lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

Report Archive

< August 2017 >
Mo Tu We Th Fr Sa Su
  1 2 3 4 5 6
7 8 9 11 12 13
14 15 16 17 18 19 20
21 22 23 24 25 26 27
28 29 30 31      
Thursday, 10 August 2017
Crime Incidents 10-08-17

ಚೇಳೂರು ಪೊಲೀಸ್ ಠಾಣಾ ಮೊ.ನಂ.128/2017 ಕಲಂ  302 ಐ.ಪಿ.ಸಿ

ದಿನಾಂಕ;09/08/2017 ರಂದು ಬೆಳಗಿನ  ಜಾವ 5-30  ಗಂಟೆ  ಸಮಯದಲ್ಲಿ  ಕೃತ್ಯ  ನಡೆದ ಸ್ಥಳದಲ್ಲಿ  ಪಿರ್ಯಾದಿ  ಶ್ರೀಮತಿ ಬಸಮ್ಮ  ಕೋಂ  ಲೇ ಕೃಷ್ಣಮೂರ್ತಿ, 65 ವರ್ಷ,  ವಕ್ಕಲಿಗರು,  ಮನೆ  ಕೆಲಸ,  ಹಾಗಲವಾಡಿ  ಹೋ,  ಗುಬ್ಬಿ  ತಾಲ್ಲೋಕ್. ರವರು  ಹಾಗಲವಾಡಿ  ವಾಸಿ  ಕೃಷ್ಣ ಮುರ್ತಿ ರವರಿಂದ  ಸ್ಥಳದಲ್ಲಿ  ಹೇಳಿ  ಬರೆಸಿಕೊಟ್ಟ ಲಿಖಿತ  ದೂರನ್ನು  ಪಡೆದು  ಠಾಣೆಗೆ 6-15 ಗಂಟೆಗೆ ಹಾಜರಾಗಿ  ಪ್ರಕರಣ ದಾಖಲಿಸಿದ ಪಿರ್ಯಾದು ಅಂಶವೇನಂದರೆ, ನಮ್ಮ ಯಜಮಾನರಾದ  ಕೃಷ್ಣಮೂರ್ತಿರವರು  ಹೀಗೆ ಸುಮಾರು 06  ತಿಂಗಳ  ಹಿಂದೆ  ಮೃತಪಟ್ಟಿದ್ದು,  ನಮಗೆ 05 ಜನ  ಗಂಡು ಮಕ್ಕಳಿದ್ದು,  1 ನೇ  ಧನಂಜಯ್ಯ, 2 ನೇ ಹೇಮಂತ ಕುಮಾರ್, 3 ನೇ ಮೃತ  ಲೋಕೇಶ 4 ನೇ ಸಿದ್ದರಾಮಯ್ಯ, 5 ನೇ ರಾಘವೇಂದ್ರರವರಾಗಿದ್ದು,  ನಮ್ಮಲ್ಲಿ  ಒಂದನೇ  ಧನಂಜಯ್ಯ  ಮತ್ತು  ಮೃತ  ಲೋಕೇಶ  ಇವರು  ಒಂದೇ ಮನೆಯಲ್ಲಿ  ವಾಸವಾಗಿದ್ದು,  2 ನೇ ಹೇಮಂತ ಕುಮಾರ್ ರವರು ಬೆಂಗಳೂರಿನಲ್ಲಿ  ಯಾವುದೋ  ಕಂಪನಿಯಲ್ಲಿ  ಕೆಲಸ ಮಾಡಿಕೊಂಡು  ಬೆಂಗಳೂರಿನಲ್ಲಿ  ವಾಸವಾಗಿರುತ್ತಾನೆ.  5 ನೇ  ರಾಘವೇಂದ್ರರವರು  ಹಾವೇರಿ  ಜಿಲ್ಲೆಯಲ್ಲಿ  ಸ್ಕೂಲ್  ಮಾಸ್ಟರ್  ಆಗಿ  ಕೆಲಸ ಮಾಡಿರುತ್ತಿರುತ್ತಾನೆ.  1 ನೇ  ಧನಂಜಯ್ಯ  ಮದುವೆಯಾಗಿರುವುದಿಲ್ಲ.  ಮೃತ  ಲೋಕೆಶನಿಗೆ  ಸಿ.ಎನ್ .ಹಳ್ಳಿ  ತಾ  ಮುದ್ದೇನಹಳ್ಳಿ  ಗ್ರಾಮದ ಜಯಮ್ಮ ಎಂಬುವರೊಂದಿಗೆ  ಮದುವೆಯಾಗಿದ್ದು,  ಜಯಮ್ಮ  ಹೀಗ್ಗೆ 10  ವರ್ಷಗಳ ಹಿಂದೆ ಗಂಡನನ್ನು  ಬಿಟ್ಟು  ಹೋಗಿರುತ್ತಾಳೆ.  ಇವರಿಗೆ  ಮಕ್ಕಳಿರುವುದಿಲ್ಲ.  ಧನಂಜಯ್ಯ ಮತ್ತು  ಲೋಕೇಶ ಇಬ್ಬರೂ  ಕೂಲಿ  ಕೆಲಸ ಮಾಡಿಕೊಂಡು  ನಮ್ಮ  ಮನೆಯಲ್ಲಿ  ನಾನು ಮಾಡಿದ ಊಟವನ್ನು  ಮಾಡಿಕೊಂಡು  ಜೀವನ ಮಾಡಿಕೊಂಡಿರುತ್ತಾನೆ.  ಮೃತ  ಲೋಕೇಶ ಕೂಲಿ  ನಾಲಿ ಮಾಡಿಕೊಂಡಿದ್ದು,  ಸ್ವಲ್ಪ  ಹಣವನ್ನು  ಕೂಡಿ ಹಿಟ್ಟುಕೊಂಡು  ಅವರಿಗೆ ಇವರಿಗೆ ಹಣವನ್ನು  ಸಾಲವಾಗಿ  ಕೊಟ್ದರುವ ವಿಚಾರವನ್ನು  ತಿಳಿಸಿರುತ್ತಾನೆ.  ಈ  ವಿಚಾರದಲ್ಲಿ  ನಮ್ಮ  ಗ್ರಾಮದ  ನರಸಿಂಹಯ್ಯ  ಬಿನ್  ನರಸಿಂಹಯ್ಯ  ಇವರಿಗೂ  ಸಹ  ಸಾಲವಾಗಿ  ಹಣವನ್ನು  ನೀಡಿದ್ದನು.  ದಿನಾಂಕ; 08/08/2017  ರಮದು  ರಾತ್ರಿ 9-00 ಗಂಟೆ ಸಮಯದಲ್ಲಿ  ನಾನು  ಮತ್ತು  ಧನಂಜಯ್ಯ  ಹಾಗೂ  ಮೃತ ಲೋಕೇಶ ಮೂರು   ಜನರು  ಊಟ ಮಾಡಿ  ಧನಂಜಯ್ಯ  ನಮ್ಮ  ಮನೆಯ ಪಕ್ಕದಲ್ಲಿ  ಇರುವ ಮನೆಯಲ್ಲಿ  ಮಲಗಿದ್ದು,  ಮೃತ  ಲೋಕೇಶ ನಮ್ಮ  ಮನೆಯ  ಮುಂಭಾಗ  ಮಲಗಿದ್ದ  ನಾನು  ಮನೆಯ  ಒಳಗೆ ಮೃತ  ಲೋಕೇಶ ನಮ್ಮ  ಮನೆಯ  ಮುಂಭಾಗ  ಮಲಗಿದ್ದು,  ರಾತ್ರಿ 12-00 ಗಂಟೆಯ  ಸಮಯದಲ್ಲಿ  ನಮ್ಮ  ಗ್ರಾಮದ ನರಸಿಂಹಮೂರ್ತಿ ರವರು  ನಮ್ಮ  ಮನೆಯ  ಹತ್ತಿರ  ಬಂದು  ನನ್ನ  ಮಗ ಧನಂಜಯ್ಯರವರನ್ನು  ಮಾತನಾಡಿಸಿಕೊಂಡು  ಧನಂಜಯ್ಯನ ಹತ್ತಿರ  ಬೀಡಿಯನ್ನು  ಕೇಳಿ  ಪಡೆದು  ಬೀಡಿ ಸೇದಿ  ಆಗ  ಲೋಕೆಶನು  ಸಹ ಏಚ್ಚರವಾಗಿದ್ದು,  ಆಗ  ಲೋಕೆಶನ  ಹತ್ತಿರ  ಮಾತನಾಡುತ್ತಿದ್ದಾಗ  ಧನಂಜಯ್ಯ  ಒಳಗೆ  ಹೋಗಿ  ಮಲಗಿದ್ದು,  ನರಸಿಂಹಮೂರ್ತಿರವರು  ಲೋಕೇಶನ  ಹತ್ತಿರ  ಮಾತನಾಡಿಕೊಂಡು  ಹಣದ  ವಿಚಾರದಲ್ಲಿ  ಇಬ್ಬರಿಗೂ  ಜಗಳವಾಗಿ  ರಾತ್ರಿ ಸುಮಾರು 1-00  ಗಂಟೆಯ ಸಮಯದಲ್ಲಿ  ನನ್ನ  ಮಗ ಮೃತ  ಕೋಕೆಶ  ನನ್ನನ್ನು  ನರಸಿಂಹಮೂರ್ತಿ  ಮಚ್ಚಿನಿಂದ ಹೊಡೆದನು. ಅಂತ  ಕೂಗಿಕೊಂಡನು.  ನಾನು ಹೊರ  ಬಂದು ನೋಡಲಾಗಿ ನನ್ನ  ಮಗ  ನನ್ನ  ಮನೆಯ  ಮುಂಬಾಗ  ರಕ್ತದ  ಮಡುವಿನಲ್ಲಿ  ಒದ್ದಾಡುತ್ತಿದ್ದನು.   ವಿಚಾರ ಮಾಡಲಾಗಿ  ನರಸಿಂಹಮೂರ್ತಿ  ಮಚ್ಚಿನಿಂದ ಹೊಡೆದು  ಹೋದ  ಎಂದು  ತಿಳಿಸಿದನು.  ನನ್ನ  ಮಗ  ಮೃತ  ಲೋಕೇಶನಿಗೆ  ಮಚ್ಚಿನಿಂದ ತಲೆಗೆ  ಹೊಡೆದು  ಕೊಲೆ  ಮಾಡಿರುವ  ನರಸಿಂಹ ಮೂರ್ತಿಯ  ಮೇಲೆ   ಕಾನೂನು  ರೀತ್ಯ  ಕ್ರಮ  ಜರುಗಿಸಬೇಕೆಂದು  ಕೋರಿ  ಇತ್ಯಾದಿಯಾದ  ನೀಡಿದ  ಪಿರ್ಯಾದು ಮೇರೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 148/2017 ಕಲಂ 279,337 ಐಪಿಸಿ.

ದಿನಾಂಕ 09/08/2017 ರಂದು ಸಾಯಿಂಕಾಲ 7-15 ಗಂಟೆಗೆ ಪಿರ್ಯಾದಿ ಶ್ರೀನಿವಾಸ ಮೂರ್ತಿ ಬಿನ್ ಮುನಿಯಪ್ಪ, ಪನ್ನಸಂದ್ರ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನಾಂಶವೇನೆಂದರೆ,  ದಿನಾಂಕ 05/08/2017 ರಂದು  ಬೆಳಿಗ್ಗೆ ಸುಮಾರು 10-30 ಗಂಟೆಗೆ ನಾನು ಮತ್ತು ನನ್ನ ತಾಯಿ ಸಾವಿತ್ರಮ್ಮ ಇಬ್ಬರೂ ನನ್ನ ಬಾಬ್ತು ಕೆಎ-06-ಇಟಿ-4105 ನೇ ಹಿರೋ ಹೊಂಡಾ ಸ್ಲೆಂಡರ್ ಪ್ರೋ  ದ್ವಿಚಕ್ರ ವಾಹನದಲ್ಲಿ ಇಬ್ಬರೂ ಚೊಟ್ಟನಹಳ್ಳಿ ಶ್ರೀ ಲಕ್ಷ್ಮೀದೇವರ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ಮತ್ತೆ ನಮ್ಮ ಗ್ರಾಮಕ್ಕೆ ವಾಪಸ್ಸು ಸಿರಿವಾರ ಮಾರ್ಗವಾಗಿ ಸಾಯಂಕಾಲ 5-30 ಗಂಟೆಗೆ ಸಮಯದಲ್ಲಿ ಕೋಡಿಮುದ್ದೇನಹಳ್ಳಿ ಗೇಟ್ ಬಳಿ ಬರುತ್ತಿರುವಾಗ್ಗೆ  ಎದುರುಕಡೆಯಿಂದ  ಕೆಎ-06-ಇ,ಎನ್-6041 ನೇ ಹಿರೋಹೊಂಡಾ ಶೈನ್ ದ್ವಿಚಕ್ರದ ಸವಾರನು ನಾಗವಲ್ಲಿ ಕಡೆಯಿಂದ  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾವು ಹೊಗುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದನು. ನಾನು ಮತ್ತು ನನ್ನ ತಾಯಿ ಸಾವಿತ್ರಮ್ಮ ಇಬ್ಬರೂ ರಸ್ತೆಯ ಮೇಲೆ ಬಿದ್ದೆವು. ನನಗೆ ಬಲಗಾಲಿಗೆ ತರಚಿದ ಗಾಯವಾಯಿತು ನನ್ನ ತಾಯಿಯವರೆಗೆ  ಎಡಗೈ ಕುತ್ತಿಗೆ ಮತ್ತು ಎಡಭಾಗದ ಕಾಲು ಮತ್ತು ಇತರೆ ಕಡೆ ರಕ್ತಗಾಯಗಳಾದವು. ನಂತರ ಅಪಘಾತ ಮಾಡಿದ ಸವಾರನನ್ನು ನೋಡಲಾಗಿ ಹೊನ್ನೇನಹಳ್ಳಿ ರಂಗಪ್ಪನ ಮಗ  ರವಿಕುಮಾರ ಅಂತ ತಿಳಿಯಿತು ಅಪಘಾತವಾದ ಎರಡು ವಾಹನಗಳು  ನಮ್ಮ ಪರಿಚಯಸ್ಥ ಮನೆ ಹತ್ತಿರ ನಿಲ್ಲಿಸಿ ನಂತರ ಸಾರ್ವಜನಿಕರ ಸಹಾಯದಿಂದ ನಾನು ಮತ್ತು ಅಪಘಾತ ಪಡಿಸಿದ ಸವಾರ ರವಿಕುಮಾರ ಇಬ್ಬರೂ ಸೇರಿ  ನಮ್ಮ ತಾಯಿಯನ್ನು ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ತುಮಕೂರು ನಗರದ ಶ್ರೀದೇವಿ ಅಸ್ಪತ್ರೆಯ ವೈದ್ಯರಲ್ಲಿ ತೋರಿಸಲಾಗಿ  ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ನಗರದ ಹೇಮಾವತಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿರುತ್ತೇನೆ ನನ್ನ ತಾಯಿಯನ್ನು ಅಸ್ಪತ್ರೆಯಲ್ಲಿ ಯಾರು ನೋಡಿಕೊಳ್ಳುವವರು ಇಲ್ಲದ ಕಾರನ ಇಲ್ಲಿಯವರೆಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು  ಅಪಘಾತ ಉಂಟು ಮಾಡಿದ  ಕೆಎ-06-ಇ.ಎನ್-6041 ನೇ ಹಿರೋಹೊಂಡಾ ಶೈನ್ ದ್ವಿಚಕ್ರ ಸವಾರ ರವಿಕುಮಾರನ  ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಿಕೊಂಡಿರುತ್ತೇನೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ:153/2017 u/s  279 337 IPC R/W 187 IMV Act

ಪಿರ್ಯಾದಿ ದೊಡ್ಡಹನುಮಯ್ಯ ಬಿನ್ ನರಸಪ್ಪ ಆದಿಕರ್ನಾಟಕ, 53 ವರ್ಷ, ಶಟ್ಟಿಹಳ್ಳಿ ಗ್ರಾಮ , ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:08-08-2017 ರಂದು ರಾತ್ರಿ 8-30 ಗಂಟೆಯ ಸಮಯದಲ್ಲಿ ಪಿರ್ಯಾದಿಯ ತಮ್ಮನ ಮಗನಾದ ಅಂಜನಮೂರ್ತಿ ತಂದೆ ಚಿಕ್ಕಹನುಮಂತಪ್ಪ ರವರು KA-43-E-9628  ನೇ ದ್ವಿಚಕ್ರ ವಾಹನದಲ್ಲಿ ಶೆಟ್ಟಿಹಳ್ಳಿಯಿಂದ  ಮಧುಗಿರಿಗೆ ಮಧುಗಿರಿ ಟೌನ್ ಕೈಗಾರಿಕಾ ಪ್ರದೇಶದ ದೊಡ್ಲಹಾಲು ಘಟಕದ ಮುಂಭಾಗ ಮಧುಗಿರಿ- ಗೌರಿಬಿದನೂರು ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಇದೆ ವೇಳೆಗೆ ಮಧುಗಿರಿ ಕಡೆಯಿಂದ ಎದುರಿಗೆ ಬಂದ KA-44- 4427 ನೇ ಟಾಟಾ ಎಸಿ  ವಾಹನದ ಚಾಲಕ ತಾನು ಚಾಲನೆ ಮಾಡಿಕೊಂಡು ಬರುತ್ತಿದ್ದ KA-44- 4427 ನೇ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಂಜನಮೂರ್ತಿ ಚಾಲನೆ ಮಾಡುತ್ತಿದ್ದ KA-43-E-9628  ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಅಪಘಾತ ಮಾಡಿದ ವಾಹನವನ್ನು ಬಿಟ್ಟು ಚಾಲಕನು ಹೊರಟು ಹೋಗಿರುತ್ತಾನೆ, ಈ ಅಪಘಾತದಿಂದ ಅಂಜನಮೂರ್ತಿ ರವರ ತಲೆಗೆ ,ಮೈ ಕೈ ಗೆ ಗಾಯಗಳಾಗಿದ್ದು ನಂತರ ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಅದೇ ಗ್ರಾಮದ ಸುರೇಶಬಾಬು ರವರು ಗಾಯಳು ಅಂಜನಮೂರ್ತಿರವರನ್ನು ಉಪಚರಿಸಿ ನಂತರ ಯಾವುದೋ ಒಂದು ವಾಹನದಲ್ಲಿ ಮಧುಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ನಂತರ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಿರುತ್ತೆ .ಆದ್ದರಿಂದ ಈ ಅಪಘಾತ ಮಾಡಿದ KA-44- 4427 ನೇ ಟಾಟಾ ಎಸಿ ವಾಹನ ಹಾಗೂ ಚಾಲಕನ ಮೇಲೆ ಕಾನೂನು ರೀತ್ಯಾಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 92/2017 U/S 457, 380  IPC

ದಿನಾಂಕ:-09/08/2017 ರಂದು  ಬೆಳಿಗ್ಗೆ 11-30 ಗಂಟೆಗೆ ಗಂಗಾಧರ ಬಿ,ಎ. ಬಿನ್ ಅಶ್ವಥಪ್ಪ., ಸ್ಟೋರ್ ಮ್ಯಾನೇಜರ್, ಕಣ್ವ ಮಾರ್ಟ್ ಬಟವಾಡಿ. ತುಮಕೂರು. ವಾಸ :- ಜಿ,ಕೆ, ಶಶಿಕಲ ,ಕೋಂ ನರೇಂದ್ರ ಮೂರ್ತಿ 80 ಅಡಿ ರಸ್ತೆ, ಅಪೂರ್ವ ಕಾರ್ ಕೇರ್ ಸೆಂಟರ್ ಹತ್ತಿರ, ಮಹಾಲಕ್ಷ್ಮಿ ನಗರ, ತುಮಕೂರು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ಪಿರ್ಯಾದಿರವರು ದಿನಾಂಕ:-07/08/2017 ರಂದು  ರಾತ್ರಿ ಸುಮಾರು 09-30 ಗಂಟೆಗೆ ಮಾಮೂಲಿನಂತೆ ಅಂಗಡಿ ವ್ಯಾಪಾರ ಮುಗಿಸಿಕೊಂಡು ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ:-08/08/2017 ರಂದು ಬೆಳಿಗ್ಗೆ ಸುಮಾರು 07-30 ಗಂಟೆಯಲ್ಲಿ ನೋಡಲಾಗಿ  ಅಂಗಡಿಯ ರೋಲಿಂಗ್ ಶೆಟರ್ ಕೆಳಭಾಗದಲ್ಲಿ ಯಾವುದೋ ಆಯುಧದಿಂದ ಮೀಟಿ ತೆರೆದಿರುವಂತೆ ಕಂಡು ಬಂದಿದ್ದು ಪಿರ್ಯಾದಿಯು  ಕಂಪನಿಯ ಎ,ಜಿ,ಎಂ, ಆದ  ಸಂತೋಷ್ ರವರನ್ನು  ಕರೆಸಿಕೊಂಡು ಅಂಗಡಿ ಒಳಗೆ ಹೋಗಿ ಪರಿಶೀಲಿಸಿ ನಂತರ ಸಿಸಿಟಿವಿ ಕ್ಯಾಮರವನ್ನು ಪರಿಶೀಲಿಸಿ ನೋಡಲಾಗಿ ದಿನಾಂಕ:-08/08/2017 ರಂದು ಬೆಳಗಿನ ಜಾವ 04-14 ರ ವೇಳೆಗೆ ಯಾರೋ 03 ಜನ ಅಪರಿಚಿತರು ನಮ್ಮ ಅಂಗಡಿ ಮಳಿಗೆ ಹತ್ತಿರ ಬಂದು ರೋಲಿಂಗ್ ಶೆಟರನ್ನ ಜಖಂ ಮಾಡಿ ತೆರೆದು ಒಳಗೆ ಪ್ರವೇಶಿಸಿ ಲಾಕರ್ ನಲ್ಲಿದ್ದ ಸುಮಾರು 22,735/- ರೂ ನಗದು ಹಣವನ್ನು  ಲಾಕರ್ ಸಹಿತ ಮತ್ತು ಕೆಲವು ಬಟ್ಟೆಗಳನ್ನು  ಮತ್ತು ಗ್ರಾಹಕರಿಗೆ ನೀಡುವ ಗೋಲ್ಡ್, ಸಿಲ್ವರ್ ಮತ್ತು ವೆಲ್ ಕಮ್ ಕಾರ್ಡ್‌ ಗಳನ್ನ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕ್ರಮ ಕೋರಿ ನೀಡಿದ ದೂರು

 

ಹೊಸಬಡಾವಣೆ ಪೊಲೀಸ್ ಠಾಣಾ CR 93/2017 U/S 457, 380  IPC

ದಿನಾಂಕ:-09/08/2017 ರಂದು ಸಾಯಂಕಾಲ 04-30 ಗಂಟೆಗೆ ಪಿರ್ಯಾದಿ ನವೀನ್ .ಪಿ.ಎಸ್. ಬಿನ್ ಸಿದ್ದಪ್ಪ.  ಭೂವಿಜ್ಞಾನಿ  ಗಣಿ ಮತ್ತು ಭೂ ವಿಜ್ಞಾನ ಇಲಾಖೆ.ವಾಸ  ಟಿ,ಸಿ. ಮಂಜುನಾಥ್ ರವರ ಮನೆಯಲ್ಲಿ ಬಾಡಿಗೆ ವಾಸ, ವೀರಭಧ್ರಸ್ವಾಮಿ ನಿಲಯ.ಚಿನ್ಮಯ ಮಿಷನ್ ಎದುರು, 13 ನೇ ಕ್ರಾಸ್ ಎಸ್ ಎಸ್ ಪುರಂ, ತುಮಕೂರು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ   ಪಿರ್ಯಾದಿಯು ದಿನಾಂಕ:-05/08/2017 ರಂದು ಕೆಲಸ ಮುಗಿಸಿಕೊಂಡು ಶಿವಮೊಗ್ಗಕ್ಕೆ ಹೋಗಿ ದಿನಾಂಕ:-08/08/2017 ರಂದು ಬೆಳಿಗ್ಗೆ ಸುಮಾರು 10-30 ಗಂಟೆಗೆ ತುಮಕೂರಿಗೆ ಬಂದು ಮನೆಯ ಹತ್ತಿರ ಹೋಗಿ ಬೀಗ ತೆರೆಯಲು ನೋಡಲಾಗಿ ಡೋರ್ ಲಾಕ್ ತೆರೆದಿದ್ದು ಪರಿಶೀಲಿಸಿ ನೋಡಲಾಗಿ ಯಾರೋ ಕಳ್ಳರು ಡೋರ್‌ನ್ನು  ಯಾವುದೋ ಆಯುಧದಿಂದ ಮೀಟಿ ತೆಗೆದು ಮನೆಯಲ್ಲಿದ್ದ ಒಂದು ಸೋನಿ ಎಲ್,ಇ,ಡಿ. ಟಿವಿ ,ಒಂದು ಏರ್ ಟೆಲ್ ಟಿವಿ ಸೆಟ್ ಟಪ್ ಬಾಕ್ಸ್ ಮತ್ತು ಎರಡು ವಾಚುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕ್ರಮ ಕೋರಿ ನೀಡಿದ ದೂರು.

 

 

 


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 5 guests online
Content View Hits : 151509