lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< August 2017 >
Mo Tu We Th Fr Sa Su
  1 3 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30 31      
Wednesday, 02 August 2017
Workshop on NDPS Act

 


Crime Incidents 02-08-17

ಜಯನಗರ ಪೊಲೀಸ್ ಠಾಣಾ ಮೊ.ನಂ 113/2017 ಕಲಂ 381 ಐಪಿಸಿ

ದಿನಾಂಕ: 01-08-2017 ರಂದು ರಾತ್ರಿ 11-00 ಗಂಟೆಗೆ ತುಮಕೂರು ಟೌನ್‌ ಚನ್ನಪ್ಪನಪಾಳ್ಯ ವಾಸಿ ಸಿ.ಕಮಲಮ್ಮ ಕೋಂ ಹೊನ್ನರಂಗಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 24-07-2017 ರಿಂದ ದಿನಾಂಕ: 01-08-2017 ರ ಒಳಗೆ ನಮ್ಮ ಮನೆಯಲ್ಲಿ ಯಾರೋ ಕಳ್ಳರು ಮನೆಯ ಒಳಗಡೆ ಪ್ರವೇಶ ಮಾಡಿ ಬೀರುವಿನಲ್ಲಿ ಇಟ್ಟಿದ್ದ 24,800 ರೂ ಬೆಲೆ ಬಾಳುವ ಹಳೇಯ ಚಿನ್ನದ 6 ಗ್ರಾಂ 400 ಮಿಲಿ ತೂಕದ  ಓಲೆ ಜುಮುಕಿ, 7 ಗ್ರಾಂ ನ 2 ಉಂಗುರಗಳು, 8 ಗ್ರಾಂ ನ ಒಂದು ಉಂಗುರ, 12 ಗ್ರಾಂ ನ ಒಂದು ಕೊರಳ ಚೈನು ಇವುಗಳನ್ನು ಕಳುವು ಮಾಡಿರುತ್ತಾರೆ.  ಪ್ರತಿ ನಿತ್ಯ ನಮ್ಮ ಮನೆಯ ಮನೆ ಕೆಲಸ ಮಾಡಲು ಬರುತ್ತಿದ್ದ ಶಿಲ್ಪ ಕೋಂ ಮಂಜುನಾಥ ಎಂಬುವರ ಮೇಲೆ ಅನುಮಾನ ಇರುತ್ತೆ.  ಕಳುವಾಗಿರುವ ಆಭರಣಗಳನ್ನು ಪತ್ತೆ ಮಾಡಿಕೊಡಲು ಕೋರಿ ಇತ್ಯಾದಿಯಾಗಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ಜಯನಗರ ಪೊಲೀಸ್ ಠಾಣಾ ಮೊ.ನಂ 112/2017 ಕಲಂ 379 ಐಪಿಸಿ

ದಿನಾಂಕ: 01-08-2017 ರಂದು ಬೆಳಿಗ್ಗೆ 11-00 ಗಂಟೆಗೆ ಗುಬ್ಬಿ ಟೌನ್‌, ಕೆ.ಹೆಚ್‌.ಬಿ ಕಾಲೋನಿಯಲ್ಲಿ ವಾಸವಾಗಿರುವ ಖಲೀಂ ಬಿನ್ ಎ.ನಜೀರ್‌ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 23-07-2017 ರಂದು ನಾನು ನಮ್ಮ ತಂದೆಯ ಹೆಸರಿನಲ್ಲಿರುವ ನಮ್ಮ ಬಾಬ್ತು KA-44-K-4487  ನೇ ಹಿರೋಹೋಂಡಾ ಸ್ಲ್ಪೆಂಡರ್‌‌ + ದ್ವಿ ಚಕ್ರ ವಾಹನದಲ್ಲಿ ಗುಬ್ಬಿಯಿಂದ ತುಮಕೂರು ಖಾದರ್‌‌ನಗರದಲ್ಲಿರುವ ನಮ್ಮ ಸಂಬಂಧಿ ನಮ್ಮ ಬಾವ ಜಾವೀದ್‌‌ ರವರ ಮನೆಗೆ ಬರಲೆಂದು ತುಮಕೂರು ರಿಂಗ್‌‌ರಸ್ತೆಯಲ್ಲಿ ಮದ್ಯಾಹ್ನ ಸುಮಾರು 3-50 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ ಶೆಟ್ಟಿಹಳ್ಳಿ ಸಮೀಪ ರಿಂಗ್‌‌ರಸ್ತೆಯಲ್ಲಿರುವ ಬಾಲಾಜಿ ಕಾರ್‌‌‌ ಗ್ಯಾರೇಜ್‌‌ ಸಮೀಪ ದ್ವಿ ಚಕ್ರ ವಾಹನದ ಪೆಟ್ರೋಲ್‌‌‌ ಮುಗಿದು ಹೋಗಿದ್ದರಿಂದ ರಸ್ತೆಯ ಬದಿಯಲ್ಲಿರುವ ಒಂದು ಅಂಗಡಿಯ ಮುಂದೆ ನನ್ನ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಪೆಟ್ರೋಲ್‌‌‌ ತರಲೆಂದು ಪೆಟ್ರೋಲ್‌‌‌ ಬಂಕ್‌‌‌ಗೆ ಹೋಗಿ ಪೆಟ್ರೋಲ್‌‌ ತೆಗೆದುಕೊಂಡು ಸಾಯಂಕಾಲ ಸುಮಾರು 4-15 ಗಂಟೆ ಸಮಯಕ್ಕೆ ನಾನು ನನ್ನ ದ್ವಿ ಚಕ್ರ ವಾಹನವನ್ನು ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ದ್ವಿ ಚಕ್ರ ವಾಹನ ಸ್ಥಳದಲ್ಲಿರಲಿಲ್ಲ.  ಕಳುವಾಗಿರುವ ಮೇಲ್ಕಂಡ ನನ್ನ ದ್ವಿ ಚಕ್ರ ವಾಹನದ ಪತ್ತೆಗಾಗಿ ನಾನು ಈ ದಿನದವರೆಗೆ ಎಲ್ಲಾ ಕಡೆ ಹುಡುಕಾಡಿ ನೋಡಿದರೂ ಸಹಾ ಸಿಕ್ಕಿರುವುದಿಲ್ಲ.  ಕಳುವಾಗಿರುವ ನಮ್ಮ ದ್ವಿ ಚಕ್ರ ವಾಹನವು KA-44-K-4487  ನೇ ರಿಜಿಸ್ಟ್ರೇಷನ್‌‌ ನಂಬರಿನ  ಕಪ್ಪು ಬಣ್ಣದ ನೀಲಿ ಸ್ಟಿಕ್ಕರ್‌‌‌ನ ಹಿರೋಹೋಂಡಾ ಸ್ಲ್ಪೆಂಡರ್‌ + ದ್ವಿ ಚಕ್ರ ವಾಹನವಾಗಿದ್ದು, ಇದರ ಚಾರ್ಚಿಸ್‌‌ ನಂ : MBLHA10EYCHC51442  ಹಾಗೂ ಇಂಜನ್‌‌ ನಂಬರ್ : HA10EFCHB84155 ಆಗಿದ್ದು, ಸುಮಾರು 20,000/- ರೂ. ಬೆಲೆ ಬಾಳುತ್ತದೆ.  ಆದ್ದರಿಂದ ತಾವು ದಯಮಾಡಿ ಕಳುವಾಗಿರುವ ಮೇಲ್ಕಂಡ ನಮ್ಮ ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 137/2017 ಕಲಂ: 323,324,307 ರೆ/ವಿ 34 ಐ.ಪಿ.ಸಿ

ದಿನಾಂಕ: 01/08/2017 ರಂದು ಸಂಜೆ  6-15 ಗಂಟೆಯಿಂದ 7-00 ಗಂಟೆಯವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಸಂದೀಪ ಬಿನ್ ಕಾಂತರಾಜು 21 ವರ್ಷ, ಕೊರಮ ಜನಾಂಗ, ವಿಧ್ಯಾರ್ಥಿ, ಮಾರನಗೆರೆ ಕಾಲೋನಿ, ತಿಪಟೂರು ಟೌನ್ ರವರಿಂದ ಪಡೆದ  ಹೇಳಿಕೆಯ  ಅಂಶವೇನೆಂದರೆ, ನಾನು ತಿಪಟೂರು ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತಿಮ ವರ್ಷದ ಡಿಪ್ಲಮೋ ವಿದ್ಯಾಭ್ಯಾಸ ಮಾಡುತ್ತಿರುತ್ತೇನೆ. ಈ ದಿನ ದಿನಾಂಕ: 01/08/2017 ರಂದು ಸಂಜೆ 04-30 ಗಂಟೆಗೆ ಕಾಲೇಜು ಮುಗಿಸಿಕೊಂಡು ನನ್ನ ಬೈಕಿನಲ್ಲಿ ಸ್ನೇಹಿತ ಯೋಗೀಶನನ್ನು ಕರೆದುಕೊಂಡು ಹಾಸನ ಸರ್ಕಲ್ ಬಳಿ ಬಂದಾಗ ಅಲ್ಲಿ ಯೋಗೀಶನ ತಮ್ಮ ಸಿಕ್ಕಿದ್ದು, ಆತನನ್ನು ಜೊತೆಯಲ್ಲಿ ಕರೆದುಕೊಂಡು  ತಿಪಟೂರು ಕಲ್ಪತರು ಕ್ರೀಡಾಂಗಣದ ಬಳಿ ಬಂದಾಗ, ಅಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಯೋಗೀಶನು ತಮ್ಮನನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಬರುತ್ತೇನೆಂದು ನನ್ನ ಬೈಕನ್ನು ತೆಗೆದುಕೊಂಡು ಹೋಗಿದ್ದು, ನಾನು ಕ್ರೀಡಾಂಗಣದ ಒಳಗೆ ಹುಡುಗಿಯರ ಥ್ರೋಬಾಲ್ ನಡೆಯುತ್ತಿದ್ದು, ಸಂಜೆ 5-00 ಗಂಟೆಯ ಸಮಯದಲ್ಲಿ ನಾನು ಆ ಥ್ರೋಬಾಲ್ ಕೋರ್ಟ್ ಬಳಿ ಹೋಗಿ ನೋಡುತ್ತಾ ನಿಂತಿದ್ದಾಗ  ನನ್ನ ಮುಂದೆ ಇನ್ನಿಬ್ಬರು ಹುಡುಗರು ನೋಡುತ್ತಾ ನಿಂತಿದ್ದವರು ಇದ್ದಕ್ಕಿಂದಂತೆ ನನ್ನನ್ನು ಹಿಂದಕ್ಕೆ ನೋಡಿದರು. ಆಗ ನಾನು ಏಕೆ ನೋಡುತ್ತೀಯಾ ಎಂತ ಕೇಳಿದ್ದಕ್ಕೆ ಇಬ್ಬರು ಇದ್ದಕ್ಕಿದ್ದಂತೆ ಜಗಳ ತೆಗೆದು ಒಬ್ಬ ನನಗೆ ಕೈನಿಂದ ಹೊಡೆದು, ಹಿಡಿದು ಎಳೆದಾಡಿದ್ದು, ಜೊತೆಯಲ್ಲಿದ್ದ ಇನ್ನೊಬ್ಬನು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಬಳಿ ಇದ್ದ ಚಾಕುವಿನಿಂದ ನನ್ನ ಎದೆಯ ಎಡಭಾಗಕ್ಕೆ 2-3 ಕಡೆ ಚುಚ್ಚಿ ಗೀರಿದ ಗಾಯ ಮತ್ತು ಅದೇ ಚಾಕುವಿನಿಂದ ನನ್ನ ಎದೆಯ ಬಲಭಾಗಕ್ಕೆ, ಹೊಟ್ಟೆಯ ಎಡಭಾಗಕ್ಕೆ, ಎಡತೊಡೆಗೆ ಮತ್ತು ಎಡಭಾಗದ ಕೆನ್ನೆಯ ಬಳಿ ಚುಚ್ಚಿ ಮತ್ತು ಗೀರಿ ಮಾರಣಾಂತಿಕವಾಗಿ ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ನಂತರ ಅಲ್ಲೇ ಇದ್ದ ನನ್ನ ದೊಡ್ಡಪ್ಪನ ಮಗ ಗಲಾಟೆಯನ್ನು ಬಿಡಿಸಿ ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಆ ಇಬ್ಬರು ವ್ಯಕ್ತಿಗಳ ಹೆಸರು ತಿಳಿಯಲಾಗಿ  ಗಾಂಧಿನಗರದ ಪೀರ್ ಪಾಷಾ ಮತ್ತು ಮಹಮದ್ ಷದಾಪ್ ಎಂತ ತಿಳಿಯಿತು. ಆದ್ದರಿಂದ ನನಗೆ ಹೊಡೆದು ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುವ ಮೇಲ್ಕಂಡವರುಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಹೇಳಿಕೆಯನ್ನು ನೀಡಿದ್ದು, ಸದರಿ ಹೇಳಿಕೆಯನ್ನು ಪಡೆದು ವಾಪಸ್ 7-15 ಗಂಟೆಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿರುತ್ತೆ.

ಪಾವಗಡ ಪೊಲೀಸ್ ಠಾಣಾ ಮೊ.ಸಂ:182/2017 ಕಲಂ:307 IPC.

ದಿನಾಂಕ:01/08/2017 ರಂದು ಮುಂಜಾನೆ 5-00 ಗಂಟೆಯಲ್ಲಿ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ವೈಧ್ಯಾಧಿಕಾರಿಗಳ ಸಮಕ್ಷಮ ಗಾಯಾಳು ಶ್ರೀಮತಿ ಮಾಧವಿ ನೀಡಿದ ಹೇಳಿಕೆ ಅಂಶವೇನೆಂದರೆ ಮಾಧವಿ, ಗಂಡ ರಾಘವೇಂದ್ರಾಚಾರಿ, ಮಗಳು ಪ್ರಲ್ಲಿಕಾ, ಅತ್ತೆ ಪದ್ಮಾವತಿ ರವರು ಪಾವಗಡ ರೈನ್ ಗೇಜ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಾಘವೇಂದ್ರಚಾರಿ ಪಾವಗಡ SBM ಬ್ಯಾಂಕ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಮಧುಗಿರಿ ಬ್ಯಾಂಕ್ ಗೆ ವರ್ಗಾವಣೆಯಾಗಿತ್ತು. ನನ್ನ ಗಂಡ ಪಾವಗಡ ಬ್ಯಾಂಕ್ ಗೂ ಕೆಲಸಕ್ಕೆ ಹೋಗದೇ ಮಧುಗಿರಿ ಬ್ಯಾಂಕ್ ಗೂ ಕೆಲಸಕ್ಕೆ ಹೋಗದೇ ಖಿನ್ನತೆಯಿಂದ ಬಳಲುತ್ತಿದ್ದನು. ಮನೆಯಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೆ ಗಲಾಟೆ ಮಾಡುತ್ತಾ, ಪ್ರತಿ ನಿತ್ಯ ತಡರಾತ್ರಿಯಾದರೂ ಮನೆಗೆ ಬರುತ್ತಿರಲಿಲ್ಲ. ನಿನ್ನೆ ದಿನ ಮಧ್ಯಾಹ್ನ ನನ್ನ ಗಂಡ ಮನೆಯಿಂದ ಹೊರಗಡೆ ಹೊರಟಾಗ ತಡಮಾಡದೇ ಮನೆಗೆ ಬೇಗ ಬನ್ನಿ ಎಂತ ಹೇಳಿದ್ದಕ್ಕೆ ನನಗೆ ಬೈದು ಹೋದರು. ರಾತ್ರಿಯಾದರೂ ನನ್ನ ಗಂಡ ಮನೆಗೆ ಬರಲಿಲ್ಲ. ನಾವು ಮೂರು ಜನರು ಊಟ ಮಾಡಿ ಮಲಗಿದ್ದೆವು. ದಿನಾಂಕ:31/07/2017-01/08/2017 ರಂದು ಮಧ್ಯರಾತ್ರಿ ಸುಮಾರು 02-00 ಗಂಟೆಯಲ್ಲಿ ನನ್ನ ಗಂಡ ಬಂದು ಬಾಗಿಲು ತೆರೆಯಲು ಹೇಳಿದ್ದು, ನನು ಬಾಗಿಲು ತೆರೆದಾಗ ನನ್ನ ಗಂಡ ಏಕೆ ಬಾಗಿಲು ತೆರೆಯಲು ತಡಮಾಡಿದಿರಿ ಎಂತ ನನ್ನ ಅತ್ತೆ ಪದ್ಮಾವತಿಯನ್ನು ಕೇಳಿದರು, ಅದಕ್ಕೆ ನನ್ನ ಅತ್ತೆ ಆಯ್ತು ಒಳಗೆ ಬಾರಪ್ಪಾ ಎಂತ ಹೇಳಿದ್ದಕ್ಕೆ ಕೋಪಗೊಂಡ ನನ್ನ ಗಂಡನು ವಿನಾ ಕಾರಣ ನಮ್ಮ ಮೇಲೆ ಗಲಾಟೆ ಮಾಡಿ ಮಚ್ಚನ್ನು ತೆಗೆದುಕೊಂಡು ನನ್ನ ಅತ್ತೆ ಪದ್ಮಾವತಿರವರಿಗೆ ತಲೆಯ ಹಿಂಭಾಗಕ್ಕೆ ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿದನು. ಬಿಡಿಸಲು ಹೋದ ನನಗೆ ತಲೆಗೆ, ಬೆನ್ನಿಗೆ, ಮತ್ತು ಸೊಂಟಕ್ಕೆ ಮಚ್ಚನಿಂದ ಹೊಡೆದನು. ನಂತರ ನನ್ನ ಸಹಾಯಕ್ಕೆ ಧಾವಿಸಿದ ನನ್ನ ಮಗಳಾದ ಪ್ರವಲ್ಲಿಕಾಳ ಬಲಗೈಗೆ ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿದನು. ನಾವು ಜೋರಾಗಿ ಕೂಗಿಕೊಂಡಾಗ ನಮ್ಮ ಮನೆಯ ಮಾಲಿಕರಾದ ನಾಗಾಚಾರಿ ಮತ್ತು ಅಕ್ಕ-ಪಕ್ಕದ ವಾಸಿಗಳು ಬಂದು ನಮ್ಮನ್ನು ನನ್ನ ಗಂಡನಿಂದ ಬಿಡಿಸಿದರು. ನಂತರ ಗಾಯಗೊಂಡ ನಮ್ಮನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಗೆ ದಾಖಲಿಸಿರುತ್ತಾರೆ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ನನ್ನ ಗಂಡ ರಾಘವೇಂದ್ರಾಚಾರಿ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂತ ನೀಡಿದ ಹೇಳಿಕೆ ಪಡೆದು ಮುಂಜಾನೆ 5-30 ಗಂಟೆಗೆ ಠಾಣೆಗೆ ವಾಪಾಸ್ಸಾಗಿ ಠಾಣಾ ಮೊ,ನಂ-185/2017 ಕಲಂ 307 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 99 guests online
Content View Hits : 274899