lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ:16-11-2017 ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 261 /2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ:05-11-2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ :... >>   Date: 03-11-2017       ದಿನಾಂಕ : 03-11-2017 ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಎರಡು... >>   ಪತ್ರಿಕಾ ಪ್ರಕಟಣೆ. DATE: 02-11-17 ವೃದ್ದೆಯರಿಂದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿ... >> ಪತ್ರಿಕಾ ಪ್ರಕಟಣೆ ದಿನಾಂಕ: 30/10/2017 ದಿನಾಂಕ/30/10/17 ರಂದು ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ... >> ಪತ್ರಿಕಾ ಪ್ರಕಟಣೆ ದಿನಾಂಕ : 25/10/2017 ತುಮಕೂರು ನಗರದಲ್ಲಿ ಕೆ.ಎಸ್.ಅರ್.ಟಿ.ಸಿ.... >> -: ಪತ್ರಿಕಾ ಪ್ರಕಟಣೆ :- ದಿನಾಂಕ : 25/10/17 ತುಮಕೂರು ಜಿಲ್ಲೆ. ಕುಣಿಗಲ್ ಪೊಲೀಸರು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< September 2017 >
Mo Tu We Th Fr Sa Su
        1 2 3
4 5 6 7 8 9 10
12 13 14 15 16 17
18 19 20 21 22 23 24
25 26 27 28 29 30  
Monday, 11 September 2017
Press Note 11-09-17

:: ಪತ್ರಿಕಾ ಪ್ರಕಟಣೆ   ::

 

: ದಿನಾಂಕ 11/09/2017  :

 


ದಿನಾಂಕ 02/09/2017 ರಂದು ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 97/2017 ಕಲಂ 302, 201 ಐ.ಪಿ.ಸಿ. ಪ್ರಕರಣವೊಂದು ದಾಖಲಾಗಿದ್ದು, ಪ್ರಕರಣದ ಆರೋಪಿ ಪತ್ತೆಗೆ ತುಮಕೂರು ಜಿಲ್ಲಾ ಎಸ್.ಪಿ. ಶ್ರೀಮತಿ ಡಾ// ದಿವ್ಯಾ ಗೋಪಿನಾಥನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಡಾ// ಶೋಭಾರಾಣಿ ರವರ ಮಾರ್ಗದರ್ಶನದಲ್ಲಿ ಕುಣಿಗಲ್ ಡಿ.ವೈ.ಎಸ್.ಪಿ. ಶ್ರೀ ಚಂದ್ರಶೇಖರ್ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ದಿನಾಂಕ 08/09/2017 ರಂದು ಆರೋಪಿ ಬಸವೇಶ (ಸುಮಾರು 34ವರ್ಷ) ಈತನನ್ನು  ದಸ್ತಗಿರಿ ಮಾಡಿ ತನಿಖೆಯನ್ನು ಕೈಗೊಳ್ಳಲಾಗಿ, ದಿನಾಂಕ 01/09/2017 ರ ರಾತ್ರಿ 10 ರಿಂದ 12 ಗಂಟೆಯ ಒಳಗೆ ದಂಡಿನಶಿವರ ಪೊಲೀಸ್ ಠಾಣೆ ಸರಹದ್ದು ಹಾಲುಗೊಂಡನಹಳ್ಳಿ ಗ್ರಾಮದ ಲೇಟ್ ಚನ್ನಬಸವಯ್ಯನವರ ಕಿರಿಯ ಮಗ ಬಸವೇಶನು ತನ್ನ ಅಣ್ಣ ಹಂಸಕುಮಾರನಿಗೆ (ಸುಮಾರು 38 ವರ್ಷ) ದಿನಾಂಕ 02/09/2017 ರಂದು ಹೆಣ್ಣು ನೋಡಿ ನಿಶ್ಚಿತಾರ್ಥ ಮಾಡಿಕೊಂಡು ಬರಲು ಹೊರಟಿದ್ದನ್ನು ತಿಳಿದು, ಆತನು ಮದುವೆಯಾದರೆ ಆಸ್ತಿಯಲ್ಲಿ ಎರಡು ಪಾಲು ಆಗುತ್ತದೆಂಬ ದುರಾಲೋಚನೆಯಿಂದ ಯೋಚಿಸಿ ಈತನನ್ನು ಸಾಯಿಸಿದರೆ ಪೂರ್ಣ ಪಾಲು ತನಗೆ ಬರುತ್ತದೆಂಬ ದುರಾಸೆಯಿಂದ ದಿನಾಂಕ 01/09/2017 ರ ರಾತ್ರಿ 10-00 ಗಂಟೆಗೆ ಮೃತ ಹಂಸಕುಮಾರನು ಮನೆಗೆ ಬಂದು ನಡುಮನೆಯಲ್ಲಿ ದಿವಾನ್ಕಾಟ್ ಮೇಲೆ ಮಲಗಿದ್ದು ಗಾಢನಿದ್ರೆಯಲ್ಲಿದ್ದಾಗ ಆರೋಪಿ ಬಸವೇಶನು ಮೊದಲೇ ನಿರ್ಧರಿಸಿದಂತೆ ಪೆಟ್ರೋಲ್ ಮತ್ತು ಡೀಸಲ್ನ್ನು ಹೊಂದಿಸಿಟ್ಟು ಕೊಂಡು ರಾತ್ರಿ 10-45 ಗಂಟೆಯ ನಂತರ ಗೊರಕೆ ಹೊಡೆಯುತ್ತಿದ್ದ ಹಂಸಕುಮಾರನನ್ನು ಹಗ್ಗದಿಂದ ಕುತ್ತಿಗೆಗೆ ಬಲವಂತವಾಗಿ ಬಿಗಿದು, ಆತನನ್ನು ಸಾಯಿಸಿ ಕೊಲೆ ಮಾಡಿದ್ದು, ಶವವನ್ನು ಮನೆಯ ಹಿಂಬಾಗದಲ್ಲಿದ್ದ ಕಾರಿನವರೆಗೆ ಎಳೆದುಕೊಂಡು ಹೋಗಿ ಕಾರಿನಲ್ಲಿ ಮಲಗಿಸಿ, ಆರೋಪಿಯು ಸ್ವತಹ ಕಾರನ್ನು ಚಾಲನೆ ಮಾಡಿಕೊಂಡು ತನ್ನ ತೋಟದಲ್ಲಿ ಇರುವ ಹುಣಿಸೇಮರದ ಬಳಿ ತಂದು ನಿಲ್ಲಿಸಿ, ಡ್ರೈವರ್ ಸೀಟನ್ನು ಪುಶ್ಬ್ಯಾಕ್ ಮಾಡಿ ಶವವನ್ನು ಮಲಗಿಸಿ ಮೊದಲೇ ಸಿದ್ದಪಡಿಸಿಟ್ಟು ಕೊಂಡಿದ್ದ ಪೆಟ್ರೋಲ್ ಮತ್ತು ಡೀಸಲ್‌ ನ್ನು  ಹಂಸಕುಮಾರನ ಹೆಣದ ಮೇಲೆ ಮತ್ತು ಕಾರಿಗೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿರುತ್ತಾನೆ.

ಆರೋಪಿಯನ್ನು ತುರುವೇಕೆರೆ ಘನ ನ್ಯಾಯಾಲಯಕ್ಕೆ ಹಾಜರ್ ಪಡಿಸಿದ್ದು ನ್ಯಾಯಂಗ ಬಂದನಕ್ಕೆ ಆದೇಶವಾಗಿರುತ್ತೆ. ಆರೋಪಿಯ ಪತ್ತೆಕಾರ್ಯದಲ್ಲಿ ತನಿಖಾದಿಕಾರಿಯಾದ ತುರುವೇಕೆರೆ ವೃತ್ತ ನಿರೀಕ್ಷಕರಾದ ಶ್ರೀ ಸಿ. ಡಿ. ಜಗದೀಶ್, ದಂಡಿನಶಿವರ ಠಾಣೆ ಪಿ.ಎಸ್.ಐ ಶ್ರೀ ಆರ್.ಎಸ್. ಶೆಟ್ಟಾಳಪ್ಪ, ತುರುವೇಕೆರೆ ಠಾಣೆ ಪಿ.ಎಸ್.ಐ ಶ್ರೀ ನವೀನ್‌ ಕುಮಾರ್ ಮತ್ತು ಸಿಬ್ಬಂದಿಗಳಾದ ಶ್ರೀ ಡಿ.ಕೃಷ್ಣಪ್ಪ, ವೆಂಕಟೇಶ್, ಮಂಜುನಾಥ್, ಚಾಲಕ ಕೆ.ಜಿ. ಪರಮೇಶ್, ಮದುಸೂಧನ್ ಮತ್ತು ರಾಜಕುಮಾರ್ ರವರು ಬಾಗವಹಿಸಿದ್ದರು. ಪತ್ತೆಕಾರ್ಯದಲ್ಲಿ ಭಾಗವಹಿಸಿದ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ.


Crime Incidents 11-09-17

ಹೆಬ್ಬೂರು  ಪೊಲೀಸ್ ಠಾಣಾ ಯು,ಡಿ,ಆರ್ ನಂ-23/2017 ಕಲಂ 174 ಸಿ,ಆರ್,ಪಿ,ಸಿ

ದಿನಾಂಕ: 10-09-2017 ರಂದು ಮದ್ಯಾಹ್ನ 01-30 ಗಂಟೆಗೆ ಪಿರ್ಯಾದುದಾರರಾದ ಧನಲಕ್ಷ್ಮಮ್ಮ ಕೋಂ ಕುಮಾರ್‌, 35 ವರ್ಷ, ವಕ್ಕಲಿಗರು, ಗಾಮೇಂಟ್ಸ್ ನಲ್ಲಿ ಕೆಲಸ, ಬಿದರಕಟ್ಟೆ, ಗೂಳೂರು ಹೋಬಳಿ, ತುಮಕೂರು ತಾಲ್ಲೋಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ನನಗೆ ಸುಮಾರು 15 ವರ್ಷಗಳ ಹಿಂದೆ ಬಿದರಕಟ್ಟೆ ಗ್ರಾಮದ ಕುಮಾರ್‌‌ ಬಿನ್‌ ಕೆಂಪಗಿರಯ್ಯ ರವರೊಂದಿಗೆ ಮದುವೆಯಾಗಿದ್ದು, ನನಗೆ ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ನಾನು ಮತ್ತು ನನ್ನ ಗಂಡ ಸಂಸಾರದಲ್ಲಿ ಅನ್ಯೂನ್ಯವಾಗಿದ್ದು, ನಾವಿಬ್ಬರು ಗಾರ್ಮೆಟ್ಸ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದೇವು. ನನ್ನ ಗಂಡನಾದ ಕುಮಾರ್‌ ರವರಿಗೆ ಈಗ್ಗೆ ಸುಮಾರು 3 ರಿಂದ 4 ವರ್ಷಗಳಿಂದ ಹೊಟ್ಟೆ ನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹ ಗುಣಮುಖರಾಗಿರಲಿಲ್ಲ. ಸದರಿ ವಿಚಾರವಾಗಿ ನನ್ನ ಗಂಡ ಕುಮಾರ್ ರವರು ನನಗೆ ಹೊಟ್ಟೆ ನೋವು ವಾಸಿಯಾಗಲಿಲ್ಲವೆಂತ ಯಾವಾಗಲೂ ಯೋಚಿಸುತ್ತಾ ಜಿಗುಪ್ಸೆ ಹೊಂದಿದ್ದರು. ಈಗಿರುವಾಗ್ಗೆ, ಇದೇ ದಿವಸ ಅಂದರೆ ದಿನಾಂಕ 10/08/2017 ರಂದು ಬೆಳಿಗ್ಗೆ 8-00 ಗಂಟೆಯಿಂದ ನಾನು ಹಾಗೂ ನನ್ನ ಗಂಡನಾದ ಕುಮಾರ್‌‌ ರವರು ನಮ್ಮ ಹಳೆಯ ಮನೆಯ ಹತ್ತಿರ ಹೆಂಚನ್ನು ಕೆಳಗಿಳಿಸುತ್ತಿದ್ದು, ಬೆಳಿಗ್ಗೆ ಸುಮಾರು 11-00 ಗಂಟೆಗೆ ಹೆಂಚನ್ನು ಕೆಳಗಿಳಿಸುವಾಗ ನನ್ನ ಗಂಡ ಕುಮಾರ್ ರವರು ಹೊಟ್ಟೆ ನೋವು ಎಂತ ನನಗೆ ತಿಳಿಸಿದರು. ನಂತರ ಅವರು ನಮ್ಮ ಹಳೆಯ ಮನೆಯ ಪಕ್ಕದಲ್ಲಿಯೇ ಇರುವ ಹೊಸ ಮನೆಯ ಹತ್ತಿರ ಮಲಗುವುದಾಗಿ ಹೇಳಿ ಹೋದರು. ನಂತರ ನಾನು ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ನಮ್ಮ ಹೊಸ ಮನೆಯ ಹತ್ತಿರ ಹೋಗಿ ನೋಡಲಾಗಿ ನನ್ನ ಗಂಡ ಕುಮಾರ್ ರವರು ನಮ್ಮ ಹೊಸ ಮನೆಯ ರೂಮ್‌ನಲ್ಲಿ ಒಂದು ಸೀರೆಯಿಂದ ಮನೆಯ ಮೇಲ್ಛಾವಣಿಗೆ ಶೀಟ್‌ಗಳನ್ನು ಹಾಕಲು ಅಳವಡಿಸಿರುವ ಕಬ್ಬಿಣದ ಪೈಪ್‌ಗೆ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾರೆ. ನನ್ನ ಗಂಡ ಕುಮಾರ್‌ ರವರು ತಮಗೆ ಬರುತ್ತಿದ್ದ ಹೊಟ್ಟೆ ನೋವಿನ ಬಾಧೆ ತಾಳಲಾರದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ತಮ್ಮಷ್ಟಕ್ಕೆ ತಾವೇ ಸೀರೆಯಿಂದ ಮನೆಯ ಮೇಲ್ಛಾವಣಿಯ ಕಬ್ಬಿಣದ ಪೈಪ್‌ಗೆ ಇದೇ ದಿವಸ ಬೆಳಿಗ್ಗೆ 11-00 ಗಂಟೆಯಿಂದ ಮದ್ಯಾಹ್ನ 12-30 ಗಂಟೆ ಸಮಯದ ಮದ್ಯೆ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾರೆಯೇ ವಿನಃ ಅವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಆದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಗಂಡ ಕುಮಾರ್‌ ರವರ ಮೃತ ದೇಹವು ನಮ್ಮ ಹೊಸ ಮನೆಯಲ್ಲಿ ನೇಣು ಬಿಗಿದುಕೊಂಡಂತಹ ಸ್ಥಿತಿಯಲ್ಲಿರುತ್ತೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ

ಹೊಸಬಡಾವಣೆ ಪೊಲೀಸ್ ಠಾಣಾ ಮೊ ನಂ 107/2017 U/S 454, 457, 380 IPC

ದಿನಾಂಕ:-10/09/2017 ರಂದು  ಮದ್ಯಾಹ್ನ  01-30 ಗಂಟೆಗೆ ಪಿರ್ಯಾದಿ ಹೆಚ್,ಬಿ. ಶಿವದೇವ್ ಬಿನ್ ಲೇಟ್ ಬಸಪ್ಪ. ವಾಸ :- ಪಾರ್ವತಿ ನಿಲಯ, 4ನೇ ಮೈನ್, 2ನೇ ಬ್ಲಾಕ್, ಕುವೆಂಪುನಗರ, ತುಮಕೂರು ರವರು ನೀಡಿದ  ದೂರಿನ ಸಾರಾಂಶವೆನೆಂದರೆ  ಪಿರ್ಯಾದಿಯು  ದಿನಾಂಕ:- 08/09/2017 ರಂದು  ಸಂಜೆ ಸುಮಾರು 05-00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದು  ಈ ದಿವಸ ಬೆಳಗ್ಗೆ ಪಿರ್ಯಾದಿ ಮನೆ ಹತ್ತಿರ ವಾಸವಾಗಿರುವ ಲಕ್ಷ್ಮಣ ರವರು ಪಿರ್ಯಾದಿಗೆ ಫೋನ್ ಮಾಡಿ  ಮನೆಯ ಕೊಲಾಪ್ಸಬಲ್ ಗೇಟ್ ಗೆ ಹಾಕಲಾಗಿದ್ದ ಬೀಗಗಳು ಕೆಳಗೆ ಬಿದ್ದಿರುತ್ತವೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿಯು ತಿಪಟೂರಿನಿಂದ ಬಂದು  ನೋಡಲಾಗಿ ಮನೆಯ ಕೊಲಾಪ್ಸಬಲ್ ಗೇಟ್ ಮತ್ತು ಮುಖ್ಯ ದ್ವಾರಕ್ಕೆ ಹಾಕಲಾಗಿದ್ದ ಬೀಗಗಳನ್ನ ಯಾರೋ ಕಳ್ಳರು ಜಖಂ ಮಾಡಿ  ಒಳಪ್ರವೇಶಿಸಿ ಮನೆಯ ಬೀರುವಿನಲ್ಲಿದ್ದ ಬೀರು ಮತ್ತು ವಾಲ್ ಡ್ರಾಬ್ ಗಳಲ್ಲಿದ್ದ  277 ಗ್ರಾಂ ತೂಕದ ಚಿನ್ನದ ಒಡೆವೆಗಳು  ಹಾಗೂ ಅರ್ದ ಕೆ,ಜಿ. ತೂಕದ ಬೆಳ್ಳಿ ಚೆಂಬು. ಅರ್ದ ಕೆಜಿ ತೂಕದ ಬೆಳ್ಳಿ ತಟ್ಟೆ,  04 ಜೊತೆ  ಬೆಳ್ಳಿ ಕುಂಕುಮದ ಬಟ್ಟಲುಗಳು,  04 ಜೊತೆ ಬೆಳ್ಳಿ ದೀಪಗಳು,  02 ಜೊತೆ ಸುಮಾರು 400 ಗ್ರಾಂ ತೂಕದ ಬೆಳ್ಳಿ ಲೋಟಗಳು, ಒಂದು ಸುಮಾರು 200 ಗ್ರಾಂ ತೂಕದ ಬೆಳ್ಳಿ ಪಂಚಪಾತ್ರೆ,  ಸುಮಾರು 25 ಗ್ರಾಂ ತೂಕದ ಬೆಳ್ಳಿ ಉದ್ದರಣಿ, 02 ಜೊತೆ ಬೆಳ್ಳಿ ಕಾಲುಚೈನುಗಳು, ಮತ್ತು 02 ಟೈಟಾನ್ ಲೇಡಿಸ್ ವಾಚುಗಳು ಮತ್ತು ಒಂದು ಹೆಚ್ ಎಂ ಟಿ ವಾಚು ಮತ್ತು 8,000/- ರೂ ನಗದು ಹಣವನ್ನ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾಗಿರುವ ಚಿನ್ನಾಭರಣಗಳು  ಸುಮಾರು 4,00,000/- ( ನಾಲ್ಕು ಲಕ್ಷ ) ರೂ, ಬೆಳ್ಳಿ ಸಾಮಾನುಗಳು ಸುಮಾರು 50,000/- ( ಐವತ್ತು ಸಾವಿರ ) ರೂ , ವಾಚುಗಳು ಸುಮಾರು 5000/- ಮತ್ತು 8000/- ರೂ ನಗದು ಹಣವಾಗಿರುತ್ತದೆ.  ಈ ಬಗ್ಗೆ ಕ್ರಮಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ

 

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.17/2017, ಕಲಂ:174 ಸಿ.ಆರ್.ಪಿ.ಸಿ

ದಿನಾಂಕ:10/09/2017 ರಂದು ಬೆಳಿಗ್ಗೆ 08:10 ಗಂಟೆಗೆ ಪಿರ್ಯಾದಿ ವೆಂಕಟೇಶ ನಾಯ್ಕ ಬಿನ್ ಗೋವಿಂದ ನಾಯ್ಕ, 45 ವರ್ಷ, ಲಂಬಾಣಿ ಜನಾಂಗ, ಚಿಕ್ಕಯಲ್ಕೂರು ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನಗೆ 01 ಗಂಡು, 01 ಹೆಣ್ಣು ಮಗಳಿರುತ್ತಾಳೆ, ನನ್ನ ಮಗಳಾದ 20 ವರ್ಷದ ಸವಿತ.ವಿ. ಎಂಬುವರು ಮಧುಗಿರಿಯಲ್ಲಿ 03 ನೇ ವರ್ಷದ ಬಿ.ಎ.ವ್ಯಾಸಂಗ ಮಾಡುತ್ತಿರುತ್ತಾಳೆ, ನನ್ನ ಮಗಳು ಸವಿತಾಳು ದಿನಾಂಕ:09/09/2017 ರಂದು ಸಂಜೆ ಸುಮಾರು 05:30 ಗಂಟೆ ಸಮಯದಲ್ಲಿ ನಮ್ಮ ಹೊಲದಲ್ಲಿ ಸಾರಿಗೆ ಸೊಪ್ಪನ್ನು ಕಿಳುತ್ತಿರುವಾಗ ನನ್ನ ಮಗಳ ಬಲಗಾಲಿನ ತೊಡೆಗೆ ಯಾವುದೋ ವಿಷ ಪೂರಿತ ಹಾವು ಕಚ್ಚಿದಾಗ ನನ್ನ ಮಗಳು ಕಿರುಚಿಕೊಂಡಳು, ಕಿರುಚಿಕೊಂಡ ಶಬ್ದ ಕೇಳಿ ಅಲ್ಲೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಾನು ನನ್ನ ಮಗಳ ಬಳಿ ಹೋಗಿ ತಕ್ಷಣ ಆಕೆಯನ್ನು ಮನೆ ಹತ್ತಿರ ಕರೆದುಕೊಂಡು ಬಂದು ಹಾವು ಕಚ್ಚಿದಕ್ಕೆ ನನ್ನ ಮಗಳಿಗೆ ಗ್ರಾಮದಲ್ಲಿ ನಾಟಿ ಔಷಧಿಯನ್ನು ಕೊಡಿಸಿದೆನು. ನಂತರ ಅದೇ ದಿನ ರಾತ್ರಿ ಸುಮಾರು 01:30 ಗಂಟೆಗೆ ನನ್ನ ಮಗಳಿಗೆ ತಲೆ ಸುತ್ತು ಮತ್ತು ಉರಿ ಜಾಸ್ತಿಯಾಗಿದ್ದರಿಂದ ತಕ್ಷಣ ಆಕೆಯನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಯಾವುದೋ ವಾಹನದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ, ನಂತರ ವೈದ್ಯರು ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ  ಕರೆತಂದಾಗ ವೈದ್ಯರು ನನ್ನ ಮಗಳನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುತ್ತಾಳೆ ಅಂತ ತಿಳಿಸಿದರು(ದಿ:10/09/2017 ರಂದು ಬೆಳಿಗ್ಗೆ ಸುಮಾರು 05:30 ಗಂಟೆಗೆ) ಆದ್ದರಿಂದ ಹಾವು ಕಚ್ಚಿ ಮೃತ ಪಟ್ಟಿರುವ ನನ್ನ ಮಗಳ ಶವವು ತುಮಕೂರು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇದ್ದು ತಾವುಗಳು ಕಾನೂನು ರೀತಿಯ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶ.

ಹೊಸ ಬಡಾವಣೆ  ಪೊಲೀಸ್ ಠಾಣೆ ಮೊ.ಸಂ 107/2017 ಕಲಂ 454,457, 380 ಐಪಿಸಿ

ದಿನಾಂಕ:-10/09/2017 ರಂದು  ಮದ್ಯಾಹ್ನ  01-30 ಗಂಟೆಗೆ ಪಿರ್ಯಾದಿ ಹೆಚ್,ಬಿ. ಶಿವದೇವ್ ಬಿನ್ ಲೇಟ್ ಬಸಪ್ಪ. ವಾಸ :- ಪಾರ್ವತಿ ನಿಲಯ, 4ನೇ ಮೈನ್, 2ನೇ ಬ್ಲಾಕ್, ಕುವೆಂಪುನಗರ, ತುಮಕೂರು ವಾಸಿರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೆನೆಂದರೆ ನಾನು ಈಗ್ಗೆ ಸುಮಾರು 14 ವರ್ಷಗಳಿಂದ ಸಂಸಾರಸಹಿತವಾಗಿ  ವಾಸವಾಗಿರುತ್ತೇವೆ. ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಶ್ರೀಮತಿ ಮಂಜುಳ ರವರು ವಾಸವಾಗಿದ್ದು ಮಕ್ಕಳಿಗೆ ಮಧುವೆ ಮಾಡಿದ್ದು ಪ್ರತ್ಯೇಕವಾಗಿ ವಾಸವಾಗಿರುತ್ತಾರೆ. ನನ್ನ ಸ್ವಂತ ಊರು ತಿಪಟೂರು ತಾಲ್ಲೂಕು ಈಚನೂರು ಗ್ರಾಮವಾಗಿದ್ದು ಅಲ್ಲಿ ನನ್ನ ಬಾಬ್ತು ತೋಟ ಮತ್ತು ಜಮೀನು ಇರುತ್ತೆ  ನಾನು ಬಿಡುವಿನ ವೇಳೆಯಲ್ಲಿ ಹೋಗಿ ನೋಡಿಕೊಂಡು ಬರುತ್ತಿರುತ್ತೇನೆ.

ಹೀಗಿರುವಾಗ್ಗೆ  ದಿನಾಂಕ:- 08/09/2017 ರಂದು  ಸಂಜೆ ಸುಮಾರು 05-00 ಗಂಟೆಗೆ ನಾನು ಮನೆಗೆ ಬೀಗ ಹಾಕಿಕೊಂಡು  ಊರಿಗೆ ಹೋಗಿದ್ದು  ಈ ದಿನ ದಿನಾಂಕ:- 10/09/2017 ರಂದು ಬೆಳಿಗ್ಗೆ ಸುಮಾರು 07-30 ಗಂಟೆಗೆ ನಮ್ಮ ಮನೆ ಹತ್ತಿರ ವಾಸವಾಗಿರುವ ಲಕ್ಷ್ಮಣ ರವರು ನನಗೆ ಫೋನ್ ಮಾಡಿ ನಿಮ್ಮ ಮನೆಯ ಕೊಲಾಪ್ಸಬಲ್ ಗೇಟ್ ಗೆ ಹಾಕಲಾಗಿದ್ದ ಬೀಗಗಳು ಕೆಳಗೆ ಬಿದ್ದಿರುತ್ತವೆ ಎಂದು ತಿಳಿಸಿದರು ತಕ್ಷಣ ನಾನು ನನ್ನ ಸ್ನೇಹಿತರಾದ ಕೆ,ಎಸ್. ಮಹೇಶ್ ಮತ್ತು ಗಂಗಾಧರ್ ರವರಿಗೆ ಮನೆಯ ಹತ್ತಿರ ಹೋಗಿ ನೋಡಲು ಹೇಳಿದ್ದು ಮೇಲ್ಕಂಡವರುಗಳು ನಮ್ಮ ಮನೆಯ ಹತ್ತಿರ ಹೋಗಿ  ನೋಡಿ ಮನೆಯ ಬೀಗಗಳನ್ನ ಯಾರೋ ಹೊಡೆದು ಹಾಕಿರುತ್ತಾರೆಂದು ತಿಳಿಸಿದರು. ತಕ್ಷಣ ನಾನು ಮತ್ತು ನಮ್ಮ ಮನೆಯವರು  ತಿಪಟೂರಿನಿಂದ ಬಂದು ನೋಡಲಾಗಿ ಮನೆಯ ಕೊಲಾಪ್ಸಬಲ್ ಗೇಟ್ ಮತ್ತು ಮುಖ್ಯ ದ್ವಾರಕ್ಕೆ ಹಾಕಲಾಗಿದ್ದ ಬೀಗಗಳನ್ನ ಜಖಂ ಮಾಡಿ ತೆಗೆದಿದ್ದು ಒಳಗೆ ಪ್ರವೇಶಿಸಿ ನೋಡಲಾಗಿ ನಮ್ಮ ಮನೆಯ ಬೀರುವಿನಲ್ಲಿದ್ದ ಬೀರು ಮತ್ತು ವಾಲ್ ಡ್ರಾಬ್ ಗಳಲ್ಲಿದ್ದ  01)  ಸುಮಾರು 80 ಗ್ರಾಂ ತೂಕವಿರುವ ಎರಡು ಎಳೆ ಮುತ್ತಿನ ಸರ ಮತ್ತು ಡಾಲರ್, 02) ಒಂದು ಸುಮಾರು 70 ಗ್ರಾಂ ತೂಕವಿರುವ ಜೇಡಸಹಿತ ಚಿನ್ನದ ಸರ, 03) ಒಂದು ಸುಮಾರು 40 ಗ್ರಾಂ ತೂಕದ ಹವಳದ ಚಿನ್ನದ ಸರ, 04) ಒಂದು ಜೊತೆ ಸುಮಾರು 12 ಗ್ರಾಂ ತೂಕದ ಚಿನ್ನ ಮತ್ತು ಬಿಳಿ ಕಲ್ಲಿನ ಓಲೆಗಳು, 05) ಒಂದು ಜೊತೆ ಸುಮಾರು 08 ಗ್ರಾಂ ತೂಕವಿರುವ ಚಿನ್ನ ಮತ್ತು ಹವಳದ ಓಲೆಗಳು, 06)  ಸುಮಾರು 15 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ ಮತ್ತು ಜುಮುಕಿಗಳು 07) ಒಂದು ಜೊತೆ  ಸುಮಾರು  08 ಗ್ರಾಂ ತೂಕದ ಕೆಂಪು ಕಲ್ಲಿನ ಓಲೆಗಳು, 08) ಒಂದು ಜೊತೆ ಸುಮಾರು 08 ಗ್ರಾಂ ತೂಕದ ಮುತ್ತಿನ ಓಲೆಗಳು. 09) ಒಂದು ಸುಮಾರು 10 ಗ್ರಾಂ ತೂಕದ ಚಿನ್ನದ ಜೇಡದ ಉಂಗುರ, 10) ಒಂದು ಸುಮಾರು 12 ಗ್ರಾಂ ತೂಕದ ಚಿನ್ನದ ಹವಳದ ಉಂಗುರ, 11) ಒಂದು ಸುಮಾರು 12 ಗ್ರಾಂ ತೂಕದ ಕೆಂಪು ಕಲ್ಲಿನ ಚಿನ್ನದ ಉಂಗುರ, 12) ಒಂದು ಸುಮಾರು 02 ಗ್ರಾಂ ತೂಕದ ಮಗುವಿನ ಚಿನ್ನದ ಉಂಗುರ  ಮತ್ತು ಬೆಳ್ಳಿ ಸಾಮಾನುಗಳಾದ ಅರ್ದ ಕೆ,ಜಿ. ತೂಕದ ಬೆಳ್ಳಿ ಚೆಂಬು. ಸುಮಾರು ಅರ್ದ ಕೆಜಿ ತೂಕದ ಬೆಳ್ಳಿ ತಟ್ಟೆ,  04 ಜೊತೆ  ಬೆಳ್ಳಿ ಕುಂಕುಮದ ಬಟ್ಟಲುಗಳು,  04 ಜೊತೆ ಬೆಳ್ಳಿ ದೀಪಗಳು,  02 ಜೊತೆ ಸುಮಾರು 400 ಗ್ರಾಂ ತೂಕದ ಬೆಳ್ಳಿ ಲೋಟಗಳು, ಒಂದು ಸುಮಾರು 200 ಗ್ರಾಂ ತೂಕದ ಬೆಳ್ಳಿ ಪಂಚಪಾತ್ರೆ,  ಒಂದು ಸುಮಾರು 25 ಗ್ರಾಂ ತೂಕದ ಬೆಳ್ಳಿ ಉದ್ದರಣಿ, 02 ಜೊತೆ ಬೆಳ್ಳಿ ಕಾಲುಚೈನುಗಳು,  ಮತ್ತು 02 ಟೈಟಾನ್ ಲೇಡಿಸ್ ವಾಚುಗಳು ಮತ್ತು ಒಂದು ಹೆಚ್ ಎಂ ಟಿ ವಾಚು ಮತ್ತು 8,000/- ರೂ ನಗದು ಹಣವನ್ನ ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿತು. ಕಳ್ಳತನವಾಗಿರುವ ಚಿನ್ನಾಭರಣಗಳು  ಸುಮಾರು 4,00,000/- ( ನಾಲ್ಕು ಲಕ್ಷ ) ರೂ, ಬೆಳ್ಳಿ ಸಾಮಾನುಗಳು ಸುಮಾರು 50,000/- ( ಐವತ್ತು ಸಾವಿರ ) ರೂ , ವಾಚುಗಳು ಸುಮಾರು 5000/- ಮತ್ತು 8000/- ರೂ ನಗದು ಹಣವಾಗಿರುತ್ತದೆ.  ಆದ್ದರಿಂದ ನಮ್ಮ ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆಂದು ಇತ್ಯಾದಿ ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈ ಗೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 151/2017 ಕಲಂ: 457,380 ಐ.ಪಿ.ಸಿ.

ದಿನಾಂಕ: 10/09/2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಕೃಷ್ಣಪ್ಪನಾಯಕ ಬಿನ್ ಲೇಟ್ ದೇವನಾಯ್ಕ, ದೇವ ಸೆರೆಮಿಕ್ಸ್ ಮಾಲೀಕರು, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ತಿಪಟೂರು ಟೌನ್ ಬಿ.ಹೆಚ್ ರಸ್ತೆಯ ನಕ್ಷತ್ರ ಬಾರ್ ಪಕ್ಕ ದೇವ ಸೆರೆಮಿಕ್ಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ: 09/09/2017 ರಂದು ಸಂಜೆ 5-00 ಗಂಟೆಯಲ್ಲಿ ಅಂಗಡಿಗೆ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದು, ಈ ದಿನ ದಿನಾಂಕ: 10/09/2017 ರಂದು ಬೆಳಿಗ್ಗೆ 8-30 ಗಂಟೆಯಲ್ಲಿ ನಮ್ಮ ಅಂಗಡಿಯ ಬಾಗಿಲು ತೆರೆದು ಒಳಗಡೆ ಹೋದಾಗ ರಾತ್ರಿ ಮಳೆ ಬಂದು ಅಂಗಡಿಯಲ್ಲಿ ಸೋರಿದ್ದು, ಹಿಂಭಾಗದಲ್ಲಿ ಇಟ್ಟಿದ್ದ ಸಿ.ಪಿ ಪಿಟಿಂಗ್ಸ್ ನಲ್ಲಿ ಪಿಟಿಂಗ್ಸ್ ಹಾಗೂ ಇತರೆ ಬಿಡಿ ಭಾಗಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ನಂತರ ನೋಡಲಾಗಿ ಅಂಗಡಿಯ ಹಿಂಭಾಗದಲ್ಲಿ ಹಾಕಿದ್ದ ತಗಡಿನ ಶೀಟನ್ನು ಕಿತ್ತುಹಾಕಿ ದಿನಾಂಕ: 09/09/2017 ರಂದು ರಾತ್ರಿ ಯಾವುದೋ ವೇಳೆಯಲ್ಲಿ ಯಾರೋ ಕಳ್ಳರು ಒಳಗೆ ನುಗ್ಗಿ ನಮ್ಮ ಅಂಗಡಿಯಲ್ಲಿ ಇಟ್ಟಿದ್ದ ನಲ್ಲಿ ಬಿಡಿ ಭಾಗಗಳು, ಸಿ.ಪಿ ಪಿಟಿಂಗ್ಸ್ ಹಾಗೂ ಪ್ಲಂಬಿಂಗ್ ಬಿಡಿ ಭಾಗಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ವಸ್ತುಗಳು ಬೆಲೆ ಸುಮಾರು 25000/- ರೂಗಳಾಗಬಹುದು. ಆದ್ದರಿಂದ ಕಳವು ಆಗಿರುವ ಮೇಲ್ಕಂಡ ವಸ್ತುಗಳನ್ನು ಹಾಗೂ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ದೂರು ನೀಡಿದ್ದು ಪ್ರಕರಣ ದಾಖಲಿಸಿರುತ್ತೆ.


Crime Incidents 10-09-17

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 150/2017 ಕಲಂ: 279,337 ಐ.ಪಿ.ಸಿ  & 134 (ಎ&ಬಿ) ಐ.ಎಂ.ವಿ ಆಕ್ಟ್.

 

ದಿನಾಂಕ;09/09/2017 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿ ವೆಂಕಟೇಶ್ ಬಿನ್ ಲೇಟ್ ರಾಮಣ್ಣ, 27 ವರ್ಷ, ಎಸ್.ಎಸ್ ಗಾರ್ಡನ್ ಮಾವಿನತೋಪು, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 09/09/2017 ರಂದು ಸಂಜೆ 7-15 ಗಂಟೆಯ ಸಮಯದಲ್ಲಿ ನಾನು ನಮ್ಮ ಮನೆಯಲ್ಲಿ ಇರುವಾಗ ಮಂಜುನಾಥನಗರದ ರಂಗಸ್ವಾಮಿ ರವರು ನನಗೆ ಫೋನ್ ಮಾಡಿ ನಿಮ್ಮ ಮಾವ ರಾಮಕೃಷ್ಣಯ್ಯ ರವರು ಹಾಲ್ಕುರಿಕೆ ರಸ್ತೆಯಲ್ಲಿ ಅಣ್ಣಾಪುರ ಗೇಟ್ ನಿಂದ ಮಂಜುನಾಥನಗರಕ್ಕೆ ಹೋಗಲು ಬೆಡ್ಸಿ ಫ್ಯಾಕ್ಟರಿ ಸೇತುವೆ ಬಳಿ ಸಂಜೆ 7-00 ಗಂಟೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಒಬ್ಬ ಬೈಕ್ ಸವಾರ ತನ್ನ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಮ್ಮ ಮಾವನವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಬಲಗೈಗೆ ಪೆಟ್ಟು ರಕ್ತಸ್ರಾವಾಗಿ, ತಲೆಗೆ , ಎಡಗಾಲಿಗೆ ಮತ್ತು ಎಡ ಮೊಣಕೈಗೆ ಪೆಟ್ಟು ಬಿದ್ದು ತರಚಿದ ಗಾಯವಾಗಿರುತ್ತೆ.  ನಾನು ಮತ್ತು ರವಿ ಈ ಅಪಘಾತವಾದ ಬೈಕ್ ನಂಬರ್ ನೋಡಲಾಗಿ ಕೆ.ಎ-04 ಇ.ಡಬ್ಲ್ಯೂ -1081 ಸ್ಟಾರ್ ಸಿಟಿ ಮೋಟಾರ್ ಬೈಕ್ ಆಗಿದ್ದು, ಬೈಕ್ ಸವಾರ ಬೈಕನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಆತನ ಹೆಸರು ಮತ್ತು ವಿಳಾಸ ತಿಳಿಯಬೇಕಾಗಿರುತ್ತೆ. ನಂತರ ನಾವು 108 ಆಂಬುಲೆನ್ಸ್ ನಲ್ಲಿ ರಾಮಕೃಷ್ಣಯ್ಯನವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತೇವೆ ಎಂದು ತಿಳಿಸಿದ್ದರ ಮೇರೆಗೆ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ಮಾವನವರಿಗೆ ಪೆಟ್ಟು ಬಿದ್ದಿರುವುದು ಕಂಡುಬಂತು, ಆದ್ದರಿಂದ ಅಪಘಾತವುಂಟು ಮಾಡಿದ ಮೇಲ್ಕಂಡ ಬೈಕ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಸಿ.ಎಸ್.ಪುರ ಪೊಲೀಸ್  ಠಾಣಾ ಮೊ.ನಂ:82/2017. ಕಲಂ:379 ಐಪಿಸಿ

ದಿನಾಂಕ:09.09.2017 ರಂದು ಕೃಷಿ ಯಂತ್ರದಾರೆ, ಬಾಡಿಗೆ ಆದಾರಿತ ಸೇವಾ ಕೇಂದ್ರ, ಸಿ.ಎಸ್.ಪುರ ದಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿರುವ  ಗಿರೀಶ್.ಜಿ.ವಿ ಬಿನ್ ವೆಂಕಟೇಗೌಡ, 25 ವರ್ಷ, ವಕ್ಕಲಿಗರು,ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆದರೆ, ನಾನು ಈಗ್ಗೆ ಒಂದು ವರ್ಷದಿಂದ ಕೃಷಿ ಯಂತ್ರದಾರೆ ಬಾಡಿಗೆ ಆದಾರಿತ ಸೇವಾ ಕೇಂದ್ರದಲ್ಲಿ  ಕರ್ತವ್ಯ ನಿರ್ವಹಿಸುತ್ತಿರುತ್ತೇನೆ, ನಮ್ಮ ಕೇಂದ್ರದಲ್ಲಿ  ಬ್ರಶ್ ಕಟ್ಟರ್ , ಉಳುಮೆ ಮಾಡುವ  ಟ್ರಾಕ್ಟರ್ ಹಾಗೂ ಟ್ರಿಲ್ಲರ್  ಗಳು ಇದ್ದು, ಇವುಗಳನ್ನು ರಿಯಾಯಿತಿ ಧರದಲ್ಲಿ ರೈತರಿಗೆ ನೀಡುತ್ತಿದ್ದೆವು,  ಇವುಗಳನ್ನು  ನಮ್ಮ ಕಛೇರಿಯ ಪಕ್ಕ ಒಂದು ತೆರೆದ ಶೆಡ್ ಮಾಡಿಕೊಂಡಿದ್ದು, ಇಲ್ಲಿ ನಿಲ್ಲಿಸಿಕೊಂಡಿದ್ದೆವು, ಸದರಿ ಕೇಂದ್ರದಲ್ಲಿ ನಾನು ಒಬ್ಬನೇ ಕರ್ತವ್ಯ  ನಿರ್ವಹಿಸುತಿದ್ದು, ಪ್ರತಿ ದಿನ ಬೆಳಗ್ಗೆ 8.00 ಗಂಟೆಯಿಂದ  ಸಂಜೆ 6 ಗಂಟೆಯವರೆಗೆ  ಕರ್ತವ್ಯ ನಿರ್ವಹಿಸಿ, ನಂತರ ಮನೆಗೆ ತೆರಳುತ್ತೇನೆ, ಈಗಿರುವಾಗ ಎಂದಿನಂತೆ ದಿನಾಂಕ:07.09.2017 ರಂದು ಸಂಜೆ 6 ಗಂಟೆಗೆ ವಿ.ಎಸ್.ಟಿ  ಕಂಪನಿಯ ಟ್ರಾಕ್ಟರ್,  ಟ್ರಿಲ್ಲರ್. ಹೊಲ ಕುಯ್ಲು ಮಾಡುವ ಯಂತ್ರಗಳನ್ನು ಶೆಡ್ ನಲ್ಲಿ ನಿಲ್ಲಿಸಿ ಎಂದಿನಂತೆ ಮನೆಗೆ ಹೋಗಿದ್ದೆನು, ದಿನಾಂಕ:08.09.2017 ರಂಧು ಬೆಳಗ್ಗೆ 8.00 ಗಂಟೆ ಸಮಯಕ್ಕೆ ಕರ್ತವ್ಯಕ್ಕೆ  ಬಂದು, ಶೆಡ್ ನಲ್ಲಿ ನಿಲ್ಲಿಸಿದ್ದ ವಾಹನಗಳನ್ನು ನೋಡಿದಾಗ, ಶೆಡ್ ನಲ್ಲಿ  ನಿಲ್ಲಿಸಿದ್ದ  ವಿ.ಎಸ್.ಟಿ  ಕಂಪನಿಯ  ಪವರ್ ಟ್ರಿಲ್ಲರ್ 130DI ಯನ್ನು  ಯಾರೋ ಕಳ್ಳರು ರಾತ್ರಿ ಸಮಯದಲ್ಲಿ  ಕಳ್ಳತನ ಮಾಡಿಕೊಂಡು ಹೋಗಿದ್ದರು, ಸದರಿ ಯಂತ್ರದ ಇಂಜಿನ್ ನಂ.S16C225981,ಚಾಸಿಸ್ ನಂ. V16C323747 ಆಗಿರುತ್ತದೆ, ನಾನು ಸಿ.ಎಸ್.ಪುರ ಗ್ರಾಮದಲ್ಲಿ ಎಲ್ಲಾ ಕಡೆ ಹುಡುಕಾಡಿ,ನಂತರ ನಮ್ಮ ಮೇಲಾದಿಕಾರಿಗಳಿಗೆ ಮಾಹಿತಿ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು, ಕಳವು ಆಗಿರುವ ಪವರ್ ಟ್ರಿಲ್ಲರ್ 130DI ಯಂತ್ರವನ್ನು  ಪತ್ತೆಮಾಡಿಕೊಡಲು  ಕೋರಿ ನೀಡಿದ ಅರ್ಜಿಯನ್ನು ಸ್ವೀಕರಿಸಿ ಸಿ.ಎಸ್.ಪುರ ಠಾಣಾ ಮೊ.ನಂ:82/2017. ಕಲಂ:379 ಐಪಿಸಿ  ರೀತ್ಯಾ ಪ್ರಕರಣ ದಾಖಲುಮಾಡಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ .ನಂ- 12/2017 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ: 09/09/2017 ರಂದು ಮಧ್ಯಾಹ್ನ 01-30 ಗಂಟೆಗೆ ಪಿರ್ಯಾದಿ ಚೌಡಪ್ಪ ಬಿನ್ ವೆಂಕಟೇಗೌಡ 42 ವರ್ಷ, ಈಡಿಗರು, ಅಣ್ಣಾಪುರ ನಾರಿನ ಫ್ಯಾಕ್ಟರಿಯಲ್ಲಿ ಕೆಲಸ, ವಾಸ: ಹುಚ್ಚನಹಳ್ಳಿ, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ದಿನಾಂಕ: 09/09/2017 ರಂದು ನಾನು ಅಣ್ಣಾಪುರದಲ್ಲಿರುವ ನಾರಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ 12-30 ಗಂಟೆಯ ಸಮಯದಲ್ಲಿ ಹಳೇಪಾಳ್ಯದ ದರ್ಶನ್ ಎಂಬ ಹುಡುಗ ನನ್ನ ಬಳಿ ನಿಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕುಮಾರಯ್ಯನ ಮಗ ಆಕಾಶ್, ಲೋಕೇಶ್ ಮತ್ತು ನಾನು 3 ಜನರು ತಿಪಟೂರು ಕೆರೆಯಲ್ಲಿ ಈಜಾಡುತ್ತಿದ್ದಾಗ ದರ್ಶನ್ ಮುಳುಗುತ್ತಿದ್ದೇನೆ ಎಂದು ಕೂಗಿಕೊಂಡಾಗ ಆಕಾಶ್ ಆತನನ್ನು ರಕ್ಷಿಸಲು ಹೋದನು. ದರ್ಶನ್ ಮೇಲಕ್ಕೆ ಬರುತ್ತಿದ್ದಾಗ ಆಕಾಶ್ ನೀರಿನಲ್ಲಿ ಮುಳುಗಿಕೊಂಡನು. ಬನ್ನಿ ಕೆರೆಯ ಬಳಿ ಹೋಗೋಣ ಎಂದು ತಿಳಿಸಿದನು. ನಾನು ಮತ್ತು ಇತರರೊಂದಿಗೆ ಕೆರೆಯ ಬಳಿ ಹೋಗಿ ಪೋಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಮತ್ತು ಅಗ್ನಿಶ್ಯಾಮಕ ಸಿಬ್ಬಂದಿ ಬಂದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಆಕಾಶ್ ರವರ ಶವವನ್ನು ಮೇಲಕ್ಕೆ ತೆಗೆದಿರುತ್ತಾರೆ. ಮೃತಪಟ್ಟಿರುವ 14 ವರ್ಷದ ಆಕಾಶ್ ರವರ ತಂದೆ ನಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ತಂದೆ ತಾಯಿಯವರಿಗೆ ತಿಳಿಸಿರುತ್ತೇನೆ. ಆಕಾಶ್ ಈ ದಿನ ಮಧ್ಯಾಹ್ನ 12-00 ಗಂಟೆಯಲ್ಲಿ ತನ್ನ ಸ್ನೇಹಿತರೊಂದಿಗೆ ತಿಪಟೂರು ಕೆರೆಯಲ್ಲಿ ಈಜಾಡಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಗಿಸಿ ಮೃತಪಟ್ಟಿರುತ್ತಾನೆ.ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 98/2017 ಕಲಂ 114,143,323.324,354(A),504,506 R/W 149 ಐಪಿಸಿ

ದಿನಾಂಕ:09-09-17 ರಂದು ಸಂಜೆ 05:30 ಗಂಟೆಗೆ  ಪಿರ್ಯಾದಿ ತೋಪಮ್ಮ ( ಲಕ್ಷ್ಮಮ್ಮ ) ಗಂಡ ರಾಜಗೋಪಾಲ, ಕರಿದಾಸರಹಳ್ಳಿ ಗ್ರಾಮ, ಶಿರಾ ತಾಲ್ಲೋಕ್ ರವರು ಠಾಣೆಗೆ  ಹಾಜರಾಗಿ ನೀಡಿದ  ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಗು  ಮತ್ತು  ಪಿರ್ಯಾದಿ ದೊಡ್ಡಪ್ಪನ ಮಗ ಚಿತ್ತಪ್ಪನಿಗು ಜಮೀನಿನ ಬಗ್ಗೆ ವಿವಾದವಿದ್ದು, ದಿ:08-09-17 ರಂದು ಸಾಯಂಕಾಲ 06:30 ಗಂಟೆಯಲ್ಲಿ ಚಿತ್ತಯ್ಯ ರವರ ಕುಮ್ಮಕ್ಕಿನಿಂದ  ಹಾಗೂ ಜಯರಾಮಪ್ಪ  ಮತ್ತು ಆಂದ್ರಪ್ರದೇಶದ ಇನ್ನೀತರೆ ನಾಲ್ಕು ಜನರ ಹೆಸರು ವಿಳಾಸ ತಿಳಿದಿರುವುದಿಲ್ಲ  ಅಕ್ರಮವಾಗಿ ಗುಂಪುಕಟ್ಟಿಕೊಂಡು ಕರಿದಾಸರಹಳ್ಳಿಯಲ್ಲಿರುವ  ಪಿರ್ಯಾದಿಯ ವಾಸದ ಮನೆಯ ಹತ್ತಿರ ಪಿರ್ಯಾದಿ ಮತ್ತು  ಗಂಡ ರಾಜಗೋಪಾಲ ರವರು ಮನೆಯ ಬಳಿ  ಇದ್ದಾಗ  ಮೇಲ್ಕಂಡವರುಗಳು ಬಂದು ಏಕಾಏಕಿ ಜಗಳ ತಗೆದು ಪಿರ್ಯಾದಿಯನ್ನು  ಜಯರಾಮಪ್ಪ ರವರು ಜುಟ್ಟು ಹಿಡಿದು ಎಳೆದಾಡಿ ಕೆಟ್ಟ-ಕೆಟ್ಟ ಮಾತುಗಳಿಂದ ಬೈಯ್ದು ದೊಣ್ಣೆಯಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ ನಂತರ ಪಿರ್ಯಾದಿ ಗಂಡ ರಾಜಗೋಪಾಲ ರವರಿಗೆ ಚಿತ್ತಯ್ಯ ರವರು ಹೊಡೆದು  ನೋವುಂಟು ಮಾಡಿರುತ್ತಾರೆ  ಉಳಿಕೆ ನಾಲ್ಕು ಜನರು ಮನೆಯ ಬಾಗಲಿಗೆ  ಕಲ್ಲು ಗುಂಡುಗಳನ್ನು ಹಾಕಿ ನೀವು ಮನೆ ಬಿಟ್ಟು ಹೋಗದಿದ್ದರೆ ಪ್ರಾಣ ಸಮೇತ ಬಿಡುವುದಿಲ್ಲ ಎಂದು ಎಲ್ಲರು ಪ್ರಾಣ ಭೆದರಿಕೆ ಹಾಕಿರುತ್ತಾರೆ ಅಲ್ಲಿಯೇ ಇದ್ದ  ಮೂಡ್ಲಪ್ಪ ಬಿನ್  ತಿಮ್ಮಜ್ಜ, ಹೆಂಜಾರಪ್ಪ ಬಿನ್ ಕರಿಯಪ್ಪ ರವರು ಜಗಳವನ್ನು   ಬಿಡಿಸಿ ನಮ್ಮನ್ನು  ಚಿರತಹಳ್ಳಿ ಆಸ್ಪತ್ರೆಗೆ  ಚಿಕಿತ್ಸೆಗಾಗಿ ಕಳುಹಿಸಿಕೊಟ್ಟರು ನಂತರ ಪಿರ್ಯಾದಿ ರವರು  ಚಿರತಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು  ವಾಪಸ್  ಊರಿಗೆ  ಹೋಗಿ ವಿಶ್ರಾಂತಿ ಪಡೆದು  ಈ ದಿನ ತಡವಾಗಿ ಠಾಣೆಗ  ಬಂದು ದೂರು ನೀಡುತ್ತಿದ್ದು  ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಲಿಖಿತ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 26 guests online
Content View Hits : 193562
Hackguard Security Enabled