lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2017 >
Mo Tu We Th Fr Sa Su
        1 2 3
4 5 6 7 8 9 10
11 12 13 14 15 16 17
18 19 20 21 23 24
25 26 27 28 29 30  
Friday, 22 September 2017
Crime Incidents 22-09-17

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 14/2017 ಕಲಂ 174 ಸಿ ಆರ್ ಪಿ ಸಿ

ದಿನಾಂಕ:20-09-17 ರಂದು ಮದ್ಯಾಹ್ನ 02:30 ಗಂಟೆಗೆ ಪಿರ್ಯಾದಿ ಗಾಳಪ್ಪ ಬಿನ್ ಲೇಟ್ ಸಣ್ಣಪ್ಪ, ಕದಿರೇಹಳ್ಳಿ ಗ್ರಾಮ, ಶಿರಾ  ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಮತ್ತು ಪಿರ್ಯಾದಿ ಹೆಂಡತಿ ಗಂಗಮ್ಮ ಜೀವನೋಪಯಕ್ಕಾಗಿ ಕೂಲಿಕೆಲಸ ಮಾಡುತ್ತಿದ್ದು ಇವರಿಗೆ 8ವರ್ಷದ ಹಣ್ಣು ಮಗು 6ವರ್ಷದ ಗಂಡು ಮಗು ಇದ್ದು ಪಿರ್ಯಾದಿಯವರಿಗೆ ಕದಿರೆಹಳ್ಳಿ ಗ್ರಾಮದ ಸ ನಂ 75ರಲ್ಲಿ 3 ಏಕರೆ ಜಮೀನಿ ಇದ್ದು ಸದರಿ ಜಮೀನಿನಲ್ಲಿ ಕಡಲೆಕಾಯಿ ಬೆಳೆ ಹಾಕಿದ್ದು, ಕಳೆ ಬಂದಿರುವುದರಿಂದ ಪಿರ್ಯಾದಿ ಮತ್ತು ಪಿರ್ಯಾದಿ ಹೆಂಡತಿ ಗಂಗಮ್ಮ ರವರು ಈ ದಿನ ಜಮೀನಿಗೆ ಕಳೆಕಿಳಲು ಹೋಗಿದ್ದು ಮಧ್ಯಾಹ್ನ ಸುಮಾರು 12:00 ಗಂಟೆಯಲ್ಲಿ ಪಿರ್ಯಾದಿ  ಹೆಂಡತಿ ಗಂಗಮ್ಮ ರವರು ಜಮೀನಲ್ಲಿ ಕೆಲಸ ಮಾಡುತ್ತದ್ದಾಗ ಗಂಗಮ್ಮರವರ ಬಲಪಾದದ ಬಳಿ ಯಾವುದೋ ವಿಷ ಪುರಿತ ಹಾವು ಕಚ್ಚಿದ್ದು ಚಿಕಿತ್ಸೆಗಾಗಿ ಅಕ್ಕ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಸಹಾಯದಿಂದ ಬರಗೂರು ಆಸ್ಪತ್ರಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿ ಪರೀಕ್ಷಿಸಿದ ವೈದ್ಯರು ಗಂಗಮ್ಮ ಮೃತಪಟ್ಟರುವುದಾಗಿ ತಿಳಿಸಿದ್ದು ಶವವು ಬರಗೂರು ಆಸ್ಪತ್ರಯಲ್ಲಿದ್ದು ಸ್ಥಳಕ್ಕೆ  ಬಂದು ಮುಂದಿನ ಕ್ರಮ ಜರುಗಿಸಲು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಿಲಿಸಿರುತ್ತೆ

 

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-165/2017 ಕಲಂ 160 ಐ,ಪಿ,ಸಿ

ದಿನಾಂಕ:21-09-2017 ರಂದು ರಾತ್ರಿ 09-30 ಗಂಟೆಗೆ ಠಾಣಾ ಪಿ,ಸಿ-220, ಮಂಜುನಾಥ್‌,ಎಂ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ:21-09-2017 ರಂದು ನಾನು ಗುಪ್ತ ಮಾಹಿತಿ ಸಂಗ್ರಹಿಸಲೆಂದು ನರುಗನಹಳ್ಳಿ, ಹುಳ್ಳೇನಹಳ್ಳಿ, ಚೋಳಂಬಳ್ಳಿ ಕಡೆಗಳಿಗೆ ಹೋಗಿದ್ದು, ನಂತರ ಹೊನ್ನುಡಿಕೆಗೆ ಹೋಗಿ ಹೊನ್ನುಡಿಕೆ ಉಪಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ,ಸಿ-783 ಮಹೇಶ್‌,ಎಂ,ಸಿ ರವರೊಂದಿಗೆ ಬನದಪಾಳ್ಯ, ಕಲ್ಲುಪಾಳ್ಯ, ಕೋಡಿಹಳ್ಳಿ ಕಡೆಗಳಿಗೆ ಹೋಗಲೆಂದು ಇಬ್ಬರೂ ದ್ವಿಚಕ್ರ ವಾಹನದಲ್ಲಿ ಬನದಪಾಳ್ಯದಲ್ಲಿ ಹೊನ್ನುಡಿಕೆ-ಕುದೂರು ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ, ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ಬನದಪಾಳ್ಯ ಗೇಟ್‌ನ ಬಳಿ ಇರುವ ಕಟಿಂಗ್‌ ಶಾಪ್‌ ಮುಂಭಾಗದಲ್ಲಿ ಜನಗಳು ಗುಂಪು ಕಟ್ಟಿಕೊಂಡಿದ್ದು ನಾವುಗಳು ದ್ವಿಚಕ್ರ ವಾಹನವನ್ನು ನಿಲ್ಲಿಸಿ ನೋಡಲಾಗಿ, ಎರಡು ಗುಂಪುಗಳ ಮದ್ಯೆ ಗಲಾಟೆ ನಡೆಯುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಸಾರ್ವಜನಿಕರ ನೆಮ್ಮದಿ ಹಾಗೂ ಶಾಂತಿಗೆ ಭಂಗ ಉಂಟಾಗುವಂತೆ ಹೊಡೆದಾಡುತ್ತಿದ್ದರು. ಸಮವಸ್ತ್ರದಲ್ಲಿದ್ದ ನಾವುಗಳು ಅವರುಗಳನ್ನು ಬಿಡಿಸಿ ಒಂದು ಗುಂಪಿನವರ ಹೆಸರು ವಿಳಾಸವನ್ನು ಕೇಳಲಾಗಿ, 1) ಮುನೀರ್ ಪಾಷಾ @ ತೌಫೀಕ್‌ ಬಿನ್ ಅಲ್ತಾಫ್‌ ಪಾಷಾ, 24 ವರ್ಷ, ಮುಸ್ಲಿಂ, ಎಂ,ಎಸ್ಸಿ ವಿದ್ಯಾರ್ಥಿ, ತಾವರೇಕೆರೆ, ಹೆಬ್ಬೂರು ಹೋಬಳಿ 2) ವಸೀಂ ಪಾಷಾ ಬಿನ್ ಲೇ|| ಅಬ್ದುಲ್‌ ಕರೀಂ, 24 ವರ್ಷ, ಮುಸ್ಲಿಂ, ಕೂಲಿ ಕೆಲಸ, ಹಳೇ ಪೇಟೆ, ಹುಲಿಯೂರು ದುರ್ಗ, ಕುಣಿಗಲ್‌ ತಾಲ್ಲೂಕು, ತುಮಕೂರು ಜಿಲ್ಲೆ ಎಂತಾ ತಿಳಿಸಿದರು. ಮತ್ತೊಂದು ಗುಂಪಿನವರ ಹೆಸರು ವಿಳಾಸ ಕೇಳಲಾಗಿ 1) ಶಿವರಾಜ್‌ ಕುಮಾರ್‌,ಎನ್‌ ಬಿನ್ ನಾರಾಯಣಪ್ಪ, 24 ವರ್ಷ, ಲಿಂಗಾಯಿತರು, ಜಿರಾಯ್ತಿ, ಬನದಪಾಳ್ಯ, ಹೆಬ್ಬೂರು ಹೋಬಳಿ 2) ವಸಂತ್‌ ಕುಮಾರ್,ಬಿ,ಹೆಚ್ ಬಿನ್ ಹನುಮಂತಯ್ಯ, 23 ವರ್ಷ, ಲಿಂಗಾಯಿತರು, ಪ್ರೈವೇಟ್‌ ಕಂಪನಿಯಲ್ಲಿ ಕೆಲಸ, ಬನದಪಾಳ್ಯ, ಹೆಬ್ಬೂರು ಹೋಬಳಿ ಎಂತಾ ತಿಳಿಸಿದರು. ನಂತರ ಸದರಿಯವರುಗಳನ್ನು ಗಲಾಟೆ ಮಾಡಿಕೊಳ್ಳಲು ಕಾರಣವೇನೆಂತಾ ಕೇಳಲಾಗಿ ನಾವುಗಳು ಫೇಸ್‌ ಬುಕ್‌ನಲ್ಲಿ ಕಾಮೆಂಟ್‌ ಮಾಡಿದ ವಿಚಾರವಾಗಿ ಗಲಾಟೆ ಮಾಡಿಕೊಂಡೆವೆಂತಾ ತಿಳಿಸಿದರು. ನಂತರ ಮೇಲ್ಕಂಡ ಆಸಾಮಿಗಳನ್ನು ರಾತ್ರಿ 09-30 ಗಂಟೆಗೆ ಠಾಣೆಗೆ ಕರೆತಂದು ಮಾನ್ಯ ಪಿ,ಎಸ್,ಐ ಸಾಹೇಬರವರ ಮುಂದೆ ಹಾಜರ್‌ ಪಡಿಸಿ ಈ ವರದಿಯನ್ನು ನೀಡಿರುತ್ತೇನೆ ಎಂತಾ ನೀಡಿದ ರಿಪೋರ್ಟ್‌ ಅನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಹೊನ್ನವಳ್ಳಿ ಪೊಲೀಸ್ ಠಾಣೆ    ಮೊ,ನಂ-116/2017 ಕಲಂ- 143.147.148.324.307.504.506 ರೆ,ವಿ 149 ಐಪಿಸಿ

ದಿನಾಂಕ-22/09/2017 ರಂದು ಬೆಳಿಗ್ಗೆ 1-30 ಗಂಟೆಯಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಕಬ್ಬಿನಕೆರೆ  ಕಸಬಾ ಹೋ|| ಗ್ರಾಮದ ಶ್ರೀಮತಿ ಪಾಪಮ್ಮ ಕೋಂ ಸಣ್ಣಪ್ಪ ನೀಡಿದ ಹೇಳಿಕೆ ಅಂಶವೇನೆಂದರೆ. ಪಿರ್ಯಾದಿಯ ಮದಲನೆಯ ಸೂಸೆ ದೇವಮ್ಮಳು  ದಿನಾಂಕ 21/09/2017 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಮನೆಯಿಂದ ಹೋದವಳು ವಾಪಸ್‌ ಬಾರದೇ ಇದ್ದುದರಿಂದ ದೇವಮ್ಮ ತವರು ಮನೆಗೆ ಹೋಗಿರ ಬಹುದೆಂದು ನಾವು ತಿಳಿದು ನನ್ನ ಗಂಡ ಸಣ್ಣಪ್ಪ ದೇವಮ್ಮಳ ತಂದೆ ಗುರುಸ್ವಾಮಿಗೆ ಪೋನ್‌ ಮಾಡಿ ವಿಚಾರ ತಿಳಿಸಿದ್ದು, ನಂತರ ಇದೇ ದಿನ ರಾತ್ರಿ  ಸುಮಾರು 9-00 ಗಂಟೆಗೆ ನಮ್ಮ ಮನೆಯ ಮುಂದೆ ನಾನು ಸಣ್ಣಪ್ಪ, ಮಕ್ಕಳಾದ ಕುಮಾರ,ಸಿದ್ದೇಶ ಹಾಗೂ ನಾದಿನಿ ಕಮಲಮ್ಮರೊಂದಿಗೆ ಕುಳಿತಿರುವಾಗ್ಗೆ ವೀರಭದ್ರಸ್ವಾಮಿ ಬಿನ್‌ ಗುರುಸ್ವಾಮಿ, ಕುಮಾರ ಬಿನ್‌ ಗುರುಸ್ವಾಮಿ ಹಾಗೂ ಜಯಪುರದ ಪ್ರದೀಪ ಬಿನ್‌ ಸೋಮಾಬೋವಿ ಹಾಗೂ ಚೇತನ ಬಿನ್‌ ಸೋಮಬೋವಿ  ರವರುಗಳು ಬೈಕ್‌ನಲ್ಲಿ ಮನೆಯ ಬಳಿ ಬಂದು ನಮ್ಮ ದೇವಮ್ಮ ಎಲ್ಲಿ ಎಂದು ಕೇಳಿ ಏಕಾಏಕಿ ಸೂಳೇಮಕ್ಕಳ , ಬೀಳಿಮಕ್ಕಳ ಅಂತ ಬೈದು ವೀರಭದ್ರಸ್ವಾಮಿಯು ತನ್ನ ಕೈಯಲ್ಲಿದ್ದ ರಾಡಿನಿಂದ ಸಿದ್ದೇಶನ ತಲೆಗೆ  ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿದ, ಆತನ ಜೊತೆಯಲ್ಲಿ ಬಂದಿದ್ದ  ಯೋಗೀಶನು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಪಿರ್ಯಾದಿಯ ಗಂಡ ಸಣ್ಣಪ್ಪನಿಗೆ ತಲೆಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತ ಗಾಯ ಮಾಡಿರುತ್ತಾರೆ, ಹಾಗೂ ಪ್ರದೀಪ ತನ್ನ ಕೈಯಲ್ಲಿದ್ದ ದೊಣ್ಣೇಯಿಂದ ನ್ನ ಬಲ ಕೈಗೆ ಹೊಡೆದು ಗಾಯ ಪಡಿಸಿರುತ್ತಾನೆ , ಆಗ ಸ್ಥಳದಲ್ಲಿದ್ದ ಕಮಲಮ್ಮ ನನ್ನ ಸೂಸೆ ಸುನಂದ ರವರು ಜಗಳ ಬಿಡಿಸಿ ಸಮಾಧಾನ ಮಾಡಿರುತ್ತಿರುವಾಗ ನಮ್ಮ ದೇವಮ್ಮಳನ್ನು ಮನೆಗೆ ಕರೆದುಕೊಂಡು ಬರದಿದ್ದರೆ ನಿಮ್ನ್ನು ಜೀವಂತವಾಗಿ ಭೂಮಿಯ ಮೇಲೆ ಉಳಿಸುವುದಿಲ್ಲಾ ಕೊಲೆ ಮಾಡುತ್ತೇವೆ   ಎಂದು ಪ್ರಾಣ ಬೆದರಿಕೆ ಹಾಕಿ ತಮ್ಮ ಕೈಯಲ್ಲಿದ್ದ ರಾಡ್‌ ಮತ್ತು ದೊಣ್ಣೆಗಳನ್ನು ಅಲ್ಲಿ ಬಿಸಾಡಿ ಹೋಗಿರುತ್ತಾರೆ. ಗಯಗೊಂಡ ನಮ್ಮನ್ನು 108 ಅಂಬುಲೇನ್ಸ್‌  ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದು ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತಾರೆ .ಆದ್ದರಿಂದ ನಮ್ಮ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ರಕ್ತಗಾಯ ಪಡಿಸಿದ ಮೇಲ್ಕಂಡವರ  ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆಯ್ನು ಪಡೆದು ವಾಪಸ್ ಠಾಣೆಗೆ  ಪ್ರಕರಣ ದಾಖಲಿಸಿರುತ್ತೇನೆ.

ಹೊನ್ನವಳ್ಳಿ ಪೊಲೀಸ್ ಠಾಣೆ   ಮೊ,ನಂ-115/2017 ಕಲಂ- 324 504 506 ರೆ,ವಿ 34 ಐಪಿಸಿ

ದಿನಾಂಕ-22/09/2017 ರಂದು ಬೆಳಿಗ್ಗೆ 12-45 ಗಂಟೆಯಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಕಾಟಮ್ಮದೇವರ ಹಟ್ಟಿ ಕಂದಿಕೆರೆ ಹೋ|| ಗ್ರಾಮದ ವೀರಭದ್ರಸ್ವಾಮಿ ಬಿನ್‌ ಗುರುಸ್ವಾಮಿ  ರವರು ನೀಡಿದ ಹೇಳಿಕೆ ಅಂಶವೇನೆಂದರೆ. ಪಿರ್ಯಾದಿಯ ತಂಗಿ ದೇವಮ್ಮಳನ್ನು ಈಗ್ಗೆ ಸುಮಾರು 8 ವರ್ಷಗಳ ಹಿಂದೆ ಕಬ್ಬಿನಕೆರೆ ಗ್ರಾಮದ ತೋಟದ ಮನೆಯ ವಾಸಿ ಕುಮಾರ ಬಿನ್‌ ಸಣ್ಣಪ್ಪ ನಿಗೆ ವಿವಾಹಮಾಡಿ ಕೊಟ್ಟಿದ್ದು,  ದಿನಾಂಕ-21/09/2017 ರಂದು ಸಂಜೆ ಸಣ್ಣಪ್ಪ ಫೋನ್‌ ಮಾಡಿ ದೇವಮ್ಮ ಮದ್ಯಾಹ್ನ  ಮನೆಯಿಂದ ಹೋದವಳು ಬಂದಿರುವುದಿಲ್ಲಾ ನಿಮ್ಮ ಮನೆಗೆ ಬಂದಿರುತ್ತಾಳಾ ಇಲ್ಲವೋ ಎಂದು ವಿಚಾರ ಮಾಡಿದ್ದು, ಸಂಜೆಯಾದರು ಪಿರ್ಯಾದಿಯ ತಂಗಿ ಮನೆಗೆ ಬರದ ಕಾರಣ, ಅನುಮಾನ ಬಂದು ನಾನು,ಜಯಪುರ ವಾಸಿ ಪ್ರದೀಪ ಬಿನ್‌ ಸೋಮಬೋವಿ,ನಮ್ಮ ಗ್ರಾಮದ ನವೀನ ಬಿನ್‌ ಲೇ|| ನರಸಿಂಹಯ್ಯ ಮತ್ತು ಯೋಗೀಶ ಬಿನ್‌ ಲೇ|| ಹನುಮಂತಯ್ಯರವರ ಜೊತೆ ಕಬ್ಬಿನಕೆರೆ ಗ್ರಾಮದ ವಾಸಿ ನಮ್ಮ ಮಾವನ ಮನೆಗೆ ರಾತ್ರಿ 8-30 ಗಂಟೆಗೆ ಹೋಗಿ ನನ್ನ ತಂಗಿ ಎಲ್ಲಿ ಎಂತ ಕೇಳಿದಕ್ಕೆ ಏಕಾಏಕಿ ಜಗಳ ತೆಗೆದು ಪಾಪಮ್ಮಲು ಕಾರದ ಪುಡಿಯನ್ನು ಎರಚಿದಾಗ ಕುಮಾರ ತನ್ನ ಕೈಯಲ್ಲಿ ರಾಡನ್ನು ಹಿಡಿದುಕೊಂಡು ಬಂದು ಪ್ರದೀಪ ಮತ್ತು ಯೋಗೀಶನ ತಲೆಗೆ ಹೋಡೆದು ರಕ್ತಗಾಯ ಪಡಿಸಿದರು ಸಣ್ಣಪ್ಪ ಪಿರ್ಯಾದಿಗೆ ಕಲ್ಲಿನಿಂದ ಹೊಡೆದು ಗಾಯ ಪಡಿಸಿದರು ಅಲ್ಲದೇ ಮೇಲ್ಕಂಡ ಪಾಪಮ್ಮ ಸಣ್ಣಪ್ಪ ಕುಮಾರ ಸಿದ್ದೇಶ ರವರುಗಳು ಬೋಳಿಮಕ್ಕಳ ಸೂಳೇಮಕ್ಕಳ ನಮ್ಮ ಮನೆಯ ಬಾಗಿಲಿಗೆಬಂದು ನಮ್ಮನ್ನೇ ಕೇಳುತ್ತಿರಾ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲಾ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ . ಸ್ಥಳದಲ್ಲಿದ್ದ ನವೀನ ಜಗಳ ಬಿಡಿಸಿ ಗಾಯಾಗಗೊಂಡ ನಮ್ಮನ್ನು ಬೈಕಿನಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿರುತ್ತಾರೆ .ಮೇಲ್ಕಂಡ ನಾಲ್ಕು ಜನರ  ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆಯ್ನು ಪಡೆದು ವಾಪಸ್ ಠಾಣೆಗೆ ಬೆಳಿಗ್ಗೆ  02-00 ಗಂಟೆಗೆ ಬಂದು ಪ್ರಕರಣ ದಾಖಲಿಸಿರುತ್ತೇನೆ.


Crime Incidents 21-09-17

ಜಯನಗರ ಪೊಲೀಸ್ ಠಾಣೆ ಮೊ.ಸಂ 16/2017 ಕಲಂ 174 (c) Crpc

 

ದಿನಾಂಕ: 21/09/2017 ರಂದು ರಾತ್ರಿ 7.30 ಗಂಟೆಯ ಸಮಯದಲ್ಲಿ ತುಮಕೂರು ಟೌನ್‌ ಜಯನಗರ ಪೂರ್ವ 2 ನೇ ಮೈನ್‌ ರಸ್ತೆಯಲ್ಲಿ ವಾಸವಾಗಿರುವ ಸತೀಶ್‌‌ ಸಿ.ಎ  ಬಿನ್. ಲೇ|| ಸಿ.ಎಸ್. ಅನಂತರಾಮು ಎಂಬುವವರು ಠಾಣೆಗೆ ಹಾಜರಾಗಿ, ನಮಗೆ ಸಿ.ಎಸ್. ಸುಪ್ರಜ ಎಂಬ ಒಬ್ಬಳೇ ಮಗಳಿದ್ದು, ಆಕೆಯು ತುಮಕೂರು ಟೌನ್ ಬಟವಾಡಿಯಲ್ಲಿರುವ ಸಿದ್ದಗಂಗಾ ಪಾಲಿಟೆಕ್ನಿಕ್‌‌ ಕಾಲೇಜಿನಲ್ಲಿ ಅಂತಿಮ ವರ್ಷದ ಡಿಪ್ಲೋಮೋ ವ್ಯಾಸಂಗ ಮಾಡುತ್ತಿದ್ದಳು. ನನ್ನ ಪತ್ನಿ ಲಲಿತಾ ಡಿ.ಎನ್. ಇದೇ ತುಮಕೂರು ಟೌನ್ ವಿಜಯನಗರದಲ್ಲಿರುವ ಸರ್ವೋದಯ ಪ್ರೈಮರಿ ಸ್ಕೂಲ್‌‌ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುತ್ತಾರೆ. ನಾನು ಪ್ರತಿದಿನ ಬೆಳಿಗ್ಗೆ ಸುಮಾರು 8-00 ಗಂಟೆಗೆ ಮನೆಯನ್ನು ಬಿಟ್ಟು ನನ್ನ ಹೆಂಡತಿ ಲಲತಾಳನ್ನು ಸ್ಕೂಲಿಗೆ ಬಿಟ್ಟು ಕೆಲಸಕ್ಕೆ ಹೋಗುತ್ತಿರುತ್ತೇನೆ.   ನಾವಿಬ್ಬರೂ ಕೆಲಸಕ್ಕೆ ಹೋದ ನಂತರ ನಮ್ಮ ಮಗಳು ಸುಪ್ರಜ ಕಾಲೇಜಿಗೆ ಬೆಳಿಗ್ಗೆ 8-15 ಕ್ಕೆ ಹೋಗಿ ಸಾಯಂಕಾಲ ಸುಮಾರು 4-45 ಕ್ಕೆ ಮನೆಗೆ ಬರುತ್ತಿದ್ದಳು.  ಪ್ರತಿದಿನದಂತೆ ನಾನು, ನನ್ನ ಹೆಂಡತಿ ಲಲಿತಾ ಈ ದಿನ ಬೆಳಿಗ್ಗೆ ಮನೆಯಲ್ಲಿ ತಿಂಡಿ ತಿಂದು ಬೆಳಿಗ್ಗೆ 8-00 ಗಂಟೆಗೆ ಮನೆಯನ್ನು ಬಿಟ್ಟು, ನನ್ನ ಹೆಂಡತಿಯನ್ನು ಅವರ ಸ್ಕೂಲ್‌‌ ಬಳಿ ಬಿಟ್ಟು ನಾನು ಶ್ರೀದೇವಿ ಇಂಜಿನಿಯರಿಂಗ್‌ ಕಾಲೇಜಿಗೆ ಹೋಗಿದ್ದೆನು. ಸಾಯಂಕಾಲ ವಾಪಾಸ್ಸು ಬೈಕಿನಲ್ಲಿ ಬರುವಾಗ ಪೋನ್‌‌ ರಿಂಗ್‌ ಆಗಿದ್ದು, ನಾನು ಬೈಕ್‌‌ನಲ್ಲಿ ಬರುತ್ತಿದ್ದರಿಂದ ಪೋನ್‌‌ ರಿಸೀವ್‌‌ ಮಾಡಲಿಲ್ಲ, ಸುಮಾರು 5-00 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಬಳಿಗೆ ಬಂದಾಗ ನಮ್ಮ ಮನೆಯ ಮುಂದೆ ಜನರು ಗುಂಪು ಸೇರಿದ್ದು, ಮನೆಯ ಮುಂದೆ ನನ್ನ ತಮ್ಮ ಮಹೇಶ್‌‌ ಹಾಗೂ ನನ್ನ ಹೆಂಡತಿ ಜೋರಾಗಿ  ಆಳುತ್ತಿದ್ದು, ನಮ್ಮ ಮಗಳು ಸುಪ್ರಜ ಮಹಡಿಯ ಮೇಲೆ ರೂಮಿನಲ್ಲಿ ನೇಣು ಹಾಕಿಕೊಂಡಿದ್ದಾಳೆಂತಾ ತಿಳಿಸಿದರು.  ನಾನು ಗಾಬರಿಯಲ್ಲಿ ಮಹಡಿಯ ಮೇಲೆ ರೂಮಿನ ಬಳಿಗೆ ಹೋಗಿ ನೋಡಲಾಗಿ ನಮ್ಮ ಮಗಳೂ ಸುಪ್ರಜ ಚೂಡೀಧಾರ್‌‌ನ ವೇಲಿನಿಂದ ಕುತ್ತಿಗೆಗೆ ಬಿಗಿದುಕೊಂಡು ರೂಮಿನಲ್ಲಿರುವ ಪ್ಯಾನಿಗೆ ನೇಣುಹಾಕಿಕೊಂಡು ಮೃತಪಟ್ಟು ನೇತಾಡುತ್ತಿದ್ದಳು. ನನ್ನ ಹೆಂಡತಿಯನ್ನು ವಿಚಾರ ಮಾಡಿದ್ದಕ್ಕೆ ನಾನು ಸಾಯಂಕಾಲ ಸುಮಾರು 4-30 ಗಂಟೆಗೆ ಮನೆಗೆ ಬಂದಿದ್ದು, ಮನೆಯ ಮುಂದೆ ಕಾಂಪೌಂಡ್‌‌ನಲ್ಲಿ ಸಪ್ರಜಳ ಸ್ಕೂಟರ್‌‌ ನಿಂತಿದ್ದು, ಮುಂಬಾಗಲಿನ ಬೀಗ ತೆಗೆದು ಒಳಗೆ ಹೋಗಿದ್ದು, ಸುಪ್ರಜಳನ್ನು ಕೂಗಿದೆನು. ಮಾತನಾಡದೇ ಇದ್ದರಿಂದ ಎಲ್ಲೋ ಸುಪ್ರಜಳು ಮಲಗಿರಬಹುದೆಂದು ನಾನು ಮನೆಯ ಕೆಲಸ ಮಾಡುತ್ತಿದ್ದು, ಕಾಫಿ ಮಾಡಿಕೊಂಡು ಈಗ 5 ನಿಮಿಷ ಮುಂಚೆ ಸುಪ್ರಜಳಿಗೆ ಕೊಡಲು ಆಕೆಯ ರೂಮಿನ ಬಳಿಗೆ ಹೋದಾಗ ಆಕೆಯು ಯಾವಾಗಲೋ ನೇಣುಹಾಕಿಕೊಂಡು  ಮೃತಪಟ್ಟು ನೇತಾಡುತ್ತಿದ್ದಳೆಂತಾ  ವಿಚಾರ ತಿಳಿಸಿದಳು.   ನಮ್ಮ ಮಗಳು ಯಾವ ಕಾರಣಕ್ಕಾಗಿ ಈ ರೀತಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆಂತಾ ನಮಗೆ ಗೊತ್ತಿರುವುದಿಲ್ಲ.  ಆಕೆಯು ವಿದ್ಯಾಬ್ಯಾಸದಲ್ಲಿ ಬೇಸರಗೊಂಡೋ, ಇಲ್ಲವೇ ಸ್ನೇಹಿತರ ಮೇಲೆ ಬೇಜಾರು ಮಾಡಿಕೊಂಡೋ ಅಥವಾ ಇನ್ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೇ ಈ ರೀತಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಎಂತ ಕಂಡುಬಂದಿರುತ್ತೆ. ಆದರು ಸಹ ನನ್ನ ಮಗಳ ಸಾವಿನಲ್ಲಿ ಅನುಮಾನ ಇರುತ್ತದೆ.  ತಾವು ದಯಮಾಡಿ ಮುಂದಿನ ಕ್ರಮ ಜರುಗಿಸಿ ನನ್ನ ಮಗಳ ಸಾವಿನ ಬಗ್ಗೆ ಸ್ಪಷ್ಟ ಕಾರಣವನ್ನು ತಿಳಿಸಿಕೊಡಲು ಕೋರುತ್ತೇನೆಂತ  ಇತ್ಯಾದಿಯಾಗಿ ಪಿರ್ಯಾದಿ ಅಂಶವಾಗಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 96 guests online
Content View Hits : 321530