lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2017 >
Mo Tu We Th Fr Sa Su
        1 2 3
5 6 7 8 9 10
11 12 13 14 15 16 17
18 19 20 21 22 23 24
25 26 27 28 29 30  
Monday, 04 September 2017
Crime Incidents 04-09-17

ಹೊನ್ನವಳ್ಳಿ ಪೊಲೀಸ್ ಠಾಣೆ   ಮೊ,ನಂ-107/2017 ಕಲಂ-279 337 ಐಪಿಸಿ

ದಿನಾಂಕ-03/09/2017 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿ ಶ್ರೀ ಮರುಳಯ್ಯ ಬಿನ್‌ ಮುದ್ದಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಪಿರ್ಯಾದಿಯು ಈ ದಿನ ದಿನಾಂಕ 03/09/2017 ರಂದು 12-15 ಗಂಟೆಯಲ್ಲಿ ಪಿರ್ಯಾದಿಯ ತಮ್ಮ ದಶರಥನು ಕೆಎ 44 ಕೆ 0961 ಟಿವಿಎಸ್‌ ಎಕ್ಸ್ಎಲ್‌ ದ್ವಿಚಕ್ರ ವಾಹನದಲ್ಲಿ ರುದ್ರಾಪುರ ಗ್ರಾಮದಿಂದ ಸಾರ್ಥವಳ್ಳಿ ಗ್ರಾಮಕ್ಕೆ ಹೋಗುತ್ತಿರುವಾಗ ಬಳುವನೇರಲು ಗೇಟ್‌ ಸರ್ಕಲ್‌ನಲ್ಲಿ ಹುಳಿಯಾರು ಕಡೆಯಿಂದ ಬಂದ ಕೆಎ 02 ಎಂಎಲ್‌ 2382 ಮಾರುತಿ ಓಮಿನಿ ಕಾರನ್ನು ಅದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯ ಟಿವಿಎಸ್‌ ಎಕ್ಸ್ಎಲ್‌ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಲೆಗೆ, ಹಣೆಗೆ, ಎಡಗಾಲು ಮೊಣಕಾಲಿಗೆ ಪೆಟ್ಟಾಗಿ ರಕ್ತಗಾಯವಾಗಿರುತ್ತೆ, ನಂತರ ಆತನನ್ನು ರೇಣುಕಮೂರ್ತಿಯವರು ಯಾವುದೋ  ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತೆ, ಅದ್ದರಿಂದ  ಈ ಅಪಘಾತಕ್ಕೆ ಕಾರಣನಾದ ಕೆಎ 02 ಎಂಎಲ್‌ 2382 ಮಾರುತಿ ಓಮಿನಿ ಕಾರಿನ  ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

ಮಧುಗಿರಿ ಪೊಲೀಸ್ ಠಾಣಾ ಮೊ.ಸಂ :165/2017 u/s 279,337 IPC

ಪಿರ್ಯಾದಿ ನರೇಂದ್ರಬಾಬು ಎಸ್‌.ಎಂ ಬಿನ್ ಮುಸರಪ್ಪ, 36 ವರ್ಷ, ಸಿದ್ದಾಫುರ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಅಣ್ಣ ರಮೇಶ್  ರವರು ಮಧುಗಿರಿ ಟೌನ್ ನ ಜಿಲ್ಲಾ ಪಂಚಾಯ್ತಿ ಕಛೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಲೆಕ್ಕ ಪರಿಶೋಧಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ: 02-09-2017 ರಂದು ಸಂಜೆ ರಮೇಶ್ ರವರು ತನ್ನ ಬಾಬ್ತು KA-64-J-5877 ನೇ ಹೋಂಡ ಆಕ್ಟೀವಾ ದ್ವಿಚಕ್ರವಾಹನದಲ್ಲಿ ತನ್ನ ಹೆಂಡತಿ ಪುಷ್ಪಲತರವರನ್ನು ಬಸ್ಟಾಂಡ್ ಗೆ ಬಿಟ್ಟು, ಸಂಜೆ ಸುಮಾರು 04.30 ಗಂಟೆಯ ಸಮಯದಲ್ಲಿ ವಾಪಸ್ ಮನೆಗೆ ಹೋಗಲು ದ್ವಿಚಕ್ರವಾಹನದಲ್ಲಿ ಎ.ವಿ.ಎನ್ ಲಾಡ್ಜ್ ಮುಂಬಾಗ ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದಾಗ, ಅದೇ ವೇಳೆಗೆ ಕೆ.ಎಸ್‌.ಆರ್.ಟಿ.ಸಿ ಬಸ್ಟಾಂಡ್ ಕಡೆಯಿಂದ ಬಂದ KA-06-F-1025 ನೇ ಕೆ.ಎಸ್‌.ಆರ್.ಟಿ.ಸಿ ಬಸ್ಸಿನ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ನಮ್ಮ ಅಣ್ಣ ರಮೇಶರವರು ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ ಪರಿಣಾಮ, ದ್ವಿಚಕ್ರವಾಹನದೊಂದಿಗೆ ರಮೇಶ್‌ ರವರು ಕೆಳಕ್ಕೆ ಬಿದ್ದು, ಬಲಗಾಲಿನ ಮಂಡಿಯ ಕೆಳಭಾಗಕ್ಕೆ ಪೆಟ್ಟು ಬಿದ್ದು  ರಕ್ತಗಾಯವಾಗಿರುತ್ತದೆ. ಪಿರ್ಯಾದಿಯು ರಮೇಶ್ ರವರನ್ನು ಅಂಬ್ಯುಲೆನ್ಸ್ ನಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ವೈದ್ಯರ ಸಲಹೆ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಅದೇ ದಿನ  ರಮೇಶ್ ಎಸ್.ಎಂ ರವರಿಗೆ ಶಸ್ತ್ರಚಿಕಿತ್ಸೆ ಮಾಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿದ KA-06-F-1025 ನೇ ಕೆ.ಎಸ್‌.ಆರ್.ಟಿ.ಸಿ ಬಸ್ಸು, ಅದರ ಚಾಲಕ ನರೇಂದ್ರಕುಮಾರ್ ರವರ ವಿರುದ್ದ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ CR 105/2017 U/S 363,365, 394, ರೆ/ವಿ 34 IPC

ದಿನಾಂಕ:-03/08/2017 ರಂದು ರಾತ್ರಿ 08-45 ಗಂಟೆಗೆ ಪಿರ್ಯಾದಿ ಪರಮೇಶ ರೆಡ್ಡಿ  ಬಿನ್ ಭಾಸ್ಕರರೆಡ್ಡಿ (35) ಶ್ರೀ ವೀರಭದ್ರಸ್ವಾಮಿ ಪಿಜಿ, ಟಿಸಿಎಸ್ ಎದುರು, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯು ಬೆಳಿಗ್ಗೆ ಸುಮಾರು 05-00 ಗಂಟೆ ಸಮಯದಲ್ಲಿ ಬೆಂಗಳೂರು ಸಿಟಿ  ಸಿಲ್ಕ್ ಬೋರ್ಡ್ ಹತ್ತಿರದ ಸಿಟಿ ಬಸ್ ಸ್ಟಾಪ್ ನಲ್ಲಿ ಬಸ್ಸಿಗಾಗಿ ಕಾಯ್ದುಕೊಂಡು ನಿಂತಿರುವಾಗ ಯಾರೋ ಮೂವರು ಅಪರಿಚಿತ ಆಸಾಮಿಗಳು ಯಾವುದೋ ಒಂದು ಕಾರಿನಲ್ಲಿ ಬಂದವರೇ ಯಾವುದೋ ವಿಳಾಸವನ್ನ ಕೇಳುವವರಂತೆ ಪಿರ್ಯಾದಿಯನ್ನ ಮಾತನಾಡಿಸಿ ನಂತರ ಪಿರ್ಯಾದಿ ವಿಳಾಸ ಹೇಳಿದಾಗ  ನಾವು ಇದೇ ರಸ್ತೆಯಲ್ಲಿ  ಹೋಗುತ್ತಿದ್ದೇವೆ ನಿಮ್ಮನ್ನು ಅಲ್ಲಿವರೆಗೆ ಬಿಡುತ್ತೇವೆ ಎಂದು ಕಾರಿನಲ್ಲಿ ಹತ್ತಿಸಿಕೊಂಡು ನಂತರ ಕಾರಿನಲ್ಲಿ ಪಿರ್ಯಾದಿಗೆ ಬ್ಲೇಡ್ ಮತ್ತು ಆಸಿಡ್ ಬಾಟಲನ್ನ ತೋರಿಸಿ ಬೆದರಿಸಿ ಮೊಬೈಲ್ ಫೋನ್, ಚಿನ್ನದ ಉಂಗುರ, 02 ಡೆಬಿಟ್ ಕಾರ್ಡ್ 01 ಕ್ರೆಡಿಟ್ ಕಾರ್ಡನ್ನ ಪಡೆದುಕೊಂಡು ಕೈಗಳಿಂದ ಹೊಡೆದು ನಂತರ ಕ್ರೆಡಿಟ್ ಕಾರ್ಡ್ ನಿಂದ ಪೇಟಿಎಂ ಗೆ ಹಣ ವರ್ಗಾವಣೆ ಮಾಡಿಕೊಂಡು ನಂತರ ತುಮಕೂರು ರಸ್ತೆಯಲ್ಲಿ ಕರೆದುಕೊಂಡು ಬರುವಾಗ್ಗೆ ರಸ್ತೆ ಮದ್ಯೆ ನಿಲ್ಲಿಸಿ  ಪಿರ್ಯಾದಿಯ ಡೆಬಿಟ್ ಕಾರ್ಡ್ ಬಳಸಿ 04 ಟೈರ್ ಗಳನ್ನ ಖರೀದಿಸಿ ಮತ್ತು ಪೆಟ್ರೋಲ್ / ಡೀಸಲ್ ಹಾಕಿಸಿ ಪಿರ್ಯಾದಿಯನ್ನು ಜನಗಳಿಗೆ ಕಾಣದಂತೆ ಕಾರಿನಲ್ಲಿ ಮುಚ್ಚಿಟ್ಟು ಪಿರ್ಯಾದಿ ಪ್ರತಿರೋದಿಸಿದಾಗ ಆತನಿಗೆ ದೈಹಿಕ ಹಲ್ಲೆ ಮಾಡಿ ತುಮಕೂರು ನಗರಕ್ಕೆ ಕರೆದುಕೊಂಡು ಬಂದು ತುಮಕೂರು ನಗರದಲ್ಲಿರುವ ಮಲಬಾರ್ ಜ್ಯುವೆಲರಿ ಅಂಗಡಿಯಲ್ಲಿ ಡೆಬಿಟ್ ಕಾರ್ಡ್ ನಲ್ಲಿ ವಡವೆ ಖರೀದಿ ಮಾಡಿಕೊಡುವಂತೆ ಪಿರ್ಯಾದಿಗೆ ಬೆದರಿಸಿದಾಗ ಪಿರ್ಯಾದಿಯು  ವಡವೆ ಅಂಗಡಿಯವರಿಗೆ ವಿಚಾರ ತಿಳಿಸಿ ಕೂಗಾಡಿ ಪೊಲೀಸರನ್ನು ಕರೆಸಲು ತಿಳಿಸಿದಾಗ ವಡವೆ ಅಂಗಡಿಯವರು  ಪೊಲೀಸರಿಗೆ ವಿಚಾರ ತಿಳಿಸುವಾಗ್ಗೆ ಅಪಹರಣಕಾರರು ತಾವು ಬಂದಿದ್ದ ವಾಹನದಲ್ಲಿ ಪರಾರಿಯಾಗಿರುತ್ತಾರೆ ಈ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿಕೊಂಡಿರುತ್ತೆ

 


Crime Incidents 03-09-17

ಹುಳಿಯಾರು ಪೊಲೀಸ್ ಠಾಣಾ ಮೊ.ನಂ. 114/2017, ಕಲಂ 353, 323, 504 IPC.

ದಿನಾಂಕ:02.09.2017 ರಂದು ಸಂಜೆ 04:30 ಗಂಟೆಗೆ ಹೆಚ್.ಹೆಚ್ ಶ್ರೀನಿವಾಸಮೂರ್ತಿ, ಕಂದಾಯ ನಿರೀಕ್ಷಕರು,  ಹುಳಿಯಾರು ಹೋಬಳಿ, ಚಿ.ನಾ ಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ಹುಳಿಯಾರು ಹೋಬಳಿ ಆರ್.ಐ ಯಾಗಿ 3 ತಿಂಗಳಿನಿಂದ ನಾಡಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುತ್ತೇನೆ. ದಿನಾಂಕ:01.09.2017 ರಂದು ಸಂಜೆ 04:50 ರಲ್ಲಿ ನಾಡ ಕಚೇರಿಯಲ್ಲಿ ನಾನು ಸರಕಾರಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಹೊಸಹಳ್ಳಿ ಗ್ರಾಮದ ವಾಸಿಯಾದ ಡಿ ಸುರೇಶ್ ಬಿನ್ ದಾನಪ್ಪ ಎಂಬುವರು ನಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಗ್ರಾಮ ಸಹಾಯಕನಾದ ಮಂಜುನಾಥ ಎಂಬುವನ ಮೇಲೆ ಗಲಾಟೆ ಮಾಡುತ್ತಿದ್ದ ಸಮಯದಲ್ಲಿ ನಾನು ಏಕೆ ನಮ್ಮ ಸಹಾಯಕನಾದ ಮಂಜುನಾಥ ರವರ ಮೇಲೆ ಗಲಾಟೆ ಮಾಡುತ್ತಿದ್ದೀಯಾ ಎಂದು ನೀನು ಯಾರು ಕೇಳುವುದಕ್ಕೆ ಎಂದು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದಿರುತ್ತಾರೆ. ನಂತರ ಪುನಃ ಹೊಡೆಯಲು ಬಂದಾಗ ಅಲ್ಲಿದ್ದ ಜನರು ಹೆಚ್.ಎಂ. ಸುಗಂಧರಾಜು, ಪುಟ್ಟಸ್ವಾಮಿ, ಮಂಜುನಾಥ ರವರು ಬಿಡಿಸಿರುತ್ತಾರೆ. ಆದ್ದರಿಂದ ಕರ್ತವ್ಯ ನಿರ್ವಹಿಸುವ ವೇಳೆ ಕಚೇರಿಯಲ್ಲಿ ದಾಂದಲೆ ಮಾಡಿ  ನನ್ನನ್ನು ಎಳೆದಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುತ್ತಾರೆ. ಆದ್ದರಿಂದ ನಮ್ಮ ಮೇಲಾಧಿಕಾರಿಗಳ ರವರಿಗೆ ವಿಷಯ ತಿಳಿಸಿ ನಾನು ಕಂಪ್ಲೇಂಟ್ ನೀಡುತ್ತಿದ್ದೇನೆ ಎಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  86/2017   ಕಲಂ: 32(3)K E Act

ದಿನಾಂಕ:02/09/2017 ರಂದು ಸಂಜೆ 7:00 ಗಂಟೆಯಲ್ಲಿ  ನಾನು  ವೈ ಎನ್ ಹೊಸಕೋಟೆ ಪೋಲಿಸ್ ಠಾಣಾ ಸರಹದ್ದು ಹನುಮಂತನಹಳ್ಳಿ -ಮರಿದಾಸನಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿ ನಲ್ಲಿರುವಾಗ್ಗೆ ಮರಿದಾಸನಹಳ್ಳಿ ಗ್ರಾಮದ ಬಸ್ ನಿಲ್ದಾಣ ಸಮೀಪ ವಿರುವ  ರವಿಕುಮಾರ್ ಎಂಬುವವರು ತನ್ನ ಪೆಟ್ಟಿಗೆ ಅಂಗಡಿ ಬಳಿ  ಸಾರ್ವಜನಿಕರಿಗೆ ಮದ್ಯಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾನೆಂತ ಮಾಹಿತಿ ಇದ್ದು ಸ್ಥಳಕ್ಕೆ ಸಿಬ್ಬಂದಿಯಾದ  ಹೆಚ್.ಸಿ:175 ಶ್ರೀನಿವಾಸ ಹಾಗೂ ಪಂಚಾಯ್ತುದರರೊಂದಿಗೆ ಹೋಗಿ ನೋಡಲಾಗಿ ಕೆಲವು ಗಿರಾಕಿಗಳು ಪೆಟ್ಟಿಗೆ ಅಂಗಡಿ ಬಳಿ ಮದ್ಯ ಕುಡಿಯಲು ಕುಳಿತಿದ್ದು ನಮ್ಮನ್ನು ಕಂಡು ಓಡಿ ಹೋದರು, ನಂತರ ಸ್ಥಳದಲ್ಲಿ ಮದ್ಯ ಕುಡಿಯಲು ಸ್ಥಳಅವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯನ್ನು ಹಿಡಿದು  ಹೆಸರು ವಿಳಾಸ ಕೇಳಲಾಗಿ ರವಿಕುಮಾರ್ ಬಿನ್ ರಾಮಚಂದ್ರಪ್ಪ, 30 ವರ್ಷ, ವಕ್ಕಲಿಗ ಜನಾಂಗ, ಅಂಗಡಿ ವ್ಯಾಪಾರ, ಮರಿದಾಸನಹಳ್ಳಿ ಗ್ರಾಮ,ಪಾವಗಡ ತಾ||   ಎಂತ ತಿಳಿಸಿದ್ದು ಸ್ಥಳದಲ್ಲಿ ಇದ್ದ ಮದ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ ಮದ್ಯ ತುಂಬಿದ್ದ  05  ಓಲ್ಡ್ ಟೆವರಿನ್   180 ಎಂ.ಎಲ್ ನ ಟೆಟ್ರಾ ಪ್ಯಾಕೆಟ್ ಹಾಗೂ   03 ಪ್ಲಾಸ್ಟಿಕ್ ಲೋಟಗಳು ಇದ್ದು ಇವುಗಳ ಒಟ್ಟು ಬೆಲೆ  342=00 ರೂ ಗಳಾಗಿರುತ್ತದೆ , ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮುಖೇನ ಮುಂದಿನ ನಡುವಳಿಕೆಗಾಗಿ ಅಮಾನತ್ತು ಪಡಿಸಿಕೊಂಡು ಠಾಣೆಗೆ ಆರೋಪಿ , ಮಾಲು ಮತ್ತು ಪಂಚನಾಮೆಯೊಂದಿಗೆ  ಠಾಣೆಗೆ ರಾತ್ರಿ 8:30 ಗಂಟೆಗೆ ವಾಪಸ್  ಬಂದು ಆಸಾಮಿ ವಿರುದ್ದ   ಠಾಣಾ ಮೊ.ನಂ: 86/2017  ಕಲಂ:32(3) ಕೆ.ಈ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 157/2017 ಕಲಂ 324,504,506 ಐಪಿಸಿ

ದಿನಾಂಕ-02-09-2017 ರಂದು ರಾತ್ರಿ 7-00 ಗಂಟೆಗೆ ಪಿರ್ಯಾದಿಯಾದ ಮಂಜುಳ ಕೋಂ ತಿಮ್ಮಯ್ಯ, 30 ವರ್ಷ, ಸಾದರು ಜನಾಂಗ, ಗೃಹಿಣಿ, ಹುಲಿಯಪುರ ಗ್ರಾಮ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೆಂಧರೆ ದಿನಾಂಕ 01/09/2017 ರಂದು ಸಾಯಿಂಕಾಲ ಸುಮಾರು 7-30 ಗಂಟೆಯಲ್ಲಿ ನಾವುಗಳು ವಾಸವಾಗಿರುವ ತೋಟದ ಮನೆಯಲ್ಲಿ ಇರುವಾಗ್ಗೆ ನಮ್ಮ ಪಕ್ಕದ ಮನೆಯಲ್ಲಿ ವಾಸವಾಗಿರುವ ನನ್ನ ಮೈದನಾದ ಹೆಚ್.ವಿ ಪ್ರವೀಣ್  ಎಂಬುವರು ಯಾವುದೋ ಹಿಂದಿನ ದ್ವೇಷ ಇಟ್ಟುಕೊಂಡು ಏಕಾಏಕಿ ನಮ್ಮ ಮನೆಯ  ಬಳಿ  ಬಂದು ಬಾಯಿಗೆ ಬಂದಂತೆ ಅವ್ಯಾಚ್ಚ ಶಬ್ದಗಳಿಂದ ಸೂಳೆ ಮುಂಡೆ ಬೋಳಿ ಮುಂಡೆ ಅಂತ ಇತ್ಯಾದಿಯಾಗಿ ಬಾಯಿಗೆ ಬಂದಂತೆ ನನಗೆ ಬೈಯುತ್ತಾ  ಅವನು ತಂದಿದ್ದ ಮಚ್ಚಿನಲ್ಲಿ ನನ್ನ ತಲೆಗೆ ಹೊಡೆದು ರಕ್ತ ಗಾಯಪಡಿಸಿದನು. ನಾನು ಮತ್ತು ನನ್ನ ಅತ್ತೆ ಮತ್ತು ಮಗಳು ಇಬ್ಬರು  ಕಿರಿಚಿಕೊಂಡಾಗ ನನ್ನ ಗಂಡ ತಿಮ್ಮಯ್ಯನವರು ಮನೆಯಿಂದ ಹೊರಗೆ ಬಂದು  ಯಾಕೆ ಈ ರೀತಿ ಗಲಾಟೆ ಮಾಡುತ್ತೀಯಾ ಅಂತ ಕೇಳಿದಕ್ಕೆ ನನ್ನ ಗಂಡನನ್ನು  ಜೋರಾಗಿ ತಳ್ಳುತ್ತಿರುವಾಗ್ಗೆ ಈ ಗಲಾಟೆ ಶಬ್ದ ಕೇಳಿಸಿದ  ನಮ್ಮ ಅಕ್ಕ ಪಕ್ಕದ ತೋಟದಲ್ಲಿ ವಾಸವಾಗಿರುವ ಕೃಷ್ಣಪ್ಪನವರು ಮತ್ತು ಚಂದ್ರಪ್ಪನವರು ಓಡಿ ಬಂದು  ಈ ಗಲಾಟೆಯನ್ನು ಬಿಡಿಸಿದರು. ನನ್ನ ಮೈದನಾದ ಹೆಚ್.ವಿ. ಪ್ರವೀಣ್ ಎಂಬುವರು ಕೈ ಯಲ್ಲಿ ಮಚ್ಚನ್ನು ಕಿತ್ತುಕೊಂಡನು. ಅವನು ಓಡಿ ಹೋಗುವಾಗ ನಿಮ್ಮನ್ನು ಸಾಯಿಸದೇ ಬಿಡುವುದಿಲ್ಲವೆಂತ ಪ್ರಾಣ ಬೆದರಿಕೆ ಹಾಕಿದನು. ನಂತರ ನನ್ನ ಗಂಡನವರು ಬಾಬ್ತು ಬೈಕ್‌ನಲ್ಲಿ ನನ್ನನ್ನು ಚಿಕತ್ಸೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದ್ದು ನಾನು ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ನನ್ನ ಮೇಲೆ ಗಲಾಟೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಹೆಚ್.ವಿ. ಪ್ರವೀಣ್ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿರುತ್ತೇನೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 157/2017 ಕಲಂ 324,504,506 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 21 guests online
Content View Hits : 230046