lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2017 >
Mo Tu We Th Fr Sa Su
        1 3
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 30  
Saturday, 02 September 2017
Crime Incidents 02-09-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 156/2017 ಕಲಂ 279,337 ಐಪಿಸಿ

ದಿನಾಂಕ-01-09-2017 ರಂದು ಮಧ್ಯಾಹ್ನ 3-30 ಗಂಟೆಗೆ ಪಿರ್ಯಾದಿಯಾದ ಶಾರುಖ್‌ ಖಾನ್‌ ಬಿನ್ ಫಯಾಜ್‌ ಉಲ್ಲಾ ಖಾನ್‌, 27 ವರ್ಷ, ಮುಸ್ಲಿಂ, ಡ್ರೈವರ್ ಕೆಲಸ, ಸಿರಿವರ ರಸ್ತೆ. ನಾಗವಲ್ಲಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೆಂದರೆ  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಮತ್ತು ನನ್ನ ಸ್ನೇಹಿತನಾದ ಸೈಯದ್ ಕರೀಂ ಪೀರ್ @ ತೌಸಿಫ್‌ ಇಬ್ಬರೂ ದಿನಾಂಕ:30-08-2017 ರಂದು ನಾಗವಲ್ಲಿ ಗ್ರಾಮದ ಮುಬಾರಕ್‌ ರವರ ಟೀ ಅಂಗಡಿಯ ಮುಂಭಾಗದಲ್ಲಿ ಮದ್ಯಾಹ್ನ ಸುಮಾರು 01-00 ಗಂಟೆ ಸಮಯದಲ್ಲಿ ಟೀ ಕುಡಿಯುತ್ತಾ ನಿಂತಿದ್ದೆವು. ಆಗ ಅದೇ ಸಮಯಕ್ಕೆ ತುಮಕೂರು ಕಡೆಯಿಂದ ಸಿರಿವರ ಕಡೆಗೆ ಹೋಗಲು ಬಂದು ಒಂದು ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ತುಮಕೂರು-ಕುಣಿಗಲ್‌ ರಸ್ತೆಯಿಂದ ಸಿರಿವರ ಕಡೆಗೆ ಏಕಾಏಕಿ ತಿರುಗಿಸಿದ್ದರಿಂದ ಹಾಗೂ ಅದೇ ಸಮಯಕ್ಕೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಒಂದು ದ್ವಿಚಕ್ರ ವಾಹನದ ಸವಾರ ತನ್ನ ಹಿಂಭಾಗದಲ್ಲಿ ಒಂದು ಹೆಂಗಸನ್ನು ಕೂರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು, ಎರಡೂ ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿ ಹೊಡೆಸಿಕೊಂಡು ಅಪಘಾತಪಡಿಸಿಕೊಂಡು ಎರಡೂ ದ್ವಿಚಕ್ರ ವಾಹನದಲ್ಲಿದ್ದವರು ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದರು. ನಂತರ ನಾನು ಹಾಗೂ ಸೈಯದ್ ಕರೀಂ ಪೀರ್ @ ತೌಸಿಫ್‌ ಇಬ್ಬರೂ ಹೋಗಿ ಸದರಿಯವರುಗಳನ್ನು ಮೇಲಕ್ಕೆ ಎತ್ತಿ ಉಪಚರಿಸಿ ನೋಡಲಾಗಿ, ತುಮಕೂರು ಕಡೆಯಿಂದ ಸಿರಿವರ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನದ ಸವಾರನ ಹೆಸರು ಮಹೇಶ, ಮೈಸೂರು ಎಂತ ತಿಳಿಯಿತು. ಮಹೇಶ ರವರಿಗೆ ಕಾಲಿಗೆ ಏಟು ಬಿದ್ದು ರಕ್ತಗಾಯವಾಗಿತ್ತು. ಮಹೇಶ ರವರ ದ್ವಿಚಕ್ರ ವಾಹನದ ನಂಬರ್‌ ನೋಡಲಾಗಿ ಕೆಎ-54-ಹೆಚ್-5648 ಆಗಿತ್ತು. ಕುಣಿಗಲ್‌ ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನದ ಸವಾರನ ಹೆಸರು ವಿಳಾಸ ತಿಳಿಯಲಾಗಿ ಚಿಕ್ಕತಿಮ್ಮಯ್ಯ ಬಿನ್ ಚಿಕ್ಕವೆಂಕಟಯ್ಯ, ಬನ್ನಿಕುಪ್ಪೆ, ಹೆಬ್ಬೂರು ಹೋಬಳಿ ಎಂತಲೂ, ಹಿಂಬದಿಯಲ್ಲಿ ಕುಳಿತ್ತಿದ್ದವರು ಚಿಕ್ಕತಿಮ್ಮಯ್ಯ ರವರ ಹೆಂಡತಿಯಾದ ಗೌರಮ್ಮ ಎಂತಾ ತಿಳಿಯಿತು. ಚಿಕ್ಕತಿಮ್ಮಯ್ಯ ರವರಿಗೆ ಬಲಗೈಗೆ, ಮುಖಕ್ಕೆ, ಬಲತೊಡೆಗೆ ಗಾಯಗಳಾಗಿದ್ದವು. ಗೌರಮ್ಮ ರವರಿಗೆ ಬಲತೊಡೆ, ಹಣೆ ಮೇಲೆ, ಬಲಗೈಗೆ, ಬಲಗೆನ್ನೆಗೆ ಏಟು ಬಿದ್ದು ಗಾಯಗಳಾಗಿದ್ದವು. ಚಿಕ್ಕತಿಮ್ಮಯ್ಯ ರವರ ದ್ವಿಚಕ್ರ ವಾಹನದ ನಂಬರ್‌ ನೋಡಲಾಗಿ ಕೆಎ-04-ಜೆ.ಜೆ-8500 ಆಗಿತ್ತು. ನಂತರ ಗಾಯಗೊಂಡಿದ್ದ ಮೂರು ಜನರನ್ನು ನಾನು ಹಾಗೂ ಸೈಯದ್ ಕರೀಂ ಪೀರ್ @ ತೌಸಿಫ್‌ ಇಬ್ಬರೂ ಸೇರಿಕೊಂಡು ಯಾವುದೋ ಒಂದು ಆಟೋದಲ್ಲಿ ನಾಗವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದರು. ಆದ್ದರಿಂದ ತಮ್ಮ ದ್ವಿಚಕ್ರ ವಾಹನಗಳನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣರಾದ ಮಹೇಶ ಹಾಗೂ ಚಿಕ್ಕತಿಮ್ಮಯ್ಯ ರವರುಗಳ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು, ನಾನು ನನ್ನ ಸ್ನೇಹಿತನ ತಿಥಿ ಕಾರ್ಯಕ್ಕೆ ಹೋಗಿದ್ದರಿಂದ ಈ ದಿವಸ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ. ಅಪಘಾತಪಡಿಸಿದ ಹಾಗೂ ಅಪಘಾತಕ್ಕೊಳಗಾದ ಎರಡೂ ದ್ವಿಚಕ್ರ ವಾಹನಗಳು ಮುಬಾರಕ್‌ ರವರ ಟೀ ಅಂಗಡಿಯ ಬಳಿ ನಿಲ್ಲಿಸಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 146/2017 ಕಲಂ: 354 ಐ.ಪಿ.ಸಿ

ದಿನಾಂಕ: 01/09/2017 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿ ಹಾಜೀರಾ ಕೋಂ ಅಲ್ವಾರಿಸ್ 22 ವರ್ಷ, 3ನೇ ಕ್ರಾಸ್, ಗಾಂಧಿನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ದಿನಾಂಕ: 01/09/2017 ರಂದು ಮಧ್ಯಾಹ್ನ 1-00 ಗಂಟೆಯಲ್ಲಿ ಮನೆಯಲ್ಲಿದ್ದಾಗ ಶಫೀರ್ ರವರ ಮಗ ಜುಬೇರ ಮತ್ತು ಇನ್ನೊಬ್ಬ ಹುಡುಗ ನಮ್ಮ ಮನೆಯ ಬಳಿ ಬಂದು ವಾಜೀದ್, ವಾರು , ಖಾಜಾ ಮತ್ತು ನಿಮ್ಮ ಅತ್ತೆ ಸಾಜಿದಾ ಬೇಗಂ ಎಲ್ಲಿದ್ದಾರೆ ಎಂದು ಕೇಳಿದ್ದು, ಅದಕ್ಕೆ ನಾನು ಮನೆಯಲ್ಲಿ ಇಲ್ಲಾ ಎಂದು ತಿಳಿಸಿದ್ದರಿಂದ ಜುಬೇರ ಮತ್ತೊಬ್ಬ ಹುಡುಗ ಒಳಗಡೆ ಬಂದು ನನ್ನ ಕೈಯನ್ನು ಹಿಡಿದುಕೊಂಡು ಎಲ್ಲಿ ಹೋಗಿದ್ದಾರೆ ತೋರಿಸು ಬಾ ಎಂದು ಕೈ ಹಿಡಿದು ಎಳೆದಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

 

ತುಮಕೂರು ಪೊಲೀಸ್ ಠಾಣೆ ಮೊ.ಸಂ 143/17 ಕಲಂ 379 ಐಪಿಸಿ

ದಿನಾಂಕ 01-09-2017 ರಂದು ರಾತ್ರಿ 07-30 ಗಂಟೆಗೆ ಪಿರ್ಯಾದಿ ಭೀಮಯ್ಯ ಬಿನ್ ಮೂಡ್ಲಯ್ಯ ಮಾಸ್ತಯ್ಯನಪಾಳ್ಯ ತುಮಕೂರು ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೆನೆಂದರೆ, ದಿನಾಂಕ 31-08-2017 ರಂದು ಮಧ್ಯಾಹ್ನ ಸುಮಾರು 04-30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಹೆಂಡತಿ, ಮಗಳು ತುಮಕೂರು ನಗರದ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ತುಮಕೂರಿನಿಂದ ಶಿರಾ ಕಡೆಗೆ ಹೋಗುವ ಬಸ್ಸಿಗೆ ಹೋಗಲು ಬಸ್ಸು ಹತ್ತಲು ಹೋದಾಗ ಬಸ್ಸು ಹತ್ತುವ ಸಮಯದಲ್ಲಿ ನನಗೆ ಪರಿಚಯವಿಲ್ಲದ 5-6 ಜನ ಆಸಾಮಿಗಳು ನನ್ನನ್ನು ತಳ್ಳಾಡಿಕೊಂಡು ಬಸ್ಸು ಹತ್ತಿದ್ದು ನನ್ನ ಎಡಭಾಗದ ಚಡ್ಡಿಯ ಜೇಬನ್ನು ಬ್ಲೇಡಿನಿಂದ ಕಟ್ ಮಾಡಿ ಜೇಬಿನಲ್ಲಿದ್ದ ಒಂದು ಲಕ್ಷ ರೂ. ಹಣವನ್ನು ಕಳ್ಳತನ ಮಾಡಿರುತ್ತಾರೆ. ಆದ್ದರಿಂದ ಅವರನ್ನು ಪತ್ತೆ ಮಾಡಿಕೊಡಲು ಕೋರಿ ಇತ್ಯಾದಿ.

 

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 76 guests online
Content View Hits : 272941