನ ಮೇಲೆ ಟ್ರಾಕ್ಟರ್ ಹರಿದಿದ್ದರಿಂದ, ನನ್ನ ಎರಡು ಕಾಲುಗಳು ಮುರಿದು ಬಾಲುವಿನ ಸೊಂಟ ಮುರಿದಿರುತ್ತೆ. ಅಲ್ಲಿ ಕೆಲಸಕ್ಕೆ ಬಂದಿದ್ದವರು ಯಾವುದೋ ಒಂದು ವಾಹನದಲ್ಲಿ ನಮ್ಮನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಸೇರಿಸಿದ್ದು ನಾನು ಚಿಕಿತ್ಸೆ ಪಡೆದಿರುತ್ತೇನೆ ನಮಗೆ ಅಪಘಾತ ಪಡಿಸಿದ ಟ್ರಾಕ್ಟರ್ ನಂ ಕೆಎ-64 ಟಿ-1520 ಆಗಿದ್ದು, ಚಾಲಕನ  ಹೆಸರು ಸರೇಶ ಬಿನ್ ರಂಗನಾಥ ನಾಗೇನಹಳ್ಳಿ ಹಾಲಿ ವಾಸ ಬಡವನಹಳ್ಳಿ ಎಂತಾ ತಿಳಿದು ಬಂದಿರುತ್ತೆ. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ  ತಡವಾಗಿ ಬಂದು ದೂರು ನೀಡುತ್ತಿದ್ದು ಟ್ರಾಕ್ಟರ್ ಚಾಲಕನ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  89/2017   ಕಲಂ: 323.324.504.506 RW 34 IPC

ದಿನಾಂಕ:22/09/2017 ರಂದು ಮದ್ಯಾಹ್ನ 12:00 ಗಂಟೆಗೆ ಪಿರ್ಯಾದಿ ನಾಗಭೂಷಣ ಬಿನ್ ಲೇ|| ಪೆದ್ದಾಯಪ್ಪ 40 ವರ್ಷ ಹೆಚ್.ಪಿ ಪೆಟ್ರೋಲ್ ಬಂಕ್ ಮುಂಭಾಗ ಚಿಲ್ಲರೆ ಅಂಗಡಿ ವ್ಯಾಪಾರ ವೈ.ಎನ್ ಹೊಸಕೋಟೆ ಟೌನ್ ಪಾವಗಡ ತಾ|| ರವರು ನೀಡಿದ ಲಿಖೀತ ದೂರಿನ ಅಂಶವನೆಂದರೆ ನಾನು ನಮ್ಮೂರಿನ ಹೆಚ್.ಪಿ ಪೆಟ್ರೋಲ್ ಬಂಕ್ ಮುಂಭಾಗ ನಮ್ಮ ತಂದೆಗೆ ಸೇರಿದ ಪಿತ್ರಾರ್ಜಿತ ಜಮೀನು ಇದ್ದು ಸದರಿ ಜಮೀನಿನಲ್ಲಿ ನಾನು ಒಂದು ಮನೆ ಕಟ್ಟಿಕೊಂಡು,ರಸ್ತೆ ಪಕ್ಕದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿರುತ್ತೇನೆ, ದಿನಾಂಕ:21/09/2017 ರಂದು ಸಂಜೆ 4:30 ಗಂಟೆಯಲ್ಲಿ ನಾವು ಹೊಸದಾಗಿ ಕಟ್ಟಿರುವ ಮನೆಯ ಮುಂದೆ  ಶೀಟ್ ಹಾಕುತ್ತಿದ್ದಾಗ ನಮ್ಮ ಅಣ್ಣಂದಿರಾದ ಹನುಮಪ್ಪ ಮತ್ತು ರಘು ಇಬ್ಬರೂ ಬಂದು ಶೀಟ್ ಹಾಕುವುದನ್ನು ನಿಲ್ಲಿಸಿ ನೀನು ಶೀಟ್ ಹಾಕಬೇಡ ಈ ಜಾಗದಲ್ಲಿ ನನಗೆ ಒಂದು ನಿವೇಶನ ಬರಬೇಕು ನಿವೇಶನ ಕೊಡುವವರೆವಿಗೂ ಮತ್ತು ಈ ಬಗ್ಗೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ದಾವೆ ಮುಕ್ತಾಯ ಆಗುವವರೆವಿಗೂ ಶೀಟ್ ಹಾಕಬೇಡ ಎಂತ ಹೇಳಿದರು ಅದಕ್ಕೆ ನಾನು ಈಗಾಗಲೇ ನಿಮ್ಮ ಭಾಗಕ್ಕೆ ಬಂದಿರುವ ಜಮೀನನ್ನು ನೀವು ಮಾರಿಕೊಂಡು ವಿನಾಃ ಕಾರಣ ಕೋರ್ಟ ನಲ್ಲಿ ಕೇಸ್ ಹಾಕಿಕೊಂಡು ನನಗೆ ಯಾಕೆ ತೊಂದರೆ ಕೊಡಲು ಬಂದಿದ್ದೀರಾ ಎಂದಿದ್ದಕ್ಕೆ ಹನುಮಪ್ಪ ಎಂಬುವವನು ನೀನು ಶೀಟ್ ಹಾಕಬೇಡ ಸೂಳೇ ಮಗನೇ ಎಂತ ನನ್ನನ್ನು ಹಿಡಿದುಕೊಂಡ ಆಗ ರಘು ಗಡಾರಿಯಿಂದ ನನ್ನ ಬಲ ಕೈ ಭುಜಕ್ಕೆ ಹೊಡೆದು ನೋವುಂಟು ಮಾಡಿದ.  ನಾನು ಕೆಳಕ್ಕೆ ಬಿದ್ದು ಒದ್ದಾಡುತ್ತಿದ್ದಾಗ ಅವರುಗಳಿಬ್ಬರು ನನ್ನನ್ನು ಕೈಗಳಿಂದ ಗುದ್ದಿ ಕಾಲಿನಿಂದ ಒದ್ದು ನೋವುಂಟು ಮಾಡಿ ನೀನೇನಾದರೂ ಮನೆಗೆ ಶೀಟ್ ಹಾಕಿದರೆ ನಿನ್ನನ್ನು ಕೊಲೆ ಮಾಡಿ ಸಾಯಿಸುತ್ತೇವೆಂತ ಪ್ರಾಣಬೆದರಿಕೆ ಹಾಕಿ ಹೋದರು. ಇವರು ಈ ಹಿಂದೆಯೂ ಕೂಡ ನನ್ನ ಹೊಸ ಮನೆಗೆ ಕರೆಂಟ್ ವೈರ್ ಎಳೆದುಕೊಳ್ಳುವಾಗ ತೊಂದರೆ ಮಾಡಿರುತ್ತಾರೆ, ಈ ಗಲಾಟೆಯನ್ನು ನನ್ನ ಹೆಂಡತಿ ಉಮಾ ಮತ್ತು ಅಂಜನೇಯ ಬಿನ್ ಮಲ್ಲೇಶ ರವರು ನೋಡಿರುತ್ತಾರೆ, ನಂತರ ನನ್ನನ್ನು ಆಂಜನೇಯ  ವೈ ಎನ್ ಹೊಸಕೋಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಯಂತೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು, ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂತ ಇತ್ಯಾದಿಯಾಗಿ  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 99 guests online
Content View Hits : 321531