lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< August 2017 >
Mo Tu We Th Fr Sa Su
  1 2 3 4 5 6
8 9 10 11 12 13
14 15 16 17 18 19 20
21 22 23 24 25 26 27
28 29 30 31      
Monday, 07 August 2017
Crime Incidents 07-08-17

ಸಿ.ಎಸ್.ಪುರ  ಠಾಣಾ ಮೊ.ನಂ:76/2017. ಕಲಂ:284 ಐಪಿಸಿ

ದಿನಾಂಕ:06.08.2017 ರಂದು ರಾತ್ರಿ 7.30 ಗಂಟೆ ಸಮಯದಲ್ಲಿ ನನಗೆ ಗುಬ್ಬಿ ಸರ್ಕಾರಿ ಆಸ್ಪತ್ರೆಯಿಂದ  ಬಂದ ಮಾಹಿತಿ ಏನೆಂದರೆ, ನಮ್ಮ  ಠಾಣಾ ಸರಹದ್ದಿನ ದಾದು ಬೈ ಪಾಳ್ಯದ ಕೆಲವರು  ಬೇಕರಿ ಕೇಕನ್ನು  ತಿಂದು  ಒಟ್ಟು 07 ಜನ ಅಸ್ವಸ್ಥರಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗೆ  ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿರುತ್ತೇವೆ ಎಂದು ತಿಳಿಸಿದ  ಮೇರೆಗೆ ನಾನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಬೇಟಿ ನೀಡಿ ಅಸ್ವಸ್ಥರಾದ 06 ಜನ ಮಕ್ಕಳು & ಒಬ್ಬ ಹೆಂಗಸನ್ನು ಬೇಟಿ ಮಾಡಿ  ವಿಚಾರಮಾಡಲಾಗಿ,ತುಮಕೂರಿನ ರುಕ್ಸಾನ ಎಂಬುವರು  ಕೆ.ಜಿ ಟೆಂಪಲ್ ನಲ್ಲಿರುವ ಪುನೀತ್ ಬೇಕರಿಯಲ್ಲಿ ಕೇಕನ್ನು ಕರೀದಿಮಾಡಿಕೊಂಡು, ದಾದು ಬೈ ಪಾಳ್ಯ ಗ್ರಾಮದಲ್ಲಿರುವ ತನ್ನ  ಅಕ್ಕನ ಮನೆಗೆ ಹೋಗಿದ್ದು, ತಾನು ತೆಗೆದುಕೊಂಡು ಹೋಗಿದ್ದ ಕೇಕನ್ನು  ತಾನು ತಿಂದು & ತನ್ನ ಅಕ್ಕಂದಿರ ಮಕ್ಕಳಿಗೆ ಕೊಟ್ಟಿದ್ದು, ಈ ಕೇಕುಗಳನ್ನು  ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ  ತಿಂದು  ಇವರಿಗೆ ವಾಂತಿ, ಸುಸ್ತು , ತಲೆ ಸುಸ್ತು ಬಂದು ಅಸ್ವಸ್ಥರಾಗಿರುತ್ತಾರೆ ಎಂದು ತಿಳಿಯಿತು, ಇದಕ್ಕೆ ಕಾರಣ ಕೆ.ಜಿ ಟೆಂಪಲ್ ನಲ್ಲಿರುವ ಪುನೀತ್ ಬೇಕರಿಯಲ್ಲಿರುವ ಕೇಕು ತಿನ್ನಲು ಯೋಗ್ಯವಲ್ಲದೇ ಹಾಳಾಗಿದ್ದು ಹಾಗೂ  ವಿಷಪದಾರ್ಥವಾಗಿ ಮಾರ್ಪಡಾಗಿದ್ದರೂ ಸಹ  ಪುನೀತ್ ಬೇಕರಿಯವರು ಕೇಕನ್ನು ನಿರ್ಲಕ್ಷತೆ & ಬೇಜವಬ್ದಾರಿತನದಿಂದ  ನೀಡಿದ್ದರಿಂದ, ಈ ಕೇಕನ್ನು  ತಿಂದು ಒಂದು ಹೆಂಗಸು & 06 ಜನ ಮಕ್ಕಳು ಅಸ್ವಸ್ಥರಾಗಿರುತ್ತಾರೆ ಎಂದು ತಿಳಿಯಿತು. ಮಕ್ಕಳ ಹೆಸರು ವಿಳಾಸ  ಕೇಳಲಾಗಿ 1] ಮೊಹಮದ್ ಕೈಫ್, 10 ವರ್ಷ, 2] ಸಾದತ್, 6 ವರ್ಷ, 3] ಮಾಹಿಯಾ, 10 ವರ್ಷ, 4] ಮಹಮದ್ ಅಬೀದ್. 12 ವರ್ಷ, 5] ಶಾಹಿಸ್ತಾ, 10 ವರ್ಷ, ಹಾಗೂ 6]  ಆರ್ಫಾ ಕೌಸರ್, 04 ವರ್ಷ, 07] ರುಕ್ಸಾನ, 23 ವರ್ಷ  ಎಲ್ಲರೂ ದಾದುಬೈ ಪಾಳ್ಯ, ಗುಬ್ಬಿ ತಾಲ್ಲೂಕು  ಎಂದು ತಿಳಿಯಿತು.  ನಂತರ ವಾಪಸ್ಸು ಠಾಣೆಗೆ ಬಂದು ಸ್ವಪ್ರೇರಣೆಯಿಂದ ಪ್ರಕರಣ  ದಾಖಲಿಸಿರುತ್ತೆ.

ತಾವರೆಕೆರೆ ಪೊಲೀಸ್‌ ಠಾಣೆ ಮೊಸಂ :107/2017 ಕಲಂ 279,283,337.304 () ಐಪಿಸಿ

ದಿನಾಂಕ-06-08-2017ರಂದು ಬೆಳಗ್ಗೆ 06-30 ಗಂಟೆಯಲ್ಲಿ ತಾವರೆಕೆರೆ ಪೊಲೀಸ್ ಠಾಣೆಯ HC-486 ಆರ್.ರಂಗನಾಥರವರು ಗಾಯಾಳು ಜಗನ್ನಾಥರೆಡ್ಡಿ ಬಿನ್ ಚನ್ನಬಸಪ್ಪ 51ವರ್ಷ ವ್ಯವಸಾಯ ಬೇಡರೆಡ್ಡಿಹಳ್ಳಿ ಚಳ್ಳಕೆರೆ ತಾಲೂಕ್ ಚಿತ್ರದುರ್ಗ ಜಿಲ್ಲೆ ಮೊ ನಂ-9945556067 ರವರು ಸಿರಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ-06-08-2017ರಂದು ಬೆಳಗ್ಗೆ 05-30 ಗಂಟೆಯಿಂದ 06-10 ಗಂಟೆಯವರೆಗೆ ನೀಡಿದ ಹೇಳಿಕೆಯನ್ನು ಪಡೆದು ಠಾಣೆಗೆ ಹಾಜರು ಪಡಿಸಿದ ಹೇಳಿಕೆಯ ಸಾರಾಂಶವೆನೆಂದರೆ ನನ್ನ ಹೆಂಡತಿ ಜ್ಯೋತಿ ಸುಮಾರು 40ವರ್ಷ ಇವರಿಗೆ ಸುಮಾರು 06 ತಿಂಗಳಿನಿಂದ ಆರೋಗ್ಯ ಸರಿಯಿಲ್ಲದ ಕಾರಣ ಇವರಿಗೆ ಆಯುರ್ವೆದ ಚಿಕಿತ್ಸೆ ಕೊಡಿಸಲು ತಮಿಳುನಾಡಿಗೆ ನಾನು & ನನ್ನ ತಮ್ಮ ಹನುಮಂತ ರೆಡ್ಡಿ ಅಕ್ಕ ಅನಂತಮ್ಮ ತಂಗಿ ನಳಿನಾಕ್ಷಿ ಹಾಗೂ ನನ್ನ ಅಳಿಯ ತಮ್ಮಾರೆಡ್ಡಿ ಯವರೊಂದಿಗೆ ನನ್ನ ಸ್ನೇಹಿತನ ಬಾಬ್ತು KA-34 M-3941ನೇ ಬುಲೇರೊ ವಾಹನದಲ್ಲಿ ದಿನಾಂಕ-05-08-2017ರಂದು ಮದ್ಯಾಹ್ನ ಚಳ್ಳಕೆರೆಯಿಂದ ಹೊರಟು ತಮಿಳುನಾಡಿಗೆ ಹೋಗಿ ಚಿಕಿತ್ಸೆ ಕೊಡೆಸಿಕೊಂಡು ಚಳ್ಳಕೆರೆಗೆ ವಾಪಾಸ್ಸು ಬರುವಾಗ ದಿನಾಂಕ-06-08-2017ರಂದು ಬೆಳಗ್ಗೆ ಸುಮಾರು 04-00 ಗಂಟೆಯಲ್ಲಿ ತಾವರೆಕೆರೆ ಬ್ರಿಡ್ಜ್ ಸಮೀಪ ಸಿರಾ ಹಿರಿಯೂರು NH-48 ರಸ್ತೆಯಲ್ಲಿ ಚಾಲಕ ತಮ್ಮಾರೆಡ್ಡಿ ರವರು ಅತಿವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಅದೇ ರಸ್ತೆಯಲ್ಲಿ ಮುಂಬದಿ ಇತರೆ ವಾಹನಗಳಿಗೆ ಅಡೆತಡೆಮಾಡಿಕೊಂಡು ಅಪಾಯಕರ ರೀತಿಯಲ್ಲಿ ಯಾವುದೇ ಸಿಗ್ನಲ್ ಇಲ್ಲದೇ ನಿಲ್ಲಿಸಿಕೊಂಡಿದ್ದ MP-09 HG-1472 ನೇ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ಎರಡು ವಾಹನಗಳು ಜಖಂಗೊಂಡು ನಮ್ಮ ವಾಹನದಲ್ಲಿದ್ದ ನನ್ನ ಹೆಂಡತಿ ಜ್ಯೋತಿರವರಿಗೆ ಬಲವಾಗಿ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸತ್ತು ಹೋಗಿದ್ದು ನಮಗೆಲ್ಲರಿಗೂ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿರುತ್ತವೆ.ಕೂಡಲೇ ಸಾರ್ವಜನಿಕರು ನಮ್ಮನ್ನು ಉಪಚರಿಸಿ 108 ಅಂಬ್ಯುಲೇನ್ಸನಲ್ಲಿ ಸಿರಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಚಿಕೆತ್ಸೆ ಪಡೆಯುತ್ತಿರುತ್ತೇವೆ.ನನ್ನ ಹೆಂಡತಿ ಜ್ಯೋತಿರವರ ಶವವನ್ನು ಹೈವೇ ಅಂಬುಲೇನ್ಸನಲ್ಲಿ ಸಿರಾ ಆಸ್ಪತ್ರೆ ಶವಗಾರಕ್ಕೆ ತಂದು ಹಾಕಿರುತ್ತಾರೆ.ಈ ಅಪಘಾತಕ್ಕೆ ಮೇಲ್ಕಂಡ ಎರಡೂ ವಾಹನಗಳ ಚಾಲಕರುಗಳು ಕಾರಣರಾಗಿರುತ್ತಾರೆ.ಮುಂದಿನ ಕ್ರಮ ಜರುಗಿಸಿ ಕೊಡಿ ಎಂತ ಕೊಟ್ಟ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ.107/2017 ಕಲಂ 279, 337, 304(ಎ) ಐ.ಪಿ.ಸಿ

ದಿನಾಂಕ: 06.08.2017 ರಂದು ಬೆಳಗ್ಗೆ 06:30 ಗಂಟೆಗೆ ಪಿರ್ಯಾದಿ ಕೆ.ಎಂ ಸತೀಶ ಬಿನ್ ಕೆ.ಬಿ ಮರುಳಯ್ಯ, 47 ವರ್ಷ, ಲಿಂಗಾಯತ ಜನಾಂಗ, ವ್ಯವಸಾಯ, ಕೆಂಕೆರೆ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ದಿನಾಂಕ:05.08.2017 ರಂದು ರಾತ್ರಿ ಸುಮಾರು 11:45 ಗಂಟೆ ಸಮಯದಲ್ಲಿ ಮಲಗಿದ್ದಾಗ ಹುಳಿಯಾರಿನ ಸ್ಪಂದನಾ ನರ್ಸಿಂಗ್ ಹೋಮ್ ನಲ್ಲಿ ಕೆಲಸ ಮಾಡುತ್ತಿರುವ ನಮಗೆ ಪರಿಚಯವಿರುವ ರವಿ ಜಿ.ಎಸ್ ಬಿನ್ ಸಿದ್ದರಾಜು ಗಂಜಿಗೆರೆ ರವರು ನನಗೆ ಪೋನ್ ಮಾಡಿ ನಿಮ್ಮ ದೊಡ್ಡಪ್ಪ ಕೆ.ಬಿ ರಾಮಯ್ಯ ರವರ ಮಗನಾದ ಕೆ.ಆರ್ ಮಲ್ಲಿಕಾರ್ಜುನಯ್ಯ ರವರು ಮತ್ತು ಅವರ ಹೆಂಡತಿ ಸಂದ್ಯಾ ಹಾಗೂ ತಂಗಿ ಅನಿತಾ ರವರು ಕೆಎ 44 ಎಂ 1256 ನೇ ಕಾರಿನಲ್ಲಿ ತಿಪಟೂರಿನಿಂದ ಹುಳಿಯಾರಿಗೆ ಬರುತ್ತಿದ್ದಾಗ ಹುಳಿಯಾರು ಟೌನ್ ಸಮೀಪ ಇರುವ ವಿಜಯಕುಮಾರ್ ರವರ ಲೇಔಟ್ ಹತ್ತಿರ ರಾತ್ರಿ ಸುಮಾರು 11:30 ಗಂಟೆ ಸಮಯದಲ್ಲಿ ರಸ್ತೆಯ ಪಕ್ಕದಲ್ಲಿರುವ ಹುಣಸೇಮರಕ್ಕೆ ಕಾರು ಡಿಕ್ಕಿ ಹೊಡೆದು ಅಪಘಾತವಾಗಿ ಕಾರನ್ನು ಚಾಲನೆ ಮಾಡುತ್ತಿದ್ದ ಕೆ.ಆರ್ ಮಲ್ಲಿಕಾರ್ಜುನಯ್ಯ ರವರಿಗೆ ತಲೆಗೆ ಮತ್ತು ಕೈ ಕಾಲಿಗೆ ಪೆಟ್ಟಾಗಿದ್ದು ಸಂದ್ಯಾ ರವರಿಗೆ ಬಲಗಾಲು ಮತ್ತು ಎಡಗೈ ಗೆ ಹಾಗೂ ಅನಿತಾ ರವರಿಗೆ ಎಡಗೈಗೆ ಪೆಟ್ಟಾಗಿದೆ ಎಂದು ತಿಳಿಸಿದರು. ನಾನು ಮತ್ತು ನಮ್ಮ ಸಂಬಂಧಿಕರು ಸ್ಥಳಕ್ಕೆ ಹೋಗಿ ನೋಡಲಾಗಿ ಕೆಎ 44 ಎಂ 1256 ನೇ ಕಾರು ರಸ್ತೆ ಪಕ್ಕದಲ್ಲಿರುವ ಹುಣಸೇಮರಕ್ಕೆ ಡಿಕ್ಕಿ ಹೊಡೆದು ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ ನನ್ನ ದೊಡ್ಡಪ್ಪನ ಮಗ ಮಲ್ಲಿಕಾರ್ಜುನ, ಅವರ ಹೆಂಡತಿ ಸಂದ್ಯಾ ಮತ್ತು ತಂಗಿ ಅನಿತಾ ಗೆ ಪೆಟ್ಟಾಗಿದ್ದು ಸ್ಥಳಕ್ಕೆ ಬಂದ ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಚಿಕ್ಕನಾಯಕನಹಳ್ಳಿಗೆ ಕರೆದುಕೊಂಡು ಹೋಗುವಾಗ ಮಾರ್ಗಮದ್ಯೆ ರಾತ್ರಿ ಸುಮಾರು 01:30 ಗಂಟೆ ಸಮಯದಲ್ಲಿ ನನ್ನ ಅಣ್ಣ ಮಲ್ಲಿಕಾರ್ಜುನಯ್ಯ ರವರು ಆಂಬ್ಯುಲೆನ್ಸ್ ನಲ್ಲಿಯೇ ಮೃತಪಟ್ಟರು. ಸಂದ್ಯಾ ಮತ್ತು ಅನಿತಾ ರವರನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಸಿ ಶವವನ್ನು ಶವಾಗಾರದಲ್ಲಿ ಇರಿಸಿರುತ್ತೆ. ಆದ್ದರಿಂದ ತಾವುಗಳು ಮುಂದಿನ ಕ್ರಮ ಜರುಗಿಸಿಕೊಡಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂತ ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 143/2017 ಕಲಂ 143, 147, 324, 504, 506 ರೆ/ವಿ 149 ಐ,ಪಿ,ಸಿ

ದಿನಾಂಕ-06/08/2017 ರಂದು ರಾತ್ರಿ 7-30 ಗಂಟೆಗೆ ಪಿರ್ಯಾದಿಯಾದ ಜಾಕೀರ್ ಹುಸೇನ್‌ ಬಿನ್ ಮಹಮದ್‌ ಖಾನ್‌, 48 ವರ್ಷ, ಮುಸ್ಲಿಂ, ವ್ಯಾಪಾರ, ಎಂ.ಎಸ್.ಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಹೆಂಡತಿಯಾದ ನಫೀದಾ ಹಾಗೂ ಮಕ್ಕಳಾದ ಸದ್ದಾಂ ಹುಸೇನ್‌, ನದೀಂ ಖಾನ್‌ ಹಾಗೂ ಶಬುಕ್ತಾ ಬೇಗಂ ರವರೊಂದಿಗೆ ವಾಸವಾಗಿರುತ್ತೇನೆ. ದಿನಾಂಕ:31-07-2017 ರಂದು ರಾತ್ರಿ ನನ್ನ ಮಗನಾದ ಸದ್ದಾಂ ಹುಸೇನ್‌ ರವರು ನಮ್ಮ ಗ್ರಾಮದಲ್ಲಿರುವ ನಮ್ಮ ಚಿಕ್ಕಪ್ಪನ ಮಗನ ಅಂಗಡಿಗೆ ಹೋಗಿದ್ದು, ನಂತರ ವಾಪಸ್‌ ನಮ್ಮ ಮನೆಗೆ ಬರಲೆಂದು ಬರುತ್ತಿರುವಾಗ್ಗೆ, ರಾತ್ರಿ ಸುಮಾರು 08-30 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಶಾಹೀದಾ ರವರ ಅಂಗಡಿಯ ಬಳಿ ಹೊಸಪಾಳ್ಯ-ಲಿಂಗಾಪುರ ಟಾರ್ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ್ಗೆ, ನಮ್ಮ ಗ್ರಾಮದ ವಾಸಿಯಾದ 1) ಜಾಬೀರ್‌ ರವರು ನಮಗೂ ಅವರಿಗೂ ವಿವಾದವಿರುವ ಖರಾಬು ಜಮೀನಿನ ವಿಚಾರವಾಗಿ ಸೂಳೇ ಮಗನೇ, ಬೋಳಿ ಮಗನೇ ಎಂತಾ ಬೈದುಕೊಳ್ಳುತ್ತಿದ್ದು, ಆಗ ನನ್ನ ಮಗನಾದ ಸದ್ದಾಂ ಹುಸೇನ್‌ ನು ಯಾಕೆ ಈ ರೀತಿ ಬೈಯುತ್ತಿದ್ದೀಯಾ ಎಂತಾ ಕೇಳಿದ್ದಕ್ಕೆ ಜಾಬೀರ್‌ನು ಒಂದು ಕಬ್ಬಿಣದ ರಾಡಿನಿಂದ ನನ್ನ ಮಗ ಸದ್ದಾಂ ಹುಸೇನ್‌ನ ತಲೆಗೆ ಹೊಡೆದು ರಕ್ತಗಾಯಪಡಿಸಿದನು. ಆಗ ಜಾಬೀರ್‌ ಕಡೆಯವರಾದ 2) ಯಾಸೀನ್‌ ಬಿನ್ ನನ್ನೇಸಾಬ್‌, 3) ರಫೀಕ್‌ ಬಿನ್ ನನ್ನೇಸಾಬ್‌, 4) ವಸೀಂ ಬಿನ್ ಖಾಸಿಂ ಸಾಬ್‌, 5) ಮಕ್ಸೂದ್‌ ಬಿನ್ ಲೇ|| ಮಕ್ಬೂಲ್‌, 6) ಸಿದ್ದಿಕ್‌ ಬಿನ್ ಲೇ|| ಇಸಾಕ್‌, 7) ಮುಬೀನ್‌ ಕೋಂ ಯಾಸೀನ್‌, 8) ಶಾಹೇದಾ ಕೋಂ ಇಲಾಯಿತ್‌ ಉಲ್ಲಾ ರವರುಗಳು ಸ್ಥಳಕ್ಕೆ ಬಂದು ನನ್ನ ಮಗ ಸದ್ದಾಂನನ್ನು ಬೋಳಿ ಮಗನೇ, ಸೂಳೇ ಮಗನೇ ಎಂತಾ ಅವಾಚ್ಯ ಶಬ್ದಗಳಿಂದ ಬೈದು, ನಂತರ ವಸೀಂನು ಒಂದು ದೊಣ್ಣೆಯನ್ನು ತೆಗೆದುಕೊಂಡು ನನ್ನ ಮಗ ಸದ್ದಾಂನ ಬೆನ್ನಿನ ಬಲಭಾಗದ ಮೇಲ್ಬಾಗಕ್ಕೆ ಹೊಡೆದು ಗಾಯಪಡಿಸಿದ್ದು, ನಂತರ ಅಲ್ಲಿಯೇ ಇದ್ದ ಅತಾವುಲ್ಲಾ ಬಿನ್ ಲೇ|| ಪ್ಯಾರು ಸಾಬ್‌ ಹಾಗೂ ಟಿಪ್ಪು ಬಿನ್ ಹಸನ್‌ ಖಾನ್‌ ರವರುಗಳು ನನ್ನ ಮಗ ಸದ್ದಾಂನನ್ನು ಅವರುಗಳಿಂದ ಬಿಡಿಸಿ ಎಲ್ಲರನ್ನೂ ಸಮಾಧಾನ ಪಡಿಸಿದ್ದು, ನಂತರ ಕಬ್ಬಿಣದ ರಾಡು  ಮತ್ತು ದೊಣ್ಣೆಯನ್ನು ಸ್ಥಳದಲ್ಲೇ ಬಿಸಾಡಿ ಎಲ್ಲರೂ ಸದ್ದಾಂನನ್ನು ಕುರಿತು ನಿನ್ನನ್ನು ಜೀವಂತವಾಗಿ ಉಳಿಸುವುದಿಲ್ಲ ಒಂದಲ್ಲಾ ಒಂದು ಗತಿ ಕಾಣಿಸುತ್ತೇವೆ ಎಂತಾ ಪ್ರಾಣ ಬೆದರಿಗೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ನಂತರ ನನಗೆ ಸದರಿ ಗಲಾಟೆಯ ವಿಚಾರವನ್ನು ಅತಾವುಲ್ಲಾ ಬಿನ್ ಲೇ|| ಪ್ಯಾರು ಸಾಬ್‌ ರವರು ಪೋನ್‌ ಮಾಡಿ ತಿಳಿಸಿದ್ದು, ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ಗಾಯಗೊಂಡಿರುವುದು ನಿಜವಾಗಿತ್ತು. ನಂತರ ಗಾಯಗೊಂಡಿದ್ದ ನನ್ನ ಮಗ ಸದ್ದಾಂನನ್ನು ನಾನು ಹಾಗೂ ನನ್ನ ಚಿಕ್ಕಪ್ಪನ ಮಗನಾದ ಇಲಿಯಾಜ್‌ ಇಬ್ಬರೂ ಸೇರಿಕೊಂಡು ಯಾವುದೋ ಒಂದು ಕಾರಿನಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಕೆ,ಸಿ,ಜನರಲ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ನನ್ನ ಮಗನಿಗೆ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ನಾನು ಆತನನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 142/2017 ಕಲಂ 143, 147, 148, 323, 324, 504, 506 ರೆ/ವಿ 149 ಐ,ಪಿ,ಸಿ

ದಿನಾಂಕ:06-08-2017 ರಂದು ಮದ್ಯಾಹ್ನ 01-30 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಮಹಮದ್‌ ಜಾಬೀರ್‌ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಹೆಂಡತಿಯಾದ ಶಿರಿನ್‌ ತಾಜ್‌ ಹಾಗೂ ಮಕ್ಕಳಾದ 1) ಸಾದಿಕಾ ಭಾನು 2) ಮಹಮದ್‌ ನಾಸಿರ್‌ ಹಾಗೂ 3) ಕುಭಾ ಶೇಖ್‌ ರವರೊಂದಿಗೆ ವಾಸವಾಗಿರುತ್ತೆ. ದಿನಾಂಕ:31-07-2017 ರಂದು ಬೆಳಿಗ್ಗೆ ಸುಮಾರು 08-30 ಗಂಟೆಗೆ ನಾನು ನಮ್ಮ ಜಮೀನಿಗೆ ಜೆ,ಸಿ,ಬಿ ವಾಹನದಿಂದ ಮಣ್ಣು ಹೊಡೆಸುವ ವಿಚಾರವಾಗಿ ಜಾಕೀರ್‌‌ ಬಿನ್ ಮಹಮೂದ್ ಸಾಬ್‌ ಹಾಗೂ ಅವರ ಮಗನಾದ ಸದ್ದಾಂ ಬಿನ್ ಜಾಕೀರ್ ರವರು ನನಗೂ ಈ ಜಮೀನಿನಲ್ಲಿ ಭಾಗ ಬರಬೇಕು ಮಣ್ಣು ಹೊಡೆಸಬೇಡ ಎಂತಾ ಹೇಳಿದರು. ನಂತರ ಅದೇ ದಿವಸ ರಾತ್ರಿ ಸುಮಾರು 08-30 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ನಮ್ಮ ಮನೆಯಿಂದ ಕಾಲೋನಿಗೆ ಹೋಗುವ ರಸ್ತೆಯಲ್ಲಿ ಸ್ವಲ್ಪ ದೂರದಲ್ಲಿರುವ ಸೇತುವೆಯ ಬಳಿ ನಾನು ಮತ್ತು ನನ್ನ ಸ್ನೇಹಿತರುಗಳಾದ ನಮ್ಮ ಗ್ರಾಮದ ವಾಸಿಗಳೇ ಆದ ಅಮಾನುಲ್ಲಾ ಬಿನ್ ಲೇ|| ಬದ್ರುದ್ದೀನ್‌, ಸಜ್ಜದ್‌ ಅಲಿ ಬಿನ್ ಸರ್ದಾರ್‌ ಸಾಬ್‌ ಮೂವರು ಸೇತುವೆ ಮೇಲೆ ಮಾತನಾಡಿಕೊಂಡು ಕುಳಿತುಕೊಂಡಿದ್ದೆವು. ಆಗ ಅದೇ ಸಮಯಕ್ಕೆ 1) ಸದ್ದಾಂ ಬಿನ್ ಜಾಕೀರ್ 2) ಅಫ್ರೋಜ್‌ ಬಿನ್ ಬಾಷಾ ಖಾನ್‌ 3) ಇಲಿಯಾಜ್‌ ಬಿನ್ ಹಸನ್‌ ಖಾನ್ 4) ಅಜ್ಗರ್‌ ಬಿನ್ ಗೌಸ್‌ ಸಾಬ್‌ 5) ಜಾಕೀರ್‌‌ ಬಿನ್ ಮಹಮೂದ್ ಸಾಬ್‌ 6) ಸಲ್ಮಾ ಭಾನು ಕೋಂ ಇಲಿಯಾಜ್‌ 7) ಶಾಜಾದಿ ಕೋಂ ಹಸನ್‌ ಖಾನ್‌ ಎಲ್ಲರೂ ಗುಂಪು ಕಟ್ಟಿಕೊಂಡು ನನ್ನ ಬಳಿಗೆ ಬಂದು ಅಫ್ರೋಜ್‌ ಬಿನ್ ಬಾಷಾ ಖಾನ್‌ ಹಾಗೂ ಇಲಿಯಾಜ್‌ ಬಿನ್ ಹಸನ್‌ ಖಾನ್ ಇಬ್ಬರೂ ಕೈಗಳಲ್ಲಿ ದೊಣ್ಣೆಯನ್ನು ಹಿಡಿದುಕೊಂಡು ಬಂದು ಎಲ್ಲರೂ ಸೇರಿಕೊಂಡು ಜಮೀನು ನಿನ್ನದಾ ಎಂತಾ ಬೋಳಿ ಮಗನೇ, ಸೂಳೇ ಮಗನೇ ಎಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಎಲ್ಲರೂ ಕೈಗಳಿಂದ ಹಾಗೂ ಕಾಲುಗಳಿಂದ ನನಗೆ ಹೊಡೆದು ತುಳಿದರು. ನಂತರ ಅಫ್ರೋಜ್‌ ಬಿನ್ ಬಾಷಾ ಖಾನ್‌ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ತಲೆಗೆ ಹೊಡೆದು ತೀವ್ರತರವಾದ ರಕ್ರಗಾಯಪಡಿಸಿದನು. ಇಲಿಯಾಜ್‌ ಬಿನ್ ಹಸನ್‌ ಖಾನ್‌‌ನು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಎಡಬೆನ್ನಿನ ಮೇಲ್ಭಾಗಕ್ಕೆ ಹೊಡೆದು ನೋವುಂಟು ಮಾಡಿದನು. ಆಗ ನನ್ನ ಸ್ನೇಹಿತರಾದ ಅಮಾನುಲ್ಲಾ ಬಿನ್ ಲೇ|| ಬದ್ರುದ್ದೀನ್‌, ಸಜ್ಜದ್‌ ಅಲಿ ಬಿನ್ ಸರ್ದಾರ್‌ ಸಾಬ್‌ ಇಬ್ಬರೂ ನನ್ನನ್ನು ಅವರುಗಳಿಂದ ಬಿಡಿಸಿ ಅವರುಗಳನ್ನು ಸಮಾಧಾನಪಡಿಸಿದರು. ನಂತರ ಎಲ್ಲರೂ ಸೇರಿಕೊಂಡು ಆ ಜಮೀನಿನಲ್ಲಿ ನಮಗೂ ಭಾಗ ಬರಬೇಕು ಎಂತಲೂ, ಭಾಗ ಬರದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಕೊಲೆ ಮಾಡುತ್ತೇವೆಂತಾ ಪ್ರಾಣ ಬೆದರಿಕೆ ಹಾಕಿ ತಮ್ಮ ಕೈಯಲ್ಲಿದ್ದ ದೊಣ್ಣೆಗಳನ್ನು ಸ್ಥಳದಲ್ಲೇ ಬಿಸಾಡಿ ಎಲ್ಲರೂ ಅಲ್ಲಿಂದ ಹೊರಟು ಹೋದರು. ನಂತರ ಗಾಯಗೊಂಡಿದ್ದ ನನ್ನನ್ನು ವಿಚಾರ ತಿಳಿದು ಸ್ಥಳಕ್ಕೆ ಬಂದ ಬಾಬು ಹಾಗೂ ಆಮೀನ್‌ ರವರುಗಳು ಯಾವುದೋ ಒಂದು ಕಾರಿನಲ್ಲಿ ನನ್ನನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದರು. ನಾನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

 

ಜಯನಗರ ಪೊಲೀಸ್ ಠಾಣಾ ಮೊ.ನಂ 114/2017 ಕಲಂ 435, 427 ರೆ/ವಿ 34 ಐಪಿಸಿ

ದಿನಾಂಕ: 05-08-2017 ರಂದು ರಾತ್ರಿ 7-45 ಗಂಟೆ ಸಮಯದಲ್ಲಿ ತುಮಕೂರು ಟೌನ್‌, ಮರಳೂರು, ಲಾಬಾ ರೆಸ್ಟೋರೆಂಟ್ ಹಿಂಭಾಗ ವಾಸವಿರುವ ಮಹಮ್ಮದ್‌‌‌ ಹಾಸಿಮ್‌‌ ಎಕ್ಬಾಲ್, ಬಿನ್ ಲೇ|| ಎಂ.. ಇಕ್ಬಾಲ್‌‌ ಅಹಮ್ಮದ್ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆನಾನು ತುಮಕೂರಿನಿಂದ ಬೆಂಗಳೂರಿಗೆ ನಮ್ಮ ಇಟ್ಟಿಗೆ ಪ್ಯಾಕ್ಟರಿಗೆ ಆಗಾಗ ಹೋಗಿ ಬರುತ್ತಿರುತ್ತೇನೆನನಗೆ ಡೆಂಗ್ಯೂ ಜ್ವರ ಬಂದಿದ್ದರಿಂದ ನಾನು ದಿನಾಂಕ: 29-07-2017 ರಿಂದ 01-08-2017 ರವರೆಗೆ ಸಿದ್ದಾರ್ಥ ಮೆಡಿಕಲ್‌‌ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಅದೇ ದಿನ ನಾನು ಬೆಂಗಳೂರಿನಲ್ಲಿರುವ ನಮ್ಮ ಇಟ್ಟಿಗೆ ಪ್ಯಾಕ್ಟರಿಯ ಬಳಿ ಹೋಗಿ, ನಂತರ ಮಾರನೆಯ ದಿನ ಬೆಂಗಳೂರಿನಲ್ಲಿ ಯಾವುದಾದರೊಂದು ಆಸ್ಪತ್ರೆಯಲ್ಲಿ ತೋರಿಸೋಣವೆಂತಾ ಆ ದಿನ ರಾತ್ರಿ ಬೆಂಗಳೂರು ವೈಟ್‌‌‌ಪೀಲ್ಡ್ ಕಾಡುಗೋಡಿನಲ್ಲಿರುವ ನಮ್ಮ ಅಣ್ಣ ಇಮ್ರಾನ್ರವರ ಮನೆಗೆ ಅವರ ಮನೆಯಲ್ಲಿಯೇ ಉಳಿದುಕೊಂಡಿದ್ದೆನು. ಮಾರನೆಯ ದಿನ ದಿನಾಂಕ: 02-08-2017 ರಂದು ನನ್ನ ಹೆಂಡತಿ ಅಮ್ರಿನ್‌‌ಸುಲ್ತಾನ ನನಗೆ ಪೋನ್ ಮಾಡಿ ನಿನ್ನೆ ರಾತ್ರಿ ನಮ್ಮ ಮನೆಯ ಮುಂದೆ ಮಣ್ಣಿನ ರಸ್ತೆಯ ಮೇಲೆ ನಿಲ್ಲಿಸಿದ್ದ ನಮ್ಮ ಕಾರಿಗೆ ಬೆಂಕಿಹೊತ್ತಿಕೊಂಡು, ಕಾರು ಸಂಪೂರ್ಣ ಸುಟ್ಟು ಹೋಗಿರುತ್ತೆನಾನು ರಾತ್ರಿಯೇ ಅಗ್ರಿಶಾಮಕ ಧಳದವರಿಗೆ ಪೋನ್ ಮಾಡಿ ಕರೆಸಿಕೊಂಡಿದ್ದು, ಅವರು ಬರುವಷ್ಟೋತ್ತಿಗೆ ಕಾರು ಪೂರಾ ಮುಕ್ಕಾಲು ಭಾಗದಷ್ಟು ಸುಟ್ಟು ಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿಯವರೂ ಸಹಾ ನೀರು ಹಾಕಿ ಬೆಂಕಿ ಹಾರಿಸಿ ಹೋಗಿರುತ್ತಾರೆ. ನಿಮಗೆ ಹುಷಾರಿಲ್ಲದೇ ಇದ್ದರಿಂದ ನಾನು ರಾತ್ರಿಯೇ ವಿಚಾರ ತಿಳಿಸಿದರೆ ಗಾಬರಿಯಾಗುತ್ತೀರೆಂದು ಈಗ ವಿಚಾರ ತಿಳಿಸಿರುತ್ತಾನೆಂತಾ ನನಗೆ ವಿಚಾರ ತಿಳಿಸಿದಳು. ನಂತರ ನಾನು ತಕ್ಷಣ ಬೆಂಗಳೂರಿನಿಂದ ಹೊರಟು ತುಮಕೂರಿನ ನಮ್ಮ ಮನೆಗೆ ಬಂದು ನೋಡಲಾಗಿ, ನಮ್ಮ ಮನೆಯ ಮುಂಭಾಗ ಮಣ್ಣಿನ ರಸ್ತೆಯ ಮೇಲೆ ನಿಲ್ಲಿಸಿದ್ದ ನಮ್ಮ ಬಾಬ್ತು KA-15-M-5543  TOYATA CORALLA  ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತುನನ್ನ ಹೆಂಡತಿಯನ್ನು ವಿಚಾರ ಮಾಡಲಾಗಿ, ನಾನು ದಿನಾಂಕ: 01-08-2017 ರಂದು ಸದರಿ ಕಾರಿನಲ್ಲಿ ನಾನೇ ಡ್ರೈವ್‌‌ ಮಾಡಿಕೊಂಡು ಧಾನ: ಪ್ಯಾಲೇಸ್‌‌‌ ಬಳಿ ಇರುವ ನಮ್ಮ ಅಂಕಲ್‌‌ ಅಜ್ಮಲ್‌‌ ಪರ್ವೀಸ್‌‌ ಅಹಮ್ಮದ್‌‌ ರವರ ಮನೆಗೆ ಹೋಗಿದ್ದು, ವಾಪಾಸ್ಸು ರಾತ್ರಿ ಸುಮಾರು 11-15 ಗಂಟೆ ಸಮಯಕ್ಕೆ ವಾಪಾಸ್ಸು ನಾನೇ ಕಾರನ್ನು ಡ್ರೈವ್‌‌ ಮಾಡಿಕೊಂಡು ಮನೆಗೆ ಬಂದು ಮನೆಯ ಮುಂದೆ ಕಾರನ್ನು ನಿಲ್ಲಿಸಿ ಮನೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದಾಗ ರಾತ್ರಿ ಸುಮಾರು 1-30 ಗಂಟೆ ಸಮಯದಲ್ಲಿ ಕಾರಿನ ಸೈರನ್‌‌‌‌ ಆಗುತ್ತಿದ್ದು, ಹೊರಗೆ ಬಂದು ನೋಡಲಾಗಿ ಕಾರು ಬೆಂಕಿಹೊತ್ತಿಕೊಂಡು ಹುರಿಯುತ್ತಿತ್ತು. ತಕ್ಷಣ ಅಕ್ಕ-ಪಕ್ಕದವರ ಸಹಾಯದಿಂದ ನೀರು ಹಾಕಿ ಬೆಂಕಿ ಹಾರಿಸಲು ಪ್ರಯತ್ನಿಸಿದ್ದು ಬೆಂಕಿ ಹಾರಿಸಲು ಸಾದ್ಯವಾಗದೇ ಇದ್ದರಿಂದ ಪೈರ್‌‌‌ ಸ್ಟೇಷನ್‌‌ಗೆ ಪೋನ್ ಮಾಡಿ ಪೈರ್‌‌‌ ಹಾರಿಸುವ ವಾಹನವನ್ನು ಕರೆಸಿಕೊಂಡು ಬೆಂಕಿ ಹಾರಿಸಿರುವುದಾಗಿ ವಿಚಾರ ತಿಳಿಸಿದಳು. ನಮ್ಮ ಕಾರಿಗೆ ಉದ್ದೇಶಪೂರ್ವಕವಾಗಿ ತುಮಕೂರು ಟೌನ್ ಗೋಕುಲಬಡಾವಣೆಯ ವಾಸಿ ರಮೇಶ್‌‌‌‌ಬಾಬು ಬಿನ್. ಮುನಿವೆಂಕಟಪ್ಪ ಎಂಬುವರು ಅವನ ಸಂಗಡಿಗರೊಂದಿಗೆ ನಮ್ಮ ಮನೆಯ ಬಳಿಗೆ ಬಂದು ಬೆಂಕಿ ಇಟ್ಟು ಸುಟ್ಟುಹಾಕಿರುವುದಾಗಿ ಅನುಮಾನ ಇರುತ್ತೆ. ಏಕೆಂದರೆ ರಮೇಶ್‌‌ಬಾಬು ರವರಿಗೂ ನನಗೂ ಈಗ್ಗೆ ಸುಮಾರು 2012 ರಿಂದ ದ್ವೇಷವಿದ್ದು, ರಮೇಶ್‌‌‌ಬಾಬು ರವರು ಉದ್ದೇಶಪೂರ್ವಕವಾಗಿ ಈಗಾಗಲೇ ನನ್ನ ವಿರುದ್ದ 2012 ನೇ ಇಸವಿಯಲ್ಲಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್‌‌ ಮಾಡಿಸಿದ್ದು, ನಂತರ ಬೇರೆಯವರ ಮುಖಾಂತರ 2013 ನೇ ಇಸವಿಯಲ್ಲಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಮಂಜುಳಾ ಎಂಬುವರಿಂದ ಕೇಸು ಕೊಡಿಸಿದ್ದು, ಆ ನಂತರ ಮತ್ತೆ ಮಂಜುಳಾ ಎಂಬುವರಿಂದ ಕ್ಯಾತ್ಸಂದ್ರ ಹಾಗೂ ಎನ್..ಪಿ.ಎಸ್. ಪೊಲೀಸ್ ಠಾಣೆಗಳಲ್ಲೂ ಸಹಾ ದೂರು ಕೊಡಿಸಿ ನನ್ನ ಮೇಲೆ ಕೇಸು ಮಾಡಿಸಿರುತ್ತಾನೆಅಲ್ಲದೆ ಕೊರಟಗೆರೆಯಲ್ಲಿ ಸಹಾ ನಾರಾಯಣಪ್ಪ ಎಂಬುವರಿಂದ ಉದ್ದೇಶಪೂರ್ವಕವಾಗಿ ಅಟ್ರಾಸಿಟಿ ಕೇಸು ಕೊಡಿಸಿರುತ್ತಾರೆ.   ಅಲ್ಲದೇ ರಮೇಶ್‌‌ಬಾಬು ರವರ ವಿರುದ್ದ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ರಮೇಶ್‌‌ಬಾಬು ವಿರುದ್ದ ದಾಖಲಾಗಿದ್ದ ರೇಫ್‌‌ ಕೇಸಿನಲ್ಲಿ ನಾನು ಕೋರ್ಟಿನಲ್ಲಿ ಸಾಕ್ಷಿ ಹೇಳಿರುತ್ತೇನೆ. ನನಗೂ ರಮೇಶ್‌‌ಬಾಬುರವರಿಗೂ ಇರುವ ಹಳೇ ವೈಷಮ್ಯದಿಂದ ರಮೇಶ್ಬಾಬು ರವರು ಉದ್ದೇಶಪೂರ್ವಕವಾಗಿ ಆತನ ಸಂಗಡಿಗರೊಂದಿಗೆ ಸೇರಿಕೊಂಡು ನಮ್ಮ ಮನೆಯ ಮುಂದೆ ನಿಲ್ಲಿಸಿದ್ದ ನನ್ನ ಬಾಬ್ತು KA-15-M-5543  TOYATA CORALLA   ಕಾರಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಬಗ್ಗೆ ನನಗೆ ಅನುಮಾನ ಇರುತ್ತೆ. ನಮ್ಮ ಕಾರು ಸುಟ್ಟಿರುವುದರಿಂದ ನನಗೆ ಸುಮಾರು 5,00,000/- ( ಐದು ಲಕ್ಷ ರೂಪಾಯಿ) ನಷ್ಟ ಉಂಟಾಗಿರುತ್ತೆ. ಆದ್ದರಿಂದ ತಾವು ದಯಮಾಡಿ ಮೇಲ್ಕಂಡವರನ್ನು ಕೂಲಂಕುಶ ವಿಚಾರಣೆ ಮಾಡಿ, ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ನಮ್ಮ ಕಾರಿಗೆ ಇನ್ಯೂರೆನ್ಸ್‌‌ ಇಲ್ಲದ ಕಾರಣ ನಾನು ಈ ವಿಚಾರದ ಬಗ್ಗೆ ನಮ್ಮ ವಕೀಲರ ಬಳಿ ಹಾಗೂ ನಮ್ಮ ಸಂಬಂಧಿಕರ ಬಳಿ ಚರ್ಚೆ ಮಾಡಿ ಈ ದಿನ ದಿನಾಂಕ: 05-08-2017 ರಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

ಚೇಳೂರು  ಪೊಲೀಸ್ ಠಾಣಾ ಯು.ಡಿ.ಆರ್  ನಂ27/2017  ಕಲಂ 174  ಸಿ.ಆರ್.ಪಿ.ಸಿ

ದಿನಾಂಕ; 05/08/2017 ರಂದು  ಮಧ್ಯಾಹ್ನ 2-30  ಗಂಟೆಗೆ  ಪಿರ್ಯಾದಿ  ಸಣ್ಣಮ್ಮನವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ನನ್ನ  ಗಂಡ  ಯರ್ರಯ್ಯನವರ ಬಾಬ್ತು  ಸಂಗನಹಳ್ಳಿ  ಗ್ರಾಮದ ಸರ್ವೆ  ನಂ: 55/1 ಎರಲ್ಲಿ 1 ಎಕರೆ 21 ಗುಂಟೆ  ಮತ್ತು 88/2ಪಿ ರಲ್ಲಿ 3 ಎಕರೆ 15 ಗುಂಟೆ 88/2ಪಿ2 ರಲ್ಲಿ 2 ಎಕರೆ  ಜಮೀನಿದ್ದು, ಈ  ಜಮೀನುಗಳ  ಅಭಿವೃದ್ದಿಗೆ  ನನ್ನ  ಗಂಡ  ಯರ್ರಯ್ಯನವರು  ಹೊಸಕೆರೆ  ಕಲ್ಪತರು ಗ್ರಾಮೀಣ  ಬ್ಯಾಂಕಿನಲ್ಲಿ  ಒಟ್ಟು 3.50.000 ( ಮೂರು  ಲಕ್ಷದ ಐವತ್ತು  ಸಾವಿರ )  ರೂಗಳ  ಸಾಲ  ಮಾಡಿ   ಬೋರ್  ವೆಲ್  ಹಾಗೂ  ಜಮೀನಿನ ಅಭಿವೃದ್ದಿ ಪಡಿಸಿದ್ದು, ಇತ್ತೀಚೆಗೆ ಕೆಲವು  ವರ್ಷಗಳಿಂದ  ಮಳೆ ಸರಿಯಾಗಿ  ಆಗದೆ  ಬೋರ್ ವೆಲ್  ಗಳು  ಬತ್ತಿ  ಹೋಗಿ  ಸದರಿ  ಜಮೀನಿನಲ್ಲಿ  ಬೆಳೆದಿದ್ದ  ಮಾವು  ಮತ್ತು   ತೆಂಗು  ಹಾಗೂ  ಇತರೆ  ಬೆಳೆಗಳು  ಸರಿಯಾಗಿ  ಬರದೆ  ಕೃಷಿಯಲ್ಲಿ  ನಷ್ಟಉಟಾಗಿ   ಸಾಲ  ತೀರಿಸಲು   ಸಾದ್ಯವಾಗಿರುವುದಿಲ್ಲ.  ಹಾಗೂ  ಕೃಷಿ  ಅಭಿವೃದ್ದಿ ಗಾಗಿ  ಕೈ ಸಾಲವನ್ನು  ಸಹ  ಮಾಡಿದ್ದು, ಇದನ್ನು  ಸಹ  ತೀರಿಸಲಾಗದೆ  ನನ್ನ  ಗಂಡ ಯರ್ರಯ್ಯನವರು  ಮನೆಯಲ್ಲಿ ನನಗೆ  ಮತ್ತು ನನ್ನ ಮಕ್ಕಳಾದ  ಸಿದ್ದರಾಮಯ್ಯ ಮತ್ತು ಮಂಜುಳ ಹಾಗೂ  ಕೃಷ್ಣ  ಮೂರ್ತಿ ಹೇಳುತ್ತಿದ್ದರು.  ಆಗ ನಾವು  ನನ್ನ  ಗಂಡನಿಗೆ  ಸಾಮಾಧಾನ  ಮಾಡುತ್ತಿದರು  ಸಹ  ಮಳೆ  ಸರಿಯಾಗಿ  ಆಗುತ್ತಿಲ್ಲ ಈಗ  ಮಾಡಿರುವ  ಸಾಲವೇ  ಜಾಸ್ತಿಯಾಗಿದೆ  ಸಾಲವನ್ನು  ಹೇಗೆ ತೀರಿಸಲಿ ಎಂದು ಸಾಲ ಭಾದೆಯಿಂದ  ನರಳುತ್ತಿದ್ದರು.  ದಿನಾಂಕ; 05/08/2017 ರಂದು    ಬೆಳಗ್ಗೆ 11-00 ಗಂಟೆ  ಸಮಯದಲ್ಲಿ  ನನ್ನ  ಗಂಡ  ಯರ್ರಯ್ಯನಿಗೆ  ಊಟಕ್ಕೆ  ಬಡಿಸಿ  ನಂತರ  ನಾನು  ಕುರಿಗೆ ಸೊಪ್ಪನ್ನು  ತರಲು  ಜಮೀನಿನ ಹತ್ತಿರ  ಹೋದಾಗ  ಮದ್ಯಾಹ್ನ 12-30  ಗಂಟೆಯಲ್ಲಿ  ನಮ್ಮ  ಮನೆಯ   ಪಕ್ಕದಲ್ಲಿ  ಇರುವ  ಕುರಿ ರೊಪ್ಪದಲ್ಲಿವ   ಜೋಪಡಿಗೆ  ನೂಲಿನ  ಹಗ್ಗದಿಂದ  ನೇಣು  ಹಾಕಿಕೊಂಡು ನೇತಾಡುತ್ತಿದ್ದು, ನಾನು  ವಾಪಸ್ಸು  ಕುರಿಗಳಿಗೆ  ಹಾಕುವ ಸೊಪ್ಪನ್ನು   ತಂದು  ನೋಡಿ  ಆಗ  ನಾನು  ಕಿರುಚಿಕೊಂಡಾಗ  ನಮ್ಮ ಪಕ್ಕದ  ಮನೆಯವರಾದ  ದೊಡ್ಡಯ್ಯ  ಬಿನ್ ಅಜ್ಜಯ್ಯ ಮತ್ತು ಶಿವಣ್ಣ   ಬಿನ್ ಬೋರಯ್ಯ ಇವರುಗಳು  ಬಂದು ನಮ್ಮ  ಯಜಮಾನರಿಗೆ  ಜೀವ  ಇರ ಬಹುದೆಂದು ನೇಣಿನಿಂದ  ಕೆಳಗೆ  ಇಳಿಸಿ  ನೀಡಲಾಗಿ  ನಮ್ಮ  ಯಜಮಾನರು  ಮೃತಪಟ್ಟಿದ್ದರು.  ಇವರ  ಸಾವಿನಲ್ಲಿ  ಬೇರೆ ಯಾವುದೇ  ಅನುಮಾನ  ಇರುವುದಿಲ್ಲ  ಆದ್ದರಿಂದ  ಮುಂದಿನ  ಕಾನೂನು  ರೀತ್ಯ  ಕ್ರಮ ಜರುಗಿಸಲು  ಕೋರಿ  ಇತ್ಯಾದಿಯಾದ ಪಿರ್ಯಾದು ಅಂಶ.

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ: 420/2017 ಕಲಂ; 279. 304 () .ಪಿ.ಸಿ

ದಿನಾಂಕ 05/08/2017 ರಂದು ಮದ್ಯಾಹ್ನ 03-30  ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಸುರೇಶ್ ಕುಮಾರ್ ಎಂ.ಜಿ ಸುರೇಶ ಕುಮಾರ್ ಎಂ. ಜಿಬಿನ್ ಗಂಗಬೋರಯ್ಯ 28 ವರ್ಷ. ವಕ್ಕಲಿಗರು. ವಾರ್ಡ್ ನಂ 2- ಮಲ್ಲಾಘಟ್ಟ ಕುಣಿಗಲ್ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 05/08/17  ರಂದು ಮದ್ಯಾಹ್ನ ಸುಮಾರು 01-30 ಗಂಟೆಯಲ್ಲಿ ಪಿರ್ಯಾದಿ ಮತ್ತು ಅವರ ಗ್ರಾಮದ ಮರಿಯಪ್ಪನವರ ಮಗ ಚಿಕ್ಕಣ್ಣ ಇಬ್ಬರು ಕೋರ್ಟ್ ಮುಂಭಾಗ ಗೇಟ್ ನಲ್ಲಿ ಸ್ವಂತ ಕೆಲಸದ ನಿಮಿತ್ತ ಬಂದು ನಿಂತಿದ್ದು ಅದೇ ಸಮಯಕ್ಕೆ ಅವರ ಅಕ್ಕನಮಗ ಅಂದರೆ ಜಯರಾಮಯ್ಯ ನವರ ಮಗ ಸುಮಾರು 22 ವರ್ಷದ ಚೇತನ್ ರವರು ಕುಣಿಗಲ್ ಟೌನ್ ಸಿವಿಲ್ ಬಸ್ ಸ್ಟಾಂಡ್ ಕಡೆಯಿಂದ ಹೌಸಿಂಗ್ ಬೋರ್ಡ್ ನಲ್ಲಿರುವ ಅವರ ಮನೆಯ ಹತ್ತಿರ ಹೋಗಲು ಅವರಿಗೆ ಸೇರಿದ ಆಕ್ಟೀವ್ ಹೊಂಡಾ ಚಾಲನೆಮಾಡಿಕೊಂಡು ತಲೆಗೆ ಹೆಲ್ಮೆಟ್ ಧರಿಸಿ ಕೋರ್ಟ್ನ ಮುಂಬಾಗದ ಎಡ ರಸ್ತೆಯಲ್ಲಿ ಹೋಗುತ್ತಿದ್ದರು. ಅದೇ ಸಮಯಕ್ಕೆ ಯಡಿಯೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗಲು ಬಂದಂತಹ ಒಂದು ಕೆ.ಎಸ್.ಆರ್.ಟಿ.ಸಿ . ಬಸ್ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ ಆಕ್ಟೀವಾ ಹೋಂಡಾಗೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದನುಅಪಘಾತ ಪಡಿಸಿದ ಪರಿಣಾಮ ಆಕ್ಟೀವ್ ಹೊಂಡಾ ಚಾಲನೆಮಾಡುತ್ತಿದ್ದ ಅವರ ಅಕ್ಕನ ಮಗ ಬಲಮಗ್ಗಲಿಗೆ ಕೆಳಕ್ಕೆ ಬಿದ್ದು ಹೋಗಿ ಕೆ.ಎಸ್.ಆರ್.ಟಿ.ಸಿ . ಬಸ್ ನ ಚಕ್ರ ಹರಿದ ಪರಿಣಾಮ ತೀವ್ರಸ್ವರೂಪದ ಪೆಟ್ಟಾಗಿತ್ತು. ಚೇತನ್ ಚಾಲನೆಮಾಡುತ್ತಿದ್ದ ಮತ್ತು ಅಪಘಾತಕ್ಕೀಡಾದ ಆಕ್ಟೀವಾ ಹೊಂಡಾ ನಂಬರ್ ನೋಡಲಾಗಿ ಕೆಎ.06-.ವಿ.4448 ಆಗಿತ್ತು . ಅಪಘಾತ ಪಡಿಸಿದ ಕೆ.ಎಸ್.ಆರ್.ಟಿ.ಸಿ . ಬಸ್ ನಂಬರ್ ನೋಡಲಾಗಿ ಕೆ.. 13-ಎಪ್-2187 ಆಗಿತ್ತು. ಪಿರ್ಯಾದಿಯವರು ಗಾಯಾಳು ಚೇತನ್ ರವರನ್ನು ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ತಂದು ಪರೀಕ್ಷಿಸಲಾಗಿ ವೈದ್ಯಾದಿಕಾರಿಗಳು ಮರಣ ಹೊಂದಿರುತ್ತಾನೆ ಎಂದು ತಿಳಿಸಿದರು. ಮೃತ ಚೇತನ್ ನನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ. ಅಪಘಾತ ಪಡಿಸಿದ ಕೆ.ಎಸ್.ಆರ್.ಟಿ.ಸಿ . ಕೆ.. 13-ಎಪ್-2187 ಬಸ್ ಚಾಲಕನ ಮೇಲೆ ಕಾನೂನು ರಿತ್ಯ ಕ್ರಮ ಜರುಗಿಸಬೇಕೆಂತ ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.75/2017, ಕಲಂ:279, 337, 304(ಎ) ಐಪಿಸಿ.

ದಿನಾಂಕ: 05/08/2017 ರಂದು ಬೆಳಿಗ್ಗೆ 10:30 ಪಿರ್ಯಾದಿ ತಂಗರಾಜು ಬಿನ್ ಕರಪು ಆರ್ಮುಗಂ, 36 ವರ್ಷ, ಸೆರ್ವೈ ಜನಾಂಗ, ಸೋಲರ್ ವರ್ಕ್ ಕಂಟ್ರಾಕ್ಟರ್, ಹಿಡೈಕಾಟುರು ಗ್ರಾಮ, ಶಿವಗಂಗಯ್ ತಾಲ್ಲೋಕು ಮತ್ತು ಜಿಲ್ಲೆ, ತಮಿಳು ನಾಡು ರಾಜ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಈಗ್ಗೆ ಎರಡು ತಿಂಗಳುಗಳಿಂದ ಪಾವಗಡ ತಾಲೋಕಿನ ತಿರುಮಣಿ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸಲು ಕಂಟ್ರ್ಯಾಕ್ಟ್ ತೆಗೆದುಕೊಂಡು ಸುಮಾರು 25 ರಿಂದ 30 ಜನ ಆಳುಗಳನ್ನು ಇಟ್ಟುಕೊಂಡು ಕೆಲಸ ಮಾಡಿಸುತ್ತಿದ್ದೆನು. ನನ್ನ ಹೆಂಡತಿ-ಮಕ್ಕಳನ್ನು ನೋಡುವ ಸಲುವಾಗಿ ಈಗ್ಗೆ 03-04 ದಿನಗಳ ಹಿಂದೆ ತಿರುಮಣಿ ಗ್ರಾಮದ ನನ್ನ ಸ್ನೇಹಿತ ದಾಮೋದರ ಎಂಬುವರೊಂದಿಗೆ ನನ್ನ ಸ್ವಂತ ಊರಿಗೆ ಹೋಗಿ ಹೆಂಡತಿ ಮಕ್ಕಳನ್ನು ನೋಡಿಕೊಂಡು ವಾಪಸ್ಸ್ ತಿರುಮಣಿಗೆ ಬರಲು ದಿನಾಂಕ:04/08/2017 ರಂದು ಮದ್ಯಾಹ್ನ 03:00 ಗಂಟಗೆ ನನ್ನ ಬಾಬ್ತು ಎಪಿ-02-ಎ.ಕ್ಯೂ-0006 ನೇ ಮಹೀಂದ್ರ ಜೈಲೊ ವಾಹನದಲ್ಲಿ ಹೊರಟಾಗ ಕೂಲಿ ಕೆಲಸಕ್ಕೆಂದು ಮೂರು ಜನರ ಅವಶ್ಯಕತೆ ಇದುದ್ದರಿಂದ ನಮ್ಮ ಗ್ರಾಮದ ವಿನುತ ಬಿನ್ ಜಯಕುಮಾರ್, ನಾಗಾರ್ಜುನ ಬಿನ್ ಸುರೇಶ್ ಹಾಗೂ ನನ್ನ ಚಿಕ್ಕಪ್ಪನ ಮಗನಾದ ದೀನ ತಾಯಳನ್ ಮತ್ತು ದಾಮೋದರ ರವರುಗಳೊಂದಿಗೆ ನಮ್ಮ ಊರಿನಿಂದ ಹೊರಟೆವು, ನಮ್ಮ ಬಾಬ್ತು ಮೇಲ್ಕಂಡ ಎಪಿ-02-ಎ.ಕ್ಯೂ-0006 ನೇ ಮಹೀಂದ್ರ ಜೈಲೊ ವಾಹನವನ್ನು ನನ್ನ ಚಿಕ್ಕಪ್ಪನ ಮಗನಾದ ದೀನ ತಾಯಳನ್ ರವರೇ ಚಾಲನೆ ಮಾಡುತ್ತಿದ್ದನು. ನಾವುಗಳು ಬೆಂಗಳೂರು-ಕೊರಟಗೆರೆ-ಮಧುಗಿರಿ-ಮಿಡಿಗೇಶಿ ಮಾರ್ಗವಾಗಿ ತಿರುಮಣಿಗೆ ಹೋಗಲು ಮಧುಗಿರಿ ಪಾವಗಡ ಮುಖ್ಯ ರಸ್ತೆಯಲ್ಲಿ ಬಿದರೆಕೆರೆ ಗ್ರಾಮದ ಹತ್ತಿರ ಈ ದಿನ ಅಂದರೆ ದಿನಾಂಕ:05/08/2017 ರಂದು ಮುಂಜಾನೆ ಸುಮಾರು 04:45 ಗಂಟೆಯ ಸಮಯದಲ್ಲಿ ಸದರಿ ವಾಹನವನ್ನು ಚಾಲನೆ ಮಾಡುತ್ತಿದ್ದ ದೀನ ತಾಯಳನ್ ರವರು ವಾಹನವನ್ನು ಅತೀ ಜೋರಾಗಿ ಮತ್ತು ಅಡ್ಡದಿಡ್ಡಿಯಾಗಿ ಚಾಲನೆ ಮಾಡಿ ರಸ್ತೆಯ ಎಡ ಪಕ್ಕದಲ್ಲಿ ನಿಲ್ಲಿಸಿದ್ದ ಕಬ್ಬಿಣದ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆಸಿದ್ದರಿಂದ ಸದರಿ ವಾಹನವು 03-04 ಪಲ್ಟಿಯಾಗಿ ರಸ್ತೆಯ ಎಡ ಪಕ್ಕದ ಚರಂಡಿಗೆ ಬಿದ್ದ ಪರಿಣಾಮ ವಾಹನ ಪೂರ್ಣ ಜಖಂಗೊಂಡು ಸದರಿ ವಾಹನವನ್ನು ಚಾಲನೆ ಮಾಡುತ್ತಿದ್ದ ದೀನ ತಾಯಳನ್ ರವರ ತಲೆಗೆ ತೀರ್ವ ತರಹದ ಪೆಟ್ಟು ಬಿದ್ದು ಆತನ ಕಿವಿ, ಮೂಗು, ಬಾಯಿಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಸದರಿ ವಾಹನದಲ್ಲಿದ್ದ ವಿನುತಾ ಎಂಬುವನ ಎರಡು ಕಾಲುಗಳಿಗೆ ಮತ್ತು ಬೆನ್ನಿಗೆ ಪೆಟ್ಟುಗಳು ಬಿದಿದ್ದವು, ನಾಗಾರ್ಜುನ ಎಂಬುವನ ಸೊಂಟಕ್ಕೆ ಪೆಟ್ಟು ಬಿದ್ದಿತ್ತು, ದಾಮೋದರನಿಗೆ ಹಣೆಗೆ ಪೆಟ್ಟು ಬಿದ್ದು ರಕ್ತ ಗಾಯಗಳಾಗಿದ್ದವು. ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಬಂದ ಯಾರೋ ಸಾರ್ವಜನಿಕರು 108 ಆಂಬುಲೆನ್ಸ್ ಗೆ ಪೋನ್ ಮಾಡಿದ್ದರಿಂದ ಸ್ಥಳಕ್ಕೆ ಬಂದ ಆಂಬುಲೆನ್ಸ್ ನಲ್ಲಿ ಗಾಯಗೊಂಡಿದ್ದವರನ್ನು ಮತ್ತು ದೀನ ತಾಯಳನ್ ರವರ ಮೃತ ದೇಹವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿಟ್ಟು, ನಂತರ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದೆನು. ನಂತರ ವೈದ್ಯರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ತುಮಕೂರಿಗೆ ಕಳುಹಿಸಿಕೊಟ್ಟು. ಸದರಿ ಅಪಘಾತದಲ್ಲಿ ನನಗೆ ಯಾವುದೇ ಪೆಟ್ಟುಗಳು ಬಿದ್ದಿರುವುದಿಲ್ಲ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಚಾಲಕ ಮೃತ ದೀನ ತಾಯಳನ್ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಪಿರ್ಯಾದು ಅಂಶ.


Crime Incidents 06-08-17

ಜಯನಗರ ಪೊಲೀಸ್ ಠಾಣಾ ಮೊ.ನಂ 114/2017 ಕಲಂ 435, 427 ರೆ/ವಿ 34 ಐಪಿಸಿ

ದಿನಾಂಕ: 05-08-2017 ರಂದು ರಾತ್ರಿ 7-45 ಗಂಟೆ ಸಮಯದಲ್ಲಿ ತುಮಕೂರು ಟೌನ್‌, ಮರಳೂರು, ಲಾಬಾ ರೆಸ್ಟೋರೆಂಟ್ ಹಿಂಭಾಗ ವಾಸವಿರುವ ಮಹಮ್ಮದ್‌‌‌ ಹಾಸಿಮ್‌‌ ಎಕ್ಬಾಲ್, ಬಿನ್ ಲೇ|| ಎಂ.ಎ. ಇಕ್ಬಾಲ್‌‌ ಅಹಮ್ಮದ್‌ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ,  ನಾನು ತುಮಕೂರಿನಿಂದ ಬೆಂಗಳೂರಿಗೆ ನಮ್ಮ ಇಟ್ಟಿಗೆ ಪ್ಯಾಕ್ಟರಿಗೆ ಆಗಾಗ ಹೋಗಿ ಬರುತ್ತಿರುತ್ತೇನೆ.  ನನಗೆ ಡೆಂಗ್ಯೂ ಜ್ವರ ಬಂದಿದ್ದರಿಂದ ನಾನು ದಿನಾಂಕ: 29-07-2017 ರಿಂದ 01-08-2017 ರವರೆಗೆ ಸಿದ್ದಾರ್ಥ ಮೆಡಿಕಲ್‌‌ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಅದೇ ದಿನ ನಾನು ಬೆಂಗಳೂರಿನಲ್ಲಿರುವ ನಮ್ಮ ಇಟ್ಟಿಗೆ ಪ್ಯಾಕ್ಟರಿಯ ಬಳಿ ಹೋಗಿ, ನಂತರ  ಮಾರನೆಯ ದಿನ ಬೆಂಗಳೂರಿನಲ್ಲಿ  ಯಾವುದಾದರೊಂದು ಆಸ್ಪತ್ರೆಯಲ್ಲಿ ತೋರಿಸೋಣವೆಂತಾ  ಆ ದಿನ ರಾತ್ರಿ ಬೆಂಗಳೂರು ವೈಟ್‌‌‌ಪೀಲ್ಡ್ ಕಾಡುಗೋಡಿನಲ್ಲಿರುವ ನಮ್ಮ ಅಣ್ಣ ಇಮ್ರಾನ್‌ ರವರ ಮನೆಗೆ ಅವರ  ಮನೆಯಲ್ಲಿಯೇ ಉಳಿದುಕೊಂಡಿದ್ದೆನು. ಮಾರನೆಯ ದಿನ ದಿನಾಂಕ: 02-08-2017 ರಂದು ನನ್ನ ಹೆಂಡತಿ ಅಮ್ರಿನ್‌‌ಸುಲ್ತಾನ ನನಗೆ ಪೋನ್ ಮಾಡಿ  ನಿನ್ನೆ ರಾತ್ರಿ ನಮ್ಮ ಮನೆಯ ಮುಂದೆ ಮಣ್ಣಿನ ರಸ್ತೆಯ ಮೇಲೆ ನಿಲ್ಲಿಸಿದ್ದ ನಮ್ಮ ಕಾರಿಗೆ ಬೆಂಕಿಹೊತ್ತಿಕೊಂಡು, ಕಾರು ಸಂಪೂರ್ಣ ಸುಟ್ಟು ಹೋಗಿರುತ್ತೆ.  ನಾನು ರಾತ್ರಿಯೇ ಅಗ್ರಿಶಾಮಕ ಧಳದವರಿಗೆ ಪೋನ್ ಮಾಡಿ ಕರೆಸಿಕೊಂಡಿದ್ದು, ಅವರು ಬರುವಷ್ಟೋತ್ತಿಗೆ ಕಾರು ಪೂರಾ ಮುಕ್ಕಾಲು ಭಾಗದಷ್ಟು ಸುಟ್ಟು ಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿಯವರೂ ಸಹಾ ನೀರು ಹಾಕಿ ಬೆಂಕಿ ಹಾರಿಸಿ ಹೋಗಿರುತ್ತಾರೆ. ನಿಮಗೆ ಹುಷಾರಿಲ್ಲದೇ ಇದ್ದರಿಂದ ನಾನು ರಾತ್ರಿಯೇ ವಿಚಾರ ತಿಳಿಸಿದರೆ ಗಾಬರಿಯಾಗುತ್ತೀರೆಂದು ಈಗ ವಿಚಾರ ತಿಳಿಸಿರುತ್ತಾನೆಂತಾ ನನಗೆ ವಿಚಾರ ತಿಳಿಸಿದಳು. ನಂತರ ನಾನು ತಕ್ಷಣ ಬೆಂಗಳೂರಿನಿಂದ ಹೊರಟು ತುಮಕೂರಿನ ನಮ್ಮ ಮನೆಗೆ ಬಂದು ನೋಡಲಾಗಿ, ನಮ್ಮ ಮನೆಯ ಮುಂಭಾಗ ಮಣ್ಣಿನ ರಸ್ತೆಯ ಮೇಲೆ ನಿಲ್ಲಿಸಿದ್ದ ನಮ್ಮ ಬಾಬ್ತು KA-15-M-5543  TOYATA CORALLA  ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು.  ನನ್ನ ಹೆಂಡತಿಯನ್ನು ವಿಚಾರ ಮಾಡಲಾಗಿ, ನಾನು ದಿನಾಂಕ: 01-08-2017 ರಂದು ಸದರಿ ಕಾರಿನಲ್ಲಿ ನಾನೇ ಡ್ರೈವ್‌‌ ಮಾಡಿಕೊಂಡು ಧಾನ: ಪ್ಯಾಲೇಸ್‌‌‌ ಬಳಿ ಇರುವ ನಮ್ಮ ಅಂಕಲ್‌‌ ಅಜ್ಮಲ್‌‌ ಪರ್ವೀಸ್‌‌ ಅಹಮ್ಮದ್‌‌ ರವರ ಮನೆಗೆ ಹೋಗಿದ್ದು, ವಾಪಾಸ್ಸು ರಾತ್ರಿ ಸುಮಾರು 11-15 ಗಂಟೆ ಸಮಯಕ್ಕೆ ವಾಪಾಸ್ಸು ನಾನೇ ಕಾರನ್ನು ಡ್ರೈವ್‌‌ ಮಾಡಿಕೊಂಡು ಮನೆಗೆ ಬಂದು ಮನೆಯ ಮುಂದೆ ಕಾರನ್ನು ನಿಲ್ಲಿಸಿ ಮನೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದಾಗ ರಾತ್ರಿ ಸುಮಾರು 1-30 ಗಂಟೆ ಸಮಯದಲ್ಲಿ ಕಾರಿನ ಸೈರನ್‌‌‌‌ ಆಗುತ್ತಿದ್ದು, ಹೊರಗೆ ಬಂದು ನೋಡಲಾಗಿ ಕಾರು ಬೆಂಕಿಹೊತ್ತಿಕೊಂಡು ಹುರಿಯುತ್ತಿತ್ತು. ತಕ್ಷಣ ಅಕ್ಕ-ಪಕ್ಕದವರ ಸಹಾಯದಿಂದ ನೀರು ಹಾಕಿ ಬೆಂಕಿ ಹಾರಿಸಲು ಪ್ರಯತ್ನಿಸಿದ್ದು ಬೆಂಕಿ ಹಾರಿಸಲು ಸಾದ್ಯವಾಗದೇ ಇದ್ದರಿಂದ ಪೈರ್‌‌‌ ಸ್ಟೇಷನ್‌‌ಗೆ ಪೋನ್ ಮಾಡಿ ಪೈರ್‌‌‌ ಹಾರಿಸುವ ವಾಹನವನ್ನು ಕರೆಸಿಕೊಂಡು ಬೆಂಕಿ ಹಾರಿಸಿರುವುದಾಗಿ ವಿಚಾರ ತಿಳಿಸಿದಳು. ನಮ್ಮ ಕಾರಿಗೆ ಉದ್ದೇಶಪೂರ್ವಕವಾಗಿ ತುಮಕೂರು ಟೌನ್ ಗೋಕುಲಬಡಾವಣೆಯ ವಾಸಿ ರಮೇಶ್‌‌‌‌ಬಾಬು ಬಿನ್. ಮುನಿವೆಂಕಟಪ್ಪ ಎಂಬುವರು ಅವನ ಸಂಗಡಿಗರೊಂದಿಗೆ ನಮ್ಮ ಮನೆಯ ಬಳಿಗೆ ಬಂದು ಬೆಂಕಿ ಇಟ್ಟು ಸುಟ್ಟುಹಾಕಿರುವುದಾಗಿ ಅನುಮಾನ ಇರುತ್ತೆ. ಏಕೆಂದರೆ ರಮೇಶ್‌‌ಬಾಬು ರವರಿಗೂ ನನಗೂ ಈಗ್ಗೆ ಸುಮಾರು 2012 ರಿಂದ ದ್ವೇಷವಿದ್ದು, ರಮೇಶ್‌‌‌ಬಾಬು ರವರು ಉದ್ದೇಶಪೂರ್ವಕವಾಗಿ ಈಗಾಗಲೇ ನನ್ನ ವಿರುದ್ದ 2012 ನೇ ಇಸವಿಯಲ್ಲಿ  ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ  ಅಟ್ರಾಸಿಟಿ ಕೇಸ್‌‌ ಮಾಡಿಸಿದ್ದು, ನಂತರ ಬೇರೆಯವರ ಮುಖಾಂತರ 2013 ನೇ ಇಸವಿಯಲ್ಲಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಮಂಜುಳಾ ಎಂಬುವರಿಂದ ಕೇಸು ಕೊಡಿಸಿದ್ದು, ಆ ನಂತರ ಮತ್ತೆ ಮಂಜುಳಾ ಎಂಬುವರಿಂದ ಕ್ಯಾತ್ಸಂದ್ರ ಹಾಗೂ ಎನ್.ಇ.ಪಿ.ಎಸ್. ಪೊಲೀಸ್ ಠಾಣೆಗಳಲ್ಲೂ ಸಹಾ ದೂರು ಕೊಡಿಸಿ ನನ್ನ ಮೇಲೆ ಕೇಸು ಮಾಡಿಸಿರುತ್ತಾನೆ.  ಅಲ್ಲದೆ ಕೊರಟಗೆರೆಯಲ್ಲಿ ಸಹಾ ನಾರಾಯಣಪ್ಪ ಎಂಬುವರಿಂದ ಉದ್ದೇಶಪೂರ್ವಕವಾಗಿ ಅಟ್ರಾಸಿಟಿ ಕೇಸು ಕೊಡಿಸಿರುತ್ತಾರೆ.   ಅಲ್ಲದೇ ರಮೇಶ್‌‌ಬಾಬು ರವರ ವಿರುದ್ದ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ರಮೇಶ್‌‌ಬಾಬು ವಿರುದ್ದ ದಾಖಲಾಗಿದ್ದ ರೇಫ್‌‌ ಕೇಸಿನಲ್ಲಿ ನಾನು ಕೋರ್ಟಿನಲ್ಲಿ ಸಾಕ್ಷಿ ಹೇಳಿರುತ್ತೇನೆ. ನನಗೂ ರಮೇಶ್‌‌ಬಾಬುರವರಿಗೂ ಇರುವ ಹಳೇ ವೈಷಮ್ಯದಿಂದ ರಮೇಶ್‌ಬಾಬು ರವರು ಉದ್ದೇಶಪೂರ್ವಕವಾಗಿ ಆತನ ಸಂಗಡಿಗರೊಂದಿಗೆ ಸೇರಿಕೊಂಡು ನಮ್ಮ ಮನೆಯ ಮುಂದೆ ನಿಲ್ಲಿಸಿದ್ದ ನನ್ನ ಬಾಬ್ತು KA-15-M-5543  TOYATA CORALLA   ಕಾರಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಬಗ್ಗೆ ನನಗೆ ಅನುಮಾನ ಇರುತ್ತೆ. ನಮ್ಮ ಕಾರು ಸುಟ್ಟಿರುವುದರಿಂದ ನನಗೆ ಸುಮಾರು 5,00,000/- ( ಐದು ಲಕ್ಷ ರೂಪಾಯಿ) ನಷ್ಟ ಉಂಟಾಗಿರುತ್ತೆ. ಆದ್ದರಿಂದ ತಾವು ದಯಮಾಡಿ ಮೇಲ್ಕಂಡವರನ್ನು ಕೂಲಂಕುಶ ವಿಚಾರಣೆ ಮಾಡಿ, ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ನಮ್ಮ ಕಾರಿಗೆ ಇನ್ಯೂರೆನ್ಸ್‌‌ ಇಲ್ಲದ ಕಾರಣ  ನಾನು ಈ ವಿಚಾರದ ಬಗ್ಗೆ ನಮ್ಮ ವಕೀಲರ ಬಳಿ ಹಾಗೂ ನಮ್ಮ ಸಂಬಂಧಿಕರ ಬಳಿ ಚರ್ಚೆ ಮಾಡಿ ಈ ದಿನ ದಿನಾಂಕ: 05-08-2017 ರಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

ಚೇಳೂರು  ಪೊಲೀಸ್ ಠಾಣಾ ಯು.ಡಿ.ಆರ್  ನಂ27/2017  ಕಲಂ 174  ಸಿ.ಆರ್.ಪಿ.ಸಿ

ದಿನಾಂಕ; 05/08/2017 ರಂದು  ಮಧ್ಯಾಹ್ನ 2-30  ಗಂಟೆಗೆ  ಪಿರ್ಯಾದಿ  ಸಣ್ಣಮ್ಮನವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ,  ನನ್ನ  ಗಂಡ  ಯರ್ರಯ್ಯನವರ ಬಾಬ್ತು  ಸಂಗನಹಳ್ಳಿ  ಗ್ರಾಮದ ಸರ್ವೆ  ನಂ: 55/1 ಎರಲ್ಲಿ 1 ಎಕರೆ 21 ಗುಂಟೆ  ಮತ್ತು 88/2ಪಿ ರಲ್ಲಿ 3 ಎಕರೆ 15 ಗುಂಟೆ 88/2ಪಿ2 ರಲ್ಲಿ 2 ಎಕರೆ  ಜಮೀನಿದ್ದು,  ಈ  ಜಮೀನುಗಳ  ಅಭಿವೃದ್ದಿಗೆ  ನನ್ನ  ಗಂಡ  ಯರ್ರಯ್ಯನವರು  ಹೊಸಕೆರೆ  ಕಲ್ಪತರು ಗ್ರಾಮೀಣ  ಬ್ಯಾಂಕಿನಲ್ಲಿ  ಒಟ್ಟು 3.50.000 ( ಮೂರು  ಲಕ್ಷದ ಐವತ್ತು  ಸಾವಿರ )  ರೂಗಳ  ಸಾಲ  ಮಾಡಿ   ಬೋರ್  ವೆಲ್  ಹಾಗೂ  ಜಮೀನಿನ ಅಭಿವೃದ್ದಿ ಪಡಿಸಿದ್ದು,  ಇತ್ತೀಚೆಗೆ ಕೆಲವು  ವರ್ಷಗಳಿಂದ  ಮಳೆ ಸರಿಯಾಗಿ  ಆಗದೆ  ಬೋರ್ ವೆಲ್  ಗಳು  ಬತ್ತಿ  ಹೋಗಿ  ಸದರಿ  ಜಮೀನಿನಲ್ಲಿ  ಬೆಳೆದಿದ್ದ  ಮಾವು  ಮತ್ತು   ತೆಂಗು  ಹಾಗೂ  ಇತರೆ  ಬೆಳೆಗಳು  ಸರಿಯಾಗಿ  ಬರದೆ  ಕೃಷಿಯಲ್ಲಿ  ನಷ್ಟಉಟಾಗಿ   ಸಾಲ  ತೀರಿಸಲು   ಸಾದ್ಯವಾಗಿರುವುದಿಲ್ಲ.  ಹಾಗೂ  ಕೃಷಿ  ಅಭಿವೃದ್ದಿ ಗಾಗಿ  ಕೈ ಸಾಲವನ್ನು  ಸಹ  ಮಾಡಿದ್ದು,  ಇದನ್ನು  ಸಹ  ತೀರಿಸಲಾಗದೆ  ನನ್ನ  ಗಂಡ ಯರ್ರಯ್ಯನವರು  ಮನೆಯಲ್ಲಿ ನನಗೆ  ಮತ್ತು ನನ್ನ ಮಕ್ಕಳಾದ  ಸಿದ್ದರಾಮಯ್ಯ ಮತ್ತು ಮಂಜುಳ ಹಾಗೂ  ಕೃಷ್ಣ  ಮೂರ್ತಿ ಹೇಳುತ್ತಿದ್ದರು.  ಆಗ ನಾವು  ನನ್ನ  ಗಂಡನಿಗೆ  ಸಾಮಾಧಾನ  ಮಾಡುತ್ತಿದರು  ಸಹ  ಮಳೆ  ಸರಿಯಾಗಿ  ಆಗುತ್ತಿಲ್ಲ ಈಗ  ಮಾಡಿರುವ  ಸಾಲವೇ  ಜಾಸ್ತಿಯಾಗಿದೆ  ಸಾಲವನ್ನು  ಹೇಗೆ ತೀರಿಸಲಿ ಎಂದು ಸಾಲ ಭಾದೆಯಿಂದ  ನರಳುತ್ತಿದ್ದರು.  ದಿನಾಂಕ; 05/08/2017 ರಂದು    ಬೆಳಗ್ಗೆ 11-00 ಗಂಟೆ  ಸಮಯದಲ್ಲಿ  ನನ್ನ  ಗಂಡ  ಯರ್ರಯ್ಯನಿಗೆ  ಊಟಕ್ಕೆ  ಬಡಿಸಿ  ನಂತರ  ನಾನು  ಕುರಿಗೆ ಸೊಪ್ಪನ್ನು  ತರಲು  ಜಮೀನಿನ ಹತ್ತಿರ  ಹೋದಾಗ  ಮದ್ಯಾಹ್ನ 12-30  ಗಂಟೆಯಲ್ಲಿ  ನಮ್ಮ  ಮನೆಯ   ಪಕ್ಕದಲ್ಲಿ  ಇರುವ  ಕುರಿ ರೊಪ್ಪದಲ್ಲಿವ   ಜೋಪಡಿಗೆ  ನೂಲಿನ  ಹಗ್ಗದಿಂದ  ನೇಣು  ಹಾಕಿಕೊಂಡು ನೇತಾಡುತ್ತಿದ್ದು,  ನಾನು  ವಾಪಸ್ಸು  ಕುರಿಗಳಿಗೆ  ಹಾಕುವ ಸೊಪ್ಪನ್ನು   ತಂದು  ನೋಡಿ  ಆಗ  ನಾನು  ಕಿರುಚಿಕೊಂಡಾಗ  ನಮ್ಮ ಪಕ್ಕದ  ಮನೆಯವರಾದ  ದೊಡ್ಡಯ್ಯ  ಬಿನ್ ಅಜ್ಜಯ್ಯ ಮತ್ತು ಶಿವಣ್ಣ   ಬಿನ್ ಬೋರಯ್ಯ ಇವರುಗಳು  ಬಂದು ನಮ್ಮ  ಯಜಮಾನರಿಗೆ  ಜೀವ  ಇರ ಬಹುದೆಂದು ನೇಣಿನಿಂದ  ಕೆಳಗೆ  ಇಳಿಸಿ  ನೀಡಲಾಗಿ  ನಮ್ಮ  ಯಜಮಾನರು  ಮೃತಪಟ್ಟಿದ್ದರು.  ಇವರ  ಸಾವಿನಲ್ಲಿ  ಬೇರೆ ಯಾವುದೇ  ಅನುಮಾನ  ಇರುವುದಿಲ್ಲ  ಆದ್ದರಿಂದ  ಮುಂದಿನ  ಕಾನೂನು  ರೀತ್ಯ  ಕ್ರಮ ಜರುಗಿಸಲು  ಕೋರಿ  ಇತ್ಯಾದಿಯಾದ ಪಿರ್ಯಾದು ಅಂಶ.

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ: 420/2017 ಕಲಂ; 279. 304 (ಎ) ಐ.ಪಿ.ಸಿ

ದಿನಾಂಕ 05/08/2017 ರಂದು  ಮದ್ಯಾಹ್ನ 03-30  ಗಂಟೆಯಲ್ಲಿ  ಈ ಕೇಸಿನ ಪಿರ್ಯಾದಿ ಸುರೇಶ್ ಕುಮಾರ್ ಎಂ.ಜಿ ಸುರೇಶ ಕುಮಾರ್ ಎಂ. ಜಿ.  ಬಿನ್ ಗಂಗಬೋರಯ್ಯ  28 ವರ್ಷ. ವಕ್ಕಲಿಗರು. ವಾರ್ಡ್ ನಂ 2- ಮಲ್ಲಾಘಟ್ಟ ಕುಣಿಗಲ್ ಟೌನ್   ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 05/08/17  ರಂದು ಮದ್ಯಾಹ್ನ ಸುಮಾರು 01-30 ಗಂಟೆಯಲ್ಲಿ ಪಿರ್ಯಾದಿ ಮತ್ತು ಅವರ ಗ್ರಾಮದ ಮರಿಯಪ್ಪನವರ ಮಗ ಚಿಕ್ಕಣ್ಣ  ಇಬ್ಬರು ಕೋರ್ಟ್  ಮುಂಭಾಗ ಗೇಟ್ ನಲ್ಲಿ ಸ್ವಂತ ಕೆಲಸದ ನಿಮಿತ್ತ ಬಂದು ನಿಂತಿದ್ದು ಅದೇ ಸಮಯಕ್ಕೆ ಅವರ  ಅಕ್ಕನಮಗ  ಅಂದರೆ ಜಯರಾಮಯ್ಯ ನವರ ಮಗ ಸುಮಾರು 22 ವರ್ಷದ ಚೇತನ್  ರವರು ಕುಣಿಗಲ್ ಟೌನ್ ಸಿವಿಲ್ ಬಸ್ ಸ್ಟಾಂಡ್  ಕಡೆಯಿಂದ ಹೌಸಿಂಗ್ ಬೋರ್ಡ್ ನಲ್ಲಿರುವ   ಅವರ ಮನೆಯ ಹತ್ತಿರ ಹೋಗಲು ಅವರಿಗೆ ಸೇರಿದ   ಆಕ್ಟೀವ್ ಹೊಂಡಾ ಚಾಲನೆಮಾಡಿಕೊಂಡು  ತಲೆಗೆ ಹೆಲ್ಮೆಟ್ ಧರಿಸಿ ಕೋರ್ಟ್‍ನ ಮುಂಬಾಗದ  ಎಡ ರಸ್ತೆಯಲ್ಲಿ  ಹೋಗುತ್ತಿದ್ದರು. ಅದೇ ಸಮಯಕ್ಕೆ ಯಡಿಯೂರು  ಕಡೆಯಿಂದ ಬೆಂಗಳೂರು ಕಡೆಗೆ ಹೋಗಲು ಬಂದಂತಹ ಒಂದು ಕೆ.ಎಸ್.ಆರ್.ಟಿ.ಸಿ . ಬಸ್ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ  ಆಕ್ಟೀವಾ ಹೋಂಡಾಗೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದನು.  ಅಪಘಾತ ಪಡಿಸಿದ ಪರಿಣಾಮ ಆಕ್ಟೀವ್ ಹೊಂಡಾ ಚಾಲನೆಮಾಡುತ್ತಿದ್ದ  ಅವರ  ಅಕ್ಕನ ಮಗ ಬಲಮಗ್ಗಲಿಗೆ ಕೆಳಕ್ಕೆ ಬಿದ್ದು ಹೋಗಿ  ಕೆ.ಎಸ್.ಆರ್.ಟಿ.ಸಿ . ಬಸ್  ನ ಚಕ್ರ ಹರಿದ ಪರಿಣಾಮ ತೀವ್ರಸ್ವರೂಪದ ಪೆಟ್ಟಾಗಿತ್ತು. ಚೇತನ್ ಚಾಲನೆಮಾಡುತ್ತಿದ್ದ  ಮತ್ತು ಅಪಘಾತಕ್ಕೀಡಾದ  ಆಕ್ಟೀವಾ ಹೊಂಡಾ ನಂಬರ್ ನೋಡಲಾಗಿ ಕೆಎ.06-ಇ.ವಿ.4448 ಆಗಿತ್ತು . ಅಪಘಾತ ಪಡಿಸಿದ ಕೆ.ಎಸ್.ಆರ್.ಟಿ.ಸಿ . ಬಸ್ ನಂಬರ್ ನೋಡಲಾಗಿ ಕೆ.ಎ. 13-ಎಪ್-2187 ಆಗಿತ್ತು. ಪಿರ್ಯಾದಿಯವರು ಗಾಯಾಳು ಚೇತನ್ ರವರನ್ನು ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ತಂದು ಪರೀಕ್ಷಿಸಲಾಗಿ ವೈದ್ಯಾದಿಕಾರಿಗಳು ಮರಣ ಹೊಂದಿರುತ್ತಾನೆ ಎಂದು ತಿಳಿಸಿದರು. ಮೃತ ಚೇತನ್ ನನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ. ಅಪಘಾತ ಪಡಿಸಿದ ಕೆ.ಎಸ್.ಆರ್.ಟಿ.ಸಿ . ಕೆ.ಎ. 13-ಎಪ್-2187 ಬಸ್ ಚಾಲಕನ ಮೇಲೆ ಕಾನೂನು ರಿತ್ಯ ಕ್ರಮ ಜರುಗಿಸಬೇಕೆಂತ ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.75/2017, ಕಲಂ:279, 337, 304(ಎ) ಐಪಿಸಿ.

ದಿನಾಂಕ: 05/08/2017 ರಂದು ಬೆಳಿಗ್ಗೆ 10:30 ಪಿರ್ಯಾದಿ ತಂಗರಾಜು ಬಿನ್ ಕರಪು ಆರ್ಮುಗಂ, 36 ವರ್ಷ, ಸೆರ್ವೈ ಜನಾಂಗ, ಸೋಲರ್ ವರ್ಕ್ ಕಂಟ್ರಾಕ್ಟರ್, ಹಿಡೈಕಾಟುರು ಗ್ರಾಮ, ಶಿವಗಂಗಯ್ ತಾಲ್ಲೋಕು ಮತ್ತು ಜಿಲ್ಲೆ, ತಮಿಳು ನಾಡು ರಾಜ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಈಗ್ಗೆ ಎರಡು ತಿಂಗಳುಗಳಿಂದ ಪಾವಗಡ ತಾಲೋಕಿನ ತಿರುಮಣಿ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸಲು ಕಂಟ್ರ್ಯಾಕ್ಟ್ ತೆಗೆದುಕೊಂಡು ಸುಮಾರು 25 ರಿಂದ 30 ಜನ ಆಳುಗಳನ್ನು ಇಟ್ಟುಕೊಂಡು ಕೆಲಸ ಮಾಡಿಸುತ್ತಿದ್ದೆನು. ನನ್ನ ಹೆಂಡತಿ-ಮಕ್ಕಳನ್ನು ನೋಡುವ ಸಲುವಾಗಿ ಈಗ್ಗೆ 03-04 ದಿನಗಳ ಹಿಂದೆ ತಿರುಮಣಿ ಗ್ರಾಮದ ನನ್ನ ಸ್ನೇಹಿತ ದಾಮೋದರ ಎಂಬುವರೊಂದಿಗೆ ನನ್ನ ಸ್ವಂತ ಊರಿಗೆ ಹೋಗಿ ಹೆಂಡತಿ ಮಕ್ಕಳನ್ನು ನೋಡಿಕೊಂಡು ವಾಪಸ್ಸ್ ತಿರುಮಣಿಗೆ ಬರಲು ದಿನಾಂಕ:04/08/2017 ರಂದು ಮದ್ಯಾಹ್ನ 03:00 ಗಂಟಗೆ ನನ್ನ ಬಾಬ್ತು ಎಪಿ-02-ಎ.ಕ್ಯೂ-0006 ನೇ ಮಹೀಂದ್ರ ಜೈಲೊ ವಾಹನದಲ್ಲಿ ಹೊರಟಾಗ ಕೂಲಿ ಕೆಲಸಕ್ಕೆಂದು ಮೂರು ಜನರ ಅವಶ್ಯಕತೆ ಇದುದ್ದರಿಂದ ನಮ್ಮ ಗ್ರಾಮದ ವಿನುತ ಬಿನ್ ಜಯಕುಮಾರ್, ನಾಗಾರ್ಜುನ ಬಿನ್ ಸುರೇಶ್ ಹಾಗೂ ನನ್ನ ಚಿಕ್ಕಪ್ಪನ ಮಗನಾದ ದೀನ ತಾಯಳನ್ ಮತ್ತು ದಾಮೋದರ ರವರುಗಳೊಂದಿಗೆ ನಮ್ಮ ಊರಿನಿಂದ ಹೊರಟೆವು, ನಮ್ಮ ಬಾಬ್ತು ಮೇಲ್ಕಂಡ ಎಪಿ-02-ಎ.ಕ್ಯೂ-0006 ನೇ ಮಹೀಂದ್ರ ಜೈಲೊ ವಾಹನವನ್ನು ನನ್ನ ಚಿಕ್ಕಪ್ಪನ ಮಗನಾದ ದೀನ ತಾಯಳನ್ ರವರೇ ಚಾಲನೆ ಮಾಡುತ್ತಿದ್ದನು. ನಾವುಗಳು ಬೆಂಗಳೂರು-ಕೊರಟಗೆರೆ-ಮಧುಗಿರಿ-ಮಿಡಿಗೇಶಿ ಮಾರ್ಗವಾಗಿ ತಿರುಮಣಿಗೆ ಹೋಗಲು ಮಧುಗಿರಿ ಪಾವಗಡ ಮುಖ್ಯ ರಸ್ತೆಯಲ್ಲಿ ಬಿದರೆಕೆರೆ ಗ್ರಾಮದ ಹತ್ತಿರ ಈ ದಿನ ಅಂದರೆ ದಿನಾಂಕ:05/08/2017 ರಂದು ಮುಂಜಾನೆ ಸುಮಾರು 04:45 ಗಂಟೆಯ ಸಮಯದಲ್ಲಿ ಸದರಿ ವಾಹನವನ್ನು ಚಾಲನೆ ಮಾಡುತ್ತಿದ್ದ ದೀನ ತಾಯಳನ್ ರವರು ವಾಹನವನ್ನು ಅತೀ ಜೋರಾಗಿ ಮತ್ತು ಅಡ್ಡದಿಡ್ಡಿಯಾಗಿ ಚಾಲನೆ ಮಾಡಿ ರಸ್ತೆಯ ಎಡ ಪಕ್ಕದಲ್ಲಿ ನಿಲ್ಲಿಸಿದ್ದ ಕಬ್ಬಿಣದ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆಸಿದ್ದರಿಂದ ಸದರಿ ವಾಹನವು 03-04 ಪಲ್ಟಿಯಾಗಿ ರಸ್ತೆಯ ಎಡ ಪಕ್ಕದ ಚರಂಡಿಗೆ ಬಿದ್ದ ಪರಿಣಾಮ ವಾಹನ ಪೂರ್ಣ ಜಖಂಗೊಂಡು ಸದರಿ ವಾಹನವನ್ನು ಚಾಲನೆ ಮಾಡುತ್ತಿದ್ದ ದೀನ ತಾಯಳನ್ ರವರ ತಲೆಗೆ ತೀರ್ವ ತರಹದ ಪೆಟ್ಟು ಬಿದ್ದು ಆತನ ಕಿವಿ, ಮೂಗು, ಬಾಯಿಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಸದರಿ ವಾಹನದಲ್ಲಿದ್ದ ವಿನುತಾ ಎಂಬುವನ ಎರಡು ಕಾಲುಗಳಿಗೆ ಮತ್ತು ಬೆನ್ನಿಗೆ ಪೆಟ್ಟುಗಳು ಬಿದಿದ್ದವು, ನಾಗಾರ್ಜುನ ಎಂಬುವನ ಸೊಂಟಕ್ಕೆ ಪೆಟ್ಟು ಬಿದ್ದಿತ್ತು, ದಾಮೋದರನಿಗೆ ಹಣೆಗೆ ಪೆಟ್ಟು ಬಿದ್ದು ರಕ್ತ ಗಾಯಗಳಾಗಿದ್ದವು. ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಬಂದ ಯಾರೋ ಸಾರ್ವಜನಿಕರು 108 ಆಂಬುಲೆನ್ಸ್ ಗೆ ಪೋನ್ ಮಾಡಿದ್ದರಿಂದ ಸ್ಥಳಕ್ಕೆ ಬಂದ ಆಂಬುಲೆನ್ಸ್ ನಲ್ಲಿ ಗಾಯಗೊಂಡಿದ್ದವರನ್ನು ಮತ್ತು ದೀನ ತಾಯಳನ್ ರವರ ಮೃತ ದೇಹವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿಟ್ಟು, ನಂತರ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದೆನು. ನಂತರ ವೈದ್ಯರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ತುಮಕೂರಿಗೆ ಕಳುಹಿಸಿಕೊಟ್ಟು. ಸದರಿ ಅಪಘಾತದಲ್ಲಿ ನನಗೆ ಯಾವುದೇ ಪೆಟ್ಟುಗಳು ಬಿದ್ದಿರುವುದಿಲ್ಲ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಚಾಲಕ ಮೃತ ದೀನ ತಾಯಳನ್ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಪಿರ್ಯಾದು ಅಂಶ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 107 guests online
Content View Hits : 274911