lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ. -: Date: 24-10-17 :- ತಿಲಕ್‌‌ಪಾರ್ಕ್‌ ಪೊಲೀಸರ ಕಾರ್ಯಾಚರಣೆ ಸರಗಳ್ಳನ... >>     >> ಮಾನ್ಯರೆ, ದಿನಾಂಕ: 21-10-2017 ರ ಶನಿವಾರ ದಂದು ಬೆಳಗ್ಗೆ 8:00 ಗಂಟೆ ಗೆ  ಹುತಾತ್ಮ ರ ದಿನಾಚರಣೆ... >> ದಿನಾಂಕ: 16-10-2017 :: ಪತ್ರಿಕಾ ಪ್ರಕಟಣೆ. :: -: ತಿಲಕ್ ಪಾರ್ಕ್‌  ಪೊಲೀಸರ ಕಾರ್ಯಾಚರಣೆ :- ಮನೆ... >> ಪತ್ರಿಕಾ ಪ್ರಕಟಣೆ   ತಿಪಟೂರು ನಗರದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಲೈಂಗಿಯ... >> ನಿರ್ಗಮನ ಪಥ ಸಂಚಲನ 2017 >> ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ತುಮಕೂರು ನಗರದಲ್ಲಿ ಸಂಚಾರಿ ನಿಯಮಗಳನ್ನು... >>   -:  ದಿನಾಂಕ: 03/10/2017  :- ::   ಪತ್ರಿಕಾ ಪ್ರಕಟಣೆ     :: ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ... >>   : : ಪತ್ರಿಕಾ ಪ್ರಕಟಣೆ : : ::   ದಿನಾಂಕ: 21-09-2017 : : ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ, ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< August 2017 >
Mo Tu We Th Fr Sa Su
  1 2 3 4 5 6
7 8 9 10 11 13
14 15 16 17 18 19 20
21 22 23 24 25 26 27
28 29 30 31      
Saturday, 12 August 2017
Press Note 11-07-2017

ಪತ್ರಿಕಾ ಪ್ರಕಟಣೆ.

48 ಗಂಟೆಗಳಲ್ಲಿ    ಕೊಲೆ ಆರೋಪಿಯ ಬಂಧನ

*******

ದಿನಾಂಕ 08/08/2017 ರಂದು ರಾತ್ರಿ ಸುಮಾರು. 1-00 ಗಂಟೆ ಸಮಯದಲ್ಲಿ ಗುಬ್ಬಿ ತಾಲ್ಲೋಕು ಚೇಳೂರು  ಪೊಲೀಸ್ ಠಾಣಾ ವ್ಯಾಪ್ತಿಯ ಹಾಗಲವಾಡಿ  ಗ್ರಾಮದಲ್ಲಿ ಲೋಕೇಶ 40 ವರ್ಷ ಎಂಬುವರು ತಮ್ಮ ಮನೆಯ ಮುಂದೆ ಮಲಗಿದ್ದಾಗ ಇವರು ಕೊಲೆಯಾಗಿದ್ದು  ಈ ಕೊಲೆಯನ್ನು  ಅದೇ ಗ್ರಾಮದ ಹಟ್ಟಿಯವನು ಯಾವುದೋ ಉದ್ದೇಶದಿಂದ ಕೊಲೆ ಮಾಡಿರುತ್ತಾನೆಂದು ನೀಡಿದ ಪಿರ್ಯಾದು ಮೇರೆಗೆ ಚೇಳೂರು  ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬರ್ 128/2017 ಕಲಂ 302. ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ತಕ್ಷಣ ಕಾರ್ಯ ನಿರತರಾದ ಪೊಲೀಸಿನವರು 48 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿರುತ್ತಾರೆ.

 

ಈ ಪ್ರಕರಣಗಳಲ್ಲಿ ಆರೋಪಿಯನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ, ಶ್ರೀಮತಿ ದಿವ್ಯಾ ಗೋಪಿನಾಥ್ ಐ.ಪಿ.ಎಸ್. ರವರು ವಿಶೇಷ ತಂಡವನ್ನು ರಚಿಸಿದ್ದು ಈ ತಂಡವು ತುಮಕೂರು ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವೆಂಕಟೇಶನಾಯ್ಡು ರವರ ಮಾರ್ಗದರ್ಶನದಲ್ಲಿ, ಗುಬ್ಬಿ ವೃತ್ತ ನಿರೀಕ್ಷಕರಾದ ಶ್ರೀ ರಂಗಸ್ವಾಮಿ, ಚೇಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಎಫ್,ಕೆ ನದಾಫ್ ಮತ್ತು ಸಿಬ್ಬಂದಿಗಳಾದ, ಶ್ರೀನಿವಾಸ, ನಾಗರಾಜ ಹೆಚ್,ಆರ್,  ನಟರಾಜು,   ಪಾತರಾಜು,  ಮಧುಸೂಧನ್, ಮಂಜುನಾಥ, ಧನಂಜಯ ರವರುಗಳೊನ್ನೊಳಗಂಡ ತಂಡವು ಕೊಲೆ ಆರೋಪಿಯಾದ ನರಸಿಂಹಮೂತರ್ಿ @ ನರಸಿಂಹಯ್ಯ ಬಿನ್ ನರಸಿಂಹಯ್ಯ, 21 ವರ್ಷ, ಆದಿಕನರ್ಾಟಕ ಜನಾಂಗ ದುರ್ಗಮ್ಮ ದೇವಿ ಪೂಜಾರಿಕೆ ಕೆಲಸ, ಈತನನ್ನು 48 ಗಂಟೆಯೊಳಗಾಗಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಯು ಲೋಕೇಶನನ್ನು ಕೊಲೆ ಮಾಡುವ ಉದ್ದೇಶದಿಂದ ದಿನಾಂಕ 08/08/2017 ರಂದು ರಾತ್ರಿ 1-00 ಗಂಟೆ  ಸಮಯದಲ್ಲಿ  ಹಾಗಲವಾಡಿ ಗ್ರಾಮದ ದುರ್ಗಮ್ಮ ದೇವಿ ದೇವಸ್ಥಾನದಿಂದ ತಂದಿದ್ದ ಮಚ್ಚನ್ನು  ಹಿಡಿದುಕೊಂಡು ಲೋಕೇಶನ ಮನೆಯ ಬಳಿ ಬಂದು ಮನೆಯ ಮುಂದೆ ಮಲಗಿದ್ದ ಲೋಕೇಶನ ತಲೆಯ ಹಿಂಭಾಗಕ್ಕೆ  ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿರುತ್ತಾನೆ.

ಪೊಲೀಸರು ಈ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ವಿಶೇಷ ತಂಡವನ್ನು ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.

 

* * * * *


Crime Incidents 12-08-17

ಹಂದನಕೆರೆ ಠಾಣಾ ಮೊನಂ.61/2017 ಕಲಂ 379 ಐಪಿಸಿ ಜೊ 21 ಎಂಎಂಡಿಆರ್ ಆಕ್ಟ್ & 44 ಕೆಎಂಎಂಸಿಆರ್ ಆಕ್ಟ್

 

ದಿನಾಂಕ:11/08/2017 ರಂದು ಬೆಳಿಗ್ಗೆ  11.00 ಗಂಟೆಗೆ ಠಾಣೆಗೆ ಬಂದು ಪಂಚನಾಮೆ ಮೂಲಕ ವಶಪಡಿಸಿಕೊಂಡಿದ್ದ ಮರಳು ತುಂಬಿದ ಟ್ರಾಕ್ಟರ್ ಹಾಗು ಟ್ರೈಲರ್ ಹಾಗು ಇಬ್ಬರು ಆಸಾಮಿಗಳನ್ನು  ಠಾಣೆಗೆ ಕರೆತಂದು  ಪ್ರಕರಣ ದಾಖಲಿಸಿದ್ದ ಪ್ರಕರಣದ ಸಾರಾಂಶವೇನೆಂದರೆ ಈ ದಿನ ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಚಿ ನಾ ಹಳ್ಳಿಯಲ್ಲಿ  ಪೆರೇಡ್‌ಗೆ ಭಾಗವಹಿಸಿ ಪೆರೇಡ್‌ ಮುಗಿಸಿಕೊಂಡು ವಾಪಸ್ಸು ಹಂದನಕೆರೆ ಪೊಲೀಸ್‌ ಠಾಣೆಗೆ ಬರುವಾಗ ಬಾತ್ಮಿದಾರರಿಂದ ಠಾಣಾ ಸರಹದ್ದಿನ ಮಾದಾಪುರ ಗ್ರಾಮದ ಬಳಿ ಇರುವ ಕೆರೆಯಲ್ಲಿ ಯಾರೋ ಒಂದು ಟ್ರಾಕ್ಟರ್‌ ಮತ್ತು ಟ್ರೈಲರ್‌ ಗೆ ಅಕ್ರಮವಾಗಿ ಕಳ್ಳತನದಿಂದ ಯಾವುದೇ ಪರವಾನಗಿ ಪಡೆಯದೇ ಮರಳನ್ನು ತುಂಬುತ್ತಿರುತ್ತಾರೆಂತ ಬಂದ ಮಾಹಿತಿ ಮೇರೆಗೆ ನಾನು ಜೀಪ್ ನಲ್ಲಿ ಬೆಳಿಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ಮಾದಾಪುರದ ಕೆರೆಯ ಬಳಿಗೆ ಹೋಗಿ ಕೆರೆಯ ಒಳಗೆ ಒಂದು ಟ್ರಾಕ್ಟರ್‌ ಮತ್ತು ಟ್ರೈಲರ್‌ ಗೆ ಮರಳನ್ನು ಇಬ್ಬರು ಅಸಾಮಿಗಳು ತುಂಬುತ್ತಿದ್ದವರನ್ನು  ಮತ್ತು ಅರ್ಧಭಾಗದಷ್ಟು ಮರಳು ತುಂಬಿದ್ದ ಟ್ರೈಲರ್ ನನ್ನು ಹಿಡಿದುಕೊಂಡು ಪಂಚಾಯ್ತಿದಾರರ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ಅಕ್ರಮವಾಗಿ ಕಳ್ಳತನದಿಂದ ಯಾವುದೇ ಪರವಾನಗಿ ಪಡೆಯದೆ ಮರಳು ಹುಂಬಿತ್ತಿದ್ದ ಇಬ್ಬರು ಆಸಾಮಿಗಳು ಹಾಗು ಅರ್ದ ಭಾಗ ಮರಳು ತುಂಬಿದ್ದ ಟ್ರಾಕ್ಟರ್ ಹಾಗು ಟ್ರೈಲರ್ ಅನ್ನು ವಶಕ್ಕೆ ಪಡೆದು ನಂತರ ಠಾಣೆಗೆ ಬಂದು ಪ್ರಕರಣ ದಾಖಲು ಮಾಡಿರುತ್ತೆ.

 

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.76/2017, ಕಲಂ: 41(ಡಿ),102 ಸಿ.ಆರ್.ಪಿ.ಸಿ ರೆ/ವಿ 379 ಐಪಿಸಿ.

ದಿನಾಂಕ:11/08/2017 ರಂದು ಬೆಳಿಗ್ಗೆ 10:30 ಗಂಟೆಗೆ ಠಾಣಾ ಹೆಚ್.ಸಿ-159 ಮೆಹಬೂಬ್ ಖಾನ್ ರವರು ಆರೋಪಿ ಮತ್ತು ಮಾಲು ಸಮೇತ ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ಈ ದಿನ ಅಂದರೆ ದಿನಾಂಕ:11/08/2017 ರಂದು ನನಗೆ ಮತ್ತು ಠಾಣಾ ಹೆಚ್.ಸಿ-96 ಬಸವರಾಜು.ಎಂ.ಎಲ್. ರವರಿಗೆ ಠಾಣಾ ಸರಹದ್ದು ಗ್ರಾಮಗಳಲ್ಲಿ ಗಸ್ತು ಕರ್ತವ್ಯಕ್ಕೆ ಠಾಣಾ ಪಿ.ಎಸ್.ಐ.ರವರು ನೇಮಕ ಮಾಡಿದ್ದು, ನೇಮಕದಂತೆ ನಾನು ಮತ್ತು ಹೆಚ್.ಸಿ-96 ಬಸವರಾಜು.ಎಂ.ಎಲ್. ಇಬ್ಬರೂ ಸಮವಸ್ತ್ರದಲ್ಲಿ ನನ್ನ ಬಾಬ್ತು ದ್ವಿ ಚಕ್ರ ವಾಹನದಲ್ಲಿ ಹೊರಟು ಮಿಡಿಗೇಶಿ, ಕಸಾಪುರ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ರೆಡ್ಡಿಹಳ್ಳಿ ಗ್ರಾಮಕ್ಕೆ ಹೋಗಲು ರೆಡ್ಡಿಹಳ್ಳಿ-ಮಿಡಿಗೇಶಿ ರಸ್ತೆಯಲ್ಲಿ ಕಸಾಪುರ ಬಿಟ್ಟು ಸತ್ತಿಗಾನಹಳ್ಳಿ ಕ್ರಾಸ್ ಹತ್ತಿರ ಇದೇ ದಿನ ಬೆಳಿಗ್ಗೆ ಸುಮಾರು 09:30 ಗಂಟೆಯ ಸಮಯದಲ್ಲಿ ರೆಡ್ಡಿಹಳ್ಳಿ ಕಡೆಗೆ ಹೋಗುತ್ತಿರುವಾಗ್ಗೆ ರೆಡ್ಡಿಹಳ್ಳಿ ಕಡೆಯಿಂದ ಎರಡು ದ್ವಿ ಚಕ್ರ ವಾಹನಗಳಲ್ಲಿ ಬಂದ ಇಬ್ಬರು ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮಿಡಿಗೇಶಿ ಕಡೆಗೆ ಬರುತ್ತಿದ್ದವರು ಸಡನ್ನಾಗಿ ಅವರು ಬರುತ್ತಿದ್ದ ದ್ವಿ ಚಕ್ರ ವಾಹನಗಳನ್ನು  ಹಿಂದಕ್ಕೆ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದರು, ಆಗ ನಮಗೆ ಅನುಮಾನ ಬಂದು ನಾವು ಸಹ ನಮ್ಮ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಆಸಾಮಿಗಳ ಬಳಿಗೆ ಹೋಗುವಷ್ಟರಲ್ಲಿ ಒಂದು ದ್ವಿ ಚಕ್ರ ವಾಹನದಲ್ಲಿದ್ದ ಆಸಾಮಿಯು ದ್ವಿ ಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು, ಇನ್ನೊಂದು ದ್ವಿ ಚಕ್ರ ವಾಹನದಲ್ಲಿದ್ದ ಇನ್ನೊಬ್ಬ ಆಸಾಮಿಯು ಸಹ ದ್ವಿ ಚಕ್ರ ವಾಹನವನ್ನು ಬಿಟ್ಟು ಓಡಿ ಹೋಗಲು ಯತ್ನಿಸಿದವನನ್ನು ನಾನು ಮತ್ತು ಬಸವರಾಜು ಇಬ್ಬರು ಬೆನ್ನಟ್ಟಿ ಹಿಡಿದುಕೊಂಡಾಗ ಆತನು ಗಾಬರಿಗೊಂಡಿದ್ದನು. ನಂತರ ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಆತನು ತನ್ನ ಹೆಸರು ನಾಗರಾಜ @ ಯರ್ರೋಡ್ ನಾಗರಾಜ ಬಿನ್ ಧರ್ಮವರಂ ನಾರಾಯಣ, 25 ವರ್ಷ, ಬೊಮ್ಮಲಾಟಿ ಜನಾಂಗ, ಟ್ರ್ಯಾಕ್ಟರ್ ಡ್ರೈವರ್, 02 ನೇ ಅಡ್ಡ ರಸ್ತೆ, ಫೈಲ್ವಾನ್ ಕಾಲೋನಿ, ಕಮಲಾಪುರಂ ಗ್ರಾಮ, ಕಮಲಾಪುರಂ ಮಂಡಲ್, ಕಡಪ ಜಿಲ್ಲೆ, ಆಂಧ್ರ ಪ್ರದೇಶ ರಾಜ್ಯ ಎಂತ ಗಾಬರಿಯಲ್ಲಿ ತಿಳಿಸಿದನು. ನಂತರ ಆತನ ವಶದಲ್ಲಿದ್ದ ಕೆಎ-06-ಇ.ಜಿ-4704 ನೇ ನಂಬರಿನ ಹಿರೊ ಹೊಂಡ ಸ್ಪ್ಲೆಂಡರ್ ಪ್ರೋ ದ್ವಿ ಚಕ್ರ ವಾಹನ ಯಾರದು, ಅದರ ದಾಖಲಾತಿಗಳನ್ನು ತೋರಿಸುವಂತೆ ಕೇಳಿದಾಗ ಆತನು ನನ್ನ ಬಳಿ ಯಾವುದೇ ದಾಖಲಾತಿಗಳು ಇರುವುದಿಲ್ಲಾವೆಂತ ತಿಳಿಸಿದನು, ನಂತರ ಸದರಿ ದ್ವಿ ಚಕ್ರ ವಾಹನಕ್ಕೆ ಸಂಬಂಧಿಸಿದಂತೆ ವಿಚಾರ ಮಾಡಲಾಗಿ ಆಸಾಮಿಯು ಯಾವುದೇ ರೀತಿ ಸಮಂಜಸವಾದ ಉತ್ತರ ನೀಡಲಿಲ್ಲ. ನಂತರ ಆಸಾಮಿಯ ಜೊತೆಯಲ್ಲಿ ಬಂದು ದ್ವಿ ಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದ ಆಸಾಮಿಯ ಬಗ್ಗೆ ವಿಚಾರ ಮಾಡಲಾಗಿ ಆತನ ನನ್ನ ಬಾವನಾಗಿದ್ದು ಆತನ ಹೆಸರು ಪ್ರಕಾಶ ಬಿನ್ ಕುಕ್ಕದಾಸಿ, 26 ವರ್ಷ, ಬೊಮ್ಮಲಾಟಿ ಜನಾಂಗ, ಪಳವಳ್ಳಿ ಗ್ರಾಮ, ಪಾವಗಡ ತಾಲ್ಲೋಕು ಎಂತ ತಿಳಿಸಿದನು, ನಂತರ ಸದರಿ ಆಸಾಮಿಯ ಭಾವನಾದ ಪ್ರಕಾಶ ಬಿಟ್ಟು ಹೋಗಿರುವ ದ್ವಿ ಚಕ್ರ ವಾಹನ ಯಾರದು, ಅದರ ದಾಖಲಾತಿಗಳನ್ನು ತೋರಿಸುವಂತೆ ಆಸಾಮಿಯನ್ನು ಕೇಳಲಾಗಿ ಆಸಾಮಿಯು ದ್ವಿ ಚಕ್ರ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ತೋರಿಸದೇ ಸಮಂಜಸವಾದ ಉತ್ತರ ನೀಡದಿದ್ದರಿಂದ, ನಮಗೆ ಸದರಿ ಆಸಾಮಿಯ ಮೇಲೆ ಅನುಮಾನ ಬಂದಿದ್ದರಿಂದ, ಸದರಿ ಆಸಾಮಿ ನಾಗರಾಜನನ್ನು  ಮತ್ತು ಆತನು ವಶದಲ್ಲಿದ್ದ   ಕೆಎ-06-ಇ.ಜಿ-4704 ನೇ ದ್ವಿ ಚಕ್ರ ವಾಹನವನ್ನು ಹಾಗೂ ಸದರಿ ಆಸಾಮಿಯ ಬಾವ ಓಡಿಸಿಕೊಂಡು ಬಂದು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಕೆಎ-40-ಯು-5844 ಹಿರೊ ಸ್ಪ್ಲೆಂಡರ್ ದ್ವಿ ಚಕ್ರ ವಾಹನದೊಂದಿಗೆ ಬೆಳಿಗ್ಗೆ 10:30 ಗಂಟೆಗೆ ಠಾಣೆಗೆ ಕರೆದುಕೊಂಡು ಠಾಣಾ ಪಿ.ಎಸ್.ಐ.ರವರ ಮುಂದೆ ಹಾಜರುಪಡಿಸಿ ಮುಂದಿನ ನಡವಳಿಕೆ ಬಗ್ಗೆ ನೀಡಿದ ವರದಿಯ ಅಂಶವಾಗಿರುತ್ತೆ.

 


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 129 guests online
Content View Hits : 181241