lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< August 2017 >
Mo Tu We Th Fr Sa Su
  1 2 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30 31      
Thursday, 03 August 2017
Crime Incidents 03-08-17

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 90/2017 U/S 87 KP Act;

ದಿನಾಂಕ : 02/08/2017 ರಂದು ಬೆಳಗಿನ ಜಾವ   2-10 ಗಂಟೆಯಲ್ಲಿ ಸಿಪಿಐ ತಿಲಕ್ ಪಾರ್ಕ್‌ ವೃತ್ತ ರವರು ಠಾಣೆಗೆ  ಕಿಶೋರ್ ಬಿನ್ ರಂಗಧಾಮಯ್ಯ ಹಾಗೂ  ಇತರೆ 08 ಜನರನ್ನು ಹಾಜರು ಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿವಸ ಸಿಪಿಐ ತಿಲಕ್ ಪಾರ್ಕ್‌ ವೃತ್ತ ರವರಿಗೆ  00-00 ಗಂಟೆ ಸಮಯದಲ್ಲಿ ಹೊಸ ಬಡಾವಣೆ ಪೊಲೀಸ್ ಠಾಣೆ ಸರಹದ್ದು ರಾಧಾಕೃಷ್ಣ ರಸ್ತೆಯಲ್ಲಿನ ಎಸ್.ಎಸ್. ಪುರಂ ಪ್ಲೈ ಓವರ್ ಕೆಳಭಾಗದ ಕೆನರಾ ಬ್ಯಾಂಕ್ ಮುಂಭಾಗದ ಖಾಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಅಕ್ರಮ ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಸಿಪಿಐ ರವರು ಹೊಸ ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿಗಳು  ಹಾಗೂ ಪಂಚರೊಂದಿಗೆ ಇಸ್ಪೀಟ್ ಜೂಜಾಟದ ಮೇಲೆ ದಾಳಿ ನಡೆಸಿ ಅವರುಗಳು ಅಖಾಡದಲ್ಲಿ ತೊಡಗಿಸಿದ್ದ 77,770/-ರೂ ನಗದು ಹಣ, 07 ಮೊಬೈಲ್ ಫೋನ್‌ ಗಳು, 52 ಇಸ್ಪೀಟ್ ಎಲೆಗಳು, ಇಸ್ಪೀಟ್ ಜೂಜಾಟವಾಡಲು ಕೆಳಗೆ ಹಾಸಿಕೊಂಡಿದ್ದ ಎರಡು ಹಳೆಯ ದಿನಪತ್ರಿಕೆಗಳನ್ನು ಅಮಾನತ್ತು ಪಡಿಸಿಕೊಂಡು ಬಂದು ನೀಡಿದ ದೂರನ್ನು ಠಾಣಾ GSC/349/2017 ರಲ್ಲಿ ದಾಖಲಿಸಿಕೊಂಡು ನಂತರ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತದೆ

ಪಾವಗಡ ಪೊಲೀಸ್  ಠಾಣಾ ಮೊ,ನಂ 186/2017 ಕಲಂ 498(A) IPC & 3 & 4 DP Act

ದಿನಾಂಕ:02/08/2017 ರಂದು 7-30 ಗಂಟೆಯಲ್ಲಿ ಪಿರ್ಯಾದುದಾರರಾದ ಲಕ್ಷ್ಮೀ ಕೋಂ ಚಂದ್ರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಅಂಶವೇನೆಂದರೆ ನನಗೆ ದಿನಾಂಕ:14/05/2009 ರಂದು ಪಾವಗಡ ತಾಲ್ಲೂಕ್ ಕೊಮಾರ್ಲಹಳ್ಳಿ ಗ್ರಾಮದ ಸಣ್ಣಹನುಮಂತಪ್ಪರವರ ಮಗನಾದ ಚಂದ್ರಪ್ಪ (ವಕೀಲರು) ರವರೊಂದಿಗೆ ಚಿತ್ರದುರ್ಗ ಟೌನ್ ನಲ್ಲಿನ ಡಾ,ಬಿ,ಆರ್ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿತ್ತು. ಮದುವೆ ಕಾಲದಲ್ಲಿ 1 ಲಕ್ಷ ಹಣ ಮತ್ತು 50 ಗ್ರಾಂ ಚಿನ್ನದ ವಡವೆಗಳನ್ನು ವರದಕ್ಷಿಣೆಯಾಗಿ ನನ್ನ ಗಂಡ ನನ್ನ ತವರು ಮನೆಯವರಿಂದ ಪಡೆದಿದ್ದರು, ನಮ್ಮ ಸಂಸಾರದಲ್ಲಿ ಆರುವರೆ ವರ್ಷದ ಗೌತಮ್ ಹಾಗೂ ಐದು ವರ್ಷದ ಅಂಜನ್ ಕುಮಾರ್ ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ. ನಾವು ಮದುವೆಯಾದಾಗಿನಿಂದ ಮೂರು ವರ್ಷಗಳ ಕಾಲ ಕೊಮಾರ್ಲಹಳ್ಳಿಯಲ್ಲಿ ವಾಸವಾಗಿದ್ದೆವು, ಮದುವೆಯಾದ ಕೆಲವು ತಿಂಗಳಿಂದಲೇ ನನ್ನ ಗಂಡನಾದ ಚಂದ್ರಪ್ಪರವರು ಸಂಸಾರದಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೆ ನನ್ನೊಂದಿಗೆ ಜಗಳಮಾಡಿ ಅವ್ಯಾಚ್ಯ ಶಬ್ದಗಳಿಂದ ಬೈದು ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನು. ಕೆಲವೊಮ್ಮೆ ನನ್ನನ್ನು ಹೊಡೆದು ದೈಹಿಕವಾಗಿಯೂ ಸಹ ಹಿಂಸೆ ನೀಡುತ್ತಿದ್ದ ವಿಚಾರವನ್ನು ನಮ್ಮ ತಂದೆಗ ತಿಳಿಸಿದ್ದು, ತವರು ಮನೆಯ ಕಡೆಯವರು ಅನೇಕ ಬಾರಿ ಬುದ್ದಿವಾದ ಹೇಳಿದರೂ ಸಹ ನನ್ನ ಗಂಡ ಬದಲಾಗಲಿಲ್ಲ. ಆದ್ದರಿಂದ ನಾವು ಈ ವಿಚಾರವಾಗಿ  ವೈ,ಎನ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ 2013 ನೇ ಸಾಲಿನಲ್ಲಿ ದೂರು ದಾಖಲಿಸಿದ್ದೆವು. ನಂತರ ನ್ಯಾಯಾಲಯದಲ್ಲಿ ವಿಚಾರಣಾ ಸಮಯದಲ್ಲಿ ನನ್ನ ಮಕ್ಕಳ ಭವಿಷ್ಯ ದೃಷ್ಟಿಯಿಂದ ಹಾಗೂ ಹಿರಿಯರ ಸಲಹೆಯಂತೆ ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡು ನನ್ನ ಗಂಡನ ಜೊತೆಯಲ್ಲಿ ಪಾವಗಡ ಟೌನ್ ರೈನ್ ಗೇಜ್ ನಲ್ಲಿ ನನ್ನ ಮಕ್ಕಳೊಂದಿಗೆ ವಾಸವಾಗಿದ್ದೆವು. ನಾವು ಪಾವಗಡಕ್ಕೆ ಬಂದು ಸ್ವಲ್ಪ ದಿನ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದವು.  ಪಾವಗಡಕ್ಕೆ ಬಂದ 2-3 ತಿಂಗಳ ನಂತರ ನನ್ನ ಗಂಡ ಮದ್ಯಪಾನ ಮಾಡುವ, ಇಸ್ಪೀಟ್ ಜೂಜಾಟದ ಚಟಕ್ಕೆ ಬಿದ್ದು ಮನೆಯಲ್ಲಿದ್ದ ವಡವೆ ವಸ್ತುಗಳನ್ನು, ಹಣವನ್ನು ಜೂಜಾಟದಲ್ಲಿ ಕಳೆದು ಸಾಲಮಾಡಿಕೊಂಡಿದ್ದು, ಖರ್ಚಿಗೆ ಹಣ ತರಲು ನನ್ನನ್ನು ಪ್ರತಿದಿನ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಲು ಪ್ರಾರಂಭಿಸಿದರು. ಮದುವೆ ಕಾಲದಲ್ಲಿ ವರಕ್ಷಿಣೆಯಾಗಿ ಪಡೆದಿದ್ದ 50 ಗ್ರಾಂ ತೂಕದ ಚಿನ್ನದ ವಡವೆಗಳನ್ನು ಮಾಂಗಲ್ಯ ಸರವನ್ನು ಮಾರಿಕೊಂಡಿದ್ದು ನನ್ನ ತವರು ಮನೆಯಿಂದ ಹಣವನ್ನು ತೆಗೆದುಕೊಂಡು ಬರಲು ಪೀಡಿಸುತ್ತಿದ್ದನು ಈ ವಿಚಾರವನ್ನು ನಮ್ಮ ತಂದೆಗೆ  ತಿಳಿಸಿ ಪಾವಗಡಕ್ಕೆ ಕರೆಸಿಕೊಂಡು ನನ್ನ ಗಂಡನ ಜೊತೆ ಮಾತುಕತೆ ನೆಡೆಸಿದಾಗ ನನ್ನ ಗಂಡ ನನಗೆ  ವರದಕ್ಷಿಣೆಯಾಗಿ 2 ಲಕ್ಷ ನಗದು ಹಣ, ಇನ್ನು 50ಗ್ರಾಂ ಬಂಗಾದ ವಡವೆಗಳು ಮಾಡಿಸಿಕೊಡಿ ಇಲ್ಲವಾದರೆ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂತ ನಮ್ಮ ತಂದೆಯ ಜೊತೆ ಜಗಳ ಮಾಡಿದರು. ನನ್ನ ಗಂಡ ವಿನಾ ಕಾರಣ ನನ್ನ ಮೇಲೆ ಗಲಾಟೆ ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುವುದನ್ನು ದಿ:20/07/2017 ರಂದು ನನ್ನ ಗಂಡನು ಅವರ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂತ ನನ್ನ ಮೇಲೆ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದರಿಂದ ನಾನು ನಮ್ಮ ತಂದೆಯನ್ನು ಪಾವಗಡಕ್ಕೆ ಕರೆಯಿಸಿಕೊಂಡು ನಮ್ಮ ತಂದೆಯ ಜೊತೆಯಲ್ಲಿ ಬೆಂಗಳೂರಿಗೆ ಹೋಗಿದ್ದೆನು. ನಾನು ಹೋಗುವಾಗ ನನ್ನ ಮಕ್ಕಳನ್ನು ನನ್ನ ಜೊತೆಯಲ್ಲಿ ಕಳುಹಿಸಿರುವುದಿಲ್ಲ. ನನಗೆ ವರದಕ್ಷಿಣೆ ಕಿರುಕುಳ ನೀಡಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಿರುವ ನನ್ನ ಗಂಡ ಚಂದ್ರಪ್ಪರವರ ಮೇಲೆ ಕ್ರಮ ಕೈಗೊಂಡು ನನಗೆ ನ್ಯಾಯ ದೊರಕಿಸಿಕೊಡಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 24 guests online
Content View Hits : 272764