lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< August 2017 >
Mo Tu We Th Fr Sa Su
  2 3 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30 31      
Tuesday, 01 August 2017
Crime Incidents 01-08-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 140/2017 ಕಲಂ 279,304(ಎ) ಐಪಿಸಿ ರೆ/ವಿ 134(ಬಿ), 187 ಐಎಂವಿ ಆಕ್ಟ್

ದಿನಾಂಕ-31/07/2017 ರಂದು ಮಧ್ಯಾಹ್ನ 2-45 ಗಂಟೆಗೆ ಪಿರ್ಯಾದಿಯಾದ ಬಿ.ಟಿ ಮೂಡಲಗಿರಿಯ್ಯ ಬಿನ್ ಲೇಟ್ ತಿಮ್ಮೇಗೌಡ, 61 ವರ್ಷ, ವಕ್ಕಲಿಗರು, ಜಿರಾಯ್ತಿ, ಬಳ್ಳಗೆರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು, & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂಧರೆ  ದಿನಾಂಕ:31-07-2017 ರಂದು ನನ್ನ ಬಾಮೈದನಾದ ಹೊನ್ನುಡಿಕೆ ಗ್ರಾಮದಲ್ಲಿ ವಾಸವಿರುವ ಸುಮಾರು 48 ವರ್ಷದ, ಹೆಚ್ ಸಿ ಕುಮಾರ್ ರವರು ಅವರ ಬಾಬ್ತು ಕೆಎ-03-ಎಂಬಿ-9027 ನೇ ಟೊಯೋಟೊ ಕಾರಿನಲ್ಲಿ ಆತನ 14 ವರ್ಷದ ಮಗನಾದ ಹೆಚ್ ಕೆ. ಜೀವನ್ ಕುಮಾರ್ ರವರಿಗೆ ಹುಷಾರಿಲ್ಲದ್ದರಿಂದ ತುಮಕೂರಿನ ಆಸ್ಪತ್ರೆಗೆ ತೋರಿಸಲೆಂದು ಹೊನ್ನುಡಿಕೆಯ ಅವರ ಮನೆಯಿಂದ ಸದರಿ ಅವರ ಕಾರಿನಲ್ಲಿ ಹೊರಟು ಈ ದಿನ ಮಧ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ಹೊನ್ನುಡಿಕೆ-ತುಮಕೂರು ಟಾರ್ ರಸ್ತೆಯ ನರುಗನಹಳ್ಳಿ ಗೇಟ್ ನ ಸ್ವಲ್ಪ ದೂರದಲ್ಲಿ ಎಡಭಾಗದಲ್ಲಿ ತನ್ನ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ, ಎದುರಿಗೆ ಬಂದ ಅಂದರೆ ತುಮಕೂರು ಕಡೆಯಿಂದ ಕುದೂರು ಕಡೆ ಹೋಗಲು ಬಂದ ಕೆಎ-16-ಸಿ-3123 ನೇ ಎಸ್.ಎಸ್.ಆರ್.ಎಸ್ ರೇವಣಸಿದ್ದೇಶ್ವರ ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅವರು ಹೋಗುತ್ತಿದ್ದ ಕೆಎ-03-ಎಂಬಿ-9027  ನೇ ಟೊಯೋಟೊ  ಕಾರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ನನ್ನ  ಬಾಮೈದನಾದ ಹೆಚ್ ಸಿ ಕುಮಾರ್ ರವರಿಗೆ ತಲೆಗೆ, ಕೈಗೆ, ಬಲಹೊಟ್ಟೆಗೆ ಮತ್ತು ಬಲತೊಡೆಗೆ  ತೀವ್ರರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾರೆ ಮತ್ತು ಆತನ ಮಗನಾದ ಹೆಚ್ ಕೆ.ಜೀವನ್ ಕುಮಾರ್  ಗೂ ಸಹ ತಲೆಗೆ, ಬಲಕೈಗೆ ಮತ್ತು ದೇಹದ ಇತರೇ ಭಾಗಗಳಿಗೆ  ತೀವ್ರರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾರೆ. ಅಫಘಾತಪಡಿಸಿದ ಬಸ್ಸಿನ ಚಾಲಕ ತನ್ನ ಬಸ್ಸ್‌ನ್ನು ಸ್ಥಳದಲ್ಲೇ ನಿಲ್ಲಿಸಿ, ಬಿಟ್ಟು ಓಡಿ ಹೋದನು, ಸದರಿ ಅಫಘಾತವಾದಾಗ ನನ್ನ ಬಾಮೈದನ ಕಾರಿನ ಹಿಂಬಾಗದಲ್ಲೇ ಹೋಗುತ್ತಿದ್ದ ನಾನು ಮತ್ತು ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ವಾಸಿಯಾದ ರವೀಶ್ ರವರು ಸದರಿ ಅಪಘಾತವನ್ನು ಕಣ್ಣಾರೆ ಕಂಡವರಾಗಿರುತ್ತೇವೆ, ಅಪಘಾತಪಡಿಸಿದ ಬಸ್ಸಿನ ಚಾಲಕನ ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ. ನಂತರ ಮೃತ ಹೆಚ್ ಸಿ ಕುಮಾರ್ ಮತ್ತು ಹೆಚ್ ಕೆ.ಜೀವನ್ ಕುಮಾರ್  ರವರ ಶವವನ್ನು ಯಾವುದೋ ಒಂದು ವಾಹನದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ, ನಂತರ ನಾನು ಠಾಣೆಗೆ ಬಂದು ಅಪಘಾತ ಪಡಿಸಿದ ಕೆಎ-16-ಸಿ-3123 ನೇ ಎಸ್.ಎಸ್.ಆರ್.ಎಸ್ ರೇವಣಸಿದ್ದೇಶ್ವರ ಬಸ್ಸಿನ ಚಾಲಕ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಫಘಾತಪಡಿಸಿದ ಬಸ್ಸು ಹಾಗೂ ಅಪಘಾತಕ್ಕೊಳಗಾದ ಕಾರು ಸ್ಥಳದಲ್ಲೇ ಇರುತ್ತವೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ:148/2017 u/s :279,337,304 [A] IPC r/w 134 a & b,187 IMV Act.

ಪಿರ್ಯಾದಿ ಕೃಷ್ಣಮೂರ್ತಿ ಬಿನ್ ಲೇ. ಮಲೆರಂಗಪ್ಪ, 30 ವರ್ಷ, ಕುರುಬ ಜನಾಂಗ, ಆಚೇನಹಳ್ಳಿ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಪತ್ನಿ ಶಿವಮ್ಮನವರಿಗೆ ಆರೋಗ್ಯ ಸರಿಯಿಲ್ಲದ ಕಾರಣ, ಶಿವಮ್ಮನವರನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ನಂತರ ಪಿರ್ಯಾದಿಯ ಬಾಮೈದ ಗಿರೀಶ್ ಕುಮಾರ್ ರವರು ನಂತರ ತನ್ನ ಅಣ್ಣನ ಬಾಬ್ತು KA-64-H-2736 ನೇ ದ್ಚಿಚಕ್ರವಾಹನದಲ್ಲಿ ಪಿರ್ಯಾದಿ ಹಾಗೂ ಶಿವಮ್ಮನವರನ್ನು ದಿನಾಂಕ :30-07-2017 ರಂದು ರಾತ್ರಿ ಸುಮಾರು 08.45 ಗಂಟೆಯ ಸಮಯದಲ್ಲಿ ಕೊರಟಗೆರೆ ತಾಲ್ಲುಕು, ಮುಗ್ಗೋಂಡನಹಳ್ಳಿಗೆ ಕರೆದುಕೊಂಡು ಹೋಗುತ್ತಿದ್ದಾಗ, ಮಾರ್ಗಮದ್ಯೆ ಕಂಭಯ್ಯನಪಾಳ್ಯದ ಗೇಟ್ ಹತ್ತಿರ ದತ್ತಾತ್ರೇಯ ಆಶ್ರಮದ ಮುಂದೆ ಮಧುಗಿರಿ-ತುಮಕೂರು ರಸ್ತೆಯಲ್ಲಿ, ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ, ಹಿಂಬದಿಯಿಂದ ಒಂದು ದ್ವಿಚಕ್ರವಾಹನದ ಚಾಲಕ ದ್ವಿಚಕ್ರವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಭಾಮೈದ ಚಾಲನೆ ಮಾಡುತ್ತಿದ್ದ KA-64-H-2736 ನೇ ದ್ವಿಚಕ್ರವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಹೋರಟು ಹೋಗಿರುತ್ತಾನೆ. ಈ ಅಫಘಾತದಿಂದ ಶಿವಮ್ಮನವರಿಗೆ ತಲೆಗೆ, ಹಾಗೂ ಮೈಕೈಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಇದೇ ಅಫಘಾತದಿಂದ ಸದರಿ ದ್ವಿಚಕ್ರವಾಹನದ ಹಿಂಬದಿ ಕುಳಿತಿದ್ದ ಪಿರ್ಯಾದಿಗೆ ತಲೆ, ಮೈಕೈಗೆ ಗಾಯಗಳಾಗಿದ್ದು, ದ್ವಿಚಕ್ರವಾಹನ ಚಾಲನೆ ಮಾಡುತ್ತಿದ್ದವನಿಗೂ ಸಹ ತಲೆ,ಮೈಕೈ ಹಾಗೂ ಹೊಟ್ಟೆಗೆ ಪೆಟ್ಟು ಬಿದ್ದಿರುತ್ತೆ. ದ್ವಿಚಕ್ರವಾಹನವು ಕೆಳಗೆ ಬಿದ್ದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಮಂಜುನಾಥ ಹಾಗೂ ರಾಮಣ್ಣನವರು ಉಪಚರಿಸಿದ್ದು, ಮೃತಳಾದ ಶಿವಮ್ಮನವರ ಶವವು ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು, ಅಪಘಾತ ಮಾಡಿದ ದ್ವಿಚಕ್ರವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ. 163/2017 ಕಲಂ 323, 324, 504, 506 ರೆ/ವಿ 34 ಐ.ಪಿ.ಸಿ

ದಿನಾಂಕ 31/07/2017 ರಂದು ಬೆಳಿಗ್ಗೆ 09-45 ಗಂಟೆಗೆ ಪಿರ್ಯಾದಿ  ಜಯರಾಮ ಬಿನ್ ಲೇಟ್ ಶಿವರಾಮು ನಂಜೇಗೌಡನದೊಡ್ಡಿ ಗ್ರಾಮ  ಹೆಚ್ ದುರ್ಗ ಹೋಬಳಿ ಕುಣಿಗಲ್ ತಾಲ್ಲೋಕ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ 31/07/2017 ರಂದು ಬೆಳಿಗ್ಗೆ 06-30 ಗಂಟೆ ಸಮಯದಲ್ಲಿ  ನಮ್ಮ ಗ್ರಾಮದ ವಾಸಿಗಳಾಧ 1) ಸುರೇಶ ಬಿನ್ ಚಿಕ್ಕಣ್ಣ 2) ಚೌಡಮ್ಮ ಕೋಂ ಸುರೇಶ3) ಗೋವಿಂದರಾಜು ಬಿನ್ ಚಿಕ್ಕಣ್ಣ 4) ತಿಮ್ಮಮ್ಮ ಕೋಂ ಚಿಕ್ಕಣ್ಣ ಎಂಬುವರು ಹಿಂದಿನ ಹಳೆ  ದ್ವೇಷ ವೈಷಮ್ಯದಿಂದ ನನ್ನ ಮೇಲೆ ಜಗಳ ತೆಗೆದು ಗಲಾಟೆ ಮಾಢಿರುತ್ತಾನೆ. ಸುರೇಶನು ನನ್ನ ಬಳಿ 40 ಸಾವಿರ ಹಣವನ್ನು ತನ್ನ ಜಮೀನಿಗೆ ಮೋಟರ್ ಬಿಡಬೇಕೆಂದು ನನ್ನ ಬಳಿ ಸಾಲವಾಗಿ ಹಣ ತೆಗೆದು ಕೊಂಡಿದ್ದು ಕೇಳಲು ಹೋದಾಗ ಸುರೇಶನು ಬೋಳಿ ಮಗನೆ , ಸೂಳೆ ಮಗನೆ ನಿನಗೆ ಯಾವ ಹಣ ಕೊಡಬೇಕೋ ಎಂತ ಅಲ್ಲೇ ಬಿದ್ದಿದ್ದ ದೊಣ್ಣೆಯಿಂದ  ನನ್ನ ತಲೆ ಬಲವಾಗಿ ಹೊಡೆದು ರಕ್ತಗಾಯ ಪಡಿಸಿದನು ನಂತರ ಸುರೇಶನ ತಮ್ಮನಾಧ ಗೋವಿಂಧರಾಜು ಎಂಬುವನು ಈ ಸೂಳೆ ಮಗನನ್ನು ಉಳಿಸುವುದು ಬೇಡ ಎಂತ ತನ್ನ ಕೈಗಳಿಂದ ಮೈ ಕೈಗೆ ಬಲವಾಗಿ ಹೊಡೆದು  ನೋವುಂಟು ಮಾಡಿರುತ್ತಾನೆ. ನನ್ನ ಹೆಂಡತಿ ಜಗಳ ಬಿಡಿಸಲು ಬಂದಾಗ  ಚೌಡಮ್ಮ ಮತ್ತು ತಿಮ್ಮಮ್ಮ ರವರು  ನನ್ನ ಹೆಂಡತಿ ಶೋಭಾಗೆ ಸೂಳೆ ಮುಂಡೆ, ಬೋಳಿ ಮುಂಡೆ ಎಂತ ಬೈದ್ದು ಹಲ್ಲೆ ಮಾಢಿರುತ್ತಾರೆ. ಆಗ ಅಲ್ಲೇ ಇದ್ದ ನಮ್ಮ ಗ್ರಾಮದ ಲೋಕೇಶ ಬಿನ್ ಗಂಗಾಬೋವಿ , ರಮೇಶ ಬಿನ್ ಕಾಮಯ್ಯ ಎಂಬುವರು ಜಗಳ ಬಿಡಿಸಿ ಸಮಧಾನ ಪಡಿಸಿರುತ್ತಾರೆ. ಆಗ ಸುರೇಶನು ನಿನ್ನನ್ನು ಮುಗಿಸುತ್ತೇಂದು ಕೊಲೆ ಬೆದರಿಕೆ ಹಾಕಿರುತ್ತಾನೆ. ನಾನು ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ದೂರು ನೀಡಿರುತ್ತೇನೆ. ಆದ್ದರಿಂದ ಮೇಲ್ಕಂಡ 4 ಜನರ ಮೇಲೆ ಕಾನೂನಿನ  ಕ್ರಮ ಜರುಗಿಸಿ ಎಂತ ನ್ಯಾಯ ಕೊಡಿಸಿ ಕೊಡಿ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಸಿ.ಎಸ್.ಪುರ ಠಾಣಾ ಮೊ.ನಂ:73/2017, ಕಲಂ:307.323. 324. 504. 506 ರೆ/ವಿ 149 ಐಪಿಸಿ

ದಿನಾಂಕ- 31/7/17 ರಂದು ಮದ್ಯಾಹ್ನ 3-00 ಗಂಟೆಗೆ  ಪಿರ್ಯಾದುದಾರರಾದ ಯೋಗೀಶ್  ಬಿನ್ ನಾಗರಾಜು  ಕಾಳೇನಹಳ್ಳಿ  ಗುಬ್ಬಿತಾ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ , ಗುಬ್ಬಿ ತಾ. ಎಸ್ ಕೊಡಿಗೆಹಳ್ಳಿ ಸರ್ವೆ ನಂ, 106 ರಲ್ಲಿ 1.14 ಗುಂಟೆ ಜಮೀನು  ಇದ್ದು, ಇದೇ ಜಮೀನಿನಲ್ಲಿ ವಾಸದ ಮನೆ ಕಟ್ಟಿಕೊಂಡಿದ್ದು, ದಿನಾಂಕ- 31/7/17 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ನಮ್ಮ ತೋಟದ & ಪಕ್ಕದ ತೋಟದವರ ಮದ್ಯೆ ಟ್ರಾಕ್ಟರ್ ನಲ್ಲಿ ಮಣ್ಣುಹೊಡೆಸುತ್ತಿದ್ದಾಗ  ನಮ್ಮ ಜಮೀನು ಪಕ್ಕದವರಾದ ಕೃಷ್ಣಪ್ಪನವರು ಬಂದು ಈ ದಾರಿಯಲ್ಲಿ ಟ್ರಾಕ್ಟರ್ ಆಗಲಿ , ಜೆ,ಸಿ,ಬಿಯಾಗಲಿ ಓಡಾಡಿಸಬೇಡಿ ಎಂತಾ ಬಾಯಿಗೆ ಬಂದಂತೆ ಹೀನಾಮಾನವಾಗಿ ಬೈಯುತ್ತಾ , ನನಗೆ ಕೈ ಎತ್ತಿಕೊಂಡು ಹೊಡೆಯಲು ಬಂದನು ಆದರೆ ನಂತರ ಕೃಷ್ಣಪ್ಪನ ತಮ್ಮ ಮಹದೇವಯ್ಯ ಬಂದು ನನಗೂ & ನಮ್ಮ ತಾಯಿಗೆ ಹೀನಾಮಾನವಾಗಿ ಬೈದು ನಂತರ ಇಬ್ಬರೂ ನಮ್ಮ ಮನೆಯೊಳಕ್ಕೆ ಬಂದು ನನ್ನನ್ನು & ನಮ್ಮ ತಾಯಿಯನ್ನು ಹೊರಕ್ಕೆ ಎಳೆದರು ನಂತರ ಮಹದೇವಯ್ಯ ಕೈಯಲ್ಲಿ ತಂದಿದ್ದ  ಬೇಲಿಯನ್ನು ಸವರುವ ಮಚ್ಚಿನಿಂದ ನಮ್ಮ ತಾಯಿಯ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಮಾಡಿದನು, ಆಗ ನಮ್ಮ ತಾಯಿ ಎಡಗೈಯನ್ನು ಅಡ್ಡಹಿಡಿದಾಗ ಕೈಗೂ ಸಹ ಪೆಟ್ಟಾಗಿರುತ್ತೆ, ನಂತರ ಮಹದೇವಯ್ಯನ ಮಗ ಚೇತನ ದೊಣ್ಣೆಯಿಂದ ನನ್ನ ಸೊಂಟಕ್ಕೆ , ಎಡಗೈಗೆ ,ಬಲ ಭುಜಕ್ಕೆ ಹೊಡೆದನು , ನಂತರ ಮಹದೇವಯ್ಯನ ಹೆಂಡತಿ ಲಕ್ಷ್ಮಮ್ಮ  ನನಗೆ ಹೊಡೆಯುತ್ತಿದ್ದಾಗ  ಬಿಡಿಸಲು ಬಂದ ನನ್ನ ಹೆಂಡತಿ ಲಲಿತಮ್ಮ ರವರಿಗೆ ತಲೆ ಜುಟ್ಟು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದಿರುತ್ತಾರೆ, ನಂತರ ಕೃಷ್ಣಪ್ಪನ ಹೆಂಡತಿ ಶಶಿಕಲಾ ನನ್ನ ಹೆಂಡತಿ ಲಲಿತಮ್ಮ ರವರಿಗೆ ಕೈಗಳಿಂದ ಕಪಾಳಕ್ಕೆ ಹೊಡೆದರು , ಮಹಾದೇವಯ್ಯ ಸಹ ದೊಣ್ಣೆಯಿಂದ ನನ್ನ ಹೆಂಡತಿಗೆ ಸೊಂಟಕ್ಕೆ , ಎದೆಗೆ ಹೊಡೆದನು , ನಂತರ ಎಲ್ಲರೂ ಸಹ ಸೇರಿ ನಮಗೆ ಜೀವ ಬೆದರಿಕೆ ಹಾಕಿದರು , ಸುರೇಂದ್ರ ಹಾಗೂ ಸರೋಜಮ್ಮ ರವರು ಈ ಗಲಾಟೆಯನ್ನು  ಬಿಡಿಸಿದರು,ನಂತರ ನಮ್ಮ ತಾಯಿಯನ್ನು  ಚಿಕಿತ್ಸೆಗೆ ಸಿ.ಎಸ್.ಪುರ ಆಸ್ಪತ್ರೆಯಲ್ಲಿ ಪ್ರಥಮ  ಚಿಕಿತ್ಸೆ  ಕೊಡಿಸಿ , ನಂತರ ತುಮಕೂರು  ಸಿದ್ದಾರ್ಥ ಮೆಡಿಕಲ್ ಆಸ್ಪತ್ರೆಗೆ ಸೇರಿಸಿರುತ್ತೇವೆ ಎಂತಾ ಇತ್ಯಾದಿ ದೂರಿನ ಅಂಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 125 guests online
Content View Hits : 274924